ವಿಷಯಕ್ಕೆ ಹೋಗು

ತೋಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೋಳ
ಭಾರತೀಯ ತೋಳ
Conservation status
Scientific classification
ಸಾಮ್ರಾಜ್ಯ:
animalia
ವಿಭಾಗ:
ಕಾರ್ಡೇಟಾ
ವರ್ಗ:
ಸಸ್ತನಿ
ಗಣ:
ಕಾರ್ನಿವೋರಾ
ಕುಟುಂಬ:
ಕ್ಯಾನಿಡೇ
ಕುಲ:
ಕ್ಯಾನಿಸ್
ಪ್ರಜಾತಿ:
ಸಿ.ಇಂಡಿಕ
Binomial name
ಕ್ಯಾನಿಸ್ ಇಂಡಿಕ
(ಆರ್.ಕೆ.ಅಗರ್ವಾಲ್ et al., 2007 ) [೧]

ತೋಳ (Indian Wolf) ಇದು ಮೂಲತಃ ' ಇರಾನಿ ತೋಳ'ದ ಒಂದು ಪ್ರಭೇದವಾಗಿ ಪರಿಗಣಿತವಾಗಿದೆ.ಭಾರತದಲ್ಲಿ ಇದು ಮುಖ್ಯವಾಗಿ ಉತ್ತರ,ಮಧ್ಯ ಹಾಗೂ ದಕ್ಷಿಣ ಭಾರತ ಹಲವೆಡೆ ತೆರೆದ ಬಯಲು ಕಾಡುಗಳಲ್ಲಿ ಕಂಡುಬರುತ್ತವೆ.ಇದು ನಾಯಿಜಾತಿಗೆ ಸೇರಿದ ಪ್ರಾಣಿ.ನಸುಕಂದು ಬಣ್ಣ ಹೊಂದಿದ್ದು,ದೊಡ್ಡ ಬುರುಡೆ ಹಾಗೂ ಹಲ್ಲುಗಳಿಂದ ಗುರುತಿಸಲು ಸುಲಭ.ಇದರ ಆಹಾರ ಜಿಂಕೆ,ಮೊಲ,ನರಿ,ಹಕ್ಕಿ ಇತ್ಯಾದಿ.ಹಲವೊಮ್ಮೆ ದನಕರುಗಳನ್ನೂ ತಿನ್ನಬಹುದು. ಒಮ್ಮೆಗೆ ೩ ರಿಂದ ೯ ಮರಿಗಳ ವರೆಗೆ ಹಾಕುತ್ತದೆ.ಆಯುಃಪ್ರಮಾಣ ೧೨ ರಿಂದ ೧೫ ವರ್ಷಗಳು.ಈ ತೋಳಗಳು ತಮ್ಮ ವಿಚಿತ್ರವಾದ ಹಾಗು ಭಯಂಕರವಾದ ಕೂಗಿಗೆ ಪ್ರಸಿದ್ದ.ಎವು ಸಾಮಾನ್ಯವಾಗಿ ರಾತ್ರಿವೇಳೆ ಬೇಟೆಯಾಡುತ್ತವೆ.

"https://kn.wikipedia.org/w/index.php?title=ತೋಳ&oldid=718365" ಇಂದ ಪಡೆಯಲ್ಪಟ್ಟಿದೆ