ವಿಷಯಕ್ಕೆ ಹೋಗು

ಸಾಬೂನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಸೋಪು(ಸಾಬೂನು)

[ಬದಲಾಯಿಸಿ]
ಕೆಂಪು ಸಾಬೂನಿನ ಬಿಲ್ಲೆ

ಪುರಾತನ ರೋಮನ್ನರು ಕೂಡ ಮರಳು ಅಥವಾ ಜ್ವಾಲಾಮುಖಿ ನೊರೆಯಂತಹ ವಸ್ತುವಿನಿಂದ ಮೈ ಉಜ್ಜಿಕೊಳ್ಳುತ್ತಿದ್ದರು. ನಂತರ ಕಡ್ಡಿಗಳನ್ನು ಬಳಸಿ ದೇಹದಿಂದ ಕೊಳೆಯನ್ನು ತೆಗೆಯುತ್ತಿದ್ದರು. ಸಾಬೂನಿನ ಆವಿಷ್ಕಾರದ ನಂತರ ರೋಮನ್ ಸಾಮ್ರಾಜ್ಯದುದ್ದಕ್ಕೂ ಇದು ಜನಪ್ರಿಯವಾಯಿತು ಎಂದು ಚರಿತ್ರೆ ಹೇಳುತ್ತದೆ. ಪುರಾತನ ಚೀನೀಯರು ಪ್ರಾಣಿಗಳ ಕೊಬ್ಬನ್ನು ಬಳಸದೆ, ಸಸ್ಯಜನ್ಯ ಮತ್ತು ತಯಾರಿಸುತ್ತಿದ್ದರು. ಆದರೆ ಇದು ಜನಪ್ರಿಯವಾಗಲಿಲ್ಲ. ಸಸ್ಯಗಳಿಂದ ಹಿಂಡಿದ ಎಣ್ಣೆ ಬಳಸಿ ಸಾಬೂನು ತಯಾರಿಸಿದ ಶ್ರೇಯ ಅರಬ್ ರಾಷ್ಟ್ರಗಳ ರಸಾಯನ ವಿಜ್ಞಾನಿಗಳಿಗೆ ಸಲ್ಲುತ್ತದೆ. ಆಲಿವ್ ತೈಲ, ಪರಿಮಳ ಸೂಸುವ ಮರಗಳ ತೈಲ. ಕ್ಷಾರ ದ್ರಾವಣ ಬಳಸಿ ಸಾಬೂನನ್ನು ತಯಾರಿಸುವ ವಿಧಾನವನ್ನು ಇವರು ಪರಿಚಯಿಸಿದರು. ಏಳನೇ ಶತಮಾನದ ಆರಂಭದಲ್ಲಿ ನಬ್ಲಸ್ ಕುಷಾ ಮತ್ತು ಬಾಸ್ರಾಗಳಲ್ಲಿ ಸುವಾಸನೆ ಭರಿತ, ಬಣ್ಣ ಹೊಂದ್ದಿದ್ದ ಸಾಬೂನುಗಳು ತಯಾರಾದವು. ಈ ಸಾಬೂನುಗಳು ದ್ರಾವಣ ಮತ್ತು ಘನ ಸ್ಥಿತಿಯಲ್ಲಿ ಲಭ್ಯವಿದ್ದವು. ಶೇವಿಂಗ್ ಉದ್ದೇಶಕ್ಕಾಗಿ ಪ್ರತ್ಯೇಕ ಸಾಬೂನನ್ನು ಈ ತಜ್ಞರು ರೂಪಿಸಿದರು.

ಆಲಿವ್ ಎಣ್ಣೆಯಿಂದ ತಯಾರಿಸಿದ ಸಾಬೂನು

ಸಾಬೂನು ತಯಾರಿಕೆ ಉದ್ದಿಮೆಯಾಗಿ ಬದಲಾಗಿದ್ದು ೧೩ನೇ ಶತಮಾನದಲ್ಲಿ ಈ ಅವಧಿಯಲ್ಲಿ ಇಟಲಿ, ಫ್ರಾನ್ಸ್ ಗಳು ಸಾಬೂನು ತಯಾರಿಕಾ ಕೇಂದ್ರಗಳಾಗಿ ಮಾರ್ಪಾಟಾದವು. ಕಾರ್ಖಾನೆಗಳು ಸ್ಥಾಪನೆಗೊಂಡವು. ಕಾಲಕ್ರಮೇಣ ಸ್ನಾನಕ್ಕೆ, ಶೇವಿಂಗ್, ಬಟ್ಟೆ ತೊಳೆಯುವ ಉದ್ದೇಶಕ್ಕೆ ಬಳಸಲಾಗುವ ಸಾಬೂನುಗಳನ್ನು ಪ್ರತ್ಯೇಕಿಸಿ ಅವುಗಳಿಗೆ ಪರಿಮಳವನ್ನು ಹಾಕುವ ಕೆಲಸವೂ ನಡೆಯಿತು. ೧೬ನೇ ಶತಮಾನದಲ್ಲಿ ಪ್ರಾಣಿಗಳ ಕೊಬ್ಬಿನ ಬಳಕೆಯನ್ನು ವಿರೋಧಿಸಿ ಆಲಿವ್ ನಂತಹ ಮರಗಳಿಂದ ತೆಗೆದ ಎಣ್ಣೆಗಳಿಂದ ತಯಾರಿಸಿದ ಮತ್ತಷ್ಟು ಸುಧಾರಿತ ಸಾಬೂನು ಫ್ರಾನ್ಸ್ ನಲ್ಲಿ ತಯಾರಾಯಿತು. ಈಗಲೂ ಈ ಸಾಬೂನುಗಳನ್ನು ತಯಾರಿಸಲಾಗುತ್ತಿದೆ. ಕೈಗಾರಿಕಾ ಕ್ರಾಂತಿ ಆಗುವವರೆಗೂ ಸಾಬೂನುಗಳ ತಯಾರಿಕೆ ಸಣ್ಣ ಪ್ರಮಾಣದಲ್ಲೇ ನಡೆಯುತ್ತಿತ್ತು. ಬೆಲೆ ಕೂಡ ದುಬಾರಿಯಾಗಿತ್ತು. ೧೮ನೇ ಶತಮಾನದ ಅಂತ್ಯಕ್ಕೆ ಕಾರ್ಖಾನೆಗಳಲ್ಲಿ ತಯಾರಾದ ಸಾಬೂನುಗಳು(ಬಾರ್ ಸೋಪ್) ಮಾರುಕಟ್ಟೆಯಲ್ಲಿ ದೊರೆಯುವಂತಾಗಿದೆ.

ನಮ್ಮ ದೈನಂದಿನ ಬದುಕಿನ ಭಾಗವಾಗಿರುವ 'ಸಾಬೂನು' ಅಥವಾ 'ಸೋಪ್'ಗೆ ೬೦೦೦ ವರ್ಷಗಳ ಸುದೀರ್ಘ ಇತಿಹಾಸ ಇದೆ. ಸಾಬೂನಿನ ಮೂಲ ಮಾದರಿ ತಯಾರಾಗಿದ್ದು ಕ್ರಿ.ಪೂ. ೨೮೦೦ರಲ್ಲಿ. ಪುರಾತನ ಬ್ಯಾಬಿಲೋನಿಯನ್ ಜನರು ಪ್ರಾಣಿಗಳ ಕೊಬ್ಬನ್ನು ಬೂದಿ ಮತ್ತು ನೀರಿನೊಂದಿಗೆ ಕುದಿಸಿ ನೊರೆ ಉಂಟು ಮಾಡುತ್ತಿದ್ದ ಜೆಲ್ ರೂಪದ ವಸ್ತುವನ್ನು ತಯಾರಿಸುತ್ತಿದ್ದರು ಎಂದು ಹೇಳುತ್ತದೆ ಇತಿಹಾಸ. ಆ ಕಾಲದಲ್ಲಿ ಬಟ್ಟೆಗಳ ತಯಾರಿಕೆಯಲ್ಲಿ (ಉಣ್ಣೆ ನೇಯಲು) ಇದನ್ನು ಬಳಸಲಾಗುತ್ತಿತ್ತಂತೆ. ಈಜಿಪ್ಟಿನಲ್ಲಿ ಕ್ರಿ.ಪೂ. ೧೫೫೦ರಲ್ಲಿ ಬಳಕೆಯಲ್ಲಿದ್ದ ಎಬರ್ಸ್ ಪ್ಯಾರಿಸ್ ನಲ್ಲೂ (ಕಾಗದ) ಸಾಬೂನಿನ ಮೂಲ ಮಾದರಿಯನ್ನು ಹೇಗೆ ತಯಾರಿಸುತ್ತಿದ್ದರು ಎಂಬ ಬಗ್ಗೆ ಉಲ್ಲೇಖವಿದೆ. ಪ್ರಾಣಿಗಳ ಹಾಗೂ ಸಸ್ಯಗಳಿಂದ ತೆಗೆದ ತೈಲವನ್ನು ಕ್ಷಾರೀಯ ಉಪ್ಪಿನೊಂದಿಗೆ ಬೆರೆಸಿ ಸಾಬೂನನ್ನು ಹೋಲುವ ವಸ್ತುವನ್ನು ತಯಾರಿಸುತ್ತಿದ್ದರು ಎಂದು ಅದರಲ್ಲಿ ಬರೆಯಲಾಗಿದೆ. ಸ್ನಾನ ಮಾಡುವುದಕ್ಕೆ ಮಾತ್ರವಲ್ಲದೆ ಔಷಧವಾಗಿಯೂ ಈಜಿಪ್ಟಿಯನ್ನರು ಇದನ್ನು ಬಳಸುತ್ತಿದ್ದರು. ಗಾಯ, ಚರ್ಮರೋಗಿಗಳಿಗೆ ಇದು ರಾಮಬಾಣವಾಗಿತ್ತು.

[[ಶಾಶ್ವತವಾಗಿ ಮಡಿದ ಕೊಂಡಿ] ಸಾಬೂನುಗಳು]

"https://kn.wikipedia.org/w/index.php?title=ಸಾಬೂನು&oldid=1062242" ಇಂದ ಪಡೆಯಲ್ಪಟ್ಟಿದೆ