ಲಾಲಾರಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾಲಾರಸವು ಲಾಲಾಗ್ರಂಥಿಯಿಂದ ಸ್ರವಿಸಲ್ಪಟ್ಟ ಪ್ರಾಣಿಗಳ ಬಾಯಿಗಳಲ್ಲಿ ರೂಪಗೊಳ್ಳುವ ಒಂದು ನೀರಿನಂತಹ ಪದಾರ್ಥ. ಮಾನವ ಲಾಲಾರಸವು 98% ನೀರು, ಜೊತೆಗೆ ವಿದ್ಯುದ್ವಿಚ್ಛೇದ್ಯಗಳು, ಲೋಳೆ, ಬಿಳಿ ರಕ್ತಕೋಶಗಳು, ಎಪಿತೀಲಿಕ ಕೊಶಗಳು, ಗ್ಲೈಕೊಪ್ರೊಟೀನ್‍ಗಳು, ಕಿಣ್ವಗಳು, ಸ್ರಾವಕ ಐಜಿಎ ಮತ್ತು ಲೈಸೋಝೈಂನಂತಹ ಸೂಕ್ಷ್ಮಜೀವಿ ಪ್ರತಿರೋಧಕ ಕಾರಕಗಳನ್ನು ಹೊಂದಿರುತ್ತದೆ. ಲಾಲಾರಸದಲ್ಲಿ ಕಂಡುಬರುವ ಕಿಣ್ವಗಳು ಪಿಷ್ಟ ಮತ್ತು ಕೊಬ್ಬುಗಳ ಜೀರ್ಣ ಪ್ರಕ್ರಿಯೆಯನ್ನು ಆರಂಭಿಸುವಲ್ಲಿ ಅತ್ಯಗತ್ಯವಾಗಿರುತ್ತವೆ. ಅಲ್ಲದೇ, ಲಾಲಾರಸವು ಜಾರುವ ಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತದೆ, ಆಹಾರ ಒದ್ದೆಮಾಡುತ್ತದೆ, ನುಂಗುವ ಕ್ರಿಯೆಯ ಆರಂಭವನ್ನು ಅನುಮತಿಸುತ್ತದೆ ಮತ್ತು ಬಾಯಿಯ ಲೋಳೆಪೊರೆಯ ಮೇಲ್ಮೈಗಳನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಕೆಲವು ಸ್ವಿಫ಼್ಟ್ ಹಕ್ಕಿಗಳು ಗೂಡುಗಳನ್ನು ನಿರ್ಮಿಸಲು ತಮ್ಮ ಅಂಟಂಟಾದ ಲಾಲಾರಸವನ್ನು ಬಳಸುತ್ತವೆ. ಏರೋಡ್ರಾಮಸ್ ಗೂಡುಗಳು ಪಕ್ಷಿ ಗೂಡಿನ ಸೂಪ್‍ನ ಆಧಾರವಾಗಿರುತ್ತವೆ. ನಾಗರಹಾವುಗಳು, ವಿಷಸರ್ಪಗಳು ಮತ್ತು ಕೆಲವು ಇತರ ಸದಸ್ಯಗಳು ತಮ್ಮ ವಿಷದಹಲ್ಲಿನಿಂದ ಒಳಚುಚ್ಚಲ್ಪಟ್ಟ ವಿಷಪೂರಿತ ಜೊಲ್ಲಿನಿಂದ ಬೇಟೆಯಾಡುತ್ತವೆ. ಜೇಡಗಳು ಮತ್ತು ಮರಿಹುಳುಗಳು, ಕೆಲವು ಸಂಧಿಪದಿಗಳು ಜೊಲ್ಲು ಗ್ರಂಥಿಗಳಿಂದ ನಾರನ್ನು ರಚಿಸುತ್ತವೆ.

"https://kn.wikipedia.org/w/index.php?title=ಲಾಲಾರಸ&oldid=845873" ಇಂದ ಪಡೆಯಲ್ಪಟ್ಟಿದೆ