ಶಿಶುಜನನ
ಟೆಂಪ್ಲೇಟು:Infobox medical condition ಶಿಶುಜನನ, ಇದನ್ನು ಹೆರಿಗೆ ಮತ್ತು ಪ್ರಸವ, ಎಂದು ಕರೆಯುತ್ತಾರೆ ಮತ್ತು ಇದು ಗರ್ಭಧಾರಣೆಯ ಅಂತ್ಯವಾಗಿದ್ದು ಗರ್ಭಾಶಯದಿಂದ ಒಂದು ಅಥವಾ ಹೆಚ್ಚಿನಶಿಶುಗಳು ಹೊರಬರುತ್ತಾರೆ.[೧] 2015 ರಲ್ಲಿ ಸುಮಾರು 135 ಮಿಲಿಯನ್ ಜನನಗಳು ಜಾಗತಿಕವಾಗಿ ಸಂಭವಿಸಿವೆ.[೨] 37 ವಾರಗಳ ಗರ್ಭಧಾರಣೆಯ ಮುನ್ನವೇ ಜನನವಾಗುತ್ತಾರೆ, ಆದರೆ 3 ರಿಂದ 12% ನಡುವಿನ [೩] ಶಿಶುಗಳು 42 ವಾರಗಳ ನಂತರ ಜನಿಸುತ್ತಾರೆ.[೪] ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಹೆಚ್ಚಿನ ಶಿಶುಜನನಗಳು ಆಸ್ಪತ್ರೆಗಳಲ್ಲಿ ಸಂಭವಿಸುತ್ತವೆ, [೫][೬]ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೆಚ್ಚಿನ ಜನನಗಳು ಮನೆಯಲ್ಲಿ ಸಾಂಪ್ರದಾಯಿಕ ಶುಷ್ರೂಷಕಿಯರ ಬೆಂಬಲದಲ್ಲಿ ನಡೆಯುತ್ತವೆ.[೭]
ಶಿಶುಜನನದ ಅತ್ಯಂತ ಸಾಮಾನ್ಯ ವಿಧವೆಂದರೆ ಯೋನಿಯ ಮೂಲಕ ಪ್ರಸವ.[೮] ಇದು ಪ್ರಸವದ ಮೂರು ಹಂತಗಳನ್ನು ಒಳಗೊಳ್ಳುವುದು: ಮತ್ತು ವಸ್ತಿಯು ಹಿಗ್ಗುವುದು ಹಾಗೂ ಕೆಳಕ್ಕಿಳಿಯುವುದು ಮತ್ತು ಶಿಶುವಿನ ಜನನ ಹಾಗೂ ಪ್ಲಾಸೆಂಟಾವು ಹೊರಬರುವುದು.[೯] ಮೊದಲ ಹಂತವು ಸಾಮಾನ್ಯವಾಗಿ ಹನ್ನೆರಡರಿಂದ ಹತ್ತೊಂಬತ್ತು ಗಂಟೆಗಳ ಕಾಲ, ಎರಡನೇ ಹಂತವು ಇಪ್ಪತ್ತು ನಿಮಿಷಗಳಿಂದ ಎರಡು ಗಂಟೆಗಳ ಕಾಲ ಮತ್ತು ಮೂರನೇ ಹಂತವು ಐದರಿಂದ ಮೂವತ್ತು ನಿಮಿಷಗಳ ಕಾಲ ನಡೆಯುವುದು.[೧೦] ಮೊದಲ ಹಂತವು, ಅದು ಅರ್ಧ ನಿಮಿಷದ ಕಾಲ ಪ್ರತಿ ಹತ್ತರಿಂದ ಮೂವತ್ತು ನಿಮಿಷಗಳೊಂದಿಗೆ ಉಂಟಾಗುವ ಕೆಳಹೊಟ್ಟೆಯ ಸೆಳೆತದ ನೋವುಗಳು ಅಥವಾ ಬೆನ್ನು ನೋವುಗಳೊಂದಿಗೆ ಪ್ರಾರಂಭಗೊಳ್ಳುವುದು.[೯] ಕಾಲಾವಧಿಯಲ್ಲಿ ಸೆಳೆತದ ನೋವುಗಳು ಬಲವಾಗುತ್ತವೆ ಮತ್ತು ನಿಕಟವಾಗುತ್ತವೆ.[೧೦] ಎರಡನೇ ಹಂತದಲ್ಲಿ ಸಂಕೋಚನಗಳೊಂದಿಗೆ ತಳ್ಳುವಿಕೆ ಉಂಟಾಗುವುದು.[೧೦] ಮೂರನೇ ಹಂತದಲ್ಲಿ ತೆಗೆಯುವುದನ್ನು ವಿಳಂಬ ಮಾಡುವಂತೆ ಸಲಹೆ ಮಾಡಲಾಗುತ್ತದೆ.[೧೧] ವಿಶ್ರಾಂತಿ ತಂತ್ರಗಳು, ಅಮಲು ನೀಡುವುದು ಹಾಗೂ ಬೆನ್ನುಮೂಳೆ ತಡೆಗಳು ಮುಂತಾದ ಹಲವಾರು ವಿಧಾನಗಳು ನೋವನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.[೧೦]
ಹೆಚ್ಚಿನ ಶಿಶುಗಳು ತಲೆ ಹೊರಬರುವ ರೀತಿಯಲ್ಲಿ ಜನನ ಹೊಂದುತ್ತವೆ; ಆದರೆ ಸುಮಾರು 4% ಶಿಶುಗಳ ಪಾದಗಳು ಅಥವಾ ಪೃಷ್ಠ ಮೊದಲು ಹೊರಬರುತ್ತವೆ, ಇದನ್ನು ಬ್ರೀಚ್ ಅಥವಾ ಬರ್ತ್ಬ್ರೀಚ್ ಎನ್ನುತ್ತಾರೆ.[೧೦][೧೨] ಪ್ರಸವದ ಸಂದರ್ಭದಲ್ಲಿ ಮಹಿಳೆಯರು ಸಾಮಾನ್ಯವಾಗಿ ತಾವು ಇಷ್ಟಪಡುವ ರೀತಿಯಲ್ಲಿ ಆಹಾರ ಸೇವಿಸುತ್ತಾರೆ ಮತ್ತು ಚಲಿಸುತ್ತಾರೆ, ಮೊದಲ ಹಂತದಲ್ಲಿ ಅಥವಾ ತಲೆಯ ಜನನದ ಸಂದರ್ಭದಲ್ಲಿ ತಳ್ಳುವುದನ್ನು ಮತ್ತುಎನಿಮಾಗಳನ್ನು ಶಿಫಾರಸು ಮಾಡಲಾಗುವುದಿಲ್ಲ.[೧೩] [[]]ಎಪಿಸಿಯೊಸ್ಟಮಿ ಎಂದು ಕರೆಯು ಯೋನಿಯ ತೆರೆಯುವ ಭಾಗವನ್ನು ಕತ್ತರಿಸುವಾಗ ಸಾಮಾನ್ಯವಾಗಿ ಇದು ಅಗತ್ಯವಿರುವುದಿಲ್ಲ.[೧೦] 2012 ರಲ್ಲಿ ಸುಮಾರು 23 ಮಿಲಿಯನ್ ಪ್ರಸವಗಳುಸಿಸೇರಿಯನ್ ಸೆಕ್ಷನ್ ಎಂದು ಕರೆಯಲಾಗುವ ಶಸ್ತ್ರಚಿಕಿತ್ಸಾ ಕ್ರಮಗಳ ಮೂಲಕ ನಡೆದಿವೆ.[೧೪] ಸಿಸೇರಿಯನ್ ಸೆಕ್ಷನ್ನುಗಳನ್ನು ಅವಳಿಗಳಿಗೆ, ಮಗುವಿನಲ್ಲಿ ದುರ್ಬಲತೆಸ್ಥಿತಿಯಿರುವಾಗ ನಡೆಸಲಾಗುತ್ತದೆ.[೧೦] ಈ ವಿಧದ ಶಿಶುಜನನದಿಂದ ಗುಣಮುಖವಾಗಲು ದೀರ್ಘಕಾಲ ಅಗತ್ಯವಾಗುವುದು.[೧೦]
ಪ್ರತಿ ವರ್ಷ ಗರ್ಭಧಾರಣೆ ಮತ್ತು ಶಿಶುಜನನದ ಸಂಕೀರ್ಣತೆಗಳು ಸುಮಾರು 500,000 ಮಾತೃಮರಣಗಳಿಗೆ ಕಾರಣವಾಗುತ್ತವೆ. 7 ಮಿಲಿಯನ್ ಮಹಿಳೆಯರು ಗಂಭೀರವಾದ ದೀರ್ಘಕಾಲಿಕ ಸಮಸ್ಯೆಗಳನ್ನು ಹೊಂದಿದ್ದಾರೆ. 50 ಮಿಲಿಯನ್ ಮಹಿಳೆಯರಲ್ಲಿ ಪ್ರಸವದ ನಂತರ ಆರೋಗ್ಯದಲ್ಲಿ ಹಾನಿಕಾರಕ ಘಟನೆಗಳು ನಡೆದಿವೆ.[೧೫] ಇವುಗಳಲ್ಲಿ ಹೆಚ್ಚಿನವು ಅಭಿವೃದ್ಧಿಶೀಲ ದೇಶಗಳಲ್ಲಿ ನಡೆಯುತ್ತವೆ.[೧೫] ನಿರ್ದಿಷ್ಟ ಸಂಕೀರ್ಣತೆಗಳು ಪ್ರಸವದ ತಡೆಗಟ್ಟುವಿಕೆ, ಪ್ರಸವದ ನಂತರ ರಕ್ತಸ್ರಾವ, ಎಕ್ಲಾಂಪ್ಸಿಯಾ, ಹಾಗೂ ಪ್ರಸವ ನಂತರದ ಸೋಂಕನ್ನು ಒಳಗೊಂಡಿರುತ್ತವೆ.[[]][೧೫] ಶಿಶುವಿನಲ್ಲಿನ ಸಂಕೀರ್ಣತೆಗಳು ಶಿಶುಗಳ ಉಸಿರು ಕಟ್ಟುವುದು ಸೇರುತ್ತದೆ.[೧೬]
ಉಲ್ಲೇಖಗಳು
[ಬದಲಾಯಿಸಿ]- ↑ Martin, Elizabeth. Concise Colour Medical Dictionary (in ಇಂಗ್ಲಿಷ್). Oxford University Press. p. 375. ISBN 9780199687992.
- ↑ "The World Factbook". www.cia.gov. July 11, 2016. Archived from the original on 16 ನವೆಂಬರ್ 2016. Retrieved 30 July 2016.
- ↑ "Preterm birth Fact sheet N°363". WHO. November 2015. Retrieved 30 July 2016.
- ↑ Buck, Germaine M.; Platt, Robert W. (2011). Reproductive and perinatal epidemiology. Oxford: Oxford University Press. p. 163. ISBN 9780199857746.
- ↑ Co-Operation, Organisation for Economic; Development (2009). Doing better for children. Paris: OECD. p. 105. ISBN 9789264059344.
- ↑ Olsen, O; Clausen, JA (12 September 2012). "Planned hospital birth versus planned home birth". The Cochrane database of systematic reviews (9): CD000352. PMID 22972043.
- ↑ Fossard, Esta de; Bailey, Michael (2016). Communication for Behavior Change: Volume lll: Using Entertainment–Education for Distance Education. SAGE Publications India. ISBN 9789351507581. Retrieved 31 July 2016.
- ↑ Memon, HU; Handa, VL (May 2013). "Vaginal childbirth and pelvic floor disorders". Women's health (London, England). 9 (3): 265–77, quiz 276-7. PMID 23638782.
- ↑ ೯.೦ ೯.೧ "Birth". The Columbia Electronic Encyclopedia (6 ed.). Columbia University Press. 2016. Retrieved 2016-07-30 from Encyclopedia.com.
{{cite web}}
: Check date values in:|accessdate=
(help) - ↑ ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ ೧೦.೬ ೧೦.೭ "Pregnancy Labor and Birth". Women's Health. September 27, 2010. Archived from the original on 28 ಜುಲೈ 2016. Retrieved 31 July 2016.
- ↑ McDonald, SJ; Middleton, P; Dowswell, T; Morris, PS (11 July 2013). "Effect of timing of umbilical cord clamping of term infants on maternal and neonatal outcomes". The Cochrane database of systematic reviews (7): CD004074. PMID 23843134.
- ↑ Hofmeyr, GJ; Hannah, M; Lawrie, TA (21 July 2015). "Planned caesarean section for term breech delivery". The Cochrane database of systematic reviews (7): CD000166. PMID 26196961.
- ↑ Childbirth: Labour, Delivery and Immediate Postpartum Care (in ಇಂಗ್ಲಿಷ್). World Health Organization. 2015. p. Chapter D. ISBN 978-92-4-154935-6. Retrieved 31 July 2016.
- ↑ Molina, G; Weiser, TG; Lipsitz, SR; Esquivel, MM; Uribe-Leitz, T; Azad, T; Shah, N; Semrau, K; Berry, WR; Gawande, AA; Haynes, AB (1 December 2015). "Relationship Between Cesarean Delivery Rate and Maternal and Neonatal Mortality". JAMA. 314 (21): 2263–70. doi:10.1001/jama.2015.15553. PMID 26624825.
- ↑ ೧೫.೦ ೧೫.೧ ೧೫.೨ Education material for teachers of midwifery : midwifery education modules (PDF) (2nd ed.). Geneva [Switzerland]: World Health Organisation. 2008. p. 3. ISBN 978-92-4-154666-9.
- ↑ Martin, Richard J.; Fanaroff, Avroy A.; Walsh, Michele C. Fanaroff and Martin's Neonatal-Perinatal Medicine: Diseases of the Fetus and Infant (in ಇಂಗ್ಲಿಷ್). Elsevier Health Sciences. p. 116. ISBN 9780323295376.