ಲಾಲ್ ಬಹಾದುರ್ ಶಾಸ್ತ್ರಿ
ಗೋಚರ
(ಲಾಲ್ ಬಹಾದ್ದೂರ್ ಶಾಸ್ತ್ರಿ ಇಂದ ಪುನರ್ನಿರ್ದೇಶಿತ)
ಲಾಲ್ ಬಹಾದುರ್ ಶಾಸ್ತ್ರಿ | |
---|---|
ಭಾರತದ ದ್ವಿತೀಯ ಪ್ರಧಾನಮಂತ್ರಿ
| |
ಅಧಿಕಾರ ಅವಧಿ ೯ ಜೂನ್ ೧೯೬೪ – ೧೧ ಜನವರಿ ೧೯೬೬ | |
ರಾಷ್ಟ್ರಪತಿ | ಸರ್ವೇಪಲ್ಲಿ ರಾಧಾಕೃಷ್ಣನ್ |
ಉಪ ರಾಷ್ಟ್ರಪತಿ | ಝಾಕಿರ್ ಹುಸೇನ್ |
ಪೂರ್ವಾಧಿಕಾರಿ | ಜವಹರಲಾಲ್ ನೆಹರೂ^ |
ಉತ್ತರಾಧಿಕಾರಿ | ಇಂದಿರಾ ಗಾಂಧಿ^ |
ಭಾರತ ಸರ್ಕಾರದ ತೃತೀಯ ವಿದೇಶಾಂಗ ವ್ಯವಹಾರಗಳ ಸಚಿವರು
| |
ಅಧಿಕಾರ ಅವಧಿ ೯ ಜೂನ್ ೧೯೬೪ – ೧೮ ಜುಲೈ ೧೯೬೪ | |
ಪ್ರಧಾನ ಮಂತ್ರಿ | Himself |
ಪೂರ್ವಾಧಿಕಾರಿ | ಗುಲ್ಜಾರಿ ಲಾಲ್ ನಂದಾ |
ಉತ್ತರಾಧಿಕಾರಿ | ಸರ್ದಾರ್ ಸ್ವರನ್ ಸಿಂಗ್ |
ಭಾರತ ಸರ್ಕಾರದ ೬ನೇ ಗೃಹ ಸಚಿವರು
| |
ಅಧಿಕಾರ ಅವಧಿ ೪ ಎಪ್ರಿಲ್ ೧೯೬೧ – ೨೯ ಅಗಸ್ಟ್ ೧೯೬೩ | |
ಪ್ರಧಾನ ಮಂತ್ರಿ | ಜವಹರಲಾಲ್ ನೆಹರೂ |
ಪೂರ್ವಾಧಿಕಾರಿ | ಗೋವಿಂದ ವಲ್ಲಭ ಪಂತ್ |
ಉತ್ತರಾಧಿಕಾರಿ | ಗುಲ್ಜಾರಿ ಲಾಲ್ ನಂದಾ |
ಭಾರತ ಸರ್ಕಾರದ ೩ನೇ ರೈಲ್ವೇ ಸಚಿವರು
| |
ಅಧಿಕಾರ ಅವಧಿ ೧೩ ಮೇ ೧೯೫೨ – ೭ ಡಿಸೆಂಬರ್ ೧೯೫೬ | |
ಪ್ರಧಾನ ಮಂತ್ರಿ | ಜವಹರಲಾಲ್ ನೆಹರೂ |
ಪೂರ್ವಾಧಿಕಾರಿ | ಎನ್. ಗೋಪಾಲಸ್ವಾಮಿ ಅಯ್ಯಂಗಾರ್ |
ಉತ್ತರಾಧಿಕಾರಿ | ಜಗಜೀವನ್ ರಾಮ್ |
ವೈಯಕ್ತಿಕ ಮಾಹಿತಿ | |
ಜನನ | ಲಾಲ್ ಬಹದೂರ್ ವರ್ಮಾ ೨ ಅಕ್ಟೋಬರ್ ೧೯೦೪ ಮುಘಲ್ ಸರಾಯ್, (ಹಿಂದಿನ ಆಗ್ರಾ ಮತ್ತು ಔದ್ ಸಂಯುಕ್ತ ಪ್ರಾಂತ್ಯಗಳು, ಬ್ರಿಟಿಷ್ ಆಡಳಿತ) (ಈಗಿನ ಪಂ. ದೀನ್ ದಯಾಳ್ ಉಪಾಧ್ಯಾಯ ನಗರ (ಹಳೆಯ ಹೆಸರು-ಮುಘಲ್ ಸರಾಯ್), ಉತ್ತರ ಪ್ರದೇಶ, ಭಾರತ) |
ಮರಣ | 11 January 1966 ತಾಷ್ಕೆಂಟ್, ಉಜ್ಬೆಕ್ ಸೋವಿಯತ್ ಸಮಾಜವಾದಿ ಗಣರಾಜ್ಯ, (ಈಗಿನ ಉಜ್ಬೆಕಿಸ್ತಾನ) ಸೋವಿಯತ್ ಒಕ್ಕೂಟ | (aged 61)
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) |
ಲಲಿತಾ ಶಾಸ್ತ್ರಿ (ವಿವಾಹ:1928) |
ಮಕ್ಕಳು | ೬ |
ಅಭ್ಯಸಿಸಿದ ವಿದ್ಯಾಪೀಠ | ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠ |
ಉದ್ಯೋಗ | ರಾಜಕಾರಿಣಿ |
ಮಿಲಿಟರಿ ಸೇವೆ | |
ಅಡ್ಡಹೆಸರು(ಗಳು) | ನನ್ಹೆ |
ಪ್ರಶಸ್ತಿಗಳು | ಭಾರತ ರತ್ನ (೧೯೬೬) (ಮರಣೋತ್ತರ) |
Wikimedia Commons has media related to Lal Bahadur Shastri.
ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್ ೦೨, ೧೯೦೪ - ಜನವರಿ ೧೧, ೧೯೬೬) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು.
ಜೀವನ
[ಬದಲಾಯಿಸಿ]- ಲಾಲ್ ಬಹಾದ್ದೂರ್ ಮೊಘಲ್ ಸಾರಾಯ್‌ನಲ್ಲಿ ಜನಿಸಿದ್ದು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ೧೯೨೬ ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು ೯ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ ೧೯೪೬ ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.
- ಗಾಂಧೀಜಿಯವರ ಜನ್ಮದಿನದಂದೇ ಜನ್ಮದಿನ.
ಭಾರತ ಸರಕಾರಕ್ಕೆ ಸಲ್ಲಿಸಿದ ಸೇವೆ
[ಬದಲಾಯಿಸಿ]- ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ೦ದ ವಲ್ಲಭ ಪ೦ತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. ೧೯೫೧ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು.
- ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ಖಾತೆಗೆ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‌ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯಾಗಿದ್ದರು. ಮೇ ೨೭, ೧೯೬೪ರಂದು ಜವಾಹರ್‌ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು.
- ಸ್ವಲ್ಪ ಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‌ನ ಕೆಲವು ಪ್ರಮುಖ ಆಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ ೯ ರಂದು ಭಾರತದ ಪ್ರಧಾನಿಯಾದರು.
ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು
[ಬದಲಾಯಿಸಿ]- ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು.
- ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾಷ್ಕೆಂಟ್‌ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ ೧೦ ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ಟಾಶ್ಕೆಂಟ್ ಡಿಕ್ಲೆರೇಶನ್.
- ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು; ಆದರೆ ಪಾಕಿಸ್ತಾನದವರೇ ಅವರ ಊಟದಲ್ಲಿ ವಿಷವನ್ನು ಹಾಕಿ ಕೊಂದರು ಎಂಬ ಊಹೆ ಇದೆ. ಆದರೆ ಅದನ್ನು ಅಲ್ಲಿಯ ವೈದ್ಯರು ದೃಡಪಡಿಸಿಲ್ಲ.
- ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ದುರಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.
ಪ್ರಾಮಾಣಿಕ, ಸ್ವಾಭಿಮಾನಿ
[ಬದಲಾಯಿಸಿ]ಇವರು ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು.
ಶಾಸ್ತ್ರಿ ಸೋಮವಾರ
[ಬದಲಾಯಿಸಿ]- ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು.
- ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.
ಪ್ರಶಸ್ತಿಗಳು
[ಬದಲಾಯಿಸಿ]ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ.
ನೋಡಿ
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಲಾಲ್ ಬಹಾದುರ್ ಶಾಸ್ತ್ರಿಗಳ ಮನೆ ಸ್ಮಾರಕವಾಗಿ ಪರಿವರ್ತಿಸಲಾಗುತ್ತಿದೆ Archived 2004-10-28 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]