ಹೊನ್ನಾವರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Honnavar
ಹೊನ್ನಾವರ
Town
Honnavar is located in ಕರ್ನಾಟಕ
Honnavar
Honnavar
Coordinates: 14°16′48″N 74°26′38″E / 14.28°N 74.4439°E / 14.28; 74.4439Coordinates: 14°16′48″N 74°26′38″E / 14.28°N 74.4439°E / 14.28; 74.4439
Country  India
State Karnataka
Region Canara
District Uttara Kannada
Taluk Honnavar
Established 1890[೨]
ಸರ್ಕಾರ
 • ಶೈಲಿ Municipality
 • ಅಂಗ Honnavar Town Panchayat
ವಿಸ್ತೀರ್ಣ
 • ಒಟ್ಟು ೯.೩೮
ಎತ್ತರ
ಜನಸಂಖ್ಯೆ (2011)
 • ಒಟ್ಟು ೧೯[೧]
Languages
 • Official Kannada
ಸಮಯ ವಲಯ IST (UTC+5:30)
PIN 581334, 581395, 581342
Telephone code +91-8387
ವಾಹನ ನೊಂದಣಿ KA 47
ಜಾಲತಾಣ www.honnavaratown.gov.in
Colonel Hill - 30m tall column

ಹೊನ್ನಾವರ ಉತ್ತರ ಕನ್ನಡ ಜಿಲ್ಲೆಯ ಒಂದು ಸುಂದರ ಬಂದರು ಪ್ರದೇಶ. ಹೊನ್ನಾವರ ಪಟ್ಟಣವು ತಾಲೂಕಿನ ಕೇಂದ್ರ. ಅರಬ್ಬಿ ಸಮುದ್ರದ ತೀರದಲ್ಲಿ ಶರಾವತಿ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ಪಟ್ಟಣ ಐತಿಹಾಸಿಕ ಪ್ರದೇಶ ಕೂಡ. ಐತಿಹಾಸಿಕವಾಗಿ ಗಮನಿಸಲು ಹೋದರೆ ಗೇರುಸೊಪ್ಪೆಯ ಚೆನ್ನಭೈರಾದೇವಿ ಈ ಪ್ರದೇಶವನ್ನು ಆಳಿದ ದಾಖಲೆಗಳು ಇತಿಹಾಸ ಪುಟಗಳಲ್ಲಿ ಸಿಗುತ್ತವೆ. ಪುರಾತನ ಕಾಲದಿಂದಲೂ ಪ್ರಸಿದ್ಧಿ ಹೊಂದಿರುವ ಯಕ್ಷಗಾನ ಕಲೆ ಹಾಗೂ ತಾಳಮದ್ದಳೆ ಕಾರ್ಯಕ್ರಮ ಇಲ್ಲಿಯ ವೈಶಿ‌‌‌ಷ್ಟ್ಯ.

ಜನಸಂಖ್ಯೆ ಮತ್ತು ಭಾಷೆ[ಬದಲಾಯಿಸಿ]

೨೦೦೧ರ ಗಣತಿಯ ಪ್ರಕಾರ ಸುಮಾರು ೧೮ ಸಾವಿರ ಜನಸಂಖ್ಯೆ ಹೊಂದಿರುವ ಇಲ್ಲಿ ೫೧% ಪುರುಷರು ಹಾಗು ೪೯% ಮಹಿಳೆಯರು ಇದ್ದಾರೆ. ಸುಮಾರು ೭೮ ಪ್ರತಿಶತ ಸಾಕ್ಷರತೆ ಇರುವ ಈ ಪಟ್ಟಣದ ಸಾಕ್ಷರತೆ ಭಾರತದ ಸರಾಸರಿ ಸಾಕ್ಷರತೆಗಿಂತ (೫೯.೫%)ಹೆಚ್ಛಾಗಿದೆ. ಸಾಕ್ಷರ ಪುರುಷರ ಸರಾಸರಿ ೮೩% ಹಾಗು ಮಹಿಳೆಯರ ಸರಾಸರಿ ೭೪% ಮತ್ತು ೧೧% ಮಕ್ಕಳು ೬ ವರ್ಷದೊಳಗಿನವರು. ಕನ್ನಡವು ಅಧಿಕೃತ ಭಾಷೆಯಾಗಿ ಚಲಾವಣೆಯಲ್ಲಿದ್ದರೂ ಸಹ ಕೊಂಕಣಿ ಭಾಷೆ ತನ್ನದೆ ಆದ ಸ್ಥಾನ ಪಡೆದಿದೆ. ಸರಿ ಸುಮಾರು ೫೦% ಜನರ ಮಾತೃಭಾಷೆ ಯಾಗಿರುವ ಇಲ್ಲಿ ೯೫% ಜನರು ಕನ್ನಡ ಹಾಗೂ ಕೊಂಕಣಿಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು.

ಸಾರಿಗೆ ವ್ಯವಸ್ಥೆ[ಬದಲಾಯಿಸಿ]

ದಕ್ಷಿಣದಲ್ಲಿ ಮಂಗಳೂರು ಮತ್ತು ಉತ್ತರದಲ್ಲಿ ಪಣಜಿಯನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೧೭ ಹಾದು ಹೋಗುವ ಈ ಪ್ರದೇಶ ಈ ಎರಡು ಸ್ಥಳಗಳಿಂದ ಸಮ ದೂರದಲ್ಲಿದೆ. ಹೊನ್ನಾವರ - ತುಮಕೂರು ರಾ. ಹೆದ್ದಾರಿ ಸಂಖ್ಯೆ ೨೦೬, ರಾಜ್ಯದ ರಾಜಧಾನಿ ಯನ್ನು ಜೋಡಿಸುತ್ತದೆ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮುಖ್ಯ ಸಾರಿಗೆಯಾಗಿದ್ದರೂ, ಕೊಂಕಣ ರೇಲ್ವೆ ಸಹ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ. ಜನರು ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ.

 • ಹತ್ತಿರದ ರೈಲು ನಿಲ್ದಾಣ : ಹೊನ್ನಾವರ ರೈಲು ನಿಲ್ದಾಣ (ಹೊನ್ನಾವರದ ಹೊರಭಾಗದ ಕರ್ಕಿಯಲ್ಲಿದೆ. ಹೊನ್ನಾವರದಿಂದ ಸುಮಾರು ೫ ಕೀ.ಮೀ. ದೊರದಲ್ಲಿದೆ)
 • ಹತ್ತಿರದ ವಿಮಾನ ನಿಲ್ದಾಣ: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. (ಸುಮಾರು ೧೯೫ ಕೀ.ಮೀ ದೊರದಲ್ಲಿದೆ)

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಸುಂದರವಾದ ಸಮುದ್ರ ತೀರಗಳಿಂದ, ಪುರಾಣ ಪ್ರಸಿಧ್ಧ ದೇವಾಲಯಗಳು, ಮನಮೋಹಕ ಜಲಪಾತಗಳು, ಹಸಿರು ಪರ್ವತಗಳಿಂದ ಕೂಡಿರುವ ಹೊನ್ನಾವರ ಪ್ರವಾಸಿಗರ ಉತ್ತಮ ಆಯ್ಕೆ. ಗುಂಡಬಾಳಾ ಮುಖ್ಯಪ್ರಾಣ ದೇವಸ್ಥಾನ ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿದೆ. ವರ್ಷದ ೧೨ ತಿಂಗಳು ಪ್ರತಿ ರಾತ್ರಿ ನಡೆಯುವ ಯಕ್ಷಗಾನ ಈ ದೇವರ ಮಹಿಮೆಯ ಪ್ರತೀಕ. ಜಲಪಾತ ಮತ್ತು ಸಮುದ್ರ ತೀರ ಎರಡನ್ನೂ ಹೊಂದಿರುವ ಅಪ್ಸರಕೊಂಡ ಪ್ರಮುಖ ಆಕರ್ಷಣೆ.

 • ಇಡಗುಂಜಿ ಮಹಾಗಣಪತಿ ದೇವಸ್ಥಾನ: ಇದು ಸುಮಾರು ೧೨ ಕೀ.ಮೀ. ದೂರದಲ್ಲಿದೆ.
 • ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ: ಸುಮಾರು ೮ ಕಿ.ಮೀ. ಅಂತರದಲ್ಲಿದೆ
 • ಮುರುಡೇಶ್ವರ ದೇವಸ್ಥಾನ: ಇದು ಸುಮಾರು ೨೫ ಕಿ.ಮೀ. ದೂರದಲ್ಲಿದೆ.
 • ಗೇರುಸೊಪ್ಪ ವೀರಾಂಜನೇಯ ದೇವಸ್ಥಾನ: ಇದು ಸುಮಾರು ೩೦ ಕಿ.ಮೀ. ದೂರದಲ್ಲಿದೆ.
 • ಗೇರುಸೊಪ್ಪೆಯ ಚರ್ತುಮುಖ ಬಸದಿ.
 • ಕರಿಕಾನ ಪರಮೇಶ್ವರಿ ದೇವಸ್ಥಾನ: ಇದು ಸುಮಾರು ೧೦ ಕಿ.ಮೀ. ದೂರದಲ್ಲಿದೆ.
 • ಅಪ್ಸರಕೊಂಡ ಜಲಪಾತ: ಇದು ಸುಮಾರು ೦೭ ಕಿ.ಮೀ. ದೂರದಲ್ಲಿದೆ.
 • ಗುಣವಂತೆ: ಯಕ್ಷಗಾನ ಕಲೆಯಿಂದ ಪ್ರಸಿದ್ಧವಾಗಿದೆ. ಸುಮಾರು ೦೯ ಕಿ.ಮೀ ದೂರದಲ್ಲಿದೆ.
 • ಗುಂಡಿಬೈಲ್ ಮಹಾಗಣಪತಿ ದೇವಸ್ಥಾನ: ಇದು ಸುಮಾರು ೧೩ ಕೀ.ಮೀ. ದೂರದಲ್ಲಿದೆ. ೮೦೦ ವರ್ಷಗಳ ಇತಿಹಾಸ ಹೊಂದಿದೆ.
 • ರಾಮತೀರ್ಥ: ಇದು ತೀರ್ಥಕ್ಷೇತ್ರವಾಗಿದ್ದು ಸುಮಾರು ೦೩ ಕಿ.ಮೀ. ದೂರದಲ್ಲಿದೆ.

ಶೈಕ್ಷಣಿಕ ಸಂಸ್ಥೆಗಳು[ಬದಲಾಯಿಸಿ]

ಉತ್ತಮವಾದ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಹೊನ್ನಾವರ ಪಟ್ಟಣ ಶೈಕ್ಷಣಿಕ ರಂಗದಲ್ಲಿ ಉತ್ತಮ ಹೆಸರು ಮಾಡಿದೆ.

 1. ಸಂತ ಮಾರಥೋಮ ಶಾಲೆ
 2. ನ್ಯೂ ಇಂಗ್ಲೀಷ್ ಶಾಲೆ
 3. ಸಂತ ಥಾಮಸ ಶಾಲೆ
 4. ನೇ.ಮಿ.ಕನ್ನಡ ಶಾಲೆ
 5. ಕಸಬಾ ಶಾಲೆ
 6. ಗುಣಗುಣಿ ಶಾಲೆ
 7. ಹೊಲಿ ರೊಜರಿ ಕಾನ್ವೆಂಟ ಶಾಲೆ
 8. ಹಿರಿಯ ಪ್ರಾಥಮಿಕ ಶಾಲೆ (ಬ್ರದರ್ಸ್ ಸ್ಕೂಲ್)
 9. ಎಮ್. ಪಿ. ಈ. ಸೊಸೈಟಿಯ ಸಿಬಿಎಸ್ಈ ಪಠ್ಯಕ್ರಮದ ಶಾಲೆ
 10. ಸಂತ ಅಂತೋನಿ ಶಾಲೆ
 11. ಶ್ರೀ.ಧ.ಮ.ಪದವಿ ಮಹಾವಿದ್ಯಾಲಯ
 12. ಶ್ರೀ.ಧ.ಮ. ಪದವಿಪೂರ್ವ ಮಹಾವಿದ್ಯಾಲಯ
 13. ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ
 14. ಕೈಗಾರಿಕ ತರಬೇತಿ ಮಹಾವಿದ್ಯಾಲಯ
 15. ಸಂತ ಅಂತೋನಿ ದೈಹಿಕ ತರಬೇತಿ ಮಹಾವಿದ್ಯಾಲಯ, ಇತ್ಯಾದಿ.
 16. ಶ್ರೀ ರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಕೇಂದ್ರ, ಸುಬ್ರಹ್ಮಣ್ಯ, ಅಂಚೆ: ಸುರಕಟ್ಟೆ, ಹೊನ್ನಾವರ - ೫೮೧ ೩೩೪

(ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ೦೮೩೮೭-೨೭೯೮೬೪, patveenakar@yahoo.com )

ಆರೋಗ್ಯ ಕೇಂದ್ರಗಳು ‍‍ಮತ್ತು ಆಸ್ಪತ್ರೆಗಳು[ಬದಲಾಯಿಸಿ]

ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯುತ್ತಮವಾದ ಆರೋಗ್ಯ ಕೇಂದ್ರಗಳನ್ನು ‍‍ಮತ್ತು ಆಸ್ಪತ್ರೆಗಳನ್ನು ಹೊಂದಿರುವ ತಾಲ್ಲೂಕು ಹೊನ್ನಾವರ.

 1. ಸರಕಾರಿ ಆಸ್ಪತ್ರೆ
 2. ಸಂತ ಇಗ್ನೇಶಿಯಸ್ ಆಸ್ಪತ್ರೆ
 3. ಸುವಿಧಾ ಆಸ್ಪತ್ರೆ
 4. ಶ್ರೀದೇವಿ ಹೆರಿಗೆ ಆಸ್ಪತ್ರೆ
 5. ಶಾರದಾ ನರ್ಸಿಂಗ ಹೋಮ್
 6. ರಾಮನಾಥ ಮಕ್ಕಳ ಚಿಕಿತ್ಸಾ ಕೇಂದ್ರ
 7. ಡಾ. ಬಳ್ಕೂರು ಆಸ್ಪತ್ರೆ
 8. ಡಾ.ಅವಧಾನಿ ನೇತ್ರ ಚಿಕಿತ್ಸಾಲಯ
 9. ಡಾ. ಪ್ರಮೋದ್ ಫಾಯ್ದೆ,ಮಕ್ಕಳ ತಜ್ನರು ಇತ್ಯಾದಿ.
  "https://kn.wikipedia.org/w/index.php?title=ಹೊನ್ನಾವರ&oldid=588380" ಇಂದ ಪಡೆಯಲ್ಪಟ್ಟಿದೆ