ವಿಷಯಕ್ಕೆ ಹೋಗು

ಇಡಗುಂಜಿ ವಿನಾಯಕ ದೇವಸ್ಥಾನ

Coordinates: 14°13′48.9″N 74°29′39.89″E / 14.230250°N 74.4944139°E / 14.230250; 74.4944139
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಡಗುಂಜಿ ವಿನಾಯಕ ದೇವಸ್ಥಾನ
ಭೂಗೋಳ
ಕಕ್ಷೆಗಳು14°13′48.9″N 74°29′39.89″E / 14.230250°N 74.4944139°E / 14.230250; 74.4944139
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಉತ್ತರ ಕನ್ನಡ
ಸ್ಥಳಇಡಗುಂಜಿ
ವಾಸ್ತುಶಿಲ್ಪ
ವಾಸ್ತುಶಿಲ್ಪ ಶೈಲಿದ್ರಾವಿಡ ವಾಸ್ತುಶಿಲ್ಪ

ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. ೬೬ (ರಾ.ಹೆ. ೧೭)ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ "ಇಡಗುಂಜಿ ದೇವಸ್ಥಾನ" ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ಧ (ಗೋಕರ್ಣ, ಇಡಗುಂಜಿ, ಹಟ್ಟಿ ಅಂಗಡಿ, ಗುಡ್ಡಟು ಆನೆಗುಡ್ಡೆ, ಶರವು, ಸೌತಡ್ಕ) ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.

ವಿನಾಯಕ ಮೂರ್ತಿ[ಬದಲಾಯಿಸಿ]

ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ "ಮಹೋತಭಾರ ಶ್ರೀ ವಿನಾಯಕ" ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ "ದ್ವಿ ಭುಜ" ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ.

ಗಣೇಶ ಚತುರ್ಥಿ[ಬದಲಾಯಿಸಿ]

ಪ್ರತಿವರ್ಷ ಚೌತಿ ಬಂದ್ರೆ ಸಾಕು, ಇಡಗುಂಜಿ ಕ್ಷೇತ್ರ ಕಳೆಗಟ್ಟುತ್ತದೆ. ಎಲ್ಲಿ ನೋಡಿದ್ರು ವಾಹನಗಳ ಸಾಲು, ಸಾಲು ಕಣ್ಣಿಗೆ ಕಾಣುತ್ತದೆ.  ಇಲ್ಲಿ ಗಣೇಶ ಚತುರ್ಥಿಯಂದು ಲಕ್ಷಾಂತರ ಭಕ್ತರು ಆಗಮಿಸಿ, ವಿನಾಯಕನಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ ಎಲ್ಲರಿಗೂ ಇಡಗುಂಜಿ ಕ್ಷೇತ್ರವು ಪ್ರಮುಖ ಯಾತ್ರಾಸ್ಥಳವಾಗಿದ್ದು , ನಂಬಿ ಬಂದ ಭಕ್ತರ ಎಲ್ಲಾ  ಇಷ್ಟಾರ್ಥಗಳನ್ನು ಪೂರೈಸಲು  ಗಣೇಶ  ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ.  ಈ ಬಾಲಗಣಪತಿಯ ಸನ್ನಿದಿಗೆ  ಭಕ್ತರು ಪದೇ ಪದೇ ಆಗಮಿಸಿ ತಮ್ಮ ಹರಕೆ ಸಲ್ಲಿಸುವುದು ಈ ಕ್ಷೇತ್ರದ ಮಹಿಮೆಗೆ  ನಿದರ್ಶನ.

ಅಂಗಾರಕ ಸಂಕಷ್ಟಿ[ಬದಲಾಯಿಸಿ]

ಮoಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನೇ ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಅಂಗಾರಕ ಸಂಕಷ್ಟಿಗೆ ವಿಶೇಷ ಮಹತ್ವವಿದೆ. ಈ ದಿನ ಭಗವಾನ್ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥದಲ್ಲಿ ಹೇಳಾಗಿದೆ. ಹೀಗಾಗಿ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯುವ ಗಣೇಶ ಮತ್ತು ಮಂಗಳನ ಆಶೀರ್ವಾದವನ್ನು ಪಡೆಯುತ್ತಾನೆ. ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಭಕ್ತರದ್ದು. ಅಂಗಾರಕ ಸಂಕಷ್ಟಿಯ ಅಂಗವಾಗಿ ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮುಂಜಾನೆಯಿoದಲೆ ಜನರು ಸಾಗರೋಪಾದಿಯಲ್ಲಿ ಬಂದು ವಿಘ್ನ ವಿಘ್ನನಿವಾರಕ ದರ್ಶನ ಪಡೆಯುತ್ತಾರೆ.

ದೇವಸ್ಥಾನದ ಸಮಯ[ಬದಲಾಯಿಸಿ]

  1. ದರ್ಶನ ಸಮಯ: ಮುಂಜಾನೆ ೬:೦೦ ಗಂಟೆಯಿಂದ ಮಧ್ಯಾಹ್ನ ೧:೦೦ಗಂಟೆಯ ತನಕ ಮತ್ತು ಮಧ್ಯಾಹ್ನ ೩:೦೦ ಗಂಟೆಯಿಂದ ರಾತ್ರಿ ೮:೩೦ ರ ತನಕ
  2. ಅಭಿಷೇಕದ ಸಮಯ: ಮುಂಜಾನೆ ೬:೦೦ ಗಂಟೆ, ಬೆಳಗ್ಗೆ ೧೧:೦೦ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ ೭:00 ಗಂಟೆಗೆ
  3. ಪೂಜೆ ಸಮಯ:ಮುಂಜಾನೆ ೮:೦0 ಗಂಟೆ, ಮಧ್ಯಾಹ್ನ ೧೨:೩0 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ ೮:00 ಗಂಟೆಗೆ
  4. ಇಡಗುಂಜಿ ಮಹಾಗಣಪತಿಗೆ ಪ್ರತಿದಿನ ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಡೆಯುತ್ತಿದೆ. ಈ ಪೂಜೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ. ಈ ವೇಳೆ ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಿ, ಪ್ರಾರ್ಥಿಸುತ್ತಾರೆ. ಇಡಗುಂಜಿ ಮಹಾಗಣಪತಿಯ ಮಹಾಪೂಜೆಯ ವಿಡಿಯೋ ಇಲ್ಲಿದೆ ನೋಡಿ: ಇಡಗುಂಜಿ ಮಹಾಗಣಪತಿಯ ಮಹಾಪೂಜೆ ವಿಡಿಯೋ

ವಿಶೇಷ ಸೇವೆಗಳು[ಬದಲಾಯಿಸಿ]

  • ತುಲಾಭಾರ
  • ಗಣ ಹೋಮ
  • ಮೂಢ ಗಣಪತಿ
  • ರಂಗ ಪೂಜೆ

ಇಲ್ಲಿಗೆ ತಲುಪುವುದು ಹೇಗೆ?[ಬದಲಾಯಿಸಿ]

ಆಹಾರ ಮತ್ತು ವಸತಿ ಸೌಕರ್ಯಗಳು[ಬದಲಾಯಿಸಿ]

ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳು ಲಭ್ಯವಿರುತ್ತದೆ.

ಸಂರ್ಪಕ ವಿಳಾಸ[ಬದಲಾಯಿಸಿ]

ಶ್ರೀ ವಿನಾಯಕ ದೇವರು, ಇಡಗುಂಜಿ, ಅಂಚೆ: ಮಿಲನ ಇಡಗುಂಜಿ, ಹೊನ್ನಾವರ ತಾ||, ಉತ್ತರ ಕನ್ನಡ ಜಿ||, ಕರ್ನಾಟಕ ರಾ||, ಭಾರತ-೫೮೧ ೪೨೩ ಫೋ: (೦೮೩೮೭) ೨೪೭ ೨೨೭ ಇಮೇಲ್: contact@idagunjidevaru.com

ಇತರೆ ಪ್ರವಾಸಿ ಸ್ಥಳಗಳು[ಬದಲಾಯಿಸಿ]

ಇಡಗುಂಜಿಗೆ ಮುರುಡೇಶ್ವರ, ಗೋರ್ಕಣ, ಅಪ್ಸರಕೊಂಡ, ಕಾಸರಗೋಡು ಸಮುದ್ರ ತೀರ, ಶರಾವತಿ ನದಿ, ರಾಮ ಮತ್ತು ಲಕ್ಷ್ಮಣ ತೀರ್ಥಗಳು ಕೆಲವು ಸಮೀಪದ ಪ್ರವಾಸಿ ಸ್ಥಳಗಳಿವೆ.

ಆಕರ[ಬದಲಾಯಿಸಿ]

http://www.idagunjidevaru.com/story.php

https://vismaya24x7.com/