ಗೇರಸೊಪ್ಪಾ

ವಿಕಿಪೀಡಿಯ ಇಂದ
Jump to navigation Jump to search

ಗೇರಸೊಪ್ಪಾ ಒಂದು ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿಗೆ ಸೇರಿದ ಒಂದು ಗ್ರಾಮ. ಹೊನ್ನಾವರದಿಂದ ೩೨ ಕಿಲೋ ಮೀಟರ ಜೋಗದ ಮಾರ್ಗವಾಗಿ ಚಲಿಸಿದರೆ ಗೇರುಸೊಪ್ಪಾ ಸಿಗುತ್ತದೆ. ಅಲ್ಲಿಂದ ಶರಾವತಿ ವಿದ್ಯುದ್ಗಾರದಿಂದ ೬ ಕಿಲೊ ಮೀಟರ್ ಕಾಡುದಾರಿಯಲ್ಲಿ ಚಲಿಸಿದರೆ ನಿರ್ಸಗದ ಮಡಿಲಲ್ಲಿ ಚತುರ್ಮುಖ ಬಸದಿ ಸಿಗುತ್ತದೆ. ಇದೊಂದು ಐತಿಹಾಸಿಕ ಹಾಗೂ ಪ್ರೇಕ್ಷಣಿಯ ಸ್ಥಳವಾಗಿದೆ.

ರಾಣಿ ಚೆನ್ನಾಭ್ಯೈರಾದೇವಿ[ಬದಲಾಯಿಸಿ]