ವಿಷಯಕ್ಕೆ ಹೋಗು

ಬಜ್ಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಜ್ಪೆ
ಪಟ್ಟಣ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
Area
 • Total೧೧೧.೧೮ km (೪೨.೯೩ sq mi)
Elevation
೮.೮೩ m (೨೮.೯೭ ft)
Population
 (2011)
 • Total೯,೭೦೧
 • ಸಾಂದ್ರತೆ೪೧೬.೩/km (೧,೦೭೮/sq mi)
ಭಾಷೆಗಳು
 • ಅಧಿಕೃತತುಳು, ಕನ್ನಡ
ಸಮಯ ವಲಯಯುಟಿಸಿ+5:30 (IST)
ಅಂಚೆ ವಿಳಾಸ
೫೭೪೧೪೨
ದೂರವಾಣಿ ಸಂಖ್ಯೆ೦೮೨೪
ವಾಹನ ನೋಂದಣಿKA-19

ಬಜ್ಪೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ.[೧][೨] ಇದು ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೮ ಕಿಲೋಮೀಟರ್ (೧೧ ಮೈಲಿ) ದೂರದಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬಜಪೆಯಲ್ಲಿದೆ ಮತ್ತು ಇದನ್ನು ಬಜ್ಪೆ ಏರೋಡ್ರೋಮ್ ಎಂದು ಕರೆಯಲಾಗುತ್ತದೆ. ಸಿಟಿ ಬಸ್ ಸಂಖ್ಯೆ ೪೭ ಬಜ್ಪೆಯನ್ನು ಮಂಗಳೂರು ನಗರಕ್ಕೆ ಸಂಪರ್ಕಿಸುತ್ತದೆ.[೩]ಇದನ್ನು ಬಜಪೆ ಅಂತಲೂ ಕರೆಯುತ್ತಾರೆ. ಬಜ್ಪೆ ಸುತ್ತಮುತ್ತ ಹಲವಾರು ಹಳ್ಳಿಗಳಿವೆ, ಇದು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಬಜ್ಪೆ ಕೇಂದ್ರವಾಗಿ ಕಾರ್ಯನಿರ್ವಹಿಸುವ ಹತ್ತಿರದ ಹಳ್ಳಿಗಳೆಂದರೆ ಪೆರ್ಮುದೆ , ಕಾಳಮುಂಡ್ಕೂರು ಮತ್ತು ಕಟೀಲು . ಬಜ್ಪೆಯು ಬೀಜದ ಅಪ್ಪೆ(ಬೀಜಗಳ ತಾಯಿ) ಎಂಬ ತುಳು ಪದದಿಂದ ಉತ್ಪತ್ತಿಯಾಗಿದೆ. ಹಿಂದೆ ಬಜ್ಪೆಯು ಒಂದು ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಾಗಿದ್ದರಿಂದ ಈ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ.

ಜನಸಂಖ್ಯೆ[ಬದಲಾಯಿಸಿ]

೨೦೦೧ ರ ಜನಗಣತಿಯ ಪ್ರಕಾರ, ಬಜ್ಪೆ ಯು ೧೭,೦೩೨ ಜನಸಂಖ್ಯೆಯನ್ನು ಹೊಂದಿದ್ದು. ಪುರುಷರು ೪೮% ಮತ್ತು ಮಹಿಳೆಯರು ೫೨% ಇದ್ದಾರೆ. ಬಜ್ಪೆ ೯೨% ರಷ್ಟು ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಹೆಚ್ಚಾಗಿದೆ; ಗಂಡು ಮತ್ತು ಹೆಣ್ಣು ಸಾಕ್ಷರತಾ ಪ್ರಮಾಣವು ಸಮಾನವಾಗಿರುತ್ತದೆ. ಜನಸಂಖ್ಯೆಯ ೧% ರಷ್ಟು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು.As of 2001

ಶಿಕ್ಷಣ[ಬದಲಾಯಿಸಿ]

ಬಜ್ಪೆ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ನೆಲೆಯಾಗಿದೆ. ಈ ಊರಿನಲ್ಲಿರುವ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳು :

 • ಸಂತ ಜೋಸೆಫರ ಪದವಿ ಪೂರ್ವ ಕಾಲೇಜು (ಹೈ ಸ್ಕೂಲ್ ಮತ್ತು ಪ್ರಿ ಯೂನಿವರ್ಸಿಟಿ)
 • ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಸಂಸ್ಥೆಗಳು,ಸುಂಕದಕಟ್ಟೆ
 • ಮಾರ್ನಿಂಗ್ ಸ್ಟಾರ್ (ವಿಮಾನ ನಿಲ್ದಾಣ ಹತ್ತಿರ) ಶಾಲೆ
 • ಪರೋಕಿಯಲ್ ಹಿರಿಯ ಪ್ರಾಥಮಿಕ ಶಾಲೆ
 • ಲಿಟ್ಲ್ ಫ್ಲವರ್ ಗರ್ಲ್ಸ್ ಹೈಸ್ಕೂಲ್
 • ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆ
 • ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ
 • ವಿಮಾನ ನಿಲ್ದಾಣ ಆಂಗ್ಲ ಮಾಧ್ಯಮ ಶಾಲೆ
 • ಹೋಲಿ ಫ್ಯಾಮಿಲಿ ಶಾಲೆ

ಉಲ್ಲೇಖಗಳು[ಬದಲಾಯಿಸಿ]

 1. "Indian Trade Journal, Volume 241, Part 2". Department of Commercial Intelligence and Statistics., 1967 - India: 613. 1967.
 2. "Debates; Official Report". Mysore (India : State). Legislature. Legislative Assembly. 1970: 446. 1970.
 3. "Wiki- Kannada".
"https://kn.wikipedia.org/w/index.php?title=ಬಜ್ಪೆ&oldid=1159018" ಇಂದ ಪಡೆಯಲ್ಪಟ್ಟಿದೆ