ಹುತಾತ್ಮರ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹುತಾತ್ಮ ದಿನಾಚರಣೆ ಇಂದ ಪುನರ್ನಿರ್ದೇಶಿತ)

ಜನವರಿ ೩೦,೧೯೪೮ - ಭಾರತದೇಶದ ರಾಷ್ತ್ರಪಿತರೆನಿಸಿಕೊಂಡ ಮಹಾತ್ಮ ಗಾಂಧಿಯವರು ಮರಣ ಹೊಂದಿದ ದಿನ .ಈ ದಿನವನ್ನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ.

     ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಯವರ ಮರಣ ದಿನವನ್ನು ಭಾರತದಾದ್ಯಂತ ಈ ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ.
     ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ ಪ್ರತಿ ಗಳಿಗೆಯನ್ನೂ ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ, ಮೋಹನದಾಸ ಕರಮಚಂದ ಗಾಂಧಿ ಹುಟ್ಟಿದ್ದು ಗುಜರಾತಿನ ಪೋರಬಂದರಿನಲ್ಲಿ. ೧೮೬೯ ಅಕ್ಟೋಬರ್ ೨ ರಂದು ಜನಿಸಿದ ಗಾಂಧಿ, ಭೋಗಿಯಾಗಿ ಕೆಲಕಾಲ ಬದುಕಿ, ನಂತರ ವಿಷಯ ಸುಖಗಳ ಕುರಿತು ಜಿಗುಪ್ಸೆ ಹುಟ್ಟಿ ಯೋಗಿಯಾಗಿ ಬದಲಾದವರು. ಅವರ ಹಲವು ನಡೆಗಳು ವಿಮರ್ಶೆಗೊಳಪಟ್ಟು, ವಿವಾದ ಸೃಷ್ಟಿಸಿದ್ದರೂ, ತನ್ನ ಬದುಕೇ ತನ್ನ ಸಂದೇಶ ಎಂಬ ಅವರ ಆತ್ಮವಿಶ್ವಾಸ ನುಡಿ ಅವರನ್ನು ರಾಷ್ಟ್ರಪಿತನನ್ನಾಗಿ ಮಾಡಿದೆ.
       ೧೯೪೮ ಜನವರಿ ೩೦ರಂದು ಪ್ರಾರ್ಥನೆಗೆಂದು ಬಿರ್ಲಾ ಹೌಸ್ ಗೆ ತೆರಳಿದ್ದ ಅವರ ಮೇಲೆ ನಾಥುರಾಮ್ ಗೋಡ್ಸೆ ಮೂರು ಬಾರಿ ಗುಂಡಿಕ್ಕಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ದಿನ ಇಡೀ ಭಾರತವೂ ಶೋಕ ಸಾಗರದಲ್ಲಿ ಮುಳುಗಿತ್ತು. ಆ ದಿನವನ್ನು ಇಂದಿಗೂ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ