ಸ್ಕೌಟ್ ಚಳುವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಳುವಳಿಯ ಲಾಂಛನ

ಸ್ಕೌಟ್ ಚಳುವಳಿ ವಿಶ್ವವ್ಯಾಪಿಯಾಗಿರುವ ಒಂದು ಯುವ ಜನಾಂಗದ ಕೂಟ. ಈ ಚಳುವಳಿಯ ಉದ್ದೇಶವು ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಗೆ. ಈ ಚಳುವಳಿಯನ್ನು ೧೯೦೭ರಲ್ಲಿ ರಾಬರ್ಟ್ ಬೇಡೆನ್ ಪೊವೆಲ್ ಇಂಗ್ಲೆಂಡ್ನಲ್ಲಿ ಪ್ರಾರಂಭಿಸಿದರು.

ಬಾಯ್ ಸ್ಕೌಟ್ಸ್ ಮತ್ತು ಗರ್ಲ್ ಗೈಡ್ಸ್ ಆರಂಭ[ಬದಲಾಯಿಸಿ]

 • ಇಂಗ್ಲೆಂಡಿನ ನಿವೃತ್ತ ಸೈನ್ಯಾಧಕಾರಿಯಾಗಿದ್ದ ಲಾರ್ಡ್ ಬೇಡನ್‘ ಪೊವೆಲ್‌ರಿಂದ 1907 ರಲ್ಲಿ ಗಂಡುಮಕ್ಕಳ ಸ್ಕೌಟ್‘ (ಬಾಯ್ ಸ್ಕೌಟ್) ಆರಂಭ ವಾಯಿತು . ಪ್ರಯೋಗಾರ್ಥವಾಗಿ 20 ಹುಡುಗರಿಗೆ ಬ್ರೌನ್ ಸೀ ದ್ವೀಪದಲ್ಲಿ ಕ್ಯಾಂಪ್ ಮಾಡಿ ಶಿಕ್ಷಣ ಕೊಡಲಾಯಿತು. ಅದರ ಉಪುಕ್ತತೆ ಮತ್ತು ಯಶಸ್ವಿಯೆಂದು ಕಂಡು ಬಂದಿದ್ದರಿಂದ ಅವರು ಸ್ಕೌಟಿಂಗ್ ಫಾರ್ ಬಾಯ್ಸ್ ಎಂಬ ಸ್ಕೌಟ್ ಶಿಕ್ಣಣದ ವಿವರವಾದ ಪಠ್ಯವುಳ್ಳ 15 ದಿನದ ನಿಯತಕಾಲಿಕೆ ಪುಸ್ತಕವನ್ನು ಪ್ರಕಟಿಸಿದರು. ಇದು ಮುಂದಿನ ಸ್ಕೌಟ್ ಶಿಕ್ಷಣ ಮತ್ತು ಚಳುವಳಿಗೆ ನಾಂದಿಯಾಯಿತು.
 • ಸನ್ 1910ರಲ್ಲಿ ಕ್ರಿಸ್ಟಲ್ ಪ್ಯಾಲೇಸ್ ರ‍್ಯಾಲಿ (ಎಲ್ಲಾ ಸ್ಕೌಟ್ ಮಕ್ಕಳ ಕೂಟ) ನೆಡೆಸಿದರು. ಅದರಲ್ಲಿ ಹೆಣ್ಣು ಮಕ್ಕಳೂ ಸ್ಕೌಟ್ ತೊಡಿಗೆಯೊಂದಿಗೆ ಬಂದಿದ್ದರು ಮತ್ತು ತಾವೂ ಬಾಗವಹಿಸುವುದಾಗಿ ಹೇಳಿದರು. ಪೊವೆಲ್ಲರ ತಂಗಿ ಆಗ್ನೆಸ್ ಬೇಡನ್ ಪೊವೆಲ್ ರ ನೇತ್ರತ್ವದಲ್ಲಿ ಗರ‍್ಲ್ ಗೈಡ್ ಎಂಬ ವಿಭಾಗವೂ ಆರಂಭವಾಯಿತು.
 • 1909 ರಲ್ಲಿ. ನಿವೃತ್ತ ಕ್ಯಾಪ್ಟನ್ ಟಿ ಎಚ್ ಬೇಕರ್ ಎಂಬವರು ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯಲ್ಲಿ ಒಂದು ಬಾಯ್ ಸ್ಕೌಟ್ ತಂಡದ ರೂಪದಲ್ಲಿ ಆರಂಭಿಸಿದರು. ರಾಷ್ಟ್ರೀಯ ನಾಯಕರಾದ ಪಂಡಿತ ಮದನ ಮೋಹನ ಮಾಳವೀಯಸೇವಾ ಸಮಿತಿ ಸ್ಕೌಟ್ ಎಸೋಸಿಯೇಶನನ್ನು ಸ್ಥಾಪಿಸಿದರು. ಡಾ ಅನ್ನಿ ಬೆಸೆಂಟ್ಚೆನ್ನೈಯಲ್ಲಿ ಸ್ಕೌಟ್ ಎಸೊಸಿಯೇಶನ್ ಫಾರ್ ಇಂಡಿಯನ್ ಬಾಯ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದರು.

ಭಾರತದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ[ಬದಲಾಯಿಸಿ]

ರಾಬರ್ಟ ಬೇಡನ್ ಪೊವೆಲ್ (22 February 1857 – 8 January 1941), also known as B-P or Lord Baden-Powell, (ಇಂಗ್ಲಿಷ್ ವಿಭಾಗದಿಂದ)
 • ಹೀಗೆ ಭಾರತದಲ್ಲೂ ಅನೇಕ ಕಡೆಗಳಲ್ಲಿ ಸ್ಕೌಟ್ ಚಳುವಲಿ ಬೇರೆ ಬೇರೆ ಹೆಸರಿನಲ್ಲಿ ಪ್ರತ್ಯೇಕವಾಗಿ ಆರಂಭವಾಯಿತು . 1910 ರಲ್ಲಿ ಜಬ್ಬಲ್ಪುರದಲ್ಲಿ ಗರ್ಲ್ ಗೈಡ್ ಆರಂಭವಾಯಿತು. ಅದರೆ ಅದು ಹೆಚ್ಚಾಗಿ ಆಂಗ್ಲೋ ಇಂಡಿಯನ್ನರಿ ಗೆ ಆಗಿತ್ತುನಂತರ ಭಾರತೀಯ ಮಕ್ಕಳಿಗೂ ಆಶಿಕ್ಷಣ ದೊರೆಯುವಂತಾಯಿತು. 1927 1937 ರಲ್ಲಿ ಬೇಡನ್ ಪೊವೆಲ್ ಭಾರತಕ್ಕೆ ಬಂದಾಗ ಇವನ್ನೆಲ್ಲಾ ಒಟ್ಟು ಸೇರಿಸಲು ಪ್ರಯತ್ನಿಸಿದರು ಆದರೆ ಆಗಲಿಲ್ಲ.
 • ಭಾರತವು ೧೯೪೭ ರಲ್ಲಿ ಸ್ವಾತಂತ್ರಗಳಿಸಿದ ನಂತರ ಮೊದಲ ಪ್ರಧಾನಿ ಪಂ.ಜವಾಹರಲಾಲ್ ನೆಹರೂ , ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಂ ಅಜಾದ್ ಅವರು , ಈಗಿನ ಉತ್ರ ಪ್ರದೇಶದ ರಾಜ್ಯಪಾಲ ಶ್ರೀ ಮಂಗಲದಾಸ್ ಪಕ್ವಾಸ್, ಪಂ. ಹೃದಯನಾಥ ಕುಂಜ್ರು,
 • ಶ್ರೀ ರಾಮ ಭಾಜಪೇಯಿ , ನ್ಯಾಯ ಮೂರ್ತಿ ವಿವಿಯನ್ ಬೋಸ್, ಮೊದಲಾದವರನ್ನು ಒಪ್ಪಿಸಿ ವಿವಿಧ ಪ್ರದೇಶಗಳಲ್ಲಿ ಇದ್ದ ಸ್ಕೌಟ್ಸ್ ಗೈಡ್ಸ್ ಸಂಸ್ಥೆಗಳನ್ನು 7 ನವೆಂಬರ್ ೧೯೫೦ರಲ್ಲಿ ಒಂದು ಸಂಸ್ಥೆಯಾಗಿ ಒಗ್ಗೂಡಿಸಿದರು. ದಿ.15- 8-1951.ರಲ್ಲಿ ಭಾರತದ ಗರ್ಲ್ ಗೈಡ್ ಸಂಸ್ಥೆಯೂ ಇದರೊಂದಿಗೆ ಸೇರಿತು. ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ..ತಾರಾಚಂದ್‘ ಈ ಕ್ರಿಯೆಗೆ ವಿಶೇಷ ಶ್ರಮಿಸಿದರು.
 • ಈ ಭಾರತ ಸ್ಕೌಟ್ಸ್ ಮತ್ತು ಗೈರ್ಡ್ಸ್ ಎಂದು ನಾಮಕಣಗೊಂಡ ಸಂಸ್ಥೆ ಸೊಸೈಟಿ ಕಾಯಿದೆ ಮತ್ತು ನಿಯಮಗಳ ಅಡಿಯಲ್ಲಿ ನೊಂದಾಯಿಸಲ್ಪಟ್ಟಿದೆ. ಅದರ ಮುಖ್ಯ ಕಾರ್ಯಾಲಯ ೧೯೬೩ ರರವರೆಗೆ ದೆಹಲಿಯ ಕನ್ನಾಟ ಪ್ರದೇಶದಲ್ಲಿದ್ದು ನಂತರ.ಲಕ್ಷ್ಮಿ ಮುಜುಮ್ದಾರ್ ಭವನ, 16 ಮಹಾತ್ಮ ಗಾಂಧಿ ಮಾರ್ಗ ಇಂದ್ರ ಪ್ರಸ್ಥ ಎಸ್ಟೇಟ್ ನವ ದೆಹಲಿ 110002; ಇಲ್ಲಿ ನೆಡೆಯುತ್ತಿದೆ.(Lakshmi Mazumdar Bhawan , 16, Mahatma Gandhi Marg, Indra Prasth Estate, New Delhi – 110002)
 • ಈ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಎಂದು ನಾಮಕಣಗೊಂಡ ಸಂಸ್ಥೆ ಅಂತರರಾಷ್ತ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳಲ್ಲಿ ನೊಂದಾಯಿಸಿಕೊಂಡಿದೆ.ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಗತ್ತಿನ ಅತ್ಯಂತದೊಡ್ಡ ಸೇವಾಸಂಸ್ಥೆಗಳಲ್ಲಿ ಒಂದು.

ಕರ್ನಾಟಕದಲ್ಲಿ ಸ್ಕೌಟ್ ಚಳವಳಿ[ಬದಲಾಯಿಸಿ]

೧೯೧೭ರಲ್ಲಿ ಸ್ಕೌಟ್ ಚಳವಳಿ ಕರ್ನಾಟಕದಲ್ಲಿ ಪ್ರಾರಂಭವಾಯಿತು. ‘ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಎಂಬ ಹೆಸರಿನ ಸಂಸ್ಥೆಗೆ ಅಂದಿನ ಮಹಾರಾಜರಾಗಿದ್ದ ಶ್ರೀ ಕೃಷ್ಣದೇವರಾಜ ಒಡೆಯರ್ ಪೋಷಕರಾಗಿದ್ದರು. ಅವರ ಸೋದರ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ರಾಜ್ಯ ಮುಖ್ಯಸ್ಥರಾಗಿದ್ದರು. ತಮ್ಮ ಆಡಳಿತದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ ಚಟುವಟಿಕೆಗಳನ್ನು ಆರಂಭಿಸಬೇಕೆಂದು ಮಹಾರಾಜರು ೧೯೧೭ರ ಅಕ್ಟೋಬರ್ ೩ರಂದು ರಾಜಾಜ್ಞೆಯನ್ನು ಹೊರಡಿಸಿದರು.

ಶ್ರೀ ಜಯಚಾಮರಾಜ ಒಡೆಯರರೂ ಬಾಲಕರಾಗಿದ್ದಾಗ ಸ್ಕೌಟಿನಲ್ಲಿ ಮುಖ್ಯ ಕಬ್ ಆಗಿದ್ದರು. ನಂತರ ೧೯೨೭ರಲ್ಲಿ ‘ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಸಂಸ್ಥೆಯ ಸೋದರ ಸಂಸ್ಥೆಯಾಗಿ ‘ದ ಗರ್ಲ್ ಗೈಡ್ಸ್ ಆಫ್ ಮೈಸೂರ್’ ಎಂಬುದು ಸ್ಥಾಪನೆಯಾಯಿತು. ಇವೆರಡೂ ಸ್ವತಂತ್ರವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ೧೯೫೧ರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯೊಂದಿಗೆ ವಿಲೀನವಾಯಿತು.

ಸ್ಕೌಟ್ ಗೈಡ್ ಮೇಳಗಳು[ಬದಲಾಯಿಸಿ]

ಬೇಡನ್ ಪೊಡೆಲ್ ನಂತರ ಆಯ್ಕೆ ಮಾಡಿದ ಸ್ಕೌಟ್ ಚಿನ್ಹೆ
 • ಸ್ಕೌಟ್ ಗೈಡ್ ಮಹಾಮೇಳಗಳು,ರಾಜ್ಯಮಟ್ಟದ ,ಜಿಲ್ಲಾಮಟ್ಟದ ಮೇಳಗಳು ಅಥವಾ ಜಾಂಬೂರಿಗಳು ಮತ್ತು ರ‍್ಯಾಲಿಗಳನ್ನು

ಅಗಾಗ ನೆಡಸಲಾಗುತ್ತದೆ.

 • ಮೊದಲನೇ ಜಾಗತಿಕ ಸ್ಕೌಟ್ ಜಾಂಬೂರಿಯು (ಜಾಗತಿಕ ಸ್ಕೌಟ್ ಮಹಾಮೇಳ) 1920ನೇ ಇಸವಿಯಲ್ಲಿ , ಇಂಗ್ಲೆಂಡಿನ ಲಂಡನ್` ನ ಒಲಂಪಿಯಾದಲ್ಲಿ ನಡೆಯಿತು. ಅದರಲ್ಲಿ 27 ದೇಶಗಳ 8000 ಸ್ಕೌಟ್ ಗೈಡ್ ಗಳು ಸೇರಿದ್ದರು.
 • ಒಂಭತ್ತನೇ ಜಾಗತಿಕ ಸ್ಕೌಟ್ ಗೈಡ್ ಬಜಾಂಬೂರಿಯು, 1957 ರಲ್ಲಿ , ಬೇಡನ್ ಪೊವೆಲ್ ಅವರ ಶತಮಾನದ ಜನ್ಮದಿನೋತ್ಸವ ಹಾಗೂ 1907ರಲ್ಲಿ ಬ್ರೌನ್ ಸೀ ದ್ವೀಪದಲ್ಲಿ ನೆಡೆದ ಪ್ರಥಮ ಸ್ಕೌಟ್` ಕ್ಯಾಂಪ್`ನ 50 ನೇ ವರ್ಷದ ಸ್ಮರಣೆಯ ಅಂಗವಾಗಿ ಇಂಗ್ಲೆಂಡಿನ ಸುತ್ತನ್` ಪಾರ್ಕ್`ನಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಸ್ಕೌಟ್`ಗಳು, ರೋವರುಗಳು,ಸ್ಕೌಟ್ಟ ಮಾಸ್ಟರ್`ಗಳು 84 ದೇಶಗಳಿಂದ ಆಗಮಿಸಿದ್ದರು. ಅವರ ಒಟ್ಟು ಸಂಖ್ಯೆ 35,000 ದಷ್ಟಿತ್ತು.
 • ಭಾರತದಲ್ಲಿ ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ರಾಷ್ಟ್ರೀಯ ಸ್ಕೌಟ್` ಗೈಡ್` ಜಾಂಬೂರಿ ನೆಡೆಯುವುದು. ಅದರಲ್ಲಿ ಎಲ್ಲಾ ರಾಜ್ಯಗಳ ಸ್ಕೌಟ್`ಗರ್ಲ್`ಗೈಡ್ ಗಳು, ರೋವರುಗಳು, ರೇಂಜರ್`ಗಳು, ಸ್ಕೌಟ್`ಮಾಸ್ಟರ್`ಗಳು, ಸೇರುತ್ತಾರೆ.
ಭಾರತದ ಸ್ಕೌಟ್` ಗೈಡ್ ಗಳ 17ನೇ ರಾಷ್ಟ್ರೀಯ ಸ್ಕೌಟ್` ಗೈಡ್` ಜಾಂಬೂರಿ ಪಿಂಕ್` ಸಿಟಿ ಎಂದು ಕರೆಯಲ್ಪಡುವ ,ರಾಜಾಸ್ಥಾನ ರಾಜ್ಥದ ಜಯಪುರದಲ್ಲಿ 2015 ರ ಜನವರಿಯಲ್ಲಿ ದಿ.3 ರಿಂದ 9ರ ವರೆಗೆ ನೆಡೆಯುವುದು.(www.wagggs.org281 × 412Search by image)

ಉದ್ದೇಶಗಳು[ಬದಲಾಯಿಸಿ]

ಘೋಷಣೆ:

 • ಈ ಭಾರತ ಸ್ಕೌಟ್ಸ್ ಮತ್ತು ಗೈಟ್ಸ್ ಸಂಸ್ಥೆಯು, ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು , ರಾಜಕೀಯವಲ್ಲದ, ಮಕ್ಕಳಿಗೆ /ಯುವಕರಿಗೆ ಮೀಸಲಾದ , ಜಾತಿ /ಹುಟ್ಟು, ಮತ, ಪಂಥಗಳ ಬೇಧವಿಲ್ಲದ , ಎಲ್ಲ ಮಕ್ಕಳು, ಯುವಕರಿಗೂ ಅವಕಾಶವಿರುವ, ಈ ಸಂಸ್ಥೆಯ ಮೂಲ ಸ್ಥಾಪಕರಾದ ಲಾಡ್ ಬೇಡನ್ ಪೊವೆಲ್ 1907 ರಲ್ಲಿ ರೂಪಿಸಿದ ನೀತಿ ನಿಯಮ ಮತ್ತು ಉದ್ದೇಶಗಳನ್ನು ಹೊಂದಿದ ಸಂಸ್ಥೆಯಾಗಿರುತ್ತದೆ.

ಉದ್ದೇಶ

 • ಈ ಚಳುವಳಿಯು ಮಕ್ಕಳು/ಯುವಕರು, ಪೂರ್ಣ, ದೈಹಿಕ, ಬೌದ್ಧಿಕ, ಸಾಮಾಜಿಕ, ದೈವಿಕ ವಾಗಿ ಪೂರ್ಣ ಪ್ರಮಾಣದ ಉನ್ನತಿಯನ್ನು ಸಾಧಿಸುವುದು, ಅಲ್ಲದೆ ಪ್ರಾದೇಶಿಕ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳುವುದು.

ತತ್ವಗಳು

 • ಸ್ಕೌಟ್ / ಗೈಡ್ ಸಂಸ್ಥೆಯ ನಿಯಮ / ತತ್ವಗಳು ಈ ಕೆಳಕಂಡಂತೆ ಇವೆ:

ದೇವರಿಗೆ ಸಲ್ಲಿಸುವ ಕರ್ತವ್ಯ :

 • ದೈವಿಕ/ಅಧ್ಯಾತ್ಮಿಕ ತತ್ವ/ನೀತಿನಿಯಮಗಳಿಗೆ ಅದರ ನಿರ್ವಹಣೆಗೆ ಮಾಡಬೇಕಾದ ಕರ್ತವ್ಯಗಳ ಪಾಲನೆಗೆ ಬದ್ಧನಾಗಿರುವುದು.

ಇತರರಿಗೆ ಸಲ್ಲಬೇಕಾದ ಕರ್ತವ್ಯ:

 • ತನ್ನ ಪ್ರಾದೇಶಿಕ ಹಿತದ ಜೊತೆಗೆ, ದೇಶಕ್ಕೆ/ದೇಶದ ಅಭಿವೃದ್ಧಿಗೆ, ಮತ್ತು ಅಂತರರಾಷ್ಟ್ರೀಯ ಶಾಂತಿ -ಸೌಹಾರ್ದತೆ, ಸಹಬಾಳ್ವೆಗೆ, ಸಹೋದ್ಯೋಗಿಗಳೊಂದಿಗೆ ಗೌರವಯುತ ನಡತೆಗೆ, ಮತ್ತು ಜಗತ್ತಿನ ಪ್ರಾಕೃತಿಕ ಪರಿಸರಕ್ಕೆ ಹೊಂದಿಕೊಳ್ಳುವ, ಪರಸ್ಪರ ಸಹಕರಿಸುವ ಬದ್ಧತೆಯನ್ನು ಹೊಂದಿರುವುದು.

ತನ್ನ ಬಗೆಗೆ ನಡೆಸಬೇಕಾದ ಕರ್ತವ್ಯ:

 • ತನ್ನ ಪೂರ್ಣ ಬೆಳವಣಿಗೆಗೆ ಮಾಡಬೇಕಾದ ಕರ್ತವ್ಯದ ಹೊಣೆಗಾರಿಕೆ.(ಹೊಣೆಗಾರಿಕೆಯಿಂದ ನಡೆದುಕೊಳ್ಳುವುದು: ವ್ಯಾಯಾಮ ಇತ್ಯಾದಿ)

ಶಿಕ್ಷಣ ವಿಧಾನ ಮತ್ತು ಮಾರ್ಗ:[ಬದಲಾಯಿಸಿ]

 • ಸ್ಕೌಟ್ / ಗೈಡ್ ಶಿಕ್ಷಣ ವಿಧಾನವು ಸ್ವಯಂ ಶೀಕ್ಷಣದ ಮೂಲಕ ಹಂತ ಹಂತವಾಗಿ ಮುಂದುವರಿಯುತ್ತದೆ. ಅದು ಈ ಕೆಳಗಿನ ವಿಧಾನವನ್ನು ಅನುಸರಿಸುತ್ತದೆ.:
 • ಪ್ರತಿಜ್ಞೆ/ವಚನ ಸ್ವೀಕಾರ ಮತ್ತು ಸ್ಸೌಟ್ ನಿಯಮಗಳು :
 • ಕ್ರಿಯೆ ಅಥವಾ ಮಾಡುವುದರಿಂದ ಕಲಿಕೆ :
 • ದೊಡ್ಡವರ ಮೇಲ್ವಿಚಾರಣೆಯಲ್ಲಿ ಸದಸ್ಯತ್ವ ಹೊಂದಿದ ಸಣ್ಣ ಎಳೆಯರ ಗಂಪು ಕಲಿಕೆಯ ಮೇಲಕಿನ ಮೇಲಿನ ಹಂತಕ್ಕೆ ತಲುಪುವುದು.
 • ಸ್ವಂತ ಹೊಣೆಗಾರಿಕೆ ಮತ್ತು ಸ್ವಯಂ-ಮೇಲ್ವಿಚಾರಣೆಯನ್ನು ಒಪ್ಪಿಕೊಂಡು ;
 • ಸನ್ನಡತೆಯ ಮುನ್ನೆಡೆ, ಉತ್ತಮ ಸಾಮರ್ಥ್ಯ, ಸ್ವಾವಲಂಬನೆ, ಭರವಸೆಯುಳ್ಳ ವ್ಯಕ್ತಿತ್ವ, ಸಹಕಾರ ಮನೋಭಾವ-ಗುಣ ಮತ್ತು ಮುನ್ನೆಡುಸುವ ಗುಣ ಅಥವಾ ನಾಯಕತ್ವದ ಸಾವ್ಮರ್ಥ್ಯ (ಗುಣ) ; ಇದಕ್ಕಾಗಿ ಅಗತ್ಯ ಉತ್ಸಾಹದಾಯಕ (ಆಸಕ್ತಿದಾಯಕ) ಚಟುವಟಿಕೆಯ ಯೋಜನೆ ಗಳು, ಆಸಕ್ತದಾಯಕ ಕಾರ್ಯಕ್ರಮಗಳು ; ಇದರಲ್ಲಿ ಸದಸ್ಯರು ಭಾಗವಹಿಸುವ ಆಟಗಳು, ಉಪಯುಕ್ತ ಕೌಶಲಗಳು, ಸಮಾಜಕ್ಕೆ /ಜನಪರ ಹಿತವಾದ ಸೇವಾಕಾರ್ಯ,-ಇವ ಹೆಚ್ಚಾಗಿ ವಸತಿಯಹೊರಗಿನ ಪ್ರಕೃತಿಯ ಸಾಮೀಪ್ಯದ ವಾತಾವರಣದಲ್ಲಿ ನಡೆಯುವುದು.

ಸ್ಕೌಟ್/ಗೈಡ್`ಧ್ಯೇಯ[ಬದಲಾಯಿಸಿ]


;A scout/guide says and believes
 • Do your best is our Motto,
 • Be prepared is our aim,
 • Service is our watch word,
 • All three mean the same.
.
*Cubs/Bulbuls - Koshish Karo (Do your best)
 • Scouts/Guides - Taiyar (Be Prepared)
 • Rovers/Rangers - Seva (Service)
.
ಒಬ್ಬ ಸ್ಕೌಟ್` /ಗೈಡ್` ಪಾಲಿಸುವ ಧ್ಯೇಯ :
 • ನಿನ್ನ ಶಕ್ತಿ ಇದ್ದಷ್ಟು ಕರ್ತವ್ಯ ನಿರ್ವಹಿಸು ಇದು ನಮ್ಮ,ಗುರಿ,
 • ಸದಾ ಸಿದ್ಧನಾಗಿರು ಇದು ನಮ್ಮ ಧ್ಯೇಯ,
 • ಸೇವೆಯೇ ನಮ್ಮ ಚರಮ ವಾಕ್ಯ,
 • ಆದರೆ ಇವೆಲ್ಲಕ್ಕೂ ಒಂದೇ ಅರ್ಥ.
ಸ್ಕೌಟ್ ಧ್ಯೇಯ :

•ಕಬ್ಸ್` /ಬುಕ್`ಬುಲ್`ಬುಲ್` ಗಳಿಗೆ –ಕೋಶಿಶ್ ಕರೋ -ಪ್ರಯತ್ನ ಮಾಡು.. •ಸ್ಕೌಟ್ಸ್ ಮತ್ತು ಗೈಡ್ಸ್`ಗಳಿಗೆ - ತಯ್ಯಾರ್- ಸದಾ ಸಿದ್ಧನಾಗಿರು.

 • ರೋವರ್`/ರೇಂಜರ್`ಗಳಿಗೆ -ಸೇವಾ -ಸೇವೆ

ಸ್ಕೌಟ್`/ಗೈಡ್` ಶಿಕ್ಷಣ ಮತ್ತು ತರಬೇತಿ[ಬದಲಾಯಿಸಿ]

 • ಒಂದು ಸ್ಕೌಟ್` /ಗೈಡ್` ದಳ/ ಟ್ರೂಪಿನಲಿ 10 ರಿಂದ 24 / 30 ಬಾಲಕ/ಬಾಲಕಿಯರಿರಬಹುದು. ಅದನ್ನು 5 ಅಥವಾ 6/8 ರ ಚಿಕ್ಕ ಚಿಕ್ಕ ಪೆಟ್ರೋಲ್`ಗಳಾಗಿ/ಗುಂಪುಗಳಾಗಿ ವಿಂಗಡಿಸಿ ಪ್ರತಿಯೊಂದು ಉಪದಳ/ಗುಂಪಿಗೂ ಒಬ್ಬ ನಾಯಕನನ್ನು ಮಾಡಲಾಗುವುದು. ಇಡೀ ದಳಕ್ಕೆ ಒಬ್ಬ ನಾಯಕ ಮತ್ತು ಒಬ್ಬ ಉಪನಾಯಕ ಇರುತ್ತಾನೆ.
ಮೊದಲನೆಯ ಸೋಪಾನ –ಟೆಂಡರ್ ಫುಟ್ :
 • ಇದರಲ್ಲಿ ಸ್ಕೌಟ್ ನಿಯಮ ; ಪ್ರತಿಜ್ಞೆ , ರಾಷ್ಟ್ರ ಧ್ವಜದ ವಿವರ ಸ್ಕೌಟ್`ಬಾವುಟದ ಅರ್ಥ, ಅದಕೆ /ಅವಕ್ಕೆ ಗೌರವ ಕೊಡುವ ವಿಧಿ ವಿಧಾನ; ಸ್ಕೌಟ್` ಲಾಠಿಯ ಉಪಯೋಗ; ದಾರಿ ಸೂಚಕ-ಅಪಾಯ ಸೂಚಕವೇ ಮೊದಲಾದ ಸಂಕೇತಗಳು ; ದಾರಗಳಿಂದ ಜಾರದಂತೆ ಮತ್ತು ಸುಲಭವಾಗಿ ಬಿಚ್ಚಬಹುದಾದ ಕೆಲವು ಸರಳ ಗಂಟುಗಳನ್ನು ಹಾಕುವುದು, ಉದಾಹರಣೆಗೆ ಸಮಗಂಟು/ಪವಿತ್ರ ಗಂಟು, ಅಡ್ಡಗಂಟು, ಕೊಟ್ಟಿಗೆ ಗಂಟು, ಇತ್ಯಾದಿ ; ಸ್ಕೌಟ್` ಸೆಲ್ಯೂಟ್` ಕ್ರಮ ಅದರ ಅರ್ಥ; ಇವುಗಳನ್ನು ಕಲಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಟೆಂಡರ್` ಫುಟ್` ಬ್ಯಾಡ್ಜ್`ನ್ನು ವಿಧಿ-ವಿಧಾನದ ಮೂಲಕ ಸ್ಕೌಟ್`/ಗೈಡ್`ಗಳಿಗೆ ಪ್ರದಾನ ಮಾಡಲಾಗುವುದು..ಸಾಮಾನ್ಯ ಮಟ್ಟಿನ ಕವಾಯಿತು ಮತ್ತು ಆಜ್ಞೆ ಪಾಲನೆ , ವಿಶಲ್`/ಶೀಟಿಯ ಸಂಜ್ಞೆಗೆ /ಆಜ್ಞೆಗೆ ವಿಧೇಯರಾಗಿ ಅದನ್ನು ಪಾಲಿಸುವುದು ಅರಿಯಬೇಕು.
ಎರಡನೆಯ ಸೋಪಾನ -ಸೆಕೆಂಡ್`ಕ್ಲಾಸ್` ಬ್ಯಾಡ್ಜ್` :
 • ಎರಡನೆಯದರ್ಜೆಯ ತರಬೇತಿಯಲ್ಲಿ –ಆರೋಗ್ಯದ ನಿಯಮಗಳು-ಅದರ ಪಾಲನೆ; ದೇಹವನ್ನು ಸುಸ್ಥಿತಿಯಲ್ಲಡಲು ಸ್ಕೌಟ್` ವ್ಯಾಯಾಮ (ಆರು ಬಗೆ) –ಉಸಿರಾಟದ ಕ್ರಮ, ಅರೋಗ್ಯಕರ- ಕುಳಿತುಕೊಳ್ಳುವ ನಿಲ್ಲುವ, ನಡೆಯುವ ಕ್ರಮ; ನಂತರ ಪ್ರಥಮ ಚಿಕಿತ್ಸೆಯ ಆರಂಭಿಕ ಪಾಠಗಳು ಅದರ ಪ್ರಯೋಗ-ವಿಧಿ ವಿಧಾನ , ಉದಾಹರಣೆಗೆ –ಕತ್ತರಿಸಿದ ಘಾಯಕ್ಕೆ- ತರಚಿದ ಘಾಯಕ್ಕೆ, ಉಳುಕಿಗೆ,, ಸುಟ್ಟ ಘಾಯಕ್ಕೆ, ಕಣ್ಣಿನಲ್ಲಿ ಕಸ-ಧೂಳು-ಮರಳು ಇತ್ಯಾದಿ ಸೇರಿಕೊಂಡಾಗ ಮಾಡುವ ಪ್ರಥಮ ಚಿಕಿತ್ಸೆ ; ಮೂಗಿನಲ್ಲಿ ರಕ್ತ ಸೋರವಿಕೆ, ಕಡಿ ಜೇನು-ಕಣಜಗಳ ವಿóಪೂರಿತ ಕಡಿತ ಚಿಕಿತ್ಸೆ, ಅತಿ ಶಾಖ ಬಿಸಿಲಿನ ಝಳದ ಅತಿ ಸುಸ್ತಿಗೆ ಚಿಕಿತ್ಸೆ ;ಸರಳ ಬ್ಯಾಂಡೇಜ್ ಗಳನ್ನು ಮಾಡುವುದು, ತಲೆಗೆ ಘಾಯವಾದಾಗ, ಕೈ ,ಕಾಲು,ಪಾದ ಮರಿದಾಗ ಆರಂಭಿಕ ಬ್ಯಾಂಡೇಜು ಚಿಕಿತ್ಸೆ; ಇತ್ಯಾದಿ..
 • ಗಂಟುಗಳ ಮುಂದುವರಿದ ಭಾಗ – ಲಾಠಿ/ಕೋಲುಗಳಿಗೆ /ಕಂಬಗಳಿಗೆ ಚೌಕ ಸುತ್ತು-ಗಂಟು/ ಸ್ಕೇರ್`ಲ್ಯಾಷಿಂಗ್` , ಇತ್ಯಾದಿ. ಶಿಬಿರ / ಕ್ಯಾಂಪ್ ಮಾಡುವುದು ಅದಕ್ಕೆ ಅನುಕೂಲವಾಗಿ, ಕೋಲು ಕಡ್ಡಿಗಳಿಂದ ದಾರ ಉಪಯೋಗಿಸಿ ಉಪಯುಕ್ತ ಉಪಕರಣಗಳನ್ನು ತಯಾರಿಸಿಕೊಳ್ಳುವುದು.ಅದಕ್ಕಾಗಿ ಕೋಲು ಜೋಡಿಸುವ ಕತ್ತರಿ ಸುತ್ತು-ಗಂಟು. ಮರದ ತುಂಡಿಗೆ ಸುತ್ತುವ ಸರಪಳಿ ಗಂಟು; ಮೊದಲಾದವು.

ಬೆಂಕಿ ಹಚ್ಚುವ ತರಬೇತಿ –ಇರುವ ಕಸ ಕಡ್ಡಿಗಳ ಸಹಾಯದಿಂದ ಬೆಂಕಿ ಆರದಂತೆ ಪಿರಮಿಡ್ ಆಕಾರದಲ್ಲಿ ಜೋಡಿಸಿ ಸಾಮಾನ್ಯವಾಗಿ ಒಂಧೇ ಬೆಂಕಿ ಕಡ್ಡಿ ಉಪಯೋಗಿಸಿ ಬೆಂಕಿಮಾಡುವ ತರಬೇತಿ.

 • ಅಡಿಗೆ ಮಾಡುವ ಶಿಕ್ಷಣ: .ಒಬ್ಬರಿಗೆ ಅಥವಾ ಇಬ್ಬರಿಗೆ ಅಥವಾ ಕ್ಯಾಮಪ್`ಮಾಡಿದ ಆರು ಎಂಟು ಬಾಲಕರಿಗೆ , ಉಳಿದು ವ್ಯರ್ಥವಾಗದಂತೆ ,ಎರಡು ಬಗೆಯ ಮೇಲೋಗರ /ರಿಸೈಪ್` ಮತ್ತು ಅನ್ನ/ಚಪಾತಿ ಮಾಡುವ ಕಲೆ

ದಿಕ್ಕುಗಳನ್ನು ಗುರುತಿಸುವ ಕಂಡುಕೊಳ್ಳುವ ಕ್ರಮ. ದಿಕ್ಸೂಚಿಯ ಉಪಯೋಗ, ಸೂರ್ಯನ ಚಲನೆಯ ಅರಿವ, ರಾತ್ರಿ ಮುಖ್ಯ ನಕ್ಷತ್ರಗಳ ಪರಿಚಯ ಮಾಡಿಕೊಂಡು ದಿಕ್ಕನ್ನು ತಿಳಿಯುವುದು.

 • ಸಿಗ್ನಲಿಂಗ್`/ ಸಂಕೇತ ಭಾಷೆಯ ಅಭ್ಯಾಸ ; ದೋರದಲ್ಲಿರವವರಿಗೆ ಬಾವುಟ ಮೂಲಕ/ಬೆಂಕಿ ಮೂಲಕ/ ಸೀಠಿಯ (ವಿಶಲ್` ಮೋರ್ಸ್ ಕೋಡ್`) ಮೂಲಕ ಸಂದೇಶ ರವಾನಿಸುವುದು. ವಿಶೇಷ ಸಂಧರ್ಭಗಳಲ್ಲಿ –ಅಪಾಯ ಇತ್ಯಾದಿ ಸಂಧರ್ಭಗಳಲ್ಲಿ ಉಪಯೋಗಿಸುವ ಇಶಿಷ್ಟ ಸಂಕೇತ ಸಂಜ್ಞೆ/ ವಿಷಲ್`ಗಳು.

ಸ್ಕೌಟ್`ನ ಮೂರು ದೊಣ್ಣೆಗಳನ್ನು ಸೇರಿಸಿ ಕಟ್ಟಿ ಎ12 ಅಇಎತ್ತರದ ಧ್ವಜಸ್ಥಂಬ ಮಾಡಿ ರಾಷ್ಟ್ರದ/ಸ್ಕೌಟಿನ ಬಾವಟವನ್ನು ಸರಿಯಾದ ಕ್ರಮದಲ್ಲಿ ಹಾರಿಸುವುದನ್ನು ಕಲಿಯಬೇಕು.

 • ಕ್ಯಾಂಪ್`/ಶಿಬಿರ ಹೂಡಲು ಮತ್ತು ಅದನ್ನು ಮುಕ್ತಾಯ ಮಾರುವ ವಿಧಾನ ಅರಿತಿರಬೇಕು. ಶಿಬಿರದ ವೇಳೆ ಪರಿಸರಕ್ಕೆ ಸ್ವಲ್ಪವೂ ಹಾನಿಯಾಗದ ರೀತಿ ಶಿಬಿರ ಮಾಡಿ ಅದನ್ನು ಮುಕ್ತಾಯಗೊಳಿಸುವ ಕ್ರಮ ಅರಿತಿರಬೇಕು.

ತನ್ನ ವೈಯುಕ್ತಿಕ, ದೈಹಿಕ ವಿವರ ತಿಳಿದಿರಬೇಕು ; ಡೈರಿ/ದಿನಚರಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೆಕು ಹೀಗೆ ಅನೇಕ ಬಗೆಯ ಸ್ವಾವಲಂಬನೆಯ / ಪರರ ಸಹಾಯಕ್ಕಾಗುವ ಶಿಕ್ಷಣವನ್ನು ಎರಡನೆಯ ಸೋಪಾನದಲ್ಲಿ ಸ್ಕೌಟ್`/ಗೈಡ್` ಪಡೆಯುತ್ತಾನೆ/ಳೆ..

ಮೂರನೇ ಸೋಪಾನ ಅಥವಾ ಮೊದಲ ದರ್ಜೆ
 • ಮೊದಲನೇ ದರ್ಜೆಯ ಸ್ಕೌಟ್ ಆಗಲು ಈಜು ಕಲಿಯಬೇಕು. ತನ್ನ ಇತರರ ರಕ್ಷಣೆಯ ಉಪಾಯಗಳನ್ನು ತಿಳಿದಿರಬೇಕು. ಅಪಾಯದ / ತೊಂದರೆಯ ನೀರುತಾಣಗಳನ್ನು ಅರಿತು ಎಚ್ಚರಿಕೆಯ ವಿಧಿಗಳನ್ನು ಅರಿತಿರಬೇಕು.
 • ಪಯೋನೀರಿಂಗ್` / ಸಾಹಸ ಯಾತ್ರೆ / ಶೋಧನಾಯಾತ್ರೆ ಗಳನ್ನು ಹಮ್ಮಿಕೊಂಡು ಅನುಭವ ಪಡೆಯಬೇಕು. ಇದಕ್ಕೆ ಬೇಕಾದ ಮುಂದುವರಿದ ಅಗ್ನಿಶಾಮಕದಳದವರು ತಿಳಿದಿರುವ, ಹಗ್ಗ ಗಂಟುಗಳ ಜೋಡಣೆಗಳ ಕಲಿಕೆ ಅರಿವು ಅಗತ್ಯ.. ಮೂರು ರಾತ್ರಿಗಳ ಕ್ಯಾಂಪ್` ಮಾಡಬೇಕು. ಕ್ಯಾಮಪ ಮುಕ್ತಾಯವಾದ ಮೇಲೆ ಅಲ್ಲಿ ಕ್ಯಾಂಪಿನ ಕುರುಹುಗಳು ಅವಶೇಶಗಳು ಇಲ್ಲದಂತೆ ಮಾಡುವ ತರಬೇತಿ ಪಡೆಯಬೇಕು.

ಸಂಕೇತ ರವಾನೆ-

 • ಮೋಸ್ರ್` ಕೋಡ್`ಗಳನ್ನು ವೇಗ ವಾಗಿಬಳಸಲು ಅರಿಯಬೇಕು.
 • ಕಟ್ಟಡದ, ಮರದ, ಎತ್ತರಗಳನ್ನು ದೊಣ್ಣೆ ಬಳಸಿ ಕಂಡು ಹಿಡಿಯುವ, ಹೊಳೆ ನದಿಗಳ ಅಗಲಗಳನ್ನು ತಿಳಿಯುವ ಗಣಿತ ಅರಿಯಬೇಕು.
 • ಹೆಚ್ಚಿನ ಪ್ರಥಮ ಚಿಕಿತ್ಸೆ./ಫಸ್ಟ್` ಏಡ್` ಅಭ್ಯಾಸ ಮಾಡಬೇಕು. ಬೆಂಕಿ ನೀರು ಅಪಘಾತಗಳಾದಾಗ ಅಲ್ಲಿಂದ ತೊಂದರೆಗಳಿಗೆ ಒಳಗಾದವರನ್ನು ಹೊತ್ತು ಸಾಗಿಸುವ , ಅಗ್ನಿ ಶಾಮಕದಳದವರ ತರಬೇತಿಯನ್ನೂ ಪಡೆಯಬೇಕು.
 • ನೀರಿನಲ್ಲಿ ಮುಳಗಿ ಮೇಲೆ ಎತ್ತಿದಾಗ, ಅವರಿಗೆ ಚಿಕಿತ್ಸೆಮಾಡುವುದು, ಬಿಸಿಲಿನ ಝಳಕ್ಕೆ / ಗುಂಪಿನ ಒತ್ತಡದಲ್ಲಿ ಸಿಲುಕಿ ಎಚ್ಚರತಪ್ಪಿದವರಿಗೆ, ವಿದ್ಯುತ್`ಶಾಕ್ ಆದವರಿಗೆ ಹೇಗೆ ಚಿಕಿತ್ಸೆ ಮಾಡಲು ತರಬೇತಿ ಪಡೆದಿರಬೇಕು.

ಪರಿಸರಕ್ಕೆ ಹಾನಿಯಾಗದಂತೆ ಆರೋಗ್ಯಕರ ಅಡಿಗೆ ಮಾಡುವುದು , ಹೊರಾಂಗಣದಲ್ಲಿ ಅಪಾಯವಾಗದಂತೆ, ಉರಿ ಕೆಡದಂತೆ ಬೆಂಕಿಮಾಡುವುದರ ತರಬೇತಿ ಹೊಂದಿರತಕ್ಕದ್ದು, .

 • ಆಕಾಶದಲ್ಲಿ ಓರಿಯನ್` ನಕ್ಷತ್ರ ಪುಂಜ, ಧೃವ ನಕ್ಷತ್ರಗಳನ್ನು ಗುರುತಿಸುವ –ಅದರಿಂದ ದಿಕ್ಕುತಿಳಿಯವುದನ್ನು, ಅದರಲ್ಲಿ ನದಿ,ದಾರಿ ಬೆಟ್ಟ, ಕಾಡು, ಕರೆ , ಸರೋವರ ಮೊದಲಾದವುಗಳನ್ನು ಸಂಕೇತ ಮೂಲಕ ಗುರುತಿಸುವುದನ್ನು ಕಲಿಯಬೇಕು.
 • ದಿಕ್ಕು ತಿಳಿದು ತಾನು ನೆಡೆದಾಡಿದ ಕ್ಯಾಂಪ್` ಮಾಡಿದ ಸ್ಥಳದ ಮ್ಯಾಪ್`/ನಕ್ಷೆ ತಯಾರಸಲು ಅರಿತಿರಬೇಕು.

ಹೀಗೆ ಪ್ರತಿ ಕೌಶಲ್ಯವನ್ನೂ ಪಡೆದಿರುವುದಕ್ಕೂ ಒದೊಂದು ಪ್ರತ್ಯೇಕ ಬ್ಯಾಡ್ಜ್` ಸಂಪಾದನೆ ಇದೆ.

 • ಒಬ್ಬ ಭಾರತೀಯ ಸ್ಕೌಟ್ / ಗೈಡ್` ಪಡೆಯುವ ಹೆಚ್ಚಿನ ಪ್ರಶಸ್ತಿ ಎಂದರೆ ಅದು ಪ್ರಸಿಡೆಂಟ್` ಬ್ಯಾಡ್ಜ್`. ಭಾರತದ ರಾಷ್ಟ್ರಪತಿಗಳಿಂದ ಪಡೆಯುವ ಪದಕ / ಬ್ಯಾಡ್ಜ್`.

ಸ್ಕೌಟ್ ನಿಯಮ ಮತ್ತು ಪ್ರತಿಜ್ಞೆ/ವಚನ:[ಬದಲಾಯಿಸಿ]

WikiProject Scouting Scout sign sketch.svgthumb
WikiProject Scouting Scout sign sketch.svgthumb

ಪ್ರತಿಜ್ಞೆ ಸ್ವೀಕರಿಸುವಾಗ- ಮೂರು ಬೆರಳು ತೋರಿಸುತ್ತಿರುವುದು.->

(LAW AND PROMISE)

ಪ್ರತಿಜ್ಞೆ/ವಚನ (PROMISE)

 • ನಾನು ನನ್ನ ಶಕ್ತಿ ಇರುವಷ್ಟು ಮಟ್ಟಿಗೆ,
 • ದೇವರಿಗೂ, ನನ್ನ ದೇಶಕ್ಕೂ ನಾನು ಸಲ್ಲಿಸಬೇಕಾದ ಕರ್ತವ್ಯ ಮಾಡಲೂ
 • ಮತ್ತು ಇತರರಿಗೆ ಸಹಾಯ ಮಾಡಲು
 • ಮತ್ತು ಸ್ಕೌಟ್ ನಿಯಮಗಳಿಗೆ ವಿಧೇಯನಾಗಿರಲೂ
 • ನಾನು ನನ್ನ ಆತ್ಮ ಸಾಕ್ಷಿಯಾಗಿ ವಚನ ಕೊಡುತ್ತೇನೆ ( ಸ್ವಲ್ಪ ಇಂಗ್ಲಿಷ್ ಬಲ್ಲ ಮಕ್ಕಳಿಂದ , ಇದನ್ನು ಸುಲಭವಾಗಿ ಇಂಗ್ಲಷ್ ಭಾಷೆಯಲ್ಲಿಯೇ ಪ್ರಾಮಿಸ್ ತೆಗೆದುಕೊಳ್ಲುವುದು ರೂಢಿ).
PROMISE
 • Promise as applicable to Scout/Guides.
"On my honour I promise that I will do my best -
to do my duty to God and my country,
to help other people and
to obey the Scout/Guide Law.
ಸ್ಸೌಟ್/ ಗೈಡ್ ನಿಯಮಗಳು
(LAW)
 • ಸ್ಸೌಟ್/ ಗೈಡ್, ನಂಬಿಕೆಗೆ ಅರ್ಹರಾಗಿರುವುದು.
 • ಸ್ಸೌಟ್/ ಗೈಡ್, ಪ್ರಾಮಾಣಿಕರಾಗಿರುವುದು,
 • ಸ್ಸೌಟ್/ ಗೈಡ್, ಎಲ್ಲರಿಗೂ ಸ್ನೇಹಪರರಾಗಿರುವುದು ಮತ್ತು ಇತರೆ ಸ್ಸೌಟ್ /ಗೈಡ್ ಗಳಿಗೆ ಸೋದರ / ಸೋದರಿ ಭಾವನೆಯಿಂದ ಇರುವುದು.
 • ಸ್ಸೌಟ್/ ಗೈಡ್ ಪ್ರಾಣಿಗಳಿಗೆ ಸ್ನೇಹಿತ ಮತ್ತು ಪ್ರಕೃತಿಯ ಪ್ರೇಮಿ,
 • ಸ್ಸೌಟ್/ ಗೈಡ್ ಶಿಸ್ತು ಪಾಲಿಸುವನು ಮತ್ತು ದೇಶದ /ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವನು.,
 • ಸ್ಸೌಟ್/ ಗೈಡ್ ವಿನಯ ಶೀಲ,
 • ಸ್ಸೌಟ್/ ಗೈಡ್ ಮಿತವ್ಯಯಿ,
 • ಸ್ಸೌಟ್/ ಗೈಡ್ ಕಾಯಾ, ಮನಸಾ ಪರಿಶುದ್ಧನು

ನಿಯಮ- ಇಂಗ್ಲಿಷ್ ಪಾಠ[ಬದಲಾಯಿಸಿ]

The Law.
The Law for the Scout and Guide is:
A Scout /Guide is trustworthy.
A Scout /Guide is loyal.
A Scout / Guide is Friend to all and brother/Sister to every other Scout/Guide.
A Scout / Guide is courteous.
A Scout / Guide is friend to animals and loves nature.
A Scout / Guide is disciplined and helps protect public property.
A Scout / Guide is courageous.
A Scout / Guide is thrifty.
A Scout / Guide is pure in thought, word and deed.
 • OR
 • Trusty, Loyal, and helpful,
 • Brotherly, courteous , Kind,
 • Obedient,smiling,trifty
 • Pure in body and mind

ಸ್ಕೌಟ್` /ಗೈಡ್ ಗುರಿ[ಬದಲಾಯಿಸಿ]

Cub Scouts ಕಬ್ ಸ್ಕೌಟ್
ಒಬ್ಬ ಸ್ಕೌಟ್` /ಗೈಡ್` ಪಾಲಿಸುವ ಧ್ಯೇಯ/ ಗುರಿ
 • ನಿನ್ನ ಶಕ್ತಿ ಇದ್ದಷ್ಟು ಕರ್ತವ್ಯ ನಿರ್ವಹಿಸು ಇದು ನಮ್ಮ,ಗುರಿ,
 • ಸದಾ ಸಿದ್ಧನಾಗಿರು ಇದು ನಮ್ಮ ಧ್ಯೇಯ,
 • ಸೇವೆಯೇ ನಮ್ಮ ಚರಮ ವಾಕ್ಯ,
 • ಆದರೆ ಇವೆಲ್ಲಕ್ಕೂ ಒಂದೇ ಅರ್ಥ.
ಇಂಗ್ಲಿಸ್ ವಾಚನ
A scout/guide says and believes
 • Do your best is our Motto,
 • Be prepared is our aim,
 • Service is our watch word,
 • All three mean the same

ಕಬ್ ನಿಯಮ ಮತು ಪ್ರತಿಜ್ಞೆ/ವಚನ[ಬದಲಾಯಿಸಿ]

ಕಬ್ (ಹುಡುಗರು 5 ರಿಂದ 10ವರ್ಷದ ಒಳಗಿನವರಿಗೆ)

ಮತ್ತು ಬುಲ್ಬುಲ್ (ಹುಡುಗಿಯರು 6 ರಿಂದ 10ವರ್ಷದ ಒಳಗಿನವರಿಗೆ) :

ವಚನ/ಪ್ರತಿಜ್ಞೆ :

 • ನಾನು ನನ್ನ ಶಕ್ತಿ ಇರುವಷ್ಟು ಮಟ್ಟಿಗೆ, ದೇವರಿಗೂ, ನನ್ನ ದೇಶಕ್ಕೂ ನಾನು ಸಲ್ಲಿಸಬೇಕಾದ ಕರ್ತವ್ಯ ಮಾಡಲೂ, ದಿನಕ್ಕೊಂದು ಸಹಾಯ ಮಾಡಲು ಮತ್ತು ಕಬ್ ಮತ್ತು ಬುಲ್ಬುಲ್ ನಿಯಮಗಳಿಗೆ ವಿಧೇಯನಾಗಿರಲೂ ನಾನು ನನ್ನ ಆತ್ಮ ಸಾಕ್ಷಿಯಾಗಿ ವಚನ ಕೊಡುತ್ತೇನೆ.

ಕಬ್ ಮತ್ತು ಬುಲ್ಬುಲ್ ನಿಯಮ :

 • ಹಿರಿಯಗೆ ಗೌರವ ಕೊಡುವುದು
 • ಯಾವಾಗಲೂ ಸಭ್ಯತೆಯಿಂದ/ಮರ್ಯಾದೆಯಿಂದ ನಡೆದುಕೊಳ್ಳುವುದು.

ರೋವರ‍್ಸ್ -ರೇಂಜರ್ಸ್

 • ರೋವರ‍್ಸ್ (ಗಂಡು ಮಕ್ಕಳು/ಯುವಕರು)-ಹದಿನಾರು 16 ರಿಂದ 25 ವರ್ಷ;
 • ಮತ್ತು ರೇಂಜರ್ಸ್ (ಹೆಂಣು ಮಕ್ಕಳು/ಯುವತಿಯರು)- 18ರಿಂದ 25 ವರ್ಷ;
 • ಇವರಿಗೂ ಸ್ಸೌಟ್/ ಗೈಡ್ ನಿಯಮಗಳು ಮತ್ತು ಪ್ರತಿಜ್ಞೆ/ವಚನವು ಸಮಾನವಾಗಿರುತ್ತವೆ.

<>

 • ದೇವರಿಗೆ ಬದಲಾಗಿ ಧರ್ಮ ಎಂದು ಅಗತ್ಯವಾದಲ್ಲಿ ಸೇರಿಸಿಕೊಳ್ಳಬಹುದು.

-

 • ಕೆಳಗೆ ಸ್ಕೌಟ್/ಗೈಡ್ ಪ್ರಾರ್ಥನೆಯನ್ನು ಕೊಟ್ಟಿದೆ ಅದರಲ್ಲಿ ಸಾಮಾನ್ಯವಾಗಿ ಒಂದು ಮತ್ತು ಮೂರನೇ ಪದ್ಯಗಳನ್ನು ಹೇಳಿ , ಪುನಹ ಒಂದನೇ ಪದ್ಯ ಹೇಳಿ ಮುಕ್ತಾಯ ಮಾಡುವುದು ರೂಢಿಯಲ್ಲಿದೆ.

ಸ್ಸೌಟ್/ ಗೈಡ್ ಪ್ರಾರ್ಥನೆ[ಬದಲಾಯಿಸಿ]

*ಸೌಟ್ಕ್-ಗೈಡ್ ಪ್ರಾರ್ಥನೆ (ಹಿಂದಿ ಭಾಷೆಯಲ್ಲಿದೆ):
ದಯಾ ಕರ್ ದಾನ್ ಭಕ್ತಿ ಕಾ,
ಹಮೇ ಪರಮಾತುಮಾ ದೇನ
ದಯಾಕರನಾ ಹಮಾರಿ
ಆತ್ಮಾ ಮೇ ಶುದ್ಧತಾ ದೇನಾ.
ಹಮಾರೀ ಧ್ಯಾನ ಮೇ ಆವೋ ,
ಪ್ರಭು ಆಂಖೋ ಮೇ ಬಸ್ ಜಾವೋ
ಆಂಧೇರಿ ದಿಲ್ ಮೇ ಆಕರ ಕೇ
ಪರಮ ಜ್ಯೋತಿ ಜಗಾ ದೇನಾ
ಬಹಾದೋ ಪ್ರೇಮಕೀ ಗಂಗಾ
ದಿಲೋಮೇ ಪ್ರೇಮ್ ಕಾ ಸಾಗರ್
ಹಮೇ ಆಪಸ್ ಮೆ ಮಿಲ್-ಜುಲ್ಕರ್
ಪ್ರಭೂ ರೆಹನಾ ಸಿಖಾ ದೇನಾ
ಹಮಾರಾ ಕರ್ಮ ಹೊ ಸೇವಾ
ಹಮಾರಾ ಧರ್ಮ ಹೊ ಸೇವಾ
ಸದಾಈಮಾನ್ ಹೊ ಸೇವಾ
ವೊ ಸೇವಕ್ ಚರ್ ಬನಾ ದೇನಾ
ವತನ್ ಕೇ ವಾಸ್ತೇ ಜೀನಾ
ವತನ್ ಕೇ ವಾಸ್ತೇ ಮರನಾ
ವತನ್ ಪರ್ ಜಾನ್ ಫಿದಾ ಕರನಾ
ಪ್ರಭು ಹಮ್ಕೊ ಸಿಖಾ ದೇನಾ
ದಯಾ ಕರ್ ದಾನ್ ಭಕ್ತಿ ಕಾ,
ಹಮೇ ಪರಮಾತುಮಾ ದೇನ
ದಯಾಕರನಾ ಹಮಾರಿ
ಆತ್ಮಾ ಮೇ ಶುದ್ಧತಾ ದೇನಾ.
.
ಭಾರತದ ರಾಷ್ಟ್ರಧ್ವಜ -ಮೇಲೆ ಕೇಸರಿ, ಮಧ್ಯ ಬಿಳಿ, ಕೆಳಗೆ ಹಸಿರು. ಸಂಕೇತ -ತ್ಯಾಗ, ಪರಿಶುದ್ಧತೆ-ಸತ್ಯ, ಸಂಮೃದ್ಧಿ
;ಸ್ಕೌಟ್ -ಗೈಡ್ಸ್ ಝಂಡಾ (ಬಾವುಟ) ಗೀತೆ
 • ಭಾರತೀಯ ಸ್ಕೌಟ್ ಗೈಡ್ ಝಂಡಾ
 • ಊಂಛಾ ಸದಾ ರಹೇಗಾ ,
 • ಊಂಛಾ ಸದಾ ರಹೇಗಾ ಝಂಡಾ - ಊಂಛಾ ಸದಾ ರಹೇಗಾ.
 • ನೀಲಾ ರಂಗ್ ಗಗನಸಾ ವಿಸ್ತೃ ತ್
 • ಭ್ರಾತೃ ಭಾವ ಪೆಹಲಾತ,
 • ತ್ರಿದಲ ಕಮಲನಿತ್ ತೀನ್ ಪ್ರತಿಜ್ಞೋಂಕಿ
 • ಯಾದ್ ದಿಲಾತಾ.
 • ಔರ್ ಚಕ್ರ್ ಕೆಹತಾ ಹೈ ಪ್ರತಿಫಲ್
 • ಆಗೇ ಕದಂ ಬಡೇಗಾ
 • ಊಂಛಾ ಸದಾ ರಹೇಗಾ ಝಂಡಾ - ಊಂಛಾ ಸದಾ ರಹೇಗಾ
.
;ಸ್ಕೌಟ್ /ಗೈಡ್ ನ-ಭಾರತ ದೇಶದ ಝಂಡಾ ಗೀತೆ:
 • ಹಿಂದೂ ದೇಶಕ ಪ್ಯಾರಾ ಝಂಡಾ
 • ಊಂಛಾ ಸದಾ ರಹೇಗಾ ,
 • ಊಂಛಾ ಸದಾ ರಹೇಗಾ (ಝಂಡಾ)
 • ಊಂಛಾ ಸದಾ ರಹೇಗಾ S- S- S-,
 • ಕೇಸರಿಯಾ ಬಲ್ ಭರನೇವಾಲಾ
 • ಸಾದಾ ಹೈ ಸಚ್ಚಾಯೀ S- S- S-
 • ಹರಾ ರಂಗು ಹೈ ಹರೀ ಹಮಾರಾ ,
 • ಧರತೀ ಕೀ ಅಂಗಡಾಯೀ,
 • ಔರ್ ಚಕ್ರ ಕಹೆತಾ ಹೈ ಹಮಾರಾ -
 • ಕದಂ ಕಭೀ ನS ರುಖೇಗಾ--
 • ಹಿಂದೂ ದೇಶಕ ಪ್ಯಾರಾ ಝಂಡಾ
 • ಊಂಛಾ ಸದಾ ರಹೇಗಾ ,
 • ಊಂಛಾ ಸದಾ ರಹೇಗಾ S- S- S-.

[೧]

.ಚಟುವಟಿಕೆಗಳು[ಬದಲಾಯಿಸಿ]

 • ಕಾರ್ಯಕ್ರಮಗಳು ಪ್ರಾರ್ಥನೆಯೊಂದಿಗೆ ಆರಂಭವಾಗುತ್ತವೆ.
ಒಂದು ಕ್ಯಾಂಪ್`ನ ಮಾದರಿ ವೇಳಾಪಟ್ಟಿ
 • ವ್ಯಾಯಾಮ ಬೆಳಿಗ್ಗೆ 6.30.
 • ಕಿಟ್ (ಹಾಸಿಗೆ ಬಟ್ಟೆ ) ಪರಿಶೀನೆ 7.30
 • ಬಾವಟ /ಧ್ವಜ ವಂದನೆ 8.00
 • ಬೆಳಗಿನ ತಿಂಡಿ -8.30
 • ಬೆಳಗಿನ ಶಿಕ್ಷಣ ತರಗತಿಗಳು 9.00-11.30
 • ಸ್ನಾನ ಊಟ ಇತ್ಯಾದಿ 11.30ಯಿಂದ 14.30 ಮಧ್ಯಾಹ್ನ.
 • ಅಪರಾಹ್ನ ಶಿಕ್ಷಣ ತರಗತಿಗಳು -14.30 -16.00
 • ಟೀ - 16.30
 • ಆಟ ಮತ್ತು ಪಾಠ 17.00 -18.30
 • ವಿಶ್ರಾಂತಿ;
 • ಕ್ಯಾಂಪ್ ಪೈರಿಗೆ ಸಿದ್ಧತೆ
 • ರಾತ್ರಿ ಊಟ 20.00-20.45
 • ಕ್ಯಾಂಪ್` ಪೈರ್`.
 • ದೀಪ ಆರಿಸುವಿಕೆ 22.30
.
 • ಸೌಟ್ಕ್-ಗೈಡ್:ಬೆಳಗಿನ ಪ್ರಾರ್ಥನೆ :
1.ಉದಾ:
ಆದಿತ್ಯಸ್ಯ ನಮಸ್ಕಾರಾನ್
ಯೇ ಕುರ್ವಂತಿ ದಿನೇ ದಿನೇ,
ಜನ್ಮಾಂತರ ಸಹಸ್ರೇಷು
ದಾರಿದ್ರ್ಯಂ ನೋಪಜಾಯತೇ,
ನಮೋ ಧರ್ಮ ಸಾಧನಾಯ,
ನಮಸ್ತೇ ಕೃತ ಸಾಕ್ಷಿಣೇ (ನೇ)
ನಮಃ ಪ್ರತ್ಯಕ್ಷ ದೇವಾಯ ,
ಆದಿತ್ಯಾಯ ನಮೋನಮಃ
2.ಓಂ ಸಹನಾ ವವತು,
ಸಹನೌ ಭುನಕ್ತು
ಸಹವೀರ್ಯಂ ಕರವಾವ ಹೈ
ತೇಜಸ್ವಿನಾವಧೀತಮಸ್ತು
ಮಾವಿದ್ವಿಷಾವ ಹೈ
ಓಂ ಶಾಂತಿಃ ಶಾಂತಿಃ ಶಾಂತಿಃ//

ಸ್ಕೌಟ್`/ಗೈಡ್` ತರಬೇತಿಯ ಕೆಲವು ಕ್ರಮ :[ಬದಲಾಯಿಸಿ]

 • ಸಾಮಾನ್ಯವಾಗಿ ಸ್ಕೌಟ್`/ಗೈಡ್ ಪಠ್ಯ ವಿಷಯಗಳನ್ನು ಆಟ ಮತ್ತು ಹಾಡು, ಘರ್ಜನೆ, ಘೋಷಣೆ ಇವುಗಳನ್ನು ಜೊತೆಗೂಡಿಸಿಕೊಂಡು ಕಲಿಸಲಾಗುವುದು. ಸ್ಕೌಟ್`/ಗೈಡ್ ಗಳು ಒಂದು ಲಾಠಿ (ದೊಣ್ಣೆ) ಹಗ್ಗ, ಸ್ಕೌಟ್` ಚಾಕು ಇವಗಳನ್ನು ಇಟ್ಟುಕೊಂಡಿರಲು ಸೂಚಿಸಲಾಗುತ್ತದೆ. ಆರು-ಏಳು ಜನರಿರುವ ಸಣ್ಣ ಸಣ್ಣ ಪೆಟ್ರೋಲ್ (ಉಪದಳ- ಗುಂಪು) ಒಟ್ಟಾಗಿದ್ದು ಪರಸ್ಪರ ಸಹಕರಿಸಿ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ.
 • ಒಟ್ಟಾಗಿ ಕೂಗುವ ಘೋಷಣೆ ಅಥವಾ ಘರ್ಜನೆಗಳು ಚಿಕ್ಕದಾಗಿದ್ದು ಖುಶಿ ಕೊಡುವಂತಿರುತ್ತವೆ. ಆದರೆ ಅವು ಯಾವುದೇ ಅರ್ಥಕೊಡುವಂತಿರಬೇಕಾಗಿಲ್ಲ.
 • ಉದಾಹರಣೆಗೆ : ಉಢಮಲಪೇಠ – ಢಮಾಲಪೇಠ – ಮಾಲಪೇಠ-ಲಪೇಠ- ಪೇಠ- ಠ!!
 • ಊಟ ಹೇಗಿತ್ತು ? (ಸ್ಕೌ.ಮಾ) : (ಮಕ್ಕಳು->) ಚೆನ್ನಾಗಿತ್ತು (ಏರುದನಿಯಲ್ಲಿ) :ಚೆನ್ನಾಗಿತ್ತು (ಸ್ವಲ್ಪ ತಗ್ಗಿದ ದನಿಯಲ್ಲಿ) ಹಾಗೆಯೇ ತಗ್ಗಿಸಿ ಹೇಳುತ್ತಾ , ಕೊನೆಯಲ್ಲಿ ಎತ್ತರಿಸಿದದನಿಯಲ್ಲಿ ಹೇಳಿ- ನಿಲ್ಲಿಸುವುದು.
 • ನಿಸರ್ಗದ ಮಧ್ಯದಲ್ಲಿ ಕ್ಯಾಂಪ್` ಮಾಡಿದಾಗ ದಿನವಿಡಿ ಅನೇಕ ಬಗೆಯ ಆಯಾ ಸೋಪಾನಕ್ಕೆ (ಕ್ಲಾಸ್) ತಕ್ಕಂತೆ ತರಗತಿಗಳು ಪೂರ್ವಯೋಜಿಒತವಾಗಿರುಇವಂತೆ ನಡೆಯುತ್ತವೆ. ಹಾಗೆ ಪೂರ್ಣ ಸಿದ್ಧತೆಯೊಂದಿಗೆ ಕ್ಯಾಂಪಮಾಡಬೇಕು. ಅದರಲ್ಲಿ ಸಂಜೆ ಊಟವಾದ ನಂತರ ಕ್ಯಾಂಪ್`-ಪೈರ್` ಕಾರ್ಯಕ್ರಮವಿರುತ್ತದೆ . ಅದರಲ್ಲಿ ಸ್ಕೌಟ್`/ಗೈಡ್ ಗಳು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಿರುತ್ತದೆ. ಪಿರಮಿಡ್ ರೀತಿಯಲ್ಲಿ ಸೌದೆ ಜೋಡಿಸಿ ಬೆಂಕಿಹಚ್ಚಿ ಅದರ ಸುತ್ತಲೂ ಸ್ವಲ್ಪ ದೂರದಲ್ಲಿ ಕುಳಿತುಕೊಳುವ್ಳರು.ಆಬೆಂಕಿಯ ಎದುರಿನಲ್ಲಿ ಅಥವಾ ಅದರ ಸುತ್ತಲೂ ಸುತ್ತುತ್ತ, ಹಾಡು , ನೃತ್ಯ, ಜಾನಪದ ನೃತ್ಯ-ಕುಣಿತ , ಏಕ ಪಾತ್ರಾಭಿನಯ, ಅಣಕು ಪ್ರದರ್ಶನಗಳು- ಉದಾಹರಣೆಗೆ ಒಬ್ಬನಿಗೆ ಅಪಘಾತ ವಾಗಿದೆ ಎಂದು ಭಾವಿಸಿ ಅವನಿಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರಲ್ಲಿಗೆ ಸಾಗಿಸುವ , ಶಿಕ್ಷಣ-ಪ್ರದ ಅಣಕು ಪ್ರದರ್ಶನಗಳು. ಏಕ ಪಾತ್ರಾಭಿನಯಗಳು; ಚಿಕ್ಕ ಐದಾರು ನಿಮಿಷಗಳ ನಾಟಕಗಳು ನೆಡೆಯುವುವು. ಆ ದಿನ ಅಲ್ಲಿ ಉಳಿದು ಬೆಳಿಗ್ಗೆ ಆ ಪ್ರದೇಶವನ್ನು ಶುಚಿಮಾಡಿ ಅನಗತ್ಯ ವಸ್ತುಗಳನ್ನು ಗುಂಡಿತೋಡಿ ಹುಗಿದು , ಅಥವಾ ಸುಟ್ಟು ಶೇಷ ಉಳಿಯದಂತೆ ಮಾಡಿ ಕ್ಯಾಂಪ್` ಕೊನೆಗೊಳಿಸಲಾಗುವುದು. ಬೆಳಿಗ್ಗೆ ಮುಂಚೆ ಎದ್ದು ವ್ಯಾಯಾಮ ಹಾಸಿಗೆ ಬಟ್ಟೆಗಳನ್ನು ಜೋಡಿಸಿಟ್ಟಿರುವ ಬಗೆಯ ಪರೀಕ್ಷೆ ; ಧ್ವಜ ಕಟ್ಟುವುದು-ಧ್ವಜವಂದನೆ ಮೊದಲಾದವು ಇರುತ್ತವೆ.

ಹೈಕ್` : ಲಘು-ಪ್ರವಾಸ[ಬದಲಾಯಿಸಿ]

 • ಇದಲ್ಲದೆ ಬೆಳಿಗ್ಗೆ ಹೊರಟು ಸಂಜೆ ವಾಪಾಸು ಬರುವ ಲಘು ಪ್ರವಾಸದ ಕಾರ್ಯಕ್ರಮವೂ ಇರುವುದು. ಆಗಲೂ ಪೂರ್ವಯೋಜನೆ ಹಾಕಿಕೊಂಡು ವೇಗ ನಡಿಗೆ ಕ್ರಮ, ಆಯಾಸವಾಗದಂತೆ ಓಡುವ ಕ್ರಮ, ಅದರಲ್ಲಿ ಎರಡು ತಂಡ ಮಾಡಿಕೊಂಡು, ಒಂದು ತಂಡದವರು ಮತ್ತೊಂದು ತಂಡವನ್ನು ಹುಡುಕುವ ಯೋಜನೆ , ಅದಕ್ಕೆ ಸಂಕೇತಗಳನ್ನು ಬಳಸಿ ಅದನ್ನು ತಿಳಿದು ಹಿಂಬಾಲಿಸುವ, ದಾರಿ ತಿಳಿಯುವ ಅಥವಾ ಹುಡುಕುವ ಕ್ರಮ ಇರುತ್ತದೆ ಅಲ್ಲದೆ ಅನೇಕ ಪಠ್ಯವಿಷಯಗಳನ್ನು ಕಲಿಯುವ ಯೋಜನೆಗಳೂ ಇರುತ್ತವೆ. ಸ್ಕೌಟ್`/ಗೈಡ್ ಲಘು ಪ್ರವಾಸಗಳು ಕೇವಲ ಮನೋರಂಜನೆಗಲ್ಲದೆ ಕಲಿಕೆಯ ಅಂಗವಾಗಿ ನಡೆಯುತ್ತವೆ.
 • ಹೀಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಚಳುವಳಿ ಪ್ರಾಮುಖ್ಯತೆ ನೀಡುತ್ತದೆ. (2)

ಸ್ಕೌಟ್/ಗೈಡ್`ನ -ಕೌಶಲ್ಯ ಅಥವಾ ಸಾಮರ್ಥ್ಯ[ಬದಲಾಯಿಸಿ]

 • ಸ್ಕೌಟ್ ಚಳುವಳಿಯ ಉದ್ದೇಶವು ಮಕ್ಕಳಲ್ಲಿ ದೈಹಿಕ, ಬೌದ್ಧಿಕ, ಸಾಮಾಜಿಕ , ದೈವಿಕ ವಿಷಯಗಳಲ್ಲಿ ಅವರಲ್ಲಿರುವ ಆಂತರಿಕ ಶಕ್ತಿಯನ್ನು ಪ್ರತಿ ವ್ಯಕ್ತಿಯಲ್ಲಿ ಅಭಿವೃದ್ಧಿ ಪಡಿಸುವುದು ಮತ್ತು ಜವಾಬ್ದಾರಿಯುತ ಪ್ರಜೆಯಾಗಿ ರೂಪಿಸುವುದೇ ಆಗಿದೆ.

ಇದಕ್ಕೆ ವಿಶಿಷ್ಟ ಪ್ರತಿಭೆಯುಳ್ಳ , ಅನೇಕ ಸ್ಕೌಟ ಕೌಶಲ್ಯಗಳಲ್ಲಿ ಪರಿಣತಿಹೊಂದಿರುವ , ಸನ್ನಡತೆಯ (ಸಚ್ಚಾರಿತ್ರ್ಯವುಳ್ಳ) ಸ್ಕೌಟ ತರಬೇತಿ ಪಡೆದ ವ್ಯಕ್ತಿಯ ಅಗತ್ಯವಿದೆ. ಅಂತಹ ವ್ಯಕ್ತಿಯು ಸಮಾಜಕ್ಕೂ ದೇಶಕ್ಕೂ ಒಂದು ಅಮೂಲ್ಯ ಆಸ್ತಿ. ಅಂತಹ ವ್ಯಕ್ತಿಗಳಿಂದ ತರಬೇತಿ ಪಡೆದ ಸ್ಕೌಟ್ ಗಳು ಅನೇಕ ಕೌಶಲ್ಯಗಳನ್ನು ಪಡೆದು , ನಾಯಕತ್ವ ಗುಣಹೊಂದಿ ಉಳಿದವರಿಗಿಂತ ಸಮರ್ಥವಾಗಿ ಆಪತ್ತು ಅಥವಾ ಅಗತ್ಯ ಸಂದರ್ಭಗಳಲ್ಲಿ ವಿಶಿಷ್ಟ ಸಾಮರ್ಥ್ಯದಿಂದ ಕರ್ತವ್ಯನಿರ್ವಹಿಸಬಲ್ಲರು.

 • ಸಮರ್ಥ ಸ್ಕೌಟ್ ನಗರದ ಬೀದಿಗಳಲ್ಲಿ ಅಲೆದಾಡುವುದಕ್ಕಿಂತ ಪ್ರಕೃತಿ ಮಧ್ಯದಲ್ಲಿ ಕ್ಯಾಂಪ್ ಮಾಡುವುದಕ್ಕೆ ಇಷ್ಟ ಪಡುತ್ತಾನೆ.

ಅವನು ಸಂಜ್ಞೆಗಳನ್ನು ಗುರುತಿಸಿ ದಿಕ್ಕು ಗಳನ್ನು ತಿಳಿಯಬಲ್ಲ.

 • ಅವನು ಹಗ್ಗದಿಂದ ಜಾರದಿರುವ ಗಙಂಟುಗಳನ್ನು ಹಾಕಬಲ್ಲ. ಮರವನ್ನು ಹತ್ತಬಲ್ಲ. ಈಜಬಲ್ಲ. ಅವನು ವಿಷಭರಿತ ಹಣ್ಣುಗಳು ಅಲ್ಲದವು ಯಾವುವು ಎಂದು ಹೇಳಬಲ್ಲ. ಫಲಕೊಡುವ ಮರಗಳನ್ನು ಗುರುತಿಸಬಲ್ಲ. ನಕ್ಷತ್ರಗಳನ್ನು ಗುರುತಿಸಿ ದಾರಿ ಕಂಡುಕೊಳ್ಳಬಲ್ಲ.
 • ಅವನ ಕಣ್ಣು ಚುರುಕಾಗಿದ್ದು ಸಂಕೇತ, ಸಂಜ್ಞೆಗಳನ್ನು ಗುರುತಿಸಬಲ್ಲ.
 • ಆತನು ಮೃದು ಭಾಷಿ. ವಿನಯದಿಂದ ಪ್ರಶ್ನೆ ಕೇಳುತ್ತಾನೆ.
 • ಅವನು ಸಾಮಾನ್ಯವಾಗಿ ಒಂದೇ ಬೆಂಕಿಕಡ್ಡಿಯಿಂದ ಬೆಂಕಿಮಾಡಬಲ್ಲ.
 • ಆರೋಗ್ಯ, ಮತ್ತ ಢೃಡಕಾಯಕ್ಕಾಗಿ ಅಗತ್ಯವಾದ ಶುದ್ಧ ಆಹಾರವನ್ನು ಮಿತವಾಗಿ (ಅಗತ್ಯವಾದಷ್ಟು ಮಾತ್ರಾ) ಸೇವಿಸುತ್ತಾನೆ. ಅವನು ಅದರಿಂದ ಚುರುಕಾದ ಸ್ಪಷ್ಟ ವಿಚಾರದ ಬುದ್ಧಿಯುಳ್ಳವನು..
 • ಅವನು ಮ್ದ್ಯವನ್ನಾಗಲಿ ಹೊಗೆಸೊಪ್ಪನ್ನಾಗಲಿ ಉಪಯೋಗಿಸನು; ದುಶ್ಚಟಗಳಿಂದ ದೂರವಿರುವನು. ಅವನು ಬೆಂಕಿಯ ಅವಘಡ, ನಾವೆಎ, ರೈಲು ಅಪಘಾತ, ಈಬಗೆಯ ಅನಾಹುತ ಸಂದರ್ಭಗಳಲ್ಲಿ , ಗಾಬರಿಗೊಳ್ಳದೆ , ತನ್ನ ಮನಸ್ಸು ಮತ್ತು ದೇಹವನ್ನು ಹತೋಟಿಯಲ್ಲಿಟ್ಟುಕೊಂಡು , ಉಳಿದವರಿಗೆ ಮಾದರಿಯಾಗಿ ಸಹಾಯ , ಅಗತ್ಯ ಕರ್ತವ್ಯಗಳನ್ಗನು ಮಾಡಬಲ್ಲ. ಅವನಿಗೆ ಪ್ರಥಮ ಚಿಕಿತ್ಸೆ ಮಾಡುವುದು ಗೊತ್ತಿದೆ.
 • ಅವನು ಸ್ಕೌಟ್ ನಿಯಮ ಪಾಲಿಸುವವನು. ಅಂದರೆ ಅವನು ನಂಬಿಗೆಗೆ ಅರ್ಹ ; ಪ್ರಾಮಾಣಿಕ ; ಇತರ ಸ್ಸೌಟ್/ಗೈಡ್ಗಳಿಗೆ ಸೋದರಭಾವವುಳ್ಳವನು. ಎಲ್ಲರ ಸ್ನೇಹಿತ ; ಪ್ರಕೃತಿಯ ಸ್ನೇಹಿತ ; ಧೈರ್ಯಶಾಲಿ  ; ಮಿತವ್ಯಯಿ ;ಮನ -ಕಾಕದಲ್ಲಿ ಪರಿಶುದ್ಧನು .
 • ಭಗವದ್ಗೀತೆಯಲ್ಲಿ ಹೇಳಿದಂತೆ ತರಬೇತಿ ಪಡೆದ ಕರ್ಮಯೋಗಿಯಾಗಿರವನು.
 • ಉತ್ತಮ ಸಮಾಜ ನಿರ್ಮಾಣಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಸರ್ಕಾರಗಳು ಈ ಸ್ಸೌಟ್ -ಗೈಡ್ಸ್ ಚಳುವಳಿಗೆ ಉತ್ತಮ ಪ್ರೋತ್ಸಾಕೊಡುವುದು ಅಗತ್ಯವಾಗಿದೆ.
ಗಾಂಧೀಜಿ ಯವರ ಕೋರಿಕೆ,
'ಪ್ರತಿಯೊಂದು ಮನೆಯಲ್ಲೂ ಈಬಗೆಯ ತರಬೇತಿಹೊದಿದ ಮಕ್ಕಳು ಇರಬೇಕೆಂದು ನನ್ನ ಪ್ರಾರ್ಥನೆ'.
ಜವಾರಲಾಲ್ ನೆಹರೂ,ಸ್ಸೌಟ್ ಗೈಡ್ಸ್ ಬಗ್ಗೆ,
'ಈ ಸಂಸ್ಥೆ ಸರಿಯಾದ ಮಾರ್ಗದಲ್ಲಿ ನೆಡೆಯುತ್ತಿದೆ. ಅದು ಭಾರತದಲ್ಲಿ ಬಾಲಕ,ಯುವಕರನ್ನು ತರಬೇತಿ ಮಾಡುವಲ್ಲಿ ಯಶಸ್ಸು ಗಳಿಸಲೆಂದು ಆಶಿಸುತ್ತೇನೆ.'

[೨][೩][೪][೫][೬][೭][೮]

ನೋಡಿ[ಬದಲಾಯಿಸಿ]

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್:ಇಂಗ್ಲಿಷ್ ತಾಣ:[೧]

 • Scouting - [೨]
 • ಸ್ಕೌಟ್ಸ್ ಮತ್ತು ಗೈಡ್ಸ್
 • --ಟೆಂಡರ್ ಫುಟ್ ಮತ್ತು ಗೈಡ್ ಬ್ಯಾಡ್ಜ್, ಚಿತ್ರ ಹಾಕಬೇಕು,-ಹಾಕಿ (ನನ್ನ, ಫೈಲ್ ಅಪ್ ಲೋಡ್ ಬ್ಲಾಕ್ ಆಗಿದೆ, ಅಥವಾ ಹೊಸ ಅಪ್ ಲೋಡ್ ತೋಂದರೆಯಾಗಿದೆ )

ಉಲ್ಲೇಖ[ಬದಲಾಯಿಸಿ]

 1. (From scout training notes-given by,ಎಚ್.ರಾಮರಾವ್ (೧೯೫೯),ಸ್ಕೌಟ್ ಟ್ರೈನರ್, ಸ್ಕೌಟ್`ವುಡ್`ಬ್ಯಾಡ್ಜ್ ಪೆಡೆದವರು)
 2. ಆಧಾರ:BOY SCOUTS POCKET BOOK National and state headquarters BSG. India;ಭಾರತದ BSG ತಾಣ
 3. [೩] Google.
 4. Boy scouts pocket book(by SHADA) (printed at V.B.Soobaiah&Sons Bangalore.2
 5. The Bharat Scouts and Guides
 6. ವೆಬ್-ಅಂತರ್ಜಾಲ ತಾಣ (ಗೂಗಲ್)
 7. http://www.bsgindia.org/
 8. [೪]