ಅಪೋಲೊ ೧೧

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಪೋಲೋ ೧೧ ಅನ್ನು ಹೊತ್ತ ಸ್ಯಾಟರ್ನ್ ೫ ನೌಕೆ

ಅಪೋಲೋ ೧೧ ಮೊದಲ ಬಾರಿಗೆ ಮಾನವರನ್ನು ಹೊತ್ತು ಚಂದ್ರನ ಮೇಲಿಳಿದ ಅಂತರಿಕ್ಷ ನೌಕೆ. ಅಪೋಲೋ ೧೧ ಅಪೋಲೋ ಸರಣಿಯ ನೌಕೆಗಳಲ್ಲಿ ಒಂದು. ಈ ಸರಣಿಯ ನೌಕೆಗಳಲ್ಲಿ ಮಾನವರನ್ನು ಹೊತ್ತು ಅಂತರಿಕ್ಷಕ್ಕೆ ಸಾಗಿದ ಐದನೆಯ ನೌಕೆ ಇದು. ಈ ನೌಕೆಯ ನಾಯಕ ನೀಲ್ ಆರ್ಮ್‍ಸ್ಟ್ರಾಂಗ್. ಜುಲೈ ೧೬, ೧೯೬೯ ರಂದು ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಈ ನೌಕೆ ಹಾರಿತು. ಸ್ಯಾಟರ್ನ್ ೫ ರಾಕೆಟ್ ಇದನ್ನು ೧೨ ನಿಮಿಷಗಳಲ್ಲಿ ಭೂಮಿಯ ಸುತ್ತ ಕಕ್ಷೆಗೆ ತಲುಪಿಸಿತು. ಭೂಮಿಯ ಸುತ್ತ ಒಂದೂವರ ಬಾರಿ ಸುತ್ತಿದ ನಂತರ ಚಂದ್ರನತ್ತ ಹಾರಿತು. ಜುಲೈ ೧೯ ರಂದು ಚಂದ್ರನ ಮೇಲ್ಮೆಯ ಹತ್ತಿರ ತಲುಪಿದ ನೌಕೆ ಮೂವತ್ತು ಬಾರಿ ಚಂದ್ರನನ್ನು ಪ್ರದಕ್ಷಿಣೆ ಹಾಕಿತು. ಜುಲೈ ೨೦ ರಂದು ನೌಕೆಯ ಚಂದ್ರಘಟಕ "ಈಗಲ್" ಪ್ರಧಾನ ನೌಕೆಯಿಂದ ಬೇರೆಯಾಗಿ ಚಂದ್ರನ ಮೇಲೆ ಇಳಿಯಿತು.

ಅಪೋಲೋ ೧೧ ರಲ್ಲಿ ಚಂದ್ರಯಾನ ಮಾಡಿದ ಆರ್ಮ್ ಸ್ಟ್ರಾಂಗ್, ಕಾಲಿನ್ಸ್ ಮತ್ತು ಆಲ್ಡ್ರಿನ್

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಅಪೋಲೊ_೧೧&oldid=788430" ಇಂದ ಪಡೆಯಲ್ಪಟ್ಟಿದೆ