ತೇನ್‌ಸಿಂಗ್ ನೋರ್ಗೆ
Tenzing Norgay བསྟན་འཛིན་ནོར་རྒྱས། तेन्जिङ नोर्गे शेर्पा | |
---|---|
ಚಿತ್ರ:Tenzing Norgay.gif | |
ಜನನ | Namgyal Wangdi late May 1914 |
ಮರಣ | 9 May 1986 Darjeeling, India | (aged 71)
ವೃತ್ತಿ(ಗಳು) | Mountaineer, Tour guide |
ಸಂಗಾತಿ(s) | Dawa Phuti, Ang Lahmu, Dakku |
ಮಕ್ಕಳು | Pem Pem, Nima, Jamling and Norbu |
ಹುಟ್ಟಿದಾಗ ನಮ್ ಗ್ಯಾಲ್ ವಂಗಡಿ ಎಂದೂ ಆಗಾಗ್ಗೆ ತೇನ್ಸಿಂಗ್ ನೋರ್ಗೆ ಎಂದು ಕರೆಯಲ್ಪಡುವ ಸುಪ್ರದಿಪ್ತ - ಮಾನ್ಯಭಾರ - ನೇಪಾಳಿ - ತಾರ ತೇನ್ಸಿಂಗ್ ನೋರ್ಗೆ, ಜಿ ಎಮ್ (೧೯೧೪ ರ ಮೇತಿಂಗಳ ಕೊನೆ - ೯ ನೇ ಮೇ ೧೯೮೬ )ನೇಪಾಳಿ - ಭಾರತೀಯ ಶೇರ್ಪ ಪರ್ವತಾರೋಹಿಯಾಗಿದ್ದರು. ಇತಿಹಾಸದಲ್ಲಿ ಪರ್ವತವನ್ನು ಏರಿದ ಅತ್ಯಂತ ಹೆಸರುವಾಸಿಯಾದವರ ಪೈಕಿ, ೨೯ ನೇ ಮೇ ೧೯೫೩ ರಂದು, ಎಡ್ಮಂಡ್ ಹಿಲರಿಯ /೧} ಜೊತೆ ಯಶಸ್ವಿಯಾಗಿ ಗೌರಿಶಂಖರ ಶಿಖರವನ್ನು ತಲುಪಿದ ಮೊದಲನೆ ಇಬ್ಬರು ವ್ಯಕ್ತಿಗಳಲ್ಲಿ ಇವರೂ ಒಬ್ಬರೆಂದು ತಿಳಿಯಲಾಗಿದೆ.[೧] ೨೦ ನೇ ಶತಮಾನದ ಅತ್ಯಂತ ಪ್ರಭಾವಶಾಲಿ ನೂರು ವ್ಯಕ್ತಿಗಳಲ್ಲಿ ಒಬ್ಬರೆಂದುಟೈಮ್ಸ್ ನಿಯತಕಾಲಿಕ ಸಂಚಕೆಯು ಹೆಸರಿಸಿದೆ.
ಆರಂಭಿಕ ಜೀವನ
[ಬದಲಾಯಿಸಿ]ಅವರ ಪೂರ್ವ ಬಾಲ್ಯಜೀವನದ ಬಗ್ಗೆ ವಿಭಿನ್ನ ಹೋರಾಟದ ವರದಿಗಳಿವೆ. ಅನೇಕ ವರ್ಷಗಳವರೆಗೆ ಒಪ್ಪಿಕೊಳ್ಳಲ್ಪಟ್ಟ, ಅವರು ಬರೆದ ಮೊದಲ ಆತ್ಮಚರಿತ್ರೆಯ ವರದಿಯು ಅವರು ಶೇರ್ಪ ಕುಲದಲ್ಲಿ ಹುಟ್ಟಿದವರು ಹಾಗೂ ಈಶಾನ್ಯ ನೇಪಾಳದಲ್ಲಿ ಖುಂಬು, ತೆಂಗ್ಬೋಚೆ ನಲ್ಲ ಬೆಳೆದರು.[೨] ಆದರೂ, ತೀರ ಇತ್ತೀಚಿನ ಸಂಶೋಧನೆಯು ಅವರು, ಟಿಬೆಟ್ ನ ಖರ್ತಾಕಣಿವೆಯಲ್ಲಿ, ಒಬ್ಬ ಟಿಬೆಟಿಯನ್ ಆಗಿ ಜನಿಸಿದ್ದರೆಂದು ಒಪ್ಪಿಕೊಳ್ಳುತ್ತದೆ, ಆದರೆ ರೋಗದಿಂದ ಅವರ ಯಾಕ್ ಗಳು ಮರಣಹೊಂದಿದಾಗ ಅವರ ಕುಟುಂಬವು ದಿಕ್ಕಿಲ್ಲದಂತಾಯಿತು, ಹಾಗೂ ನೇಪಾಳಿನ ತಮೇಲ್ ನಲ್ಲಿನ ಒಂದು ಶೇರ್ಪಾ ಕುಟುಂಬಕ್ಕೆ ಜೀತದಾಳಾಗಿ ಅವರು ಮಾರಲ್ಪಟ್ಟರು.[೩]
ಖುಂಬು ಗೌರಿಶಂಖರ ದ ಬಳಿಯಿದೆ, ಅದನ್ನು ಟಿಬೆಟಿಯನ್ನರು ಹಾಗೂ ಶೇರ್ಪಾಗಳು ಚೊಮೊಲುಗ್ಮ ಎಂದು ಕರೆಯುತ್ತಾರೆ, ಅಂದರೆ ಟಿಬೆಟಿಯನ್ ಭಾಷೆಯಲ್ಲಿ ಭೂಮಿಯ ಮೇಲಿನ ತಾಯಿದೇವತೆ ಎಂದರ್ಥ. ಶೇರ್ಪಾಗಳು ಹಾಗೂ ಟಿಬೆಟಿಯನ್ನರ ಪಾರಂಪರಿಕ ಧರ್ಮದಂತೆ, ಅವರು ಒಬ್ಬ ಬೌದ್ಧರು.
ಅವರ ನಿಖರವಾದ ಹುಟ್ಟಿದ ತಾರೀಖು ತಿಳಿದು ಬಂದಿಲ್ಲ, ಆದರೆ ಹವಾಗುಣ ಮತ್ತು ಬೆಳೆಗಳ ಆಧಾರದ ಮೇಲೆ ಮೇ ತಿಂಗಳ ಕೊನೆಯಿರಬಹುದೆಂದು ಅವರು ತಿಳಿದಿದ್ದರು. ಗೌರಿಶಂಕರ ಶಿಖರವನ್ನು ಮೇ ೨೯ ರಂದು ಏರಿದ ನಂತರ, ಅವರು ಅಂದಿನಿಂದ ಮುಂದೆ ಆ ದಿನದಂದು ತಮ್ಮ ಹುಟ್ಟಿದ ಹಬ್ಬವನ್ನು ಆಚರಿಸಲು ನಿರ್ಧರಿಸಿದರು. ಅವರು ಹುಟ್ಟಿದ ವರ್ಷ ಟಿಬೆಟಿಯನ್ ಕ್ಯಾಲೆಂಡರ್ ಪ್ರಕಾರ ಮೊಲಗಳ ವರ್ಷವಾಗಿತ್ತು, ಹಾಗಾಗಿ ಅವರು ೧೯೧೪ ರಲ್ಲಿ ಜನಿಸಿರ ಬಹುದೆನ್ನುತ್ತಾರೆ.[೨]
ಅವರು ಮೂಲವಾಗಿ 'ನಾಮ್ ಗಯಾಲ್ ಮಂಗಡಿ' ಎಂದು ಕರೆಯಲ್ಪಡುತ್ತಿದ್ದರು, ಆದರೆ ಲಾಮಾ ಮುಖಂಡ ಹಾಗೂ ಪ್ರಸಿದ್ಧವಾದ ರೊಂಗ್ ಬುಕ್ ಆಶ್ರಮದ ಸಂಸ್ಥಾಪಕರ ಸಲಹೆಯಂತೆ ಮಗುವಾಗಿರುವಾಗ ಅವರ ಹೆಸರನ್ನು ನಗವಾಂಗ್ ತೆನ್ ಜಿನ್ ನೊರ್ಬು, ಎಂದು ಬದಲಾಯಿಸಲಾಯಿತು.[೪] "ಧರ್ಮದ - ಶ್ರೀಮಂತ - ಅದೃಷ್ಟಶಾಲಿ - ಅನುಯಾಯಿ" ಎಂಬುದು ತೇನ್ಸಿಂಗ್ ನೋರ್ಗೆಯ ಅರ್ಥ ಅನುವಾದ. ಯಾಕ್ ಕಾಯುವವನಾಗಿದ್ದ, ಅವರ ತಂದೆ, ಯವರು ಘಾನ್ಗ್ ಲ ಮಿಂಗ್ಮ (ಮರಣ. ೧೯೪೯) ಮತ್ತು ಅವರ ತಾಯಿಯಾದ ದೊಕ್ಮೊ ಕಿಮ್ ಜೋಮ್ (ಆಕೆಯು ಅವರು ಗೌರಿಶಂಕರ ಶಿಖರವನ್ನು ಏರುವುದನ್ನು ನೋಡಲು ಬದುಕಿದ್ದರು); ಇವರು ಅವರ ೧೩ ಮಕ್ಕಳಲ್ಲಿ ೧೧ ನೇಯವರು, ಹೆಚದ್ಚು ಮಕ್ಕಳು ಬಾಲ್ಯದಲ್ಲೇ ತೀರಿ ಹೋದವು.[೨]
ಮೊದಲು ಕಠಮಂಡು ಹಾಗೂ ನಂತರ ಡಾರ್ಜಲಿಂಗ್ ಗೆ ಹೀಗೆ, ಅವರು ಎರಡು ಬಾರಿ ತಮ್ಮ ಹದಿವಯಸ್ಸಿನಲ್ಲಿ ಮನೆ ಬಿಟ್ಟು ಓಡಿಹೋದರು. ಅವರನ್ನು ಒಮ್ಮೆ ತೆಂಗ್ ಬೊಝೆ ಆಶ್ರಮಕ್ಕೆ ಭಿಕ್ಷುವಾಗಲು ಕಳುಹಿಸಲಾಯಿತು, ಆದರೆ ಅದು ತಮಗಲ್ಲವೆಂದು ತೀರ್ಮಾನಿಸಿ ಹೊರಟು ಹೋದರು.[೫] ೧೯ ನೇ ವಯಸ್ಸಿನಲ್ಲಿ, ಭಾರತದ, ಪಶ್ಚಿಮ ಬಂಗಾಳದ, ಡಾರ್ಜಲಿಂಗ್ ನ ಟೂಸಾಂಗ್ ಭುಸ್ತಿಯಲ್ಲಿನ ಶೇರ್ಪಾ ಸಮಾಜದಲ್ಲಿ ಕೊನೆಗೆ ನೆಲೆಸಿದರು.[೨]
ಪರ್ವತಾರೋಹಣ
[ಬದಲಾಯಿಸಿ]ಆ ವರುಷ ಸ್ಥಳ ಪರಿಶೋಧನೆಯ ಪ್ರಯಾಣದ ಮುಖ್ಯಸ್ಥ ಎರಿಕ್ ಶಿಪ್ ಟನ್ ರಿಂದ ೧೯೩೫ ರಲ್ಲಿ, ಅವರು ನೇಮಿಸಲ್ಪಟ್ಟಾಗ ತೇನ್ ಜಿಂಗ್ ಗೌರಿಶಂಕರ ಆರೋಹಣದಲ್ಲಿ ಸೇರಲು ತಮ್ಮ ಮೊದಲ ಸದವಕಾಶವನ್ನು ಪಡೆದರು. ತಮ್ಮ ವೈದ್ಯಕೀಯ ಪರೀಕ್ಷೆಯಲ್ಲಿ ಉಳಿದ ಇಬ್ಬರು ಅಪಜಯಗಳಿಸಿದಾಗ ೧೯ ವರ್ಷ ವಯಸ್ಸಿನ ಇವರಿಗೆ ಅವಕಾಶ ದೊರಕಿತು. ಆಂಗಥರ್ಕೆಯ ಗೆಳೆಯರಾದ ಕಾರಣ ಅವರು ಬಹು ಬೇಗನೆ ಅವರು ಮುಂದಕ್ಕೆ ಬಂದರು ಹಾಗೂ ಅವರ ಆಕರ್ಷಕ ನಗುಮುಖವು ಅವರನ್ನು ಸೇರಿಸಿಕೊಳ್ಳಬೇಕೆಂದು ನಿರ್ಧರಿಸಿದ ಶಿಪ್ ಟನ್ ರನ್ನು ಬಹಳವಾಗಿ ಸೆಳೆಯಿತು.
೧೯೩೦ ರ ಅವಧಿಯಲ್ಲಿ ಉತ್ತರದ ಟಿಬೆಟಿಯನ್ ಮಾರ್ಗದಿಂದ ಗೌರಿಶಂಕರ ಶಿಖರವನ್ನು ಏರುವ ಮೂರು ಅಧಿಕೃತ ಬ್ರಿಟಿಷ್ ಪ್ರಯತ್ನಗಳಲ್ಲಿ ತೇನ್ ಜಿಂಗ್ ಒಬ್ಬ ಹೆಚ್ಚು ಎತ್ತರದ ಹೊರೆಯಾಳಾಗಿ ಭಾಗವಹಿಸಿದರು.[೨]
ಅವರು ಭಾರತ ಉಪಖಂಡದ ವಿವಿಧ ಭಾಗಗಳ ಆಆರೋಹಣದಲ್ಲಿಯೂ ಸಹ ಸೇರಿದ್ದರು ಹಾಗೂ ಮೇಜರ್ ಚಾಪ್ ಮನ್ ರಿಗೆ ಅಧಿಕಾರಿಯ ಆಳಾಗಿ, ಈಗ ಪಾಕಿಸ್ತಾನದಲ್ಲಿರುವ ಚಿತ್ರಾಲ್ ನ ರಾಜ ಯೋಗ್ಯ ಸಂಸ್ಥಾನದಲ್ಲಿ ೧೯೪೦ ಮೊದಲ ಅವಧಿಯ ಕೆಲವು ಕಾಲ ಅವರು ವಾಸಿಸುತ್ತಿದ್ದರು. ಅವರ ಮೊದಲ ಪತ್ನಿ ಅವರು ಅಲ್ಲಿರುವಾಗ ಮರಣಿಸಿದರು ಹಾಗೂ ಅಲ್ಲಿಯೇ ಮಣ್ಣು ಮಾಡಲ್ಪಟ್ಟರು. ೧೯೪೭ ರ ಭಾರತ ವಿಭಜನೆಯ ಕಾಲದಲ್ಲಿ, ತಮ್ಮ ಇಬ್ಬರು ಪುತ್ರಿಯರನ್ನು ಕರೆದುಕೊಂಡು ಡಾರ್ಜಿಲಿಂಗ್ ಗೆ ಮರಳಿದರು.[೨]
೧೯೪೭ ರಲ್ಲಿ, ಗೌರಿಶಂಕರ ಶಿಖರದ ಯಶಸ್ವಿಯಾಗದ ಪ್ರಯತ್ನದಲ್ಲಿ ಅವರು ಭಾಗವಹಿಸಿದರು; ಕೆನಡಾ - ಸಂಜಾತ ಆರ್ಲ ಡೆನ್ ಮನ್ , ಆಂಗೆ ದವ ಶೇರ್ಪ, ಹಾಗೂ ತೇನ್ ಜಿಂಗ್ ಪರ್ವತಾರೋಹಣದ ಕಾನೂನಿಗೆ ವಿರುದ್ಧವಾಗಿ ಟಿಬೆಟ್ ಪ್ರವೇಶಿಸಿದರು; ಒಂದು ಬಲವಾದ ಬಿರುಗಾಳಿಯು ೨೨,೦೦೦ ಅಡಿ (೬,೭೦೦ ಮೀ) ಯಲ್ಲಿ ಅವರ ಮೇಲೆ ಅಪ್ಪಳಿಸಿದಾಗ ಅವರ ಪ್ರಯತ್ನವು ಮುಕ್ತಾಯವಾಯಿತು. ಡೆನ್ ಮನ್ ತಮ್ಮ ಸೋಲನ್ನು ಒಪ್ಪಿಕೊಂಡರು ಹಾಗೂ ಮೂರೂ ಜನರೂ ವಾಪಸ್ಸು ಹೊರಟು ಸುರಕ್ಷಿತವಾಗಿ ಹಿಂದಿರುಗಿದರು.[೨]
೧೯೫೨ ರಲ್ಲಿ, ರೇಮಂಡ್ ಲಂಬರ್ಟ್ ರಿಂದ ನಡೆಸಲ್ಪಟ್ಟ ಎರಡು ಸ್ವಿಸ್ ಆರೋಹಣಗಳಲ್ಲಿ ಅವರು ಭಾಗವಹಿಸಿದರು, ಇದು ದಕ್ಷಿಣದ (ನೇಪಾಳಿ) ಕಡೆಯಿಂದ ಗೌರಿಶಂಕರ ಏರುವ ಮೊದಲ ಗಂಭೀರವಾದ ಪ್ರಯತ್ನವಾಗಿತ್ತು, ಈ ಅವಧಿಯಲ್ಲಿ ಅವರು ಮತ್ತು ಲಂಬರ್ಟ್ ಆಗಿನ ದಾಖಲೆಯ ಎತ್ತರ ೨೮,೨೧೫ ಅಡಿಗಳು (೮,೫೫೯ ಮೀ) ಅನ್ನು ತಲುಪಿದರು.[೨]
ಗೌರಿಶಂಕರ ಶಿಕರದ ಯಶಸ್ಸು
[ಬದಲಾಯಿಸಿ]೧೯೫೩ ರಲ್ಲಿ ಗೌರಿಶಂಕರಕ್ಕೆ ತಮ್ಮ ಸ್ವಂತ ಏಳನೇ ಪ್ರಯಾಣವಾಗಿ, ಜಾನ್ ಹಂಟರ ಆರೋಹಣದಲ್ಲಿ ಭಾಗವಹಿಸಿದರು. ಎಡ್ಮಂಡ್ ಹಿಲೆರಿಯವರು ಆ ತಂಡದ ಸದಸ್ಯರಾಗಿದ್ದರು, ಅವರು ಹಿಮನದಿಯ ಕಂದಕದಲ್ಲಿ ಬಿದ್ದ ಕಾರಣ ಸ್ವಲ್ಪದರಲ್ಲೇ ಗುರಿ ತಪ್ಪಿದರು, ಆದರೆ ತಮ್ಮ ಮಂಜಿನ ಕೊಡಲಿಯನ್ನು ಉಪಯೋಗಿಸಿ ಹಗ್ಗವನ್ನು ಸುರಕ್ಷಿತವಾಗಿ ಹಿಡಿದುಕೊಳ್ಳುವ ತೇನ್ ಜಿಂಗ್ ರ ಸಮಯೋಚಿತ ಕ್ರಿಯೆಯ ಕಾರಣ ತಳಕ್ಕೆ ಬೀಳುವ ಹೊಡೆತದಿಂದ ುಳಿಸಲ್ಪಟ್ಟರು, ಮುಂದಿನ ಯಾವುದೇ ಪ್ರಯತ್ನಕ್ಕೆ ಅವರನ್ನು ಆರೋಹಣದ ಜೊತೆಗಾಗನನ್ನಾಗಿ ಆರಿಸಿಕೊಳ್ಳೋಲು ಹಿಲೆರಿಯವರು ನಿರ್ಧರಿಸಿದರು.[೬]
ಹಂಟರ ಪ್ರಯಾಣವು ೩೬೨ ಹೊರೆಯಾಳುಗಳು, ಇಪ್ಪತ್ತು ಶೇರ್ಪಾ ಮಾರ್ಗದರ್ಶಕರು ಹಾಗೂ ೧೦,೦೦೦ ಪೌಂಡುಗಳ ಸಾಮಾನುಗಳೂ ಸೇರಿದಂತೆ,[೭] ಒಟ್ಟು ೪೦೦ ಜನಗಳಿಗಿಂತ ಹೆಚ್ಚಿತ್ತು, ಮತ್ತು ಅಂತಹುದೇ ಅನೇಕ ಆರೋಹಣಗಳು, ಒಂದು ತಂಡದ ಪರಿಶ್ರಮವಾಗಿತ್ತು.
ಮಾರ್ಚ್ ೧೯೫೩ ರರಲ್ಲಿ ಪ್ರಯಾಣದ ತಂಡವು ತಳದ ಶಿಬಿರವನ್ನು ಸ್ಥಾಪಿಸಿದರು. ನಿಧಾನವಾಗಿ ಕೆಲಸಮಾಡುತ್ತಾ ದಕ್ಷಿಣ ಎರಡು ಪ್ರಮುಖ ಶಿಖರಗಳ ನಡುವೆ ಒಂದು ದಾರಿಯನ್ನು ಸ್ಥಾಪಿಸಿದರು 25,900 feet (7,890 m) ರಲ್ಲಿ ತನ್ನ ಅಂತಿಮ ಶಿಬಿರವನ್ನು ಏರ್ಪಡಿಸಿದರು. ೨೬ ನೇ ಮೇ ನಲ್ಲಿ ಬೋರ್ಡಿಲೋನ್ ಹಾಗೂ ಇವಾನ್ಸ್ ಏರುವಿಕೆಯನ್ನು ಪ್ರಯತ್ನಿಸಿದರು, ಆದರೆ ಇವಾನ್ಸರವರ ಆಮ್ಲಜನಕದ ವ್ಯವಸ್ಥೆಯು ವಿಫಲವಾದ್ದರಿಂದ ಹಿಂದಿರುಗಿದರು. ಆ ಇಬ್ಬರೂ ಶಿಖರದ ೩೦೦ ನೇರ ಅಡಿಯೊಳಗೆ (೯೧ ಮೀ) ಬಂದು, ದಕ್ಷಿಣ ಶೃಂಗ ತಲುಪಿದ್ದರು.[೮] ಹಂಟ್ ನಂತರ ತುದಿಯವರೆಗೆ ತೇನ್ ಜಿಂಗ್ ಹಾಗೂ ಹಿಲೆರಿಯವರಿಗೆ ನಿರ್ದೇಶಿಸಿದರು.
ಎರಡು ದಿನಗಳ ವರೆಗೆ ದಕ್ಷಿಣ ಎರಡು ಪ್ರಮುಖ ಶಿಖರಗಳ ನಡುವೆ ಒಂದು ದಾರಿಯಲ್ಲಿ ಹಿಮ ಮತ್ತು ಗಾಳಿಯು ಈ ಇಬ್ಬರನ್ನು ಹಿಡಿದಿಟ್ಟಿತ್ತು. ವರು ಮೇ ೨೮ ರಂದು ಆಂಗ್ ನ್ಯಿಮ, ಆಲ್ಫ್ರೆಡ್ ಗ್ರೆಗೊರಿ ಹಾಗೂ ಜಾರ್ಜ ಲೊವೆ ಈ ಮೂವರ ಬೆಂಬಲದಿಂದ ಹೊರಟರು. ಅವರ ಬೆಂಬಲದ ತಂಡವು ಪರ್ವತದಿಂದ ಕೆಳಗಿಳಿದರೆ ೨೮ ನೇ ಮೇ ನಲ್ಲಿ ಇಬ್ಬರೂ 27,900 feet (8,500 m) ರಲ್ಲಿ ಒಂದು ಡೇರೆಯನ್ನು ಗುಡಾರ ಹಾಕಿದರು, ಮಾರನೆಯ ಬೆಳಿಗ್ಗೆ ಹಿಲೆರಿಯು ಡೇರೆಯ ಹೊರಗಡೆ ತಮ್ಮ ಬೂಟುಗಳು ಹೆಪ್ಪುಗಟ್ಟಿರುವುದನ್ನು ಕಂಡರು. ಅವರು ಅವುಗಳನ್ನು ಬೆಚ್ಚಗೆ ಮಾಡುತ್ತಾ ತಮ್ಮ ಮುಂದಿಟ್ಟು ಕೊಂಡುಎರಡು ಗಂಟೆಗಳವರೆಗೆ ಕಳೆದರು ಹಾಗೂ ತೇನ್ ಜಿಂಗ್ 30-pound (14 kg) ಪ್ಯಾಕ್ ಗಳನ್ನು ಧರಿಸಿ ತಮ್ಮ ಅಂತಿಮ ಏರುವಿಕೆಯನ್ನು ಪ್ರಯತ್ನಿಸಿದರು.[೯] ಆರೋಹಣದ ಕೊನೆಯ ಭಾಗದ ನಿರ್ಣಾಯಕ ಚಲನೆಯು, ಮುಂದೆ "ಹಿಲೆರಿ ಹೆಜ್ಜೆ" ಎಂದು ಹೆಸರಿಸಲ್ಪಟ್ಟ ೪೦ ಅಡಿಗಳ (೧೨ ಮೀ) ನ ಬಂಡೆಯ ಮುಖವಾಗಿತ್ತು. ಹಿಲೆರಿಯು ಬಂಡೆಯ ಗೋಡೆ ಹಾಗೂ ಹಿಮದ ನಡುವೆ ಮುಖದಲ್ಲಿ ಒಂದು ಬಿರುಕಿನಿಂದ ಒಂದು ಗೂಟದ ಸಾಧನದಿಂದ ತಮ್ಮ ಮಾರ್ಗವನ್ನು ಕಂಡರು ಹಾಗೂ ತೇನ್ ಜಿಂಗ್ ಹಿಂಬಾಲಿಸಿದರು.[೧೦] ಅಲ್ಲಿಂದ ಮುಂದಿನ ಪ್ರಯತ್ನವು ಬಹಳ ಸರಳವಾಗಿತ್ತು. ಅವರು ಹನ್ನೊಂದುವರೆ ಘಂಟೆಗೆ, ಭೂಮಿಯ ಅತ್ಯಂತ ಎತ್ತರದ ತುದಿಯಾದ, ಗೌರಿಶಂಕರದ ೨೯,೦೨೮ ಅಡಿಗಳ (೮,೮೪೮ ಮೀ) ಶಿಖರವನ್ನು ತಲುಪಿದರು.[೧೧] ಹಿಲೆರಿಯವರು ತಿಳಿಸುವಂತೆ, "ದೃಢವಾದ ಹಿಮದಲ್ಲಿ ಮಂಜಿನ ಕೊಡಲಿಯ ಕೆಲವೇ ಬಲವಾದ ಹೊಡೆತಗಳು, ಹಾಗೂ ನಾವು ತುದಿಯ ಮೇಲೆ ನಿಂತಿದ್ದೆವು".[೧೨]
ಅವರು ಶಿಖರದ ಮೇಲೆ ಸುಮಾರು ಹದಿನೈದು ನಿಮಿಷಗಳನ್ನಷ್ಟೆ ಕಳೆದರು. ಹಿಲೆರಿಯು, ತನ್ನ ಮಂಜಿನ ಕೊಡಲಿಯ ಜೊತೆ ತೇನ್ ಜಿಂಗ್ ನಿಂತಿರುವ ದಾಖಲೆಯ ಛಾಯಾಚಿತ್ರ ತೆಗೆದು ಕೊಂಡನು, ಆದರೆ ತೇನ್ ಜಿಂಗ್ ಎಂದೂ ಕ್ಯಾಮರಾವನ್ನೇ ಉಪಯೋಗಿಸದ ಕಾರಣ, ಹಿಲೆರಿಯವರ ಏರುವಿಕೆಯು ದಾಖಲೆಯಿಲ್ಲದೆ ಉಳಿಯಿತು.[೧೩][೧೪] ಏರುವಿಕೆಯು ಮೋಸದ್ದಲ್ಲವೆಂದೂ ಹಾಗೂ ತಾವು ಶಿಖರದ ವರೆಗೂ ತಲುಪಿದ್ದೇವೆಂದು ಭರವಸೆ ಕೊಡುವ ಸಲುವಾಗಿ ಪರ್ವತದ ಕೆಳಗೆ ನೋಡುತ್ತಾ ಹೆಚ್ಚುವರಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಯಿತು.[೧೫] ತಮ್ಮ ಹೆಜ್ಜೆಗಳನ್ನು ನೆನಪಿಸಿ ಕೊಳ್ಳುವ ಕೆಲಸವನ್ನು ಜಟಿಲಗೊಳಿಸುವಂತೆ, ತಮ್ಮ ಮಾರ್ಗವನ್ನು ಕೊಚ್ಚಿಕೊಂಡುಬರುವ ಹಿಮವು ಮುಚ್ಚಿರುವುದನ್ನು ನೋಡಿದ ನಂತರ ಇಳಿಯುವಾಗ ಇಬ್ಬರೂ ಬಹಳ ಎಚ್ಚರಿಕೆ ತೆಗೆದು ಕೊಳ್ಳಬೇಕಾಗಿತ್ತು. ಬಿಸಿ ಬಿಸಿಯಾದ ಸೂಪ್ ನೊಂದಿಗೆ ತಮ್ಮನ್ನು ಭೇಟಿಯಾಗಲು ಮೇಲಿನವರೆಗೂ ಹತ್ತಿ ಬಂದ, ಲೊವೆ ಅವರು ನೋಡಿದ ಮೊದಲವ್ಯಕ್ತಿಯಾಗಿದ್ದರು.
ನಂತರ, ಭಾರತ ಹಾಗೂ ನೇಪಾಳದಲ್ಲಿ ತೇನ್ ಜಿಂಗ್ ರು ಪ್ರಶಂಸೆಯ ಸುರಿಮಳೆಯನ್ನೇ ಕಂಡರು. ಹಿಲೆರಿ ಮತ್ತು ಹಂಟರಿಗೆ ಎಲಿಜೆಬೆತ್ ರಾಣಿಯು[೧೬]'ನೈಟ್' ಬಿರುದುಕೊಟ್ಟು ಸನ್ಮಾನಿಸಿದರೆ, ತೇನ್ ಜಿಂಗ್ ಬ್ರಿಟಿಷ್ ಚಕ್ರಾಧಿಪತ್ಯದ ಮೆಡಲ್[೧೨] ಹಾಗೂ ತನ್ನ ಪ್ರಯಾಣದ ಪ್ರಯತ್ನಗಳಿಗೆ ಬ್ರಿಟಿಷ್ ಸರ್ಕಾರದಿಂದ ಜಾರ್ಜ್ ಮೆಡಲ್ ಗಳೆರಡನ್ನೂ ಪಡೆದರು.[೪][೧೭] ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂರವರು ತೇನ್ ಜಿಂಗ್ ಗೆ 'ನೈಟ್' ಪದವಿ ಕೊಡಲು ಒಪ್ಪಿಗೆಯನ್ನು ನಿರಾಕರಿಸಿದರೆಂದು ಸೂಚಿಸಲ್ಪಟ್ಟಿದೆ.[೪]
“ | It has been a long road ... From a mountain coolie, a bearer of loads, to a wearer of a coat with rows of medals who is carried about in planes and worries about income tax. | ” |
—Tenzing Norgay[೨] |
ಗೌರಿಶಂಕರ ಶಿಖರದ ಮೇಲೆ ತಮ್ಮ ಪಾದವಿಟ್ಟವರು ಅಂತಿಮವಾಗಿ ತೇನ್ ಜಿಂಗ್ ಹಾಗೂ ಹಿಲೆರಿಯೆ ಮೊದಲ ವ್ಯಕ್ತಿಗಳು, ಆದರೆ ಪತ್ರಕರ್ತರು ಇಬ್ಬರು ವ್ಯಕ್ತಿಗಳಲ್ಲಿ ಮೊದಲನೆಯವರು ಯಾರು ಎಂಬ ಕೀರ್ತಿಯು ಯಾರಿಗೆ ಸಲ್ಲ ಬೇಕು, ಹಾಗೂ ಅವರ ಹಿಂಬಾಲಕರಾಗಿ, ಎರಡನೆಯವರು ಯಾರು ಎಂಬುವ ಪ್ರಶ್ನೆಯನ್ನು ಪಟ್ಟುಹಿಡಿದು ಪುನರಾವರ್ತಿಸುತ್ತಿದ್ದರು. ಆರೋಹಣದ ಮುಖಂಡ ಕರ್ನಲ್ ಹಂಟರು ಘೋಷಿಸಿದರು, "ಒಂದು ತಂಡದಂತೆ, ಅವರು ಒಟ್ಟಿಗೆ ಶಿಖರವನ್ನು ತಲುಪಿದರು". ತೇನ್ ಜಿಂಗ್ ರು ಅಂತಹ ತಂಡಗಳ ಒಗ್ಗಟ್ಟು ಹಾಗೂ ಅವರ ಸಾಧನೆಗಳನ್ನು ಒತ್ತಾಯಿಸಿದರು. ಯಾರೊಬ್ಬರಿಂದಲು ಎಂದಿಗೂ ಎಳೆಯಲ್ಪಡುವ ಆಪಾದನೆಗಳನ್ನು ತಿರಸ್ಕರಿಸಿದರು, ಆದರೆ ಹಿಲೆರಿಯೆ ಶಿಖರದ ಮೇಲೆ ತಮ್ಮ ಪಾದ ಮೊದಲು ಇಟ್ಟರೆಂದು ಬಹಿರಂಗ ಪಡಿಸಿದರು. ಅವರು ಮುಕ್ತಾಯಗೊಳಿಸಿದರು: "ಗೌರಿಶಂಕರ ಶಿಖರದ ಮೇಲೆ ಎರಡನೆಯ ವ್ಯಕ್ತಿಯಾಗುವುದು ಅವಮಾನವಾಗುವುದಾದರೆ, ನಾನು ಈ ಅವಮಾನದಿಂದಲೇ ಜೀವಿಸಬೇಕಾಗುತ್ತದೆ". ತೇನ್ ಜಿಂಗ್ ರು ಗೌರಿಶಂಕರ ಶಿಖರದ ಮೇಲೆ ನೇಪಾಳ, ಇಂಗ್ಲೆಂಡ್, ಭಾರತ, ಹಾಗೂ ಸಂಯುಕ್ತ ರಾಷ್ಟ್ರದ ಬಾವುಟಗಳು ಹಾರಾಡುವಂತೆ ಒಂದು ಹಿಮದ ಕೊಡಲಿಯನ್ನು ನೆಟ್ಟರು.[೨]
ಪರ್ವತಾರೋಹಿಗಳು ಶಿಖರದಮೇಲಿಇರುವ ಎಲ್ಲ ಛಾಯಾಚಿತ್ರಗಳು ಕೇವಲ ತೇನ್ ಜಿಗ್ ರೊಬ್ಬರನ್ನೇ ತೋರಿಸುತ್ತವೆ. ಛಾಯಾಚಿತ್ರದಲ್ಲಿ ಹಿಲೆರಿಯು ಏಕಿಲ್ಲವೆಂದು ಪ್ರಶ್ನಿಸಿದಾಗ, ಸರ್ ಎಡ್ಮಂಡ್ ಉತ್ತರಿಸಿದರು, "ತೇನ್ ಜಿಂಗ್ ರಿಗೆ ಕ್ಯಾಮರಾದಿಂದ ಕಾರ್ಯನಡೆಸುವುದು ಗೊತ್ತಿರಲಿಲ್ಲ ಹಾಗೂ ಗೌರಿಶಂಕರದ ತುದಿಯು ಅವರಿಗೆ ಅದನ್ನು ಹೇಗೆ ಉಪಯೊಗಿಸುವುದೆಂದು ಕಲಿಸಲು ಪ್ರಾರಂಭಿಸುವ ಸ್ಥಳವಾಗಿರಲಿಲ್ಲ". ತಮ್ಮ ಜೀವಮಾನದುದ್ದಕ್ಕೂ ತೇನ್ ಜಿಂಗ್ ಮತ್ತು ಹಿಲೆರಿ ಗೆಳೆಯರಾಗಿಯೇ ಉಳಿದರು.
ಕುಟುಂಬ ಜೀವನ
[ಬದಲಾಯಿಸಿ]ತೇನ್ ಜಿಂಗ್ ರು ಮೂರು ಬಾರಿ ವಿವಾಹವಾದರು. ಅವರ ಮೊದಲ ಪತ್ನಿ, ದವ ಫುಟಿ, ೧೯೪೪ ರಲ್ಲಿ ಚಿಕ್ಕ ವಯಸ್ಸಿನಲ್ಲೇ ತೀರಿಹೋದಳು. ಅವರ ಒಬ್ಬ ಪುತ್ರಮ ನಿಮ ದೋರ್ಜೆ, ನಾಲ್ಕನೆಯ ವಯಸ್ಸಿನಲ್ಲಿ ತೀರಿಹೋದನು, ಹಾಗೂ ಇಬ್ಬರು ಪುತ್ರಿಯರು: ಪೆಮ್ ಪೆಮ್, ಆಕೆಯ ಮಗ ತಷಿ ತೇನ್ ಜಿಂಗ್ ಗೌರಿಶಂಕರವನ್ನು ಏರಿದನು, ಮತ್ತು ನಿಮ, ಗೊಲಿಗಲಾಂಗ್ ಎಂಬ ಫಿಲಿಫೈನ್ಸ್ ನ ಸಚಿತ್ರ ರಚನಾಕಾರನನ್ನು ವಿವಾಹವಾದಳು. ತೇನ್ ಜಿಂಗ್ ರ ಎರಡನೆಯ ಪತ್ನಿ ಆನ್ಗ್ ಲಹಮು, ಮೊದಲನೆಯ ಪತ್ನಿಯ ಸೋದರಿಯಾಗಿದ್ದಳು. ಆದರೆ ಆಕೆಗೆ ಮಕ್ಕರಲಿಲ್ಲ, ಆದರೆ ಆವರ ಮಕ್ಕಳಿಗೆ ಸಾಕುತಾಯಿಯಾಗಿದ್ದಳು. ಅವರ ಎರಡನೆಯ ಪತ್ನಿ ಜೀವಂತವಾಗಿರುವಾಗಲೇ ಶೇರ್ಪಾ ಪದ್ಧತಿಯಂತೆ (ಬಹುಪತ್ನಿತ್ವವನ್ನು ನೋಡಿರಿ) ಮೂರನೆಯ ಪತ್ನಿ ಡಾಕ್ಕುವನ್ನು ವಿವಾಹವಾದರು. ಇವರಿಗೆ ಮೂರು ಜನ ಪುತ್ರರು (ನೊರ್ಬು, ಜಮ್ಲಂಗ್, ಹಾಗೂ ದಮೈ), ಮತ್ತು ಒಬ್ಬ ಪುತ್ರಿ ಡೆಕಿ. ಅವರ ಸೋದರರಾದ ನವಾಂಗ್ ಗೊಂಬು ಹಾಗೂ ತೊಪ್ಲೆ ೧೯೫೩ ರ ಗೌರಿಶಂಕರದ ಪ್ರಯಾಣದಲ್ಲಿ, ಭಾಗವಹಿಸಿದ್ದವರೂ ಸೇರಿದಂತೆ ಇತರೆ ಬಳಗದವರು ಇದ್ದರು.[೨][೧೮]
ಮಹಿಳಾ ಹಾಗೂ ಪುರುಷ ಟಿಬೆಟಿಯನ್ನರಲ್ಲಿ ತೇನ್ ಜಿಂಗ್ ರ ಹೆಸರು ಬಹಳ ಜನಪ್ರಿಯವಾಗಿದೆ. ತೇನ್ ಜಿಂಗ್ ಪದವು ಟಿಬೆಟ್ ಮೂಲದಿಂದ ಬಂದಿದೆ, ಹಾಗೂ ಇದರರ್ಥ,"ಅದರಲ್ಲೆಲ್ಲಾ ಸಾರದಲ್ಲಿ ಸಮಚಿತ್ತತೆ' ಅಥವಾ ಪರ್ಯಾಯ ಪದವಾಗಿ, "ಬುದ್ಧನು ಪದೇಶಗಳನ್ನು ಕಾಯುವವನು". ಟಿಬೆಟ್ ಪ್ರದೇಶದಲ್ಲಿ ತೇನ್ ಜಿಂಗ್ ಅತ್ಯಂತ ರೂಢಿಯಲ್ಲಿರುವ ಹೆಸರು.[ಸೂಕ್ತ ಉಲ್ಲೇಖನ ಬೇಕು]
ತೇನ್ ಜಿಂಗ್ ಎಂದಿಗೂ ಓದು ಬರಹ ಕಲಿಯಲಲ್ಲ, ಆದರೆ ಅವರು ಅನೇಕ ಭಾಷೆಗಳನ್ನು ಮಾತನಾಡುತ್ತಿದ್ದರು. ಇವರ ಮಾತೃಭಾಷೆ ಶೇರ್ಪಾ ಅಥವಾ ಟಿಬೆಟಿಯನ್ ಆಗಿತ್ತು (ಅವರು ಬಾಲ್ಯದಿಂದಲೇ ಎರಡೂ ಭಾಷೆಗಳನ್ನು ಮಾತನಾಡುತ್ತಿದ್ದರು). ವಯಸ್ಕನಾದಾಗ ನೇಪಾಳಿಯನ್ನು ನಿರರ್ಗಳವಾಗಿ ಮಾತನಾಡುವುದನ್ನು ಕಲಿತರು.[೨]
ಗೌರಿಶಂಕರ ಆರೋಹಣದ ನಂತರ
[ಬದಲಾಯಿಸಿ]ಜನವರಿ ೧೯೭೫ ರಲ್ಲಿ, ಭೂತಾನಿನ ಹೊಸ ದೊರೆ, ಜಿಗ್ಮೆ ಸಿಂಗ್ಯೆ ವ್ಯಾಂಗುಚುಕ್, ರ ಒಪ್ಪಿಗೆಯ ಮೇರೆಗೆ ತೇನ್ ಜಿಂಗ್ ರು ದೇಶದೊಳಗೆ ಬರಲು ಪ್ರವೇಶ ಪಡೆದ ಮೊದಲ ಅಮೇರಿಕಾದ ಪ್ರವಾಸಿ ತಂಡಕ್ಕೆ ಸಿರ್ದಾರ್ (ಮಾರ್ಗದರ್ಶಕರಾಗಿ) ಸೇವೆ ಸಲ್ಲಿಸಿದರು. (ಡ್ರೆಗನ್ ಫ್ಲೈವಾರ್ಸ್ ಬ್ಲಾಗ್ [೨] ಹಾಗೂ ೧೯೯೨ ೨೮ ಜೂನ್ ನ ಬೌಲ್ಡರ್ ಡೈಲಿ ಕ್ಯಾಮರಾ ಪುರವಣಿ, "ಸಮಯದ ಮುಖಾಂತರ ಕಾಲ್ನಡಿಗೆ ಸಾಹಸ", ಪುಟ ೧ಸಿ, ೩ಸಿ). Bಆಗ ಪರ್ವತ ಪ್ರಯಾಣ (ಈಗ ಪರ್ವತ ಪ್ರಯಾಣ - ಸೊಬೆಕ್ ಎಂದು ಕರೆಯಲ್ಪಡುವ) ಎಂದು ಹೆಸರಿಸಲ್ಪಟ್ಟ ಒಂದು ಕಂಪನಿಯಿಂದ ಒಟ್ಟಿಗೆ ಬಂದ, ತಂಡವು ಚಾರಣವನ್ನು ಪ್ರಾರಂಭಿಸುವ ಮೊದಲು ಭಾರತದಲ್ಲಿ ತೇನ್ ಜಿಂಗ್ ರನ್ನು ಭೇಟಿಮಾಡಿತು. ಉತ್ತರ ಭೂತಾನಿನ, ಪ್ಯಾರೋದಲ್ಲಿ ಅಧಿಕೃತ ಚಾರಣವು ಪ್ರಾರಂಭವಾಯುತು, ಹಾಗೂ ನೇಪಾಳ ಮತ್ತು ಸಿಕ್ಕಿಂ ಮುಖಾಂತರ ಭಾರತಕ್ಕೆ ಹಿಂದಿರುಗುವ ಮುಂಚೆ, ಬೌದ್ಧರ ಪುರಾತನ ಆಶ್ರಮ, ಹುಲಿಗಳ ನಿವಾಸ (ತಕ್ತ್ ಸಂಗ್) ಕ್ಕೆ ಒಂದು ಭೇಟಿಯೂ ಸೇರಿತ್ತು. ತೇನ್ ಜಿಂಗ್ ನು ಸಿಕ್ಕಿಂ ರಾಜನಿಗೆ (ಆ ದೇಶದ ಕೊನೆಯ ದೊರೆ, ಅದು ಈಗ ಭಾರತದ ಒಂದು ಭಾಗವಾಗಿದೆ) ತನ್ನ ತಂಡವನ್ನು ಸಹ ಪರಿಚಯಿಸಿದರು, ಹಾಗೂ ಒಂದು ಬೀಳ್ಕೊಡುಗೆ ಸಮಾರಂಭಕ್ಕೆಂದು ಭಾರತದಲ್ಲಿ ತನ್ನ ಮನೆಗೆ ಅವರನ್ನು ಕರೆತಂದಿದ್ದನು.
ನಂತರ ತೇನ್ ಜಿಂಗ್ ಡಾರ್ಜಿಲಿಂಗ್ ನಲ್ಲಿನ ಹಿಮಾಲಯ ಪರ್ವತಾರೋಹಣ ಸಂಸ್ಥೆಯಲ್ಲಿ ಚಾರಣ ತರಬೇತಿಯ ನಿರ್ದೇಶಕರಾದರು. ೧೯೭೮ ರಲ್ಲಿ, ಅವರು ಹಿಮಾಲಯದಲ್ಲಿ ಚಾರಣದ ಸಾಹಸಗಳನ್ನು ಹೇಳಿಕೊಡುವ, ತೇನ್ ಜಿಂಗ್ ನೋರ್ಗೆ ಸಾಹಸಗಳು [೧೯] ಎಂಬ ಒಂದು ಕಂಪನಿ ಸ್ಥಾಪಿಸಿದರು. ೨೦೦೩ ರಂತೆ, ೧೯೯೬ ರಲ್ಲಿ ಗೌರಿಶಂಕರ ಶಿಖರದ ಆರೋಹಣ ಸ್ವತಃ ಮಾಡಿದ, ಅವರ ಮಗ ಜಮ್ಲಿಂಗ್ ತೇನ್ ಜಿಂಗ್ ನೋರ್ಗೆಯಿಂದ ಆ ಕಂಪನಿಯು ನಡೆಸಲ್ಪಡುತ್ತಿದೆ.
ಪ್ರಶಸ್ತಿಗಳು
[ಬದಲಾಯಿಸಿ]- ೧೯೫೩ ರಲ್ಲಿ, ತೇನ್ ಜಿಂಗ್ ಎಲಿಜೆಬೆತ್ II ರಿಂದ ಜಾರ್ಜ್ ಮೆಡಲ್(ಜಿ ಎಮ್) ಪಡೆದರು, ಹಾಗೂ ಎಲಿಜೆಬೆತ್ II ಮಹಾರಾಣಿಯ ಪಟ್ಟಾಭಿಷೇಕದ ಮೆಡಲ್ ಅನ್ನು ಗೌರಿಶಂಕರ ತಂಡದ ಉಳಿದವರ ಜೊತೆ ಸಹ, ಪಡೆದರು.
- ೧೯೫೩ ರಲ್ಲಿ, ನೇಪಾಳದ ದೊರೆ ತ್ರಿಭುವನರೂ ಸಹ ಮೊದಲ ದರ್ಜೆಯ ನೇಪಾಳದ ನಕ್ಷತ್ರವೆಂಬ ಗೌರವದ ಜೊತೆ ಅವರನ್ನು ಸನ್ಮಾನಿಸಿದರು (ಸುಪ್ರದಿಪ್ತ - ಮಾನ್ಯಬಾರಾ - ನೇಪಾಳ - ತಾರಾ ).[೨೦],[೨೧]
- ೧೯೫೯ ರಲ್ಲಿ, ಭಾರತ ಸರ್ಕಾರವು ಭಾರತದ ಮೂರನೆಯ ಅತ್ಯಂತ ಉನ್ನತ ನಾಗರಿಕ ಪ್ರಶಸ್ತಿ, ಪದ್ಮ ಭೂಷಣ ಪ್ರಶಸ್ತಿಯನ್ನು ಅವರಿಗೆ ನೀಡಿತು.
- ೧೯೭೮ ರಲ್ಲಿ, ಭಾರತ ಸರ್ಕಾರವು ಅವರ ಗೌರವಾರ್ಥವಾಗಿ ತೇನ್ ಜಿಂಗ್ ನೋರ್ಗೆ ಪ್ರಶಸ್ತಿಯನ್ನು ಸ್ಥಾಪಿಸಿತು.
ತೇನ್ ಜಿಂಗ್ ತಮ್ಮ ವೃತ್ತಿ ಜೀವನದ ಮೂಲಕ ಅನೇಕ ಇತರೆ ಪದಕಗಳನ್ನು ಸಹ ಪಡೆದರು.
ಮರಣ
[ಬದಲಾಯಿಸಿ]ತೇನ್ ಜಿಂಗ್ ರು ತಮ್ಮ ೭೧ ನೇ ವಯಸ್ಸಿನಲ್ಲಿ, ೧೯೮೬ ರಲ್ಲಿ ಭಾರತದ, ಪಶ್ಚಿಮ ಬಂಗಾಳದ, ಡಾರ್ಜಿಲಿಂಗ್ ನಲ್ಲಿ ಮೆದುಳು ಬೇನೆಯಂದ ಮರಣಿಸಿದರು.
ಪರಂಪರೆ
[ಬದಲಾಯಿಸಿ]- ಎಲೆತ್ಟ್ರಾನಿಕ್ ಡಿಸೈನ್ ಅಟೋಮೇಷನ್ ಕೈಗಾರಿಕೆ, ತನ್ನ ಸೈನೋಪ್ಸಿಸ್ ನಲ್ಲಿ ಉಪಯೋಗಿಸುವ ಸಮಾಜದ ಉಪಕಾರ ಮಾಡುವ ಇಂಟರೋಪೆರಬಲ್ ವಿನ್ಯಾಸದ ಹರಿವಿನ ಮೇಲೆ ಸಹಭಾಗಿತ್ವದ ಇಡಿಎ ಒದಗಿಸುವ ಗೌರವಿಸಲು, ವಾರ್ಷಿಕ ತೇನ್ ಜಿಂಗ್ ನೋರ್ಗೆ ಇಂಟೆರೋಪೆರಬಿಲಿಟಿ ಸಾಧನೆಯ ಪ್ರಶಸ್ತಿಯನ್ನು ಸ್ಥಾಪಿಸಿತು.[೨೨]
- ೨೦೦೮ ರ ಜನವರಿಯಲ್ಲಿ, ಆಜೋಡಿಯ ಗೌರವಾರ್ಥ ಹಾಗೂ ಅವರ ಸಾಧನೆಗಾಗಿ ಲುಕ್ಲ ವಿಮಾನ ನಿಲ್ದಾಣವನ್ನು ತೇನ್ ಜಿಂಗ್ - ಹಿಲೆರಿ ವಿಮಾನ ನಿಲ್ದಾಣವೆಂದು ಪುನರ್ನಾಮಕರಣವಾಯಿತು.[೨೩]
ಟಿಪ್ಪಣಿಗಳು
[ಬದಲಾಯಿಸಿ]- ↑ "ಗೌರಿಶಂಕರ ಶಿಖರದ ವಿಜಯಿಗಳು". Archived from the original on 2013-08-25. Retrieved 2010-12-17.
- ↑ ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ ತೇನ್ ಜಿಂಗ್ ನೋರ್ಗೆ ಹಾಗೂ ಜೇಮ್ಸ್ ರ್ಯಾಮ್ಸೆ ಉಲ್ಲಮನ್ , ಗೌರಿಶಂಕರ ಶಿಖರದ ವ್ಯಕ್ತಿ (೧೯೫೫, ಹಿಮದ ಹುಲಿಯೆದೂ )ಸಹ ಪ್ರಕಟಿಸಲ್ಪಟ್ಟಿದೆ
- ↑ ಡಗ್ಲಾಸ್, ರಿಂದ ಪ್ರಕಟಿತ (ಜನವರಿ ೧೩, ೨೦೦೮). "ಗೌರಿಶಂಕರದ ಎತ್ತರಗಳಿಂದ ನೇಪಾಳಿ ರಾಜಕೀಯದ ಕತ್ತಲೆಯ ಾಳದವರೆಗೆ" ದಿ ಅಬ್ಸರ್ವರ್ . ಮೇ ೩೦, ೨೦೦೭ರಂದು ಪರಿಷ್ಕರಿಸಲಾಯಿತು.
- ↑ ೪.೦ ೪.೧ ೪.೨ ಪೀಟರ್ ಹೆಚ್. ಹ್ಯಾನ್ಸೆನ್, ‘Tenzing Norgay [Sherpa Tenzing] (೧೯೧೪–೧೯೮೬)’ (subscription required), Oxford Dictionary of National Biography , Oxford University Press, ೨೦೦೪, doi:10.1093/ref:odnb/50064, accessed ೧೮ January ೨೦೦೮
- ↑ Ortner, Sherry B. (2001). Life and Death on Mt. Everest: Sherpas and Himalayan Mountaineering. Princeton University Press. p. 112. ISBN 0691074488.
- ↑ ಎಡ್ಮಂಡ್ ಹಿಲ್ಲೆರಿ
- ↑ ನ್ಯೂಜಿಲೆಂಡ್ ನ ಹಿಲೆರಿ ಹಾಗೂ ತೇನ್ ಜಿಂಗ್ ಶಿಖರವನ್ನು ತಲುಪಿದರು , ರಾಯಿಟರ್ (ಗಾರ್ಡಿಯನ್ ನಲ್ಲಿ, ಜೂನ್ ೨, ೧೯೫೩)
- ↑ ತುದಿಯನ್ನು ತಲುಪಿದ್ದು Archived 2008-02-16 ವೇಬ್ಯಾಕ್ ಮೆಷಿನ್ ನಲ್ಲಿ. ರಾಯಲ್ ಜಿಯಾಗ್ರಫಿಕಲ್ ಸೊಸೈಟಿ, ಮರುಪಡೆದದ್ದು ಜನವರಿ ೧೩, ೨೦೦೮.
- ↑ ಹಿಲೆರಿ, ಎಡ್ಮಂಡ್, ಉನ್ನತ ಸಾಹಸ: ಗೌರಿಶಂಕರ ಶಿಖರದ ಏರುವಿಕೆಯ ಮೊದಲ ಸತ್ಯ ಕಥೆ
- ↑ ಆರೋಹಣ: ಟು ಲೈವ್ಸ್ ಎಕ್ಸಪ್ಲೋರ್ಡ್: ಸರ್ ಎಡ್ಮಂಡ್ ಹಿಲೆರಿ ಹಾಗೂ ಪೀಟರ್ ಹಿಲೆರಿ ಅವರ ಆತ್ಮಚೆರಿತ್ರೆಗಳು
- ↑ ಗೌರಿಶಂಕರ ಶಿಖರವು ಯೋಚಿಸುವಷ್ಟು ಎತ್ತರವಿಲ್ಲ ಎಜೆನ್ಜ್ ಫ್ರಾನ್ಸ್ - ಪ್ರೆಸ್ (on abc.net.au), ೧೦ ಅಕ್ಟೋಬರ್ ೨೦೦೫
- ↑ ೧೨.೦ ೧೨.೧ PBS, NOVA, ಶೀಖರವನ್ನು ಮುಟ್ಟಿದವರಲ್ಲಿ ಪ್ರಥಮರು , ಮರುಸಂಪಾದಿಸಲಾಗಿ ನವೆಂಬರ್ ೨೦೦೦. ೨೦೦೮ರ ಮಾರ್ಚ್ ೨೩ರಂದು ಮರುಸಂಪಾದಿಸಲಾಗಿದೆ.
- ↑ ಮರಣದ ಪ್ರಕಟಣೆ: ಸರ್ ಎಡ್ಮಂಡ್ ಹಿಲೆರಿ ಬಿಬಿಸಿ ನ್ಯೂಸ್, ೧೧ ಜನವರಿ ೨೦೦೮
- ↑ ತೇನ್ ಜಿಂಗ್ ರು ಮಂಜಿನಲ್ಲಿ ಕೆಲವು ಚಾಕೊಲೇಟ್ ಗಳನ್ನು ಹಾಗೂ ಹಿಲೆರಿ ತಮಗೆ ದೊರಕಿದ ಒಂದು ಕ್ರಿಸ್ತನ ಕ್ರಾಸ್ ಅನ್ನು ಬಿಟ್ಟು ಬಂದರು
- ↑ ಜೋನಾ ರೈಟ್ (೨೦೦೩). "ಆ ಛಾಯಾಚಿತ್ರಗಳು Archived 2015-09-05 ವೇಬ್ಯಾಕ್ ಮೆಷಿನ್ ನಲ್ಲಿ.", ಎವೆರೆಸ್ಟ್, ಮೇಲೆ ಹತ್ತು ನಿಂತ ಸಂಭ್ರಮದ ಕ್ಷಣದಲ್ಲಿ , ಇವರಿಂದ ರಾಯಲ್ ಫೋಟೋಗ್ರಫಿಕ್ ಸೊಸೈಟಿ . ಸಿಮನ್ ಅಂಡ್ ಸ್ಚ್ಯುಸ್ಟರ್, ನ್ಯೂಯಾರ್ಕ್. ISBN ೦೬೮೮೧೬೮೯೪೯ ೨೦೦೭ರ ಜನವರಿ ೧೫ರಂದು ಪಡೆಯಲಾಯಿತು.
- ↑ The London Gazette: no. 39886. p. 3273. 12 June 1953. Retrieved 2008-01-11.
- ↑ Vallely, Paul (10 May 1986). "Man of the mountains Tenzing dies". The Times.
- ↑ ತೇನ್ಸಿಂಗ್ ನಾರ್ಗೆ ಮತ್ತು ಮಾಲ್ಕೋಮ್ ಬಾರ್ನೆಸ್ ಎವೆರೆಸ್ಟ್ ಅನ್ನು ಹತ್ತಿದ ನಂತರ (೧೯೭೮)
- ↑ "ಆರ್ಕೈವ್ ನಕಲು". Archived from the original on 2005-09-11. Retrieved 2010-12-17.
- ↑ "ಆರ್ಕೈವ್ ನಕಲು". Archived from the original on 2013-12-12. Retrieved 2010-12-17.
- ↑ [೧]
- ↑ ತೇನ್ಸಿಂಗ್ ನಾರ್ಗೆ ಅವರಿಗೆ ಅವರ ಸಶಕ್ತತೆ ಸಾಮರ್ಥ್ಯದ ಬಗ್ಗೆ ಪ್ರಶಸ್ತಿ Archived 2010-08-18 ವೇಬ್ಯಾಕ್ ಮೆಷಿನ್ ನಲ್ಲಿ..
- ↑ http://www.worldhum.com/weblog/item/introducing_tenzing_hillary_airport_20080211/ Archived 2008-12-10 ವೇಬ್ಯಾಕ್ ಮೆಷಿನ್ ನಲ್ಲಿ. World Hum | Travel | Introducing Tenzing Hillary Airport
ಉಲ್ಲೇಖಗಳು
[ಬದಲಾಯಿಸಿ]- ಟೊನಿ ಆಸ್ಟಿಲ್, "ಗೌರಿಶಂಕರ ಶಿಖರದ ಸ್ಥಳ ಶೋಧನೆ ೧೯೩೫" (೨೦೦೫)
- ಜಾರ್ಜ್ ಬ್ಯಾಂಡ್, ತೆರೆದಿಟ್ಟ,ಗೌರಿಶಂಕರ (೨೦೦೫)೧೯೫೩ ರ ಪ್ರಯಾಣದ ಒಂದು ವರದಿ.
- ತಾಷಿ ತೇನ್ ಜಿಂಗ್ ಮತ್ತು ಜುಡಿ ತೇನ್ ಜಿಂಗ್, ತೇನ್ ಜಿಂಗ್ ನೋರ್ಗೆ ಹಾಗೂ ಗೌರಿಶಂಕರದ ಶೇರ್ಪಾಗಳು (೨೦೦೩)
- ಎಡ್ ವೆಬ್ ಸ್ಟರ್, ರಾಜ್ಯದಲ್ಲಿ ಹಿಮ (೨೦೦೦)
- ಎಡ್ ಡಗ್ಲಸ್, ತೇನ್ ಜಿಂಗ್: ಗೌರ್ಇಶಂಕರದ ನಾಯಕ (೨೦೦೩)
- ಜಾಮ್ಲಿಂಗ್ ತೇನ್ ಜಿಂಗ್ ನೋರ್ಗೆ/೦}, ನಮ್ಮ ತಂದೆಯವರ ಾತ್ಮವನ್ನು ಸ್ಪರ್ಶಸುತ್ತಾ (೨೦೦೨)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ರಾಯಲ್ ಜಿಯಾಗ್ರಫಿಕಲ್ ಸೊಸೈಟಿಯಿಂದ ತೇನ್ ಜಿಂಗ್ ಮೇಲೆ ಪುರವಣಿ Archived 2007-04-14 ವೇಬ್ಯಾಕ್ ಮೆಷಿನ್ ನಲ್ಲಿ.
- ಜನಗಳ ಡೇಟಾಬೇಸ್ನಿಂದ ಪ್ರವೇಶ
- [೩] ಗೌರಿಶಂಕರ ಶಿಖರ: ಸ್ಥಳ ಪರಿಶೀಲನೆ ೧೯೩೫
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using infobox person with multiple spouses
- Articles with hCards
- Articles with attributed pull quotes
- Articles with unsourced statements from August 2009
- Articles with invalid date parameter in template
- Commons link is locally defined
- Commons category with page title different than on Wikidata
- 1914ರಲ್ಲಿ ಜನಿಸಿದವರು
- 1986 ಮರಣ
- ಜಾರ್ಜ್ ಮೆಡಲ್ ಅನ್ನು ಪಡೆದುಕೊಂಡವರು
- ಭಾರತೀಯ ಬೌದ್ಧಮತೀಯರು
- ಭಾರತೀಯ ಪರ್ವತಾರೋಹಿಗಳು
- ನೇಪಾಳಿ ಬೌದ್ಧರು
- ನೇಪಾಳಿ ಪರ್ವತಾರೋಹಿಗಳು
- ಗೌರಿಶಂಕರ ಶಿಖರದ ಶೇರ್ಪಾ ಆರೋಹಿಗಳು
- ನೇಪಾಳಿ ಮೂಲದ ಭಾರತೀಯ ವ್ಯಕ್ತಿಗಳು
- ಗೌರಿಶಂಕರ ಶಿಖರವನ್ನು ಹತ್ತಿದ ಭಾರತೀಯ ಆರೋಹಿಗಳು
- ಪರ್ವತಗಳು
- ಪರ್ವತಾರೋಹಿಗಳು
- ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು