ಗಣಕಯಂತ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗಣಕ ಅಥವಾ ಗಣಕಯಂತ್ರ [ಇಂಗ್ಲಿಷ್: Computer ಕಂಪ್ಯೂಟರ್] ಎನ್ನುವುದು ಯಾವುದೇ ನಿರ್ದಿಷ್ಟ ಕಾರ್ಯಗಳನ್ನು ಅದರ ಪ್ರೋಗ್ರಾಂಗಳ (ಆದೇಶ ಸರಣೆಗಳ) ನೆರವಿನೊಂದಿಗೆ ಬಳಕೆದಾರರ ಆದೇಶದಂತೆ ಸ್ವತಃ ನಿರ್ವಹಿಸುವ ಒಂದು ವಿದ್ಯುನ್ಮಾನ ಸಾಧನವಾಗಿದೆ.

ಚಿತ್ರ: ಸೂಪರ್ ಕಂಪ್ಯೂಟರ್‌

ಕಂಪ್ಯೂಟರ್ ವಿಚಾರ ಬಂದಾಗ, ಬಹಳಷ್ಟು ಮಂದಿ ಮನೆಗಳಲ್ಲಿ ಹಾಗೂ ಕಚೇರಿಗಳಲ್ಲಿ ಹೆಚ್ಚಾಗಿ ಕಾಣಸಿಗುವ ಡೆಸ್ಕ್ ಟಾಪ್ (desktop) ಹಾಗೂ ಲ್ಯಾಪ್ ಟಾಪ್ (laptop) ಕಂಪ್ಯೂಟರ್‌ಗಳಷ್ಟೆ ಕಂಪ್ಯೂಟರ್‌ಗಳೆಂದು ಭಾವಿಸಿದ್ದಾರೆ. ಆದರೆ ಅವುಗಳು ಕಂಪ್ಯೂಟರ್‌ನ ಒಂದು ಪ್ರಕಾರಗಳಷ್ಟೆ ಆಗಿವೆ. ಕನ್ಸೊಲ್ (console), ನೆಟ್^ಬುಕ್ (netbook), ಸರ್ವರ್ (server), ಸ್ಮಾರ್ಟ್^ಫೋನ್ (smartphone), ಟ್ಯಾಬ್ಲೆಟ್ (tablet) ಇತ್ಯಾದಿ ಕೆಲ ವಿದ್ಯುನ್ಮಾನ ಸಾಧನಗಳು ಸಹ ಕಂಪ್ಯೂಟರ್‌ನ ಪ್ರಕಾರಗಳೇ ಆಗಿವೆ.


ಚಿತ್ರ: ಡೆಸ್ಕಟಾಪ್ ಕಂಪ್ಯೂಟರ್

ವ್ಯುತ್ಪತ್ತಿ[ಬದಲಾಯಿಸಿ]

ಇಂಗ್ಲಿಷ್‌ನ 'ಕಂಪ್ಯೂಟರ್' ಎಂಬ ಪದದ ಮೂಲವು ಗ್ರೀಕ್‌ನ 'computare' ಎಂಬ ಪದ ಎಂದು ಹಾಗು ಅದರ ಅರ್ಥ 'ಲೆಕ್ಕಚ್ಚಾರ ಮಾಡುವುದು' (calculate) ಎಂದು ತಿಳಿಯಲಾಗಿದೆ.

'ಕಂಪ್ಯೂಟರ್' ಎಂಬ ಪದವನ್ನು ಹಿಂದೆ ಲೆಕ್ಕಚಾರದ ಕೆಲಸವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳಿಗೆ ನೀಡಲಾಗಿತ್ತು ಹಾಗೂ ಅವರನ್ನು ಕಂಪ್ಯೂಟರ್‌ಗಳೆಂದು (ಡಾಕ್ಟರ್, ಲಾಯರ್, ಪೋಲೀಸ್ ಎಂಬಂತೆ) ಕರೆಯಲಾಗುತಿತ್ತು. ನಂತರ ಆ ಮಾನವ ಕಂಪ್ಯೂಟರ್‌ಗಳ ಜಾಗಕ್ಕೆ ಯಾಂತ್ರಿಕ ಸಾಧನಗಳು ಬಂದೊಡನೆಯೇ ಅವಕ್ಕೆ 'ಕಂಪ್ಯೂಟರ್' ಎಂಬ ಹೆಸರನ್ನು ನೀಡಲಾಯಿತು.

ಚಿತ್ರ: NACA High Speed Flight Station "Computer Room" - ಮಾನವ ಕಂಪ್ಯೂಟರ್‌ಗಳು

ಚರಿತ್ರೆ[ಬದಲಾಯಿಸಿ]

  • ಕಂಪ್ಯೂಟರ್‌ಗಳು ಇಂದು ತಾಂತ್ರಿಕವಾಗಿ ಬಹಳಷ್ಟು ಮುಂದುವರಿದಿವೆ ಹಾಗೂ ಅವು ದಿನೇದಿನೇ ಮುಂದುವರೆಯುತ್ತಲೇ ಇವೆ. ಆದರೆ ಅವು ಈಗಿನ ಸ್ಥಿತಿಯನ್ನು ತಲುಪಲು ಬಹಳಷ್ಟು ವರ್ಷಗಳನ್ನೇ ತೆಗೆದುಕೊಂಡಿರುತ್ತವೆ. ೨೦ ನೇ ಶತಮಾನಕ್ಕಿಂತ ಮುಂಚೆ ಹೆಚ್ಚಿನ ಲೆಕ್ಕಚ್ಚಾರಗಳನ್ನು ಮಾನವರು ಸ್ವತಃ ಮಾಡುತ್ತಿದ್ದರು. ಆಗ ಅವರು ಈಗಿನ ಕಂಪ್ಯೂಟರ್‌ಗಳಿಗೆ ಪರ್ಯಾಯವಾಗಿ ಇತರೆ ಸಾಧನ ಸಲಕರಣೆಗಳನ್ನು ಬಳಸುತ್ತಿದ್ದರು.
ಚಿತ್ರ: ಮಣಿಕಟ್ಟು (Abacus) - ಹಿಂದಿನ ಒಂದು ಡಿಜಿಟಲ್ ಕಂಪ್ಯೂಟರ್ ಎಂದು ಪರಿಗಣಿಸಲಾಗಿರುವ ಸಾಧನ.
ಚಿತ್ರ: Antikythera mechanism - ಒಂದು ಪುರಾತನ ಅನಾಲಾಗ್ ಕಂಪ್ಯೂಟರ್ ಎಂದು ಪರಿಗಣಿಸಲಾಗಿರುವ ಸಾಧನ.
  • ಕ್ರಿ.ಶ ೧೮೨೦ರ ದಶಕದಲ್ಲಿ ಚಾರ್ಲ್ಸ್ ಬಾಬೇಜ್‍ ಎಂಬುವರು ಮೊದಲ ಯಾಂತ್ರಿಕ ಕಂಪ್ಯೂಟರ್ ಎಂದು ಪರಿಗಣಿಸಲಾಗಿರುವ ಅಂತರ ಎಂಜಿನ್‌ನನ್ನು (Difference Engine) ಅಭಿವೃದ್ಧಿ ಪಡಿಸಲು ತೊಡಗಿದರು ಆದರೆ ನಿಧಿಯ ಕೊರತೆಯಿಂದಾಗಿ ಅವರಿಗೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರು ಮಾಡಿದ ಈ ಪ್ರಯತ್ನವನ್ನು ಈಗಿನ ಆಧುನಿಕ ಕಂಪ್ಯೂಟರ್‌ಗಳ ವಿಕಾಸಕ್ಕೆ ಬಹುಮುಖ್ಯ ಕಾರಣ ಎಂದು ಪರಿಗಣಿಸಲಾಗಿದೆ (ಈ ಕಾರಣದಿಂದಾಗಿ ಅವರನ್ನು 'ಕಂಪ್ಯೂಟರ್‌ನ ಪಿತಾಮಹ' ಎಂದು ಪರಿಗಣಿಸಲಾಗಿದೆ).
ಚಿತ್ರ: ಲಂಡನ್^ನ ವಿಜ್ಞಾನ ವಸ್ತುಸಂಗ್ರಹಾಲಯದ ಚಾರ್ಲ್ಸ್ ಬಾಬೇಜ್‍ರ ಅಂತರ ಎಂಜಿನ್ನಿನ ನಕ್ಷೆಯನ್ನು ಉಪಯೋಗಿಸಿ ನಿರ್ಮಿಸಿರುವ ಅಂತರ ಎಂಜಿನು (೨).

ವರ್ಗಗಳು[ಬದಲಾಯಿಸಿ]

ಕಂಪ್ಯೂಟರ್‌ಗಳನ್ನು ಮುಖ್ಯವಾಗಿ ಎರಡು ಪ್ರಕಾರಗಳಲ್ಲಿ ವರ್ಗೀಕರಿಸಲಾಗುತ್ತದೆ.

೧.ಕಾರ್ಯಾ ಆಧಾರಿತ ವರ್ಗಗಳು

  • ಅನಲಾಗ್ ಕಂಪ್ಯೂಟರ್‌ಗಳು (Analog Computers) : ಇವು ಭೌತಿಕ ಪ್ರಮಾಣಗಳನ್ನು (ಉದಾ: ಒತ್ತಡ, ಉಷ್ಣತೆ, ಉದ್ದ ಇತ್ಯಾದಿ) ಅಳೆದು ಅವುಗಳ ಮೌಲ್ಯಗಳನ್ನು ಸೂಚಿಸುವ ಕಂಪ್ಯೂಟರ್‌ಗಳಾಗಿವೆ. ಉದಾ:
  • ಡಿಜಿಟಲ್ ಕಂಪ್ಯೂಟರ್‌ಗಳು (Digital Computers) : ಇವು ಎಣಿಕೆ ಮಾಡುವ ಕಂಪ್ಯೂಟರ್‌ಗಳಾಗಿವೆ. ಉದಾ: ಡಿಜಿಟಲ್ ಕ್ಯಾಲ್^ಕ್ಯುಲೇಟರ್, ಡಿಜಿಟಲ್ ಗಡಿಯಾರ ಇತ್ಯಾದಿ.
  • ಹೈಬ್ರಿಡ್ ಕಂಪ್ಯೂಟರ್‌ಗಳು (Hybrid Computers) : ಇವು ಅನಲಾಗ್ ಹಾಗೂ ಡಿಜಿಟಲ್ ಕಂಪ್ಯೂಟರ್‌ಗಳ ಲಕ್ಷಣಗಳನ್ನು ಸೇರಿಸಿ ನಿರ್ಮಿಸಿರುವ ಕಂಪ್ಯೂಟರ್‌ಗಳಾಗಿವೆ. ಉದಾ:


೨. ಗಾತ್ರ ಆಧಾರಿತ ವರ್ಗಗಳು

  • ಸೂಪರ್ ಕಂಪ್ಯೂಟರ್‌ಗಳು (Super Computers) : ಇವು ಕಂಪ್ಯೂಟರ್‌ಗಳಲ್ಲಿ ಅತ್ಯಂತ ಹೆಚ್ಚಿನ ವೇಗವನ್ನು ಹೊಂದಿರುವ, ಹೆಚ್ಚಿನ ಸಂಗ್ರಹಣ ಸಾಮರ್ಥ್ಯವನ್ನು ಹೊಂದಿರುವ, ಗಾತ್ರದಲ್ಲಿ ದೊಡ್ಡದಾಗಿರುವ ಹಾಗೂ ಅತ್ಯಂತ ದುಬಾರಿಯಾದ ಕಂಪ್ಯೂಟರ್‌ಗಳಾಗಿವೆ. ಸಾಮಾನ್ಯವಾಗಿ ಇವುಗಳನ್ನು ಹವಾಮಾನ ಮುನ್ಸೂಚನೆ, ವಾತವರಣ ಸಂಶೋಧನೆ, ತೈಲ ಮತ್ತು ಅನಿಲ ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿ ಸಂಕೀರ್ಣ ಲೆಕ್ಕಚ್ಚಾರಗಳಂತ ಕಾರ್ಯಗಳನ್ನು ವೇಗವಾಗಿ ಮಾಡಲು ಹಾಗೂ ಆ ಕ್ಷೇತ್ರಗಳಿಗೆ ಸಂಬಂಧಿಸಿದ ಅಗಾಧ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಬಳಸಲಾಗುತ್ತದೆ.
  • ಮೇನ್^ಫ್ರೇಮ್ ಕಂಪ್ಯೂಟರ್‌ಗಳು (Mainframe Computers) : ಇವು ಗಾತ್ರದಲ್ಲಿ ದೊಡ್ಡದಾದ ಹಾಗೂ ಹೆಚ್ಚಿನ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿರುವ ಕಂಪ್ಯೂಟರ್‌ಗಳಾಗಿವೆ. ಸಾಮಾನ್ಯವಾಗಿ ಈ ಬಗೆಯ ಕಂಪ್ಯೂಟರ್‌ಗಳನ್ನು ದೊಡ್ಡ ಕಂಪನಿಗಳು, ಬ್ಯಾಂಕುಗಳು, ಸರ್ಕಾರದ ಇಲಾಖೆಗಳು ಇತ್ಯಾದಿ ಸಂಸ್ಥೆಗಳು ಬಳಸುತ್ತವೆ.
ಚಿತ್ರ: ಮೇನ್^ಫ್ರೇಮ್ ಕಂಪ್ಯೂಟರ್
  • ಮಿನಿ ಕಂಪ್ಯೂಟರ್‌ಗಳು (Mini Computers) : ಇವು ಹೆಸರು ಸೂಚಿಸುವಂತೆ ಚಿಕ್ಕ ಗಾತ್ರದ ಕಂಪ್ಯೂಟರ್‌ಗಳಾಗಿರದೆ, ಏಕಕಾಲದಲ್ಲಿ ಬಹಳಷ್ಟು ಬಳಕೆದಾರಿಗೆ ಅನುವು ಮಾಡಿಕೊಡವ ಕಂಪ್ಯೂಟರ್‌ಗಳಾಗಿರುತ್ತವೆ.

ms world==

ms world==

"https://kn.wikipedia.org/w/index.php?title=ಗಣಕಯಂತ್ರ&oldid=595244" ಇಂದ ಪಡೆಯಲ್ಪಟ್ಟಿದೆ