ಸುಸೇ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಸೇ ಆವೃತ್ತಿಗಳು
೧.೦ ೧೯೯೪
೨.೦ ????
೩.೦ ೧೯೯೫
೪.೦ ೧೯೯೬
೫.೦ ನವೆಂಬರ್ ೧೯೯೭
೬.೦ ಜನವರಿ ೧೯೯೯
೭.೦ ಸಪ್ಟಂಬರ್ ೨೦೦೦
೮.೦ ಏಪ್ರಿಲ್ ೨೦೦೨
೯.೦ ಅಕ್ಟೋಬರ್ ೨೦೦೩
೧೦.೦ ಅಕ್ಟೋಬರ್ ೨೦೦೫

ಸುಸೇ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಯ ಮುಖ್ಯ ವಿತರಣೆಗಳಲ್ಲಿ ಒಂದು. ಜರ್ಮನಿಯಲ್ಲಿ ನಿರ್ಮಿಸಲಾಗುವ ಸುಸೇ ನಾವೆಲ್ ಸಂಸ್ಥೆಯ ಒಂದು ಭಾಗ.

ಸುಸೇ ಲಿನಕ್ಸ್ ಮೊದಲಿಗೆ ಲಿನಕ್ಸ್ ನ ಸ್ಲ್ಯಾಕ್‍ವೇರ್ ವಿತರಣೆಯನ್ನು ಆಧರಿಸಿ ನಿರ್ಮಿಸಲಾದದ್ದು. ೧೯೯೨ ರಲ್ಲಿ ಪೀಟರ್ ಮ್ಯಾಕ್‍ಡೊನಾಲ್ಡ್ ಲಿನಕ್ಸ್ ನ ಎಸ್‍ಎಲ್‍ಎಸ್ ವಿತರಣೆಯನ್ನು ಸ್ಥಾಪಿಸಿದರು. ಇದು ಎಕ್ಸ್-ವಿಂಡೋಸ್ ವ್ಯವಸ್ಥೆಯನ್ನು ಒಳಗೊಂಡ ಮೊದಲ ಸಂಪೂರ್ಣ ಲಿನಕ್ಸ್ ವಿತರಣೆಯಾಗಿತ್ತು. ನಂತರ ನಿರ್ಮಿಸಲಾದ ಸ್ಲ್ಯಾಕ್‍ವೇರ್ ಎಸ್‍ಎಲ್‍ಎಸ್ ಅನ್ನು ಆಧರಿಸಿದ್ದು.

೧೯೯೨ ರ ಕೊನೆಯಲ್ಲಿ ಸ್ಥಾಪಿಸಲಾದ ಸುಸೇ ಸಂಸ್ಥೆ ಮೊದಲಿಗೆ ಎಸ್‍ಎಲ್‍ಎಸ್ ಮತ್ತು ಸ್ಲ್ಯಾಕ್‍ವೇರ್ ವಿತರಣೆಗಳನ್ನು ಬಿಡುಗಡೆಗೊಳಿಸುತ್ತಿತ್ತು, ನಂತರ ಲಿನಕ್ಸ್ ನ ಜುಂಕ್ಸ್ ವಿತರಣೆಯೊಂದಿಗೆ ಸೇರಿ ೧೯೯೬ ರಲ್ಲಿ ತನ್ನ ಮೊದಲ ವಿಶಿಷ್ಟ ವಿತರಣೆಯಾದ ಸುಸೇ ೪.೬ ಅನ್ನು ೧೯೯೬ ರಲ್ಲಿ ಬಿಡುಗಡೆ ಮಾಡಿತು.

೨೦೦೩ ರಲ್ಲಿ ನಾವೆಲ್, ಇಂಕ್ ಸುಸೇ ಯನ್ನು ಕೊಂಡುಕೊಂಡಿತು. ಸುಸೇ ಲಿನಕ್ಸ್ ನ ಇತ್ತೀಚಿನ ಆವೃತ್ತಿ ಸುಸೇ ೧೧.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]


"https://kn.wikipedia.org/w/index.php?title=ಸುಸೇ&oldid=1145193" ಇಂದ ಪಡೆಯಲ್ಪಟ್ಟಿದೆ