ರೆಡ್ ಹ್ಯಾಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರೆಡ್ ಹ್ಯಾಟ್ Linux
ಉದ್ಯಮ / ವಿನ್ಯಾಸಗಾರ Red Hat
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗ Unix-like
Working state ಅಪ್ರಚಲಿತ
Source model ಮುಕ್ತ ತ೦ತ್ರಾ೦ಶಕ್ಕೆ
Initial release ಮೇ ೧೩. ೧೯೯೫
ಅತಿನೂತನ ಸ್ಥಿರವಾದ ಬಿಡುಗಡೆ

9 alias Shrike

/ ಮಾರ್ಚ ೩೧, ೨೦೦೩
(ಗಣಕಯಂತ್ರದ) ಕಟ್ಟು ನಿರ್ವಾಹಕ RPM Package Manager
ಕರ್ನೆಲ್ ಶ್ರೇಣಿ Monolithic Linux kernel
ಲೈಸನ್ಸು Various
ಅಂತರ್ಜಾಲ www.redhat.com
Redhat logo.png

ರೆಡ್ ಹ್ಯಾಟ್ ಮುಕ್ತ ತ೦ತ್ರಾ೦ಶಕ್ಕೆ ಮೀಸಲಾದ ಕೆಲಸಗಳನ್ನು ಕೈಗೊಳ್ಳುವ ಅತಿ ದೊಡ್ಡ ಮತ್ತು ಅತಿ ಗುರುತಿಸಲ್ಪಟ್ಟ ಸಂಸ್ಥೆಗಳಲ್ಲಿ ಒಂದು. ೧೯೯೩ ರಲ್ಲಿ ಆರ೦ಭಿಸಲ್ಪಟ್ಟ ಈ ಸಂಸ್ಥೆ ೭೦೦ ಕೆಲಸಗಾರರನ್ನು ಪ್ರಪ೦ಚದ ೨೨ ಸ್ಥಳಗಳಲ್ಲಿ ಹೊಂದಿದೆ. ಇದರ ಮುಖ್ಯ ಕಛೇರಿ ಇರುವುದು ಅಮೆರಿಕಾದ ರಾಲೀ, ನಾರ್ತ್ ಕೆರೊಲೈನಾ ದಲ್ಲಿ.

ಮುಖ್ಯವಾಗಿ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ, ಅದರ ಅಭಿವೃದ್ಧಿ, ನಿರ್ವಹಣೆ ಮತ್ತು ಅ೦ತರಜಾಲ ವಿಷಯಗಳಿಗೆ ಸ೦ಬ೦ಧಪಟ್ಟ ಮುಕ್ತ ತ೦ತ್ರಾ೦ಶಗಳ ಬೆಳವಣಿಗೆ ಈ ಸಂಸ್ಥೆಯ ಕ್ಷೇತ್ರಗಳು.

ಚರಿತ್ರೆ[ಬದಲಾಯಿಸಿ]

ಮಾರ್ಕ್ ಈವಿ೦ಗ್ ರಿಂದ ೧೯೯೩ ರಲ್ಲಿ ರೆಡ್ ಹ್ಯಾಟ್ ಸ್ಥಾಪಿಸಲ್ಪಟ್ಟಿತು. ೧೯೯೫ ರಲ್ಲಿ ಕೆನಡಾ ದ ಎಸಿಸಿ ಕಾರ್ಪೊರೇಷನ್ ನೊಂದಿಗೆ ರೆಡ್ ಹ್ಯಾಟ್ ಸೇರಿದ ನ೦ತರ, ಬಾಬ್ ಯ೦ಗ್ ೧೯೯೯ ರ ವರೆಗೆ ಅಧ್ಯಕ್ಷತೆಯನ್ನು ವಹಿಸಿಕೊ೦ಡಿದ್ದರು. ೧೯೯೯ ರಲ್ಲಿ ೬೦ ಲಕ್ಷ ಶೇರುಗಳನ್ನು ಮಾರುಕಟ್ಟೆಗೆ ಬಿಟ್ಟ ಸಂಸ್ಥೆ ೧೯೯೯ ರಲ್ಲಿ ಸಿಗ್ನಸ್ ಸೊಲೂಷನ್ಸ್ ಎ೦ಬ ಇನ್ನೊ೦ದು ಸಂಸ್ಥೆಯೊ೦ದಿಗೆ ಸೇರಿತು.

ತ೦ತ್ರಾ೦ಶಗಳು[ಬದಲಾಯಿಸಿ]

ರೆಡ್ ಹ್ಯಾಟ್ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಈ ಸಂಸ್ಥೆಯ ಮುಖ್ಯ ತ೦ತ್ರಾ೦ಶ. ಇದರ ಅಭಿವೃದ್ಧಿ ಹಾಗೂ ವಿತರಣೆ ಅನೇಕ ವರ್ಷಗಳಿ೦ದ ನಡೆದಿದೆ. ಇತ್ತೀಚೆಗೆ, ರೆಡ್ ಹ್ಯಾಟ್ ಲಿನಕ್ಸ್ ನ ೯ ನೇ ಆವೃತ್ತಿಯ ನ೦ತರ, ಫೆದೋರಾ ಲಿನಕ್ಸ್ ನ ಜೊತೆಗೂ ರೆಡ್ ಹ್ಯಾಟ್ ಕೆಲಸ ಮಾಡುತ್ತಿದೆ. ಫೆದೋರಾ ಲಿನಕ್ಸ್ ನ ಇನ್ನೊ೦ದು ವಿತರಣೆಯಾಗಿದ್ದು "ಫೆದೋರಾ ಪ್ರಾಜೆಕ್ಟ್" ಇದನ್ನು ನಿಭಾಯಿಸುತ್ತದೆ. ರೆಡ್ ಹ್ಯಾಟ್ ಈ ಪ್ರಾಜೆಕ್ಟ್ ನ ಸಹಾಯಕ ಸಂಸ್ಥೆಗಳಲ್ಲಿ ಒಂದು.

ಬಾಹ್ಯ ಸ೦ಪರ್ಕಗಳು[ಬದಲಾಯಿಸಿ]

TuxWB.jpg

ಲಿನಕ್ಸ್ ವಿತರಣೆಗಳು

ರೆಡ್ ಹ್ಯಾಟ್ | ಫೆಡೋರಾ | ಉಬುಂಟು | ಸುಸೇ | ಜೆಂಟೂ | ಮ್ಯಾಂಡ್ರಿವ | ಲಿನ್ಸ್ಪೈರ್ | ಝಾಂದ್ರೊಸ್ | ಲೈಕೋರಿಸ್