ವಿಷಯಕ್ಕೆ ಹೋಗು

ಮಹಾತ್ಮ ಗಾಂಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ

ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರ ೧೯೩೦ ರಲ್ಲಿ ತೆಗೆದ ಚಿತ್ರ
Alternate name(s): ಮಹಾತ್ಮಾ ಗಾಂಧೀ
Date of birth: (೧೮೬೯-೧೦-೦೨)೨ ಅಕ್ಟೋಬರ್ ೧೮೬೯
Place of birth: ಪೋರಬಂದರ್, ಕಥಯಾವರ್ Agency , ಬ್ರಿಟಿಶ್ ಇಂಡಿಯಾ
Date of death: January 30, 1948(1948-01-30) (aged 78)
Place of death: ಹೊಸದಿಲ್ಲಿ, ಭಾರತೀಯ ಒಕ್ಕೂಟ
Movement: ಭಾರತೀಯ ಸ್ವಾತಂತ್ರ್ಯ ಆಂದೋಲನ
Major organizations: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
Major monuments: Statues in Union Square ,New York; ಮಾರ್ಟಿನ್ ಲುಥೆರ್ ಕಿಂಗ್, ಜೂ.ನ್ಯಾಷನಲ್ ಹಿಸ್ತೋರಿಕ್ ಸೈಟ್, Atlanta; Pietermaritzburg, ದಕ್ಷಿಣ ಆಫ್ರಿಕಾ; Moscow, ರಷ್ಯಾ; San Francisco;and Honolulu, Hawaii
Rajghat in ನವ ದೆಹಲಿ
The Martyr's Column at the Gandhi Smriti in ನವ ದೆಹಲಿ
Alma mater: ಯೂನಿವರ್ಸಿಟಿ ಕಾಲೇಜ್ ಲಂಡನ್
Influences Indian Epics
Jose Rizal [ಸೂಕ್ತ ಉಲ್ಲೇಖನ ಬೇಕು]
Influenced ಮಾರ್ಟಿನ್ ಲೂಥರ್ ಕಿಂಗ್
ಜೇಮ್ಸ್ ಲಾಸನ್
ನೆಲ್ಸನ್ ಮಂಡೇಲಾ
ಖಾನ್ ಅಬ್ದುಲ್ ಗಫಾರ್ ಖಾನ್
ಸ್ಟೀವ್ ಬಿಕೋ
ಅಂಗ್ ಸಾನ್ ಸ್ಯೂ ಚಿ
ಬೆನಿಜಿನೋ ಆಕ್ವಿನೋ
ದಲೈ ಲಾಮಾ
Maria Lacerda de Moura
Albert Einstein
Lanza del Vasto
Madeleine Slade
John Lennon
ಅಲ್ ಗೋರ್
ಬರಾಕ್ ಒಬಾಮ

ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː]  ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.

ಆರಂಭಿಕ ಜೀವನ ಮತ್ತು ಹಿನ್ನೆಲೆ

[ಬದಲಾಯಿಸಿ]
ಸಬರಮತಿ ಆಶ್ರಮದಲ್ಲಿನ ಮಹಾತ್ಮ ಗಾಂಧಿಯವರ ಕೋಣೆ
ಸಬರಮತಿ ಆಶ್ರಮ, ಗುಜರಾತ್‌‌ನಲ್ಲಿರುವ ಗಾಂಧಿಯವರ ಮನೆ
ಚಿತ್ರ:Gandhi-snow-net.jpg
ನ್ಯೂಯಾರ್ಕ್‌ನ ಯೂನಿಯನ್ ಸ್ಕ್ವೇರ್‌ನಲ್ಲಿ ಗಾಂಧಿಯ ಪ್ರತಿಮೆ.
ಯುವ ಗಾಂಧಿ ಸನ್.೧೮೮೬.
ಗಾಂಧಿ ಮತ್ತು ಕಸ್ತೂರಬಾ (೧೯೦೨)
  • ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ[] ಯವರು ೧೮೬೯ರ ಅಕ್ಟೋಬರ್ ೨ ರಂದು ಭಾರತದ ಇಂದಿನ ಗುಜರಾತ್‌ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು.
  • ಅವರ ತಂದೆ ಕರಮ್‌ಚಂದ್ ಗಾಂಧಿ(೧೮೨೨-೧೮೮೫)ಯವರು, ಹಿಂದೂ ಮೋಧ್‌ ಸಮುದಾಯದವರಾಗಿದ್ದು, ಬ್ರಿಟಿಷ್‌ ಭಾರತಕಾಠೀಯಾವಾಡ್ ನಿಯೋಗದಲ್ಲಿನ ಒಂದು ಸಣ್ಣ ರಾಜಾಡಳಿತದ ರಾಜ್ಯವಾದ ಪೋರ ಬಂದರ್ ರಾಜ್ಯದಿವಾನ್‌ (ಪ್ರಧಾನ ಮಂತ್ರಿ) ಆಗಿದ್ದರು.[]
  • ಅವರ ತಾಯಿ ಪುತಲೀಬಾಯಿಯವರು ಹಿಂದೂ ಪ್ರಣಾಮಿ ವೈಷ್ಣವ ಸಮುದಯದವರಾಗಿದ್ದು, ಕರಮ್‌ಚಂದ್‌ರ ನಾಲ್ಕನೆಯ ಪತ್ನಿಯಾಗಿದ್ದರು; ಮೊದಲ ಮೂರು ಪತ್ನಿಯರು ಮೇಲುನೋಟಕ್ಕೆ ವ್ಯಕ್ತವಾಗುವಂತೆ ಶಿಶುಜನನದ ಸಮಯದಲ್ಲಿ ಮೃತರಾಗಿದ್ದರು.[] ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ ಜೈನ್‌ ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್‌ದಾಸ್‌ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿ ಕೊಂಡರು;
  • ಚೇತನಾತ್ಮಕ ಜೀವಿಗಳಿಗಾಗಿ ಸಹಾನುಭೂತಿ, ಸಸ್ಯಾಹಾರ, ಸ್ವಶುದ್ಧೀಕರಣಕ್ಕಾಗಿ ಉಪವಾಸ ಮತ್ತು ವಿವಿಧ ಮತಗಳಿಗೆ ಸೇರಿರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲಿ ಸೇರಿದ್ದವು. ಭಾರತೀಯ ಮೇರುಕಥೆಗಳು, ಅದರಲ್ಲೂ ವಿಶೇಷವಾಗಿ, ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು.
  • ಪುರಾತನ ಭಾರತೀಯ ರಾಜ ಮತ್ತು ಸತ್ಯವಂತ ನಾಯಕನಾಗಿದ್ದ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯ ಮನವನ್ನು ಪದೇಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ. "ಅದು ನನ್ನ ನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತ: ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು ಬರೆದುಕೊಂಡಿದ್ದಾರೆ.
  • ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು.[][] ಮೇ ೧೮೮೩ ರಲ್ಲಿ, ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ, ಒಂದು ವ್ಯವಸ್ಥೆಗೊಳಿಸಲಾದ ಒಂದು ಬಾಲ್ಯ ವಿವಾಹಸಮಾರಂಭದಲ್ಲಿ, ೧೩ ವರ್ಷದ ಮೋಹನ್‌ದಾಸ್‌ ಅವರು ೧೪ ವರ್ಷದ ಕಸ್ತೂರ ಬಾಯಿ ಮಖಾಂಜಿ ಅವರನ್ನು ಮದುವೆಯಾದರು. (ಅವರ ಮೊದಲ ಹೆಸರನ್ನು ಸಾಮಾನ್ಯವಾಗಿ "ಕಸ್ತೂರಬಾ" ಎಂದು ಮೊಟಕುಗೊಳಿಸಿ, ಪ್ರೇಮಪೂರ್ವಕ ವಾಗಿ "ಬಾ " ಎನ್ನಲಾಗಿತ್ತು)[]
  • ಆದಾಗ್ಯೂ, ಆ ಪ್ರಾಂತ್ಯದಲ್ಲಿದ್ದ ಸಂಪ್ರದಾಯದ ಪ್ರಕಾರ, ಹರೆಯದವಳಾದ ವಧು ತನ್ನ ಗಂಡನಿಂದ ದೂರವಿದ್ದು, ತನ್ನ ತವರುಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದು ರೂಢಿಯಾಗಿತ್ತು.[] ೧೮೮೫ರಲ್ಲಿ, ಗಾಂಧಿಯವರು ೧೫ ವರ್ಷದವರಾಗಿದ್ದಾಗ, ದಂಪತಿಗಳಿಗೆ ಮೊದಲ ಸಂತಾನವಾಯಿತು. ಆದರೆ ಅದು ಕಲವೇ ದಿನಗಳವರೆಗೆ ಮಾತ್ರ ಬದುಕುಳಿಯಲು ಸಾಧ್ಯವಾಯಿತು; ಗಾಂಧಿಯವರ ತಂದೆ ಕರಮ್‌ಚಂದ್‌‌ ಗಾಂಧಿಯವರು ಆದೇ ವರ್ಷದ ಆರಂಭದನಲ್ಲಿ ನಿಧನರಾಗಿದ್ದರು.[]
  • ಮೋಹನ್‌ದಾಸ್ ಮತ್ತು ಕಸ್ತೂರಬಾ ಇನ್ನೂ ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ: ೧೮೮೮ರಲ್ಲಿ ಜನಿಸಿದ ಹರಿಲಾಲ್‌ ; ೧೮೯೨ರಲ್ಲಿ ಜನಿಸಿದ ಮಣಿಲಾಲ್‌; ೧೮೯೭ರಲ್ಲಿ ಜನಿಸಿದ ರಾಮ್‌ದಾಸ್‌; ಮತ್ತು ೧೯೦೦ರಲ್ಲಿ ಜನಿಸಿದ ದೇವದಾಸ್‌. ಪೋರಬಂದರಿನ ಮಾಧ್ಯಮಿಕ ಶಾಲೆ ಮತ್ತು ರಾಜ್‌ಕೋಟ್‌ನ ಪ್ರೌಢಶಾಲೆಯಲ್ಲಿ ಗಾಂಧಿಯವರು ಶೈಕ್ಷಣಿಕವಾಗಿ ಸರಾಸರಿ ಮಟ್ಟದ ವಿದ್ಯಾರ್ಥಿಯಾಗುಳಿದಿದ್ದರು.
  • ಗುಜರಾತ್‌ನ ಭಾವನಗರ್‌ನಲ್ಲಿರುವ ಸಮಲ್‌ದಾಸ್ ಕಾಲೇಜಿಗೆ ಸೇರುವುದಕ್ಕಾಗಿ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸ್ವಲ್ಪ ಮಟ್ಟಿಗಿನ ಪ್ರಯಾಸದೊಂದಿಗೆ ಉತ್ತೀರ್ಣರಾದರು. ಅಲ್ಲಿದ್ದಾಗ ಅವರು ಅಸಂತುಷ್ಟವಾಗಿದ್ದರು , ಇದರ ಭಾಗಶ: ಕಾರಣ ಅವರ ಕುಟುಂಬವು ಅವರು ಒಬ್ಬ ನ್ಯಾಯವಾದಿ (ಬ್ಯಾರಿಸ್ಟರ್‌) ಅಗಲೆಂದು ಇಚ್ಛಿಸಿತ್ತು.
  • ೪ ಸೆಪ್ಟೆಂಬರ್ ೧೮೮೮ರಂದು ತಮ್ಮ ೧೯ನೆಯ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಉಳಿದಿರುವಾಗ, ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾಗಿ ತರಬೇತಿ ಪಡೆಯಲು ಗಾಂಧಿಯವರು [[ಲಂಡನ್‌|ಲಂಡನ್‌ಗೆ]] ಪ್ರಯಾಣಿಸಿದರು. ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಪ್ರಮಾಣ ಮಾಡಿದ್ದು ಅವರ ಲಂಡನ್‌ ವಾಸದ ಮೇಲೆ ಪ್ರಭಾವ ಬೀರಿತ್ತು.[]
  • ಗಾಂಧಿಯವರು ನೃತ್ಯ ತರಬೇತಿಯಂತಹ "ಇಂಗ್ಲಿಷ್" ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಪ್ರಯೋಗವನ್ನು ಮಾಡಿದರೂ ಸಹ, ತಮ್ಮ ವಾಸಗೃಹದ ಒಡತಿಯು ಬಡಿಸಿದ ಸಪ್ಪೆ ಸಸ್ಯಾಹಾರಿ ಆಹಾರವನ್ನು ಸಹಿಸಿಕೊಳ್ಳಲಾಗಲಿಲ್ಲ; ಅವರು ಲಂಡನ್‌ನ ಕೆಲವೇ ಸಸ್ಯಾಹಾರಿ ಭೋಜನಾಮಂದಿರಗಳಲ್ಲಿ ಒಂದು ಲಭಿಸುವವರೆಗೂ ಸದಾ ಹಸಿವೆಯಲ್ಲಿದ್ದರು. ಸಾಲ್ಟ್‌ರವರ ಗ್ರಂಥದಿಂದ ಪ್ರಭಾವಿತರಾಗಿ, ಅವರು ಸಸ್ಯಾಹಾರಿ ಸಂಘಕ್ಕೆ ಸೇರ್ಪಡೆಯಾಗಿ, ಅದರ ಕಾರ್ಯಕಾರೀ ಸಮಿತಿಗೆ ಚುನಾಯಿತರಾಗಿ [], ಆ ನಂತರ ಸ್ಥಳೀಯ ಬೇಯ್ಸ್‌ವಾಟರ್ ಶಾಖೆಯನ್ನು ಸ್ಥಾಪಿಸಿದರು.[]
  • ಅವರು ಭೇಟಿಯಾದ ಕೆಲವು ಸಸ್ಯಾಹಾರಿಗಳು ಥಿಯೋಸಾಫಿಕಲ್ ಸೊಸೈಟಿಯ ಸದಸ್ಯರಾಗಿದ್ದರು. ಇದು ೧೮೭೫ರಲ್ಲಿ ಸ್ಥಾಪಿತಗೊಂಡಿದ್ದು, ವಿಶ್ವಭ್ರಾತೃತ್ವವನ್ನು ಉತ್ತೇಜಿಸುವ ಮತ್ತು ಬೌದ್ಧ ಹಾಗೂ ಹಿಂದೂ ಸಾಹಿತ್ಯಗಳ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿತ್ತು .ಭಗವದ್ಗೀತೆ ಯ ಮೂಲ ಹಾಗೂ ಅನುವಾದಗಳೆರಡನ್ನೂ ಪಠಿಸಲು ತಮ್ಮೊಂದಿಗೆ ಸೇರಿರೆಂದು ಅವರು ಗಾಂಧಿಯವರನ್ನು ಪ್ರೇರೇಪಿಸಿದರು.[]
  • ಅದುವರೆಗೂ ಧರ್ಮದಲ್ಲಿ ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧಿಯವರು, ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ ಹಿಂದೂ ಮತ್ತು ಕ್ರೈಸ್ತ ಮತಗ್ರಂಥಗಳೆರಡನ್ನೂ ಅಧ್ಯಯನ ಮಾಡಲಾರಂಭಿಸಿದರು.[][] ೧೦ ಜೂನ್ ೧೮೯೧ ರಂದು ಗಾಂಧಿಯವರನ್ನು ವಕೀಲವೃತ್ತಿಗೆ ಕರೆಯಲಾಯಿತು. ಹಾಗಾಗಿ, ಅವರು ಲಂಡನ್‌ನಿಂದ ಭಾರತಕ್ಕೆ ೧೨ ಜೂನ್‌ ೧೮೯೧ರಂದು [] ಮರಳಿದರು. ತಾವು ಲಂಡನ್‌ನಲ್ಲಿದ್ದಾಗ ತಮ್ಮ ತಾಯಿ ನಿಧನರಾಗಿದ್ದರು ಎಂಬುದು ಆಗ ಅವರಿಗೆ ತಿಳಿದುಬಂದಿತು.
  • ಏಕೆಂದರೆ ಅವರ ಕುಟುಂಬವು ಈ ಸಮಾಚಾರವನ್ನು ಅವರಿಗೆ ತಿಳಿಸಿರಲಿಲ್ಲ.[] ಮುಂಬಯಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸುವ ಅವರ ಯತ್ನಗಳು ವಿಫಲವಾದವು. ಆ ನಂತರ, ಒಬ್ಬ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ, ಅವರು ರಾಜ್‌ಕೋಟ್‌ಗೆ ವಾಪಸಾಗಿ, ಕಕ್ಷಿಗಾರರಿಗಾಗಿ ಅರ್ಜಿಗಳ ಕರಡುಗಳನ್ನು ತಯಾರಿಸುವ ಸರಳ ಜೀವನವನ್ನು ನಡೆಸುತ್ತಿದ್ದರು.
  • ಆದರೆ ಒಬ್ಬ ಬ್ರಿಟಿಷ್ ಅಧಿಕಾರಿಯಿಂದಾಗಿ ತೊಡಕಿಗೆ ಸಿಕ್ಕಿಕೊಂಡ ಕಾರಣ ಗಾಂಧಿಯವರು ತಮ್ಮ ವ್ಯವಹಾರವನ್ನು ನಿಲ್ಲಿಸಬೇಕಾಯಿತು. ಇದು ತಮ್ಮ ಹಿರಿಯ ಅಣ್ಣನ ಪರವಾಗಿ ಪ್ರಭಾವ ಬೀರಲು ಮಾಡಿದ ವಿಫಲ ಯತ್ನ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಅವರು ಈ ಘಟನೆಯನ್ನು ಬಣ್ಣಿಸಿದ್ದಾರೆ.[][] ಇಂತಹ ವಾತಾವರಣದಲ್ಲಿ, ಏಪ್ರಿಲ್ ೧೮೯೩ರಲ್ಲಿ ಅವರು ಭಾರತೀಯ ಸಂಸ್ಥೆಯಾದ ದಾದಾ ಅಬ್ದುಲ್ಲಾ ಅಂಡ್ ಕಂಪೆನಿಯಿಂದ, ಆಗ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ದಕ್ಷಿಣ ಆಫ್ರಿಕಾದ ನೇಟಲ್ ಕಾಲೊನಿಯಲ್ಲಿನ ಹುದ್ದೆಯೊಂದಕ್ಕೆ ನೀಡಲಾದ ಒಂದು ವರ್ಷ ಅವಧಿಯ ಗುತ್ತಿಗೆಯನ್ನು ಸ್ವೀಕರಿಸಿದರು,[]

ಮಹಾತ್ಮ ಗಾಂಧಿ ಅವರ ಧ್ಯೇಯಗಳು

[ಬದಲಾಯಿಸಿ]

ರಾಷ್ಟ್ರಪಿತ ಗೌರವ

[ಬದಲಾಯಿಸಿ]

ನಾಗರಿಕ ಹಕ್ಕುಗಳಿಗಾಗಿ ಹೋರಾಟ

[ಬದಲಾಯಿಸಿ]
  • ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆ ಸುತ್ತಿದ್ದ ಅವಧಿಯಲ್ಲಿ ಅಹಿಂಸಾತ್ಮಕ ನಾಗರಿಕ ಅವಿಧೇಯತೆಯ ಆಂದೋಲ ನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು. ೧೯೧೫ರಲ್ಲಿ ಭಾರತಕ್ಕೆ ವಾಪಸಾದ ಬಳಿಕ, ಅತಿಯಾದ ಜಮೀನು ತೆರಿಗೆ ಮತ್ತು ತಾರತಮ್ಯಗಳಿಗೆ ಸಂಬಂಧಿಸಿದಂತೆ ರೈತರ, ಬೇಸಾಯಗಾರರ ಮತ್ತು ನಗರ ಪ್ರದೇಶದ ಕಾರ್ಮಿಕರ ಪ್ರತಿಭಟನೆಗಳನ್ನು ಅವರು ಸಂಘಟಿಸಿದರು.
  • ೧೯೨೧ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವ ವಹಿಸಿದ ಬಳಿಕ, ಬಡತನದ ನಿವಾರಣೆ, ಮಹಿಳಾ ಹಕ್ಕುಗಳ ವಿಸ್ತರಣೆ, ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದ, ಅಸ್ಪೃಶ್ಯತೆಯ ಅಂತ್ಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಹಮ್ಮಿಕೊಳ್ಳಲಾದ ರಾಷ್ಟ್ರವ್ಯಾಪಿ ಚಳುವಳಿಗಳ ನೇತೃತ್ವವನ್ನು ಗಾಂಧಿಯವರು ವಹಿಸಿಕೊಂಡರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಸ್ವರಾಜ್‌ ಅಥವಾ ವಿದೇಶೀ ಹಿಡಿತದಿಂದ ಭಾರತದ ಸ್ವಾತಂತ್ರ್ಯವನ್ನು ಸಾಧಿಸುವತ್ತ ಅವರು ಗುರಿಯಿಟ್ಟರು.
  • ಬ್ರಿಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸಲು ಹಮ್ಮಿಕೊಂಡಿದ್ದ ಅಸಹಕಾರ ಚಳವಳಿಯಲ್ಲಿ ತಮ್ಮ ಅನುಯಾಯಿಗಳ ಮುಂದಾಳತ್ವವನ್ನು ವಹಿಸಿದ್ದ ಗಾಂಧಿಯವರು ೧೯೩೦ರಲ್ಲಿ ದಂಡಿ ಉಪ್ಪಿನ ಯಾತ್ರೆಯನ್ನು ನಡೆಸಿದರು.
  • ಆನಂತರ ಅವರು ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯನ್ನು ನಡೆಸಿದರು. ಗಾಂಧಿಯವರು ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಹಲವು ವರ್ಷಗಳ ಕಾಲ ಕಾರಾಗೃಹ ವಾಸದಲ್ಲಿದ್ದರು. ಅಹಿಂಸೆ ಯ ಪರಿಪಾಲಕ ರಾದ ಅವರು ಸತ್ಯವನ್ನೇ ನುಡಿಯಲು ಪ್ರಮಾಣ ಮಾಡಿ ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.
  • ಸ್ವತಂತ್ರವಾದ ಗೃಹ ಸಮುದಾಯವೊಂದರಲ್ಲಿ ನಿರಾಡಂಬರವಾದ ಜೀವನ ನಡೆಸಿದ ಗಾಂಧಿಯವರು ಚರಖಾ ದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ಧೋತಿ ಮತ್ತು ಶಾಲನ್ನು ತೊಡುತ್ತಿದ್ದರು. ಸರಳ ಸಸ್ಯಾಹಾರವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ ಉಪವಾಸಗಳನ್ನು ಕೈಗೊಳ್ಳುತ್ತಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳ ಆಂದೋಲನ (೧೮೯೩–೧೯೧೪)

[ಬದಲಾಯಿಸಿ]
ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ (೧೮೯೫)
  • ದಕ್ಷಿಣ ಆಫ್ರಿಕಾದಲ್ಲಿ, ಭಾರತೀಯರತ್ತ ತೋರಲಾಗಿದ್ದ ತಾರತಮ್ಯವನ್ನು ಗಾಂಧಿಯವರೂ ಸಹ ಎದುರಿಸಬೇಕಾಯಿತು. ಅವರು ಕ್ರಮಬದ್ಧವಾಗಿದ್ದ ಪ್ರಥಮ ದರ್ಜೆಯ ಚೀಟಿಯನ್ನು ಹೊಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಥಮ ದರ್ಜೆಯ ಡಬ್ಬಿಯಿಂದ ಮೂರನೆಯ ದರ್ಜೆಗೆ ಸ್ಥಳಾಂತರ ಗೊಳ್ಳಲು ನಿರಾಕರಿಸಿದ್ದಕ್ಕೆ ಪೀಟರ್‌ಮೆರಿಟ್ಜ್‌ಬ ರ್ಗ್‌ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು.[೧೨]
  • ಅಲ್ಲಿಂದ ಮುಂದಕ್ಕೆ ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯವರ ಮೇಲೆ ಹಲ್ಲೆ ನಡೆಸಿದನು. ಹಲವು ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಪ್ರಯಾಣದಲ್ಲಿ ಇನ್ನೂ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಇನ್ನೊಂದು ಘಟನೆಯಲ್ಲಿ, ಡರ್ಬನ್‌ ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬರು ತಮ್ಮ ಪೇಟವನ್ನು ತೆಗೆಯಲು ಗಾಂಧಿಯವರಿಗೆ ಆದೇಶಿಸಿದರೂ ಅವರು ನಿರಾಕರಿಸಿದರು.
  • ಇಂತಹ ಘಟನೆಗಳು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿ, ಸಾಮಾಜಿಕ ಅನ್ಯಾಯದ ವಿರುದ್ಧ ಅವರನ್ನು ಜಾಗ್ರತಗೊಳಿಸಿ, ಅವರ ಆ ನಂತರದ ಸಾಮಾಜಿಕ ಕ್ರಿಯಾಸಿದ್ಧಾಂತದ ಮೇಲೆ ಪ್ರಭಾವ ಬೀರಿದವು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ವರ್ಣಭೇದ ನೀತಿ, ಪೂರ್ವಾಗ್ರಹ ಮತ್ತು ಅನ್ಯಾಯಗಳು ನಡೆಯುತ್ತಿದ್ದನ್ನು ಸ್ವತಃ ಅನುಭವಿಸುವ ಮೂಲಕ ಗಾಂಧಿಯವರು ಬ್ರಿಟಿಷ್ ಸಾಮ್ರಾಜ್ಯದಲ್ಲಿ ತಮ್ಮ ಜನರ ಸ್ಥಾನಮಾನಗಳನ್ನು ಮತ್ತು ಸಮಾಜದಲ್ಲಿ ತಮ್ಮದೇ ಸ್ಥಾನವನ್ನು ಪ್ರಶ್ನಿಸಲು ಪ್ರಾರಂಭಿಸಿದರು.
  • ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಧಿಯವರು ಅಲ್ಲಿನ ತಮ್ಮ ಉಳಿಯುವಿಕೆಯ ಅವಧಿಯನ್ನು ವಿಸ್ತರಿಸಿದರು. ಮಸೂದೆಯ ಅಂಗೀಕಾರವನ್ನು ತಡೆಯಲು ಅವರು ವಿಫಲರಾದರೂ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಕುಂದುಕೊರತೆಗಳತ್ತ ಗಮನ ಸೆಳೆಯುವಲ್ಲಿ ಅವರ ಚಳುವಳಿಯು ಯಶಸ್ವಿಯಾಯಿತು.
  • ೧೮೯೪ರಲ್ಲಿ ನೇಟಲ್ ಇಂಡಿಯನ್ ಕಾಂಗ್ರೆಸ್‌‌ನ ಸ್ಥಾಪನೆಯಲ್ಲಿ ಸಹಾಯ ಮಾಡಿದ ಅವರು,[][೧೨] ಈ ಸಂಘಟನೆಯ ಮೂಲಕ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯವನ್ನು ಏಕರೂಪವಾದ ರಾಜಕೀಯ ಶಕ್ತಿಯಾಗಿ ಮಾರ್ಪಾಡು ಮಾಡಿದರು. ಜನವರಿ ೧೮೯೭ರಲ್ಲಿ ಗಾಂಧಿಯವರು ಡರ್ಬನ್‌ಗೆ ಆಗಮಿಸಿದಾಗ ಬಿಳಿ ಮೂಲನಿವಾಸಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು.
  • ಆಗ ಓರ್ವ ಆರಕ್ಷಕ ಅಧೀಕ್ಷಕನ ಪತ್ನಿಯ ಯತ್ನಗಳ ಫಲವಾಗಿಯೇ ಅವರು ಪಾರಾಗಲು ಸಾಧ್ಯವಾಯಿತು. ಆದಾಗ್ಯೂ, ವ್ಯಕ್ತಿಯೊಬ್ಬನು ಮಾಡಿದ ತಪ್ಪಿಗಾಗಿ ನ್ಯಾಯಾಲಯದಲ್ಲಿ ಪರಿಹಾರವನ್ನು ಕೇಳದಿರುವುದು ತಮ್ಮ ತತ್ವಗಳಲ್ಲೊಂದು ಎಂದು ಹೇಳಿದ ಅವರು ಆ ಗುಂಪಿನ ಯಾವುದೇ ಸದಸ್ಯನ ವಿರುದ್ಧವೂ ಮೊಕದ್ದಮೆ ಹೂಡಲು ನಿರಾಕರಿಸಿದರು.[] ವಸಾಹತಿನಲ್ಲಿರುವ ಭಾರತೀಯ ಸಮುದಾಯದ ನೋಂದಣಿಯನ್ನು ಕಡ್ಡಾಯಗೊಳಿಸುವ ಒಂದು ಹೊಸ ಕಾಯಿದೆಯನ್ನು ಟ್ರಾನ್ಸ್‌ವಾಲ್‌ ಸರ್ಕಾರವು ೧೯೦೬ರಲ್ಲಿ ಪ್ರಕಟಿಸಿತು.
  • ಅದೇ ವರ್ಷದ ಸೆಪ್ಟೆಂಬರ್‌ ೧೧ ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಒಂದು ಸಾಮೂಹಿಕ ಪ್ರತಿಭಟನಾ ಸಭೆಯಲ್ಲಿ, ಗಾಂಧಿಯವರು ಇನ್ನೂ ವಿಕಸನಗೊಳ್ಳುತ್ತಿದ್ದ ತಮ್ಮ ಸತ್ಯಾಗ್ರಹ (ಸತ್ಯಕ್ಕಾಗಿ ನಿಷ್ಠೆ), ಅಥವಾ ಅಹಿಂಸಾತ್ಮಕ ಪ್ರತಿಭಟನೆಯ ಕ್ರಮಶಾಸ್ತ್ರವನ್ನು ಮೊದಲ ಬಾರಿಗೆ ಅಳವಡಿಸಿ, ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ಬದಲಿಗೆ ಈ ಹೊಸ ಕಾನೂನನ್ನು ಧಿಕ್ಕರಿಸಿ ಅದಕ್ಕೆ ದೊರೆಯುವ ಶಿಕ್ಷೆಯನ್ನನುಭವಿಸಿರೆಂದು ತಮ್ಮ ಸಹ-ಭಾರತೀಯರಿಗೆ ಕರೆ ನೀಡಿದರು.
  • ಈ ರಣನೀತಿಯನ್ನು ಅಳವಡಿಸಿಕೊಂಡ ಫಲವಾಗಿ, ಪ್ರತಿಭಟನೆ, ನೋಂದಾಯಿಸಲು ನಿರಾಕರಣೆ, ತಮ್ಮ ನೋಂದಣಿ ಪತ್ರಗಳ ದಹನ ಅಥವಾ ಇತರ ಅಹಿಂಸಾತ್ಮಕ ಪ್ರತಿರೋಧಗಳನ್ನು ಒಳಗೊಂಡ ಏಳು ವರ್ಷಗಳ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಗಾಂಧಿಯವರೂ ಸೇರಿದಂತೆ ಸಾವಿರಾರು ಭಾರತೀಯರು ಕಾರಾಗೃಹ ಸೇರಿದರು, ಹೊಡೆತಗಳನ್ನು ತಿಂದರು, ಅಥವಾ ಗುಂಡೇಟಿಗೀಡಾದರು.
  • ಸರ್ಕಾರವು ಭಾರತೀಯ ಪ್ರತಿಭಟನಾಕಾರರನ್ನು ಸದೆಬಡಿಯುವುದರಲ್ಲಿ ಯಶಸ್ವಿಯಾದರೂ, ಭಾರತೀಯ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಕ್ಷಿಣ ಆಫ್ರಿಕಾದ ಸರ್ಕಾರವು ಬಳಸಿದ ಕಟುವಾದ ಕ್ರಮಗಳ ವಿರುದ್ಧ ಭುಗಿಲೆದ್ದ ಸಾರ್ವಜನಿಕ ಪ್ರತಿಭಟನೆಯು ಅಂತಿಮವಾಗಿ ದಕ್ಷಿಣ ಆಫ್ರಿಕಾದ ಜನರಲ್ ಜೆನ್ ಕ್ರಿಶ್ಚಿಯಾನ್ ಸ್ಮಟ್ಸ್‌ ಅವರು ಗಾಂಧಿಯವರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿತು. ಗಾಂಧಿಯವರ ಆಲೋಚನೆಗಳು ಆಕಾರ ಪಡೆದು ಸತ್ಯಾಗ್ರಹ

೧೯೦೬ರ ಜುಲು ಸಮರದಲ್ಲಿ ಪಾತ್ರ

[ಬದಲಾಯಿಸಿ]
  • ೧೯೦೬ರಲ್ಲಿ, ಬ್ರಿಟಿಷ್ ಆಡಳಿತವು ಹೊಸ ತಲೆಗಂದಾಯವನ್ನು ಜಾರಿಗೊಳಿಸಿದ ನಂತರ, ದಕ್ಷಿಣ ಆಫ್ರಿಕಾದಲ್ಲಿನ ಜುಲು ಜನಾಂಗದವರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ರಿಟಿಷರು ಜುಲುಗಳ ವಿರುದ್ಧ ಸಮರ ಸಾರಿದರು. ಭಾರತೀಯರನ್ನು ನೇಮಿಸಿಕೊಳ್ಳುವಂತೆ ಗಾಂಧಿಯವರು ಬ್ರಿಟಿಷ್ ಆಡಳಿತವನ್ನು ಸಕ್ರಿಯರಾಗಿ ಪ್ರೇರೇಪಿಸಿದರು.
  • ಭಾರತೀಯರ ಪೂರ್ಣಪ್ರಮಾಣದ ಪೌರತ್ವದ ಬೇಡಿಕೆಯನ್ನು ಕಾನೂನು ಸಮ್ಮತವಾಗಿಸುವ ನಿಟ್ಟಿನಲ್ಲಿ ಭಾರತೀಯರು ಯುದ್ಧದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ನೀಡಬೇಕೆಂದು ಅವರು ವಾದಿಸಿದರು. ಆದರೆ, ಬ್ರಿಟಿಷ್ ಆಡಳಿತವು ಭಾರತೀಯರನ್ನು ಸೇನಾ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ನಿರಾಕರಿಸಿತು.
  • ಆದಾಗ್ಯೂ, ಗಾಯಗೊಂಡಿರುವ ಬ್ರಿಟಿಷ್ ಸೈನಿಕರಿಗೆ ಶುಶ್ರೂಷೆ ಮಾಡುವ ಡೋಲಿವಾಹಕರಾಗಿ ಕೆಲಸ ಮಾಡುವ ಅವಕಾಶವನ್ನು ಭಾರತೀಯ ಸ್ವಯಂಸೇವಕರ ತುಕಡಿಯೊಂದಕ್ಕೆ ನೀಡಬೇಕೆಂಬ ಗಾಂಧಿಯವರ ಪ್ರಸ್ತಾವವನ್ನು ಬ್ರಿಟಿಷ್ ಆಡಳಿತವು ಪುರಸ್ಕರಿಸಿತು. ಈ ತುಕಡಿಯು ಗಾಂಧಿಯವರ ನಿಯಂತ್ರಣಲ್ಲಿತ್ತು. ೧೯೦೬ರ ಜುಲೈ ೨೧ರಂದು ಇಂಡಿಯನ್ ಒಪಿನಿಯನ್‌ ನಲ್ಲಿ ಗಾಂಧಿಯವರು ಹೀಗೆ ಬರೆದರು: "ಸ್ಥಳೀಯರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರದ ಸೂಚನೆಯ ಮೇರೆಗೆ ಪ್ರಾಯೋಗಿಕವಾಗಿ ರಚಿಸಲಾಗಿದ್ದ ಈ ತುಕಡಿಯಲ್ಲಿ ಇಪ್ಪತ್ಮೂರು ಮಂದಿ ಭಾರತೀಯರಿದ್ದರು." [೧೩] ಇಂಡಿಯನ್ ಒಪಿನಿಯನ್‌ ನಲ್ಲಿನ ತಮ್ಮ ಅಂಕಣಗಳ ಮೂಲಕ, ಯುದ್ಧಕ್ಕೆ ಸೇರಿರೆಂದು ಗಾಂಧಿಯವರು ದಕ್ಷಿಣ ಆಫ್ರಿಕಾಲ್ಲಿರುವ ಭಾರತೀಯ ಜನಾಂಗವನ್ನು ಪ್ರೇರೇಪಿಸಿದರು: “ಮೀಸಲು ಪಡೆ ವ್ಯರ್ಥವಾಗುತ್ತಿದೆಯೆಂದು ಸರ್ಕಾರಕ್ಕೆ ಅನಿಸಿದಲ್ಲಿ ನೈಜ ಸಮರ ಪರಿಣತಿಯನ್ನು ಪಡೆಯುವುದಕ್ಕಾಗಿ ಆಳವಾದ ತರಬೇತಿಯ ಅವಕಾಶವನ್ನು ಭಾರತೀಯರಿಗೆ ಕೊಡಲು ಮೀಸಲು ಪಡೆಯನ್ನು ಸರ್ಕಾರವು ಬಳಸಬಹುದು".[೧೪] ಗಾಂಧಿಯವರ ಅಭಿಪ್ರಾಯದಲ್ಲಿ, ೧೯೦೬ರ ಕರಡು ಅಧಿಶಾಸನವು ಭಾರತೀಯರ ಸ್ಥಾನಮಾನವನ್ನು ಸ್ಥಳೀಯರಿಗಿಂತಲೂ ಕೀಳುಮಟ್ಟಕ್ಕೆ ಇಳಿಸಿತ್ತು.
  • ಆದ್ದರಿಂದ,"ಕಾಫಿರ್‌ರ" ಜನಾಂಗದ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ಸತ್ಯಾಗ್ರಹ ದ ಹಾದಿಯನ್ನು ಅನುಸರಿಸಿ ಅಧಿಶಾಸನವನ್ನು ವಿರೋಧಿಸಿರೆಂದು ಅವರು ಭಾರತೀಯರನ್ನು ಆಗ್ರಹಿಸಿದರು. ಅವರದೇ ಮಾತುಗಳಲ್ಲಿ ಹೇಳುವುದಾದರೆ, "ನಮಗಿಂತಲೂ ಹಿಂದುಳಿದಿರುವ ಬೆರಕೆ ಜನಾಂಗದವರು ಹಾಗೂ ಕಾಫಿರ್‌ ಜನಾಂಗದವರು ಸರ್ಕಾರಕ್ಕೆ ಪ್ರತಿರೋಧವನ್ನು ಒಡ್ಡಿದ್ದಾರೆ. ಅನುಮೋದನೆಗೊಂಡ ಕಾನೂನು ಅವರಿಗೂ ಸಹ ಅನ್ವಯಿಸುತ್ತದೆ, ಆದರೆ ಅವರು ಅದನ್ನು ಪುರಸ್ಕರಿಸುವುದಿಲ್ಲ." [೧೫]
  • ೧೯೨೭ರಲ್ಲಿ ಗಾಂಧಿಯವರು ಈ ಘಟನೆಯ ಬಗ್ಗೆ ಹೀಗೆ ಬರೆದರು: "(ಜುಲು) 'ದಂಗೆ'ಯಷ್ಟು ಸ್ಪಷ್ಟವಾಗಿ ಬೋಯೆರ್ ಯುದ್ಧವು ನನಗೆ ಯುದ್ಧದ ಭೀತಿಯನ್ನೇನೂ ಹೊತ್ತು ತರಲಿಲ್ಲ. ಇದು ಯುದ್ಧವೇ ಆಗಿರಲಿಲ್ಲ, ಬದಲಿಗೆ ಇದೊಂದು ಮಾನವ ಬೇಟೆಯೇ ಆಗಿತ್ತು. ಇದು ನನ್ನೊಬ್ಬನ ಅಭಿಪ್ರಾಯ ಮಾತ್ರವಲ್ಲ, ನನ್ನೊಂದಿಗೆ ಸಂವಾದ ಮಾಡಿದ ಅನೇಕ ಇಂಗ್ಲಿಷರ ಅಭಿಪ್ರಾಯ ಕೂಡಾ." [೧೬]

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (೧೯೧೬–೧೯೪೫)

[ಬದಲಾಯಿಸಿ]

ಗಾಂಧಿಯವರು ಭಾರತದಲ್ಲಿ ವಾಸಿಸಲು ೧೯೧೫ರಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆಗಳಲ್ಲಿ ಮಾತನಾಡಿದರು, ಆದರೆ ಆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದ ಗೌರವಾನ್ವಿತ ನಾಯಕರಾದ ಗೋಪಾಲಕೃಷ್ಣ ಗೋಖಲೆಯವರಿಂದ ಗಾಂಧಿಯವರಿಗೆ ಭಾರತೀಯ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಕುರಿತಾದ ಪ್ರಾಥಮಿಕ ಪರಿಚಯವಾಯಿತು.

ಚಂಪಾರಣ್ ಮತ್ತು ಖೇಡಾ

[ಬದಲಾಯಿಸಿ]
ಚಿತ್ರ:Gandhi Kheda 1917.jpg
೧೯೧೮ ರಲ್ಲಿ, ಖೇಡಾ ಮತ್ತು ಚಂಪಾರಣ್ ಸತ್ಯಾಗ್ರಹಗಳ ಸಮಯದಲ್ಲಿ ಗಾಂಧಿಯವರು
  • ಗಾಂಧಿಯವರ ಮೊದಲ ಪ್ರಮುಖ ಸಾಧನೆಗಳು ೧೯೧೮ರಲ್ಲಿ ಚಂಪಾರಣ್‌‌ ಚಳವಳಿ ಮತ್ತು ಖೇಡಾ ಸತ್ಯಾಗ್ರಹ ದೊಂದಿಗೆ ಪ್ರಾರಂಭವಾದವು. ಆದರೂ, ಅವರ ಬದುಕಿಗೆ ಅಗತ್ಯವಾದ ಆಹಾರ ಬೆಳೆಗಳ ಬದಲಿಗೆ ಇಂಡಿಗೋ ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖೇಡಾ ಸತ್ಯಾಗ್ರಹದಲ್ಲಿ ಸೇರಿದ್ದವು.
  • ಜಮೀನುದಾರರ (ಬಹುತೇಕವಾಗಿ ಬ್ರಿಟಿಷರ) ಖಾಸಗಿ ಸೇನೆಯಿಂದ ನಿಗ್ರಹಿಸಲ್ಪಡುತ್ತಿದ್ದ ಅವರಿಗೆ ಬಹಳ ಕಡಿಮೆ ಪರಿಹಾರ ಧನವನ್ನು ನೀಡಲಾಗುತ್ತಿತ್ತು. ಹೀಗಾಗಿ ಅವರು ತೀವ್ರ ಬಡತನದಲ್ಲಿ ಸಿಲುಕಿದ್ದರು. ಹಳ್ಳಿಗಳು ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ಸ್ಥಿತಿಯಲ್ಲಿದ್ದವು; ಮತ್ತು ಕುಡಿತ, ಅಸ್ಪೃಶ್ಯತೆ ಹಾಗೂ ಬುರ್ಖಾ ಪದ್ಧತಿಗಳು ಅತಿರೇಕವಾಗಿದ್ದವು.
  • ಇಂಥಾ ವಿನಾಶಕಾರಿ ಕ್ಷಾಮದ ಹಿಂಸೆಯ ಸನ್ನಿವೇಶ ದಲ್ಲಿಯೂ ಬ್ರಿಟಿಷ್ ಆಡಳಿತವು ತೆರಿಗೆಯೊಂದನ್ನು ವಿಧಿಸಿದ್ದೇ ಅಲ್ಲದೇ ಅದನ್ನು ಹೆಚ್ಚಿಸುತ್ತಲೇ ಹೋಯಿತು. ಪರಿಸ್ಥಿತಿಯು ಹತಾಶೆಯಿಂದ ಕೂಡಿತ್ತು. ಗುಜರಾತ್‌ಖೇಡಾದಲ್ಲಿಯೂ ಸಹ ಇದೇ ಸಮಸ್ಯೆಯಿತ್ತು. ಆ ಪ್ರಾಂತ್ಯದಿಂದ ತಮ್ಮ ನುರಿತ ಬೆಂಬಲಿಗರು ಹಾಗೂ ಹೊಸ ಸ್ವಯಂಸೇವಕರ ಪಡೆಯನ್ನು ಸಂಘಟಿಸಿದ ಗಾಂಧಿಯವರು ಅಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು.
  • ಹದಗೆಟ್ಟ ಬದುಕಿನ ಸಾರ್ವತ್ರಿಕ ಪರಿಸ್ಥಿತಿಯೂ ಸೇರಿದಂತೆ ಸಂಕಟ ಸನ್ನಿವೇಶದ ಘೋರ ಮತ್ತು ಭಯಾನಕ ಅಧ್ಯಾಯಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ವಿಸ್ತೃತ ಅಧ್ಯಯನ ಮತ್ತು ಸಮೀಕ್ಷೆಯನ್ನು ಅವರು ನಡೆಸಿದರು. ಹಳ್ಳಿಗರ ಆತ್ಮವಿಶ್ವಾಸದ ಬುನಾದಿಯ ಮೇಲೆ ಹಳ್ಳಿಗಳ ಶುದ್ಧೀಕರಣ, ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣದ ನೇತೃತ್ವವನ್ನು ವಹಿಸಲು ಮುಂದಾದ ಅವರು, ಮೇಲೆ ತಿಳಿಸಲಾದ ಅನೇಕ ಸಾಮಾಜಿಕ ಪಿಡುಗುಗಳನ್ನು ಮಾಡದಂತಿರುವ ಹಾಗೂ ಖಂಡಿಸುವ ನಿಟ್ಟಿನಲ್ಲಿ ಹಳ್ಳಿಗರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವೆಡೆಗೆ ಪ್ರೋತ್ಸಾಹಿಸಿದರು.
  • ಆದರೆ, ಕ್ಷೋಭೆಯನ್ನು ಸೃಷ್ಟಿಸಿದ ಆಪಾದನೆಯ ಮೇರೆಗೆ ಪೊಲೀಸರಿಂದ ಅವರು ಬಂಧನಕ್ಕೊಳಗಾಗಿ ಆ ಪ್ರಾಂತ್ಯದಿಂದ ಹೊರಹೋಗುವಂತೆ ಆದೇಶಿಸಲ್ಪಟ್ಟಾಗಲೇ ಅವರ ವ್ಯಕ್ತಿತ್ವದ ಪ್ರಮುಖ ಪ್ರಭಾವ ಹೊರಬಿದ್ದಿತು. *ನೂರಾರು, ಸಾವಿರಾರು ಜನರು ಕಾರಾಗೃಹ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದರು. ನ್ಯಾಯಾಲಯವು ಒಲ್ಲದ ಮನಸ್ಸಿನೊಂದಿಗೆ ಗಾಂಧಿಯವರನ್ನು ಬಿಡುಗಡೆ ಮಾಡಿತು.
  • ಜಮೀನುದಾರರ ವಿರುದ್ಧ ಗಾಂಧಿಯವರು ಸುಸಂಘಟಿತ ಪ್ರತಿಭಟನೆಗಳನ್ನು ನಡೆಸಿದ ಫಲವಾಗಿ, ಬ್ರಿಟಿಷ್ ಸರ್ಕಾರದ ಮಾರ್ಗದರ್ಶನದೊಂದಿಗೆ ಜಮೀನುದಾರರು ಒಂದು ಕರಾರಿಗೆ ಸಹಿ ಹಾಕಿದರು. ಇದರನ್ವಯ ಆ ವಲಯದ ಬಡ ರೈತರಿಗೆ ಹೆಚ್ಚಿನ ಪರಿಹಾರ ಧನ ಮತ್ತು ಬೇಸಾಯದ ಮೇಲಣ ನಿಯಂತ್ರಣ ನೀಡಿ, ಕ್ಷಾಮದ ಅಂತ್ಯದವರೆಗೂ ಕಂದಾಯಗಳ ಹೆಚ್ಚಳ ಮತ್ತು ಅವುಗಳ ವಸೂಲಿಯನ್ನು ರದ್ದುಗೊಳಿಸಲಾಯಿತು.
  • ಈ ಚಳುವಳಿ ನಡೆಯುತ್ತಿದ್ದ ವೇಳೆ, ಜನರು ಗಾಂಧಿಯವರನ್ನು ಬಾಪು (ಅಪ್ಪ) ಮತ್ತು ಮಹಾತ್ಮ (ಮಹಾನ್ ಆತ್ಮ) ಎಂದು ಕರೆದರು. ಖೇಡಾದಲ್ಲಿ ಬ್ರಿಟಿಷ್‌ ಆಡಳಿತದೊಂದಿಗಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್‌ ಅವರು ರೈತರನ್ನು ಪ್ರತಿನಿಧಿಸಿದರು. ಬ್ರಿಟಿಷ್ ಆಡಳಿತವು ಕಂದಾಯ ವಸೂಲಿಯನ್ನು ರದ್ದುಗೊಳಿಸಿ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಿತು. ಇದರ ಫಲವಾಗಿ, ಗಾಂಧಿಯವರ ಪ್ರಭಾವ ರಾಷ್ಟ್ರದೆಲ್ಲೆಡೆ ಹಬ್ಬಿತು.

ಅಸಹಕಾರ ಅಂದೋಲನ

[ಬದಲಾಯಿಸಿ]
  • ಬ್ರಿಟಿಷ್‌ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು. ಪಂಜಾಬ್‌ನಲ್ಲಿ, ಬ್ರಿಟಿಷ್ ಪಡೆಗಳು ಮಾಡಿದ ನಾಗರಿಕರ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡವು (ಇದಕ್ಕೆ ಅಮೃತಸರ ಹತ್ಯಾಕಾಂಡ ಎಂದೂ ಹೆಸರಿದೆ) ರಾಷ್ಟ್ರಕ್ಕೆ ತೀವ್ರವಾದ ಪೆಟ್ಟು ನೀಡಿತು.
  • ಇದರಿಂದಾಗಿ ಸಾರ್ವಜನಿಕರ ಸಿಟ್ಟು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾದವು. ಗಾಂಧಿಯವರು ಬ್ರಿಟಿಷ್‌ ಆಡಳಿತದ ಕೃತ್ಯ ಹಾಗೂ ಭಾರತೀಯರ ಸೇಡಿನ ಹಿಂಸಾಚಾರಗಳೆರಡನ್ನೂ ಖಂಡಿಸಿದರು. ಗಾಂಧಿಯವರು ಹಿಂಸಾಚಾರದ ಘಟನೆಯನ್ನು ಖಂಡಿಸಿ, ಹಲ್ಲೆಗೀಡಾದ ಬ್ರಿಟಿಷ್ ನಾಗರಿಕರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬರೆದಿದ್ದರು.
  • ಮೊದಲು ಇದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ತತ್ವಗಳ ಪ್ರಕಾರ ಎಲ್ಲಾ ರೀತಿಯ ಹಿಂಸಾಚಾರವೂ ಕೆಟ್ಟದು ಮತ್ತು ಎಂದಿಗೂ ಸಮರ್ಥಿಸಿಕೊಳ್ಳಲಾಗದು ಎಂದು ಗಾಂಧಿಯವರು ಭಾವುಕವಾಗಿ ಭಾಷಣ ಮಾಡಿದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು.[೧೭] ಆದರೆ ಹತ್ಯಾಕಾಂಡ ಮತ್ತು ಸೇಡಿನ ಹಿಂಸಾಚಾರದ ನಂತರವಷ್ಟೇ ಸಂಪೂರ್ಣ ಸ್ವ-ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಸಂಸ್ಥಾನಗಳ ನಿಯಂತ್ರಣ ಪಡೆಯುವತ್ತ, ಕ್ರಮೇಣ ಸ್ವರಾಜ್‌ ಅಥವಾ ಸಂಪೂರ್ಣ ಸ್ವತಂತ್ರ, ಅಧ್ಯಾತ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವಾಗಿ ಪರಿಪೂರ್ಣವಾಗಿಸುವತ್ತ ಗಾಂಧಿಯವರ ಮನವು ಕೇಂದ್ರೀಕೃತಗೊಂಡಿತು.
  • ೧೯೨೧ ಡಿಸೆಂಬರ ತಿಂಗಳಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪರವಾಗಿ ಕಾರ್ಯಕಾರೀ ಅಧಿಕಾರವನ್ನು ಗಾಂಧಿಯವರಿಗೆ ನೀಡಲಾಯಿತು. ಅವರ ನಾಯಕತ್ವದಲ್ಲಿ, ಸ್ವರಾಜ್‌ ಎಂಬ ಗುರಿಯಿಟ್ಟುಕೊಂಡ ಕಾಂಗ್ರೆಸ್‌ ಹೊಸ ಸಂವಿಧಾನ ದೊಂದಿಗೆ ಪುನಸ್ಸಂಘಟಿತವಾಯಿತು. ಸಾಂಕೇತಿಕ ಶುಲ್ಕ ಪಾವತಿ ಮಾಡಲು ಸಿದ್ಧವಿದ್ದ ಯಾರಿಗಾದರೂ ಪಕ್ಷದ ಸದಸ್ಯತ್ವ ಲಭ್ಯವಿತ್ತು.
  • ಶಿಸ್ತಿನಲ್ಲಿ ಸುಧಾರಣೆ ತರಲು ಸಮಿತಿಗಳ ಶ್ರೇಣಿ ವ್ಯವಸ್ಥೆಯನ್ನು ಸ್ಥಾಪಿಸಿದ್ದರಿಂದಾಗಿ, ಒಂದು ಉತ್ಕೃಷ್ಟ ಸಂಘಟನೆಯಂತಿದ್ದ ಪಕ್ಷವು ಇಡೀ ರಾಷ್ಟ್ರದಲ್ಲೇ ಜನಪ್ರಿಯತೆ ಗಳಿಸುವ ಪಕ್ಷವಾಗಿ ಮಾರ್ಪಾಡಾಯಿತು. ವಿದೇಶೀ ಉತ್ಪಾದನೆಗಳು, ಅದರಲ್ಲೂ ವಿಶೇಷವಾಗಿ ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತಹ "ಸ್ವದೇಶಿ" ನೀತಿಯನ್ನು ತೊಡಗಿಸಲು ಗಾಂಧಿಯವರು ತಮ್ಮ ಅಹಿಂಸಾ ತತ್ವದ ವೇದಿಕೆಯನ್ನು ವಿಸ್ತರಿಸಿದರು.
  • ಇದಕ್ಕೆ ಸಂಬಂಧಿಸಿದಂತೆ, ಎಲ್ಲಾ ಭಾರತೀಯರು, ಬ್ರಿಟಿಷ್-ಉತ್ಪಾದಿತ ಜವಳಿಗಳ ಬದಲಿಗೆ ಮನೆಯಲ್ಲಿ ನೂತ ಖಾದಿ ಉಡುಪನ್ನೇ ಧರಿಸಬೇಕೆಂದು ಸಮರ್ಥಿಸಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲವನ್ನು ಸೂಚಿಸಲು, ಎಲ್ಲಾ ಭಾರತೀಯ ಪುರುಷರು-ಸ್ತ್ರೀಯರು, ಅವರು ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ, ಪ್ರತಿದಿನವೂ ಸ್ವಲ್ಪ ಸಮಯ ಖಾದಿ ಯನ್ನು ನೂಲಲು ಗಾಂಧಿಯವರು ಪ್ರೇರೇಪಿಸಿದರು.[೧೮]
  • 'ಇಂತಹ ಚಟುವಟಿಕೆಗಳು ಮಹಿಳೆಯರಿಗಾಗಿ ಗೌರವಾರ್ಹ ಚಟುವಟಿಕೆಗಳಲ್ಲ' ಎಂದು ಹೆಚ್ಚಿನವರು ತಿಳಿದುಕೊಂಡಿದ್ದ ಸಮಯದಲ್ಲಿ ಈ ಆಂದೋಲನದಲ್ಲಿ ಮಹಿಳೆಯರನ್ನೂ ಸೇರ್ಪಡೆಗೊಳಿಸಲು ಹಾಗೂ ಒಲ್ಲದವರು ಮತ್ತು ಮಹತ್ವಾಕಾಂಕ್ಷಿಗಳನ್ನು ನಿರ್ಮಲಗೊಳಿಸಲು ಇದು ಒಂದು ರಣನೀತಿ ಯಾಗಿತ್ತು. ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವುದರೊಂದಿಗೆ, ಬ್ರಿಟಿಷ್ ವಿದ್ಯಾ ಸಂಸ್ಥೆಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸಿ, ಸರ್ಕಾರೀ ನೌಕರಿಗಳಿಗೆ ರಾಜೀನಾಮೆ ನೀಡಿ ಮತ್ತು ಬ್ರಿಟಿಷ್ ಬಿರುದುಗಳು ಹಾಗೂ ಗೌರವಗಳನ್ನು ತ್ಯಜಿಸಿ ರೆಂದು ಗಾಂಧಿಯವರು ಜನರನ್ನು ಆಗ್ರಹಪಡಿಸಿದರು.
  • ಭಾರತೀಯ ಸಮುದಾಯದ ಎಲ್ಲಾ ಸ್ತರಗಳ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ "ಅಸಹಕಾರ ಆಂದೋಲನ"ವು ವ್ಯಾಪಕ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿತು. ಆದಾಗ್ಯೂ, ಆಂದೋಲನವು ತನ್ನ ಉತ್ತುಂಗವನ್ನು ತಲುಪುವಷ್ಟರಲ್ಲಿಯೇ, ಉತ್ತರ ಪ್ರದೇಶದ ಚೌರಿ ಚೌರಾ ಪಟ್ಟಣದಲ್ಲಿ ೧೯೨೨ರ ಫೆಬ್ರುವರಿ ತಿಂಗಳಲ್ಲಿ ನಡೆದ ಒಂದು ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ ಅದು ಹಠಾತ್ತಾಗಿ ಕೊನೆಗೊಂಡಿತು.
  • ಆಂದೋಲನವು ಹಿಂಸಾಚಾರದತ್ತ ತಿರುವು ಪಡೆದುಕೊಳ್ಳಲಿದೆಯೆಂದು ಆತಂಕಗೊಂಡು ಹಾಗೂ ಇದು ತಮ್ಮ ಕಾರ್ಯವನ್ನೆಲ್ಲಾ ವ್ಯರ್ಥಗೊಳಿಸಬಹುದೆಂದು ಮನಗಂಡ ಗಾಂಧಿಯವರು, ಸಾಮೂಹಿಕ ನಾಗರಿಕ ಅವಿಧೇಯತಾ ಆಂದೋಲನವನ್ನು ಹಿಂದೆಗೆದುಕೊಂಡರು.[೧೯] ೧೯೨೨ರ ಮಾರ್ಚ್ ೧೦ರಂದು ಗಾಂಧಿಯವರನ್ನು ಬಂಧಿಸಿ, ಶಾಂತಿಭಂಗ ಮಾಡಿದರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಆರು ವರ್ಷದ ಕಾರಾಗೃಹ ಸಜೆ ವಿಧಿಸಲಾಯಿತು.
  • ಅವರು ೧೯೨೨ರ ಮಾರ್ಚ್ ೧೮ರಂದು ತಮ್ಮ ಸಜೆಯನ್ನು ಆರಂಭಗೊಳಿಸಿದರು. ಸಜೆಯಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ್ದಾಗ ಕರುಳುವಾಳ ರೋಗದ ಒಂದು ಶಸ್ತ್ರಚಿಕಿತ್ಸೆಗಾಗಿ ೧೯೨೪ರ ಫೆಬ್ರವರಿ ತಿಂಗಳಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ಗಾಂಧಿಯವರ ಒಗ್ಗೂಡಿಸುವಂತಹ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ, ಅವರ ಕಾರಾಗೃಹವಾಸದ ವರ್ಷಗಳ ಅವಧಿಯಲ್ಲಿ ಸೀಳಲು ಪ್ರಾರಂಭಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆಯಿತು.
  • ಒಂದೆಡೆ ಚಿತ್ತರಂಜನ್‌ ದಾಸ್‌ ಮತ್ತು ಮೋತಿಲಾಲ್‌ ನೆಹರೂ ನೇತೃತ್ವದ ಬಣವು ಶಾಸನ ಸಭೆಯಲ್ಲಿ ಭಾಗವಹಿಸುವ ಒಲವನ್ನು ತೋರಿದರೆ; ಇನ್ನೊಂದೆಡೆ ಚಕ್ರವರ್ತಿ ರಾಜಗೋಪಾಲಾಚಾರಿ ಮತ್ತು ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ನೇತೃತ್ವದ ಇನ್ನೊಂದು ಬಣವು ಈ ಪ್ರಸ್ತಾಪವನ್ನು ವಿರೋಧಿಸಿತು.
  • ಇದಕ್ಕಿಂತಲೂ ಹೆಚ್ಚಾಗಿ, ಅಹಿಂಸಾ ಆಂದೋಲನದ ಉತ್ತುಂಗದಲ್ಲಿ ಸದೃಢವಾಗಿದ್ದ ಹಿಂದೂ-ಮುಸ್ಲಿಮ್‌ರ ನಡುವಿನ ಸಹಕಾರ ಭಾವವು ಮುರಿದು ಬೀಳುತ್ತಿತ್ತು. ೧೯೨೪ರ ಶರತ್ಕಾಲದಲ್ಲಿ ಕೈಗೊಂಡ ಮೂರು ವಾರಗಳ ಉಪವಾಸವೂ ಸೇರಿದಂತೆ, ಹಲವಾರು ರೀತಿಯಲ್ಲಿ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಗಾಂಧಿಯವರು ಯತ್ನಿಸಿದರು, ಆದರೂ ಇದರ ಯಶಸ್ಸು ಸೀಮಿತ ಮಟ್ಟದ್ದಾಗಿತ್ತು.[೨೦]

ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ (ಉಪ್ಪಿನ ದಂಡಯಾತ್ರೆ)

[ಬದಲಾಯಿಸಿ]
5 ಏಪ್ರಿಲ್‌ ೧೯೩೦ರಂದು ದಂಡಿಯಲ್ಲಿ ಗಾಂಧಿ, ಉಪ್ಪಿನ ಸಂಚಲನದ ಕೊನೆಗೆ
7 ಏಪ್ರಿಲ್‌ 1939ರಂದು ಬಾಂಬೆಯ ಬಿರ್ಲಾ ಹೌಸ್‌ನಲ್ಲಿ ಮಹಾದೇವ್‌ ದೇಸಾಯಿಯವರು (ಎಡ) ವೈಸರಾಯ್‌ರಿಂದ ಗಾಂಧಿಯವರಿಗೆ ಬಂದ ಪತ್ರವನ್ನು ಓದಿದರು.
  • ೧೯೨೦ರ ದಶಕದ ಬಹುಪಾಲು ಗಾಂಧಿಯವರು ಸಕ್ರಿಯ ರಾಜಕಾರಣದಿಂದ ಮತ್ತು ಲೋಕಪ್ರಸಿದ್ಧಿಯಿಂದ ದೂರ ಉಳಿದು, ಸ್ವರಾಜ್‌ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಒಡಕನ್ನು ಸರಿಪಡಿಸಲು ಹಾಗೂ ಅಸ್ಪೃಶ್ಯತೆ, ಮದ್ಯಪಾನ, ಅಜ್ಞಾನ ಮತ್ತು ಬಡತನದ ವಿರುದ್ಧದ ಅಭಿಯಾನವನ್ನು ಮುಂದುವರೆಸಲು ಇಚ್ಛಿಸಿದರು. ಅವರು ೧೯೨೮ರಲ್ಲಿ ಮುಂಚೂಣಿಗೆ ಮರಳಿ ಬಂದರು.
  • ಇದರ ಹಿಂದಿನ ವರ್ಷ, ಬ್ರಿಟಿಷ್ ಸರ್ಕಾರವು ಸರ್ ಜಾನ್‌ ಸೈಮನ್‌ ನೇತೃತ್ವದ ಒಂದು ಹೊಸ ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು. ಆದರೆ ಇದರಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಇದರ ಪರಿಣಾಮವಾಗಿ ಭಾರತೀಯ ರಾಜಕೀಯ ಪಕ್ಷಗಳು ಆಯೋಗವನ್ನು ಬಹಿಷ್ಕರಿಸಿದವು. ೧೯೨೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಲ್ಕತ್ತಾ ಸಭೆಯಲ್ಲಿ, 'ಬ್ರಿಟಿಷ್ ಸರ್ಕಾರವು ಭಾರತಕ್ಕೆ ಪರಮಾಧಿಕಾರವನ್ನು ನೀಡಲಿ, ಅಥವಾ, ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟು ಕೊಂಡಿರುವ ಅಸಹಕಾರದ ಹೊಸ ಆಂದೋಲನವನ್ನು ಎದುರಿಸಲಿ' ಎಂಬ ನಿರ್ಣಯವನ್ನು ಗಾಂಧಿಯವರು ಮಂಡಿಸಿದರು.
  • ತತ್‌ಕ್ಷಣದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಯುವ ನಾಯಕರಾದ ಸುಭಾಷ್ ಚಂದ್ರ ಬೋಸ್‌ ಮತ್ತು ಜವಾಹರ್‌ ಲಾಲ್‌ ನೆಹರೂ ಅವರ ಅಭಿಪ್ರಾಯದ ಬಲಾಬಲವನ್ನು ನಿರ್ಣಯಿಸಿದ ರಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕರೆಗಾಗಿ ಎರಡು ವರ್ಷಗಳ ನಿರೀಕ್ಷೆಯನ್ನು ಒಂದು ವರ್ಷಕ್ಕೆ ಮೊಟಕುಗೊಳಿಸಿದರು.[೨೧] ಬ್ರಿಟಿಷ್‌ರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
  • ೧೯೨೯ರ ಡಿಸೆಂಬರ ೩೧ರಂದು, ಲಾಹೋರಿನಲ್ಲಿ ಭಾರತದ ಧ್ವಜವನ್ನು ಹಾರಿಸಲಾಯಿತು. ಲಾಹೋರಿನಲ್ಲಿ ಸಭೆ ಸೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ೧೯೩೦ರ ಜನವರಿ ೨೬ರಂದು, ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಇತರ ಪ್ರತಿಯೊಂದು ಭಾರತೀಯ ಸಂಘಟನೆಯೂ ಈ ದಿನವನ್ನು ಆಚರಿಸಿತು. ೧೯೩೦ರ ಮಾರ್ಚ್‌ ತಿಂಗಳಲ್ಲಿ, ಬ್ರಿಟಿಷ್ ಸರ್ಕಾರವು ವಿಧಿಸಿದ ಉಪ್ಪು ತೆರಿಗೆಯನ್ನು ವಿರೋಧಿಸಿ ಹೊಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
  • ತಾವೇ ಉಪ್ಪನ್ನು ತಯಾರಿಸುವ ಉದ್ದೇಶದಿಂದ, ಮಾರ್ಚ್‌ ೧೨ರಂದು ಅಹ್ಮದಾಬಾದ್‌ನಿಂದ ಪಾದಯಾತ್ರೆ ಆರಂಭಿಸಿ ೪೦೦ ಕಿಲೋಮೀಟರ್‌ (೨೪೮ ಮೈಲ್‌ಗಳು)ಗಳಷ್ಟು ದೂರ ನಡೆದು, ಏಪ್ರಿಲ್‌ ೬ರಂದು ದಂಡಿ ತಲುಪಿದ್ದು, ಇದರ ಪ್ರಮುಖಾಂಶವಾಗಿತ್ತು. ಸಮುದ್ರದತ್ತ ಸಾಗಿದ ಈ ದಂಡಯಾತ್ರೆಯಲ್ಲಿ ಸಾವಿರಾರು ಭಾರತೀಯರು ಗಾಂಧಿಯವರ ಜತೆಗೂಡಿದರು. ಭಾರತದ ಮೇಲಿನ ಬ್ರಿಟಿಷ್‌ರ ಹಿಡಿತವನ್ನು ಬುಡಮೇಲುಗೊಳಿಸುವಲ್ಲಿನ ಗಾಂಧಿಯವರ ಈ ಆಂದೋಲನವು ಯಶಸ್ವೀ ಆಂದೋಲನಗಳಲ್ಲಿ ಒಂದಾಗಿದ್ದು, ೬೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸುವುದರ ಮೂಲಕ ಬ್ರಿಟಿಷ್ ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡಿತು.
  • ಲಾರ್ಡ್ ಎಡ್ವರ್ಡ್‌ ಇರ್ವಿನ್‌ರ ಪ್ರಾತಿನಿಧ್ಯದೊಂದಿಗೆ ಬ್ರಿಟಿಷ್‌ ಸರ್ಕಾರವು ಗಾಂಧಿಯವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತು. ೧೯೩೧ರ ಮಾರ್ಚ್‌ ತಿಂಗಳಲ್ಲಿ ಗಾಂಧಿ-ಇರ್ವಿನ್‌ ಒಪ್ಪಂದ ಕ್ಕೆ ಸಹಿ ಹಾಕಲಾಯಿತು. ನಾಗರಿಕ ಅಸಹಕಾರ ಆಂದೋಲನವನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು.
  • ಈ ಒಪ್ಪಂದದ ಫಲವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಕೈಕ ಪ್ರತಿನಿಧಿಯಾಗಿ ಗಾಂಧಿಯವರನ್ನು ಲಂಡನ್‌ನಲ್ಲಿನ ದುಂಡುಮೇಜಿನ ಸಮ್ಮೇಳನಕ್ಕೆ ಹಾಜರಾಗಲು ಆಮಂತ್ರಿಸಲಾಯಿತು. ಈ ಸಮ್ಮೇಳನವು ಅಧಿಕಾರವನ್ನು ಹಸ್ತಾಂತರಗೊಳಿಸುವ ಬದಲಿಗೆ ಭಾರತದ ರಾಜಕುಮಾರರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕೃತವಾದದ್ದು ಗಾಂಧಿಯವರಿಗೆ ನಿರಾಶೆಯುಂಟುಮಾಡಿತು.
  • ಇದಕ್ಕಿಂತಲೂ ಹೆಚ್ಚಾಗಿ, ಲಾರ್ಡ್ ಇರ್ವಿನ್‌ರ ಉತ್ತರಾಧಿಕಾರಿಯಾದ ಲಾರ್ಡ್ ವಿಲಿಂಗ್ಡನ್‌ ರಾಷ್ಟ್ರವಾದಿಗಳ ಚಲನವಲನಗಳನ್ನು ನಿಯಂತ್ರಿಸುವ ಅಭಿಯಾನವನ್ನು ಆರಂಭಿಸಿದರು. ಗಾಂಧಿಯವರನ್ನು ಪುನ: ಬಂಧಿಸಲಾಯಿತು. ತಮ್ಮ ಅನುಯಾಯಿಗಳಿಂದ ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಟ್ಟು ಅವರ ಪ್ರಭಾವನ್ನು ಕಡಿಮೆಗೊಳಿಸಲು ಬ್ರಿಟಿಷ್ ಸರ್ಕಾರವು ಹವಣಿಸಿತು. ಆದರೆ, ಈ ತಂತ್ರವು ಸಫಲವಾಗಲಿಲ್ಲ.
  • ೧೯೩೨ರಲ್ಲಿ, ದಲಿತ ನಾಯಕ ಬಿ. ಆರ್‌. ಅಂಬೇಡ್ಕರ್‌ರವರ ಚಳುವಳಿಯ ಫಲವಾಗಿ, ಸರ್ಕಾರವು ಹೊಸ ಸಂವಿಧಾನದಡಿ ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ನೀಡಿತು. ಇದನ್ನು ಪ್ರತಿಭಟಿಸಿ ಗಾಂಧಿಯವರು ಸೆಪ್ಟೆಂಬರ್ ೧೯೩೨ರಲ್ಲಿ ಆರು ದಿನಗಳ ಉಪವಾಸವನ್ನು ಕೈಗೊಂಡ ಫಲವಾಗಿ, ದಲಿತ ಕ್ರಿಕೆಟ್ ಪಟುವಾಗಿದ್ದು ರಾಜಕೀಯ ಮುಖಂಡರಾಗಿ ಬದಲಾದ ಪಾಲ್ವಂಕರ್‌ ಬಾಲೂ ಅವರು ಮಧ್ಯಸ್ಥಿಕೆ ವಹಿಸಿದ ಮಾತುಕತೆಗಳ ಮೂಲಕ ಸರ್ಕಾರವು ಇನ್ನಷ್ಟು ಸಮದರ್ಶಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡಿತು. *ಇದು 'ಹರಿಜನ್‌' ಅಥವಾ 'ದೇವರ ಮಕ್ಕಳು' ಎಂದು ಮರುನಾಮಕರಣ ಮಾಡಿದ ಅಸ್ಪೃಶ್ಯರ ಜೀವನಗಳನ್ನು ಉತ್ತಮಗೊಳಿಸುವ ಗಾಂಧಿಯವರ ಒಂದು ಹೊಸ ಅಭಿಯಾನದ ಆರಂಭವಾಗಿತ್ತು. ಹರಿಜನ್‌ ಅಭಿಯಾನವನ್ನು ಬೆಂಬಲಿಸಲು ಗಾಂಧಿಯವರು ೧೯೩೩ರ ಮೇ ೮ರಂದು ೨೧ ದಿನಗಳ ಸ್ವಶುದ್ಧೀಕರಣದ ಉಪವಾಸವನ್ನು ಆರಂಭಿಸಿದರು.[೨೨] ಆದಾಗ್ಯೂ, ಈ ಹೊಸ ಆಭಿಯಾನವು ದಲಿತ ಸಮುದಾಯದೊಳಗೆ ಸಾರ್ವತ್ರಿಕವಾಗಿ ಸ್ವೀಕೃತವಾಗಲಿಲ್ಲ.
  • ಪ್ರಮುಖ ಮುಖಂಡರಾದ ಬಿ. ಆರ್‌. ಅಂಬೇಡ್ಕರ್‌ ರವರು ಗಾಂಧಿಯವರು ಬಳಸಿದ ಹರಿಜನ್‌ ಪದವನ್ನು ಖಂಡಿಸಿದರು. ಇದು ದಲಿತರು ಸಾಮಾಜಿಕವಾಗಿ ಅಪಕ್ವವಾಗಿದ್ದಾರೆಂದು ಬಿಂಬಿಸುತ್ತದೆ; ಹಾಗೂ, ಸವಲತ್ತುಗಳುಳ್ಳ ಜಾತೀಯ ಭಾರತೀಯರು ಇದರಲ್ಲಿ ಪಿತೃಪ್ರಾಯತಾವಾದದ ಪಾತ್ರವನ್ನು ವಹಿಸಿದ್ದಾರೆಂಬುದು ಇದರ ಪ್ರಮುಖ ಕಾರಣವಾಗಿತ್ತು. ಗಾಂಧಿಯವರು ದಲಿತರ ರಾಜಕೀಯ ಹಕ್ಕುಗಳನ್ನು ಶಿಥಿಲಗೊಳಿಸುತ್ತಿದ್ದಾರೆ ಎಂಬುದು ಅಂಬೇಡ್ಕರ್ ಮತ್ತು ಅವರ ಸಹಯೋಗಿಗಳ ಅಭಿಪ್ರಾಯವಾಗಿತ್ತು.
  • ತಾವು ವೈಶ್ಯ ಜಾತಿಯಲ್ಲಿ ಜನಿಸಿದ್ದರೂ, ಅಂಬೇಡ್ಕರ್‌ರಂತಹ ದಲಿತ ಕ್ರಿಯಾವಾದಿಗಳು ಲಭ್ಯವಿದ್ದರೂ ಸಹ ತಾವು ದಲಿತರ ಪರವಾಗಿ ಮಾತನಾಡಬಲ್ಲೆವು ಎಂದು ಗಾಂಧಿಯವರು ಸಮರ್ಥಿಸಿದ್ದರು. ೧೯೩೪ರ ಬೇಸಿಗೆಯಲ್ಲಿ, ಅವರ ಪ್ರಾಣಹತ್ಯೆಯ ಮೂರು ವಿಫಲ ಯತ್ನಗಳು ನಡೆದಿದ್ದವು. ಚುನಾವಣೆಗಳಲ್ಲಿ ಸ್ಪರ್ಧಿಸಿ ಒಕ್ಕೂಟ ಯೋಜನೆಯಡಿ ಅಧಿಕಾರವನ್ನು ಸ್ವೀಕರಿಸಲು ಕಾಂಗ್ರೆಸ್‌ ಪಕ್ಷವು ನಿರ್ಧರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.
  • ಅವರು ಪಕ್ಷದ ನಡೆಗೆ ಅಸಮ್ಮತಿಯನ್ನು ಸೂಚಿಸಲಿಲ್ಲವಾದರೂ, ಒಂದು ವೇಳೆ ತಾವು ರಾಜೀನಾಮೆ ನೀಡಿದಲ್ಲಿ, ಭಾರತೀಯರೊಂದಿಗಿನ ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಮುದಾಯ ಸ್ವಾಮ್ಯವಾದಿಗಳು (ಕಮ್ಯೂನಿಸ್ಟರು), ಸಮಾಜವಾದಿಗಳು, ಕಾರ್ಮಿಕ ಸಂಘದವರು (ಟ್ರೇಡ್‌ ಯುನಿಯನ್‌ನವರು), ವಿದ್ಯಾರ್ಥಿಗಳು, ಧಾರ್ಮಿಕ ಸಂಪ್ರದಾಯವಾದಿಗಳಿಂದ ಮೊದಲ್ಗೊಂಡು ವ್ಯವಹಾರ ಪರವಾದ ಗಾಢ ನಂಬುಗೆಗಳನ್ನು ಹೊಂದಿರುವವರ ತನಕ ಅನೇಕ ಸ್ತರದ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಸದಸ್ಯತ್ವದ ಸಂಖ್ಯೆಯಲ್ಲಿ ಕುಸಿತವುಂಟಾಗಬಹುದು ಹಾಗೂ ತಂತಮ್ಮ ಕೂಗುಗಳಿಗೆ ಓಗೊಡುವಂತೆ ಈ ವಿವಿಧ ಧ್ವನಿಗಳಿಗೆ ಅವಕಾಶ ನೀಡಬೇಕಾಗಿ ಬರಬಹುದು ಎಂದು ಗಾಂಧಿಯವರು ಭಾವಿಸಿದರು.
  • ಬ್ರಿಟಿಷ್ ಸರ್ಕಾರದೊಂದಿಗೆ ತಾತ್ಕಾಲಿಕ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡ ಪಕ್ಷವೊಂದರ ನಾಯಕತ್ವ ವಹಿಸಿ, ಬ್ರಿಟಿಷ್ ಸರ್ಕಾರದ ಪ್ರಚಾರಕ್ಕೆ ಗುರಿಯಾಗುವುದನ್ನೂ ಸಹ ಗಾಂಧಿಯವರು ಬಯಸಿರಲಿಲ್ಲ.[೨೩] ೧೯೩೬ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ ಲಕ್ನೋ ಅಧಿವೇಶನದಲ್ಲಿ ಗಾಂಧಿಯವರು ಮುಂಚೂಣಿಗೆ ಮರಳಿದರು. ಭಾರತದ ಭವಿಷ್ಯದ ಬಗೆಗಿನ ಊಹಾಪೋಹಗಳಿಗಿಂತಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಗಾಂಧಿಯವರು ಇಚ್ಛಿಸಿದರಾದರೂ, ಪಕ್ಷವು ಸಮಾಜವಾದವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳುವುದನ್ನು ಅವರು ತಡೆಯಲಿಲ್ಲ. ೧೯೩೮ರಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾಯಿತರಾಗಿದ್ದ ಸುಭಾಷ್ ಬೋಸ್‌‌ರೊಂದಿಗೆ ಗಾಂಧಿಯವರ ಘರ್ಷಣೆಯಾಗಿತ್ತು.
  • ಬೋಸ್‌ರಲ್ಲಿನ ಪ್ರಜಾಪ್ರಭುತ್ವದೆಡೆಗಿನ ಬದ್ಧತೆಯ ಅಭಾವ ಮತ್ತು ಅಹಿಂಸೆಯಲ್ಲಿನ ಅವಿಶ್ವಾಸವು ಗಾಂಧಿ ಹಾಗೂ ಬೋಸ್‌ರ ನಡುವಿನ ಘರ್ಷಣೆಯ ಪ್ರಮುಖ ಅಂಶಗಳಾಗಿದ್ದವು.ಗಾಂಧಿಯವರ ಟೀಕಾಪ್ರಹಾರವಿದ್ದರೂ ಸಹ ಬೋಸ್‌ ಪಕ್ಷದ ಅಧ್ಯಕ್ಷ ಹುದ್ದೆಗೆ ಎರಡನೆಯ ಅವಧಿಗೆ ಚುನಾಯಿತ ರಾದರು; ಆದರೆ, ಗಾಂಧಿಯ ತತ್ವಗಳನ್ನು ಪರಿತ್ಯಜಿಸಿದ ಬೋಸ್‌ರ ಕ್ರಮವನ್ನು ವಿರೋಧಿಸಿ, ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸಾಮೂಹಿಕವಾಗಿ ತಮ್ಮ-ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ, ಬೋಸ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದರು.[೨೪]

ಎರಡನೆಯ ವಿಶ್ವ ಸಮರ ಮತ್ತು 'ಕ್ವಿಟ್ ಇಂಡಿಯಾ ಆಂದೋಲನ'

[ಬದಲಾಯಿಸಿ]
ಗಾಂಧಿಯವರ ಕೈಬರಹವನ್ನು, ಸಬರಮತಿ ಆಶ್ರಮದಲ್ಲಿರುವ ಪುಸ್ತಕದಲ್ಲಿ ಸಂಗ್ರಹಿಸಿಡಲಾಗಿದೆ.
  • ನಾಜಿ ಜರ್ಮನಿ ಪೋಲೆಂಡ್‌ನ ಮೇಲೆ ಅತಿಕ್ರಮಣ ನಡೆಸಿದಾಗ ೧೯೩೯ರಲ್ಲಿ ಎರಡನೆಯ ವಿಶ್ವ ಸಮರವು ನಡೆಯಿತು. ಮೊದಲಿಗೆ, ಮಹಾಯುದ್ಧದಲ್ಲಿ ಬ್ರಿಟಿಷ್ ಸರ್ಕಾರದ ಕಾರ್ಯಾಚರಣೆಗೆ ಅಹಿಂಸಾತ್ಮಕ ನೈತಿಕ ಬೆಂಬಲವನ್ನು ನೀಡಲು ಗಾಂಧಿಯವರು ಒಲವು ತೋರಿದರೂ, ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಏಕಾಏಕಿಯಾಗಿ ಭಾರತವನ್ನು ಯುದ್ಧದಲ್ಲಿ ಸೇರಿಸಿಕೊಂಡ ಬಗ್ಗೆ ಇತರ ಕಾಂಗ್ರೆಸ್‌ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
  • ಎಲ್ಲಾ ಕಾಂಗ್ರೆಸ್ಸಿಗರೂ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದರು.[೨೫] ದೀರ್ಘಕಾಲದ ಚರ್ಚೆಗಳ ನಂತರ, 'ಭಾರತಕ್ಕೇ ಸ್ವಾತಂತ್ರ್ಯ ನಿರಾಕರಿಸಿದ್ದಾಗ, ಪ್ರಜಾಪ್ರಭುತ್ವಕ್ಕಾಗಿ ಎಂದು ನೆಪಹೂಡಿ ನಡೆಸಲಾದ ಯುದ್ಧಕ್ಕೆ ರಾಷ್ಟ್ರವು ಎಂದಿಗೂ ಸಹಭಾಗಿಯಾಗಲಾಗದು' ಎಂದು ಗಾಂಧಿಯವರು ಘೋಷಿಸಿದರು. ಯುದ್ಧವು ಮುನ್ನಡೆದಾಗ, ಬ್ರಿಟಿಷ್ ಆಡಳಿತವು ಭಾರತ ಬಿಟ್ಟು ತೊಲಗಲಿ (ಕ್ವಿಟ್ ಇಂಡಿಯಾ) ಎಂಬ ನಿರ್ಣಯವನ್ನು ಸಿದ್ಧಪಡಿಸಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿದರು. ಇದು ಬ್ರಿಟಿಷ್‌ ಆಡಳಿತವು ಭಾರತದ ಗಡಿಯನ್ನು ಬಿಟ್ಟು ಹೋಗುವಂತೆ ಮಾಡಲು ಗಾಂಧಿಯವರ ಮತ್ತು ಕಾಂಗ್ರೆಸ್‌ನ ಅತ್ಯಂತ ನಿರ್ಣಾಯಕ ದಂಗೆಯಾಗಿತ್ತು.[೨೬]
  • ಗಾಂಧಿಯವರು ಕೆಲವು ಕಾಂಗ್ರೆಸ್‌ ಪಕ್ಷದ ಸದಸ್ಯರು ಹಾಗೂ ಬ್ರಿಟಿಷ್‌-ಪರ ಮತ್ತು ಬ್ರಿಟಿಷ್‌-ವಿರೋಧೀ ಬಣಗಳುಳ್ಳ ಇತರ ಭಾರತೀಯ ರಾಜಕೀಯ ಗುಂಪುಗಳಿಂದ ಟೀಕಾಪ್ರಹಾರಕ್ಕೆ ಒಳಗಾದರು. ದುರುಳ ನಾಜಿತ್ವದ ವಿರುದ್ಧ ಹೋರಾಡುತ್ತಿರುವ ಬ್ರಿಟನ್‌ನನ್ನು ವಿರೋಧಿಸುವುದು ಅನೈತಿಕ ಎಂದು ಕೆಲವರು ಟೀಕಿಸಿದರೆ, ಗಾಂಧಿಯವರ ಬ್ರಿಟನ್‌-ವಿರೋಧದ ತೀವ್ರತೆ ಸಾಲದು ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟರು.
  • ಅಭೂತಪೂರ್ವ ಪ್ರಮಾಣದಲ್ಲಿ ನಡೆದಂತಹ ಸಾಮೂಹಿಕ ಬಂಧನಗಳು ಮತ್ತು ಹಿಂಸಾಚಾರದ ಘಟನೆಗಳನ್ನೊಳಗೊಂಡ ಕ್ವಿಟ್ ಇಂಡಿಯಾ ಚಳುವಳಿಯು ಹೋರಾಟದ ಇತಿಹಾಸದಲ್ಲಿಯೇ ಅತ್ಯಂತ ಬಲವತ್ತಾದ ಆಂದೋಲನವಾಯಿತು.[೨೭] ಪೊಲೀಸರ ಗುಂಡೇಟಿನಿಂದ ಸಾವಿರಾರು ಮಂದಿ ಸ್ವಾತಂತ್ರ್ಯ ಯೋಧರು ಹತರಾದರು ಅಥವಾ ಗಾಯಗೊಂಡರು, ಹಾಗೂ ಲಕ್ಷಗಟ್ಟಲೆ ಜನರು ಬಂಧಿತರಾದರು.
  • ಭಾರತಕ್ಕೆ ಕೂಡಲೇ ಸ್ವಾತಂತ್ರ್ಯ ನೀಡದಿದ್ದಲ್ಲಿ, ಯುದ್ಧದ ಕಾರ್ಯಾಚರಣೆಗೆ ಬೆಂಬಲವನ್ನು ನೀಡಲಾರೆವೆಂದು ಗಾಂಧಿಯವರು ಮತ್ತು ಅವರ ಬೆಂಬಲಿಗರು ಖಡಾಖಂಡಿತವಾಗಿ ಹೇಳಿದರು. ತಮ್ಮ ಸುತ್ತಲಿನ "ಆದೇಶಿತ ಅರಾಜಕತೆ" ಯು "ನೈಜ ಅರಾಜಕತೆಗಿಂತಲೂ ಕೆಟ್ಟದು" ಎಂದು ಹೇಳಿ, ಕೆಲವು ಹಿಂಸಾಚಾರದ ಕೃತ್ಯಗಳನ್ನು ಎಸಗಿದರೂ ಸಹ ಈ ಬಾರಿ ಆಂದೋಲನವನ್ನು ಸ್ಥಗಿತಗೊಳಿಸಲಾರೆವು ಎಂಬ ಸ್ಪಷ್ಟೀಕರಣವನ್ನೂ ನೀಡಿದರು. ಆತ್ಯಂತಿಕ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮತ್ತು ಕರೊ ಯಾ ಮರೊ ("ಮಾಡು ಇಲ್ಲವೇ ಮಡಿ") ತತ್ವಗಳ ಮೂಲಕ ಶಿಸ್ತು ಪಾಲಿಸಲು ಅವರು ಎಲ್ಲ ಕಾಂಗ್ರೆಸ್ಸಿಗರಿಗೆ ಮತ್ತು ಭಾರತೀಯರಿಗೆ ಕರೆ ನೀಡಿದರು.

ಪುಣೆಯ ಆಗಾಖಾನ್ ಪ್ಯಾಲೇಸ್ ನಲ್ಲಿ 'ಕಸ್ತೂರ ಬಾ' ಕೊನೆಯುಸಿರೆಳೆದರು

[ಬದಲಾಯಿಸಿ]
ಚಿತ್ರ:Kba.121-1.JPG
'ಆಗಾಖಾನ್ ಪ್ಯಾಲೇಸ್ ನ ಆಂಗಣದಲ್ಲೇ ಕಸ್ತುರ್ ಬಾ ರವರ ಸಮಾಧಿ'
  • ೧೯೪೨ರ ಆಗಸ್ಟ್ ೯ರಂದು, ಗಾಂಧಿಯವರನ್ನು ಮತ್ತು ಇಡೀ ಕಾಂಗ್ರೆಸ್‌ ಕಾರ್ಯಕಾರೀ ಸಮಿತಿಯನ್ನು ಬ್ರಿಟಿಷ್‌ರು ಮುಂಬಯಿಯಲ್ಲಿ ಬಂಧಿಸಿದರು. ಪುಣೆಯಲ್ಲಿನ ಅಗಾ ಖಾನ್ ಅರಮನೆಯಲ್ಲಿ ಗಾಂಧಿ ಮತ್ತು 'ಕಸ್ತೂರ ಬಾ' ರವರನ್ನು ಎರಡು ವರ್ಷಗಳ ಕಾಲ ಗೃಹ ಬಂದಿಯಾಗಿ ಇರಿಸಲಾಗಿತ್ತು. ಇಲ್ಲಿಯೇ ಗಾಂಧಿಯವರ ವೈಯಕ್ತಿಕ ಜೀವನದಲ್ಲಿ ಎರಡು ದೊಡ್ಡ ಆಘಾತಗಳುಂಟಾದವು.
  • ಅವರ ಆಪ್ತ ಕಾರ್ಯದರ್ಶಿಯಾಗಿದ್ದ ೫೦ ವರ್ಷ ವಯಸ್ಸಿನ ಮಹದೇವ್‌ ದೇಸಾಯಿ ಆರು ದಿನಗಳ ನಂತರ ಹೃದಯಾಘಾತದಿಂದ ಮೃತರಾದರು, ೧೮ ತಿಂಗಳುಗಳ ಕಾಲ ಅಲ್ಲಿಯೇ ಗೃಹ ಕೈದಿಯಾಗಿದ್ದ 'ಕಸ್ತೂರಬಾ' ರವರು ೧೯೪೪ರ ಫೆಬ್ರುವರಿ ೨೨ರಂದು, ಮಹಾತ್ಮಾಗಾಂಧಿಯವರ ತೊಡೆಯ ಮೇಲೆ ಮಲಗಿದ್ದಂತೆಯೆ ಚಿರನಿದ್ರೆ ಗೈದರು; ಇದಾದ ಆರು ವಾರಗಳ ನಂತರ ಗಾಂಧಿಯವರು ಮಲೇರಿಯಾ ಜ್ವರಕ್ಕೆ ತುತ್ತಾದರು.
  • ಯುದ್ಧ ಮುಗಿಯುವ ಮುಂಚೆಯೇ, ೧೯೪೪ರ ಮೇ ೬ರಂದು, ಕ್ಷೀಣಿಸುತ್ತಿದ ಆರೋಗ್ಯ ಮತ್ತು ಆವಶ್ಯ ಶಸ್ತ್ರಚಿಕಿತ್ಸೆಗಾಗಿ ಗಾಂಧಿಯವರನ್ನು ಬಿಡುಗಡೆಗೊಳಿಸಲಾಯಿತು; ಗಾಂಧಿಯವರು ಕಾರಾಗೃಹದಲ್ಲಿಯೇ ಸತ್ತು ರಾಷ್ಟ್ರವನ್ನು ಕುಪಿತಗೊಳಿಸುವುದು ಬ್ರಿಟಿಷ್ ಸರ್ಕಾರಕ್ಕೆ ಬೇಕಾಗಿರಲಿಲ್ಲ. ಕ್ವಿಟ್ ಇಂಡಿಯಾ ಆಂದೋಲನವು ತನ್ನ ಧ್ಯೇಯದಲ್ಲಿ ನಿಯಮಿತ ಯಶಸ್ಸು ಕಂಡಿತ್ತಾದರೂ, ಈ ಆಂದೋಲನದ ಹತ್ತಿಕ್ಕುವಿಕೆಯು ೧೯೪೩ರ ಅಂತ್ಯದಲ್ಲಿ ಭಾರತಕ್ಕೆ ಸುವ್ಯವಸ್ಥೆಯನ್ನು ತಂದಿತ್ತಿತು.
  • ಯುದ್ಧದ ಅಂತ್ಯದಲ್ಲಿ, ಆಡಳಿತವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದೆಂದು ಬ್ರಿಟಿಷರು ಸ್ಪಷ್ಟ ಸೂಚನೆಗಳನ್ನು ನೀಡಿದರು. ಈ ಹಂತದಲ್ಲಿ ಗಾಂಧಿಯವರು ಹೋರಾಟವನ್ನು ಹಿಂದೆಗೆದುಕೊಂಡ ಫಲವಾಗಿ, ಕಾಂಗ್ರೆಸ್ ನಾಯಕತ್ವವೂ ಸೇರಿದಂತೆ ಸುಮಾರು ೧೦೦,೦೦೦ ರಾಜಕೀಯ ಬಂಧಿತರು ಬಿಡುಗಡೆಗೊಂಡರು.

ಸ್ವಾತಂತ್ರ್ಯ ಗಳಿಸಿದ ಬಳಿಕ ಭಾರತದ ವಿಭಜನೆ

[ಬದಲಾಯಿಸಿ]
  • ೧೯೪೬ರಲ್ಲಿ ಬ್ರಿಟಿಷ್ ಸಂಪುಟ ನಿಯೋಗ‌ದ ಪ್ರಸ್ತಾಪಗಳನ್ನು ತಿರಿಸ್ಕರಿಸಿರೆಂದು ಗಾಂಧಿಯವರು ಕಾಂಗ್ರೆಸ್‌ಗೆ ಕರೆ ನೀಡಿದರು, ಏಕೆಂದರೆ, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದ ರಾಜ್ಯಗಳಿಗಾಗಿ ಪ್ರಸ್ತಾಪಿಸಲಾದ ಗುಂಪುಗೂಡಿಕೆ ಯು ವಿಭಜನೆಗೆ ನಾಂದಿಯಾಗುತ್ತದೆಂದು ಗಾಂಧಿಯವರು ಅನುಮಾನಿಸಿದ್ದರು. ಆದಾಗ್ಯೂ, ಗಾಂಧಿಯವರ ಸಲಹೆಯಿಂದ (ಆದರೆ ಅವರ ನಾಯಕತ್ವದಿಂದಲ್ಲ) ಕಾಂಗ್ರೆಸ್ ಭಿನ್ನವಾಗಿ ನಡೆದುಕೊಂಡ ಕೆಲವೇ ಸಂದರ್ಭಗಳಲ್ಲಿ ಇದೂ ಒಂದಾಗಿತ್ತು.
  • ಏಕೆಂದರೆ, ಒಂದು ವೇಳೆ ಕಾಂಗ್ರೆಸ್‌ ಪ್ರಸ್ತಾಪವನ್ನು ಅಂಗೀಕರಿಸದಿದ್ದಲ್ಲಿ, ಸರ್ಕಾರದ ನಿಯಂತ್ರಣವು ಮುಸ್ಲಿಮ್‌ ಲೀಗ್‌ಗೆ ಹೋಗಬಹುದು ಎಂದು ನೆಹರೂ ಮತ್ತು ಪಟೇಲ್‌ರಿಗೆ ಗೊತ್ತಿತ್ತು. ೧೯೪೬ರಿಂದ ೧೯೪೮ರ ವರೆಗೆ, ಹಿಂಸಾಚಾರದ ಘಟನೆಗಳಲ್ಲಿ ೫,೦೦೦ಕ್ಕಿಂತಲೂ ಹೆಚ್ಚು ಜನರು ಹತರಾದರು. ಭಾರತವು ಎರಡು ರಾಷ್ಟ್ರಗಳಾಗಿ ವಿಭಜನೆಯಾಗುವ ಯಾವುದೇ ಪ್ರಸ್ತಾಪವನ್ನು ಗಾಂಧಿಯವರು ಬಲವಾಗಿ ವಿರೋಧಿಸಿದರು.
  • ಭಾರತದಲ್ಲಿ ಇದುವರೆಗೂ ಹಿಂದೂ ಮತ್ತು ಸಿಖ್ಖರೊಂದಿಗೆ ಜೊತೆಗೂಡಿ ವಾಸಿಸುತ್ತಿದ್ದ ಮುಸ್ಲಿಮರಲ್ಲಿ ಬಹುಪಾಲು ಜನರು ವಿಭಜನೆಯ ಪರ ನಿಂತರು. ಇದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಮ್‌ ಲೀಗ್‌ ಪಕ್ಷದ ಮುಖಂಡರಾದ ಮಹಮದ್‌ ಅಲಿ ಜಿನ್ನಾ ಪಶ್ಚಿಮ ಪಂಜಾಬ್‌, ಸಿಂಧ್‌, ವಾಯುವ್ಯ ಸೀಮಾಂತ ಪ್ರಾಂತ್ಯ ಮತ್ತು ಪೂರ್ವ ಬಂಗಾಳ ವಲಯಗಳಲ್ಲಿ ಅಪಾರ ಬೆಂಬಲವನ್ನು ಗಳಿಸಿದ್ದರು.
  • ಹಿಂದೂ-ಮುಸ್ಲಿಮ್‌ ನಡುವಿನ ವ್ಯಾಪಕ ನಾಗರಿಕ ಘರ್ಷಣೆಯನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ವಿಭಜನಾ ಯೋಜನೆಯನ್ನು ಕಾಂಗ್ರೆಸ್‌ ನಾಯಕತ್ವವು ಅಂಗೀಕರಿಸಿತು. ಗಾಂಧಿಯವರು ತಮ್ಮ ಅಂತರಾಳದಿಂದ ವಿಭಜನೆಯನ್ನು ವಿರೋಧಿಸುವರೆಂದು ಕಾಂಗ್ರೆಸ್‌ ಮುಖಂಡರಿಗೆ ಗೊತ್ತಿತ್ತು, ಹಾಗೂ ಅವರ ಒಪ್ಪಿಗೆಯಿಲ್ಲದೆ ಪಕ್ಷವು ವಿಭಜನೆಯ ಪ್ರಸ್ತಾಪದೊಂದಿಗೆ ಮುನ್ನಡೆಯಲು ಅಸಾಧ್ಯವೆಂದು ತಿಳಿದಿತ್ತು, ಏಕೆಂದರೆ ಪಕ್ಷದಲ್ಲಿ ಮತ್ತು ಭಾರತದಾದ್ಯಂತ ಅವರಿಗೆ ಸದೃಢ ಬೆಂಬಲವಿತ್ತು.
  • ವಿಭಜನೆಯೊಂದೇ ದಾರಿಯೆಂದು ಗಾಂಧಿಯವರ ನಿಕಟ ಸಹೋದ್ಯೋಗಿಗಳು ಒಪ್ಪಿಕೊಂಡಿದ್ದರು, ಹಾಗೂ ನಾಗರಿಕ ಸಮರವನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ಗಾಂಧಿಯವರಿಗೆ ಮನಗಾಣಿಸಲು ಸರ್ದಾರ್ ಪಟೇಲ್‌ರು ಪ್ರಯತ್ನಿಸಿದರು. ಜರ್ಜರಿತರಾದ ಗಾಂಧಿಯವರು ಒಪ್ಪಿಗೆ ಸೂಚಿಸಿದರು. ಉತ್ತರ ಭಾರತ ಹಾಗೂ ಬಂಗಾಳ ಪ್ರಾಂತ್ಯದಲ್ಲಿ ಉದ್ರೇಕವನ್ನು ಶಮನಗೊಳಿಸಲು, ಗಾಂಧಿಯವರು ಮುಸ್ಲಿಮ್‌ ಮತ್ತು ಹಿಂದೂ ಮುಖಂಡರೊಂದಿಗೆ ವಿಸ್ತೃತವಾದ ಚರ್ಚೆಗಳನ್ನು ನಡೆಸಿದರು.
  • ೧೯೪೭ರಲ್ಲಿ ಭಾರತ-ಪಾಕಿಸ್ತಾನ ಯುದ್ಧವು ನಡೆದಿದ್ದರೂ ಸಹ, ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಪಾಕಿಸ್ತಾನಕ್ಕೆ ಕೊಡಬೇಕಾದ ೫೫ ಕೋಟಿ (೫೫೦ಮಿಲಿಯನ್‌ ಭಾರತೀಯ ರೂಪಾಯಿಗಳು) ರೂಪಾಯಿಗಳಷ್ಟು ಹಣವನ್ನು ನೀಡಲು ನಿರಾಕರಿಸಿದಾಗ ಗಾಂಧಿಯವರು ತೀವ್ರವಾಗಿ ಅಸಮಾಧಾನಗೊಂಡರು. ಪಾಕಿಸ್ತಾನವು ಹಣವನ್ನು ಭಾರತದ ವಿರುದ್ಧದ ಯುದ್ಧಕ್ಕಾಗಿ ಬಳಸುತ್ತದೆಂದು ಸರ್ದಾರ್‌ ಪಟೇಲ್‌ರಂತಹ ಮುಖಂಡರು ಆತಂಕ ವ್ಯಕ್ತಪಡಿಸಿದರು. *ಮುಸ್ಲಿಮ್‌ ಮತ್ತು ಹಿಂದೂ ಮುಖಂಡರು ಪರಸ್ಪರ ಸೌಹಾರ್ದದತ್ತ ಬರಲು ಸಾಧ್ಯವಾಗದೆ ಹತಾಶೆಯನ್ನು ವ್ಯಕ್ತಪಡಿಸಿದಾಗ, ಹಾಗೂ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕೆಂಬ ಕೂಗುಗಳು ತಿರುಗಿ ಎದ್ದಾಗ ಗಾಂಧಿಯವರು ಇನ್ನಷ್ಟು ಜರ್ಜರಿತರಾದರು.[೨೮] ಎಲ್ಲಾ ಕೋಮು ಗಲಭೆಗಳನ್ನು ನಿಲ್ಲಿಸಬೇಕು.
  • ಪಾಕಿಸ್ತಾನಕ್ಕೆ ೫೫೦ ಮಿಲಿಯನ್ ರೂಪಾಯಿಗಳನ್ನು ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಸಂದಾಯ ಮಾಡಬೇಕಂಬ ಹಠಹಿಡಿದು ದಿಲ್ಲಿಯಲ್ಲಿ ಅವರು ಅಮರಣಾಂತ ಉಪವಾಸವನ್ನು ಶುರುಗೊಳಿಸಿದರು. ಪಾಕಿಸ್ತಾನದಲ್ಲಿನ ಅಸ್ಥಿರತೆ ಮತ್ತು ಅಭದ್ರತೆಯು ಭಾರತದ ವಿರುದ್ಧದ ಕೋಪವನ್ನು ಹೆಚ್ಚಿಸಿ, ಗಡಿಯಲ್ಲಿ ಹಿಂಸಾಚಾರದ ಘಟನೆಗಳು ಹಬ್ಬಬಹುದೆಂದು ಗಾಂಧಿಯವರು ಆತಂಕ ವ್ಯಕ್ತಪಡಿಸಿದರು. ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ಶತ್ರುತ್ವವನ್ನು ಮುಂದುವರೆಸಿ ಇದು ವ್ಯಾಪಕ ನಾಗರಿಕ ಸಮರಕ್ಕೆ ಆಸ್ಪದ ಕೊಡಬಹುದೆಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.
  • ತಮ್ಮ ಜೀವಾವಧಿ ಸಹೋದ್ಯೋಗಿಗಳೊಂದಿಗಿನ ಭಾವಪೂರ್ಣ ಚರ್ಚೆಗಳ ನಂತರ ಗಾಂಧಿಯವರು ತಮ್ಮ ನಿರ್ಧಾರವನ್ನು ಸಡಿಲಿಸಲು ನಿರಾಕರಿಸಿದರು. ಇದರ ಫಲವಾಗಿ ಸರ್ಕಾರವು ತಮ್ಮ ನೀತಿಯನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ಹಣಸಂದಾಯವನ್ನು ಮಾಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮಹಾಸಭಾ ಸೇರಿದಂತೆ ಹಿಂದೂ, ಮುಸ್ಲಿಮ್‌ ಮತ್ತು ಸಿಖ್ ಸಮುದಾಯದ ಮುಖಂಡರು ತಾವು ಹಿಂಸಾಚಾರವನ್ನು ತ್ಯಜಿಸಿ ಶಾಂತಿಗಾಗಿ ಕರೆ ನೀಡುವುದಾಗಿ ಗಾಂಧಿಯವರಿಗೆ ಭರವಸೆ ನೀಡಿದರು. ಆಗ ಗಾಂಧಿಯವರು ಮೂಸಂಬಿ ರಸ ಕುಡಿಯುವುದರ ಮೂಲಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.[೨೯]

ಹತ್ಯೆ

[ಬದಲಾಯಿಸಿ]

Assassination of Mohandas Karamchand Gandhi

ರಾಜ್‌ಘಾಟ್: ಗಾಂಧಿಯವರ ಚಿತಾಭಸ್ಮವಿರುವ ಅಗಾ ಖಾನನ ಅರಮನೆ (ಪುಣೆ, ಭಾರತ).
  • ಪಾಕಿಸ್ತಾನಕ್ಕೆ ಹಣದ ಸಂದಾಯ ಮಾಡಲು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಿದಕ್ಕೆ ಗಾಂಧಿಯವರೇ ಹೊಣೆ ಎಂದು ಆತನು ಹೇಳಿದ್ದನು.[೩೦] ಗೋಡ್ಸೆ ಮತ್ತು ಆತನ ಸಹಚರ ನಾರಾಯಣ್ ಆಪ್ಟೆ - ಇವರಿಬ್ಬರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿ, ೧೯೪೯ರ ನವೆಂಬರ್ ೧೫ರಂದು ಅವರನ್ನು ಗಲ್ಲಿಗೇರಿಸಲಾಯಿತು.
  • ಹೊಸದಿಲ್ಲಿರಾಜ್‌ ಘಾಟ್‌ನಲ್ಲಿರುವ ಗಾಂಧಿಯವರ ಸ್ಮಾರಕ (ಅಥವಾ ಸಮಾಧಿ) ಯ ಶಿಲಾಲೇಖನದಲ್ಲಿ "ಹೇ ರಾಮ್‌" ಎಂಬ ಉಚ್ಚರಣೆಯಿದೆ. (ದೇವನಾಗರಿ: हे ! राम ಅಥವಾ, ಹೇ [[ರಾಮ|[ರಾಮ್‌] Error: {{Transliteration}}: transliteration text not Latin script (pos 1) (help),]] ) ಅನುವಾದ ಮಾಡಿದಾಗ "ಓ ದೇವರೇ" ಎಂದಾಗುವುದು. ತಾವು ಗುಂಡೇಟಿಗೀಡಾದಾಗ ಗಾಂಧಿಯವರ ಕೊನೆಯ ಮಾತುಗಳೆಂದು ಬಹುಮಟ್ಟಿಗೆ ನಂಬಲಾಗಿದ್ದರೂ, ಈ ಹೇಳಿಕೆಯ ನಿಖರತೆಯು ವಿವಾದಗ್ರಸ್ಥವಾಗಿದೆ.[೩೧]
  • ಜವಾಹರ್‌ಲಾಲ್‌ ನೆಹರೂರವರು ಬಾನುಲಿಯ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು:[೩೨]
Friends and comrades, the light has gone out of our lives, and there is darkness everywhere, and I do not quite know what to tell you or how to say it. Our beloved leader, Bapu as we called him, the father of the nation, is no more. Perhaps I am wrong to say that; nevertheless, we will not see him again, as we have seen him for these many years, we will not run to him for advice or seek solace from him, and that is a terrible blow, not only for me, but for millions and millions in this country.

Jawaharlal Nehru, address to Gandhi

  • ಗಾಂಧಿಯವರ ಚಿತಾಭಸ್ಮವನ್ನು ಕರಂಡಗಳಲ್ಲಿ ತುಂಬಿ ಸ್ಮರಣಾರ್ಥ ಸೇವೆಗಳಿಗಾಗಿ ರಾಷ್ಟ್ರಾದ್ಯಂತ ರವಾನಿಸಲಾಯಿತು. ೧೯೪೮ರ ಫೆಬ್ರುವರಿ ೧೨ರಂದು ಅಲಹಾಬಾದ್‌ನಲ್ಲಿನ ಸಂಗಮದಲ್ಲಿ ಅವರ ಚಿತಾಭಸ್ಮವನ್ನು ವಿಸರ್ಜಿಸಲಾಯಿತು, ಆದರೂ ಕೆಲವು ಕರಂಡಗಳನ್ನು ರಹಸ್ಯವಾಗಿ ಹಿಂತೆಗೆಯಲಾಯಿತು.[೩೩]
  • ೧೯೯೭ರಲ್ಲಿ ತುಷಾರ್‌ ಗಾಂಧಿಯವರು ಬ್ಯಾಂಕಿನ ನೆಲಮಾಳಿಗೆಯೊಂದರಲ್ಲಿದ್ದ ಕರಂಡವನ್ನು ನ್ಯಾಯಾಲಯಗಳ ಮೂಲಕ ಪುನರ್ಪಡೆದು, ಅಲಾಹಾಬಾದ್‌ನಲ್ಲಿನ ಸಂಗಮದಲ್ಲಿ ವಿಸರ್ಜಿಸಿದರು.[೩೩][೩೪] ದುಬೈ-ಮೂಲದ ವರ್ತಕರೊಬ್ಬರು ಮುಂಬಯಿ ಸಂಗ್ರಹಾಲಯಕ್ಕೆ ಕಳುಹಿಸಿಕೊಟ್ಟಿದ್ದ ಇನ್ನೊಂದು ಕರಂಡದಲ್ಲಿದ್ದ ಚಿತಾಭಸ್ಮವನ್ನು ಕುಟುಂಬವು ೨೦೦೮ರ ಜನವರಿ ೩೦ರಂದು ಗಿರ್‌ಗಾಂವ್‌ ಚೌಪಟ್ಟಿಯಲ್ಲಿ ವಿಸರ್ಜಿಸಿತು.
  • [79] ಮತ್ತೊಂದು ಕರಂಡವು (ಗಾಂಧಿಯವರನ್ನು ೧೯೪೨ರಿಂದ ೧೯೪೪ರ ವರೆಗೆ ಸೆರೆಯಲ್ಲಿಡಲಾಗಿದ್ದ) ಪುಣೆಯ ಅಗಾ ಖಾನ್‌ ಅರಮನೆಯಲ್ಲಿದೆ ಹಾಗೂ ಮಗದೊಂದು ಕರಂಡವು ಲಾಸ್‌ ಏಂಜಲೀಸ್‌ನ ಸೆಲ್ಪ್‌-ರಿಯಲೈಸೇಷನ್‌ ಫೆಲೊಷಿಪ್‌ ಲೇಕ್ ಶ್ರೈನ್‌ನಲ್ಲಿದೆ.[೩೫] ಈ ಚಿತಾಭಸ್ಮಗಳು ರಾಜಕೀಯವಾಗಿ ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆಯಿದೆಯೆಂದು ಕುಟುಂಬಕ್ಕೆ ಅರಿವಿದ್ದರೂ, ಪವಿತ್ರಸ್ಥಳಗಳನ್ನು ಒಡೆಯುವ ಪರಿಸ್ಥಿತಿ ಎದುರಾಗದಿರಲಿ ಎಂದು ಅವರು ಅವುಗಳನ್ನು ಅಲ್ಲಿಂದ ತೆಗೆಯಲು ಇಚ್ಛಿಸುತ್ತಿಲ್ಲ.[೩೩]
  • ಹತ್ಯೆಯ ಹಿನ್ನಲೆ:ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ... ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು.[೩೬] ಅವರ ಜೀವಿತಕಾಲದಲ್ಲಿ ಬಹುತೇಕ ಭಾರತೀಯರು ಅವರನ್ನು ಗೌರವಿಸಿದ್ದು ಯಾಕೆಂದರೆ, ದೇಶವನ್ನಾಳುವ ಬ್ರಿಟಿಷರೇ ಅವರೆದುರು ಮಣಿಯುತ್ತಿದ್ದರು ಎನ್ನುವ ಕಾರಣಕ್ಕೆ.[೩೭] https://www.prajavani.net/stories/national/former-pti-journalist-now-99-669208.html ಗಾಂಧಿ ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;Published: 03 ಅಕ್ಟೋಬರ್ 2019,]
  • ಪ್ರಥಮವರದಿ:1948ರ ಜನವರಿ 30, ಸಂಜೆ 6.30–7ರ ಹೊತ್ತಿಗೆ ಗಾಂಧೀಜಿ ಹತ್ಯೆಯ ಸುದ್ದಿ ಬಂತು’ ಎಂದು ಈಗ ಮುಂಬೈನ ಮೀರಾ ರೋಡ್‌ ನಿವಾಸಿಯಾಗಿರುವ ವಾಲ್ಟರ್‌ ನೆನಪಿಸಿಕೊಂಡರು. ದೂರವಾಣಿಯ ಅತ್ತಕಡೆಯಲ್ಲಿ ಇದ್ದವರು ಪಿಟಿಐನ ಮುಂಬೈ ವರದಿಗಾರ ಪೋಂಕ್ಷೆ. ಸಂಜೆಯ ಪ್ರಾರ್ಥನೆಗೆ ಹೋಗುತ್ತಿದ್ದ ಗಾಂಧೀಜಿಯ ಹತ್ಯೆಯಾಯಿತು ಎಂಬ ದುರಂತ ಸುದ್ದಿಯನ್ನು ಅವರು ಹೇಳಿದ್ದರು[೩೮]

ಗಾಂಧಿಯವರ ತತ್ವಗಳು

[ಬದಲಾಯಿಸಿ]
  • ಅಲ್ಬರ್ಟ್ ಐನ್‌ಸ್ಟೀನ್‌ನ ಒಂದು ಉದ್ಗಾರ ಹೀಗಿದೆ:–

"ರಕ್ತಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ
ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ
ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’."
-ಅವರು ಹೀಗೆಂದುದು ಮಹಾತ್ಮ ಗಾಂಧೀಜಿ ಬಗ್ಗೆ.
- ಗಾಂಧಿಯವರ ಬದುಕನ್ನು ನೋಡಿದ, ಓದಿದ
ಅವರ ಸಂದೇಹ ಇದು.[೩೯]

  • ನಿಜ ಅಥವಾ ಸತ್ಯ ದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ಅವರು ತಮ್ಮ ಆತ್ಮಚರಿತ್ರೆಯನ್ನು ದಿ ಸ್ಟೋರಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿಥ್ ಟ್ರುತ್ ಎಂದು ಕರೆದುಕೊಂಡರು. (ನೋಡಿ - ಸಂತ ಗಾಂಧೀಜೀ)
  • ತಮ್ಮದೇ ಆದ ಪೈಶಾಚಿಕತೆಗಳನ್ನು, ಅಂಜಿಕೆಗಳನ್ನು ಮತ್ತು ಅಭದ್ರತೆಗಳನ್ನು ನಿವಾರಿಸಿಕೊಂಡದ್ದು ತಾವು ಸೆಣಸಿದ ಅತಿ ಮುಖ್ಯ ಸಮರವಾಗಿತ್ತೆಂದು ಗಾಂಧಿಯವರು ತಿಳಿಸಿದರು. "ದೇವರೇ ಸತ್ಯ" ಎಂದು ಹೇಳುವ ಮೂಲಕ ಗಾಂಧಿಯವರು ತಮ್ಮ ನಂಬಿಕೆಗಳ ಸಾರಾಂಶವನ್ನು ಹೇಳಿದರು. ನಂತರ ಅವರು "ಸತ್ಯವೇ ದೇವರು" ಎಂದು ಆ ಹೇಳಿಕೆಯನ್ನು ಬದಲಿಸಿದರು. ಹಾಗಾಗಿ, ಗಾಂಧಿಯವರ ತತ್ವದಲ್ಲಿ, ಸತ್ಯ (ನಿಜ)ವೇ "ದೇವರು."
  • (ನೋಡಿ - ಸಂತ ಗಾಂಧೀಜೀ)

ಅಹಿಂಸಾ

[ಬದಲಾಯಿಸಿ]
  • ಮಹಾತ್ಮ ಗಾಂಧಿಯವರು ಅಹಿಂಸೆಯ ತತ್ವದ ಸೃಷ್ಟಿಕರ್ತೃರಲ್ಲದಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಅಳವಡಿಸುವಲ್ಲಿ ಅವರು ಮೊದಲಿಗರಾಗಿದ್ದರು.[೪೦] ಭಾರತೀಯ ಧಾರ್ಮಿಕ ಚಿಂತನೆಯಲ್ಲಿ ಹಿಂಸಾಚಾರವಿಲ್ಲದಿರುವಿಕೆ, (ಅಹಿಂಸೆ ) ಮತ್ತು ಪ್ರತಿರೋಧವಿಲ್ಲದಿರುವಿಕೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಹಾಗಾಗಿ, ಹಿಂದು, ಬೌದ್ಧ, ಜೈನ್‌, ಯಹೂದಿ ಮತ್ತು ಕ್ರಿಶ್ಚಿಯನ್ ಪ್ರಸಂಗಗಳಲ್ಲಿ ಪುನರುಜ್ಜೀವನಗಳನ್ನು ಕಂಡಿವೆ.
  • ಗಾಂಧಿಯವರು ಈ ತತ್ವ ಮತ್ತು ಜೀವನ ರೀತಿಯನ್ನು ತಮ್ಮ ಆತ್ಮಚರಿತ್ರೆಯಾದ ದಿ ಸ್ಟೋರಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿಥ್ ಟ್ರುತ್ ನಲ್ಲಿ ವಿವರಿಸಿದ್ದಾರೆ. ಅವರು ಈ ರೀತಿ ಹೇಳಿದಂತೆ ಉಲ್ಲೇಖಿಸಲಾಗಿದೆ:

"ನಾನು ಹತಾಶ ಸ್ಥಿತಿಯಲ್ಲಿದ್ದಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೇಮದ ಮಾರ್ಗವೇ ಗೆದ್ದಿದೆ ಎಂಬುದನ್ನು ನಾನು ನೆನಪಿಸಿಕೊಳ್ಳುವೆ. ಪ್ರಜಾಪೀಡಕರು ಮತ್ತು ಕೊಲೆಗಾರರು ಒಮ್ಮೆ ಅಜೇಯರಾಗಿರುವಂತೆ ಕಾಣುತ್ತಾರಾದರೂ, ಅಂತಿಮವಾಗಿ, ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ; ಯಾವಾಗಲೂ ಈ ಕುರಿತು ಯೋಚಿಸಿ"

"ಸರ್ವಾಧಿಕಾರಶಾಹಿಯ ಪದ್ಧತಿಯ ಹೆಸರಿನಡಿ ಅಥವಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ಬದ ಆರ್ಷನಾಮಗಳಡಿ ಹುಚ್ಚುಗೊಳಿಸುವಂತಹ ಸರ್ವನಾಶವು ನಡೆಯುತ್ತಿದ್ದಾಗ, ಮೃತರಿಗೆ, ಅನಾಥರಿಗೆ ಮತ್ತು ಸೂರಿಲ್ಲದವರಿಗೆ ಯಾವ ವ್ಯತ್ಯಾಸ ಕಂಡು ಬರುತ್ತದೆ?"

"ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು."

"ನಾನು ಪ್ರಾಣ ತೆರಲು ಸಿದ್ಧಲಿರಲಿಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ."

ಸರ್ಕಾರ, ಪೊಲೀಸ್‌ ಮತ್ತು ಸೇನೆಗಳೆಲ್ಲವೂ ಅಹಿಂಸಾತ್ಮಕವಾಗಿರುವಂತಹ ಪ್ರಪಂಚವನ್ನು ಚಿತ್ರಿಸಿಕೊಳ್ಳುವಲ್ಲಿ ಈ ತತ್ವಗಳನ್ನು ಅಳವಡಿಸುವ ಉದ್ದೇಶದಲ್ಲಿ, ಅವುಗಳನ್ನು ತಾರ್ಕಿಕತೆಯ ಕಟ್ಟಕಡೆಯ ತನಕ ಒಯ್ಯಲು ಗಾಂಧಿಯವರು ಹಿಂಜರಿಯಲಿಲ್ಲ. ಕೆಳಗಿನ ಉಲ್ಲೇಖನಗಳನ್ನು "ಫಾರ್ ಪೆಸಿಫಿಸ್ಟ್ಸ್" ಎಂಬ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ.[೪೧]

ಯುದ್ಧದ ವಿಜ್ಞಾನವು ಒಬ್ಬನನ್ನು ಸ್ಪಷ್ಟವಾಗಿ, ಸರಳವಾಗಿ, ಸರ್ವಾಧಿಕಾರದತ್ತ ಒಯ್ಯುತ್ತದೆ. ಅಹಿಂಸೆಯ ವಿಜ್ಞಾನವೊಂದೇ ಒಬ್ಬನನ್ನು ಶುದ್ಧ ಪ್ರಜಾಪ್ರಭುತ್ವದತ್ತ ಒಯ್ಯಬಲ್ಲದು... ಶಿಕ್ಷೆಯ ಭೀತಿಯಿಂದ ಹುಟ್ಟುವ ಅಧಿಕಾರಕ್ಕಿಂತಲೂ, ಪ್ರೇಮದ ಆಧಾರದ ಮೇಲಿರುವ ಅಧಿಕಾರವು ಸಾವಿರಪಟ್ಟು ಪರಿಣಾಮಕಾರಿಯಾಗಿದೆ... ಅಹಿಂಸೆಯನ್ನು ಕೇವಲ ವ್ಯಕ್ತಿಗಳು ಮಾತ್ರ ಆಚರಿಸಲು ಸಾಧ್ಯ, ವ್ಯಕ್ತಿಗಳು ತುಂಬಿರುವಂತಹ ರಾಷ್ಟ್ರಗಳಿಂದ ಎಂದಿಗೂ ಸಾಧ್ಯವಿಲ್ಲ ಎಂಬುದು ಪಾಷಂಡಿತನವಾಗುತ್ತದೆ... ಅಹಿಂಸೆಯನ್ನು ಆಧರಿಸಿರುವ ಪ್ರಜಾಪ್ರಭುತ್ವವೇ ಪರಿಶುದ್ಧ ಅರಾಜಕತೆಗಿರುವ ಸನಿಹದ ಮಾರ್ಗವಾಗಬಲ್ಲದು... ಸಂಪೂರ್ಣ ಅಹಿಂಸೆಯ ಆಧಾರದ ಮೇಲೆ ಸಂಘಟಿಸಲ್ಪಡುವ ಮತ್ತು ನಡೆಯುವ ಸಮಾಜವು ಪರಿಶುದ್ಧ ಅರಾಜಕತೆಯಾಗುವುದು.

ಅಹಿಂಸಾತ್ಮಕ ಸನ್ನಿವೇಶದಲ್ಲಿಯೂ ಸಹ ಪೊಲೀಸ್ ದಂಡಿನ ಆವಶ್ಯಕತೆಯಿದೆಯೆಂಬುದನ್ನು ನಾನು ಒಪ್ಪಿಕೊಂಡಿರುವೆ... ಅಹಿಂಸೆಯನ್ನು ನಂಬಿದವರು ಪೊಲೀಸ್‌ ಪಡೆಗಳಲ್ಲಿ ಸೇರಿರುತ್ತಾರೆ. ಜನರು ಸಹಜ ಪ್ರವೃತ್ತಿಯಿಂದ ಅವರಿಗೆ ಎಲ್ಲಾ ಸಹಾಯವನ್ನು ನೀಡಿ, ಪರಸ್ಪರ ಸಹಕಾರದಿಂದ ಅವರು ಕಡಿಮೆಗೊಳ್ಳುತ್ತಲಿರುವ ಗಲಾಟೆಗಳನ್ನು ಸುಲಭವಾಗಿ ಹತ್ತಿಕ್ಕುತ್ತಾರೆ... ಅಹಿಂಸಾತ್ಮಕ ಸನ್ನಿವೇಶದಲ್ಲಿ ಶ್ರಮಿಕ ಮತ್ತು ಬಂಡವಾಳಶಾಹಿಗಳ ನಡುವಿನ ಹಿಂಸಾತ್ಮಕ ಜಗಳಗಳು ಹಾಗೂ ಮುಷ್ಕರಗಳು ಬಹಳ ವಿರಳವಾಗಿರುತ್ತವೆ, ಏಕೆಂದರೆ ಅಹಿಂಸಾತ್ಮಕ ಬಹುಮತದ ಪ್ರಭಾವವು ಹೆಚ್ಚಾಗಿದ್ದು ಸಮಾಜದಲ್ಲಿರುವ ತಾತ್ವಿಕ ಘಟಕಗಳಿಗೆ ಗೌರವ ಸೂಚಿಸಬಲ್ಲುದಾಗಿದೆ. ಇದೇ ರೀತಿ, ಕೋಮುಗಲಭೆಗಳಿಗೆ ಯಾವುದೇ ಅವಕಾಶವಿರುವುದಿಲ್ಲ...

ಗಲಾಟೆಯ ಸಮಯದಲ್ಲಿ ಹಾಗೂ ಶಾಂತಿಯುತ ವಾತಾವರಣದಲ್ಲಿ ಅಹಿಂಸಾತ್ಮಕ ಸೇನೆಯು ಸಶಸ್ತ್ರ ಸೇನೆಗಿಂತ ಭಿನ್ನವಾಗಿ ವರ್ತಿಸುವುದು. ಕಚ್ಚಾಡುತ್ತಿರುವ ಸಮುದಾಯಗಳನ್ನು ಒಟ್ಟಿಗೆ ತಂದು, ಶಾಂತಿಯುತ ಪ್ರಚಾರವನ್ನು ಕೈಗೊಂಡು, ಅವರ ಪ್ರದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಸಂಪರ್ಕದಲ್ಲಿರಿಸುವಂತಹ ಚಟುವಟಿಕೆಗಳಲ್ಲಿ ತೊಡಗುವುದು ಅವರ ಕರ್ತವ್ಯವಾಗಿರುತ್ತದೆ. ಇಂತಹ ಸೇನೆಯು ಯಾವುದೇ ತುರ್ತಿನ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಿರಬೇಕು, ಮತ್ತು ಉದ್ರಿಕ್ತ ಗುಂಪುಗಳನ್ನು ಹತ್ತಿಕ್ಕಲು, ಸಾಕಷ್ಟು ಸಂಖ್ಯೆಗಳಲ್ಲಿ ಬಂದು, ತಮ್ಮ ಜೀವಗಳನ್ನು ಅಪಾಯಕ್ಕೆ ಒಡ್ಡಲೂ ಸಿದ್ಧವಿರಬೇಕು... ಪ್ರತಿಯೊಂದು ಹಳ್ಳಿಯಲ್ಲಿ ಮತ್ತು ನಗರಗಳಲ್ಲಿನ ಕಟ್ಟಡಗಳ ಪ್ರತಿಯೊಂದು ವಿಭಾಗದಲ್ಲಿಯೂ ಸಹ ಸತ್ಯಾಗ್ರಹ (ಸತ್ಯ ಪಡೆ) ದಳಗಳನ್ನು ಸಂಘಟಿಸಬಹುದಾಗಿದೆ. [ಅಹಿಂಸಾತ್ಮಕ ಸಮಾಜವು ಹೊರಗಿನಿಂದ ಹಲ್ಲೆಗೊಳಗಾಗಿದ್ದಲ್ಲಿ,] ಅಹಿಂಸೆಯತ್ತ ಎರಡು ಮಾರ್ಗಗಳಿವೆ. ಒಡೆತನವನ್ನು ಬಿಟ್ಟುಕೊಡುವುದು, ಆದರೆ ಅಕ್ರಮಣಕಾರನೊಂದಿಗೆ ಸಹಕರಿಸದಿರುವುದು... ಶರಣಾಗತಿಗಿಂತ ಸಾವಿಗೇ ಆದ್ಯತೆ ನೀಡುವುದು. ಎರಡನೆಯ ಮಾರ್ಗವೆಂದರೆ, ಅಹಿಂಸಾತ್ಮಕ ಮಾರ್ಗಗಳಲ್ಲಿ ತರಬೇತಿ ಪಡೆದ ಜನರ ಅಹಿಂಸಾತ್ಮಕ ಪ್ರತಿರೋಧ... ಅಕ್ರಮಣಕಾರನ ಇಚ್ಛೆಗೆ ತಲೆಬಾಗುವ ಬದಲಿಗೆ, ಅಗಣಿತ ಪಂಕ್ತಿಗಳಲ್ಲಿ ಗಂಡಸರು ಮತ್ತು ಹೆಂಗಸರು ಸುಮ್ಮನೆ ಸಾವನ್ನಪುವ ಅನಿರೀಕ್ಷಿತ ದೃಶ್ಯವನ್ನು ನೋಡಿ ಅವನ ಮತ್ತು ಅವನ ಸೈನಿಕರ ಮನವು ಕರಗಬೇಕು... ಅಹಿಂಸೆಯನ್ನು ತನ್ನ ಅಂತಿಮ ನೀತಿಯಾಗಿ ಮಾಡಿಕೊಂಡಿರುವಂತಹ ರಾಷ್ಟ್ರ ಅಥವಾ ಗುಂಪನ್ನು ಒಂದು ಅಣುಬಾಂಬ್ ಕೂಡ ಗುಲಾಮತನಕ್ಕೆ ಒಡ್ಡಲು ಶಕ್ಯವಾಗದು... ಆ ರಾಷ್ಟ್ರದಲ್ಲಿ ಅಹಿಂಸೆಯ ಮಟ್ಟವು ಹೀಗೆ ಬಂದು ಹಾಗೆ ಹೋಗುವಂತಿದ್ದರೂ ಸಹ, ಅದು ಸಾರ್ವತ್ರಿಕ ಮರ್ಯಾದೆಯನ್ನು ಸಂಪಾದಿಸುವಷ್ಟು ಉನ್ನತಿಗೆ ಏರಿರುತ್ತದೆ.

ಈ ಅಭಿಪ್ರಾಯಕ್ಕೆ ಅನುಗುಣವಾಗಿ, ೧೯೪೦ರಲ್ಲಿ ನಾಜಿ ಜರ್ಮೆನಿಯು ಬ್ರಿಟಿಷ್ ದ್ವೀಪಗಳ ಮೇಲೆ ಅಕ್ರಮಣ ಮಾಡುವುದು ಸನ್ನಿಹಿತವಾದಾಗ, ಗಾಂಧಿಯವರು ಬ್ರಿಟಿಷ್‌ ಜನತೆಗೆ ಕೆಳಕಂಡ ಸಲಹೆಯನ್ನು ನೀಡಿದರು (ಶಾಂತಿ ಮತ್ತು ಯುದ್ಧಗಳಲ್ಲಿ ಅಹಿಂಸೆ ):[೪೨]

"ನಿಮ್ಮನ್ನು ಅಥವಾ ಮಾನವಕುಲವನ್ನು ರಕ್ಷಿಸಲು ಯೋಗ್ಯವಲ್ಲದ ಶಸ್ತ್ರಗಳನ್ನು ನೀವು ಕೆಳಗಿರಿಸಬೇಕು ಎಂದು ನಾನು ಇಚ್ಛಿಸುವೆ. ನಿಮ್ಮ ಸ್ವತ್ತು ಎನ್ನಲಾದ ರಾಷ್ಟ್ರಗಳಿಂದ ಏನು ಬೇಕಾದರೂ ತೆಗೆದುಕೊಂಡು ಹೋಗಿರೆಂದು ನೀವು ಶ್ರೀಯುತ ಹಿಟ್ಲರ್ ಮತ್ತು ಮುಸೊಲಿನಿಯವರನ್ನು ಆಮಂತ್ರಿಸುತ್ತೀರಿ... ಈ ಮಹಾಶಯರು ನಿಮ್ಮ ಮನೆಗಳನ್ನು ಆಕ್ರಮಿಸಲು ಇಚ್ಛಿಸಿದಲ್ಲಿ, ನೀವು ಅವುಗಳನ್ನು ತೊರೆಯುತ್ತೀರಿ. ಅವರು ನಿಮಗೆ ಮುಕ್ತ ಹಾದಿ ನೀಡದಿದ್ದಲ್ಲಿ, ನೀವೇ ಸ್ವತ: - ಗಂಡು, ಹೆಣ್ಣು ಮತ್ತು ಮಕ್ಕಳೆಲ್ಲರೂ - ಹತ್ಯೆಗೀಡಾಗಲು ಅನುವು ಮಾಡಿಕೊಳ್ಳುವಿರಿ, ಆದರೆ ನೀವು ಎಂದಿಗೂ ಅವರಿಗೆ ಸ್ವಾಮಿನಿಷ್ಠೆ ತೋರಿಸಲು ಒಪ್ಪುವುದಿಲ್ಲ."

ಯುದ್ಧದ ಆ ನಂತರ, ೧೯೪೬ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ತೀವ್ರತೆಯ ಇನ್ನೊಂದು ಅಭಿಪ್ರಾಯವನ್ನು ಅವರು ನೀಡಿದರು:

"ಯಹೂದ್ಯರು ಕಸಾಯಿಯ ಕತ್ತಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಿತ್ತು. ಅವರು ಕಡಿದಾದ ಬಂಡೆಗಳಿಂದ ಸಮುದ್ರದೊಳಗೆ ಧುಮುಕಬೇಕಿತ್ತು."

[ಸೂಕ್ತ ಉಲ್ಲೇಖನ ಬೇಕು]

ಆದಾಗ್ಯೂ, ಈ ಮಟ್ಟದ ಅಹಿಂಸೆಗೆ ಅಸಾಮಾನ್ಯ ನಂಬಿಕೆ ಮತ್ತು ಧೈರ್ಯಗಳ ಅಗತ್ಯವಿದ್ದು, ಇವುಗಳು ಎಲ್ಲರಲ್ಲಿಯೂ ಇರುವುದಿಲ್ಲ ಎಂಬುದು ಗಾಂಧಿಯವರಿಗೆ ಗೊತ್ತಿತ್ತು. ಆದ್ದರಿಂದ, ರಣಹೇಡಿತನವನ್ನು ಮುಚ್ಚಿಡಲು ಬಳಸುವವರಾದಲ್ಲಿ, ಪ್ರತಿಯೊಬ್ಬರೂ ಅಹಿಂಸೆಯನ್ನು ನೆಚ್ಚಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು:

"ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಹೆದರಿದವರು ಅಥವಾ ಪ್ರತಿರೋಧವನ್ನು ಒಡ್ಡಲು ಅಶಕ್ತರಾದವರನ್ನು ತಮ್ಮ ಸತ್ಯಾಗ್ರಹ ಆಂದೋಲನದೆಡೆ ಆಕರ್ಷಿಸಲು ಗಾಂಧಿಯವರು ಇಚ್ಛಿಸುತ್ತಿರಲಿಲ್ಲ. 'ರಣಹೇಡಿತನ ಮತ್ತು ಹಿಂಸಾಚಾರದ ನಡುವೆ ಕೇವಲ ಒಂದೇ ಆಯ್ಕೆಯಿದ್ದಲ್ಲಿ, ನಾನು ಹಿಂಸಾಚಾರವನ್ನೇ ಆಯ್ಕೆ ಮಾಡಲು ಸಲಹೆ ನೀಡುವೆ ಎಂದು ನಂಬಿರುವೆ' ಎಂದು ಅವರು ಬರೆದಿದ್ದರು."[೪೩]

"ಅಹಿಂಸೆಯ ವಿಚಾರದಲ್ಲಿ, ಅವರಿಗೆ ಅಹಿಂಸೆಗಿಂತಲೂ ಹಚ್ಚು ಶಕ್ತಿಯುಳ್ಳದ್ದು ಎದುರಾಗಿ, ಆ ಶಕ್ತಿಯ ಬಳಕೆಯಲ್ಲಿ ಅವರು ಹೆಚ್ಚು ಪರಿಣಿತರಾಗಿದ್ದಲ್ಲಿ, ಅವರು ಅಹಿಂಸೆಯನ್ನು ತ್ಯಜಿಸಿ, ಅವರು ಮುಂಚೆ ಕೈಯಲ್ಲಿ ಹಿಡಿದಿದ್ದ ಶಸ್ತ್ರಗಳನ್ನು ಪುನ: ಎತ್ತಿಕೊಳ್ಳಬಹುದು ಎಂದು ಪ್ರತಿಯೊಂದು ಸಭೆಯಲ್ಲಿಯೂ ನಾನು ಎಚ್ಚರಿಕೆಯನ್ನು ಪುನರುಚ್ಚರಿಸಿದ್ದೆ. ಹಿಂದೊಮ್ಮೆ ಮಹಾನ್‌ ಧೈರ್ಯಶಾಲಿಗಳಾಗಿದ್ದು ಬಾದಶಾಹ್‌ ಖಾನ್‌ರ ಪ್ರಭಾವದಿಂದಾಗಿ ರಣಹೇಡಿಗಳಾಗಿ ಬದಲಾದ ಅಥವಾ ಹಾಗೆ ಮಾಡಲ್ಪಟ್ಟ ಖುದಾಯಿ ಖಿದ್ಮತ್‌ಗಾರ್‌ಗಳಿಗೆ ಸಂಬಂಧಿಸಿ ಇದನ್ನು ಹೇಳಲೇಬಾರದು. ಅವರ ಧೈರ್ಯವು ಅವರು ಉತ್ತಮ ಗುರಿಗಾರರಾಗಿರುವುದರಲ್ಲಿ ಇಲ್ಲ, ಸಾವನ್ನು ಆಹ್ವಾನಿಸಿ ಗುಂಡುಗಳಿಗೆ ಎದೆಯೊಡ್ಡಲು ಸದಾ ಸಿದ್ಧರಿರುವುದರಲ್ಲಿದೆ.[೪೪]

ಸಸ್ಯಾಹಾರ ತತ್ವ

[ಬದಲಾಯಿಸಿ]
  • ಬಾಲಕನಾಗಿದ್ದಾಗ ಗಾಂಧಿಯವರು ಪ್ರಾಯೋಗಿಕವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಭಾಗಶ: ತಮ್ಮ ಅಂತರ್ಗತ ಕುತೂಹಲ ಮತ್ತು ಅವರ ಸ್ನೇಹಿತ ಮತ್ತು ಪೀರ್ ಶೇಕ್ ಮಹ್ತಾಬ್‌ನ ಒತ್ತಾಯವೇ ಇದಕ್ಕೆ ಕಾರಣ. ಭಾರತದಲ್ಲಿ, ಸಸ್ಯಾಹಾರದ ಕಲ್ಪನೆಯು ಹಿಂದೂ ಮತ್ತು ಜೈನ್ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಅವರ ಹುಟ್ಟೂರಿನ ರಾಜ್ಯವಾದ ಗುಜರಾತ್‌ನಲ್ಲಿ ಬಹುಪಟ್ಟು ಹಿಂದುಗಳು ಸಸ್ಯಾಹಾರಿಗಳಾಗಿದ್ದರು ಮತ್ತು ಬಹುಶ: ಎಲ್ಲಾ ಜೈನರೂ ಸಸ್ಯಾಹಾರಿಗಳಾಗಿದ್ದಾರೆ.[೪೫][೪೬] ಗಾಂಧಿ ಕುಟುಂಬವೂ ಸಹ ಇದಕ್ಕೆ ಹೊರತಾಗಿರಲಿಲ್ಲ.
  • ಲಂಡನ್‌ನಲ್ಲಿ ವ್ಯಾಸಂಗಕ್ಕೆ ಹೊರಡುವ ಮುಂಚೆ, ತಾವು ಮಾಂಸಾಹಾರ, ಮದ್ಯ ಮತ್ತು ಸ್ವಚ್ಛಂದ ಸಂಭೋಗದಲ್ಲಿ ತೊಡಗುವುದಿಲ್ಲವೆಂದು ಗಾಂಧಿಯವರು ತಮ್ಮ ತಾಯಿ ಪುತಲೀಬಾಯಿ ಮತ್ತು ತಮ್ಮ ಚಿಕ್ಕಪ್ಪ ಬೇಚಾರ್ಜೀ ಸ್ವಾಮಿಯವರಿಗೆ ಮಾತು ಕೊಟ್ಟಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿದ್ದು ಪಥ್ಯಕ್ಕಿಂತಲೂ ಹೆಚ್ಚಿನ ಲಾಭವನ್ನೇ ಪಡೆದರು: ತಮ್ಮ ಜೀವಾವಧಿಯ ತತ್ವಗಳಿಗೆ ಒಂದು ನೆಲೆಯನ್ನು ಕಂಡುಕೊಂಡರು. ಗಾಂಧಿಯವರು ಪ್ರೌಢಾವಸ್ಥೆಗೆ ಬಂದಾಗ, ಅವರು ಕಟ್ಟುನಿಟ್ಟಾದ ಸಸ್ಯಾಹಾರಿಯಾದರು.
  • ಈ ವಿಷಯದ ಬಗ್ಗೆ ದಿ ಮಾರಲ್ ಬೇಸಿಸ್ ಆಫ್ ವೆಜಿಟೇರಿಯನಿಸಮ್ ಎಂಬ ಪುಸ್ತಕವನ್ನು ಮತ್ತು ಹಲವು ಲೇಖನಗಳನ್ನು ಬರೆದರು, ಇವುಗಳಲ್ಲಿ ಕೆಲವನ್ನು ಲಂಡನ್‌ ಶಾಖಾಹಾರಿಗಳ ಸಂಘದ ಪ್ರಕಟಣೆಯಾದ ದಿ ವೆಜಿಟೇರಿಯನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.[೪೭] ಈ ಅವಧಿಯಲ್ಲಿ ಯುವ ಗಾಂಧಿಯವರು ಹಲವು ಮಹಾನ್ ವ್ಯಕ್ತಿಗಳಿಂದ ಪ್ರೇರಿತರಾಗಿ ಲಂಡನ್ ಶಾಖಾಹಾರಿ ಸಂಘದ ಅಧ್ಯಕ್ಷ ಡಾ. ಜೊಸಿಯಾ ಓಲ್ಡ್‌ಫೀಲ್ಡ್‌ ಅವರ ಸ್ನೇಹಿತರಾದರು.
  • ಹೆನ್ರಿ ಸ್ಟೀಫೆನ್ಸ್ ಸಾಲ್ಟ್‌ರವರ ಕೃತಿಯನ್ನು ಓದಿ ಮೆಚ್ಚಿದ ಯುವ ಮೋಹನ್‌ದಾಸ್‌ರು ಈ ಸಸ್ಯಾಹಾರ ಪ್ರಚಾರಕರೊಂದಿಗೆ ಪತ್ರವ್ಯವಹಾರ ನಡೆಸಿದರು. ತಮ್ಮ ಲಂಡನ್‌ ವಾಸ ಮತ್ತು ಆ ನಂತರದ ಕಾಲದಲ್ಲಿ, ಗಾಂಧಿಯವರು ಸಸ್ಯಾಹಾರವನ್ನು ಸಮರ್ಥಿಸು ತ್ತಿದ್ದರು. ಗಾಂಧಿಯವರ ಪ್ರಕಾರ ಸಸ್ಯಾಹಾರಿ ಪಥ್ಯವು ಶರೀರದ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಅದು ಆರ್ಥಿಕ ದೃಷ್ಟಿಯಿಂದಲೂ ಸೂಕ್ತವೆನಿಸಿತ್ತು. ಏಕೆಂದರೆ, ಮಾಂಸಾಹಾರವು ಸಾಮಾನ್ಯವಾಗಿ ದವಸ, ತರಕಾರಿ ಹಾಗೂ ಹಣ್ಣುಗಳಿಗಿಂತ ದುಬಾರಿಯಾಗಿತ್ತು.
  • ಇಂದಿಗೂ ದುಬಾರಿಯಾಗಿವೆ. ಜೊತೆಗೆ, ಆ ಕಾಲದಲ್ಲಿ ಹಲವು ಭಾರತೀಯರು ಕಡಿಮೆ ಆದಾಯದೊಂದಿಗೆ ಬಹಳ ದುಸ್ತರದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಹಾಗಾಗಿ ಸಸ್ಯಾಹಾರ ತತ್ವವನ್ನು ಅಧ್ಯಾತ್ಮಿಕತೆಯ ಪ್ರಯೋಗವಾಗಷ್ಟೇ ಅಲ್ಲ, ಪ್ರಾಯೋಗಿಕವಾಗಿಯೂ ನೋಡಲಾ ಗುತ್ತಿತ್ತು. ಅವರು ದೀರ್ಘಕಾಲ ಆಹಾರದಿಂದ ದೂರವಿರುತ್ತಿದ್ದ ಅವರು ಉಪವಾಸವನ್ನು ರಾಜಕೀಯ ಪ್ರತಿಭಟನೆಯ ರೂಪದಲ್ಲಿ ಬಳಸುತ್ತಿದ್ದರು. ತಮ್ಮ ಸಾವಿನ ತನಕ ಅಥವಾ ತಮ್ಮ ಬೇಡಿಕೆಗಳನ್ನು ಪೂರೈಸುವ ತನಕ ಅವರು ಆಹಾರವನ್ನು ನಿರಾಕರಿಸುತ್ತಿದ್ದರು. *ಸಸ್ಯಾಹಾರವು ಬ್ರಹ್ಮಚರ್ಯೆದೆಡೆಗಿನ ಅವರ ಆಳವಾದ ಬದ್ಧತೆಯ ಆರಂಭಿಕ ಹಂತವಾಗಿತ್ತು; ಬಾಯಿ ರುಚಿಯ ನಿಯಂತ್ರಣವಿಲ್ಲದೆ ಅವರು ಬ್ರಹ್ಮಚರ್ಯೆಯಲ್ಲಿ ಸಾಫಲ್ಯ ಪಡೆಯುವುದು ಕಷ್ಟಕರವಾಗುತ್ತಿತ್ತು ಎಂಬ ಅಂಶವು ಅವರ ಆತ್ಮಕಥೆಯಲ್ಲಿ ನಮೂದಿಸಲ್ಪಟ್ಟಿದೆ.

ಗಾಂಧಿಯವರು ಫಲಾಹಾರಿಯಾಗಿದ್ದರು,[೪೮] ಆದರೆ ಅವರ ವೈದ್ಯರ ಸಲಹೆಯ ಮೇರೆಗೆ ಮೇಕೆಯ ಹಾಲನ್ನು ಸೇವಿಸಲು ಪ್ರಾರಂಭಿಸಿದರು.

  • ಅವರು ಹಸುಗಳಿಂದ ಸಂಗ್ರಹಿಸಲಾದ ಹೈನು ಉತ್ಪಾದನೆಗಳನ್ನು ಸೇವಿಸುತ್ತಿರಲಿಲ್ಲ, ಏಕೆಂದರೆ ಹಾಲು ಸಂಗ್ರಹಿಸುವುದಕ್ಕಾಗಿ ಅನುಸರಿಸಲಾಗುತ್ತಿದ್ದ ಹಸುವಿಗೆ ಗಾಳಿ ಹೊಡೆಯುವ ಅಭ್ಯಾಸವು ಅವರಿಗೆ ಜಿಗುಪ್ಸೆ ತರಿಸಿತ್ತು. ಹೀಗಾಗಿ ಹಾಲು ಮಾನವನ ಸ್ವಾಭಾವಿಕ ಪಥ್ಯವಲ್ಲ ಎಂಬುದು ಅವರ ಮೊದಲಿನ ಅಭಿಪ್ರಾಯವಾಗಿತ್ತು, ಹಾಗೂ ನಿರ್ದಿಷ್ಟವಾಗಿ ಹೇಳುವುದಾದರೆ, ತಮ್ಮ ಮೃತ ತಾಯಿಗೆ ಮಾತು ಕೊಟ್ಟಿದ್ದೂ ಇದಕ್ಕೊಂದು ಕಾರಣವಾಗಿತ್ತು.

ಬ್ರಹ್ಮಚರ್ಯೆ

[ಬದಲಾಯಿಸಿ]
  • ಗಾಂಧಿಯವರು ೧೬ನೇ ವರ್ಷದವರಿದ್ದಾಗ ಅವರ ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ತಮ್ಮ ಪೋಷಕರನ್ನು ತುಂಬಾ ಆರಾಧಿಸುತ್ತಿದ್ದ ಕಾರಣ, ಎಲ್ಲ ತರಹದ ಅನಾರೋಗ್ಯ ಸಮಯಗಳಲ್ಲಿಯೂ ಅವರು ತಂದೆಯ ಜೊತೆಯಲ್ಲಿ ಇರುತ್ತಿದ್ದರು. ಆದಾಗ್ಯೂ, ಒಂದು ರಾತ್ರಿ, ಗಾಂಧಿ ಯವರ ಚಿಕ್ಕಪ್ಪನವರು ಗಾಂಧಿಯವರಿಗೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅವರು ತಮ್ಮ ಶಯ್ಯಾಕೋಣೆಗೆ ಹೋದಾಗ ವಿಷಯಲೋಲುಪದಾಸೆಗೆ ಒಳಗಾಗಿ ತಮ್ಮ ಪತ್ನಿಯೊಂದಿಗೆ ಮೈಥುನದಲ್ಲಿ ತೊಡಗಿದರು. ಆ ನಂತರ ಸೇವಕನೊಬ್ಬನು ಬಂದು ಗಾಂಧಿಯವರ ತಂದೆಯವರು ಆಗಷ್ಟೇ ನಿಧನರಾದದ್ದನ್ನು ತಿಳಿಸಿದನು.
  • ಗಾಂಧಿಯವರಿಗೆ ಅತೀವ ಪಾಪಪ್ರಜ್ಞೆ ಉಂಟಾಗಿ, ಸ್ವತ: ತಮ್ಮನ್ನು ತಾವು ಕ್ಷಮಿಸಲಾಗದ ಸ್ಥಿತಿಯಲ್ಲಿದ್ದರು. ಈ ಘಟನೆಯನ್ನು ಅವರು "ದುಪ್ಪಟ್ಟು ಅವಮಾನ" ಎಂದು ಉಲ್ಲೇಖಿಸಿದರು. ವಿವಾಹಿತರಾಗಿದ್ದರೂ ಸಹ, ತಮ್ಮ ೩೬ನೆಯ ವಯಸ್ಸಿನಲ್ಲಿಯೇ ಬ್ರಹ್ಮಚರ್ಯೆಯನ್ನಾಚರಿಸುವಲ್ಲಿ ಈ ಘಟನೆಯು ಗಾಂಧಿಯವರ ಮೇಲೆ ಬಹಳಷ್ಟು ಪ್ರಭಾವ ಬೀರಿತು.[೪೯]
  • ಸಂಭೋಗತ್ಯಾಗ ಮತ್ತು ಸಂನ್ಯಾಸದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರುವ ಆಧ್ಯಾತ್ಮಿಕ ಮತ್ತು ಕಾರ್ಯರೂಪದ ಶುದ್ಧತೆಗಳನ್ನೊಳಗೊಂಡ ಬ್ರಹ್ಮಚರ್ಯೆಯ ತತ್ವದಿಂದ ಅವರ ಈ ನಿರ್ಧಾರವು ಆಳವಾಗಿ ಪ್ರಭಾವಿತವಾಗಿತ್ತು. ಬ್ರಹ್ಮಚರ್ಯೆಯೇ ದೇವರ ಸನಿಹಕ್ಕೆ ಹೋಗಲು ಸೂಕ್ತ ಮಾರ್ಗ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಪ್ರಾಥಮಿಕ ಅಡಿಪಾಯ ಎಂದು ಗಾಂಧಿಯವರು ಪರಿಗಣಿಸಿದ್ದರು.
  • ಅವರ ಆತ್ಮಚರಿತ್ರೆಯಲ್ಲಿ ಅವರ ಕಾಮುಕ ಬೇಡಿಕೆಗಳ ವಿರುದ್ಧದ ಸಮರ ಮತ್ತು ಅವರ ಬಾಲ್ಯವಧು ಕಸ್ತೂರಬಾ ರೊಂದಿಗಿನ ತೀವ್ರ ಈರ್ಷ್ಯೆಯ ಘಟನೆಗಳನ್ನು ವಿವರಿಸಿದ್ದಾರೆ. ಭೋಗಾಪೇಕ್ಷೆಗಿಂತಲೂ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಯಲು ಬ್ರಹ್ಮಚಾರಿಯಾಗಿ ಉಳಿಯುವುದು ತಮ್ಮ ವೈಯಕ್ತಿಕ ಹೊಣೆ ಎಂದು ಅವರು ತಿಳಿದಿದ್ದರು. ಗಾಂಧಿಯವರ ಪ್ರಕಾರ ಬ್ರಹ್ಮಚರ್ಯೆಯ ಎಂಬುದು "ಆಲೋಚನೆ, ಮಾತು, ಕೃತಿಗಳ ಮೂಲಕ ನಡೆಸುವ ಇಂದ್ರಿಯಗಳ ನಿಗ್ರಹ"ವಾಗಿತ್ತು.[೫೦]

ಸರಳತೆ

[ಬದಲಾಯಿಸಿ]

  • ಸಮಾಜ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿಯು ಸರಳ ಜೀವನ ನಡೆಸತಕ್ಕದ್ದು, ಇದು ಬ್ರಹ್ಮಚರ್ಯೆಯತ್ತ ಒಯ್ಯುತ್ತದೆ ಎಂದು ಗಾಂಧಿಯವರು ಮನ:ಪೂರ್ವಕವಾಗಿ ನಂಬಿದ್ದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಿದ್ದ ಪಾಶ್ಚಾತ್ಯ ಜೀವನಶೈಲಿಯನ್ನು ತ್ಯಜಿಸುವ ಮೂಲಕ ಅವರ ಸರಳತೆಯು ಆರಂಭವಾಯಿತು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ತಮ್ಮ ಉಡುಪುಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಅವರು, ಇದು "ತಮ್ಮನ್ನೇ ಸೊನ್ನೆಗೆ ಕುಗ್ಗಿಸಿಕೊಳ್ಳುವ" ವಿಧಾನ ಎನ್ನುತ್ತಿದ್ದರು.[೫೧]
  • ಸಮುದಾಯಕ್ಕೆ ತಾವು ಸಲ್ಲಿಸಿದ್ದ ನಿಷ್ಥಾವಂತ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿ ತಮ್ಮ ಜನ್ಮಸಂಬಂಧಿಗಳು ನೀಡಿದ್ದ ಉಡುಗೊರೆಗಳನ್ನು ಅವರು ಒಂದು ಸನ್ನಿವೇಶದಲ್ಲಿ ಹಿಂದಿರುಗಿಸಿದರು.[೫೨] ಗಾಂಧಿಯವರು ಪ್ರತಿ ವಾರದಲ್ಲೂ ಒಂದು ದಿನ ಮೌನ ವ್ರತವನ್ನು ಆಚರಿಸುತ್ತಿದ್ದರು. ಮಾತನಾಡುವಿಕೆಯಿಂದ ದೂರವುಳಿಯುವ ಅಭ್ಯಾಸದಿಂದಾಗಿ ತಮ್ಮಲ್ಲಿ ಆಂತರಿಕ ಶಾಂತಿಯು ತುಂಬಿಕೊಂಡಿದೆ ಎಂದು ಅವರು ನಂಬಿದ್ದರು.
  • ಹಿಂದೂ ತತ್ವಗಳಾದ ಮೌನ (ಸಂಸ್ಕೃತ:मौनं — ನಿಶ್ಯಬ್ದ) ಮತ್ತು ಶಾಂತಿ (ಸಂಸ್ಕೃತ:शांति — ಶಾಂತಿ) ಗಳಿಂದ ಈ ಪ್ರಭಾವವನ್ನು ಸೆಳೆಯಲಾಗಿತ್ತು. ಅಂತಹ ದಿನಗಳಂದು ಅವರು ಕಾಗದದ ಮೇಲೆ ಬರೆಯುವುದರ ಮೂಲಕ ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ತಮ್ಮ ೩೭ನೆಯ ವಯಸ್ಸಿನಿಂದ ಮೂರೂವರೆ ವರ್ಷಗಳವರೆಗೆ ಗಾಂಧಿಯವರು ವಾರ್ತಾಪತ್ರಿಕೆಗಳನ್ನು ಓದಲು ನಿರಾಕರಿಸುತ್ತಿದ್ದರು. ಏಕೆಂದರೆ ತಮ್ಮ ಆಂತರಿಕ ಅಶಾಂತಿಗಿಂತ ವಿಶ್ವದ ವಿದ್ಯಮಾನಗಳ ಪ್ರಕ್ಷುಬ್ಧ ಸ್ಥಿತಿಯು ತಮಗೆ ಹೆಚ್ಚು ಗೊಂದಲವನ್ನುಂಟುಮಾಡುತ್ತವೆ ಎಂಬುದು ಅವರ ಸಮರ್ಥನೆಯಾಗಿತ್ತು.
  • ಜಾನ್ ರಸ್ಕಿನ್‌ರವರ ಅನ್‌ಟು ದಿಸ್‌ ಲಾಸ್ಟ್‌ ಕೃತಿಯನ್ನು ಓದಿದ ನಂತರ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲು ಹಾಗೂ ಫಿನಿಕ್ಸ್ ಸೆಟ್ಲ್‌ಮೆಂಟ್‌ ಎಂಬ ಸಮುದಾಯವೊಂದನ್ನು ರೂಪಿಸಲು ಅವರು ನಿರ್ಧರಿಸಿ ದರು. ದಕ್ಷಿಣ ಆಫ್ರಿಕಾದಲ್ಲಿ ಕಾನೂನು ವೃತ್ತಿಯನ್ನು ಯಶಸ್ವಿಯಾಗಿ ನಡೆಸಿ ಭಾರತಕ್ಕೆ ಮರಳಿದ ನಂತರ ಗಾಂಧಿಯವರು ತಮ್ಮಲ್ಲಿದ್ದ ಸಂಪತ್ತು ಹಾಗೂ ಯಶಸ್ಸನ್ನು ಬಿಂಬಿಸುವಂತಹ ಪಾಶ್ಚಾತ್ಯ ಶೈಲಿಯ ಉಡುಪುಗಳನ್ನು ಧರಿಸಿವುದನ್ನು ಬಿಟ್ಟರು.
  • ಭಾರತದಲ್ಲಿನ ಅತಿ ಬಡ ವ್ಯಕ್ತಿಯೂ ತಮ್ಮನ್ನು ಒಪ್ಪುವ ರೀತಿಯಲ್ಲಿ ಉಡುಪು ಧರಿಸಿದ ಅವರು, ತನ್ಮೂಲಕ ಮನೆಯಲ್ಲಿ ನೂತ ನೂಲಿನ ಬಟ್ಟೆ (ಖಾದಿ )ಯ ಬಳಕೆಯನ್ನು ಸಮರ್ಥಿಸಿದರು. ತಾವೇ ಸ್ವತಃ ನೂತ ನೂಲಿನಿಂದ ತಮ್ಮದೇ ಉಡುಪುಗಳನ್ನು ನೇಯುವ ಅಭ್ಯಾಸವನ್ನು ಅಳವಡಿಸಿಕೊಂಡ ಗಾಂಧಿಯವರು ಹಾಗೂ ಅವರ ಅನುಯಾಯಿಗಳು, ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು.
  • ನಿರುದ್ಯೋಗದ ಕಾರಣದಿಂದಾಗಿ ಭಾರತೀಯ ಕೆಲಸಗಾರರು ಕೆಲಸವಿಲ್ಲದೆ ಕೂರಬೇಕಾಗಿ ಬರುತ್ತಿದ್ದಾಗ ಬ್ರಿಟಿಷ್ ಹಿತಾಸಕ್ತಿಗಳ ಸ್ವಾಮ್ಯತೆಯಲ್ಲಿದ್ದ ಕೈಗಾರಿಕಾ ತಯಾರಕರಿಂದ ತಮ್ಮ ಉಡುಪುಗಳನ್ನು ಆಗಾಗ್ಗೆ ಖರೀದಿಸುತ್ತಿದ್ದರು. ಭಾರತೀಯರು ತಮ್ಮ ಉಡುಪುಗಳನ್ನು ತಾವೇ ತಯಾರಿಸಿ ದಲ್ಲಿ, ಭಾರತದಲ್ಲಿನ ಬ್ರಿಟಿಷ್ ಆಡಳಿತಕ್ಕೆ ಆರ್ಥಿಕ ಪೆಟ್ಟು ನೀಡಬಹುದೆಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಇದರ ಪರಿಣಾಮವಾಗಿ, ನೂಲುವ ರಾಟೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಧ್ವಜದಲ್ಲಿ ಅಳವಡಿಸಲಾಯಿತು. ಆ ನಂತರ, ತಮ್ಮ ಜೀವನದ ಸರಳತೆಯನ್ನು ವ್ಯಕ್ತಪಡಿಸಲು ಅವರು ತಮ್ಮ ಜೀವನವುದ್ದಕ್ಕೂ ಧೋತಿಯನ್ನು ಉಡುತ್ತಿದ್ದರು.

ಧರ್ಮಶ್ರದ್ಧೆ

[ಬದಲಾಯಿಸಿ]
ಗಾಂಧಿ ಸ್ಮೃತಿ (ನವ ದೆಹಲಿಯಲ್ಲಿ ಗಾಂಧಿಯವರು ತಮ್ಮ ಕೊನೆಯ 4 ನಾಲ್ಕು ತಿಂಗಳುಗಳು ಉಳಿದುಕೊಂಡಿದ್ದ ಮನೆಯು ಈಗ ಸ್ಮಾರಕವಾಗಿದೆ)

  • ಹಿಂದೂ ಧರ್ಮದಲ್ಲಿ ಜನಿಸಿದ ಗಾಂಧಿಯವರು, ತಮ್ಮ ತತ್ವಗಳಲ್ಲಿ ಬಹುಪಾಲನ್ನು ಹಿಂದೂ ಧರ್ಮದಿಂದ ಪಡೆದುಕೊಂಡು, ತಮ್ಮ ಜೀವನದುದ್ದಕ್ಕೂ ಹಿಂದೂಧರ್ಮವನ್ನು ಪರಿಪಾಲಿಸಿದರು. ಓರ್ವ ಸಾಮಾನ್ಯ ಹಿಂದುವಾಗಿ, ಅವರು ಎಲ್ಲಾ ಧರ್ಮಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರು, ಬೇರೊಂದು ಧರ್ಮಕ್ಕೆ ತಮ್ಮನ್ನು ಮತಾಂತರಗೊಳಿಸುವ ಎಲ್ಲ ಯತ್ನಗಳನ್ನೂ ಅವರು ತಳ್ಳಿಹಾಕಿದರು. ಅವರು ಅತ್ಯಾಸಕ್ತ ದೇವತಾಶಾಸ್ತ್ರಜ್ಞರಾಗಿದ್ದು ಎಲ್ಲಾ ಪ್ರಮುಖ ಧರ್ಮಗಳ ಬಗ್ಗೆಯೂ ವಿಸ್ತೃತವಾಗಿ ಓದಿದ್ದರು. ಹಿಂದೂ ಧರ್ಮದ ಬಗ್ಗೆ ಅವರ ಅಭಿಪ್ರಾಯಗಳು ಹೀಗಿದ್ದವು:
ನನಗೆ ತಿಳಿದಿರುವಂತೆ ಹಿಂದೂ ಧರ್ಮವು ನನ್ನ ಆತ್ಮಕ್ಕೆ ತೃಪ್ತಿ ನೀಡಿ, ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ...ಸಂಶಯಗಳು ನನ್ನನ್ನು ಕಾಡಿದಾಗ, ನಿರಾಶೆಗಳು ನನ್ನತ್ತ ದುರುಗುಟ್ಟಿ ನೋಡಿದಾಗ ಮತ್ತು ಕ್ಷಿತಿಜದಲ್ಲಿ ಬೆಳಕಿನ ಒಂದೇ ಒಂದು ಕಿರಣವನ್ನೂ ನಾನು ಕಾಣದಾದಾಗ, ನಾನು ಭಗವದ್ಗೀತೆ ಯ ಮೊರೆ ಹೋಗಿ, ನನಗೆ ಸಾಂತ್ವನ ನೀಡುವ ಒಂದು ಪಂಕ್ತಿಯನ್ನು ಕಂಡು, ತಡೆಯಲಾಗದಂತಹ ದುಃಖದ ನಡುವೆಯೂ ಮುಗುಳ್ನಗಲಾರಂಭಿಸುವೆ. ನನ್ನ ಜೀವನದ ತುಂಬ ದುರಂತಗಳೇ ತುಂಬಿಕೊಂಡಿವೆ. ಒಂದು ವೇಳೆ ಗೋಚರಿಸುವ ಮತ್ತು ಅಳಿಸಲಾಗದ ಯಾವುದೇ ಪರಿಣಾಮವನ್ನು ನನ್ನಲ್ಲಿ ಅವು ಉಳಿಸಿಲ್ಲವಾದಲ್ಲಿ ಅದಕ್ಕೆ ಭಗವದ್ಗೀತೆಯಲ್ಲಿನ ಉಪದೇಶಗಳೇ ಕಾರಣ."
  • ಗಾಂಧಿಯವರು ಭಗವದ್ಗೀತೆ ಯ ಕುರಿತು ಗುಜರಾತಿಯಲ್ಲಿ ಒಂದು ವ್ಯಾಖ್ಯಾನವನ್ನು ಬರೆದರು. ಗುಜರಾತಿ ಭಾಷೆಯಲ್ಲಿದ್ದ ಹಸ್ತಪ್ರತಿಯನ್ನು ಮಹದೇವ್ ದೇಸಾಯಿಯವರು ಆಂಗ್ಲಭಾಷೆ‌ಗೆ ಭಾಷಾಂತರಿಸಿ ಹೆಚ್ಚುವರಿ ಪ್ರಸ್ತಾವನೆ ಮತ್ತು ವ್ಯಾಖ್ಯಾನಗಳನ್ನು ಸೇರಿಸಿದರು. ಗಾಂಧಿಯವರ ಮುನ್ನುಡಿಯೊಂದಿಗೆ ಅದು ೧೯೪೬ರಲ್ಲಿ ಪ್ರಕಟಗೊಂಡಿತು.[೫೩][೫೪]
  • ಪ್ರತಿಯೊಂದು ಧರ್ಮದ ತಿರುಳಲ್ಲಿಯೂ ಸತ್ಯ ಮತ್ತು ಪ್ರೀತಿ (ಸಹಾನುಭೂತಿ, ಅಹಿಂಸೆ ಮತ್ತು ಸನ್ಮಾರ್ಗ ಸೂತ್ರ) ಇರುತ್ತವೆಂದು ಗಾಂಧಿಯವರು ನಂಬಿದ್ದರು. ತಮ್ಮ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳಲ್ಲಿನ ಆಷಾಢಭೂತಿತನ, ದುರಾಚಾರ ಹಾಗೂ ಮತತತ್ವಗಳನ್ನು ಅವರು ಪ್ರಶ್ನಿಸಿದರು ಮತ್ತು ಧರ್ಮದಲ್ಲಿನ ಸಾಮಾಜಿಕ ಸುಧಾರಣೆಗೆ ಸಂಬಂಧಿಸಿ ಅವರು ಓರ್ವ ದಣಿವರಿಯದ ಸಮರ್ಥಕರಾಗಿದ್ದರು. ವಿವಿಧ ಧರ್ಮಗಳ ಬಗ್ಗೆ ಅವರ ಕೆಲ ಟಿಪ್ಪಣಿಗಳು ಹೀಗಿವೆ:
"ನಾನು ಕ್ರೈಸ್ತ ಧರ್ಮವನ್ನು ಪರಿಪೂರ್ಣವೆಂದಾಗಲೀ ಅಥವಾ ಮಹೋನ್ನತ ಧರ್ಮವೆಂದಾಗಲೀ ಒಪ್ಪಲು ಸಾಧ್ಯವಾಗದಿದ್ದಲ್ಲಿ, ಅದೇ ರೀತಿಯಲ್ಲಿ ಹಿಂದೂ ಧರ್ಮವೂ ನನ್ನ ಮನವೊಪ್ಪಿಸಲಾರದು.ಹಿಂದೂ ಧರ್ಮದಲ್ಲಿನ ದೋಷಗಳು ತುರ್ತಾಗಿ ನನಗೆ ಎದ್ದು ಕಾಣುತ್ತಿದ್ದವು. ಅಸ್ಪೃಶ್ಯತೆಯು ಹಿಂದೂ ಧರ್ಮದ ಒಂದು ಭಾಗವಾಗಿರಬಹುದಾಗಿದ್ದಲ್ಲಿ ಅದೊಂದು ಕೊಳೆತ ಭಾಗ ಅಥವಾ ದುರ್ಮಾಂಸವಾಗಿರಬಹುದು. ಒಳಪಂಗಡ ಮತ್ತು ಜಾತಿಗಳ ಬಾಹುಳ್ಯದ ಮೂಲೋದ್ದೇಶ ವನ್ನು ನನಗೆ ಅರ್ಥಮಾಡಿಕೊಳ್ಳಲಾಗಿಲ್ಲ. ವೇದಗಳು ದೇವರ ಸ್ಪೂರ್ತಿಯುತ ವಚನಗಳು ಎಂದು ಹೇಳುವುದರ ಅರ್ಥವೇನಿತ್ತು? ಒಂದು ವೇಳೆ ಪ್ರೇರಿತವಾಗಿದ್ದಲ್ಲಿ, ಬೈಬಲ್‌ ಮತ್ತು ಕೊರಾನ್ ಸಹ ಯಾಕಾಗಿರಬಾರದು? ಕ್ರಿಶ್ಚಿಯನ್ ಸ್ನೇಹಿತರಂತೆಯೇ ಮುಸ್ಲಿಮ್‌ ಸ್ನೇಹಿತರೂ ಸಹ ನನ್ನನ್ನು ಮತಾಂತರಗೊಳಿಸಲು ಯತ್ನಿಸಿದರು. ಇಸ್ಲಾಮ್‌ ಧರ್ಮವನ್ನು ಅಧ್ಯಯನ ಮಾಡಲು ಅಬ್ದುಲ್ಲಾ ಸೇಠ್‌ ನನಗೆ ಒತ್ತಾಯಿಸುತ್ತಲೇ ಇರುತ್ತಿದ್ದ ಮತ್ತು ಅದರ ವಿಶಿಷ್ಟ ಗುಣಗಳ ಬಗ್ಗೆ ಹೇಳಲು ಅವನ ಬಳಿ ಏನಾದರೊಂದು ಇರುತ್ತಿತ್ತು." (ಮೂಲ: ಅವರ ಆತ್ಮಚರಿತ್ರೆ)
::;ಸಪ್ತ ಪಾತಕಗಳು:
  • ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಗುರುತಿಸಿ ಗಾಂಧಿಜೀಯವರು ಅವುಗಳನ್ನು ಪರಿಹರಿಸಲು ಸಪ್ತಪಾತಕಗಳಿಂದ ದೂರವಿರಬೇಕೆಂದು ಹೇಳಿದ್ದರು. ಆ ಸಪ್ತ ಪಾತಕಗಳು ಇಂತಿವೆ.
  1. ತತ್ವ ರಹಿತ ರಾಜಕಾರಣ,
  2. ದುಡಿಮೆ ಇಲ್ಲದ ಸಂಪತ್ತು,
  3. ಆತ್ಮಸಾಕ್ಷಿ ಇಲ್ಲದ ಸಂತೋಷ,
  4. ಚಾರಿತ್ರ್ಯವಿಲ್ಲದ ಶಿಕ್ಷಣ,
  5. ನೀತಿ ಇಲ್ಲದ ವ್ಯಾಪಾರ,
  6. ಮಾನವೀಯತೆ ಇಲ್ಲದ ಜ್ಞಾನ,
  7. ತ್ಯಾಗವಿಲ್ಲದ ಪೂಜೆ.
  • ಈಗ ಇದಕ್ಕೆ ತದ್ವಿರುದ್ಧವಾದ ಕ್ರಿಯೆಗಳು ನೆದೆಯುತ್ತಿವೆಯೆಂಬ ದೂರಿದೆ , ಅದನ್ನು ತಿದ್ದಿ ಸರಿಪಡಿಸುವ ಕಾಲ ನಾಯಕತ್ವ ಈ ದೇಶಕ್ಕೆ ಬರಬಹುದೆಂದು ಸಜ್ಜನರ ಆಸೆ.
(ಸಂಗತ: ಪ್ರಜಾವಾಣಿ 12-12-2014)
"ನಾವು ನೈತಿಕ ಆಧಾರವನ್ನು ಕಳೆದುಕೊಂಡಕೂಡಲೇ ನಮ್ಮ ಧಾರ್ಮಿಕತೆ ಕೊನೆಗೊಂಡಂತೆಯೇ."ನೈತಿಕತೆಯನ್ನು ಮೀರಿಸುವಂಥಾದ್ದು ಧರ್ಮದಲ್ಲಿ ಏನೂ ಇಲ್ಲ. ಉದಾಹರಣೆಗೆ, ಮಾನವನು ಸುಳ್ಳನಾಗಿ, ಕ್ರೂರಿಯಾಗಿ ಅಥವಾ ಅಸಂಯಮಿಯಾಗಿದ್ದುಕೊಂಡು, ದೇವರು ತನ್ನೊಂದಿಗಿದ್ದಾನೆಂದು ಹೇಳಿಕೊಳ್ಳಲಾಗದು."
"ಮಹಮ್ಮದ್‌ರ ನುಡಿಗಳು ಕೇವಲ ಮುಸ್ಲಿಮರಿಗೆ ಮಾತ್ರವೇ ಅಲ್ಲದೇ ಇಡೀ ಮಾನವ ಕುಲಕ್ಕೇ ಬುದ್ಧಿವಂತಿಕೆಯ ನಿಧಿಯಾಗಿವೆ."
"ನಿಮ್ಮ ಕ್ರಿಸ್ತನನ್ನು ನಾನು ಇಷ್ಟಪಡುವೆ, ಆದರೆ ನಿಮ್ಮ ಕ್ರಿಶ್ಚಿಯನ್ನರನ್ನು ನಾನು ಇಷ್ಟಪಡುವುದಿಲ್ಲ."

ಅವರ ಜೀವನದ ಆ ನಂತರದ ಹಂತದಲ್ಲಿ, ತಾವು ಹಿಂದೂ ಧರ್ಮದವರೇ ಎಂದು ಅವರನ್ನು ಕೇಳಿದಾಗ, ಅವರು ಉತ್ತರಿಸಿದ್ದು ಹೀಗೆ:

"ಹೌದು. ನಾನೊಬ್ಬ ಹಿಂದು. ನಾನು ಒಬ್ಬ ಕ್ರೈಸ್ತ, ಒಬ್ಬ ಮುಸ್ಲಿಮ್‌, ಒಬ್ಬ ಬೌದ್ಧ ಮತ್ತು ಒಬ್ಬ ಯಹೂದಿ ಸಹ." ( ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.)(ಇಂಗ್ಲಿಷ್ ತಾಣ ನೋಡಿ)

ಪರಸ್ಪರ ಗೌರವಾದರವಿದ್ದರೂ ಸಹ, ಗಾಂಧಿಯವರು ಮತ್ತು ರವೀಂದ್ರನಾಥ್ ಟ್ಯಾಗೂರ್‌ರು ಒಂದಕ್ಕಿಂತಲೂ ಹೆಚ್ವು ಬಾರಿ ಸುದೀರ್ಘ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಈ ಚರ್ಚೆಗಳು ಅಂದಿನ ಇಬ್ಬರು ಅತ್ಯಂತ ಪ್ರಖ್ಯಾತ ಭಾರತೀಯರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳಿಗೆ ಉದಾಹರಣೆಯಾಗಿವೆ. ೧೯೩೪ರ ಜನವರಿ ೧೫ರಂದು ಬಿಹಾರದಲ್ಲಿ ಭೂಕಂಪವೊಂದು ಸಂಭವಿಸಿ ಬೃಹತ್ ಪ್ರಮಾಣದ ನಷ್ಟ ಹಾಗೂ ಪ್ರಾಣಹಾನಿಯನ್ನು ಉಂಟುಮಾಡಿತು. ಅಸ್ಪೃಶ್ಯರನ್ನು ತಮ್ಮ ದೇವಾಲಯಗಳೊಳಗೆ ಬಿಟ್ಟುಕೊಳ್ಳದಿರುವ ಮೂಲಕ ಮೇಲು ಜಾತಿಯ ಹಿಂದೂಗಳು ಮಾಡಿದ ಪಾಪದ ಫಲವಿದು ಎಂದು ಗಾಂಧಿಯವರು ಇದನ್ನು ಸಮರ್ಥಿಸಿದರು (ಅಸ್ಪೃಶ್ಯರನ್ನು ಹರಿಜನರು, ಕೃಷ್ಣನ ಜನರು ಎಂದು ಉಲ್ಲೇಖಿಸುವ ಮೂಲಕ ಅಸ್ಪೃಶ್ಯರ ಭವಿತವ್ಯವನ್ನು ಸುಧಾರಿಸುವ ಉದ್ದೇಶಕ್ಕೆ ಗಾಂಧಿಯವರು ಬದ್ಧರಾಗಿದ್ದರು). ಅಸ್ಪೃಶ್ಯತೆಯ ಪದ್ಧತಿಯು ಅದೆಷ್ಟೇ ಅಸಂಗತವಾಗಿರಲಿ, ಭೂಕಂಪವು ಕೇವಲ ನೈಸರ್ಗಿಕ ಶಕ್ತಿಗಳಿಂದ ಮಾತ್ರ ಆಗಬಲ್ಲದೇ ಹೊರತು, ನೈತಿಕತೆಯ ಕಾರಣಗಳಿಂದಲ್ಲ ಎಂದು ಹೇಳಿದ ಟ್ಯಾಗೂರ್‌ರು ಗಾಂಧಿಯವರ ನಿಲುವನ್ನು ಭಾವೋದ್ವೇಗದಿಂದ ವಿರೋಧಿಸಿದರು.[೫೫]

ಬರಹಗಳು

[ಬದಲಾಯಿಸಿ]
ಗಾಂಧಿಯವರು ಯಂಗ್ ಇಂಡಿಯಾ ಎಂಬ ಪತ್ರಿಕೆಯನ್ನು ಪ್ರಕಟಿಸಿದರು
  • ಗಾಂಧಿಯವರು ಓರ್ವ ಸಮೃದ್ಧ ಬರಹಗಾರರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಇಂಡಿಯನ್ ಒಪೀನಿಯನ್‌ ಪತ್ರಿಕೆ, ಭಾರತಕ್ಕೆ ಮರಳಿದ ನಂತರ ಗುಜರಾತಿ, ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ಹರಿಜನ್‌ ಪತ್ರಿಕೆ, ಆಂಗ್ಲಭಾಷೆಯಲ್ಲಿ ಯಂಗ್ ಇಂಡಿಯಾ ಪತ್ರಿಕೆ ಮತ್ತು ನವಜೀವನ್‌‌‌ ಎಂಬ ಗುಜರಾತಿ ಮಾಸಪತ್ರಿಕೆಯೂ ಸೇರಿದಂತೆ ಹಲವು ವೃತ್ತಪತ್ರಿಕೆಗಳಿಗೆ ದಶಕಗಳ ಕಾಲ ಅವರು ಸಂಪಾದಕರಾಗಿದ್ದರು.
  • ಕಾಲಾನಂತರದಲ್ಲಿ ನವಜೀವನ್‌ ಪತ್ರಿಕೆಯು ಹಿಂದಿಯಲ್ಲಿಯೂ ಪ್ರಕಟಗೊಂಡಿತು.[೫೬] ಇದರ ಜೊತೆಗೆ, ಅವರು ಹೆಚ್ಚೂ ಕಡಿಮೆ ಪ್ರತಿ ದಿನವೂ ವ್ಯಕ್ತಿಗಳಿಗೆ ಹಾಗೂ ವೃತ್ತಪತ್ರಿಕೆಗಳಿಗೆ ನಿಯಮಿತವಾಗಿ ಪತ್ರ ಬರೆಯುತ್ತಿದ್ದರು.
  • ತಮ್ಮ ಆತ್ಮಚರಿತ್ರೆಯಾದ ಆನ್‌ ಆಟೋಬಯೊಗ್ರಫಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿತ್‌ ಟ್ರೂತ್‌ ಸೇರಿದಂತೆ ಇನ್ನೂ ಕೆಲವು ಪುಸ್ತಕಗಳನ್ನೂ ಗಾಂಧಿಯವರು ಬರೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿನ ತಮ್ಮ ಹೋರಾಟದ ಕುರಿತಾದ ಸತ್ಯಾಗ್ರಹ ಇನ್‌ ಸೌತ್‌ ಆಫ್ರಿಕಾ ಎಂಬ ಪುಸ್ತಕ, ಹಿಂದ್ ಸ್ವರಾಜ್ ಆರ್‌ ಇಂಡಿಯನ್‌ ಹೋಮ್‌ ರೂಲ್‌ ಎಂಬ ರಾಜಕೀಯ ಕಿರುಹೊತ್ತಿಗೆ ಅವುಗಳಲ್ಲಿ ಸೇರಿದ್ದು, ಜಾನ್‌ ರಸ್ಕಿನ್‌ರವರ ಅನ್‌ಟು ದಿಸ್ ಲಾಸ್ಟ್ ನ್ನು ಕೃತಿಯನ್ನು ಗುಜರಾತಿ ಭಾಷೆಗೆ ಭಾವಾನುವಾದ ಮಾಡಿದ್ದಾರೆ.[೫೭]
  • ಈ ಕೊನೆಯ ಪ್ರಬಂಧವನ್ನು ಅರ್ಥಶಾಸ್ತ್ರದ ಕುರಿತಾದ ಅವರ ಪಠ್ಯಕ್ರಮ ಎಂದು ಪರಿಗಣಿಸಬಹುದು. ಅವರು ಸಸ್ಯಾಹಾರ ಪದ್ಧತಿ, ಆಹಾರ ಕ್ರಮ ಮತ್ತು ಆರೋಗ್ಯ, ಧರ್ಮ, ಸಮಾಜ ಸುಧಾರಣೆಗಳು ಇತ್ಯಾದಿ ವಿಷಯಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಗಾಂಧಿಯವರು ಸಾಮಾನ್ಯವಾಗಿ ಗುಜರಾತಿಯಲ್ಲಿ ಬರೆಯುತ್ತಿದ್ದರೂ ಸಹ, ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ಭಾಷಾಂತರವಾಗಿದ್ದ ತಮ್ಮ ಪುಸ್ತಕಗಳನ್ನು ಪರಿಷ್ಕರಿಸುತ್ತಿದ್ದರು.
  • ೧೯೬೦ನೇ ಇಸವಿಯಲ್ಲಿ ಭಾರತ ಸರ್ಕಾರವು ಗಾಂಧಿಯವರ ಸಂಪೂರ್ಣ ಕೃತಿಗಳನ್ನು ದಿ ಕಲೆಕ್ಟೆದ್‌ ವರ್ಕ್ಸ್‌ ಆಫ್‌ ಮಹಾತ್ಮ ಗಾಂಧಿ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿತ್ತು. ಈ ಬರಹಗಳು ಸುಮಾರು ೫೦,೦೦೦ ಪುಟಗಳನ್ನು ಒಳಗೊಂಡಿದ್ದು ಅವುಗಳನ್ನು ಸುಮಾರು ನೂರು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಆದರೆ, ರಾಜಕೀಯ ದುರುದ್ದೇಶಗಳಿಗಾಗಿ ಸರ್ಕಾರವು ಕೃತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿದೆ ಎಂದು ಗಾಂಧಿಯವರ ಅನುಯಾಯಿಗಳು ವಾದಿಸಿದ್ದರಿಂದಾಗಿ ೨೦೦೦ನೇ ಇಸವಿಯಲ್ಲಿ ಅವರ ಸಂಪೂರ್ಣ ಕೃತಿಗಳ ಪರಿಷ್ಕೃತ ಆವೃತ್ತಿಯು ವಿವಾದದ ಕಿಡಿಯನ್ನು ಹೊತ್ತಿಸಿದ್ದವು. ನಂತರ ಭಾರತ ಸರ್ಕಾರವು ಪರಿಷ್ಕೃತ ಆವೃತ್ತಿಯನ್ನು ಹಿಂಪಡೆಯಿತು.[೫೮]

ಗಾಂಧಿಯವರ ಬಗ್ಗೆ ಪುಸ್ತಕಗಳು

[ಬದಲಾಯಿಸಿ]
  • ಹಲವು ಜೀವನಚರಿತ್ರಕಾರರು ಗಾಂಧಿಯವರ ಜೀವನವನ್ನು ವಿವರಿಸುವ ಕೆಲಸವನ್ನು ಕೈಗೊಂಡಿದ್ದಾರೆ. ಅವುಗಳಲ್ಲಿ, ಎರಡು ಕೃತಿಗಳು ಪ್ರಸಿದ್ಧವಾಗಿವೆ: ಎಂಟು ಸಂಪುಟಗಳಲ್ಲಿರುವ, D. G. ತೆಂಡೂಲ್ಕರ್‌ರವರ ಮಹಾತ್ಮ. ಲೈಫ್‌ ಆಫ್‌ ಮೋಹನ್‌ದಾಸ್‌ ಕರಮ್‌ಚಂದ್‌ ಗಾಂಧಿ ಮತ್ತು ೧೦ ಸಂಪುಟಗಳಲ್ಲಿರುವ, ಪ್ಯಾರೇಲಾಲ್‌ ಮತ್ತು ಸುಶೀಲಾ ನಾಯರ್‌ರವರ ಮಹಾತ್ಮ ಗಾಂಧಿ .US ಸೇನಾದಳದ ಕರ್ನಲ್‌ G. B. ಸಿಂಗ್‌ ಗಾಂಧಿ: ಬಿಹೈಂಡ್‌ ದಿ ಮಾಸ್ಕ್‌ ಆಫ್‌ ಡಿವೈನಿಟಿ ಎಂಬ ಪುಸ್ತಕವನ್ನು ಬರೆದಿದ್ದಾರೆ.[೫೯]
  • ಈಗಿರುವ ಗಾಂಧಿಯವರ ಕುರಿತಾದ ಬಹುಪಾಲು ಸಾಹಿತ್ಯ ಕೃತಿಗಳು ಗಾಂಧಿಯವರು ಬರೆದ ಆತ್ಮಚರಿತ್ರೆಯಲ್ಲಿರುವ ವಿಚಾರಗಳನ್ನೇ ಹೇಳುತ್ತವೆಯೇ ಹೊರತು, ಗಾಂಧಿಯವರ ನಡೆ-ನುಡಿಗಳ ಕುರಿತಾದ ವಿಮರ್ಶಾತ್ಮಕ ಅವಲೋಕನವು ಅವುಗಳಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿದೆ ಎಂಬುದಾಗಿ G. B. ಸಿಂಗ್‌‌ರವರು ಈ ಪುಸ್ತಕದಲ್ಲಿ ವಾದಿಸುತ್ತಾರೆ. ಗಾಂಧಿಯವರ ಸ್ವಂತ ಮಾತುಗಳು, ಪತ್ರಗಳು ಮತ್ತು ಸುದ್ದಿ ಪತ್ರಿಕೆಗಳ ಅಂಕಣಗಳು ಮತ್ತು ಅವರ ನಡೆಗಳನ್ನು ಆಧರಿಸಿ ರೂಪಿಸಿದ ತಮ್ಮ ಪ್ರೌಢ ಪ್ರಬಂಧದಲ್ಲಿ, ಆಫ್ರಿಕಾದ ಮೂಲನಿವಾಸಿ ಕಪ್ಪುಜನಗಳು ಮತ್ತು ಕಾಲಾನಂತರದಲ್ಲಿ ಭಾರತದಲ್ಲಿನ ಬಿಳಿಯ ಬ್ರಿಟಿಷರ ವಿರುದ್ಧ ಗಾಂಧಿಯವರು ವರ್ಣಭೇದವನ್ನು ತೋರುತ್ತಿದ್ದರು ಎಂದು ಸಿಂಗ್‌ ಪ್ರತಿಪಾದಿಸುತ್ತಾರೆ.
  • ಕಾಲಾನಂತರ ಡಾ. ಟಿಮ್‌ ವಾಟ್ಸನ್‌ರವರ ಜೊತೆಗೂಡಿ ಸಿಂಗ್‌ರವರು ರಚಿಸಿದ ಗಾಂಧಿ ಅಂಡರ್ ಕ್ರಾಸ್ ಎಗ್ಸಾಮಿನೇಷನ್‌ (೨೦೦೮) ಎಂಬ ಕೃತಿಯು, ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರಸಿದ್ಧ ರೈಲು ಘಟನೆಯನ್ನು ಗಾಂಧಿಯವರು ಸ್ವತಃ ಹಲವು ಸನ್ನಿವೇಶಗಳಲ್ಲಿ ವಿವಿಧ ರೀತಿಯಲ್ಲಿ ವಿವರಿಸಿದ್ದು, ಸದರಿ ಘಟನೆಯು ಇಂದು ಅರ್ಥೈಸಿಕೊಂಡಿರುವಂತೆ ನಡೆಯಲೇ ಇಲ್ಲ ಎಂದು ವಾದಿಸುತ್ತದೆ.

ಅನುಯಾಯಿಗಳು ಮತ್ತು ಪ್ರಭಾವ

[ಬದಲಾಯಿಸಿ]
ನನ್ನ ಜೀವನದಾದ್ಯಂತ, ನಾನು ಯಾವಾಗಲೂ ಮಹಾತ್ಮ ಗಾಂಧಿಯವರನ್ನು ಒಂದು ಸ್ಪೂರ್ತಿಯಂತೆ ಕಂಡಿದ್ದೇನೆ. ಏಕೆಂದರೆ ಸಾಮಾನ್ಯ ಜನರು ಒಗ್ಗೂಡಿ ಅಸಾಮಾನ್ಯ ಕೆಲಸಗಳನ್ನು ಮಾಡಿದಾಗ ಕಂಡುಬರುವ ಒಂದು ರೀತಿಯ ಪರಿವರ್ತನೆಯ ಬದಲಾವಣೆಯನ್ನು ತರಿಸುವಂತಹ ಪ್ರೇರಕ ಶಕ್ತಿಯು ಅವರಲ್ಲಿ ಮೈಗೂಡಿಕೊಂಡಿದೆ. ಆದ್ದರಿಂದಲೇ, ನಿಜವಾದ ಫಲಿತಾಂಶಗಳು ಕೇವಲ ವಾಷಿಂಗ್ಟನ್‌ನಿಂದ ಮಾತ್ರವೇ ಬರುವುದಿಲ್ಲ, ಜನರಿಂದ ಅವು ಬರುತ್ತವೆ ಎಂಬುದನ್ನು ನಾನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೋಸ್ಕರವೇ ನಾನು ನನ್ನ ಸೆನೇಟ್‌ ಕಚೇರಿಯಲ್ಲಿ ಅವರ ಭಾವಚಿತ್ರವನ್ನು ನೇತುಹಾಕಿಕೊಂಡಿರುವೆ.[೬೯]

ಪರಂಪರೆ

[ಬದಲಾಯಿಸಿ]
ದಕ್ಷಿಣ ಆಫ್ರಿಕಾದ ಪೈಟೆರ್ಮರಿಟ್ಜ್‌ಬರ್ಗ್ ಡೌನ್‌ಟೌನ್‌ನ ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯವರ ಶತಮಾನೋತ್ಸವದ ಸ್ಮಾರಕ ಪ್ರತಿಮೆಯಿದೆ.
ನವದೆಹಲಿಯ ಗಾಂಧಿ ಸ್ಮೃತಿ ಬಳಿಯಿರುವ ಹುತಾತ್ಮರ ಸ್ತಂಭವಿರುವ ಸ್ಥಳದಲ್ಲಿ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು.
1948ರಂದು ಭಾರತದ ನವದೆಹಲಿಯಲ್ಲಿರುವ ರಾಜ್‌ಘಾಟ್‌ನಲ್ಲಿ ಗಾಂಧಿಯವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಚಿತ್ರ:200705 gandhiWaikiki.jpg
ವೈಕಿಕಿಯಲ್ಲಿ ಗಾಂಧಿಯವರ ಪ್ರತಿಮೆ, ಹೊನೊಲುಲು, ಹೊಹಾವೊ, ಹವಾಯಿ.ಮೇ 16, 2007.
ಚಿತ್ರ:San francisco Gandhi.jpg
ಸ್ಯಾನ್ ಫ್ರಾನ್ಸಿಸ್ಕೊದ ಎಂಬರ್‌ಕಡೆರೊ ನೈಬರ್‌ಹುಡ್, 1 ಫೆರ್ರಿ ಕಟ್ಟಡಫೆರ್ರಿ ಕಟ್ಟಡದ ಪಾರ್ಕಿಂಗ್ ಪ್ರದೇಶ, ಸ್ಯಾನ್ ಫ್ರಾನ್ಸಿಸ್ಕೊ, CA 94199 USA

ಗಾಂಧಿಯವರ ಜನ್ಮದಿನವಾದ ಅಕ್ಟೋಬರ್‌ ೨ಅನ್ನು ಭಾರತದಲ್ಲಿ ರಾಷ್ಟ್ರೀಯ ರಜಾದಿನವೆಂದು ಘೋಷಣೆ ಮಾಡಿ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. "ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ"ಯು "ಸರ್ವಾನುಮತದಿಂದ ಅಂಗೀಕರಿಸಿದ" ನಿರ್ಣಯವೊಂದನ್ನು ಕೈಗೊಂಡು, ಅಕ್ಟೋಬರ್‌ ೨ನ್ನು "ಅಂತಾರಾಷ್ಟ್ರೀಯ ಅಹಿಂಸಾ ದಿನ"ವೆಂದು ಘೋಷಿಸಿದೆ ಎಂದು ೨೦೦೭ರ ಜೂನ್ ೧೫ರಂದು ಪ್ರಕಟಿಸಲಾಯಿತು.[೭೦] ಭಾರತ ರಾಷ್ಟ್ರದ ಸೇವೆಗಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸಲು, ಅವರ ಹತ್ಯೆಯ ದಿನವಾದ ಜನವರಿ ೩೦ನ್ನು ಭಾರತದಲ್ಲಿ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ.

ಅಮೆರಿಕನ್‌ ಫ್ರೆಂಡ್ಸ್‌ ಸರ್ವೀಸ್‌ ಕಮಿಟಿಯಿಂದ ಮೊತ್ತ ಮೊದಲ ಬಾರಿಗೆ ನಾಮ ನಿರ್ದೇಶನಗೊಂಡಿದ್ದೂ ಸೇರಿದಂತೆ, ೧೯೩೭ರಿಂದ ೧೯೪೮ರ ನಡುವೆ ಗಾಂಧಿಯವರು ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಐದು ಬಾರಿ ನಾಮ ನಿರ್ದೇಶನಗೊಂಡರೂ ಸಹ ಅವರು ಆ ಪ್ರಶಸ್ತಿಯನ್ನು ಎಂದಿಗೂ ಸ್ವೀಕರಿಸಲಿಲ್ಲ.[೭೩] ದಶಕಗಳ ತರುವಾಯ, ನೋಬೆಲ್ ಸಮಿತಿಯು ರಾಷ್ಟ್ರೀಯತಾ ಅಭಿಪ್ರಾಯದಂತೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಕ್ಕಾಗಿ ಕ್ಷಮೆ ಕೋರಿ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿತು. ೧೯೪೮ರಲ್ಲಿ ಮಹಾತ್ಮ ಗಾಂಧಿಯವರು ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭ ಬಂದಿತ್ತಾದರೂ, ಆದೇ ಸಮಯದಲ್ಲಿ ಅವರನ್ನು ಹತ್ಯೆಯಾದ್ದರಿಂದ ಆ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೊಸದಾಗಿ ಸೃಷ್ಟಿಸಲಾದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹುಟ್ಟಿಕೊಂಡ ಯುದ್ಧವೂ ಆ ವರ್ಷದ ಹೆಚ್ಚುವರಿ ಸಂಕೀರ್ಣ ಅಂಶವಾಯಿತೆನ್ನಬಹುದು.[೭೪] ಗಾಂಧಿಯವರ ಹತ್ಯೆಯಾದ ವರ್ಷವಾದ ೧೯೪೮ರಲ್ಲಿ , "ಯೋಗ್ಯ ಜೀವಂತ ಅಭ್ಯರ್ಥಿ ಇರದಿದ್ದ" ಕಾರಣ ಆ ವರ್ಷ ಯಾರಿಗೂ ಪ್ರಶಸ್ತಿಯನ್ನು ನೀಡಲಿಲ್ಲ. ೧೯೮೯ರಲ್ಲಿ ದಲೈ ಲಾಮರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂದರ್ಭದಲ್ಲಿ, ಸಮಿತಿಯ ಅಧ್ಯಕ್ಷರು "ಇದು ಮಹಾತ್ಮ ಗಾಂಧಿ ಸ್ಮರಣಾರ್ಥ ಉಡುಗೊರೆಯ ಒಂದು ಭಾಗವಾಗಿದೆ" ಎಂದು ಹೇಳಿದರು.[೭೫] ೧೯೪೮ರ ಜನವರಿ ೩೦ರಂದು ಗಾಂಧಿಯವರು ಹತ್ಯೆಗೀಡಾದ ಸ್ಥಳವಾದ ಘನಶ್ಯಾಮ್‌ ದಾಸ್‌ ಬಿರ್ಲಾರವರ ಮನೆಯಾದ ಬಿರ್ಲಾ ಭವನ ಅಥವಾ ಬಿರ್ಲಾ ಹೌಸ್‌ನ್ನು , ೧೯೭೧ರಲ್ಲಿ ಭಾರತ ಸರ್ಕಾರವು ವಶಪಡಿಸಿಕೊಂಡು, ಗಾಂಧಿ ಸ್ಮೃತಿ ಅಥವಾ "ಗಾಂಧಿ ಸ್ಮರಣೆ"ಗೆಂದು ೧೯೭೩ರಲ್ಲಿ ಸಾರ್ವಜನಿಕರಿಗೆ ತೆರೆಯಿತು. ಮಹಾತ್ಮ ಗಾಂಧಿಯವರು ತಮ್ಮ ಜೀವನದ ಕಡೆಯ ನಾಲ್ಕು ತಿಂಗಳುಗಳನ್ನು ಕಳೆದ ಕೋಣೆ ಹಾಗೂ ತಮ್ಮ ರಾತ್ರಿಯ ಸಾರ್ವಜನಿಕ ನಡಿಗೆಯ ಸಮಯದಲ್ಲಿ ಗುಂಡೇಟಿಗೀಡಾದ ಭೂಮಿಯನ್ನು ಸರ್ಕಾರವು ಕಾಪಾಡುತ್ತಿದೆ. ಹುತಾತ್ಮರ ಸ್ಥಂಭವೊಂದನ್ನು ಮೋಹನ್‌ದಾಸ್‌ ಗಾಂಧಿಯವರನ್ನು ಹತ್ಯೆ ಮಾಡಿದ ಸ್ಥಳವನ್ನಾಗಿ ಈಗ ಗುರುತಿಸಲಾಗುತ್ತದೆ.

  • ಪ್ರತೀ ವರ್ಷ ಜನವರಿ ೩೦ರಂದು, ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನದ ವಾರ್ಷಿಕ ಪುಣ್ಯತಿಥಿಯಂದು ಹಲವು ದೇಶಗಳ ಶಾಲೆಗಳಲ್ಲಿ ಅಹಿಂಸೆ ಮತ್ತು ಶಾಂತಿಯ ಶಾಲಾದಿನವೆಂದು (DENIP) ಆಚರಿಸುತ್ತಾರೆ, ಇದನ್ನು ಸ್ಪೇಯ್ನ್‌‌ನಲ್ಲಿ ೧೯೬೪ರಂದು ಪ್ರಾರಂಭಿಸಲಾಯಿತು. ದಕ್ಷಿಣ ಭೂಗೋಳದಲ್ಲಿರುವ ರಾಷ್ಟ್ರಗಳ ಶಾಲಾ ಕ್ಯಾಲೆಂಡರ್‌ನಲ್ಲಿ, ಇದನ್ನು ಮಾರ್ಚ್ ೩೦ರಂದು ಅಥವಾ ಆಸುಪಾಸಿನ ದಿನಗಳಲ್ಲಿ ಆಚರಿಸಲಾಗುತ್ತದೆ.

ಆದರ್ಶಗಳು ಹಾಗೂ ಮೌಲ್ಯಗಳು

[ಬದಲಾಯಿಸಿ]

ಗಾಂಧಿಯವರು ಪಾಲಿಸುತ್ತಿದ್ದ ಅಹಿಂಸಾತತ್ವವು ಶಾಂತಿ ಧೋರಣೆಯನ್ನು ಸೂಚಿಸುವುದರಿಂದಾಗಿ ಇದು ಎಲ್ಲ ರಾಜಕೀಯ ಸಮುದಾಯದಾದ್ಯಂತ ಬರುವ ಟೀಕೆಯ ಮೂಲವಾಗಿದೆ.

ವಿಭಜನೆಯ ಪರಿಕಲ್ಪನೆ

[ಬದಲಾಯಿಸಿ]

ಧಾರ್ಮಿಕ ಒಗ್ಗಟ್ಟಿಗೆ ಸಂಬಂಧಪಟ್ಟಿರುವ ತಮ್ಮ ದೃಷ್ಟಿಕೋನಕ್ಕೆ ವಿಭಜನೆಯ ಪರಿಕಲ್ಪನೆಯು ವಿರುದ್ಧವಾಗಿದ್ದರಿಂದ ಗಾಂಧಿಯವರು ನಿಯಮದಂತೆ ಈ ಪರಿಕಲ್ಪನೆಯನ್ನು ವಿರೋಧಿಸಿದರು.[೭೬] ಪಾಕಿಸ್ತಾನವನ್ನು ಸೃಷ್ಟಿಸುವುದಕ್ಕಾಗಿ ಭಾರತದ ವಿಭಜನೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಸಂಬಂಧಿಸಿ ೧೯೪೬ರ ಅಕ್ಟೋಬರ್ ೬ರಂದು ಹರಿಜನ್ ಪತ್ರಿಕೆಯಲ್ಲಿ ಅವರು ಹೀಗೆ ಬರೆದರು:

ಮುಸ್ಲಿಂ ಲೀಗ್‌ನಿಂದ ಪ್ರಸ್ತಾಪಿಸಲ್ಪಟ್ಟಿರುವ ಬೇಡಿಕೆಯು[ಪಾಕಿಸ್ತಾನಕ್ಕಾಗಿ ಮಾಡಿರುವ ಬೇಡಿಕೆಯು) ಇಸ್ಲಾಂ ನೀತಿಯಿಂದ ಹೊರತಾಗಿದೆಯಾದ್ದರಿಂದ ಇದನ್ನು ಪಾಪವೆಂದು ಕರೆಯಲು ನಾನು ಹಿಂಜರಿಯುವುದಿಲ್ಲ. ಮನುಕುಲದ ಒಗ್ಗಟ್ಟು ಹಾಗೂ ಭ್ರಾತೃತ್ವದ ಸಂಕೇತವಾಗಿ ಇಸ್ಲಾಂ ನಿಲ್ಲುತ್ತದೆ ಯೇ ಹೊರತು, ಮಾನವ ಕುಟುಂಬದ ಐಕಮತ್ಯವನ್ನು ಒಡೆದುಹಾಕುವುದಕ್ಕಲ್ಲ. ಆದ್ದರಿಂದ, ಭಾರತವನ್ನು ವಿಭಜಿಸಿ ಸಂಭವನೀಯ ಯುದ್ಧ ಗುಂಪುಗಳಾಗಿ ಮಾಡಲು ಯಾರು ಪ್ರಯತ್ನ ಮಾಡುತ್ತಾರೋ ಅಂತಹವರು ಭಾರತ ಮತ್ತು ಇಸ್ಲಾಮ್‌‌ ಎರಡಕ್ಕೂ ಬದ್ಧ ವೈರಿಗಳು. ಅವರು ನನ್ನನ್ನು ತುಂಡುತುಂಡಾಗಿ ಕತ್ತರಿಸಬಹುದು, ಆದರೆ ನಾನು ತಪ್ಪು ಎಂದು ಪರಿಗಣಿಸಿರುವ ಒಂದು ಕೆಲಸದಲ್ಲಿ ನಾನು ತೊಡಗಿಕೊಳ್ಳುವಂತೆ ಅವರು ಮಾಡಲಾರರು[...] ಬಿರುಸಾದ ಮಾತುಗಳ ನಡುವೆಯೂ ನಮ್ಮೆಲ್ಲಾ ಮುಸ್ಲಿಮರೊಂದಿಗೆ ಸ್ನೇಹದಿಂದ ನಡೆದುಕೊಳ್ಳುವುದು ಹಾಗೂ ನಮ್ಮ ಪ್ರೀತಿಯಲ್ಲಿ ಅವರನ್ನು ಗಟ್ಟಿಯಾಗಿ ಬಂಧಿಸಿಟ್ಟುಕೊಳ್ಳುವುದನ್ನು ನಾವು ಬಿಡಬಾರದು.[೭೭]

ಆದರೂ, ಪಾಕಿಸ್ತಾನದ ವಿಷಯಕ್ಕೆ ಸಂಬಂಧಿಸಿದಂತೆ ಜಿನ್ನಾರೊಂದಿಗಿನ ಗಾಂಧಿಯವರ ಸುದೀರ್ಘ ಪತ್ರ ವ್ಯವಹಾರದ ಕುರಿತು ಹೋಮರ್ ಜಾಕ್‌ರವರು ಒಂದಷ್ಟು ಟಿಪ್ಪಣಿಗಳನ್ನು ನೀಡುತ್ತಾರೆ: "ಭಾರತದ ವಿಭಜನೆಯನ್ನು ಗಾಂಧಿಯವರು ವೈಯಕ್ತಿಕವಾಗಿ ವಿರೋಧಿಸಿದ್ದರೂ ಸಹ ಅವರೊಂದು ಒಪ್ಪಂದವನ್ನು ಪ್ರಸ್ತಾಪಿಸಿದ್ದರು. ತಾತ್ಕಾಲಿಕ ಸರ್ಕಾರವೊಂದರ ಅಡಿಯಲ್ಲಿ ಸ್ವಾತಂತ್ರ್ಯವನ್ನು ಗಳಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ಸಹಕರಿಸಬೇಕು. ಅದಾದ ನಂತರ ಮುಸ್ಲಿಮರ ಬಾಹುಳ್ಯವನ್ನು ಹೊಂದಿರುವ ಜಿಲ್ಲೆಗಳಲ್ಲಿನ ಜನಮತದ ಆಧಾರದ ಮೇಲೆ ವಿಭಜನೆಯ ಪ್ರಶ್ನೆಯನ್ನು ನಿರ್ಧರಿಸಬಹುದು ಎಂಬುದು ಆ ಒಪ್ಪಂದದಲ್ಲಿತ್ತು." [೭೮] ಭಾರತದ ವಿಭಜನೆಗೆ ಸಂಬಂಧಿಸಿದಂತೆ ಗಾಂಧಿಯವರ ಈ ದ್ವಂದ್ವ ನಿಲುವುಗಳು ಹಿಂದುಗಳು ಮತ್ತು ಮುಸ್ಲಿಮರಿಂದ ಟೀಕೆಗೊಳಗಾದವು. ಮುಸ್ಲಿಮರ ರಾಜಕೀಯ ಹಕ್ಕುಗಳನ್ನು ಗಾಂಧಿಯವರು ಹಾಳುಮಾಡಿದರು ಎಂಬ ಕಾರಣವನ್ನು ಮುಂದೊಡ್ಡಿ ಮಹಮ್ಮದ್ ಆಲಿ ಜಿನ್ನಾ ಹಾಗೂ ಇತರ ಸಮಕಾಲೀನ ಪಾಕಿಸ್ತಾನೀಯರು ಗಾಂಧಿಯವರನ್ನು ಖಂಡಿಸಿದರು. ರಾಜಕೀಯವಾಗಿ ಮುಸ್ಲಿಮರನ್ನು ಬೆಂಬಲಿಸುತ್ತಿರುವುದಕ್ಕೆ ಮತ್ತು ಹಿಂದೂಗಳ ವಿರುದ್ಧ ಮುಸ್ಲಿಮರು ಮಾಡುತ್ತಿರುವ ದುಷ್ಕೃತ್ಯಗಳಿಗೆ ಜಾಣಕುರುಡಾಗಿರುವುದನ್ನು ಕಂಡು, ಹಾಗೂ ಪಾಕಿಸ್ತಾನದ ಸೃಷ್ಟಿಗೆ ಅನುವು ಮಾಡಿಕೊಟ್ಟ ರೀತಿಗೆ ("ಭಾರತದ ವಿಭಜನೆಗೆ ಮುಂಚೆ ನನ್ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಬೇಕು ಎಂದು ಸಾರ್ವಜನಿಕವಾಗಿ ಅವರೇ ಘೋಷಿಸಿದರೂ ವಿಭಜನೆಗೆ ಅನುವು ಮಾಡಿಕೊಟ್ಟಿರುವುದಕ್ಕೆ") ವಿನಾಯಕ್‌ ದಾಮೋದರ್‌ ಸಾವರ್ಕರ್‌ ಮತ್ತು ಅವರ ಜೊತೆಗಾರರು ಗಾಂಧಿಯವರನ್ನು ಖಂಡಿಸಿದರು. [148] ಇದು ರಾಜಕೀಯ ಚರ್ಚಾವಿಷಯವಾಗಿ ಮುಂದುವರೆಯಿತು: ಪಾಕಿಸ್ತಾನಿ-ಅಮೆರಿಕನ್‌ ಇತಿಹಾಸಗಾರ್ತಿಯಾದ ಆಯೆಷಾ ಜಲಾಲ್‌ರಂತಹ ಕೆಲವರು, ಮುಸ್ಲಿಂ ಲೀಗ್‌ನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿ ಗಾಂಧಿಯವರು ಹಾಗೂ ಕಾಂಗ್ರೆಸ್‌ ತೋರಿಸಿದ ಅಸಮ್ಮತಿಯಿಂದಾಗಿ ವಿಭಜನೆಯ ಕಾರ್ಯವು ತೀವ್ರಗೊಂಡಿತು ಎಂದು ವಾದಿಸುತ್ತಾರೆ. ಹಿಂದೂ ರಾಷ್ಟ್ರೀಯವಾದಿ ರಾಜಕಾರಣಿಯಾದ ಪ್ರವೀಣ್‌ ತೊಗಾಡಿಯಾರಂತಹ ಇತರರೂ ಸಹ ಈ ವಿಷಯಕ್ಕೆ ಸಂಬಂಧಿಸಿ ಗಾಂಧಿಯವರ ನಾಯಕತ್ವ ಹಾಗೂ ನಡೆಗಳನ್ನು ಟೀಕಿಸಿ, ಈ ವಿಷಯದಲ್ಲಿ ಕಂಡುಬಂದ ಅತಿಯಾದ ದುರ್ಬಲತೆಯೇ ಭಾರತದ ವಿಭಜನೆಗೆ ಕಾರಣವಾಯಿತು ಎಂದಿದ್ದಾರೆ. ಇಸ್ರೇಲ್‌ನ್ನು ಸೃಷ್ಟಿಸುವುದಕ್ಕಾಗಿ ಪ್ಯಾಲೆಸ್ತೇನ್‌ನ ವಿಭಜನೆ ಮಾಡುವ ವಿಷಯಕ್ಕೆ ಪ್ರತಿಕ್ರಿಯೆಯಾಗಿ ೧೯೩೦ ಅಂತ್ಯದಲ್ಲಿ ಗಾಂಧಿಯವರು ವಿಭಜನೆಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು. ಈ ಕುರಿತು ೧೯೩೮ರ ಅಕ್ಟೊಬರ್‌ ೨೬ರಂದು ಹರಿಜನ್‌ ಪತ್ರಿಕೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ:

ಪ್ಯಾಲೆಸ್ತೇನ್‌‌ನಲ್ಲಿನ ಅರಬ್‌-ಯಹೂದ್ಯರ ಪ್ರಶ್ನೆಗೆ ಮತ್ತು ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆಗೆ ಸಂಬಂಧಿಸಿದಂತೆ ನನ್ನ ನಿರ್ಧಾರಗಳನ್ನು ತಿಳಿಸಬೇಕೆಂದು ನನಗೆ ಹಲವು ಪತ್ರಗಳು ಬಂದಿವೆ. ಈ ತರಹದ ತುಂಬಾ ಕ್ಲಿಷ್ಟಕರ ಪ್ರಶ್ನೆಗೆ ಹಿಂಜರಿಕೆಯಿಂದಲೇ ನನ್ನ ನಿರ್ಧಾರಗಳನ್ನು ತಿಳಿಸಬೇಕಾಗಿ ಬಂದಿದೆ.ಯಹೂದ್ಯರ ಬಗ್ಗೆ ನನ್ನೆಲ್ಲಾ ಸಹಾನುಭೂತಿಗಳಿವೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಅವರನ್ನು ತುಂಬಾ ಹತ್ತಿರದಿಂದ ಕಂಡಿದ್ದು, ಅವರಲ್ಲಿ ಕೆಲವರು ಜೀವನದುದ್ದಕ್ಕೂ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ. ಜೀವನಪರ್ಯಂತ ಅವರು ಅನುಭವಿಸಿರುವ ಕಷ್ಟಕೋಟಲೆಗಳನ್ನು ಈ ಗೆಳೆಯರ ಮೂಲಕ ನಾನು ಹೆಚ್ಚಿನ ರೀತಿಯಲ್ಲಿ ಅರಿತುಕೊಂಡಿರುವೆ. ಅವರು ಕ್ರೈಸ್ತ ಮತದಲ್ಲಿಯೇ ಇದ್ದರೂ ಅಸ್ಪೃಶ್ಯರಾಗಿದ್ದರು[...] ಆದರೆ ನನ್ನ ಈ ಸಹಾನುಭೂತಿಯು ನ್ಯಾಯ ಒದಗಿಸಲು ಮಾಡಬೇಕಾದ ಅಗತ್ಯ ಕ್ರಮಗಳನ್ನು ಮಾಡುವಲ್ಲಿ ನನ್ನನ್ನು ಕುರುಡಾಗಿಸಿಲ್ಲ. ತಮ್ಮ ಸ್ವಂತ ರಾಷ್ಟ್ರಕ್ಕಾಗಿ ಯಹೂದ್ಯರು ಮಾಡಿದ ಕೂಗು ನನಗೆ ಅಷ್ಟಾಗಿ ಮನಮುಟ್ಟಲಿಲ್ಲ. ಈ ಅನ್ವೇಷಣೆಗೆ ಮತ್ತು ಪ್ಯಾಲೆಸ್ತೇನ್‌ಗೆ ಹಿಂದಿರುಗುವುದಕ್ಕೆ ಸಂಬಂಧಿಸಿದ ಯಹೂದ್ಯರ ಹಾತೊರೆಯುವಿಕೆಗೆ ಬೈಬಲ್‌ನಲ್ಲಿಯೇ ಅನುಮೋದನೆಯಿದೆ. ಈ ಭೂಮಿಯಲ್ಲಿರುವ ಬೇರೆ ಜನಗಳ ತರಹ, ತಾವು ಹುಟ್ಟಿದ, ಜೀವನೋಪಾಯಕ್ಕಾಗಿ ದುಡಿದ ದೇಶವನ್ನೇ ತಮ್ಮ ಸ್ವಂತ ಮನೆಯೆಂದು ಅವರೇಕೆ ಭಾವಿಸಬಾರದು?ಇಂಗ್ಲೆಂಡ್‌ ಆಂಗ್ಲರಿಗೆ ಅಥವಾ ಫ್ರಾನ್ಸ್‌ ಫ್ರೆಂಚರಿಗೆ ಸೇರಿರುವಂತೆಯೇ ಪ್ಯಾಲೆಸ್ತೇನ್‌ ಅರಬರಿಗೆ ಸೇರಿದೆ. ಯಹೂದ್ಯರನ್ನು ಅರಬರ ಮೇಲೆ ಹೇರುವುದು ತಪ್ಪು ಮತ್ತು ಅಮಾನವೀಯ. ಇಂದು ಪ್ಯಾಲೆಸ್ತೇನ್‌ನಲ್ಲಿ ನಡೆಯುತ್ತಿರುವ‌ ಘಟನೆಗಳಿಗೆ ಯಾವುದೇ ನೀತಿಸಂಹಿತೆ ಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ.[೭೯][೮೦]

ಹಿಂಸಾತ್ಮಕ ಪ್ರತಿಭಟನೆಯ ತಿರಸ್ಕರಣೆ

[ಬದಲಾಯಿಸಿ]
  • ಅತಿಹೆಚ್ಚಿನ ಹಿಂಸಾತ್ಮಕ ಮಾರ್ಗಗಳಿಂದ ಸ್ವಾತಂತ್ರ್ಯವನ್ನು ಗಳಿಸಲು ಪ್ರಯತ್ನ ಪಟ್ಟವರ ಬಗ್ಗೆ ಗಾಂಧಿಯವರು ಮಾಡಿದ ಟೀಕೆಗಳಿಗಾಗಿ ಅವರೂ ಸಹ ಒಂದಷ್ಟು ರಾಜಕೀಯ ಟೀಕೆಗಳಿಗೆ ಗುರಿಯಾಗಬೇಕಾಯಿತು. ಭಗತ್‌ ಸಿಂಗ್‌, ಸುಖ್‌ದೇವ್‌, ಉಧಮ್‌ ಸಿಂಗ್‌ ಮತ್ತು ರಾಜ್‌ಗುರುರವರನ್ನು ನೇಣಿಗೆ ಹಾಕುವುದನ್ನು ಪ್ರತಿಭಟಿಸಲು ಅವರು ನಿರಾಕರಿಸಿದ್ದು ಕೆಲವು ಪಕ್ಷಗಳಿಂದ ಬಂದ ಖಂಡನೆಯ ಮೂಲವಾಯಿತು.[೮೧][೮೨]
  • ಆ ಟೀಕೆಗಳಿಗೆ ಗಾಂಧಿಯವರು ಪ್ರತಿಕ್ರಿಯಿಸಿದ್ದು ಹೀಗೆ: "ಒಂದು ಕಾಲದಲ್ಲಿ ಜನ ನನ್ನ ಮಾತನ್ನು ಕೇಳುತ್ತಿದ್ದರು. ಏಕೆಂದರೆ ಅವರ ಬಳಿ ಆಯುಧಗಳೇ ಇಲ್ಲದಿದ್ದಾಗ ಬ್ರಿಟಿಷರ ವಿರುದ್ದ ಯಾವುದೇ ಶಸ್ತ್ರಗಳಿಲ್ಲದೆಯೇ ಹೋರಾಡುವುದು ಹೇಗೆ ಎಂದು ಅವರಿಗೆ ತೋರಿಸಿಕೊಟ್ಟಿದ್ದೆ...ಆದರೆ ಈಗ ನನ್ನ ಅಹಿಂಸಾ ತತ್ವಗಳಿಂದ ಅವರಿಗೆ [ಹಿಂದು–ಮುಸ್ಲಿಮ್‌ ದಂಗೆಕೋರರಿಗೆ] ಪ್ರಯೋಜನವಿಲ್ಲ ಎಂಬುದನ್ನು ಇಂದು ನಾನು ಕೇಳ್ಪಟ್ಟಿರುವೆ. ಆದ್ದರಿಂದ, ಜನರು ಆತ್ಮರಕ್ಷಣೆಗಾಗಿ ಶಸ್ತ್ರಸಜ್ಜಿತರಾಗಬೇಕು."[೮೩] ಹೋಮರ್ ಜಾಕ್‌ನ ದಿ ಗಾಂಧಿ ರೀಡರ್: ಎ ಸೋರ್ಸ್‌ಬುಕ್‌ ಆಫ್‌ ಹಿಸ್‌ ಲೈಫ್‌ ಅಂಡ್‌ ರೈಟಿಂಗ್ಸ್‌ ಎಂಬ ಪುಸ್ತಕದಲ್ಲಿ ಮರು ಮುದ್ರಣಗೊಂಡ ಅಸಂಖ್ಯಾತ ಲೇಖನಗಳಲ್ಲಿ ಅವರು ತಮ್ಮ ವಾದಸರಣಿಯನ್ನು ಮುಂದುವರಿಸಿದರು.
  • ಪ್ರಥಮವಾಗಿ, ೧೯೩೮ರಲ್ಲಿ ಬರೆಯಲಾದ "ಜಿಯೋನಿಸ್ಮ್‌ ಅಂಡ್ ಆಂಟಿ-ಸೆಮಿಟಿಸ್ಮ್‌,"ಎಂಬ ಲೇಖನದಲ್ಲಿ, ೧೯೩೦ರ ಸತ್ಯಾಗ್ರಹದ ಸನ್ನಿವೇಶದಲ್ಲಿ ನಡೆದ ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆಯ ಕುರಿತು ಗಾಂಧಿಯವರು ಟಿಪ್ಪಣಿಯನ್ನು ಬರೆದಿದ್ದಾರೆ. ಯಹೂದ್ಯರು ಜರ್ಮನಿಯಲ್ಲಿ ಎದುರಿಸಿದ ಕಷ್ಟಕೋಟಲೆಗಳನ್ನು ಎದುರಿಸುವಲ್ಲಿ ಅಹಿಂಸಾ ಮಾರ್ಗವನ್ನು ಒಂದು ವಿಧಾನವನ್ನಾಗಿ ಅವರು ತೋರಿಸಿಕೊಟ್ಟಿದ್ದು, ಅದರ ಕುರಿತು ಈ ರೀತಿ ಹೇಳುತ್ತಾರೆ,
  • ನಾನೇನಾದರೂ ಯಹೂದ್ಯನಾಗಿದ್ದು ಜರ್ಮನಿಯಲ್ಲಿ ಹುಟ್ಟಿ ಜೀವನೋಪಾಯವನ್ನು ಅಲ್ಲಿಯೇ ಗಳಿಸಿದ್ದೇ ಆಗಿದ್ದರೆ, ಅತಿ ಎತ್ತರದ ಯಹೂದ್ಯೇತರ ಜರ್ಮನ್‌ ದೈತ್ಯನಂತೆಯೇ ಜರ್ಮನಿಯನ್ನು ನನ್ನ ಮನೆಯೆಂದು ಸಮರ್ಥಿಸುತ್ತಿದ್ದೆ ಮತ್ತು ನನ್ನನ್ನು ಗುಂಡಿಟ್ಟು ಕೊಲ್ಲುವಂತೆ ಅಥವಾ ಕತ್ತಲ ಕೋಣೆಯಲ್ಲಿ ಬಂಧಿಸಿಡುವಂತೆ ಸವಾಲೆಯೆಸುತ್ತಿದ್ದೆನೇ ವಿನಃ, ತಾರತಮ್ಯ ನೀತಿಗೆ ನನ್ನನ್ನು ಒಪ್ಪಿಸಿಕೊಳ್ಳಲು ಅಥವಾ ಬಹಿಷ್ಕಾರಕ್ಕೆ ಒಳಗಾಗಲು ನಾನು ತಿರಸ್ಕರಿಸುತ್ತಿದ್ದೆ.
  • ಇದನ್ನು ನಾನು ಮಾಡುವುದಕ್ಕಾಗಿ ಸಾರ್ವಜನಿಕ ಪ್ರತಿರೋಧದಲ್ಲಿ ಯಹೂದ್ಯರು ಬಂದು ನನ್ನನ್ನು ಸೇರಬೇಕು ಎಂದು ನಾನು ಕಾಯುವ ಅವಶ್ಯಕತೆಯಲ್ಲ. ಆದರೆ ಅಂತ್ಯದಲ್ಲಿ ಉಳಿದವರೂ ಸಹ ನನ್ನ ಉದಾಹರಣೆಯನ್ನೇ ಅನುಸರಿಸುತ್ತಾರೆ ಎಂಬ ಆತ್ಮವಿಶ್ವಾಸ ಹೊಂದಿರುತ್ತಿದ್ದೆ. ಯಾವುದೇ ಒಬ್ಬ ಯಹೂದ್ಯ ಅಥವಾ ಎಲ್ಲ ಯಹೂದ್ಯರು ಇಲ್ಲಿ ನೀಡಿರುವ ಸಲಹೆಯನ್ನು ಒಪ್ಪಿಕೊಂಡಿದ್ದೇ ಆಗಿದ್ದಲ್ಲಿ, ಆತ ಅಥವಾ ಅವರು ಈಗಿನದ್ದಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿರಲಾರರು. ಸ್ವ ಇಚ್ಛೆಯಿಂದ ಅನುಭವಿಸುವ ಕಷ್ಟವು ಅವರಿಗೆ ಆಂತರಿಕ ಬಲ ಮತ್ತು ಸಂತೋಷವನ್ನು ಕೊಡುತ್ತದೆ. *ಇಂತಹ ಹಗೆತನಗಳ ಘೋಷಣೆಗೆ ತನ್ನ ಪ್ರಥಮ ಉತ್ತರವೆಂಬ ರೀತಿಯಲ್ಲಿ ಹಿಟ್ಲರ್‌‌ನ ಉದ್ದೇಶಪೂರ್ವಕ ಹಿಂಸಾಚಾರವು ಯಹೂದ್ಯರ ಸಾಮೂಹಿಕ ಮಾರಣಹೋಮದಲ್ಲಿ ಕೂಡ ಕೊನೆಗೊಳ್ಳಬಹುದು. ಆದರೆ ಸ್ವ ಇಚ್ಛೆಯ ಬಳಲಿಕೆಗೆ ಯುಹೂದಿಗಳ ಮನಸ್ಸು ಸಿದ್ಧವಾಗುವುದಾದರೆ, ನಾನು ಕಲ್ಪಿಸಿಕೊಂಡ ಮಾರಣಹೋಮವು ಕೂಡಾ ಕೃತಜ್ಞತೆ ಅರ್ಪಿಸುವ ದಿನವಾಗಿ ಬದಲಾಗಬಹುದು ಮತ್ತು ಪ್ರಜಾಪೀಡಕನ ಕೈಗಳಿಂದಲೂ ವರ್ಣಭೇದ ಪದ್ಧತಿಯನ್ನು ಜೆಹೊವಾ ದೇವನು ವಿಮೋಚನೆಗೊಳಿಸಿದಕ್ಕೆ ಸಂತೋಷವನ್ನು ಹೊಂದಬಹುದು. ದೇವರನ್ನು ಕಂಡು ಭಯಪಡುವವರಿಗೆ ಸಾವೆಂದರೆ ಏನೂ ಭಯವಿಲ್ಲ.[೮೪]
  • ಗಾಂಧಿಯವರ ಈ ಮಾತುಗಳು ವ್ಯಾಪಕ ಟೀಕೆಗೊಳಗಾದವು ಮತ್ತು "ಯಹೂದ್ಯರ ಕುರಿತಾದ ಪ್ರಶ್ನೆಗಳು" ಎಂಬ ಲೇಖನದಲ್ಲಿ ಈ ಕುರಿತು ಅವರು ಹೀಗೆ ಪ್ರತಿಕ್ರಿಯಿಸಿದರು: "ಯಹೂದ್ಯರಿಗೆ ನಾನು ಮಾಡಿರುವ ಮನವಿಯನ್ನು ಟೀಕಿಸಿರುವ ವೃತ್ತಪತ್ರಿಕೆಗಳ ಎರಡು ಸುದ್ದಿ ತುಣುಕುಗಳನ್ನು ನನ್ನ ಸ್ನೇಹಿತರು ನನಗೆ ಕಳಿಸಿದ್ದಾರೆ. ಯಹೂದ್ಯರ ಮೇಲೆ ನಡೆದಿರುವ ಅಪಚಾರಗಳ ವಿರುದ್ಧ ಅಹಿಂಸೆಯನ್ನು ಪರಿಹಾರವಾಗಿ ಪ್ರಸ್ತುತಪಡಿಸಿರುವುದಕ್ಕಾಗಿ ಈ ಎರಡು ಟೀಕಾಕಾರರು ನಾನು ಹೊಸದೇನನ್ನೂ ಸಲಹೆ ನೀಡಿಲ್ಲ ಎಂದು ಸೂಚಿಸಿದ್ದಾರೆ.
  • ಹೃದಯದಲ್ಲಿ ಅಡಕವಾಗಿರುವ ಹಿಂಸೆಯನ್ನು ಬಿಟ್ಟುಬಿಡುವ ಬಗ್ಗೆ ಮತ್ತು ತನ್ಮೂಲಕ ಉದ್ಭವವಾಗುವ ಶಕ್ತಿಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಬಗ್ಗೆ ನಾನು ಕೋರಿಕೊಂಡಿರುವೆ [೮೫] ಯಹೂದ್ಯರು ಎದುರಿಸುತ್ತಿರುವ ನೆತ್ತಿಯ ಮೇಲೆ ತೂಗುತ್ತಿರುವ ಸಾಮೂಹಿಕ ಬಲಿಗೆ ಸಂಬಂಧಿಸಿ ಗಾಂಧಿಯವರು ನೀಡಿದ ಹೇಳಿಕೆಗಳು ಅಸಂಖ್ಯಾತ ಟೀಕಾಕಾರರಿಂದ ಟೀಕೆಗೆ ಒಳಗಾಯಿತು.[೮೬]
  • ೧೯೩೯ರ ಫೆಬ್ರವರಿ ೨೪ರಂದು ಮಾರ್ಟಿನ್‌ ಬುಬರ್‌ರವರು ಗಾಂಧಿಯವರಿಗೆ ತೀಕ್ಷ್ನ ಟೀಕೆಯನ್ನು ಒಳಗೊಂಡ ಮುಕ್ತ ಪತ್ರವೊಂದನ್ನು ಬರೆದರು. ಬುಬರ್‌ನ ಪ್ರತಿಪಾದನೆಯಂತೆ, ಬ್ರಿಟಿಷ್‌ರು ಭಾರತೀಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಹಾಗೂ ನಾಜಿಗಳು ಯಹೂದ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಎರಡನ್ನೂ ಒಂದಕ್ಕೊಂದು ಹೋಲಿಸಿ ನೋಡಿದರೆ ತುಂಬಾ ವಿರುದ್ದವಾಗಿದ್ದವು; ಮಿಗಿಲಾಗಿ, ಭಾರತೀಯರು ಶೋಷಣೆಗೆ ಒಳಗಾದ ಸಂದರ್ಭದಲ್ಲಿ, ಗಾಂಧಿಯವರು ಸಹ ಅಪರೂಪಕ್ಕೊಮ್ಮೆ, ಬಲಪ್ರಯೊಗವನ್ನು ಬೆಂಬಲಿಸುತ್ತಿದ್ದರು.[೮೭]
  • ೧೯೩೦ರಲ್ಲಿನ ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆಗೆ ಸಂಬಂಧಿಸಿ ಸತ್ಯಾಗ್ರಹದ ವಿಷಯಕ್ಕೆ ಸಂಬಂಧಿಸಿದಂತೆ ಗಾಂಧಿಯವರು ವ್ಯಾಖ್ಯೆ ಬರೆದಿದ್ದಾರೆ. ಮೇಲೆ ತಿಳಿಸಿರುವಂತೆ ನಾಜಿಗಳಿಂದ ಯಹೂದ್ಯರ ಶೋಷಣೆಗೆ ಸಂಬಂಧಿಸಿ ನವೆಂಬರ್ ೧೯೩೮ರ ಲೇಖನದಲ್ಲಿ ಅವರು ಇದಕ್ಕೆಲ್ಲ ಅಹಿಂಸೆಯೇ ಮಾರ್ಗವೆಂದು ಹೇಳಿದ್ದಾರೆ:
    • ಜರ್ಮನ್‌ರಿಂದಾಗುತ್ತಿರುವ ಯಹೂದ್ಯರ ಶೋಷಣೆಯಂತಹ ಘಟನೆಗೆ ಇತಿಹಾಸದಲ್ಲಿ ಮತ್ತಾವ ಸಮಾನ ಘಟನೆಯೂ ಕಾಣಸಿಗುವುದಿಲ್ಲ. ಹಿಂದಿದ್ದ ಪ್ರಜಾಪೀಡಕರುಗಳೂ ಸಹ ಹಿಟ್ಲರ್‌ನ ಹಾಗೆ ಹುಚ್ಚು ಹಿಡಿದವರಂತೆ ವರ್ತಿಸಿರಲಿಲ್ಲ. ಧಾರ್ಮಿಕತೆ ದುರಭಿಮಾನದಿಂದ ಅವನು ಆ ರೀತಿಯ ಕೆಲಸಗಳನ್ನು ಮಾಡಿದ. ಏಕೆಂದರೆ, ಪ್ರತ್ಯೇಕವಾದ ಮತ್ತು ಉಗ್ರ ರಾಷ್ಟ್ರೀಯತೆಯನ್ನು ಹೊಂದಿರುವ ಹೊಸ ಧರ್ಮವೊಂದನ್ನು ಆತ ಪ್ರತಿಪಾದಿಸುತ್ತಿದ್ದು, ಅದರ ಹೆಸರಿನಲ್ಲಿ ಯಾವುದೇ ಅಮಾನವೀಯತೆಯೂ ಮಾನವೀಯತೆಯ ಕೆಲಸವಾಗಿ ಬದಲಾಗಿ ಇಲ್ಲಿ ಮತ್ತು ಇನ್ನು ಮುಂದೆ ಪುರಸ್ಕೃತಗೊಳ್ಳುತ್ತದೆ. ನಿಸ್ಸಂಶಯವಾಗಿ ಹುಚ್ಚನಾಗಿರುವ ಆದರೆ ತುಂಬಾ ಧೈರ್ಯಶಾಲಿಯಾದ ಯುವಕನೋರ್ವನ ಅಪರಾಧವನ್ನು ಅವನ ಸಮಗ್ರ ಜನಾಂಗವು ನಂಬಲಸಾಧ್ಯವಾದ ಉಗ್ರತೆಯೊಂದಿಗೆ ಅನುಸರಿಸುತ್ತದೆ.
    • ಮಾನವೀಯತೆಯ ಹೆಸರಿನಲ್ಲಿ ಮತ್ತು ಮಾನವೀಯತೆಗಾಗಿ ಅಲ್ಲೇನಾದರೂ ಸಮರ್ಥನೀಯ ಯುದ್ಧವಿರಲು ಸಾಧ್ಯವಾಗುವುದಾದರೆ, ಸ್ವೇಚ್ಛಾಚಾರದ ರೀತಿಯಲ್ಲಿ ಒಂದು ಸಂಪೂರ್ಣ ಜನಾಂಗವನ್ನು ಶೋಷಿಸುವುದನ್ನು ತಡೆಗಟ್ಟಲು ಜರ್ಮನಿಯ ವಿರುದ್ಧದ ಯುದ್ಧ ಮಾಡಿದರೆ ಅದಕ್ಕೆ ಸಂಪೂರ್ಣ ಸಮರ್ಥನೆ ಸಿಗುತ್ತದೆ. ಆದರೆ ನನಗೆ ಯಾವುದೇ ರೀತಿಯ ಕದನಗಳಲ್ಲಿಯೂ ನಂಬಿಕೆಯಿಲ್ಲ. ಆದ್ದರಿಂದ ಆ ರೀತಿಯ ಕದನದ ಸಾಧಕ-ಬಾಧಕಗಳ ಕುರಿತಾದ ಚರ್ಚೆಯು ನನ್ನ ವ್ಯಾಪ್ತಿ ಅಥವಾ ವಲಯದಿಂದ ಆಚೆಯಿದೆ.
    • ಆದರೆ ಒಂದು ವೇಳೆ ಜರ್ಮನಿಯ ವಿರುದ್ದ ಕದನ ನಡೆಯದಿದ್ದರೆ, ಅದೂ ಕೂಡ ಯಹೂದ್ಯರ ವಿರುದ್ದ ಮಾಡಿದ ಒಂದು ಘೋರ ಕೃತ್ಯವೇ ಆಗುತ್ತದೆ, ಜರ್ಮನಿಯ ಜೊತೆಗಿನ ಬಾಂಧವ್ಯ ಇಲ್ಲದಂತಾಗುತ್ತದೆ. ನ್ಯಾಯ ಮತ್ತು ಪ್ರಜಾಪ್ರಭುತ್ವದ ಪರ ಇರುವ ಒಂದು ದೇಶ ಮತ್ತು ಇವೆರಡಕ್ಕೂ ಶತ್ರುವಾಗಿರುವ ಇನ್ನೊಂದು ದೇಶದ ನಡುವೆ ಹೇಗೆ ಬಾಂಧವ್ಯ ಬೆಳೆಯುವುದಕ್ಕೆ ಸಾಧ್ಯ?" [೮೮][೮೯]

    ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಲೇಖನಗಳು

    [ಬದಲಾಯಿಸಿ]
    • ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಕೆಲವು ಲೇಖನಗಳು ವಿವಾದಾತ್ಮಕವಾಗಿವೆ. ೭ ಮಾರ್ಚ್‌ ೧೯೦೮ರಂದು, ಗಾಂಧಿಯವರು ದಕ್ಷಿಣ ಆಫ್ರಿಕಾದ ಜೈಲಿನಲ್ಲಿದ್ದಾಗ ಇಂಡಿಯನ್‌ ಒಪೀನಿಯನ್‌ ನಲ್ಲಿ ಹೀಗೆ ಬರೆದಿದ್ದಾರೆ: "ಕಾಫೀರ ಬುಟಕಟ್ಟಿನವರು ನಿಯಮದಂತೆ ಅನಾಗರಿಕರು - ಈ ಖೈದಿಗಳು ಹೆಚ್ಚು ಕಡಿಮೆ ಅವರಂತೆಯೇ. ಅವರೆಲ್ಲರೂ ತಂಟೆಕೋರರು, ಕೊಳಕು ಜನಗಳು, ಮತ್ತು ಹೆಚ್ಚೂ ಕಡಿಮೆ ಪ್ರಾಣಿಗಳಂತೆಯೇ ವಾಸಿಸುತ್ತಾರೆ." [೯೦] ೧೯೦೩ರಲ್ಲಿ ವಲಸೆ ವಿಷಯದ ಬಗ್ಗೆ ಬರೆಯುತ್ತಿರಬೇಕಾದರೆ , ಗಾಂಧಿಯವರು ಹೀಗೆ ಉಲ್ಲೇಖಿಸಿದ್ದಾರೆ: "ಜನಾಂಗದ ಶುದ್ಧತೆ ಬಗ್ಗೆ ನಾವು ತುಂಬಾ ನಂಬಿಕೊಳ್ಳುತ್ತೇವೆ.
    • ಅವರು ನಮ್ಮದೇ ರೀತಿಯಲ್ಲಿ ಯೋಚಿಸುತ್ತಾರೆ ಎಂಬುದು ನಮ್ಮ ಭಾವನೆ... ದಕ್ಷಿಣ ಆಫ್ರಿಕಾದಲ್ಲಿರುವ ಬಿಳಿಯರು ಪ್ರಧಾನ ಜನಾಂಗದವರಾಗಿರಲೇಬೇಕು ಎಂದು ನಾವು ಭಾವಿಸುತ್ತೇವೆ." [164] ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ, ಕರಿಯರ ಜೊತೆ ಭಾರತೀಯರನ್ನು ಸೇರಿಸಿ ಸಾಮಾಜಿಕ ವರ್ಗೀಕರಣ ಮಾಡಿರುವುದನ್ನು ಅನೇಕ ಬಾರಿ ವಿರೋಧಿಸಿದ್ದೇ ಅಲ್ಲದೆ, " ಕಾಫೀರರಿಗೆ ಹೋಲಿಸಿದರೆ ನಾವುಗಳು ನಿಸ್ಸಂದೇಹವಾಗಿ ಎಷ್ಟೋ ಪಟ್ಟು ಉತ್ತಮರು" ಎಂದು ಹೇಳಿದ್ದಾರೆ. [166] ಗಾಂಧಿಯವರ ಕಾಲದಲ್ಲಿ ಕಾಫೀರ ಪದಕ್ಕೆ ಬೇರೆಯೇ ಅರ್ಥವಿತ್ತು, ಪ್ರಸ್ತುತ ಬಳಕೆಯಲ್ಲಿರುವಂತೆ ಇರಲಿಲ್ಲ. ಆದರೆ ಅದು ಪ್ರಯೋಜನಕಾರಿಯಾಗಿರಲಿಲ್ಲ.
    • ಈ ರೀತಿಯ ಹೇಳಿಕೆ ನೀಡಿದ್ದರಿಂದಾಗಿ ಗಾಂಧಿಯವರನ್ನು ವರ್ಣಭೇಧ ಮಾಡುತ್ತಾರೆ ಎಂದು ಧೂಷಿಸಲಾಯಿತು.[೯೧] ದಕ್ಷಿಣ ಆಫ್ರಿಕಾ ಇತಿಹಾಸಜ್ಞರಾದ ಇಬ್ಬರು ಪ್ರೊಫೆಸರ್‌‌ಗಳು, ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ಪರೀಕ್ಷಿಸಿ ತಮ್ಮ ಪುಸ್ತಕವಾದ ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪. ಬರೆದಿದ್ದಾರೆ. (ನವ ದೆಹಲಿ: ಮನೋಹರ್‌, ೨೦೦೫). [169]
    • ಅಧ್ಯಾಯ ೧ರಲ್ಲಿ ಅವರು ಒತ್ತಿ ಹೇಳಿದ್ದಾರೆ, "ವಸಾಹತು ದೇಶದಲ್ಲಿ ಗಾಂಧಿ, ಆಫ್ರಿಕನ್ನರು ಮತ್ತು ಭಾರತೀಯರು" "ಬಿಳಿಯರ ಆಳ್ವಿಕೆ"ಯಡಿ ಭಾರತೀಯ ಸಮುದಾಯಗಳು ಮತ್ತು ಆಫ್ರಿಕನ್ನರ ನಡುವಿನ ಸಂಬಂಧ ಮತ್ತು ವರ್ಣಬೇಧಕ್ಕೆ ಕಾರಣವಾದ ನಿಯಮಗಳು(ಮತ್ತು ಅವರು ವಾದಿಸುವಂತೆ, ಈ ಸಮುದಾಯಗಳ ನಡುವಿನ ಅನಿವಾರ್ಯ ತಿಕ್ಕಾಟಗಳು). ಈ ಸಂಬಂಧಗಳ ಬಗ್ಗೆ ಇತಿಹಾಜ್ಞರು ಹೀಗೆ ಹೇಳುತ್ತಾರೆ, "೧೮೯೦ರಲ್ಲಿ ಪ್ರಚಲಿತದಲ್ಲಿದ್ದ ವರ್ಣಬೇಧ ನೀತಿ ಕುರಿತ ಚಿಂತನೆಗಳ ಪ್ರಭಾವಕ್ಕೆ ತರುಣ ಗಾಂಧಿಯವರು ಒಳಗಾದರು." [೯೨] ಅದೇ ಸಮಯದಲ್ಲಿ, ಅವರೇ ಹೇಳುವಂತೆ, "ಜೈಲಿನಲ್ಲಿ ಗಾಂಧಿಯವರಿಗಾದ ಅನುಭವಗಳು ಅವರನ್ನು ಮತ್ತಷ್ಟು ಸೂಕ್ಷ್ಮ ಸಂವೇದನೆಗೆ ಒಳಪಡಿಸಿದಂತಿವೆ..ನಂತರದ ದಿನಗಳಲ್ಲಿ ಗಾಂಧಿಯವರು ಪಕ್ವವಾದರು; ವರ್ಗೀಕರಣಗಳ ಅಭಿವ್ಯಕ್ತಿಯಲ್ಲಿ ಮತ್ತು ಆಫ್ರಿಕನ್ನರ ವಿರುದ್ಧ ಇದ್ದ ಪೂರ್ವಗ್ರಹಗಳು ಕಡಿಮೆಯಾದವೆಂದೇ ಹೇಳಬಹುದು, ಮತ್ತು ಸಾಮಾನ್ಯ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಿದರು. ಜೊಹಾನ್ಸ್‌ಬರ್ಗ್‌ ಜೈಲಿನಲ್ಲಿದ್ದಾಗ ಅವರ ಋಣಾತ್ಮಕ ದೃಷ್ಟಿಕೋನಗಳು ಕೇವಲ ಒರಟು ಆಫ್ರಿಕನ್‌ ಖೈದಿಗಳಿಗೇ ಸೀಮಿತವಾಗಿತ್ತೇ ಹೊರತು ಸಾಮಾನ್ಯ ಆಫ್ರಿಕನ್ನರಿಗಲ್ಲ." [೯೩] ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಾದ ನೆಲ್ಸನ್‌‌ ಮಂಡೇಲಾರವರು ಗಾಂಧಿಯವರ ಅನುಯಾಯಿ. [172] ೨೦೦೩ರಲ್ಲಿ ಜೊಹಾನ್ಸ್‌ಬರ್ಗ್‌‌ನಲ್ಲಿ ಗಾಂಧಿಯವರ ಪ್ರತಿಮೆ ಅನಾವರಣಗೊಳಿಸುವುದನ್ನು ತಡೆಯಲು ಕೆಲವರು ಗಾಂಧಿಯವರ ವಿಮರ್ಶೆಗಳನ್ನು ಮುಂದಿಟ್ಟುಕೊಂಡು ನಡೆಸಿದ ಪ್ರಯತ್ನಗಳನ್ನು ಮಂಡೇಲಾರವರು ನಿಲ್ಲಿಸಿದರು. [173]
    • ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದ ಘಟನೆಗಳ ಕುರಿತು ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪. ಪುಸ್ತಕದ ಉಪ ಸಂಹಾರದಲ್ಲಿ ಭನ್ನ ಮತ್ತು ವಹೀದ್‌‌ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯ ಸ್ವತ್ತು," ಎಂಬ ವಿಭಾಗದಲ್ಲಿ "ಬಿಳಿಯರ ಆಡಳಿತಕ್ಕೆ ಅಂತ್ಯ ಹಾಡಲು ದಕ್ಷಿಣ ಆಫ್ರಿಕಾದ ಚಳುವಳಿಗಾರರ ಮುಂದಿನ ಪೀಳಿಗೆಗೆ ಗಾಂಧಿ ಸ್ಪೂರ್ತಿ ನೀಡಿದರು". ಎಂದು ಅವರು ಬರೆದಿದ್ದಾರೆ.ಇದು ೦}ನೆಲ್ಸನ್‌‌ ಮಂಡೇಲಾರವರನ್ನು ಗಾಂಧಿಯವರೊಂದಿಗೆ ಸೇರಿಸಿತು... ಒಂದು ಅರ್ಥದಲ್ಲಿ ಗಾಂಧಿಯವರು ಆರಂಭಿಸಿದ್ದನ್ನು ಮಂಡೇಲಾರವರು ಕೊನೆಗೊಳಿಸಿದರು ಎಂದೇ ಹೇಳಬಹುದು." [೯೪] ಈ ಇತಿಹಾಜ್ಞರು ಗಾಂಧಿ ಪ್ರತಿಮೆ ಅನಾವರಣಗೊಳ್ಳುವ ಸಂದರ್ಭದಲ್ಲಿ ಎದ್ದ ವಿವಾದಗಳನ್ನು ಉಲ್ಲೇಖಿಸುತ್ತಾ ಮುಂದುವರೆಯುತ್ತಾರೆ.[೯೫] ವರ್ಣಬೇಧ ನೀತಿಯಿಂದ ಹೊರಬಂದ ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ತಮ್ಮ ಗಾಂಧಿಯನ್ನು ಕಂಡುಕೊಳ್ಳಲು ಹೊರಟವರು.
    • ಅವರ ಕುರಿತ ಕೆಲವು ಸತ್ಯಗಳನ್ನು ಕಡೆಗಣಿಸಿದ್ದರಿಂದಾಗಿ ಅವರ ಉದ್ದೇಶಗಳು ಈಡೇರಲಿಲ್ಲ; ಗಾಂಧಿಯವರನ್ನು ಅತ್ಯಂತ ಸರಳವಾಗಿ ಜನಾಂಗೀಯವಾದಿ ಎಂದು ದೂಷಿಸುವ ಮಂದಿ ಒಟ್ಟು ಅಸ್ಪಷ್ಟತೆಯಲ್ಲಿ ಸಮಾನ ದೋಷಿಗಳಾಗಿದ್ದಾರೆ.[೯೬]

    ಅರಾಜಕತಾವಾದ

    [ಬದಲಾಯಿಸಿ]
    • ಗಾಂಧಿಯವರು ಓರ್ವ ಸ್ವ-ವರ್ಣಿತ ದಾರ್ಶನಿಕ ಅರಾಜಕತಾವಾದಿಯಾಗಿದ್ದು,[೯೭][೯೮] ಸರ್ಕಾರಿ ಶಾಸನದ ಕೈಗೊಂಬೆಯಾಗಿರದ ಭಾರತದ ನಿರ್ಮಾಣ ಅವರ ಕನಸಾಗಿತ್ತು.[೯೯] ಅವರು ಒಂದು ಬಾರಿ ಹೀಗೆ ಹೇಳಿದ್ದಾರೆ "ಆದರ್ಶಪ್ರಾಯ ಅಹಿಂಸಾತ್ಮಕ ರಾಜ್ಯವೆಂದರೆ ವ್ಯವಸ್ಥಿತ ಅರಾಜಕತೆ." [೧೦೦] ರಾಜಕೀಯ ವ್ಯವಸ್ಥೆಗಳು ಒಟ್ಟಾರೆಯಾಗಿ ಶ್ರೇಣಿ ವ್ಯವಸ್ಠೆಯಿಂದ ಕೂಡಿರುವಾಗ, ವ್ಯಕ್ತಿಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ ಅಧಿಕಾರದ ಪ್ರತಿ ಸ್ತರದಲ್ಲಿ, ಮೇಲಿನ ಸ್ತರದ ಅಧಿಕಾರ ಕೆಳಗಿನ ಸ್ತರಕ್ಕಿಂತ ಹಂತ ಹಂತವಾಗಿ ಹೆಚ್ಚುತ್ತಾ ಹೋಗುತ್ತದೆ.
    • ಆದರೆ ಸಮಾಜ ಇದಕ್ಕೆ ವಿರುದ್ಧವಾಗಿರಬೇಕು ಎಂಬುದು ಗಾಂಧಿಯವರ ಆಶಯವಾಗಿತ್ತು, ಈ ವ್ಯವಸ್ಥೆಯಲ್ಲಿ ವ್ಯಕ್ತಿವರೆಗೆ(ಕೆಳಮಟ್ಟದವರೆಗೆ) ಒಪ್ಪಿಗೆ ಸಿಗದೆ ಏನನ್ನೂ ಮಾಡುವಂತಿಲ್ಲ. ಅವರ ಕಲ್ಪನೆಯಲ್ಲಿ ದೇಶದ ನಿಜವಾದ ಸ್ವಯಮಾಡಳಿತ ಎಂದರೆ ಪ್ರತಿಯೊಬ್ಬ ಪ್ರಜೆಯೂ ತಮ್ಮನ್ನು ತಾವೇ ಆಳಿಕೊಳ್ಳುವುದು ಮತ್ತು ಅಲ್ಲಿ ಯಾವುದೇ ರಾಜ್ಯವೂ ಪ್ರಜೆಗಳ ಮೇಲೆ ತನ್ನ ಕಾನೂನನ್ನು ಹೇರದಿರುವ ಸ್ಥಿತಿ.[೧೦೧][೧೦೨]
    • ಇದನ್ನು ಕಾಲ ಕ್ರಮೇಣವಾಗಿ ಅಹಿಂಸಾತ್ಮಕ ಹೋರಾಟ ಸಂಧಾನದಿಂದ ಸಾಧಿಸಬಹುದು, ಮತ್ತು ಅಧಿಕಾರ ಶ್ರೇಣಿ ವ್ಯವಸ್ಥೆಯ ಅಧಿಕಾರಿಗಳ ಸ್ತರಗಳಿಂದ ಕಳಚಿಕೊಂಡು, ಕಟ್ಟಕಡೆಯ ವ್ಯಕ್ತಿಗೂ ಸೇರಬೇಕು, ಇದು ಅಹಿಂಸಾತ್ಮಕ ನೈತಿಕತೆಯನ್ನು ಸಾಕಾರಗೊಳಿಸುವಲ್ಲಿ ನೆರವಾಗುತ್ತದೆ. ಮೇಲ್ಮಟ್ಟದ ಅಧಿಕಾರಿಗಳು ಹಕ್ಕುಗಳನ್ನು ಹೇರುವ ವ್ಯವಸ್ಧೆಯ ಬದಲು, ಪ್ರಜೆಗಳು ಪರಸ್ಪರ ಜವಾಬ್ದಾರಿಯುತವಾಗಿ ಸ್ವಯಮಾಡಳಿತವನ್ನು ನಡೆಸುವಂತಿರಬೇಕು ಎಂದು ಗಾಂಧಿಯವರು ಆಶಿಸಿದ್ದರು.
    • ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಹಿಂತಿರುಗುತ್ತಿದ್ದಾಗ, ವಿಶ್ವ ಮಾನವ ಹಕ್ಕುಗಳಿಗೆ ಸಂವಿಧಾನ ಬರೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿ ಅವರಿಗೆ ಪತ್ರ ಬಂದಿತ್ತು. ಪತ್ರಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ, "ನನ್ನ ಅನುಭವದಲ್ಲಿ ಹೇಳುವುದಾದರೆ, ಮಾನವ ಕರ್ತವ್ಯಗಳ ಕುರಿತು ಲಿಖಿತ ಸಂವಿಧಾನವನ್ನು ಹೊಂದುವುದು ಇನ್ನೂ ಮುಖ್ಯ".[೧೦೩]
    • ಗಾಂಧಿಯವರ ಕಲ್ಪನೆಯಂತೆ ಮುಕ್ತ ಭಾರತವೆಂದರೆ ಸ್ವಸಂತೃಪ್ತ ಸಣ್ಣ ಸಮುದಾಯಗಳು ಸಾವಿರಾರು ಸಂಖ್ಯೆಯಲ್ಲಿ ಇರುವುದು ಮತ್ತು (ಟಾಲ್ಸ್‌ಟಾಯ್‌‌ರವರು ಹೇಳಿರಬಹುದಾದ) ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮನ್ನು ತಾವೇ ಆಳಿಕೊಳ್ಳುವುದು. ಹಾಗೆಂದ ಮಾತ್ರಕ್ಕೆ, ಬ್ರಿಟೀಷರು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ಯಥಾವತ್ತಾಗಿ ಭಾರತೀಯರ ಕೈಗೆ ವರ್ಗಾಯಿಸುವುದು ಎಂಬರ್ಥವಲ್ಲ. ಹಾಗೆ ಮಾಡಿದಲ್ಲಿ ೦}ಹಿಂದೂಸ್ತಾನವನ್ನು ಇಂಗ್ಲೀಸ್ತಾನವನ್ನಾಗಿ ಮಾಡಿದಂತಾಗುತ್ತದೆ.[೧೦೪] ಬ್ರಿಟಿಷ್ ಮಾದರಿಯ ಸಂಸದೀಯ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲದ್ದರಿಂದ[೧೦೫], ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬರ್ಖಾಸ್ತುಗೊಳಿಸಿ ಭಾರತದಲ್ಲಿ ನೇರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಬಯಸಿದ್ದರು.[೧೦೫]

    ಪ್ರಸಿದ್ದ ಸಂಸ್ಕೃತಿಗಳಲ್ಲಿನ ವರ್ಣನೆ

    [ಬದಲಾಯಿಸಿ]

    ಸಂತ ಗಾಂಧೀಜಿ

    [ಬದಲಾಯಿಸಿ]

    ಗಾಂಧೀಜಿಯವರು ಸಂತರಾಗಿ , ಅಧ್ಯಾತ್ಮ ಸಾಧಕರಾಗಿ, ಯೋಗಿಯಾಗಿ ಬೆಳೆದ ಬಗೆ ಅಥವಾ ಆ ದೃಷ್ಟಿಕೋನದಿಂದ ನೋಡಿದಾಗ, ಅವರ ಇನ್ನೊಂದು ಮಗ್ಗಲು / ವ್ಯಕ್ತಿತ್ವ ನಮಗೆ ಗೋಚರವಾಗುವುದು. ಅದರ ಅಲ್ಪ ಪರಿಚಯವನ್ನು ಇಲ್ಲಿ ಕೊಡಲು ಪ್ರಯತ್ನಿಸಿದೆ

    ಗಾಂಧೀಜಿಯವರ ಬಹುಮುಖ ವ್ಯಕ್ತಿತ್ವ

    [ಬದಲಾಯಿಸಿ]

    ಗಾಂಧೀಜಿ ಯಾರು? ಎಂಬ ಪ್ರಶ್ನೆಗೆ ಹಲವು ಉತ್ತರಗಳನ್ನು ಕೊಡಬಹುದು. ಗುಜರಾತಿನ ಕರಮಚಂದ್ ಮತ್ತು ಪುತಲೀಬಾಯಿಯವರ ಮಗ, ಅಹಿಂಸಾ ಮಾರ್ಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು, ಮಹಾತ್ಮಾ ಗಾಂಧಿ ಅಥವಾ ಮೋಹನ ದಾಸ ಕರಮಚಂದ ಗಾಂಧಿ, ರಾಷ್ಟ್ರ ಪಿತ ಗಾಂಧಿ, ಒಬ್ಬ ಪ್ರಕೃತಿ ಚಿಕಿತ್ಸೆಯ ಪ್ರಯೋಗ ಕಾರ, ಸಸ್ಯ ಆಹಾರದ ಪ್ರಯೋಗಕಾರ, ನಯೀತಾಲಿಂ ವಿದ್ಯಾಭ್ಯಾಸ ಪದ್ದತಿಯ ಪ್ರಯೋಜಕ, ಅಸಾಧಾರಣ ಚಾಣಾಕ್ಷ ರಾಜಕಾರಣಿ, ಸತ್ಯ ಮತ್ತು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಸಾಧಕ - ಹರಿಕಾರ, ಆತ್ಮ ಸಾಧಕ. ಅಪ್ಪಟ ಕರ್ಮಯೋಗಿ ; ಆದರೆ ಇದಾವುದೂ ಗಾಂಧೀಜಿ ಯಾರು ಎಂಬ ಪ್ರಶ್ನೆಗೆ ಪೂರ್ಣವಾದ ಉತ್ತರವಾಗುವುದಿಲ್ಲ. ಏಕೆಂದರೆ ಈ ಉತ್ತರಗಳು ಅವರ ಬಹುಮುಖ ವ್ಯಕ್ತಿತ್ವ, ಸಾಧನೆ, ಪ್ರಯೋಗಗಳನ್ನಾಗಲೀ, ಅವರ ಅಂತಃಸತ್ವವನ್ನಾಗಲೀ, ಅವರ ನಿಜವಾದ ಅಧ್ಯಾತ್ಮಿಕ ವ್ಯಕ್ತಿತ್ವವನ್ನಾಗಲೀ ವಿವರಿಸಲಾರವು.

    ಆರಂಭಿಕ ಜೀವನ

    [ಬದಲಾಯಿಸಿ]

    ಭಾರತದಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂಗ್ಲೆಂಡಿಗೆ ಕಾನೂನು ಪದವಿ ಪಡೆಯಲು ಹೋದ ಮೋಹನ ದಾಸ ಗಾಂಧಿ ಪಾಶ್ಚಿಮಾತ್ಯ ಪದ್ಧತಿಗೆ ಮನಸೋತರು. ಆದರೆ ಅವರ ಪೂರ್ವ ಸಂಸ್ಕಾರದಿಂದ ಸ್ವಲ್ಪದರಲ್ಲಿಯೇ ಎಚ್ಚೆತ್ತರು. ಅವರು ಬೈಬಲ್ ಬೋಧನೆಗಳಲ್ಲಿ ಬಡವರ ಬಗ್ಗೆ , ದಲಿತರ ಬಗ್ಗೆ ಅವನ ಕಳಕಳಿಯನ್ನು ಓದಿ ಅದರ ಪ್ರಭಾವಕ್ಕೊಳಗಾದರು. ಆಕಸ್ಮಿಕವಾಗಿ ಅವರು ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡ ಭಗವದ್ಗೀತೆಯನ್ನು ಓದಿದರು. ಅಂದಿನಿಂದಲೇ ಅದು ಅವರನ್ನು ಸೆಳೆಯಿತು. ಗೀತೆ ಅವರ ಕೊನೆಯ ಉಸಿರು ಇರುವವರೆಗೂ ಅವರ ಜೀವನದ ಮಾರ್ಗದರ್ಶನದ ಗ್ರಂಥವಾಯಿತು, ಆವರ ತಂದೆ ತಾಯಿಯಿಂದ ಬಂದ ಭಕ್ತಿ, ರಾಮ ನಾಮ ಅವರ ಜೀವನದ ಉಸಿರಾಯಿತು.

    ಗಾಂಧೀಜೀಯವರೇ ಹೇಳಿದಂತೆ ಅವರ ಜೀವನ ಕ್ರಮವನ್ನೇ ಬದಲು ಮಾಡಿದ ಗ್ರಂಥ,ಜಾನ್ ರಸ್ಕಿನ್ನಅನ್ ಟು ದಿ ಲಾಸ್ಟ್. ಜೋಹಾನ್ಸ ಬರ್ಗ್ ನಿಂದ ಡರ್ಬಿನ್ನಿಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಓದಿದ ಪುಸ್ತಕ. ಅವರ ಮಾತಿನಲ್ಲೇ ಹೇಳುವುದಾದರೆ, 'ನಾನು ಆ ದಿನ ರಾತ್ರಿ ನಿದ್ದೆ ಮಾಡಲಾಗಲಿಲ್ಲ. ನಾನು, ನನ್ನ ಜೀವನವನ್ನು ಆ ಪುಸ್ತಕದಲ್ಲಿ ಹೇಳಿದ ಆದರ್ಶಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿದೆ'. ಆ ಗ್ರಂಥದಲ್ಲಿ ಹೇಳಿದ ಆದರ್ಶಗಳು ಮೂರು:

    1. ಒಬ್ಬ ವ್ಯಕ್ತಿಯ ಹಿತ, ಎಲ್ಲಾ ಜನರ ಹಿತದಲ್ಲಿದೆ.
    2. ಒಬ್ಬ ಲಾಯರನ ಉದ್ಯೋಗವಾಗಲಿ, ಒಬ್ಬ ಕ್ಷೌರಿಕನ ಉದೋಗವಾಗಲೀ ಸಮಾನ ಗೌರವ ಉಳ್ಳದ್ದು.
    3. ರೈತನ ಮತ್ತು ಕಾರ್ಮಿಕನ ಉದ್ಯೋಗಗಳು ಶ್ರೇಷ್ಠವಾದವು.

    ದಕ್ಷಿಣ ಆಫ್ರಿಕಾದಲ್ಲಿ

    [ಬದಲಾಯಿಸಿ]

    ಹಣ ಸಂಪಾದನೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದ ಅವರ ಜೀವನ ಕ್ರಮ ಬದಲಾಗಿ,ಅವರೊಬ್ಬ ಸಮಾಜ ಸೇವಕರಾಗಿ, ಸತ್ಯಾಗ್ರಹಿಯಾಗಿ, ಪ್ರಾಮಾಣಿಕ ಲಾಯರಾಗಿ ಕೆಲಸಮಾಡಿದ್ದನ್ನು ಕೇಳಿದ್ದೇವೆ. ಟಾಲಸ್ಟಾಯ್ ಫಾರಂ ಅಥವಾ ಫೀನಿಕ್ಷ್ ಆಶ್ರಮ ಸ್ಥಾಪಿಸಿ,ಅಲ್ಲಿ ಗೃಹ ಕೈಗಾರಿಕೆ ಮತ್ತು ಶಿಕ್ಷಣವನ್ನು ಜೊತೆ ಜೊತೆಯಾಗಿ ಪ್ರಯೋಗ ಮಾಡಿ , ಮೂಲ ಶಿಕ್ಷಣ ಸಿದ್ಧಾಂತವನ್ನು (ಬೇಸಿಕ್ ಎಜುಕೇಶನ್) ರೂಪಿಸಿದರು. ತಮ್ಮ ಆದಾಯವನ್ನೆಲ್ಲಾ ಸಮಾಜ ಸೇವೆಗೆ ತ್ಯಾಗ ಮಾಡಿದರು. ಅಂದಿನ ಕಾಲದಲ್ಲಿ ಅವರ ವಾರ್ಷಿಕ ಆದಾಯ ಸುಮಾರು ಅರವತ್ತು ಸಾವಿರ ರೂಪಾಯಿಗೂ ಹೆಚ್ಚು (೧೮೯೩-೧೯೧೫).

    ಸತ್ಯಾನ್ವೇಷಣೆ

    [ಬದಲಾಯಿಸಿ]
    • ಇವೆಲ್ಲಕ್ಕಿಂತ ಹೆಚ್ಚಾಗಿ ಅವರು, ಅಂತರಂಗದಲ್ಲಿ ಸತ್ಯಾನ್ವೇಶಣೆಗಾಗಿ ಮಾಡಿದ ಸಾಧನೆ ಪ್ರಯೋಗಗಳು ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಅವರೂ ಆ ಕುರಿತು ಹೆಚ್ಚಾಗಿ ಬರೆದಿಲ್ಲ. ಅವರ ಅಂತರಂಗ ಸಾಧನೆಗಳನ್ನು ಕಂಡು ಬರೆದವರು ವಿರಳ. ಆದರೆ ಅವರು ತಮ್ಮ ಆತ್ಮ ಚರಿತ್ರೆಗೆ ಸತ್ಯಾನ್ವೇಷಣೆಯ ಪ್ರಯೋಗಗಳು, ಎಂದು ಹೆಸರಿಸಿದ್ದಾರೆ. ಅವರು ನಂಬಿದ ದೇವರು ಸತ್ಯ. ಸತ್ಯ ವೆಂದರೆ ಉಪನಿಷತ್ತು , ಗೀತೆಯಲ್ಲಿ ಹೇಳಿದ ಸತ್ ಅರ್ಥಾತ್ ಈ ವಿಶ್ವವನ್ನು ಆವರಿಸಿರುವ - ನಡೆಸುವ ಚೇತನ. ಅದರ ಸಾಕಾರ ಮೂರ್ತಿ ಅಥವಾ ಶಬ್ದರೂಪವೇ ಅವರು ನಂಬಿದ ಶ್ರೀ ರಾಮ ತಾರಕ ಮಂತ್ರ.
    • ಅವರು ಗೀತೆ ಮೊದಲಾದ ಅನೇಕ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ , ಜಪ, ಧ್ಯಾನ, ಪ್ರಾರ್ಥನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಅವರು ತಮ್ಮ ಪತ್ನಿಯನ್ನು ಒಪ್ಪಿಸಿಕೊಂಡು,ಬ್ರಹ್ಮಚರ್ಯವನ್ನು ಪಾಲಿಸುತ್ತಾ, ರಾತ್ರಿಯಲ್ಲಿ ಧ್ಯಾನ ಜಪಗಳ ಸಾಧನೆ ನಡೆಸಿದರು. ಅವರ ಆತ್ಮ ಕಥೆಯಲ್ಲಿ ಆ ವಿಚಾರ ಸ್ವಲ್ಪ ಬಂದಿದೆ. ಅವರ ಶೋಧನೆ ಸಾಧನೆಗಳು, ವಿಶ್ವ ಚೇತನವಾದ ಪರಬ್ರಹ್ಮವಸ್ತುವೆಂದು ಕರೆಯಲ್ಪಡುವ ಆ ಸತ್ಯವೇ ಆಗಿತ್ತು. ಅವರು ಧರ್ಮ,ಧ್ಯಾನ, ಸಾಧನೆಗಳಲ್ಲಿ ಅನುಮಾನ, ತೊಡಕು ಉಂಟಾದಾಗ ತಮ್ಮ ಧಾರ್ಮಿಕ ಗುರುವೆಂದು ನಂಬಿದ ಅವರ ಮಿತ್ರರೂ, ಜ್ಞಾನಿಯೂ ಆದ ಬೊಂಬಾಯಿನ (ರಾಜಕೋಟೆ ಯವರು) ರಾಯಚಂದ ಭಾಯಿಯವರಿಂದ ಪತ್ರ ಮುಖೇನ ಸಂಶಯ ಪರಿಹರಿಸಿಕೊಳ್ಳುತ್ತಿದ್ದರು.

    ಶ್ರೀಮದ್ ರಾಯ್ ಚಂದಭಾಯಿ ಯವರ ಮಾರ್ಗದರ್ಶನ

    [ಬದಲಾಯಿಸಿ]
    • ಗಾಂಧೀಜಿ ಸಮಾಜ ಸೇವೆಯ ಜೊತೆ ಜೊತೆಯಲ್ಲಿಯೇ ತೀವ್ರ ತರ ಅದ್ಯಾತ್ಮಕ ಸಾಧನೆಯಲ್ಲಿ ತೊಡಗಿದ್ದರು. ಗೀತೆ ಅವರ ಕೈಗನ್ನಡಿಯಾಗಿದ್ದರೆ,
    • ಶ್ರೀಮದ್ ರಾಯ್ ಚಂದಭಾಯಿಯವರು ಅವರ ಅದ್ಯಾತ್ಮಿಕ ಗುರುಗಳೂ ಮಿತ್ರರೂ ಆಗಿದ್ದರು. ಗಾಂಧೀಜಿಯವರ ಕ್ರಿಶ್ಚಿಯನ್ ಮಿತ್ರರು ಅವರಿಗೆ ಕ್ರಿಶ್ಚಿಯಯನ್ ಧರ್ಮದಲ್ಲಿರುವ ಆನೇಕ ಉತ್ತಮ ಆದರ್ಶ ಗುಣಗಳಾದ ದಾನ-ಧರ್ಮ, ಬ್ರಹ್ಮಚರ್ಯ ಮಹತ್ವ, ದೇವನಲ್ಲಿ ಮತ್ತು ದೇವದೂತನಲ್ಲಿ ಅಚಲ ನಂಬುಗೆಯ ಮನಸ್ಥಿತಿ ಮೊದಲಾದ ವಿಷಯಗಳನ್ನು ಹೇಳಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಲು ಗಾಂಧೀಜೀ ಯವರನ್ನು ಒತ್ತಾಯಿಸಿದಾಗ ಅವರಿಗೆ ನೆನಪಾದುದು ಜ್ಞಾನಿಯೂ ವಿದ್ವಾಂಸರೂ ಇವರ ಮಿತ್ರರೂ ಅಧ್ಯಾತ್ಮ ಗುರುಗಳೂ ಆದ ಶ್ರೀ ರಾಯ್‌ಚಂದಭಾಯಿ ಯವರು. ಗಾಂಧೀಜೀಯವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರುವ ಮೊದಲು ತಾವು ಇರುವ ಹಿಂದೂ ಧರ್ಮ ದಲ್ಲಿ ಏನಾದೂ ಕೊರತೆ ಇದೆಯೇ ಅದು ಎಲ್ಲಾ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವುದೇ, ಎಂದು ತಿಳಿಯಬೇಕಿತ್ತು.
    • ಅದಕ್ಕಾಗಿ ಅವರು ಶ್ರೀ ರಾಜಚಂದಭಾಯಿಯವರಿಗೆ ಒಂದು ಪತ್ರ ಬರೆದು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಗಾಂಧೀಜೀಯವರು ಹೇಳುತ್ತಾರೆ , " ಶ್ರೀಮದ್ ರವರ ಉತ್ತರ ಅತ್ಯಂತ ತಾರ್ಕಿಕವೂ, ಮನಸ್ಸಿಗೆ ಒಪ್ಪುವಂತಹದೂ ಆಗಿತ್ತು". "ನನ್ನ ಎಲ್ಲಾ ಸಂಶಯ ಗಳೂ ನಿವಾರಣೆಯಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದರಿಂದ ಬಿಡುಗಡೆಗೊಂಡೆ ಎಂದಿದ್ದಾರೆ. ಆ ನಂತರ ಶ್ರೀ ರಾಜಚಂದಭಾಯಿಬಗ್ಗೆ ನನಗೆ ಇನ್ನೂ ಹೆಚ್ಚಿನ ಗೌರವ ಬೆಳೆಯಿತು ಮತ್ತು ಅವರನ್ನು ಆ ನಂತರ ನನ್ನ ಧಾರ್ಮಿಕ ಮಾರ್ಗದರ್ಶಕರೆಂದು ಅವರು ಬದುಕಿರುವವರೆಗೂ ಭಾವಿಸಿ ದ್ದೆ", ಎಂದಿದ್ದಾರೆ.

    ಶ್ರೀ ರಾಯ್‌ಚಂದಭಾಯಿ - ಪರಿಚಯ

    [ಬದಲಾಯಿಸಿ]
    • ಶ್ರೀ ರಾಯ್‌ಚಂದಭಾಯಿ : (೯-೧೧-೧೮೬೭ ;: ೯-೪-೧೯೦೧);
    • ಶ್ರೀ ರಾಯ್ ಚಂದ್ ಭಾಯಿ ಯವರ ಪೂರ್ಣ ಹೆಸರು, ರಾಜ್ ಚಂದ್ ಭಾಯಿ, ರಾವ್‌ಜೀ ಭಾಯಿ ಮೆಹ್ತಾ. ಅವರನ್ನು ಅವರ ಭಕ್ತರು ಶ್ರೀಮದ್ ರಾಜ್ ಚಂದ್ರ ಎಂದು ಕರೆಯುತ್ತಿದ್ದರು. ಅವರು ಭಗವಾನ್ ಮಹಾವೀರರ ಉಪದೇಶಗಳನ್ನು ವಿವರಿಸುತ್ತಿದ್ದ ಬಗೆಯನ್ನು ಮೆಚ್ಚಿ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಆವರ ಆ ಉಪದೇಶಗಳ ಅರ್ಥವಿವರಣೆ ಅತ್ಯಂತ ಆಳವಾದ ಜ್ಞಾನದಿಂದ ಕೂಡಿರುತ್ತಿತ್ತು. ಅವರು ಜೈನರಾದರೂ ಶ್ರೀಕೃಷ್ಣನ ಭಕ್ತರಾಗಿದ್ದರು..
    • ಅವರು ಯಾವಾಗಲೂ ಜ್ಞಾನಿಯ ಉನ್ನತ ಸ್ಥಿತಿಯಲ್ಲಿರುತ್ತಿದ್ದರು; ಮಹಾ ಮೇಧಾವಿಯೂ , ಸಾಹಿತ್ಯ-ಭಾಷಾ ವಿದ್ವಾಂಸರೂ ಆಗಿದ್ದರು. ಅವರು ಗುಜರಾತಿನ ವವಾನಿಯಾ ಬಂದರಿನಲ್ಲಿ ೯-೧೧-೧೮೬೭ ರಲ್ಲಿ ಜನಿಸಿದರು; ರಾಜಕೋಟೆಯಲ್ಲಿ ದಿ.೯-೪-೧೯೦೧ರಲಿ ದೇಹತ್ಯಾಗ ಮಾಡಿದರು. ಅವರು ಗಾಂಧೀಜಿಯ ಧಾರ್ಮಿಕ ಮಾರ್ಗದರ್ಶಿ, ಸಹಾಯಕರಾಗಿ ಪ್ರಸಿದ್ಧರು. ಅವರು ಗಾಂಧೀಜೀಯ ಸ್ನೇಹಿತರೂ ಆಗಿದ್ದರು. ಗಾಂಧೀಜಿ ಮತ್ತು ಶ್ರೀಮದ್ ಅವರ ಮಧ್ಯೆ ಅವರ (ಶ್ರೀಮದ್ )ಅಂತ್ಯ ಕಾಲದವರೆಗೂ (೧೯೦೧), ಪತ್ರ ವ್ಯವಹಾರ ನೆಡೆಯುತ್ತಿದ್ದಿತು. *ಗಾಂಧೀಜಿಯವರು, ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.(ಹೆಚ್ಚಿನ ವಿವರಕ್ಕೆ, ವಿಕಿಪೀಡಿಯಾ ಇಂಗ್ಲಿಷ್ ವಿಬಾಗದ, ಶ್ರೀಮದ್ ರಾಜ್ ಚಂದ್ ಭಾಯಿ, ತಾಣಕ್ಕೆ ಹೋಗಿ ನೋಡಿ)ಗಾಂಧೀಜೀ ಅವರ ಬಹಿರಂಗ ಜೀವನದ ನಡವಳಿಕೆಯಲ್ಲಿ ಅಹಿಂಸೆ ಮತ್ತು ಸತ್ಯದ ಮಾರ್ಗ ಅವರು ಅಂತರಂಗದಲ್ಲಿ ಪರಮಾತ್ಮನನ್ನು ಅರಿಯುವುದಕ್ಕೆ ಸಾಧನವಾಗಿತ್ತು. ಅದು ರಾಜಕೀಯವಿರಲಿ, ಸಮಾಜ ಸೇವೆ ಇರಲಿ, ಶಿಕ್ಷಣದ ಪ್ರಯೋಗವಿರಲಿ, ತಮ್ಮ ಅಂತರಂಗದ ಸಾಧನೆಗೆ ವಿರೋಧವುಂಟಾಗದಂತೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿದ್ದರು.

    ಗಾಂಧೀಜೀ ಅವರ ಆತ್ಮ ಶಕ್ತಿ

    [ಬದಲಾಯಿಸಿ]
    • ಗಾಂಧೀಜೀ ಅವರ ನಿರ್ಭಯತೆ, ಅಗಾಧ ಆತ್ಮ ಶಕ್ತಿ, ಅಸಾಧಾರಣ ಸಂಕಲ್ಪ ಶಕ್ತಿಗಳು ಈ ಅಧ್ಯಾತ್ಮ ಸಾಧನೆಯ ಫಲ ಎಂಬುದರಲ್ಲಿ ಸಂಶಯವಿಲ್ಲ. ಅವರು ತಮ್ಮ ಜೀವಿತ ಕಾಲದಲ್ಲಿಯೇ ಭಾರತದ ಅಂದಿನ ನಲವತ್ತು ಕೋಟಿ ಜನರ, ವಿದ್ಯಾವಂತರ, ಅವಿದ್ಯಾವಂತರ, ಹೆಂಗಸರ,ಮಕ್ಕಳ, ಹೃದಯವನ್ನು ತಟ್ಟಿದ, ಮಿಡಿದ ವ್ಯಕ್ತಿ; ಇಂಥವರು ಜಗತ್ತಿನ ಇತಿಹಾಸದಲ್ಲಿ ಸಿಗಲಾರರು; ಮುಂದೆ ಸಿಗುವರೆಂಬ ಭರವಸೆಯೂ ಇಲ್ಲ.
    • ವಿವೇಕಾನಂದರ ನಂತರ ಬಂದ ಮಹಾಯೋಗಿ ಪರಮಹಂಸ ಯೋಗಾನಂದರು, ಗಾಂಧೀಜೀಯ ಆತ್ಮ ಪ್ರಭೆಯು (ಅವುರಾ) ಅವರ ದೇಹದಿಂದ ಬಹು ದೂರದ ವರೆಗೆ ಅಲೆ ಅಲೆಯಾಗಿ ಪಸರಿಸುತ್ತಿರವುದನ್ನು ತಮ್ಮ ಯೋಗ ದೃಷ್ಟಿಯಲ್ಲಿ ಕಂಡುದಾಗಿ ಹೇಳಿದ್ದಾರೆ. (ಯೋಗಾನಂದರ ಆತ್ಮ ಚರಿತ್ರೆ). ಅವರು, ಗಾಂಧೀಜೀ ತಮ್ಮ ದೇಹ ಭಾವ ಮತ್ತು ಪಂಚೇಂದ್ರಿಯಗಳಿಂದ ತಮ್ಮ ಚಿತ್ತವನ್ನು ಸುಲಭವಾಗಿ ಕಳಚಿಕೊಳ್ಳಬಲ್ಲವರಾಗಿದ್ದುದನ್ನು ತಿಳಿಸಿದ್ದಾರೆ. ಅವರು(ಗಾಂಧೀಜಿ) ತಮ್ಮ ಅಪೆಂಡಿಸೈಟಿಸ್ ಆಪರೇಶನ್ ಸಮಯದಲ್ಲಿ ಅರವಳಿಕೆ (ಅನಿಸ್ತೀಶಿಯ) ತೆಗೆದುಕೊಳ್ಳದೆ, ಅದೇ ಸಮಯದಲ್ಲಿ ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದುದನ್ನು ಉದಾಹರಿಸಿದ್ದಾರೆ.
    • ಗಾಂಧೀಜೀ ತಮ್ಮ ತೀರ್ಮಾನಗಳನ್ನು ತಾರ್ಕಿಕವಾಗಿ ವಿವರಿಸಲು ಅಸಾಧ್ಯವಾದಾಗ,ತಮ್ಮ ಅಂತರಂಗದ ವಾಣಿ ಯ ಅನುಸಾರವಾಗಿ ನಡೆಯುತ್ತಿದುದಾಗಿ ಹೇಳತ್ತಿದ್ದರು. *ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಅವರನ್ನು ಹತ್ಯೆ ಗೈದವರು ಗಾಂಧೀಜೀಯ ವ್ಯಕ್ತಿತ್ವಕ್ಕೆ ಹೋಲಿಸಿದಾಗ ಅತ್ಯಂತ ಕುಬ್ಜರು, ಅಲ್ಪರು. ಹತ್ಯೆ ಗೈದವರ ವ್ಯಕ್ತಿತ್ವ ಶೂನ್ಯವಾಗುತ್ತದೆ.
    • ಒಬ್ಬ ಸಂತನ ಹತ್ಯೆಯನ್ನು ಸಮರ್ಥಿಸಿಕೊಳ್ಳವುದು ಅಲ್ಪತನವಾಗುವುದು.
    • ಅವರ ಹತ್ಯೆಯಾದಾಗ ವ್ಯಾಟಿಕನ್ ಪೋಪರು ತಾವು ಒಬ್ಬ ಕ್ರೈಸ್ತ ಸಂತನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ ಎಂದರು. ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟಿನ್ ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು, ಎಂದರು.
    • ಅಹಿಂಸೆ, ಶಾಂತಿ ಮತ್ತು ದೈವಿಕ ಪ್ರೇಮದ ಸಿದ್ಧಿ ಅವರ ಗುರಿ. ದ್ವೇಷವೇ ಇಲ್ಲದ ಜಗತ್ತು ಅವರ ಕನಸು. ಸರ್ವತ್ರ ಪ್ರೇಮ ಅವರ ಬದುಕು. ತಮ್ಮಂತೆ ಇತರರೂ ಸರ್ವತ್ರ ಪ್ರೇಮವನ್ನು ತೋರಬೇಕೆಂಬ ಅವರ ಬಯಕೆ ಮತ್ತು ಒತ್ತಾಸೆ ಅವರ ಜೀವಕ್ಕೆ ಮುಳುವಾಯಿತು.
    • ಆದರೆ, ಅವರ ಆದರ್ಶ, ರಾಮರಾಜ್ಯದ ಕನಸು, ಸ್ವಯಂ ಪೂರ್ಣ ಗ್ರಾಮ ರಾಜ್ಯದ ಆರ್ಥಿಕ ಸಿದ್ದಾಂತ, ಪ್ರಸ್ತುತ ಮತ್ತು ಸದಾ ಜೀವಂತ. ಸಂತರ ದೇಹಕ್ಕೆ ಅಳಿವಿದ್ದರೂ, ಅವರ ಆದರ್ಶ, ಸಂಕಲ್ಪಗಳಿಗೆ ಸಾವಿಲ್ಲ.
    • ಓಂ ಶಾಂತಿಃ ಶಾಂತಿಃ ಶಾಂತಿಃ ||

    [೧೦೮]

    ಇವನ್ನೂ ನೋಡಿ

    [ಬದಲಾಯಿಸಿ]

    ಹೆಚ್ಚಿನ ಓದಿಗೆ

    [ಬದಲಾಯಿಸಿ]
    • ಗಾಂಧೀಜೀಯವರ ಆತ್ಮ ಚರಿತ್ರೆ - ಸತ್ಯಶೋಧನೆ ( ಅನುವಾದ- ಬೆಟಗೇರಿ ಕೃಷ್ಣ ಶರ್ಮ )
    • An Autobiography Of A Yogi - Paramahamsa Yogananda.
    • ವಿಕಿಪೀಡಿಯಾದ - ಶ್ರೀಮದ್ ರಾಯಚಂದ್ ಭಾಯಿ ಯವರ ತಾಣಗಳು
    • ಯೋಗಿ "ಶ್ರೀಮದ್ ರಾಯಚಂದ್ ಭಾಯಿ ಯವರ ಸ್ವಂತ ಅಂತರ್ ಜಾಲ ತಾಣಗಳು.
    • http://www.cs.colostate.edu/~malaiya/rajchandra.html
    • ಗಾಂಧೀಜಿಯವರ ಲೇಖನಗಳು.
    • The Last Phase part 1 and 2: By Pyarelal
    • Unto The Last (Ruskin) - By Gandhiji
    • http://en.wikipedia.org/wiki/Shrimad_Rajchandra

    ಟಿಪ್ಪಣಿಗಳು

    [ಬದಲಾಯಿಸಿ]
    1. ಗಾಂಧಿ ಎಂದರೆ ಗುಜರಾತಿಯಲ್ಲಿ "ಕಿರಾಣಿ ವರ್ತಕ" (L.R.ಗಾಲಾ, ಪ್ರಸಿದ್ಧ ಕಂಬೈನಡ್ ಡಿಕ್ಷನರಿ, ಇಂಗ್ಲೀಷ್-ಇಂಗ್ಲೀಷ್-ಗುಜರಾತಿ & ಗುಜರಾತಿ-ಗುಜರಾತಿ-ಇಂಗ್ಲೀಷ್, ನವ್‌ನೀತ್‌), ಅಥವಾ ಹಿಂದಿಯಲ್ಲಿ "ಸುಗಂಧಕಾರ" (ಭಾರ್ಗವರ ಸ್ಟ್ಯಾಂಡರ್ಡ್ ಇಲ್ಲ್ಯೂಸ್ಟ್ರೇಟೆಡ್‌ ಡಿಕ್ಷನರಿ ಹಿಂದಿ-ಇಂಗ್ಲೀಷ್ ).
    2. Fischer, Louis (1954), Gandhi:His life and message for the world, Mentor
    3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ Tendulkar, D. G. (1951), Mahatma volume 1, Delhi: Ministry of Information and Broadcasting, Government of India
    4. ಪಿಟಿರಿಮ್‌ ಅಲೆಗ್ಸಾಂಡ್ರೊವಿಚ್‌ ಸೊರೊಕಿನ್‌, ದ ವೇಸ್‌ ಅಂಡ್‌ ಪವರ್ ಆಫ್ ಲವ್‌, ೨೦೦೨
    5. [14] ^ ಲಾಯ್ಡ್‌ I. ರುಡಾಲ್ಫ್‌ , ಗಾಂಧಿ, ದಿ ಟ್ರೆಡಿಷನಲ್‌ ರೂಟ್ಸ್ ಆಫ್ ಕರಿಜ್ಮಾ, ೧೯೮೩
    6. Gandhi 1940, pp. 5–7
    7. Gandhi 1940, p. 9
    8. Gandhi 1940, pp. 20–22
    9. ೯.೦ ೯.೧ ೯.೨ ೯.೩ ೯.೪ ೯.೫ Brown, Judith M (1989), Gandhi:Prisoner of Hope, New Haven: Yale University Press, p. 22
    10. Bhattacharya, Sabyasachi (1997), The Mahatma and the Poet, New Delhi: National Book Trust, India, p. 1
    11. 10-year-old's RTI on 'Father of the Nation' title for Gandhi;India | Indo-Asian News Service | Updated: April 03, 2012
    12. ೧೨.೦ ೧೨.೧ Fischer, Louis (1962), Essential Gandhi, New York: Random House
      • ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ Vol ೫ ದಾಖಲೆ#೩೯೩ ಗಾಂಧಿಯವರ: ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿಯಿಂದ p೧೦೬
    13. "Sergeant Major Gandhi". Gandhism.net. Archived from the original on 2008-05-21. Retrieved 2009-03-03.
    14. ಕಲೆಕ್ಟೆಡ್ ವರ್ಕ್ಸ್ ಆಫ್‌ ಮಹಾತ್ಮ ಗಾಂಧಿ VOL ೫ p ೪೧೦
    15. [48] ^ ಗಾಂಧಿ: ಆನ್ ಆಟೊಬಯೊಗ್ರಫಿ: ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌, ಟ್ರಾನ್ಸ್‌. ಮಹಾದೇವ್ ದೇಸಾಯಿ, (ಬೋಸ್ಟನ್, ಬೆಕನ್ ಪ್ರೆಸ್, ೧೯೯೩) p೩೧೩
    16. R. *ಗಾಂಧಿ, ಪಟೇಲ್‌: ಎ ಲೈಫ್‌ , p. ೮೨.
    17. R. ಗಾಂಧಿ, ಪಟೇಲ್‌: ಎ ಲೈಫ್‌ , p. ೮೯.
    18. R. ಗಾಂಧಿ, ಪಟೇಲ್‌: ಎ ಲೈಫ್‌ , p. ೧೦೫.
    19. R. ಗಾಂಧಿ, ಪಟೇಲ್‌: ಎ ಲೈಫ್‌ , p. ೧೩೧.
    20. R. ಗಾಂಧಿ, ಪಟೇಲ್‌: ಎ ಲೈಫ್‌ , p. ೧೭೨.
    21. R. ಗಾಂಧಿ, ಪಟೇಲ್‌: ಎ ಲೈಫ್‌ , pp. ೨೩೦–೩೨.
    22. R. ಗಾಂಧಿ, ಪಟೇಲ್‌: ಎ ಲೈಫ್‌ , p. ೨೪೬.
    23. R. ಗಾಂಧಿ, ಪಟೇಲ್‌: ಎ ಲೈಫ್‌ , pp. ೨೭೭–೮೧.
    24. R. ಗಾಂಧಿ, ಪಟೇಲ್‌: ಎ ಲೈಫ್‌ , pp. ೨೮೩–೮೬.
    25. R. ಗಾಂಧಿ, ಪಟೇಲ್‌: ಎ ಲೈಫ್‌ , p. ೩೦೯.
    26. R. ಗಾಂಧಿ, ಪಟೇಲ್‌: ಎ ಲೈಫ್‌ , p. ೩೧೮.
    27. R. ಗಾಂಧಿ, ಪಟೇಲ್‌: ಎ ಲೈಫ್‌ , p. ೪೬೨.
    28. R. ಗಾಂಧಿ, ಪಟೇಲ್‌: ಎ ಲೈಫ್‌ , pp. ೪೬೪–೬೬.
    29. R. ಗಾಂಧಿ, ಪಟೇಲ್‌: ಎ ಲೈಫ್‌ , p. ೪೭೨.
    30. ವಿನಯ್ ಲಾಲ್. ‘ಹೇ ರಾಮ್‌’: ದಿ ಪೊಲಿಟಿಕ್ಸ್ ಆಫ್ ಗಾಂಧಿ’s ಲಾಸ್ಟ್ ವರ್ಡ್ಸ್. ಹ್ಯೂಮನ್‌ಸ್ಕೇಪ್ ೮, no. ೧ (ಜನವರಿ ೨೦೦೧): pp. ೩೪–೩೮.
    31. ಗಾಂಧಿಯವರ ಸಾವಿನ ಕುರಿತಾದ ನೆಹರೂರವರ ಭಾಷಣ. ೧೫ ಮಾರ್ಚ್‌ ೨೦೦೭ರಂದು ಪಡೆದು ಕೊಳ್ಳಲಾಯಿತು.
    32. ೩೩.೦ ೩೩.೧ ೩೩.೨ [75] ^ "ಗಾಂಧಿಯವರ ಚಿತಾಭಸ್ಮವು ಸಮುದ್ರದಲ್ಲಿ ವಿಶ್ರಾಂತವಾಗಿರ ಬೇಕೆ ಹೊರತು, ವಸ್ತುಸಂಗ್ರಹಾಲಯದಲ್ಲಿ ಅಲ್ಲ" ದಿ ಗಾರ್ಡಿಯನ್‌, ೧೬ ಜನವರಿ ೨೦೦೮
    33. [78] ^ "ಗಾಂಧಿಯವರ ಚಿತಾಭಸ್ಮವು ಹರಡಿಕೊಂಡಿತು" Archived 2011-08-11 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಸಿನ್‌ಸಿನತ್ತಿ ಪೋಸ್ಟ್‌, ೩೦ ಜನವರಿ ೧೯೯೭ "ಕಾರಣಗಳು ಯಾರಿಗೂ ಗೊತ್ತಿಲ್ಲದಂತೆಯೇ, ಸ್ವಲ್ಪ ಪ್ರಮಾಣದ ಚಿತಾಭಸ್ಮವನ್ನು ಆಗ್ನೇಯ ನವದೆಹಲಿಯ ಕಟ್ಟಕ್ [77]ಬ್ಯಾಂಕ್‌ನ ತಿಜೋರಿಯಲ್ಲಿ ಇಡಲಾಗಿತ್ತು.
      • ೧೯೯೫ರ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದ ವಿಷಯದಿಂದ ಚಿತಾಭಸ್ಮವು ಬ್ಯಾಂಕಿನಲ್ಲಿದೆ ಎಂದು ಅರಿತು ತುಷಾರ್‌ ಗಾಂಧಿಯವರು ಚಿತಾಭಸ್ಮವನ್ನು ವಶಪಡಿಸಿಕೊಳ್ಳಲು ಕೋರ್ಟ್‌ನ ಮೊರೆ ಹೋದರು."
    34. Ferrell, David (2001-09-27). "A Little Serenity in a City of Madness". Los Angeles Times. pp. B 2.
    35. ದಿನೇಶ್ ಅಮೀನ್ ಮಟ್ಟುPublished: 30 ಜನವರಿ 2012, Updated: 02 ಅಕ್ಟೋಬರ್ 2019
    36. ಮಹಾತ್ಮನೊಂದಿಗೆ ನಮ್ಮದು ಎಂಥ ಸಂಬಂಧ?;ನಾರಾಯಣ ಎ;d: 02 ಅಕ್ಟೋಬರ್ 2019
    37. https://www.prajavani.net/stories/national/former-pti-journalist-now-99-669208.htmlಗಾಂಧಿ ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;d: 03 ಅಕ್ಟೋಬರ್ 2019,
    38. ‘ಗಾಂಧಿ–150’ ವಿಶೇಷ;ಮಹಾತ್ಮನ ಮರೆತು ಭಾರತ ಬೆಳಗಬಹುದೆ?;ಡಾ. ರೋಹಿಣಾಕ್ಷ ಶಿರ್ಲಾಲು;02 ಅಕ್ಟೋಬರ್ 2018,
    39. Asirvatham, Eddy. Political Theory. S.chand. ISBN 8121903467.
    40. ಭರತನ್‌ ಕುಮಾರಪ್ಪ, M.K. ಗಾಂಧಿಯವರ "ಫಾರ್‌ ಪ್ಯಾಸಿಫಿಸ್ಟ್ಸ್‌"ನ ಸಂಪಾದಕರು, ನವಜೀವನ್‌ ಪಬ್ಲಿಷಿಂಗ್‌ ಹೌಸ್‌, ಅಹಮದಾಬಾದ್‌, ಭಾರತ, ೧೯೪೯.
    41. Gandhi, Mahatma (1972). Non-violence in peace and war, 1942–[1949]. Garland Publishing. ISBN 0-8240-0375-6.
    42. ಬಂಡ್ಯುರಾಂಟ್, p. ೨೮.
    43. ಬಂಡ್ಯುರಾಂಟ್, p. ೧೩೯.
      • ಲೇಯ್ಡ್‌ಲಾ, ಜೇಮ್ಸ್‌: ಸಿರಿತನ ಮತ್ತು ತ್ಯಾಗ. ಜೈನರಲ್ಲಿ ಧರ್ಮ, ಆರ್ಥಿಕತೆ, ಮತ್ತು ಸಮಾಜ, ಆಕ್ಸ್‌ಫರ್ಡ್‌ ೧೯೯೫, p. ೧೬೬-೧೬೯.
    44. ಜೈನ ಸಮುದಾಯ: ತತ್ವಗಳು ಮತ್ತು ಆಚರಣೆಯ ನಡುವೆ ಕೆಲವು ವ್ಯತ್ಯಾಸಗಳು Archived 2012-02-27 ವೇಬ್ಯಾಕ್ ಮೆಷಿನ್ ನಲ್ಲಿ.. ಫೆಬ್ರವರಿ ೧೪, ೨೦೦೯ರಂದು ಪಡೆದುಕೊಳ್ಳಲಾಯಿತು.
    45. "International Vegetarian iUnion — Mohandas K. Gandhi (1869–1948)".
    46. ಗೋಖಲೆಯವರ ಚಾರಿಟಿ Archived 2008-06-04 ವೇಬ್ಯಾಕ್ ಮೆಷಿನ್ ನಲ್ಲಿ., ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌ , M.K. ಗಾಂಧಿ.
    47. "Time magazine people of the century". Time.com. Archived from the original on 2000-06-21. Retrieved 2009-03-12.
    48. [101] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌ — ಆನ್ ಆಟೊಬಯೊಗ್ರಫಿ, p. ೧೭೬.
    49. [102] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌ — ಆನ್ ಆಟೊಬಯೊಗ್ರಫಿ, p. ೧೭೭.
    50. [103] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌ — ಆನ್ ಆಟೊಬಯೊಗ್ರಫಿ, p. ೧೮೩.
    51. [106] ^ ದೇಸಾಯಿ, ಮಹಾದೇವ್‌. ದಿ ಗಾಸ್ಪೆಲ್‌ ಆಫ್ ಸೆಲ್ಫ‌ಲೆಸ್ ಆಕ್ಷನ್‌, ಅಥವಾ, ದಿ ಗೀತ ಅಕಾರ್ಡಿಂಗ್‌ ಟು ಗಾಂಧಿ. (ನವಜೀವನ್‌ ಪಬ್ಲಿಷಿಂಗ್‌ ಹೌಸ್‌: ಅಹಮದಾಬಾದ್‌: ಪ್ರಥಮ ಆವೃತ್ತಿ ೧೯೪೬). ಬೇರೆಯ ಆವೃತ್ತಿಗಳು: ೧೯೪೮, ೧೯೫೧, ೧೯೫೬.
    52. [107] ^ ದೇಸಾಯಿಯವರ ಸೇರಿಸಿರುವ ಕೆಲವು ಅಭಿಪ್ರಾಯಗಳನ್ನು ಬಿಟ್ಟು, ಒಂದು ಸಣ್ಣ ಆವೃತ್ತಿ ಪ್ರಕಟವಾಯಿತು: ಅನಾಸಕ್ತಿಯೋಗ: ದಿ ಗಾಸ್ಪೆಲ್‌ ಆಫ್ ಸೆಲ್ಫ‌ಲೆಸ್ ಆಕ್ಷನ್‌. ಜಿಮ್‌ ರಂಕಿನ್‌, ಸಂಪಾದಕರು. ಲೇಖಕರನ್ನು M.K. ಗಾಂಧಿ ಎಂದು ಪಟ್ಟಿ ಮಾಡಲಾಗಿದೆ; ಮಹಾದೇವ್‌ ದೇಸಾಯಿ, ಅನುವಾದಕ. (ಡ್ರೈ ಬೋನ್ಸ್‌ ಪ್ರೆಸ್‌, ಸ್ಯಾನ್ ಫ್ರಾನ್ಸಿಸ್ಕೊ, ೧೯೯೮) ISBN ೧-೮೮೩೯೩೮-೪೭-೩.
    53. "Overview of debates between Gandhi and Tagore". Indiatogether.org. Retrieved 2009-03-12.
    54. V.N. ನಾರಾಯಣನ್‌‌ರವರ ಪೀರ್‌ಲೆಸ್ಸ್ ಕಮ್ಯುನಿಕೇಟರ್‌ Archived 2007-08-04 ವೇಬ್ಯಾಕ್ ಮೆಷಿನ್ ನಲ್ಲಿ.. ಲೈಫ್ ಪಾಸಿಟೀವ್‌ ಪ್ಲಸ್‌, ಅಕ್ಟೊಬರ್‌–ಡಿಸೆಂಬರ್‌ ೨೦೦೨
    55. Gandhi, M. K. Unto this Last: A paraphrase (in English; trans. from Gujarati). Ahmedabad: Navajivan Publishing House. ISBN 81-7229-076-4. Archived from the original (PDF) on 2010-01-04. Retrieved 2009-12-16.{{cite book}}: CS1 maint: unrecognized language (link)
    56. ಕಲೆಕ್ಟೆಡ್‌ ವರ್ಕ್ಸ್‌ ಆಫ್‌ ಮಹಾತ್ಮ ಗಾಂಧಿ (CWMG) ವಿವಾದ (ಗಾಂಧಿಸರ್ವ್)
    57. "Gandhi Behind the Mask of Divinity". Archived from the original on 2007-12-28. Retrieved 2007-12-17.
    58. "ಭಾರತಕ್ಕೆ ರಾಜನ ಪ್ರಯಾಣ". Archived from the original on 2009-03-21. Retrieved 2009-12-16.
    59. ಗಾಂಧಿಯ ಸ್ಮಾರಕ ವೀಕ್ಷಣೆಗೆ ತಂದೆಯಂತೆ ರಾಜ ಪ್ರಯಾಣ ಬೆಳೆಸಿದ
    60. Placido P. D'Souza (2003-01-20). ED163673. DTL "COMMEMORATING MARTIN LUTHER KING JR.: Gandhi's influence on King". Sfgate.com. Retrieved 2009-03-12. {{cite web}}: Check |url= value (help)
    61. ನೆಲ್ಸನ್‌‌ ಮಂಡೇಲಾ, ಪವಿತ್ರ ಯೋಧ: ದಕ್ಷಿಣ ಆಫ್ರಿಕಾದ ವಿಮೋಚಕರು ಪ್ರಾರಂಭಿಕ ಸ್ಥಿತಿಯಲ್ಲಿ ಇದ್ದ ಭಾರತ ವಿಮೋಚಕರ ಕೆಲಸಗಳನ್ನು ನೋಡುತ್ತಿದ್ದರು Archived 2008-10-20 ವೇಬ್ಯಾಕ್ ಮೆಷಿನ್ ನಲ್ಲಿ., ಟೈಮ್‌ ನಿಯತಕಾಲಿಕ , ೩ ಜನವರಿ ೨೦೦೦.
    62. "A pacifist uncovered — Abdul Ghaffar Khan, Pakistani pacifist". Findarticles.com. 1930-04-23. Archived from com/p/ articles/mi_m1295/is_2_66/ai_83246175/print the original on 2012-07-09. Retrieved 2009-03-12. {{cite web}}: Check |url= value (help)
    63. "An alternative Gandhi". Tribuneindia.com. 2004-02-22. Retrieved 2009-03-12.
    64. "Einstein on Gandhi". Gandhiserve.org. 1931-10-18. Archived from the original on 2012-01-17. Retrieved 2009-03-12.
    65. ಲೆನ್ನನ್ ಚಿರಾಯು Archived 2007-05-28 ವೇಬ್ಯಾಕ್ ಮೆಷಿನ್ ನಲ್ಲಿ.. rollingstone.com ನಿಂದ. ೨೦ ಮೇ ೨೦೦೭ರಂದು ಪಡೆದುಕೊಳ್ಳಲಾಯಿತು.
    66. ಗಾಂಧಿಗಿರಿ ಮತ್ತು ಗ್ರೀನ್‌ ಲಯನ್‌ನಿಂದ, ಅಲ್ ಜಾರ್‌ ಕೇನ್ಸ್‌‌ನಲ್ಲಿ ಹೃದಯಗಳನ್ನು ಗೆದ್ದನು Archived 2012-01-11 ವೇಬ್ಯಾಕ್ ಮೆಷಿನ್ ನಲ್ಲಿ.. exchange೪media.com ನಿಂದ ತೆಗೆದುಕೊಂಡಿದ್ದು ೨೩ ಜೂನ್ ೨೦೦೭ರಂದು ಪಡೆದುಕೊಳ್ಳಲಾಯಿತು.
    67. "Obama reluctant to seek changes in nuclear deal". The Hindu. 2008-12-07. Archived from the original on 2008-08-02. Retrieved 2009-03-12.
    68. Chaudhury, Nilova (15 June 2007). "2 October is global non-violence day". hindustantimes.com. Hindustan Times. Archived from the original on 2007-09-30. Retrieved 2007-06-15.
    69. M.K. ಗಾಂಧಿ: ಆನ್ ಆಟೊಬಯೊಗ್ರಫಿ Archived 2008-05-15 ವೇಬ್ಯಾಕ್ ಮೆಷಿನ್ ನಲ್ಲಿ.. ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು.
    70. [138] ^ ಮೋಹನ್‌ದಾಸ್‌ ಕೆ. ಗಾಂಧಿ ಯನ್ನು ಹೇಗೆ ಮತ್ತು ಯಾವಾಗ "ಮಹಾತ್ಮ" ಎಂದು ಕರೆಯಲ್ಪಟ್ಟರು ಎಂಬುದಕ್ಕೆ ಸಾಕ್ಷ್ಯ ಸಂಗ್ರಹಣೆ ಮಾಡಲಾಗುತ್ತಿದೆ Archived 2008-05-15 ವೇಬ್ಯಾಕ್ ಮೆಷಿನ್ ನಲ್ಲಿ.. ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು.
    71. AFSCಯ ಹಿಂದಿನ ಸಾಲಿನ ನೋಬೆಲ್‌ ನಾಮನಿರ್ದೇಶನಗಳು Archived 2008-08-15 ವೇಬ್ಯಾಕ್ ಮೆಷಿನ್ ನಲ್ಲಿ..
    72. ಅಮಿತ್‌ ಬರೂಹ. "ಗಾಂಧಿ ನೋಬೆಲ್‌‌ ಪ್ರಶಸ್ತಿಯನ್ನು ಸ್ವೀಕರಿಸದಿರುವುದು ಅತಿ ದೊಡ್ಡ ಲೊಪವಾಯಿತು" Archived 2008-09-29 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೬ರ ದ ಹಿಂದು ವಿನಲ್ಲಿದ್ದ. ೧೭ ಅಕ್ಟೊಬರ್‌ ೨೦೦೬ರಂದು ಪಡೆದುಕೊಳ್ಳಲಾಯಿತು.
    73. ಒಯ್‌ವಿಂದ್‌ ಟನ್ನೆಸ್ಸನ್‌. ಮಹಾತ್ಮ ಗಾಂಧಿ, ದಿ ಮಿಸ್ಸಿಂಗ್‌ ಲಿಟರೇಚರ್‌. ನೋಬೆಲ್‌ ಎ-ಮ್ಯೂಸಿಯಮ್‌ ಪೀಸ್‌ ಸಂಪಾದಕರು, ೧೯೯೮–೨೦೦೦. ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು.
    74. ಪುನರ್‌ಮುದ್ರಿತವಾದ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌‌‌. , ಲ್ಯೂಯಿಸ್‌ ಫಿಷರ್, ed., ೨೦೦೨ (ಪುನರ್‌ಮುದ್ರಿತ ಆವೃತ್ತಿ) pp. ೧೦೬–೧೦೮.
    75. ಪುನರ್‌ಮುದ್ರಿತವಾದ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌. ಲ್ಯೂಯಿಸ್‌ ಫಿಷರ್, ed., ೨೦೦೨ (ಪುನರ್‌ಮುದ್ರಿತ ಆವೃತ್ತಿ) pp. ೩೦೮–೯.
    76. . ಜಾಕ್, ಹೋಮರ್ PR11&dq=The+Gandhi +Reader :+A+Sourcebook+of+His+Life+and+Writings&sig=mu7B1to2ve7qqIYNmXQMd5jifsY ದಿ ಗಾಂಧಿ ರೀಡರ್‌‌ , p. ೪೧೮.
    77. ಪುನರ್‌ಮುದ್ರಿತವಾದ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌. , ಲ್ಯೂಯಿಸ್‌ ಫಿಷರ್, ed., ೨೦೦೨ (ಪುನರ್‌ಮುದ್ರಿತ ಆವೃತ್ತಿ) pp. ೨೮೬-೨೮೮.
    78. "SANET-MG Archives - September 2001 (#303)". Lists.ifas.ufl.edu. Archived from the original on 2018-11-30. Retrieved 2009-03-12.
    79. ಮಹಾತ್ಮ ಗಾಂಧಿ ಆನ್‌ ಭಗತ್‌ ಸಿಂಗ್‌.
    80. ಗಾಂಧಿ — 'ಮಹಾತ್ಮ' ಆರ್‌ ಫ್ಲಾಡ್‌ ಜೀನೀಯಸ್‌?.
    81. ಪುನರ್‌ಮುದ್ರಿತವಾದ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌. , ಲ್ಯೂಯಿಸ್‌ ಫಿಷರ್, ed., ೨೦೦೨ (ಪುನರ್‌ಮುದ್ರಿತ ಆವೃತ್ತಿ) p. ೩೧೧.
    82. ಜಾಕ್, ಹೋಮರ್. ದಿ ಗಾಂಧಿ ರೀಡರ್‌ , pp. ೩೧೯–೨೦.
    83. ಜಾಕ್, ಹೋಮರ್. ದಿ ಗಾಂಧಿ ರೀಡರ್‌ , p. ೩೨೨.
    84. ಡೇವಿಡ್‌ ಲ್ಯೂಯಿಸ್ ಷೆಫರ್‌. ವಾಟ್‌ ಡಿಡ್ ಗಾಂಧಿ ಡು? Archived 2008-10-22 ವೇಬ್ಯಾಕ್ ಮೆಷಿನ್ ನಲ್ಲಿ.. ನ್ಯಾಷಿನಲ್ ರಿವ್ಯೂವ್‌ , ೨೮ ಏಪ್ರಿಲ್‌ ೨೦೦೩. ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು; ರಿಚರ್ಡ್‌ ಗ್ರೆನಿಯೆರ್‌. "ದಿ ಗಾಂಧಿ ನೋಬಡಿ ನೋಸ್‌" Archived 2008-05-16 ವೇಬ್ಯಾಕ್ ಮೆಷಿನ್ ನಲ್ಲಿ.. ಕಮೆಂಟರಿ ನಿಯತಕಾಲಿಕ . ಮಾರ್ಚ್‌ ೧೯೮೩. ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು.
    85. ಹರ್ಟ್ಜ್‌ಬರ್ಗ್, ಆರ್ಥರ್‌. ದಿ ಜಿಯೋನಿಸ್ಟ್‌ ಐಡಿಯಾ. PA: ಜ್ಯೂಯಿಷ್ ಪಬ್ಲಿಕೇಶನ್ಸ್‌ ಸೊಸೈಟಿ, ೧೯೯೭, pp. ೪೬೩-೪೬೪.; ಇದನ್ನೂ ನೋಡಿ ಗೊರ್ಡನ್ ಬ್ರೌನ್, ಹೈಮ್‌. "ಎ ರಿಜೆಕ್ಷನ್‌ ಆಫ್‌ ಸ್ಪಿರಿಚ್ಯುಯಲ್‌ ಇಂಪೀರಿಯಲಿಸ್ಮ್‌: ರಿಫ್ಲೆಕ್ಷನ್ಸ್‌ ಆನ್‌ ಬರ್ಬರ್‌'ಸ್‌ ಲೆಟರ್‌ ಟು ಗಾಂಧಿ." ಜರ್ನಲ್‌ ಆಫ್‌ ಎಕನಾಮಿಕಲ್‌ ಸ್ಟಡೀಸ್‌ , ೨೨ ಜೂನ್ ೧೯೯೯.
    86. ಜಾಕ್, ಹೋಮರ್. ದಿ ಗಾಂಧಿ ರೀಡರ್‌ , ಹರಿಜನ್‌ , ೨೬ ನವೆಂಬರ್ ೧೯೩೮, pp. ೩೧೭–೩೧೮.
    87. ಮೋಹನ್‌ದಾಸ್‌K. ಗಾಂಧಿ. ಎ ನಾನ್ ವಯೊಲೆಂಟ್ ಲುಕ್ ಅಟ್ ಕಾನ್‌ಫ್ಲಿಕ್ಟ್ & ವಯೊಲೆನ್ಸ್‌ Archived 2018-11-30 ವೇಬ್ಯಾಕ್ ಮೆಷಿನ್ ನಲ್ಲಿ. ೨೬ ನವೆಂಬರ್ ೧೯೩೮ರ ಹರಿಜನ್‌‌ ನಲ್ಲಿ ಪ್ರಕಟವಾಯಿತು
    88. The Collected Works of Mahatma Gandhi. Vol. 8. p. 199.
    89. [167] ^ ರೊರಿ ಕ್ಯಾರ್ರಲ್, "ಗಾಂಧಿ ಬ್ರಾಂಡೆಡ್‌ ರೇಸಿಸ್ಟ್‌ ಆಸ್ ಜೊಹಾನ್ಸ್‌ಬರ್ಗ್‌ ಹಾನರ್ಸ್‌ ಫ್ರೀಡಂ ಫೈಟರ್‌", ದಿ ಗಾರ್ಡಿಯನ್‌ , ೧೭ ಅಕ್ಟೊಬರ್‌ ೨೦೦೩.
      • ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: p.೪೪
      • ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: p.೪೫
      • ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: p.೧೪೯
    90. ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: pp.೧೫೦–೧
    91. ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: p.೧೫೧
    92. ಸ್ನೋ‌, ಎಡ್ಜರ್‌. ದಿ ಮೆಸ್ಸೇಜ್‌ ಆಫ್ ಗಾಂಧಿ . SEP, ಮಾರ್ಚ್‌ ೨೭, ೧೯೪೮. "ಮಾರ್ಕ್ಸ್‌ನಂತೆ, ಗಾಂಧಿಯವರು ರಾಜ್ಯವನ್ನು ವಿರೋಧಿಸಿ ನಿರ್ಮುಲನೆ ಮಾಡಲು ಆಶಿಸಿದ್ದಾರೆ, ಮತ್ತು ಅವರು ನನಗೆ ತಮ್ಮನ್ನು ತಾವು 'ಸ್ಥಿತಪ್ರಜ್ಞೆಯ ಕ್ರಾಂತಿಕಾರಿ' ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ."
    93. ಗಾಂಧಿಯವರ ಮತ್ತು ಗಾಂಧಿ ಕುರಿತಾದ ಲೇಖನಗಳನ್ನು, ೭ ಜೂನ್ ೨೦೦೮ರಂದು ಪಡೆದುಕೊಳ್ಳಲಾಯಿತು.
    94. ಜೇಸುದಾಸನ್, ಇಗ್ನೇಷಿಯಸ್‌. ಅ ಗಾಂಧಿಯನ್ ಥಿಯಾಲಜಿ ಆಫ್ ಲಿಬರೇಷನ್.
      • ಗುಜರಾತ್‌ ಸಾಹಿತ್ಯ ಪ್ರಕಾಶ್: ಆನಂದ ಭಾರತ, ೧೯೮೭, pp ೨೩೬–೨೩೭
    95. BG ಖೆರ್ ಮತ್ತು ಬೇರೆಯವರ ಜೊತೆಗಿನ ಸಂವಾದದಂತೆ, ಆಗಸ್ಟ್ ೧೫, ೧೯೪೦. ಗಾಂಧಿಯವರು ಚಿಂತನೆಗಳ ಖಜಾನೆ (೧೯೪೨), ದೀವಾನ್ ರಾಮ್ ಪ್ರಕಾಶ್‌ರವರಿಂದ ಪರಿಷ್ಕರಣೆಯಾಗಿದೆ, p. ೬೭ ಹಾಗೂ ಕಲೆಕ್ಟೆಡ್‌ ವರ್ಕ್ಸ್ ಆಫ್ ಮಹಾತ್ಮ ಗಾಂಧಿ Vol. ೭೯ (PDF), p. ೧೨೨
    96. ಮೂರ್ತಿ, ಶ್ರೀನಿವಾಸ್.ಮಹಾತ್ಮ ಗಾಂಧಿ ಮತ್ತು ಲಿಯೋ ಟಾಲ್ಸ್‌ಟಾಯ್‌ ಪತ್ರಗಳು. ಲಾಂಗ್ ಬೀಚ್ ಪಬ್ಲಿಕೇಶನ್ಸ್‌: ಲಾಂಗ್ ಬೀಚ್, ೧೯೮೭, pp ೧೩
    97. ಮೂರ್ತಿ, ಶ್ರೀನಿವಾಸ್.ಮಹಾತ್ಮ ಗಾಂಧಿ ಮತ್ತು ಲಿಯೋ ಟಾಲ್ಸ್‌ಟಾಯ್‌ ಪತ್ರಗಳು. ಲಾಂಗ್ ಬೀಚ್ ಪಬ್ಲಿಕೇಶನ್ಸ್‌: ಲಾಂಗ್ ಬೀಚ್, ೧೯೮೭, pp ೧೮೯.
    98. ಈಸ್ವರನ್, ಏಕನಾಥ್. ಗಾಂಧಿ, ದಿ ಮ್ಯಾನ್ . ನೀಲಗಿರಿ ಪ್ರೆಸ್‌, ೧೯೯೮. Pg. ೩೩.
      • ಭಟ್ಟಾಚಾರ್ಯ, ಭುದ್ಧದೇವ. ಎವಲ್ಯೂಷನ್ ಆಫ್ ದ ಪೊಲಿಟಿಕಲ್ ಫಿಲಾಸಫಿ ಆಫ್ ಗಾಂಧಿ. ಕಲ್ಕತ್ತಾ ಬುಕ್ ಹೌಸ್: ಕಲ್ಕತ್ತಾ, ೧೯೬೯, pp ೪೭೯
    99. ೧೦೫.೦ ೧೦೫.೧ ಅಧ್ಯಾಯ VI ಹಿಂದ್‌ ಸ್ವರಾಜ್‌ by M.K. ಗಾಂಧಿ
    100. "Srikanth's new milestone-Regional Stars-Entertainment-The Times of India". Timesofindia.indiatimes.com. 2009-02-17. Retrieved 2009-03-12.
    101. Entertainment (2009-02-19). "Srikanth's 100th film 'Mahatma' - South Cinema - Entertainment - MSN India". Entertainment.in.msn.com. Archived from the original on 2009-02-24. Retrieved 2009-03-12.
    102. An Autobiography Of A Yogi - Paramahamsa Yogananda.


    ಹೆಚ್ಚುವರಿ ಓದಿಗಾಗಿ

    [ಬದಲಾಯಿಸಿ]
    • ಭನ್ನ,ಸುರೇಂದ್ರ ಮತ್ತು ಗೂಲಮ್‌ ವಹೀದ್. ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, 1893–1914.. ನವ ದೆಹಲಿ: ಮನೋಹರ್‌, 2005.
    • ಬಂಡ್ಯುರಾಂಟ್, ಜಾನ್‌ V. ಕಂಕ್ವೆಸ್ಟ್‌ ಆಫ್‌ ವಯೊಲೆನ್ಸ್‌: ದಿ ಗಾಂಧಿಯನ್‌ ಫಿಲಾಸಫಿ ಆಫ್‌ ಕಾನ್‌ಫ್ಲಿಕ್ಟ್‌ . ಪ್ರಿನ್ಸ್‌ಟನ್‌ UP, 1988 ISBN 0-691-02281-X
    • ಚರ್ನಸ್‌, ಇರಾ. ಅಮೆರಿಕನ್‌ ನಾನ್‌ವಯಲೆನ್ಸ್‌: ದಿ ಹಿಸ್ಟರಿ ಆಫ್ ಆನ್ ಐಡಿಯಾ , ಅಧ್ಯಾಯ 7. ISBN 1-57075-547-7
    • ಚಧಾ, ಯೊಗೇಶ್. ಗಾಂಧಿ: ಎ ಲೈಫ್‌. ISBN 0-471-35062-1
    • ಡಾಲ್ಟನ್‌, ಡೆನ್ನಿಸ್‌ (ed). ಮಹಾತ್ಮ ಗಾಂಧಿ: ಸೆಲೆಕ್ಟೆಡ್ ಪೊಲಿಟಿಕಲ್‌ ರೈಟಿಂಗ್ಸ್‌ . ಇಂಡಿಯನಾಪೊಲಿಸ್‌/ಕೇಂಬ್ರಿಡ್ಜ್‌: ಹ್ಯಾಕೆಟ್ಟ್‌ ಪಬ್ಲಿಕೇಶನ್ ಕಂಪನಿ, 1996. ISBN 0-87220-330-1
    • ಈಸ್ವರನ್‌, ಏಕನಾಥ್‌. ಗಾಂಧಿ ದಿ ಮ್ಯಾನ್‌ . ISBN 0-915132-96-6
    • ಫಿಷರ್‌, ಲ್ಯೂಯಿಸ್‌. ದಿ ಎಸೆನ್ಷಿಯಲ್‌‌ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌ . ವಿಂಟೇಜ್‌: ನ್ಯೂ ಯಾರ್ಕ್, 2002. (ಪುನರ್ಮುದ್ರಣ ಆವೃತ್ತಿ) ISBN 1-4000-3050-1
    • ಫಿಷರ್ಲ್ಯೂಯಿಸ್‌. ದಿ ಲೈಫ್‌ ಆಫ್‌ ಮಹಾತ್ಮ ಗಾಂಧಿ . ಹಾರ್ಪರ್ & ರೊ, ನ್ಯೂ ಯಾರ್ಕ್, 1950. ISBB 0-06-091038-0 (1983 pbk.)
    • ಗಾಂಧಿ, M.K. ಸತ್ಯಾಗ್ರಹ ಇನ್ ಸೌತ್‌ ಆಫ್ರಿಕಾ
    • ಗಾಂಧಿ, M.K. ದಿ ಗಾಂಧಿ ರೀಡರ್‌: ಎ ಸೋರ್ಸ್‌ಬುಕ್ ಆಫ್‌ ಹಿಸ್‌ ಲೈಫ್‌ ಅಂಡ್‌ ರೈಟಿಂಗ್ಸ್‌ . ಹೋಮರ್‌ ಜಾಕ್‌ (ed.) ಗ್ರೋವ್‌ ಪ್ರೆಸ್‌, ನ್ಯೂ ಯಾರ್ಕ್, 1956.
    • ಗಾಂಧಿ, ಮಹಾತ್ಮ. ದಿ ಕಲೆಕ್ಟೆಡ್‌ ವರ್ಕ್ಸ್‌ ಆಫ್‌ ಮಹಾತ್ಮ ಗಾಂಧಿ. ನವ ದೆಹಲಿ: ಪ್ರಕಟಣಾ ವಿಭಾಗ, ಮಾಹಿತಿ ಮತ್ತು ಪ್ರಸರಣಾ ಇಲಾಖೆ, ಭಾರತ ಸರ್ಕಾರ, 1994.
    • ಗಾಂಧಿ, ರಾಜ್‌ಮೋಹನ್‌. ಪಟೇಲ್‌: ಎ ಲೈಫ್‌ . ನವಜೀವನ್‌ ಪಬ್ಲಿಷಿಂಗ್ ಹೌಸ್, 1990 ISBN 81-7229-138-8
    • ಗ್ರೈನೆರ್, ರಿಚರ್ಡ್‌. ದಿ ಗಾಂಧಿ ನೋಬಡಿ ನೋಸ್ Archived 2011-03-23 ವೇಬ್ಯಾಕ್ ಮೆಷಿನ್ ನಲ್ಲಿ. . ವಿಮರ್ಶೆ, ಮಾರ್ಚ್‌ 1983
    • ಗೊರ್ಡನ್‌, ಹೈಮ್. ಎ ರಿಜೆಕ್ಷನ್‌ ಆಫ್‌ ಸ್ಪಿರಿಚ್ಯುಯಲ್‌ ಇಂಪೀರಿಯಲಿಸಮ್‌: ರಿಫ್ಲೆಕ್ಷನ್ಸ್‌ ಆನ್‌ ಬರ್ಬರ್‌'ಸ್‌ ಲೆಟರ್‌ ಟು ಗಾಂಧಿ. ಜರ್ನಲ್‌ ಆಫ್‌ ಎಕನಾಮಿಕಲ್‌ ಸ್ಟಡೀಸ್‌,. , 22 ಜೂನ್‌ 1999.
    • ಹಂಟ್, ಜೇಮ್ಸ್‌ D. ಗಾಂಧಿ ಇನ್ ಲಂಡನ್‌ . ನವ ದೆಹಲಿ: ಪ್ರೊಮಿಲ್ಲ & Co., ಪಬ್ಲಿಶರ್ಸ್‌, 1978.
    • ಮನ್ನ್‌, ಬರ್ನಾರ್ಡ್, ದಿ ಪೆಡೊಲಾಜಿಕಲ್‌ ಅಂಡ್‌ ಪೊಲಿಟಿಕಲ್‌ ಕಾನ್ಸೆಪ್ಟ್ಸ್ ಆಫ್ ಮಹಾತ್ಮ ಗಾಂಧಿ ಅಂಡ್ ಪೌಲ್ ಫ್ರೈಯರೆ. In: ಕ್ಲಾಬೆನ್‌, B. (Ed.) ಇಂಟರ್‌ನ್ಯಾಷಿನಲ್ ಸ್ಟಡೀಸ್ ಇನ್ ಪೊಲಿಟಿಕಲ್ ಸೋಷಿಯಲೈಸೇಶನ್ ಅಂಡ್ ಎಜುಕೇಶನ್. Bd. 8. ಹ್ಯಾಮ್‌ಬರ್ಗ್ 1996. ISBN 3-926952-97-0
    • ರ್ಯುಹೆ, ಪೀಟರ್. ಗಾಂಧಿ:ಎ ಪೊಟೊಬಯಾಗ್ರಫಿ. ISBN 0-7148-9279-3
    • ಶಾರ್ಪ್, ಜೀನ್. ಗಾಂಧಿ ಆಸ್ ಎ ಪೊಲಿಟಿಕಲ್‌ ಸ್ಟ್ರಾಟಜಿಸ್ಟ್ , ವಿತ್ ಎಸ್ಸೇಸ್‌ ಆನ್ ಎಥಿಕ್ಸ್‌ ಅಂಡ್ ಪೊಲಿಟಿಕ್ಸ್‌ . ಬೋಸ್ಟನ್‌: ಎಕ್ಸ್‌ಟೆಂಡಿಂಗ್ ಹೊರೈಜನ್ ಬುಕ್ಸ್, 1979.
    • ಸಿಂಗ್‌, Col. G. B. ಗಾಂಧಿ ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿ . ಪ್ರೊಮೆಥಿಯಸ್ ಬುಕ್ಸ್, 2004. ISBN 978-1573929981
    • ಸಿಂಗ್‌, Col. G. B. ಮತ್ತು ವ್ಯಾಟ್ಸನ್‌, Dr. ಟಿಮ್‌ ಗಾಂಧಿ ಅಂಡರ್ ಕ್ರಾಸ್ ಎಕ್ಸಾಮಿನೇಷನ್ , ಸವರನ್ ಸ್ಟಾರ್ ಪಬ್ಲಿಶಿಂಗ್, 2008. ISBN 0981499201
    • ಸೋಫ್ರಿ, ಜಿಯನ್ನಿ. ಗಾಂಧಿ ಅಂಡ್ ಭಾರತ: ಎ ಸೆಂಚುರಿ ಇನ್ ಫೋಕಸ್. (1995) ISBN 1-900624-12-5

    ಹೊರಗಿನ ಕೊಂಡಿಗಳು

    [ಬದಲಾಯಿಸಿ]