ಆಂತರಿಕ ಶಾಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಂತರಿಕ ಶಾಂತಿಯು (ಅಥವಾ ಮನಃಶಾಂತಿ) ವಿರೋಧ ಅಥವಾ ಒತ್ತಡ ಎದುರಾದಾಗ ತಮ್ಮನ್ನು ತಾವು ಪ್ರಬಲವಾಗಿ ಇರಿಸಿಕೊಳ್ಳಲು ಸಾಕಷ್ಟು ಜ್ಞಾನ ಮತ್ತು ತಿಳುವಳಿಕೆಯು ಜೊತೆಗಿರುವಂಥ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶಾಂತವಾಗಿರುವ ಸ್ಥಿತಿಯನ್ನು ಸೂಚಿಸುತ್ತದೆ. ಹಲವರು ಶಾಂತವಾಗಿರುವುದು ಆರೋಗ್ಯಕರ (ಸಂತುಲನ) ಮತ್ತು ಒತ್ತಡವಿರುವುದು ಅಥವಾ ಆತಂಕಗೊಂಡಿರುವುದಕ್ಕೆ ವಿರುದ್ಧವಾದುದು ಎಂದು ಪರಿಗಣಿಸುತ್ತಾರೆ. ಮನಃಶಾಂತಿಯನ್ನು ಪರಮಾನಂದ, ಸಂತೋಷ ಮತ್ತು ನೆಮ್ಮದಿಯೊಂದಿಗೆ ಸಂಬಂಧಿಸಲಾಗುತ್ತದೆ.