ವೈರಾಗ್ಯ

ವಿಕಿಪೀಡಿಯ ಇಂದ
Jump to navigation Jump to search

ವೈರಾಗ್ಯ ಹಿಂದೂ ತತ್ತ್ವಶಾಸ್ತ್ರದಲ್ಲಿ ಬಳಸಲಾದ ಒಂದು ಸಂಸ್ಕೃತ ಪದ. ಇದನ್ನು ಸ್ಥೂಲವಾಗಿ ನಿರುದ್ವಿಗ್ನತೆ, ನಿರ್ಲಿಪ್ತತೆ, ಅಥವಾ ವಿರಕ್ತಿ, ವಿಶೇಷವಾಗಿ ತಾತ್ಕಾಲಿಕ ಭೌತಿಕ ಪ್ರಪಂಚದಲ್ಲಿನ ನೋವುಗಳು ಹಾಗೂ ಸಂತೋಷಗಳ ತ್ಯಾಗ ಎಂದು ಅನುವಾದಿಸಬಹುದು. ಇದು ಮೋಕ್ಷವನ್ನು ಸಾಧಿಸಲು ಒಂದು ಮಾರ್ಗವಾಗಿದೆ ಎಂದು ವೈರಾಗ್ಯವನ್ನು ಪ್ರತಿಪಾದಿಸಿದ ಹಿಂದೂ ತತ್ತ್ವಶಾಸ್ತ್ರಜ್ಞರು ತಮ್ಮ ಅನುಯಾಯಿಗಳಿಗೆ ಹೇಳಿದರು.

ನಿಜವಾದ ವೈರಾಗ್ಯವು ಬಾಹ್ಯ ಜೀವನಶೈಲಿಯ ಬದಲಾಗಿ ಒಂದು ಆಂತರಿಕ ಮನಸ್ಥಿತಿಯನ್ನು ಸೂಚಿಸುತ್ತದೆ ಮತ್ತು ಇದನ್ನು ಒಬ್ಬ ವೈರಾಗಿಯು ಅಭ್ಯಸಿಸಿದಷ್ಟೇ ಉತ್ತಮವಾಗಿ, ಕೌಟುಂಬಿಕ ಜೀವನ ಹಾಗೂ ವೃತ್ತಿಯಲ್ಲಿ ತೊಡಗಿರುವವನು ಕೂಡ ಅಭ್ಯಸಿಸಬಹುದು. ವೈರಾಗ್ಯದ ಅರ್ಥ ಪ್ರಾಪಂಚಿಕ ವಸ್ತುಗಳ ನಿಗ್ರಹ ಅಥವಾ ಅವುಗಳ ಪ್ರತಿ ವಿಕರ್ಷಣೆಯನ್ನು ಬೆಳೆಸಿಕೊಳ್ಳುವುದು ಅಲ್ಲ. ಜೀವನಾನುಭವಕ್ಕೆ ವಿವೇಕದ (ಆಧ್ಯಾತ್ಮಿಕ ವಿವೇಚನೆ ಅಥವಾ ಸೂಕ್ಷ್ಮ ದೃಷ್ಟಿ) ಅನ್ವಯದ ಮೂಲಕ, ಆಕಾಂಕ್ಷಿಯು ಸಾರ್ಥಕತೆ ಹಾಗೂ ಸುಖದ ಆಂತರಿಕ ಆಧ್ಯಾತ್ಮಿಕ ಮೂಲದ ಪರ ಕ್ರಮೇಣವಾಗಿ ಪ್ರಬಲ ಆಕರ್ಷಣೆಯನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಸೀಮಿತ ಬಂಧನಗಳು ಸಹಜವಾಗಿ ಕಳಚಿ ಬೀಳುತ್ತವೆ.

ಮೂಲಗಳು[ಬದಲಾಯಿಸಿ]

"https://kn.wikipedia.org/w/index.php?title=ವೈರಾಗ್ಯ&oldid=901004" ಇಂದ ಪಡೆಯಲ್ಪಟ್ಟಿದೆ