ವಿಷಯಕ್ಕೆ ಹೋಗು

ಬರಾಕ್ ಒಬಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರಾಕ್ ಒಬಾಮ
ಬರಾಕ್ ಒಬಾಮ


ಪ್ರಸಕ್ತ
ಅಧಿಕಾರ ಪ್ರಾರಂಭ 
ಜನವರಿ ೨೦, ೨೦೦೯
ಪೂರ್ವಾಧಿಕಾರಿ ಜಾರ್ಜ್ ಡಬ್ಲ್ಯು. ಬುಷ್

ಅಧಿಕಾರದ ಅವಧಿ
ಜನವರಿ ೩, ೨೦೦೫ – ನವೆಂಬರ್ ೧೬, ೨೦೦೮

ಜನನ ಟೆಂಪ್ಲೇಟು:Birth date, and age
ಹೊನಲುಲು, ಹವಾಯಿ, ಅಮೇರಿಕ ಸಂಯುಕ್ತ ಸಂಸ್ಥಾನ[೧]
ರಾಜಕೀಯ ಪಕ್ಷ ಡೆಮೊಕ್ರಟಿಕ್ ಪಕ್ಷ
ಜೀವನಸಂಗಾತಿ ಮಿಚೆಲ್ ಒಬಾಮ (ವಿ. 1೧೯೯೨)
ವೃತ್ತಿ ವಕೀಲ
ಧರ್ಮ ಕ್ರೈಸ್ತ
ಹಸ್ತಾಕ್ಷರ

ಬರಾಕ್ ಹುಸೇನ್ ಒಬಾಮ , (ಜನನ: ಆಗಸ್ಟ್ ೪, ೧೯೬೧) ಅಮೇರಿಕ ದೇಶದ ೪೪ನೇ ರಾಷ್ಟಪತಿ. ಇದಕ್ಕೆ ಮುಂಚೆ ಇಲಿನೊಯ್ ರಾಜ್ಯದ ಸೆನೆಟರ್ ಆಗಿದ್ದರು. ಇವರು ಡೆಮೊಕ್ರೆಟಿಕ್ ಪಕ್ಷಕ್ಕೆ ಸೇರಿರುವರು. ಕೊಲಂಬಿಯ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಕಾನೂನು ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಈತ ಇಲಿನೊಯ್ ರಾಜ್ಯದ ವಿಧಾನ ಸಭೆಯಲ್ಲಿ ೧೯೯೭ರಿಂದ ೨೦೦೪ರವರೆಗೆ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ೨೦೦೪ರಲ್ಲಿ ಸೆನೆಟ್‍ಗೆ ಆಯ್ಕೆಯಾದರು. ನವೆಂಬರ್ ೪,೨೦೦೮ ರಂದು ನಡೆದ ಚುನಾವಣೆಯಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಆಯ್ಕೆಯಾದರು.

ಅಮೆರಿಕದ ’ಪ್ರಪ್ರಥಮ ಆಫ್ರೋ ಅಮೆರಿಕನ್’ ಮೂಲದ ೪೮ ವರ್ಷ ಪ್ರಾಯದ ಹರೆಯದ ಶ್ರೀ. ಬರಾಕ್ ಒಬಾಮರವರಿಗೆ, ಪ್ರತಿಷ್ಠಿತ, ’ನೋಬೆಲ್ ಶಾಂತಿ ಪ್ರಶಸ್ತಿ,'ಯನ್ನು ಡಿಸೆಂಬರ್, ೧೦ ರಂದು ಓಸ್ಲೋನಲ್ಲಿ ವಿತರಿಸಲಾಯಿತು.[೨] ಆ ದಿನವೇ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡ, ಅಮೆರಿಕದ ಭಾರತೀಯ, ವೆಂಕಟರಾಮನ್ ರಾಮಕೃಷ್ಣರಿಗೂ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು. ಒಬಾಮ, ಅಧ್ಯಕ್ಷ ಪದವಿಯ ಅಧಿಕಾರದ ಚುಕ್ಕಾಣಿ ಹಿಡಿದ ಕೇವಲ ೯ ತಿಂಗಳಲ್ಲೇ ಈ ಜಾಗತಿಕ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ವೈಯಕ್ತಿಕವಾಗಿ ಅವರಿಗೇ ಅಚ್ಚರಿಯಾಗಿರುವುದಲ್ಲದೆ, ವಿಶ್ವದ ಅನೇಕ ವಲಯಗಳಲ್ಲಿ ಭಾರಿ ಸುದ್ದಿಮಾಡಿದೆ. ’ನೋಬೆಲ್ ಪ್ರಶಸ್ತಿ ಪ್ರದಾನ ಸಮಿತಿ’ಯ ಪ್ರಕಟನೆಯ ಪ್ರಕಾರ, ’ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಬಲವರ್ಧನೆ ಮತ್ತು ಪರಮಾಣು ಪ್ರಸರಣ ತಡೆಗಾಗಿ ಯತ್ನಿಸುತ್ತಿರುವ ಅವರ ಮಹತ್ವದ ಕೊಡುಗೆಗಾಗಿ, ನೋಬೆಲ್ ಶಾಂತಿ ಪ್ರಶಸ್ತಿಗೆ ಅವರನ್ನು ಆಯ್ಕೆಮಾಡಿರುವುದಾಗಿ ತಿಳಿದುಬಂದಿದೆ. ’ನೋಬೆಲ್ ಶಾಂತಿ ಪ್ರಶಸ್ತಿ' ಗೆ ಅರ್ಜಿಸಲ್ಲಿಸಲು ಈ ವರ್ಷದ ಫೆಬ್ರವರಿ ೧ನೇ ತಾರೀಖೇ, ಕಡೆಯ ದಿನವಾಗಿತ್ತು. ಆಗತಾನೇ ಅಧ್ಯಕ್ಷ ಒಬಾಮರವರು, ಅಧಿಕಾರಕ್ಕೆ ಬಂದು ೨ ತಿಂಗಳಾಗಿದ್ದವು. ’ವಿಶ್ವದ ಅತ್ಯುತ್ತಮ ಭವಿಷ್ಯಕ್ಕಾಗಿ ಚಿಂತಿಸಿ ಕಾರ್ಯೋನ್ಮುಖರಾಗಿರುವ ಅತ್ಯಂತ ಅಪರೂಪದ ವ್ಯಕ್ತಿಯಾಗಿರುವ ಒಬಾಮಾರವರು, ದಿಢೀರನೆ ತಮಗೆ ದೊರಕಿದ ಪಾರಿತೋಷಕದ ಬಗೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೊನೆಯ ಗಳಿಗೆಯವರೆಗೆ, ’ಶ್ವೇತಭವನ,’ದ ಉನ್ನತ ಅಧಿಕಾರಿಗಳಿಗೂ ಇದರ ಅರಿವಿರಲಿಲ್ಲ. ’ಝಿಂಬಾಬ್ವೆ ದೇಶದ ಪ್ರಧಾನಿ’, ’ಮೋರ್ಗನ್ ತ್ಸವಂಗಿರ್ಯಾ,’ ಮತ್ತು ಅಫ್ರಿಕಾದ ಮಹಿಳಾ ಹಕ್ಕುಗಳ ಮಾರಾಟಗಾರರೊಬ್ಬರ ಹೆಸರು, ಆಗಾಗ 'ಈ ವರ್ಷದ ನೋಬೆಲ್ ಶಾಂತಿಪ್ರಶಸ್ತಿಗೆ ಅಭ್ಯರ್ಥಿ'ಗಳೆಂದು ಸುದ್ದಿ ಕೇಳಿಬರುತ್ತಿತ್ತು.

'ನೊಬೆಲ್ ಶಾಂತಿಪ್ರಶಸ್ತಿ-ಪುರಸ್ಕೃತ ೩ ನೇ ಅಧ್ಯಕ್ಷರು'

[ಬದಲಾಯಿಸಿ]

ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಪ್ರಥಮ ಆಫ್ರೋ-ಅಮ್ರಿಕದ ಅಧ್ಯಕ್ಷರಾಗಿರುವ, ಒಬಾಮಾ ಅವರು ಶಾಂತಿ ಪುರಸ್ಕಾರ ಗಳಿಸಿದ ೩ನೆಯ ಅಧ್ಯಕ್ಷರಾಗಿದ್ದಾರೆ. ಇದಕ್ಕೆ ಮೊದಲು, ’ಥಿಯೊಡಾರ್ ರೂಸ್ ವೆಲ್ಟ್,’ ’ವುಡ್ರೋ ವಿಲ್ಸನ್,’ ಅಧ್ಯಕ್ಷರಾಗಿ ಕಾರ್ಯಭಾರ ಮಾಡುತ್ತಿರುವಾಗಲೇ ಪ್ರಶಸ್ತಿ ಪಡೆದಿದ್ದರು. ಆದರೆ, ’ಜಿಮ್ಮಿ ಕಾರ್ಟರ್’ ರವರು, ಈ ಪ್ರತಿಷ್ಠಿತ ಪಾರಿತೋಷಕವನ್ನು ತಮ್ಮ ಅಧ್ಯಕ್ಷಾವಧಿ ಮುಗಿದ ನಂತರ ಪಡೆದರು.

ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಪ್ರಪ್ರಥಮ ಅಧ್ಯಕ್ಷ

[ಬದಲಾಯಿಸಿ]

ಇದಕ್ಕೆ ಮೊದಲು ಹಿಂದಿನ ಅಧ್ಯಕ್ಷ ’ಜಾರ್ಜ್ ಬುಷ್[೩] ರವರು, ದೀಪಾವಳಿಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಆದರೆ ಅವರ ಸಂಗಡಿಗರೊಡನೆ ಹಬ್ಬವನ್ನು ಆಚರಿಸಲಾಗಲಿಲ್ಲ. ೨೦೦೯ರಲ್ಲಿ ಅಧ್ಯಕ್ಷ ಒಬಾಮಾ ರವರು ವೈಟ್ ಹೌಸ್ನ ಸಿಬ್ಬಂದಿವರ್ಗ ಹಾಗೂ ಭಾರತೀಯ ಸಮುದಾಯದವರೊಂದಿಗೆ ಸೇರಿಕೊಂಡು ದೀಪಾವಳಿಯನ್ನು ಆಚರಿಸಿದ ಪ್ರಪ್ರಥಮ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂ. ನಾರಾಯಣಾಚಾರ್ ದಿಗಲ್ ಕೋಟೆಯವರು ಮಂತ್ರ ಪಠಿಸುತ್ತಿದ್ದಂತೆಯೇ ಅಧ್ಯಕ್ಷ ಒಬಾಮಾ ರವರು ವಿಶ್ವಶಾಂತಿಯ ಪ್ರಾರ್ಥನೆಗೈದು ದೀಪಬೆಳಗಿ ದೀಪಾವಳಿಯ ಶುಭಾಶಗಳನ್ನು ಎಲ್ಲರೊಡನೆ ಹಂಚಿಕೊಂಡರು. ಐತಿಹಾಸಿಕ ಈಸ್ಟ್ ರೂಂನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಒಬಾಮಾರವರು "ಬೆಳಕಿನ ಹಬ್ಬ ದೀಪಾವಳಿಯು, ಕೆಟ್ಟದರ ವಿರುದ್ಧ ಒಳಿತಿನ ವಿಜಯವಾಗಿದೆ. ಮನುಷ್ಯನಲ್ಲಿನ ಅಜ್ಞಾನವನ್ನು ತೊಲಗಿಸುವ ಪರ್ವದಿನ ವಾಗಿದೆ," ಎಂದು ನುಡಿದರು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ೮ ನವೆಂಬರ್ ೨೦೧೦ ಸೋಮವಾರ ಭಾರತದ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ೪೫ ನಿಮಿಷ ಕಾಲ ಭಾಷಣ ಮಾಡಿದರು। ಟೆಲಿಪ್ರಾಂಪ್ಟರ್ ಬಳಸಿ ಬರಾಕ್ ಒಬಾಮ ಭಾಷಣ ಮಾಡಿದರು. ಭಾರತದ ಸಂಸತ್ತಿನಲ್ಲಿ ಇದೇ ಮೊದಲ ಬಾರಿ 'ಟೆಲಿಪ್ರಾಂಪ್ಟರ್' ಬಳಕೆಯಾಯಿತು.

ಸನ್ ೨೦೦೧ ರ ಸೆಪ್ಟೆಂಬರ್, ೧೧ರಂದು ಅಮೆರಿಕದ ಮೇಲೆ ಹಲ್ಲೆ ಮಾಡಲು ಆವನ ಸಹಚರರನ್ನು ಬಳಸಿದ್ದ 'ಜಾಗತಿಕ ಆಲ್ ಖಾಯಿದಾ ಸಂಘಟನೆ'ಯ ಭಯೋತ್ಪಾದಕ, ಬಿನ್ ಲಾಡನ್ ಅಮೆರಿಕ ನೇತೃತ್ವದ ಪಡೆ ನಡೆಸಿದ ನಾಟಕೀಯ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೃತನಾಗಿದ್ದಾನೆ.[೪] ಮೇ, ೧ನೇ ಭಾನುವಾರ ಮಧ್ಯರಾತ್ರಿಯಲ್ಲಿ ಅಧ್ಯಕ್ಷ ಬರಾಕ್ ಒಬಾಮಅವರು ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಈ ವಿಷಯವನ್ನು ಬಯಲು ಮಾಡಿದರು. ಪಾಕಿಸ್ತಾನದ ಇಸ್ಲಾಮಾಬಾದ್ ಪ್ರದೇಶದ ಅಬುತಾಬಾದ್ ಎಂಬ ಸ್ಥಳದಲ್ಲಿ ಅಮೆರಿಕ ಸೇನಾಪಡೆ ಕೈಗೊಂಡ ಕಾರ್ಯಾಚರಣೆಯಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಅವನ ೨೦ ಮಂದಿ ಆಪ್ತ ಸಹಚರರು ಮೃತಪಟ್ಟಿದ್ದಾರೆ. ಒಸಾಮ ಬಿನ್ ಲಾಡೆನ್ ನ ಮೃತ ಶರೀರವನ್ನು ಸಮುದ್ರದಲ್ಲಿ ದಫನ್ ಮಾಡಿದ್ದಾರೆ. ಸದ್ಧಾಮ್ ಹುಸೇನ್ ತರಹ, ನೆಲದಲ್ಲಿ ಸಮಾಧಿ ಮಾಡಿದ್ದಿದ್ದರೆ, ಅವನ ಅನುಯಾಯಿಗಳು ಅಲ್ಲಿಗೆ ಭೇಟಿ ನೀಡಿ ತಮ್ಮ ಗೌರವವನ್ನು ಸಲ್ಲಿಸುವ ಪ್ರಮೇಯಗಳಿದ್ದವು. ಸನ್ ೨೦೦೧ರ ಸೆಪ್ಟೆಂಬರ್, ೧೧ ರಂದು 'ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್' ಮೇಲೆ ಹಲ್ಲೆಮಾಡಿ ಮಕ್ಕಳು ಹೆಣ್ಣು ಮಕ್ಕಳೂ ಸೇರಿದಂತೆ ಸಾವಿರಾರು ನಾಗರಿಕರನ್ನು ಕೊಂದ ಹಿನ್ನೆಯಲ್ಲಿ ಸುಮಾರು ೧೦ ವರ್ಷಗಳಿಂದ ಅಮೆರಿಕ ಈ ಸಂದರ್ಭಕ್ಕಾಗಿ ಹೊಂಚುಹಾಕಿದ್ದು, ಸಫಲತೆಯನ್ನು 'ಹಾಸಿಲ್' ಮಾಡಿದೆ.[೫] ಒಬಾಮ ತಮ್ಮ 'ವೈಟ್ ಹೌಸ್' ನಲ್ಲಿ, ದೀಪಾವಳಿ ಹಬ್ಬ ಆಚರಿಸಿದರು.

೨೦೧೫ ರ, ಭಾರತದ ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಬರಾಕ್ ಒಬಾಮ

[ಬದಲಾಯಿಸಿ]

ಅಮೆರಿಕದ ಅಧ್ಯಕ್ಷರ ೩ ದಿನಗಳ ಭಾರತದ ಭೇಟಿ ಭಾರತ ಮತ್ತು ಅಮೆರಿಕದ ಸಂಬಂಧಗಳನ್ನು ವೃದ್ಧಿಸುವಲ್ಲಿ ಸಹಕಾರಿಯಾಯಿತು.[೬]

ಉಲ್ಲೇಖಗಳು

[ಬದಲಾಯಿಸಿ]
  1. "Birth Certificate of Barack Obama". Department of Health, Hawaii. PolitiFact.com. August 8, 1961. Archived from the original on 2008-10-14. Retrieved 2008-12-12.
  2. Peace Prize 'a call to action unexpected pick surprises president,world,MSN, Outlook
  3. http://www.patheos.com/blogs/deaconsbench/2013/11/white-house-celebrates-diwali/
  4. 'Death of Osama Bin Laden Fast Facts', CNN Library,September 5, 2014
  5. 'Osama Bin Laden's death: How it happened', BBC News, 10 September 2012
  6. "ಸಂಯುಕ್ತ ಕರ್ನಾಟಕ ಪತ್ರಿಕೆ, ಬೆಂಗಳೂರು ಆವೃತ್ತಿ, ೨೮, ಜನವರಿ,೨೦೧೫,'ರೇಡಿಯೊದಲ್ಲಿ ನಮೋಬಾಮ ಮನದ ಮಾತು'". Archived from the original on 2016-03-06. Retrieved 2015-01-28.

ಇವುಗಳನ್ನೂ ನೋಡಿ

[ಬದಲಾಯಿಸಿ]