ಮಿಚೆಲ್ ಒಬಾಮ
ಮಿಚೆಲ್ ಒಬಾಮ | |
---|---|
2013ರ ಅಧೀಕೃತ ಚಿತ್ರ | |
ಯು.ಎಸ್.ಎ ರಾಷ್ಟ್ರಾಧ್ಯಕ್ಷರ ಪತ್ನಿ (ಮೊದಲ ಮಹಿಳೆ)
| |
ಅಧಿಕಾರ ಅವಧಿ ಜನವರಿ 20, 2009 – ಜನವರಿ 20, 2017 | |
ಪೂರ್ವಾಧಿಕಾರಿ | ಲಾರಾ ಬುಶ್ |
ವೈಯಕ್ತಿಕ ಮಾಹಿತಿ | |
ಜನನ | ಮಿಚೆಲ್ ಲಾವೊನ್ ರಾಬಿನ್ಸನ್ ಜನವರಿ ೧೭, ೧೯೬೪ ಚಿಕಾಗೊ, ಇಲಿನಾಯ್ಸ್, ಯು.ಎಸ್.ಎ |
ರಾಷ್ಟ್ರೀಯತೆ | ಅಮೆರಿಕನ್ |
ರಾಜಕೀಯ ಪಕ್ಷ | ಡೆಮಾಕ್ರಟಿಕ್ ಪಕ್ಷ, ಯು.ಎಸ್.ಎ |
ಸಂಗಾತಿ(ಗಳು) | ಬರಾಕ್ ಒಬಾಮ (ವಿವಾಹ ೧೯೯೨) |
ಸಂಬಂಧಿಕರು | ಕ್ರೈಗ್ ರಾಬಿನ್ಸನ್(ಬ್ಯಾಸ್ಕೆಟ್ ಬಾಲ್ ಆಟಗಾರ - ಸೋದರ) |
ಮಕ್ಕಳು | ಮಲಿಯಾ ಆನ್ ಒಬಾಮ(ಹು.1998) ನಟಾಶಾ ಒಬಾಮ(ಹು.2001) |
ವಾಸಸ್ಥಾನ | ಹೈಡ್ ಪಾರ್ಕ್, ಚಿಕಾಗೊ,ಯು.ಎಸ್.ಎ |
ಅಭ್ಯಸಿಸಿದ ವಿದ್ಯಾಪೀಠ | ಪ್ರಿನ್ಸ್ಟನ್ ವಿಶ್ವವಿದ್ಯಾಲಯ(1985) ಹಾರ್ವರ್ಡ್ ಕಾನೂನು ಶಾಲೆ(1988) |
ಉದ್ಯೋಗ | ವಕೀಲೆ |
ಧರ್ಮ | ಪ್ರೊಟೆಸ್ಟೆಂಟ್ ಕ್ರೈಸ್ತ |
ಸಹಿ |
ಮಿಚೆಲ್ ಲಾವಾಘ್ನ್ ರಾಬಿನ್ಸನ್ ಒಬಾಮ (ಜನನ ಜನವರಿ ೧೭, ೧೯೬೪) ಪ್ರಸ್ತುತದಲ್ಲಿ ಅಮೆರಿಕದಲ್ಲಿ ೪೪ನೆಯ ಅಮೆರಿಕದ ಅಧ್ಯಕ್ಷರಾಗಿರುವ ಬರಾಕ್ ಒಬಾಮರ ಪತ್ನಿ; ಇವರು ಅಮೆರಿಕ ಕಂಡ ಮೊದಲ ಆಫ್ರಿಕನ್-ಅಮೆರಿಕನ್ ಯುನೈಟೆಡ್ ಸ್ಟೇಟ್ಸ್ ನ ಪ್ರಥಮ ಮಹಿಳೆ (ಅಮೆರಿಕದಲ್ಲಿ ಅಧ್ಯಕ್ಷರನ್ನು ಪ್ರಥಮ ಪೌರನೆಂದೂ, ಅವರ ಹೆಂಡತಿಯನ್ನು ಪ್ರಥಮ ಮಹಿಳೆ ಎಂದೂ ಕರೆಯುತ್ತಾರೆ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ . ಷಿಕಾಗೋದ ದಕ್ಷಿಣ ಭಾಗದಲ್ಲಿ ತನ್ನ ಜೀವಿತದ ಆದಿಯನ್ನು ಕಳೆದ ಒಬಾಮ ಪ್ರಿನ್ಸ್ ಟನ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿ ನಂತರ ಹಾರ್ವರ್ಡ್ ಕಾನೂನು ವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ಚಿಕಾಗೋಗೆ ಮರಳಿ ಸಿಡ್ಲೇ ಆಸ್ಟಿನ್ ಎಂಬ ಕಾನೂನು ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದರು; ಈ ಸಂಸ್ಥೆಯಲ್ಲಿಯೇ ಅವರು ತಮ್ಮ ಬಾವಿ ಪತಿ ಒಬಾಮರನ್ನು ಭೇಟಿಯಾದರು. ನಂತರ ಅವರು ಷಿಕಾಗೋದ ಮೇಯರ್ ರಿಚರ್ಡ್ ಎಂ. ಡಾಲೀಯವರ ಸಿಬ್ಬಂದಿವರ್ಗದ ಅಂಗವಾಗಿ ಮತ್ತು ಯೂನಿವರ್ಸಿಟಿ ಆಫ್ ಷಿಕಾಗೋ ಮೆಡಿಕಲ್ ಸೆಂಟರ್ ನಲ್ಲಿ ಉದ್ಯೋಗ ಮುಂದುವರಿಸಿದರು. ೨೦೦೭ ಮತ್ತು ೨೦೦೮ರಲ್ಲಿ ತಮ್ಮ ಪತಿಯ ಅಧ್ಯಕ್ಷೀಯ ಸ್ಥಾನಕ್ಕೆ ನಡೆಸಿದ ಪ್ರಚಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದಲ್ಲದೆ ೨೦೦೮ರ ಡೆಮೋಕ್ರಾಟಿಕ್ ನ್ಯಾಷನಲ್ ಕಂವೆಂಷನ್ ನ ಪ್ರಾಸ್ತಾವಿಕ ನುಡಿಯನ್ನೂ ಪ್ರಸ್ತುತ ಪಡಿಸಿದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು, ಮಾಲಿಯಾ ಮತ್ತು ಸಾಶಾ;ಇವರು ಒರೆಗಾವ್ ಸ್ಟೇಟ್ ಯೂನಿವರ್ಸಿಟಿಯ ಪುರುಷರ ಬ್ಯಾಸ್ಕೆಟ್ ಬಾಲ್ ತಂಡದ ಶಿಕ್ಷಕರಾದ ಕ್ರೈಗ್ ರಾಬಿನ್ ಸನ್ ರ ತಂಗಿ. ಒಬ್ಬ ಸೆನೇಟರ್ ರ ಪತ್ನಿಯಾಗಿ, ಹಾಗೂ ಕ್ರಮೇಣ ಮೊದಲ ಮಹಿಳೆಯಾಗಿ ಅವರು ಮಹಿಳೆಯರಿಗೆ ಆದರ್ಶಪ್ರಾಯರೂ, ಫ್ಯಾಷನ್ ನ ಸಾಕಾರಮೂರ್ತಿಯೂ ಆಗಿರುವುದಲ್ಲದೆ ಬಡತನದ ಅರಿವು ಮತ್ತು ಆರೋಗ್ಯಕರ ಆಹಾರಸೇವನೆಯನ್ನು ಪ್ರತಿಪಾದಿಸುವ ಗಮನಾರ್ಹ ವಕೀಲೆಯೂ ಆಗಿದ್ದಾರೆ.
ಕುಟುಂಬ ಮತ್ತು ವಿದ್ಯೆ
[ಬದಲಾಯಿಸಿ]ಮಿಚೆಲ್ ಲಾವಾಘ್ನ್ ರಾಬಿನ್ಸನ್ ಹುಟ್ಟಿದ್ದು ಜನವರಿ ೧೭, ೧೯೬೪ರಂದು; ಜನ್ಮಸ್ಥಳ ಷಿಕಾಗೋದ ಇಲಿನಾಯ್ಸ್; ತಂದೆ ಫ್ರೇಸರ್ ರಾಬಿನ್ಸನ್ III,[೧] ಒಬ್ಬ ನೀರು ಉದ್ದಿಮೆಯ ಸಂಸ್ಥೆಯ ಉದ್ಯೋಗಿ ಹಾಗೂ ಡೆಮೋಕ್ರಾಟಿಕ್ ವಿಭಾಗದ ಕ್ಯಾಪ್ಟನ್. ಇವರ ತಾಯಿ ಮರಿಯನ್ (ಜನ್ಮನಾಮ ಷೀಲ್ಡ್ಸ್), a secretary at ಸ್ಪೀಗೆಲ್ಸ್ ಕ್ಯಾಟಲಾಗ್ ಸ್ಟೋರ್ ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.[೨] ಮಿಚೆಲ್ ಪ್ರೌಢಶಾಲೆಯ ಮೆಟ್ಟಿಲು ಹತ್ತುವವರೆಗೆ ಅವರ ತಾಯಿ ಪೂರ್ಣಪ್ರಮಾಣದ ಗೃಹಿಣಿಯೇ ಆಗಿದ್ದರು.[೩] ರಾಬಿನ್ಸನ್ ಮತತು ಷೀಲ್ಡ್ಸ್ ಕುಟುಂಬಗಳು ತಮ್ಮ ಮೂಲವ[೪] ನ್ನು ಅಮೆರಿಕದ ದಕ್ಷಿಣದಲ್ಲಿ ನಾಗರಿಕರ ಯುದ್ಧ (ಸಿವಿಲ್ ವಾರ್)ಕ್ಕೂ ಮುಂಚಿನ ದಿನಗಳಲ್ಲಿ ವಾಸಿಸುತ್ತಿದ್ದ ಆಫ್ರಿಕನ್ ಅಮೆರಿಕನ್ನರವರೆಗೆ ದಾಖಲಿಸಿದ್ದಾರೆ. ಇವರ ತಂದೆಯ ಕಡೆಯ ತಾತನ ತಾತನಾದ ಜಿಮ್ ರಾಬಿನ್ಸನ್ ಒಬ್ಬ ಅಮೆರಿಕನ್ ಗುಲಾಮರಾಗಿ ದಕ್ಷಿಣ ಕೆರೋಲಿನಾರಾಜ್ಯದಲ್ಲಿದ್ದರು,[೫][೬] ಇಂದಿಗೂ ಆ ಸ್ಥಳದಲ್ಲಿ ಅವರ ತಂದೆಯ ಕೆಲವು ಸಂಬಂಧಿಕರು ವಾಸಿಸುತ್ತಿದ್ದಾರೆ.[೭][೮] ಅವರ ತಾಯಿಯ ಅಜ್ಜಿಯ ಅಜ್ಜಿಯಾದ ಮೆಲ್ವಿನಿಯಾ ಷೀಲ್ಡ್ಸ್ ಸಹ ಗುಲಾಮರಾಗಿದ್ದು, ಒಬ್ಬ ಬಿಳಿಯನಿಗೆ ಬಸಿರಾಗಿದ್ದರು. ಆ ಬಿಳಿಯನ ಹೆಸರು ಹಾಗೂ ಇವರೀರ್ವರ ಸಂಬಂಧದ ಬಗ್ಗೆ ಇದ್ದ ಮಾಹಿತಿಗಳು ಕಳೆದುಹೋಗಿವೆ. ಅವರು ಮಿಚೆಲ್ ನ ತಾಯಿಯ ಅಜ್ಜನ ಅಜ್ಜ, ಉಭಯ-ಪಂಗಡಿಗ ಡಾಲ್ಫಸ್ ಟಿ. ಷೀಲ್ಡ್ಸ್ ಗೆ ಜನ್ಮವಿತ್ತರು.[೯] ಅವರು ಷಿಕಾಗೋದ ದಕ್ಷಿಣ ತೀರದ ಸಮುದಾಯ ಪ್ರದೇಶದಲ್ಲಿನ ಯೂಕ್ಲಿಡ್ ಸ್ಟ್ರೀಟ್ ಎಂಬ ಬೀದಿಯಲ್ಲಿರುವ ಎರಡಂತಸ್ತಿನ ಮನೆಯೊಂದರಲ್ಲಿ ಬೆಳೆದವರು. ಅವರ ಮಾತಾಪಿತೃಗಳು ಆ ಮನೆಯ ಎರಡನೆಯ ಅಂತಸ್ತಿನಲ್ಲಿದ್ದ ಒಂದು ಅಪಾರ್ಟ್ ಮೆಂಟನ್ನು, ನೆಲ ಅಂತಸ್ತಿನಲ್ಲಿದ್ದ ಅವರ ಚಿಕ್ಕಜ್ಜಿ ಹಾಗೂ ಆ ಕಟ್ಟಡದ ಮಾಲಿಕರಿಂದ ಬಾಡಿಗೆಗೆ ಪಡೆದರು.[೨][೧೦][೧೧][೧೨] "ನಾನು ಬೆಳೆದದ್ದು ಒಂದು ಸಾಂಪ್ರದಾಯಿಕ ವಾತಾವರಣದಲ್ಲಿ" ಎನ್ನುತ್ತಾರೆ ಮಿಚೆಲ್ "ಅಮ್ಮ ಮನೆಯಲ್ಲಿರುತ್ತಿದ್ದರು, ಅಪ್ಪ ಕೆಲಸಕ್ಕೆ ಹೋಗುತ್ತಿದ್ದರು, ಊಟದ ಮೇಜಿನಮೇಲೆ ಊಟ ತಯಾರಾಗಿರುತ್ತಿತ್ತು".[೧೩] ಇವರ ಕುಟುಂಬವು ಮಾನೋಪಲಿ ಆಡುವುದು ಮತ್ತು ಓದುವಿಕೆಯಲ್ಲಿ ಸಂತೋಷವನ್ನು ಕಾಣುತ್ತಿದ್ದಿತು ಮತ್ತು ಅವನ್ನೇ ಹಂಚಿಕೊಳ್ಳುತ್ತಿದ್ದಿತು.[೧೪] ಈ ಕುಟುಂಬವು ಪ್ರಾರ್ಥನೆಗೆಂದು ಸಮೀಪದ ಸೌತ್ ಶೋರ್ ಮೆಥಾಡಿಸ್ಟ್ ಚರ್ಚ್ ಗೆ ತೆರಳುತ್ತಿದ್ದಿತು.[೧೦] ರಾಬಿನ್ಸನ್ ಕುಟುಂಬವು ಮಿಚಿಗನ್ ನ ವೈಟ್ ಕ್ಲೌಡ್ ಎಂಬ ಹಳ್ಳಿಯ ಮನೆಯಲ್ಲಿ ತಮ್ಮ ರಜಾ ದಿನಗಳನ್ನು ಕಳೆಯುತ್ತಿದ್ದಿತು.[೧೦] ಮಿಚೆಲ್ ಮತ್ತು ಅವರ ಸಹೋದರ ಕ್ರೈಗ್ (ಮಿಚೆಲ್ ಗಿಂತಲೂ ಇಪ್ಪತ್ತೊಂದು ತಿಂಗಳು ದೊಡ್ಡವನು) ಎರಡನೆಯ ಗ್ರೇಡನ್ನು ತಟಾಯಿಸಿದರು. ಆರನೆಯ ಗ್ರೇಡ್ ತಲುಪುವ ವೇಳೆಗೆ ಮಿಚೆಲ್ ಬ್ರೈನ್ ಮಾವ್ರ್ ಎಲಿಮೆಂಟರಿ ಶಾಲೆ(ನಂತರ ಬೌಷೆಟ್ ಅಕಾಡೆಮಿಯೆಂದು ನಾಮಾಂತರಗೊಂಡಿತು)ಯಲ್ಲಿ ದತ್ತ ತರಗತಿಯನ್ನು ಸೇರಿದರು.[೧೫] ಅವರು ಷಿಕಾಗೋದ ಮೊದಲ ಮ್ಯಾಗ್ನೆಟ್ ಹೈ ಸ್ಕೂಲ್ ಆದ ವಿಟ್ನೀ ಯಂಗ್ ಹೈ ಸ್ಕೂಲ್[೧೬] ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ಆ ಶಾಲೆಯ ಶ್ರೇಷ್ಠ ವಿದ್ಯಾರ್ಥಿಗಳ ಪಟ್ಟಿಯನ್ನು ನಾಲ್ಕು ವರ್ಷಗಳ ಅಲಂಕರಿಸಿ, ಮುಂದುವರಿದ ಉದ್ಯೋಗಾವಕಾಶಭರಿತ ತರಗತಿಗಳಲ್ಲಿ ವ್ಯಾಸಂಗ ಮುಂದುವರಿಸಿದರು ಮತ್ತು ನ್ಯಾಷನಲ್ ಆನರ್ ಸೊಸೈಟಿಯಲ್ಲಿ ವಿದ್ಯಾರ್ಥಿಗಳ ಕೌನ್ಸಿಲ್ ನ ಖಜಾಂಚಿಯಾಗಿ ಸೇವೆ ಸಲ್ಲಿಸಿದರು.[೨] ದಕ್ಷಿಣದ ತುದಿಯಲ್ಲಿದ ಅವೆ ಮನೆಯಿಂದ ಪಶ್ಚಿಮದ ತುದಿಯ ಹತ್ತಿರಕ್ಕೆ ತಲುಪಲು ಅವರಿಗೆ ಮೂರುಗಂಟೆಗಳ ಸಮಯ ಬೇಕಾಗುತ್ತಿತ್ತು.[೧೭] ಅವರು ಜೆಸ್ಸೆ ಜ್ಯಾಕ್ಸನ್ ಜೂನಿಯರ್ ನ ತಂಗಿ ಹಾಗೂ ಜೆಸ್ಸೆ ಜ್ಯಾಕ್ಸನ್ ರ ಮಗಳಾದ ಸಾಂಟಿತಾ ಜ್ಯಾಕ್ಸನ್ ರ ಸಹಪಾಠಿಯಾಗಿದ್ದರು[೧೪] ೧೯೮೧ರಲ್ಲಿ ಅವರು ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಲ್ಲಿ ಎರಡನೆಯವರಾಗಿ ತರಗತಿಯ ಸಲ್ಯೂಟೇಟೋರಿಯನ್(ವ್ಯಾಸಂಗಾನಂತರದ ಸ್ವಾಗತಭಾಷಣ ಅಥವಾ ವಂದನಾರ್ಪಣೆಗೈವ ವಿದ್ಯಾರ್ಥಿ/ನಿ) ಆಗಿ ತಮ್ಮ ಹೈಸ್ಕೂಲ್ ವ್ಯಾಸಂಗವನ್ನು ಮುಗಿಸಿದರು.[೧೭] ಮಿಚೆಲ್ ಗೆ ತನ್ನ ಸಹೋದರನನ್ನು ಹಿಂಬಾಲಿಸಿ ಪ್ರಿನ್ಸ್ ಟನ್ ಯೂನಿವರ್ಸಿಟಿ ಸೇರುವ ಮನಸ್ಸಾಯಿತು;[೩] ಕ್ರೈಗ್ ತಮ್ಮ ಪದವಿಯನ್ನ ೧೯೮೩ರಲ್ಲಿ ಪಡೆದರು. ಪ್ರಿನ್ಸ್ ಟನ್ ನಲ್ಲಿ ಅವರು ಫ್ರೆಂಚ್ ಭಾಷೆಯನ್ನು ಹೇಳಿಕೊಡುವ ರೀತಿ ಸರಿಯಿಲ್ಲವೆಂದು ವಾದಿಸಿದರು; ಅದು ಹೆಚ್ಚು ಸಂಭಾಷಣಾಯುಕ್ತವಾಗಿರಬೇಕೆಂದು ಅವರ ಅನಿಸಿಕೆಯಾಗಿತ್ತು.[೧೮] ಪದವಿ ಪೂರ್ಣಗೊಳಿಸಲು ಒಂದು ಪ್ರಬಂಧವನ್ನು ಮಂಡಿಸುವುದು ಅಗತ್ಯವಾಗಿದ್ದು, ಮಿಚೆಲ್ "ಪ್ರಿನ್ಸ್ ಟನ್ ಎಜುಕೇಟೆಡ್ ಬ್ಲ್ಯಾಕ್ಸ್ ಎಂಡ್ ದ ಬ್ಲ್ಯಾಕ್ ಕಮ್ಯೂನಿಟಿ" (ಪ್ರಿನ್ಸ್ ಟನ್ ನಲ್ಲಿ ವ್ಯಾಸಂಗ ಮಾಡಿದ ಕರಿಯರು ಮತ್ತು ಕರಿಯರ ಸಮುದಾಯ) ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದರು.[೧೯][೨೦] "ನನಗೆ ಆಘಾತವಾದ ನೆನಪಿದೆ," ಎನ್ನುತ್ತಾರೆ ಮಿಚೆಲ್, "ಕಾಲೇಜಿನ ವಿದ್ಯಾರ್ಥಿಗಳುBMWಗಳಲ್ಲಿ ಬರುತ್ತಿದ್ದರು! ನನಗೆ BMWಗಳನ್ನು ಹೊಂದಿದ್ದ ಮಾತಾಒಉತೃಗಳು ಸಹ ಪರಿಚಯವಿರಲಿಲ್ಲ."[೧೭] ಪ್ರಿನ್ಸ್ ಟನ್ ನಲ್ಲಿದ್ದಾಗ ಅವರು ಥರ್ಡ್ ವರ್ಲ್ಡ್ ಸೆಂಟರ್ (ಈಗಿನ ಕಾರ್ಲ್ ಎ. ಫೀಲ್ಡ್ಸ್ ಸೆಂಟರ್) ಎಂಬ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪರವಾದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ತಂಡವನ್ನು ಸೇರಿದರು; ಆ ತಂಡವು ಒಂದು ದೈನಿಕ ಸೇವಾ ಕೇಂದ್ರವನ್ನು ನಡೆಸುತ್ತಿದ್ದು ಅದರಲ್ಲಿ ಶಾಲಾನಂತರದ ಅವಧಿಯಲ್ಲಿ ಪಾಠ ಹೇಳಿಕೊಡುವುದೂ ಸೇರಿತ್ತು.[೨೧] ರಾಬಿನ್ಸನ್ ಸಮಾಜಶಾಸ್ತ್ರವನ್ನು ಪ್ರಮುಖವಾಗಿಯೂ, ಆಫ್ರಿಕನ್-ಅಮೆರಿಕನ್ ಅಧ್ಯಯನವನ್ನು ಹೆಚ್ಚುವರಿಯಾಗಿಯೂ ವ್ಯಾಸಂಗ ಮಾಡಿ ಪದವಿ ಪಡೆದುದೇ ಅಲ್ಲದೆ ಕಮ್ ಲಾಡೆ (ಉನ್ನತ ಶ್ರೇಣಿಯೊಂದಿಗೆ) ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯಲ್ಲಿ ತೇರ್ಗಡೆ ಹೊಂದಿದರು.[೨][೨೨] ಅವರು ತಮ್ಮ ಜ್ಯೂರಿಸ್ ಡಾಕ್ಟರ್ (J.D.) ಪದವಿಯನ್ನು ಹಾರ್ವರ್ಡ್ ಕಾನೂನು ವಿದ್ಯಾಲಯದಿಂದ ೧೯೮೮ರಲ್ಲಿ ಪಡೆದರು.[೨೩] ಹಾರ್ವರ್ಡ್ ನಲ್ಲಿ ಅವರು ಅಲ್ಪಸಂಖ್ಯಾತರ ಪೈಕಿ ಇರುವ ವೃತ್ತಿಪರರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲು ಆಗ್ರಹಪಡಿಸುವಂತಹ ಪ್ರದರ್ಶನಗಳನ್ನು ಹಮ್ಮಿಕೊಂಡರು[೨೪] ಮತ್ತು ಹಾರ್ವರ್ಡ್ ಲೀಗಲ್ ಏಯ್ಡ್ ಬ್ಯೂರೋದಲ್ಲಿ ಕೆಲಸ ಮಾಡುತ್ತಾ ಕಡಿಮೆ ಆದಾಯದ ಬಾಡಿಗೆದಾರರ ಗೃಹಸಂಬಂಧಿತ ಕೇಸುಗಳಲ್ಲಿ ಸಹಾಯ ಒದಗಿಸಿದರು.[೨೫] ಅವರು ಸ್ನಾತಕೋತ್ತರ ಪದವಿ ಪಡೆದ ಮೂರನೆಯ ಮೊದಲ ಮಹಿಳೆಯಾಗಿದ್ದಾರೆ; ಅವರ ಹಿಂದಿನ ಮೊದಲ ಮಹಿಳೆಯರಾದ ಜಿಲೆರಿ ರೋಧಾಮ್ ಕ್ಲಿಂಟನ್ ಮತ್ತು ಲಾರಾ ಬುಷ್ ಸಹ ಸಹ ಸ್ನಾತಕೋತ್ತರ ಪದವೀಧರರೇ.[೨೬] ಜುಲೈ ೨೦೦೮,ರಲ್ಲಿ ಒಬಾಮ ೧೦೦ ವರ್ಷ ಹಳೆಯ ಕಪ್ಪು ವಿದ್ಯಾರ್ಥಿನಿಯರ ಸಂಢ (ಸೊರೋರಿಟಿ)ವಾದ ಆಲ್ಫಾ ಕಪ್ಪಾ ಆಲ್ಫಾದ ಗೌರವ ಸದಸ್ಯರಾಗುವ ಆಹ್ವಾನವನ್ನು ಸ್ವೀಕರಿಸಿದರು; ಮಿಚೆಲ್ ಓದುತ್ತಿದ್ದಾಗ ಪ್ರಿನ್ಸ್ ಟನ್ ನಲ್ಲಿ ಯಾವುದೇ ಸಕ್ರಿಯ ಪದವಿಪೂರ್ವ ವಿಭಾಗ ಇರಲಿಲ್ಲ.[೨೭]
ಸಿಡ್ಲೇ ಆಸ್ಟಿನ್ ಕಾನೂನು ಸಂಸ್ಥೆಯಲ್ಲಿ, ಕೆಲವೇ ಆಫ್ರಿಕನ್ ಅಮೆರಿಕನ್ ಜನಗಳ ಪೈಕಿ ಇದ್ದು ಮಿಚೆಲ್ ಅದೇ ಪಂಗಡಕ್ಕೆ ಸೇರಿದ ಬರಾಕ್ ಒಬಾಮರನ್ನು ಪ್ರಪ್ರಥಮವಾಗಿ ಭೇಟಿಯಾದರು(ಅವರು ಕೆಲವೊಮ್ಮೆ ತಾವಿಬ್ಬರೇ ಆ ಪಂಗಡಕ್ಕೆ ಸೇರಿದವರಿದ್ದುದು ಎಂದು ಹೇಳಿರುವರಾದರೂ ಇತರರು ಬೇರೆಬೇರೆ ವಿಭಾಗಗಳಲ್ಲಿ ಆ ಪಂಗಡದವರು ಇದ್ದರೆಂದು ತೋರಿಸಿಕೊಟ್ಟಿದ್ದಾರೆ)[೨೮] ಹಾಗೂ ಮಿಚೆಲ್ ರನ್ನು ಬರಾಕ್ ಒಬಾಮರನ್ನು ಸಮ್ಮರ್ ಅಸೋಸಿಯೇಟ್ (ಬೇಸಿಗೆಯ ಸಹೋದ್ಯೋಗಿ)ಆಗಲು ಮಾರ್ಗದರ್ಶನ ನೀಡುವ ಹೊಣೆ ಹೊರಿಸಲಾಯಿತು.[೨೯] ಅವರ ಸಂಬಂಧವು ವ್ಯಾವಹಾರಿಕ ಭೋಜನದೊಡನೆ ಆರಂಭವಾಗಿ ಸಮುದಾಯಿಕ ಸಂಸ್ಥೆಯ ಸಭೆಯಲ್ಲಿ ಮುಂದುವರೆಯಿತು; ಆ ಸಭೆಯಲ್ಲಿ ಬರಾಕ್ ಮಿಚೆಲ್ ರ ಗಮನ ಸೆಳೆದರು.[೩೦] ಇವರ ಮೊದಲ ಸ್ನೇಹಯುತ ಸುತ್ತಾಟವೆಂದರೆಸ್ಪೈಕ್ ಲೀ ನಟಿಸಿದ ಚಿತ್ರ ಡೂ ದ ರೈಟ್ ಥಿಂಗ್ ವೀಕ್ಷಿಸಿದ್ದು.[೩೧] ಈರ್ವರ ಮದುವೆ ಅಕ್ಟೋಬರ್ ೧೯೯೨ರಲ್ಲಿ ಜರುಗಿತು;[೩೦] ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಮಾಲಿಯಾ ಆನ್ (ಜನನ ೧೯೯೮) ಮತ್ತು ನಟಾಶಾ (ಸಾಶಾ ಎಂದೇ ಪ್ರಸಿದ್ಧಿ, ಜನನ ೨೦೦೧).[೩೨] ಯು.ಎಸ್. ಸೆನೇಟ್ ಗೆ ಒಬಾಮ ಚುನಾಯಿತರಾದನಂತರವೂ ಒಬಾಮ ಕುಟುಂಬವು ಷಿಕಾಗೋದ ದಕ್ಷಿಣ ಭಾಗದಲ್ಲಿಯೇ ವಾಸಿಸುತ್ತಿದ್ದು, ವಾಷಿಂಗ್ಟನ್ ಡಿ.ಸಿ.ಗೆ ಹೋಗುವ ಬದಲು ಅಲ್ಲಯೇ ಉಳುಯುವ ತೀರ್ಮಾನ ಕೈಗೊಂಡಿತು.ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷ ಸ್ಥಾನಕ್ಕೆಸ್ಪರ್ಧಿಸಿದ ತನ್ನ ಪತಿಯ ೨೦೦೮ರ ಚುನಾವಣಾ ಪ್ರಸಾರ(/೧)ದುದ್ದಕ್ಕೂ ಮಿಚೆಲ್ "ವಾರಕ್ಕೆ ಒಂದು ರಾತ್ರಿಮಾತ್ರ ಹೊರಗಿರುವ ನಿರ್ಧಾರ ಕೈಗೊಂಡರು - ವಾರಕ್ಕೆ ಎರಡು ದಿನ ಮಾತ್ರ ಪ್ರಚಾರಕಾರ್ಯದಲ್ಲಿ ಕೈಗೊಳ್ಳುವುದು ಹಾಗೂ ಎರಡನೆಯ ದಿನದ ಕೊನೆಗೆ ಮನೆ ಸೇರಿಬಿಡುವುದು" ಈ ನಿರ್ಧಾರ ವರ ಮಕ್ಕಳಿಗಾಗಿ ಕೈಗೊಂಡಂತಹದ್ದಾಗಿತ್ತು.[೩೩] ಅವರು ಒರೆಗಾವ್ ಸ್ಟೇಟ್ ಯೂನಿವರ್ಸಿಟಿಯ ಪುರುಷ ಬ್ಯಾಸ್ಕೆಟ್ ಬಾಲ್ ತರಬೇತುದಾರ ಕ್ರೈಗ್ ರಾಬಿನ್ಸನ್ ರ ತಂಗಿ. ಅವರು ದೇಶದ ಪ್ರಮುಖ ಕರಿಯ ರಬ್ಬಿಗಳಲ್ಲಿ ಒಬ್ಬರಾದ ರಬ್ಬಿ ಕೇಪರ್ಸ್ ಸಿ. ಫನ್ನೇ ಜೂನಿಯರ್ ಅವರ ಸೋದರ ಸಂಬಂಧಿ. ಮಿಚೆಲ್ ಒಮ್ಮೆ, ತನ್ನ ಮೊದಲ ಔದ್ಯೋಗಿಕ ಹೆಜ್ಜೆ ಇಡುವ ಸಂದರ್ಭದಲ್ಲಿ, ಆಗಿನ ತನ್ನ ಪ್ರಿಯಕರರಾದ ಒಬಾಮ ತನ್ನ ಸಂಭಾವ್ಯ ಬಾಸ್ ವ್ಯಾಲರೀ ಜಾರೆಟ್ ರನ್ನು ಭೇಟಿ ಮಾಡಲೆಂದು ಆಶಿಸಿದರು.[೧೩] ಈಗ ಜಾರೆಟ್ ಆಕೆಯ ಪತಿಯ ಆಪ್ತ ಸಲಹೆಗಾರರಲ್ಲೊಬ್ಬರು.[೩೪][೩೫] ಇವರ ವೈವಾಹಿಕ ಜೀವನದಲ್ಲಿ ಏರುಪೇರುಗಳಿದ್ದವು. ಬೆಳೆಯುತ್ತಿರುವ ಕುಟುಂಬ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಪತಿಯ ಬೆಳವಣಿಗೆಗಳೆರಡನ್ನೂ ಸರಿತೂಗಿಸಿಕೊಂಡುಹೋಗುವುದರ ಬಗ್ಗೆ ಸಾಕಷ್ಟು ವಾದಗಳುಂಟಾಗುತ್ತಿದ್ದವು. ಬರಾಕ್ ಒಬಾಮ ತಮ್ಮ ಎರಡನೆಯ ಪುಸ್ತಕ, The Audacity of Hope: Thoughts on Reclaiming the American Dream ದಲ್ಲಿ "ಆಯಾಸ ಮತ್ತು ಒತ್ತಡಕ್ಕೊಳಗಾಗಿ ನಮಗೆ ಪ್ರೀತಿಗಿರಲಿ, ಮಾತುಕತೆಗೂ ಅವಕಾಶ ಒದಗುತ್ತಿರಲಿಲ್ಲ" ಎಂದು ಬರೆದಿದ್ದಾರೆ.[೩೬] ಆದಾಗ್ಯೂ, ತಮ್ಮ ಕುಟುಂಬದ ಜವಾಬ್ದಾರಿಗಳು ಮತ್ತು ಕಾರ್ಯಬಾಹುಳ್ಯದ ನಡುವೆಯೂ ತಮಗಾಗಿಯೇ ಒಂದಿಷ್ಟು ಸಮಯವನ್ನು ತೆಗೆದಿರಿಸಿಕೊಳ್ಳಲು ಇಬ್ಬರೂ ಯತ್ನಿಸುತ್ತಾರೆ.[೩೭] ಒಬಾಮರ ಮಕ್ಕಳು ಯೂನಿವರ್ಸಿಟಿ ಆಫ್ ಷಿಕಾಗೋ ಲೆಬಾರೇಟರೀ ಸ್ಕೂಲ್ಸ್ ಎಂಬ ಖಾಸಗಿ ಶಾಲೆಯನ್ನು ಸೇರಿದರು.[೩೮] ಆ ಶಾಲೆಯ ಮಂಡಳಿಯ ಸದಸ್ಯರಾದ ಮಿಚೆಲ್ ಅದೇ ಯೂನಿವರ್ಸಿಟಿಯ ಶಿಕ್ಷಕರ ಮಕ್ಕಳಿಗೆ ಹೆಚ್ಚು ಸೀಟುಗಳನ್ನು ಕಾಯ್ದಿರಿಸಲು ಯತ್ನಿಸಿದ ಯೂನಿವರ್ಸಿಟಿ ಆಫ್ ಷಿಕಾಗೋದ ಸಂಪರ್ಕ ಹೊಂದಿದ್ದ ಮಂಡಳಿಯ ಸದಸ್ಯರೊಡನೆ ಶಾಲೆಯಲ್ಲಿ ಹೆಚ್ಚಿನ ವೈವಿಧ್ಯತೆ ಕಾಪಾಡುವ ಸಲುವಾಗಿ ಸೆಣಸಿದರು. ತತ್ಫಲವಾಗಿ ಶಾಲೆಯನ್ನು ವಿಸ್ತಾರಗೊಳಿಸುವ ಯೋಜನೆ ರೂಪಗೊಂಡಿತು.[೩] ಈಗ ಒಬಾಮ ದಂಪತಿಗಳ ಮಕ್ಕಳು ವಾಷಿಂಗ್ಟನ್ ನಲ್ಲಿರುವ ಸಿಡ್ವೆಲ್ ಫ್ರೆಂಡ್ಸ್ ಸ್ಕೂಲ್l ನಲ್ಲಿ ಓದುತ್ತಿದ್ದಾರೆ; ಇದಕ್ಕೆ ಮುನ್ನ ಜಾರ್ಜ್ ಟೌನ್ ಡೇ ಸ್ಕೂಲ್ ನಲ್ಲಿಯೂ ಓದುವ ಆಲೋಚನೆ ಹೊಂದಿದ್ದರು.[೩೯][೪೦] ದ ಎಲ್ಲೆನ್ ಡಿಜೆನೆರೆಸ್ ಷೋ ನಡೆಸಿದ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ ತಾವು ಮತ್ತೆ ಮಕ್ಕಳನ್ನು ಹೊಂದಲು ಬಯಸುವುದಿಲ್ಲ ಎಂದು ಹೇಳಿದರು.[೪೧] ಇವರಿಗಿಂತಲೂ ಮೊದಲು ಪ್ರಥಮ ಮಹಿಳೆಯರಾಗಿದ್ದ ಲಾರಾ ಬುಷ್, ರೋಸಲಿನ್ ಕಾರ್ಟರ್ ಮತ್ತು ಹಿಲೆರಿ ರೋಧಮ್ ಕ್ಲಿಂಟನ್ ವೈಟ್ ಹೌಸ್ ನಲ್ಲಿ ಮಕ್ಕಳನ್ನು ಬೆಳೆಸುವ ಬಗ್ಗೆ ಇವರಿಗೆ ಸಲಹೆಗಳನ್ನಿತ್ತಿದ್ದಾರೆ.[೪೦] ಮಿಚೆಲ್ ರ ತಾಯಿ ಮೇರಿಯನ್ ರಾಬಿನ್ಸನ್, ಮಕ್ಕಳನ್ನು ನೋಡಿಕೊಳ್ಳಲೆಂದು ವೈಟ್ ಹೌಸ್ ನಲ್ಲಿಯೇ ತಂಗಿದ್ದಾರೆ.[೪೨]
ವೃತ್ತಿಜೀವನ
[ಬದಲಾಯಿಸಿ]ಕಾನೂನು ವಿದ್ಯೆಯನ್ನು ಮುಗಿಸಿದ ನಂತರ ಮಿಚೆಲ್ ಷಿಕಾಗೋದಲ್ಲಿರುವ ಕಾನೂನು ಸಂಸ್ಥೆಯಾದ ಸಿಡ್ಲೇ ಆಸ್ಟಿನ್ ನಲ್ಲಿ ಕಾರ್ಯವೆಸಗುತ್ತಿದ್ದಾಗ ಅವರ ಬಾವಿ ಪತಿಯನ್ನು ಭೇಟಿಯಾದರು. ಆ ಸಂಸ್ಥೆಯಲ್ಲಿ ಅವರು ಮಾರ್ಕೆಟಿಂಗ್ ಮತ್ತು ಇಂಟೆಲೆಕ್ಷುಯಲ್ ಪ್ರಾಪರ್ಟಿ ವಿಭಾಗಗಳಲ್ಲಿ ಕಾರ್ಯವೆಸಗಿದರು.[೨] ೧೯೯೧ರಲ್ಲಿ ಅವರು ಮೇಯರ್ ರ ಸಹಾಯಕರಾಗಿ ಸಾರ್ವಜನಿಕ ವಿಭಾಗೀಯ ಹುದ್ದೆಗಳನ್ನು ಷಿಕಾಗೋ ನಗರ ಸರ್ಕಾರದಲ್ಲಿ ಅಲಂಕರಿಸಿದುದಲ್ಲದೆ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಗಳಲ್ಲಿಯೂ ಸಹಾಯಕ ಕಮಿಷನರ್ ಆಗಿ ಸೇವೆ ಸಲ್ಲಿಸಿದರು. ೧೯೯೩ರಲ್ಲಿ ಅವರು ಷಿಕಾಗೋ ಆಫೀಸ್ ಆಫ್ ಪಬ್ಲಿಕ್ ಆಲೀಸ್ ಎಂಬ ಲಾಭರಹಿತ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿಯಾಗಿ ಯುವಕರು ಸಾಮಾಜಿಕ ವಿಷಯಗಳಿಗಾಗಿ ಲಾಭರಹಿತ ಗುಂಪುಗಳಲ್ಲಿ ಮತ್ತು ಸರ್ಕಾರಿ ಏಜೆನ್ಸಿಗಳಲ್ಲಿ ದುಡಿಯಲು ಹುರಿದುಂಬಿಸಿದರು.[೧೬] ಅವರು ಅಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು ಮತ್ತು ಅವರು ಬಿಟ್ಟ ೧೨ ವರ್ಷಗಳ ನಂತರವೂ ಯಾರೂ ಸಾಧಿಸಲಾಗದಷ್ಟು ಮಟ್ಟದ ನಿಧಿಸಂಗ್ರಹಣಾ ದಾಖಲೆಯನ್ನು ಆ ಸಂಸ್ಥೆಯಲ್ಲಿ, ಸಂಸ್ಥೆಗಾಗಿ ದಾಖಲಿಸಿದರು.[೧೪] ೧೯೯೬ರಲ್ಲಿ ಅವರು ಯೂನಿವರ್ಸಿಟಿ ಆಫ್ ಷಿಕಾಗೋದಲ್ಲಿ ಅಸೋಸಿಯೇಟ್ ಡೀನ್ ಆಫ್ ಸ್ಟೂಡೆಂಟ್ ಸರ್ವೀಸಸ್ ಎಂಬ ಸ್ಥಾನವನ್ನು ಹೊಂದಿ ಯೂನಿವರ್ಸಿಟಿಯ ಸಮುದಾಯ ಸೇವಾ ಕೇಂದ್ರದ ಅಭಿವೃದ್ಧಿಗೆ ಕಾರಣರಾದರು.[೪೩] ೨೦೦೨ರಲ್ಲಿ ಅವರು ಯೂನಿವರ್ಸಿಟಿ ಆಫ್ ಷಿಕಾಗೋ ಆಸ್ಪತ್ರೆಗಳಲ್ಲಿ ಸೇವೆಸಲ್ಲಿಸತೊಡಗಿ, ಮೊದಲಿಗೆ ಜನಾಂಗೀಯ ವಿಷಯಗಳ ಕಾರ್ಯಕಾರಿ ನಿರ್ದೇಶಕಿಯಾಗಿ, ಹಾಗೂ ೨೦೦೫ರ ಮೇ ತಿಂಗಳ ಆದಿಯಿಂದ ಜನಾಂಗ ಮತ್ತು ವಿದೇಶಾಂಗ ವಿಭಾಗಗಳ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು.[೪೪] ತಮ್ಮ ಪ್ರಾಥಮಿಕ ಚುನಾವಣಾ ಪ್ರಚಾರದ ವೇಳೆಯಲ್ಲೂ ಅವರು ಯೂನಿವರ್ಸಿಟಿ ಆಫ್ ಷಿಕಾಗೋ ಆಸ್ಪತ್ರೆಗಳ ಸಮಿತಿಯಲ್ಲಿದ್ದರು, ಆದರೆ ನಂತರ ಅರೆಕಾಲಿಕ ಸ್ಥಿತಿಗೆ ಸೀಮಿತಗೊಳಿಸಿಕೊಂಡು ತಮ್ಮ ವೇಳೆಯನ್ನು ಮಕ್ಕಳೊಂದಿಗೆ ಕಳೆಯಲು ಹಾಗೂ ಪತಿಯ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಆರಂಭಿಸಿದರು;[೪೫] ಕ್ರಮೇಣ ತಮ್ಮ ಕೆಲಸಕ್ಕೆ ರಜಾ ಹಾಕಿದರು.[೪೬] ಈ ದಂಪತಿಗಳ ೨೦೦೬ರ ಆದಾಯ ತೆರಿಗೆ ಪತ್ರಗಳ ಪ್ರಕಾರ ಮಿಚೆಲ್ ಯೂನಿವರ್ಸಿಟಿ ಆಫ್ ಷಿಕಾಗೋ ಆಸ್ಪತ್ರೆಗಳಿಂದ ಪಡೆಯುತ್ತಿದ್ದ ಸಂಬಳ $೨೭೩,೬೧೮; ಅವರ ಪತಿ ಯುನೈಟೆಡ್ ಸ್ಟೇಟ್ಸ್ ಸೆನೇಟ್ ನಿಂದ ಪಡೆಯುತ್ತಿದ್ದ ಸಂಬಳ $೧೫೭,೦೮೨. ಆದರೆ, ಒಬಾಮ ದಂಪತಿಗಳ ಒಟ್ಟು ಆದಾಯ $೯೯೧,೨೯೬ವಾಗಿದ್ದು, ಅದರಲ್ಲಿ ಮಿಚೆಲ್ ಟ್ರೀಹೌಸ್ ಫುಡ್ಸ್ ನ ನಿರ್ದೇಶಕ ಮಂಡಳಿಯ ಸದಸ್ಯೆಯಾಗಿ ಸಂಪಾದಿಸುತ್ತಿದ್ದ ಮೊತ್ತವಾದ $೫೧,೨೦೦ ಮತ್ತು ಬರಾಕ್ ರ ಹೂಡಿಕೆಗಳು ಮತ್ತು ಪುಸ್ತಕಗಳಿಗೆ ಸಂದ ಗೌರವಧನಗಳೂ ಸೇರಿದ್ದವು.[೪೭] ಅವರು ಟ್ರೀಹೌಸ್ ಫುಡ್ಸ್ ಇಂಕ್ ನ ಸಂಬಳ ಪಡೆಯುವ ಮಂಡಳಿಯ ಸದಸ್ಯೆಯಾಗಿ ಕಾರ್ಯವೆಸಗಿದರು. (NYSE: THS),[೪೮] ಆ ಸಂಸ್ಥೆಯು a major ವಾಲ್-ಮಾರ್ಟ್ ನ ಒಂದು ಪ್ರಮುಖ ಸರಬರಾಜು ಸಂಸ್ಥೆಯಾಗಿತ್ತು. ಆದರೆ ಅವರ ಪತಿ ಟ್ರೆಂಟನ್, ನ್ಯೂಜರ್ಸಿಯಲ್ಲಿ ಮೇ ೧೪, ೨೦೦೭ರಂದು ನಡೆದ ಒಂದು AFL-CIO ಸಭೆಯಲ್ಲಿ ವಾಲ್-ಮಾರ್ಟ್ ಬಗ್ಗೆ ಕಟುವಾಗಿ ಟೀಕಿಸಿದ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಇತ್ತು ಆ ಸಂಸ್ಥೆಯ ಸಂಪರ್ಕವನ್ನು ಕಡಿದುಕೊಂಡರು.[೪೯] ಅವರು ಷಿಕಾಗೋ ಕೌನ್ಸಿಲ್ ಆಫ್ ಗ್ಲೋಬಲ್ ಅಫೇರ್ಸ್ ನ ನಿರ್ದೇಶಕ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[೫೦]
೨೦೦೮ರ ಅಧ್ಯಕ್ಷೀಯ ಚುನಾವಣೆ
[ಬದಲಾಯಿಸಿ]ಒಬಾಮ ತನ್ನ ಪತಿಯ ಪರವಾಗಿ ಅವರ ರಾಜಕೀಯ ಬದುಕಿನ ಪ್ರಾರಂಭದ ದಿನಗಳಿಂದಲೂ ಕೈಕುಲುಕುವಿಕೆ ಮತ್ತು ನಿಧಿಸಂಗ್ರಹಗಳ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೂ, ಮೊದಮೊದಲು ಈ ಕಾರ್ಯ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಅವರು ತಮ್ಮ ಪತಿಯ ೨೦೦೦ದ ಸ್ಪರ್ಧೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಯೂನಿವರ್ಸಿಟಿ ಆಫ್ ಷಿಕಾಗೋದಲ್ಲಿದ್ದ ಮಿಚೆಲ್ ರ ಹಿರಿಯಾಧಿಕಾರಿ ಅಂತಹ ಪ್ರಚಾರಕಾರ್ಯದಲ್ಲಿ ಮಿಚೆಲ್ ಇಷ್ಟ ಪಟ್ಟದ್ದೇನಾದರೂ ಇದೆಯೇ ಎಂದು ಕೇಳಿದರು; ಕೊಂಚ ಯೋಚಿಸಿದ ನಂತರ, ಹಲವಾರು ಹಜಾರಗಳಿಗೆ ಭೇಟಿಯಿತ್ತುದರಿಂದ ಅವರಿಗೆ ಕೆಲವು ಹೊಸ ಅಲಂಕರಣ ವಿಧಾನಗಳು ಹೊಳೆದವು ಎಂದರು.[೫೧] ಮೊದಮೊದಲು ತಮ್ಮ ಪತಿಯ ಅಧ್ಯಕ್ಷೀಯ ಚುನಾವಣಾ ಪ್ರಚಾರಗಳು ತಮ್ಮ ಮಕ್ಕಳ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದೆಂಬ ಕಾರಣದಿಂದ ಪ್ರಚಾರದ ಬಗ್ಗೆ ಕಸಿವಿಸಿಯಿತ್ತು.[೫೨] ತ್ನ್ನ ಪತಿಯು ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಬೆಂಬಲ ನೀಡಬೇಕಾದರೆ ತಮ್ಮ ಪತಿ ಧೂಮಪಾನ ಬಿಡಬೇಕೆಂಬ ಕರಾರನ್ನು ಮುಂದಿಟ್ಟಿದ್ದಾಗಿ ಮಿಚೆಲ್ ಹೇಳುತ್ತಾರೆ.[೫೩] ತಮ್ಮ ಪತಿಯ ಚುನಾವಣಾ ಪ್ರಚಾರದಲ್ಲಿ ತಮ್ಮ ಪಾತ್ರದ ಬಗ್ಗೆ ಅವರು ಇಂತೆಂದರು: "ನನ್ನದು ಹಿರಿಯ ಸಲಹೆಗಾರಳ ಪಾತ್ರವಲ್ಲ."[೩೪][೫೪][೫೫] ಪ್ರಚಾರಸಮಯದಲ್ಲಿ ಅವರು ತಾಯ್ತನದ ಚೌಕಟ್ಟಿನಲ್ಲಿ ಕುಲ ಮತ್ತು ಶಿಕ್ಷಣದ ಬಗ್ಗೆ ಚರ್ಚಿಸಿದ್ದಾರೆ.[೧೮] ಮೇ ೨೦೦೭ರಲ್ಲಿ, ತಮ್ಮ ಪತಿಯು ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸುವ ಘೋಷಣೆ ಮಾಡಿದ ಮೂರು ತಿಂಗಳ ನಂತರ, ಅವರು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಎಂಭತ್ತು ಪ್ರತಿಶತ ಕಡಿಮೆ ಮಾಡಿಕೊಂಡು ಪತಿಯ ಚುನಾವಣಾ ಪ್ರಚಾರಕ್ಕೆಂದು ಟೊಂಕ ಕಟ್ಟಿ ನಿಂತರು.[೧೩] ಪ್ರಚಾರದ ಮೊದಲ ದಿನಗಳಲ್ಲಿ ಅವರು ತಮ್ಮನ್ನು ಕಡಿಮೆಯೇ ತೊಡಗಿಸಿಕೊಂಡಿದ್ದು ವಾರಕ್ಕೆ ಎರಡು ದಿನಗಳು ಮಾತ್ರ ರಾಜಕೀಯ ಕಾರ್ಯಕ್ರಮಗಳಿಗೆ ತೆರಳುತ್ತಿದ್ದರು ಹಾಗೂ ರಾತ್ರಿಯ ಪ್ರಯಾಣವನ್ನು ತಮ್ಮ ಹೆಣ್ಣಮಕ್ಕಳೂ ಜೊತೆಯಲ್ಲಿ ಬರಲು ಸಾಧ್ಯವಿದ್ದಾಗ ಮಾತ್ರ ಕೈಗೊಳ್ಳುತ್ತಿದ್ದರು;[೧] ಫೆಬ್ರವರಿ ೨೦೦೮ರ ಆದಿಯ ವೇಳೆಗೆ ಅವರ ಭಾಗವಹಿಸುವಿಕೆಯು ಗಮನಾರ್ಹವಾಗಿ ಹೆಚ್ಚಿತು; ಎಂಟು ದಿನಗಳ ಅವಧಿಯಲ್ಲ ಅವರು ಮೂವತ್ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.[೩೫] ಅವರು ಓಪ್ರಾ ವಿನ್ ಫ್ರೇಯವರೊಡನೆ ಹಲವಾರು ಚುನಾವಣಾ ಪ್ರಚಾರಗಳನ್ನು ಕೈಗೊಂಡರು.[೫೬][೫೭] ಅವರು ತಮ್ಮ ಸ್ಟಂಪ್ ಭಾಷಣಗಳನ್ನು ತಾವೇ ಬರೆದುಕೊಂಡು ಪತಿಯ ಅಧ್ಯಕ್ಷೀಯ ಚುನಾವಣಾ ಪ್ರಚಾರ ಕೈಗೊಂಡತು ಮತ್ತು ಸಾಮಾನ್ಯವಾಗಿ ಯಾವುದೇ ಚೀಟಿ ಇಲ್ಲದೆ ನಿರರ್ಗಳವಾಗಿ ಭಾಷಣ ಮಾಡುತ್ತಿದ್ದರು.[೧೭] ಪ್ರಚಾರಸಮಯದುದ್ದಕ್ಕೂ ಮಾಧ್ಯಮಗಳು ಅವರನ್ನು "ಕುಪಿತ ಕರಿಯ ಹೆಂಗಸು" ಎಂಬ ಬಿರುದಿನಿಂದ ಕರೆದವು[೫೮][೫೯][೬೦] ಹಾಗೂ ಕೆಲವು ಜಾಲತಾಣಗಳು ಈ ಚಿತ್ರಣವನ್ನೇ ಬಿಂಬಿಸಲು ಯತ್ನಿಸಿದವು[೬೧] ಇದಕ್ಕೆ ಅವರು ಪ್ರತಿಕ್ರಿಯೆ ತೋರಲೇಬೇಕಾಯಿತು: "ಬರಾಕ್ ಮತ್ತು ನಾನು ಸಾರ್ವಜನಿಕರೆದುರು ಬಹಳ ವರ್ಷಗಳಿಂದ ಇದ್ದೇವೆ ಹಾಗೂ ಕ್ರಮೇಣ ನಾವು ದಪ್ಪ ಚರ್ಮ ಬೆಳೆಸಿಕೊಂಡಿದ್ದೇವೆ. ಪ್ರಚಾರಕ್ಕೆಂದು ಹೊರಟಾಗ ಟೀಕೆಗಳು ಇರುವಂತಹುದು ಸಹಜ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ; ಅದು ಈ ಕಾರ್ಯದ ಅವಿಭಾಜ್ಯ ಅಂಗವೆಂಬುದು ನನಗೆ ತಿಳಿದಿದೆ." ಎಂದರು.[೬೨] ಆಗಸ್ಟ್ ನಲ್ಲಿ ನಡೆದ ೨೦೦೮ರ ಡೆಮೋಕ್ರಾಟಿಕ್ ನ್ಯಾಷನಲ್ ಕಂವೆಂಷನ್ ನ ವೇಳೆಗೆ ಮಿಚೆಲ್ ಪ್ರಚಾರ ಆರಂಭಿಸಿದ ದಿನಗಳಿಗೆ ಹೋಲಿಸಿದರೆ ಮೆದುವಾಗಿರುವುದನ್ನು ಮಾಧ್ಯಮಗಳು ಗಮನಿಸಿದವು; ಜನರ ಕಷ್ಟಗಳಿಗೆ ಸ್ಪಂದಿಸುವುದು ಮತ್ತು ಸಭಿಕರೊಡನೆ ಸಹಾನುಭೂತಿಯಿಂದ ವರ್ತಿಸುವುದು ಮುಂಚಿನ ಪಂಥಾಹ್ವಾನಪಥದ ಜಾಗವನ್ನು ತುಂಬಿತ್ತು; , ದ ವ್ಯೂ ನಂತಹ ಕಾರ್ಯಕ್ರಮಗಳಲ್ಲಿ ಸಂದರ್ಶನ ನೀಡುವುದು ಹಾಗೂ ಲೇಡೀಸ್ ಹೋಂ ಜರ್ನಲ್ ನಂತಹ ಪತ್ರಿಕೆಗಳಿಗೆ ಸಂದರ್ಶನ ನೀಡುವುದು ಹೆಚ್ಚಿ ವಾರ್ತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ತಗ್ಗಿತ್ತು. ಅವರ ಉಡುಗೆ ತೊಡುಗೆಗಳ ವಿಷಯದಲ್ಲೂ ಬದಲಾವಣೆ ಬಿಂಬಿತವಾಗುತ್ತಿತ್ತು; ಈಗ ಡಿಸೈನರ್ ವಸ್ತ್ರಗಳಿಗಿಂತಲೂ ಅನೌಪಚಾರಿಕ ರೀತಿಯ ಉಡುಪುಗಳನ್ನೇ ಹೆಚ್ಚು ಧರಿಸಲಾರಂಭಿಸಿದ್ದರು.[೫೧] ಅವರು ವ್ಯೂ ನಲ್ಲಿ ಕಾಣೀಸಿಕೊಂಡ ಕಾರಣಗಳಲ್ಲಿ ತನ್ನ ಮೇಲಿನ ಸಾರ್ವಜನಿಕ ಅಭಿಪ್ರಾಯವನ್ನು ಮೆದುಗೊಳಿಸುವ ಉದ್ದೇಶವೂ ಇದ್ದಿತು,[೫೮] ಹಾಗೂ ಇದನ್ನು ಪತ್ರಿಕೆಗಳು ಬಹಳವೇ ಪ್ರಚಾರ ಮಾಡಿದವು.[೬೩] ಅಧ್ಯಕ್ಷೀಯ ಚುನಾವಣಾ ಪ್ರಚಾರವು ರಾಷ್ಟ್ರೀಯ ರಾಜಕಾರಣದ ವೇದಿಕೆಗೆ ಮೆಚೆಲ್ ರನ್ನು ಮೊದಲ ಬಾರಿಗೆ ಬಹಿರಂಗಗೊಳಿಸಿತು; ಡೆಮೋಕ್ರಾಟಿಕ್ ಸ್ಪರ್ಧಿಗಳ ಕ್ಷೇತ್ರವು ಇಬ್ಬರು ಸ್ಪರ್ಧಿಗಳ ಮಟ್ಟಕ್ಕೆ ಸೀಮಿತಗೊಳ್ಳುವುದಕ್ಕೂ ಮುಂಚೆಯೇ ಅವರು ಸ್ಪರ್ಧಿಗಳ ಪತ್ನಿ/ಪತಿಯರ ಪೈಕಿ ಅತಿ ಕಡಿಮೆ ಪ್ರಸಿದ್ಧಿ ಪಡೆದವರೆಂದು ಪರಿಗಣಿಸಲಾಗಿತ್ತು.[೫೪]
ಪ್ರಚಾರದ ಮೊದಲ ದಿನಗಳಲ್ಲಿ ಮಿಚೆಲ್ ಒಬಾಮ ಕುಟುಂಬದ ಜೀವನ ಸಂಬಂಧಿತವಾದ ಪ್ರಸಂಗಗಳನ್ನು ಹೇಳುತ್ತಿದ್ದರು;ಆದರೆ, ಮಾಧ್ಯಮಗಳು ಅವರ ವ್ಯಂಗ್ಯದ ಬಗ್ಗೆ ಹೆಚ್ಚು ಒತ್ತು ನೀಡಲಾರಂಭಿಸಿದಾಗ ವರು ಆ ವಿಷಯಗಳನ್ನು, ವ್ಯಂಗ್ಯವನ್ನು ಮಂಡಿಸುವುದನ್ನು ಕಡಿಮೆಗೊಳಿಸಿದರು.[೪೭][೫೩] {0ನ್ಯೂ ಯಾರ್ಕ್ ಟೈಮ್ಸ್{/0} ನ ಆಪ್-ಎಡ್ ಅಂಕಣಕಾರ ಮಾರೀನ್ ಡೌಡ್ ಹೀಗೆ ಬರೆದರು:
I wince a bit when Michelle Obama chides her husband as a mere mortal — comic routine that rests on the presumption that we see him as a god ... But it may not be smart politics to mock him in a way that turns him from the glam JFK into the mundane Gerald Ford, toasting his own English muffin. If all Senator Obama is peddling is the Camelot mystique, why debunk this mystique?[೫೪][೬೪]
೨೦೦೮ರ ಡೆಮೋಕ್ರಾಟಿಕ್ ನ್ಯಾಷನಲ್ ಕಂವೆಂಷನ್ ನ ಮೊದಲ ರಾತ್ರಿ ಕ್ರೈಗ್ ರಾಬಿನ್ಸನ್ ತನ್ನ ತಂಗಿಯನ್ನು ಸಭೆಗೆ ಪರಿಚಯ ಮಾಡಿಸಿದರು.[೬೫] ಮಿಚೆಲ್ ತಮ್ಮ ಭಾಷಣದಲ್ಲಿ ಅಮೆರಿಕದ ಕನಸು ಹೇಗಿರಬೇಕೋ ಅದೇ ಮೂರ್ತಿವೆತ್ತಂತೆ ತಾನು ಮತ್ತು ತಮ್ಮ ಕುಟುಂಬ ಇರುವುದು ಎಂಬ ರೀತಿಯಲ್ಲಿ ಬಿಂಬಿಸಲು ಯತ್ನಿಸಿದರು.[೬೬] "ನೀವು ನಿಮಗೆ ಜೀವನದಲ್ಲಿ ಏನು ಬೇಕೋ ಅದನ್ನು ಪಡೆಯಲು ಶ್ರಮಿಸುತ್ತೀರಿ, ನಿಮ್ಮ ನುಡಿಯೇ ನಿಮ್ಮ ಬದ್ಧತೆ, ನೀವು ನುಡಿದಂತೆ ನಡೆಯುತ್ತೀರಿ, ನೀವು ಜನರನ್ನು ಸಭ್ಯತೆ ಮತ್ತು ಗೌರವದಿಂದ ಕಾಣುತ್ತೀರಿ, ಅವರು ನಿಮಗೆ ಅಪರಿಚಿತರಾಗಿದ್ದಾಗ್ಯೂ ಹಾಗೂ ನಿಮಗೆ ಅವರೊಡನೆ ಸಹಮತವಿಲ್ಲದಿದ್ದಾಗಲೂ" ಎಂಬುದನ್ನು ಮಿಚೆಲ್ ಮತ್ತು ಬರಾಕ್ ನಂಬಿರುವುದಾಗಿ ಅವರು ಹೇಳಿದರು.[೬೭] ಅವರು 'ನನ್ನ ದೇಶದ ಬಗ್ಗೆ ನನಗೆ ಪ್ರಥಮ ಬಾರಿಗೆ ಹೆಮ್ಮೆಯೆನ್ನಿಸುತ್ತಿದೆ' ಎಂದು ಹೇಳಿದ್ದುದಕ್ಕೆ ಟೀಕೆಗಳನ್ನು ವ್ಯಕ್ತಪಡಿಸಿದುದಕ್ಕೆ ಪ್ರತಿಕ್ರಿಯೆ ನೀಡುತ್ತಾ ತಾವು ತಮ್ಮ ದೇಶವನ್ನು ಬಹಳ ಪ್ರೀತಿಸುವುದಾಗಿ ಒತ್ತಿ ಹೇಳಿದರು.[೬೬][೬೮][೬೯] ಈ ಪ್ರಾಸ್ತಾವಿಕ ನುಡಿಗಳು ಎಲ್ಲೆಡೆಯೂ ಮೆಚ್ಚುಗೆ ಗಳಿಸಿದವು ಮತ್ತು ಸಾಮಾನ್ಯವಾಗಿ ಎಲ್ಲರಿಂದಲೂ ಸಕಾರಾತ್ಮಕ ವಿಮರ್ಶೆಗಳು ಕೇಳಿಬಂದವು.[೭೦] ರಾಸ್ಮುಸ್ಸೆನ್ ರಿಪೋರ್ಟ್ಸ್ ಸಮೀಕ್ಷೆಯ ಪ್ರಕಾರ ಅಮೆರಿಕನ್ನರಲ್ಲಿ ಆಕೆಯ ಬಗ್ಗೆ ಮೆಚ್ಚುಗೆಯು ೫೫% ಅನ್ನು ಮುಟ್ಟಿತ್ತು.[೭೧] ಅಕ್ಟೋಬರ್ ೬, ೨೦೦೮ರ ಪ್ರಸಾರದಲ್ಲಿ ಲ್ಯಾರಿ ಕಿಂಗ್ ಮಿಚೆಲ್ ರನ್ನು ಅಮೆರಿಕದ ಮತದಾರರು ಬ್ರಾಡ್ಲೇ ಪರಿಣಾಮವನ್ನು ಮೀರಿದ್ದಾರೆಯೇ ಎಂದು ಕೇಳಿದರು. ಅವರ ಪತಿಯು ಸ್ಪರ್ಧಿಸಲು ನಾಮಾಂಕಿತಗೊಂಡಿರುವುದೇ ಆ ನಿಟ್ಟಿಗೆ ಪ್ರಬಲವಾದ ದಿಕ್ಸೂಚಿ ಎಂದು ಅವರು ಹೇಳಿದರು.[೭೨] ಅದೇ ರಾತ್ರಿ ಅವರನ್ನು ಡೈಲಿ ಷೋ ದ ಜಾನ್ ಸ್ಟುವರ್ಟ್ ಸಹ ಸಂದರ್ಶಿಸಿದಾಗ ಮಿಚೆಲ್ ತನ್ನ ಪತಿಯ ಚುನಾವಣಾ ಪ್ರಚಾರದ ಬಗ್ಗೆ ಮತ್ತು ಪತಿಯ ಬಗ್ಗೆ ಬಂದ ಟೀಕೆಗಳನ್ನು ತಟಾಯಿಸಿದರು.[೭೩] ಫಾಕ್ಸ್ ಬ್ಯೂಸ್ ನ ಅಮೆರಿಕಾಸ್ ಪಲ್ಸ್ ಕಾರ್ಯಕ್ರಮದಲ್ಲಿ ಇ.ಡಿ. ಹಿಲ್ ಒಬಾಮ ಡಿಮೋಕ್ರಾಟಿಕ್ ಅಧ್ಯಕ್ಷಸ್ಥಾನಕ್ಕೆ ನಾಮನೋಂದಣಿಯನ್ನು ಗಿಟ್ಟಿಸಿಕೊಂಡ ರಾತ್ರಿ ಒಬಾಮ ದಂಪತಿಗಳು ಹಂಚಿಕೊಂಡ ಮೊದಲ ಬಂಪ್ ಬಗ್ಗೆ ಮಾತನಾಡುತ್ತಾ ಅದು "ಭಯೋತ್ಪಾದಕರ ಮೊದಲ ತಿವಿತ" ಎಂದರು; ಹಿಲ್ ರನ್ನು ಪ್ರಸಾರದಿಂದ ಹೊರದಬ್ಬಲಾಯಿತು ಹಾಗೂ ಆ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಯಿತು.[೭೪][೭೫][೭೬]
ಯುನೈಟೆಡ್ ಸ್ಟೇಟ್ಸ್ ನ ಪ್ರಥಮ ಮಹಿಳೆಯಾಗಿ
[ಬದಲಾಯಿಸಿ]ಸಾರ್ವಜನಿಕ ಚಿತ್ರಣ ಮತ್ತು ಶೈಲಿ
[ಬದಲಾಯಿಸಿ]ತನ್ನ ಪತಿ ರಾಷ್ಟ್ರಮಟ್ಟದ ಪ್ರಮುಖ ರಾಜಕಾರಣಿಯಾಗಿ ರೂಪುಗೊಳ್ಳಿತ್ತಿದ್ದಂತೆ ಮಿಚೆಲ್ ಒಬಾಮ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿಬಿಟ್ಟಿದ್ದಾರೆ. ಮೇ ೨೦೦೬ರಲ್ಲಿ ಎಸೆನ್ಸ್ ಮಿಚೆಲ್ ರನ್ನು "ವಿಶ್ವದ ೨೫ ಅತ್ಯಂತ ಪ್ರೇರೇಪಣಾತ್ಮಕ ಮಹಿಳೆಯರು." ಪಟ್ಟಿಯಲ್ಲಿ ದಾಖಲಿಸಿತು[೭೭][೭೮] ಜುಲೈ ೨೦೦೭ರಲ್ಲಿ ವ್ಯಾನಿಟಿ ಫೇರ್ ಇವರನ್ನು "ವಿಶ್ವದ ಹತ್ತು ಉತ್ತಮವಾಗಿ ಪೋಷಾಕು ಧರಿಸಿದ ಮಹಿಳೆಯರು" ಪಟ್ಟಿಯಲ್ಲಿ ದಾಖಲಿಸಿತು. ಓಪ್ರಾ ವಿನ್ ಫ್ರೇಸ್ ಲೆಜೆಂಡ್ ಬಾಲ್ ಕೂಟಕ್ಕೆ ಇವರನ್ನು ಗೌರವ ಅತಿಥಿಯಾಗಿ ಆಹ್ವಾನಿಸಲಾಯಿತು; "ದಂತಕಥೆ"ಗಳಿಗೆ ಗೌರವ ಸಲ್ಲಿಸುವ "ಚಿಕ್ಕವಳು" ಆಗಿ ಮಿಚೆಲ್ ಆಫ್ರಿಕನ್ ಅಮೆರಿಕನ್ ಮಹಿಳೆಯರ ಪಥ ಸುಗಮಗೊಳಿಸಿದುದಕ್ಕಾಗಿ ಈ ಗೌರವ ಅವರಿಗೆ ಸಂದಿತು. ಸೆಪ್ಟೆಂಬರ್ ೨೦೦೭ರಲ್ಲಿ ೦೨೧೩೮ ಪತ್ರಿಕೆಯು ಅವರನ್ನು 'ದ ಹಾರ್ವರ್ಡ್ ೧೦೦' ಪಟ್ಟಿಯಲ್ಲಿ ೫೮ನೆಯವರಾಗಿ ದಾಖಲಿಸಿತು; ಈ ಪಟ್ಟಿಯು ಹಿಂದಿನ ವರ್ಷಗಳ ಅತ್ಯಂತ ಪ್ರಭಾವಶಾಲಿ ಹಾರ್ವರ್ಡ್ ವಿದ್ಯಾರ್ಥಿಗಳನ್ನು ಕುರಿತದ್ದಾಗಿತ್ತು. ಅವರ ಪತಿ ನಾಲ್ಕನೆಯ ಸ್ಥಾನ ಪಡೆದಿದ್ದರು.[೭೭][೭೯] ಜುಲೈ ೨೦೦೮ರಲ್ಲಿ ಅವರು ಮತ್ತೊಮ್ಮೆ ವ್ಯಾನಿಟಿ ಫೇರ್ ನ ವಿಶ್ವದ ಉತ್ತಮವಾಗಿ ವಸ್ತ್ರಧರಿಸಿದವರ ಪಟ್ಟಿಯಲ್ಲಿ ಗೋಚರಿಸಿದರು.[೮೦] ೨೦೦೮ರ ಪೀಪಲ್ ನ ಉತ್ತಮವಾಗಿ ಉಡುಪುತೊಟ್ಟ ಮಹಿಳೆಯರ ಪಟ್ಟಿಯಲ್ಲಿಯೂ ಅವರು ಕಾಣಿಸಿಕೊಂಡರು ಹಾಗೂ ಆ ಪತ್ರಿಕೆಯು ಅವರ "ಸಾಂಪ್ರದಾಯಿಕ ಮತ್ತು ವಿಶ್ವಾಸಭರಿತ" ಸೌಂದರ್ಯವನ್ನು ಶ್ಲಾಘಿಸಿತು.[೮೧][೮೨] ಹಲವಾರು ಮೂಲಗಳು, ಮಿಚೆಲ್ ಉನ್ನತ ಮಟ್ಟದಲ್ಲಿರುವ ಆಫ್ರಿಕನ್-ಅಮೆರಿಕನ್ ಮಹಿಳೆಯಾಗಿದ್ದು ಸ್ಥಿರ ವೈವಾಹಿಕ ಜೀವನ ಹೊಂದಿರುವುದು, ಪ್ರಪಂಚದ ಜನರಿಗೆ ಆಫ್ರಿಕನ್-ಅಮೆರಿಕನ್ ಮಹಿಳೆಯರ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸುವಲ್ಲಿ ಈಕೆ ಅನುಕರಣೀಯ ಮೂರ್ತಿಯಾಗಬಹುದೆಂಬ ಆಲೋಚನೆಯನ್ನು ಹೊಂದಿವೆ.[೮೩][೮೪] ಅವರ ಫ್ಯಾಷನ್ ಆಯ್ಕೆಗಳು ಫ್ಯಾಷನ್ ವೀಕ್ನ ಅಂಗವಾಗಿರುತ್ತಿದ್ದವು,[೮೫] ಆದರೆ ಒಬಾಮರ ಪ್ರಭಾವವು ಫ್ಯಾಷನ್ ಜಗದಲ್ಲಿ ಆಫ್ರಿಕನ್-ಅಮೆರಿಕನ್ ರೂಪದರ್ಶಿಯರು ಹೆಚ್ಚಾಗಿ ಭಾಗವಹಿಸುವಂತಾಗಬಹುದು ಎಂಬ ಕೆಲವರ ನಿರೀಕ್ಷೆಯು ಹುಸಿಯಾಯಿತು.[೮೬][೮೭] ತಮ್ಮ ವಿನ್ಯಾಸ ಹಾಗೂ ಶೈಲಿಯ ಪ್ರಜ್ಞೆಯಿಂದ ಮಿಚೆಲ್ ಜ್ಯಾಕ್ವಿಲಿನ್ ಕೆನಡಿಯೊಡನೆ ಹೋಲಿಸಲ್ಪಟ್ಟರೆ[೮೦] ಅವರ ಶಿಸ್ತು ಮತ್ತು ಸೌಂದರ್ಯಪ್ರಜ್ಞೆಯಿಂದ ಬಾರ್ಬರಾ ಬುಷ್ ಗೆ ಹೋಲಿಸಲ್ಪಟ್ಟಿದ್ದಾರೆ.[೮೮][೮೯] ಅವರು ತೊಟ್ಟ ಬಿಳಿಯ, ಏಕ-ಭುಜದ ಜ್ಯಾಸನ್ ವು ೨೦೦೯ ಉದ್ಘಟನಾ ಗೌನ್ ಅನ್ನು "ಅನೂಹ್ಯವಾದ ನ್ಯಾನ್ಸೀ ರೇಗನ್ ಮತ್ತು ಜ್ಯಾಕೀ ಕೆನಡಿ"ಯ ಜೋಡಣೆಯಂತಿತ್ತು ಎನ್ನುತ್ತಾರೆ.[೯೦][೯೧] ಒಬಾಮರ ಸ್ಟೈಲನ್ನು ಜನಪ್ರಿಯ ಎಂದು ಬಣ್ಣಿಸಲಾಗುತ್ತದೆ.[೨೬] ಅವರು ಸಾಮಾನ್ಯವಾಗಿ ವಿನ್ಯಾಸಕಾರರಾದ ಕ್ಯಾಲ್ವಿನ್ ಕ್ಲೀನ್, ಆಸ್ಕರ್ ಡಿ ಲಾ ರೆಂಟಾ, ಇಸಾಬೆಲ್ ಟಾಲೆಡೋ, ನಾರ್ಸಿಸೋ ರಾಡ್ರಿಗ್ವೆಝ್, ಡೋನಾ ರಿಕೋ ಮತ್ತು ಮಾರಿಯೋ ಪಿಂಟೋ ವಿನ್ಯಾಸಗೊಳಿಸಿದ ವಸ್ತ್ರಗಳನ್ನು ತೊಡುತ್ತಾರೆ,[೯೨] ಹಾಗೂ ಫ್ಯಾಷನ್ ಪ್ರವರ್ತಕರಾಗಿದ್ದಾರೆ,[೯೩][೯೪][೯೫] ಅದರಲ್ಲೂ ಮಿಚೆಲ್ ಮೆಚ್ಚುವ, ತಮ್ಮ ನಯವಾದ ತೋಳುಗಳನ್ನು ಪ್ರದರ್ಶಿಸುವ ತೋಳಿಲ್ಲದ ಉಡುಪುಗಳು ವಿಶೇಷ ಗಮನ ಸೆಳೆದಿವೆ.[೯೬] ಅವರು ಮಾರ್ಚ್ ೨೦೦೯ರ ವೋಗ್ ಸಂಚಿಕೆಯ ಮುಖಪುಟ ಮತ್ತು ಫೋಟೋ ಸ್ಪ್ರೆಡ್ ಗಳಲ್ಲಿ ಕಾಣಿಸಿಕೊಂಡರು.[೯೭][೯೮] ಲೋವ್ ಹೂವರ್ ನಿಂದ ಹಿಡಿದು(except ಬೆಸ್ ಟ್ರೂಮನ್ ರ ಹೊರತಾಗಿ) ಪ್ರತಿ ಪ್ರಥಮ ಮಹಿಳೆಯೂ ವೋಗ್ ನಲ್ಲಿ ಕಾಣಿಸಿಕೊಂಡಿದ್ದಾರೆ,[೯೭] ಆದರೆ ಕೇವಲ ಹಿಲೆರಿ ಕ್ಲಿಂಟನ್ ಮಾತ್ರ ಇವರಿಗೂ ಮೊದಲು ಮುಖಪುಟದಲ್ಲಿ ಕಾಣಿಸಿಕೊಂಡ ಪ್ರಥಮ ಮಹಿಳೆಯಾಗಿದ್ದರು.[೯೯] ಮಿಚೆಲ್ ರ ಗಂಭೀರವಾದ ಕೊಡುಗೆಗಳ, ಸಾಧನೆಗಳ ಬದಲಿಗೆ ಅವರ ಫ್ಯಾಷನ್ ಪರಿಜ್ಞಾನವನ್ನೇ ಹೆಚ್ಚು ಬಿಂಬಿಸುವ ಮಾಧ್ಯಮಗಳು ಬಹಳ ಟೀಕೆಗಳಿಗೊಳಗಾಗಿವೆ.[೨೬][೧೦೦] ಮಿಚೆಲ್ ತಾವು ಸೇನೆ ಮತ್ತು ಕಾರ್ಯಗತ ಕುಟುಂಬಗಳ ಸಂಬಂಧಿತವಾದ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡುವುದು ತಾನು ಪ್ರಥಮ ಮಹಿಳೆಯಾಗಿ ಕೈಗೊಳ್ಳಬೇಕಾದ ಆದ್ಯ ಕರ್ತವ್ಯವೆಂದು ನಂಬಿರುವುದಾಗಿ ಹೇಳಿದ್ದಾರೆ.[೮೩][೧೦೧][೧೦೨] ಯು.ಎಸ್.ನ್ಯೂಸ್ & ವರ್ಲ್ಡ್ ರಿಪೋರ್ಟ್ ಬ್ಲಾಗರ್, PBSನ ಅತಿಥೇಯ ಹಾಗೂ ಸ್ಕ್ರಿಪ್ಸ್ ಹೊವಾರ್ಡ್ ನ ಅಂಕಣಕಾರರಾದ ಬಾನೀ ಎರ್ಬ್ ಒಬಾಮರ ಬಗ್ಗೆ ಪ್ರಚಾರ ಮಾಡುವವರು (ಅವರ ಪ್ರಕಟಣಾಕಾರರು)ಸಾಧನೆಗಳಿಗಿಂತಲೂ, ವಿಷಯಕ್ಕಿಂತಲೂ ಹೆಚ್ಚಾಗಿ ಶೈಲಿ, ವಿನ್ಯಾಸಗಳ ಬಗ್ಗೆಯೇ ಹೆಚ್ಚು ಒತ್ತು ನೀತುತ್ತಾರೆಂಬ ವಾದವನ್ನು ಮಂಡಿಸುತ್ತಾರೆ.[೧೦೩] ಸ್ಟೈಲ್ ಬಗ್ಗೆ ಹೆಚ್ಚು ಒತ್ತು ನೀಡುವುದರ ಮೂಲಕ ಒಬಾಮ ತಮ್ಮನ್ನು ತಪ್ಪಾದ ಪಾತ್ರದಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆಂದು ಎರ್ಬ್ ಹಲವಾರು ಬಾರಿ ನುಡಿದಿದ್ದಾರೆ.[೪೨][೧೦೪]
ಕೈಗೊಂಡ ಕಾರ್ಯಗಳು ಮತ್ತು ಮಂಚೂಣಿಗೊಯ್ಯಲ್ಪಟ್ಟ ವಿಸಯಗಳು
[ಬದಲಾಯಿಸಿ]ಅವರು ಮೊದಲ ಮಹಿಳೆಯಾದ ಪ್ರಪ್ರಥಮ ತಿಂಗಳುಗಳಲ್ಲಿ ಅವರು ಹೋಮ್ ಲೆಸ್ ಷೆಲ್ಟರ್ ಮತ್ತು ಸೂಪ್ ಕಿಚನ್ ಗಳಿಗೆ ಆಗಾಗ್ಗೆ ಭೇಟಿಯಿತ್ತಿದ್ದಾರೆ.[೧೦೫] ಅಲ್ಲದೆ ಶಾಲೆಗಳಿಗೂ ಪ್ರತಿನಿಧಿಗಳನ್ನು ಕಳುಹಿಸಿ ಸಾರ್ವಜನಿಕ ಸೇವೆಯ ಪರವಾಗಿ ದನಿಯೆತ್ತಿದ್ದಾರೆ.[೧೦೫][೧೦೬] ಏಪ್ರಿಲ್ ೨೦೦೯ರಲ್ಲಿ, ತಮ್ಮ ಮೊದಲ ವಿದೇಶೀ ಪ್ರವಾಸದಲ್ಲಿ ಅವರು ಬ್ರಿಟಿಷ್ ಪ್ರಧಾನ ಮಂತ್ರಿ ಗಾರ್ಡನ್ ಬ್ರೌನ್ ರ ಪತ್ನಿ ಸಾರಾ ಬ್ರೌನ್ ರೊಡನೆ ಒಂದು ಕ್ಯಾನ್ಸರ್ ವಾರ್ಡ್ ಗೆ ಭೇಟಿಯಿತ್ತರು.[೧೦೭] ಸೇನಾ ಕುಟುಂಬಗಳ ಪರವಾಗಿ ತಮ್ಮ ವಾದವನ್ನು ಅವರು ಮಂಡಿಸತೊಡಗಿದ್ದಾರೆ.[೧೦೮] ತನ್ನ ಹಿಂದಿನ ಪ್ರಥಮ ಮಹಿಳೆಯರಾದ ಕ್ಲಿಂಟನ್ ಮತ್ತು ಬುಷ್ ರಂತೆಯೇ ಮಿಚೆಲ್ ಸಹ ಸಾವಯವ ಆಹಾರವನ್ನೇ ವೈಟ್ ಹೌಸ್ ನ ಪಾಕಶಾಲೆಯಲ್ಲಿ ಬಳಸಲು ತಾಕೀತು ಮಾಡುವುದರ ಮೂಲಕ ಸಾವಯವ ಚಳುವಳಿಯನ್ನು ಬೆಂಬಲಿಸಿದ್ದಾರೆ, ವೈಟ್ ಹೌಸ್ ನ ದಕ್ಷಿಣ ಹುಲ್ಲುಹಾಸಿನ ಪ್ರದೇಶದಲ್ಲಿ ಸಾವಯವ ತೋಟವನ್ನು ಬೆಳೆಸುವುದರ ಮೂಲಕ ಮತ್ತು ಜೇನುಗೂಡೊಂದನ್ನು ಸ್ಥಾಪಿಸುವುದರ ಮೂಲಕ ಒಬಾಮ ಜನರ ಗಮನ ಸೆಳೆದಿದ್ದಾರೆ; ಈ ತೋಟದಲ್ಲಿ ಬೆಳೆದ ತರಕಾರಿ ಮತ್ತು ಈ ಜೇನುಗೂಡಿನ ಜೇನು ಪ್ರಥಮ ಕುಟುಂಬಕ್ಕೆ, ರಾಜ್ಯಮಟ್ಟದ ಔತಣಗಳಿಗೆ ಮತ್ತು ಇತರ ಅಧಿಕೃತ ಕೂಟಗಳ ಸಂದರ್ಭಗಳಲ್ಲಿ ಬಳಸಲಾಗುತ್ತದೆ.[೧೦೯][೧೧೦] ತನ್ನ ಪತಿಯ ಯೋಜನೆಗಳ ಪ್ರಾಮುಖ್ಯತೆಯನ್ನು ಅನುಕ್ರಮವಾಗಿ ಅರಿತು ಅವನ್ನು ಪ್ರಚಾರ ಮಾಡುವ ಹಸ್ತಪ್ರತಿಗಳನ್ನು ಬಿತ್ತರಿಸುವುದರ ಮೂಲಕ ಅದನ್ನು ಬೆಂಬಲಿಸುವುದರಲ್ಲಿ ಮಿಚೆಲ್ ಬರಾಕ್ ರಿಗೆ ಸಲಹಾಗಾರರೂ, ಸಹಾಕರೂ ಆಗಿದ್ದಾರೆ. ಪೇ ಈಕ್ವಿಟೀ ಕಾನೂನು ಜಾರಿಗೆ ಬಂದನಂತರ ಮಹಿಳಾ ಹಕ್ಕುಗಳಿಗಾಗಿ ಶ್ರಮಿಸುವ ವಕೀಲರು ಸಂಭ್ರಮಪಡಲೆಂದೇ ಒಂದು ಔತಣಕೂಟವನ್ನು ಒಬಾಮ ವೈಟ್ ಹೌಸ್ ನಲ್ಲಿ ಏರ್ಪಡಿಸಿದರು. ಯುನೈಟೆಡ್ ಸ್ಟೇಟ್ಸ್ ಗೃಹ ಮತ್ತು ನಗರಾಭಿವೃದ್ಧಿ ಇಲಾಖೆ ಮತ್ತು ಯುನೈಟೆಡ್ ಸ್ಟೇಟ್ಸ್ ಶಿಕ್ಷಣ ಇಲಾಖೆಗಳಿಗೆ ಭೇಟಿಯಿತ್ತಾಗ ಅವರು ವಿತ್ತ ಪ್ರಚೋದಕ ಕಾಯಿದೆಯನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದಾರೆ . ಕೆಲವು ವೀಕ್ಷಕರು ಮಿಚೆಲ್ ರ ಸಂವಿಧಾನಾತ್ಮಕ ಕಾರ್ಯಗಳನ್ನು ಮೆಚ್ಚೆಗೆಯ ನೋಟದಿಂದ ಕಂಡಿದ್ದಾರೆ, ಮತ್ತೆ ಕೆಲವರು ಮಿಚೆಲ್ ರಾಜಕೀಯದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುವುದು ಸರಿಯಲ್ಲವೆಂದಿದ್ದಾರೆ. ಮಿಚೆಲ್ ರ ಪ್ರತಿನಿಧಿಗಳ ಪ್ರಕಾರ, ಮಿಚೆಲ್ ಎಲ್ಲಾ ಯುನೈಟೆಡ್ ಸ್ಟೇಟ್ಸ್ ಕ್ಯಾಬಿನೆಟ್-ಮಟ್ಟದ ಪ್ರತಿನಿಧಿಗಳನ್ನೂ ಭೇಟಿ ಮಾಡುವುದರ ಮೂಲಕ ವಾಷಿಂಗ್ಟನ್ ಅನ್ನು ಹೆಚ್ಚು ಪರಿಚಯ ಮಾಡಿಕೊಳ್ಳುವ ಬಯಕೆಯಿದೆ.[೧೧೧] ಪ್ರಥಮ ಮಹಿಳೆಯಾದ ಮೊದಮೊದಲ ತಿಂಗಳುಗಳಲ್ಲಿ ಅವರಿಗೆ ಸಾರ್ವಜನಿಕರ ಬೆಂಬಲ ಹೆಚ್ಚು ಹೆಚ್ಚಾಗಿ ದೊರಕುತ್ತಿದೆ.[೧೦೫][೧೧೨] ರಿಪಬ್ಲಿಕನ್ನರು ಮತ್ತು ಸೇನಾ ಕುಟುಂಬಗಳಿಗೆ ಅವರು ನೀಡಿರುವ ಬೆಂಬಲ ವಿಶೇಷ ಗಮನ ಸೆಳೆದಿದೆ.[೧೦೫][೧೦೮] ಸಾರ್ವಜನಿಕರಿಗೆ ಅವರು ಹೊಂದಿಕೆಯಾಗುತ್ತಿದ್ದಂತೆಯೇ ಅವರನ್ನು ಹೆಚ್ಚು ಹೆಚ್ಚಾಗಿ ರೋಲ್ ಮಾಡೆಲ್ ಆಗಿ ಸ್ವೀಕರಿಸಲಾಗುತ್ತಿದೆ.[೧೦೫] ನ್ಯೂಸ್ ವೀಕ್ ಅವರ ಮೊದಲ ವಿದೇಶಿ ಪ್ರವಾಸವನ್ನು ಅವರ "ತಾರಾಬಲ"[೧೧೨] ವೆನ್ನಲಾದ ಬಲಪ್ರದರ್ಶನವೆಂದು ಬಣ್ದಿಸಿತು ಹಾಗೂ MSN ಅದನ್ನು ಪೋಷಾಕಿನ ಭವ್ಯತೆಯ ಪ್ರದರ್ಶನವೆಂದು ಕರೆಯಿತು.[೭೮] ಅಮೆರಿಕ ಮತ್ತು ಬ್ರಿಟನ್ ನ ಮಾಧ್ಯಮಗಳಲ್ಲಿ ಒಬಾಮ ದಂಪತಿಗಳು ರಾಣಿ ಎಲಿಝಬೆತ್ IIರನ್ನು ಭೇಟಿಯಾದಾಗ ರಾಯಭಾರ ನಿಯಮದ ಬಗ್ಗೆ ಹಲವಾರು ಚರ್ಚೆಗಳಾದವು,[೧೧೩] ಹಾಗೂ ಒಂದು ಸ್ವಾಗತಕೂಟದಲ್ಲಿ ಮಿಚೆಲ್ ರಾಣಿಯು ತನ್ನ ಬೆನ್ನನ್ನು ಮುಟ್ಟಿದುದಕ್ಕೆ ಪ್ರತಿಯಾಗಿ ರಾಣಿಯ ಬೆನ್ನನ್ನು ಮುಟ್ಟಿದ್ದು ಸಾಂಪ್ರದಾಯಿಕ ರಾಜನೈತಿಕ ಪರಂಪರೆಗೆ ವಿರುದ್ಧವಾದುದಾಗಿತ್ತು.[೧೧೩][೧೧೪] ಅರಮೆನಯ ಮೂಲಗಳು ಹೀಗೊಂದು ಪ್ರಸಂಗ ನಡೆಯಲೇ ಇಲ್ಲವೆಂದು ಸಾರಿದವು.[೧೧೫] ಜೂನ್ ೫, ೨೦೦೯ರಂದು ಮಿಚೆಲ್ ಒಬಾಮ ಪ್ರಸ್ತುತ ಸಿಬ್ಬಂದಿವರ್ಗದ ಮುಖಂಡರಾದ ಜ್ಯಾಕೀ ನಾರಿಸ್ ಸ್ಥಾನದಲ್ಲಿ ತನ್ನ ದೀರ್ಘಕಾಲದ ಸ್ನೇಹಿತೆ ಮತ್ತು ಸಲಹಾಗಾರ್ತಿಯಾದ ಸೂಸನ್ ಷೆರ್ ರನ್ನು ನೇಮಿಸುತ್ತಿದ್ದಾರೆಂದು ವೈಟ್ ಹೌಸ್ ವರದಿ ಮಾಡಿತು. ನಾರಿಸ್ ಕಾರ್ಪೊರೇಷನ್ ಫಾರ್ ನ್ಯಾಷನಲ್ ಎಂಡ್ ಕಮ್ಯೂನಿಟಿ ಸರ್ವೀಸ್ ನ ಹಿರಿಯ ಸಲಹಾಗಾರ್ತಿಯಾಗಿ ನೇಮಕವಾದರು.[೧೧೬] ನಂತರ, ಫೆಬ್ರವರಿ ೨೦೧೦ರಲ್ಲಿ ವೈಟ್ ಹೌಸ್ ನ ಸಾಮಾಜಿಕ ಕಾರ್ಯದರ್ಶಿ ಡೆಸಿರೀ ರೋಜರ್ಸ್ ರ ರಾಜೀನಾಮೆಯನ್ನು ನಂತರದ ತಿಂಗಳಿಂದ ಜಾರಿಯಾಗುವುದಾಗಿ ಘೋಷಿಸಲಾಯಿತು.[೧೧೭] ರೋಜರ್ಸ್ ವೈಟ್ ಹೌಸ್ ನ ಅಧಿಕಾರಿಗಳಾದ ಡೇವಿಡ್ ಆಕ್ಸೆಲ್ ರಾಡ್ ರಂತಹವರೊಡನೆ ಭಿನ್ನಾಭಿಪ್ರಾಯ ಹೊಂದಿದ್ದರು; ತದನಂತರ ನವೆಂಬರ್ ೨೪, ೨೦೦೯ರಂದು ವೈಟ್ ಹೌಸ್ ಸ್ಟೇಟ್ ಡಿನ್ನರ್ ಸ್ನಾಫು ಸಂಭವಿಸಿತು.[೧೧೮] ರೋಜರ್ಸ್ ಜಾಗಕ್ಕೆ ಜೂಲಿಯಾನಾ ಸ್ಮೂಟ್ ರನ್ನು ಆರಿಸಲಾಯಿತು.[೧೧೯] ಪ್ರಥಮ ಮಹಿಳೆಯಾಗಿ ಒಂದು ವರ್ಷ ಕಳೆದ ನಂತರ ಅವರು ಆಡಳಿತಾತ್ಮಕ ವಿಸ್ತಾರವನ್ನು ಕೈಗೆತ್ತಿಕೊಂಡರು. ೨೧ನೆಯ ಶತಮಾನದ ರೀತಿಯೇ ಆಗಿಬಿಟ್ಟಿರುವ ಮಕ್ಕಳಲ್ಲಿನ ಬೊಜ್ಜು ಕಡಿಮೆಗೊಳಸುವುದು ಅವರ ಪ್ರಮುಖ ಗುರಿಯಾಗಿತ್ತು.[೧೨೦] 'ಇದು ತಾನು ಜನತೆಗೆ ನನ್ನ ನಂತರವೂ ಕೊಡುಗೆಯಾಗಿ ನೀಡುವುದಕ್ಕೆಂದೇ ಹಮ್ಮಿಕೊಂಡು ಗುರಿ' ಎನ್ನುತ್ತಾರೆ ಮಿಚೆಲ್: "ಮುಂದೆ ಜನರು ಜ್ಷಾಪಿಸಿಕೊಳ್ಳುವ ರೀತಿಯದನ್ನೇನಾದರೂ ನೀಡಲು ನಾನು ಬಯಸುತ್ತೇನೆ; ಮುಂದಿನ ಜನಾಂಗ ‘ಈ ಸಮಯದಲ್ಲಿ ಈ ವ್ಯಕ್ತಿ ಅಲ್ಲಿ ಇದ್ದುದರಿಂದ ಈ ವಿಷಯದಲ್ಲಿ ಈ ಬದಲಾವಣೆ ಆಯಿತು. ಚಿಕ್ಕಮಕ್ಕಳಲ್ಲಿನ ಬೊಜ್ಜಿನ ಬಗ್ಗೆ ಈ ರೀರಿ ಮಾತುಗಳು ಕೇಳಿಬರಲೆಂಬುದು ನನ್ನ ಆಶಯ."[೧೨೦] ಈ ಚಳುವಳಿಗೆ ಅವರು "ಲೆಟ್ ಅಸ್ ಮೂವ್!"ಎಂಬ ಹೆಸರಿಟ್ಟಿದ್ದಾರೆ.[೧೨೧] ಈ ಯತ್ನವು ಅವರ ಇತರ ಪಪ್ರಯತ್ನಗಳಿಗೆ ಭಂಗವುಂಟುಮಾಡುವುದಿಲ್ಲ: ಸೇನಾ ಕುಟುಂಬಗಳನ್ನು ಬೆಂಬಲಿಸುವುದು, ಉದ್ಯೋಗಿ ಮಹಿಳೆಯರು ಕುಟುಂಬ ಮತ್ತು ಉದ್ಯೋಗವನ್ನು ತೂಗಿಸಿಕೊಂಡು ಹೋಗಲು ಸಹಾಯ ಮಾಡುವುದು, ರಾಷ್ಟ್ರೀಯ ಸೇವೆಯನ್ನು ಪ್ರೋತ್ಸಾಹಿಸುವುದು, ಕಲೆಗಳನ್ನು ಪ್ರೋತ್ಸಾಹಿಸುವುದು ಮತ್ತು ಕಲಾಶಿಕ್ಷಣವನ್ನು ದೃಢಗೊಳಿಸುವುದು ಹಾಗೂ ಮಕ್ಕಳಲ್ಲಿ ಹಾಗೂ ಕುಟುಂಬದಲ್ಲಿ ಆರೋಗ್ಯಕರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರಾಷ್ಟ್ರಾದ್ಯಂತ ರೂಪಿಸುವುದು.[೧೨೨] ಇಲೇನರ್ ರೂಸ್ ವೆಲ್ಟ್ ಪ್ರಥಮ ಮಹಿಳೆಯಾಗಿದ್ದಾಗ ವೈಟ್ ಹೌಸ್ ತೋಟದಲ್ಲಿ ತರಕಾರಿ ಗಿಡಗಳನ್ನು ಬೆಳೆಸಿದ ನಂತರ ಮಿಚೆಲ್ ಆ ಕೆಲಸವನ್ನು ಕೈಗೊಂಡ ಪ್ರಥಮ ಪ್ರಥಮ ಮಹಿಳೆಯಾಗಿ ಆರೋಗ್ಯಕರ ಸೇವನೆಯ ಬಗ್ಗೆ ಪ್ರಚಾರ ಮಾಡುತ್ತಿರುವುದು ಅವರಿಗೆ ವಿಶಾಲವಾದ ಪ್ರಚಾರ ದೊರಕಿಸಿಕೊಟ್ಟಿದೆ.[೧೨೦][೧೨೩]
ಇವನ್ನೂ ಗಮನಿಸಿ
[ಬದಲಾಯಿಸಿ]- ಬರಾಕ್ ಒಬಾಮರ ಕುಟುಂಬ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ White, Deborah. "Michelle Obama, Married to President Barack Obama". U.S. liberal politics. About.com. Archived from the original on ಮಾರ್ಚ್ 4, 2016. Retrieved ಜನವರಿ 22, 2008.
- ↑ ೨.೦ ೨.೧ ೨.೨ ೨.೩ ೨.೪ Rossi, Rosalind (ಜನವರಿ 20, 2007). "The woman behind Obama". Chicago Sun-Times. Archived from the original on ಫೆಬ್ರವರಿ 15, 2008. Retrieved ಜನವರಿ 22, 2008.
- ↑ ೩.೦ ೩.೧ ೩.೨ Slevin, Peter (ಮಾರ್ಚ್ 18, 2009). "Mrs. Obama goes to Washington". Princeton Alumni Weekly. 109 (10): 18–22.
- ↑ "Research into Michelle Obama's Roots". Megan Smolenyak.
- ↑ Murray, Shailagh (ಅಕ್ಟೋಬರ್ 2, 2008). "A Family Tree Rooted In American Soil: Michelle Obama Learns About Her Slave Ancestors, Herself and Her Country". The Washington Post. p. C01. Retrieved ಅಕ್ಟೋಬರ್ 9, 2008.
- ↑ Bone, James (ನವೆಂಬರ್ 6, 2008). "From slave cabin to White House, a family rooted in black America". The Times. London. Retrieved ನವೆಂಬರ್ 7, 2008.
- ↑ Levinson, Molly (ಜೂನ್ 4, 2008). "Michelle: Barack's bitter or better half?". BBC News. Retrieved ಏಪ್ರಿಲ್ 4, 2009.
- ↑ Norris, Michele (ಜುಲೈ 9, 2007). "Spouses on the Campaign Trail: Michelle Obama Sees Election as Test for America". All Things Considered. NPR. Retrieved ಏಪ್ರಿಲ್ 3, 2009.
- ↑ Swarns, Rachel L. (ಅಕ್ಟೋಬರ್ 7, 2009). "In First Lady's Roots, a Complex Path From Slavery". The New York Times. Retrieved ಅಕ್ಟೋಬರ್ 8, 2009.
{{cite news}}
: Unknown parameter|coauthors=
ignored (|author=
suggested) (help) - ↑ ೧೦.೦ ೧೦.೧ ೧೦.೨ Saslow, Eli (ಫೆಬ್ರವರಿ 1, 2009). "From the Second City, An Extended First Family". The Washington Post. Retrieved ಜುಲೈ 24, 2010.
{{cite news}}
: Italic or bold markup not allowed in:|publisher=
(help) - ↑ Finnegan, William (ಮೇ 31, 2004). "The Candidate: How the Son of a Kenyan Economist Became an Illinois Everyman". The New Yorker. Retrieved ಜನವರಿ 22, 2008.
- ↑ Pickert, Kate (ಅಕ್ಟೋಬರ್ 13, 2008). "Michelle Obama, A Life". Time. Archived from the original on ಜನವರಿ 1, 2009. Retrieved ಜನವರಿ 8, 2009.
- ↑ ೧೩.೦ ೧೩.೧ ೧೩.೨ Bennetts, Leslie (ಡಿಸೆಂಬರ್ 27, 2007). "First Lady in waiting". Vanity Fair. Retrieved ಫೆಬ್ರವರಿ 12, 2008.
- ↑ ೧೪.೦ ೧೪.೧ ೧೪.೨ Newton-Small, Jay (ಆಗಸ್ಟ್ 25, 2008). "Michelle Obama's Savvy Sacrifice". Time. Archived from the original on ಅಕ್ಟೋಬರ್ 11, 2008. Retrieved ಅಕ್ಟೋಬರ್ 12, 2008.
- ↑ Ross, Rosalind (ನವೆಂಬರ್ 10, 2008). "Kids at Michelle Obama's old school see reflection". Chicago Sun-Times. Archived from the original on ನವೆಂಬರ್ 14, 2008. Retrieved ನವೆಂಬರ್ 17, 2008.
- ↑ ೧೬.೦ ೧೬.೧ West, Cassandra (ಸೆಪ್ಟೆಂಬರ್ 1, 2004). "Her plan went awry, but Michelle Obama doesn't mind - Chicago Tribune". Chicago Tribune. Archived from the original on ಮೇ 11, 2011. Retrieved ಆಗಸ್ಟ್ 21, 2010.
- ↑ ೧೭.೦ ೧೭.೧ ೧೭.೨ ೧೭.೩ Johnson, Rebecca (2007). "The natural". Vogue. Retrieved ಜನವರಿ 8, 2009.
{{cite news}}
: Unknown parameter|month=
ignored (help) - ↑ ೧೮.೦ ೧೮.೧ Klein, Sarah A. (ಮೇ 5, 2008). "Focus: Women to Watch: Michelle Obama". ChicagoBusiness. Crain Communications, Inc. p. 29.
- ↑ ರಾಬಿನ್ಸನ್, ಮಿಚೆಲ್ ಲಾವಾಘ್ನ್ (೧೯೮೫), ಸಮಾಜಶಾಸ್ತ್ರ ವಿಭಾಗ. "ಪ್ರಿನ್ಸ್ ಟನ್-ಎಜುಕೇಟೆಡ್ ಬ್ಲ್ಯಾಕ್ಸ್ ಎಂಡ್ ದ ಬ್ಲ್ಯಾಕ್ ಕಮ್ಯೂನಿಟಿ (96 ಪುಟಗಳು). Archived May 27, 2019[Date mismatch], ವೇಬ್ಯಾಕ್ ಮೆಷಿನ್ ನಲ್ಲಿ." ಸೀಲೇ ಜಿ. ಮಡ್ ಹಸ್ತಪ್ರತಿ ಗ್ರಂಥಾಲಯ, ಪ್ರಿನ್ಸ್ ಟನ್ ಯೂನಿವರ್ಸಿಟಿ. (ಈ ಪ್ರಬಂಧವು ಪ್ರಸ್ತುತದಲ್ಲಿ ಈ ಗ್ರಂಥಾಲಯದಲ್ಲಿ ಲಭ್ಯವಿಲ್ಲ; ಪಠ್ಯಕ್ಕೆ ಬೇಕಾದ ಕೊಂಡಿಗಾಗಿ ಮುಂದಿನ ಅಡಿಟಿಪ್ಪಣಿಯನ್ನು ನೋಡಿ.)
- ↑ Ressner, Jeffrey (ಫೆಬ್ರವರಿ 22, 2008). "Michelle Obama thesis was on racial divide". Politico.com. Retrieved ಏಪ್ರಿಲ್ 19, 2008.
- ↑ Biography Today. Detroit, Michigan: Omnigraphics. 2009. p. 117. ISBN 978-0-7808-1052-5.
- ↑ "Academic Departments & Programs". The Trustees of Princeton University. 2008. Retrieved ಮೇ 18, 2008.
- ↑ Brown, Sarah (ಡಿಸೆಂಬರ್ 7, 2005). "Obama '85 Masters Balancing Act". Daily Princetonian. Archived from the original on ಮೇ 25, 2012. Retrieved ಏಪ್ರಿಲ್ 3, 2009.
- ↑ Wolffe, Richard (ಫೆಬ್ರವರಿ 25, 2008). "Barack's Rock". Newsweek. Retrieved ಏಪ್ರಿಲ್ 3, 2009.
- ↑ "ಬಯಾಗ್ರಫಿ ಟುಡೇ", ಪುಟ ೧೧೭
- ↑ ೨೬.೦ ೨೬.೧ ೨೬.೨ Connolly, Katie (ನವೆಂಬರ್ 29, 2008). "Very Little in Common But That 'O'". Newsweek. Retrieved ಜನವರಿ 9, 2009.
- ↑ Bogues, Austin (ಜುಲೈ 14, 2008). "Sorority Celebrates Michelle Obama's Acceptance". ದ ನ್ಯೂ ಯಾರ್ಕ್ ಟೈಮ್ಸ್. Retrieved ನವೆಂಬರ್ 9, 2008.
- ↑ Mundy, Liza (ಅಕ್ಟೋಬರ್ 5, 2008). "When Michelle Met Barack". The Washington Post Magazine. Retrieved ಅಕ್ಟೋಬರ್ 25, 2008.
- ↑ Kornblut, Anne E. (ಮೇ 11, 2007). "Michelle Obama's Career Timeout". The Washington Post. Retrieved ಫೆಬ್ರವರಿ 12, 2008.
- ↑ ೩೦.೦ ೩೦.೧ Fornek, Scott (ಅಕ್ಟೋಬರ್ 3, 2007). "Michelle Obama: 'He Swept Me Off My Feet'". Chicago Sun-Times. Archived from the original on ಡಿಸೆಂಬರ್ 14, 2007. Retrieved ಡಿಸೆಂಬರ್ 2, 2007.
- ↑ Greene, Nick; Whitworth, Melissa (ಜನವರಿ 22, 2009). "50 things you didn't know about Michelle Obama". London: IMDb.com, Inc. Archived from the original on ಜನವರಿ 30, 2009. Retrieved ಏಪ್ರಿಲ್ 5, 2009.
- ↑ Springen, Karen and Darman, Jonathan (ಜನವರಿ 29, 2007). "Ground Support". Newsweek. Retrieved ಏಪ್ರಿಲ್ 3, 2009.
{{cite news}}
: CS1 maint: multiple names: authors list (link) - ↑ Piasecki, Joe (ಜೂನ್ 5, 2008). "Mother, wife, superstar". Pasadena Weekly. Retrieved ಏಪ್ರಿಲ್ 3, 2009.
- ↑ ೩೪.೦ ೩೪.೧ Roberts, Robin (ಮೇ 22, 2007). "Michelle Obama: 'I've Got a Loud Mouth'". ABC News. Retrieved ಫೆಬ್ರವರಿ 12, 2008.
- ↑ ೩೫.೦ ೩೫.೧ Langley, Monica (ಫೆಬ್ರವರಿ 11, 2008). "Michelle Obama Solidifies Her Role". Wall Street Journal. Retrieved ಫೆಬ್ರವರಿ 12, 2008.
- ↑ Herrmann, Andrew (ಅಕ್ಟೋಬರ್ 19, 2006). "Fame puts squeeze on family life: Many hurdles as Obamas seek balance". Chicago Sun-Times.
- ↑ Bedard, Paul (ನವೆಂಬರ್ 21, 2008). "Whispers Poll: President-Elect Obama and Michelle Obama's Date Night". U.S.News & World Report. Retrieved ಜನವರಿ 10, 2009.
- ↑ Loh, Sandra Tsing (ಸೆಪ್ಟೆಂಬರ್ 9, 2008). "The Rantings of a P.T.A. Mom". ದ ನ್ಯೂ ಯಾರ್ಕ್ ಟೈಮ್ಸ್. Retrieved ಅಕ್ಟೋಬರ್ 13, 2008.
- ↑ Leiby, Richard L (ನವೆಂಬರ್ 22, 2008). "Obama Girls Will Go To Sidwell Friends: Elite Private School Is 'Best Fit' for Next First Family". The Washington Post. Retrieved ಡಿಸೆಂಬರ್ 9, 2008.
- ↑ ೪೦.೦ ೪೦.೧ Smalley, Suzanne (ನವೆಂಬರ್ 22, 2008). "Just One More Frame!: How do you raise kids in the White House and 'keep them normal,' too?". Newsweek. Retrieved ಜನವರಿ 9, 2009.
- ↑ Zeleny, Jeff (ಸೆಪ್ಟೆಂಬರ್ 4, 2008). "Michelle Obama: 'I'm Done'". ದ ನ್ಯೂ ಯಾರ್ಕ್ ಟೈಮ್ಸ್. Retrieved ಅಕ್ಟೋಬರ್ 13, 2008.
- ↑ ೪೨.೦ ೪೨.೧ Erbe, Bonnie (ನವೆಂಬರ್ 7, 2008). "Michelle Obama Slights Working Women". U.S.News & World Report. Retrieved ಜನವರಿ 10, 2009.
- ↑ "Obama named first Associate Dean of Student Services". University of Chicago Chronicle. 15 (19). ಜೂನ್ 6, 1996. Retrieved ಏಪ್ರಿಲ್ 4, 2009.
- ↑ "Michelle Obama appointed vice president for community and external affairs at the University of Chicago Hospitals" (Press release). University of Chicago Medical Center. ಮೇ 9, 2005. Archived from the original on ಆಗಸ್ಟ್ 12, 2018. Retrieved ಏಪ್ರಿಲ್ 4, 2009.
- ↑ Snow, Kate (ಜನವರಿ 24, 2008). "Michelle Obama: Mom First, Politics Second". ABC News. Retrieved ಏಪ್ರಿಲ್ 4, 2009.
- ↑ St. Clair, Stacy (ನವೆಂಬರ್ 8, 2008). "Michelle Obama blazes a new trail". Chicago Tribune. Retrieved ನವೆಂಬರ್ 20, 2008.
- ↑ ೪೭.೦ ೪೭.೧ Keen, Judy (ಮೇ 12, 2007). "Michelle Obama: Campaigning her way". USA Today. Retrieved ಫೆಬ್ರವರಿ 12, 2008.
- ↑ "Board of Directors: Michelle Obama". TreeHouse Foods. Archived from the original on ಏಪ್ರಿಲ್ 15, 2009. Retrieved ಏಪ್ರಿಲ್ 4, 2009.
- ↑ Sweet, Lynn (ಮೇ 22, 2007). "Sweet Column: Michelle Obama Quits Board of Wal-Mart Supplier". Chicago Sun-Times. Archived from the original on ಫೆಬ್ರವರಿ 9, 2009. Retrieved ಏಪ್ರಿಲ್ 4, 2009.
- ↑ "Directors". Chicago Council on Global Affairs. Archived from the original on ಫೆಬ್ರವರಿ 18, 2009. Retrieved ಏಪ್ರಿಲ್ 4, 2009.
- ↑ ೫೧.೦ ೫೧.೧ Kantor, Jodi (ಆಗಸ್ಟ್ 25, 2008). "Michelle Obama, reluctant no more". ದ ನ್ಯೂ ಯಾರ್ಕ್ ಟೈಮ್ಸ್. Retrieved ಆಗಸ್ಟ್ 27, 2008.
- ↑ Swarns, Rachel L.; Kantor, Jodi (ಮಾರ್ಚ್ 5, 2009). "Michelle Obama". ದ ನ್ಯೂ ಯಾರ್ಕ್ ಟೈಮ್ಸ್. Retrieved ಏಪ್ರಿಲ್ 8, 2009.
- ↑ ೫೩.೦ ೫೩.೧ Langley, Monica (ಫೆಬ್ರವರಿ 11, 2008). "Michelle Obama on Campaign, Family". Wall Street Journal. Retrieved ಫೆಬ್ರವರಿ 12, 2008.
- ↑ ೫೪.೦ ೫೪.೧ ೫೪.೨ Zakin, Carly (ಜುಲೈ 30, 2007). "Michelle Obama plays unique role in campaign". MSNBC. Archived from the original on ಅಕ್ಟೋಬರ್ 26, 2012. Retrieved ಫೆಬ್ರವರಿ 12, 2008.
- ↑ "Michelle Obama: I'm his wife, not adviser". Sioux City Journal. ಮೇ 22, 2007. Retrieved ಏಪ್ರಿಲ್ 3, 2008.
- ↑ Marinucci, Carla; Wildermuth, John; Chronicle Political Writers (ಫೆಬ್ರವರಿ 7, 2008). "Millions of cell calls for Clinton Big effort to contact list of likely backers gave her the state". The San Francisco Chronicle. Retrieved ಫೆಬ್ರವರಿ 15, 2008.
{{cite news}}
: CS1 maint: multiple names: authors list (link) - ↑ Kornblut, Anne E. & Murray, Shailagh (ಡಿಸೆಂಬರ್ 19, 2007). "'I'm Tired of Politics as Usual'; Oprah Winfrey Makes Her Case for Sen. Obama's Presidential Candidacy". The Washington Post. p. A1.
{{cite news}}
:|access-date=
requires|url=
(help)CS1 maint: multiple names: authors list (link) - ↑ ೫೮.೦ ೫೮.೧ Powell, Michael and Jodi Kantor (ಜೂನ್ 18, 2008). "After Attacks, Michelle Obama Looks for a New Introduction". ದ ನ್ಯೂ ಯಾರ್ಕ್ ಟೈಮ್ಸ್. Retrieved ಅಕ್ಟೋಬರ್ 13, 2008.
- ↑ Mann, Jonathan (ಮೇ 23, 2008). "A First Lady of a different kind". CNN. Retrieved ಏಪ್ರಿಲ್ 4, 2009.
- ↑ "Transcript: 'FOX News Watch', June 14, 2008". Fox News. ಜೂನ್ 16, 2008. Retrieved ಏಪ್ರಿಲ್ 4, 2009.
- ↑ Dowd, Maureen (ಜೂನ್ 11, 2008). "Mincing Up Michelle". ದ ನ್ಯೂ ಯಾರ್ಕ್ ಟೈಮ್ಸ್. Retrieved ಅಕ್ಟೋಬರ್ 13, 2008.
- ↑ "20 Questions with Michelle Obama". momlogic.com. ಜುಲೈ 31, 2008. Retrieved ಏಪ್ರಿಲ್ 4, 2009.
- ↑ Stanley, Alessandra (ಜೂನ್ 19, 2008). "Michelle Obama Shows Her Warmer Side on 'The View'". ದ ನ್ಯೂ ಯಾರ್ಕ್ ಟೈಮ್ಸ್. Retrieved ಅಕ್ಟೋಬರ್ 13, 2008.
- ↑ Dowd, Maureen (ಏಪ್ರಿಲ್ 25, 2007). "She's Not Buttering Him Up". ದ ನ್ಯೂ ಯಾರ್ಕ್ ಟೈಮ್ಸ್. Retrieved ಫೆಬ್ರವರಿ 12, 2008.
- ↑ Halperin, Mark (ಆಗಸ್ಟ್ 2008). "Scorecard: First-Night Speeches: Craig Robinson: Grade: B+". Time. Archived from the original on ಡಿಸೆಂಬರ್ 1, 2008. Retrieved ಏಪ್ರಿಲ್ 4, 2009.
- ↑ ೬೬.೦ ೬೬.೧ Nagourney, Adam (ಆಗಸ್ಟ್ 26, 2008). "Appeals evoking American Dream rally Democrats". ದ ನ್ಯೂ ಯಾರ್ಕ್ ಟೈಮ್ಸ್. Retrieved ಆಗಸ್ಟ್ 27, 2008.
- ↑ Naylor, Brian (ಆಗಸ್ಟ್ 26, 2008). "Interpreting Michelle Obama's speech". National Public Radio. Retrieved ಆಗಸ್ಟ್ 27, 2008.
{{cite web}}
: Italic or bold markup not allowed in:|publisher=
(help) - ↑ Pallasch, Abdon M. (ಆಗಸ್ಟ್ 26, 2008). "Michelle Obama celebrates Chicago roots". Chicago Sun-Times. Archived from the original on ಆಗಸ್ಟ್ 29, 2008. Retrieved ಆಗಸ್ಟ್ 26, 2008.
- ↑ Helman, Scott (ಆಗಸ್ಟ್ 26, 2008). "Reaching back to her Chicago roots, Obama tells an American story". Boston Globe. Retrieved ಆಗಸ್ಟ್ 27, 2008.
- ↑ Suellentrop, Chris (ಆಗಸ್ಟ್ 25, 2008). "Michelle Obama's high note". ದ ನ್ಯೂ ಯಾರ್ಕ್ ಟೈಮ್ಸ್. Retrieved ಆಗಸ್ಟ್ 27, 2008.
- ↑ "Michelle Obama Favorable Rating Reaches Highest Level Ever". Rasmussen Reports. ಆಗಸ್ಟ್ 29, 2008. Archived from the original on ಆಗಸ್ಟ್ 26, 2013. Retrieved ನವೆಂಬರ್ 12, 2008.
- ↑ Blow, Charles M. (ಅಕ್ಟೋಬರ್ 9, 2008). "Are We Past The 'Bradley Effect'?". ದ ನ್ಯೂ ಯಾರ್ಕ್ ಟೈಮ್ಸ್. Retrieved ಅಕ್ಟೋಬರ್ 13, 2008.
- ↑ Seelye, Katharine Q. (ಅಕ್ಟೋಬರ್ 9, 2008). "Michelle Obama Dismisses Criticisms". ದ ನ್ಯೂ ಯಾರ್ಕ್ ಟೈಮ್ಸ್. Retrieved ಅಕ್ಟೋಬರ್ 13, 2008.
- ↑ "Fox refers to Michelle Obama as 'baby mama': TV graphic read: 'Outraged liberals: Stop picking on Obama's baby mama'". MSNBC. ಜೂನ್ 12, 2008. Archived from the original on ಸೆಪ್ಟೆಂಬರ್ 23, 2009. Retrieved ಅಕ್ಟೋಬರ್ 13, 2008.
- ↑ Spillius, Alex (ಜೂನ್ 13, 2008). "Fox News presenter taken off air after Barack Obama 'terrorist fist jab' remark". The Daily Telegraph. U.K. Archived from the original on ಜುಲೈ 19, 2008. Retrieved ಅಕ್ಟೋಬರ್ 13, 2008.
- ↑ Cloud, John (ನವೆಂಬರ್ 3, 2008). "4. Fist bump". Time. Archived from the original on ಜನವರಿ 4, 2009. Retrieved ಜನವರಿ 8, 2009.
- ↑ ೭೭.೦ ೭೭.೧ "Michelle Obama". Biography.com. A&E Network. Retrieved ಏಪ್ರಿಲ್ 5, 2009.
- ↑ ೭೮.೦ ೭೮.೧ O'Neil, Nicole (2009). "First Lady style: Michelle Obama". U.K. MSN. Archived from the original on ಏಪ್ರಿಲ್ 5, 2009. Retrieved ಏಪ್ರಿಲ್ 5, 2009.
{{cite news}}
: Unknown parameter|month=
ignored (help) - ↑ "The Harvard 100". 02138. 2007.
{{cite news}}
: Unknown parameter|month=
ignored (help) - ↑ ೮೦.೦ ೮೦.೧ "Michelle Obama makes best-dressed list: For the second year in a row, Obama's style puts her on Vanity Fair's list". MSNBC. ಜುಲೈ 30, 2008. Archived from the original on ಆಗಸ್ಟ್ 19, 2009. Retrieved ಅಕ್ಟೋಬರ್ 13, 2008.
- ↑ "Michelle Obama among 10 best dressed women: People magazine". The Economic Times. India. ಸೆಪ್ಟೆಂಬರ್ 18, 2008. Retrieved ಏಪ್ರಿಲ್ 4, 2009.
- ↑ "Michelle Obama, Rihanna Named To People's Best Dressed List". Access Hollywood. ಸೆಪ್ಟೆಂಬರ್ 17, 2008. Archived from the original on ಏಪ್ರಿಲ್ 16, 2009. Retrieved ಏಪ್ರಿಲ್ 4, 2009.
- ↑ ೮೩.೦ ೮೩.೧ Samuels, Allison (ನವೆಂಬರ್ 22, 2008). "What Michelle Means to Us: We've never had a First Lady quite like Michelle Obama. How she'll change the world's image of African-American women—and the way we see ourselves". Newsweek. Retrieved ಜನವರಿ 9, 2009.
- ↑ Fiori, Pamela (ಫೆಬ್ರವರಿ 2009). "She's Got It!". Town & Country. pp. 78–83. Retrieved ಏಪ್ರಿಲ್ 4, 2009.
- ↑ Von Glinow, Kiki (ಮಾರ್ಚ್ 9, 2009). "The New Black". Newsweek. Retrieved ಏಪ್ರಿಲ್ 7, 2009.
- ↑ Soller, Kurt (ಫೆಬ್ರವರಿ 18, 2009). "Is Michelle Obama Diversifying Model Portfolios? Not So Much". Newsweek. Archived from the original on ಜುಲೈ 7, 2012. Retrieved ಏಪ್ರಿಲ್ 7, 2009.
- ↑ Trebay, Guy (ಫೆಬ್ರವರಿ 13, 2009). "Has the 'Obama Effect' Come to Runway Castings?". ದ ನ್ಯೂ ಯಾರ್ಕ್ ಟೈಮ್ಸ್. Retrieved ಏಪ್ರಿಲ್ 7, 2009.
- ↑ Trebay, Guy (ಜೂನ್ 8, 2008). "She Dresses to Win". ದ ನ್ಯೂ ಯಾರ್ಕ್ ಟೈಮ್ಸ್. Retrieved ಅಕ್ಟೋಬರ್ 13, 2008.
- ↑ Springen, Karen and Jonathan Darman (ಜನವರಿ 29, 2007). "Ground Support: Michelle Obama Has Seemed Ambivalent About Barack's'08 Run. But She's Provided The Entree For Him To Give It A Go". Newsweek. Retrieved ನವೆಂಬರ್ 16, 2008.
- ↑ French, Serena (ಜನವರಿ 21, 2009). "Michelle in a 'Hue-Turn'". The New York Post. Archived from the original on ಜನವರಿ 24, 2009. Retrieved ಜನವರಿ 22, 2009.
- ↑ Soller, Kurt (ಡಿಸೆಂಬರ್ 2, 2008). "Feedback: Fashion First Ladies". Newsweek. Archived from the original on ಆಗಸ್ಟ್ 13, 2009. Retrieved ಜನವರಿ 9, 2009.
- ↑ "Michelle Obama's Winning Style". In Style. ನವೆಂಬರ್ 2008. Archived from the original on ಡಿಸೆಂಬರ್ 4, 2008. Retrieved ನವೆಂಬರ್ 17, 2008.
- ↑ Kroll, Betsy (ಡಿಸೆಂಬರ್ 2008). "6. Michelle Obama's $148 Dress". Time. Archived from the original on ಜನವರಿ 4, 2009. Retrieved ಜನವರಿ 8, 2009.
- ↑ Zimbalist, Kristina (ಅಕ್ಟೋಬರ್ 31, 2008). "Purple Reign". Time. Archived from the original on ಡಿಸೆಂಬರ್ 29, 2008. Retrieved ಜನವರಿ 8, 2009.
- ↑ Givhan, Robin (ಜನವರಿ 21, 2009). "All Hail the Leader of the Fashionable World". The Washington Post. Retrieved ಅಕ್ಟೋಬರ್ 8, 2009.
- ↑ ಉದಾಹರಣೆಗಾಗಿ ನೋಡಿ: ವನೆಸ್ಸಾ ಜೋನ್ಸ್, ಮಿಚೆಲ್ ಒಬಾಮಾಸ್ ರೈಟ್ ಟು ಬೇರ್ ಆರ್ಮ್ಸ್, ದ ಬೋಸ್ಟನ್ ಗ್ಲೋಬ್ , ಮಾರ್ಚ್ ೧೯, ೨೦೦೯ (ಪುನಃಸ್ಥಾಪನೆ ೨೦೦೯-೧೦-೦೮); ಜೀನೈನ್ ಸ್ಟೀನ್, ಮಿಚೆಲ್ ಒಬಾಮಾಸ್ ಟೋನ್ಡ್ ಆರ್ಮ್ಸ್ ಆರ್ ಡಿಬೇಟೆಡ್. ಲಾಸ್ ಏಂಜಲೀಸ್ ಟೈಮ್ಸ್ , ಮಾರ್ಚ್ ೨೯, ೨೦೦೯ (ಪುನಃಸ್ಥಾಪನೆ ೨೦೦೯-೧೦-೦೮)
- ↑ ೯೭.೦ ೯೭.೧ Serjeant, Jill (ಫೆಬ್ರವರಿ 11, 2009). "Michelle Obama graces cover of Vogue magazine". Thompson Reuters. Archived from the original on ಸೆಪ್ಟೆಂಬರ್ 21, 2012. Retrieved ಫೆಬ್ರವರಿ 14, 2009.
- ↑ "Michelle Obama makes Vogue cover". BBC. ಫೆಬ್ರವರಿ 11, 2009. Retrieved ಫೆಬ್ರವರಿ 14, 2009.
- ↑ Tschorn, Adam (ಫೆಬ್ರವರಿ 11, 2009). "All the Rage: The Image Staff Muses On The Culture of Keeping Up Appearance in Hollywood and Beyond". Los Angeles Times. Retrieved ಫೆಬ್ರವರಿ 14, 2009.
- ↑ Felchner, Morgan E. (ನವೆಂಬರ್ 14, 2008). "For Mom-in-Chief Michelle Obama and Women Everywhere, It's About Choice". U.S.News & World Report. Retrieved ಜನವರಿ 10, 2009.
- ↑ Obama, Michelle (ಅಕ್ಟೋಬರ್ 17, 2008). "Michelle Obama: As Barack's First Lady, I Would Work to Help Working Families and Military Families". U.S.News & World Report. Retrieved ಜನವರಿ 10, 2009.
- ↑ Klaidman, Daniel (ನವೆಂಬರ್ 22, 2008). "The Editor's Desk". Newsweek. Retrieved ಜನವರಿ 9, 2009.
- ↑ Erbe, Bonnie (ನವೆಂಬರ್ 13, 2008). "Michelle Obama Is Making Herself a Stay-at-Home Mom, Not the Media". U.S. News & World Report. Retrieved ಜನವರಿ 10, 2009.
- ↑ Erbe, Bonnie (ನವೆಂಬರ್ 6, 2008). "Barack and Michelle Obama Sound Tone-Deaf on Women's Issues". U.S.News & World Report. Retrieved ಜನವರಿ 10, 2009.
- ↑ ೧೦೫.೦ ೧೦೫.೧ ೧೦೫.೨ ೧೦೫.೩ ೧೦೫.೪ Romano, Lois (ಮಾರ್ಚ್ 31, 2009). "Michelle's Image: From Off-Putting To Spot-On". The Washington Post. Retrieved ಏಪ್ರಿಲ್ 4, 2009.
- ↑ Alter, Jonathan (ಮಾರ್ಚ್ 7, 2009). "An Army Of Changemakers". Newsweek. Retrieved ಏಪ್ರಿಲ್ 6, 2009.
- ↑ Scherer, Michael (ಏಪ್ರಿಲ್ 2, 2009). "Michelle Obama Finds Her Role on the World Stage". Time. Archived from the original on ಏಪ್ರಿಲ್ 6, 2009. Retrieved ಏಪ್ರಿಲ್ 6, 2009.
- ↑ ೧೦೮.೦ ೧೦೮.೧ Walsh, Kenneth T. (ಮಾರ್ಚ್ 26, 2009). "Michelle Obama Makes Military Families Her Mission: The first lady is often moved by accounts of personal sacrifice by service families". U.S.News & World Report. Retrieved ಏಪ್ರಿಲ್ 7, 2009.
- ↑ Bedard, Paul (ಮಾರ್ಚ್ 28, 2009). "Michelle Obama Goes Organic and Brings in the Bees". U.S.News & World Report. Retrieved ಏಪ್ರಿಲ್ 7, 2009.
- ↑ Black, Jane (ಮಾರ್ಚ್ 20, 2009). "Shovel-Ready Project: A White House Garden". The Washington Post. Retrieved ಮೇ 3, 2009.
- ↑ Swarns, Rachel L. (ಫೆಬ್ರವರಿ 7, 2009). "'Mom in Chief' Touches on Policy; Tongues Wag". ದ ನ್ಯೂ ಯಾರ್ಕ್ ಟೈಮ್ಸ್. Retrieved ಏಪ್ರಿಲ್ 8, 2009.
- ↑ ೧೧೨.೦ ೧೧೨.೧ Stone, Daniel (ಏಪ್ರಿಲ್ 3, 2009). "Mixed Review". Newsweek. Retrieved ಏಪ್ರಿಲ್ 4, 2009.
- ↑ ೧೧೩.೦ ೧೧೩.೧ Chua-Eoan, Howard (ಏಪ್ರಿಲ್ 1, 2009). "The Queen and Mrs. Obama: A Breach in Protocol". Time. Archived from the original on ಆಗಸ್ಟ್ 26, 2013. Retrieved ಏಪ್ರಿಲ್ 6, 2009.
- ↑ Bailey, Holly (ಏಪ್ರಿಲ್ 2, 2009). "Touch Her... If You Dare". Newsweek. Archived from the original on ಜುಲೈ 7, 2012. Retrieved ಏಪ್ರಿಲ್ 6, 2009.
- ↑ Bailey, Holly (ಏಪ್ರಿಲ್ 1, 2009). "G-20 Gossip: No Touching, Please". Newsweek. Archived from the original on ಜುಲೈ 1, 2012. Retrieved ಏಪ್ರಿಲ್ 6, 2009.
- ↑ "Michelle Obama gets new chief of staff". UPI. ಜೂನ್ 5, 2009. Retrieved ಜುಲೈ 27, 2009.
- ↑ "Desiree Rogers Stepping Down Next Month". The Huffington Post. ಫೆಬ್ರವರಿ 26, 2010. Retrieved ಏಪ್ರಿಲ್ 6, 2010.
- ↑ Baker, Peter (ಮಾರ್ಚ್ 12, 2010). "Obama Social Secretary Ran Into Sharp Elbows". ದ ನ್ಯೂ ಯಾರ್ಕ್ ಟೈಮ್ಸ್. p. A1. Retrieved ಏಪ್ರಿಲ್ 6, 2010.
- ↑ Kornblut, Anne and Krissah Thompson (ಮಾರ್ಚ್ 3, 2010). "Julianna Smoot brings an insider's perspective to Obama's inner circle". The Washington Post. Retrieved ಏಪ್ರಿಲ್ 6, 2010.
- ↑ ೧೨೦.೦ ೧೨೦.೧ ೧೨೦.೨ Stolberg, Sheryl Gay (ಜನವರಿ 14, 2010). "After a Year of Learning, the First Lady Seeks Out a Legacy". ದ ನ್ಯೂ ಯಾರ್ಕ್ ಟೈಮ್ಸ್. p. A20. Retrieved ಏಪ್ರಿಲ್ 6, 2010.
- ↑ "ಲೆಟ್ ಅಸ್ ಮೂವ್!". Archived from the original on ಆಗಸ್ಟ್ 20, 2011. Retrieved ಫೆಬ್ರವರಿ 10, 2011.
- ↑ "First Lady Michelle Obama". Whitehouse.gov. Retrieved ಏಪ್ರಿಲ್ 6, 2010.
- ↑ "White House Photo Blog: Wednesday, Jun. 17, 2009: First Garden". Time. ಜೂನ್ 17, 2009. Archived from the original on ಜುಲೈ 26, 2010. Retrieved ಏಪ್ರಿಲ್ 7, 2010.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- David Colbert (ಡಿಸೆಂಬರ್ 2008). Michelle Obama, An American Story. Houghton Mifflin Harcourt. ISBN 0547247702.
- Elizabeth Lightfoot (ಡಿಸೆಂಬರ್ 2008). Michelle Obama: First Lady of Hope. The Lyons Press. ISBN 1599215217.
- Liza Mundy (ಅಕ್ಟೋಬರ್ 2008). Michelle Obama, A Life. Simon & Schuster. ISBN 1416599436.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Quotations related to ಮಿಚೆಲ್ ಒಬಾಮ at Wikiquote
- ಪ್ರಥಮ ಮಹಿಳೆ ಮಿಚೆಲ್ ಒಬಾಮ Archived December 24, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., Whitehouse.gov
- "ಮೀಟ್ ಮಿಚೆಲ್" Archived November 3, 2008[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., ಜೀವನಚರಿತ್ರೆಯ ಪುಟಗಳು BarackObama.com ನಲ್ಲಿ
- "ಮಿಚೆಲ್ ಒಬಾಮ ಆನ್ ಲವ್, ಫ್ಯಾಮಿಲಿ & ಪಾಲಿಟಿಕ್ಸ್" Archived January 26, 2009[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., ಸಿಬಿಎಸ್ ನ್ಯೂಸ್ ನ ಕೇಟೀ ಕೌರಿಕ್ ರೊಡನೆ ಸಂದರ್ಶನ
- ಚಿತ್ರಪ್ರಬಂಧ Archived January 10, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ. ನ್ಯೂಸ್ ವೀಕ್(/೧) ನಲ್ಲಿ
- ದಾಖಲಾಲಯ ದ ನ್ಯೂ ಯಾರ್ಕ್ ಟೈಮ್ಸ್ ನಲ್ಲಿ
- ದಾಖಲಾಲಯ ಯು.ಎಸ್.ನ್ಯೂಸ್ & ವರ್ಲ್ಡ್ ರಿಪೋರ್ಟ್ ನಲ್ಲಿ
- ದಾಖಲಾಲಯ Archived June 11, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ. ಷಿಕಾಗೋ ಟ್ರಿಬ್ಯೂನ್ ನಲ್ಲಿ
- "ಮಿಚೆಲ್ ಒಬಾಮಾಸ್ ಪ್ಲೀ ಫಾರ್ ಎಜುಕೇಷನ್" Archived March 24, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., TED (ಪರಿಷತ್ತು), ಮೇ ೨೦೦೯
Honorary titles | ||
---|---|---|
ಪೂರ್ವಾಧಿಕಾರಿ Laura Bush |
First Lady of the United States January 20, 2009 – present |
Incumbent |
Honorary Chair of the President's Committee on the Arts and Humanities Serving with Chairwoman Adair Wakefield Margo 2009 – present |
- CS1 errors: unsupported parameter
- CS1 errors: markup
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 maint: multiple names: authors list
- CS1 errors: access-date without URL
- Pages using duplicate arguments in template calls
- Commons link is locally defined
- Use mdy dates from August 2010
- Articles with invalid date parameter in template
- 1964ರಲ್ಲಿ ಜನಿಸಿದವರು
- ಆಫ್ರಿಕಾ ಅಮೇರಿಕಾ ಇತಿಹಾಸ
- ಆಫ್ರಿಕನ್ ಅಮೆರಿಕನ್ ವಕೀಲರು
- ಆಫ್ರಿಕನ್-ಅಮೆರಿಕನ್ ಜನರು
- ಅಮೆರಿಕದ ಮಹಿಳಾ ವಕೀಲರು
- ಯುನೈಟೆಡ್ ಸ್ಟೇಟ್ಸ್ ನ ಮೊದಲ ಮಹಿಳೆಯರು
- ಹಾರ್ವರ್ಡ್ ಕಾನೂನು ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳು
- ಇಲಿನಾಯ್ಸ್ ನ ಡೆಮೋಕ್ರಾಟ್ ಗಳು
- ಇಲಿನಾಯ್ಸ್ ನ ವಕೀಲರು
- ಇಂದಿನ ಜನರು
- ಒಬಾಮರ ಕುಟುಂಬ
- ಇಲಿನಾಯ್ಸ್ನ ಚಿಕಾಗೋದಿಂದ ಬಂದ ಜನರು
- ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು
- ಇಲಿನಾಯ್ಸ್ ರಾಜಕಾರಣಿಗಳ ಪತಿ/ಪತ್ನಿಯರು
- ಯುನೈಟೆಡ್ ಸ್ಟೇಟ್ಸ್ ಸೆನೆಟ್ ಸದಸ್ಯರ ಸಂಗಾತಿಗಳು
- ಯುನೈಟೆಡ್ ಚರ್ಚ್ ಆಫ್ ಕ್ರೈಸ್ತ್ ಮೆಂಬರ್ಸ್
- ಇಲಿನಾಯ್ಸ್ ರಾಜಕೀಯದಲ್ಲಿನ ಮಹಿಳೆಯರು