ವ್ಯಾಪಾರೋದ್ಯಮ
Expression error: Unexpected < operator.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (February 2008) |
ಅಸ್ತಿತ್ವದಲ್ಲಿರುವ ಮತ್ತು ಹೊಸದಾಗಿ ಗುರಿತಿಸಲ್ಪಟ್ಟ ಉತ್ಪನ್ನಗಳು ಮತ್ತು ಅಗತ್ಯಗಳ ಬಗ್ಗೆ ವ್ಯಕ್ತಿಗಳಿಗೆ ಅಥವಾ ಸಮುದಾಯಕ್ಕೆ ಸಂವಹನದ ಮೂಲಕ ತಿಳಿವಳಿಕೆ ನೀಡುವುದು ಹಾಗೂ ಅವುಗಳ ಪ್ರಯೋಜನ ಪಡೆಯಲು ಪ್ರೇರೇಪಿಸುವಂಥ ಪ್ರಕ್ರಿಯೆಯನ್ನು ವ್ಯಾಪಾರೋದ್ಯಮ ಎನ್ನಲಾಗಿದೆ.
ಗ್ರಾಹಕರನ್ನು ಸೃಷ್ಟಿಸಲು, ಉಳಿಸಿಕೊಳ್ಳಲು ಮತ್ತು ಅವರನ್ನು ಸಂತೃಪ್ತಿಗೊಳಿಸಲು ವ್ಯಾಪಾರೋದ್ಯಮಯನ್ನು ಬಳಸಲಾಗುವುದು. ವ್ಯಾಪಾರೋದ್ಯಮ ಗ್ರಾಹಕ ಕೇಂದ್ರಿತವಾದದ್ದು. ಆದ್ದರಿಂದ ಇಲ್ಲಿನ ಚಟುವಟಿಕೆಗಳನ್ನು ವ್ಯಾಪಾರ ನಿರ್ವಹಣೆಯ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಇದರ ಇನ್ನೊಂದು ತುದಿಗೆ ಕಾರ್ಯಾಚರಣೆ (ಅಥವಾ ಉತ್ಪಾದನೆ)ಲಗತ್ತಾಗಿದೆ. ಮಾನವ ಸಂಪನ್ಮೂಲಗಳು, ಲೆಕ್ಕಪತ್ರ ಇಡುವಿಕೆ, ಕಾಯಿದೆ ಮತ್ತು ಕಾನೂನಿಗೆ ಸಂಬಂಧಿಸಿದ ಅಂಶಗಳಂತಹ ಇತರ ಸೇವೆಗಳು ಮತ್ತು ನಿರ್ವಹಣೆಗಳನ್ನು "ಸಂಸ್ಥೆಯೇ ಮಾಡಬಹುದು" ಅಥವಾ "ಹೊರ ಗುತ್ತಿಗೆ ನೀಡಬಹುದು".
==ವ್ಯಾಖ್ಯಾನ==the
" ಗ್ರಾಹಕರು, ಗಿರಾಕಿಗಳು, ಪಾಲುದಾರರು ಮತ್ತು ಸಮಾಜಕ್ಕೆ ಮೌಲ್ಯಾಧಾರಿತವಾದದ್ದನ್ನು ನಿರ್ಮಿಸಿ,ಅದನ್ನು ತಿಳಿಯಪಡಿಸಿ, ನೀಡಿ ಅಥವಾ ವಿನಿಮಯ ಮಾಡಿಕೊಳ್ಳುವ ಒಂದು ಪ್ರಕ್ರಿಯೇ ಮಾರಾಟ ವ್ಯವಸ್ಥೆ " ಎಂದು ಅಮೆರಿಕಾದ ಮಾರಾಟ ಸಂಸ್ಥೆಯು ವ್ಯಾಪಾರೋದ್ಯಮಯನ್ನು ವ್ಯಾಖ್ಯಾನಿಸಿದೆ. ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟಕ್ಕಾಗಿ ಅಕ್ಷರಶಃ ಮಾರುಕಟ್ಟೆಗೆ ಹೋಗಿ ಬರುತ್ತಿದ್ದ ಸನ್ನಿವೇಶದಿಂದ ಅಭಿವೃದ್ಧಿಗೊಂಡ ರೂಪವಿದು.
"ಗ್ರಾಹಕರ ಅಗತ್ಯಗಳನ್ನು ಗುರುತಿಸುವ, ನಿರೀಕ್ಷಿಸುವ ಮತ್ತು ಅವುಗಳನ್ನು ಲಾಭದಾಯಕವಾಗಿ ಪೂರೈಸುವ ಭರಿಸುವ ಜವಬ್ದಾರಿಗಳನ್ನು ಹೊತ್ತ ಆಡಳಿತ ಪ್ರಕ್ರಿಯೆಯೇ ಮಾರ್ಕೆಟಿಂಗ್" ಎಂದು ವ್ಯಾಪಾರೋದ್ಯಮಯನ್ನು ಚಾರ್ಟರ್ಡ್ ಇನ್‌ಸ್ಟಿಟ್ಯೂಟ್ ಆಫ್ ಮಾರ್ಕೆಟಿಂಗ್ ಸಂಸ್ಥೆ ವ್ಯಾಖ್ಯಾನಿಸಿದೆ.[೧]
ಜಾಹೀರಾತು ನೀಡುದು, ವಿತರಣೆ ಮಾಡುವುದು ಮತ್ತು ಮಾರಾಟದಲ್ಲಿ ತೊಡಗುವಂಥ ಸೃಜನಶೀಲ ಉದ್ಯಮದಂತೆ ಹಿಂದೆ ಇದು ತೋರುತ್ತಿತ್ತು. ಸಮಾಜಿಕ ವಿಜ್ಞಾನಗಳಾದ ಮನೋ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಅರ್ಥ ಶಾಸ್ತ್ರ, ಮಾನವ ವಿಕಾಸ ವಿಜ್ಞಾನ ಮತ್ತು ನರ ವಿಜ್ಞಾನದಂಥ ವಿಷಯಗಳನ್ನು ವ್ಯಾಪಾರೋದ್ಯಮಯ ಶೈಕ್ಷಣಿಕ ಅಧ್ಯಯನದಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುಲಾಗುತ್ತದೆ. ಈ ವೃತ್ತಿಯನ್ನು ವಿಜ್ಞಾನವೆಂದು ಗುರುತಿಸಲಾಗಿದೆ. ಅಸಂಖ್ಯಾತ ವಿಶ್ವವಿದ್ಯಾಲಯಗಳು ವಿಜ್ಞಾನ ಸ್ನಾತಕೋತ್ತರ ಪದವಿ (MSc) ನೀಡುತ್ತಿವೆ. ಸಮಗ್ರ ಪ್ರಕ್ರಿಯೆಯು ಮಾರುಕಟ್ಟೆ ಸಂಶೋಧನೆಯೊಂದಿಗೆ ಪ್ರಾರಂಭವಾಗಿ, ಮಾರುಕಟ್ಟೆ ವಿಭಜನೆ, ವ್ಯಾಪಾರ ಯೋಜನೆ ಮತ್ತು ಕಾರ್ಯಗತ ಮಾಡುವುದು-ಹೀಗೆ ಮುಂದುವರಿಯುತ್ತದೆ. ವ್ಯಾಪಾರ ಪೂರ್ವದ ವ್ಯಾಪಾರೋತ್ತರ ಮಾರಾಟ ಪ್ರಚಾರ ಚಟುವಟಿಕೆಗಳೊಂದಿಗೆ ಇದು ಕೊನೆಗೊಳ್ಳುತ್ತದೆ. ಹಲವಾರು ಸೃಜನಾತ್ಮಕ ಕಲೆಗಳೊಂದಿಗೆ ಇದರ ಸಂಬಂಧವಿದೆ. ವ್ಯಾಪಾರೋದ್ಯಮಯ ವಿಷಯದಲ್ಲಿ ಮರು-ಅನ್ವೇಷಣೆ ಆಗುತ್ತಲೇ ಇರುತ್ತದೆ. ಅದರ ಶಬ್ದಕೋಶ ಕಾಲದಿಂದ ಕಾಲಕ್ಕೆ, ಸಂಸ್ಕೃತಿಯನ್ನನುಸರಿಸಿ ತಂತಾನೇ ಅಭಿವೃದ್ಧಿಯಾಗುತ್ತದೆ.
ಒಂದು ವ್ಯವಸ್ಥೆಯ ದೃಷ್ಟಿಕೋನದಲ್ಲಿ ವ್ಯಾಪಾರೋದ್ಯಮಯನ್ನು ನೋಡಿದರೆ, ಮಾರಾಟ ಪ್ರಕ್ರಿಯೆ ನಿರ್ವಹಣೆಯಂತೆ ವ್ಯಾಪಾರೋದ್ಯಮಯು ಇತರ ಕ್ರಿಯೆಗಳೊಂದಿಗೆ ಅಂತರ ಸಂಬಂಧ ಹೊಂದಿದ ಮತ್ತು ಪರಸ್ಪರ ಅವಲಂಬಿತ ಪ್ರಕ್ರಿಯೆಗಳ ಒಂದು ಗುಚ್ಛ.[೨]. ಸಂಬಂಧಪಟ್ಟ ವಿವಿಧ ಹೊಸ ಪ್ರಸ್ತಾಪಗಳನ್ನು ಬಳಸಿ ಅದರ ವಿಧಾನಗಳಲ್ಲಿ ಸುಧಾರಣೆ ತರಬಹುದು.
ವ್ಯಾಪಾರೋದ್ಯಮದ ಪರಿಕಲ್ಪನೆ
[ಬದಲಾಯಿಸಿ]ವ್ಯಾಪಾರೋದ್ಯಮ ಪರಿಕಲ್ಪನೆ ಯು ಆಧುನಿಕ ವ್ಯಾಪಾರೋದ್ಯಮ ಮೂಲಭೂತ ಪ್ರಸ್ತಾವಕ್ಕೆ ಸೇರಿರುತ್ತದೆ. ಸಂಸ್ಥೆಯು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಬದಲು, ಗ್ರಾಹಕರ ಅಗತ್ಯ ಮತ್ತು ಅಪೇಕ್ಷೆಗಳನ್ನು ತನ್ನ ಪ್ರತಿಸ್ಪರ್ಧಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸಂಸ್ಥೆಯು ತೃಪ್ತಿಪಡಿಸುವುದು ಈ ಪರಿಕಲ್ಪನೆಯ ಉದ್ದೇಶ.
ವ್ಯಾಪಾರೋದ್ಯಮ ದೃಷ್ಟಿಕೋನಗಳು
[ಬದಲಾಯಿಸಿ]ವ್ಯಾಪಾರೋದ್ಯಮ ವಿಷಯದ ದೃಷ್ಟಿಕೋನವು ಸಂಸ್ಥೆಯ ಸರಕು ಅಥವಾ ಸೇವೆಯೆಡೆಗೆ ಗುರಿಪಡಿಸಿದ ಅನುಭೋಗಿಗಳು ಮತ್ತು ಅಂತಿಮ-ಬಳಕೆದಾರರನ್ನು ಹೊಂದಲು ಸಂಸ್ಥೆಯ ಗ್ರಹಿಕೆಗೆ ಅಥವಾ ಕಾರ್ಯವಿಧಾನಕ್ಕೆ ಸಂಬಂಧಿಸಿದೆ. ಹಲವಾರು ಸಾಮಾನ್ಯ ದೃಷ್ಟಿಕೋನಗಳು ಅಸ್ತಿತ್ವದಲ್ಲಿವೆ.
ಉತ್ಪನ್ನ ದೃಷ್ಟಿಕೋನ
[ಬದಲಾಯಿಸಿ]ಉತ್ಪನ್ನ ದೃಷ್ಟಿಕೋನವನ್ನು ಇಟ್ಟುಕೊಂಡ ಸಂಸ್ಥೆಯು ತನ್ನ ಉತ್ಫಾದನೆಯ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಿರುತ್ತದೆ. ಎಲ್ಲಿಯ ತನಕ ತನ್ನ ಉತ್ಪನ್ನದ ಗುಣವುವು ಶ್ರೇಷ್ಠ ಮಟ್ಟದಲ್ಲಿ ಇರುತ್ತದೆಯೋ ಅಲ್ಲಿಯ ತನಕ ಗ್ರಾಹಕ ತನ್ನ ಉತ್ಪಾದನೆಯನ್ನೇ ಕೊಂಡು ಬಳಸುತ್ತಾನೆ ಎಂದು ಸಂಸ್ಥೆಯು ಭಾವಿಸುತ್ತದೆ.
ಗ್ರಾಹಕರು ಮತ್ತು ಅವರ ಅಗತ್ಯ ಮತ್ತು ಅಪೇಕ್ಷೆಗಳ ಬಗ್ಗೆ ಸಂಸ್ಥೆಯು ಉತ್ತಮ ಅರಿವನ್ನು ಹೊಂದಿದ್ದಲ್ಲಿ ಮಾತ್ರ ಈ ದೃಷ್ಟಿಕೋನವು ಪರಿಣಾಮಕಾರಿಯಾಗಿದೆ. ಸೋನಿ ವಾಕ್‌ಮ್ಯಾನ್ ಅಥವಾ ಆಪಲ್ ಐಪಾಡ್ ಇದಕ್ಕೊಂದು ಉದಾಹರಣೆ-ಇವುಗಳು ಪ್ರತ್ಯಕ್ಷ ಜ್ಞಾನದಿಂದಲೋ ಅಥವಾ ಸಂಶೋಧನೆಯಿಂದಲೋ ಹುಟ್ಟಿ ಬಂದಿವೆ.
ಮಾರಾಟದ ದೃಷ್ಟಿಕೋನ
[ಬದಲಾಯಿಸಿ]ನಿರ್ದಿಷ್ಟ ಉತ್ಪನ್ನದ ಮಾರಾಟೋದ್ದೇಶದ ಸಂಸ್ಥೆ ಗ್ರಾಹಕನ ಹೊಸ ಬೇಡಿಕೆಗಳನ್ನು ನಿರ್ಧರಿಸುವುದಕ್ಕಿಂತ ಹೆಚ್ಚಾಗಿ ತನ್ನ ಮೊದಲ ಗಮನವನ್ನು ಮಾರಾಟ/ಪ್ರಚಾರದ ಕಡೆ ಕೇಂದ್ರೀಕರಿಸುತ್ತದೆ. ಪರಿಣಾಮವಾಗಿ, ಈಗಾಗಲೇ ಅಸ್ತಿತ್ವದಲ್ಲಿರುವ ತನ್ನ ಉತ್ಪನ್ನದ ಮಾರಾಟಕ್ಕಾಗಿ ಅಧಿಕ ಪ್ರಚಾರ ತಂತ್ರಗಳನ್ನು ಬಳಸಿ ಅತ್ಯಧಿಕ ಮಾರಾಟದತ್ತ ತನ್ನ ಗುರಿಯನ್ನು ನೆಡುತ್ತದೆ.
ಅಧಿಕ ಬೇಡಿಕೆಯಲ್ಲಿರುವ ಸರಕನ್ನು ಮಾರಾಟ ಮಾಡುವುದಕ್ಕೆ ಇಂಥ ಸನ್ನಿವೇಶ ಅತ್ಯುತ್ತಮ-ಮಾರಾಟವಾಗದೇ ಉಳಿದಿರುವ ದಾಸ್ತಾನು ಅಥವಾ ಅದಕ್ಕೆ ವ್ಯತಿರಿಕ್ತವಾದ್ದನ್ನು ಮಾರಾಟ ಮಾಡಲು ಸಂಸ್ಥೆ ಮುಂದಾಗುತ್ತದೆ.ಇಂಥ ಸರಕಿನ ಮೇಲೆ ಗ್ರಾಹನ ಅಭಿರುಚಿ ತಗ್ಗುವ ಸಂಭವ ಇಲ್ಲದಿರುವಾಗ ಸಂಸ್ಥೆ ಈ ಬಗೆಯ ಉಪಾಯ ಅನುಸರಿಸುತ್ತದೆ.
ಉತ್ಪಾದನಾ ದೃಷ್ಟಿಕೋನ
[ಬದಲಾಯಿಸಿ]ಸರಕು ಮತ್ತು ಸೇವೆಗಳ ಉತ್ಪಾದನಾ ಪರಿಣತ ಸಂಸ್ಥೆ ಎಷ್ಟು ಸಾಧ್ಯವೋ ಅಷ್ಟು ಉತ್ಪನ್ನ ಮಾಡುವುದರತ್ತ ತನ್ನ ನಿಲುವನ್ನು ಕೇಂದ್ರೀಕರಿಸುತ್ತದೆ. ಅಗತ್ಯವಾದ ಕನಿಷ್ಠ ದಕ್ಷತಾ ಮಟ್ಟವನ್ನು ತಲಪುವವರೆಗೆ ಪ್ರಾಣಾನುಗುಣ ಉಳಿತಾಯವನ್ನು ದುಡಿಸಿಕೊಳ್ಳುವುದು ಸಂಸ್ಥೆಗೆ ಮಹತ್ವದ್ದಾಗುತ್ತದೆ.
ಸರಕು ಮತ್ತು ಸೇವೆಗೆ ಉತ್ತಮ ಬೇಡಿಕೆಯಿದ್ದಾಗ ಮತ್ತು ಗ್ರಾಹಕನ ಅಭಿರುಚಿ ತ್ವರಿತವಾಗಿ ಬದಲಾಣೆಗೆ ಈಡಾಗದು ಎಂದು ಖಚಿತವಾದಾಗ ಉತ್ಪಾದನಾ ದೃಷ್ಟಿಕೋನವನ್ನು ಬಳಸಲಾಗುತ್ತದೆ (ಮಾರಾಟ ದೃಷ್ಟಿಕೋನಕ್ಕೆ ಇದು ಸಮ).
ವ್ಯಾಪಾರೋದ್ಯಮ ದೃಷ್ಟಿಕೋನ
[ಬದಲಾಯಿಸಿ]ವ್ಯಾಪಾರೋದ್ಯಮಯ ನಿಲುವು ಸಮಕಾಲೀನ ವ್ಯಾಪಾರೋದ್ಯಮಯಲ್ಲಿ ಬಳಸುವ ಅತಿ ಸಾಮಾನ್ಯ ದೃಷ್ಟಿಕೋನವಾಗಿದೆ. ಇದರಂತೆ ಸಂಸ್ಥೆಯು ವ್ಯಾಪಾರೋದ್ಯಮ ಪರಿಕಲ್ಪನೆಯು ಅದರ ವ್ಯಾಪಾರೋದ್ಯಮಯ ಯೋಜನೆಗಳನ್ನು ಮೂಲಭೂತವಾಗಿ ಆಧರಿಸಿರುತ್ತದೆ. ಹಾಗೆಯೇ ಸರಬರಾಜು ಮಾಡಿದ ಉತ್ಪನ್ನಗಳು ಗ್ರಾಹಕರ ಹೊಸ ಅಭಿರುಚಿಗೆ ಹೊಂದಿರುತ್ತದೆ.
ಉದಾಹರಣೆಗೆ ಗ್ರಾಹಕರ ಬಯಕೆಗಳನ್ನು ಅಳೆಯಲು ಸಂಸ್ಥೆಯು ಮಾರುಕಟ್ಟೆ ಸಂಶೋಧಿಸಿ, ದೊರೆತ ಮಾಹಿತಿಯಂತೆ ಉತ್ಪನ್ನವನ್ನು ಅಭಿವೃದ್ಧಿಸಲು R&Dಯನ್ನು ಬಳಸಬಹುದು. ನಂತರ ಇಂಥ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಜನರಿಗೆ ತಿಳಿಸಲು ಪ್ರಚಾರ ತಂತ್ರಗಳನ್ನು ಸಂಸ್ಥೆ ಹೂಡುತ್ತದೆ. ಕೆಲವೊಮ್ಮೆ ವ್ಯಾಪಾರೋದ್ಯಮ ನಿಲುವು ಮೂರು ಮುಖ್ಯ ಅಂಶಗಳನ್ನು ಹೊಂದಿರುತ್ತದೆ. ಅವುಗಳೆಂದರೆ:
ಗ್ರಾಹಕ ದೃಷ್ಟಿಕೋನ
[ಬದಲಾಯಿಸಿ]ಇಚ್ಛೆಗನುಗುಣವಾದ ಸರಕನ್ನು ಜನ ಖರೀದಿಸಲು ಸಾಧ್ಯವಾಗುವಂತೆ ಉತ್ಫಾದನೆ ಮಡುವ ಮೂಲಕ ಸಂಸ್ಥೆಯು ತನ್ನ ಆರ್ಥಿಕ ಚೈತನ್ಯವನ್ನು ಉಳಿಸಿಕೊಳ್ಳುತ್ತದೆ. ಸಂಸ್ಥೆಯ ಭವಿಷ್ಯದ ಅಸ್ತಿತ್ವ ಮತ್ತು ಮುಂದುವರಿಕೆಗೆ ಗ್ರಾಹಕರ ಬೇಡಿಕೆಯು ಪ್ರಮುಖವಾದದ್ದು.
ಸಂಸ್ಥೆಯ ದೃಷ್ಟಿಕೋನ
[ಬದಲಾಯಿಸಿ]ಇಂಥ ಸನ್ನಿವೇಶದಲ್ಲಿ ಸಂಸ್ಥೆಯ ಕಾರ್ಯಾಚರಣೆ ಮಟ್ಟದಲ್ಲಿ ಸಂಸ್ಥೆಯ ಮಾರಾಟ ವ್ಯವಸ್ಥೆ ವಿಭಾಗಕ್ಕೆ ಹೆಚ್ಚಿನ ಮಹತ್ವವಿದೆ.
ಸಂಸ್ಥೆಯ ಇತರ ಆಂತರ್ಯ ವಿಭಾಗಗಳ ಕಾರ್ಯಗಳಿಗೆ ಸಂಸ್ಥೆಯ ಮಾರಾಟ ವ್ಯವಸ್ಥೆ ವಿಭಾಗದಿಂದ ಬಂದ ಮಾಹಿತಿ ಮಾರ್ಗದರ್ಶಿಯಾಗುತ್ತದೆ.ಉದಾಹರಣೆಗೆ ಹೊಸ ಬಗೆಯ ಉತ್ಪನ್ನವನ್ನು ಗ್ರಾಹಕರು ಅಪೇಕ್ಷಿಸುತ್ತಿದ್ದಾರೆಯೇ ಅಥವಾ ಈಗಾಗಲೇ ಸಿದ್ಧವಿರುವ ಉತ್ಪನ್ನದ ಹೊಸ ಉಪಯೋಗವನ್ನು ಕೇಳುತ್ತಿದ್ದಾರೆಯೇ ಎಂಬ ಅಂಶವನ್ನು ಮಾರಾಟ ವಿಭಾಗವು ಖಚಿತ ಪಡಿಸುವ ಸಾಧ್ಯತೆ ಇದೆ.(ಮಾರಾಟ ಸಂಶೋಧನೆಯ ಮೂಲಕ)ಗ್ರಾಹಕರ ಹೊಸ ಬಯಕೆಗೆ ಅನುಗುಣವಾಗಿ ಹೊಸ ಉತ್ಪನ್ನ/ಸೇವೆಯ ಮೂಲಮಾದರಿಯನ್ನು ರಚಿಸುವಂತೆ R&D ವಿಭಾಗಕ್ಕೆ ಮಾರಾಟ ವಿಭಾಗವು ಸೂಚಿಸುತ್ತದೆ.
ಈ ಹಂತಕ್ಕೆ ಬಂದಾಗ ಉತ್ಪನ್ನದ ತಯಾರಿಕೆಯಲ್ಲಿ ಉತ್ಪಾದನಾ ವಿಭಾಗವು ತೊಡಗುತ್ತದೆ.ನಂತರ ಉತ್ಪನ್ನದ ಪ್ರಚಾರ, ಹಂಚಿಕೆ, ದರ ನಿಗದಿ ಇತ್ಯಾದಿಗಳಲ್ಲಿ ಮಾರಾಟ ವಿಭಾಗವು ಕಾರ್ಯನಿರತವಾಗುತ್ತದೆ.ಉತ್ಪನ್ನದ ಅಭಿವೃದ್ಧಿ, ಉತ್ಪಾದನೆ ಮತ್ತು ಪ್ರಚಾರಕ್ಕಾಗಿ ಬೇಕಾಗುವ ನಿಧಿ ನೆರವು ಪಡೆಯಲು ಸಂಸ್ಥೆಯ ಹಣಕಾಸು ವಿಭಾಗದ ಸಲಹೆ ಪಡೆಯುತ್ತದೆ.
ಸಂಸ್ಥೆಯೊಂದು ಮಾರಾಟ ನಿಲುವಿಗೆ ನಿಷ್ಠವಾದಾಗ ಅಂತರ್ವಿಭಾಗೀಯ ಘರ್ಷಣೆಗಳು ಸಂಭವಿಸುವ ಸಾಧ್ಯತೆಯುಂಟು. ನವೀನ ಉತ್ಪನ್ನದ ತಯಾರಿಕೆಗೆ ಅಗತ್ಯವಿರುವ ಹೊಸ ಮೂಲ ದಾಸ್ತಾನು ಸ್ಥಾಪಿಸಲು,ಅದಕ್ಕೆ ಬೆಂಬಲ ನೀಡಲು ಉತ್ಪಾದನಾ ವಿಭಾಗವು ವಿರೋಧಿಸ ಬಹುದು. ಹಣಕಾಸಿನ ಒಳ ಹರಿವು ಒಳಗಿಂದೊಳಗೇ ಶಿಥಿಲವಾದೀತು ಎಂದು ಭಾವಿಸಿ ಅಗತ್ಯವಾದ ಬಂಡವಾಳ ವೆಚ್ಚಕ್ಕೆ ಸಂಸ್ಥೆಯ ಹಣಕಾಸು ವಿಭಾಗವು ಸಮ್ಮತಿಸದೇ ಇರಬಹುದು.
ಪರಸ್ಪರ ಲಾಭದಾಯಕ ವಿನಿಮಯ
[ಬದಲಾಯಿಸಿ]ಮಾರುಕಟ್ಟೆ ಅರ್ಥ ವ್ಯವಸ್ಥೆಯಲ್ಲಿನ ವ್ಯವಹಾರದಲ್ಲಿ ಲಾಭ/ಮಾರುಕಟ್ಟೆಯ ಪಾಲು/ಮಾರಾಟ ಮಾಡುವುದರಿಂದ ಸಂಸ್ಥೆಯು ಅಧಿಕ ಲಾಭವನ್ನು ಗಳಿಸಬಹುದು. ಇನ್ನೊಂದು ತುದಿಯಲ್ಲಿ ಸರಕು ಅಥವಾ ಸೇವೆಯನ್ನು ಖರೀದಿಸುವುದರಿಂದ ಗ್ರಾಹಕನ ಅಗತ್ಯ/ಬಯಕೆಯು ತೀರಬಹುದು ,ಉಪಯುಕ್ತವೂ,ವಿಶ್ವಸನೀಯವೂ ಆಗಿ ನೀಡಿದ ಹಣಕ್ಕೆ ಬೆಲೆ ಸಿಕ್ಕಂತೆಯೂ ಬಳಕೆದಾರ ಭಾವಿಸಬಹುದು. ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಯಾವುದೇ ಪೂರೈಕೆದಾರರಿಂದ ಸರಕನ್ನು ಯಾರೊಬ್ಬರು ಖರೀದಿಸದಿದ್ದರೆ, ಸಮಕಾಲೀನ ವ್ಯಾಪಾರೋದ್ಯಮಯ ಆದರ್ಶಗಳೊಂದಿಗೆ ಅನುಭೋಗಿಗಳು ಸರಕನ್ನು ಖರೀದಿಸುವಂತೆ ಮಾಡಬೇಕು.
ನಾಲ್ಕಂಶದ ಸೂತ್ರ
[ಬದಲಾಯಿಸಿ]ಸರಕುಗಳು ಅಥವಾ ಸೇವೆಗಳನ್ನು ಖರೀದಿಸುವ ಗ್ರಾಹಕರ ನಿರ್ಧಾರದ ಮೇಲೆ ಪ್ರಭಾವ ಬೀರುವಂಥ ಕಾರ್ಯನಿರ್ವಹಣೆಯನ್ನು ಅಸಂಖ್ಯಾತ ಸಂಸ್ಥೆಗಳಲ್ಲಿ ಹಾರ್ವರ್ಡ್ ವಾಣಿಜ್ಯ ಶಿಕ್ಷಣ ಶಾಲೆಯಲ್ಲಿರುವ ಪ್ರಾಧ್ಯಾಪಕ ನೀಲ್ ಬೋರ್ಡನ್ 1960ರ ದಶಕದ ಪ್ರಾರಂಭದಲ್ಲಿ ಗುರುತಿಸಿದರು. ಕಂಪನಿಯ ಈ ಎಲ್ಲಾ ಚಟುವಟಿಕೆಗಳೂ "ವ್ಯಾಪಾರೋದ್ಯಮಗಳ ಮಿಶ್ರಣ”ವನ್ನು ಪ್ರತಿನಿಧಿಸುತ್ತದೆ ಎಂಬುದು ಬೋರ್ಡನ್ ಅಭಿಪ್ರಾಯ ವ್ಯಕ್ತ ಮಾಡಿದರು. ವ್ಯಾಪಾರೋದ್ಯಮಗಳ ಮಿಶ್ರಣವು ಉತ್ಪನ್ನ,ದರ ನಿಗದಿ, ಸ್ಥಳ ಮತ್ತು ಪ್ರಚಾರ-ಎಂಬ ನಾಲ್ಕು ಅಂಶಗಳನ್ನು ಹೊಂದಿರುತ್ತದೆ ಎಂದು ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಪ್ರಾಧ್ಯಪಕ E. ಜೆರೊಮ್ ಮ್ಯಾಕ್‌ಕಾರ್ಥಿE. ಜೆರೊಮ್ ಮ್ಯಕ್‌ಕಾರ್ಥಿ 1960ರ ದಶಕದ ಪ್ರಾರಂಭದಲ್ಲಿ ಹೇಳಿದರು.
- ಉತ್ಪನ್ನ
- ಸರಕಿನ ನಿರ್ದಿಷ್ಟತೆ ಮತ್ತು ಅವು ಅಂತಿಮ ಬಳಕೆದಾರರ ಅಗತ್ಯ ಮತ್ತು ಅಪೇಕ್ಷೆಗೆ ಹೇಗೆ ಸಂಬಂಧಿಸಿದೆ ಎಂಬುದನ್ನು ಉತ್ಪನನ್ನಾಧಾರಿತ ವ್ಯಾಪಾರೋದ್ಯಮ ವ್ಯವಹರಿಸುತ್ತದೆ. ಸಾಮಾನ್ಯವಾಗಿ ವಾಯಿದೆ, ಖಾತರಿಯಂಥ ಅಂಶಗಳ ಬೆಂಬಲವನ್ನು ಉತ್ಪನ್ನದ ವ್ಯಾಪ್ತಿಯು ಒಳಗೊಂಡಿರುತ್ತದೆ.
- ದರ ನಿಗದಿ
- ರಿಯಾಯಿತಿಗಳೂ ಒಳಗೊಂಡಂತೆ ಉತ್ಪನ್ನಗಳಿಗೆ ದರ ನಿಗದಿ ಪಡಿಸುವ ಪ್ರಕ್ರಿಯೆ ಇದು. ದರ ನಿಗದಿ ಮಾಡುವುದೆಂದರೆ ಅದು ಕೇವಲ ಹಣದ ರೂಪದ್ದಷ್ಟೇ ಅಲ್ಲ.ಯಾವುದಾರೂ ಉತ್ಪನ್ನ ಅಥವಾ ಸೇವೆಯ ವಿನಿಮಯವೂ ಆಗಿರಬಹುದು.ಉದಾಹರಣೆಗೆ ಸಮಯ ವ್ಯಯ ಮಾಡುವುದು,ಶಕ್ತಿಯನ್ನು ವಿನಿಯೋಗಿಸುವುದು ಅಥವಾ ಗ್ರಾಹಕನತ್ತ ಗಮನ ಹರಿಸುವುದು ಇತ್ಯಾದಿಯನ್ನು ಅದು ಒಳಗೊಂಡಿದೆ. ಬೆಲೆ ನಿಗದಿ ಮಾಡುವ ವಿಧಾನಗಳು ಹೆಚ್ಚಾಗಿ ದರ ನಿಗದಿ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ.
- ವಿತರಣೆ (ಅಥವಾ ಹಂಚಿಕೆ)
- ಗ್ರಾಹಕರಿಗೆ ಉತ್ಪನ್ನ ಹೇಗೆ ಲಭಿಸುತ್ತದೆ ಎನ್ನುವುದರ ಮಾರ್ಗಸೂಚಿ ಇದು.ಉದಾಹರಣೆಗೆ:ಚಿಲ್ಲರೆ ಮಾರಾಟದಲ್ಲಿ ದೊರೆಯುವುದೇ, ಹಾಗಿದ್ದಲ್ಲಿ ಮಾರಾಟದ ಸ್ಥಳ ಯಾವುದು?- ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಉಂಟು. ಸರಕು ಅಥವಾ ಸೇವೆಯು ಯಾವ ಮಾಧ್ಯಮದ ಮೂಲಕ (ಉದಾ. ಆನ್‌ಲೈನ್ vs. ಚಿಲ್ಲರೆ ಮಾರಾಟ), ಯಾವ ಭೌಗೋಳಿಕ ಪ್ರದೇಶ ಅಥವಾ ಉದ್ಯಮದಿಂದ, ಯಾವ ವಲಯಕ್ಕಾಗಿ (ಯುವವಯಸ್ಕರಿಗೋ,ಸಂಸಾರವಂದಿರಿಗೋ, ವಾಣಿಜ್ಯೋದ್ಯಮಿಗಳಿಗೋ) ಮಾರಾಟವಾಗುತ್ತಿದೆ ಎಂಬ ಸಂಗತಿ ಉತ್ಪನ್ನದ ಮಾರಾಟದ ಮೇಲೆ ಕೆಲೊಮ್ಮೆ ಪರಿಣಾಮ ಬೀರುತ್ತದೆ.
- ಪ್ರಚಾರ
- ವೈಯಕ್ತಿಕ ಮಾರಾಟ ಸೇರಿದಂತೆ ಜಾಹೀರಾತು ಬಿಡುಗಡೆ ಮಾಡುವುದು, ಮಾರಾಟ ಪ್ರಚುರಗೊಳಿಸುವುದು ಮತ್ತು ಪ್ರೋತ್ಸಾಹಿಕ ಶಿಕ್ಷಣವನ್ನೊಳಗೊಂಡ ಮಾರಾಟ ಪ್ರಚಾರದಲ್ಲಿ ತೊಡಗುವುದು ಇಲ್ಲಿನ ಕಾರ್ಯ ವೈಖರಿ. ಉತ್ಪನ್ನ, ಮುದ್ರೆ ಅಥವಾ ಸಂಸ್ಥೆಯ ವಿವಿಧ ವಿಧಾನಗಳನ್ನು ಅನುಸರಿಸಿ ಸರಕು ವ್ಯಾಪಾರೀ ಮುದ್ರೆಯನ್ನು(=Branding)ಪಡೆಯುವುದನ್ನು ಇದು ನಿರೂಪಿಸುತ್ತದೆ.
ಈ ನಾಲ್ಕು ಅಂಶಗಳನ್ನು ಕೆಲವೊಮ್ಮೆ ವ್ಯಾಪಾರೋದ್ಯಮದ ಮಿಶ್ರಣ ಎಂದು ಸಂಬೋಧಿಸಲಾಗಿದೆ.ತನ್ನ ಉದ್ಯಮದ ಉನ್ನತಿಗಾಗಿ ಕುಶಲವಾಗಿ ಇದನ್ನು ಉದ್ಯಮಿಯು ಬಳಸಿಕೊಳ್ಳುತ್ತಾನೆ.
ಅಲ್ಪ ಮೌಲ್ಯದ ಗೃಹೋಪಯೋಗಿ ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವವರಿಗೆ ಮೇಲೆ ಹೇಳಲಾದ ನಾಲ್ಕು ಅಂಶಗಳು ತುಂಬ ಉಪಯುಕ್ತ. ಉದ್ಯಮೋತ್ಪನ್ನಗಳು, ಸೇವೆಗಳು, ಹೆಚ್ಚು ಮೌಲ್ಯದ ಗೃಹೋಪಯೋಗಿ ಸರಕುಗಳಿಗೆ ಈ ನಮೊನೆಯಲ್ಲಿ ಹೊಂದಾಣಿಕೆಯ ಅಗತ್ಯವಿದೆ. ಸೇವಾ ವ್ಯಾಪಾರೋದ್ಯಮದಲ್ಲಿ ತೊಡಗಿರುವವರು ಸೇವಾ ವೈಶಿಷ್ಟ್ಯವನ್ನು ರೂಢಿಸಿಕೊಳ್ಳ ಬೇಕು.
ಕೈಗಾರಿಕಾ ಅಥವಾ B2B ವ್ಯಾಪಾರೋದ್ಯಮಿಗಳು ದೀರ್ಘಾವಧಿಯ ಕರಾರಿನ ಒಪ್ಪಂದ ಮಾಡಿಕೊಂಡಂತೆ ಅಪ್ಪಟ ಸರಬರಾಜು ಸರಪಳಿ ವ್ಯವಹಾರಕ್ಕೆ ಬದ್ಧರಾಗಿರಬೇಕು. ಬಿಡಿ ಬಿಡಿಯಾಗಿ ನಡೆಸಲಾಗುವ ವ್ಯವಹಾರಕ್ಕಿಂಕಲೂ ಇಲ್ಲಿ ದೀರ್ಘಕಾಲೀನ ವ್ಯಾಪಾರೋದ್ಯಮ ಸಂಬಂಧ ಮುಖ್ಯವಾಗುತ್ತದೆ.
"ಸಂಸ್ಥೆಯ ಹೊರಗಿದ್ದುಕೊಂಡು ಒಳ ವ್ಯವಸ್ಥೆಯನ್ನು ಗಮನಿಸುವುದು ವ್ಯಾಪಾರೋದ್ಯಮದ ಸಾರ ಸಂಗ್ರಹ. ಆದರೆ ಮೇಲೆ ಹೇಳಲಾದ ನಾಲ್ಕಂಶದ ಪದ್ಧತಿ ಪಾಲನೆಯು ಸಂಸ್ಥೆಯ ಒಳಗಿದ್ದು ಹೊರಗಿನದನ್ನು ಗಮನಿಸುವುದಕ್ಕೆ ಅಪ್ರಜ್ಞಾಪೂರ್ವಕವಾಗಿ ಒತ್ತು ನೀಡುತ್ತದೆ-ಇದು ಈ ಪದ್ಧತಿಯ ಮಿತಿ" ಎಂದು ರೈಡಿಂಗ್ ದಿ ವೇವ್ಸ್ ಆಫ್ ಚೇಂಚ್ ನಲ್ಲಿ (ಜೊಸ್ಸಿ-ಬ್ಯಾಸ್, 1988) ಮೊರ್ಗನ್ ವಿವರಿಸುತ್ತಾರೆ.
ಸೇವೆ ಯನ್ನು ಒದಗಿಸುವಂಥ ಉದ್ಯಮದಲ್ಲಿ ಉತ್ಪನ್ನ ಉದ್ಯಮಕ್ಕಿಂತ ಭಿನ್ನವಾದ ಕೆಳಗೆ ಕಾಣಿಸಿದ ಮೂರು ಅಂಶಗಳನ್ನು ಸೇರಿಸಿ ಒಟ್ಟು ಏಳು ಅಂಶಗಳಾಗುತ್ತವೆ:
ಪ್ರಕ್ರಿಯೆ - ಬೇಡಿಕೆಗಳ ನಿರ್ವಹಣೆ ಮತ್ತು ಗ್ರಾಹಕರನ್ನು ಸಂತೃಪ್ತಿಗೊಳಿಸುವ ಮಾರ್ಗ
ಭೌತಿಕ ಗೋಚರತೆ - ಖರೀದಿ ಸ್ಥಳದಲ್ಲಿ ಗ್ರಾಹಕನಿಗೆ ಗೋಚರಿಸುವ ಅಂಗಡಿಯ ಶೈಲಿ ಮತ್ತು ಉಂಟಾಗುವ ಖರೀದಿ ಅನುಭವ.
ಜನ -ಜನರನ್ನು ಭೇಟಿ ಮಾಡುವುದು ಮತ್ತು ಗ್ರಾಹಕರೊಂದಿಗೆ ವ್ಯವಹರಿಸುವ ವೈಖರಿ.
ಮಾರುಕಟ್ಟೆ ತೃಪ್ತಿಯನ್ನು ತಲಪಿದಾಗ, ಉತ್ಪನ್ನ ಮಾರಾಟದಲ್ಲಿ ತೊಡಗಿರುವವರಿಗೆ ಮತ್ತು ಸೇವೆ ಒದಗಿಸುವವರಿಗೆ ಇಬ್ಬರಿಗೂ ಏಳು ಅಂಶಗಳು ಪ್ರಸ್ತುತವಾಗುತ್ತದೆ ಆ ಕಂಪನಿಗಳು ಮಾರುವ ಮಾರಾಟ ಉತ್ಪನ್ನಗಳು 7 ಅಂಶಗಳ ಸಂಬಂಧಹೊಂದಿದ್ದು, ಸೇವೆಯಲ್ಲಿ ತೊಡಗಿದ್ದರೆ ಮಾರುಕಟ್ಟೆಗಳಲ್ಲಿ ಗ್ರಾಹಕರು ಹೆಚ್ಚು ತೃಪ್ತಗೊಳ್ಳುವರು: ಆಗ ಗ್ರಾಹಕರು ಆ ಪ್ರಕ್ರಿಯೆಯಲ್ಲಿ ತೊಡಗಿರುವ ಜನರರಿಂದ ಸೇವೆಯ ಮೂಲಕ ಸರಕಗಳನ್ನು ಪಡೆಯುವಾಗ ಮಾರಾಟಗಾರರ ನಡುವಿನ ವ್ಯತ್ಯಾಸವನ್ನು ಗ್ರಹಿಸುವರು.
ಪ್ಯಾಕೇಜಿಂಗ್(=ಅತ್ತಿತ್ತಾಗದಂತೆ ಸರಕನ್ನು ಪೊಟ್ಟಣಕ್ಕೆ ಸೇರಿಸುವುದು)ಎಂಬುದು ಉತ್ಪನ್ನದ ಒಂದು ಭಾಗವೇ ಆಗಿದೆ ಎಂದು ಅನೇಕ ಲೇಖಕರು ಭಾವಿಸುತ್ತಾರೆ.ಕೆಲವು ಮಾರುಕಟ್ಟೆಯಲ್ಲಿ (ಉದಾ:ಜಪಾನ್, ಚೀನಾ)ಮತ್ತು ನಿರ್ದಿಷ್ಟ ಉತ್ಪನ್ನಗಳ(ಸುಗಂಧ ದೃವ್ಯ, ಸೌಂದರ್ಯ ಸಾಧನ)ಪ್ಯಾಕೇಜಿಂಗ್ ಅತಿ ಮಹತ್ವದ್ದಾಗಿದೆ-ಎಷ್ಟೆಂದರೆ ಉತ್ಪನ್ನಕ್ಕಿಂತಲೂ ಮಹತ್ತರವಾದ ಮಣೆ ಅದಕ್ಕೆ.
ವ್ಯಾಪಾರೋದ್ಯಮದ ವಾತಾವರಣ
[ಬದಲಾಯಿಸಿ]ವ್ಯಾಪಾರೋದ್ಯಮದಲ್ಲಿ ಸಂಸ್ಥೆಯ ನಿರ್ಣಯ/ಯೋಜನೆ ಇತ್ತ್ಯಾದಿಗಳ ಮೇಲೆ ಪ್ರಭಾವ ಬೀರಬಲ್ಲಂಥ(ಆಂತರಿಕ,ಬಾಹ್ಯ,ಪ್ರತ್ಯಕ್ಷ,ಅಪ್ರತ್ಯಕ್ಷ ಸಂಗತಿಗಳು)ಎಲ್ಲ ವಿಷಯಗಳನ್ನೂ 'ವ್ಯಾಪಾರೋದ್ಯಮ ವಾತಾವರಣ' ಎಂಬ ಪದ ಗುಚ್ಛ ಒಳಗೊಂಡಿದೆ. ಸಂಸ್ಥೆಯೊಂದರ ವ್ಯಾಪಾರೋದ್ಯಮ ವಾತಾವರಣ ಮೂರು ಮುಖ್ಯ ವಲಯಗಳನ್ನು ಒಳಗೊಂಡಿದೆ. ಅವುಗಳೆಂದರೆ:
- ಸ್ಥೂಲ ವಾತಾವರಣ,ಇದು ಸಂಸ್ಥೆಯ ನಿಯಂತ್ರಣ ಇಲ್ಲದಿರುವುದು.
- ಸೂಕ್ಷ್ಮ ವಾತಾವರಣ,ಸಂಸ್ಥೆಯ ಅಧಿಕ ಪ್ರಮಾಣದ(ಸಂಪೂರ್ಣವಲ್ಲದಿದ್ದರೂ) ನಿಯಂತ್ರಣ ಸಾಧ್ಯವಿದೆ.
ಸ್ಥೂಲ ವಾತಾವರಣ
[ಬದಲಾಯಿಸಿ]ಸಂಸ್ಥೆಯ ವ್ಯಾಪಾರೋದ್ಯಮದ ಸ್ಥೂಲ ವಾತಾವರಣ ಅನೇಕ ಬಾಹ್ಯ ಅಂಶಗಳನ್ನು ಭಾರೀ ಪ್ರಮಾಣದಲ್ಲಿ ಪ್ರಕಟ ಪಡಿಸುತ್ತದೆ. ಇವುಗಳು ಅಪ್ಪಟವಾಗಿ ಅರ್ಥಿಕ, ಸಾಮಾಜಿಕ, ರಾಜಕೀಯ ಅಥವಾ ತಾಂತ್ರಿಕ ವಿಷಯಗಳನ್ನು ಒಳಗೊಂಡಿರುತ್ತದೆ. PESTLE (P=ರಾಜಕೀಯ,E=ಆರ್ಥಿಕ,S=ಸಾಮಾಜಿಕ,T=ತಾಂತ್ರಿಕ,L=ಕಾಯಿದೆಯ,E= ಪರಿಸರಾತ್ಮಕ) ವಿಶ್ಲೇಷಣೆಯ ಮೂಲಕ ಸಂಸ್ಥೆಯ ಸ್ಥೂಲ-ಸ್ಥಿತಿಗತಿಯನ್ನು ನಿಗದಿ ಮಾಡುವುದು ಸಾಮಾನ್ಯ ವಿಧಾನ. PESTLE ವಿಶ್ಲೇಷಣೆಯಲ್ಲಿ ರಾಷ್ಟ್ರೀಯ ರಾಜಕೀಯ ಸಮಸ್ಯೆಗಳು,ಸಂಸ್ಕೃತಿ ಮತ್ತು ಹವಾಮಾನ, ಪ್ರಮುಖ ಸ್ಥೂಲ ಆರ್ಥಿಕ ಪರಿಸ್ಥಿತಿಗಳು, ಆರೋಗ್ಯ ಮತ್ತು ಸೂಚ್ಯಂಕಗಳು (ಆರ್ಥಿಕ ಅಭಿವೃದ್ಧಿ, ಹಣದುಬ್ಬರ, ನಿರೂದ್ಯೋಗ ಇತ್ಯಾದಿ.), ಸಾಮಾಜಿಕ ಶೈಲಿಗಳು/ಪ್ರವೃತ್ತಿ ಮತ್ತು ಸಮಾಜದ ಮೇಲೆ ತಂತ್ರಜ್ಞಾನದ ಪ್ರಭಾವದ ಲಕ್ಷಣ ಮತ್ತು ಸಮಾಜದೊಳಗೆ ವ್ಯಾಪಾರದ ಪ್ರಕ್ರಿಯೆಗಳನ್ನು ಸಂಸ್ಥೆಯು ವಿಶ್ಲೇಷಿಸುತ್ತದೆ.
ಸೂಕ್ಷ್ಮ ವಾತಾವರಣ
[ಬದಲಾಯಿಸಿ]ಸಂಸ್ಥೆಯ ಸೂಕ್ಷ್ಮ-ವಾತಾವರಣವು ಸಂಸ್ಥೆಗೆ ಮತ್ತು ಸಂಸ್ಥೆ ಅಥವಾ ಅದಕ್ಕೆ ನಿಕಟ ಸಂಬಂಧಪಟ್ಟ ಪಾಲುದಾರರಿಗೆ ಸಂಬಂಧಿಸಿದ ಅಂಶಗಳನ್ನು ಒಳಗೊಂಡಿರುತ್ತದೆ.
ಸಂಸ್ಥೆಯ ಸೂಕ್ಷ್ಮ-ವಾತಾವರಣದ ವ್ಯಾಪ್ತಿ ಹೀಗಿದೆ:
- ಗ್ರಾಹಕರು/ಬಳಕೆದಾರರು
- ಉದ್ಯೋಗಿಗಳು
- ಪೂರೈಕೆದಾರರು
ಈ ಅಂಶಗಳ ಮೇಲೆ ಸಂಸ್ಥೆಯು ಹೆಚ್ಚಿನ ನಿಯಂತ್ರಣವನ್ನು ಹೊಂದಿದ್ದು ಇದು ಸ್ಥೂಲ ವಾತಾವರಣದ ವಿದ್ಯಮಾನಕ್ಕೆ ವಿರುದ್ಧವಾಗಿದೆ. ಸಂಸ್ಥೆಯ ಈ ಎಲ್ಲಾ ಅಂಶಗಳನ್ನು ವ್ಯಾಪಾರೋದ್ಯಮದ ಸಾಧನಗಳನ್ನಾಗಿ ಬಳಸಿ ನಿರ್ವಹಿಸಲಾಗುತ್ತದೆ/ನಿಯಂತ್ರಿಸಲಾಗುತ್ತದೆ
ವ್ಯಾಪಾರೋದ್ಯಮದಲ್ಲಿ ಸಂಶೋಧನೆ
[ಬದಲಾಯಿಸಿ]ವ್ಯಾಪಾರೋದ್ಯಮಯ ಚಟುವಟಿಕೆಗಳನ್ನು ಬೆಂಬಲಿಸುವುದು ಮತ್ತು ದತ್ತಾಂಶದ ಅಂಕಿಅಂಶಗಳನ್ನು ಮಾಹಿತಿಯನ್ನಾಗಿ ಪರಿವರ್ತಿಸುವುದು ವ್ಯಾಪಾರೋದ್ಯಮ ಸಂಶೋಧನೆಯಲ್ಲಿ ಅಡಕವಾಗಿದೆ. ಉದ್ಯಮದ ವ್ಯವಸ್ಥೆಯ ಚಟುವಟಿಕೆಗಳನ್ನು ಯೋಜಿಸಲು ಸಂಸ್ಥೆಯು ಈ ಮಾಹಿತಿಯನ್ನು ಬಳಸುತ್ತದೆ, ತನ್ನ ಉದ್ಯಮದ ಪರಿಸ್ಥಿತಿಯನ್ನು ತುಲನ ಮಾಡುತ್ತದೆ, ಪೂರೈಕೆದಾರರಿಂದ ಮಾಹಿತಿ ಪಡೆಯುತ್ತದೆ.
ವ್ಯಾಪಾರೋದ್ಯಮದ ಸಂಶೋಧನೆ ಮತ್ತು ಮಾರುಕಟ್ಟೆ ಸಂಶೋಧನೆಯನ್ನು ಪ್ರತ್ಯೇಕವಾಗಿ ನೋಡಬೇಕು. ಮಾರುಕಟ್ಟೆ ಸಂಶೋಧನೆಯು ನಿರ್ದಿಷ್ಟ ಮಾರುಕಟ್ಟೆಯ ಸಂಶೋಧನೆಗೆ ಸೀಮಿತವಾಗಿರುತ್ತದೆ. ಉದಾಹರಣೆಗೆ ಸೂಕ್ತ ಮಾರುಕಟ್ಟೆ ವಲಯವನ್ನು ಆಯ್ಕೆಮಾಡಿ ಆನಂತರ, ಗುರಿಪಡಿಸಿದ ಮಾರುಕಟ್ಟೆಯಲ್ಲಿ ಸಂಸ್ಥೆಯು ಸಂಶೋಧನೆಯನ್ನು ಆಯೋಜಿಸಬಹುದು. ವ್ಯಾಪಾರೋದ್ಯಮದ ಪರಿಧಿಯೊಳಗೆ ನಡೆಸಿದ ಸಂಶೋಧನೆಗಳೆಲ್ಲವೂ ವ್ಯಾಪಾರಕ್ಕೆ ಸಂಬಂಧಪಟ್ಟಿದ್ದಾಗಿದೆ. ಹೀಗಾಗಿ ಮಾರುಕಟ್ಟೆ ಸಂಶೋಧನೆಗಳೆಲ್ಲವೂ ವ್ಯಾಪಾರೋದ್ಯಮ ಸಂಶೋಧನೆಯ ಉಪವಿಭಾಗ ಎನಿಸಿದೆ.
ತಾವು ಪತ್ತೆ ಮಾಡಿದ್ದನ್ನು ಅರ್ಥೈಸಲು ಮತ್ತು ಕಲೆ ಹಾಕಿದ ಅಂಕಿಅಂಶಗಳನ್ನು ಮಾಹಿತಿಯನ್ನಾಗಿ ಪರಿವರ್ತಿಸಲು ವ್ಯಾಪಾರೋದ್ಯಮ ಸಂಶೋಧಕರು ಅಂಕಿಅಂಶ ವಿಧಾನವನ್ನು(ಗಣತ್ಮಕ ಸಂಶೋಧನೆ,ಪ್ರಮಾಣಾತ್ಮಕ ಸಂಶೋಧನೆ,ಊಹಾತ್ಮಕ ಪರೀಕ್ಷೆ,Chi-squared ಪರೀಕ್ಷೆ,ರೇಖೀಯ ಹಿಂಜರಿತ,ಪರಸ್ಪರ ಸಂಬಂಧೀಯ ಗುಣಾಂಶಗಳು,ಆವರ್ತೀಯ ವಿತರಣೆ,ವಿಷಮ ಮತ್ತು ದ್ವಿಪದ ವಿತರಣೆ ಇತ್ಯಾದಿ)ಅನುಸರಿಸುತ್ತಾರೆ.
ಉತ್ಪನ್ನ
[ಬದಲಾಯಿಸಿ]ಬ್ರ್ಯಾಂಡಿಂಗ್
[ಬದಲಾಯಿಸಿ]ಬ್ರ್ಯಾಂಡ್ ಎಂರೆ ಮುದ್ರೆಯುಳ್ಳ ಸರಕು-ಅದರ ಹೆಸರು,ಪದ, ವಿನ್ಯಾಸ, ಚಿಹ್ನೆ ಅಥವಾ ಇತರ ವೈಶಿಷ್ಟ್ಯಗಳಿಂದ ಕೂಡಿದ್ದು, ಅದು ತನ್ನ ಪ್ರತಿಸ್ಪರ್ಧಿ ಸರಕಿನಿಂದ ಭಿನ್ನವಾಗಿ ಗೋಚರಿಸುವಂತೆ ಪ್ರತ್ಯೇಕವಾಗಿ ನಿಲ್ಲುತ್ತದೆ. ಬ್ರ್ಯಾಂಡ್ ಎಂಬುದು ಹೆಸರು, ವಿನ್ಯಾಸ ಅಥವಾ ಚಿಹ್ನೆಗಿಂತಲೂ ಅಧಿಕ ಮೌಲ್ಯವುಳ್ಳದ್ದು.ಬ್ರ್ಯಾಂಡ್ ಸಾಂಸ್ಥಿಕ ಸಂಸ್ಕೃತಿಯನ್ನು ಹೊಂದಿರುವ ಕಂಪನಿಯ ವ್ಯಕ್ತಿತ್ವದ ಪ್ರತಿಫಲನ.
ನೀಡಲಾದ ಕ್ರಿಯಾತ್ಮಕ ಅಥವಾ ತಟಸ್ಥ ಭರವಸೆಯ ಆಧಾರದ ಮೇಲೆ ನಿರ್ದಿಷ್ಟ ಮೌಲ್ಯವನ್ನು ಗುರುತಿಸಲು ಸಾಧ್ಯವಾದುದನ್ನೇ ಬ್ರ್ಯಾಂಡ್ ಎಂದು ಹೇಳಲಾಗಿದೆ.
ನಿರ್ದಿಷ್ಟ ಉತ್ಪನ್ನವೊಂದರ ಕಲ್ಪನೆಯನ್ನು ಮನದ ತೆರೆಯ ಮೇಲೆ ಮೂಡಿಸುವ ಸಾಮರ್ಥ್ಯಕ್ಕೆ ಬ್ರ್ಯಾಂಡಿಂಗ್ ಎನ್ನಲಾಗಿದೆ.
ವ್ಯಾಪಾರೋದ್ಯಮ ಎರಡು ಅಥವಾ ಹೆಚ್ಚಿನ ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದರೆ ಅದಕ್ಕೆ ಕೊ-ಬ್ರ್ಯಾಂಡಿಂಗ್ ಎಂದು ಕರೆಸಿಕೊಳ್ಳುತ್ತದೆ.
ವ್ಯಾಪಾರೋದ್ಯಮದ ಸಂಪರ್ಕ ವ್ಯವಸ್ಥೆ
[ಬದಲಾಯಿಸಿ]ಅಂತಿಮ-ಬಳಕೆದಾರರು, ಗ್ರಾಹಕರು ಮತ್ತು ಬಾಹ್ಯ ಪಕ್ಷಗಾರರೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಸಂಸ್ಥೆಯ ಕ್ರಮಕ್ಕೆ ವ್ಯಾಪಾರೋದ್ಯಮ ಸಂಪರ್ಕ ಎಂಬ ವಿವರಣೆ ಇದೆ.
ವ್ಯಾಪಾರೋದ್ಯಮ ಸಂಪರ್ಕ ನಾಲ್ಕು ಬೇರೆ ಬೇರೆ ಉಪವರ್ಗಗಳನ್ನು ಹೊಂದಿದೆ. ಅವುಗಳೆಂದರೆ:
ವೈಯಕ್ತಿಕ ಮಾರಾಟ
[ಬದಲಾಯಿಸಿ]ಖರೀದಿ ಸಾಮರ್ಥ್ಯವುಳ್ಳ ಗ್ರಾಹಕ ಅಥವಾ ಗ್ರಾಹಕರ ಗುಂಪನ್ನು ಸಂಪರ್ಕಿಸುವ ಮಾರಾಟ ಪ್ರತಿನಿಧಿಯಿಂದ ಮೌಖಿಕ ಪ್ರಸ್ತುತಿಯನ್ನು ನೀಡಲಾಗುತ್ತದೆ:
- ನೇರ, ಪರಸ್ಪರ ಸಂಬಂಧ
- ವೈಯಕ್ತಿಕ ಹಿತಾಸಕ್ತಿ
- ಲಕ್ಷ್ಯ ಮತ್ತು ಪ್ರತಿಕ್ರಿಯೆ
- ಅಭಿರುಚಿ ಹುಟ್ಟುವಂಥ ಪ್ರಸ್ತಾವನೆ
- ಸ್ಪಷ್ಟತೆ ಮತ್ತು ಪರಿಣತೆ
ಮಾರಾಟ ಪ್ರಚಾರ
[ಬದಲಾಯಿಸಿ]ಉತ್ಪನ್ನಗಳನ್ನು ಖರೀದಿಸಲು ಅಲ್ಪಾವಧಿಯ ಪ್ರೇರಕಗಳು:
- ತ್ವರಿತ ಮನವಿ
- ಮಾರಾಟದ ಉತ್ಸುಕತೆ
ಮಾರಾಟದ ಮೇಲೆ ಕೂಪನ್ ನೀಡುವುದೊಂದು ಉದಾಹರಣೆ. ಜನ ಖರೀದಿಸಲೆಂದು ನೀಡಲಾಗುವ ಇಂಥ ಉತ್ತೇಜಕಗಳು ಗ್ರಾಹಕರ ನಿಷ್ಠೆಯನ್ನೂ ಬೆಳೆಸದು ಅಥವಾ ಖರೀಸುವ ಪುನರಾವರ್ತನೆಗೂ ಇಂಬು ನೀಡದು. ಪ್ರತಿಸ್ಪರ್ಧಿಗಳು ಸುಲಭವಾಗಿ ನಕಲು ಮಾಡುವುದೇ ಮಾರಾಟ ಪ್ರಚಾರ ತಂತ್ರದಲ್ಲಿರುವ ಪ್ರಮುಖ ಹಿನ್ನಡೆ. ಉತ್ಪನ್ನವೊಂದು ಪ್ರತ್ಯೇಕವಾಗಿ ನಿಲ್ಲಲು ಬಹುಕಾಲ ಉಳಿಯಲಾರದ ಸಾಧನವಿದು.
ಸಾರ್ವಜನಿಕ ಸಂಪರ್ಕ
[ಬದಲಾಯಿಸಿ]ಸಂಸ್ಥೆಯು ಗ್ರಾಹಕ/ಬಳಕೆದಾರನ ಮೇಲೆ ತನ್ನ ಉತ್ಪನ್ನದ ಛಾಪನ್ನು ಒತ್ತಲು, ತಾನು ಗುರಿ ಇಟ್ಟ ಮಾರುಕಟ್ಟೆಯಲ್ಲಿ ತನ್ನ ಶ್ರೇಷ್ಠತೆಯ ಕುರುಹನ್ನು ಸ್ಥಾಪಿಸಲು ಮಾಧ್ಯಮದ ಸಾಧನವನ್ನು ಬಳಸಿಕೊಳ್ಳುವುದು ಸಾರ್ವಜನಿಕ ಸಂಪರ್ಕ(=PR) ವಿಭಾಗದ ಕೆಲಸ. ಸಂಸ್ಥೆತಯು ತನ್ನ ಸರಕು/ಸೇವೆಗೆ ಬೇಡಿಕೆ ಕುಗ್ಗುತ್ತಿದೆ ಎಂಬ ಕಾರಣದಿಂದ ವಿರೋಧ ವ್ಯಕ್ತ ಮಾಡುವುದಾಗಲೀ ಅಥವಾ ಉದ್ಭವವಾದ ಪ್ರತಿಕೂಲ ಪರಿಸ್ಥಿತಿಯಿಂದ ಕೋಪಿಸಿಕೊಂಡು ತನ್ನ ಮಾರುಕಟ್ಟೆ ಆಧಾರವನ್ನು ಕಳೆದುಕೊಳ್ಳುವುದಾಗಲೀ ಸಲ್ಲದು ಎಂಬ ಧ್ಯೇಯೋದ್ದೇಶದಿಂದ ಚಿಗುರೊಡೆದಿರುವುದೇ ಸಾರ್ವಜನಿಕ ಸಂಪರ್ಕ. ಗ್ರಾಹಕರಿಗೆ ಭರವಸೆ ನೀಡುವ ಮತ್ತು ಸಂಸ್ಥೆಗೆ ಮುಂದೊದಗಬಹುದಾದ ಋಣಾತ್ಮಕ ನಿಲುವುಗಳನ್ನು ಸೂಚಿಸುವ ಕಾರ್ಯ ಈ ವಿಭಾಗದ್ದು.
PR ವ್ಯಾಪ್ತಿ:
- ಸಂದರ್ಶನಗಳು
- ಭಾಷಣಗಳು/ಪ್ರಸ್ತುತಿಗಳು
- ಉದ್ಯಮ ಸಾಹಿತ್ಯ (ಆರ್ಥಿಕ ಸ್ಥಿತಿಗತಿ, ಪರಿಚಯಾತ್ಮಕ ಸಾಹಿತ್ಯ ಇತ್ಯಾದಿ)
ಪ್ರಚಾರ
[ಬದಲಾಯಿಸಿ]ನೇರವಾಗಿ ಹಣ ಪಾವತಿ ಮಾಡದೇ ಮಾಧ್ಯಮಗಳಲ್ಲಿ ಮೂಡಿ ಬರಲು ಸ್ಥಳಾವಕಾಶ ಗಿಟ್ಟಿಸುವುದರತ್ತ ಪ್ರಚಾರ ವಿಭಾಗವು ಸದಾ ಮಗ್ನವಾಗಿರುತ್ತದೆ. ಉದಾಹರಣೆ:ಹೊಸ ಉತ್ಪನ್ನವನ್ನು ಸಂಸ್ಥೆ ಬಿಡುಗಡೆ ಮಾಡುವಾಗ ವೃತ್ತಪತ್ರಿಕೆಯಲ್ಲಿ ಅಥವಾ TV ಸುದ್ಧಿ ವಿಭಾಗದಲ್ಲಿ ಮೂಡಿ ಬರುವಂತೆ ನೋಡಿಕೊಳ್ಳುವುದು. ಹೀಗೆ ಮಾಡುವುದರಿಂದ ಸಂಸ್ಥೆಯು ತನ್ನ ಉತ್ಪನ್ನವನ್ನು ಯಾವ ಖರ್ಚೂ ಇಲ್ಲದೆ ಗ್ರಾಹಕರ ಅರಿವಿಗೆ ತರುತ್ತದೆ. ಇದರಿಂದ ಸಂಸ್ಥೆಗೂ ಲಾಭ.
ಜಾಹೀರಾತು
[ಬದಲಾಯಿಸಿ]ಉತ್ಪನ್ನವನ್ನು ಪ್ರಚುರಗೊಳಿಸಲು ಸಂಸ್ಥೆಯ ಮಾದ್ಯಮಕ್ಕೆ ನೇರವಾಗಿ ಪಾವತಿಸಿದಾಗ ಅದು ಜಾಹೀರಾತು ಎನಿಸುತ್ತದೆ. ಜಾಹೀರಾತಿಗೆ ಸಾಮಾನ್ಯ ಉದಾಹರಣೆಗಳೆಂದರೆ TV ಮತ್ತು ರೇಡಿಯೊ ಜಾಹೀರಾತುಗಳ ಬಿಡುಗಡೆ, ಜಾಹೀರಾತು ಫಲಕ ಕಟ್ಟುವಿಕೆ, ಬ್ರ್ಯಾಂಡಿಂಗ್, ಪ್ರಾಯೋಜಕತ್ವ ನಿರ್ವಹಿಸುವುದು ಇತ್ಯಾದಿ.
ವ್ಯಾಪಾರೋದ್ಯಮ ಸಂಪರ್ಕ "ವಿಶ್ರಣ"
[ಬದಲಾಯಿಸಿ]ವ್ಯಾಪಾರೋದ್ಯಮದಲ್ಲಿ ಸಂಪರ್ಕವನ್ನು ಹೇಗೆ ಅನ್ವಯಿಸಬಹುದು ಎಂಬದು ಪ್ರಚುರಗೊಳಿಸಬೇಕಾದ ಉತ್ಪನ್ನದ ಲಕ್ಷಣವನ್ನು ಆಧರಿಸಿದೆ.ಹೀಗಾಗಿ ವ್ಯಾಪಾರೋದ್ಯಮ ಸಂಪರ್ಕ ಎನ್ನುವುದು ಪ್ರಚಾರಾಂದೋಲನದ ಒಂದು "ಉಪಮಿಶ್ರಣ" ಎನಿಸಿದೆ.
ಹಾಗೆಯೇ ಗ್ರಾಹಕರಿಗೆ ಮಾಹಿತಿಯು ಮನವರಿಕೆಯಾಗುವಂತೆ ಮುಟ್ಟಬೇಕೆಂದರೆ ವಿಶಿಷ್ಟ ಸಂಪರ್ಕ ಮಿಶ್ರಣದ ಬಳಕೆಯ ಅಗತ್ಯವಿದೆ. ಕೆಲವು ಉತ್ಪನ್ನಗಳಿಗೆ ವೈಯಕ್ತಿಕ ಮಾರಾಟದ ಮೇಲೆ ಬಲವಾದ ಒತ್ತು ಬೇಕಿದ್ದರೆ ಮತ್ತೆ ಕೆಲವಕ್ಕೆ ಜಾಹೀರಾತಿನ ಬೆಂಬಲವೇ ಸಾಕು.
ವ್ಯಾಪಾರೋದ್ಯಮದಲ್ಲಿ ಯೋಜನೆ
[ಬದಲಾಯಿಸಿ]ಸಂಸ್ಥೆಯ ಮಾರಾಟ ಚಟುವಟಿಕೆಗಳನ್ನು ಬೆಸೆಯುವುದೇ ವ್ಯಾಪಾರೋದ್ಯಮ ಯೋಜನಾ ಕ್ಷೇತ್ರದ ಕಸುಬು. ಸಂಸ್ಥೆಯ ಒಟ್ಟಾರೆ ವ್ಯಾಪಾರೀ ಕಾರ್ಯ ತಂತ್ರಕ್ಕೆ ಹೇಗೋ, ಹಾಗೆಯೇ ನಿರ್ದಿಷ್ಟ ಉತ್ಪನ್ನಕ್ಕೂ ವ್ಯಾಪಾರೋದ್ಯಮ ಯೋಜನೆ ಅನ್ವಯಿಸುತ್ತದೆ.
ಸಂಸ್ಥೆಯೊಂದರ ವ್ಯಾಪಾರೋದ್ಯಮ ಯೋಜನಾ ಪ್ರಕ್ರಿಯೆಯು ಅದರ ಒಟ್ಟಾರೆ ವಾಣಿಜ್ಯ ತಂತ್ರಗಳಿಂದ ಹೊರಹೊಮ್ಮಿದೆ ಎಂಬುದೊಂದು ಸಾಮಾನ್ಯ ಅಭಿಪ್ರಾಯ. ಹೀಗೆ, ಉನ್ನತ ಆಡಳಿತವು ಸಂಸ್ಥೆಯ ದಿಕ್ಸೂಚಿಯನ್ನು ನಿರ್ಧರಿಸುತ್ತಿದ್ದಂತೆಯೇ ಉದ್ದೇಶಿತ ಔದ್ಯಮಿಕ ಚಟುವಟಿಕೆಗಳು ಈ ಯೋಜನೆಯಲ್ಲಿ ಮಿಳಿತವಾಗುತ್ತವೆ.
ವ್ಯಾಪಾರೋದ್ಯಮ ಯೋಜನಾ ಪ್ರಕ್ರಿಯೆ
[ಬದಲಾಯಿಸಿ]ವ್ಯಾಪಾರೋದ್ಯಮ ಯೋಜನೆಯ ಒಟ್ಟಾರೆ ಕಾರ್ಯತಂತ್ರದ ಪರಿಧಿಯೊಳಗೆ ಯೋಜನಾ ಪ್ರಕ್ರಿಯೆಯ ಹಂತಗಳನ್ನು ಹೀಗೆ ಪಟ್ಟಿ ಮಾಡಲಾಗಿದೆ:
- ಧ್ಯೇಯೋದ್ದೇಶದ ವಿವರಣೆ
- ಉದ್ಯಮದ ಉದ್ದೇಶಗಳು
- ವ್ಯಾಪಾರೋದ್ಯಮಯ ಪರಿಶೀಲನೆ
- SWOT ವಿಶ್ಲೇಷಣೆ
- ಪರಿಶೀಲನೆ ಮತ್ತು SWOT ವಿಶ್ಲೇಷಣೆಯಿಂದ ಹೊಮ್ಮಿದ ಊಹಾಪೋಹ
- ಊಹಾಪೋಹದಿಂದ ಎದ್ದು ಬಂದ ವ್ಆಪಾರೋದ್ಯಮ ಉದ್ದೇಶಗಳು
- ಉದ್ದೇಶಗಳ ನಿರೀಕ್ಷಿತ ಫಲಿತಾಂಶದ ಅಂದಾಜು
- ಬದಲಿ ಯೋಜನೆಗಳು/ಮಿಶ್ರಣಗಳ ಗುರುತಿಸುವಿಕೆ
- ಉದ್ಯಮದ ಯೋಜನೆಗಾಗಿ ಮುಂಗಡ ಪತ್ರ
- ಜಾರಿಗೊಳಿಸುವ ಮೊದಲ ವರ್ಷದ ಯೋಜನೆ
ವ್ಯಾಪಾರೋದ್ಯಮ ಸಂಸ್ಥೆಯ ಆಂತರಿಕ ಉದ್ದೇಶಗಳ ಮಟ್ಟಗಳು
[ಬದಲಾಯಿಸಿ]ಈ ಹಿಂದೆ ಹೇಳಿದಂತೆ ಸಂಸ್ಥೆಯ ಉನ್ನತ ಆಡಳಿತ ವರ್ಗವು ಸಂಸ್ಥೆಗೆ ಸಾಮಾನ್ಯ ವ್ಯಾಪಾರ ತಂತ್ರಗಳನ್ನು ರೂಪಿಸಬಹುದು. ಈ ಸಾಮಾನ್ಯ ವ್ಯಾಪಾರ ಕಾರ್ಯತಂತ್ರವನ್ನು ಸಂಸ್ಥೆಯೊಳಗೆ ವಿವಿಧ ಪ್ರಕಾರವಾಗಿ ಅರ್ಥೈಸಲಾಗುವುದು ಮತ್ತು ಇವುಗಳನ್ನು ಸಂದರ್ಭೋಚಿತವಾಗಿ ಅನುಷ್ಠಾನಗೊಳಿಸಲಾಗುವುದು.
ಸಂಸ್ಥೆ
[ಬದಲಾಯಿಸಿ]ಸಂಸ್ಥೆಯ ವ್ಯಾಪಾರೋದ್ಯಮ ಉದ್ದೇಶಗಳು ವಿಶಾಲ ವ್ಯಾಪ್ತಿಯನ್ನು ಹೊಂದಿರುತ್ತದೆ ಮತ್ತು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿಯಲ್ಲಿ ಸಂಸ್ಥೆಯ ಸಾಮಾನ್ಯ ನಿಲುವು ಇದರಲ್ಲಿ ಸೇರಿರುತ್ತದೆ.
ಉದಾಹರಣೆಗೆ ಒಂದು ಕಂಪನಿಗಳ ಸಮೂಹದ ಕಲ್ಪನೆಯಿದ್ದರೆ, ಉನ್ನತ ಆಡಳಿತವು ಕಂಪನಿ ಉತ್ಪಾದಿತ ವಸ್ತುವಿನ ಮಾರಾಟವು ಹತ್ತು ವರ್ಷಗಳ ಅವಧಿಯಲ್ಲಿ 25%ನಷ್ಟು ಹೆಚ್ಚಾಗಬೇಕು ಎಂದು ಹೇಳಬಹುದು.
ಯೋಜಿತ ವಾಣಿಜ್ಯ ಘಟಕ (SBU)
[ಬದಲಾಯಿಸಿ]ಈ ಸಂದರ್ಭದಲ್ಲಿ ಯೋಜಿತ ವ್ಯಾಪಾರ ಘಟಕ (SBU) ಎಂದರೆ ಯೋಜಿತ ವ್ಯಾಪಾರ ಘಟಕ. ನಿರ್ದಿಷ್ಟ ಪಡಿಸಿದ ಮಾರುಕಟ್ಟೆ/ಉದ್ಯಮದೊಳಗೆ ಪಾಲ್ಗೊಳ್ಳುವ ಸಂಸ್ಥೆಯೊಳಗಿನ ಉಪಸಂಸ್ಥೆ ಈ SBU.ಸಂಸ್ಥೆಯ ನೀತಿಯನ್ನು ಸಬು ಬಳಸಿಕೊಳ್ಳಬಹುದು ಮತ್ತು ಅವುಗಳನ್ನು ತನ್ನ ನಿರ್ದಿಷ್ಟ ಉದ್ಯಮಕ್ಕೆ ಹೊಂದಿಸಿಕೊಳ್ಳಬಹುದು. ಉದಾಹರಣೆಗೆ ಕ್ರೀಡೋತ್ಪನ್ನಗಳ ಉದ್ಯಮದಲ್ಲಿ ಸಬು ಭಾಗಿಯಾಗಿರಬಹುದು.ಒಟ್ಟಾರೆ ವ್ಯಾಪಾರ ನೀತಿಯನ್ನು ಗುರಿ ಮುಟ್ಟುವಲ್ಲಿ, ಅದು ಎಷ್ಟರ ಮಟ್ಟಿಗೆ ಹೆಚ್ಚುವರಿ ಕ್ರೀಡಾ ಸರಕನ್ನು ಮಾರಾಟ ಮಾಡಿದೆ ಎಂಬುದನ್ನು ಪರಿಗಣಿಸಲಾಗುವುದು.
ಕಾರ್ಯ ವಿಧಾನ
[ಬದಲಾಯಿಸಿ]ಕಾರ್ಯ ವಿಧಾನ ಮಟ್ಟವು ವ್ಯಾಪಾರೋದ್ಯಮ, ಹಣಕಾಸು, HR, ಉತ್ಪಾದನೆ, ಇತ್ಯಾದಿಗಳಂತಹ SBU ಆಂತರಿಕ ವಿಭಾಗಗಳಿಗೆ ಸಂಬಂಧಿಸಿರುತ್ತದೆ. ಕಾರ್ಯ ವಿಧಾನ ಮಟ್ಟವು SBU ನೀತಿಗಳನ್ನು ಅಳವಡಿಸಕೊಳ್ಳಬಹುದು ಮತ್ತು SBU ಮಾರುಕಟ್ಟೆಯಲ್ಲಿ ತಮ್ಮ ಉದ್ದೇಶಗಳ ಗುರಿ ಸಾಧಿಸುವುದು ಹೇಗೆಂದು ನಿರ್ಧರಿಸಬಹುದು.
ಮತ್ತೊಮ್ಮೆ ಕ್ರೀಡೋತ್ಪನ್ನಗಳ ಉದ್ಯಮವನ್ನೇ ಉದಾಹರಣೆಗೆ ತೆಗೆದುಕೊಂಡರೆ, ವ್ಯಾಪಾರೋದ್ಯಮ ವಿಭಾಗವು ವ್ಯಾಪಾರೋದ್ಯಮ ಗುರಿಗಳನ್ನು ಸಾಧಿಸಲು SBUಗೆ ಸಹಾಯ ಮಾಡಲು ವ್ಯಾಪಾರೋದ್ಯಮಯ ಯೋಜನೆಗಳು, ನೀತಿಗಳು ಮತ್ತು ಸಂಪರ್ಕಗಳನ್ನು ರಚಿಸಬಹುದು.
ಗ್ರಾಹಕ ಕೇಂದ್ರಿತ
[ಬದಲಾಯಿಸಿ]ಇಂದು ಹಲವಾರು ಕಂಪನಿಗಳು ಗ್ರಾಹಕ ಕೇಂದ್ರಿತ ವ್ಯವಸ್ಥೆಯನ್ನು ಹೊಂದಿವೆ (ಅಥವಾ ಮಾರುಕಟ್ಟೆ ದೃಷ್ಟಿಕೋನ). ಕಂಪನಿಯು ಗ್ರಾಹಕರ ಬೇಡಿಕೆಗಳ ಆಧಾರದ ಮೇಲೆ ತನ್ನ ಚಟುವಟಿಕೆಗಳನ್ನು ಮತ್ತು ಉತ್ಪನ್ನಗಳನ್ನು ಕೇಂದ್ರೀಕರಿಸುವುದನ್ನು ಇದು ಸೂಚಿಸುತ್ತದೆ. ಇದನ್ನು ಕಾರ್ಯಗತಗೊಳಿಸಲು ಸಾಮಾನ್ಯವಾಗಿ ಮೂರು ಮಾರ್ಗಗಳಿವೆ: ಗ್ರಾಹಕ-ಪ್ರೇರಿತ ವಿಧಾನ, ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಗುರುತಿಸುವ ಅರಿವು ಮತ್ತು ಉತ್ಪನ್ನ ಆವಿಷ್ಕಾರದ ವಿಧಾನ.
ಎಲ್ಲಾ ಯೋಜಿತ ವ್ಯಾಪಾರೋದ್ಯಮ ನಿರ್ಣಯಗಳು ಗ್ರಾಹಕ-ಪ್ರೇರಿತ ವಿಧಾನದಲ್ಲಿ ಬಳಕೆದಾರರ ಅಗತ್ಯಗಳೇ ಚಲಾಯಿಸುತ್ತವೆ.ಗ್ರಾಹಕ ಸಂಶೋಧನೆಯ ಪರೀಕ್ಷೆಗೊಳಪಟ್ಟು, ಅದರಿಂದ ಮನ್ನಣೆ ಸಿಗುವವರೆಗೆ ಯಾವುದೇ ಕಾರ್ಯತಂತ್ರವನ್ನೂ ಪಾಲಿಸಲಾಗುವುದಿಲ್ಲ. ಉತ್ಪನ್ನದ ವೈಶಿಷ್ಟ್ಯವೂ ಸೇರಿದಂತೆ ಮಾರುಕಟ್ಟೆ ಬೇಡಿಕೆಯ ಪ್ರತಿಯೊಂದು ಅಂಶವು ಸಂಭಾವ್ಯ ಬಳಕೆದಾರನ ಅಗತ್ಯಗಳಿಂದ ಪ್ರೇರೇಪಿತಗೊಳ್ಳುವುದು. ಇಲ್ಲಿ ಎಂದಿಗೂ ಗ್ರಾಹಕನೇ ಆರಂಭದ ಆಟಗಾರ.ಆತನಿಂದಲೇ ಆರಂಭ. ಜನ ಖರೀದಿಸದ ಉತ್ಪನ್ನಗಳನ್ನು ಅಭಿವೃದ್ಧಿಸುವುದಕ್ಕೆ R&D ನಿಧಿಗಳನ್ನು ವ್ಯಯ ಮಡುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ ಎಂಬ ಚಿಂತನೆಯೇ ಇದರ ಮೂಲ. ತಾಂತ್ರಿಕ ಆವಿಷ್ಕಾರಗಳಾದ ಮೇಲೂ ಹಲವಾರು ಉತ್ಪನ್ನಗಳು ವಾಣಿಜ್ಯ ದ್ಋಷ್ಟಯಿಂದ ನೆಲ ಕಚ್ಚಿದ್ದನ್ನು ಇತಿಹಾಸ ದೃಢೀಕರಿಸುತ್ತದೆ.
ವ್ಯಾಪಾರೋದ್ಯಮಯ ಗ್ರಾಹಕ-ಕೇಂದ್ರಿತ ವ್ಯವಸ್ಥಿತ ವಿಧಾನವನ್ನು SIVA[೩] (S=ಪರಿಹಾರ, I=ಮಾಹಿತಿ,V=ಮೌಲ್ಯ,A=ಪ್ರವೇಶ) ಎಂದು ಕರೆಯಲಾಗುವುದು. ಈ ವ್ಯವಸ್ಥೆಯನ್ನು ಮೂಲಭೂತವಾಗಿ ಗ್ರಾಹಕ ಕೇಂದ್ರಿತ ವ್ಯವಸ್ಥೆ ಒದಗಿಸಲು ನಾಲ್ಕು ಅಂಶಗಳ (=Ps) ಸಿದ್ಧಾಂತವನ್ನು ಮರುಹೆಸರಿಸಲಾಗಿದೆ ಮತ್ತು ಪದಗಳ ಮರು ಜೋಡಣೆ ಮಾಡಲಾಗಿದೆ.
SIVA ಮಾದರಿಯು ವ್ಯಾಪಾರೋದ್ಯಮ ನಿರ್ವಹಣೆಯ ಸುಪರಿಚಿತ 4Pಗಳ ಪೂರೈಕೆ ದಿಕ್ಕಿನ ಮಾದರಿಗೆ (ಉತ್ಪನ್ನ, ಬೆಲೆ, ಸ್ಥಳ, ಪ್ರಚಾರ) ಬದಲಿಯಾಗಿ ಬೇಡಿಕೆ/ಗ್ರಾಹಕ ಕೇಂದ್ರಿತ ದೃಷ್ಟಿಕೊನವನ್ನು ಒದಗಿಸುತ್ತದೆ.
ಉತ್ಪನ್ನ | → | ಪರಿಹಾರ |
ಪ್ರಚಾರ | → | ಮಾಹಿತಿ |
ದರ | → | ಮೌಲ್ಯ |
ನಿಯೋಜನೆ | → | ಪ್ರವೇಶ |
ಉತ್ಪನ್ನ ಕೇಂದ್ರಿತ
[ಬದಲಾಯಿಸಿ]ಉತ್ಪನ್ನ ನಾವೀನ್ಯತೆ ವಿಧಾನದಲ್ಲಿ ಕಂಪನಿಯು ಉತ್ಪನ್ನ ನಾವೀನ್ಯತೆಯನ್ನು ಅನುಸರಿಸುತ್ತದೆ. ನಂತರ ಉತ್ಪನ್ನಕ್ಕೆ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತದೆ. ಉತ್ಪನ್ನ ನಾವೀನ್ಯತೆಯು ಪ್ರಕ್ರಿಯೆ ಮತ್ತು ವ್ಯಾಪಾರೋದ್ಯಮ ಸಂಶೋಧನೆಯನ್ನು ನಾವೀನ್ಯತೆಗೆ ಲಾಭದಾಯಕ ಮಾರುಕಟ್ಟೆ ವಲಯ(ಗಳಲ್ಲಿ) ಅಸ್ತಿತ್ವದಲ್ಲಿರುವುದನ್ನು ಖಚಿತಪಡಿಸಲು ಪ್ರಾಥಮಿಕವಾಗಿ ಆಯೋಜಿಸುವುದನ್ನು ಪ್ರೇರೇಪಿಸುತ್ತದೆ. ಭವಿಷ್ಯದಲ್ಲಿ ಆ ಉತ್ಪನ್ನಗಳಿಗೆ ಯಾವ ಬದಲಿ ವಸ್ತುಗಳು ಲಭ್ಯವಿರುವುದು ಎಂದು ಗ್ರಾಹಕರು ತಿಳಿದಿಲ್ಲದಿರಬಹುದು. ಹಾಗಾಗಿ ಗ್ರಾಹಕರು ಭವಿಷ್ಯದಲ್ಲಿ ಏನನ್ನು ಖರೀದಿಸುತ್ತಾರೆ ಎಂದು ಅವರಿಂದ ನಾವು ನಿರೀಕ್ಷಿಸಲಾಗದು.ಆದರೂ ಮಾರಾಟಗಾರರು ಉತ್ಪನ್ನ ನಾವೀನ್ಯತೆಯನ್ನು ಆಕ್ರಮಣಕಾರಿಯಾಗಿ ಮಿತಿ ಮೀರಿ ಅನುಸರಿಸಬಹುದು ಮತ್ತು ಅದರ ಮೇಲೆ ಸ್ಥಳದಲ್ಲಿ ಹೆಚ್ಚು ಬಂಡವಾಳವನ್ನು ಹೂಡಲು ಪ್ರಯತ್ನಿಸಬಹುದು. ಉತ್ಪನ್ನ ನಾವೀನ್ಯತೆ ವಿಧಾನವನ್ನು ಅನುಸರಿಸುವಾಗ ಮಾರಾಟಗಾರರು ವೈವಿಧ್ಯದ ಮತ್ತು ಬಹು ಶ್ರೇಣೀಯ ಉತ್ಪನ್ನ ನಾವೀನ್ಯತೆಗೆ ತಾವು ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ವ್ಯಾಪಾರೋದ್ಯಮ ಸಂಶೋಧನೆಯನ್ನೇ ಅವಲಂಬಿಸಿದ್ದರೆ, ಥೋಮಸ್ ಎಡಿಸನ್ ಬೆಳಕಿನ ಬಲ್ಬ್‌ಗಳನ್ನು ಸಂಶೋಧಿಸುವ ಬದಲು ದೊಡ್ಡ ಗಾತ್ರದ ಮೇಣದ ಬತ್ತಿಗಳನ್ನು ಉತ್ಪಾದಿಸುತ್ತಿದ್ದ ಎಂಬ ಮಾತೊಂದಿದೆ.ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಿತ ಕಂಪನಿಗಳಂತ ಹಲವು ಸಂಸ್ಥೆಗಳು ಯಶಸ್ವಿಯಾಗಿ ಉತ್ಪನ್ನ ನಾವೀನ್ಯತೆಯಲ್ಲಿ ತಮ್ಮ ಗಮನ ನೆಟ್ಟಿವೆ. ಹಿಂದೊಮ್ಮೆ ಒದಗಿದ ಸ್ಥಿತಿಯ ಕಾರಣದಿಂದ ಎಲ್ಲಾ ಸಂದರ್ಭಗಳಲ್ಲಿಯೂ ಗ್ರಾಹಕ ಸಂಶೋಧನೆ ಇದೇ ನಿಲುವನ್ನು ತಾಳುತ್ತದೆಯೇ ಎಂದು ಹಲವು ಮಡಿವಂತರು ಅನುಮಾನಪಡುತ್ತಾರೆ.ಕೆಲವರು ಇದು ವ್ಯಾಪಾರೋದ್ಯಮವೇ ಎಂದು ಪ್ರಶ್ನಿಸುತ್ತಾರೆ.
- ಬ್ರ್ಯಾಂಡ್ ಸರಕನ್ನು ಪೂರೈಸಿ ಹೊಸ ಗ್ರಾಹಕರನ್ನು ತನ್ನತ್ತ ಸೆಳಯುವುದು ಮತ್ತು ಹಳಬರನ್ನೂ ಉಳಿಸಿಕೊಳ್ಳುವುದರ ಬಗ್ಗೆ ನೌಕರರಿಗೆ ತರಬೇತಿ ನೀಡಲಾಗುತ್ತಿದೆ.ಆಂತರಿಕ ಮಾರಾಟ ಜಾಲ ಎನ್ನಬಹುದಾದ ಇದು ಸದ್ಯದ ಅಧ್ಯಯನಕ್ಕೂ, ಅಭ್ಯಾಸಕ್ಕೂ ಒಳಪಟ್ಟಿದೆ.
- ಹೊಸ ಉತ್ಪನ್ನಗಳು, ಸೇವೆಗಳು ಮತ್ತು ಯೋಜನೆಗಳನ್ನು ಜನರು ಹೇಗೆ ಮತ್ತು ಏಕೆ ಆಯ್ದಕೊಳ್ಳುತ್ತಾರೆ ಎನ್ನುವುದನ್ನು ನಾವೀನ್ಯತೆಗಳ ಪ್ರಸರಣ ಸಂಶೋಧನೆಯು ಪರಿಶೋಧಿಸುತ್ತದೆ.
- ಹಾಗೆಯೇ ವ್ಯಾಪಾರೋದ್ಯಮದ ಹೊಸ ಪ್ರಕಾರವು ಅಂತರಜಾಲವನ್ನು ಬಳಸಿಕೊಳ್ಳುತ್ತಿದ್ದು, ಅದನ್ನು ಅಂತರಜಾಲ ವ್ಯಾಪಾರೋದ್ಯಮ ಎಂದು ಕರೆಯುತ್ತಾರೆ ಅಥವಾ ಇನ್ನೂ ಸಾಮಾನ್ಯವಾಗಿ ಇ-ವ್ಯಾಪಾರೋದ್ಯಮ, ಸಂಯೋಜಿತ ವ್ಯಾಪಾರೋದ್ಯಮ, ಡೆಸ್ಕ್ಟಾಪ್ ಜಾಹೀರಾತು ಅಥವಾ ಆನ್ ಲೈನ್ ವ್ಯಾಪಾರೋದ್ಯಮ ಎಂದು ಕರೆಯುತ್ತಾರೆ. ಇದು ಸಾಂಪ್ರದಾಯಿಕ ವ್ಯಾಪಾರೋದ್ಯಮಯಲ್ಲಿ ಬಳಸಿದ ವಿಭಾಗೀಕರಣ ನೀತಿಯಂತಾಗಲೂ ಪ್ರಯತ್ನಿಸುತ್ತದೆ. ತನ್ನ ಗ್ರಾಹಕರನ್ನು ನಿಖರವಾಗಿ ಗುರಿಯಾಗಿಸುವ ಇದನ್ನು ಕೆಲವೊಮ್ಮೆ ವೈಯಕ್ತಿಕ ವ್ಯಾಪಾರೋದ್ಯಮಎಂತಲೂ ಅಥವಾ ಒಂದರಿಂದ-ಒಂದು-ವ್ಯಾಪಾರೋದ್ಯಮ ಎಂದು ಕರೆಯುತ್ತಾರೆ.
- ಜಾಹೀರಾತು ಸಂದೇಶಗಳನ್ನು ಸ್ವೀಕರಿಸಲು ಗ್ರಾಹಕರ ಲಕ್ಷ್ಯ ಮತ್ತು ಇಚ್ಛೆ ಕೊಚ್ಚಿಹೋಗಿರುವುದರಿಂದ, ಮಾರಾಟಗಾರರು ಗುಣಮಟ್ಟದ ವಿಷಯ, ರೂಢಿಗತ ಮಾದ್ಯಮ ಮತ್ತು ನೈಜ ವ್ಯಾಪಾರೋದ್ಯಮಯಂತಹ ಪರವಾನಗಿ ವ್ಯಾಪಾರೋದ್ಯಮಯ ಪ್ರಕಾರಗಳಿಗೆ ಬದಲಾಗುತ್ತಿದ್ದಾರೆ.
- ವ್ಯಾಪಾರೋದ್ಯಮಯಲ್ಲಿ ಸಾಮೂಹಿಕ ನಡತೆಯ ಬಳಕೆ.
- ಹೊಂದಿಕೊಳ್ಳಬಲ್ಲ ಮಾನವ ನಡವಳಿಕೆಯ ವರ್ತನೆ ವಿಷಯದ ಮೇಲೆ ರೋಮ್‌ನಲ್ಲಿ ಇತ್ತೀಚೆಗೆ ನೆಡೆದ ಸಮಾವೇಶವನ್ನು ದಿ ಇಕನಾಮಿಸ್ಟ್ ಪತ್ರಿಕೆಯು ವರದಿಮಾಡಿದೆ.[೪] "ಹೆಚ್ಚಿನ ಖರೀದಿಗೆ 'ಸಮೂಹ ಸನ್ನಿ'ಯನ್ನೂ ಬಳಸಲಾಗುವುದು"- ಖರೀದಿಸುವ ಒಳಪ್ರೇರಣೆಯನ್ನು ಹೆಚ್ಚಿಸಲು ಇಂಥ ಸನ್ನಿವೇಶ ನೆರವಾಗುವುದು.ಸ್ಮಾರ್ಟ್-ಕಾರ್ಟ್ ತಂತ್ರಜ್ಞಾನ ಮತ್ತು ರೇಡಿಯೊ ಆವರ್ತನ ಗುರುತಿಸುವಿಕೆ ಟ್ಯಾಗ್ ತಂತ್ರಜ್ಞಾನದ ಬಳಕೆ ಸೇರಿದಂತೆ ಹೆಸರಿಸಿದ ಗ್ರಾಹಕರಿಗೆ ಉತ್ಪನ್ನದ ಜನಪ್ರಿಯತೆಯ ಮಾಹಿತಿಯನ್ನು ನೀಡಿದಾಗ ಜನಪ್ರಿಯ ಮತ್ತು ಹಲವು ಪ್ರತಿಕ್ರಿಯೆಗಳಲ್ಲಿ ಕಂಡುಬರುವ ಹೆಚ್ಚಿನ ಉತ್ಪನ್ನಗಳನ್ನು ಜನ ಖರೀದಿಸುತ್ತಾರೆ ಎನ್ನುವುದು ಇಲ್ಲಿಯ ಮೂಲ ಕಲ್ಪನೆ. ಸುಪರ್‌ಮಾರುಕಟ್ಟೆಗಳಿಗೆ ಮನವಿ ಮಾಡಿದ ಫ್ಲೋರಿಡಾ ತಂತ್ರಜ್ಞಾನ ಸಂಶೋಧಕರ ಸಂಸ್ಥೆ "ಸಾಮೂಹಿಕ-ಚಲನೆ"(="swarm-moves") ಮಾದರಿಯನ್ನು ಪರಿಚಯಿಸಿದರು. ಏಕೆಂದರೆ ಇದು "ಜನರಿಗೆ ರಿಯಾಯಿತಿಯನ್ನು ನೀಡದೆಯೇ ಮಾರಾಟವನ್ನು ಇದು ಹೆಚ್ಚಿಸುತ್ತಿತ್ತು."
ವ್ಯಾಪಾರೋದ್ಯಮವನ್ನು ವಾಣಿಜ್ಯೋತ್ಪನ್ನಗಳನ್ನು ಪ್ರಚಾರಮಾಡಲೂ ಸಹ ಬಳಸಲಾಗಿದ್ದು, ಇದು ವ್ಯಾಪಾರವನ್ನು ಪ್ರಚಾರ ತಂತ್ರದ ಶ್ರೇಷ್ಠ ಮಾರ್ಗವಾಗಿದೆ.
- "ಸಾಮಾಜಿಕ ಪ್ರಭಾವದ ಶಕ್ತಿ" ಬಗ್ಗೆ ನಡೆಸಿದ ಇತ್ತೀಚಿನ ಅದ್ಯಯನವು ಈ ಕೆಳಗಿನವುಗಳನ್ನು ಒಳಗೊಂಡಿದೆ: "ಕೃತಕ ಸಂಗೀತದ ಮಾರುಕಟ್ಟೆಯಲ್ಲಿ 14,000 ಜನರು ಈ ಹಿಂದೆ ತಮಗೆ ತಿಳಿಯದ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು" (ಕೊಲಂಬಿಯಾ ವಿಶ್ವವಿದ್ಯಾಲಯ, ನ್ಯೂಯಾರ್ಕ್); "ವಿಭಾಗೀಯ ಅಂಗಡಿಗಳು ಮತ್ತು ಸಂಶೋಧನೆ ಕಂಪನಿಗಳ ಮಾರಾಟಗಳ ದತ್ತಾಂಶ" ಆಧಾರದ ಮೇಲೆ ಜಪಾನಿನ ಉಪಯುಕ್ತ ವಸ್ತುಗಳ ಅಂಗಡಿಗಳ ಸರಪಳಿಯು ತನಗೆ ಬೇಕಾದ ಉತ್ಪನ್ನಗಳಿಗಾಗಿ ಆದೇಶಿಸುವುದು; ಮಸ್ಸಾಚುಸೆಟ್ಸ್ ಕಂಪನಿಯು ಮಾರಾಟವನ್ನು ಹೆಚ್ಚಿಸಲು ಸಾಮಾಜಿಕ ಜಾಲವನ್ನು ಉಪಯೋಗಿಸಿತ್ತು ಮತ್ತು ಆನ್‌ಲೈನ್ ಮರುಮಾರಾಟಗಾರರು "ಉತ್ತಮ ಗ್ರಾಹಕರ ಜನಪ್ರಿಯ ಉತ್ಪನ್ನಗಳ" ಬಗ್ಗೆ ಗ್ರಾಹಕರಿಗೆ ಹೆಚ್ಚೆಚ್ಚು ತಿಳಿಸುತ್ತಾರೆ (ಉದಾ. Amazon, eBay).
ವ್ಯಾಪಾರೋದ್ಯಮದ ತಜ್ಞ ಕ್ಷೇತ್ರಗಳು
[ಬದಲಾಯಿಸಿ]- ಕೃಷಿ ವ್ಯಾಪಾರೋದ್ಯಮಕೃಷಿ ವ್ಯಾಪಾರೋದ್ಯಮ
- ಜಾಹೀರಾತು ಮತ್ತು ಬ್ರ್ಯಾಂಡಿಂಗ್
- ಸಂಪರ್ಕ-ಸಂವಹನ
- ಗ್ರಾಹಕ ಸಂಬಂಧ ನಿರ್ವಹಣೆ (CRM)
- ಡಾಟಾಬೇಸ್ ವ್ಯಾಪಾರೋದ್ಯಮಡಾಟಾಬೇಸ್ ವ್ಯಾಪಾರೋದ್ಯಮ
- ವತ್ತಿಪರ ಮಾರಾಟ
- ನೇರ ವ್ಯಾಪಾರೋದ್ಯಮನೇರ ವ್ಯಾಪಾರೋದ್ಯಮ
- ನೈತಿಕ ವ್ಯಾಪಾರೋದ್ಯಮನೈತಿಕ ವ್ಯಾಪಾರೋದ್ಯಮ
- ಆಯೋಜಕ ಸಂಸ್ಥೆ[clarification needed]
- ಪ್ರಾಯೋಗಿಕ ವ್ಯಾಪಾರೋದ್ಯಮಪ್ರಾಯೋಗಿಕ ವ್ಯಾಪಾರೋದ್ಯಮ
- ಜಾಗತಿಕ ವ್ಯಾಪಾರೋದ್ಯಮಜಾಗತಿಕ ವ್ಯಾಪಾರೋದ್ಯಮ
- ಗೆರಿಲ್ಲಾ ವ್ಯಾಪಾರೋದ್ಯಮಗೆರಿಲ್ಲಾ ವ್ಯಾಪಾರೋದ್ಯಮ
- ಏಕೀಕೃತ ವ್ಯಾಪಾರೋದ್ಯಮಏಕೀಕೃತ ವ್ಯಾಪಾರೋದ್ಯಮ
- ಅಂತರಾಷ್ಟ್ರೀಯ ವ್ಯಾಪಾರೋದ್ಯಮಅಂತಾರಾಷ್ಟ್ರೀಯ ವ್ಯಾಪಾರೋದ್ಯಮ
- ಅಂತರಜಾಲ ವ್ಯಾಪಾರೋದ್ಯಮಅಂತರಜಾಲ ವ್ಯಾಪಾರೋದ್ಯಮ
- ಕೈಗಾರಿಕಾ ವ್ಯಾಪಾರೋದ್ಯಮಕೈಗಾರಿಕಾ ವ್ಯಾಪಾರೋದ್ಯಮ
- ಮಾರುಕಟ್ಟೆ ಸಂಶೋಧನೆ
- ವ್ಯಾಪಾರೋದ್ಯಮ ತಂತ್ರಗಾರಿಕೆ
- ವ್ಯಾಪಾರೋದ್ಯಮ ಯೋಜನೆ
- ರಾಜಕೀಯ ಸಲಹೆರಾಜಕೀಯ ವ್ಯಾಪಾರೋದ್ಯಮ
- ಉತ್ಪನ್ನ ವ್ಯಾಪಾರೋದ್ಯಮಉತ್ಪನ್ನ ವ್ಯಾಪಾರೋದ್ಯಮ
- ಪ್ರೋತ್ಸಾಹಿಕ ಶಿಕ್ಷಣ
- ಸಾಮಿಪ್ಯ ವ್ಯಾಪಾರೋದ್ಯಮಸಾಮೀಪ್ಯ ವ್ಯಾಪಾರೋದ್ಯಮ
- ಸಾರ್ವಜನಿಕ ವ್ಯಾಪಾರೋದ್ಯಮಸಾರ್ವಜನಿಕ ವ್ಯಾಪಾರೋದ್ಯಮ
- ಚಿಲ್ಲರೆ ಮಾರಾಟ
- ಹುಡುಕಾಟ ಯಂತ್ರ ಮಾರಾಟ ತಂತ್ರ
- ವಿಭಾಗೀಕರಣ
- ಸಾಮಾಜಿಕ ಮಾದ್ಯಮ ವ್ಯಾಪಾರೋದ್ಯಮಸಾಮಾಜಿಕ ಮಾಧ್ಯಮ ವ್ಯಾಪಾರೋದ್ಯಮ
- ಪ್ರಾಯೋಜಕತ್ವ
- ಕಾರ್ಯತಂತ್ರ ನಿರ್ವಹಣೆ
- ಸಗಟು ವ್ಯಾಪಾರೋದ್ಯಮಸಗಟು ವ್ಯಾಪಾರೋದ್ಯಮ
ಇದನ್ನೂ ನೋಡಿ
[ಬದಲಾಯಿಸಿ]ಸಂಬಂಧಿಸಿದ ಪಟ್ಟಿಗಳು ಮತ್ತು ಸ್ಥೂಲ ವಿವರಣೆಗಳು
[ಬದಲಾಯಿಸಿ]- ವ್ಯಾಪಾರೋದ್ಯಮ ಲೇಖನಗಳ ವಿಶಾಲ ಪಟ್ಟಿಗಾಗಿ ವ್ಯಾಪಾರೋದ್ಯಮಯ ಸ್ಥೂಲ ವಿವರಣೆಗಳನ್ನು ನೋಡಿ.
- ಅಕೌಂಟಿಂಗ್
- ವ್ಯಾಪಾರ ನೀತಿಗಳು, ರಾಜಕೀಯ ಆರ್ಥಿಕತೆ ಮತ್ತು ವ್ಯಾಪಾರದ ತತ್ವಗಳು
- ವ್ಯವಹಾರ ಕಾನೂನು
- ವ್ಯಾಪಾರ ಸಿದ್ಧಾಂತಿಗಳು
- ಆರ್ಥಿಕತೆ
- ಹಣಕಾಸು
- ಮಾನವ ಸಂಪನ್ಮೂಲ ನಿರ್ವಹಣೆ
- ಮಾಹಿತಿ ತಂತ್ರಜ್ಞಾನ ನಿರ್ವಹಣೆ
- ಅಂತರಾಷ್ಟ್ರೀಯ ವ್ಯಾಪಾರ
- ಮ್ಯಾನೇಜ್ಮೆಂಟ್
- ನಿರ್ಮಾಣ
ಆಕರಗಳು
[ಬದಲಾಯಿಸಿ]- ↑ ವ್ಯಾಪಾರೋದ್ಯಮದ ವ್ಯಾಖ್ಯಾನ, ಚಾರ್ಟರ್ಡ್ ಇನ್‌ಸ್ಟಿಟ್ಯೂಟ್ ಆಫ್ ಮಾರ್ಕೆಟಿಂಗ್
- ↑ Paul H. Selden (1997). Sales Process Engineering: A Personal Workshop. Milwaukee, WI: ASQ Quality Press. p. 23.
- ↑ "ವ್ಯಾಪಾರೋದ್ಯಮಗಳ ಮಿಶ್ರಣದಲ್ಲಿ: ಗ್ರಾಹಕ-ಕೇಂದ್ರಿತ ಸಿದ್ಧಾಂತ 21ನೇ ಶತಮಾನಕ್ಕೆ ಪ್ರಸ್ತುತ ವ್ಯಾಪಾರೋದ್ಯಮಗಳ ಮಿಶ್ರಣವನ್ನು ತರುವುದು". ಚೇಕಿಟಾನ್ S. ದೇವ್ ಮತ್ತು ಡಾನ್ E. ಶುಲ್ಟ್‌ಜ್, ವ್ಯಾಪಾರೋದ್ಯಮ ನಿರ್ವಹಣೆ ಸಂ.14 ಸಂಖ್ಯೆ.1 ಜನವರಿ/ಫೆಬ್ರುವರಿ 2005
- ↑ "Swarming the shelves: How shops can exploit people's herd mentality to increase sales?". The Economist. 2006-11-11. p. 90.
- Pages using the JsonConfig extension
- Articles with hatnote templates targeting a nonexistent page
- Articles needing additional references from February 2008
- Articles with invalid date parameter in template
- All articles needing additional references
- Wikipedia articles needing clarification from October 2009
- ವ್ಯಾಪಾರೋದ್ಯಮ