ನರವಿಜ್ಞಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
For the journal, see Neurology (journal).
"Neurologist" redirects here. For the medical journal, see The Neurologist.
Neurologist
Occupation
Names Doctor, Medical Practitioner
Activity sectors Medicine
Description
Education required M.D. or D.O.

ನರವಿಜ್ಞಾನ (ಗ್ರೀಕ್ ನಿಂದ νεῦρον, ನ್ಯೂರಾನ್ , "ನರ"; ಹಾಗು-λογία-ಲಾಜಿಯ ) ನರಮಂಡಲದ ಅಸ್ವಸ್ಥತೆಗೆ ಸಂಬಂಧಪಟ್ಟ ಒಂದು ವೈದ್ಯಕೀಯ ವಿಶೇಷ ಅಧ್ಯಯನ. ಇದು ನಿರ್ದಿಷ್ಟವಾಗಿ,ಕೇಂದ್ರ ನರಮಂಡಲ,ಬಾಹ್ಯನರಮಂಡಲ ಹಾಗೂ ಸ್ವನಿಯಂತ್ರಿತ ನರಮಂಡಲದ ಎಲ್ಲ ವಿಧದ ಕಾಯಿಲೆಗಳ ಪತ್ತೆ ಹಾಗು ಅವುಗಳ ಚಿಕಿತ್ಸೆಗೆ ಸಂಬಂಧಪಟ್ಟಿದೆ, ಇದರಲ್ಲಿ ಅವುಗಳ ಹೊದಿಕೆಗಳು,ರಕ್ತನಾಳಗಳು ಮತ್ತು ನರ ಪ್ರಚೋದಕ ಅಂಗಾಂಶ, ಉದಾಹರಣೆಗೆ ಸ್ನಾಯುವನ್ನು ಒಳಗೊಂಡಿದೆ.[೧] ಇದಕ್ಕೆ ಅನುಗುಣವಾದ ಶಸ್ತ್ರಚಿಕಿತ್ಸಾ ವಿಧಾನವೇ ನರ ಶಸ್ತ್ರಕ್ರಿಯೆ. ನರವಿಜ್ಞಾನಿ (ನರಚಿಕಿತ್ಸಾ ತಜ್ಞ) ಒಬ್ಬ ವೈದ್ಯನಾಗಿದ್ದು ನರವಿಜ್ಞಾನದ ಬಗ್ಗೆ ಪರಿಣತಿಯನ್ನು ಪಡೆದಿರುತ್ತಾನೆ. ಈತ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಪರೀಕ್ಷಿಸಿ ಅಥವಾ ಪತ್ತೆಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವುದಕ್ಕೆ ತರಬೇತಿ ಪಡೆದಿರುತ್ತಾನೆ. ಮಕ್ಕಳಲ್ಲಿ ಕಂಡುಬರುವ ನರಸಂಬಂಧಿ ಕಾಯಿಲೆಗಳಿಗೆ ನರವೈಜ್ಞಾನಿಕ ಮಕ್ಕಳ ತಜ್ಞರು ಚಿಕಿತ್ಸೆ ನೀಡುತ್ತಾರೆ. ನರವಿಜ್ಞಾನಿಗಳು ಪ್ರಾಯೋಗಿಕ ಸಂಶೋಧನೆ, ಪ್ರಾಯೋಗಿಕ ಪರೀಕ್ಷಾಯ ಜೊತೆಗೆ ಮೂಲ ಸಂಶೋಧನೆ ಹಾಗು ರೋಗನಿಧಾನ ಸಂಶೋಧನೆ ಯಲ್ಲೂ ತೊಡಗಿರಬಹುದು.

ಕಾರ್ಯಕ್ಷೇತ್ರಗಳು[ಬದಲಾಯಿಸಿ]

Expression error: Unexpected < operator. ಒಂದು ದೊಡ್ಡ ಸಂಖ್ಯೆಯ ನರಮಂಡಲದ ಅಸ್ವಸ್ಥತೆಗಳನ್ನು ವಿವರಿಸಲಾಗಿದೆ. ಇವುಗಳು ಕೇಂದ್ರ ನರಮಂಡಲ (ಮಿದುಳು ಹಾಗು ಬೆನ್ನುಹುರಿ), ಬಾಹ್ಯ ನರಮಂಡಲ, ಅಥವಾ ಸ್ವನಿಯಂತ್ರಿತ ನರಮಂಡಲಕ್ಕೆ ಧಕ್ಕೆ ಉಂಟುಮಾಡಬಹುದು.

ವಿದ್ಯಾರ್ಹತೆ[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್ ಹಾಗು ಕೆನಡಾದಲ್ಲಿ ನರವಿಜ್ಞಾನಿಗಳಾದ ವೈದ್ಯರು, ವೈದ್ಯಕೀಯ ಕಾಲೇಜಿನಿಂದ ಪದವಿಯನ್ನು ಪಡೆದ ನಂತರ ನರವಿಜ್ಞಾನದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಮುಗಿಸಿರುತ್ತಾರೆ. ನರವಿಜ್ಞಾನಿಗಳು, ಸರಿಸುಮಾರು 12 ವರ್ಷಗಳ ಕಾಲೇಜು ವಿದ್ಯಾಭ್ಯಾಸ ಹಾಗು ಪ್ರಾಯೋಗಿಕ ತರಬೇತಿಯನ್ನು ಮುಗಿಸಿರುತ್ತಾರೆ. ಈ ತರಬೇತಿಯು ನಾಲ್ಕು-ವರ್ಷಗಳ ಪದವಿಪೂರ್ವ ಶಿಕ್ಷಣ, ಮತ್ತೆ ನಾಲ್ಕು ವರ್ಷಗಳ ವೈದ್ಯಕೀಯ ಶಿಕ್ಷಣ ಹಾಗು ನಂತರ ನರವಿಜ್ಞಾನದಲ್ಲಿ ಮೂರು ಅಥವಾ ನಾಲು-ವರ್ಷಗಳ ತಜ್ಞ ವೈದ್ಯಕೀಯ ತರಬೇತಿಯನ್ನು ಒಳಗೊಂಡಿದೆ. ನಾಲ್ಕು ವರ್ಷಗಳ ತಜ್ಞ ವೈದ್ಯಕೀಯ ತರಬೇತಿಯು, ಒಂದು ವರ್ಷದ ಆಂತರಿಕ ವೈದ್ಯಕೀಯ ತರಬೇತಿ ಹಾಗು ನರವಿಜ್ಞಾನದಲ್ಲಿ ಮೂರು ವರ್ಷಗಳ ತರಬೇತಿಯ ಅವಧಿ ಸೇರಿದೆ. ಇಚ್ಛೆ ಪಟ್ಟಲ್ಲಿ ನರವಿಜ್ಞಾನದ ತಜ್ಞ ವೈದ್ಯಕೀಯ ತರಬೇತಿಯ ನಂತರ ಒಂದು ಅಥವಾ ಎರಡು ವರ್ಷದ ಸ್ನಾತಕೋತ್ತರ ವಿದ್ಯಾರ್ಥಿವೇತನವನ್ನು ಪಡೆಯಬಹುದು. ಹಲವು ನರವಿಜ್ಞಾನಿಗಳು,ಪಾರ್ಶ್ವವಾಯು ಅಥವಾ ರಕ್ತನಾಳಗಳ ನರವಿಜ್ಞಾನ, ಇಂಟರ್‌‌ವೆನ್ಶನಲ್ ನ್ಯೂರಾಲಜಿ, ಎಪಿಲೆಪ್ಸಿ (ಅಪಸ್ಮಾರ), ನ್ಯೂರೊಮಸ್ಕ್ಯೂಲರ್ (ನರಸ್ನಾಯುಕ), ನ್ಯೂರೊ ರೀಹ್ಯಾಬಿಲಿಟೇಷನ್(ಹಾನಿಗೊಂಡ ನರವ್ಯವಸ್ಥೆಗೆ ಚಿಕಿತ್ಸೆ), ನಡವಳಿಕೆ ನರವಿಜ್ಞಾನ, ನಿದ್ರೆ ಔಷಧಿಗಳು, ನೋವು ನಿರ್ವಹಣೆ, ನರಗಳ ರೋಗನಿರೋಧಕ ಶಾಸ್ತ್ರ,ಕ್ಲಿನಿಕಲ್ ನರಶರೀರವಿಜ್ಞಾನ, ಅಥವಾ ಚಲನೆ ಅಸ್ವಸ್ಥತೆಗಳು ಮುಂತಾದ ನರವಿಜ್ಞಾನದ ಒಂದು ಕ್ಷೇತ್ರದಲ್ಲಿ ತಮ್ಮ ತಜ್ಞ ವೈದ್ಯಕೀಯ ತರಬೇತಿಯನ್ನು ಮುಗಿಸಿದ ನಂತರ ಹೆಚ್ಚುವರಿ ಉಪವಿಶೇಷ ತರಬೇತಿಯನ್ನು (ಫೆಲೋಶಿಪ್) ಪಡೆದಿರುತ್ತಾರೆ.
ಜರ್ಮನಿಯಲ್ಲಿ, ನರವಿಜ್ಞಾನದ ತಜ್ಞ ವೈದ್ಯಕೀಯ ತರಬೇತಿಯನ್ನು ಪೂರ್ಣಗೊಳಿಸಲು ಒಂದು ವರ್ಷದ ಕಡ್ಡಾಯ ಮನೋವೈದ್ಯ ಶಾಸ್ತ್ರವನ್ನು ಮುಗಿಸಿರಬೇಕು.
ಯುನೈಟೆಡ್ ಕಿಂಗ್ಡಂ ಹಾಗು ಐರ್ಲ್ಯಾಂಡ್ ನಲ್ಲಿ, ನರವಿಜ್ಞಾನವು ಸಾಮಾನ್ಯ ವೈದ್ಯಕೀಯ ತರಬೇತಿಯ(ಆಂತರಿಕ) ಒಂದು ಉಪ ವಿಭಾಗವಾಗಿದೆ. ಐದರಿಂದ ಒಂಬತ್ತು ವರ್ಷಗಳ ವೈದ್ಯಕೀಯ ಶಿಕ್ಷಣದ ಹಾಗು ಒಂದು ವರ್ಷ ಆಸ್ಪತ್ರೆಯ ಅಧಿಕಾರಿಯಾಗಿ ಮುಂಚಿತವಾಗಿ-ನೋಂದಣಿ ಮಾಡಿಕೊಂಡ ನಂತರ(ಅಥವಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಎರಡು ವರ್ಷಗಳು) ಒಬ್ಬ ನರವಿಜ್ಞಾನಿಯು, ನರವಿಜ್ಞಾನದಲ್ಲಿ ವಿಶೇಷ ತರಬೇತಿಗೆ ಪ್ರವೇಶವನ್ನು ಪಡೆಯಲು ಮೆಂಬರ್ಶಿಪ್ ಆಫ್ ದಿ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ (ಅಥವಾ ಐರಿಶ್‌ಗೆ ಸಮಾನಾಂತರವಾಗಿ) ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಾಗುತ್ತದೆ. ಒಂದು ಶತಮಾನದ ಹಿಂದೆ ಕೆಲವು ನರವಿಜ್ಞಾನಿಗಳು, ಮನೋವೈದ್ಯಕೀಯ ಘಟಕಗಳಲ್ಲಿ ಕೆಲವು ವರ್ಷಗಳು ಕೆಲಸ ಮಾಡಿ ಮನೋವೈಜ್ಞಾನಿಕ ಔಷಧ ಶಾಸ್ತ್ರದಲ್ಲಿ ಡಿಪ್ಲೋಮಾ ಪಡೆಯುತ್ತಿದ್ದರು. ಆದರೆ ಈ ವಿಧಾನವು ನಂತರ ವಿರಳವಾಯಿತು. ಈಗ ಪ್ರಾಥಮಿಕ ಮನೋವೈಜ್ಞಾನಿಕ ಪದವಿಯನ್ನು ಪಡೆಯಲು ಮೂರು ವರ್ಷ ತೆಗೆದುಕೊಳ್ಳುವುದರಿಂದ ಇದು ಕಾರ್ಯಸಾಧ್ಯವಾಗಿಲ್ಲ. ಶಿಕ್ಷಣಕ್ಕೆ ಸಂಶೋಧನೆಯ ಅಗತ್ಯವಿದೆ, ಹಾಗು ಉನ್ನತ ಪದವಿಯ ಗಳಿಕೆಯು ವೃತ್ತಿಜೀವನದ ಪ್ರಗತಿಗೆ ಸಹಾಯ ಮಾಡುತ್ತದೆ: ಲಂಡನ್‌ನ ಕ್ವೀನ್ ಸ್ಕ್ವೇರ್‌ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ನ್ಯೂಅರಾಲಜಿಗೆ ಸೇರಿಕೊಂಡ ಮೇಲೆ ಹಲವರಿಗೆ ಇದು ಸರಾಗವಾಯಿತು. ನರವೈಜ್ಞಾನಿಕ ರೋಗಗಳ ಚಿಕಿತ್ಸೆಯಲ್ಲಿ ವಿಶೇಷತೆಯನ್ನು ಪಡೆಯಲು ಕೆಲವು ನರವಿಜ್ಞಾನಿಗಳು ರಿಹ್ಯಾಬಿಲಿಟೇಷನ್ ಔಷಧ ಶಾಸ್ತ್ರವನ್ನು (USನಲ್ಲಿ ಫಿಸಿಯಾಟ್ರಿ ಎಂದು ಪರಿಚಿತ) ಅಧ್ಯಯನ ಮಾಡುತ್ತಾರೆ. ಇದರಲ್ಲಿ ಪಾರ್ಶ್ವವಾಯುವಿಗೆ ಚಿಕಿತ್ಸೆಯ ಜೊತೆಗೆ ಪೆಟ್ಟು ಬಿದ್ದ ಮೆದುಳಿಗೆ ಚಿಕಿತ್ಸೆಯನ್ನು ನೀಡುವ ಕ್ರಮದ ಬಗ್ಗೆ ತಿಳಿಸಲಾಗುತ್ತದೆ.

ಭಾರತದಲ್ಲಿ, ನರವಿಜ್ಞಾನಿಯಾಗಲು ಬಯಸುವ ವಿದ್ಯಾರ್ಥಿಯು, ಮೂರು ವರ್ಷಗಳ ತಜ್ಞ ವೈದ್ಯಕೀಯ ತರಬೇತಿಯ ನಂತರಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯ ಅಥವಾ ದಿ ನ್ಯಾಷನಲ್ ಬೋರ್ಡ್ ಆಫ್ ಏಕ್ಸಾಮಿನೆಶನ್ಸ್ ನಿಂದ ಅಂಗೀಕೃತಗೊಂಡ ಯಾವುದೇ ವೈದ್ಯಕೀಯ ಕಾಲೇಜಿನಿಂದ ನರವಿಜ್ಞಾನದಲ್ಲಿ ಮೂರು ವರ್ಷಗಳ ಫೆಲೋಶಿಫ್ ಕೋರ್ಸ್ ಮಾಡಬೇಕು. ತರಬೇತಿಯ ಅವಧಿಯ ಕೊನೆಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಹಾಗು DM(ನ್ಯೂರಾಲಜಿ) ಅಥವಾ DNB(ನ್ಯೂರಾಲಜಿ) ಪದವಿಯನ್ನು ನೀಡಲಾಗುತ್ತದೆ. ಈ ವ್ಯಾಸಂಗವನ್ನು MD(ಔಷಧ) ಅಥವಾ DNB(ಔಷಧ) ಪದವಿಯನ್ನು ಹೊಂದಿರುವವರು ಮಾತ್ರ ಮಾಡುವ ಅರ್ಹತೆಯನ್ನು ಪಡೆದಿರುತ್ತಾರೆ. ಆದಾಗ್ಯೂ, ಕೆಲವು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಐದು ವರ್ಷಗಳ ಸಮಗ್ರ ವ್ಯಾಸಂಗದ ನಂತರ ನರವಿಜ್ಞಾನದ DM ಪದವಿಯನ್ನು ಪಡೆಯಲು ಅವಕಾಶವಿರುತ್ತದೆ. ಇದನ್ನು M.B.B.S ಪದವಿಯ ನಂತರ ಈ ಪದವಿಯನ್ನು ನೇರವಾಗಿ ಪಡೆಯಬಹುದು.[೨]

ಸೂಕ್ಷ್ಮ ಪರೀಕ್ಷೆಗಳು[ಬದಲಾಯಿಸಿ]

ನರವೈಜ್ಞಾನಿಕ ಪರೀಕ್ಷಾ ಪ್ರಕ್ರಿಯೆಯಲ್ಲಿ, ನರವಿಜ್ಞಾನಿಯು ರೋಗಿಯ ಆರೋಗ್ಯದ ವೃತ್ತಾಂತದ ಬಗ್ಗೆ ಸ್ಥೂಲ ಸಮೀಕ್ಷೆ ನಡೆಸುವುದರ ಜೊತೆಗೆ ರೋಗಿಯ ಹಾಲಿ ಸ್ಥಿತಿಯ ಬಗ್ಗೆ ವಿಶೇಷ ಗಮನವನ್ನು ನೀಡುತ್ತಾರೆ. ನಂತರ ರೋಗಿಗೆ ನರವೈಜ್ಞಾನಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ವಿಶೇಷವಾಗಿ, ಈ ಪರೀಕ್ಷೆಯು ರೋಗಿಯ ಮಾನಸಿಕ ಸ್ಥಿತಿಗತಿ, ತಲೆಬುರುಡೆ ನರಗಳ (ದೃಷ್ಟಿಯ ಪರೀಕ್ಷೆಯು ಒಳಗೊಂಡಿದೆ) ಕಾರ್ಯನಿರ್ವಹಣೆ, ಅದರ ಬಲ, ಪರಸ್ಪರ ಹೊಂದಾಣಿಕೆ, ಪ್ರತಿವರ್ತನ ಹಾಗು ಸಂವೇದನೆಯ ಬಗ್ಗೆ ಪರಿಶೀಲಿಸುತ್ತದೆ. ಈ ಪರೀಕ್ಷೆಯಿಂದ ನರವಿಜ್ಞಾನಿಗಳಿಗೆ, ನರಮಂಡಲದಲ್ಲಿ ಸಮಸ್ಯೆ ಇದೆಯೇ ಎಂಬುದನ್ನು ನಿರ್ಧರಿಸುವುದರ ಜೊತೆಗೆ ರೋಗದ ಕೇಂದ್ರೀಕರಣದ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ. ರೋಗಶಾಸ್ತ್ರದ ಕೇಂದ್ರೀಕರಣವು ಮುಖ್ಯ ಪ್ರಕ್ರಿಯೆಯಾಗಿದ್ದು,ಇದರ ಮೂಲಕ ನರವಿಜ್ಞಾನಿಗಳು ಸಂದರ್ಭಕ್ಕೆ ತಕ್ಕಂತ ರೋಗನಿರ್ಣಯವನ್ನು ಬೆಳಕಿಗೆ ತರುತ್ತಾರೆ. ರೋಗ ಲಕ್ಷಣಗಳಿಂದ ರೋಗವನ್ನು ಪತ್ತೆ ಹಚ್ಚಲು ಮತ್ತಷ್ಟು ಪರೀಕ್ಷೆಗಳ ಅಗತ್ಯವಿದೆ. ಜೊತೆಗೆ ಇವುಗಳು ಚಿಕಿತ್ಸೆ ಹಾಗು ಸೂಕ್ತ ನಿರ್ವಹಣೆಗೆ ಕೊನೆಯಲ್ಲಿ ಮಾರ್ಗದರ್ಶನ ನೀಡುತ್ತವೆ.ಉದ್ವಿಗ್ನತೆ, ನಿದ್ರಾಹೀನತೆ, ತಲೆನೋವು ಹಾಗು ಉನ್ಮಾದತೆ: ಹೀಗೆ ಹಲವು ರೋಗ ಲಕ್ಷಣಗಳು ಸಂಭವಿಸಬಹುದು.

ಪ್ರಾಯೋಗಿಕ ಕಾರ್ಯಗಳು[ಬದಲಾಯಿಸಿ]

ಸಾಮಾನ್ಯ ಪ್ರಕರಣಗಳ ಹೊರೆ[ಬದಲಾಯಿಸಿ]

ಮೇಲೆ ಹೇಳಿರುವ ಎಲ್ಲ ಪರಿಸ್ಥಿತಿಗಳಲ್ಲೂ, ರೋಗದ ಪತ್ತೆ, ಅದಕ್ಕೆ ಚಿಕಿತ್ಸೆ ಹಾಗು ನಿರ್ವಹಣೆಯ ಎಲ್ಲ ಜವಾಬ್ದಾರಿಯು ನರವಿಜ್ಞಾನಿಗಳ ಮೇಲಿರುತ್ತದೆ.ಶಸ್ತ್ರಚಿಕಿತ್ಸೆಯ ಅಗತ್ಯ ಕಂಡು ಬಂದಾಗ, ನರವಿಜ್ಞಾನಿಗಳು ರೋಗಿಯನ್ನು ನ್ಯೂರೊಸರ್ಜನ್(ನರಶಸ್ತ್ರಚಿಕಿತ್ಸಾ ತಜ್ಞ) ಬಳಿ ಕಳುಹಿಸಬಹುದು. ಕೆಲವು ದೇಶಗಳಲ್ಲಿ, ನರವಿಜ್ಞಾನಿಗಳು ಹೆಚ್ಚಿನ ಕಾನೂನು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದರಲ್ಲಿರೋಗಿಯು ನಿಧನ ಹೊಂದಿರಬಹುದೆಂದು ಅನುಮಾನ ವ್ಯಕ್ತವಾದಾಗ ಅವನಿಗೆಮಿದುಳು ನಿಷ್ಕ್ರಿಯ ಸಾವುಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚುವ ಕೆಲಸ ನರವಿಜ್ಞಾನಿಗಳದ್ದಾಗಿರುತ್ತದೆ. ನರವಿಜ್ಞಾನಿಗಳು ಸಾಧಾರಣವಾಗಿ ಆನುವಂಶಿಕ (ವಂಶಪಾರಂಪರಿಕ) ಕಾಯಿಲೆಗಳನ್ನು ಹೊಂದಿರುವ ಜನರಲ್ಲಿ ಪ್ರಮುಖ ನರವೈಜ್ಞಾನಿಕ ಲಕ್ಷಣಗಳು ಕಂಡುಬಂದರೆ ಅಂತಹವರ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಾರೆ, ಇದೊಂದು ಸಾಮಾನ್ಯವಾದ ರೋಗಸ್ಥಿತಿ. ಸಾಧಾರಣವಾಗಿ ನರವಿಜ್ಞಾನಿಗಳು ಲಂಬರ್ ಪಂಕ್ಚರ್(ಕಟಿರಂಧ್ರ ಚಿಕಿತ್ಸೆ)ನ್ನು ನಡೆಸುತ್ತಾರೆ. ಕೆಲವು ನರವಿಜ್ಞಾನಿಗಳು ನಿರ್ದಿಷ್ಟವಾದ ಉಪವಿಭಾಗಗಳಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಬಹುದು, ಉದಾಹರಣೆಗೆ ಡಿಮೆನ್ಷಿಅ (ಬುದ್ದಿಮಾಂದ್ಯತೆ), ಚಲನೆಯ ಅವ್ಯವಸ್ಥೆಗಳು, ತಲೆನೋವುಗಳು, ಎಪಿಲೆಪ್ಸಿ(ಅಪಸ್ಮಾರ), ನಿದ್ರಾಹೀನತೆ, ತೀವ್ರ ನೋವಿನ ನಿರ್ವಹಣೆ, ಮಲ್ಟಿಪಲ್ ಸ್ಕ್ಲೆರೋಸಿಸ್ (ಪಾರ್ಶ್ವವಾಯು ಹಾಗು ದೋಷಯುಕ್ತ ಮಾತಿಗೆ ಎಡೆ ಮಾಡಿಕೊಡುವ ದೀರ್ಘಕಾಲೀನ ನರಸಂಬಂಧಿ ಕಾಯಿಲೆ) ಅಥವಾ ನ್ಯೂರೊಮಸ್ಕ್ಯುಲರ್ (ನರಸ್ನಾಯುಕ) ಕಾಯಿಲೆಗಳು.

ಅತಿವ್ಯಾಪಿಸಿದ ಕ್ಷೇತ್ರಗಳು[ಬದಲಾಯಿಸಿ]

ಇತರ ವಿಶೇಷ ವಿಭಾಗಗಳೊಂದಿಗೆ ಇದು ಅತಿವ್ಯಾಪಿಸಿಕೊಂಡಿದೆ. ಇದು ದೇಶದಿಂದ ದೇಶಕ್ಕೆ ಹಾಗು ಸ್ಥಳೀಯ ಭೌಗೋಳಿಕ ಪ್ರದೇಶದೊಳಗೂ ಸಹ ಅತಿವ್ಯಾಪನೆಯು ಬದಲಾವಣೆ ಹೊಂದುತ್ತವೆ. ತೀವ್ರವಾದ ತಲೆ ನೋವಿಗೆ ಸಾಮಾನ್ಯವಾಗಿ ನರ ಶಸ್ತ್ರಚಿಕಿತ್ಸಾ ತಜ್ಞರು ಚಿಕಿತ್ಸೆ ನೀಡುತ್ತಾರೆ, ಆದರೆ ತಲೆಗುಂಟಾದ ಪೆಟ್ಟಿನ ಸಿಕ್ವೀಲ(ರೋಗಲಕ್ಷಣ ಸ್ಥಿತಿ)ವನ್ನು ನರವಿಜ್ಞಾನಿಗಳು ಅಥವಾ ರೀಹ್ಯಾಬಿಲಿಟೆಶನ್ ಔಷಧಶಾಸ್ತ್ರದಲ್ಲಿ ಪರಿಣತಿಯನ್ನು ಹೊಂದಿರುವ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಆದಾಗ್ಯೂ, ಪಾರ್ಶ್ವವಾಯುವನ್ನು ಸಾಂಪ್ರದಾಯಿಕವಾಗಿ ಆಂತರಿಕ ಔಷಧಶಾಸ್ತ್ರದಿಂದ ಅಥವಾ ಆಸ್ಪತ್ರೆ ವೈದ್ಯರು ನಿರ್ವಹಿಸುತ್ತಾರೆ. ರಕ್ತನಾಳಗಳ ನರವಿಜ್ಞಾನ ಹಾಗು ಇಂಟರ್‌ವೆನ್ಷನಲ್ ನರವಿಜ್ಞಾನಿಗಳು ಹುಟ್ಟಿಕೊಂಡ ಮೇಲೆ ಪಾರ್ಶ್ವವಾಯು ತಜ್ಞರಿಗೆ ಬೇಡಿಕೆ ಸೃಷ್ಟಿಯಾಗಿದೆ. JCAHO ಪ್ರಮಾಣೀಕೃತ ಪಾರ್ಶ್ವವಾಯು ಕೇಂದ್ರಗಳ ಸ್ಥಾಪನೆಯಿಂದ ಪ್ರಾಥಮಿಕ ಹಾಗು ತೃತೀಯ ಶ್ರೇಣಿಯ ಆಸ್ಪತ್ರೆಗಳಲ್ಲಿ ಪಾರ್ಶ್ವವಾಯುವಿಗೆ ಚಿಕಿತ್ಸೆ ನೀಡುವಲ್ಲಿ ನರವಿಜ್ಞಾನಿಗಳ ಪಾತ್ರವೂ ಹೆಚ್ಚಾಗಿದೆ. ಕೆಲವು ಸಂದರ್ಭಗಳಲ್ಲಿ ನರಮಂಡಲ ವ್ಯವಸ್ಥೆಯ ಸೋಂಕಿನ ಕಾಯಿಲೆಗಳಿಗೆ ಚಿಕಿತ್ಸೆಯನ್ನು ತಜ್ಞರು ನೀಡುತ್ತಾರೆ. ತಲೆ ನೋವಿಗೆ ಹಲವಾರು ಸಂದರ್ಭಗಳಲ್ಲಿ, ತೀವ್ರವಲ್ಲದ ಪರಿಸ್ಥಿತಿಯಲ್ಲಿ ಸಾಮಾನ್ಯ ವೈದ್ಯರು ರೋಗವನ್ನು ಪತ್ತೆಹಚ್ಚಿ, ಸೂಕ್ತವಾದ ಚಿಕಿತ್ಸೆಯನ್ನು ಪ್ರಾಥಮಿಕವಾಗಿ ನೀಡುತ್ತಾರೆ. ಇದೇ ರೀತಿಯಾಗಿ, ಹಲವು ಸಂದರ್ಭಗಳಲ್ಲಿ ಸೈಆಟಿಕ ಸೊಂಟದ-ನರದ ನೋವು ಹಾಗು ಇತರ ಯಾಂತ್ರಿಕ ಬೆನ್ನುಮೂಳೆಯ ನರದ ನೋವುಗಳಿಗೆ ಸಾಮಾನ್ಯ ವೈದ್ಯರು ಚಿಕಿತ್ಸೆ ನೀಡುತ್ತಾರೆ, ಆದಾಗ್ಯೂ ಅವರನ್ನು ನರವಿಜ್ಞಾನಿಗಳು ಅಥವಾ ಒಬ್ಬ ಶಸ್ತ್ರಚಿಕಿತ್ಸಕ ಎಂದು ಕರೆಯಲಾಗುತ್ತದೆ (ನರಶಸ್ತ್ರಚಿಕಿತ್ಸಾ ತಜ್ಞ ಅಥವಾ ಮೂಳೆತಜ್ಞ).ನಿದ್ರಾಹೀನತೆಗೆ ಪಲ್ಮನೋಲಜಿಸ್ಟ್(ಶ್ವಾಸಕೋಶ ರೋಗಗಳ ತಜ್ಞರು) ಗಳು ಚಿಕಿತ್ಸೆ ನೀಡುತ್ತಾರೆ. ಮಿದುಳು ಲಕ್ವಗೆ ಪ್ರಾರಂಭಿಕ ಹಂತದಲ್ಲಿ ಮಕ್ಕಳ ತಜ್ಞರು ಚಿಕಿತ್ಸೆ ನೀಡುತ್ತಾರೆ, ಆದರೆ ರೋಗಿಯು ಒಂದು ನಿಶ್ಚಿತವಾದ ವಯಸ್ಸನ್ನು ತಲುಪಿದಾಗ ಚಿಕಿತ್ಸೆಯನ್ನು ವಯಸ್ಕರಿಗೆ ಚಿಕಿತ್ಸೆ ನೀಡುವ ಒಬ್ಬ ನರವಿಜ್ಞಾನಿ ನೀಡುತ್ತಾನೆ. ಯುನೈಟೆಡ್ ಕಿಂಗ್ಡಮ್ ಹಾಗು ಇತರ ದೇಶಗಳಲ್ಲಿ, ವಯಸ್ಸಾದ ರೋಗಿಗಳು ಎದುರಿಸುವ ಪಾರ್ಕಿನ್ಸನ್ ಕಾಯಿಲೆ,ಪಾರ್ಶ್ವವಾಯು,ಬುದ್ಧಿಮಾಂದ್ಯತೆ ಅಥವಾ ನಡಗೆಯ ದೋಷಗಳು ಸೇರಿದಂತೆ ಚಲನೆಯ ಅವ್ಯವಸ್ಥೆಗಳನ್ನು ವೃದ್ಧರೋಗ್ಯಶಾಸ್ತ್ರ ದಲ್ಲಿ ಪರಿಣತಿ ಪಡೆದ ವೈದ್ಯರು ಚಿಕಿತ್ಸೆ ನೀಡುತ್ತಾರೆ.ಪ್ರಾಯೋಗಿಕ ನ್ಯೂರೋಸೈಕೊಲಜಿಸ್ಟ್ ಗಳಿಗೆ ಸಾಮಾನ್ಯವಾಗಿ ಮಿದುಳಿನ-ನಡವಳಿಕೆಯ ಸಂಬಂಧಗಳನ್ನು ನಿರ್ಧರಿಸಲು ಕರೆ ನೀಡಲಾಗುತ್ತದೆ. ಇದು ರೋಗ ಲಕ್ಷಣಗಳ ವ್ಯತ್ಯಾಸ, ರೀಹ್ಯಾಬಿಲಿಟೆಶನ್ ಕಾರ್ಯತಂತ್ರಗಳ ಯೋಜನೆ, ಅರಿಯುವ ಪ್ರಕ್ರಿಯೆಯಲ್ಲಿರುವ ಬಲ ಹಾಗು ದುರ್ಬಲತೆಯನ್ನು ದಾಖಲೆಮಾಡುವುದು ಹಾಗು ಸಮಯ ಕಳೆದಂತೆ ರೋಗಿಗಳಲ್ಲಾಗುವ ಬದಲಾವಣೆಯನ್ನು ಅಂದಾಜಿಸುವುದ್ದಕ್ಕೆ ಸಹಾಯ ಮಾಡುತ್ತದೆ (ಉದಾಹರಣೆಗೆ, ಅಪಸಾಮಾನ್ಯ ವಯಸ್ಸನ್ನು ಗುರುತಿಸುವುದು ಅಥವಾ ಡಿಮೆನ್ಷಿಅ(ಬುದ್ಧಿಮಾಂದ್ಯತೆ)ಯ ಪ್ರಗತಿಯನ್ನು ಪತ್ತೆ ಹಚ್ಚುವುದು).

ಪ್ರಾಯೋಗಿಕ ನರಶರೀರವಿಜ್ಞಾನದ ಜೊತೆಗಿನ ಸಂಬಂಧ[ಬದಲಾಯಿಸಿ]

ಕೆಲವು ದೇಶಗಳಲ್ಲಿ, ಉದಾಹರಣೆಗೆ USA ಹಾಗು ಜರ್ಮನಿಯಲ್ಲಿ, ನರವಿಜ್ಞಾನಿಗಳು ರೋಗಿಯ ನರಶರೀರವಿಜ್ಞಾನದ ಬಗ್ಗೆ ವಿಶೇಷ ತಜ್ಞತೆಯನ್ನು ಪಡೆದಿರುತ್ತಾರೆ, ಇದು EEG ಕ್ಷೇತ್ರಕ್ಕೆ, ನರ್ವ್ ಕಂಡಕ್ಷನ್ ಸ್ಟಡೀಸ್(ನರಗಳ ಮೂಲಕ ಪ್ರಚೋದನೆಯನ್ನು ಕಳುಹಿಸುವ ಅಧ್ಯಯನ), EMG ಹಾಗು ಎವೋಕ್ಡ್ ಪೊಟೆನ್ಷಿಯಲ್(ಉದ್ದೀಪನದಿಂದ ದಾಖಲಾಗುವ ವಿದ್ಯುತ್ ಪ್ರಮಾಣ)ಗೆ ಸಂಬಂಧಿಸಿದೆ. ಮತ್ತು ಕೆಲವು ದೇಶಗಳಲ್ಲಿ, ಇದೊಂದು ಅನೈಚ್ಛಿಕ ವಿಶೇಷ ಅಧ್ಯಯನ( ಉದಾಹರಣೆಗೆ ಯುನೈಟೆಡ್ ಕಿಂಗ್ಡಮ್, ಸ್ವೀಡನ್).

ಮನೋವೈದ್ಯಶಾಸ್ತ್ರದೊಂದಿಗೆ ಸಂಬಂಧ[ಬದಲಾಯಿಸಿ]

Further information: Psychoneuroimmunologyಮತ್ತು Neuropsychiatry

ಆದಾಗ್ಯೂ ಹಲವು ಮಾನಸಿಕ ಕಾಯಿಲೆ ಗಳು ಕೇಂದ್ರ ನರಮಂಡಲಕ್ಕೆ ತೊಂದರೆ ಉಂಟುಮಾಡುವ ನರವೈಜ್ಞಾನಿಕ ಅಸ್ವಸ್ಥತೆಯೆಂದೇ ತಿಳಿಯಲಾಗಿದೆ. ಸಾಂಪ್ರದಾಯಿಕವಾಗಿ ಇವುಗಳನ್ನು ಪ್ರತ್ಯೇಕವಾಗಿ ವಿಭಾಗಿಸಲಾಗಿದ್ದು, ಮನೋವೈದ್ಯರು ಚಿಕಿತ್ಸೆ ನೀಡುತ್ತಾರೆ. ಕಳೆದ 2002ರಲ್ಲಿ, ಅಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿ ಯಲ್ಲಿ ಪ್ರಕಟವಾದ, ವೃತ್ತಿಯಲ್ಲಿ ನರವಿಜ್ಞಾನಿಯಾದ ಹಾಗು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಮುಖ್ಯಸ್ಥ, ಪ್ರೊಫೆಸರ್ ಜೋಸೆಫ್ B. ಮಾರ್ಟಿನ್ ನ ವಿಮರ್ಶಾ ಲೇಖನದ ಪ್ರಕಾರ, ಎರಡು ವಿಭಾಗಗಳ ಪ್ರತ್ಯೇಕತೆಯು ಇಚ್ಛಾನುಸಾರವಾಗಿದೆ, ಇವುಗಳು ಸಾಮಾನ್ಯವಾಗಿ ನಂಬಿಕೆಯನ್ನು ಆಧರಿಸಿದೆಯೇ ಹೊರತು ವೈಜ್ಞಾನಿಕ ಅವಲೋಕನಗಳ ಆಧಾರದಿಂದ ದೃಢಪಟ್ಟಿಲ್ಲ. ಮಿದುಳು ಹಾಗು ಮನಸ್ಸು ಒಂದೇ ಎಂಬ ಸತ್ಯವು ಪ್ರತ್ಯೇಕತೆಯನ್ನು ಹೇಗಿದ್ದರೂ ಕೃತಕತೆಯಲ್ಲಿರಿಸುತ್ತದೆ. [೩]

ಮೆದುಳಿನ ರಾಸಾಯನಿಕ ಕ್ರಿಯೆಗಳು ಬೈಪೋಲಾರ್ ಡಿಸಾರ್ಡರ್ (ಖೇದವಿಕಲ್ಪ ಅಸ್ವಸ್ಥತೆ) ಹಾಗು ಸ್ಕಿಜೊಫ್ರೀನಿಯ (ಛಿದ್ರಮನಸ್ಕತೆ) ದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆಂಬ ಬಲವಾದ ಲಕ್ಷಣಗಳಿವೆ. ಹಾಗು, "ನರವೈಜ್ಞಾನಿಕ" ಕಾಯಿಲೆಗಳು ಸಾಧಾರಣವಾಗಿ "ಮನೋವೈದ್ಯಕೀಯ" ಲಕ್ಷಣಗಳನ್ನು ಹೊಂದಿದೆ, ಉದಾಹರಣೆಗೆ ಪಾರ್ಶ್ವವಾಯು ನಂತರದ ಖಿನ್ನತೆ, ಪಾರ್ಕಿನ್ಸನ್ ಕಾಯಿಲೆಗೆ ಸಂಬಂಧಿಸಿದ ಖಿನ್ನತೆ ಹಾಗು ಡಿಮೆನ್ಷಿಅ (ಬುದ್ದಿಮಾಂದ್ಯತೆ), ಅಲ್ಜಿಮರ್ ಕಾಯಿಲೆಗೆ ಸಂಬಂಧಿಸಿದ ಭಾವನೆ ಹಾಗು ಅರಿವಿನ ಅಪಸಾಮಾನ್ಯ ಕ್ರಿಯೆ ಹಾಗು ಹಂಟಿಂಗ್ಟನ್ ಕಾಯಿಲೆಗಳು ಇವುಗಳಲ್ಲಿ ಕೆಲವು ಹೆಸರಿಸಬಹುದಾದ ಲಕ್ಷಣಗಳು. ಪರಿಣಾಮವಾಗಿ, ನರವಿಜ್ಞಾನ ಹಾಗು ಮನೋವೈದ್ಯಶಾಸ್ತ್ರದ ನಡುವೆ ಜೀವವಿಜ್ಞಾನದ ಆಧಾರದ ಮೇಲೆ ಅಂತಹ ಸ್ಪಷ್ಟವಾದ ವ್ಯತ್ಯಾಸವೇನೂ ಇಲ್ಲ.– ಈ ವ್ಯತ್ಯಾಸವು ಮುಖ್ಯವಾಗಿ ವ್ಯಾವಹಾರಿಕ ತರ್ಕಫಲ ಹಾಗು ಬಲವಾದ ಐತಿಹಾಸಿಕ ಆಧಾರವನ್ನು ಹೊಂದಿದೆ (ಉದಾಹರಣೆಗೆ ಫ್ರಾಯ್ಡ್ ರ ಸೈಕೋಅನಾಲಿಟಿಕ್ ಥಿಯರಿ (ಮನೋವಿಶ್ಲೇಷಕ ಸಿದ್ಧಾಂತ) 20ನೇ ಶತಮಾನದ ಮೊದಲ ಮೂರನೇ ಭಾಗಗಳಲ್ಲಿ– ಪ್ರಾಧಾನ್ಯತೆಯನ್ನು ಪಡೆದಿತ್ತು. ಇದನ್ನು ನಂತರ, ನ್ಯೂರೋಸೈನ್ಸಸ್– ಮೇಲಿನ ಗಮನ ಕೇಂದ್ರೀಕರಣದಿಂದ ಬದಲಿಸಲಾಯಿತು.ಆನುವಂಶೀಯ ಶಾಸ್ತ್ರ ಹಾಗು ನ್ಯೂರೋಇಮೇಜಿಂಗ್ ನಲ್ಲಿ ಆದ ಮಹತ್ತರವಾದ ಬೆಳವಣಿಗೆಯು ಅದಕ್ಕೆ ನೆರವಾಯಿತು.

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. Acgme.org
  2. Nic.in
  3. Lua error in ಮಾಡ್ಯೂಲ್:Citation/CS1 at line 3606: bad argument #1 to 'pairs' (table expected, got nil).

ಬಾಹ್ಯ ಕೊಂಡಿಗಳು[ಬದಲಾಯಿಸಿ]

]

]