ವಿಷಯಕ್ಕೆ ಹೋಗು

ಬೆನ್ನು ಹುರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೆರ್ಟೆಬ್ರಲ್ ಕಾಲಮ್ಸ್‌ನಲ್ಲಿ ಬೆನ್ನುಹುರಿಯ ಸ್ಥಾನವಿದೆ
ಬೆನ್ನುಹುರಿಯ ಹತ್ತಿರದ ನೋಟ
ಕುತ್ತಿಗೆಯ ಮೂಲಕ ಬೆನ್ನುಹುರಿಯ ಛೇಧನ
ಕಂದುವಸ್ತುವಿನ ರೆಕ್ಸ್ಡ್ ತೆಳುಪದರ
ಬೆನ್ನುಹುರಿಯ ಬೆಳವಣಿಗೆ of the alar and basal plates
ಬೆನ್ನುಹುರಿಯ ಹರವು

ಬೆನ್ನು ಹುರಿ ಇದು ತೆಳುವಾದ ನರತಂತುಗಳ ರಾಶಿ ಮತ್ತು ಜೀವಕೋಶಗಳ ಜೊತೆಗಿನ ಉದ್ದನೆಯ ಕೊಳವೆಯಾಕಾರದ ಒಂದು ರಚನೆಯಾಗಿದೆ. ಇದು ಮೆದುಳಿಗೆ ನೇರವಾಗಿ ಜೋಡಣೆಯಾಗಿರುತ್ತದೆ.(ನಿರ್ಧಿಷ್ಟವಾಗಿ ಹಿಮ್ಮೆದುಳಿಗೆ ಸೇರಿಕೊಂಡಿರುತ್ತದೆ)ಮೆದುಳು ಮತ್ತು ಬೆನ್ನುಹುರಿ ಸೇರಿಕೊಂಡು ಕೇಂದ್ರೀಯ ನರವ್ಯವಸ್ಥೆಯನ್ನು ನಿರ್ಮಾಣ ಮಾಡಿರುತ್ತವೆ. ಬೆನ್ನುಹುರಿಯು ಸೊಂಟದ ಮೂಳೆಯ ಮೊದಲ ಮತ್ತು ಎರಡನೆಯ ಮೂಳೆಯ ಸಂದಿಭಾಗದವರೆಗೆ ಇರುತ್ತದೆ. ಇದು ಬೆನ್ನಿನ ಕೆಳಭಾಗ ಸೊಂಟದವರೆಗೆ ಹರಡಿಕೊಂಡಿರುವುದಿಲ್ಲ.

ಇದು ಗಂಡಸರಲ್ಲಿ 45 cm (18 in) ಉದ್ದವಿದ್ದು ಹೆಂಗಸರಿಗೆ 43 cm (17 in)ರಷ್ಟು ಉದ್ದವಿರುತ್ತದೆ. ಸೊಂಟದ ಮೂಳೆಯಲ್ಲಿಯ ಪೋಳ್ಳು ಭಾಗದಲ್ಲಿ ಇದು ಅಂಟಿಕೊಂಡಿರುವುದರಿಂದ ಹೋಲಿಕೆಯಲ್ಲಿ ಸಣ್ಣದಿರುವ ಬೆನ್ನು ಮೂಳೆಯನ್ನು ಇದು ಕಾಪಾಡುತ್ತದೆ. ಬೆನ್ನು ಹುರಿಯು ಸಾಮಾನ್ಯವಾಗಿ ಮೆದುಳು ಮತ್ತು ದೇಹದ ಇತರ ಭಾಗಗಳಿಗೆ ನರ ಸಂಜ್ಞೆಗಳನ್ನು ಸಾಗಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಆದರೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಕಷ್ಟು ಪ್ರತಿಫಲಿತಗಳನ್ನೂ ಮತ್ತು ಕೇಂದ್ರ ವ್ಯವಸ್ಥೆಯನ್ನು ನಿಭಾಯಿಸುವ ವ್ಯವಸ್ಥೆಯನ್ನು ಹೊಂದಿರುತ್ತದೆ. ಬೆನ್ನು ಹುರಿ ಮೂರು ಮುಖ್ಯ ಕಾರ್ಯವನ್ನು ನಿರ್ವಹಿಸುತ್ತದೆ:

 1. ಇದು ಬೆನ್ನುಹುರಿಯಲ್ಲಿ ಚಲಿಸುವ ಮಾಹಿತಿಯನ್ನು ಸಾಗಿಸುವ ಕೊಳವೆಯಂತೆ ಕಾರ್ಯ ನಿರ್ವಹಿಸುತ್ತದೆ.
 2. ಬೆನ್ನುಹುರಿಯಲ್ಲಿ ಮೇಲೇರುವ ಸಂವೇದನಾತ್ಮಕ ಮಾಹಿತಿಯನ್ನು ಸಾಗಿಸುವ ಕೊಳವೆಯಂತೆ ಇದು ಕಾರ್ಯ ನಿರ್ವಹಿಸುತ್ತದೆ.
 3. ಕೆಲವು ಪ್ರತಿಪಲಿತಗಳನ್ನು ಆಯೋಜಿಸುವ ಮುಖ್ಯ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತದೆ.

[೧]

ರಚನೆ[ಬದಲಾಯಿಸಿ]

ಬೆನ್ನುಹುರಿಯು ಮೆದುಳು ಮತ್ತು ಪರಿದಿಯ [[[ನರ]]]ಮಂಡಲದ ನಡುವೆ ಮಾಹಿತಿಯನ್ನು ಸಾಗಿಸುವ ಮುಖ್ಯ ದಾರಿಯಾಗಿದೆ. ಬೆನ್ನುಹುರಿಯ ಉದ್ದದಲ್ಲಿ ಒಟ್ಟಾರೆ ಬೆನ್ನು ಮೂಳೆಗಿಂತ ಸಣ್ಣದಿರುತ್ತದೆ. ಮಾನವನ ಬೆನ್ನುಹುರಿಯು ಹಿಮ್ಮೆದುಳಿನಿಂದ ಪ್ರಾರಂಭವಾಗಿ ಬೆನ್ನುಹುರಿಯ ಅಸ್ಥಿಮಜ್ಜೆಯ ಮೂಲಕ ಮೊದಲ ಮತ್ತು ಎರಡನೆಯ ಸೊಂಟದ ಮೂಳೆಯವರೆಗೆ ಮುಂದುವರೆದು ಫೈಲಮ್‌ ಟರ್ಮಿನಾಲೆ ಎಂಬ ಸೊಂಟದ ಮೂಳೆಯವರೆಗೆ ಹರಡಿಕೊಂಡಿರುತ್ತದೆ.

ಇದು ಗಂಡಸರಲ್ಲಿ 45 cm (18 in)ರಷ್ಟು ಉದ್ದ ಮತ್ತು ಮಹಿಳೆಯರಲ್ಲಿ ಸುಮಾರು 43 cm (17 in)ರಷ್ಟು ಉದ್ದವಿರುತ್ತದೆ ಮತ್ತು ಇದು ಕುತ್ತಿಗೆಯ ಭಾಗದಿಂದ ಸೊಂಟದ ಭಾಗದವರೆಗೆ ಹರಡಿಕೊಂಡಿರುತ್ತದೆ. ಕುತ್ತಿಗೆಯ ಸಮೀಪದ C4 ಇಂದ T1ವರೆಗೆ ಹರಡಿಕೊಂಡಿರುವ ಮೂಳೆಯಲ್ಲಿರುವ ನರಗಳಿಂದ ಮೆದುಳಿನಿಂದ ಬರುವ ಸಂವೇದನೆಯು ಕೈಗಳಿಗೆ ವರ್ಗಾಯಿಸಲ್ಪಡುತ್ತದೆ. ಸೊಂಟದ ಭಾಗದಲ್ಲಿ T9 ಮತ್ತು T12ನಲ್ಲಿ ಹರಡಿಕೊಂಡಿರುವ ನರತಂತುಗಳು ಕೈಗಳಲ್ಲದ ಇತರ ಭಾಗಗಳಿಂದ ಬರುವ ಹಾಗೂ ಹೋಗುವ ಕಾಲುಗಳಿಂದ ವರ್ಗಾವಣೆಯಾಗುವ ಸಂವೇದನೆಯನ್ನು ಸಾಗಿಸುವ ಕೆಲಸ ಮಾಡುತ್ತದೆ. ಇಲ್ಲಿ ಕೆಲವೊಮ್ಮೆ ದೇಹದ ಭಾಗಗಳ ಹೆಸರುಗಳು ನಿಮ್ಮನ್ನು ಗೊಂದಲಕ್ಕೀಡುಮಾಡಬಹುದು ಅದರ ಕುರಿತಾಗಿ ಗಮನವಿರಲಿ. ಅದೇನೆ ಇದ್ದರೂ ಇಲ್ಲಿರುವ ನರವ್ಯವಸ್ಥೆಗೂ ಸೊಂಟದ ಭಾಗದ ನರವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.

ಬೆನ್ನುಹುರಿಯ ಛೇಧನದಲ್ಲಿ ಗಮನಿಸಬಹುದು ಇದರ ಪರೀಧಿಯ ಭಾಗವು ನರಕೋಶಕ್ಕೆ ಸಂಬಂಧಿಸಿದ ಬಿಳಿಮೆದುಳು ಜಾಗವು ಸಂವೇದನಾತ್ಮಕ ಮತ್ತು ನ್ಯೂರಾನ್‌ಕಣಗಳನ್ನು ಹೊಂದಿರುತ್ತದೆ. ಇದರ ಒಳಗೆ ಪರಿಧಿಯ ಭಾಗದಲ್ಲಿ ಬೂದು ಬಣ್ಣದ ಚಿಟ್ಟೆಯ ಆಕಾರದಲ್ಲಿರುವ ಕೇಂದ್ರವ್ಯವಸ್ಥೆ ಇರುತ್ತದೆ ಇದು ನರಕೋಶಗಳಿಂದ ಉಂಟಾಗಿರುತ್ತದೆ. ಕೇಂದ್ರೀಯ ಸ್ಥಳವು ಕೇಂದ್ರೀಯ ನಾಲೆಯನ್ನು ಸುತ್ತುವರೆದಿರುತ್ತದೆ, ಇದು ಮೆದುಳಿನ ರಚನೆಯಲ್ಲಿರುವಂತೆಯೇ ಇರುವ ರಚನೆಯಾಗಿದ್ದು ವೆಂಟ್ರಿಕಲ್ಸ್‌ ಎಂದು ಕರೆಯಲಾಗುತ್ತದೆ. ಈ ವೆಂಟ್ರಿಕಲ್ಸ್‌ಗಳು ಮೆದುಳಿಗೆ ಸಂಬಂದಿಸಿದ ಬೆನ್ನುಹುರಿ ದಾತುವನ್ನು ಹೊಂದಿರುತ್ತದೆ.

ಬೆನ್ನುಹುರಿಯು ಒಂದಕ್ಕೊಂದು ಸೇರಿಕೊಂಡ ಮೂಳೆಗಳಿಂದಾಗಿದ್ದು ಇದಕ್ಕೆ ಮೊಟ್ಟೆಯ ಹೊರಮೈ ರೀತಿಯಆಕಾರವನ್ನು ನೀಡಿದೆ. ಬೆನ್ನುಹುರಿಯು ಬೆನ್ನಿನ ಕೆಳಭಾಗ ಹಾಗೂ ಮೇಲ್ಬಾಗದ ಕಡೆಗೆ ಬೆಳೆಯುತ್ತದೆ. ಮುಂದಿನ ಮಧ್ಯದಲ್ಲಿರುವ ಸಲ್ಕಸ್‌ ಕೆಳಭಾಗದೆಡೆಗೆ ಬೆಳೆಯುತ್ತದೆ ಮತ್ತು ಹಿಂದಿರುವ ಮಧ್ಯಭಾಗದ ಸೀಳು ಮೇಲ್ಬಾಗಕ್ಕೆ ಬೆಳೆದಿರುತ್ತದೆ. ಕೆಳಭಾಗಕ್ಕೆ ಹರಿಯುವ ಬೆನ್ನುಹುರಿಯ ಕೇಂದ್ರಭಾಗವು ಕಾಲಿ ಸ್ಥಳವನ್ನು ಹೊಂದಿರುತ್ತದೆ ಇದನ್ನು ಕೇಂದ್ರದ ನಾಲೆ ಎಂದು ಕರೆಯಲಾಗುತ್ತದೆ.

ಬೆನ್ನುಹುರಿಯನ್ನು ಸುತ್ತುವರೆದಿರುವ ಮೂರು ಮುಖ್ಯ ಮನೈಂಜಸ್‌ಗಳೆಂದರೆ, ಹೊರಮೈಯನ್ನು ಆವರಿಸಿರುವ ಡ್ಯೂರಾ ಮೇಟರ್, ಅರಚ್‌ನಾಯಿಡ್‌ ಮೇಟರ್‌ ಮತ್ತು ಒಳಗಿರುವ ಪಿಯಾ ಮೇಟರ್‌ ಇವು ಮೆದುಳಿನ ಕಾಂಡ ಮತ್ತು ಮೆದುಳಿನ ಹೆಮಿಸ್ಫೇರ್‌‍ವರೆಗೂ ಇರುತ್ತವೆ. ಇದೇ ರೀತಿ, ಮೆದುಳುಹುರಿಯ ದಾತುವು ಸಬರ್‌ಚನೈಡ್‌ ಸ್ಥಳದಲ್ಲಿ ಕಂಡುಬರುತ್ತದೆ. ಬೆನ್ನುಹುರಿಯು ಮಾಂಸದಿಂದ ಮುಚ್ಚಿಕೊಂಡು ಸಣ್ಣಹಲ್ಲುಗಳಂತಹ ರಚನೆಯಿಂದ ಜೋಡಣೆಗೊಂಡಿರುತ್ತದೆ. ಇದು ಪಿಯಾ ಮೇಟರ್‌‌ನಿಂದ ಸಮಾನಾಂತರವಾಗಿ ಮೇಲ್ಮುಖವಾಗಿ ಮತ್ತು ಕೆಳಮುಖವಾಗಿ ಸುತ್ತುವರೆದಿರುತ್ತದೆ.

ಬೆನ್ನು ಮೂಳೆಯ ಮಣಿಗಂಟು ಕೋಶವು ಎರಡನೆಯ ಕೋಶಿಯ ಬೆನ್ನು ಹುರಿಯಲ್ಲಿ ಕೊನೆಗೊಳ್ಳುತ್ತದೆ. ಬೆನ್ನು ಹುರಿಯು ಮೂರು ಪದರುಗಳ ಅಂಗಾಂಶವನ್ನು ಹೊಂದಿದ್ದು ಇದನ್ನು ಬೆನ್ನುಹುರಿ ಮೆನೈಂಜಸ್‌ ಎಂದು ಕರೆಯಲಾಗುತ್ತದೆ ಇದು ಬೆನ್ನುಹುರಿಯನ್ನು ಆವರಿಸಿರುತ್ತದೆ. ಡ್ಯೂರಾ ಮೇಟರ್ ‌ ಇದು ಅತ್ಯಂತ ಹೊರಪದರವಾಗಿದ್ದು ಇದು ಗಟ್ಟಿಯಾದ ರಕ್ಷಣಾತ್ಮಕ ಕವಚವನ್ನು ನಿರ್ಮಿಸಿರುತ್ತದೆ. ಡ್ಯೂರಾ ಮೇಟರ್ ಮತ್ತು ಬೆನ್ನುಹುರಿಯ ಸುತ್ತುವರೆದಿರುವ ಸ್ಥಳದಲ್ಲಿ ಒಂದು ಕಾಲಿ ಜಾಗವಿರುತ್ತದೆ ಇದನ್ನು ಎಪಿಡ್ಯೂರಲ್ ಜಾಗವೆಂದು ಕರೆಯಲಾಗುತ್ತದೆ. ಎಪಿಡ್ಯೂರಲ್ ಜಾಗವನ್ನು ಎಡಿಪೋಸ್‌ ಅಂಗಾಂಶವು ತುಂಬಿಕೊಂಡಿರುತ್ತದೆ ಮತ್ತು ಇದು ಸಂಪರ್ಕಜಾಲದಲ್ಲಿಯ ರಕ್ತದ ಕಣಗಳನ್ನು ಹೊಂದಿರುತ್ತದೆ. ಅರ್ಚನಾಯಿಡ್ ಇದು ಮಧ್ಯದ ರಕ್ಷಣಾತ್ಮಕ ಪದರು ಆಗಿದೆ. ಇದು ಜೇಡರ ಬಲೆಯ ರೀತಿಯ ರಚನೆ ಹೊಂದಿರುವುದರಿಂದ ಈ ಹೆಸರನ್ನು ಇದಕ್ಕೆ ನೀಡಲಾಗಿದೆ. ಅರ್ಚನಾಯಿಡ್‌ ಮತ್ತು ಕೆಳಗಿರುವ ಪಿಯಾ ಮೇಟರ್‌ ನಡುವಿರುವ ಕಾಲಿ ಸ್ಥಳವನ್ನು ಸಬ್‌ಅರ್ಚನಾಯಿಡ್‌ ಸ್ಥಳವೆಂದು ಕರೆಯಲಾಗುತ್ತದೆ. ಈ ಸಬ್‌ಅರ್ಚನಾಯಿಡ್‌ ಸ್ಥಳವು ಮೆದುಳಿಗೆ ಸಂಬಂಧಿಸಿದ ಬೆನ್ನುಹುರಿ ಧಾತುವನ್ನು(CSF) ಹೊಂದಿರುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ’ಸ್ಪೈನಲ್‌ ಟಾಪ್‌’ ಎಂದು ಕರೆಯಲಾಗುವ ಒಂದು ಕ್ರಿಯೆಯಲ್ಲಿ ಸಬ್‌ಅರ್ಚನಾಯಿಡ್‌ ಸ್ಥಳದಿಂದ ಸಿಎಸ್‌ಎಫ್‌ ಅನ್ನು ಹೊರತೆಗೆಯಲು ಸೂಜಿಯನ್ನು ಬಳಸಲಾಗುತ್ತದೆ. ಹೆಚ್ಚಾಗಿ ಬೆನ್ನು ಹುರಿಯ ಸೊಂಟದ ಭಾಗದಿಂದ ಇದನ್ನು ತೆಗೆಯಲಾಗುತ್ತದೆ. ಪಿಯಾ ಮೇಟರ್‌ ಇದು ಅತ್ಯಂತ ಒಳಗಿನ ರಕ್ಷಣಾತ್ಮಕ ಪದರು ಆಗಿದೆ. ಇದು ಅತ್ಯಂತ ಸೂಕ್ಷವಾದುದಾಗಿದ್ದು ನೇರವಾಗಿ ಬೆನ್ನುಹುರಿಯ ಮೇಲ್ಬಾಗಕ್ಕೆ ನೇರವಾಗಿ ಸಂಪರ್ಕದಲ್ಲಿರುತ್ತದೆ.

ಬೆನ್ನುಹುರಿಯ ಭಾಗಗಳು[ಬದಲಾಯಿಸಿ]

ಮಾನವನ ಬೆನ್ನುಹುರಿಯನ್ನು 31 ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಭಾಗದಲ್ಲೂ ಎಡ ಮತ್ತು ಬಲ ಬೆನ್ನುಹುರಿ ನರಗಳ ಪ್ರಕಾರ ವಿಭಾಗಿಸಲಾಗುತ್ತದೆ (ಸಂವೇದನಾತ್ಮಕ ಮತ್ತು ಚಲನಾತ್ಮಕ ವಿಭಾಗಗಳನ್ನು ಸೇರಿಸಿ) ಆರರಿಂದ ಎಂಟು ಚಲನಾತ್ಮಕ ನರಗಳ ಬೇರುರಹಿತ ಟಿಸಿಲುಗಳು ಎಡ ಮತ್ತು ಬಲಕ್ಕೆ ವೆಂಟ್ರೋ ಲ್ಯಾಟರಲ್ ಸಲ್ಕಿಯು ಶ್ರೇಣಿಯ ರೂಪದಲ್ಲಿರುತ್ತದೆ. ಬೇರುರಹಿತ ನರವ್ಯವಸ್ಥೆಯು ಒಟ್ಟಾಗಿ ನರಗಳನ್ನು ರೂಪಿಸುವಲ್ಲಿ ಒಟ್ಟಾಗುತ್ತದೆ. ಅದರಂತೆ, ಸಂವೇದನಾತ್ಮಕ ಬೇರುರಹಿತ ನರಗಳು ಎಡ ಮತ್ತು ಬಲ ಬೆನ್ನಿನ ಸಮನಾಂತರ ಸಲ್ಕಿ ಮತ್ತು ಸಂವೇದನಾತ್ಮಕ ನರವ್ಯವಸ್ಥೆಯನ್ನು ರೂಪಿಸಲು ಸಹಾಯಕವಾಗಿರುತ್ತದೆ. ಕೆಳಬಾಗದ (ಚಲನಾತ್ಮಕ) ಮತ್ತು ಬೆನ್ನಿನ ಭಾಗದ (ಸಂವೇದನಾತ್ಮಕ) ನರವ್ಯವಸ್ಥೆಯು ಬೆನ್ನುಹುರಿಯ (ಸಂವೇದನಾತ್ಮಕ ಮತ್ತು ಚಲನಾತ್ಮಕ ವಿಭಾಗಗಳನ್ನು ಸೇರಿಸಿ) ಪ್ರತಿಯೊಂದು ಭಾಗದಲ್ಲಿರುತ್ತದೆ. ಬೆನ್ನುಹುರಿಯ ನರಗಳು C1 ಮತ್ತು C2 ಹೊರತುಪಡಿಸಿ ಉಳಿದಂತೆ ಇಂಟರ‍್ವರ್ಟಿಬ್ರಲ್ ಫೋರಮೆನ್‌ (IVF) ಅನ್ನು ರೂಪಿಸುತ್ತವೆ. ಗಮನಿಸಿ ಪ್ರತಿಯೊಂದು ಬೆನ್ನುಹುರಿ ಭಾಗದಲ್ಲಿ ಕೇಂದ್ರೀಯ ಮತ್ತು ಹೊರಭಾಗದ ನರವ್ಯವಸ್ಥೆಯ ನಡುವೆ ಇರುವ ಗಡಿಯನ್ನು ಗುರುತಿಸಬಹುದಾಗಿದೆ. ಬೇರುರಹಿತ ನರಗಳು ಹೊರಭಾಗದ ನರವ್ಯವಸ್ಥೆಯ ಭಾಗವಾಗಿರುತ್ತವೆ.

ಮೇಲ್ಬಾಗದ ಬೆನ್ನುಮೂಳೆಯ ಭಾಗದಲ್ಲಿ, ಬೆನ್ನುಹುರಿ ನರವ್ಯವವಸ್ಥೆಯು ನೇರವಾಗಿ ಬೆನ್ನುಹುರಿಯಿಂದ ಹೊರಟಿರುತ್ತವೆ. ಹಾಗೆಯೇ ಕೆಳಭಾಗದ ಬೆನ್ನುಮೂಳೆಯ ಭಾಗದಲ್ಲಿ ನರಗಳು ಇನ್ನೂ ಕೆಳಗಿನವರೆಗೆ ಸಾಗುತ್ತವೆ. ಬೆನ್ನುಹುರಿಯ ಕೊನೆಯ ಭಾಗವನ್ನು ಕೊನಸ್‌ ಮೆಡ್ಯೂಲಾರಿಸ್‌ ಎಂದು ಕರೆಯಲಾಗುತ್ತದೆ. ಪಿಯಾ ಮೇಟರ್‌ ಮುಂದುವರೆದು ಫೈಲಮ್ ಟರ್ಮಿನಾಲೆ ಎಂಬ ಭಾಗವಾಗುತ್ತದೆ. ಇದು ಕಾಕ್ಸಿಕ್ಸ್‌ ಮತ್ತು ಬೆನ್ನುಹುರಿಯನ್ನು ಜೋಡಿಸುವ ಕಾರ್ಯ ಮಾಡುತ್ತದೆ. ಕೌಡಾ ಎಕ್ವಿನಾ ಎಂದು (’ಹಾರ್ಸಸ್‌ ಟೇಲ್‌’) ಬೆನ್ನುಹುರಿಯ ಭಾಗದಲ್ಲಿ ಇರುವ ನರಗಳ ಗುಂಪಿಗೆ ಕರೆಯಲಾಗುತ್ತದೆ. ಇದು ಕೊನಸ್‌ ಮೆಡ್ಯುಲಾರಿಸ್‌ನ ಕೆಳಗಿರುವ ಬೆನ್ನುಹುರಿಯ ಭಾಗದವರೆಗೂ ಹರಿದು ಹೋಗಿರುತ್ತದೆ.

ಕೌಡಾ ಎಕ್ವಿನಾ ಇದು ಬೆನ್ನುಹುರಿಯು ನಾಲ್ಕನೇ ವರ್ಷಕ್ಕೆ ಬೆಳೆಯುವುದನ್ನು ನಿಲ್ಲಿಸಿದ ಕಾರಣದಿಂದಾಗಿ ರೂಪುಗೊಳ್ಳುತ್ತದೆ. ಆದರೆ ಬೆನ್ನುಹುರಿಯ ಸುತ್ತಲಿನ ಟಿಸಿಲ ಮೂಳೆಗಳು ಯೌವನದ ಅಂತ್ಯದವರೆಗೂ ಬೆಳೆಯುತ್ತದೆ. ಇದು ಮುಖ್ಯವಾದ ಬೆನ್ನುಹುರಿ ನರಗಳು ಸೊಂಟದ ಮೇಲ್ಬಾಗದ ಪ್ರದೇಶದಲ್ಲಿ ಬೆಳೆಯಲು ಕಾರಣವಾಗುತ್ತದೆ. ಬೆನ್ನುಹುರಿಯನ್ನು ದೇಹಶಾಸ್ತ್ರೀಯ ಪ್ರಕಾರ ಬೆನ್ನುಹುರಿ ನರಗಳ ಹುಟ್ಟಿನ ಪ್ರಕಾರ 31 ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಬೆನ್ನುಹುರಿಯ ಪ್ರತಿಯೊಂದು ಭಾಗವು ಎರಡು ಗಾಂಗ್ಲಿಯಾಗಳ ಜೊತೆಯಾಗಿರುತ್ತದೆ. ಇದನ್ನು ಮೆಲ್ಮುಖ ನರಗಾಂಗ್ಲಿಯ ಎಂದು ಕರೆಯಲಾಗುತ್ತದೆ ಇದು ಬೆನ್ನುಹುರಿಯ ಸ್ವಲ್ಪ ಹೊರಭಾಗದಲ್ಲಿ ಇರುತ್ತದೆ. ಈ ಗ್ಯಾಂಗ್ಲಿಲಾಗಳು ಸಂವೇದನಾತ್ಮಕ ನ್ಯೂರಾನ್‌ ಕೋಶಗಳನ್ನು ಹೊಂದಿರುತ್ತವೆ. ಮೇಲ್ಮುಖ ಹರಿವಿನ ನರಗಳ ಮೂಲಕ ಈ ಸಂವೇದನಾತ್ಮಕ ನ್ಯೂರಾನ್‌ಗಳ ಆಕ್ಸಾನ್‌ಗಳ ನರತಂತುಗಳು ಸಾಗುತ್ತವೆ.

ಕೆಳಮುಖ ಹರಿವಿನ ನರಗಳು ಚಲನಾತ್ಮಕ ನ್ಯೂರಾನ್‌ಗಳ ನರತಂತುಗಳನ್ನು ಹೊಂದಿರುತ್ತವೆ. ಸಿಎನ್‌ಎಸ್‌ ಒಳಗೆ ಮೇಲ್ಮುಖ ನರಗಳು ಮತ್ತು ಕೆಳಮುಖ ನರಗಳು ಒಟ್ಟಾಗಿ ಇಂಟರ್‌ವರ್ಟೆಬ್ರಲ್‌ನಲ್ಲಿ ಹೊರಹೋಗುವ. ಮೂಲಕ ಬೆನ್ನುಹುರಿಯ ನರಗಳಾಗುತ್ತವೆ. ಬೆನ್ನುಹುರಿಯ ಮಧ್ಯಭಾಗದಲ್ಲಿರುವ ಕಂದುಬಣ್ಣದ ವಸ್ತುವು ಚೆಟ್ಟೆಯ ಆಕಾರದಲ್ಲಿರುತ್ತದೆ ಮತ್ತು ಚಲನಾತ್ಮಕ ಮತ್ತು ಒಳನ್ಯೂರಾನ್‌ಗಳ ಜೀವಕೋಶಿಯ ಅಂಶಗಳನ್ನು ಹೊಂದಿರುತ್ತದೆ. ಅಲ್ಲದೆ ಇದು ನ್ಯೂರೊಗ್ಲಿಯಾ ಜೀವಕೋಶಗಳು ಮತ್ತು ಮ್ಯೇಲಿನೇಟ್‌ ಆಗದ ನರತಂತುಗಳನ್ನು ಹೊಂದಿರುತ್ತದೆ. ಕಂದು ವಸ್ತುವಿನ ಹಂಚುವಿಕೆಯನ್ನು (ದಿ ವಿಂಗ್ಸ್‌) ಹಾರ್ನ್ಸ್‌ಗಳೆಂದು ಕರೆಯಲಾಗುತ್ತದೆ. ಕಂದು ಹಾರ್ನ್ಸ್‌ ಮತ್ತು ಕಂದುವಸ್ತುವು ಕಂದು Hನಿಂದ ಬಂದಂತಹುದಾಗಿದೆ.ಬಿಳಿ ವಸ್ತುವು ಕಂದು ವಸ್ತುವಿನ ಹೊರಭಾಗದಲ್ಲಿ ಇರುತ್ತದೆ ಮತ್ತು ಹೆಚ್ಚಾಗಿ ಇದು ಮ್ಯೇಲಿನೇಟ್‌ ಆಗಿರುವ ಚಲನಶೀಲ ವಸ್ತುವನ್ನು ಹಾಗೂ ಸಂವೇಧನಾತ್ಮಕ ನರತಂತುಗಳನ್ನು ಹೊಂದಿರುತ್ತದೆ. ಬಿಳಿ ವಸ್ತುವಿನ ವಿಭಾಗಗಳು ಮಾಹಿತಿಯನ್ನು ಬೆನ್ನುಹುರಿಯ ಮೇಲೆ ಅಥವಾ ಕೆಳಕ್ಕೆ ಕಳುಹಿಸುವ ಕೆಲಸ ಮಾಡುತ್ತವೆ. ಸಿಎನ್‌ಎಸ್‌ನ ಒಳಗೆ ಕಾರ್ಯನಿರ್ವಹಿಸುವ ಗುಂಪುಗಳಾಗಿ ವಿಂಗಡಿತವಾಗಿರುತ್ತವೆ ಇವನ್ನು ನ್ಯೂಕ್ಲೈ ಎಂದು ಕರೆಯಲಾಗುವ ಮತ್ತು ನರಕೋಶಗಳ ಕಾರ್ಯಪ್ರವೃತ್ತ ಗುಂಪುಗಳಾಗಿ ವಿಂಗಡಿತವಾಗಿರುತ್ತವೆ. ಸಿಎನ್‌ಎಸ್‌ನಲ್ಲಿರುವ ನರತಂತುಗಳು ಒಂದು ಗುಂಪಾಗಿ ತೋರಿಕೊಳ್ಳುತ್ತವೆ.

ಸುಮಾರು 33 ನರಗಳ ವಿಭಾಗಗಳು ಮಾನವನ ಬೆನ್ನುಹುರಿಯಲ್ಲಿ ಇರುತ್ತದೆ. (ಕೆಲವು ಇಎಮ್‌ಎಸ್‌ ಪಠ್ಯದ ಪ್ರಕಾರ ಸಂಪೂರ್ಣ ಬೆನ್ನುಹುರಿಯನ್ನು ಒಂದು ಭಾಗವೆಂದು ಪರಿಗಣಿಸಲಾಗುತ್ತದೆ):

 • ಕುತ್ತಿಗೆಯ ಭಾಗದಲ್ಲಿರುವ ಎಂಟು ಭಾಗಗಳು ಸೇರಿ ಎಂಟು ಜೋಡಿ ಕುತ್ತಿಗೆಯ ಭಾಗದ ನರತಂತುಗಳನ್ನು ಹೊಂದಿದೆ (C1 ಬೆನ್ನುಹುರಿ ನರವು C1 ಬೆನ್ನುಹುರಿ ನರದ ವಿಭಾಗದ ಹಿಂದೆಲೆ ಮತ್ತು C1 ವರ್ಟೆಬ್ರಾದ ನಡುವೆ ಇರುತ್ತದೆ; C2 ನರಗಳು C1 ವರ್ಟೆಬ್ರಾದ ಮುಂಬಾಗದ ಭಾಗುವಿಕೆಯ ಸ್ಥಳದಲ್ಲಿ ಮತ್ತು C2 ವರ್ಟೆಬ್ರಾದ ತೆಳುಪೊರೆಯ ಹತ್ತಿರ ಇರುತ್ತವೆ. IVF ಹಾಗೂ C7 ಮತ್ತು T1 ವರ್ಟೆಬ್ರಾದ ನಡುವೆ ಹಾದುಹೋಗುವ C8 ಜೋಡಿಯನ್ನುಳಿದು C3-C8 ಬೆನ್ನುಹುರಿ ನರಗಳು ಸರ್ವಿಕಾ ವರ್ಟೆಬ್ರಾಗೆ ಜೊತೆಯಲ್ಲಿರುತ್ತವೆ.)
 • 12 ಶ್ವಾಸಕೋಶಿಯ ಭಾಗಗಳು 12 ಜೋಡಿ ಶ್ವಾಸಕೋಶಿಯ ನರಗಳು (IVFನಿಂದ ಕೆಳಗಿರುವ ವರ್ಟಬ್ರೆಟಾ T1-T12ಗೆ ಸಂಬಂಧಿಸಿದ್ದಾಗಿದೆ.)
 • 5 ಸೊಂಟದ ಭಾಗಗಳು 5 ಜೊತೆ ಸೊಂಟದ ಭಾಗದಲ್ಲಿಯ ನರಗಳು ಉಂಟಾಗಿರುತ್ತವೆ. (IVF ಬೆನ್ನುಹುರಿಯ ಕಾಲಮ್‌ ಮೂಲಕ, ಕೆಳಗಿನ ವರ್ಟಬ್ರಲ್ L1-L5ನಲ್ಲಿ ಹೊರಹೋಗುತ್ತದೆ.)
 • 5 (ಅಥವಾ 1) ಸಂಪೂರ್ಣ ಬೆನ್ನುಹುರಿಯ ಭಾಗಗಳು 5 ಜೋಡಿ ಸ್ಯಾಕ್ರಲ್‌ ನರಗಳನ್ನು ಹುಟ್ಟುಹಾಕುತ್ತವೆ (ಬೆನ್ನುಹುರಿ ಕಾಲಮ್‌ನ IVF ಹಾಗೂ ಕೆಳಗಿನ S1-S5 ವರ್ಟೆಬ್ರಾದಿಂದ ಹೊರಹೋಗುತ್ತದೆ)
 • 3 ಕಾಕ್ಸಿಜೆಲ್‌ ಭಾಗಗಳು ಸೇರಿಕೊಂಡು ಒಂದೇ ಭಾಗದ 1 ಜೊತೆ ಕಾಕ್ಸಿಜೆಲ್‌ ನರಗಳನ್ನು ಹುಟ್ಟುಹಾಕುತ್ತವೆ. (ಬೆನ್ನುಹುರಿ ಭಾಗದ ಸ್ಯಾಕ್ರಲ್ ಹ್ಯಾಟಸ್‌ ಮೂಲಕ ಹೊರಹೋಗುತ್ತದೆ)‌

ವರ್ಟಬ್ರಲ್‌ ಕಾಲಮ್‌ನ ಬೆನ್ನುಹುರಿಗಿಂತ ಹೆಚ್ಚು ಉದ್ದ ಬೆಳೆಯುವುದರಿಂದ, ಯುವಕರಲ್ಲಿ ಬೆನ್ನುಹುರಿ ಭಾಗಗಗಳು ವರ್ಟಬಲ್ ಭಾಗಗಳ ಜೊತೆಗೆ ಅದರಲ್ಲೂ ಕೆಳಭಾಗದ ಬೆನ್ನುಹುರಿಗೆ ಸಂಬಂಧಿಸಿರುವುದಿಲ್ಲ. ಭ್ರೂಣಾವಸ್ಥೆಯಲ್ಲಿ ವರ್ಟೆಬ್ರಲ್ ಭಾಗಗಳು ಬೆನ್ನುಹುರಿಯೊಂದಿಗೆ ಸಂಬಂಧ ಹೊಂದಿರುತ್ತದೆ. ಯೌವನದಲ್ಲಿ ಬೆನ್ನುಹುರಿಯು L1/L2 ವರ್ಟೆಬ್ರಲ್‌ ಹಂತದಲ್ಲಿ ಕೊನಸ್‌ ಮೆಡ್ಯುಲಾರಿಸ್ ಎಂಬ ರಚನೆಯನ್ನು ಉಂಟುಮಾಡುವ ಮೂಲಕ ಕೊನೆಗೊಳ್ಳುತ್ತದೆ. ಉದಾಹರಣೆಗೆ ಸೊಂಟದ ಭಾಗದಲ್ಲಿಯ ಬೆನ್ನುಹುರಿ ಭಾಗಗಳು ವರ್ಟೆಬ್ರಲ್ ಲೆವೆಲ್‌ನ T9 ಮತ್ತು L2 ಭಾಗಗಳಲ್ಲಿ ಕಂಡುಬರುತ್ತದೆ.

ಬೆನ್ನುಹುರಿ ಜೀವಕೋಶಗಳು L1/L2 ವರ್ಟೆಬ್ರಲ್‌ ಹಂತದಲ್ಲೇ ಕೊನೆಗೊಂಡರೂ ಕೂಡ, ವೆರ್ಟೆಬ್ರಾ ಹಂತದಲ್ಲಿ ಬೆನ್ನುಹುರಿಯ ನರಕೋಶಗಳು ಪ್ರತಿಯೊಂದು ಭಾಗಕ್ಕೆ ಜೊತೆಯಿರುತ್ತವೆ. ಕೆಳಭಾಗದ ಬೆನ್ನುಹುರಿಯ ನರಗಳಿಗೆ, ವರ್ಟೆಬ್ರಲ್ ಕಾಲಮ್‌ನ ಅವುಗಳ ಮೂಲಕ್ಕಿಂತ ಹೆಚ್ಚು ಕೆಳಹಂತದಲ್ಲಿ ಇರುತ್ತವೆ. ಈ ನರಗಳು ತಮ್ಮ ಮೂಲಗಳಿಂದ ಹೊರಟು ವರ್ಟಿಬ್ರಲ್ ಕಾಲಮ್‌ನಿಂದ ಹೊರಹೋಗುವ ಕಡೆಗೆ ಸಾಗುತ್ತವೆ. ಕೆಳಹಂತದ ಬೆನ್ನುಹುರಿ ಅಂಶಗಳ ಗುಂಪನ್ನು ಕೌಡಾ ಎಕ್ವಿನಾ ಎಂದು ಕರೆಯಲಾಗುತ್ತದೆ.

ಬೆನ್ನುಹುರಿ ಭಾಗವು ದೊಡ್ಡದಾಗುವ ಎರಡು ಭಾಗಗಳಿವೆ ಅವುಗಳೆಂದರೆ:

ಭ್ರೂಣಶಾಸ್ತ್ರ[ಬದಲಾಯಿಸಿ]

ಬೆಳವಣಿಗೆಯ ಹಂತದಲ್ಲಿ ಬೆನ್ನುಹುರಿಯು ನ್ಯೂರಲ್‌ ಟ್ಯೂಬ್‌ನಿಂದ ಬೆಳವಣಿಗೆ ಹೊಂದುತ್ತದೆ. ನ್ಯೂರಲ್‌ಟ್ಯೂಬ್ ಬೆಳವಣಿಗೆ ಹೊಂದುತ್ತಿದ್ದಂತೆ ಬೆನ್ನುಹುರಿಯ ಪೂರ್ವರೂಪ ಕಾಣುವ ಸೊನಿಕ್‌ ಹೆಡ್ಜ್‌ಹಾಗ್‌ ಅಥವಾ ಎಸ್‌ಎಚ್‌ಎಚ್‌ ಅನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಇದರ ಪರಿಣಾಮವಾಗಿ ಮುಖ್ಯಭಾಗ ಬೆಳವಣಿಗೆಯಾಗಲು ಪ್ರಾರಂಭವಾಗುತ್ತದೆ ಮತ್ತು ಎಸ್‌ಎಚ್‌ಎಚ್‌ ಬಿಡುಗಡೆಯಾಗಲು ಪ್ರಾರಂಭವಾಗುತ್ತದೆ. ಇದು ಚಲನಶೀಲ ನ್ಯೂರಾನ್‌ಗಳನ್ನು ಮುಖ್ಯಭಾಗದಲ್ಲಿ ಬೆಳೆಯಲು ಸಹಕರಿಸುತ್ತದೆ. ಇದರ ನಡುವೆ ಇದರ ಮೇಲೆ ಇರುವ ಬಾಹ್ಯಕೋಶಸ್ತರವು ಮೂಳೆಯ ಮಾರ್ಪೊಜೆನಿಟಿಕ್ ಫ್ರೊಟಿನ್(BMP) ಅನ್ನು ಬಿಡುಗಡೆಗೊಳಿಸಲು ಪ್ರಾರಂಭಿಸುತ್ತದೆ. ಇದು ಮುಖ್ಯಭಾಗವು ಬೆಳೆಯುವಲ್ಲಿ ಸಹಕರಿಸಲು ಪ್ರಾರಂಭಿಸುತ್ತದೆ ಹಾಗೂ ಬಿಎಮ್‌ಪಿಯನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಇದು ಆಲಾರ್‌ಪ್ಲೇಟ್‌ಗೆ ಸಂವೇದನಾತ್ಮಕ ನ್ಯೂರಾನ್‌ಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಆಲಾರ್‌ಪ್ಲೇಟ್‌ ಮತ್ತು ಬೇಸಲ್‌ಪ್ಲೇಟ್‌ಗಳು ಸಲ್ಕಸ್ ಲಿಮಿಟನ್ಸ್‌ಗಳಿಂದ ಬೇರ್ಪಟ್ಟಿರುತ್ತವೆ. ಜೊತೆಗೆ ಫ್ಲೂರ್‌ಪ್ಲೇಟ್‌ ಕೂಡಾ ನೆಟ್ರಿನ್‌ ಅನ್ನು ಬಿಡುಗಡೆಗೊಳಿಸಲು ಪ್ರಾರಂಭಿಸುತ್ತದೆ. ನೆಟ್ರಿನ್‌ಗಳು ರಾಸಾಯನಿಕ ಪ್ರಚೋಧಕಗಳಾಗಿ ನೋವನ್ನು ಭೇದಿಸುವ ಮತ್ತು ಥಾಲಮಸ್‌ ಕಡೆಗೆ ಸಾಗುವ ಉಷ್ಣತೆಗೆ ಸಂವೇಧಿಸುವ ನ್ಯೂರಾನ್‌ಗಳನ್ನು ಆಲಾರ್ ಪ್ಲೇಟ್‌ನ ಎಲ್ಲ ಬಿಳಿಕಣಗಳಲ್ಲೂ ಪ್ರಚೋದಿಸುತ್ತದೆ.

ಕೊನೆಯದಾಗಿ, ಈ ಹಿಂದೆ ವಿಕ್ಟರ್ ಹ್ಯಾಮ್‌ಬರ್ಗರ್ ಮತ್ತು ರಿಟಾ ಲೆವಿ-ಮೊಂಟಾಲ್ಸಿನಿ ಅವರು ಕೋಳಿಯ ಭ್ರೂಣದ ಮೇಲೆ ಮಾಡಿದ ಅಧ್ಯಯನ ಹಾಗೂ ಇತ್ತೀಚೆಗೆ ನಡೆಸಿದ ಅಧ್ಯಯನವು ಪ್ರೋಗ್ರಾಮ್ಡ್‌ ಸೆಲ್‌ ಡೆತ್‌ನಿಂದ ನ್ಯೂರಾನ್ ಕಣಗಳ ಕಡಿಮೆಯಾಗುತ್ತವೆ. ಇದಕ್ಕೆ ನರಕೋಶ ವ್ಯೂಹದ ಸರಿಯಾದ ಜೋಡಣೆ ಅಗತ್ಯ ಎಂದು ತಿಳಿಯಲಾಗಿದೆ. ಒಟ್ಟಾರೆ, ಸಹಜ ಭ್ರೂಣಾತ್ಮಕ ಚಟುವಟಿಕೆಯು ನ್ಯೂರಾನ್ ಮತ್ತು ಸ್ನಾಯು ಬೆಳವಣಿಗೆಗೆ ಸಹಾಯಕವಾಗತ್ತದೆ. ಆದರೆ ಇದು ಪ್ರಾಥಮಿಕ ಹಂತದಲ್ಲಿ ಬೆನ್ನುಹುರಿ ನ್ಯೂರಾನ್‌ಗಳ ಬೆಳವಣಿಗೆಗೆ ಸಹಾಯಕವಾಗಲಾರದು.

ದೇಹದ ಸಂವೇದನಾತ್ಮಕ ವ್ಯವಸ್ಥೆ[ಬದಲಾಯಿಸಿ]

ಸಂವೇದನಾತ್ಮಕ ದೇಹ ವ್ಯವಸ್ಥೆಯು ಮೇಲ್ಮುಖ-ಮಧ್ಯದ ಲೆಮಿನಿಸ್ಕಸ್‌ ಟ್ರ್ಯಾಕ್‌ನ (ಸ್ಪರ್ಷ ಮತ್ತು ಕಂಪನ ಸಂವೇಧನಾತ್ಮಕ ದಾರಿ) ಮತ್ತು ಸಮನಾಂತರವಿರುದ್ಧ ವ್ಯವಸ್ಥೆ ಅಥವಾ ಎಎಲ್‌ಎಸ್ (ನೋವು ಮತ್ತು ಉಷ್ಣತೆಯ ಸಂವೇಧನಾತ್ಮಕ ದಾರಿ) ಸಂವೇದನಾತ್ಮಕ ದಾರಿಯು ಮೂರು ಬೇರೆಬೇರೆ ನ್ಯೂರಾನ್‌ಗಳನ್ನು ಸಂವೇದನಾತ್ಮಕ ಗ್ರಾಹಕಗಳಿಂದ ಪಡೆದುಕೊಂದು ಮೆದುಳಿನ ಸೆರೆಬ್ರಲ್‌ ಕಾರ್ಟಿಕ್ಸ್‌ಗೆ ಕಳುಹಿಸುತ್ತದೆ. ಈ ನ್ಯೂರಾನ್‌ಗಳನ್ನು ಪ್ರಥಮ, ದ್ವಿತೀಯ ಮತ್ತು ತೃತಿಯ ಸಂವೇದನಾತ್ಮಕ ನ್ಯೂರಾನ್‌ಗಳೆಂದು ಕರೆಯಲಾಗುತ್ತದೆ. ಈ ಎರಡೂ ಹರಿವಿನ ದಾರಿಯಲ್ಲಿ, ಪ್ರಥಮ ಸಂವೇಧನಾತ್ಮಕ ನ್ಯೂರಾನ್‌ ಜೀವಕೋಶಗಳು ಮೇಲ್ಮುಖ ರೂಟ್‌ ಗಾಂಗ್ಲಿಯಾದಲ್ಲಿ ಮತ್ತು ಅವುಗಳ ಕೇಂದ್ರೀಯ ನರಕೋಶತಂತುಗಳು ಬೆನ್ನುಹುರಿಯಲ್ಲಿ ಕಂಡುಬರುತ್ತವೆ.

ಮೇಲ್ಮುಖ ಕಾಲಮ್‌ನ ಮಧ್ಯ ಲೆಮಿನಿಸ್ಕಸ್ ಟ್ರ್ಯಾಕ್‌‌ನಲ್ಲಿಯ ಪ್ರಥಮ ನ್ಯೂರಾನ್ ನರಕೋಶತಂತು ಮತ್ತು ಡಾರ್ಸಲ್‌ ಕಾಲಮ್‌ ಅನ್ನು ಪ್ರವೇಶ ಮಾಡುತ್ತದೆ. ಒಂದುವೇಳೆ ಪ್ರಥಮ ನರಕೋಶತಂತುವು ಕೆಳಗಿನ ಬೆನ್ನುಹುರಿ ಸ್ಥಾನ T6ನಲ್ಲಿ ನರಕೋಶ ತಂತುವು ಫ್ಯಾಸಿಕ್ಯೂಲಸ್ ಗ್ರೇಸಿಲಿಸ್ ಕಡೆಗೆ ಸಾಗುತ್ತದೆ. ಇದನ್ನು ಈ ಕಾಲಮ್‌ನ ಮಧ್ಯದ ಭಾಗ ಎಂದು ಪರಿಗಣಿಸಲಾಗುತ್ತದೆ. ನರಕೋಶತಂತುವು T6 ಹಂತವನ್ನು ದಾಟಿದರೆ, ಇದು ಫಾಸ್ಕಿಕ್ಯೂಲಸ್‌ ಕ್ಯೂನಾಟಸ್‌ನೊಳಗೆ ಸಾಗುತ್ತದೆ, ಇದು ಫಾಸಿಕ್ಯೂಲಸ್‌ ಗ್ರೆಸಿಲಿಸ್‌ಗೆ ಸಮನಾಂತರವಾಗಿರುತ್ತದೆ. ಯಾವ ರೀತಿಯಲ್ಲಾದರೂ, ಪ್ರಥಮ ನರಕೋಶ ತಂತುವು ಕೆಳಭಾಗದ ಮೆಡ್ಯೂಲಾದತ್ತ ವಾಲುತ್ತದೆ. ಇಲ್ಲಿ ಅದು ಫ್ಯಾಸಿಲಸ್‌ ಮತ್ತು ಸಿನಾಪ್ಸಸ್‌ ಅನ್ನು ಮೇಲ್ಮುಖ ಕಾಲಮ್‌ನ ನ್ಯೂಕ್ಲೀಯಗಳಲ್ಲಿ ಒಂದಾಗಿರುವ ಸೆಕಂಡರಿ ನ್ಯೂರಾನ್‌ಲ್ಲಿ ಬಿಟ್ಟು ಹೋಗುತ್ತದೆ. ನ್ಯೂಕ್ಲಿಯಸ್‌ ಗ್ರೇಸಿಲಿಸ್‌ ಅಥವಾ ನ್ಯೂಕ್ಲಿಯಸ್ ಕ್ಯೂನಾಟಸ್‌ ಇದು ಹರಿಯುವ ದಾರಿಯಲ್ಲಿ ಹರಿಯಲಾರದು. ಈ ಹಂತದಲ್ಲಿ ದ್ವಿತೀಯ ನರಕೋಶತಂತುವು ಮುಂಬಾಗ ಮತ್ತು ಮಧ್ಯಭಾಗವನ್ನು ಬಿಡುತ್ತದೆ. ಈ ಕಾರ್ಯವನ್ನು ಮಾಡುವ ದ್ವಿತೀಯ ನರಕೋಶತಂತುವನ್ನು ಒಳಗಿನ ಸೂಕ್ಷ್ಮ ನಾರು ಅಂಶಗಳು ಎಂದು ಕರೆಯಲಾಗುತ್ತದೆ. ಒಳಗಿನ ಈ ನಾರು ಅಂಶಗಳು ಡಿಕ್ಯುಸೇಟ್ ಆಗಲು ಮತ್ತು ಮಧ್ಯಮ ಲೆಮಿನಿಸ್ಕಸ್‌ ಹೆಚ್ಚಾಗಲು ಕಾರಣವಾಗುತ್ತದೆ. ದ್ವಿತೀಯ ಹಂತದ ನರತಂತುಕೋಶಗಳು ಕೊನೆಗೆ ಥಾಲಮಸ್‌ ಭಾಗದ ವೆಂಟ್ರಲ್ ಪೊಸ್ಟಿಯೋಲ್ಯಾಟರಲ್ ನ್ಯೂಕ್ಲಿಯಸ್‌(VPL) ಆಗಿ ತೃತೀಯ ಮಟ್ಟದ ನ್ಯೂರಾನ್‌ಗಳಾಗಿ ಕೊನೆಗೊಳ್ಳುತ್ತವೆ. ಅಲ್ಲಿಂದ ತೃತಿಯ ಮಟ್ಟದ ನ್ಯೂರಾನ್‌ಗಳು ಮುಂಭಾಗದ ಕೈಯಸ್ನಾಯು ಭಾಗದ ಒಳಗಿನ ಕ್ಯಾಪ್ಸ್ಯೂಲ್‌ ಮತ್ತು ಪ್ರಾಥಮಿಕ ಸಂವೇಧನಾತ್ಮಕ ಕಾರ್ಟೆಕ್ಸ್‌ಗಳ ಮೂಲಕ ವೃದ್ಧಿಯಾಗಲು ಪ್ರಾರಂಭಿಸುತ್ತವೆ.

ಆಂಟಿಯೋಲ್ಯಾಟರಲ್‌ ವ್ಯವಸ್ಥೆಯು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಪ್ರಾಥಮಿಕ ಹಂತದ ನ್ಯೂರಾನ್‌ಗಳು ಬೆನ್ನುಹುರಿ ಭಾಗವನ್ನು ಪ್ರವೇಶಿಸುತ್ತವೆ ಸಬ್ಸ್ಟಾನ್‌ಷಿಯಾ ಜೆಲಾಟಿನೊಸಾವನ್ನು ಪ್ರವೇಶಿಸುವ ಮೊದಲು ಒಂದು ಅಥವಾ ಎರಡು ಹಂತದವರೆಗೆ ಬೆಳವಣಿಗೆ ಹೊಂದುತ್ತವೆ. ಪ್ರವೇಶಕ್ಕೆ ಮೊದಲು ಬೆಳವಣಿಗೆ ಹೊಂದುವ ಈ ಪ್ರದೇಶವನ್ನು ಲಿಸ್ಸೌರ್ಸ್‌ ಪ್ರದೇಶ ಎಂದು ಕರೆಯಲಾಗುತ್ತದೆ. ಪ್ರವೇಶದ ನಂತರ ದ್ವಿತೀಯ ನರಕೋಶತಂತುಗಳು ಆಂಟಿರಿಯರ್ ಲ್ಯಾಟರಲ್‌ ಭಾಗದ ಬೆನ್ನುಹುರಿ ಪ್ರದೇಶವನ್ನು ಸ್ಪಿನೊಥಾಲಮಿಕ್ ಪ್ರದೇಶ ಎಂದು ಕರೆಯಲಾಗುತ್ತದೆ. VPL ಪ್ರದೇಶದ ಸುತ್ತ ಈ ಪ್ರದೇಶವು ಬೆಳೆಯುತ್ತ ತೃತೀಯ ನ್ಯೂರಾನ್‌ಗಳನ್ನು ಪ್ರವೇಶಿಸುತ್ತದೆ. ತೃತಿಯ ನ್ಯೂರಾನ್‌ ನರಕೋಶತಂತುಗಳು ಮೊದಲ ಸಂವೇಧನಾತ್ಮಕ ಕಾರ್ಟೆಕ್ಸ್‌ನಿಂದ ಒಳಗಿನ ಕ್ಯಾಪ್ಸ್ಯೂಲ್‌ ಭುಜದ ಸ್ನಾಯುವಿಗೆ ಹರಿಯುತ್ತವೆ.

ALSನಲ್ಲಿಯ ನೋವಿನ ಸಂವೇದನೆಯನ್ನು ಸಾಗಿಸುವ ನರಕೋಶಗಳು ತಮ್ಮ ಹರಿವನ್ನು VPL ಕಡೆಗೆ ಬದಲಾಯಿಸುತ್ತವೆ. ಈ ರೀತಿಯ ಒಂದು ಬದಲಾವಣೆಯಲ್ಲಿ ನರಕೋಶತಂತುಗಳು ಮಧ್ಯದ ಮೆದುಳಿನ ಪ್ರದೇಶದಲ್ಲಿ ಬಲೆಯಂತಹ ಒಂದು ಆಕಾರವನ್ನು ಉಂಟುಮಾಡುತ್ತವೆ. ಈ ರೀತಿಯ ಬಲೆಯಂತಹ ರಚನೆಯು ನಂತರ ಮೆದುಳಿನ ಹಿಪ್ಪೊಕ್ಯಾಂಪಸ್‌ ಪ್ರದೇಶದಲ್ಲಿ (ನೋವನ್ನು ಕುರಿತಾದ ನೆನಪನ್ನು ಸಂಗ್ರಹಿಸಲು) ಮತ್ತು ಕಾರ್ಟೆಕ್ಸ್‌ನ ಇತರ ಕೇಂದ್ರೀಯ ನ್ಯೂಕ್ಲಿಯಸ್ (ನಿರ್ಧಿಷ್ಟವಲ್ಲದ ನೋವನ್ನು ನಿಷ್ಕ್ರೀಯಗೊಳಿಸಲು) ಪ್ರದೇಶದಲ್ಲಿಯೂ ಕೂಡ ಉಂಟಾಗುತ್ತದೆ. ಜೊತೆಗೆ, ಕೆಲವು ALS ನರಕೋಶ ತಂತುಗಳು ಪಾನ್‌ಗಳಲ್ಲಿ ಪೆರಿಅಕ್ವಾಡಕ್ಟಲ್‌ ಗ್ರೆಯನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ. ನರಕೋಶ ತಂತುಗಳ ಈ ಪೆರಿಅಕ್ವಾಡಕ್ಟಲ್‌‍ ರಚನೆಯು ನ್ಯೂಕ್ಲಿಯಸ್‌ ರಾಫ್‌ಮ್ಯಾಗ್ನಸ್‌‍ ರಚನೆಗೆ ಕಾರಣವಾಗುತ್ತದೆ. ಇದು ಬರುವ ನೋವಿನ ಸಂಜ್ಞೆಯು ಎಲ್ಲಿಂದ ಬರುತ್ತಿದೆ ಎಂಬುದನ್ನು ಗುರುತಿಸುತ್ತದೆ ಮತ್ತು ಆದನ್ನು ತಡೆಹಿಡಿಯುವ ಕೆಲಸ ಮಾಡುತ್ತದೆ. ಇದು ನೋವಿನ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಮತ್ತು ತಡೆಯುವಲ್ಲಿ ಸಹಾಯ ಮಾಡುತ್ತದೆ.

ಚಲನಾತ್ಮಕ ವ್ಯವಸ್ಥೆ[ಬದಲಾಯಿಸಿ]

ಸೆರೆಬ್ರಲ್‌ ಕಾರ್ಟೆಕ್ಸ್‌ನಿಂದ ಮತ್ತು ಮೆದುಳು ಕಾಂಡದಿಂದ ಬರುವ ಮೇಲಿನ ಚಲನಾತ್ಮಕ ನ್ಯೂರಾನ್‌ ಸಂಜ್ಞೆಗಳಿಗೆ ಮತ್ತು ಚಲನಾತ್ಮಕ ನ್ಯೂಕ್ಲೈಗಳಿಗೆ ಚಲನಾತ್ಮಕ ಹಾದಿಯಾಗಿ ಕಾರ್ಟಿಯೋಸ್ಪೈನಲ್ ಟ್ರಾಕ್ಟ್‌ ಆಗಿ ವರ್ತಿಸುತ್ತದೆ.

ಕಾರ್ಟಿಕಲ್ ಮೇಲಿನ ಚಲನಾತ್ಮಕ ನ್ಯೂರಾನ್‌ಗಳು ಬ್ರಾಡ್‌ಮನ್ ಏರಿಯಾದಿಂದ ಉತ್ಪತ್ತಿಯಾಗುತ್ತವೆ. 1, 2, 3, 4 ಮತ್ತು 6 ಹಾಗೂ ಇವು ಆಂತರಿಕ ಕ್ಯಾಪ್ಸ್ಯೂಲ್‌ನ ಮುಂಭಾಗದ ಭುಜದ ಸ್ನಾಯುವಿಗೆ ಸಂಬಂಧಿಸಿದಂತವುಗಳಾಗಿರುತ್ತವೆ. ಇದು ಕ್ರಸ್‌ ಸೆರೆಬ್ರಿ, ಪಾನ್‌ಗಳ ಕೆಳಗೆ ಮತ್ತು ಮೊಡ್ಯೂಲರಿ ಫಿರಮಿಡ್‌ಗಳಲ್ಲಿ ಸುಮಾರು 90% ನರಕೋಶ ತಂತುಗಳು ಪಿರಾಮಿಡ್‌ನ ಪಕ್ಕದ ಕಾಂಟ್ರಾಲ್ಯಾಟರಲ್‌ ಜಾಗದಲ್ಲೂ ಇರುತ್ತದೆ. ನಂತರ ಅವು ಕಾರ್ಟಿಕೊ ಸ್ಪೈನಲ್‌ ಹರವಿನಂತೆ ಕಡಿಮೆಯಾಗುತ್ತವೆ. ಈ ನರಕೋಶ ತಂತುಗಳು ವೆಂಟ್ರಲ್‌ ಕೊಂಬುಗಳ ಕೆಳಮಟ್ಟದ ಚಲನಶೀಲ ನ್ಯೂರಾನ್‌ಗಳ ಜೊತೆ ಬೆನ್ನುಹುರಿಯ ಎಲ್ಲ ಪ್ರದೇಶಗಳಲ್ಲೂ ಪ್ರವೇಶ ಮಾಡುತ್ತವೆ. ಇನ್ನುಳಿದ 10% ನರಕೋಶತಂತುಗಳು ಇಪ್ಸಿಲ್ಯಾಟರಲ್ ಬದಿಯಲ್ಲಿ ವೆಂಟ್ರಲ್‌ ಕಾರ್ಟಿಕೊಸ್ಪೈನಲ್‌ ಹರವಿನ ರೀತಿಯಲ್ಲಿ ಕಡಿಮೆಯಾಗತೊಡಗುತ್ತವೆ. ಈ ನರಕೋಶ ತಂತುಗಳು ನ್ಯೂರಾನ್‌ಗಳು ವೆಂಟ್ರಲ್‌ ಕೊಂಬಿನಲ್ಲಿ ಪ್ರವೇಶಮಾಡುತ್ತವೆ. ಇವುಗಳಲ್ಲಿ ಸಾಕಷ್ಟು ಕಾಂಟ್ರಾಲ್ಯಾಟರಲ್‌ ಹುರಿಯು ( ಒಳಾವರಣದ ಬಿಳಿ ಕಣಗಳು) ಸರಿಯಾಗಿ ಪ್ರವೇಶಮಾಡುವ ಬಲಭಾಗದಲ್ಲಿರುತ್ತವೆ.

ಕೇಂದ್ರೀಯ ಮೆದುಳಿನ ನ್ಯೂಕ್ಲೈಗಳು ನಾಲ್ಕು ಚಲನಶೀಲ ಹರಹನ್ನ ಹೊಂದಿರುತ್ತವೆ ಇವು ಮೇಲಿನ ನ್ಯೂರಾನ್‌ ನರಕೋಶ ತಂತುಗಳನ್ನು ಬೆನ್ನುಹುರಿಯ ಕೆಳಭಾಗದವರೆಗೂ ಕೊಂಡೊಯ್ಯುತ್ತವೆ. ಇವುಗಳನ್ನು ರಬ್ರೋಸ್ಪೈನಲ್‌ ಹರಹು ಎಂದು ಕರೆಯಲಾಗುತ್ತದೆ. ಇದರಲ್ಲಿ ವೆಸ್ಟಿಬ್ಯೂಲೊಸ್ಪೈನಲ್‌ ಹರಹು, ಟೆಕ್ಟೊಸ್ಪೈನಲ್ ಹರಹು ಮತ್ತು ರೆಟಿಕ್ಯುಲೊಸ್ಪೈನಲ್ ಹರಹು ಸೇರಿರುತ್ತದೆ. ರಬ್ರೊಸ್ಪೈನಲ್ ಹರಹು ಲ್ಯಾಟರಲ್‌ ಕಾರ್ಟಿಕೊಸ್ಪೈನಲ್‌ ಹರವಿನಿಂದ ಮತ್ತು ಉಳಿದ ಮೂರು ಒಳಾವರಣ ಕಾರ್ಟಿಕೊಸ್ಪೈನಲ್ ಹರವಿನಿಂದ ಕಡಿಮೆಗೊಳ್ಳುತ್ತವೆ.

ಕೆಳಗಿನ ಚಲನಾತ್ಮಕ ನ್ಯೂರಾನ್‌ಗಳ ಕಾರ್ಯವನ್ನು ಎರಡು ಬೇರೆ ಬೇರ‍ೆ ಗುಂಪುಗಳಲ್ಲಿ ವಿಭಾಗಿಸಬಹುದಾಗಿದೆ: ಸಮಾನಾಂತರ ಕಾರ್ಟಿಕೊಸ್ಪೈನಲ್ ಹರವು, ಒಳಾವರಣ ಕಾರ್ಟಿಕಲ್ ಸ್ಪೈನಲ್ ಹರವು ಮತ್ತು ಕಾರ್ಟಿಕಲ್ ಸ್ಪೈನಲ್‌ ಹರವು ಎಂದು ವಿಭಾಗಿಸಲಾಗುತ್ತದೆ. ಸಮನಾಂತರ ಹರವು ಮೇಲ್ಮೈ, ಚಲನಾತ್ಮಕ ನ್ಯೂರಾನ್‌ ನರಕೋಶ ತಂತುಗಳು ಕೆಳಸಮನಾಂತರ (DL) ಕೆಳ ಚಲನಾತ್ಮಕ ನ್ಯೂರಾನ್‌ಗಳನ್ನು ಹೊಂದಿರುತ್ತದೆ. DL ನ್ಯೂರಾನ್‌ಗಳು ಮುಂಭಾಗದ ಭುಜದ ಸ್ನಾಯುಗಳನ್ನು ನಿಯಂತ್ರಿಸುವ ಕೆಲಸದಲ್ಲಿ ತೊಡಗಿರುತ್ತವೆ. ಆದ್ದರಿಂದ, ಈ DL ನ್ಯೂರಾನ್‌ಗಳು ವಿಶೇಷವಾಗಿ ಕುತ್ತಿಗೆಯ ಮತ್ತು ಸೊಂಟ ಭಾಗದ ಮೂಳೆಯ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತವೆ. ಆದರೆ ಮೊಡ್ಯೂಲರಿ ಫಿರಾಮಿಡ್‌ನಲ್ಲಿ ಛೇಧನ ಆದ ನಂತರ ಸಮನಾಂತರ ಕಾರ್ಟಿಸ್ಪೈನಲ್ ಹರವಿನಲ್ಲಿ ಯಾವುದೇ ಛೇಧನ ಇರುವುದಿಲ್ಲ.

ಒಳಾಂತರ ಕಾರ್ಟಿಕೊಸ್ಪೈನಲ್ ಹರವು ಇಪ್ಸಿಲ್ಯಾಟರಲ್‌ ರೀತಿಯಲ್ಲಿ ಆಂತರಿಕ ಕಾಲಮ್‌ನಲ್ಲಿ ಕಡಿಮೆಯಾಗುತ್ತದೆ. ಅಲ್ಲಿ ನರಕೋಶ ತಂತುಗಳು ಹುಟ್ಟಿಕೊಳ್ಳುತ್ತವೆ ಅಥವಾ ಕೆಳ ವೆಂಟ್ರೋಮಿಡಿಯಲ್ (ವಿಎಮ್‌) ಚಲನಶೀಲ ನ್ಯೂರಾನ್‌ಗಳು ವೆಂಟ್ರಲ್‌ ಹಾರ್ನ್‌ನಲ್ಲಿ ಇಪ್ಸಿಲ್ಯಾಟರಲ್‌ ಅಥವಾ ಒಳಾವರಣದ ಛೇಧನಕ್ಕೊಳಪಟ್ಟು ವಿಎಮ್‌ ಕೆಳಗಿನ ಮೊಟಾರ್ ನ್ಯೂರಾನ್‌ನಲ್ಲಿ ವಿರುದ್ಧ ಸಮನಾಂತರವಾಗಿರುತ್ತವೆ.

ಟೆಕ್ಟೊಸ್ಪೈನಲ್‌, ವೆಸ್ಟಿಬ್ಯುಲೊಸ್ಪೈನಲ್ ಮತ್ತು ರೆಟಿಕ್ಯುಲೋಸ್ಪೈನಲ್‌ಗಳು ಇಪ್ಸಿಲ್ಯಾಟರಲ್‌ ಆಗಿ ಒಳಾಂತರ ಕಾಲಮ್‌ನಲ್ಲಿರುತ್ತವೆ ಆದರೆ ಇವು ಬಿಳಿಕಣಗಳಿರುವ ಎಲ್ಲ ಪ್ರದೇಶದಲ್ಲೂ ಇರುವುದಿಲ್ಲ. ಒಂದೋ ಅವು ವಿಎಮ್‌ ಕೆಳಚಲನಶೀಲ ನ್ಯೂರಾನ್‌ಗಳಲ್ಲಿ ಇಪ್ಸಿಲ್ಯಾಟರಲ್‌ ರೀತಿಯಲ್ಲಿರುತ್ತವೆ. ಅಕ್ಷೀಯ ಅಸ್ಥಿಪಂಜರದ ವಿವಿಧ ಭಂಗಿಗೆ ಸಂಬಂಧಿಸಿದ ಮಾಂಸಖಂಡಗಳನ್ನು ವಿಎಮ್‌ ಕೆಳಚಲನಶೀಲ ನ್ಯೂರಾನ್‌ಗಳು ನಿಯಂತ್ರಿಸುತ್ತವೆ. ಈ ಕೆಳಹಂತದ ಚಲನಶೀಲ ನ್ಯೂರಾನ್‌ಗಳು ಡಿಎಲ್‌ಗಳಂತಲ್ಲ ಇವು ಬೆನ್ನುಹುರಿಯ ಎಲ್ಲ ಪ್ರದೇಶದ ವೆಂಟ್ರಲ್‌ ಕೊಂಬಿನಲ್ಲಿರುತ್ತವೆ.

ಬೆನ್ನು ಮತ್ತು ಹಿಮ್ಮೆದುಳಿನ ಪ್ರದೇಶ[ಬದಲಾಯಿಸಿ]

ಪ್ರತಿಯೊಂದು ಜೀವಿಯು ದೇಹದಲ್ಲಿ ಬೇರೆ ಬೇರೆ ಇಂದ್ರಿಯಗಳಿಂದ ಪಡೆದುಕೊಳ್ಳುವ ಮಾಹಿತಿಯು ಬೆನ್ನುಹುರಿಗೆ ಬೇರೆ ಬೇರೆ ಮೂರು ಹರಹುಗಳ ಮೂಲಕ ತಲುಪುತ್ತದೆ. ಕೆಳಗಿನ L2ನಲ್ಲಿ ಇಂದ್ರಿಯಗಳಿಂದ ಪಡೆದುಕೊಂಡ ಮಾಹಿತಿಯು ವೆಂಟ್ರಲ್ ಸ್ಪೈನೊಸೆರೆಬ್ರೆಲ್ಲಾರ್ ಹರಹಿನ ಮೂಲಕ ಬೆನ್ನುಹುರಿಯನ್ನು ತಲುಪುತ್ತದೆ. ಇದನ್ನು ಒಳಾಂತರ ಸ್ಪೈನೊಸೆರೆಬ್ರೆಲ್ಲಾರ್ ಹರಹು ಎಂದು ಕರೆಯಲಾಗುತ್ತದೆ. ಇಲ್ಲಿ ಪಡೆದುಕೊಂಡ ಸಂವೇದನಾತ್ಮಕ ಮಾಹಿತಿಯು ಬೆನ್ನುಹುರಿಗೆ ಸಾಗುತ್ತದೆ. ಈ ಪ್ರಾಥಮಿಕ ನ್ಯೂರಾನ್‌ಗಳ ಜೀವಕೋಶಗಳು ಬೆನ್ನುಹುರಿಯ ಗಾಂಗ್ಲಿಯಾ ಪ್ರದೇಶದಲ್ಲಿ ಇರುತ್ತವೆ. ಬೆನ್ನುಹುರಿಯ ಪ್ರದೇಶದಲ್ಲಿ ನರಕೋಶ ತಂತುಗಳು ಮತ್ತು ದ್ವಿತೀಯ ನ್ಯೂರಾನ್‌ ನರಕೋಶ ತಂತುಗಳು ಛೇದನಗೊಳ್ಳುತ್ತವೆ ಮತ್ತು ಸೂಪಿರಿಯರ್ ಸೆರೆಬ್ರೆಲ್ಲಾರ್ ಪೆಂಡುಕಲ್‌ ಕಡೆ ಪ್ರಯಾಣ ಮಾಡುತ್ತವೆ. ಅಲ್ಲಿ ಅವು ಮತ್ತೆ ಛೇದನಗೊಳ್ಳುತ್ತವೆ. ಇಲ್ಲಿಂದ ಮಾಹಿತಿಯು ಸೆರೆಬ್ರೆಲ್ಲಮ್‌ನ ಆಳದ ನ್ಯೂಲ್ಕೈಗೆ ರವಾನೆಯಾಗುತ್ತದೆ. ಜೊತೆಗೆ ಫಾಸ್ಟಿಗಲ್ ಮತ್ತು ಇಂಟರ್‌ಪೊಸ್ಡ್‌ ನ್ಯೂಕ್ಲೈಗೆ ಕೂಡ ಕಳುಹಿಸಲಾಗುತ್ತದೆ.

L2ನಿಂದ T1ಗೆ ಪಡೆದುಕೊಂಡ ಮಾಹಿತಿಯು ಬೆನ್ನುಹುರಿಗೆ ರವಾನೆಯಾಗುತ್ತದೆ ಮತ್ತು ಅಲ್ಲಿ ಶೇಖರಣೆಯಾಗುತ್ತದೆ. ಅಲ್ಲಿ ಇದು ಕ್ಲಾರ್ಕ್ಸ್‌ ನ್ಯೂಕ್ಲಿಯಸ್‌ ಆಗಿ ಬದಲಾವಣೆಯಾಗುತ್ತದೆ. ದ್ವಿತೀಯ ನ್ಯೂರಾನಲ್‌ ನರಕೋಶತಂತುಗಳು ಶೇಖರಣೆಯಾದಂತೆ ಇವು ಸೆರೆಬ್ರೆಲ್ಲಮ್‌ಗೆ ಒಳಾಂತರ ಸೆರೆಬೆಲ್ಲಾರ್ ಪೆಂಡುಕಲ್‌ ಮೂಲಕ ಸಾಗುತ್ತವೆ. ಈ ಪ್ರದೇಶವನ್ನು ಬೆನ್ನಿನ ಸ್ಪೈನೊಸೆರೆಬೆಲ್ಲಾರ್ ಪ್ರದೇಶ ಎಂದು ಕರೆಯಲಾಗುತ್ತದೆ.

ಮೇಲಿನ T1ನಲ್ಲಿ ಪಡೆದುಕೊಂಡ ಮಾಹಿತಿಯನ್ನು ಪ್ರಥಮ ನರಕೋಶತಂತುಗಳು ಬೆನ್ನುಹುರಿಯನ್ನು ಪ್ರವೇಶಿಸುತ್ತವೆ ಮತ್ತು ಹೆಚ್ಚಿನ ಕ್ಯೂನೀಯೇಟ್‌ ನ್ಯೂಕ್ಲಿಯಸ್‌ನವರೆಗೆ ಮುಂದುವರೆಯುತ್ತವೆ. ದ್ವಿತೀಯ ನರಕೋಶತಂತುಗಳು ಸೆರೆಬೆಲ್ಲಮ್‌ಗೆ ಒಳಾಂತರ ಸೆರೆಬೆಲ್ಲಾರ್ ಪೆಂಡುಕಲ್‌ ಮೂಲಕ ಮತ್ತೆ ಚಲಿಸುತ್ತವೆ. ಈ ನರಕೋಶತಂತುಗಳು ಆಳ ಸೆರೆಬೆಲ್ಲಾರ್ ನ್ಯೂಕ್ಲೈನಲ್ಲಿ ವಿಲಿನಗೊಳ್ಳುತ್ತವೆ. ಈ ಪ್ರದೇಶವನ್ನು ಕ್ಯೂನಿಯೊಸೆರೆಬೆಲ್ಲಾರ್ ಪ್ರದೇಶ ಎಂದು ಕರೆಯಲಾಗುತ್ತದೆ.

ಚಲನಶೀಲ ಮಾಹಿತಿಯು ಮೆದುಳಿನಿಂದ ಬೆನ್ನುಹುರಿಗೆ ಕೆಳಹೋಗುವ ಬೆನ್ನುಹುರಿ ನರಗಳಿಂದ ರವಾನೆಯಾಗುತ್ತದೆ. ಕೆಳಹೋಗುವ ನರಗಳು ಎರಡು ನ್ಯೂರಾನ್‌ಗಳನ್ನು ಹೊಂದಿರುತ್ತದೆ; ಮೇಲ್ಗಡೆಯ ಚಲನಶೀಲ ನ್ಯೂರಾನ್‌ (UMN) ಮತ್ತು ಕೆಳಚಲನಶೀಲ ನ್ಯೂರಾನ್‌(LMN)ಗಳೆಂದು ಕರೆಯಲಾಗುತ್ತದೆ.[೨] ಬೆನ್ನುಹುರಿಗೆ ನರಗಳಿಂದ ಬರುವ ಸಂಜ್ಞೆಯು ಕೆಳಗಿನ ಭಾಗಗಳಿಗೆ ಮೇಲಿನ ಚಲನಶೀಲ ನ್ಯೂರಾನ್‌ಗಳಿಂದ ಇದು ಕೆಳಗಿನ ಚಲನಶೀಲ ನ್ಯೂರಾನ್‌ಗಳ ಜೊತೆ ಸೇರುವವರೆಗೆ ಬೆನ್ನುಹುರಿಯಲ್ಲಿ ಮುಂದುವರೆಯುತ್ತದೆ. ನಂತರ ಕೆಳಹಂತದ ಚಲನಶೀಲ ನ್ಯೂರಾನ್‌ಗಳು ನರಕೋಶದಿಂದ ಹೊರಟ ಸಂಜ್ಞೆಗಳನ್ನು ಬೆನ್ನುಹುರಿಗೆ ಸ್ಥಳಾಂತರಗೊಳಿಸುತ್ತವೆ ಅಲ್ಲಿ ಅಪವಾಹಿ ನಾರು ಕೋಶಗಳು ಚಲನಶೀಲ ಸಂಜ್ಞೆಗಳನ್ನು ಗುರಿಯತ್ತ ಸಾಗುವಂತೆ ಮಾಡುತ್ತವೆ. ಕೆಳಹರಿಯುವ ಪ್ರದೇಶದ ಹರಹು ಬಿಳಿಕಣಗಳಿಂದಾಗಿರುತ್ತದೆ. ಕೆಳಹರಿಯುವ ಬೇರೆಬೇರೆ ಹರಹುಗಳು ಬೇರೆ ಬೇರೆ ಕಾರ್ಯಗಳನ್ನು ನಿರ್ವಹಿಸುತ್ತವೆ. ಕಾರ್ಟಿಕೊ ಸ್ಪೈನಲ್‌ ಹರಹುಗಳು (ಸಮನಾಂತರ ಮತ್ತು ಒಳಾಂತರ) ಭುಜದ ಸ್ನಾಯುಗಳ ಚಲನೆಗೆ ಸಹಾಯಕವಾಗುತ್ತದೆ[೩].

ಹಾನಿ[ಬದಲಾಯಿಸಿ]

ದೇಹಕ್ಕೆ ಅಪಘಾತವಾಗುವುದರಿಂದ ಬೆನ್ನುಹುರಿ ಪ್ರದೇಶಕ್ಕೆ ಹಾನಿಯಾಗಬಹುದಾಗಿದೆ. (ಎಳೆಯುವಿಕೆ, ತಿಕ್ಕುವುದು, ಒತ್ತಡ ಹಾಕುವುದು, ಸಿಗಿತ ಮುಂತಾದವುಗಳಿಂದಾಗಿ ಹಾನಿಯಾಗಬಹುದು) ವರ್ಟಬ್ರಲ್‌ ಮೂಳೆ ಅಥವಾ ಇಂಟರ್‌ವರ್ಟಿಬ್ರಲ್‌ ಡಿಸ್ಕ್‌‍ಗಳು ಚೆಲ್ಲಾಪಿಲ್ಲಿಯಾಗುವ ಮೂಲಕ ಬೆನ್ನುಹುರಿಯು ಚೂಪಾದ ಮೂಳೆಯು ತಾಕುವ ಮೂಲಕ ಹಾಳಾಗಬಹುದು. ಹೆಚ್ಚಾಗಿ, ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ದೇಹದ ಕೆಲವು ಭಾಗಗಳಲ್ಲಿ ಸಂವೇದನೆಯನ್ನು ಕಳೆದುಕೊಳ್ಳುತ್ತಾರೆ. ಕೆಲವು ಮಧ್ಯಸ್ಥ ಪ್ರಕರಣಗಳಲ್ಲಿ ಅಪಘಾತಕ್ಕೊಳಗಾದವರು ಕೈ ಅಥವಾ ಕಾಲಿನ ಚಟುವಟಿಕೆಯನ್ನು ಕಳೆದುಕೊಳ್ಳುತ್ತಾರೆ. ಭೀಕರವಾಗಿ ಬೆನ್ನುಹುರಿ ಅಪಘಾತಕ್ಕೊಳಗಾದವರು ದೇಹದ ಕೆಳಭಾಗದ ಸಂಪೂರ್ಣ ಹಿಡಿತವನ್ನು ಕಳೆದುಕೊಳ್ಳಬಹುದು ಅಥವಾ ದೇಹದ ಮೇಲ್ಬಾಗದ ಚಲನಶೀಲತೆಯನ್ನು ಕಳೆದುಕೊಳ್ಳಬಹುದು. ಅಥವಾ ಸಂಪೂರ್ಣ ದೇಹವು ಪ್ಯಾರಲೈಸಿಸ್‌‍ಗೆ (ಇದನ್ನು ಕ್ವಾಡ್ರಪ್ಲೇಜಿಯಾ) ಒಳಗಾಗಬಹುದು.

ಬೆನ್ನುಹುರಿಯಲ್ಲಿಯ ಮೇಲ್ಬಾಗದ ಚಲನಶೀಲ ನ್ಯೂರಾನ್‌ಗಳಿಗೆ ಹಾನಿ ಉಂಟಾದರೆ ಇಸ್ಪಿಲ್ಯಾಟರಲ್ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ಹೈಪರ್‌ಫ್ಲೆಕ್ಸಿಯಾ, ಹೈಪರ್ಟೋನಿಯಾ ಮತ್ತು ಮಾಂಸಖಂಡಗಳ ದೌರ್ಭಲ್ಯಕ್ಕೆ ಕಾರಣವಾಗುತ್ತದೆ. ಕೆಳಹಂತದ ಚಲನಶೀಲ ನ್ಯೂರಾನ್‌ ಅಪಘಾತಕ್ಕೊಳಗಾದಲ್ಲಿ ಅದರದೇ ಆದ ಕೊರತೆಯ ಅನುಭವವನ್ನು ನೀಡುತ್ತದೆ. ಸಂಪೂರ್ಣ ಕೊರತೆಯಲ್ಲದೆ ಮ್ಯೊಟೋಮ್‌ಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಕೂಡಾ ಹುಟ್ಟು ಹಾಕುತ್ತದೆ. ಜೊತೆಗೆ, ಕೆಳಹಂತದ ಚಲನಶೀಲ ನ್ಯೂರಾನ್‌ಗಳು ಮಾಂಸಖಂಡಗಳ ದೌರ್ಭಲ್ಯ ಹೈಪೊಟೊನಿಯಾ, ಹೈಫರ್‌ಫ್ಲೆಕ್ಸಿಯಾ ಮತ್ತು ಸ್ನಾಯು ಕ್ಷೀಣವಾಗುವಿಕೆಗೆ ಕಾರಣವಾಗಬಹುದು.

ಬೆನ್ನುಹುರಿಯು ಅಪಘಾತಕ್ಕೆ ಒಳಗಾಗುವುದರಿಂದ ನ್ಯೂರೊಜೆನಿಕ್‌ ಶಾಕ್‌ ಅಥವಾ ಬೆನ್ನುಹುರಿ ಶಾಕ್‌ ಸಂಭವಿಸಬಹುದು. ಬೆನ್ನುಹುರಿ ಶಾಕ್‌ ಹೆಚ್ಚಾಗಿ ತಾತ್ಕಾಲಿಕವಾಗಿರುತ್ತದೆ, ಇದು 24ರಿಂದ 28 ತಾಸುಗಳವರೆಗೆ ಮಾತ್ರ ಚಲನಶೀಲ ಸಂವೇದನಾತ್ಮಕ ಚಟುವಟಿಕೆಗಳು ಸ್ಥಬ್ಧವಾಗುತ್ತದೆ. ನ್ಯೂರೋಜೆನಿಕ್‌ ಶಾಕ್‌ ಹಲವುವಾರಗಳವರೆಗೆ ಮುಂದುವರೆಯುತ್ತದೆ ಮತ್ತು ಇದು ಅಪಘಾತಾಕ್ಕೊಳಗಾದ ಸ್ನಾಯುಗಳು ಉಪಯೋಗಕ್ಕೆ ಬಾರದಂತೆ ಮಾಡುವಂತಾದರೂ ಆಗಬಹುದು.

ಸರ್ವಿಕಲ್ ಬೆನ್ನುಹುರಿ (C1-C7) ಮತ್ತು ಸೊಂಟ ಭಾಗದ ಬೆನ್ನುಹುರಿ (L1-L5) ಎಂಬ ಎರಡು ಪ್ರದೇಶಗಳು ಹೆಚ್ಚಾಗಿ ಅಘಾತಕ್ಕೊಳಗಾಗುವಂತಾಗುವವು ಆಗಿವೆ. ( C1, C7, L1, L5 ಇವನ್ನು ವರ್ಟೆಬ್ರಾ ಪ್ರದೇಶಕ್ಕೆ ಸಂಬಂಧಿಸಿದ್ದಾಗಿವೆ ಎಂಬ ಕಲ್ಪನೆ ಇದೆ. ಇದು ಸರ್ವಿಕಲ್, ಥೊರಾಸಿಕ್ ಅಥವಾ ಸೊಂಟ ಭಾಗದ ಬೆನ್ನುಹುರಿ ಪ್ರದೇಶದಲ್ಲಿರುತ್ತದೆ.)

ಬೆನ್ನುಹುರಿಯ ಜೆನೊಮಿಕ್ ನಕ್ಷೆ[ಬದಲಾಯಿಸಿ]

ಆಲನ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಬ್ರೇನ್ ಸೈನ್ಸ್‌ ಜುಲೈ 16, 2008ರಲ್ಲಿ ಅಂತರಜಾಲ "ಆಲನ್‌ ಸ್ಪೈನಲ್ ಕಾರ್ಡ್ ಅಟ್ಲಾಸ್‌" ಎಂಬ ನಕ್ಷೆಯನ್ನು ಬಿಡುಗಡೆ ಮಾಡಿತು. (ಪೌಲ್‌ ಅಲೆನ್‌ರಿಂದ ರಚಿಸಲ್ಪಟ್ಟಿದ್ದು) ಇದು ಪ್ರಥಮ ಹಂತವಾಗಿ ಬೇರೆ ಬೇರೆ ಜೀನುಗಳ ಪಾರ್ಶ್ವ ರಚನೆಯನ್ನು ತೋರಿಸುವ 4000 ಡಿಜಿಟಲ್‌ ಚಿತ್ರಗಳನ್ನು ಬಿಡುಗಡೆ ಮಾಡಿತು.[೪] ಇದು ಪೂರ್ಣವಾದಾಗ ಬಾಲ್ಯ ಮತ್ತು ಯೌವನದ ಇಲಿಗಳ ಸುಮಾರು 20,000 ಜೀನುಗಳ ಬೆನ್ನುಹುರಿ ರಚನೆಯನ್ನು ತೋರಿಸುತ್ತದೆ. ಈ ಹಿಂದೆ ರಚನೆಯಾದ ಆಲೆನ್‌ ಇನ್ಸ್ಟಿಟ್ಯೂಟ್‌ನ ಇಲಿಯ ಮೆದುಳಿನ ನಕ್ಷೆಯ ರೀತಿಯಲ್ಲೇ ಬೆನ್ನುಹುರಿ ನಕ್ಷೆಯೂ ಕೂಡ ಇರುತ್ತದೆ.[೫][೬]

ಪೂರಕವಾದ ಚಿತ್ರಗಳು[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. Maton, Anthea (1993). Human Biology and Health. Englewood Cliffs, New Jersey, USA: Prentice Hall. pp. 132–144. ISBN 0-13-981176-1. {{cite book}}: Unknown parameter |coauthors= ignored (|author= suggested) (help)
 2. ಸೆಲೆಡಿನ್. ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರ, 5ನೇಯ ಆವೃತ್ತಿ.
 3. ಸೆಲೆಡಿನ್. ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರ, 5ನೇಯ ಆವೃತ್ತಿ.
 4. "Gene Search :: Spinal Cord". mousespinal.brain-map.org. Retrieved 2010-02-23.
 5. "ಎಮ್‌ಎಸ್‌ಎನ್‌ಬಿಸಿ.ಎಮ್‌ಎಸ್‌ಎನ್.ಕಾಮ್, ಜೆನೆ ಮ್ಯಾಪ್ ಚಾರ್ಟ್ಸ್ ಸ್ಪೈನಲ್ ಕಾರ್ಡ್ ಮಿಸ್ಟರೀಸ್". Archived from the original on 2011-02-02. Retrieved 2010-05-07.
 6. "ಸೈನ್ಸ್‌ನ್ಯೂಸ್.ಆರ್ಗ್/ವ್ಯೂ, ಮ್ಯಾಪ್‌ಕ್ವೇಸ್ಟ್ ಫಾರ‍್ ದ ಮೌಸ್ ಸ್ಪೈನಲ್ ಕಾರ್ಡ್". Archived from the original on 2011-05-24. Retrieved 2010-05-07.

ಬಾಹ್ಯ ಕೊಂಡಿಗಳು[ಬದಲಾಯಿಸಿ]