ವಿಷಯಕ್ಕೆ ಹೋಗು

ಅಪಘಾತಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಪಘಾತ ಇಂದ ಪುನರ್ನಿರ್ದೇಶಿತ)
ಫ಼ುಟ್‍ಬಾಲ್ ಆಟದಲ್ಲಿ ಕಂಬಿಬೇಲಿ ಅಪಘಾತ

ಅಪಘಾತವು (ಆಕಸ್ಮಿಕ) ಒಂದು ಅನಪೇಕ್ಷಿತ, ಪ್ರಾಸಂಗಿಕ, ಮತ್ತು ಅಯೋಜಿತ ಘಟನೆ. ಅದು ಸಂಭವಿಸುವುದಕ್ಕೆ ಮೊದಲು, ಅದಕ್ಕೆ ದಾರಿಕಲ್ಪಿಸುವ ಸಂದರ್ಭಗಳನ್ನು ಗುರುತಿಸಿ ಕ್ರಮ ತೆಗೆದುಕೊಂಡರೆ ಅಪಘಾತವನ್ನು ತಡೆಗಟ್ಟಬಹುದು. ಅನುದ್ದೇಶಿತ ಗಾಯವನ್ನು ಅಧ್ಯಯನ ಮಾಡುವ ಬಹುತೇಕ ವಿಜ್ಞಾನಿಗಳು "ಅಪಘಾತ" ಪದವನ್ನು ಬಳಸುವುದಿಲ್ಲ ಮತ್ತು ತೀವ್ರ ಗಾಯದ ಅಪಾಯವನ್ನು ಹೆಚ್ಚಿಸುವ ಮತ್ತು ಗಾಯದ ವ್ಯಾಪ್ತಿ ಮತ್ತು ತೀವ್ರತೆಯನ್ನು ಕಡಿಮೆಮಾಡುವ ಅಂಶಗಳ ಮೇಲೆ ಕೇಂದ್ರೀಕರಿಸುತ್ತಾರೆ.

ಅನುದ್ದೇಶಿತ ಮೋಟಾರು ವಾಹನ ಘರ್ಷಣೆಗಳು ಅಥವಾ ಬೀಳಿಕೆಗಳು, ಯಾವುದಾದರೂ ಚೂಪಾದ, ಬಿಸಿಯಾದ, ವಿದ್ಯುತ್ತಿನ ವಸ್ತುವಿನಿಂದ ಗಾಯಗೊಳ್ಳುವುದು ಅಥವಾ ವಿಷ ಸೇವಿಸುವುದು, ಅಪಘಾತಗಳ ಕೆಲವು ಭೌತಿಕ ಉದಾಹರಣೆಗಳು. ಅನುದ್ದೇಶಿತವಾಗಿ ರಹಸ್ಯವನ್ನು ಬಹಿರಂಗ ಮಾಡುವುದು ಅಥವಾ ಏನನ್ನಾದರೂ ತಪ್ಪಾಗಿ ಹೇಳುವುದು, ಅಥವಾ ಭೇಟಿ ಏರ್ಪಾಟನ್ನು ಮರೆಯುವುದು, ಇತ್ಯಾದಿಗಳು ಅಭೌತಿಕ ಉದಾಹರಣೆಗಳು.

ಕಾರ್ಯ ನಿರ್ವಹಣೆಯ ಅವಧಿಯಲ್ಲಿನ ಅಥವಾ ಅದರಿಂದ ಉದ್ಭವಿಸಿದ ಅಪಘಾತಗಳನ್ನು ಕೆಲಸದ ಅಪಘಾತಗಳೆಂದು ಕರೆಯಲಾಗುತ್ತದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ, ಪ್ರತಿ ವರ್ಷ ಕೆಲಸದ ಸಮಯದಲ್ಲಿ ೩೩೭ ಮಿಲಿಯಕ್ಕಿಂತ ಹೆಚ್ಚು ಅಪಘಾತಗಳು ಆಗುತ್ತವೆ, ಪರಿಣಾಮವಾಗಿ, ಔದ್ಯೋಗಿಕ ರೋಗಗಳೊಂದಿಗೆ, ವಾರ್ಷಿಕವಾಗಿ ೨.೩ ಮಿಲಿಯಕ್ಕಿಂತ ಹೆಚ್ಚು ಸಾವುಗಳು ಸಂಭವಿಸುತ್ತವೆ.[] ವ್ಯತಿರಿಕ್ತವಾಗಿ, ಬಿಡುವು ಸಂಬಂಧಿತ ಅಪಘಾತಗಳು ಮುಖ್ಯವಾಗಿ ಕ್ರೀಡಾ ಗಾಯಗಳಾಗಿರುತ್ತವೆ.

ವಿಷಗಳು, ವಾಹನ ಡಿಕ್ಕಿಗಳು ಮತ್ತು ಬೀಳಿಕೆಗಳು ಮಾರಕ ಗಾಯಗಳ ಅತ್ಯಂತ ಸಾಮಾನ್ಯ ಕಾರಣಗಳಾಗಿವೆ. ಅಮೇರಿಕದ ಆರೋಗ್ಯ ಅಂಕಿಅಂಶಗಳ ರಾಷ್ಟ್ರೀಯ ಕೇಂದ್ರದ ರಾಷ್ಟ್ರೀಯ ಜನನ ಮರಣ ಅಂಕಿಅಂಶಗಳಿಂದ ಪಡೆದ ದತ್ತಾಂಶ ಬಳಸಿದ ಮನೆಯಲ್ಲಿ ಅನುಭವಿಸಿದ ಗಾಯಗಳ ಒಂದು ೨೦೦೫ರ ಸಮೀಕ್ಷೆಯ ಪ್ರಕಾರ ಬೀಳಿಕೆಗಳು, ವಿಷ ಸೇರಿಕೆ ಮತ್ತು ಬೆಂಕಿ/ಸುಟ್ಟ ಗಾಯಗಳು ಮರಣಗಳ ಅತ್ಯಂತ ಸಾಮಾನ್ಯ ಕಾರಣಗಳು.

ಇಂದೂರ್-ಪಾಟ್ನಾ ಎಕ್ಸ್‍ಪ್ರೆಸ್ ದುರಂತ

[ಬದಲಾಯಿಸಿ]
Scheduled train route from Indore to Patna.
  • ನವೆಂಬರ್ 21, 2016
  • ಭಾನುವಾರ, ನವೆಂಬರ್ 21, 2016 ಬೆಳಿಗ್ಗೆಗೆ ಮುಂಚೆ 3.03 AM ನಲ್ಲಿ, ಇಂದೂರ್-ಪಾಟ್ನಾ ಎಕ್ಸ್‍ಪ್ರೆಸ್‍ನ ಹದಿನಾಲ್ಕು ಬೋಗಿಗಳು ಉತ್ತರ ಪ್ರದೇಶದ ಕಾನ್ಪುರ್ ದೆಹತ್ ಜಿಲ್ಲೆಯ ಪುಕರಿಯಾನ್‍ (Pukhrayan) ನಲ್ಲಿ ಹಳಿತಪ್ಪಿತು.
  • ಭಾನುವಾರ ಬೆಳಿಗ್ಗೆ ಇಂಡೋರ್-ಪಾಟ್ನಾ ಎಕ್ಸ್ಪ್ರೆಸ್ ಚಾಲಕ "ಓವರ್ಹೆಡ್ ಉಪಕರಣಗಳು ಅಲುಗಾಡುವ" ಮತ್ತು "ಒಂದು ಜಗ್ಗುವಿಕೆಯ ಎಳೆತ ಅನುಭವಿಸಿದ"; ಪರಿಣಾಮ ಇಂಡೋರ್-ಪಾಟ್ನಾ ಎಕ್ಸ್ಪ್ರೆಸ್‍ನ ಹದಿನಾಲ್ಕು ಬೋಗಿಗಳು ಉತ್ತರ ಪ್ರದೇಶ ಕಾನ್ಪುರ್ ದೆಹತ್ ಜಿಲ್ಲೆಯ ಪುಖರಯನ (Pukhrayan)ನಲ್ಲಿ ಹಳಿತಪ್ಪಿತ್ತು.
  • ನವೆಂಬರ್ 22, 2016; ಇಂಡೋರ್-ಪಾಟ್ನಾ ಎಕ್ಸ್ಪ್ರೆಸ್ ಹಳಿತಪ್ಪಿದ್ದರ ಪರಿಣಾಮ ಮಂಗಳವಾರ ಮರಣ ಸಂಖ್ಯೆ (ಟೋಲ್) 150 ಮುಟ್ಟಿತ್ತು; ಇದು 1999 ರ ನಂತರದ ಈ ಕಳೆದ 17 ವರ್ಷಗಳಲ್ಲಿ ಇದು ಮಾರಣಾಂತಿಕ ಭಯಾನಕ ರೈಲು ಅಪಘಾತವಾಗಿತ್ತು.
  • ಹಿಂದೆ ಮೇ 28, 2010, ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಗ್ಯಾನೇಶ್ವರಿ (Gyaneshwari) ಎಕ್ಸ್ಪ್ರೆಸ್ ಹಳಿತಪ್ಪಿದಾಗ ಕನಿಷ್ಠ 148 ಜನರ ಸಾವಿಗೆ ಕಾರಣವಾಗಿತ್ತು. ನಂತರದ ಇಂದೂರು-ಪಾಟ್ನಾ ಎಕ್ಸ್ಪ್ರೆಸ್‍ನ ದುರಂತ ಕೆಟ್ಟ ಅಪಘಾತ ಆಗಿದೆ.[][]

ಪ್ರಮುಖ ಆರೋಪಿ ಶಂಕಿತ ಉಗ್ರ ಸಂಶುಲ್ ಹೊಡಾ ಬಂಧನ

[ಬದಲಾಯಿಸಿ]
  • 7 Feb, 2017
  • ಇಂದೋರ್‌–ಪಟ್ನಾ ಎಕ್ಸ್‌ಪ್ರೆಸ್‌ ರೈಲು ದುರಂತ ಪ್ರಕರಣದ ಪ್ರಮುಖ ಆರೋಪಿ ಸಂಶುಲ್ ಹೊಡಾ ಎಂಬಾತನನ್ನು ನೇಪಾಳ ಪೊಲೀಸರು ಕಾಠ್ಮಂಡು ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಐಎಸ್‍ಐ ಶಂಕಿತ ಉಗ್ರ ಸಂಶುಲ್ ಹೊಡಾ ಅವರನ್ನು ದುಬೈನಿಂದ ಗಡಿಪಾರು ಮಾಡಲಾಗಿತ್ತು. ಹೊಡಾ ನೇಪಾಳಕ್ಕೆ ತಲುಪಿದ್ದಾರೆ ಎಂಬ ಮಾಹಿತಿ ದೊರೆತ ತಕ್ಷಣವೇ ಕಾರ್ಯಪ್ರವೃತ್ತರಾದ ನೇಪಾಳ ಪೊಲೀಸರ ವಿಶೇಷ ಪಡೆ ಹೊಡಾ ಜತೆ ಮೂವರು ಶಂಕಿತ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ ಎಂದು ಡಿಐಜಿ ಪಶುಪತಿ ಉಪಾಧ್ಯಾಯ ಹೇಳಿದ್ದಾರೆ. ಕಾನ್ಪುರ ಗ್ರಾಮಾಂತರ ಜಿಲ್ಲೆಯ ಪುಖರಾಯಾಂ ಸಮೀಪ ಇಂದೋರ್‌–ಪಟ್ನಾ ಎಕ್ಸ್‌ಪ್ರೆಸ್‌ನ 14 ಬೋಗಿಗಳು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ 150 ಮಂದಿ ಸಾವಿಗೀಡಾಗಿದ್ದರು. ರೈಲು ಹಳಿಗಳನ್ನು ಅಸ್ತವ್ಯಸ್ತ ಮಾಡಿ ದುರಂತ ಸಂಭವಿಸುವಂತೆ ಮಾಡಿದ್ದು ಹೊಡಾ ಸಂಚು ಆಗಿತ್ತು. ಭಾರತದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹೊಡಾನನ್ನು ಬಂಧಿಸಲು ಭಾರತದ ಪೊಲೀಸರು ಮತ್ತು ನೇಪಾಳ ಪೊಲೀಸರು ಜಂಟಿ ಕಾರ್ಯಚರಣೆ ಮಾಡಿಜದ್ದರು ಎಂದು ಉಪಾಧ್ಯಾಯ ಹೇಳಿದ್ದಾರೆ.
  • ಹೊಡಾ ಜತೆಗೆ ಬಂಧಿತರಾದವರನ್ನು ಬೃಜ್ ಕಿಶೋರ್ ಗಿರಿ, ಆಶಿಶ್ ಸಿಂಗ್ ಮತ್ತು ಉಮೇಶ್ ಕುಮಾರ್ ಕುರ್ಮಿ ಎಂದು ಗುರುತಿಸಲಾಗಿದೆ. ಇವರೆಲ್ಲವೂ ದಕ್ಷಿಣ ನೇಪಾಳದ ಕಲೈಯಾ ಜಿಲ್ಲೆಯವರಾಗಿದ್ದಾರೆ.[]

ಪ್ರಮುಖ ಆರೋಪಿ ಶಂಕಿತ ಉಗ್ರ ಸಂಶುಲ್ ಹೊಡಾ ಬಂಧನ

[ಬದಲಾಯಿಸಿ]
  • 7 Feb, 2017
  • ಇಂದೋರ್‌–ಪಟ್ನಾ ಎಕ್ಸ್‌ಪ್ರೆಸ್‌ ರೈಲು ದುರಂತ ಪ್ರಕರಣದ ಪ್ರಮುಖ ಆರೋಪಿ ಸಂಶುಲ್ ಹೊಡಾ ಎಂಬಾತನನ್ನು ನೇಪಾಳ ಪೊಲೀಸರು ಕಾಠ್ಮಂಡು ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಐಎಸ್‍ಐ ಶಂಕಿತ ಉಗ್ರ ಸಂಶುಲ್ ಹೊಡಾ ಅವರನ್ನು ದುಬೈನಿಂದ ಗಡಿಪಾರು ಮಾಡಲಾಗಿತ್ತು. ಹೊಡಾ ನೇಪಾಳಕ್ಕೆ ತಲುಪಿದ್ದಾರೆ ಎಂಬ ಮಾಹಿತಿ ದೊರೆತ ತಕ್ಷಣವೇ ಕಾರ್ಯಪ್ರವೃತ್ತರಾದ ನೇಪಾಳ ಪೊಲೀಸರ ವಿಶೇಷ ಪಡೆ ಹೊಡಾ ಜತೆ ಮೂವರು ಶಂಕಿತ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ ಎಂದು ಡಿಐಜಿ ಪಶುಪತಿ ಉಪಾಧ್ಯಾಯ ಹೇಳಿದ್ದಾರೆ. ಕಾನ್ಪುರ ಗ್ರಾಮಾಂತರ ಜಿಲ್ಲೆಯ ಪುಖರಾಯಾಂ ಸಮೀಪ ಇಂದೋರ್‌–ಪಟ್ನಾ ಎಕ್ಸ್‌ಪ್ರೆಸ್‌ನ 14 ಬೋಗಿಗಳು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ 150 ಮಂದಿ ಸಾವಿಗೀಡಾಗಿದ್ದರು. ರೈಲು ಹಳಿಗಳನ್ನು ಅಸ್ತವ್ಯಸ್ತ ಮಾಡಿ ದುರಂತ ಸಂಭವಿಸುವಂತೆ ಮಾಡಿದ್ದು ಹೊಡಾ ಸಂಚು ಆಗಿತ್ತು. ಭಾರತದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹೊಡಾನನ್ನು ಬಂಧಿಸಲು ಭಾರತದ ಪೊಲೀಸರು ಮತ್ತು ನೇಪಾಳ ಪೊಲೀಸರು ಜಂಟಿ ಕಾರ್ಯಚರಣೆ ಮಾಡಿಜದ್ದರು ಎಂದು ಉಪಾಧ್ಯಾಯ ಹೇಳಿದ್ದಾರೆ.
  • ಹೊಡಾ ಜತೆಗೆ ಬಂಧಿತರಾದವರನ್ನು ಬೃಜ್ ಕಿಶೋರ್ ಗಿರಿ, ಆಶಿಶ್ ಸಿಂಗ್ ಮತ್ತು ಉಮೇಶ್ ಕುಮಾರ್ ಕುರ್ಮಿ ಎಂದು ಗುರುತಿಸಲಾಗಿದೆ. ಇವರೆಲ್ಲವೂ ದಕ್ಷಿಣ ನೇಪಾಳದ ಕಲೈಯಾ ಜಿಲ್ಲೆಯವರಾಗಿದ್ದಾರೆ.[]

ಹಿಮ ಕುಸಿತದಲ್ಲಿ ಸಾವು

[ಬದಲಾಯಿಸಿ]
ಒಂದು ಹಿಮ ಪ್ರವಾದ ನೋಟ ;ಎವರೆಸ್ಟ್ ಶಿಖರದ ಹತ್ತಿರದ್ದು.
  • ಮಾರ್ಚಿ. 21, 2016,

ಜಮ್ಮು-ಕಾಶ್ಮೀರದ ಕಾರ್ಗಿಲ್‌ನಲ್ಲಿ ಸಂಭವಿಸಿದ ಹಿಮ ಕುಸಿತದಲ್ಲಿ ಸಿಲುಕಿ ನಾಪತ್ತೆಯಾಗಿದ್ದ ಯೋಧ ಸಾವನ್ನಪ್ಪಿದ್ದು, ಸೇನಾ ಸಿಬ್ಬಂದಿ ಯೋಧನ ದೇಹವನ್ನು ಭಾನುವಾರ ಹೊರತೆಗೆದಿದ್ದಾರೆ. ಹುತಾತ್ಮ ಯೋಧನನ್ನು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ವಲ್ಲರಾಮಪುರಂ ಗ್ರಾಮದ ವಿಜಯ್‌ ಕುಮಾರ್‌ ಕೆ. ಎಂದು ಗುರುತಿಸಲಾಗಿದೆ. ರಕ್ಷಣಾ ತಂಡ 12 ಅಡಿ ಆಳದಲ್ಲಿದ್ದ ದೇಹವನ್ನು ಹೊರತೆಗೆಯವಲ್ಲಿ ಯಶಸ್ವಿಯಾಗಿದೆ. ಹಿಮ ಕುಸಿತ ಸಂಭವಿಸಿದ ಸ್ಥಳದಲ್ಲಿ 15 ಅಡಿಯಷ್ಟು ಹಿಮ ಮುಚ್ಚಿಕೊಂಡಿತ್ತು. ಮೊದಲ ದಿನವೇ ರಕ್ಷಿಸಲ್ಪಟ್ಟ ಯೋಧ ಸುಜಿತ್‌ ಅವರ ಆರೋಗ್ಯದಲ್ಲಿ ಚೇತರಿಕೆ []

ಉತ್ತರ ಪ್ರದೇಶ

[ಬದಲಾಯಿಸಿ]
  • 20 Jan, 2017
  • ಉತ್ತರಪ್ರದೇಶದ ಅಲಿಗಂಜ್‌–ಪಲಿಯಾಲಿ ರಸ್ತೆಯಲ್ಲಿ ಅವಘಡ;
  • ಉತ್ತರಪ್ರದೇಶದ ಎಟಾ ನಗರದಲ್ಲಿ, ಶಾಲಾ ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದರಿಂದ 19 ಮಕ್ಕಳು ಮೃತಪಟ್ಟು, 30ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಇಲ್ಲಿನ ಅಲಿಗಂಜ್‌–ಪಲಿಯಾಲಿ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕನೂ ಮೃತಪಟ್ಟಿದ್ದು, ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕನೂ ಮೃತಪಟ್ಟಿದ್ದು, ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಶಾಲಾ ಬಸ್‌ ಇಲ್ಲಿನ ಜೆ.ಎಸ್‌. ವಿದ್ಯಾನಿಕೇತನ್‌ಗೆ ಸೇರಿದ್ದು. ತೀವ್ರ ಚಳಿಯ ಕಾರಣ ಜಿಲ್ಲಾಧಿಕಾರಿ ಅವರು ಶಾಲೆಗಳಿಗೆ ರಜೆ ಘೋಷಿಸುವಂತೆ ಆದೇಶಿಸಿದ್ದರು. ಆದರೆ, ಜೆ.ಎಸ್‌. ವಿದ್ಯಾನಿಕೇತನ್‌ ಸಂಸ್ಥೆ ಜಿಲ್ಲಾಧಿಕಾರಿ ಆದೇಶ ಮೀರಿ ಶಾಲೆ ತೆರೆದಿತ್ತು.
  • ಅಪಘಾತದಲ್ಲಿ ಮೃತಪಟ್ಟವರು 5ರಿಂದ 15 ವರ್ಷದ ಒಳಗಿನವರು. ಸಂಖ್ಯೆ ಇನ್ನಷ್ಟೂ ಏರುವ ಸಾಧ್ಯತೆ ಇದೆ. ಘಟನೆ ಕಾರಣ ಶಾಲೆಯ ಮಾನ್ಯತೆಯನ್ನು ರದ್ದು ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶಾಲೆಯ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿದ್ದು, ವ್ಯವಸ್ಥಾಪಕ ತಲೆಮೆರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.[]

ಭಯೋತ್ಪಾದಕರ ಕೈವಾಡವೇ?

[ಬದಲಾಯಿಸಿ]
  • 27 Jan, 2017;
  • ಇತ್ತೀಚೆಗೆ ಸಂಭವಿಸುತ್ತಿರುವ ರೈಲು ದುರಂತಗಳ ಹಿಂದೆ ಭಯೋತ್ಪಾದಕರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದೆ[]

ಜಮ್ಮು ಮತ್ತು ಕಾಶ್ಮೀರದ ಹಿಮಕುಸಿತ

[ಬದಲಾಯಿಸಿ]
  • Wed, Jan 25 2017
  • ಆರು ಹಿಮಕುಸಿತಗಳ ಸಾವಿನಲ್ಲಿ ಸೈನ್ಯದ ಮೇಜರ್ ಮತ್ತು ಅವರ ಕುಟುಂಬದ ನಾಲ್ಕು ಸದಸ್ಯರು ಕಾಶ್ಮೀರದ ವಿವಿಧ ಭಾಗಗಳಲ್ಲಿ ಬೇರೆ ಹಿಮ ಸಂಬಂಧಿತ ಅನಾಹುತಗಳಿಂದ ಬುಧವಾರ ಸಾವಿಗೀಡಾಗಿದ್ದಾರೆ.[]

10 ಯೋಧರು ಸಾವು

[ಬದಲಾಯಿಸಿ]
ಸಾಯ್‍ಚಿನ್‍ನಲ್ಲಿ 2012ರಲ್ಲಿ ಆದ ಹಿಮ ಪ್ರವಾಹ; ಇದರಲ್ಲಿ ೧೨೦ ಜನ ಪಾಕೀಸ್ತಾನದ ಸೈನಿಕರು ಸತ್ತಿದ್ದರು.
  • 26 Jan, 2017
  • ಜಮ್ಮು ಮತ್ತು ಕಾಶ್ಮೀರದ ಹಿಮಕುಸಿತದಲ್ಲಿ ಸಿಲುಕಿ ಹತ್ತು ಯೋಧರು ಸಾವಿಗೀಡಾಗಿದ್ದು, ಹಲವು ಸೈನಿಕರು ಕಾಣೆಯಾಗಿದ್ದಾರೆ. ದೇಶದಾದ್ಯಂತ ಗಣ್ಯರಾಜ್ಯೋತ್ಸವ ಆಚರಣೆ ನಡೆಯುತ್ತಿದ್ದರೆ, ಗಡಿಯಲ್ಲಿ ರಾಷ್ಟ್ರ ಕಾಯುತ್ತಿರುವ ಯೋಧರು ದುರ್ಘನೆಯಲ್ಲಿ ಸಾವಿಗೀಡಾಗಿದ್ದಾರೆ. ರಾಷ್ಟ್ರಕಾಯುವ ಯೋಧರ ಸಾವಿನ ಸುದ್ದಿ ಜಮ್ಮು ಮತ್ತು ಕಾಶ್ಮೀರದ ಗುರೆಜ್‌ ವಲಯದಲ್ಲಿ ಉಂಟಾಗಿರುವ ಹಿಮಕುಸಿತದಲ್ಲಿ ಭಾರತೀಯ ಸೇನೆಯ ಯೋಧರು ಸಿಲುಕಿ ಮೃತಪಟ್ಟಿದ್ದಾರೆ. ಗಡಿ ನಿಯಂತ್ರಣ ಸಮೀಪದ ಗುರೆಜ್‌ ವಲಯದ ಸೇನಾ ಶಿಬಿರದ ಮೇಲೆ ಎರಡು ಬಾರಿ ಹಿಮಕುಸಿತವಾಗಿದೆ. ಬುಧವಾರ ಸಂಜೆ ನಡೆದಿರುವ ಹಿಮಕುಸಿತದಲ್ಲಿ ಅನೇಕ ಸೈನಿಕರು ಸಿಲುಕಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
  • ಸದ್ಯದ ಮಾಹಿತಿ ಪ್ರಕಾರ 10 ಯೋಧರು ಮೃತಪಟ್ಟಿದ್ದು, ಇನ್ನೂ ಅನೇಕರು ಕಾಣೆಯಾಗಿದ್ದಾರೆ. ಸೇನಾ ಕಾರ್ಯಾಚರಣೆಯಲ್ಲಿ ಈವರೆಗೂ 7 ಯೋಧರನ್ನು ರಕ್ಷಿಸಲಾಗಿದೆ. ಪ್ರದೇಶವು ಸಂಪೂರ್ಣ ಹಿಮಾವೃತವಾಗಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಬೆಳೆಗಿನ ಕಾರ್ಯಾಚರಣೆಯಲ್ಲಿ 3 ಯೋಧರ ದೇಹ ಪತ್ತೆಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.[]
  • 27 Jan, 2017; ಜಮ್ಮು ಮತ್ತು ಶ್ರೀನಗರದ ಹೆದ್ದಾರಿಯಲ್ಲಿ ಮತ್ತೆ ಹಿಮಕುಸಿತ ಹಾಗೂ ಭೂಕುಸಿತ ಮುಂದುವರಿದಿದೆ. ಸೇನಾ ಕ್ಯಾಂಪ್‌ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಕಾಣೆಯಾಗಿದ್ದ ನಾಲ್ವರು ಯೋಧರ ಮೃತ ದೇಹಗಳು ಶುಕ್ರವಾರ ಪತ್ತೆಯಾಗಿದ್ದು, ಸಾವಿಗೀಡಾದವರ ಸಂಖ್ಯೆ 20ಕ್ಕೆ ಏರಿದೆ. ರಾಜ್ಯದ ಹಾಸನ ಜಿಲ್ಲೆಯ ದೇವಿಹಳ್ಳಿಯ ಯೋಧ ಸಂದೀಪ್‌ ಶೆಟ್ಟಿ ಅವರು ದುರ್ಘಟನೆಯಲ್ಲಿ ಹುತಾತ್ಮರಾಗಿದ್ದಾರೆ. ಹಿಮಕುಸಿತಕ್ಕೆ ಸೇನೆಯ 15 ಮಂದಿ ಸೇರಿದಂತೆ ಒಟ್ಟು 20 ಮಂದಿ ಸಾವಿಗೀಡಾಗಿದ್ದಾರೆ.[೧೦]
  • ಬೆಳಗಾವಿ ಯೋಧ ಪಾರು;27 Jan, 2017; ಜಮ್ಮು ಮತ್ತು ಕಾಶ್ಮೀರದ ಗುರೆಜ್‌ ವಲಯದ ಗಂಧೇರ್ಬಲ್‌ ಜಿಲ್ಲೆಯ ಸೋನಮಾರ್ಗ್‌ ಸೇನಾ ಕ್ಯಾಂಪ್‌ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಬೆಳಗಾವಿ ಮೂಲದ ಸೇನಾಧಿಕಾರಿ, 115ನೇ ಮಹಾರ್‌ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಜರ್‌ ಶ್ರೀಹರಿ ಕುಗಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸತತ ಎರಡು ಗಂಟೆಗಳ ಕಾಲ ಸಾವು–ಬದುಕಿನ ನಡುವೆ ಹೋರಾಟ ನಡೆಸಿ, ಹಿಮದಿಂದ ಕೈ ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆ ವೇಳೆಗೆ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಶ್ರೀಹರಿ ಕುಗಜಿ ಸೇರಿದಂತೆ ಇತರರ ಸಹಾಯಕ್ಕೆ ಧಾವಿಸಿದ್ದಾರೆ. ಕೂಡಲೇ ಅವರನ್ನು ರಕ್ಷಿಸಲಾಗಿದೆ.[೧೧]
  • ಜಮ್ಮು ಮತ್ತು ಕಾಶ್ಮೀರದ ಕುಪ್ವರ ಜಿಲ್ಲೆಯ ಸೇನಾ ಕ್ಯಾಂಪ್‌ ಮೇಲೆ ಶನಿವಾರ ಬೆಳಿಗ್ಗೆ ಹಿಮಕುಸಿತವಾಗಿ ಕಣ್ಮರೆಯಾಗಿದ್ದ ಐದು ಮಂದಿ ಯೋಧರನ್ನು ರಕ್ಷಿಸಲಾಗಿದೆ.ರಕ್ಷಿಸಲಾಗಿರುವ ಐವರೂ ಯೋಧರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ ಹಿಮಕುಸಿತ ಉಂಟಾಗಿ ಯೋಧರು ಕಾಣೆಯಾಗಿದ್ದರು, ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಐವರು ಯೋಧರನ್ನು ರಕ್ಷಿಸಲಾಯಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.[೧೨]

೨೬-೧-೨೦೧೭ರ ಹಿಮಕುಸಿತ

[ಬದಲಾಯಿಸಿ]
  • ಗಡಿ ನಿಯಂತ್ರಣ ಸಮೀಪದ ಗುರೆಜ್‌ ವಲಯದ ಸೇನಾ ಶಿಬಿರದ ಮೇಲೆ ಎರಡು ಬಾರಿ ಹಿಮಕುಸಿತವಾಗಿದೆ. ಬುಧವಾರ ಸಂಜೆ ನಡೆದಿರುವ ಹಿಮಕುಸಿತದಲ್ಲಿ ಅನೇಕ ಸೈನಿಕರು ಸಿಲುಕಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.[೧೩][೧೪][೧೫][೧೬]

ಕಟ್ಟಡ ಕುಸಿತ: ಅವಶೇಷಗಳಡಿಯಲ್ಲಿ ಇನ್ನೂ 30 ಮಂದಿ

[ಬದಲಾಯಿಸಿ]
  • 2 Feb, 2017
  • ಕಾನ್ಪುರ್‍ನ ಜಜ್ಮಾವು ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ನಿನ್ನೆ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ಸಾವಿನ ಸಂಖ್ಯೆ 9ಕ್ಕೆ ಏರಿದೆ. ಅದೇ ವೇಳೆ ಈ ಕಟ್ಟಡದ ಅವಶೇಷಗಳಡಿಯಲ್ಲಿ 30 ಜನರ ಸಿಲುಕಿರುವ ಶಂಕೆ ಇದೆ. ಭಾರತೀಯ ಸೇನೆ, ಪೊಲೀಸ್ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ.
  • ಇಲ್ಲಿ ಬುಧವಾರ ಕುಸಿದಿದ್ದ 6 ಮಹಡಿಗಳ ಕಟ್ಟಡದ ಅವಶೇಷಗಳ ಅಡಿಯಿಂದ 3 ವರ್ಷದ ಮಗುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ತಂಡ ಗುರುವಾರ ರಕ್ಷಿಸಿದೆ.ಮಗುವನ್ನು ಸುಮಾರು 15 ಗಂಟೆಗಳ ಬಳಿಕ ರಕ್ಷಿಸಲಾಗಿದೆ. ಮಗುವನ್ನು ತಂದೆಗೆ ಒಪ್ಪಿಸಲಾಯಿತು. ಮಗು ಅವಶೇಷಗಳ ಅಡಿಯಲ್ಲಿ ನಿದ್ರಿಸುತ್ತಿತ್ತು. ಅದೃಷ್ಟವಶಾತ್‌ ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ.[೧೭]

ಎರಡು ಹಡಗುಗಳ ನಡುವೆ ಡಿಕ್ಕಿ

[ಬದಲಾಯಿಸಿ]
  • 2017ಜನವರಿ 28ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಚೆನ್ನೈನಲ್ಲಿನ ಕಾಮರಾಜರ್ ಬಂದರಿಗೆ ಹೊಂದಿಕೊಂಡಿರುವ ಕಡಲಿನಲ್ಲಿ ಎರಡು ಹಡಗುಗಳ ನಡುವೆ ಡಿಕ್ಕಿ ನಡೆದು, ಒಂದು ಹಡಗಿನಿಂದ (ಟ್ಯಾಂಕರ್‌) ತೈಲ ಸೋರಿಕೆ ಆಗಿತ್ತು. ಕಾಮರಾಜರ್‌ ಬಂದರು ಪ್ರದೇಶ ಮತ್ತು ಮರೀನಾ ಕಡಲ ತೀರದಲ್ಲಿ ತೈಲ ಶೇಖರವಾಗಿದೆ. ತೀರದಲ್ಲಿರುವ ನೀರಿನ ಮೇಲೆ ಸುಮಾರು ಮೂರ್ನಾಲ್ಕು ಇಂಚು ದಪ್ಪನೆಯ ಪದರದಷ್ಟು ತೈಲ ನಿಂತಿದೆ. ಅಲ್ಲದೆ ಕಡಲ ಕೊರೆತ ತಪ್ಪಿಸಲು ಹಾಕಿರುವ ಕಲ್ಲುಗಳ ಮೇಲೆ ಭಾರಿ ಪ್ರಮಾಣದಲ್ಲಿ ತೈಲ ಅಂಟಿಕೊಂಡಿದೆ.
  • ಚೆನ್ನೈನಲ್ಲಿನ ಕಾಮರಾಜರ್ ಬಂದರಿಗೆ ಹೊಂದಿಕೊಂಡಿರುವ ಕಡಲಿನ ನೀರಿನಲ್ಲಿ ಚೆಲ್ಲಿರುವ ತೈಲವನ್ನು ತೆರವು ಮಾಡುವ ಕಾರ್ಯ ೨-೨-೨೦೧೭ ಗುರುವಾರವೂ ಮುಂದುವರಿದಿದೆ.ಚೆನ್ನೈನ ವಿವಿಧ ಪ್ರಾಧಿಕಾರಗಳ 1025 ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ನೂರಾರು ಸ್ವಯಂಸೇವಕರು ಬಕೆಟ್‌ಗಳಲ್ಲಿ ತೈಲವನ್ನು ಮೊಗೆದು ತೆರವು ಮಾಡುತ್ತಿದ್ದಾರೆ. ಸತ್ತ ಕಡಲಾಮೆಗಳು
  • ತೈಲ ಶೇಖರವಾಗಿರುವ ತೀರದಲ್ಲಿ ಈವರೆಗೆ 20 ಕಡಲಾಮೆಗಳ ಶವಗಳು ಪತ್ತೆಯಾಗಿವೆ. ಅವೆಲ್ಲವೂ ತೈಲದ ಕಾರಣದಿಂದಲೇ ಮೃತಪಟ್ಟಿವೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಜತೆಗೆ ಸಾವಿರಾರು ಸತ್ತ ಮೀನುಗಳು ತೀರ ಪ್ರದೇಶಕ್ಕೆ ಬಂದು ಬೀಳುತ್ತಿವೆ ಎಂದು ಮೂಲಗಳು ತಿಳಿಸಿವೆ. ‘ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆ ಇಡುವ ಸಲುವಾಗಿ ತೀರ ಪ್ರದೇಶಕ್ಕೆ ಬರುತ್ತವೆ. ತೈಲದಲ್ಲಿ ತೊಯ್ದು ಹಲವು ಆಮೆಗಳು ಸತ್ತಿವೆ. ತೀರಕ್ಕೆ ಬರಲಿರುವ ಮತ್ತಷ್ಟು ಆಮೆಗಳೂ ಸಾಯಬಹುದು. ಇದರಿಂದ ಈ ಆಮೆಗಳ ಸಂತಾನೋತ್ಪತಿ ನಡೆಯದೆ ಅವುಗಳ ಸಂಖ್ಯೆಯಲ್ಲಿ ಇಳಿಕೆ ಆಗುವ ಅಪಾಯವಿದೆ’ ಎಂದು ಟರ್ಟಲ್ ವಾಕ್‌ ಸಂಘಟನೆ ಕಳವಳ ವ್ಯಕ್ತಪಡಿಸಿದೆ.
  • ಅಂಕಿ ಅಂಶ:40ಟನ್‌;ಹೊರತೆಗೆಯಲಾದ ಬಗ್ಗಡದ ತೂಕ::27ಟನ್‌-ಹೊರತೆಗೆಯಲಾದ ತೈಲ ಮಿಶ್ರಿತ ನೀರಿನ ಪ್ರಮಾಣ.[೧೮]

ಭೀಕರ ಅಪಘಾತ; 11 ಮಂದಿ ಸ್ಥಳದಲ್ಲೇ ಸಾವು

[ಬದಲಾಯಿಸಿ]
  • ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ತಾಲ್ಲೂಕಿನ ರಾಂಪುರ ಬಳಿ ಶನಿವಾರ ಲಾರಿಯೊಂದು ಟೈರ್‌ ಸಿಡಿದ ಪರಿಣಾಮ ಎರಡು ಆಟೊ ಮತ್ತು ಟೆಂಪೊ ಟ್ರಾವೆಲರ್‌ಗೆ ಡಿಕ್ಕಿ ಹೊಡೆದಿದ್ದು, ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.
  • ಬೆಂಗಳೂರು– ಬಳ್ಳಾರಿ ರಾಜ್ಯ ಹೆದ್ದಾರಿಯ ರಾಂಪುರದ ಹರ್ಷ ಡಾಬಾ ಮುಂಭಾಗ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬಳ್ಳಾರಿಯಿಂದ ಚಳ್ಳಕೆರೆ ಕಡೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಈ ಲಾರಿ ಮೊದಲು ಪ್ರಯಾಣಿಕರ ಆಟೊಕ್ಕೆ ಡಿಕ್ಕಿ ಹೊಡೆಯಿತು. ನಂತರ ಟೆಂಪೊ ಟ್ರಾವೆಲರ್‌ಗೆ ಡಿಕ್ಕಿಯಾಗಿ, ಎದುರಿಗೆ ಬರುತ್ತಿದ್ದ ಮತ್ತೊಂದು ಪ್ರಯಾಣಿಕರ ಆಟೊಕ್ಕೂ ಡಿಕ್ಕಿಯಾಗಿದೆ. ಬಳಿಕ ಲಾರಿ ಉರುಳಿ ಬಿದ್ದಿದೆ.

ಚೆಲ್ಲಾಪಿಲ್ಲಿಯಾದ ಹೆಣಗಳು

[ಬದಲಾಯಿಸಿ]
  • ಹೆದ್ದಾರಿಯಲ್ಲಿ 11 ಜನ ಸ್ಥಳದಲ್ಲೇ ಮೃತಪಟ್ಟಿರುವುದು ಅಪಘಾತದ ತೀವ್ರತೆ ಹೇಳುವಂತಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಗಾಯಾಳುಗಳಲ್ಲಿ ಮೂವರು ಬಳ್ಳಾರಿ ವಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ. ರಾಂಪುರದಿಂದ ಅಂಬ್ಯುಲೆನ್ಸ್ ಮೂಲಕ ಬಳ್ಳಾರಿ ವಿಮ್ಸ್ ಗೆ 21 ಜನರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ವಿಮ್ಸ್ ಅಧಿಕ್ಷಕ ಡಾ. ಶ್ರೀನಿವಾಸ್, ಆಡಳಿತಾಧಿಕಾರಿ ಅನ್ನಪೂರ್ಣ ತುರ್ತು ಚಿಕಿತ್ಸಾ ಘಟಕ ದಲ್ಲಿಯೇ ಇದ್ದು ಚಿಕಿತ್ಸೆಗೆ ಮಾರ್ಗದರ್ಶನ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಗೆ ಬರ ಅಧ್ಯಯನ ಮತ್ತು ನಾನಾ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಬಳ್ಳಾರಿ ಉಸ್ತುವಾರಿ ಸಚಿವ ಸಂತೋಷ್ ಲಾಡ್ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾದ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು.[೧೯]

ವಿದ್ಯುತ್‌ ಕಂಬಕ್ಕೆ ಲಾರಿ ಡಿಕ್ಕಿ: 20 ಮಂದಿ ಸಾವು

[ಬದಲಾಯಿಸಿ]
  • 21 Apr, 2017;
  • ಶ್ರೀಕಾಳಹಸ್ತಿಯಿಂದ ತಿರುಪತಿ ಕಡೆಗೆ ಹೊರಟಿದ್ದ ಲಾರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ 20 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ತಿರುಪತಿಯಿಂದ 25 ಕಿ.ಮೀ. ದೂರದಲ್ಲಿ ಶ್ರೀಕಾಳಹಸ್ತಿ ಹೆದ್ದಾರಿಯಲ್ಲಿನ ಎರ್ಪೆಡು ವಲಯದಲ್ಲಿ ಅಪಘಾತ ನಡೆದಿದೆ. ಶುಕ್ರವಾರ ಶ್ರೀಕಾಳಹಸ್ತಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಎರ್ಪೆಡು ಪೊಲೀಸ್‌ ಠಾಣೆಯ ಮುಂಭಾಗದ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಂಬ ಹಾಗೂ ತಂತಿ ತುಂಡಾಗಿದ್ದು, ಸುತ್ತಲೂ ವಿದ್ಯುತ್‌ ಪ್ರವಹಿಸಿದೆ. ಈ ಕಾರಣದಿಂದಾಗಿ ರಕ್ಷಣೆಗೆ ಧಾವಿಸಿದ ಸ್ಥಳೀಯರು ವಿದ್ಯುತ್‌ ಹರಿಯುವಿಕೆಗೆ ಸಿಲುಕಿ ಮೃತ ಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಅಂಗಡಿಗಳಿಗೂ ಹಾನಿ ಮಾಡಿದೆ. ಅಪಘಾತ ಹಾಗೂ ವಿದ್ಯುತ್ ಹರಿದು ಸತ್ತವರ ಸಂಖ್ಯೆ 20ಕ್ಕೆ ಏರಿದ್ದು, ಗಾಯಾಳುಗಳ ಸಂಖ್ಯೆಯೂ 20 ದಾಟಿದೆ.[೨೦]

ಬಸ್ಸು ನಾಲೂಪಾನಿ ಎಂಬಲ್ಲಿ ಭಾಗೀರಥಿ ನದಿಗೆ ಉರುಳಿ ಬಿದ್ದಿದೆ

[ಬದಲಾಯಿಸಿ]

ಡೆಹರಾಡೂನ್‌ ಹತ್ತಿರ ನಿನ್ನೆ ೨೩-೫-೨೦೧೭ ಮಂಗಳವಾರ ಗಂಗೋತ್ರಿಯಿಂದ ಮರಳುತ್ತಿದ್ದ ಯಾತ್ರಿಕರನ್ನು ಒಳಗೊಂಡ ಬಸ್ಸು ನಾಲೂಪಾನಿ ಎಂಬಲ್ಲಿ ಭಾಗೀರಥಿ ನದಿಗೆ ಉರುಳಿ ಬಿದ್ದ ಭೀಕರ ಅವಘಡದಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ. ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತವು ಸಂಜೆ ಆರು ಗಂಟೆಯ ಹೊತ್ತಿಗೆ ಘಟಿಸಿದೆ. ನತದೃಷ್ಟ ಬಸ್ಸಿನಲ್ಲಿದ್ದವರಲ್ಲಿ ಹೆಚ್ಚಿನವರು ಮಧ್ಯಪ್ರದೇಶದವರು. ಇವರು ಗಂಗೋತ್ರಿಯಿಂದ ಹೃಷೀಕೇಶಕ್ಕೆ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿತು. ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ಸುಮಾರು 100 ಅಡಿ ಆಳದ ಕಂದಕಕ್ಕೆ ಉರುಳಿ ಬಿತ್ತು.[೨೧]

ಟ್ರಕ್‍ಗೆ ಡಿಕ್ಕಿ ಹೊಡೆದ ಬಸ್

[ಬದಲಾಯಿಸಿ]
  • 5 Jun, 2017;22 ಮಂದಿ ಸಾವು
  • ಬರೇಲಿ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಭಾನುವಾರ ತಡರಾತ್ರಿ ಬಸ್ಸೊಂದು ಟ್ರಕ್‍ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 22 ಮಂದಿ ಸಾವಿಗೀಡಾಗಿದ್ದು. ಹಲವರಿಗೆ ಗಾಯಗಳಾಗಿವೆ. ರಾತ್ರಿ 1 ಗಂಟೆಗೆ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ತಕ್ಷಣವೇ ಬಸ್ಸಿಗೆ ಬೆಂಕಿ ಹತ್ತಿಕೊಂಡು ಬಸ್ ಸಂಪೂರ್ಣ ಭಸ್ಮವಾಗಿದೆ. ಬಸ್ಸಿನಲ್ಲಿ ಒಟ್ಟು ಎಷ್ಟು ಜನರಿದ್ದರು ಎಂಬುದರ ಬಗ್ಗೆ ಸದ್ಯ ಮಾಹಿತಿ ಸಿಕ್ಕಿಲ್ಲ. ಬಸ್ಸಿನಿಂದ ಜಿಗಿದು ಪಾರಾದ 20 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನ್ನಪ್ಪಿದವರು ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.[೨೨]

ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ

[ಬದಲಾಯಿಸಿ]
  • 8 Jun, 2017:ಗುರುವಾರ;
  • ಮಧ್ಯಪ್ರದೇಶದ ಬಾಲಘಾಟ್‌ನ ಖಾರಿ ಎಂಬ ಗ್ರಾಮದಲ್ಲಿ ಬುಧವಾರ ಸಂಭವಿಸಿದ್ದ ಪಟಾಕಿ ತಯಾರಿಕಾ ಕಾರ್ಖಾನೆ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ. ಬರ್ಸಾ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಬುಧವಾರ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾಗಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸಂಭವಿಸಿದ ಬಳಿಕ ಕಾರ್ಖಾನೆಯ ಮಾಲೀಕ ವಾಹೀದ್ ಅಹಮದ್ ವರ್ಸಿ ತಲೆ ಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬಾಲಘಾಟ್‌ನ ಎಸ್ಪಿ ಅಮಿತ್ ಸಂಘಿ ಅವರು ಹೇಳಿದ್ದಾರೆ.
  • ಕಾರ್ಖಾನೆಯಲ್ಲಿ ಕಾರ್ಮಿಕರು ಕೆಲಸದಲ್ಲಿ ನಿರತವಾಗಿದ್ದಾಗ ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಕೆಲವೇ ಕ್ಷಣಗಳಲ್ಲಿ ಕಾರ್ಖಾನೆಯನ್ನು ಆವರಿಸಿದೆ. ಇದರಿಂದ ಕಾರ್ಮಿಕರು ದುರಂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಘಟನೆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ದುರಂತದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಬಾಲಘಾಟ್ ಜಿಲ್ಲಾಧಿಕಾರಿ ಭರತ್ ಯಾದವ್ ಹೇಳಿದ್ದಾರೆ. ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.[೨೩]

೨೦೧೭ ಜೂನ್ ಲಂಡನ್ ಅಗ್ನಿ ದುರಂತ

[ಬದಲಾಯಿಸಿ]
  • 14 ಜೂನ್, 2017
  • ವಿಶೇಷ ಲೇಖನ:ಲಂಡನ್ ಗ್ರೆನ್ಫೆಲ್ ಟವರ್ ಅಗ್ನಿ ದುರಂತ 2017
  • ಲಂಡನ್‌ ನಗರದ ಜನವಸತಿಯ ಬಹುಮಡಿ ಕಟ್ಟಡದಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದೆ. ಕಟ್ಟಡದಲ್ಲಿ ಹಲವು ಜನರು ಸಿಲುಕಿರುವ ಸಾಧ್ಯತೆ ಇದೆ. ಲಂಡನ್‌ನ ಉತ್ತರ ಕೆನ್ಸಿಂಗ್ಟನ್‌ನಲ್ಲಿನ ಲಾಟಿಮರ್‌ ರಸ್ತೆಯ ಲ್ಯಾಂಕೆಸ್ಟರ್‌ ‘ವೆಸ್ಟ್‌ ಎಸ್ಟೇಟ್‌’ನ 24 ಮಹಡಿಯ ಗ್ರೆನ್ಫೆಲ್ ಟವರ್ (Grenfell Tower) ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಬುಧವಾರ ಬೆಳಿಗ್ಗೆ ಭಾರತೀಯ ಕಾಲಮಾನ 5.45ಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಕನಿಷ್ಠ 6 ಜನ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 14 ಜೂನ್, 2017 ಬುಧವಾರ ಬೆಳಿಗ್ಗೆ ಭಾರತೀಯ ಕಾಲಮಾನ 5.45ಕ್ಕೆ ವಸತಿ ಸಮುಸಚ್ಛಯದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಸುಮಾರು 120 ಫ್ಲ್ಯಾಟ್‌ಗಳಿರುವ ಈ ವಸತಿ ಸಮುಚ್ಛಯದಲ್ಲಿ 400 - 600ಕ್ಕೂ ಹೆಚ್ಚು ಜನ ಸಿಲುಕಿರುವ ಅನುಮಾನವಿದ, ಲ್ಯಾಟಿಮರ್ ರಸ್ತೆಯ ಲಂಕಸ್ಟೆರ್ ವೆಸ್ಟ್ ಎಸ್ಟೇಟ್ನಲ್ಲಿ ಗ್ರೆನ್ಫೆಲ್ ಗೋಪುರದಲ್ಲಿ ಬೆಂಕಿಯನ್ನು 01:16 ಸ್ಥಳೀಯ ಸಮಯದಲ್ಲಿ ಎಂದು ವರದಿ ಮಾಡಲಾಗಿದೆ. ಗೋಪುರದ 120 ಫ್ಲಾಟ್ಗಳ ಒಳಗೆ 600 ಜನರನ್ನು ಕಟ್ಟಡದ ಬೆಂಕಿ ಆವರಿಸಿಕೊಂಡಿದೆ ನಂಬಲಾಗಿದೆ.
  • ಲಂಡನ್ನಲ್ಲಿ 24 ಅಂತಸ್ತಿನ ವಸತಿ ಗೋಪುರ ಬ್ಲಾಕ್ ನ್ನು ಬೆಂಕಿಯು ಆವರಿಸಿದ ಬಳಿಕ, ಹತಾಶ ಮಹಿಳೆಯೊಬ್ಬಳು ಕಟ್ಟಡದ "ಒಂಬತ್ತನೇ ಅಥವಾ ಹತ್ತನೇ ಮಹಡಿ" ಕಿಟಕಿಯಿಂದ ಮಗುವನ್ನು ಎಸೆದಿದ್ದಾಳೆ; ಅದನ್ನು ವ್ಯಕ್ತಿಯೊಬ್ಬ ಹಿಡಿದು ರಕ್ಷಿಸಿದ್ದಾನೆ.
  • ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.[೨೪]

ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್‌ ಸ್ಫೋಟ

[ಬದಲಾಯಿಸಿ]
  • 25 Jun, 2017:ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಬಹವಲ್‌ಪುರ ಸಮೀಪದ ಹೆದ್ದಾರಿಯಲ್ಲಿ ಭಾನುವಾರ ತೈಲ ಟ್ಯಾಂಕರ್‌ ಸ್ಫೋಟಗೊಂಡು ಕನಿಷ್ಠ 120 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 75ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆದ್ದಾರಿಯಲ್ಲಿ ತೈಲ ಟ್ಯಾಂಕರ್‌ ಉರುಳಿಬಿದ್ದು ಅದರಲ್ಲಿದ್ದ ಇಂಧನ ಸೋರಿಕೆಯಾಗುತ್ತಿತ್ತು. ವಿಷಯ ತಿಳಿದ ಸ್ಥಳೀಯರು ಸೋರಿಕೆಯಾಗುತ್ತಿರುವ ಇಂಧನ ತುಂಬಿಕೊಳ್ಳಲು ಟ್ಯಾಂಕರ್‌ನ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡಿದ್ದರು. ಈ ವೇಳೆ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡು ಕೆಲ ಕ್ಷಣಗಳಲ್ಲೇ ಅದು ಸ್ಫೋಟಿಸಿದೆ. ಇಂಧನ ತುಂಬಿಕೊಳ್ಳಲು ಟ್ಯಾಂಕರ್‌ ಸುತ್ತ ಸೇರಿದ್ದ ಜನ ಈ ಸ್ಫೋಟಕ್ಕೆ ಬಲಿಯಾಗಿದ್ದಾರೆ.[೨೫]
  • 26 Jun, 2017;ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಭಾನುವಾರ ಬೆಳಿಗ್ಗೆ ಪೆಟ್ರೋಲ್‌ ಟ್ಯಾಂಕರೊಂದು ಉರುಳಿ ಬಿದ್ದು ನಂತರ ಸ್ಫೋಟಿಸಿದ್ದರಿಂದ 151 ಜನರು ಸುಟ್ಟು ಕರಕಲಾಗಿದ್ದಾರೆ. 140 ಜನರು ಗಂಭೀರವಾಗಿ ಗಾಯ ಗೊಂಡಿದ್ದಾರೆ.[೨೫]

ಗುಡ್ಡ ಕುಸಿತ: 140ಕ್ಕೂ ಹೆಚ್ಚು ಸಾವು

[ಬದಲಾಯಿಸಿ]
  • 24 Jun, 2017
  • ಚೀನಾದ ಗುಡ್ಡಗಾಡು ಪ್ರದೇಶ ನೈರುತ್ಯ ಸಿಚುಅನ್‌ ಪ್ರಾಂತ್ಯದಲ್ಲಿ ಶನಿವಾರ ಗುಡ್ಡ ಕುಸಿತದಿಂದ 140ಕ್ಕೂ ಹೆಚ್ಚು ಮಂದಿ ಕಲ್ಲು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.[೨೬]

ಭಾರತದಲ್ಲಿ ಹದಿಹರೆಯದವರ ಸಾವು

[ಬದಲಾಯಿಸಿ]
  • 23 ವರ್ಷ ಅಧ್ಯಯನ ನಡೆದ ಅವಧಿ (1990–2013)
  • ಆತ್ಮಹತ್ಯೆ ಸೇರಿದಂತೆ ಸ್ವಯಂಕೃತ ಗಾಯಗಳು, ರಸ್ತೆ ಅಪಘಾತಗಳಲ್ಲಿ ಗಾಯ ಮತ್ತು ಹಿಂಸಾಚಾರಗಳಿಂದಾಗಿ ದೇಶದ ಹದಿಹರೆಯದವರು (10ರಿಂದ 19ವರ್ಷ) ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಎರಡು ದಶಕಗಳ ಅವಧಿಯಲ್ಲಿ ತರುಣ–ತರುಣಿಯರು ಜೀವ ಕಳೆದುಕೊಂಡ ಪ್ರಕರಣಗಳನ್ನು ಈ ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದೆ. ದೇಶದಲ್ಲಿರುವ ಹದಿಹರೆಯದವರ (10ರಿಂದ 19 ವರ್ಷದವರು) ಸಂಖ್ಯೆ 25.32 ಕೋಟಿ
  • 23 ವರ್ಷ ಅಧ್ಯಯನ ನಡೆದ ಅವಧಿ (1990–2013)
  • ಎರಡು ವಿಭಾಗ; ಅಧ್ಯಯನದಲ್ಲಿ ಹದಿ ಹರೆಯದವರನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

1). 10ರಿಂದ 14 ವರ್ಷದವರು 2). 15ರಿಂದ 19 ವರ್ಷದವರು

  • ಭಾರಿ ಹೆಚ್ಚಳ; 10ರಿಂದ 14 ವರ್ಷದ ಬಾಲಕ–ಬಾಲಕಿಯರು ಸ್ವತಃ ಹಾನಿ ಮಾಡಿಕೊಂಡು ಸಾವು ತಂದುಕೊಂಡ ಪ್ರಮಾಣ 23 ವರ್ಷಗಳ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
  • ಗಂಡು ಮಕ್ಕಳಲ್ಲಿ ಹೆಚ್ಚಾದ ಸಾವಿನ ಪ್ರಮಾಣ 105%
  • ಹೆಣ್ಣು ಮಕ್ಕಳಲ್ಲಿ ಏರಿಕೆಯಾದ ಸಾವಿನ ಪ್ರಮಾಣ 87%
  • ಸ್ವಯಂಕೃತ ಗಾಯ/ಅಪಾಯ ಹೆಣ್ಣು ಮಕ್ಕಳು : ಏರಿಕೆ: 92%
  • ರಸ್ತೆ ಅಪಘಾತ- ಹೆಣ್ಣು ಮಕ್ಕಳು; ಏರಿಕೆ :65%
  • ಹೊಡೆದಾಟ ಗಂಡುಮಕ್ಕಳು : ಏರಿಕೆ :52%
  • ಸ್ವಯಂಕೃತ ಗಂಡುಮಕ್ಕಳು : ಏರಿಕೆ :49%
  • ರಸ್ತೆ ಅಪಘಾತ- ಗಂಡು ಮಕ್ಕಳು; ಏರಿಕೆ :13%
ಅಧ್ಯಯನಕಾರರ ಮಾತು
  • ಸ್ವಯಂಕೃತವಾಗಿ ಸಾವು ತಂದುಕೊಂಡ ಪ್ರಕರಣಗಳಲ್ಲಿ ಹೆಚ್ಚಿನವು ಆತ್ಮಹತ್ಯೆಗಳು
  • ರಸ್ತೆ ಅಪಘಾತಗಳಲ್ಲಿ ಗಾಯಗೊಂಡು ಸಂಭವಿಸಿರುವ ಸಾವುಗಳು ಅಪಾಯಕಾರಿ ಬೈಕ್‌ ಸವಾರಿಯ ಹುಚ್ಚಿನಿಂದಾಗಿರುವಂತಹವು
ಹದಿಹರೆಯ--ಇರಲಿ ಎಚ್ಚರ!!
  • ಈ ವಯಸ್ಸಿನಲ್ಲಿ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಕ್ಷಿಪ್ರ ಬೆಳವಣಿಗೆ ಹೊಂದುತ್ತಾರೆ. ಇದು ಅವರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ.
  • ಅನಾರೋಗ್ಯಕರ ಚಟುವಟಿಕೆಗಳಲ್ಲಿ ತೊಡಗುವ ವಯಸ್ಸು
  • ಬೇಕಾಬಿಟ್ಟಿ ಆಹಾರ ಸೇವಿಸುವ ಪ್ರವೃತ್ತಿಯಿಂದಾಗಿ ಆರೋಗ್ಯದ ಮೇಲೂ ಪರಿಣಾಮ

[೨೭]

ಅಮರನಾಥ ಯಾತ್ರಾರ್ಥಿಗಳ ದುರ್ಮರಣ

[ಬದಲಾಯಿಸಿ]
  • 16 Jul, 2017
  • ಅಮರನಾಥ ಯಾತ್ರೆಗೆ ತೆರಳುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದ ಪರಿಣಾಮ16 ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 35 ಮಂದಿಗೆ ಗಾಯಗಳಾಗಿವೆ. ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಳಿಯ ರಾಮ್‌ಬನ್ ಜಿಲ್ಲೆಯ ನಾಚ್‌ನಾಲ ಕಣಿವೆ ಬಳಿ ಈ ದುರಂತ ಸಂಭವಿಸಿದೆ. ಗಾಯಗೊಂಡವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಈ ವಾಹನದಲ್ಲಿ ಒಟ್ಟು 46 ಯಾತ್ರಾರ್ಥಿಗಳು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತದಲ್ಲಿ 16 ಮಂದಿ ಮೃತಪಟ್ಟಿದ್ದು, 35 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.[೨೮]

೨೦೧೭ ರ ಖತೌಲಿ ರೈಲ್ವೆ ಅಪಘಾತ

[ಬದಲಾಯಿಸಿ]
  • Khatauli train derailment
  • 2017 ರ ಆಗಸ್ಟ್ 19 ರಂದು, ಸುಮಾರು 5:45 ಗಂಟೆಗೆ (IST), ಕಳಿಂಗ ಉತ್ಕಲ ಎಕ್ಸಪ್ರೆಸ್‍ನ 23 ಕೋಚ್ಗಳ ಪೈಕಿ 14 ಭೋಗಿಗಳು ಉತ್ತರ ಪ್ರದೇಶದ ಮುಜಫರ್ನಗರ್ ಜಿಲ್ಲೆಯ ಖತುಲಿ ಬಳಿ ಹಳಿತಪ್ಪಿ ಮೊಗಚಿಕೊಂಡಿತು. ಒಡಿಶಾದ ಪುರಿಯಿಂದ ಉತ್ತರಖಂಡದ ಹರಿದ್ವಾರಕ್ಕೆ ಹೋಗುತ್ತಿದ್ದ ರೈಲು. 23 ಜನರು ಸತ್ತಿರುವರು ಮತ್ತು 156 ಇತರರು ಘಾಯಗೊಂಡರು.[೨೯]
  • ಅಝಮ್ಘಡ್ ದಿಂದ 23 ಆಗಸ್ಟ್ 2017 ರಂದು ನವದೆಹಲಿಗೆ ತೆರಳುತ್ತಿದ್ದ ವೇಳೆ ಬೆಳಗಿನ ಜಾವ 2.50ರ ಸುಮಾರಿಗೆ ಘಟನೆ ಸಂಭವಿಸಿದೆ. ಕೈಫಿಯತ್ ಎಕ್ಸ್ ಪ್ರೆಸ್ ರೈಲಿನ 10 ಬೋಗಿಗಳು ಹಳಿ ತಪ್ಪಿದ್ದು, ರೈಜಿನ ಇಂಜಿನ್ ಡಂಪರ್ ಗೆ ಡಿಕ್ಕಿಯಾಗಿದೆ. ಪರಿಣಾಮ 74 ಮಂದಿ ಗಾಯಗೊಂಡಿದ್ದಾ ರೈಲು ಅಪಘಾತಗಳ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಸುರೇಶ್ ಪ್ರಭು ರಾಜೀನಾಮೆ ನೀಡಿದರು.[೩೦]

ಉಲ್ಲೇಖ

[ಬದಲಾಯಿಸಿ]
  1. "ILO Safety and Health at Work". International Labour Organization (ILO)
  2. Indore Patna Express derails: Train accident kills 120, many feared trapped; fractured rail likely cause;November 21, 2016
  3. Patna-Indore Express derails near Kanpur Indore-Patna ;Nov 22,2016;
  4. ೪.೦ ೪.೧ ಕಾನ್ಪುರ ರೈಲು ದುರಂತ: ಪ್ರಕರಣದ; 7 Feb, 2017
  5. "ಕಾರ್ಗಿಲ್‌ ಹಿಮಕುಸಿತ: ಕಾಣೆಯಾಗಿದ್ದ ಯೋಧ ಸಾವು". Archived from the original on 2016-05-31. Retrieved 2017-01-26.
  6. ಶಾಲಾವಾಹನ– ಲಾರಿ ಡಿಕ್ಕಿ: 19 ಮಕ್ಕಳ ಸಾವು;ಪಿಟಿಐ;20 Jan, 2017
  7. ರೈಲು ದುರಂತಗಳ ಹಿಂದೆ ಭಯೋತ್ಪಾದಕರು?
  8. Last Modified: Wed, Jan 25 2017.;Army major, 4 family members die in Kashmir avalanches
  9. ಹಿಮಕುಸಿತಕ್ಕೆ ಸಿಲುಕಿ 10 ಯೋಧರು ಸಾವು;ಏಜೆನ್ಸಿಸ್‌;26 Jan, 2017
  10. ಜಮ್ಮು–ಶ್ರೀನಗರ ಹೆದ್ದಾರಿಯಲ್ಲಿ ಮತ್ತೆ ಹಿಮಕುಸಿತ;27 Jan, 2017
  11. ಹಿಮಕುಸಿತ: ಬೆಳಗಾವಿ ಯೋಧ ಪಾರು;ಪ್ರಜಾವಾಣಿ ವಾರ್ತೆ;27 Jan, 2017
  12. ಹಿಮದಡಿ ಸಿಲುಕಿದ್ದ ಐವರು ಯೋಧರ ರಕ್ಷಣೆ;ಪಿಟಿಐ;28 Jan, 2017
  13. http://www.prajavani.net/news/article/2017/01/26/468295.html ಹಲವರು ಕಾಣೆ;ಹಿಮಕುಸಿತಕ್ಕೆ ಸಿಲುಕಿ 10 ಯೋಧರು ಸಾವು;ಏಜೆನ್ಸಿಸ್‌;26 Jan, 2017
  14. http://www.livemint.com/Politics/PkkgD6lfQuAusitou4H9hN/Five-killed-as-avalanches-hit-Kashmir.html
  15. http://www.hindustantimes.com/india-news/one-officer-dead-after-avalanche-hits-army-camp-in-kashmir-say-police/story-VVIN6fpXAcozsjJFHW5iNK.html
  16. http://www.prajavani.net/news/article/2017/01/27/468345.html Archived 2017-01-27 ವೇಬ್ಯಾಕ್ ಮೆಷಿನ್ ನಲ್ಲಿ. ನಾಲ್ವರು ನಾಪತ್ತೆ;ಹಿಮಕುಸಿತಕ್ಕೆ ಯೋಧರು ಬಲಿ;ಪಿಟಿಐ;27 Jan, 2017
  17. ಸಿಲುಕಿದ್ದ 3 ವರ್ಷದ ಮಗು  ರಕ್ಷಣೆ2 Feb, 2017
  18. "ಚೆನ್ನೈ : ಕಡಲ ಜೀವಕ್ಕೆ ಕುತ್ತು ತಂದ ತೈಲ;ಪ್ರಜಾವಾಣಿ ವಾರ್ತೆ;3 Feb, 2017". Archived from the original on 2017-02-03. Retrieved 2017-02-03.
  19. ಮೊಳಕಾಲ್ಮುರು ತಾಲ್ಲೂಕು ರಾಂಪುರ ಬಳಿ ಸರಣಿ ಅಪಘಾತ: 14 ಸಾವು;ಪ್ರಜಾವಾಣಿ ವಾರ್ತೆ;18 Mar, 2017
  20. ತಿರುಪತಿ ಸಮೀಪ ವಿದ್ಯುತ್‌ ಕಂಬಕ್ಕೆ ಲಾರಿ ಡಿಕ್ಕಿ: 20 ಮಂದಿ ಸಾವು;21 Apr, 2017
  21. ಉತ್ತರಾಖಂಡ:ಬಸ್ಸು ಕಂದಕಕ್ಕೆ ಉರುಳಿ 24 ಸಾವು; ಪ್ರಧಾನಿ ಪರಿಹಾರ ಘೋಷಣೆ ಉದಯವಾಣಿ, May 24, 2017
  22. ಬರೇಲಿ: ಟ್ರಕ್‍ಗೆ ಡಿಕ್ಕಿ ಹೊಡೆದ ಬಸ್; 22 ಮಂದಿ ಸಾವು;ಏಜೆನ್ಸಿಸ್‌;5 Jun, 2017
  23. ಮಧ್ಯಪ್ರದೇಶ ಪಟಾಕಿ ದುರಂತ: ಮೃತರ ಸಂಖ್ಯೆ 25ಕ್ಕೆ ಏರಿಕೆ;ಏಜೆನ್ಸಿಸ್‌;8 Jun, 2017
  24. London tower fire: Baby dropped from 10th floor caught by man on ground; PTI | Jun 14, 2017, 07.01 PM IST
  25. ೨೫.೦ ೨೫.೧ http://www.prajavani.net/news/article/2017/06/25/501459.html
  26. ಬೀಜಿಂಗ್‌;ಚೀನಾದಲ್ಲಿ ಗುಡ್ಡ ಕುಸಿತ: 140ಕ್ಕೂ ಹೆಚ್ಚು ಮಂದಿ ಸಾವು;ಏಜೆನ್ಸಿಸ್‌;24 Jun, 2017
  27. http://www.prajavani.net/news/article/2017/07/07/504309.html ಹದಿಹರೆಯದಲ್ಲೇ ಸಾವಿನ ಪ್ರಮಾಣ ಹೆಚ್ಚಳಪ್ರಜಾವಾಣಿ ವಾರ್ತೆ;7 Jul, 2017
  28. http://www.prajavani.net/news/article/2017/07/16/506615.html
  29. http://www.prajavani.net/news/article/2017/08/21/514899.html
  30. ಕೈಫಿಯತ್ ಎಕ್ಸ್ ಪ್ರೆಸ್ ಹಳಿತಪ್ಪದೆ