ಲಂಡನ್ ಗ್ರೆನ್ಫೆಲ್ ಟವರ್ ಅಗ್ನಿ ದುರಂತ 2017
ಗೋಚರ
ಲಂಡನ್ ಭೀಕರ ಅಗ್ನಿ ಅವಘಡ
[ಬದಲಾಯಿಸಿ]- ದಿ.14 ಜೂನ್, 2017 ರಂದು ಲಂಡನ್‌ನ ‘ವೆಸ್ಟ್ ಎಸ್ಟೇಟ್’ನ 24 ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಕಟ್ಟಡದ ಒಳಗೆ ನೂರಾರು ಜನರಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 40ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಹಾಗೂ 200ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಲಂಡನ್‌ನ ಉತ್ತರ ಕೆನ್ಸಿಂಗ್ಟನ್‌ನಲ್ಲಿನ ಲಾಟಿಮರ್ ರಸ್ತೆಯ ಲ್ಯಾಂಕೆಸ್ಟರ್ ‘ವೆಸ್ಟ್ ಎಸ್ಟೇಟ್’ನ 24 ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ.ಬುಧವಾರ ಬೆಳಿಗ್ಗೆ ಭಾರತೀಯ ಕಾಲಮಾನ 5.45ಕ್ಕೆ (ರಾತ್ರಿ 01:16 ಸ್ಥಳೀಯ ಸಮಯದಲ್ಲಿ) ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.[೧][೨]
- ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬಹುಮಹಡಿ ಕಟ್ಟದ ನಿವಾಸಿಗಳು ಕಿಟಕಿಯ ಮೂಲಕ ರಕ್ಷಣೆಗಾಗಿ ಮೊರೆಯಿಡುತ್ತಿದ್ದರು. ಈ ವೇಳೆ (10 ನೇ ಮಹಡಿಯಿಂದ) ಮಹಿಳೆಯೊಬ್ಬರು ತನ್ನ ಮಗುವನ್ನು ಯಾರಾದರೂ ರಕ್ಷಿಸುತ್ತಾರೆ ಎಂಬ ವಿಶ್ವಾಸದಿಂದ ಎಸೆಯುತ್ತಾರೆ. ಕೂಡಲೇ ಕೆಳಗಿದ್ದ ವ್ಯಕ್ತಿಯೊಬ್ಬರು ಮುಂದೆ ಓಡಿ ಹೋಗಿ ಮಗುವನ್ನು ರಕ್ಷಿಸಿದ್ದಾರೆ, ಎಂದು ಸಮಿರಾ ಹೇಳಿದ್ದಾರೆ. ಆ ಮಹಿಳೆ ತನ್ನ ಮಗುವನ್ನು 9 ಅಥವಾ 10ನೇ ಮಹಡಿಯಿಂದ ಕೆಳಗೆ ನಿಂತಿದ್ದ ಸಾರ್ವಜನಿಕರತ್ತ ಎಸೆಯುತ್ತಿರುವುದನ್ನು ನಾನು ನೋಡಿದೆ ಎಂದು ಪ್ರತ್ಯಕ್ಷದರ್ಶಿ ಸಮಿರಾ ಲಮ್ರಾನಿ ಅವರು ಹೇಳಿರುವುದಾಗಿ ದಿ ಟೆಲೆಗ್ರಾಫ್ ವರದಿ ಮಾಡಿದೆ.
- ಲಂಡನ್ನಿನ ನಾರ್ಥ್ ಕೆನ್ಸಿಂಗ್ಟನ್ ನಲ್ಲಿರುವ ಲಾಟಿಮರ್ ರಸ್ತೆಯ ಲ್ಯಾಂಕೆಸ್ಟರ್ ವೆಸ್ಟ್ ಎಸ್ಟೇಟ್ ನ ಅಪಾರ್ಟ್ ಮೆಂಟ್ ನಲ್ಲಿ ನಿನ್ನೆ ತಡರಾತ್ರಿ ಅಗ್ನಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಅಪಾರ್ಟ್ ಮೆಂಟ್ ನ 24 ಅಂತಸ್ತಿನ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಈ ಪ್ರತಿಷ್ಠಿತ ಅಪಾರ್ಟ್ ಮೆಂಟ್ ನಲ್ಲಿ ಸುಮಾರು 120 ಮನೆಗಳಿದ್ದು, ಅಗ್ನಿ ಅವಘಡದಲ್ಲಿ 6 ಮಂದಿಗೂ ಹೆಚ್ಚು ಜನ ಸಜೀವ ದಹನವಾಗಿದ್ದಾರೆ. ಪೂರ್ಣ ವಿವರ ದೊರೆತಿಲ್ಲ.[೩]
ಕೆಲವು ವಿವರ
[ಬದಲಾಯಿಸಿ]- ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನಗಳಲ್ಲಿ ನೂರಾರು ಅಗ್ನಿಶಾಮಕ ಮತ್ತು 45 ಅಗ್ನಿಶಾಮಕ ಯಂತ್ರಗಳು ತೊಡಗಿಸಿಕೊಂಡಿದ್ದವು. ಕಟ್ಟಡದ ಉಳಿದ ಭಾಗದ ಹೆಚ್ಚಿನ ಮಹಡಿಗಳಲ್ಲಿ ಬೆಂಕಿಯ ಪಾಕೆಟ್ಸ್ ಅನ್ನು ನಿಯಂತ್ರಿಸಲು ಅಗ್ನಿಶಾಮಕ ದಳಗಳು ಪ್ರಯತ್ನಿಸುತ್ತಿದ್ದವು. ಸುತ್ತಮುತ್ತಲಿನ ಕಟ್ಟಡಗಳ ನಿವಾಸಿಗಳು ಗೋಪುರದ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು, ಆದರೂ ಕಟ್ಟಡವು ಇನ್ನೂ ರಚನಾತ್ಮಕವಾಗಿ ಗಟ್ಟಿಯಿದೆ ಎಂದು ನಿರ್ಣಯಿಸಲಾಯಿತು.
- ಬೆಂಕಿಯ ಸಮಯದಲ್ಲಿ ಒಂದು- ಮತ್ತು ಎರಡು ಮಲಗುವ ಕೋಣೆಯ 120 ಫ್ಲಾಟ್ಗಳಲ್ಲಿ ಸುಮಾರು 600 ಜನರು ಇದ್ದರು. ಜೂನ್ 14 ರ ಮಧ್ಯಾಹ್ನ, ಹನ್ನೆರಡು ಜನರು ಸತ್ತರೆಂದು ಸಾಬೀತಾಯಿತು, ಹೆಚ್ಚಿನ ಸಾವುಗಳು ವರದಿಯಾಗಬಹುದೆಂದು ನಿರೀಕ್ಷಿಸಲಾಗಿದೆ; ಪೊಲೀಸರು "ಸುಮಾರು 200 ನಿವಾಸಿಗಳನ್ನು ಪಾರು ಮಾಡಿದ ಬಗ್ಗೆ ಮಾತನಾಡಿದರು. ಆದರೆ ಉಳಿದ ಬಹಳಷ್ಟು ಜನರ ಬಗೆಗೆ ಪೇನೂ ಹೇಳಿಲ್ಲ". ಅಲ್ಲದೆ ಅರವತ್ತೈದು ಮಂದಿ ಅಗ್ನಿಶಾಮಕ ದಳಗಳಿಂದ ರಕ್ಷಿಸಲ್ಪಟ್ಟರು. ಲಂಡನ್ನಿನ ಐದು ಆಸ್ಪತ್ರೆಗಳಲ್ಲಿ ಗಾಯಗೊಂಡ ಇಪ್ಪತ್ತನಾಲ್ಕು ಜನರನ್ನು ಈ ದುರಂತದವರೆಂದು ದೃಢಪಡಿಸಲಾಯಿತು, ಇಪ್ಪತ್ತು ಮಂದಿ ತೀವ್ರತರವಾದ ಸ್ಥಿತಿಯಲ್ಲಿದ್ದಾರೆ. ಮೇಲಿನ ಮಹಡಿಗಳಲ್ಲಿ ನಡೆಯುತ್ತಿರುವ ಬೆಂಕಿ ಮತ್ತು ರಚನಾತ್ಮಕ ಕುಸಿತದ ಭಯ, ಹುಡುಕಾಟ ಮತ್ತು ಚೇತರಿಕೆಯ ಪ್ರಯತ್ನಕ್ಕೆ ತಡೆಯೊಡ್ಡಿತು.[೪]
ಕಟ್ಟಡ
[ಬದಲಾಯಿಸಿ]- ಬಿಬಿಸಿ ವರದಿಯಂತೆ ಗ್ರೆನ್ಫೆಲ್ ಗೋಪುರ, ಉತ್ತರ ಕೆನ್ಸಿಂಗ್ಟನ್‍ನಲ್ಲಿ-
- • 127 ಫ್ಲಾಟ್ಗಳು(?)
- • 24 ಮಹಡಿಗಳು
- • 20 ವಸತಿ ಮಟ್ಟದ ಮಹಡಿಗಳು; ಸುಮಾರು 150 ಕುಟುಂಬ ಮತ್ತು ಕೆಲಸಗಾರರೂ ಸೇರಿ ಸುಮಾರು 600 ಜನರು.
• 4 ಸಮುದಾಯ (ಪ್ರದೇಶಗಳ) ವಸತಿ ಗ್ರಹಗಳು (ಫ್ಲಾಟ್ಗಳು) ಮಿಶ್ರ ಮಟ್ಟದವು ಒಂದು ಬೆಡ್‍ರೂಮು ಎರಡು ಬೆಡ್‍ರೂಮಿನವು ಇವೆ. • 2016ರಲ್ಲಿ ನವೀಕರಣ ಪೂರ್ಣಗೊಂಡಿದೆ[೫]
ಬೇರೆ ವಿವರ
[ಬದಲಾಯಿಸಿ]- ಪಶ್ಚಿಮ ಲಂಡನ್ನ ನಾಟಿಂಗ್ ಹಿಲ್ ಸಮೀಪದ ಫ್ಲಾಟ್ಗಳ ಬ್ಲಾಕ್ ಕನಿಷ್ಠ 24 ಮಹಡಿಗಳನ್ನು ಹೊಂದಿದೆ ಮತ್ತು 120 ಅಪಾರ್ಟ್ಮೆಂಟ್ಗಳನ್ನು ಹೊಂದಿದೆ. ರಾತ್ರಿ 12.54 ಗಂಟೆಗೆ ಪ್ರಾರಂಭವಾದ ಬೆಂಕಿ, ಇಡೀ ಬ್ಲಾಕ್ ಅನ್ನು ಆವರಿಸಿದೆ, ಎಲ್ಲಾ 24 ಮಹಡಿಗಳನ್ನೂ ಬಾಧಿಸುತ್ತಿದೆ.
- ಲಂಕಸ್ಟೆರ್ ವೆಸ್ಟ್ ಎಸ್ಟೇಟ್ ಯೋಜನೆಯ ಭಾಗವಾಗಿ 1970 ರ ದಶಕದಲ್ಲಿ ಟವರ್ ಬ್ಲಾಕ್ ಅನ್ನು ನಿರ್ಮಿಸಲಾಯಿತು. ಇದು ಇತ್ತೀಚಿಗೆ £10 ಮಿ. ನವೀಕರಣಕ್ಕೆ ಒಳಗಾಯಿತು, ಇದರಲ್ಲಿ ಬಾಹ್ಯ ಛಾವಣಿ, ಡಬಲ್ ಮೆರುಗು ಮತ್ತು ಹೊಸ ಕೋಮು ತಾಪನ ವ್ಯವಸ್ಥೆಯನ್ನು ಅಳವಡಿಸಲಾಯಿತು. ಪುನರಾಭಿವೃದ್ಧಿ ಯೋಜನೆಗಳು ಏಕ ಮೆಟ್ಟಿಲುಗಳ ದಾರಿ ವ್ಯವಸ್ಥೆಯನ್ನು ತೋರಿಸುತ್ತವೆ.
- 1974 - ಸಂಪೂರ್ಣ ನಿರ್ಮಾಣ
- 2016 ನವೀಕರಣ
- ವಸತಿ ಫ್ಲಾಟ್ಗಳ 20 ಮಹಡಿಗಳು
- ಮತ್ತು ಸಮುದಾಯದ ನಾಲ್ಕು ಮಹಡಿಗಳು
- ಕಚೇರಿ ಸ್ಥಳಗಳು
- ಇದರಲ್ಲಿ £10 ಮಿ ಯೋಜನೆ,
- ಬಾಹ್ಯ ಡಬಲ್ ರಕ್ಷಾ ಕವಚ,
- ಮೆರುಗು ಮತ್ತು ಹೊಸ ಸಾಮುದಾಯಿಕ ತಾಪನ ವ್ಯವಸ್ಥೆ.
- ಬುಧವಾರ ಬೆಳಗ್ಗೆ ಗ್ರೆನ್ಫೆಲ್ ಗೋಪುರದಲ್ಲಿ ಬೆಂಕಿಯ ಅಪಾಯದ ಬಗ್ಗೆ ಎಚ್ಚರಿಕೆಗಂಟೆ ಎಚ್ಚರಿಸಿದೆ ಎಂದು ನಿವಾಸಿಗಳು ಹೇಳಿದ್ದಾರೆ ಮತ್ತು 2013 ರಲ್ಲಿ ವಿದ್ಯುತ್ ಅವಗಡದಿಂದ ಪ್ರಮುಖ ಬೆಂಕಿ ಅನಾಹುತ ತಡೆಯಲ್ಪಟ್ಟಿದೆ ಎಂದು ಹೇಳಿದ್ದಾರೆ.
- ಬೆಂಕಿಯ ಅಪಾಯದ ಬಗೆಗೆ ಗ್ರೆನ್ಫೆಲ್ ಆಕ್ಷನ್ ಗ್ರೂಪ್‍ನ ಕಳವಳದ ದೂರನ್ನು, ಕೆನ್ಸಿಂಗ್ಟನ್ ಮತ್ತು ಚೆಲ್ಸಿಯಾ ಕೌನ್ಸಿಲ್ ವಜಾಗೊಳಿಸಿತು, ಇದು ಈ ಬ್ಲಾಕ್ ಅನ್ನು ಹೊಂದಿದೆ, ಮತ್ತು ಅದೇ ಸ್ಥಳೀಯ ಹಿಡುವಳಿದಾರರ ನಿರ್ವಹಣಾ ಸಂಸ್ಥೆ [KCTMO], ಇದು ಈ ಪ್ರಾಂತ್ಯದ ಮನೆಗಳ ಉಸ್ತುವಾರಿಯನ್ನು ನಡೆಸುತ್ತದೆ. [೬]
ಕಟ್ಟಡವನ್ನು ಪೂರ್ಣ ಆವರಿದ ಬೆಂಕಿ
[ಬದಲಾಯಿಸಿ]ಲಂಡನ್‍ನಲ್ಲಿ ರಾತ್ರಿ ೧೨..೫೪ ಕ್ಕೆ ಆರಂಭವಾದ ಆರು ಗಂಟೆಯ ನಂತರತೆಗೆದ ಫೋಟೊ.
ಬೆಂಕಿ ನಂದಿಸಿದ ನಂತರ
[ಬದಲಾಯಿಸಿ]- ಗುರುವಾರ (ಮರುದಿನ) "ಹೆಚ್ಚೆಂದರೆ ಬಲಿಪಶುಗಳು, ಕನಿಷ್ಠ 12 ಜನರು ಸತ್ತಿದ್ದಾರೆ. ಎತ್ತರದ ಅಪಾರ್ಟ್ಮೆಂಟ್ ಕಟ್ಟಡ ಬೆಂಕಿ ಆರಿದ ನಂತರ ಹೆಚ್ಚಿನ ಶೋಧನೆ ಸಡೆಸಬಹುದು" ಎಂದು ಅಗ್ನಿಶಾಮಕ ಮುಖ್ಯಸ್ಥರು ಹೇಳಿದ್ದಾರೆ. "ವಿನಾಶಕಾರಿ ಪಶ್ಚಿಮ ಲಂಡನ್ ಬ್ಲೇಜ್ನಲ್ಲಿ ಜ್ವಾಲೆಯ ಕೊನೆಯ ಸುಳಿಯನ್ನೂ ಆರಿಸಿದೆ. ಇಡೀ ಕುಟುಂಬಗಳು ಕಾಣೆಯಾಗಿವೆ, ಮತ್ತು ಸತ್ತವರ ಸಂಖ್ಯೆ ಹೆಚ್ಚಾಗುತ್ತದೆ".
- ಪಶ್ಚಿಮ ಲಂಡನ್ ನ ನಾರ್ತ್ ಕೆನ್ಸಿಂಗ್ಟನ್ ಜಿಲ್ಲೆಯ 24-ಮಹಡಿಯ ಕಟ್ಟಡದಲ್ಲಿ ಬುಧವಾರ ಬುಧವಾರ ಬೆಳಗ್ಗೆ 74 ಮಂದಿ ಗಾಯಗೊಂಡಿದ್ದರು. ಇವರಲ್ಲಿ 18 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಅನೇಕ ಜನ ಕಾಣೆಯಾಗಿದ್ದಾರೆ. ಒಂದು ಬಾಡಿಗೆದಾರರ ಗುಂಪು ಬೆಂಕಿಯ ಅಪಾಯದ ಬಗ್ಗೆ ವರ್ಷದ ಹಿಂದೆ ದೂರು ನೀಡಿತ್ತು.
- ಗ್ರೆನ್ಫೆಲ್ ಗೋಪುರದಲ್ಲಿ 120 ಅಪಾರ್ಟ್ಮೆಂಟ್ಗಳಲ್ಲಿ ಸುಮಾರು 600 ಜನರಿದ್ದರು. ಮಧ್ಯಾಹ್ನ 12 ರಂದು ನವೀಕರಿಸಿದ ಸಾವಿನ ಸಂಖ್ಯೆಯನ್ನು ಘೋಷಿಸಿದ ನಂತರ, "ಈ ಸಂಖ್ಯೆ ಹೆಚ್ಚಾಗುತ್ತದೆ ಎಂದು ನಾವು ದುಃಖದಿಂದ ನಂಬಬೇಕಿದೆ" ಎಂದು ಸ್ಟುವರ್ಟ್ ಕುಂಡಿ ಹೇಳಿದರು.
- ದುರಂತದ ಬಲಿಪಶುಗಳಿಗೆ ಸ್ವಯಂಸೇವಕರು ಮತ್ತು ದತ್ತಿಗಳು ತಮ್ಮ ಮನೆಗಳನ್ನು ಕಳೆದುಕೊಂಡ ಜನರಿಗೆ ಆಶ್ರಯ ಮತ್ತು ಆಹಾರವನ್ನು ಕೊಡಲು, ರಾತ್ರಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸಹಾಯ ಮಾಡಲು 1 ಮಿಲಿಯನ್ಗಿಂತಲೂ ಹೆಚ್ಚು ಪೌಂಡ್ಗಳನ್ನು ($ 1.27 ಮಿಲಿಯನ್) ಸಂಗ್ರಹಿಸಲಾಗಿದೆ.[೭]
ಮರಣ ೧೭ಕ್ಕೆ ಏರಿಕೆ
[ಬದಲಾಯಿಸಿ]- 16-6-2017
- ಪಶ್ಚಿಮ ಲಂಡನ್ನಿನ 24 ಮಹಡಿಗಳ ವಸತಿ ಸಮುಚ್ಚಯದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತರಾದವರ ಸಂಖ್ಯೆ 17ಕ್ಕೆ ಏರಿದೆ. ಈ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ. 78 ಜನ ಗಾಯಗೊಂಡಿದ್ದು, 18 ಮಂದಿಯ ಸ್ಥಿತಿ ಗಂಭೀರವಾಗಿದೆ. ಗ್ರೆನ್‌ಫೆಲ್ ಟವರ್ ಹೆಸರಿನ ಈ ಕಟ್ಟಡದಲ್ಲಿ ಇದ್ದ 120 ಫ್ಲ್ಯಾಟ್‌ಗಳಲ್ಲಿ 600 ಜನ ವಾಸವಿದ್ದರು. ಅವಘಡದ ತನಿಖೆಗೆ ಪ್ರಧಾನಿ ತೆರೆಸಾ ಮೇ ಆದೇಶಿಸಿದ್ದಾರೆ.[೮]
ನೋಡಿ
[ಬದಲಾಯಿಸಿ]&
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ London tower fire: Baby dropped from 10th floor caught by man on ground;PTI |Jun 14, 2017, 11.12 PM IST
- ↑ ಲಂಡನ್: ಭಾರಿ ಬೆಂಕಿ ಅವಘಡ;ಪಿಟಿಐ;15 Jun, 2017
- ↑ ಲಂಡನ್ ಅಪಾರ್ಟ್ ಮೆಂಟ್ ನಲ್ಲಿ ಭೀಕರ ಅಗ್ನಿ ಅವಘಡ; ಹಲವು ನಿವಾಸಿಗಳು ಸಿಲುಕಿರುವ ಶಂಕೆ![ಶಾಶ್ವತವಾಗಿ ಮಡಿದ ಕೊಂಡಿ]
- ↑ London fire: Six killed as Grenfell Tower engulfed14 June 2017
- ↑ https://www.theguardian.com/uk-news/2017/jun/14/what-happened-at-grenfell-tower-london-fire-visual-guide
- ↑ What happened at Grenfell Tower? A visual guide
- ↑ London fire brigade chief says will be ‘absolute miracle’ if any survivor foundWORLD Updated: Jun 15, 2017 14:51 IST
- ↑ "ಅಗ್ನಿ ಅವಘಡ: ಸಾವಿನ ಸಂಖ್ಯೆ 17ಕ್ಕೆ ಏರಿಕೆ;ಪಿಟಿಐ;16 Jun, 2017". Archived from the original on 2017-06-18. Retrieved 2017-06-16.