ವಿಮಾನ ಅಪಘಾತಗಳು
ಗೋಚರ
ಅಂತರರಾಷ್ಟ್ರೀಯ ನಾಗರೀಕ ವಿಮಾನಯಾನ ಸಂಸ್ಥೆಯು ನಿರೂಪಿಸಿರುವಂತೆ, ವಿಮಾನ ಅಪಘಾತವು ಯಾವುದೇ ವಿಮಾನದಲ್ಲಿ, ಮೊದಲ ವ್ಯಕ್ತಿ ಹತ್ತಿದ ನಂತರ ಹಾಗು ಕೊನೆಯ ವ್ಯಕ್ತಿ ಇಳಿಯುವ ಮಧ್ಯದೊಳಗೆ ಉಂಟಾದ ಘಟನೆಯಲ್ಲಿ
- ೧. ವ್ಯಕ್ತಿಯು ತೀವ್ರವಾಗಿ ಗಾಯಾಳಾಗುವುದು ಅಥವಾ ಮರಣಹೊಂದುವುದು
- ೨. ವಿಮಾನ ಕಾಣೆಯಾಗುವುದು ಅಥವಾ
- ೩. ವಿಮಾನ ತನ್ನ ಕಾರ್ಯವನ್ನು ನಿರ್ವಹಿಸುವುದರಲ್ಲಿ ತೊಂದರೆ ಅನುಭವಿಸುವುದು.
೨೦೧೬ ರ ಅಪಘಾತಗಳು
[ಬದಲಾಯಿಸಿ]ಭಾರತೀಯ ವಾಯುಪಡೆಯ An-32 ಕಣ್ಮರೆ 2016
[ಬದಲಾಯಿಸಿ]- ಜುಲೈ 2016 22 ರಂದು ಬಂಗಾಳ ಕೊಲ್ಲಿಯಲ್ಲಿ ಮೇಲೆ ಹಾರಿಸುವಾಗ ಭಾರತೀಯ ವಾಯುಪಡೆಯ ಒಂದು ಆಂಟೊನೊವ್ An-32 ಟ್ವಿನ್ ಎಂಜಿನ್ ಟರ್ಬೊಪ್ರಾಪ್ ಸಾರಿಗೆ ವಿಮಾನ ಕಣ್ಮರೆಯಾಯಿತು. ವಿಮಾನದಲ್ಲಿ 29 ಜನರಿದ್ದರು. ವಿಮಾನ ರೇಡಾರ್ ಸಂಪರ್ಕವನ್ನು 9:12 AM, ಚೆನೈನಿಂದ 280 ಕಿಲೋಮೀಟರ್ (170 ಮೈಲಿ) ಪೂರ್ವದಲ್ಲಿ ಕಳೆದುಕೊಂಡಿತು.ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ಭಾರತದ ಇತಿಹಾಸದಲ್ಲಿಯೇ ದೊಡ್ಡ ಕಾರ್ಯಾಚರಣೆಯ ಆಯಿತು. ಆದರೆ ಫಲ ನೀಡಲಿಲ್ಲ. ಚೆನೈ ತಾಂಬರಂ ಏರ್ಫೋರ್ಸ್ ಸ್ಟೇಶನ್,ನಿಂದ ಜುಲೈ 2016 ರಿಂದ 22 08:30 ಸ್ಥಳೀಯ ಸಮಯದಲ್ಲಿ ಹೊರಟು, ಇದು ಸುಮಾರು 11:45 ಸ್ಥಳೀಯ ಸಮಯಕ್ಕೆ ಪೋರ್ಟ್ ಬ್ಲೇರ್ ನಲ್ಲಿ ಇಳಿಯುವ ನಿರೀಕ್ಷಿಸಲಾಗಿತ್ತು.
- ವಿಮಾನದಲ್ಲಿ ಇಪ್ಪತ್ತೊಂಬತ್ತು ಜನರು ವಿಮಾನ ಇದ್ದರು: ಆರು ಸಿಬ್ಬಂದಿ; ಹನ್ನೊಂದು ಭಾರತೀಯ ವಾಯುಪಡೆಯ ಸಿಬ್ಬಂದಿ; ಇಬ್ಬರು ಭಾರತೀಯ ಸೈನಿಕರು; ಒಬ್ಬ ಭಾರತೀಯ ನೌಕಾಬಲದವ ಹಾಗೂ ಒಬ್ಬ ಭಾರತೀಯ ಕರಾವಳಿ ರಕ್ಷಣಾ ಪಡೆಯವ; ಮತ್ತು ನೌಕಾ ಶಸ್ತ್ರಾಸ್ತ್ರ ಡಿಪೋ ಕೆಲಸ ಎಂಟು ರಕ್ಷಣಾ ನಾಗರಿಕರು [೧]
ಬ್ರೆಜಿಲ್ ವಿಮಾನ ಕೊಲಂಬಿಯಾದಲ್ಲಿ ಪತನ
[ಬದಲಾಯಿಸಿ]೨೯-೧೧-೨೦೧೬
- ಕೊಲಂಬಿಯಾದಿದ ಹೊರಟ ಬ್ರೆಜಿಲ್ ಫುಟ್ಬಾಲ್ ತಂಡ ಚಾಪಿಕೊಯೆನ್ಸ್ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಕೊಲಂಬಿಯಾದ ಲಾ ಯೂನಿಯನ್ ಎಂಬಲ್ಲಿ ಪತನವಾಗಿದೆ. 81 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಿಮಾನ ಮಂಗಳವಾರ ಕೊಲಂಬಿಯಾದಲ್ಲಿ ಪತನವಾಗಿರುವ ಬಗ್ಗೆ ಕೊಲಂಬಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ 9 ಸಿಬ್ಬಂದಿಗಳು ಇದ್ದರು ಎಂದು ಕೊಲಂಬಿಯಾದ ವಿಮಾನ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಈ ಅವಘಡದಲ್ಲಿ ಕನಿಷ್ಠ 76 ಮಂದಿ ಸಾವಿಗೀಡಾಗಿದ್ದು, 5 ಮಂದಿ ಬದುಕುಳಿದಿರುವ ಸಾಧ್ಯತೆ ಇದೆ ಎಂದು ಮೇಯರ್ ಫೆಡರಿಕೋ ಗುಟೆರೇಜ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಹೆಲಿಕಾಪ್ಟರ್, ರೆಡ್ ಕ್ರಾಸ್, ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ದಳದ ಕಾರ್ಯಕರ್ತರು ಶೋಧ ಕಾರ್ಯ ಮುಂದುವರಿಸಿದ್ದಾರೆ. ವಿಮಾನ ಸಂಪೂರ್ಣವಾಗಿ ಹಾನಿಯಾಗಿದ್ದು, ಮಂದ ಬೆಳಕಿನಿಂದಾಗಿ ರಕ್ಷಣಾ ಕಾರ್ಯಗಳಿಗೆ ಅಡಚಣೆಯುಂಟಾಗಿದೆ.[೨][೩]
ವಿವರ
[ಬದಲಾಯಿಸಿ]- ಕೊಲಂಬಿಯಾದ ಮೆಡೆಲಿನ್ ನಗರದ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಲಘು ವಿಮಾನ ಪತನಗೊಂಡು 76 ಜನ ಮೃತಪಟ್ಟಿದ್ದಾರೆ. ದಕ್ಷಿಣ ಬ್ರೆಜಿಲ್‌ನ ಮೊದಲ ಡಿವಿಷನ್ ಫುಟ್ಬಾಲ್ ತಂಡದ ಆಟಗಾ ರರೂ ಸೇರಿ 82 ಪ್ರಯಾಣಿಕರು ವಿಮಾನದಲ್ಲಿದ್ದರು. ವಿಮಾನ ಪತನಗೊಳ್ಳಲು ತಾಂತ್ರಿಕ ವೈಫಲ್ಯ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ದುರಂತ ಸಂಭವಿಸಿದ ಪ್ರದೇಶ ನಗರದ ಹೊರವಲಯದಲ್ಲಿದ್ದು, ಗುಡ್ಡಗಳಿಂದ ಆವೃತವಾಗಿದೆ ಎಂದೂ ಅವರು ತಿಳಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ತಕ್ಷಣವೇ ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿದೆ. ಆದರೆ, ಮಬ್ಬು ಕವಿದ ವಾತಾವರಣ ಇದ್ದ ಕಾರಣ ವಾಯುಪಡೆಯ ಹೆಲಿಕಾಪ್ಟರ್ ಆ ಪ್ರದೇಶಕ್ಕೆ ತೆರಳಲು ಸಾಧ್ಯವಾಗದೆ ವಾಪಸಾಯಿತು. ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿರುವುದೂ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ
- ಭಾರತೀಯ ಕಾಲಮಾನ ಬೆಳಿಗ್ಗೆ 8.30ಕ್ಕೆ (ಸ್ಥಳೀಯ ಕಾಲಮಾನ ಸೋಮ ವಾರ ರಾತ್ರಿ 10.30) ವಿಮಾನ ಅಪಘಾತಕ್ಕೀಡಾಗಿದೆ. ತಾಂತ್ರಿಕ ವೈಫಲ್ಯ ಪತನಗೊಳ್ಳಲು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫುಟ್ಬಾಲ್ ಕೊನೆಯ ಪಂದ್ಯವೊಂದರಲ್ಲಿ ಆಡಲು ಈ ಆಟಗಾರರು ವಿಮಾನದಲ್ಲಿ ಕೊಲಂಬಿಯಾಗೆ ತೆರಳುತ್ತಿದ್ದರು.
- ಬುಧವಾರದ ಪಂದ್ಯದಲ್ಲಿ ಆಡಲಿದ್ದರು: ದಕ್ಷಿಣ ಬ್ರೆಜಿಲ್‌ನ ಮೊದಲ ಡಿವಿಷನ್ ಫುಟ್ಬಾಲ್ ತಂಡದ ಆಟಗಾರರು ಬುಧವಾರ ನಡೆಯಲಿರುವ ಪಂದ್ಯದಲ್ಲಿ ಮೆಡಲಿನ್‌ನ ತಂಡದ ವಿರುದ್ಧ ಆಟವಾಡಲಿದ್ದರು.ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದಿದ್ದ ಪಂದ್ಯವೊಂದಕ್ಕೆ ಅರ್ಜೆಂಟೀನಾದ ರಾಷ್ಟ್ರೀಯ ತಂಡವನ್ನು ಇದೇ ವಿಮಾನವು ಕರೆದೊಯ್ದಿತ್ತು. ವೆನೆಜುವೆಲಾದ ರಾಷ್ಟ್ರೀಯ ಫುಟ್ಬಾಲ್ ತಂಡದ ಸದಸ್ಯರನ್ನೂ ಕರೆದೊಯ್ದಿತ್ತು ಎಂದು ಸ್ಥಳೀಯ ರೇಡಿಯೊ ವರದಿ ಮಾಡಿದೆ.
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/Colombia" does not exist.
- ಆರು ಪ್ರಯಾಣಿಕರ ರಕ್ಷಣೆ: ದುರಂತಕ್ಕೀಡಾದ ವಿಮಾನದಿಂದ ಆರು ಮಂದಿಯನ್ನು ರಕ್ಷಿಸಲಾಗಿದೆ. ಇವರಲ್ಲಿ ನಾಲ್ವರು ಫುಟ್ಬಾಲ್ ಆಟಗಾರರು ಎಂದು ಮೆಡಲಿನ್‌ನ ನೆರೆಯ ನಗರ ಲಾ ಸೆಜಾದ ಮೇಯರ್ ಎಲ್ಕಿನ್ ಒಸೊರಿಯೊ ತಿಳಿಸಿದ್ದಾರೆ.
ಮುಖ್ಯಾಂಶಗಳು
[ಬದಲಾಯಿಸಿ]- ಬ್ರೆಜಿಲ್‌ನ ಚಪೆಕೊದಿಂದ ಕೊಲಂಬಿಯಾಕ್ಕೆ ತೆರಳುತ್ತಿದ್ದ ವಿಮಾನ
- ಬದುಕುಳಿದ ನಾಲ್ವರು ಫುಟ್ಬಾಲ್ ಆಟಗಾರು
- ತಾಂತ್ರಿಕ ವೈಫಲ್ಯ ಪತನಕ್ಕೆ ಕಾರಣ
- ಅಂಕಿ ಅಂಶ
- 82 ವಿಮಾನದಲ್ಲಿದ್ದವರ ಸಂಖ್ಯೆ
- 76 ಮೃತಪಟ್ಟ ಪ್ರಯಾಣಿಕರು
- 6 ಮಂದಿ ಬದುಕುಳಿದವರು
ಪೋಟೋಗಳು
[ಬದಲಾಯಿಸಿ]
ಭಾರತದ ಹೆಲಿಕಾಪ್ಟರ್ ಪತನ
[ಬದಲಾಯಿಸಿ]- 30 ನವಂಬರ್, 2016
- ಇಂದು ಬೆಳಗ್ಗೆ 11.45ರ ವೇಳೆ ಪಶ್ಚಿಮ ಬಂಗಾಳದ ಸುಖ್ನಾ ಎಂಬಲ್ಲಿ ಸೇನಾಪಡೆಯ ಚೀತಾ ಹೆಲಿಕಾಪ್ಟರ್ ಪತನವಾಗಿದೆ. ಈ ದುರ್ಘಟನೆಯಲ್ಲಿ ಮೂವರು ಅಧಿಕಾರಿಗಳು ಸಾವಿಗೀಡಾಗಿದ್ದು, ಓರ್ವ ಅಧಿಕಾರಿ ಜೀವಾಪಾಯದಿಂದ ಪಾರಾಗಿದ್ದಾರೆ.ಇಂದು ಬೆಳಗ್ಗೆ 11.45ರ ವೇಳೆ ಪಶ್ಚಿಮ ಬಂಗಾಳದ ಸುಖ್ನಾ ಎಂಬಲ್ಲಿ ಸೇನಾಪಡೆಯ ಚೀತಾ ಹೆಲಿಕಾಪ್ಟರ್ ಪತನವಾಗಿದೆ. ಈ ದುರ್ಘಟನೆಯಲ್ಲಿ ಮೂವರು ಅಧಿಕಾರಿಗಳು ಸಾವಿಗೀಡಾಗಿದ್ದು, ಓರ್ವ ಅಧಿಕಾರಿ ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ. ಘಟನೆಯಲ್ಲಿ ಗಾಯಗೊಂಡಿರುವ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.[೫]
ಇಂಡೊನೇಷ್ಯಾ ವಿಮಾನ ಪತನ 12 ಸಾವು
[ಬದಲಾಯಿಸಿ]- 4 Dec, 2016
- ಇಂಡೋನೇಷ್ಯಾ ಪೊಲೀಸ್ ಇಲಾಖೆಗೆ ಸೇರಿದ ವಿಮಾನವೊಂದು ಇಲ್ಲಿನ ರಿಯಾವು ದ್ವೀಪದ ಸಮೀಪ ಶನಿವಾರ ಪತನಗೊಂಡು 12 ಮಂದಿ ಮೃತಪಟ್ಟಿದ್ದಾರೆ. ‘ಬಂಕಾ ದ್ವೀಪದ ಪ್ಯಾಂಗಲ್ ಪಿನಾಂಗ್‌ನಿಂದ ರಿಯಾವು ದ್ವೀಪದ ಬಟಂಗೆ ಹೊರಟಿದ್ದ ವಿಮಾನ ಸಾಗರದಲ್ಲಿ ಪತನಗೊಂಡಿದೆ. ವಿಮಾನ ಹಾರಾಟ ಆರಂಭಿಸಿದ 50 ನಿಮಿಷಗಳ ನಂತರ ಸಂಪರ್ಕ ಕಡಿದುಕೊಂಡಿತ್ತು.’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ವಿಮಾನ ಪತನಗೊಳ್ಳುವ ಮೊದಲು ಸ್ಫೋಟದ ಸದ್ದು ಕೇಳಿಸಿದೆ. ವಿಮಾನದ ಆಸನದ ಚೂರುಗಳು ಹಾಗೂ ಮೃತದೇಹದ ಅವಶೇಷಗಳು ಪತ್ತೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ’ ಎಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.[೬]
ಪಾಕ್ ವಿಮಾನ ಪತನ
[ಬದಲಾಯಿಸಿ]- 47 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ ಸಂಸ್ಥೆಯ (ಪಿಐಎ) ವಿಮಾನ ಬುಧವಾರ ಪತನವಾಗಿತ್ತು. ಚಿತ್ರಾಲ್‍ನಿಂದ ಸಂಜೆ 3.30ಕ್ಕೆ ಹೊರಟಿದ್ದ ಪಿಕೆ-661 ವಿಮಾನ ಟೇಕ್ ಆಫ್ ಆಗಿದ್ದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ಕಣ್ಮರೆಯಾಗಿತ್ತು. ವಿಮಾನದಲ್ಲಿ 5 ಮಂದಿ ವಿಮಾನ ಸಿಬ್ಬಂದಿಗಳು ಸೇರಿದಂತೆ 47 ಮಂದಿ ಇದ್ದರು ಎಂದು ವಿಮಾನ ಸಂಸ್ಥೆ ಹೇಳಿದೆ. ವಿಮಾನವು ಮಜಾಬ್ ಮತ್ತು ಪಿಪ್‍ಲಿಯಾನ್ ನಡುವೆ ಹವೇಲಿನ್ ಬಳಿ ಪತನಗೊಂಡಿದೆ ಎಂದು ಅಬೊಟಾಬಾದ್ ಡಿಪಿಒ ದೃಢೀಕರಿಸಿದೆ.[೭]
- ವಿಮಾನ ಮ್ಯಾನಿಫೆಸ್ಟ್ ಪ್ರಕಾರ ಬೋರ್ಡ್ ಮೇಲೆ 31 ಪುರುಷರು, ಒಂಬತ್ತು ಮಹಿಳೆಯರು, ಎರಡು ಶಿಶುಗಳು ಮತ್ತು ಐವರು ಸಿಬ್ಬಂದಿ ಇದ್ದರು.
- plane crash in Gug near Havelian,[[೧]]
- ‘ವಿಮಾನದಲ್ಲಿ 9 ಮಹಿಳೆಯರು, ಇಬ್ಬರು ಮಕ್ಕಳು, ಇಬ್ಬರು ಗಗನಸಖಿಯರು ಹಾಗೂ ಮೂವರು ಪೈಲಟ್‌ಗಳು ಸೇರಿ 48 ಮಂದಿ ಇದ್ದರು’ ಎಂದು ಅವರು ತಿಳಿಸಿದ್ದಾರೆ.ವಿಮಾನದಲ್ಲಿ ಪಾಕಿಸ್ತಾನದ ಗಾಯಕ, ಧರ್ಮ ಬೋಧಕ ಜುನೇದ್ ಜಂಶೇಡ್ ಹಾಗೂ ಅವರ ಪತ್ನಿ ಸಹ ಪ್ರಯಾಣಿಸುತ್ತಿದ್ದರು.[೮]
ರಷ್ಯಾ ಸೇನಾ ವಿಮಾನ ಪತನ
[ಬದಲಾಯಿಸಿ]- 26 Dec, 2016
- ಸಿರಿಯಾದ ಲಟಕಿಯಾ ನಗರಕ್ಕೆ ಹೊರಟಿದ್ದ ರಷ್ಯಾ ಸೇನಾ ವಿಮಾನ ಟಿ.ಯು–154 ಕಪ್ಪು ಸಮುದ್ರದಲ್ಲಿ ಭಾನುವಾರ ಪತನವಾಗಿತ್ತು. ವಿಮಾನ 8 ಸಿಬ್ಬಂದಿ ಸೇರಿ ಅದರಲ್ಲಿ 92 ಜನರಿದ್ದರು. ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ರಷ್ಯಾ ಘೋಷಿಸಿದೆ. ವಿಮಾನವು ಲಟಕಿಯಾದಲ್ಲಿರುವ ರಷ್ಯಾ ವಾಯುನೆಲೆಗೆ ತೆರಳುತ್ತಿತ್ತು. ರಷ್ಯಾ ಸೇನೆಯ ವಾದ್ಯವೃಂದದ 64 ಕಲಾವಿದರು, 10 ಮಂದಿ ಸೇನಾ ಅಧಿಕಾರಿಗಳು, ಒಂಬತ್ತು ಪತ್ರಕರ್ತರು ಮತ್ತು ಒಬ್ಬರು ಸಾಮಾಜಿಕ ಕಾರ್ಯಕರ್ತೆ ವಿಮಾನದಲ್ಲಿದ್ದರು. ಲಟಕಿಯಾ ವಾಯುನೆಲೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಅವರು ತೆರಳುತ್ತಿದ್ದರು.ಅಡ್ಲೆರ್ ನಗರದ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡು ಬೆಳಿಗ್ಗೆ 5.25ಕ್ಕೆ (ಸ್ಥಳೀಯ ಕಾಲಮಾನ) ವಿಮಾನ ಹಾರಾಟ ಆರಂಭಿಸಿತ್ತು. ಆದರೆ 5.27ಕ್ಕೆ ರೇಡಾರ್ ಸಂಪರ್ಕ ಕಳೆದುಕೊಂಡಿತು.
- ಈವರೆಗೆ ನಾಲ್ಕು ಶವಗಳನ್ನು ಪತ್ತೆ ಮಾಡಲಾಗಿದೆ. ಉಳಿದವರಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ನಡೆಸುತ್ತಿದ್ದಾರೆ. ಅಡ್ಲೆರ್ ನಗರದ ಸಮೀಪ ಇರುವ ಸೋಚಿ ನಗರದ ತೀರದಿಂದ 1.5 ಕಿ.ಮೀ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ.
- ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ದುರಂತದ ಬಗ್ಗೆ ಸಂತಾಪ ಸೂಚಿಸಿದ್ದಾರೆ.[೯]
ಕಿರ್ಗಿಸ್ತಾನದಲ್ಲಿ ವಿಮಾನ ಪತನ
[ಬದಲಾಯಿಸಿ]- 16 Jan, 2017
- ಕಿರ್ಗಿಸ್ತಾನದ ಮುಖ್ಯವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಕಾರ್ಗೊ ವಿಮಾನ ಸೋಮವಾರ ಬೆಳಿಗ್ಗೆ ದಟ್ಟ ಮಂಜಿನಿಂದಾಗಿ ಜನವಸತಿ ಪ್ರದೇಶದಲ್ಲಿ ಪತನವಾಗಿದ್ದು, ದುರ್ಘಟನೆಯಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ. ಟರ್ಕಿ ಏರ್‌ಲೈನ್‌ನ ಕಾರ್ಗೊ ವಿಮಾನ ಗ್ರಾಮವೊಂದರ ಜನವಸತಿಯ ಮನೆಗಳ ಬಳಿ ಬೆಳಿಗ್ಗೆ 7.30ಕ್ಕೆ ಪತನವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಕಾರ್ಗೊ ವಿಮಾನ ಇಸ್ತಾಂಬುಲ್‌ನಿಂದ ಕಿರ್ಗಿಸ್ತಾನದ ಮೂಲಕ ಹಾಂಕಾಂಗ್‌ಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಕಿರ್ಗಿಸ್ತಾನದ ಮುಖ್ಯ ವಿಮಾನನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ ದಟ್ಟ ಮಂಜಿನಿಂದಾಗಿ ಅಪಘಾತಕ್ಕೀಡಾಗಿದೆ. ನಾಲ್ವರು ವಿಮಾನ ಚಾಲಕರು ಸೇರಿದಂತೆ 32 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಕಿರ್ಗಿಸ್ತಾನದ ಹತ್ತಿರದ ಹಳ್ಳಿಯಮನೆಗಳ ಮೇಲೆ ಬಿದ್ದು 43 ಮನೆಗಳು ನಾಶವಾಗಿವೆ. ಕೆಲವು ಮನೆಯಲ್ಲಿದ್ದವರೆಲ್ಲಾ ಮಕ್ಕಳೂ ಸೇರಿ ಸತ್ತಿದ್ದಾರೆ. ಸಾವಿನಪ್ರಮಾಣ ಹೆಚ್ಚಾಗಬಹುದು. [೧೦]
ಕಣ್ಮರೆಯಾದ ಸೇನಾ ವಿಮಾನ
[ಬದಲಾಯಿಸಿ]- 8 Jun, 2017
- ಸೈನಿಕರು ಮತ್ತು ಅವರ ಕುಟುಂಬದವರು ಸೇರಿದಂತೆ 116 ಮಂದಿಯನ್ನು ಹೊತ್ತ ಮ್ಯಾನ್ಮಾರ್ ಸೇನಾ ವಿಮಾನದ ಅವಶೇಷ ಬುಧವಾರ ಸಂಜೆ ಅಂಡಮಾನ್ ಸಮುದ್ರದಲ್ಲಿ ಪತ್ತೆಯಾಗಿದೆ. ದವೇ ನಗರದಿಂದ 218 ಕಿಲೋ ಮೀಟರ್ ದೂರದಲ್ಲಿರುವ ಸಮುದ್ರದಲ್ಲಿ ವಿಮಾನದ ಬಿಡಿ ಭಾಗಗಳು ಸಿಕ್ಕಿವೆ ಮೈಯಿಕ್ ಹಾಗೂ ಯಾಂಗೂನ್ ನಡುವಿನ ಮಾರ್ಗದಲ್ಲಿ ಸಂಚರಿಸುವ ವೇಳೆ ಬುಧವಾರ ಮಧ್ಯಾಹ್ನ 1.35ರ ವೇಳೆ (ಯಾಂಗೂನ್ ಕಾಲಮಾನ) ವಿಮಾನದ ಸಂಪರ್ಕ ಕಡಿತಗೊಂಡಿತ್ತು. ವಿಮಾನದ ಹುಡುಕಾಟಕ್ಕೆ ನಾಲ್ಕು ನೌಕಾಪಡೆ ಹಡಗು ಮತ್ತು ಎರಡು ವಿಮಾನವನ್ನು ಕಳುಹಿಸಲಾಯಿತು. ವಿಮಾನ ಕಣ್ಮರೆಯಾಗುವ ಹೊತ್ತಿಗೆ ಮೈಯಿಕ್ ಮತ್ತು ಯಾಂಗೊನ್ ನಗರಗಳ ದಕ್ಷಿಣ ದಿಕ್ಕಿಗೆ 18ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ದವೆ, ಮ್ಯಾನ್ಮಾರ್‌ನ ವಾಣಿಜ್ಯ ರಾಜಧಾನಿಯಾಗಿದೆ. [೧೧]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ (NAD)Indian Air Force plane Antonov AN-32 still missing
- ↑ ಬ್ರೆಜಿಲ್ ಫುಟ್ಬಾಲ್ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಪತನ;ಪ್ರಜಾವಾಣಿ;29 Nov, 2016
- ↑ colombia-plane-crashes
- ↑ ಕೊಲಂಬಿಯಾ ವಿಮಾನ ಪತನ: 76 ಸಾವು;30 Nov, 2016
- ↑ ಹೆಲಿಕಾಪ್ಟರ್ ಪತನ
- ↑ "ಇಂಡೊನೇಷ್ಯಾ ವಿಮಾನ ಪತನ 12 ಸಾವು". Archived from the original on 2016-12-04. Retrieved 2016-12-04.
- ↑ ಪಿಕೆ-661 ವಿಮಾನ;47 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪಾಕ್ ವಿಮಾನ ಪತನ;ಪ್ರಜಾವಾಣಿ ವಾರ್ತೆ;7 Dec, 2016
- ↑ ಪಾಕ್ ವಿಮಾನ ಪತನ:48 ಮಂದಿ ಸಾವು?ಪಿಟಿಐ;8 Dec, 2016
- ↑ ರಷ್ಯಾ ಸೇನಾ ವಿಮಾನ ಪತನ: 92 ಜನರ ಸಾವು;26 Dec, 2016
- ↑ Kyrgyzstan: 32 killed as Turkish plane crashes into homes in thick fog;WORLD Updated: Jan 16, 2017
- ↑ "ಮಹಿಳೆಯರು ಸೇರಿ 116 ಮಂದಿ ಇದ್ದ ವಿಮಾನ;ಕಣ್ಮರೆಯಾದ ಸೇನಾ ವಿಮಾನ ಸಮುದ್ರದಲ್ಲಿ ಅವಶೇಷ ಪತ್ತೆ;ಏಜೆನ್ಸಿಸ್;8 Jun, 2017". Archived from the original on 2017-06-07. Retrieved 2017-06-08.