ವಿಷಯಕ್ಕೆ ಹೋಗು

ಕೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೈಯು ಮಾನವರು, ಚಿಂಪಾಂಜ಼ಿಗಳು, ಕೋತಿಗಳು ಮತ್ತು ಲೀಮರ್‌ಗಳಂತಹ ಪ್ರೈಮೇಟ್‍ಗಳ ಮುಂದೋಳು ಅಥವಾ ಮುಂದಿನ ಅವಯವದ ಕೊನೆಯಲ್ಲಿ ಹಿಡಿಯುವ ಶಕ್ತಿಯುಳ್ಳ, ಬಹು ಬೆರಳುಗಳನ್ನು ಹೊಂದಿರುವ ಒಂದು ಜೋಡಿಕೆ. ಮಾನವ ಕೈಯು ಸಾಮಾನ್ಯವಾಗಿ ಐದು ಬೆಟ್ಟುಗಳನ್ನು ಹೊಂದಿರುತ್ತದೆ: ನಾಲ್ಕು ಬೆರಳುಗಳು ಮತ್ತು ಒಂದು ಹೆಬ್ಬೆರಳು;[] ಕೈಯು ೨೭ ಮೂಳೆಗಳನ್ನು ಹೊಂದಿರುತ್ತದೆ, ತಿಲಾಸ್ಥಿಯನ್ನು ಹೊರತುಪಡಿಸಿ. ಇವುಗಳ ಸಂಖ್ಯೆಯು ಜನರ ನಡುವೆ ಬದಲಾಗುತ್ತದೆ, ಮತ್ತು ಇವುಗಳಲ್ಲಿ ೧೪ ಬೆರೆಳೆಲುಬುಗಳಾಗಿವೆ (ಸಮೀಪದ, ಮಧ್ಯದ ಮತ್ತು ದೂರದ). ಹಸ್ತ ಮಧ್ಯದ ಮೂಳೆಗಳು ಬೆರಳುಗಳನ್ನು ಮತ್ತು ಮಣಿಕಟ್ಟಿನ ಮೂಳೆಗಳನ್ನು ಜೋಡಿಸುತ್ತವೆ. ಪ್ರತಿ ಮಾನವ ಕೈಯು ಐದು ಹಸ್ತ ಮಧ್ಯದ ಮೂಳೆಗಳು ಮತ್ತು ಎಂಟು ಮಣಿಕಟ್ಟಿನ ಮೂಳೆಗಳನ್ನು ಹೊಂದಿರುತ್ತದೆ.

ಬೆರಳುಗಳು ಶರೀರದಲ್ಲಿನ ನರ ತುದಿಗಳ ಅತಿ ದಟ್ಟ ಪ್ರದೇಶಗಳಲ್ಲಿ ಕೆಲವನ್ನು ಹೊಂದಿರುತ್ತವೆ, ಮತ್ತು ಸ್ಪರ್ಶ ಪ್ರತಿಕ್ರಿಯೆಯ ಅತ್ಯಂತ ಶ್ರೀಮಂತ ಮೂಲವಾಗಿವೆ. ಇವು ಶರೀರದ ಅತ್ಯಂತ ಹೆಚ್ಚಿನ ಸ್ಥಾನಿಕ ಸಾಮರ್ಥ್ಯವನ್ನು ಹೊಂದಿವೆ; ಹಾಗಾಗಿ, ಸ್ಪರ್ಶದ ಭಾವವು ಕೈಗಳೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಇತರ ಜೊತೆ ಅಂಗಗಳಂತೆ (ಕಣ್ಣುಗಳು, ಪಾದಗಳು, ಕಾಲುಗಳು) ಪ್ರತಿ ಕೈಯನ್ನು ವಿರುದ್ಧ ಮೆದುಳು ಗೋಳಾರ್ಧವು ನಿಯಂತ್ರಿಸುತ್ತದೆ, ಹಾಗಾಗಿ ಪೆನ್ಸಿಲ್‍ನಿಂದ ಬರೆಯುವಂತಹ ಒಂದೇ ಕೈಯ ಚಟುವಟಿಕೆಗಳಿಗೆ ಆದ್ಯತೆಯ ಕೈಯ ಆಯ್ಕೆಯು ವೈಯಕ್ತಿಕ ಮಿದುಳಿನ ಕಾರ್ಯನಿರ್ವಹಣೆಯನ್ನು ಪ್ರತಿಬಿಂಬಿಸುತ್ತದೆ. ಮಾನವರಲ್ಲಿ, ಕೈಗಳು ಶಾರೀರಿಕ ಹಾವಭಾವ ಮತ್ತು ಸನ್ನೆ ಭಾಷೆಯಲ್ಲಿ ಮಹತ್ವದ ಕಾರ್ಯನಿರ್ವಹಿಸುತ್ತವೆ. ಅದೇ ರೀತಿ ಎರಡು ಕೈಗಳ ಹತ್ತು ಬೆರಳುಗಳು ಮತ್ತು (ಹೆಬ್ಬೆರಳಿನಿಂದ ಮುಟ್ಟಬಹುದಾದಂಥ) ನಾಲ್ಕು ಬೆರಳುಗಳ ಹನ್ನೆರಡು ಅಂಗುಲ್ಯಸ್ಥಿಗಳು ಸಂಖ್ಯಾ ವ್ಯವಸ್ಥೆಗಳು ಮತ್ತು ಗಣನಾ ತಂತ್ರಗಳಿಗೆ ಜನ್ಮ ನೀಡಿವೆ.

ಕೈಯ ಮುಂಭಾಗದ (ಅಂಗೈ) ಮೇಲಿನ ಕೇಶರಹಿತ ಚರ್ಮವು ತುಲನಾತ್ಮಕವಾಗಿ ದಪ್ಪವಾಗಿದ್ದು ಇದನ್ನು ಕೈಯ ಬಾಗುವಿಕೆ ರೇಖೆಗಳ ಉದ್ದಕ್ಕೆ ಬಾಗಿಸಬಹುದು. ಇಲ್ಲಿ ಚರ್ಮವು ಕೆಳಗಿನ ಅಂಗಾಂಶ ಮತ್ತು ಮೂಳೆಗಳಿಗೆ ಬಿಗಿಯಾಗಿ ಬಂಧಿತವಾಗಿರುತ್ತದೆ. ಶರೀರದ ಉಳಿದ ಭಾಗದ ಚರ್ಮಕ್ಕೆ ಹೋಲಿಸಿದರೆ, ಕೈಗಳ ಅಂ‍ಗೈಗಳು (ಜೊತೆಗೆ ಪಾದಗಳ ಅಂಗಾಲುಗಳು) ಕೈಯ ಇನ್ನೊಂದು ಬದಿಗೆ ಹೋಲಿಸಿದರೆ ಸಾಮಾನ್ಯವಾಗಿ ಹೆಚ್ಚು ತಿಳಿಯಾಗಿರುತ್ತವೆ ಮತ್ತು ಕಪ್ಪು ಚರ್ಮದ ವ್ಯಕ್ತಿಗಳಲ್ಲಿ ಇನ್ನೂ ಹೆಚ್ಚು ತಿಳಿಯಾಗಿರುತ್ತವೆ. ವಾಸ್ತವವಾಗಿ, ಪಾಮೊಪ್ಲ್ಯಾಂಟಾರ್ ಚರ್ಮದಲ್ಲಿ ನಿರ್ದಿಷ್ಟವಾಗಿ ವ್ಯಕ್ತಗೊಂಡ ಜೀನ್‍ಗಳು ಮೆಲನಿನ್ ಉತ್ಪತ್ತಿಯನ್ನು ತಡೆಯುತ್ತವೆ ಮತ್ತು ಹಾಗಾಗಿ ಕಂದಿಸುವ ಸಾಮರ್ಥ್ಯವನ್ನು ತಡೆಯುತ್ತದೆ, ಮತ್ತು ಹೊರಚರ್ಮದ ಸ್ಟ್ರ್ಯಾಟಮ್ ಲೂಸಿಡಮ್ ಮತ್ತು ಸ್ಟ್ರ್ಯಾಟಮ್ ಕಾರ್ನಿಯಮ್ ಪದರಗಳ ದಪ್ಪವಾಗುವಿಕೆಯನ್ನು ಉತ್ತೇಜಿಸುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Tracy L. Kivell; Pierre Lemelin; Brian G. Richmond; Daniel Schmitt (10 August 2016). The Evolution of the Primate Hand: Anatomical, Developmental, Functional, and Paleontological Evidence. Springer. pp. 7–. ISBN 978-1-4939-3646-5.
"https://kn.wikipedia.org/w/index.php?title=ಕೈ&oldid=873943" ಇಂದ ಪಡೆಯಲ್ಪಟ್ಟಿದೆ