ಹೆಬ್ಬೆರಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Duim.jpg

ಹೆಬ್ಬೆರಳು ಕೈಯ ಮೊದಲ ಬೆರಳು. ಒಬ್ಬ ವ್ಯಕ್ತಿಯು ವೈದ್ಯಕೀಯ ಅಂಗರಚನಾಶಾಸ್ತ್ರೀಯ ಸ್ಥಾನದಲ್ಲಿ ನಿಂತುಕೊಂಡಾಗ (ಅಂಗೈಯು ಮುಂಭಾಗಕ್ಕೆ ಮುಖಮಾಡಿರುವಾಗ), ಹೆಬ್ಬೆರಳು ಅತ್ಯಂತ ಹೊರಗಿನ ಬೆರಳು. ಮಾನವರಲ್ಲಿ, ಇತರ ಬೆರಳುಗಳು ಮೂರು ಅಂಗುಲ್ಯಸ್ಥಿಗಳನ್ನು (ಫ಼ೇಲ್ಯಾಂಕ್ಸ್) ಹೊಂದಿದ್ದರೆ ಹೆಬ್ಬೆರಳು ಎರಡು ಅಂಗುಲ್ಯಸ್ಥಿಗಳನ್ನು ಹೊಂದಿದೆ.