ವಿಷಯಕ್ಕೆ ಹೋಗು

ಜಾಹೀರಾತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಮಾರು ೧೮೯೦ರ ಒಂದು ಕೋಕೊ ಕೊಲ ಜಾಹೀರಾತು
ಟೋಕ್ಯೊದ ಬೀದಿಯಲ್ಲಿ ಜಾಹೀರಾತು ಫಲಕಗಳು
ಜಪಾನ್ ದೇಶದಲ್ಲಿ ೧೮೦೬ರಲ್ಲಿ ಪ್ರಕಟವಾದ ಜೌಷಧಿಯೊಂದನ್ನು ಮಾರುವ ಜಾಹೀರಾತು

ಜಾಹೀರಾತು ಎಂದರೆ ಯಾವುದೇ ಸಾಧನ ಅಥವಾ ಪ್ರಾತಿನಿಧ್ಯವನ್ನು ಯಾವುದೇ ರೀತಿಯಲ್ಲಿ ಘೋಷಣೆ, ಪದ, ಅಕ್ಷರ, ಮಾದರಿ, ಚಿತ್ರ, ನಿರ್ದೇಶನ ಅಥವಾ ಸಂಯೋಜನೆಯ ಮೂಲಕ ಪೋಸ್ಟರ್, ಹೋರ್ಡಿಂಗ್, ಬ್ಯಾನರ್‌ಗಳು, ತಾತ್ಕಾಲಿಕ ಕಮಾನುಗಳು, ಎಲೆಕ್ಟ್ರಾನಿಕ್ ಪ್ರದರ್ಶನ, ಹೆಸರು ಫಲಕಗಳು, ನಿರ್ದೇಶನ ಫಲಕಗಳು, ಆಕಾಶಬುಟ್ಟಿಗಳು ಅಥವಾ ಯಾವುದೇ ಇತರ ದೃಶ್ಯ ಅಥವಾ ಶ್ರವ್ಯ ಮಾಧ್ಯಮ ಇತ್ಯಾದಿಗಳನ್ನು ವಾಣಿಜ್ಯ ಅರ್ಥದಲ್ಲಿ ಉತ್ಪನ್ನ ಅಥವಾ ಸೇವೆಯನ್ನು ಉತ್ತೇಜಿಸಲು ಪ್ರದರ್ಶಿಸಲಾಗುತ್ತದೆ

ಜಾಹೀರಾತು ವಿಶಿಷ್ಟವಾಗಿ ಸಂಭಾವ್ಯ ಗ್ರಾಹಕರನ್ನು ಖರೀದಿ ಮಾಡುವಂತೆ ಅಥವಾ ಒಂದು ನಿರ್ದಿಷ್ಟ ಗುರುತಿನ ಉತ್ಪನ್ನ ಅಥವಾ ಸೇವೆಯನ್ನು ಹೆಚ್ಚು ಬಳಸುವಂತೆ ಒಲಿಸಲು ಪ್ರಯತ್ನಿಸುವ ಒಂದು ಪ್ರಸಾರ ಸಾಧನ. ಬಹಳ ಜಾಹೀ ರಾತುಗಳು "ಗುರುತಿನ ಪ್ರತಿ ಅಭಿಪ್ರಾಯ" (ಬ್ರ್ಯಾಂಡ್ ಇಮೇಜ್) ಮತ್ತು "ಗುರುತಿನ ಪ್ರತಿ ನಿಷ್ಠೆ"ಯ (ಬ್ರ್ಯಾಂಡ್ ಲಾಯಲ್ಟಿ) ನಿರ್ಮಾಣ ಮತ್ತು ಬಲವರ್ಧನೆ ಮೂಲಕ ಆ ಉತ್ಪನ್ನಗಳ ಮತ್ತು ಸೇವೆಗಳ ಬಳಕೆ ಹೆಚ್ಚಾಗುವಂತೆ ರೂಪಿಸಲ್ಪಡುತ್ತವೆ. ಈ ಉದ್ದೇಶಗಳಿಗಾಗಿ, ಜಾಹೀರಾತು ಗಳು ಕೆಲವು ಸಲ ವಾಸ್ತವವಾದ ಮಾಹಿತಿಯ ಜೊತೆಗೆ ತಮ್ಮ ಪ್ರೇರಿಸುವ ಸಂದೇಶವನ್ನು ಹುದುಗಿಸುತ್ತವೆ. ದೂರದರ್ಶನ, ರೇಡಿಯೋ, ಚಲನಚಿತ್ರ, ಪತ್ರಿಕೆಗಳು, ವೀಡಿಯೋ ಗೇಮ್ಸ್, ಅಂತರಜಾಲ ಜಾಹೀರಾತು ಮತ್ತು ಜಾಹೀ ರಾತು ಫಲಕ ಸಹಿತ ಪ್ರತಿಯೊಂದು ಪ್ರಮುಖ ಮಾಧ್ಯಮ ಈ ಸಂದೇಶಗಳನ್ನು ತಲುಪಿಸಲು ಉಪಯೋಗಿಸಲ್ಪಡುತ್ತದೆ. ಅನೇಕ ಸಲ, ಒಂದು ಕಂಪನಿ ಅಥವಾ ಇತರ ಸಂಸ್ಥೆಯ ಪರವಾಗಿ ಒಂದು ಜಾಹೀರಾತು ಸಂಸ್ಥೆ ಜಾಹೀರಾತುಗಳನ್ನು ಇರಿಸುತ್ತದೆ.

ಜಾಹೀರಾತಿನ ಇತಿವೃತ್ತ

[ಬದಲಾಯಿಸಿ]
  • ಜಾಹೀರಾತುಗಳು ಅಂಗಡಿಯ ಕೈಬಂಡಿಗಳ ಕುರ್ಚಿಗಳ ಮೇಲೆ, ವಿಮಾನ ನಿಲ್ದಾಣದ ನಡಿಗೆ ಮಾರ್ಗಗಳ ಗೋಡೆಗಳ ಮೇಲೆ, ಬಸ್ಸುಗಳ ಪಾರ್ಶ್ವಗಳ ಮೇಲೆ ಕಾಣಿಸುತ್ತವೆ, ಮತ್ತು ದೂರವಾಣಿಯಲ್ಲಿ ಉಳಿಸಿದ ಸಂದೇಶಗಳಲ್ಲಿ ಮತ್ತು ಅಂಗಡಿಗಳಲ್ಲಿನ ಸಾರ್ವಜನಿಕ ಸಂಬೋಧನಾ ವ್ಯವಸ್ಥೆಗಳಲ್ಲಿ ಕೇಳಿಸುತ್ತವೆ. ಜಾಹೀರಾತುಗಳು ಅನೇಕ ಬಾರಿ ಪ್ರೇಕ್ಷಕರು, ಶ್ರೋತೃಗಳು ಸುಲಭವಾಗಿ ಅಥವಾ ಮೇಲಿಂದ ಮೇಲೆ ದೃಶ್ಯ, ಶ್ರವ್ಯ ಮತ್ತು ಮುದ್ರಿತ ಮಾಹಿತಿ ಪಡೆಯಬಹುದಾದಂಥ ಎಲ್ಲ ಕಡೆ ಇಡಲ್ಪಡುತ್ತವೆ. ಖಚಿತವಾಗಿ ಹೇಳುವುದಾದರೆ, ರಾಜಕೀಯ ಪಕ್ಷಗಳು, ಹಿತಾಸಕ್ತಿ ಗುಂಪುಗಳು, ಧಾರ್ಮಿಕ ಸಂಸ್ಥೆಗಳು, ಮತ್ತು ಸೈನಿಕ ಆಯ್ಕೆಗಾರರು ಮತ್ತು ಇಂತಹ ಇತರ ಸಂಸ್ಥೆಗಳು, ಒಂದು ಉತ್ಪನ್ನ ಅಥವಾ ಸೇವೆಯನ್ನು ವ್ಯಾಪಾರ ಮಾಡದಿದ್ದರೂ ಜಾಹೀರಾತು ಮಾಡಲು ಬೃಹತ್ಪ್ರಮಾಣದ ಹಣವನ್ನು ವ್ಯಯಿಸು ತ್ತವೆ.
  • ನಿರ್ಲಾಭ ಸಂಸ್ಥೆಗಳು ವಿಶಿಷ್ಟವಾಗಿ ಜಾಹೀರಾತು ಗಿರಾಕಿಗಳಲ್ಲ ಮತ್ತು ಸಾರ್ವಜನಿಕ ಸೇವಾ ಪ್ರಕಟಣೆಗಳಂಥ ಒಲಿಸುವಿಕೆಯ ಮುಕ್ತ ಬಳಕೆಗಳ ಮೇಲೆ ಅವಲಂಬಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಜಾಹೀರಾತು ಮಾಡಲು ಆಗುವ ವೆಚ್ಚ ಅನಿರೀಕ್ಷಿತವಾಗಿ ವರ್ಧಿಸಿ ದೆ. ೨೦೦೬ರಲ್ಲಿ, ಜಾಹೀರಾತು ಮೇಲಿನ ವೆಚ್ಚ ಅಮೇರಿಕಾದಲ್ಲಿ ೧೫೫ ಶತಕೋಟಿ ಡಾಲರ್ ಎಂದು[] ಮತ್ತು ವಿಶ್ವದಾದ್ಯಂತ ೩೮೫ ಶತಕೋಟಿ ಡಾಲರ್ ಎಂದು [] ಅಂದಾಜಿಸಲಾಗಿದೆ ಮತ್ತು ಈ ಪ್ರಮಾಣ ೨೦೧೦ರೊಳಗೆ ೫೦೦ ಶತಕೋಟಿ ಡಾಲರ್ ಮೀರುತ್ತದೆ ಎಂದು ಅಂದಾಜಿಸಲಾಗಿದೆ.
  • ಜಾಹೀರಾತು ಆರ್ಥಿಕ ಪ್ರಗತಿಗೆ ಅನಿವಾರ್ಯವೆಂದು ತೋರಬಹುದಾದರೂ, ಇದು ಸಾಮಾಜಿಕ ಹಾನಿಗಳಿಲ್ಲದೆ ಇಲ್ಲ. ಅನಪೇಕ್ಷಿತ ಇ-ಅಂಚೆ (ಸ್ಪ್ಯಾಮ್) ಬಹಳ ಪ್ರಚಲಿತವಾಗಿ ಈ ಸೇವೆಗಳನ್ನು ಬಳಸುವವರಿಗೆ ಒಂದು ಪ್ರಮುಖ ಪೀಡೆಯಾಗಿದೆ ಮತ್ತು, ಅಂತರಜಾಲ ಸೇವಾ ಪ್ರಬಂಧಕರ ಮೇಲೆ ಕೂಡ ಒಂದು ಆರ್ಥಿಕ ಹೊರೆಯಾಗಿದೆ[].
  • ಜಾಹೀರಾತು, ಶಾಲೆಗಳಂತಹ ಸಾರ್ವಜನಿಕ ಪ್ರದೇಶಗಳನ್ನು ಹೆಚ್ಚೆಚ್ಚು ಅತಿಕ್ರಮಿಸುತ್ತಿದ್ದು, ಕೆಲವು ವಿಚಾರಕರು ಇದನ್ನು ಒಂದು ವಿಧದ ಮಕ್ಕಳ ಶೋಷಣೆಯೆಂದು ಪ್ರತಿಪಾದಿಸುತ್ತಾರೆ[][].

ಇತಿಹಾಸ

[ಬದಲಾಯಿಸಿ]
  • ಪುರಾತನ ಈಜಿಪ್ಟ್ ನವರು ಮಾರಾಟ ಸಂದೇಶಗಳು ಮತ್ತು ಭಿತ್ತಿಚಿತ್ರಗಳನ್ನು ಸೃಷ್ಟಿಸಲು ಜಂಬು ಕಾಗದವನ್ನು (ಪಪಾಯ್ರಸ್) ಬಳಸುತ್ತಿದ್ದರು. ಪಾಂಪೇ ಮತ್ತು ಪ್ರಾಚೀನ ಅರೇಬಿಯಾದ ಅವಶೇಷಗಳಲ್ಲಿ ವಾಣಿಜ್ಯ ಸಂದೇಶಗಳು ಮತ್ತು ರಾಜಕೀಯ ಪ್ರಚಾರ ಪ್ರದರ್ಶನಗಳು ದೊರೆತಿವೆ. ಜಂಬು ಕಾಗದದ ಮೇಲೆ "ಕಳೆದುಹೋದ ಮತ್ತು ಸಿಕ್ಕಿದ" (ಲಾಸ್ಟ್ ಆಂಡ್ ಫೌಂಡ್) ಜಾಹೀರಾತು ಪ್ರಾಚೀನ ಗ್ರೀಸ್ ಮತ್ತು ಪ್ರಾಚೀನ ರೋಮ್‌ನಲ್ಲಿ ಸಾಮಾನ್ಯವಾಗಿತ್ತು. ವಾಣಿಜ್ಯ ಜಾಹೀರಾತಿಗಾಗಿ ಗೋಡೆ ಅಥವಾ ಶಿಲಾ ವರ್ಣಚಿತ್ರಗಳು, ಒಂದು ಪ್ರಾಚೀನ ಜಾಹೀರಾತು ಪ್ರಕಾರದ ಮತ್ತೊಂದು ಅಭಿವ್ಯಕ್ತಿಯಾಗಿದೆ ಮತ್ತು ಇದು ಈ ದಿನಗಳಲ್ಲೂ ಏಷ್ಯಾ, ಆಫ್ರಿಕಾ, ಮತ್ತು ದಕ್ಷಿಣ ಅಮೇರಿಕಾದ ಹಲವು ಭಾಗಗಳಲ್ಲಿ ಪ್ರಸ್ತುತವಾಗಿದೆ.
  • ಭಿತ್ತಿಚಿತ್ರಗಳ ಪರಂಪರೆಯನ್ನು ಕ್ರಿ.ಪೂ. ೪೦೦೦ ರಷ್ಟು ಪ್ರಾಚೀನವೆಂದು ನಿರ್ಧರಿಸಲಾಗಿರುವ ಭಾರತೀಯ ಶಿಲಾ ಕಲೆಯ ವರ್ಣಚಿತ್ರಗಳ ಕಾಲದಿಂದ ಗುರುತಿಸಬಹುದು[]. ಕೋಟೆ ಮತ್ತು ರೈತರ ಆ ಹಳೆಯ ದಿನಗಳಲ್ಲಿ, ಉಪನಗರ ಮತ್ತು ನಗರಗಳು ಆಗತಾನೇ ಯೂರಪ್‌ನ ಆದ್ಯಂತ ಬೆಳೆಯಲು ಶುರುವಾಗಿದ್ದವು. ಉಪನಗರದ ಕೆಲವೇ ಜನ ಓದಲು ಬಲ್ಲವರಾಗಿದ್ದರಿಂದ, ಚಮ್ಮಾರ, ಅಥವಾ ಗಿರಣಿಗಾರ, ಅಥವಾ ದರ್ಜಿ, ಅಥವಾ ಕಮ್ಮಾರ ಎಂದು ತಿಳಿಸುವ ಬೀದಿಯ ಮೇಲಿನ ಚಿಹ್ನೆಗಳಲ್ಲಿ ಶಬ್ದಗಳ ಬದಲಾಗಿ ಬೂಟಿನ ಆಕಾರ, ಒಂದು ಉಡುಗೆ, ಒಂದು ಟೋಪಿ, ಒಂದು ಗಡಿಯಾರ, ಇತ್ಯಾದಿ ಚಿತ್ರ ಕೂಡ ಚಿಹ್ನೆಗಳಾಗುತ್ತಿದ್ದವು. *ಹಣ್ಣು ಮತ್ತು ತರಕಾರಿ, ನಗರದ ಚೌಕದಲ್ಲಿ ಬಂಡಿಗಳ ಹಿಂದುಗಡೆ ಮಾರಾಟವಾಗುತ್ತಿದ್ದವು, ಮತ್ತು ಅವುಗಳ ಮಾಲೀಕರು ಬಂಡಿಗಳು ನಿಲ್ಲಿಸಿದ ಸ್ಥಳಗಳನ್ನು ತಿಳಿಸಲು ಜೋರಾಗಿ ಕೂಗಿ ಹೇಳಲು ಬೀದಿ ಕರೆಯಾಳುಗಳನ್ನು ಉಪಯೋಗಿಸುತ್ತಿದ್ದರು ಮತ್ತು ಇದರಿಂದ ವಿನಿಮಯಮಾಡುವ ಖಾಯಂ ಗಿರಾಕಿಗಳು ಸ್ಥಳ ಕಂಡುಕೊಳ್ಳುತ್ತಿದ್ದರು. ಮಾಲೀಕರು ಯಾವಾಗಲೂ ಚೌಕದ ಬೇರೆ ಬೇರೆ ನೆಲೆಗಳಲ್ಲಿ ವ್ಯಾಪಾರ ಮಾಡುತ್ತಿದ್ದರಿಂದ, ಈ ರೀತಿಯು ಸುಲಭವಾಗಿತ್ತು. ಇಂದಿಗೂ ಕೂಡ ಬೀದಿ ಕರೆಯಾಳುಗಳು ಪ್ರಪಂಚದಾದ್ಯಂತ ಕಿಕ್ಕಿರಿದ ಬೀದಿಗಳಲ್ಲಿ ಕೆಲಸಮಾಡುತ್ತಾರೆ. ಶಿಕ್ಷಣ ಮತ್ತು ಓದುವುದು ಒಂದು ಸ್ಪಷ್ಟ ಆವಶ್ಯಕತೆಯಾದಾಗ, ಮುದ್ರಣ ಬೆಳೆಯಿತು.
  • ೧೫ನೇ ಮತ್ತು ೧೬ನೇ ಶತಮಾನದಲ್ಲಿ, ಕರಪತ್ರಗಳನ್ನು ಅಂತರ್ಗತಗೊಳಿಸಿಕೊಂಡು ಜಾಹೀರಾತು ವಿಸ್ತರಿಸಿತು. ೧೭ನೇ ಶತಮಾನದಲ್ಲಿ, ಇಂಗ್ಲಂಡ್‍‍‍ನಲ್ಲಿ ಜಾಹೀರಾತುಗಳು ಸಾಪ್ತಾಹಿಕ ವರ್ತಮಾನ ಪತ್ರಿಕೆಗಳಲ್ಲಿ ಕಾಣಲು ಆರಂಭಿಸಿದವು. ಮೊದಲಿನ ಈ ಮುದ್ರಿತ ಜಾಹೀರಾತುಗಳು ಮುಖ್ಯವಾಗಿ ಪುಸ್ತಕ ಮತ್ತು ವೃತ್ತಪತ್ರಿಕೆಗಳನ್ನು (ಮುದ್ರಣಾಲಯದಲ್ಲಿನ ಪ್ರಗತಿಗಳಿಂದ ಹೆಚ್ಚು ಕೈಗೆಟಕುವ ಬೆಲೆಗಳಿಗೆ ಸಿಗತೊಡಗಿದವು), ಮತ್ತು, ರೋಗಗಳು ಯೂರೋಪನ್ನು ನಾಶಮಾಡತೊಡಗಿದಾಗ ಹೆಚ್ಚು ಬೇಡಿಕೆಯಾಗಿದ್ದರಿಂದ, ಔಷಧಿಗಳನ್ನು ಬೆಂಬಲಿಸಲು ಬಳಸಲ್ಪಡುತ್ತಿದ್ದವು. ಆದರೆ, ಸುಳ್ಳು ಜಾಹೀರಾತುಗಳು ಮತ್ತು ಕಪಟವೈದ್ಯ ಚಿಕಿತ್ಸೆ ಜಾಹೀರಾತುಗಳು ಒಂದು ಸಮಸ್ಯೆಯಾದವು ಮತ್ತು ಇದರಿಂದ ಜಾಹೀರಾತು ವಿಷಯಗಳ ನಿಯಂತ್ರಣವು ಆರಂಭವಾಯಿತು.
  • ೧೯ನೇ ಶತಮಾನದ ಅವಧಿಯಲ್ಲಿ ಆರ್ಥಿಕ ವ್ಯವಸ್ಥೆಯು ವಿಸ್ತಾರವಾಗತೊಡಗಿದಂತೆ, ಜಾಹೀರಾತು ಜೊತೆಜೊತೆಗೆ ಬೆಳೆಯಿತು. ಅಮೇರಿಕಾದಲ್ಲಿ, ಈ ಜಾಹೀರಾತು ವಿಧಾನದ ಯಶಸ್ಸು ಅಂತಿಮವಾಗಿ ಅಂಚೆ-ವ್ಯವಸ್ಥೆಯ ಜಾಹೀರಾತು ಬೆಳೆಯಲು ದಾರಿತೋರಿತು. ಜೂನ್ ೧೮೩೬ರಲ್ಲಿ, ಫ್ರಾನ್ಸ್‍‍‍‍ನ ಲಾ ಪ್ರೆಸ್ ಅದರ ಪುಟಗಳಲ್ಲಿ ಪಾವತಿ ಜಾಹೀರಾತುಗಳನ್ನು ಒಳಗೊಂಡ ಮೊದಲನೇಯ ವೃತ್ತಪತ್ರಿಕೆಯಾಯಿತು ಮತ್ತು ಇದರಿಂದ ಅದು ತನ್ನ ಬೆಲೆ ಇಳಿಸಲು, ತನ್ನ ವಾಚಕವೃಂದ ಹೆಚ್ಚಿಸಲು ಮತ್ತು ತನ್ನ ಲಾಭದಾಯಕತೆ ಹೆಚ್ಚಿಸಲು ಅವಕಾಶವಾಯಿತು. ಈ ಸೂತ್ರ ಶೀಘ್ರವಾಗಿ ಎಲ್ಲ ಶೀರ್ಷಿಕೆಗಳಿಂದ ನಕಲು ಮಾಡಲಾಯಿತು.
  • ೧೮೪೦ರ ಸರಿಸುಮಾರು, ಬಾಸ್ಟನ್‌ನಲ್ಲಿ ವಾಲ್ನಿ ಪಾಮರ್, ಜಾಹೀರಾತು ಸಂಸ್ಥೆಗಳ ಒಂದು ಪೂರ್ವವರ್ತಿಯನ್ನು ಸ್ಥಾಪಿಸಿದನು[]. ಅದೇ ಕಾಲದ ಸರಿಸುಮಾರು, ಫ್ರಾನ್ಸ್‌ನಲ್ಲಿ, ಚಾರ್ಲ್ಸ್-ಲೂಯಿ ಹವಸ್, ಜಾಹೀರಾತು ದಲಾಲಿಯನ್ನು ಸೇರಿಸಿಕೊಂಡು ತನ್ನ ವಾರ್ತಾ ಸಂಸ್ಥೆ ಹವಸ್‌ನ ಸೇವೆಗಳನ್ನು ವಿಸ್ತರಿಸಿ ಅದನ್ನು ಫ್ರಾನ್ಸ್‌ನ ಮೊದಲ ಸಂಯೋಜಿಸಲ್ಪಟ್ಟ ಗುಂಪಾಗಿ ಮಾಡಿದನು. ಮೊದಲು, ದಳ್ಳಾಳಿ ಸಂಸ್ಥೆಗಳು ವೃತ್ತಪತ್ರಿಕೆಗಳಲ್ಲಿನ ಜಾಹೀರಾತು ಸ್ಥಳಕ್ಕೆ ಮಧ್ಯವರ್ತಿಗಳಾಗಿದ್ದವು. ಎನ್. ಡಬ್ಲ್ಯು. ಏಯರ್ ಆಂಡ್ ಸನ್ ಜಾಹೀರಾತಿನ ವಿಷಯದ ಹೊಣೆಗಾರಿಕೆ ಹೊತ್ತ ಮೊದಲ ಪೂರ್ಣ-ಪ್ರಮಾಣದ ಸೇವಾ ಸಂಸ್ಥೆಯಾಯಿತು.
  • ಎನ್. ಡಬ್ಲ್ಯು. ಏಯರ್ ೧೮೬೯ರಲ್ಲಿ ತೆರೆಯಿತು, ಮತ್ತು ಫಿಲಡೆಲ್ಫಿಯಾದಲ್ಲಿ ನೆಲೆಗೊಂಡಿತ್ತು[]. ಶತಮಾನದ ತಿರುವಿನಲ್ಲಿ, ಮಹಿಳೆಯರಿಗೆ ಉದ್ಯಮದಲ್ಲಿ ಬಹಳ ಕಡಿಮೆ ಜೀವನೋಪಾಯ ಆಯ್ಕೆಗಳಿದ್ದವು; ಆದರೆ, ಜಾಹೀರಾತು ಅವುಗಳ ಲ್ಲೊಂದಾಗಿತ್ತು. ಮಹಿಳೆಯರು ತಮ್ಮ ಕುಟುಂಬದಲ್ಲಾದ ಬಹುಪಾಲು ಖರೀದಿಗೆ ಹೊಣೆಯಾಗಿದ್ದರಿಂದ, ಜಾಹೀರಾತುದಾರರು ಮತ್ತು ದಳ್ಳಾಳಿ ಸಂಸ್ಥೆಗಳು, ಸೃಜನಾತ್ಮಕ ಪ್ರಕ್ರಿಯೆಯ ಅವಧಿಯಲ್ಲಿ, ಮಹಿಳೆಯರ ಒಳನೋಟದ ಮಹತ್ವವನ್ನು ಗುರುತಿಸಿದವು. ವಾಸ್ತವವಾಗಿ, ಲೈಂಗಿಕ ಮಾರಾಟ ತಂತ್ರ ಬಳಸಿದ ಅಮೇರಿಕಾದ ಮೊದಲ ಜಾಹೀರಾತು ಒಬ್ಬ ಮಹಿಳೆಯಿಂದ ನಿರ್ಮಿತವಾಗಿತ್ತು – ಒಂದು ಸಾಬೂನು ಉತ್ಪನ್ನಕ್ಕಾಗಿ. ಇಂದಿನ ಗುಣಮಟ್ಟದ ದೃಷ್ಟಿಯಿಂದ ನೀರಸವೆನಿಸಿದರೂ, ಆ ಜಾಹೀರಾತಿನಲ್ಲಿ "ನೀವು ಮುಟ್ಟಲು ಇಷ್ಟಪಡುವ ತ್ವಚೆ" ಎಂಬ ಸಂದೇಶದೊಂದಿಗೆ ಒಂದು ದಂಪತಿಯನ್ನು ಚಿತ್ರಿಸಲಾಗಿತ್ತು.
  • ೧೯೨೦ರ ದಶಕದ ಆರಂಭದ ವರ್ಷಗಳಲ್ಲಿ, ರೇಡಿಯೋ ಸಾಮಗ್ರಿ ತಯಾರಕರಿಂದ, ಮತ್ತು ಗ್ರಾಹಕರಿಗೆ ಹೆಚ್ಚು ರೇಡಿಯೋಗಳನ್ನು ಮಾರಲು ಕಾರ್ಯಕ್ರಮಗಳನ್ನು ನೀಡಲು, ಮಾರಾಟಗಾರರಿಂದ ಮೊದಲ ರೇಡಿಯೋ ನಿಲಯಗಳು ಸ್ಥಾಪಿಸಲ್ಪಟ್ಟವು. ಕಾಲ ಕಳೆದಂತೆ, ಶಾಲೆ, ವಿಹಾರಸಂಘಗಳು ಮತ್ತು ನಾಗರಿಕ ಗುಂಪುಗಳಂತಹ ಹಲವು ನಿರ್ಲಾಭ ಸಂಸ್ಥೆಗಳು ಕೂಡ ತಮ್ಮ ಸ್ವಂತ ರೇಡಿಯೋ ನಿಲಯಗಳನ್ನು ಸ್ಥಾಪಿಸಿದವು.[] ಕಾರ್ಯಕ್ರಮಗಳನ್ನು ಪ್ರಾಯೋಜಿಸುವ ಅಭ್ಯಾಸ ಜನಪ್ರಿಯಗೊಳಿಸಿದಾಗ, ಸಾಮಾನ್ಯವಾಗಿ ಪ್ರತಿಯೊಂದು ರೇಡಿಯೋ ಕಾರ್ಯಕ್ರಮ ಒಂದು ಉದ್ಯಮದಿಂದ ಪ್ರಾಯೋಜಿತವಾಗುತ್ತಿತ್ತು ಮತ್ತು ಅದರ ಬದಲಾಗಿ ಪ್ರದರ್ಶನದ ಆರಂಭ ಮತ್ತು ಕೊನೆಯಲ್ಲಿ ಉದ್ಯಮದ ಹೆಸರನ್ನು ಸಂಕ್ಷಿಪ್ತವಾಗಿ ಹೇಳಲಾಗುತ್ತಿತ್ತು.
  • ಆದರೆ, ರೇಡಿಯೋ ನಿಲಯದ ಮಾಲೀಕರು, ಒಂದು ಕಾರ್ಯಕ್ರಮದ ಪ್ರಾಯೋಜನ ಹಕ್ಕುಗಳನ್ನು ಒಂದು ಉದ್ಯಮಕ್ಕೆ ಮಾರುವ ಬದಲು, ಪ್ರಾಯೋಜನ ಹಕ್ಕುಗಳನ್ನು ತಮ್ಮ ರೇಡಿಯೋ ನಿಲಯದ ಪ್ರಸಾರಗಳಾದ್ಯಂತ ಅನೇಕ ಉದ್ಯಮಗಳಿಗೆ ಸಣ್ಣದಾಗಿ ಸಮಯ ವಿಂಗಡಣೆ ಮಾಡಿ ಮಾರುವುದರಿಂದ, ಹೆಚ್ಚು ಹಣ ಗಳಿಸಬಹುದೆಂದು ಬೇಗ ಅರಿತರು. ೧೯೪೦ರ ದಶಕದ ಕೊನೆಯಲ್ಲಿ ಮತ್ತು ೧೯೫೦ರ ದಶಕದ ಆರಂಭದಲ್ಲಿ ಈ ಅಭ್ಯಾಸವನ್ನು ದೂರದರ್ಶನಕ್ಕೂ ಒಯ್ಯಲಾಯಿತು. ರೇಡಿಯೋವನ್ನು ವ್ಯಾಪಾರೀಕರಿಸಲು ಯತ್ನಿಸುವವರ, ಮತ್ತು ರೇಡಿಯೋ ಪಟಲ ಸಾಮಾನ್ಯರ ಒಂದು ಭಾಗವೆಂದು ಪರಿಗಣಿಸಬೇಕೆಂದು (ವಾಣಿಜ್ಯೇತರವಾಗಿ ಮತ್ತು ಸಾರ್ವಜನಿಕ ಹಿತಕ್ಕಾಗಿ ಮಾತ್ರ ಬಳಸಬೇಕು) ಪ್ರತಿಪಾದಿಸುವ ಜನರ ನಡುವೆ, ಒಂದು ತೀವ್ರ ಸೆಣಸಾಟವಾಯಿತು. ಬ್ರಿಟನ್‍ನಲ್ಲಿ, ಆರಂಭದಲ್ಲಿ ಒಂದು ಖಾಸಗಿ ಕಂಪನಿಯಾಗಿದ್ದರೂ ೧೯೨೭ರಲ್ಲಿ ರಾಜವಂಶದಿಂದ ಒಂದು ಸಾರ್ವಜನಿಕ ಸಂಸ್ಥೆಯೆಂದು ಸೇರಿಸಿಕೊಳ್ಳಲಾದ, ಬಿಬಿಸಿಗಾಗಿ ಒಂದು ಸಾರ್ವಜನಿಕ ಸಂಗ್ರಹ ಮಾದರಿ ಅನುಸರಿಸಿತು.
  • ಕ್ಯಾನಡಾದಲ್ಲಿ, ಗ್ರೇಮ್ ಸ್ಪ್ರಾಯ್‌ರಂಥ ಪ್ರತಿಪಾದಕರು ಸಂಘೀಯ ಸರ್ಕಾರವನ್ನು ಸಾರ್ವಜನಿಕ ಸಂಗ್ರಹ ಮಾದರಿ ಅಳವಡಿಸುವಂತೆ ಒಲಿಸುವಲ್ಲಿ ಸಮರ್ಥರಾಗಿದ್ದರು. ಆದರೆ ಅಮೇರಿಕಾದಲ್ಲಿ, ೧೯೩೪ರ ಸಂಪರ್ಕ ಕಾಯಿದೆ ಅಂಗೀಕಾರವಾಗುವು ದರೊಂದಿಗೆ ಬಂಡವಾಳಶಾಹಿ ಮಾದರಿ ವಿಜಯಿಯಾಯಿತು ಮತ್ತು ಸಂಘೀಯ ಸಂಪರ್ಕಗಳ ಮಂಡಳಿಯ ನಿರ್ಮಾಣವಾಯಿತು.[] ಸಮಾಜವಾದಿಗಳನ್ನು ಸಮಾಧಾನಪಡಿಸಲು, ವಾಣಿಜ್ಯ ಪ್ರಸಾರಕರು "ಸಾರ್ವಜನಿಕ ಹಿತಾಸಕ್ತಿ, ಅನುಕೂಲ ಮತ್ತು ಆವಶ್ಯಕತೆ"ಗೆ ಅನುಗುಣವಾಗಿ ನಿರ್ವಹಿಸಬೇಕೆಂದು ಅಮೇರಿಕಾದ ಶಾಸನಸಭೆ ಆದೇಶಿಸಿತು.[]
  • ಆದಾಗ್ಯೂ, ಸಾರ್ವಜನಿಕ ರೇಡಿಯೋ ಅಮೇರಿಕಾದಲ್ಲಿ ಅಸ್ತಿತ್ವದಲ್ಲಿದೆ. ೧೯೫೦ರ ದಶಕದ ಆರಂಭದಲ್ಲಿ, ಡೂಮಾಂಟ್ ದೂರದರ್ಶನ ಜಾಲ ಬಹು ಪ್ರಾಯೋಜಕರಿಗೆ ಜಾಹೀರಾತು ಸಮಯ ಮಾರಾಟ ಮಾಡುವ ಆಧುನಿಕ ಪ್ರವೃತ್ತಿ ಆರಂಭಿಸಿತು. ಹಿಂದೆ, ತಮ್ಮ ಅನೇಕ ಕಾರ್ಯಕ್ರಮ ಗಳಿಗೆ ಪ್ರಾಯೋಜಕರನ್ನು ಪಡೆಯಲು ಡೂಮಾಂಟ್ ತೊಂದರೆ ಎದುರಿಸಿತ್ತು ಮತ್ತು ಹಲವು ಉದ್ಯಮಗಳಿಗೆ ಜಾಹೀರಾತು ಸಮಯದ ಸಣ್ಣ ಪ್ರಮಾಣದ ಖಂಡಗಳನ್ನು ಮಾರಿ ನಷ್ಟ ತುಂಬುಕೊಳ್ಳುತ್ತಿತ್ತು. ಈ ಪ್ರವೃತ್ತಿ ಅಂತಿಮವಾಗಿ ಅಮೇರಿಕಾದಲ್ಲಿನ ವಾಣಿಜ್ಯ ದೂರದರ್ಶನ ಉದ್ಯಮಕ್ಕೆ ರೂಢಿಯಾಯಿತು. ಆದರೂ ಕೂಡ, ಯು.ಎಸ್. ಸ್ಟೀಲ್ ಅವರ್‌ನಂತಹ ಏಕ ಪ್ರಾಯೋಜಕ ಪ್ರದರ್ಶನಗಳಿರುವುದು ಸಾಮಾನ್ಯ ಅಭ್ಯಾಸವಾಗಿತ್ತು.
  • ಕೆಲವು ಸಂದರ್ಭಗಳಲ್ಲಿ ಪ್ರದರ್ಶನದ ವಿಷಯವಸ್ತುವಿನಲ್ಲಿ ಪ್ರಾಯೋಜಕರು, ತಮ್ಮ ಜಾಹೀರಾತು ಸಂಸ್ಥೆಯೇ ಪ್ರದರ್ಶನವನ್ನು ಬರೆಯುವಂತೆ ಮಾಡಿ, ಹೆಚ್ಚಿಗೆ ಹಿಡಿತವನ್ನು ಚಲಾಯಿಸುತ್ತಿದ್ದರು. ಏಕ ಪ್ರಾಯೋಜಕ ಮಾದರಿ ಈಗ ಬಹಳ ಕಡಿಮೆ ಚಾಲ್ತಿಯಲ್ಲಿದೆ, ಹಾಲ್‌ಮಾರ್ಕ್ ಹಾಲ್ ಆಫ್ ಫೇಮ್ ಲಕ್ಷಿಸಬೇಕಾದ ಅಪವಾದವಾಗಿದೆ. ಸೃಜನಾತ್ಮಕತೆ ಬೆಳಗಲು ಅವಕಾಶವಿದ್ದಂಥ ೧೯೬೦ರ ದಶಕ, ಜಾಹೀರಾತು ಒಂದು ಆಧುನಿಕ ರೀತಿಯಾಗಿ ಮಾರ್ಪಾಡಾಗುವುದನ್ನು ಕಂಡಿತು ಮತ್ತು ಜಾಹೀರಾತುಗಳನ್ನು ಗ್ರಾಹಕರ ಕಣ್ಣಿಗೆ ಹೆಚ್ಚು ಚಪಲತೆ ಉಂಟುಮಾಡುವಂಥ ಅನಿರೀಕ್ಷಿತ ಸಂದೇಶಗಳನ್ನು ಸೃಷ್ಟಿಸಿತು. "ಥಿಂಕ್ ಸ್ಮಾಲ್" ಮತ್ತು ""ಲೆಮನ್" (ಇವು ಕಾರ್‌ನ ನೋಟವನ್ನು ವಿವರಿಸಲು ಬಳಸಲಾಗಿತ್ತು) ಗಳಂತಹ ಶೀರ್ಷಿಕೆ ಸಾಲುಗಳನ್ನು ಚಿತ್ರಿಸಿದ ವೋಕ್ಸ್‌ವ್ಯಾಗನ್ ಜಾಹೀರಾತು ಪ್ರಚಾರ, ಪ್ರತಿಯೊಂದು ಗುರುತನ್ನು ಓದುಗರ ಅಥವಾ ವೀಕ್ಷಕರ ಮನಸ್ಸಿನ ಒಂದು ನಿರ್ದಿಷ್ಟ ಕಲ್ಪನೆಯೊಂದಿಗೆ ಸೇರಿಸುವ ಒಂದು "ನಿಲುವು" ಅಥವಾ "ಅದ್ವಿತೀಯ ಮಾರಾಟ ಪ್ರತಿಪಾದನೆ"ಯನ್ನು (ಯೂನೀಕ್ ಸೆಲಿಂಗ್ ಪ್ರಾಪಸಿಷನ್) ಉತ್ತೇಜಿಸಿ, ಆಧುನಿಕ ಜಾಹೀರಾತಿನ ಯುಗಕ್ಕೆ ದಾರಿತೋರಿತು.
  • ಅಮೇರಿಕಾದ ಜಾಹೀರಾತು ಕ್ಷೇತ್ರದ ಈ ಅವಧಿಯನ್ನು ಸೃಜನಾತ್ಮಕ ಕ್ರಾಂತಿ (ಕ್ರಿಯೇಟಿವ್ ರೆವಲೂಷನ್) ಎಂದು ಕರೆಯುತ್ತಾರೆ ಮತ್ತು ಕ್ರಾಂತಿಕಾರಿ ವೋಕ್ಸ್‌ವ್ಯಾಗನ್ ಮತ್ತು ಇತರ ಜಾಹೀರಾತುಗಳನ್ನು ಸೃಷ್ಟಿಸಲು ಸಹಾಯಮಾಡಿದ ಬಿಲ್ ಬರ್ನ್‌ಬಾಕ್ ಇದರ ಪ್ರಾತಿನಿಧಿಕ ವ್ಯಕ್ತಿಯಾಗಿದ್ದರು. ಅಮೇರಿಕಾದ ಅತ್ಯಂತ ಸೃಜನಶೀಲ ಮತ್ತು ಬಹು ದೀರ್ಘಕಾಲದಿಂದರಿರುವ ಜಾಹೀರಾತುಗಳಲ್ಲಿ ಕೆಲವು ಈ ವಿಸ್ಮಯಕಾರಿ ಸೃಜನಶೀಲ ಕಾಲದ್ದೆಂದು ನಿರ್ಧರಿಸಲಾಗಿದೆ. ೧೯೮೦ರ ದಶಕದ ಕೊನೆಯಲ್ಲಿ ಮತ್ತು ೧೯೯೦ರ ದಶಕದ ಆರಂಭದಲ್ಲಿ ಕೇಬಲ್ ಟೆಲಿವಿಷನ್ ಮತ್ತು ವಿಶೇಷವಾಗಿ ಎಮ್‌ಟಿವಿ ಪ್ರವೇಶ ಮಾಡಿದವು. ಸಂಗೀತ ವೀಡಿಯೋದ ಪರಿಕಲ್ಪನೆಯನ್ನು ಪ್ರಾರಂಭಿಸಿ ಎಮ್‌ಟಿವಿ ಒಂದು ಹೊಸ ರೀತಿಯ ಜಾಹೀರಾತನ್ನು ಪ್ರವೇಶ ಮಾಡಿಸಿತು: ಜಾಹೀರಾತು ಒಂದು ಉಪವಸ್ತು ಅಥವಾ ಹಿನ್ನೆಣಿಕೆಯಾಗುವ ಬದಲಾಗಿ, ಗ್ರಾಹಕ ಜಾಹೀರಾತು ಸಂದೇಶಕ್ಕಾಗಿ ಒಂದು ದೂರದರ್ಶನ ತರಂಗಾಂತರವನ್ನು (ಚ್ಯಾನಲ್) ಆರಿಸುತ್ತಿದ್ದನು.
  • ಕೇಬಲ್ ಮತ್ತು ಉಪಗ್ರಹ ದೂರದರ್ಶನ ಹೆಚ್ಚು ವ್ಯಾಪಕವಾದಂತೆ, ಕ್ಯೂವಿಸಿ, ಹೋಮ್ ಷಾಪಿಂಗ್ ನೆಟ್‌ವರ್ಕ್, ಮತ್ತು ಷಾಪ್‌ಟಿವಿಯಂತಹ ಸಂಪೂರ್ಣವಾಗಿ ಜಾಹೀರಾತಿಗೆ ಮೀಸಲಾಗಿದ್ದ ವಿಶಿಷ್ಟ ಗುರುತಿರುವ ತರಂಗಾಂತರಗಳು ಕಾಣಿಸಿಕೊಂಡವು. ಅಂತರಜಾಲದ ಮೂಲಕ ವ್ಯಾಪಾರ, ಜಾಹೀರಾತು ಸಂಸ್ಥೆಗಳಿಗೆ ಹೊಸ ಎಲ್ಲೆಗಳನ್ನು ತೆರೆಯಿತು ಮತ್ತು ೧೯೯೦ರ ದಶಕದ ಡಾಟ್-ಕಾಮ್ ಉತ್ಕರ್ಷಕ್ಕೆ ಸಹಾಯವಾಯಿತು. ನಿಗಮಗಳು ಸಂಪೂರ್ಣ ಜಾಹೀರಾತು ಆದಾಯ ಒಂದರ ಮೇಲೆಯೇ ನಿರ್ವಹಿಸುತ್ತಿದ್ದವು ಮತ್ತು ಕೂಪನ್‌ನಿಂದ ಹಿಡಿದು ಉಚಿತ ಅಂತರಜಾಲ ಪ್ರವೇಶದ ತನಕ ಎಲ್ಲವನ್ನೂ ಒದಗಿಸುತ್ತಿದ್ದವು.
  • ೨೧ನೇ ಶತಮಾನದ ತಿರುವಿನಲ್ಲಿ, ಅಂತರಜಾಲ ಅನ್ವೇಷಣಾ ಸಾಧನ ಗೂಗಲ್ ಸಹಿತ ಹಲವಾರು ಅಂತರಜಾಲ ತಾಣಗಳು, ವಿಷಯಗಳ ಮಹಾಪೂರದ ಬದಲು, ಬಳಕೆದಾರರಿಗೆ ಸಹಾಯ ಮಾಡಲು ಬಯಸುವ, ಸಾಂದರ್ಭಿಕವಾಗಿ ಸಂಗತವಾದ, ಹೆಚ್ಚು ಪ್ರಕಟಗೊಳ್ಳದ ಜಾಹೀರಾತುಗಳಿಗೆ ಪ್ರಾಧಾನ್ಯನೀಡಿ ಅಂತರಜಾಲ ಜಾಹೀರಾತು ಕ್ಷೇತ್ರದಲ್ಲಿ ಬದಲಾವಣೆ ಆರಂಭಿಸಿದವು. ಇದು ಇದಕ್ಕೆ ಹೋಲುವ ಪ್ರಯತ್ನಗಳು ಅಧಿಕವಾಗುವಂತೆ ಮತ್ತು ಪ್ರತಿಕ್ರಿಯಾತ್ಮಕ ಜಾಹೀರಾತಿನ (ಇಂಟರ‍್ಯಾಕ್ಟಿವ್) ಪ್ರವೃತ್ತಿ ಹೆಚ್ಚಾಗುವಂತೆ ಮಾಡಿದೆ. ಸಮೂಹ ಮಾಧ್ಯಮಗಳಲ್ಲಿನ ದೊಡ್ಡ ಬದಲಾವಣೆಗಳನ್ನು ಗಮನಿಸಿ ಜಿಡಿಪಿಗೆ ಹೋಲಿಸಿದರೆ, ಜಾಹೀರಾತು ವೆಚ್ಚದ ಪಾಲು ಅಲ್ಪ ಬದಲಾವಣೆ ಕಂಡಿದೆ.
  • ಉದಾಹರಣೆಗೆ, ೧೯೨೫ರಲ್ಲಿ ಅಮೇರಿಕಾದಲ್ಲಿ, ವೃತ್ತಪತ್ರಿಕೆಗಳು, ನಿಯತಕಾಲಿಕಗಳು, ಟ್ರ್ಯಾಮ್‌ಗಳ ಮೇಲಿನ ಚಿಹ್ನೆಗಳು, ಮತ್ತು ಹೊರಾಂಗಣ ಭಿತ್ತಿಪತ್ರಗಳು ಪ್ರಮುಖ ಜಾಹೀರಾತು ಮಾಧ್ಯಮಗಳಾಗಿದ್ದವು. ಜಿಡಿಪಿಯಲ್ಲಿ ಜಾಹೀರಾತು ವೆಚ್ಚದ ಪಾಲು ಸುಮಾರು ೨.೯ ಪ್ರತಿಶತವಿತ್ತು. ೧೯೯೮ರ ವೇಳೆಗೆ, ದೂರದರ್ಶನ ಮತ್ತು ರೇಡಿಯೋ ಪ್ರಮುಖ ಜಾಹೀರಾತು ಮಾಧ್ಯಮಗಳಾಗಿದ್ದವು. ಆದರೂ, ಜಿಡಿಪಿಯಲ್ಲಿ ಜಾಹೀರಾತು ವೆಚ್ಚದ ಪಾಲು ಸ್ವಲ್ಪ ಕಡಿಮೆ-ಸುಮಾರು ೨.೪ ಪ್ರತಿಶತದಷ್ಟಿತ್ತು.[೧೦]
  • ಸಾರ್ವಜನಿಕ ಸ್ಥಳಗಳಲ್ಲಿ ವ್ಯವಸ್ಥಿತ ಮುಖಾಮುಖಿಗಳು (ಸ್ಟೇಜ್‌ಡ್ ಎನ್ಕೌಂಟರ್), ಕಂಪನಿ ಚಿಹ್ನೆಗಳನ್ನು ಹೊಂದಿದ ಕಾರುಗಳಂತಹ ಉತ್ಪನ್ನಗಳ ಕೊಡುಗೆಗಳು, ಮತ್ತು ಜಾಹೀರಾತು ಸಂದೇಶದ ಭಾಗವಾಗಲು ವೀಕ್ಷಕ ಪ್ರತಿಕ್ರಿಯಿಸಬಹುದಾದಂಥ ಪ್ರತಿಕ್ರಿಯಾತ್ಮಕ ಜಾಹೀರಾತುಗಳು, ಇಂತಹ ಹಲವು ವಿಚಿತ್ರ ರೀತಿಗಳನ್ನು ಒಳಗೊಂಡ "ಗರಿಲಾ ಪ್ರಚಾರಗಳು" ಇತ್ತೀಚಿನ ಒಂದು ಜಾಹೀರಾತು ಕಲ್ಪನೆಯಾಗಿದೆ. ಇದು, ಉತ್ಪನ್ನ ನಿಯೋಜನೆ (ಪ್ರಾಡಕ್ಟ್ ಪ್ಲೇಸ್‌ಮಂಟ್) ಮೂಲಕ, ಗ್ರಾಹಕರು ಪಠ್ಯ ಸಂದೇಶಗಳ ಮೂಲಕ ಮತ ಚಲಾಯಿಸುವುದು, ಹಲವಾರು ಸಾಮಾಜಿಕ ಸಂಪರ್ಕಜಾಲ ತಾಣಗಳನ್ನು (ಉದಾ. ಮೈಸ್ಪೇಸ್) ಬಳಸುವ , ಇಂತಹ ಪ್ರತಿಕ್ರಿಯಾತ್ಮಕ ಮತ್ತು "ಹುದುಗಿಸಿದ" ಜಾಹೀರಾತುಗಳ ಪ್ರತಿ ಹೆಚ್ಚುತ್ತಿರುವ ಒಲವನ್ನು ತೋರಿಸುತ್ತದೆ.

ಸಂಚಾರಿ ಜಾಹೀರಾತು ಫಲಕಗಳು

[ಬದಲಾಯಿಸಿ]
  • ಸಂಚಾರಿ ಜಾಹೀರಾತು ಫಲಕಗಳು ಸರಕು ವಾಹನಗಳ ಮೇಲೆ ಕಾಣುವ ಜಾಹಿರಾತು ಫಲಕಗಳು. ಇವು ಗಿರಾಕಿಗಳಿಂದ ಮೊದಲೇ ಆಯ್ದ ಮಾರ್ಗಗಳ ಉದ್ದಕ್ಕೂ ಜಾಹೀರಾತುಗಳನ್ನು ತೋರಿಸಲು ಮೀಸಲಾದ ವಾಹನಗಳಿರಬಹುದು, ಅಥವಾ ವಿಶೇಷವಾಗಿ ಸಿದ್ಧಗೊಳಿಸಿರುವ ಮಾಲು ವಾಹನಗಳಿರಬಹುದುದು. ಜಾಹೀರಾತು ಫಲಕಗಳು ಹಲವುವೇಳೆ ಬೆಳಗಿಸಲ್ಪಟ್ಟಿರುತ್ತವೆ; ಕೆಲವು ಹಿಂಬದಿಯಿಂದ ಬೆಳಕು ಬೀರುತ್ತವೆ ಮತ್ತು ಉಳಿದವು ಪ್ರಕಾಶ ಬಿಂದುಗಳನ್ನು ಬಳಸಿಕೊಳ್ಳುತ್ತವೆ.
  • ಕೆಲವು ಜಾಹೀರಾತು ಫಲಕ ಪರದೆಗಳು ನಿಶ್ಚಲವಿರುತ್ತವೆ ಮತ್ತು ಉಳಿದವು ಬದಲಾಯಿಸುತ್ತವೆ; ಉದಾಹರಣೆಗೆ, ಜಾಹೀರಾತುಗಳ ಒಂದು ಸಮೂಹದೊಳಗೆ ನಿರಂತರವಾಗಿ ಅಥವಾ ನಿಯತಕಾಲಿಕವಾಗಿ ಆವರ್ತವಾಗುತ್ತಿರುತ್ತವೆ. ಸಂಚಾರಿ ಪರದೆಗಳು ಪ್ರಪಂಚದಾದ್ಯಂತ ಮಹಾನಗರ ಪ್ರದೇಶಗಳಲ್ಲಿ ಬಗೆಬಗೆಯ ಸಂದರ್ಭಗಳಿಗಾಗಿ ಬಳಸಲ್ಪಡುತ್ತವೆ, ಉದಾಹರಣೆಗೆ:
  • ಉದ್ದೇಶಿತ ಜಾಹೀರಾತುಗಳಿಗಾಗಿ (ಟಾರ್ಗೆಟ್ ಆಡ್ಸ್)
  • ಏಕ-ದಿನ, ಮತ್ತು ದೀರ್ಘಾವಧಿ ಪ್ರಚಾರಗಳಿಗಾಗಿ
  • ಸಮ್ಮೇಳನಗಳಿಗಾಗಿ
  • ಕ್ರೀಡಾ ಸ್ಪರ್ಧೆಗಳಲ್ಲಿ
  • ಅಂಗಡಿಗಳ ಉದ್ಘಾಟನೆಗಳ ಮತ್ತು ಅಂತಹದೇ ಆದ ಪ್ರಚಾರ ಸಂದರ್ಭಗಳಲ್ಲಿ
  • ಸಣ್ಣ ಕಂಪನಿಗಳಿಂದ ದೊಡ್ಡ ಜಾಹೀರಾತುಗಳಿಗಾಗಿ

ಸಾರ್ವಜನಿಕ ಸೇವಾ ಜಾಹೀರಾತುಗಳು

[ಬದಲಾಯಿಸಿ]
  • ವಾಣಿಜ್ಯ ವಸ್ತು ಮತ್ತು ಸೇವೆಗಳ ಪ್ರಚಾರಕ್ಕಾಗಿ ಬಳಸಲಾಗುವ ಜಾಹೀರಾತು ತಂತ್ರಗಳನ್ನೇ, ಏಡ್ಸ್, ರಾಜಕೀಯ ಸಿದ್ಧಾಂತ, ಶಕ್ತಿ ಸಂರಕ್ಷಣೆ, ಧಾರ್ಮಿಕ ನೇಮಕ, ಮತ್ತು ಅರಣ್ಯನಾಶದಂತಹ ವಾಣಿಜ್ಯೇತರ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು, ಬೋಧಿಸಲು ಮತ್ತು ಪ್ರಚೋದಿಸಲು ಬಳಸಬಹುದು. ತನ್ನ ವಾಣಿಜ್ಯೇತರ ರೂಪದಲ್ಲಿ ಜಾಹೀರಾತು ಹೆಚ್ಚು ಜನರನ್ನು ವ್ಯಾಪಿಸಲು ಮತ್ತು ಪ್ರಚೋದಿಸಲು ಸಮರ್ಥವಾದ ಒಂದು ಪ್ರಬಲ ಶೈಕ್ಷಣಿಕ ಸಾಧನವಾಗಿದೆ. "ಸಾರ್ವಜನಿಕ ಹಿತಾಸಕ್ತಿಗಾಗಿ ಬಳಸಲ್ಪಟ್ಟಾಗ ಜಾಹೀರಾತು ತನ್ನ ಅಸ್ತಿತ್ವವನ್ನು ರುಜುವಾತುಗೊಳಿಸುತ್ತದೆ - ಕೇವಲ ವಾಣಿಜ್ಯ ಉದ್ದೇಶಗಳಿಗಾಗಿ ಮಾತ್ರ ಬಳಸಲು ಅದು ಬಹಳ ಪ್ರಬಲ ಸಾಧನವಾಗಿದೆ." - ಎಂದು ಡೇವಿಡ್ ಓಗಲ್ವಿ ಹಾವರ್ಡ್ ಗಾಸೇಜ್‌ರನ್ನು ಪ್ರಶಂಸಿಸುತ್ತಾರೆ.
  • ಸಾರ್ವಜನಿಕ ಸೇವಾ ಜಾಹೀರಾತು, ವಾಣಿಜ್ಯೇತರ ಜಾಹೀರಾತು, ಸಾರ್ವಜನಿಕ ಹಿತಾಸಕ್ತಿ ಜಾಹೀರಾತು, ಧ್ಯೇಯ ವ್ಯಾಪಾರ (ಕಾಸ್ ಮಾರ್ಕೆಟಿಂಗ್), ಮತ್ತು ಸಾಮಾಜಿಕ ವ್ಯಾಪಾರ, ವಾಣಿಜ್ಯೇತರ, ಸಾರ್ವಜನಿಕ ಹಿತಾಸಕ್ತಿ ವಿಷಯ ಮತ್ತು ಉಪಕ್ರಮಗಳ ಪರವಾಗಿ ಸಂಕೀರ್ಣ ಜಾಹೀರಾತಿನ ಬಳಕೆ (ಅಥವಾ ರೂಪಗಳು) ಮತ್ತು ವ್ಯಾಪಾರ ಸಂಪರ್ಕ ತಂತ್ರಗಳನ್ನು (ಸಾಮಾನ್ಯವಾಗಿ ವಾಣಿಜ್ಯ ಉದ್ಯಮ ಜೊತೆಗೆ ಬಳಸಲಾಗುವ), ಉಲ್ಲೇಖಿಸಲು ಉಪಯೋಗಿಸುವ ಅನ್ಯ ಪದಗಳಾಗಿವೆ. ಅಮೇರಿಕಾದಲ್ಲಿ, ಎಫ್‌ಸಿಸಿಯಿಂದ ದೂರದರ್ಶನ ಮತ್ತು ರೇಡಿಯೋ ಪರವಾನಗಿಗಳ ಅನುದಾನ ಆ ಪ್ರಸಾರ ಕೇಂದ್ರ ಒಂದು ಖಚಿತ ಪ್ರಮಾಣದ ಸಾರ್ವಜನಿಕ ಸೇವಾ ಜಾಹೀರಾತು ಪ್ರಸಾರ ಮಾಡಿದ ನಂತರ ನಿರ್ಧರಿಸಲಾಗುತ್ತದೆ.
  • ಈ ಅಗತ್ಯಗಳನ್ನು ಪೂರೈಸಲು, ಅಮೇರಿಕಾದಲ್ಲಿ ಹಲವು ಪ್ರಸಾರ ಕೇಂದ್ರಗಳು ತಮ್ಮಿಂದ ಬಯಸಿದ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಬಹಳ ಕಡಿಮೆ ವೀಕ್ಷಕರು ವೀಕ್ಷಿಸುತ್ತಿರುವಾಗ ತಡವಾಗಿ ರಾತ್ರಿ ಅಥವಾ ಮುಂಚಿತವಾಗಿ ಬೆಳಿಗ್ಗೆ ಪ್ರಸಾರ ಮಾಡುತ್ತವೆ ಮತ್ತು ಹೆಚ್ಚು ದಿನದ ಮತ್ತು ಪ್ರಧಾನ ಸಮಯದ ವಾಣಿಜ್ಯ ಅವಧಿಯನ್ನು ಅಧಿಕ ಹಣನೀಡುವ ಜಾಹೀರಾತುದಾರರಿಗೆ ಮೀಸಲಿಡುತ್ತವೆ. ಸಾರ್ವಜನಿಕ ಸೇವಾ ಜಾಹೀರಾತು ಮೊದಲನೇ ಮತ್ತು ಎರಡನೇ ವಿಶ್ವಯುದ್ಧಗಳ ಸಮಯದಲ್ಲಿ ಹಲವು ಸರ್ಕಾರಗಳ ನಿರ್ದೇಶದಲ್ಲಿ ತನ್ನ ಪರಾಕಾಷ್ಠೆಯನ್ನು ತಲುಪಿತು. ಈಗಿನ ದಿನಗಳಲ್ಲಿ, ಒಬ್ಬ ಸಂಶೋಧಕ ಕಂಡುಕೊಂಡಂತೆ, ಒಬ್ಬ ವ್ಯಕ್ತಿ ದಿನಕ್ಕೆ ಸರಾಸರಿ ೫೦೦ ಜಾಹೀರಾತುಗಳನ್ನು ನೋಡುತ್ತಾನೆ ಅಥವಾ ಕೇಳುತ್ತಾನೆ.

ಜಾಹೀರಾತಿನ ಪ್ರಕಾರಗಳು

[ಬದಲಾಯಿಸಿ]

ಮಾಧ್ಯಮಗಳು

[ಬದಲಾಯಿಸಿ]
ಒಂದು ಜಾಹೀರಾತು ಫಲಕ

ಗುಪ್ತ ಜಾಹೀರಾತು

[ಬದಲಾಯಿಸಿ]

ದೂರದರ್ಶನ ಜಾಹೀರಾತುಗಳು

[ಬದಲಾಯಿಸಿ]
  • ಟೀವಿ ಜಾಹೀರಾತು ಸಾಮಾನ್ಯವಾಗಿ ಅತ್ಯಂತ ಪರಿಣಾಮಕಾರಿ ಮಾಧ್ಯಮ-ಮಾರುಕಟ್ಟೆ ಜಾಹೀರಾತು ವಿಧಾನವೆಂದು ಪರಿಗಣಿಸಲ್ಪಡುತ್ತದೆ ಮತ್ತು ಇದು ಜನಪ್ರಿಯ ಟೀವಿ ಪ್ರಸಂಗಗಳ ಸಮಯದಲ್ಲಿ ವಾಣಿಜ್ಯ ಪ್ರಸಾರಕ್ಕೆ ಟೀವಿ ಜಾಲ ಗಳು ಹೆಚ್ಚು ಶುಲ್ಕವಿಧಿಸುವುದರಿಂದ ಪ್ರಕಟಗೊಂಡಿದೆ. ಅಮೇರಿಕಾದಲ್ಲಿ, ವಾರ್ಷಿಕ ಸೂಪರ್ ಬೋಲ್ ಫುಟ್ಬಾಲ್ ಆಟ, ಟೀವಿ ಮೇಲಿನ ಅತ್ಯಂತ ಪ್ರಸಿದ್ಧ ಜಾಹೀರಾತು ಸಂದರ್ಭವೆಂದು ಗುರುತಿಸಲ್ಪಡುತ್ತದೆ. ಈ ಆಟದ ಅವಧಿಯಲ್ಲಿ, ಒಂದು ಒಂಟಿ ಮೂವತ್ತು ಸೆಕೆಂಡಿನ ಟೀವಿ ಸ್ಥಳದ ಸರಾಸರಿ ವೆಚ್ಚ ೨೭ ಲಕ್ಷ ಡಾಲರ್ ಮುಟ್ಟಿದೆ (೨೦೦೭ರ ವೇಳೆಗೆ). ಟೀವಿ ಜಾಹೀರಾತಿನ ಹೆಚ್ಚು ಸಂಖ್ಯೆಯ ಜಾಹೀರಾತುಗಳು ಒಂದು ಹಾಡು ಅಥವಾ ಝಣಝಣವನ್ನು ಪ್ರದರ್ಷಿಸುತ್ತವೆ ಮತ್ತು ಇದನ್ನು ಶ್ರೋತೃಗಳು ಉತ್ಪನ್ನಕ್ಕೆ ಸಂಬಂಧಿಸುತ್ತಾರೆ. ಜಾಹೀರಾತಿನಲ್ಲಿ ಸಂಗೀತ ನೋಡಿ.
  • ಗಣಕಯಂತ್ರ ರೇಖಾಚಿತ್ರಗಳ ಮೂಲಕ ಕ್ರಮಬದ್ಧ ಟೀವಿ ವಿಧೀಕರಣದಲ್ಲಿ (ಪ್ರೋಗ್ರ್ಯಾಮಿಂಗ್) ಮಿಥ್ಯಾ ಜಾಹೀರಾತುಗಳನ್ನು (ವರ್ಚ್ಯುಯಲ್ ಆಡ್ಸ್) ಅಳವಡಿಸಬಹುದು. ವಿಶಿಷ್ಟವಾಗಿ, ಅನ್ಯ ರೂಪದಿಂದ ಬೋಳಾದ ಹಿನ್ನೆಲೆ ದೃಶ್ಯಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ[೧೧] ಅಥವಾ ಬಹುದೂರದ ಪ್ರಸಾರ ವಿಕ್ಷಕರಿಗೆ ಸಂಗತವಿರದ ಸ್ಥಳೀಯ ಜಾಹೀರಾತು ಫಲಕಗಳ ಬದಲಾಗಿ ಇರಿಸಲು ಬಳಸಲಾಗುತ್ತದೆ.[೧೨]
  • ಹೆಚ್ಚು ವಿವಾದಾತ್ಮಕವಾಗಿ , ನಿಜ ಜೀವನದಲ್ಲಿ ಹಿನ್ನೆಲೆಯಲ್ಲಿ ಏನೂ ಇರದ ಕಡೆ ಮಿಥ್ಯಾ ಜಾಹೀರಾತು ಫಲಕಗಳನ್ನು ಅಳವಡಿಸಬಹುದು[೧೩]. ಮಿಥ್ಯಾ ಉತ್ಪನ್ನ ನಿಯೋಜನೆಯೂ ಸಾಧ್ಯವಾಗಿದೆ.[೧೪][೧೫]

ಮಾಹಿತಿ ಜಾಹೀರಾತುಗಳು

[ಬದಲಾಯಿಸಿ]
  • ದೀರ್ಘಾವಧಿ ಪ್ರಕಾರ ಮತ್ತು ಅಲ್ಪಾವಧಿ ಪ್ರಕಾರವೆಂದು ವಿವರಿಸಲಾದ ಎರಡು ಥರದ ಮಾಹಿತಿ ಜಾಹೀರಾತುಗಳಿವೆ (ಇನ್ಫೊಮರ್ಷಿಯಲ್ಸ್). ದೀರ್ಘಾವಧಿ ಪ್ರಕಾರದ ಮಾಹಿತಿ ಜಾಹೀರಾತುಗಳು ೩೦ ನಿಮಿಷಗಳ ಸಮಯಾವಧಿ ಹೊಂದಿರುತ್ತವೆ. ಅಲ್ಪಾವಧಿ ಪ್ರಕಾರದ ಮಾಹಿತಿ ಜಾಹೀರಾತುಗಳು ೩೦ ಸೆಕೆಂಡಿನಿಂದ ೨ ನಿಮಿಷಗಳಷ್ಟು ದೀರ್ಘವಿರುತ್ತವೆ. ಮಾಹಿತಿ ಜಾಹೀರಾತುಗಳು, ಪ್ರತ್ಯಕ್ಷ ಪ್ರತಿಕ್ರಿಯೆ ಟೀವಿ (ಡೈರೆಕ್ಟ್ ರೆಸ್ಪಾನ್ಸ್ ಟೆಲಿವಿಷನ್ - ಡಿಆರ್‌ಟಿವಿ ) ಜಾಹೀರಾತುಗಳು ಎಂದೂ ಗುರುತಿಸಲ್ಪಡುತ್ತವೆ. ಮಾಹಿತಿ ಜಾಹೀರಾತಿನ ಮುಖ್ಯ ಉದ್ದೇಶ ಒಂದು ಉದ್ವೇಗ ಖರೀದಿಯನ್ನು (ಇಂಪಲ್ಸ್ ಪರ್ಚೇಸ್) ನಿರ್ಮಿಸುವುದು, ಹೇಗೆಂದರೆ ಗ್ರಾಹಕ ಪ್ರಕಟಣೆಯನ್ನು ನೋಡುತ್ತಾನೆ.
  • ಆಮೇಲೆ ತತ್‌ಕ್ಷಣ ಜಾಹೀರಾತು ಮಾಡಲಾದ ಸುಂಕರಹಿತ ದೂರವಾಣಿ ಸಂಖ್ಯೆ (ಟೋಲ್-ಫ್ರೀ) ಅಥವಾ ವೆಬ್‌ಸೈಟ್ ಮೂಲಕ ಉತ್ಪನ್ನವನ್ನು ಖರೀದಿಸುತ್ತಾನೆ. ಮಾಹಿತಿ ಜಾಹೀರಾತುಗಳು, ಉತ್ಪನ್ನಗಳನ್ನು ಮತ್ತು ಅವುಗಳ ಲಕ್ಷಣಗಳನ್ನು ವಿವರಿ ಸುತ್ತವೆ, ತೋರಿಸುತ್ತವೆ ಮತ್ತು ಹಲವುವೇಳೆ ಪ್ರಮಾಣೀಕರಿಸುತ್ತವೆ, ಮತ್ತು ಸಾಮಾನ್ಯವಾಗಿ ಗ್ರಾಹಕರಿಂದ ಮತ್ತು ಉದ್ಯಮ ವೃತ್ತಿನಿರತರಿಂದ ಯೋಗ್ಯತಾ ಪತ್ರಗಳನ್ನು ಹೊಂದಿರುತ್ತವೆ. ಸ್ಕ್ರಿಪ್ಟ್ ಟು ಸ್ಕ್ರೀನ್, ಹಾಥಾರ್ನ್ ಡೈರೆಕ್ಟ್, ಇಂಟರ್‌ನ್ಯಾಷನಲ್ ಷಾಪಿಂಗ್ ನೆಟ್‌ವರ್ಕ್ ಮತ್ತು ಗಥಿ-ರೆಂಕರ್, ಮಾಹಿತಿ ಜಾಹೀರಾತು ಉದ್ಯಮದಲ್ಲಿರುವ ಕೆಲವು ಹೆಚ್ಚು ಗುರುತಿರುವ ಕಂಪನಿಗಳು.

ಹೊಸ ಮಾಧ್ಯಮಗಳು ಮತ್ತು ಜಾಹೀರಾತು ವಿಧಾನಗಳು

[ಬದಲಾಯಿಸಿ]
ಜರ್ಮನಿಯಲ್ಲಿ ರೈಲು ಬಂಡಿಯೊಂದರ ಮೇಲೆ ಜಾಹೀರಾತು
  • ಅಂತರಜಾಲ ಮತ್ತು ಟಿವೊನಂಥ ಸಾಧನಗಳ ಬಳಕೆಯತ್ತ ಗ್ರಾಹಕನ ಸ್ಥಳಾಂತರದ ಕಾರಣ ಇತರ ಮಾಧ್ಯಮಗಳು ದೂರದರ್ಶನವನ್ನು ಮೀರಿಸುತ್ತಿವೆ. ಅಂತರಜಾಲದ ಮೇಲೆ ಜಾಹೀರಾತು ಮಾಡುವುದು ಒಂದು ಇತ್ತೀಚಿನ ವಿದ್ಯಮಾನವಾಗಿದೆ. ಅಂತ ರ್ಜಾಲ ಆಧಾರಿತ ಜಾಹೀರಾತು ಕಾಲಾವಧಿಯ ಬೆಲೆ, ಸುತ್ತಲಿನ ಅಂತರಜಾಲ ವಿಷಯದ "ಪ್ರಸ್ತುತತೆ" ಮತ್ತು ಆ ಅಂತರಜಾಲ ತಾಣ ಪಡೆಯುವ ಸಂಚಾರದ ಮೇಲೆ ಅವಲಂಬಿಸಿದೆ. ಇ-ಮೇಲ್ ಜಾಹೀರಾತು ಮತ್ತೊಂದು ಇತ್ತೀಚಿನ ವಿದ್ಯಮಾನವಾಗಿದೆ. ಅನಪೇಕ್ಷಿತ ದೊಡ್ಡಪ್ರಮಾಣದ ಇ-ಮೇಲ್ ಜಾಹೀರಾತು, "ಸ್ಪ್ಯಾಮ್" ಎಂದು ಗುರುತಿಸಲ್ಪಡುತ್ತದೆ.
  • ಕೆಲವು ಕಂಪನಿಗಳು, ವರ್ಧಕ (ಬೂಸ್ಟರ್) ರಾಕೆಟ್‌ಗಳ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಪಾರ್ಶ್ವದ ಮೇಲೆ ಸಂದೇಶಗಳನ್ನು ಅಥವಾ ಸಂಸ್ಥೆಯ ಪ್ರತೀಕ ಚಿಹ್ನೆಗಳನ್ನು ಇರಿಸಲು ಪ್ರಸ್ತಾಪಿಸಿವೆ. ಉದಾತ್ತ ಜಾಹೀರಾತಿನ ಕಾರ್ಯಸಾಧಕತೆ ಮೇಲೆ (ಮಾನಸಿಕ ನಿಯಂತ್ರಣ ನೋಡಿ), ಮತ್ತು ಸಮೂಹ ಸಂದೇಶಗಳ ವ್ಯಾಪಕತೆ ಬಗ್ಗೆ ವಿವಾದವಿದೆ (ಮಾಹಿತಿ ಪ್ರಚಾರ ನೋಡಿ).
  • ಸಂದಾಯರಹಿತ ಜಾಹೀರಾತು (ಶಾಬ್ದಿಕ ಸಾಗಣೆ (ವರ್ಡ್ ಆಫ಼್ ಮೌತ್) ಜಾಹೀರಾತು ಎಂದೂ ಕರೆಯುವ), ಕನಿಷ್ಠ ವೆಚ್ಚದಲ್ಲಿ ಒಳ್ಳೆ ಅನಾವರಣ ಒದಗಿಸಬಹುದು. ವೈಯಕ್ತಿಕ ಶಿಫಾರಸುಗಳು ("ಸ್ನೇಹಿತನ್ನನ್ನು ಕರೆತನ್ನಿ", "ಇದನ್ನು ಮಾರಿ"), ಸಡಗರ ಹರಡುವುದು, ಅಥವಾ ಒಂದು ಗುರುತನ್ನು ಒಂದು ಸಾಮಾನ್ಯ ನಾಮಪದದೊಂದಿಗೆ ಸಮೀಕರಿಸುವ ಕೆಲಸವನ್ನು ಸಾಧಿಸುವುದು (ಅಮೇರಿಕಾದಲ್ಲಿ, "ಜ಼ಿರಾಕ್ಸ್" = "ನೆರಳಚ್ಚು ಯಂತ್ರ", "ಕ್ಲೀನೆಕ್ಸ್" = ಕಾಗದ, "ವ್ಯಾಸಲೀನ್" = ಪೆಟ್ರೋಲಿಯಮ್ ಜೆಲಿ, "ಹೂವರ್" = ವ್ಯಾಕ್ಯೂಮ್ ಕ್ಲೀನರ್, ಮತ್ತು "ಬ್ಯಾಂಡ್-ಏಡ್" = ಗಾಯಕ್ಕೆ ಕಟ್ಟುವ ಅಂಟುಪಟ್ಟಿ) — ಇವು ಯಾವುದೇ ಜಾಹೀರಾತು ಪ್ರಚಾರದ ಪರಾಕಾಷ್ಠೆಗಳಾಗಿವೆ.
  • ಆದರೆ, ಕೆಲವು ಕಂಪನಿಗಳು ಒಂದು ಪದಾರ್ಥವನ್ನು ಗುರುತಿಸಲು ತಮ್ಮ ಗುರುತಿನ ಹೆಸರಿನ ಬಳಕೆಯನ್ನು ವಿರೋಧಿಸುತ್ತವೆ. ಒಂದು ಗುರುತನ್ನು ಒಂದು ಸಾಮಾನ್ಯ ನಾಮಪದದೊಂದಿಗೆ ಸಮೀಕರಿಸುವುದು ಆ ಗುರುತನ್ನು ಒಂದು ಜಾತಿವಾಚಕಗೊಳಿಸಿದ ವ್ಯಾಪಾರ ಚಿಹ್ನೆಯಾಗಿ (ಜನೆರಿಸೈಜ಼್ಡ್) ಪರಿವರ್ತಿಸುವ ಅಪಾಯವಿದೆ - ಅದನ್ನು ಒಂದು ಜಾತಿವಾಚಕ ಪದವಾಗಿ ಪರಿವರ್ತಿಸುವುದರ ಅರ್ಥ ಒಂದು ವ್ಯಾಪಾರ ಚಿಹ್ನೆಯಾಗಿ ಅದರ ನ್ಯಾಯಬದ್ಧ ರಕ್ಷಣೆ ಕಳೆದು ಹೋದಂತೆ. ೧೯೯೮ರಲ್ಲಿ ಮೊದಲ ವೆಚ್ಚ ಸಲ್ಲಿಸಿದ ವರ್ಗಾಯಿಸಬಹುದಾದ (ಡೌನ್‌ಲೋಡೆಬಲ್) ವಸ್ತು ಫಿನ್ಲಂಡ್‌ನಲ್ಲಿ ಮೋಬಾಯ್ಲ್ ಫ಼ೋನುಗಳ ಮೇಲೆ ಕಾಣಿಸಿಕೊಂಡು ಮೋಬಾಯ್ಲ್ ಫ಼ೋನು ಒಂದು ಹೊಸ ಸಮೂಹ ಮಾಧ್ಯಮವಾಗುತ್ತಿದ್ದಂತೆ, ಸಂಚಾರಿ ಜಾಹೀರಾತು ಬರುವಲ್ಲಿ ಯಾವುದೇ ಸಂಶಯವಿರಲ್ಲಿಲ್ಲ.
  • ಇದನ್ನೂ ಕೂಡ ೨೦೦೦ರಲ್ಲಿ ಫಿನ್ಲಂಡ್‌ನಲ್ಲಿ ಪ್ರಾರಂಭಿಸಲಾಯಿತು. ೨೦೦೭ರ ವೇಳೆಗೆ ಸಂಚಾರಿ ಜಾಹೀರಾತಿನ ಬೆಲೆ ೨೨೦ ಕೋಟಿ ಡಾಲರ್ ಮುಟ್ಟಿತ್ತು ಮತ್ತು ಆಡ್‌ಮಾಬ್ ನಂತಹ ಪ್ರಬಂಧಕರು ಲೆಕ್ಕವಿಲ್ಲದಷ್ಟು ಸಂಚಾರಿ ಜಾಹೀರಾತುಗಳನ್ನು ತಲುಪಿಸಿದರು. ಹೆಚ್ಚು ಮುಂದುವರಿದ ಸಂಚಾರಿ ಜಾಹೀರಾತುಗಳು, ಪತಾಕೆ ಜಾಹೀರಾತುಗಳು, ಕೂಪನ್‌ಗಳು, ಎಮ್ಎಮ್ಎಸ್ ಚಿತ್ರ ಮತ್ತು ವೀಡಿಯೋ ಸಂದೇಶಗಳು, ಆಟಗಳಲ್ಲಿನ ಜಾಹೀರಾತುಗಳು (ಆಡ್ವರ್‌ಗೇಮ್ಸ್), ಮತ್ತು ಹಲವು ಒಪ್ಪಂದ ವ್ಯಾಪಾರ (ಎಂಗೇಜ್‌ಮೆಂಟ್ ಮಾರ್ಕೆಟಿಂಗ್) ಪ್ರಚಾರಗಳನ್ನು ಒಳಗೊಂಡಿವೆ. ೨ಡಿ ಪಟ್ಟಿಕೆ ಸಂಕೇತ (ಬಾರ್‌ಕೋಡ್), ಸಂಚಾರಿ ಜಾಹೀರಾತುಗಳನ್ನು ನಡೆಸುವ ಒಂದು ವಿಶಿಷ್ಟ ಲಕ್ಷಣವಾಗಿದೆ.
  • ಇದು ಅಂತರಜಾಲ ವಿಳಾಸಗಳನ್ನು ಬೆರಳಚ್ಚು (ಟೈಪ್) ಮಾಡುವುದರ ಬದಲು, ಅಂತರಜಾಲ ವಸ್ತುವಿಗೆ ತ್ವರಿತ ಪ್ರವೇಶ ಪಡೆಯಲು ಆಧುನಿಕ ಫೋನುಗಳ ಕ್ಯಾಮರಾ ವೈಶಿಷ್ಟ್ಯವನ್ನು ಬಳಸುತ್ತದೆ. ಜಪಾನ್‌ನ ಮೋಬಾಯ್ಲ್ ಫೋನು ಬಳಕೆದಾರರಲ್ಲಿ ೮೩ ಪ್ರತಿಶತ ಜನ ಈಗಾಗಲೇ ೨ಡಿ ಬಾರ್‌ಕೋಡ್‌ಗಳ ಸಕ್ರಿಯ ಬಳಕೆದಾರರು. ಸಾಮಾಜಿಕ ಸಂಪರ್ಕಜಾಲ ಜಾಹೀರಾತು, (ಸೋಷಿಯಲ್ ನೆಟ್ವರ್ಕಿಂಗ್) ತೀವ್ರವಾಗಿ ಬೆಳೆಯುತ್ತಿರುವ ಜಾಹೀರಾತಿನ ಒಂದು ಹೊಸ ವಿಧಾನ. ಇದು, ಸಾಮಾಜಿಕ ಸಂಪರ್ಕಜಾಲ ತಾಣಗಳ ಮೇಲೆ ಕೇಂದ್ರಬಿಂದುವುಳ್ಳ ಗಣಕಯಂತ್ರ ಜಾಲ ಆಧಾರಿತ ಜಾಹೀರಾತು (ಆನ್ಲೈನ್ ಆಡ್ಸ್). ತುಲನಾತ್ಮಕವಾಗಿ ಇದು ಒಂದು ಅಪಕ್ವ ಮಾರುಕಟ್ಟೆ.
  • ಆದರೆ, ಬಳಕೆದಾರ ಸಾಮಾಜಿಕ ಸಂಪರ್ಕಜಾಲ ತಾಣಕ್ಕೆ ಒದಗಿಸಿರುವ ಜನಾಂಗ ಸ್ಥಿತಿಯ ಮಾಹಿತಿಯ ಅನುಕೂಲವನ್ನು ಜಾಹೀರಾತುದಾರರು ಪಡೆಯುವ ಸಾಮರ್ಥ್ಯವಿರುವುದರಿಂದ, ಇದು ಬಹಳ ಭರವಸೆ ಮೂಡಿಸಿದೆ. ಕಾಲಕಾಲಕ್ಕೆ, ದ ಸಿಡಬ್ಲ್ಯು, ಒಂದು ಸಂಪೂರ್ಣ ವಾಣಿಜ್ಯ ವಿರಾಮದ ಅವಧಿಯಲ್ಲಿ ಒಂದು ಕಂಪನಿಯ ಉತ್ಪನ್ನವನ್ನು ಪ್ರಚಾರ ಮಾಡಲು, "ವಸ್ತು ಆಚ್ಛಾದನೆಗಳು" (ಕಂಟೆಂಟ್ ರ‍್ಯಾಪ್ಸ್) ಎಂಬ ಲಘು ಕಾರ್ಯಕ್ರಮ ವಿರಾಮಗಳನ್ನು ಪ್ರಸಾರ ಮಾಡುತ್ತದೆ. ದ ಸಿಡಬ್ಲ್ಯು "ಕಂಟೆಂಟ್ ರ‍್ಯಾಪ್ಸ್"ಗಳನ್ನು ಪ್ರಾರಂಭಿಸಿತು ಮತ್ತು ಹರ್ಬಲ್ ಎಸನ್ಸಸ್, ಕ್ರೆಸ್ಟ್, ಗಿಟಾರ್ ಹೀರೊ ೨, ಕವರ್ ಗರ್ಲ್ ಮತ್ತು ಇತ್ತೀಚೆಗೆ ಟಾಯೋಟಾ, ತೋರಿಸಲಾದ ಕೆಲವು ಉತ್ಪನ್ನಗಳು.

ನೆನಪು ಮತ್ತು ವರ್ತನೆ ಮೇಲೆ ಪರಿಣಾಮ

[ಬದಲಾಯಿಸಿ]
"ಜಾಹೀರಾತಿನ ಮೇಲೆ ನಾನು ವೆಚ್ಚಮಾಡುವ ಅರ್ಧದಷ್ಟು ಹಣ ವ್ಯರ್ಥವಾಗುತ್ತದೆ; ತೊಂದರೆ ಏನೆಂದರೆ, ಯಾವ ಅರ್ಧ ಅಂತ ನನಗೆ ಗೊತ್ತಿಲ್ಲ." - ಸಾಮಾನ್ಯವಾಗಿ ಜಾನ್ ವಾನಮೇಕರ್‌ರಿಗೆ ಯಾ ವಿಲಿಯಮ್ ಲೀವರ್‌ರಿಗೆ ಹೊಂದಿಸಲಾದ ಜನಪ್ರಿಯ ಉಕ್ತಿ; ರಿಗ್ಲಿ ಚ್ಯೂಯಿಂಗ್ ಗಮ್ ಕಂಪನಿಯಿಂದ ಕೂಡ ಒಬ್ಬರಿಗೆ. ಜಾಹೀರಾತಿನ ಪ್ರಭಾವ ಗಣನೀಯವಾದ ಚರ್ಚೆಯ ವಿಷಯವಾಗಿದೆ ಮತ್ತು ಬೇರೆಬೇರೆ ಸಂದರ್ಭಗಳಲ್ಲಿ ಹಲವು ಬೇರೆಬೇರೆ ದಾವೆಗಳನ್ನು ಮಾಡಲಾಗಿದೆ. ಧೂಮಪಾನ ಜಾಹೀರಾತನ್ನು ನಿಷೇಧಿಸುವ ಬಗ್ಗೆ ಚರ್ಚೆಗಳ ಅವಧಿಯಲ್ಲಿ, ಸಿಗರೇಟು ಉತ್ಪಾದಕರಿಂದ ಒಂದು ಸಾಮಾನ್ಯ ದಾವೆ ಏನೆಂದರೆ ಧೂಮಪಾನ ಜಾಹೀರಾತು ಸಿಗರೇಟು ಸೇದದೆ ಇರುವವರನ್ನು ಸೇದುವಂತೆ ಉತ್ತೇಜಿಸುವುದಿಲ್ಲ.
  • (ಕೊನೆಯಲ್ಲಿ ಸಫಲವಾಗುವ) ಜಾಹೀರಾತಿನ ವಿರೋಧಿಗಳು, ಇನ್ನೊಂದು ಕಡೆ, ಜಾಹೀರಾತು ವಾಸ್ತವವಾಗಿ ಬಳಕೆಯನ್ನು ಹೆಚ್ಚಿಸುತ್ತದೆಂದು ಸಾಧಿಸುತ್ತಾರೆ. ಬಹಳ ಮೂಲಗಳ ಪ್ರಕಾರ, ಜಾಹೀರಾತಿಗೆ ಒಳಗಾದ ವ್ಯಕ್ತಿಯ ಹಿಂದಿನ ಅನುಭವ ಮತ್ತು ಮಾನಸಿಕ ಸ್ಥಿತಿ, ಜಾಹೀರಾತು ಮಾಡಬಲ್ಲ ಪ್ರಭಾವವನ್ನು ನಿರ್ಧರಿಸಬಹುದು. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಜಾಹೀರಾತನ್ನು ಇತರ ದೂರದರ್ಶನ ಕಾರ್ಯಕ್ರಮಗಳಿಂದ ಭೇದ ಮಾಡಲು ಅಸಮರ್ಥರಾಗಿರಬಹುದು, ಸಂದೇಶದ ಸತ್ಯತೆಯನ್ನು ನಿರ್ಧರಿಸುವ ಸಾಮರ್ಥ್ಯ ೮ನೇ ವಯಸ್ಸಿನ ವರೆಗೆ ಬೆಳೆದಿರದೇ ಇರಬಹುದು.
  • ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ, ಗ್ರಾಹಕರು, ಮಾರಾಟ, ಲಾಭ ಮತ್ತು ಮಾರುಕಟ್ಟೆ ಅಂಶದ (ಮಾರ್ಕೆಟ್ ಷೇರ್) ಮೇಲೆ ವ್ಯಾಪಾರ ಕ್ರಿಯೆಗಳ ಪ್ರಭಾವ ನಿರ್ಧರಿಸಲು, ವ್ಯಾಪಾರ ವಿಶ್ಲೇಷಣಾ ಸೂತ್ರಗಳು ಮತ್ತು ವ್ಯಾಪಾರ ಕಾರ್ಯಸಾಧಕತೆಯ (ಮಾರ್ಕೆಟಿಂಗ್ ಎಫ಼ೆಕ್ಟಿವ್‌ನೆಸ್) ಒಂದು ಸಮಗ್ರ ವಿಜ್ಞಾನವನ್ನು ಅಭಿವೃದ್ಧಿಗೊಳಿಸಲಾಗಿದೆ. ವ್ಯಾಪಾರ ಮಿಶ್ರಣ ಪ್ರತಿರೂಪಣೆ (ಮಾರ್ಕೆಟಿಂಗ್ ಮಿಕ್ಸ್ ಮಾಡಲಿಂಗ್), ಪ್ರತ್ಯಕ್ಷ ಪ್ರತಿಕ್ರಿಯೆ ಮಾಪನ (ಡೈರೆಕ್ಟ್ ರೆಸ್ಪಾನ್ಸ್ ಮೆಸ಼ರ್‌ಮೆಂಟ್) ಮತ್ತು ಇತರ ತಂತ್ರಗಳು ಈ ವಿಜ್ಞಾನದಲ್ಲಿ ಸೇರಿವೆ.

ಮಾಧ್ಯಮದ ಬಗ್ಗೆ ಸಾರ್ವಜನಿಕ ಗ್ರಹಿಕೆ

[ಬದಲಾಯಿಸಿ]
  • ಆಧುನಿಕ ಪಾಶ್ಚಾತ್ಯ ಸಮಾಜಗಳಲ್ಲಿ ಜಾಹೀರಾತು ಮತ್ತು ವ್ಯಾಪಾರ ಪ್ರಯತ್ನಗಳು ಹೆಚ್ಚು ಸರ್ವವ್ಯಾಪಕವಾದಂತೆ, ಸಂಸ್ಕೃತಿ ಸಂಮರ್ದನೆ (ಕಲ್ಚರ್ ಜ್ಯಾಮಿಂಗ್) ಮೂಲಕ ಮಾಧ್ಯಮಗಳು ಮತ್ತು ಗಿರಾಕಿ ಹಿತರಕ್ಷಣೆಯನ್ನು ಜಾಹೀರಾತಿನ ಸ್ವಂತ ತಂತ್ರಗಳನ್ನು ಬಳಸಿ ಟೀಕಿಸುವ ಆಡ್‌ಬಸ್ಟರ್ಸ್ ನಂತಹ ಗುಂಪುಗಳ ಟೀಕೆಗೆ ಈ ಉದ್ಯಮ ಗುರಿಯಾಗಿದೆ. ಬಳಕೆಯನ್ನು ಪ್ರೋತ್ಸಾಹಿಸುವ ಒಂದು ಜಟಿಲ ಆರ್ಥಿಕ ಸಮೂಹ ಉತ್ಪಾದನ ವ್ಯವಸ್ಥೆಗೆ ಶಕ್ತಿ ಒದಗಿಸುವ ಯಂತ್ರಗಳಲ್ಲೊಂದಾಗಿದೆ ಎಂದು ಈ ಉದ್ಯಮ ನಿಂದನೆಗೊಳಪಟ್ಟಿದೆ. ಜಾಹೀರಾತಿನ ಸಾಮಾಜಿಕ ಪ್ರಭಾವವನ್ನು ಗುರುತಿಸುತ್ತಾ ಬ್ರಿಟನ್‌ನ ಒಂದು ವಿಶೇಷ ಹಿತಾಸಕ್ತಿ ಗುಂಪು ಮೀಡಿಯಾವಾಚ್-ಯುಕೆ ತಮ್ಮ ಕಳವಳಗಳನ್ನು ಜಾಹೀರಾತುದಾರರು ಮತ್ತು ನಿಯಂತ್ರಕರೊಂದಿಗೆ ಹೇಗೆ ನೋಂದಾಯಿಸಬಹುದೆಂದು ಗ್ರಾಹಕರಿಗೆ ತಿಳಿಸಲು ಶ್ರಮಿಸುತ್ತದೆ.
  • ಅದು ಶಾಲೆಗಳಲ್ಲಿ ಬಳಕೆಗೆ ಶೈಕ್ಷಣಿಕ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಿದೆ. ಜಾಹೀರಾತುದಾರರಿಂದ ಗುರಿಯಾಗುತ್ತಿರುವ ಮಾನಸಿಕ ಸ್ಥಳದ (ಮೆಂಟಲ್ ಸ್ಪೇಸ್) ಪ್ರವೇಶಕ್ಕೆ ತೆರಿಗೆ ವಿಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಗುಂಪುಗಳು ಹೆಚ್ಚೆಚ್ಚು ಸೂಚಿಸುತ್ತಿವೆ, ಏಕೆಂದರೆ ಪ್ರಸ್ತುತ ಕ್ಷಣದಲ್ಲಿ, ಬಲವಂತವಾಗಿ ಹೊರಿಸಲಾಗುತ್ತಿರುವ ಸಾರ್ವಜನಿಕರ ಸದಸ್ಯರಿಗೆ ಯಾವುದೇ ಪರಿಹಾರ ಧನ ಕೊಡದೇ ಉಚಿತವಾಗಿ ಜಾಹೀರಾತುದಾರರಿಂದ ಆ ಸ್ಥಳವನ್ನು ಉಪಯೋಗ ಮಾಡಲಾಗುತ್ತಿದೆ. ಈ ರೀತಿಯ ತೆರಿಗೆ ಒಂದು ಪಿಗೋವಿಯನ್ ತೆರಿಗೆಯಾಗುತ್ತದೆ, ಏಕೆಂದರೆ ಇದು ಈಗ ಒಂದು ಸಾರ್ವಜನಿಕ ಪೀಡೆಯೆಂದು ಕಾಣಲಾಗುತ್ತಿರುವ ಜಾಹೀರಾತನ್ನು ಕುಗ್ಗಿಸಲು ಕಾರ್ಯಮಾಡುತ್ತದೆ. ಆ ಗುರಿಯನ್ನು ಮುಟ್ಟಲು ಪ್ರಯತ್ನಗಳು ಹೆಚ್ಚು ರಭಸವನ್ನು ಗಳಿಸುತ್ತಿವೆ.
  • ಆರ್ಕನ್ಸಾ ಮತ್ತು ಮೇಯ್ನ್ ಈ ರೀತಿಯ ತೆರಿಗೆ ಪದ್ಧತಿಯನ್ನು ಕಾರ್ಯಗತಮಾಡಲು ಮಸೂದೆಗಳನ್ನು ಪರಿಗಣಿಸುತ್ತಿವೆ. ಫ಼್ಲಾರಿಡಾ ೧೯೮೭ರಲ್ಲಿ ಈ ರೀತಿಯ ತೆರಿಗೆಯನ್ನು ತಂದಿತು, ಆದರೆ ರಾಷ್ಟ್ರೀಯ ವಾಣಿಜ್ಯ ಹಿತಾಸಕ್ತಿಗಳಿಂದ ಯೋಜಿತ ಸಮ್ಮೇಳನಗಳ ಹಿಂತೆಗೆತದಿಂದ ಪ್ರವಾಸೋದ್ಯಮಕ್ಕಾದ ಪ್ರಮುಖ ನಷ್ಟಗಳಿಂದ, ಮತ್ತು ಜಾಹೀರಾತುಗಳ ರದ್ದುಮಾಡುವಿಕೆಯಿಂದ ಪ್ರಸಾರೋದ್ಯಮ ಒಂದಕ್ಕೇ ಆದ ೧೨ ದಶಲಕ್ಷ ಡಾಲರ್‌ಗಳ ನಷ್ಟ, ಮುಂತಾದ ಒಂದು ಸಂಘಟಿತ ಪ್ರಯತ್ನದ ಪರಿಣಾಮವಾಗಿ ಆರು ತಿಂಗಳ ನಂತರ ಒತ್ತಾಯಪೂರ್ವಕವಾಗಿ ಅದನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಯಿತು.

ನಿಯಂತ್ರಣ

[ಬದಲಾಯಿಸಿ]
  • ಹೊರಾಂಗಣ ಜಾಹೀರಾತಿನ ಹಲವು ಪ್ರಕಾರಗಳು ಸಾರ್ವಜನಿಕ ಕ್ಷೇತ್ರವನ್ನು ನಾಶಮಾಡುತ್ತವೆಂದು ಅಮೇರಿಕಾದಲ್ಲಿ ಹಲವು ಸಮುದಾಯಗಳು ನಂಬಿವೆ[೧೬]. ಅಮೇರಿಕಾದಲ್ಲಿ ೧೯೬೦ರ ದಶಕದಷ್ಟು ಹಿಂದೆಯೂ ಗ್ರಾಮಾಂತರ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ನಿಷೇಧಿಸುವ ಪ್ರಯತ್ನಗಳಾಗಿದ್ದವು[೧೭]. ಸೌ ಪೌಲೊ ನಂತಹ ನಗರ ಗಳು ಒಂದು ಸಂಪೂರ್ಣ ನಿಷೇಧವನ್ನು ತಂದಿವೆ[೧೮] ಮತು ಬ್ರಿಟನ್‌ನ ರಾಜಧಾನಿ ಕೂಡ ಕಾನೂನು ವಿರೋಧಿ ಪ್ರದರ್ಶನಗಳನ್ನು ನಿಯಂತ್ರಿಸಲು ನಿರ್ದಿಷ್ಟ ಕಾನೂನು ಹೊಂದಿದೆ.
  • ಜಾಹೀರಾತಿನ ವಿಷಯ ಮತ್ತು ಪ್ರಭಾವವನ್ನು ನಿಯಂತ್ರಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿ ರಕ್ಷಿಸಲು ಹೆಚ್ಚೆಚ್ಚು ಪ್ರಯತ್ನಗಳಾಗಿವೆ. ಕೆಲವು ಉದಾಹರಣೆಗಳು: ಹಲವು ದೇಶಗಳಲ್ಲಿ ವಿಧಿಸಲಾದ ದೂರದರ್ಶನ ಧೂಮಪಾನ ಜಾಹೀರಾತಿನ ಮೆಲೆ ನಿಷೇಧ, ಮತ್ತು ೧೯೯೧ರಲ್ಲಿ ಸ್ವೀಡನ್ ಸರ್ಕಾರ ವಿಧಿಸಿದ ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜಾಹೀರಾತು ಮಾಡುವುದಕ್ಕೆ ಸಂಪೂರ್ಣ ನಿಷೇಧ. ಆ ನಿಬಂಧನೆ ವಾಸ್ತವವಾಗಿ ದೇಶದೊಳಗಿಂದ ಉತ್ಪತ್ತಿಯಾದ ಪ್ರಸಾರಗಳಿಗೆ ಮುಂದುವರಿಯುತ್ತಿದ್ದರೂ, ಸ್ವೀಡನ್ ನೆರೆ ದೇಶಗಳ ಮತ್ತು ಉಪಗ್ರಹ ಮೂಲಕದ ವಿದೇಶೀ ಕಾರ್ಯಕ್ರಮಗಳನ್ನು ಸ್ವೀಕರಿಸಲು ಬದ್ಧವಾಗಿದೆ ಎಂದು ಐರೋಪ್ಯ ನ್ಯಾಯಾಲಯ (ಯೂರಪೀಯನ್ ಕೋರ್ಟ್ ಆಫ಼್ ಜಸ್ಟಿಸ್) ಕಂಡಿದ್ದರಿಂದ, ನಿಬಂಧನೆ ದುರ್ಬಲಗೊಂಡಿದೆ.
  • ಯೂರೋಪ್ ಮತ್ತು ಬೇರೆಡೆಗಳಲ್ಲಿ, ಮಕ್ಕಳಿಗೆ ಜಾಹೀರಾತು ಮಾಡುವುದನ್ನು ನಿಯಂತ್ರಿಸಬೇಕೇ (ಅಥವಾ ಎಷ್ಟು) ಎಂಬುದರ ಬಗ್ಗೆ ಒಂದು ಶಕ್ತಿದಾಯಕ ಚರ್ಚೆ ನಡೆಯುತ್ತಿದೆ. ಮಕ್ಕಳನ್ನು ಉದ್ದೇಶಿಸಿದ ಆಹಾರ ಜಾಹೀರಾತು ಅಮೇರಿಕಾದಲ್ಲಿ ಬಾಲ್ಯದ ಸ್ಥೂಲ ಕಾಯತೆಯ ಸೋಂಕು ಜಾಡ್ಯದಲ್ಲಿ ಒಂದು ಪ್ರಮುಖ ಅಂಶವೆಂದು ಸೂಚಿಸಿದ ಕಾಯ್ಸ಼ರ್ ಕುಟುಂಬ ಪ್ರತಿಷ್ಠಾನ (ಕಾಯ್ಸ಼ರ್ ಫ಼್ಯಾಮಲಿ ಫ಼ೌಂಡೇಷನ್) ಫೆಬ್ರವರಿ ೨೦೦೪ರಲ್ಲಿ ಬಿಡುಗಡೆ ಮಾಡಿದ ಒಂದು ವರದಿಯಿಂದ ಈ ಚರ್ಚೆ ಇನ್ನಷ್ಟು ಉಲ್ಬಣಗೊಂಡಿತು. ಹಲವು ದೇಶಗಳಲ್ಲಿ - ಅವುಗಳೆಂದರೆ ನ್ಯೂ ಜ಼ೀಲಂಡ್, ದಕ್ಷಿಣ ಆಫ಼್ರಿಕಾ, ಕ್ಯಾನಡಾ, ಮತ್ತು ಹಲವು ಐರೋಪ್ಯ ರಾಷ್ಟ್ರಗಳಲ್ಲಿ - ಜಾಹೀರಾತು ಉದ್ಯಮ ಸ್ವ-ನಿಯಂತ್ರಣದ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ.
  • ಜಾಹೀರಾತುದಾರರು, ಜಾಹೀರಾತು ಸಂಸ್ಥೆಗಳು ಮತ್ತು ಮಾಧ್ಯಮಗಳು ಜಾಹೀರಾತು ಮಾನದಂಡಗಳ ಒಂದು ನಿಯಮಾವಳಿಯನ್ನು ಒಪ್ಪಿಕೊಳ್ಳುತ್ತವೆ ಮತ್ತು ಅದನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತವೆ. ಇಂತಹ ನಿಯಮಾವಳಿಗಳ ಸಾಮಾನ್ಯ ಧ್ಯೇಯ ಯಾವುದೇ ಜಾಹೀರಾತು 'ನ್ಯಾಯಸಮ್ಮತ, ಸಭ್ಯ, ಪ್ರಾಮಾಣಿಕ ಮತ್ತು ಸತ್ಯ' ಇರುವಂತೆ ನಿಶ್ಚಿತಗೊಳಿಸುವುದು. ಕೆಲವು ಸ್ವ-ನಿಯಂತ್ರಕ ಸಂಸ್ಥೆಗಳು ಉದ್ಯಮಗಳಿಂದ ಹಣ ಒದಗಿಸಲ್ಪಡುತ್ತವೆ, ಆದರೆ ಮಾನದಂಡಗಳು ಅಥವಾ ನಿಯಮಾವಳಿಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಸ್ವತಂತ್ರವಾಗಿ ಉಳಿಯುತ್ತವೆ (ಬ್ರಿಟನ್‌ನ ಜಾಹೀರಾತು ಮಾನದಂಡಗಳ ಪ್ರಾಧಿಕಾರ "ಆಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ" ಯಂತೆ).
  • ಬ್ರಿಟನ್‌ನಲ್ಲಿ ಜಾಹೀರಾತು ಫಲಕಗಳ ಪ್ರದರ್ಶನದಂತಹ ಹೊರಾಂಗಣ ಜಾಹೀರಾತಿನ ಬಹಳಷ್ಟು ಪ್ರಕಾರಗಳು ಬ್ರಿಟನ್‌ನ ಪಟ್ಟಣ ಮತ್ತು ಪ್ರಾಂತ ಯೋಜನಾ ವ್ಯವಸ್ಥೆಯಿಂದ (ಯುಕೆ ಟೌನ್ ಆಂಡ್ ಕೌಂಟಿ ಪ್ಲ್ಯಾನಿಂಗ್ ಸಿಸ್ಟಮ್) ನಿಯಂತ್ರಿತವಾಗಿರುತ್ತವೆ. ಸದ್ಯಕ್ಕೆ ಯೋಜನಾ ಪ್ರಾಧಿಕಾರ ದಿಂದ ಒಪ್ಪಿಗೆ ಇಲ್ಲದೆ ಜಾಹೀರಾತಿನ ಪ್ರದರ್ಶನ ೨೫೦೦ ಪೌಂಡುಗಳ ದಂಡಕ್ಕೆ ಗುರಿಯಾಗುವ ಒಂದು ಅಕ್ಷಮ್ಯ ಅಪರಾಧವಾಗಿದೆ. ಬ್ರಿಟನ್‌ನಲ್ಲಿ ಎಲ್ಲ ಪ್ರಮುಖ ಹೊರಾಂಗಣ ಜಾಹೀರಾತು ಫಲಕ ಕಂಪನಿಗಳು ಈ ಸ್ವರೂಪದ ದೋಷ ನಿರ್ಣಯಗಳನ್ನು ಹೊಂದಿವೆ. ಸ್ವಾಭಾವಿಕವಾಗಿ , ಹಲವು ಜಾಹೀರಾತುದಾರರು ಸರ್ಕಾರಿ ನಿಯಂತ್ರಣ ಅಥವಾ ಸ್ವ-ನಿಯಂತ್ರಣವನ್ನೂ ತಮ್ಮ ಅಭಿವ್ಯಕ್ತಿ ಸ್ಯಾತಂತ್ರ್ಯದ ಹಸ್ತಕ್ಷೇಪ ಅಥವಾ ಒಂದು ಅನಿವಾರ್ಯವಾದ ಅನ್ಯಾಯ ಎಂದು ನೋಡುತ್ತಾರೆ.
  • ಹಾಗಾಗಿ, ಅವರು ನಿಯಂತ್ರಕ ಕಾನೂನುಗಳನ್ನು ಕಡೆಗಣಿಸಲು ಅನೇಕ ವಿಧದ ಭಾಷಾಶಾಸ್ತ್ರದ ಸಾಧನಗಳನ್ನು ಬಳಸಿಕೊಳ್ಳುತ್ತಾರೆ (ಉದಾಹರಣೆಗೆ ಫ಼್ರೆಂಚ್ ಜಾಹೀರಾತುಗಳಲ್ಲಿ ಇಂಗ್ಲಿಷ್ ಬಳಕೆಯನ್ನು ಸೀಮಿತಗೊಳಿಸುವಂಥ ೧೯೯೪ರ ಟುಬ್ಞಾ ಕಾನೂನಿನ ನಿಯಮಾವಳಿ ೧೨ನ್ನು ಮೀರಲು ಇಂಗ್ಲಿಷ್ ಶಬ್ದಗಳನ್ನು ಎದ್ದುಕಾಣುವಂತೆ ಮುದ್ರಿಸುವುದು ಮತ್ತು ಫ಼್ರೆಂಚ್ ಅನುವಾದಗಳನ್ನು ಸೂಕ್ಷ್ಮ ಅಕ್ಷರಗಳಲ್ಲಿ ಮುದ್ರಿಸುವುದು); Bhatia and Ritchie 2006:542 ನೋಡಿ. ಸಿಗರೇಟು ಮತ್ತು ಶಿಶ್ನಕವಚಗಳಂತಹ (ಕಾಂಡಮ್) ವಿವಾದಾತ್ಮಕ ಉತ್ಪನ್ನಗಳ ಜಾಹೀರಾತು ಹಲವು ದೇಶಗಳಲ್ಲಿ ಸರ್ಕಾರಿ ನಿಯಂತ್ರಣಕ್ಕೆ ಒಳಪಟ್ಟಿದೆ. ಉದಾಹರಣೆಗೆ, ಹಲವು ದೇಶಗಳಲ್ಲಿ ತಂಬಾಕು ಉದ್ಯಮ, ಕಾನೂನು ಪ್ರಕಾರ ತಮ್ಮ ಉತ್ಪನ್ನಗಳ ಆರೋಗ್ಯ ಹಾನಿಗಳ ಬಗ್ಗೆ ಗ್ರಾಹಕರನ್ನು ಎಚ್ಚರಿಸಲು ಎಚ್ಚರಿಕೆಗಳನ್ನು ಪ್ರದರ್ಶಿಸುವುದು ಆವಶ್ಯಕ. ಹಲವು ವೇಳೆ ಅಂತಹ ಆವಶ್ಯಕತೆಗಳ ಪ್ರಭಾವ ಕಡಿಮೆ ಮಾಡಲು ಭಾಷಾಶಾಸ್ತ್ರದ ವ್ಯತ್ಯಾಸ ಒಂದು ಸೃಜನಾತ್ಮಕ ಸಾಧನವಾಗಿ ಜಾಹೀರಾತುದಾರರಿಂದ ಬಳಸಲಾಗುತ್ತದೆ.

ಭವಿಷ್ಯದಲ್ಲಿ

[ಬದಲಾಯಿಸಿ]

ಜಾಗತಿಕ ಜಾಹೀರಾತು

[ಬದಲಾಯಿಸಿ]
  • ಜಾಹೀರಾತು, ಅಭಿವೃದ್ಧಿಯ ಐದು ಪ್ರಮುಖ ಘಟ್ಟಗಳನ್ನು ಕಂಡಿದೆ: ದೇಶೀಯ, ನಿರ್ಯಾತ, ಅಂತರರಾಷ್ಟ್ರೀಯ, ಬಹುರಾಷ್ಟ್ರೀಯ, ಮತ್ತು ಜಾಗತಿಕ. ಜಾಗತಿಕ ಜಾಹೀರಾತುದಾರರಿಗೆ ವಿಶ್ವದಾದ್ಯಂತ ಜಾಹೀರಾತನ್ನು ಅಭಿವೃದ್ಧಿಪಡಿಸುವಾಗ ಸರಿಹೊಂದಿಸಬೇಕಾದ ನಾಲ್ಕು ಸ್ಪರ್ಧಿಸುವ ಸಾಮರ್ಥ್ಯವುಳ್ಳ ವ್ಯಾಪಾರ ಲಕ್ಷ್ಯಗಳಿವೆ: ಏಕಕಂಠದಿಂದ ಮಾತನಾಡುತ್ತಲೇ ಗುರುತನ್ನು ಬೆಳೆಸುವುದು, ಸೃಜನಾತ್ಮಕ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಉಳಿತಾಯವನ್ನು ಅಭಿವೃದ್ಧಿಗೊಳಿಸುವುದು, ಜಾಹೀರಾತುಗಳ ಸ್ಥಳೀಯ ಕಾರ್ಯಸಾಧಕತೆಯನ್ನು ಹೆಚ್ಚಿನ ಮಟ್ಟಕ್ಕೇರಿಸುವುದು, ಮತ್ತು ಕಂಪನಿಯ ಪರಿಪಾಲನಾ ವೇಗವನ್ನು ಹೆಚ್ಚಿಸುವುದು.
  • ಜಾಗತಿಕ ವ್ಯಾಪಾರದ ವಿಕಾಸವಾದಿ ಘಟ್ಟಗಳಿಂದ ಹುಟ್ಟಿದ ಜಾಗತಿಕ ಜಾಹೀರಾತಿನ ಆಚರಣೆಗಳ ಅಭಿವೃದ್ಧಿಗೆ ಮೂರು ಪ್ರಾಥಮಿಕ ಮತ್ತು ಮೂಲಭೂತವಾಗಿ ವಿಭಿನ್ನ ಮಾರ್ಗಗಳು ಯಾವುವೆಂದರೆ: ಆಚರಣೆಗಳನ್ನು ನಿರ್‍ಯಾತಮಾಡುವುದು, ಸ್ಥಳೀಯ ಆಚರಣೆಗಳನ್ನು ಉತ್ಪಾದಿಸುವುದು, ಮತ್ತು ಸಂಚರಿಸುವ ಕಲ್ಪನೆಗಳನ್ನು ಆಯಾತ ಮಾಡುವುದು. (Global marketing Management, 2004, ಪುಟಗಳು 13-18) ಯಾವುದೇ ದೇಶ ಅಥವಾ ಪ್ರದೇಶದಲ್ಲಿ ಒಂದು ಜಾಹೀರಾತಿನ ಯಶಸ್ಸನ್ನು ನಿರ್ಧರಿಸಲು ಜಾಹೀರಾತು ಸಂಶೋಧನೆ ಪರಿಹಾರ ಸೂಚಿ ಯಾಗಿದೆ. ಒಂದು ಜಾಹೀರಾತಿನ ಯಾವ ಅಂಶಗಳು ಮತ್ತು/ಅಥವಾ ಕ್ಷಣಗಳು ಅದರ ಯಶಸ್ಸಿಗೆ ನೆರವಾಗುತ್ತವೆಂದು ಗುರುತಿಸುವ ಸಾಮರ್ಥ್ಯ, ದೊಡ್ಡ ಪ್ರಮಾಣದ ಉಳಿತಾಯವನ್ನು ಹೆಚ್ಚಿನ ಮಟ್ಟಕ್ಕೇರಿಸುತ್ತವೆ.
  • ಒಂದು ಜಾಹೀರಾತಿನಲ್ಲಿ ಏನು ಕೆಲಸಮಾಡುತ್ತದೆಂದು ಒಂದು ಸಾರಿ ಗೊತ್ತಾದರೆ, ಆ ಕಲ್ಪನೆ ಅಥವಾ ಕಲ್ಪನೆಗಳನ್ನು ಇತರ ಯಾವುದೇ ಮಾರುಕಟ್ಟೆಯಿಂದ ಆಮದುಮಾಡಿಕೊಳ್ಳಬಹುದು. ಗಮನದ ಹರಿವು (ಫ಼್ಲೋ ಆಫ್ ಅಟೆನ್ಷನ್), ಭಾವನೆಯ ಹರಿವು (ಫ಼್ಲೋ ಆಫ್ ಇಮೋಷನ್) ಮತ್ತು ಅಂಕನ ಕ್ಷಣಗಳು (ಬ್ರ್ಯಾಂಡಿಂಗ್ ಮೊಮೆಂಟ್ಸ್) ಮುಂತಾದ ಮಾರುಕಟ್ಟೆ ಸಂಶೋಧನೆ ಪರಿಮಾಣಗಳು, ಯಾವುದೇ ದೇಶ ಅಥವಾ ಪ್ರದೇಶದಲ್ಲಿ ಒಂದು ಜಾಹೀರಾತಿನಲ್ಲಿ ಏನು ಕೆಲಸಮಾಡುತ್ತಿದೆ ಎಂಬುದರ ಬಗ್ಗೆ ಒಳನೋಟವನ್ನು ಒದಗಿಸುತ್ತವೆ ಎಕೆಂದರೆ ಈ ಪರಿಮಾಣಗಳು ಜಾಹೀರಾತಿನ ಶಾಬ್ದಿಕದ ಬದಲು ದೃಶ್ಯ ಅಂಶಗಳನ್ನು ಆಧರಿಸಿವೆ. (Young, ಪುಟ 131)

ಶೈಲಿಗಳು

[ಬದಲಾಯಿಸಿ]
  • ಅಂತರಜಾಲದ ಉದಯದೊಂದಿಗೆ ಹಲವು ಹೊಸ ಜಾಹೀರಾತು ಅವಕಾಶಗಳು ಬಂದವು. ಪಾಪ್-ಅಪ್, ಫ಼್ಲ್ಯಾಶ್, ಬ್ಯಾನರ್, ವೀಡಿಯೊ ಗೇಮ್ ಜಾಹೀರಾತು, ಮತ್ತು ಇ-ಅಂಚೆ ಜಾಹೀರಾತುಗಳು (ಕೊನೆಯದು ಸ್ಪ್ಯಾಮ್‌ನ ಒಂದು ಪ್ರಕಾರ) ಈಗ ಸಾಮನ್ಯ ವಿಷಯವಾಗಿದೆ. (ಟಿವೊ ನಂತಹ) ಅಂಕೀಯ ದೃಶ್ಯ ಮುದ್ರಕಗಳ (ಡಿಜಿಟಲ್ ವೀಡಿಯೋ ರಿಕಾರ್ಡರ್) ಮೇಲೆ ಕಾರ್ಯಕ್ರಮಗಳನ್ನು ಮುದ್ರಿಸಿಡುವ ಸಾಧ್ಯತೆ, ಬಳಕೆದಾರರಿಗೆ ಕಾರ್ಯಕ್ರಮಗಳನ್ನು ಮುದ್ರಿಸುವ ಮತ್ತು ನಂತರ ವೀಕ್ಷಿಸಲು ಅವಕಾಶ ನೀಡುತ್ತದೆ ಮತ್ತು ಜಾಹೀರಾತುಗಳನ್ನು ಮುಂದೆ ಓಡಿಸಲು (ಫ಼ಾಸ್ಟ್ ಫ಼ಾರ್ವರ್ಡ್) ಸಾಧ್ಯವಾಗಿಸುತ್ತದೆ.
  • ಜೊತೆಗೆ, ಮೊದಲೇ ಮುದ್ರಿಸಿದ "ಪೆಟ್ಟಿಗೆ ಕಟ್ಟುಗಳ" (ಬಾಕ್ಸ್‌ಡ್ ಸೆಟ್) ಹೆಚ್ಚು ಕಾರ್ಯಕ್ರಮ ಅವಧಿಗಳು (ಸೀಸ಼ನ್) ದೂರದರ್ಶನ ಕಾರ್ಯಕ್ರಮ ಸರಣಿಯ ಮಾರಾಟಕ್ಕೆ ನೀಡಲಾಗುತ್ತದೆ; ಟೀವಿ ಮೇಲೆ ಕಾರ್ಯಕ್ರಮಗಳನ್ನು ಕಡಿಮೆ ಜನ ನೋಡುತ್ತಾರೆ. ಆದರೆ, ಈ ಕಟ್ಟುಗಳು ಮಾರಾಟ ಮಾಡಲ್ಪಡುತ್ತವೆಂಬ ಸಂಗತಿಯ ಕಾರಣ ಈ ಕಟ್ಟುಗಳ ಮಾರಾಟದಿಂದ ಕಂಪನಿ ಹೆಚ್ಚುವರಿ ಲಾಭ ಪಡೆಯುತ್ತದೆ. ಈ ಪರಿಣಾಮವನ್ನು ವಿರೋಧಿಸಲು ಹಲವು ಜಾಹೀರಾತುದಾರರು ಸರ್ವೈವರ್‌ನಂತಹ ಟೀವಿ ಕಾರ್ಯಕ್ರಮಗಳ ಮೇಲೆ ಉತ್ಪನ್ನ ನಿಯೋಜನೆ ಮಾಡಲು ನಿರ್ಧರಿಸಿವೆ.
  • ವಿಶೇಷವಾಗಿ "ಮನೋರಂಜಕ" ಜಾಹೀರಾತಿನ ಉದಯದ ನಂತರ, ಕೆಲವು ಜನರು ಒಂದು ಜಾಹೀರಾತನ್ನು ಬಹಳ ಮೆಚ್ಚಿ ಅದನ್ನು ಆಮೇಲೆ ವೀಕ್ಷಿಸಲು ಅಥವಾ ಮಿತ್ರರಿಗೆ ತೋರಿಸಲು ಇಷ್ಟಟಡಬಹುದು. ಸಾಮನ್ಯವಾಗಿ, ಜಾಹೀರಾತು ಸಮುದಾಯ ಇಲ್ಲಿಯವರೆಗೂ ಇದನ್ನು ಸುಲಭ ಮಾಡಿಲ್ಲವಾದರೂ ಕೆಲವರು ತಮ್ಮ ಜಾಹೀರಾತುಗಳನ್ನು ನೋಡಲು ಮತ್ತು ಕೇಳಲು ಬಯಸುವವರಿಗೆ ವಿಸ್ತಾರವಾಗಿ ವಿತರಿಸಲು ಅಂತರಜಾಲವನ್ನು ಬಳಸಿದ್ದಾರೆ. ಜಾಹೀರಾತಿನ ಭವಿಷ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಶೈಲಿ, ನಿರ್ದಿಷ್ಟ ಆಕರ್ಷಣೆಯ (ನಿಚ್ ಆಡ್ಸ್) ಅಥವಾ ಉದ್ದೇಶಿತ ಜಾಹೀರಾತುಗಳ (ಟಾರ್ಗೆಟ್ ಆಡ್ಸ್) ಬೆಳೆಯುತ್ತಿರುವ ಪ್ರಾಮುಖ್ಯತೆ. ಅಂತರಜಾಲ ಮತ್ತು ದ ಲಾಂಗ್ ಟೇಲ್ ಸಿದ್ಧಾಂತ ಬಂದಾಗಿನಿಂದ, ವಿಜ್ಞಾಪಕರು ನಿರ್ದಿಷ್ಟ ಗುಂಪಿನ ಜನರನ್ನು ತಲುಪಲು ಹೆಚ್ಚೆಚ್ಚು ಸಾಮರ್ಥ್ಯ ಹೊಂದುತ್ತಾರೆ.
  • ಹಿಂದೆ, ಸಾಧ್ಯವಾದಷ್ಟು ಅತ್ಯಂತ ದೊಡ್ಡದಾದ ಸಮೂಹ ಮಾರುಕಟ್ಟೆ ಗುಂಪಿನ ಜನರನ್ನು ಒಳಗೊಳ್ಳುವುದು ಒಂದು ಸಂದೇಶವನ್ನು ತಲುಪಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿತ್ತು. ಆದರೆ, ಬಳಕೆಯ ಅನುಸರಣೆ (ಯೂಸೇಜ್ ಟ್ರ್ಯಾಕಿಂಗ್), ಗ್ರಾಹಕರ ಕಿರುಪರಿಚಯಗಳು (ಪ್ರೋಫೈಲ್) ಮತ್ತು ಅಂತರಜಾಲ ದೈನಿಕದಿಂದ (ಬ್ಲಾಗ್) ಸಾಮಾಜಿಕ ಸಂಪರ್ಕಜಾಲ ತಾಣಗಳವರೆಗೆ ಎಲ್ಲದರಿಂದ ತರಲ್ಪಟ್ಟ ನಿರ್ದಿಷ್ಟ ಆಕರ್ಷಣಾ ವಸ್ತುವಿನ ಬೆಳೆಯುತ್ತಿರುವ ಜನಪ್ರಿಯತೆ, ವಿಜ್ಞಾಪಕರಿಗೆ ಕಡಿಮೆ ಸಂಖ್ಯೆಯದಾದರೂ ಹೆಚ್ಚು ಸುನಿಶ್ಚಿತ ವೀಕ್ಷಕರನ್ನು ಒದಗಿಸುತ್ತದೆ, ಮತ್ತು ಇದರಿಂದ ವೀಕ್ಷಕರಿಗೆ ಹೆಚ್ಚು ಸಂಬದ್ಧವಾದ ಮತ್ತು ಕಂಪನಿಗಳ ವ್ಯಾಪಾರ ಉತ್ಪನ್ನಗಳಿಗೆ ಹೆಚ್ಚು ಪರಿಣಾಮಕಾರಿಯಾದ ಜಾಹೀರಾತುಗಳು ಬರುವುದಕ್ಕೆ ಕಾರಣವಾಗುತ್ತದೆ. ಉಳಿದವುಗಳಲ್ಲಿ, ಕಾಮ್‌ಕ್ಯಾಸ್ಟ್ ಸ್ಪಾಟ್‌ಲಾಯ್ಟ್ ಈ ವಿಧಾನವನ್ನು ತನ್ನ ಬೇಡಿಕೆಯ ಮೇರೆಗೆ ವೀಡಿಯೊ (ವೀಡಿಯೊ ಆನ್ ಡಿಮಾಂಡ್) ಪಟ್ಟಿಗಳಲ್ಲಿ ಬಳಸಿಕೊಳ್ಳುತ್ತಿರುವ ಅಂತಹ ಒಂದು ವಿಜ್ಞಾಪಕವಾಗಿದೆ.
  • ಈ ಜಾಹೀರಾತುಗಳು ಒಂದು ನಿರ್ದಿಷ್ಟ ಗುಂಪಿಗಾಗಿ ಉದ್ದೇಶಿತವಾಗಿರುತ್ತವೆ ಮತ್ತು ನೇರ ತಮ್ಮ ಮನೆಯಿಂದಲೇ ಯಾವುದೇ ಸಮಯಕ್ಕೆ ಒಂದು ನಿರ್ದಿಷ್ಟ ಉದ್ಯಮ ಅಥವಾ ವ್ಯವಹಾರದ ಬಗ್ಗೆ ಹೆಚ್ಚು ತಿಳಿಯಲು ಬಯಸುವ ಯಾರಿಂದಲೇ ಆಗಲಿ ನೋಡಬಹುದಾಗಿದೆ. ಇದು ವೀಕ್ಷಕನನ್ನು ಪೂರ್ವನಿಯಾಮಕವಾಗುವುದಕ್ಕೆ ಮತ್ತು ವಾಸ್ತವಿಕವಾಗಿ ತಾವು ನೋಡಲು ಬಯಸುವ ಜಾಹೀರಾತುಗಳನ್ನು ಆರಿಸಲು ಕಾರಣವಾಗುತ್ತದೆ.[೧೯]
  • ಸ್ವತಂತ್ರ ಜಾಹೀರಾತಿನಲ್ಲಿ, ಕಂಪನಿಗಳು ತಮ್ಮ ಉತ್ಪನ್ನಕ್ಕೆ ಜಾಹೀರಾತುಗಳನ್ನು ನಿರ್ಮಿಸಲು ಸಾರ್ವಜನಿಕ ಸ್ಪರ್ಧೆಗಳನ್ನು ಆಯೋಜಿಸುತ್ತವೆ ಮತ್ತು ಅತ್ಯುತ್ತಮವಾದದ್ದನ್ನು ವಿಸ್ತಾರವಾದ ವಿತರಣೆಗೆ ಆರಿಸಲಾಗುತ್ತದೆ ಮತ್ತು ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ೨೦೦೭ರ ಸೂಪರ್ ಬೋಲ್‌ನ ಅವಧಿಯಲ್ಲಿ, ಪೆಪ್ಸಿಕೊ, ಡೊರೀಟೋಸ್ ಗುರುತಿನ ಚಿಪ್ಸ್‌ನ ಒಂದು ೩೦-ಸೆಕೆಂಡಿನ ದೂರದರ್ಶನ ಜಾಹೀರಾತಿನ ನಿರ್ಮಾಣಕ್ಕಾಗಿ ಅಂತಹ ಒಂದು ಸ್ಪರ್ಧೆಯನ್ನು ಆಯೋಜಿಸಿತ್ತು ಮತ್ತು ವಿಜೇತನಿಗೆ ಒಂದು ನಗದು ಬಹುಮಾನ ನೀಡಿತ್ತು. ಶೆವ್ರಲೆ ತನ್ನ ಟಾಹೋ ಸರಣಿಯ ಕ್ರೀಡಾ ಉಪಯೋಗಿ ವಾಹನಗಳಿಗಾಗಿ (ಎಸ್‌ಯುವಿ) ಅಂತಹದೇ ಆದ ಒಂದು ಸ್ಪರ್ಧೆಯನ್ನು ಆಯೋಜಿಸಿತು.
  • ಆದರೆ ಈ ಜಾಹೀರಾತು ಪ್ರಕಾರ ಇನ್ನೂ ತನ್ನ ಶೈಶವಾವಸ್ಥೆಯಲ್ಲಿದೆ. ಇದು ಕಟ್ಟಕಡೆಯಲ್ಲಿ, ಸ್ವತಂತ್ರೋದ್ಯೋಗಿಗಳಿಗಾಗಿ ಒಂದು ಆವರಣ ನಿರ್ಮಿಸಿ ಜಾಹೀರಾತು ಸಂಸ್ಥೆಗಳ ಪ್ರಾಮುಖ್ಯತೆಯನ್ನು ಕಡಿಮೆ ಮಾಡಬಹುದು. ಹುದುಗಿಸಿದ ಜಾಹೀರಾತು (ಎಂಬೆಡಡ್) ಅಥವಾ ಚಲನಚಿತ್ರದಲ್ಲಿನ ಜಾಹೀರಾತು ನಿಯೋಜನೆಗಳು ಈಗ ಹಿಂದೆಂದಿಗಿಂತ ಒಂದು ದೊಡ್ಡದಾದ ಗಾತ್ರ ಪಡೆದಿದೆ. ಕ್ರಿಶ್‌ನಂತಹ ಚಲನಚಿತ್ರಗಳು ಲೇ'ಸ್ , ಬೋರ್ನ್‌ವೀಟಾ, ಸ್ಯಾಮ್‌ಸಂಗ್, ಫ಼ಾಬರ್ ಕಸ್ಟೆಲ್ ಮತ್ತು ಹೀರೊ ಹೊಂಡಾ ಸಹಿತ ಹನ್ನೆರಡಕ್ಕಿಂತ ಹೆಚ್ಚು ನಿಯೋಜನೆಗಳನ್ನು ಹೊಂದಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. "ಟಿಎನ್ಎಸ್ ಮಾಧ್ಯಮ ಪ್ರಜ್ಞೆ". Archived from the original on 2007-09-30. Retrieved 2008-10-11.
  2. "ಜಾಗತಿಕ ಮನೋರಂಜನೆ ಮತ್ತು ಮಾಧ್ಯಮ ದೃಷ್ಟಿಕೋನ: ೨೦೦೬–೨೦೧೦, ಜಾಗತಿಕ ಹಣಕಾಸು ಸಂಸ್ಥೆ ಪ್ರಾಯ್ಸ್‌ವಾಟರ್‌ಹೌಸ್‌ಕೂಪರ್ಸ್ ಪ್ರಕಟಿಸಿದ ಒಂದು ವರದಿ". Archived from the original on 2007-09-26. Retrieved 2008-10-11.
  3. ಸ್ಲ್ಯಾಶ್‌ಡಾಟ್ | ಐಎಸ್‌ಪಿ ನಿರ್ವಾಹಕ ಬ್ಯಾರಿ ಶಾಯ್ನ್ ಸ್ಪ್ಯಾಮ್ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ
  4. "ವಾಣಿಜ್ಯ ಎಚ್ಚರಿಕೆ — ವ್ಯಾಪಾರೀ ಬುದ್ಧಿ ಯಿಂದ ಸಮುದಾಯಗಳನ್ನು ರಕ್ಷಿಸುವುದು". Archived from the original on 2009-04-22. Retrieved 2008-10-11.
  5. "ವ್ಯಾಪಾರಿಗಳು ಮಕ್ಕಳನ್ನು ಹೇಗೆ ತಮ್ಮ ಗುರಿ ಸಾಧಿಸಲು ಬಳಸಿಕೊಳ್ಳುತ್ತಾರೆ". Archived from the original on 2009-04-16. Retrieved 2008-10-11.
  6. Bhatia (2000). Advertising in Rural India: Language, Marketing Communication, and Consumerism, 62+68
  7. ೭.೦ ೭.೧ Eskilson, Stephen J. (2007). Graphic Design: A New History. New Haven, Connecticut: Yale University Press, 58. ISBN 978-0-300-12011-0. 
  8. ೮.೦ ೮.೧ McChesney, Robert, Educators and the Battle for Control of U.S. Broadcasting, 1928-35, Rich Media, Poor Democracy, ISBN 0-252-02448-6 (1999)
  9. "ಸಾರ್ವಜನಿಕ ಹಿತಾಸಕ್ತಿ, ಸೌಕರ್ಯ ಮತ್ತು ಆವಶ್ಯಕತೆ". Archived from the original on 2009-02-16. Retrieved 2008-10-12.
  10. ೧೯೧೯ರಿಂದ ಅಮೇರಿಕಾದ ವಾರ್ಷಿಕ ಜಾಹೀರಾತು ವೆಚ್ಚ
  11. ಯುಎಸ್ಎಟುಡೆ.ಕಾಮ್ - ಅಂಕೀಯವಾಗಿ ಅಳವಡಿಸಲಾದ ಜಾಹೀರಾತುಗಳು ಕ್ರೀಡೆಯಲ್ಲಿ ಹೆಚ್ಚು ಪಾಪ್-ಅಪ್ ಆಗುತ್ತವೆ
  12. ಗ್ಲೋಬ್ಆಂಡ್‌ಮೇಲ್.ಕಾಮ್: ವ್ಯಾಪಾರ
  13. "ಮಿಥ್ಯಾ ಜಾಹೀರಾತು". Archived from the original on 2009-05-18. Retrieved 2008-10-16.
  14. 2006/01/02/business/media/ 02digital.html&OQ=_rQ3D1&OP =295c0536Q2FQ5B6ZQ3DQ5B amQ2BpemmbtQ5BtQ3F Q3FQ3AQ5BQ3FqQ 5BQ3FtQ5B Q3DQ24p.Q5DZppQ5BIZa.Q2FQ5BQ3Fta.d.bQ2FyPibIy ಜಾಹೀರಾತಿನ ನಸುಬೆಳಕು ವಲಯ: ಮುಂದಿರುವ ಆ ತೋರ್ಗಂಬ ಮಿಥ್ಯಾ ಉತ್ಪನ್ನವಿರಬಹುದು - ನ್ಯೂ ಯಾರ್ಕ್ ಟೈಮ್ಸ್
  15. ಈ-ಕಾಮರ್ಸ್ ಟೈಮ್ಸ್‌ಗೆ ಸ್ವಾಗತ
  16. "ಸ್ಕ್ರಬ್‌ಗೆ ಸ್ವಾಗತ". Archived from the original on 2009-04-22. Retrieved 2008-10-17.
  17. ಹೇಗೆ ಹೆದ್ದಾರಿ ಸುಂದರೀಕರಣ ನಿಯಮ ಒಂದು ಕಾನೂನಾಯಿತು
  18. ಸೌ ಪೌಲೊದಲ್ಲಿ ಜಾಹೀರಾತು ಫಲಕಗಳ ನಿಷೇಧ ಜಾಹೀರಾತುದಾರರನ್ನು ಕೆರಳಿಸಿದೆ - ಅಮೇರಿಕಾಗಳು - ಇಂಟರ್‌ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್
  19. "ಪ್ರತಿಕ್ರಿಯಾತ್ಮಕ - ವಿಒಡಿ" Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ. ಕಾಮ್‌ಕ್ಯಾಸ್ಟ್ ಸ್ಪಾಟ್‌ಲಾಯ್ಟ್ ಅಂತರಜಾಲ ತಾಣ, ಅಕ್ಟೋಬರ್ ೫, ೨೦೦೬




ಗ್ರಂಥಸೂಚಿ

[ಬದಲಾಯಿಸಿ]
  • Bhatia, Tej K. 2000. Advertising in Rural India: Language, Marketing Communication, and Consumerism. Institute for the Study of Languages and Cultures of Asia and Africa. Tokyo University of Foreign Studies. Tokyo Press: Japan. ISBN 4-87297-782-3
  • Clark, Eric, "The Want Makers", Viking, 1988. ISBN 0340320281
  • Cook, Guy (2001 2nd edition) "The Discourse of Advertising", London: Routledge, ISBN 0-415-23455-7
  • Graydon, Shari (2003) "Made You Look - How Advertising Works and Why You Should Know", Toronto: Annick Press, ISBN 1-55037-814-7
  • Johnson, J. Douglas, "Advertising Today", Chicago: Science Research Associates, 1978. ISBN 0-574-19355-3
  • Klein, Naomi (2000) No Logo . Harper-Collins, ISBN 0-00-653040-0
  • Kleppner, Otto, "Advertising Procedure", Englewood Cliffs, N.J., Prentice-Hall, 1966.
  • Kotabe, Masaki and Kristiaan Helsen, Global Marketing Management, 3rd Edition, John Wiley & Sopns, Inc, publishers, Copyright 2004, ISBN 0-471-23062-6
  • Lears, Jackson, Fables of Abundance: A Cultural History of Advertising in America, Basic Books, 1995, ISBN 0465090753
  • Leon, Jose Luis (1996) "Los effectos de la publicidad". Barcelona: Ariel, ISBN 84-344-1266-7
  • Leon, Jose Luis (2001) "Mitoanálisis de la publicidad". Barcelona. Ariel, ISBN 84-344-1285-3
  • Mulvihill, Donald F., "Marketing Research for the Small Company", Journal of Marketing, Vol. 16, No. 2, Oct., 1951, pp. 179–183.
  • Packard, Vance, The Hidden Persuaders, New York, D. McKay Co., 1957.
  • Petley, Julian (2002) "Advertising". North Mankato, Minnesota: Smart Apple Media., ISBN 1-58340-255-1
  • Young, Charles E., The Advertising Handbook, Ideas in Flight, Seattle, WA April 2005, ISBN 0-9765574-0-1
  • Wernick, Andrew (1991) "Promotional Culture: Advertising, Ideology and Symbolic Expression (Theory, Culture & Society S.)", London: Sage Publications Ltd, ISBN 0-8039-8390-5

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಅಮೂಲ್ಯವಾದ ದಾಖಲೆಗಳು

[ಬದಲಾಯಿಸಿ]