ಆಡಿ
ಸಂಸ್ಥೆಯ ಪ್ರಕಾರ | Private company, subsidiary of Volkswagen Group (FWB Xetra: NSU) |
---|---|
ಸ್ಥಾಪನೆ | Zwickau, ಜರ್ಮನಿ on July 16, 1909 [೧] |
ಸಂಸ್ಥಾಪಕ(ರು) | August Horch |
ಮುಖ್ಯ ಕಾರ್ಯಾಲಯ | Ingolstadt, Germany |
ಕಾರ್ಯಸ್ಥಳಗಳ ಸಂಖ್ಯೆ | production locations: Germany: Ingolstadt & Neckarsulm; Hungary: Győr; Belgium: Brussels;; China: Changchun; India: Aurangabad |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Rupert Stadler Chairman of the Board of Management, Martin Winterkorn Chairman of the Supervisory Board (Volkswagen AG) |
ಉದ್ಯಮ | Automotive industry |
ಉತ್ಪನ್ನ | Automobiles, Engines |
ಆದಾಯ | € 33.617 billion (2007) [೨] |
ನಿವ್ವಳ ಆದಾಯ | € 2.915 billion (2007) |
ಒಟ್ಟು ಪಾಲು ಬಂಡವಾಳ | 37.0%[ಸೂಕ್ತ ಉಲ್ಲೇಖನ ಬೇಕು] |
ಉದ್ಯೋಗಿಗಳು | 53,347 (2007) |
ಉಪಸಂಸ್ಥೆಗಳು | quattro GmbH, Lamborghini S.p.A., Audi Hungaria Motor Kft |
ಜಾಲತಾಣ | Audi.com |
AUDI AG (ಕ್ಸೆಟ್ರಾ: NSU Archived 2010-02-21 ವೇಬ್ಯಾಕ್ ಮೆಷಿನ್ ನಲ್ಲಿ.) ಎಂಬುದು ಒಂದು ಜರ್ಮನ್ ಕಂಪನಿಯಾಗಿದ್ದು, ಆಡಿ ಬ್ರಾಂಡ್‌ನ pronounced /'aʊdi/ ಅಡಿಯಲ್ಲಿ ಅದು ಕಾರುಗಳನ್ನು ತಯಾರಿಸುತ್ತದೆ. ಇದು ವೋಕ್ಸ್‌ವ್ಯಾಗನ್ ಸಮೂಹದ ಒಂದು ಭಾಗವಾಗಿದೆ. ಆಡಿ ಎಂಬ ಹೆಸರು ಆಗಸ್ಟ್ ಹಾರ್ಚ್ ಎಂಬ ಸಂಸ್ಥಾಪಕನ ಕುಲನಾಮದ ಒಂದು ಲ್ಯಾಟಿನ್ ಭಾಷಾಂತರವಾಗಿದ್ದು, ಅದು ಸ್ವತಃ “ಕೇಳು!" (ಲಿಸನ್) ಎಂಬುದಕ್ಕಿರುವ ಜರ್ಮನ್ ಪದವಾಗಿದೆ. ಜರ್ಮನಿಯ ಬವೇರಿಯಾದ ಇಂಗ್ಲೋಸ್ಟಾಡ್‌ನಲ್ಲಿ ಆಡಿ ಕಂಪನಿಯ ಕೇಂದ್ರ ಕಚೇರಿಯಿದೆ.1964ರಿಂದಲೂ ಇದು ವೋಕ್ಸ್‌ವ್ಯಾಗನ್ ಸಮೂಹದ (ವೋಕ್ಸ್‌ವ್ಯಾಗನ್ AG) ಸಂಪೂರ್ಣ-ಸ್ವಾಮ್ಯದ (99.55%) ಒಂದು ಅಂಗಸಂಸ್ಥೆಯಾಗಿದೆ. ಹಿಂದಿನ ಮಾಲೀಕನಾದ ಡೈಮ್ಲರ್ ಬೆಂಝ್‌ನಿಂದ ಆಟೋ ಯುನಿಯನ್‌ನ ಸ್ವತ್ತುಗಳನ್ನು ವೋಕ್ಸ್‌ವ್ಯಾಗನ್ ಸಮೂಹವು ಖರೀದಿಸಿದ್ದರ ಒಂದು ಭಾಗವಾಗಿ ಆಡಿ ಎಂಬ ಹೆಸರನ್ನು ಗಳಿಸಿದ ನಂತರದ ಸ್ವಲ್ಪ ಕಾಲದಲ್ಲೇ, 1965ರಲ್ಲಿ ಆಡಿ 60/72/75/80/ಸೂಪರ್ 90 ಶ್ರೇಣಿಯ (ನಿಶ್ಚಿತವಾದ ರಫ್ತು ಮಾರುಕಟ್ಟೆಗಳಲ್ಲಿ ಕೇವಲ "ಆಡಿ" ಎಂಬ ಹೆಸರಿನಲ್ಲಿಯೇ ಮಾರಲ್ಪಡುವ) ಪರಿಚಯವಾಗುವುದರೊಂದಿಗೆ ವೋಕ್ಸ್‌ವ್ಯಾಗನ್ ಸಮೂಹವು ಆಡಿ ಬ್ರಾಂಡ್‌ನ್ನು ಮರುಬಿಡುಗಡೆ ಮಾಡಿತು.
ಇತಿಹಾಸ
[ಬದಲಾಯಿಸಿ]ಕಂಪನಿಯ ಹುಟ್ಟು ಮತ್ತು ಅದರ ಹೆಸರು
[ಬದಲಾಯಿಸಿ]ಕಂಪನಿಯ ಹುಟ್ಟಿನ ಜಾಡನ್ನು ಕೆದಕಿದಾಗ, ಅದು ಮೂಲವನ್ನು 1899ರ ಇಸವಿಯಷ್ಟು ಹಿಂದಕ್ಕೆ ಮತ್ತು ಆಗಸ್ಟ್ ಹಾರ್ಚ್‌ವರೆಗೆ ತಂದು ಮುಟ್ಟಿಸುತ್ತದೆ. ಮೊಟ್ಟಮೊದಲ ಹಾರ್ಚ್ ಮೋಟಾರು ವಾಹನವು 1901ರಲ್ಲಿ ಝ್ವಿಕ್ಕಾವ್‌ನಲ್ಲಿ ತಯಾರಿಸಲ್ಪಟ್ಟಿತು.[೩] 1909ರಲ್ಲಿ, ತಾನು ಸಂಸ್ಥಾಪಿಸಿದ ಕಂಪನಿಯಿಂದಲೇ ಹಾರ್ಚ್ ಬಲವಂತವಾಗಿ ಹೊರಬರಬೇಕಾಯಿತು.[೩] ನಂತರ ಆತ ಝ್ವಿಕ್ಕಾವ್‌ನಲ್ಲಿ ಹೊಸತೊಂದು ಕಂಪನಿಯನ್ನು ಆರಂಭಿಸಿ, ಹಾರ್ಚ್ ಬ್ರಾಂಡ್‌ನ ಬಳಕೆಯನ್ನು ಮುಂದುವರೆಸಿದ.[೪]ಸರಕು ಮುದ್ರೆಯ (ಟ್ರೇಡ್‌ಮಾರ್ಕ್‌ನ) ಉಲ್ಲಂಘನೆ ಮಾಡಿದ್ದಕ್ಕಾಗಿ ಆತನ ಹಿಂದಿನ ಪಾಲುದಾರರು ಅವನ ಮೇಲೆ ಮೊಕದ್ದಮೆ ಹೂಡಿದರು ಮತ್ತು ಹಾರ್ಚ್ ಬ್ರಾಂಡ್ ಆತನ ಹಿಂದಿನ ಕಂಪನಿಗೆ ಸೇರಿದ್ದೆಂದು ಜರ್ಮನ್ ನ್ಯಾಯಾಲಯವೊಂದು ತೀರ್ಮಾನಿಸಿತು.[೩] ತನ್ನ ಹೊಸ ಕಾರು ವ್ಯವಹಾರದಲ್ಲಿ ತನ್ನದೇ ಸ್ವಂತ ಕುಟುಂಬ ನಾಮವನ್ನು ಬಳಸದಂತೆ ಆಗಸ್ಟ್ ಹಾರ್ಚ್‌ನನ್ನು ಪ್ರತಿಬಂಧಿಸಲಾಯಿತು. ಆದ್ದರಿಂದ, ತನ್ನ ಕಂಪನಿಗೆ ಹೊಸತೊಂದು ಹೆಸರನ್ನು ನೀಡಲು ಫ್ರಾಂಝ್ ಫಿಕೆನ್ಟ್‌ಷೆರ್‌ನ ವಾಸದ ಸಮುಚ್ಚಯದಲ್ಲಿ ಆತ ಒಂದು ಸಭೆಯನ್ನು ಕರೆದ. ಈ ಸಭೆ ನಡೆಯುವ ಅವಧಿಯಲ್ಲಿ ಫ್ರಾಂಝ್‌ನ ಮಗ ಕೋಣೆಯ ಮೂಲೆಯೊಂದರಲ್ಲಿ ಸದ್ದಿಲ್ಲದಂತೆ ಲ್ಯಾಟಿನ್‌ನ್ನು ಅಧ್ಯಯನ ಮಾಡುತ್ತಿದ್ದ. ಹಲವಾರು ಬಾರಿ ಏನನ್ನೋ ಹೇಳಬೇಕೆಂಬ ತವಕದಲ್ಲಿ ಆತ ಇರುವಂತೆ ತೋರುತ್ತಿತ್ತು; ಆದರೆ ತನ್ನ ಮಾತುಗಳನ್ನು ಒಳಗೇ ನುಂಗಿಕೊಂಡು, ತನ್ನ ಕೆಲಸವನ್ನು ಮುಂದುವರಿಸುತ್ತಿರುವಂತೆ ಕಂಡುಬರುತ್ತಿತ್ತು. ಕೊನೆಗೂ ಆತ, "ಅಪ್ಪಾ– ಆಡಿಯೇಟರ್ ಎಟ್ ಆಲ್ಟೆರಾ ಪಾರ್ಸ್ ... ಹಾರ್ಚ್ ಎಂದು ಕರೆಯುವ ಬದಲು ಅದನ್ನು ಆಡಿ ಎಂದು ಕರೆಯುವುದು ಒಂದು ಒಳ್ಳೆಯ ಉಪಾಯವಲ್ಲವಾ?" ಎಂದು ಹೇಳುವ ಮೂಲಕ ಮನದಾಳದ ಮಾತನ್ನು ಥಟ್ಟನೆ ಆಡಿಯೇಬಿಟ್ಟ. "ಹಾರ್ಚ್!" ಎಂದರೆ ಜರ್ಮನ್ ಭಾಷೆಯಲ್ಲಿ "ಕಿವಿಗೊಟ್ಟು ಕೇಳು!" ಅಥವಾ "ಆಲಿಸು" ಎಂದರ್ಥ. ಇದಕ್ಕೆ ಲ್ಯಾಟಿನ್ ಭಾಷೆಯಲ್ಲಿ "ಆಡಿ" ಎಂಬ ಹೆಸರಿದೆ (ಕೇಳಿಸುವ ಎಂಬುದಕ್ಕೆ ಹೋಲಿಸಿ). ಆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಈ ಕಲ್ಪನೆಯನ್ನು ಉತ್ಸಾಹಭರಿತರಾಗಿ ಪುರಸ್ಕರಿಸಿ ಒಪ್ಪಿದರು.[೫] AUDI ಎಂಬ ಹೆಸರು "ಆಟೋ ಯುನಿಯನ್ ಡ್ಯೂಯಿಷ್‌ಲೆಂಡ್ ಇಂಗ್ಲೋಸ್ಟಾಡ್" ಎಂಬ ಪದಗುಚ್ಛದ ಪ್ರಥಮಾಕ್ಷರಿಯಾಗಿ ನಿಲ್ಲುತ್ತದೆ ಎಂದು ಕೆಲವೊಮ್ಮೆ ತಪ್ಪಾಗಿ ಅರ್ಥೈಸಲಾಗಿದೆ; ಆದರೆ ಇದು ಕೇವಲ ಒಂದು ಚತುರತೆಯ ಹಿನ್ನೆಲೆಯಾಕ್ಷರಿ (backronym) ಆಗಿದೆಯೇ ಹೊರತು, ಕಂಪನಿಯ ಹೆಸರಿನ ನಿಜವಾದ ಮೂಲವಲ್ಲ.2,612 ಸಿಸಿ (2.6 ಲೀಟರ್) ನಾಲ್ಕು ಸಿಲಿಂಡರು ಮಾದರಿ[clarification needed]ಯ ಒಂದು ಕಾರಿನೊಂದಿಗೆ ಆಡಿ ಕಾರು ತನ್ನ ಚಟುವಟಿಕೆಯನ್ನು ಪ್ರಾರಂಭಿಸಿತು. ಇದಾದ ನಂತರ 3564 ಸಿಸಿ (3.6 L) ಮಾದರಿ, 4680 ಸಿಸಿ (4.7 L) ಮಾದರಿ ಹಾಗೂ 5720 ಸಿಸಿ (5.7L) ಮಾದರಿಗಳು ಹೊರಬಂದವು. ಈ ಕಾರುಗಳು ಕ್ರೀಡಾಸ್ಪರ್ಧೆಗಳಲ್ಲೂ ಯಶಸ್ಸನ್ನು ಕಂಡವು. ಮೊಟ್ಟಮೊದಲ ಆರು ಸಿಲಿಂಡರು ಮಾದರಿಯಾದ[clarification needed] 4655 ಸಿಸಿ (4.7 L) 1924ರಲ್ಲಿ ಕಾಣಿಸಿಕೊಂಡಿತು.ಸಾರಿಗೆ ಸಚಿವಖಾತೆಯಲ್ಲಿ ಒಂದು ಉನ್ನತ ಸ್ಥಾನಮಾನವು ದೊರಕಿದ್ದರಿಂದ, 1920ರಲ್ಲಿ ಆಗಸ್ಟ್ ಹಾರ್ಚ್ ಆಡಿ ಕಂಪನಿಯನ್ನು ಬಿಟ್ಟರೂ, ಧರ್ಮದರ್ಶಿ ಮಂಡಳಿಯ ಓರ್ವ ಸದಸ್ಯನ ರೂಪದಲ್ಲಿ ಆತ ಆಡಿ ಕಂಪನಿಯೊಂದಿಗೆ ತೊಡಗಿಸಿಕೊಂಡಿದ್ದ. 1921ರ ಸೆಪ್ಟೆಂಬರ್‌ನಲ್ಲಿ, ಒಂದು ಉತ್ಪಾದನಾ ಕಾರನ್ನು ಪ್ರಸ್ತುತ ಪಡಿಸುವ ಮೂಲಕ ಆಡಿ ಕಂಪನಿಯು ಮೊಟ್ಟಮೊದಲ ಜರ್ಮನ್ ಕಾರು ತಯಾರಕನೆಂಬ ಹೆಸರುಪಡೆಯಿತು. ಆಡಿ ಟೈಪ್ K ಎಂಬ ಈ ಮಾದರಿಯು ಎಡ-ಭಾಗದಲ್ಲಿನ ಚಾಲನಾ ವಿನ್ಯಾಸವನ್ನು ಒಳಗೊಂಡಿತ್ತು.[೬] ಎಡ-ಭಾಗದಲ್ಲಿನ ಚಾಲನಾ ವಿನ್ಯಾಸವು ಎದುರುಗಡೆಯಿಂದ ಬರುವ ವಾಹನ-ಸಂಚಾರದ ಒಂದು ಉತ್ತಮ ನೋಟವನ್ನು ನೀಡುವುದರ ಮೂಲಕ ವಾಹನಗಳನ್ನು ದಾಟಿ ಹಿಂದಕ್ಕೆ ಹಾಕುವ ಕುಶಲಚಲನೆಗಳನ್ನು ಕ್ಷೇಮಕರವಾಗಿಸಿತು. ಇದರಿಂದಾಗಿ, ಸದರಿ ಚಾಲನಾ ವಿನ್ಯಾಸದ ಮಹತ್ವವು 1920ರ ದಶಕದಲ್ಲಿ ಎಲ್ಲೆಡೆ ಹಬ್ಬಿತು ಮತ್ತು ಪ್ರಾಬಲ್ಯವನ್ನು ಸ್ಥಾಪಿಸಿತು.[೬]
ಆಟೋ ಯುನಿಯನ್ ಯುಗ
[ಬದಲಾಯಿಸಿ]DKWನ ಮಾಲೀಕನಾದ ಜೋರ್ಗನ್ ರಾಸ್‌ಮುಸ್ಸೆನ್ 1928ರ ಆಗಸ್ಟ್‌ನಲ್ಲಿ ಆಡಿವೆರ್ಕ್ AGಯಲ್ಲಿನ ಬಹುಪಾಲು ಷೇರುಗಳನ್ನು ತನ್ನದಾಗಿಸಿಕೊಂಡ.[೭] ಅದೇ ವರ್ಷದಲ್ಲಿ, ಎಂಟು ಸಿಲಿಂಡರು ಎಂಜಿನುಗಳಿಗಾಗಿ ಮೀಸಲಾದ ತಯಾರಿಕಾ ಉಪಕರಣವನ್ನು ಒಳಗೊಂಡಂತೆ USನ ಮೋಟಾರು ವಾಹನ ತಯಾರಕನಾದ ರಿಕೆನ್‌ಬ್ಯಾಕರ್ ಕಂಪನಿಯ ಉಳಿಕೆಗಳನ್ನು ರಾಸ್‌ಮುಸ್ಸೆನ್ ತಂದ. ಈ ಎಂಜಿನುಗಳು 1929ರಲ್ಲಿ ಬಿಡುಗಡೆಯಾದ ಆಡಿ ಝ್ವಿಕ್ಕಾವ್ ಮತ್ತು ಆಡಿ ಡ್ರೆಸ್ಡನ್ ಮಾದರಿಗಳಲ್ಲಿ ಬಳಸಲ್ಪಟ್ಟವು. ಅದೇ ವೇಳೆಗೆ, ಆರು ಸಿಲಿಂಡರು ಮತ್ತು ನಾಲ್ಕು ಸಿಲಿಂಡರು (ಪಿಯುಗಿಯೊದಿಂದ ಪರವಾನಗಿ ಪಡೆದದ್ದು) ಮಾದರಿಗಳು ತಯಾರಾದವು. ಆ ಯುಗದ ಆಡಿ ಕಾರುಗಳು ವಿಶೇಷವಾದ ಸರ್ವಾಂಗೀಣ ವಿನ್ಯಾಸವನ್ನೊಳಗೊಂಡಿದ್ದ ವಿಲಾಸಿ ಕಾರುಗಳಾಗಿದ್ದವು. 1932ರಲ್ಲಿ, ಆಡಿ ಕಂಪನಿಯು ಹಾರ್ಚ್, DKW ಮತ್ತು ವಾಂಡರರ್ ಕಂಪನಿಗಳೊಂದಿಗೆ ವಿಲೀನಗೊಂಡು ಆಟೋ ಯುನಿಯನ್‌ನ ರೂಪುಗೊಳ್ಳುವಿಕೆಗೆ ಕಾರಣವಾಯಿತು. ಇದೇ ಅವಧಿಯಲ್ಲೇ ಕಂಪನಿಯು ಆಡಿ ಫ್ರಂಟ್ ಎಂಬ ಕಾರನ್ನು ಬಿಡುಗಡೆಮಾಡಿತು. ಇದು ಆರು ಸಿಲಿಂಡರಿನ ಎಂಜಿನೊಂದನ್ನು ಮುಂಚಕ್ರ ಚಾಲನೆಯೊಂದಿಗೆ ಸಂಯೋಜಿಸಿದ್ದ ಮೊಟ್ಟಮೊದಲ ಐರೋಪ್ಯ ಕಾರಾಗಿತ್ತು. ವಾಂಡರರ್‌ನೊಂದಿಗೆ ಹಂಚಿಕೊಳ್ಳಲಾದ ಘಟಕವೊಂದನ್ನು ಬಳಸಿಕೊಳ್ಳುವ ಮೂಲಕ ಇದನ್ನು ತಯಾರಿಸಲಾಗಿದ್ದು, ಡ್ರೈವ್ ಶಾಫ್ಟ್ ಮುಂಭಾಗಕ್ಕೆ ಎದುರಾಗಿರುವಂತೆ ಮಾಡುವಲ್ಲಿ ಡಿಗ್ರಿ ಕೋನದ ಮೂಲಕ ಅದು ತಿರುಗುತ್ತಿತ್ತು. IIನೇ ಜಾಗತಿಕ ಯುದ್ಧಕ್ಕೂ ಮೊದಲು, ಈ ನಾಲ್ಕು ಬ್ರಾಂಡ್‌ಗಳನ್ನು ಪ್ರತಿನಿಧಿಸಲು ಅಥವಾ ಸೂಚಿಸಲು, ನಾಲ್ಕು ಅಂತರಸಂಪರ್ಕಿತ ಉಂಗುರಗಳನ್ನು ಆಟೋ ಯುನಿಯನ್ ಬಳಸಿತು. ಆ ಉಂಗುರಗಳೇ ಇಂದು ಆಡಿ ಕಂಪನಿಯ ಲಾಂಛನಬಿಲ್ಲೆ (ಬ್ಯಾಜ್) ಆಗಿದೆ. ಆದರೂ, ಆ ಸಮಯದಲ್ಲಿದ್ದ ಆಟೋ ಯುನಿಯನ್ ರೇಸಿಂಗ್ ಕಾರುಗಳ ಮೇಲೆ ಮಾತ್ರವೇ ಈ ಬ್ಯಾಜ್‌ಗಳನ್ನು ಬಳಸಲಾಯಿತು. ಉಳಿದ ಸದಸ್ಯ ಕಂಪನಿಗಳು ತಂತಮ್ಮ ಸ್ವಂತ ಹೆಸರುಗಳು ಹಾಗೂ ಲಾಂಛನಗಳನ್ನು ಬಳಸಿದವು. ತಾಂತ್ರಿಕ ಅಭಿವೃದ್ಧಿಯ ಮೇಲೆ ಹೆಚ್ಚು ಹೆಚ್ಚು ಗಮನವನ್ನು ಕೇಂದ್ರೀಕರಿಸಲಾಯಿತು ಮತ್ತು ಕೆಲವೊಂದು ಆಡಿ ಕಾರು ಮಾದರಿಗಳು ಹಾರ್ಚ್ ಅಥವಾ ವಾಂಡರರ್ ನಿರ್ಮಿತ ಎಂಜಿನುಗಳನ್ನ ಬಳಸಿಕೊಂಡು ಚಾಲನೆಗೊಂಡವು. ಆ ಸಮಯದಲ್ಲಿ ತಲೆದೋರಿದ ಆರ್ಥಿಕ ಒತ್ತಡವನ್ನು ಪ್ರತಿಬಿಂಬಿಸುವಂತೆ, 1930ರ ದಶಕದಾದ್ಯಂತ ಸಣ್ಣಗಾತ್ರದ ಕಾರುಗಳ ತಯಾರಿಕೆಯೆಡೆಗೆ ಆಟೋ ಯುನಿಯನ್ ಕಂಪನಿಯು ಹೆಚ್ಚಿನ ಪ್ರಮಾಣದಲ್ಲಿ ಗಮನವನ್ನು ಕೇಂದ್ರೀಕರಿಸಿತು. ಇದರಿಂದಾಗಿ 1938ರ ವೇಳೆಗೆ ಜರ್ಮನ್ ಕಾರು ಮಾರುಕಟ್ಟೆಯಲ್ಲಿನ ಕಾರುಗಳ ಪೈಕಿ DKW ಬ್ರಾಂಡ್ 17.9%ನಷ್ಟು ಭಾಗವನ್ನು ಆಕ್ರಮಿಸಿಕೊಂಡರೆ, ಆಡಿ ಕಂಪನಿಯು ಕೇವಲ 0.1%ನಷ್ಟು ಭಾಗಕ್ಕೆ ತೃಪ್ತಿಕಾಣಬೇಕಾಯಿತು.
IIನೇ ಜಾಗತಿಕ ಯುದ್ಧದ ನಂತರದ ಚಿತ್ರಣ
[ಬದಲಾಯಿಸಿ]ಬಹುತೇಕ ಜರ್ಮನ್ ತಯಾರಿಕಾ ವ್ಯವಸ್ಥೆಗಳಂತೆ, IIನೇ ಜಾಗತಿಕ ಯುದ್ಧವು ಬಿರುಸಾಗಿ ಆರಂಭಗೊಂಡ ನಂತರ, ಆಟೋ ಯುನಿಯನ್‌ನ ಘಟಕಗಳು ಸೇನಾ ಅಗತ್ಯದ ತಯಾರಿಕೆಗಾಗಿ ಹೊಸ ಉಪಕರಣಗಳಿಂದ ಸಜ್ಜುಗೊಳಿಸಲ್ಪಟ್ಟವು, ಮತ್ತು ಯುದ್ಧವು ಮುಂದುವರಿಯುತ್ತಿದ್ದಂತೆಯೇ ಅವು ಒಡನೆಯೇ ಬಾಂಬ್ ದಾಳಿಗೆ[ಸೂಕ್ತ ಉಲ್ಲೇಖನ ಬೇಕು] ಗುರಿಯಾದವು. ಹೀಗಾಗಿ ಅವೆಲ್ಲವೂ ತೀವ್ರವಾಗಿ ಹಾನಿಗೊಳಗಾದವು. ಸೋವಿಯತ್ ಒಕ್ಕೂಟದ ಸೇನಾ ಆಡಳಿತದ ಆದೇಶಾನುಸಾರ 1945ರಲ್ಲಿ ರಷ್ಯಾದ ಸೇನೆಯಿಂದ ದಾಳಿಯಾಗಿದ್ದರಿಂದ, ಯುದ್ಧ ಪರಿಹಾರಧನಗಳ ಒಂದು ಭಾಗವಾಗಿ ಅವನ್ನು ಕಳಚಿ ಬಿಡಿಬಿಡಿ ಮಾಡಲಾಯಿತು.[೮] ಇದನ್ನನುಸರಿಸಿ, ಕಂಪನಿಯ ಸಂಪೂರ್ಣ ಸ್ವತ್ತುಗಳನ್ನು ಯಾವುದೇ ಪರಿಹಾರಧನ ನೀಡದೆಯೇ ಕಸಿದುಕೊಳ್ಳಲಾಯಿತು.[೮] 1948ರ ಆಗಸ್ಟ್ 17ರಂದು ಚೆಮ್ನಿಟ್ಜ್‌ನ ಆಟೋ ಯುನಿಯನ್ AGಯನ್ನು ವಾಣಿಜ್ಯೋದ್ದೇಶದ ದಾಖಲಾತಿ ಪುಸ್ತಕದಿಂದ ತೆಗೆದುಹಾಕಲಾಯಿತು.[೮] ಈ ನಡೆಗಳ ಮೇಲೆ ಜರ್ಮನಿಯ ಆಟೋ ಯುನಿಯನ್ AGಯನ್ನು ಮಟ್ಟಹಾಕಿದುದರ ಪ್ರಭಾವವಿತ್ತು. ಝ್ವಿಕ್ಕಾವ್‌ನ ಆಡಿ ಘಟಕದ ಅವಶೇಷಗಳು ಅಥವಾ ಉಳಿಕೆಗಳು VEB ("ಜನರ ಸ್ವಾಮ್ಯದ ಉದ್ಯಮಕ್ಕಾಗಿ") ಆಟೋಮೊಬೈಲ್ವೆರ್ಕ್ ಝ್ವಿಕ್ಕಾವ್, ಅಥವಾ ಚಿಕ್ಕದಾಗಿ AWZ ಎಂದಾದವು (ಇದನ್ನು ಭಾಷಾಂತರಿಸಿದಾಗ ಆಟೋಮೊಬೈಲ್ ಕಾರ್ಖಾನೆ ಝ್ವಿಕ್ಕಾವ್ ಎಂದಾಗುತ್ತದೆ).[೯] ಝ್ವಿಕ್ಕಾವ್‌ನಲ್ಲಿನ ಹಿಂದಿನ ಆಡಿ ಕಾರ್ಖಾನೆಯು, ಯುದ್ಧಕ್ಕೆ-ಮುಂಚಿದ್ದ ಮಾದರಿಗಳನ್ನು ಜೋಡಣೆ ಮಾಡುವ ಕೆಲಸವನ್ನು 1949ರಲ್ಲಿ ಮತ್ತೊಮ್ಮೆ ಪ್ರಾರಂಭಿಸಿತು. ಈ DKW ಮಾದರಿಗಳು IFA F8 ಮತ್ತು IFA F9 ಎಂಬುದಾಗಿ ಮರುನಾಮಕರಣಗೊಂಡವು ಹಾಗೂ ಅವು ಪಶ್ಚಿಮ ಜರ್ಮನ್ ಆವೃತ್ತಿಗಳಂತೆಯೇ ಇದ್ದವು. ಪಶ್ಚಿಮ ಮತ್ತು ಪೂರ್ವ ಜರ್ಮನ್ ಮಾದರಿಗಳು ಸಾಂಪ್ರದಾಯಿಕ ಮತ್ತು ಪ್ರಖ್ಯಾತ DKW ಎರಡು-ಸ್ಟ್ರೋಕ್ ಎಂಜಿನುಗಳನ್ನು ಅಳವಡಿಸಿಕೊಂಡಿದ್ದವು.
ಹೊಸ ಆಟೋ ಯುನಿಯನ್
[ಬದಲಾಯಿಸಿ]ಪಶ್ಚಿಮ ಜರ್ಮನಿಯಲ್ಲಿ ಕೇಂದ್ರಕಚೇರಿಯನ್ನು ಹೊಂದಿದ್ದ ಒಂದು ಹೊಸ ಆಟೋ ಯುನಿಯನ್, ಬವೇರಿಯಾದ ಇಂಗ್ಲೋಸ್ಟಾಡ್‌ನಲ್ಲಿ ಪ್ರಾರಂಭವಾಯಿತು. ಇದಕ್ಕೆ ಬವೇರಿಯಾದ ರಾಜ್ಯ ಸರ್ಕಾರ ಮತ್ತು ಮಾರ್ಷಲ್ ಯೋಜನೆ ನೆರವಿನಿಂದ ಸಾಲಗಳನ್ನು ಪಡೆಯಲಾಗಿತ್ತು.[೧೦] ಸುಧಾರಿತ ಕಂಪನಿಯು 1949ರ ಸೆಪ್ಟೆಂಬರ್ 3ರಂದು ಪ್ರಾರಂಭವಾಯಿತು ಹಾಗೂ ಎರಡು-ಸ್ಟ್ರೋಕ್ ಎಂಜಿನುಗಳೊಂದಿಗಿನ ಮುಂಚಕ್ರ ಚಾಲನೆಯ ವಾಹನಗಳನ್ನು ತಯಾರಿಸುವ DKWನ ಸಂಪ್ರದಾಯವನ್ನು ಅದು ಮುಂದುವರಿಸಿತು.[೧೦] ಚಿಕ್ಕದಾದ ಆದರೆ ಗಟ್ಟಿಮುಟ್ಟಾದ ಒಂದು 125 ಸಿಸಿ ಮೋಟಾರ್‌ಸೈಕಲ್ ಮತ್ತು DKW F 89 L ಹೆಸರಿನ ಒಂದು DKW ವಿತರಣಾ ವ್ಯಾನಿನ ಉತ್ಪಾದನೆಯನ್ನು ಇದು ಒಳಗೊಂಡಿತ್ತು. ಡೈಮ್ಲರ್ ಬೆಂಝ್‌ನ ಅಡಿಯಲ್ಲಿನ ಮಾಲೀಕತ್ವದ ಒಂದು ಅವಧಿಯ ನಂತರ, 1964ರಲ್ಲಿ ವೋಕ್ಸ್‌ವ್ಯಾಗನ್ ಸಮೂಹವು ಇಂಗ್ಲೋಸ್ಟಾಡ್‌ನಲ್ಲಿನ ಕಾರ್ಖಾನೆ ಹಾಗೂ ಆಟೋ ಯುನಿಯನ್‌ನ ಸರಕುಮುದ್ರೆಯ ಹಕ್ಕುಗಳನ್ನು ವಶಪಡಿಸಿಕೊಂಡಿತು. ಆರಾಮದಾಯಕವಾದ ನಾಲ್ಕು-ಸ್ಟ್ರೋಕ್ ಎಂಜಿನುಗಳ ಕಡೆಗೆ ಗ್ರಾಹಕರು ಹೆಚ್ಚು ಆಕರ್ಷಿತರಾದುದರಿಂದ, 1960ರ ದಶಕದ ಮಧ್ಯಭಾಗದ ವೇಳೆಗೆ ಎರಡು-ಸ್ಟ್ರೋಕ್ ಎಂಜಿನುಗಳ ಜನಪ್ರಿಯತೆ ಕಮ್ಮಿಯಾಯಿತು. 1965ರ ಸೆಪ್ಟೆಂಬರ್‌ನಲ್ಲಿ, DKW F102ಗೆ ನಾಲ್ಕು-ಸ್ಟ್ರೋಕ್ ಎಂಜಿನೊಂದನ್ನು ಅಳವಡಿಸಿಕೊಳ್ಳುವ ಮತ್ತು ಮುಂಭಾಗ-ಹಿಂಭಾಗಗಳ ವಿನ್ಯಾಸಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಕಾಣುವ ಅವಕಾಶ ದೊರೆಯಿತು. DKW ಬ್ರಾಂಡ್‌ನ ಕಾರುಗಳು ಎರಡು-ಸ್ಟ್ರೋಕ್ ತಂತ್ರಜ್ಞಾನದೊಂದಿಗೆ ಗುರುತಿಸಿಕೊಂಡಿದ್ದರಿಂದಾಗಿ, ಮತ್ತು ಈ ಮಾದರಿಯನ್ನು ಆಂತರಿಕವಾಗಿ F103 ಎಂದು ವರ್ಗೀಕರಿಸಿದ್ದರಿಂದಾಗಿ ಅವನ್ನು ವೋಕ್ಸ್‌ವ್ಯಾಗನ್ ಕಂಪನಿಯು ವರ್ಜಿಸುವುದರ ಜೊತೆಗೆ, ಕೇವಲ "ಆಡಿ" ಎಂಬ ಹೆಸರಿನಲ್ಲಿಯೇ ಮಾರಾಟಮಾಡಿತು. ಸದರಿ ಮಾದರಿಯ ನಂತರದ ಅಭಿವೃದ್ಧಿಪಡಿಸಿದ ಮಾದರಿಗಳನ್ನು ಅವುಗಳ ಅಶ್ವಶಕ್ತಿ ಶ್ರೇಯಾಂಕಗಳ ಆಧಾರದ ಮೇಲೆ ಹೆಸರಿಸಲಾಯಿತು ಹಾಗೂ ಆಡಿ 60, 75, 80, ಮತ್ತು ಸೂಪರ್ 90 ಎಂಬ ಹೆಸರಿನಲ್ಲಿ 1972ರವರೆಗೆ ಮಾರಾಟ ಮಾಡಲಾಯಿತು.
ಸ್ಟಟ್‌ಗಾರ್ಟ್ ಸಮೀಪದ ನೆಕರ್‌ಸಲ್ಮ್‌ನಲ್ಲಿ ನೆಲೆಗೊಂಡಿದ್ದ NSU ಕಂಪನಿಯೊಂದಿಗೆ 1969ರಲ್ಲಿ ಆಟೋ ಯುನಿಯನ್ ವಿಲೀನಗೊಂಡಿತು. 1950ರ ದಶಕದಲ್ಲಿ, NSU ಕಂಪನಿಯು ಮೋಟಾರ್‌ಸೈಕಲ್‌ಗಳ ವಿಶ್ವದ ಅತಿದೊಡ್ಡ ತಯಾರಕನಾಗಿತ್ತು. ಆದರೆ NSU ಪ್ರಿಂಝ್, TT ಮತ್ತು TTS ಆವೃತ್ತಿಗಳಂಥ ಪುಟ್ಟ ಕಾರುಗಳನ್ನು ಉತ್ಪಾದಿಸುವೆಡೆಗೆ ತನ್ನ ದಿಕ್ಕನ್ನು ಅದು ಬದಲಾಯಿಸಿಕೊಂಡಿತ್ತು. ಈ ಆವೃತ್ತಿಗಳು ಈಗಲೂ ವಿಂಟೇಜ್ ಪಂದ್ಯದ ಕಾರುಗಳಾಗಿ ಜನಪ್ರಿಯವಾಗಿವೆ. ಫೆಲಿಕ್ಸ್ ವ್ಯಾಂಕೆಲ್‌ನ ಪರಿಕಲ್ಪನೆಗಳನ್ನು ಆಧರಿಸಿದ ಹೊಸ ಆವರ್ತಕ ಎಂಜಿನುಗಳ (ರೋಟರಿ ಎಂಜಿನುಗಳ) ಮೇಲೆ NSU ಕಂಪನಿಯು ನಂತರ ತನ್ನ ಗಮನವನ್ನು ಕೇಂದ್ರೀಕರಿಸಿತು. 1967ರಲ್ಲಿ, ಹೊಸ NSU Ro 80 ಮಾದರಿಯು ಆಕಾಶಯಾನದ ಯುಗದ್ದು ಎಂದು ಹೇಳಲಾಗುವ ಒಂದು ನವನವೀನ ಕಾರಾಗಿತ್ತು. ಏರೋಡೈನಮಿಕ್ ವಿನ್ಯಾಸ, ಹಗುರವಾದ ತೂಕ, ಮತ್ತು ಸುರಕ್ಷತೆ ಇವೇ ಮೊದಲಾದ ತಾಂತ್ರಿಕ ಅಂಶಗಳಲ್ಲಿ ಈ ಕಾರು ಸಾಕಷ್ಟು ಮುಂದುವರೆದಿತ್ತು. ಆದರೆ ಆವರ್ತಕ ಎಂಜಿನುಗಳಿಗೆ ಸಂಬಂಧಿಸಿದಂತೆ ಕಂಡುಬಂದ ಆರಂಭಿಕ ಸಮಸ್ಯೆಗಳು NSUನ ಸ್ವಾತಂತ್ರ್ಯಕ್ಕೆ ಅಂತ್ಯ ಹಾಡಿದವು. ಇಂದು ನೆಕರ್‌ಸಲ್ಮ್ ಘಟಕವನ್ನು A6 ಮತ್ತು A8ನಂತಹ ದೊಡ್ಡದಾದ ಆಡಿ ಮಾದರಿಗಳನ್ನು ತಯಾರಿಸಲು ಬಳಸಲಾಗುತ್ತಿದೆ. ನೆಕರ್‌ಸಲ್ಮ್ ಕಾರ್ಖಾನೆಯು ಕ್ವಾಟ್ರೋ GmbHಗೂ ನೆಲೆಯಾಗಿದ್ದು, ಈ ಅಂಗಸಂಸ್ಥೆಯು R8 ಮತ್ತು "RS" ಮಾದರಿ ಶ್ರೇಣಿಯ ಉನ್ನತ ಕಾರ್ಯಕ್ಷಮತೆಯ ಆಡಿ ಕಾರುಗಳ ಅಭಿವೃದ್ಧಿ ಹಾಗೂ ಉತ್ಪಾದನೆಯ ಹೊಣೆಯನ್ನು ಹೊತ್ತಿದೆ. NSU ಕಂಪನಿಯು ತನ್ನನ್ನು ತೊಡಗಿಸಿಕೊಂಡಿದ್ದ K70 ಎಂಬ ಮಧ್ಯಮ-ಗಾತ್ರದ ಕಾರು, ಹಿಂಭಾಗದಲ್ಲಿ-ಎಂಜಿನನ್ನು ಹೊಂದಿದ್ದ ಪ್ರಿಂಝ್ ಮಾದರಿಗಳು ಹಾಗೂ ಅತಿ-ನವ್ಯವಾದ NSU Ro 80 ಮಾದರಿಗಳ ನಡುವಿನಲ್ಲಿ ಗುರುತಿಸಿಕೊಳ್ಳುವ ಉದ್ದೇಶವನ್ನು ಹೊಂದಿತ್ತು. ಆದಾಗ್ಯೂ, ವೋಕ್ಸ್‌ವ್ಯಾಗನ್ ಕಂಪನಿಯು K70 ಮಾದರಿಯನ್ನು ತನ್ನದೇ ಸ್ವಂತ ಶ್ರೇಣಿಗಾಗಿ ತೆಗೆದುಕೊಂಡಿತು. ಹೀಗಾಗಿ ಒಂದು ಪ್ರತ್ಯೇಕ ಬ್ರಾಂಡ್ ಆಗಿ ಹೊರಹೊಮ್ಮುವ NSUನ ಪ್ರಯತ್ನವು ಕೊನೆಯಾದಂತಾಯಿತು.
ಆಧುನಿಕ ಯುಗ
[ಬದಲಾಯಿಸಿ]ವಿಲೀನಗೊಂಡ ಹೊಸ ಕಂಪನಿಯನ್ನು ಆಡಿ NSU ಆಟೋ ಯುನಿಯನ್ AG ಎಂದು ಕರೆಯಲಾಯಿತು, ಹಾಗೂ ಯುದ್ಧಕ್ಕೆ-ಮುಂಚಿನ ಕಾಲದಿಂದ ಮೊದಲ್ಗೊಂಡು ಮೊಟ್ಟಮೊದಲ ಬಾರಿಗೆ ಒಂದು ಪ್ರತ್ಯೇಕವಾದ ಬ್ರಾಂಡ್ ಆಗಿ ಆಡಿ ಕಾರು ಹೊರಹೊಮ್ಮುವುದನ್ನು ಅದು ಕಂಡಿತು. 1970ರ ಮಾದರಿ ವರ್ಷಕ್ಕಾಗಿ ವೋಕ್ಸ್‌ವ್ಯಾಗನ್ ಕಂಪನಿಯು ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಆಡಿ ಬ್ರಾಂಡ್‌ನ್ನು ಪರಿಚಯಿಸಿತು.ಈ ಅವಧಿಯ ಮೊದಲ ಹೊಸ ಕಾರು 1968ರ ಆಡಿ 100 ಮಾದರಿಯಾಗಿತ್ತು. ಕಾಲಾನಂತರದಲ್ಲಿ, 1972ರಲ್ಲಿ ಇದರೊಂದಿಗೆ ಆಡಿ 80/ಫಾಕ್ಸ್ (1973ರ ವೋಕ್ಸ್‌ವ್ಯಾಗನ್ ಪೆಸ್ಸಾಟ್ ಮಾದರಿಗೆ ಇದು ಆಧಾರವಾಗಿತ್ತು) ಮತ್ತು 1974ರಲ್ಲಿ ಆಡಿ 50 (ಕಾಲಾನಂತರದಲ್ಲಿ ಇದು ವೋಕ್ಸ್‌ವ್ಯಾಗನ್ ಪೋಲೋ ಎಂದು ಹೆಸರಾಯಿತು) ಮಾದರಿಗಳು ಸೇರಿಕೊಂಡವು. ಆಡಿ 50 ಮಾದರಿಯು ಅನೇಕ ವಿಧಗಳಲ್ಲಿ ಒಂದು ಮೂಲಮಾದರಿಯಾಗಿತ್ತು. ಏಕೆಂದರೆ, ಗಾಲ್ಫ್/ಪೋಲೋ ಪರಿಕಲ್ಪನೆಯ ಮೊಟ್ಟಮೊದಲ ಸಾಕಾರರೂಪ ಇದಾಗಿತ್ತು. ಈ ಒಂದು ಅಂಶವೇ ಅದಕ್ಕೆ ವಿಶ್ವದ ಅತ್ಯಂತ ದೊಡ್ಡ ಯಶಸ್ವಿ ಕಾರು ಎಂಬ ಹೆಸರು ಸಿಗುವಲ್ಲಿ ಕಾರಣವಾಯಿತು.
ಈ ಸಮಯದಲ್ಲಿದ್ದ ಆಡಿ ಕಾರಿನ ಕುರಿತಾದ ಕಲ್ಪನೆಯು ಸಂಪ್ರದಾಯಶೀಲವಾದ ಅಥವಾ ಅತಿ ಎನಿಸುವ ಮಟ್ಟಕ್ಕೆ ಹೋಗದ ಒಂದು ಸ್ವರೂಪದ್ದಾಗಿತ್ತು. ಮತ್ತು ಹೀಗಾಗಿ, ಜಾರ್ಗ್ ಬೆನ್ಸಿಂಗರ್[೧೧] ಎಂಬ ಚಾಸಿ ಎಂಜಿನಿಯರ್‌ನಿಂದ ಒಂದು ಪ್ರಸ್ತಾವನೆಯನ್ನು ಸ್ವೀಕರಿಸಲಾಯಿತು. ಒಂದು ಸಾಮರ್ಥ್ಯದ ಆಡಿ ಕಾರು ಮತ್ತು ಓಟದ ಸ್ಪರ್ಧೆ ರೇಸಿಂಗ್ ಕಾರಿಗಾಗಿ ವೋಕ್ಸ್ವ್ಯಾಗನ್ನ ಇಲ್ಟಿಸ್ ಸೇನಾ ವಾಹನದಲ್ಲಿನ ನಾಲ್ಕು-ಚಕ್ರದ ಚಾಲನೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲೆಂದು ಈ ಪ್ರಸ್ತಾವನೆಯನ್ನು ಪುರಸ್ಕರಿಸಲಾಯಿತು. 1980ರಲ್ಲಿ ಪರಿಚಯಿಸಲ್ಪಟ್ಟ ಸಾಮರ್ಥ್ಯದ ಕಾರನ್ನು "ಆಡಿ ಕ್ವಾಟ್ರೋ" ಎಂದು ಹೆಸರಿಸಲಾಯಿತು. ಇದೊಂದು ಅನಿಲಚಕ್ರ ಚಾಲಿತ ಕೂಪೆಯಾಗಿದ್ದು, ಒಂದು ಸೆಂಟರ್ ಡಿಫರೆನ್ಷಿಯಲ್ ಮೂಲಕದ ಖಾಯಮ್ಮಾದ ಆಲ್-ವೀಲ್ ಡ್ರೈವ್‌ನ್ನು ಒಳಗೊಂಡಿದ್ದ ಜರ್ಮನಿಯ ಮೊಟ್ಟಮೊದಲ ಬೃಹತ್-ಪ್ರಮಾಣದ ತಯಾರಿಕಾ ವಾಹನವೂ ಆಗಿತ್ತು. ಇವನ್ನು "Ur-ಕ್ವಾಟ್ರೋ" ಎಂದು ಸಾಮಾನ್ಯವಾಗಿ ಉಲ್ಲೇಖಿಸಲಾಗಿದ್ದು ("Ur-" ಎಂಬ ಪೂರ್ವಪ್ರತ್ಯಯವು ಜರ್ಮನ್ ಭಾಷೆಯಲ್ಲಿನ ಒಂದು ಆಧಿಕ್ಯಾರ್ಥಕವಾಗಿದ್ದು, ಈ ಸಂದರ್ಭದಲ್ಲಿ, "ಮೂಲ" ಎಂಬುದನ್ನು ಅರ್ಥೈಸಲು ಬಳಸಲಾಗುತ್ತದೆ ಹಾಗೂ "UrS4" ಮತ್ತು "UrS6" ಮಾದರಿಗಳಲ್ಲಿರುವಂತೆ ಆಡಿಯ S4 ಮತ್ತು S6 ಎಂಬ ಮೊದಲ ಪೀಳಿಗೆಯ ಸ್ಪೋರ್ಟ್ ಸೆಡಾನ್‌ಗಳಿಗೂ ಇದನ್ನು ಅನ್ವಯಿಸಲಾಗುತ್ತದೆ), ಈ ವಾಹನಗಳ ಪೈಕಿ ಕೆಲವನ್ನು ಮಾತ್ರ ತಯಾರಿಸಲಾಯಿತು (ಎಲ್ಲವೂ ಏಕತಂಡವೊಂದರ ಕೈ-ಕಸುಬುಗಾರಿಕೆಯಿಂದ ನಿರ್ಮಿಸಲ್ಪಟ್ಟವು), ಆದರೆ ಈ ಮಾದರಿಯು ಓಟದ ಸ್ಪರ್ಧೆ ಕ್ಷೇತ್ರಕ್ಕೆ ಸಂಬಂಧಿಸಿ ಹೆಚ್ಚಿನ ಯಶಸ್ಸನ್ನು ಪಡೆಯಿತು. ಗಮನಸೆಳೆಯುವಂಥ ಜಯದ ದಾಖಲೆಗಳು ಆಲ್-ವೀಲ್ ಡ್ರೈವ್ ರೇಸ್‌ಕಾರುಗಳ ಕಾರ್ಯಯೋಗ್ಯತೆಯನ್ನು ಸಾಬೀತುಮಾಡಿದವು, ಮತ್ತು ಮೋಟಾರು ವಾಹನಗಳ ತಂತ್ರಜ್ಞಾನದಲ್ಲಿನ ಪ್ರಗತಿಗಳೊಂದಿಗೆ ಆಡಿ ಎಂಬ ಹೆಸರು ಜತೆಗೂಡಿತು.1985ರಲ್ಲಿ, ಆಟೋ ಯುನಿಯನ್ ಮತ್ತು NSU ಬ್ರಾಂಡ್‌ಗಳು ಸಂಪೂರ್ಣವಾಗಿ ಮರೆಯಾದ್ದರಿಂದ, ಕಂಪನಿಯ ಅಧಿಕೃತ ಹೆಸರನ್ನು ಆಗ ಕೇವಲ ಆಡಿ AG ಎಂಬುದಾಗಿ ಚಿಕ್ಕದಾಗಿಸಲಾಯಿತು.1986ರಲ್ಲಿ, ಪೆಸ್ಸಾಟ್-ಮೂಲದ ಆಡಿ 80ಯು ಒಂದು ತೆರನಾದ "ಎತ್ತರದ ಗೂಡಿನ ಕಾರು" (ತಾತನ ಕಾರು) ಎಂಬ ಅಭಿಪ್ರಾಯವನ್ನು ಬೆಳೆಸಲು ಆರಂಭಿಸುತ್ತಿತ್ತಾದ್ದರಿಂದ, ಟೈಪ್ 89 ಮಾದರಿಯನ್ನು ಪರಿಚಯಿಸಲಾಯಿತು. ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾದ ಈ ಹೊಸ ಮಾದರಿಯು ಅತ್ಯುತ್ತಮವಾಗಿ ಮಾರಾಟವಾಯಿತು. ಆದಾಗ್ಯೂ, ಇದರ ಆಧುನಿಕ ಮತ್ತು ಕ್ರಿಯಾತ್ಮಕ ಹೊರಾವರಣವು ಇದರ ಬೇಸ್ ಎಂಜಿನಿನ ಕಡಿಮೆ ಕಾರ್ಯಕ್ಷಮತೆಯನ್ನು ಹುಸಿಮಾಡಿತು, ಮತ್ತು ಇದರ ಬೇಸ್ ಪ್ಯಾಕೇಜು ತುಂಬಾ ಸರಳವಾಗಿತ್ತು (ಪ್ರಯಾಣಿಕರ-ಪಾರ್ಶ್ವದ ಕನ್ನಡಿಯೂ ಸಹ ಒಂದು ಆಯ್ಕೆಯಾಗಿತ್ತು). 1987ರಲ್ಲಿ, ಒಂದು ಹೊಸ ಮತ್ತು ಅತಿ ನಾಜೂಕಾದ ಆಡಿ 90 ಎಂಬ ಮಾದರಿಯನ್ನು ಆಡಿ ಕಂಪನಿಯು ಪರಿಚಯಿಸಿತು. ಇದು ಅತ್ಯುತ್ಕೃಷ್ಟವಾದ ಪ್ರಮಾಣಬದ್ಧ ಗುಣಲಕ್ಷಣಗಳನ್ನು ಹೊಂದಿತ್ತು. 1990ರ ದಶಕದ ಆರಂಭದಲ್ಲಿ, ಆಡಿ 80 ಶ್ರೇಣಿಯ ಕಾರುಗಳ ಮಾರಾಟವು ಕುಸಿಯಲು ಪ್ರಾರಂಭವಾಯಿತು, ಮತ್ತು ನಿರ್ಮಾಣ ಹಂತದಲ್ಲಿ ಒಂದಷ್ಟು ಮೂಲಭೂತ ಸಮಸ್ಯೆಗಳು ಬೆಳಕಿಗೆ ಬರಲಾರಂಭಿಸಿದವು. ಮಾರಾಟದಲ್ಲಿನ ಈ ಕುಸಿತಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ 60 ಮಿನಿಟ್ಸ್ ನೀಡಿದ ವರದಿಯು ಕಾರಣವಾಗಲಿಲ್ಲ. ಆಡಿ 5000 ಮಾದರಿಯು ಒಳಗೊಂಡಿದೆ ಎಂದು ಭಾವಿಸಲಾದ ಬ್ರೇಕ್ ಪೆಡಲ್‌ನ್ನು ಒತ್ತಿದಾಗ "ಉದ್ದೇಶಿಸಿರದ ವೇಗವರ್ಧನೆ"ಯು ಕಂಡುಬರುವ ಸಮಸ್ಯೆಯ ಕುರಿತಾದ ಕೃತಕ ವರದಿಯ ಭಾಗವನ್ನು, ಮತ್ತು ತಂತಮ್ಮ ಕಾರುಗಳು ಅಪ್ಪಳಿಸುವಿಕೆಗೆ ಒಳಗಾದ ನಂತರ ಆಡಿ ಕಂಪನಿಯ ಮೇಲೆ ದಾವೆ ಹೂಡಿದ್ದ ಆರು ಮಂದಿಯೊಂದಿಗಿನ ಭಾವಾವೇಶದ ಸಂದರ್ಶನಗಳನ್ನು ಅದು ತೋರಿಸಿತ್ತು.ಇದಕ್ಕೆ ಸಂಬಂಧಿಸಿದಂತೆ ಅಲ್ಲಿ ಯಾವುದೇ ಯಾಂತ್ರಿಕ ಸಮಸ್ಯೆಯಿರಲಿಲ್ಲ ಎಂದು ಸ್ವತಂತ್ರ ತನಿಖೆಗಾರರು ತೀರ್ಮಾನಕ್ಕೆ ಬಂದರು. ಅಮೆರಿಕಾದ ಕೆಲವೊಂದು ಕಾರುಗಳಿಗಿಂತ ಭಿನ್ನವಾಗಿ ಸದರಿ ಕಾರುಗಳಲ್ಲಿ ವೇಗವರ್ಧಕ (ಆಗ್ಸಿಲರೇಟರ್) ಹಾಗೂ ಬ್ರೇಕಿನ ಪೆಡಲುಗಳನ್ನು ಅತಿ ಪಕ್ಕಪಕ್ಕದಲ್ಲಿ ಅಳವಡಿಸಲಾಗಿರುವುದರಿಂದ, ಅದರ ಕಡೆಗೆ ಅಷ್ಟಾಗಿ ಗಮನ ನೀಡದ ಚಾಲಕರ ಕಾರಣದಿಂದಾಗಿ ಡ್ರೈವರ್‌ನ ನ್ಯೂನತೆಯು ಕಂಡುಬಂದಿದೆ ಎಂಬುದೂ ಅವರ ತೀರ್ಮಾನವಾಗಿತ್ತು. ಪೂರ್ತಿಯಾಗಿ ಊರುವ ಕ್ರಮದಲ್ಲಿನ ನವಿರಾದ ಚಾಲನಾ ಕೌಶಲಗಳಿಗೆ ಯುರೋಪಿನ ಚಾಲಕರು ಒಲವು ತೋರುವುದೇ ಈ ವ್ಯತ್ಯಾಸಕ್ಕೆ ಭಾಗಶಃ ಕಾರಣ ಎಂದು ಹೇಳಲಾಯಿತು. ಯುರೋಪ್‌ನಲ್ಲಿ ಇದೊಂದು ಸಮಸ್ಯೆಯೆಂದು ಅನ್ನಿಸಲೇ ಇಲ್ಲ. ಶಾರೀರಿಕ ಸಂವಹನೆ ಅಥವಾ ಚಾಲನೆಯೊಂದಿಗೆ ಯುರೋಪಿನ ಚಾಲಕರು ಹೊಂದಿದ್ದ ಹೆಚ್ಚು ವ್ಯಾಪಕವಾದ ಅಭಿಪ್ರಾಯವೂ ಪ್ರಾಯಶಃ ಇದಕ್ಕೆ ಕಾರಣವಾಗಿತ್ತು.ಈ ವರದಿಯಿಂದಾಗಿ ಆಡಿಯ ಮಾರಾಟವು ಕುಸಿಯಿತು ಮತ್ತು ಹೀಗೆ ತೊಂದರೆಗೊಳಗಾದ ಮಾದರಿಗೆ ಅಡಿ ಕಂಪನಿಯು ಮರುನಾಮಕರಣ ಮಾಡಿತು (1989ರಲ್ಲಿ 5000 ಮಾದರಿಯು ತಾನು ಎಲ್ಲೆಡೆ ಖ್ಯಾತವಾಗಿದ್ದಂತೆ 100/200 ಎಂಬ ಹೆಸರು ಪಡೆಯಿತು). 1990ರ ದಶಕದ ಮಧ್ಯಭಾಗದಲ್ಲಿ ಮಾರಾಟದಲ್ಲಿ ಚೇತರಿಕೆಯು ಕಂಡುಬರುವವರೆಗೂ, ಅಮೆರಿಕಾದ ಮಾರುಕಟ್ಟೆಯಿಂದ ಹಿಂದೆಗೆಯುವ ಕುರಿತು ಆಡಿ ಕಂಪನಿಯು ಆಲೋಚಿಸುತ್ತಿತ್ತು. 1996ರಲ್ಲಿ ಹೊಸ A4 ಮಾದರಿಯ ಮಾರಾಟದಲ್ಲಿನ ವಿಕ್ರಮವು ಆಡಿ ಕಂಪನಿಗೆ ಒಂದು ನಿರ್ಣಾಯಕ ಘಟ್ಟವಾಗಿ ಪರಿಣಮಿಸಿತು. VW ಮತ್ತು ಇತರ ಸಹವರ್ತಿ-ಬ್ರಾಂಡ್‌ಗಳೊಂದಿಗೆ ("ವೇದಿಕೆಗಳು" ಎಂದು ಕರೆಯಲ್ಪಡುತ್ತಿದ್ದ) ಅಭಿವೃದ್ಧಿಪಡಿಸಲಾದ A4/A6/A8 ಶ್ರೇಣಿಯು ಬಿಡುಗಡೆಯಾಗಿದ್ದೂ ಸಹ ಈ ನಿರ್ಣಾಯಕ ಘಟ್ಟಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದವು.
21ನೇ ಶತಮಾನದ ಆರಂಭಿಕ ಭಾಗದಲ್ಲಿ, ಅತ್ಯುನ್ನತ ವೇಗ ಸಹಿಷ್ಣುತೆಯಂಥ ಹಲವಾರು ವಿಶ್ವದಾಖಲೆಗಳನ್ನು ಜರ್ಮನ್ ಮೋಟಾರುಪಂದ್ಯದ ಪಥದ ಮೇಲೆ ನಿರೂಪಿಸಲು ಹಾಗೂ ನಿರ್ವಹಿಸಲು ಆಡಿ ಕಂಪನಿಯು ಮುಂದಡಿಯಿಟ್ಟಿತು. ಈ ಪ್ರಯತ್ನವು 1930ರ ಮೋಟಾರುಪಂದ್ಯದ ಯುಗದ ಸಿಲ್ವರ್ ಆರೋಸ್‌ನಿಂದ ಕಂಪನಿಯು ಪಡೆದಿದ್ದ ಪರಂಪರೆಗೆ ಅನುಸಾರವಾಗಿತ್ತು. ಪ್ರಸ್ತುತ ಆಡಿ ಕಾರುಗಳ ಮಾರಾಟವು ಯುರೋಪ್‌ನಲ್ಲಿ ವರ್ಧಿಸುತ್ತಲೇ ಇದೆ. 2004ರಲ್ಲಿ ವಿಶ್ವಾದ್ಯಂತ 779,441 ವಾಹನಗಳು ಮಾರಾಟವಾಗುವ ಮೂಲಕ ಈ ಸಾಲಿನ ಮಾರಾಟದಲ್ಲಿ 11ನೇ ನೇರ ಹೆಚ್ಚಳವನ್ನು ಕಂಪನಿಯು ದಾಖಲಿಸಿದಂತಾಗಿದೆ. ಸುಮಾರು 50 ಪ್ರಮುಖ ಮಾರಾಟ ಮಾರುಕಟ್ಟೆಗಳ ಪೈಕಿ 21ರಿಂದ ಪಡೆದ ಅಂಕಿ-ಅಂಶಗಳಿಂದ ದಾಖಲಾರ್ಹ-ಸಂಖ್ಯೆಗಳನ್ನು ದಾಖಲಿಸಲಾಗಿದೆ. ಮಾರಾಟದಲ್ಲಿನ ಅತಿದೊಡ್ಡ ಹೆಚ್ಚಳಗಳು ಪೂರ್ವದ ಯುರೋಪ್ (+19.3%), ಆಫ್ರಿಕಾ (+17.2%) ಮತ್ತು ಮಧ್ಯಪ್ರಾಚ್ಯ (+58.5%) ರಾಷ್ಟ್ರಗಳಿಂದ ಬಂದಿವೆ.[ಸೂಕ್ತ ಉಲ್ಲೇಖನ ಬೇಕು] ಭಾರತದಲ್ಲಿನ ಮಾರಾಟದಲ್ಲಿ ಕಂಡುಬಂದ ಹೆಚ್ಚಿನ ಪ್ರಮಾಣದ ಏರಿಕೆಯನ್ನು ಅನುಸರಿಸಿ ಆಡಿ ಕಂಪನಿಯು ಭಾರತದಲ್ಲಿ ತನ್ನ ಮೊದಲ ಎರಡು ವಿತರಣಾ ವ್ಯವಸ್ಥೆಗಳನ್ನು 2005ರ ಮಾರ್ಚ್‌ನಲ್ಲಿ ಕಾರ್ಯರೂಪಕ್ಕೆ ತಂದಿದೆ.2007ರಲ್ಲಿ ಕಂಪನಿಯು ವಿಶ್ವಾದ್ಯಂತ ದಾಖಲಿಸಿರುವ ವಾಹನಗಳ ಮಾರಾಟ ಪ್ರಮಾಣವು 964,151ರಷ್ಟಿದ್ದು, ಈ ಬ್ರಾಂಡ್‌ನ ದಾಖಲೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸಿಕ್ಕಿಸಿದಂತಾಗಿದೆ. 2008ರಲ್ಲಿ, 1,003,400ರಷ್ಟು ಕಾರುಗಳನ್ನು ಮಾರಾಟಮಾಡಿ 1 ದಶಲಕ್ಷದ ಮಾರಾಟದ ಗುರುತನ್ನು ದಾಟಿಹೋಗುವ ಮೂಲಕ, ಆಡಿ ಕಂಪನಿಯು ಅನುಕ್ರಮವಾದ 13ನೇ ದಾಖಲಾರ್ಹ ವರ್ಷವನ್ನು ಸಾಧಿಸಿದೆ.[೧೨]
ತಂತ್ರಜ್ಞಾನ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(June 2008) |
ಕಾರಿನ ಬಾಹ್ಯಸ್ವರೂಪಗಳು
[ಬದಲಾಯಿಸಿ]ಸವೆಯುವಿಕೆಯನ್ನು[೧೩] ತಡೆಯುವ ದೃಷ್ಟಿಯಿಂದ ಆಡಿ ಕಂಪನಿಯು 100% ಗ್ಯಾಲ್ವನೀಕೃತ (ವಾಹನದ ಕಬ್ಬಿಣದ ಮೈ ತುಕ್ಕುಹಿಡಿಯದಂತಿರಲು ವಿದ್ಯುತ್ತನ್ನು ಬಳಸದೆಯೇ ಅದರ ಮೇಲೆ ಸತುವನ್ನು ಲೇಪಿಸುವ ಪ್ರಕ್ರಿಯೆಗೆ ಗ್ಯಾಲ್ವನೀಕರಣ ಎಂದು ಹೆಸರು) ಕಾರುಗಳನ್ನು ತಯಾರಿಸುತ್ತದೆ. ಅಷ್ಟೇ ಅಲ್ಲ, ಸರಿಸುಮಾರು 1975ನೇ ಇಸವಿಯಲ್ಲಿ ಪೋರ್ಷೆಯು ಈ ಪ್ರಕ್ರಿಯೆಯನ್ನು ಪರಿಚಯಿಸಿದ ನಂತರ ಗ್ಯಾಲ್ವನೀಕರಣ ಪ್ರಕ್ರಿಯೆಯನ್ನು ಅಳವಡಿಸಿಕೊಂಡ ಮೊಟ್ಟಮೊದಲ ಸಮೂಹ-ಮಾರುಕಟ್ಟೆ ವಾಹನ ಇದಾಗಿತ್ತು. ಇತರ ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ವಾಹನದ ಸಂಪೂರ್ಣ ಭಾಗಕ್ಕೆ ಸತುವನ್ನು ಲೇಪಿಸುವ ಪ್ರಕ್ರಿಯೆಯು ತುಕ್ಕುಹಿಡಿಯುವಿಕೆಯನ್ನು ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿಯೆಂದು ಸಾಬೀತಾಗಿದೆ. ಇದರ ಪರಿಣಾಮವಾಗಿ ಹೊರಹೊಮ್ಮಿದ ಕಾರಿನ ಮೈನ ಬಾಳಿಕೆಯು ಆಡಿ ಕಂಪನಿಯ ನಿರೀಕ್ಷೆಗಳನ್ನೂ ದಾಟಿಕೊಂಡು ಹೋದವು. ಇದರಿಂದಾಗಿ, ಸವೆಯುವಿಕೆ, ತೂತುಕೊರೆಯುವಿಕೆಗೆ ಪ್ರತಿಯಾಗಿ ನೀಡಲಾಗುತ್ತಿದ್ದ 10-ವರ್ಷದ ಮೂಲ ಖಾತರಿಯನ್ನು (ವಾರಂಟಿ) ಪ್ರಸ್ತುತ ಚಾಲ್ತಿಯಲ್ಲಿರುವ 12 ವರ್ಷಗಳಿಗೆ (ತುಕ್ಕುಹಿಡಿಯದ ಅಲ್ಯೂಮಿನಿಯಂ ಮೈನ ಕಾರುಗಳನ್ನು ಹೊರತುಪಡಿಸಿ) ವಿಸ್ತರಿಸಲು ತಯಾರಕರಿಗೆ ಅವಕಾಶ ಮಾಡಿಕೊಟ್ಟಂತಾಯಿತು.[೧೪] ಸಂಪೂರ್ಣವಾದ-ಅಲ್ಯೂಮಿನಿಯಂ ಕಾರೊಂದನ್ನು ಪ್ರಸ್ತುತಪಡಿಸಿದ ಹೆಗ್ಗಳಿಕೆ ಆಡಿ ಕಂಪನಿಯದು. 1994ರಲ್ಲಿ ಬಿಡುಗಡೆಯಾದ ಆಡಿ A8 ಮಾದರಿಯು ಅಲ್ಯುಮಿನಂ ಸ್ಪೇಸ್ ಫ್ರೇಮ್ ತಂತ್ರಜ್ಞಾನವನ್ನು (ಇದಕ್ಕೆ ಆಡಿ ಸ್ಪೇಸ್ ಫ್ರೇಂ ಎಂದು ಹೆಸರು) ಪರಿಚಯಿಸಿತು. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ವಾಹನಗಳ ಒಂದು ಹೊಸ ಶ್ರೇಣಿಯನ್ನು ಆಡಿ ಕಂಪನಿಯು ಪರಿಚಯಿಸಿತಲ್ಲದೇ, ಮುನ್ನಂಚಿನ ತಂತ್ರಜ್ಞಾನ ಹಾಗೂ ಉನ್ನತ ಕಾರ್ಯಕ್ಷಮತೆಯನ್ನು ಪಟ್ಟಾಗಿ ಹಿಡಿದು ಮುಂದುವರಿಸಿಕೊಂಡು ಬಂದಿದೆ. ಆ ಪ್ರಯತ್ನಕ್ಕೂ ಮುಂಚಿತವಾಗಿ, ಈ ಕೌಶಲಕ್ಕಾಗಿ ಅಲ್ಯುಮಿನಂನಿಂದ ರೂಪಿಸಲ್ಪಟ್ಟ ಟೈಪ್ 44 ಅಡಿಗಟ್ಟನ್ನು ಪೂರ್ವಪರೀಕ್ಷಾ ಸಾಧನವಾಗಿಸಿದ ಉದಾಹರಣೆಗಳನ್ನು ಆಡಿ ಕಂಪನಿಯು ಬಳಸಿತ್ತು.
ಚಾಲನಾ ವಿನ್ಯಾಸ
[ಬದಲಾಯಿಸಿ]ವೋಕ್ಸ್‌ವ್ಯಾಗನ್-ಯುಗದ ನಂತರದ ತನ್ನೆಲ್ಲಾ ಕಾರುಮಾದರಿಗಳಲ್ಲಿ, ತನ್ನೆರಡು ಪ್ರಧಾನ ಪ್ರತಿಸ್ಫರ್ಧಿಗಳಾದ ಮರ್ಸಿಡಿಸ್-ಬೆಂಝ್ ಮತ್ತು BMW ಕಂಪನಿಗಳು ಒಲವು ತೋರಿದಂತೆ, ಸಾಂಪ್ರದಾಯಿಕ ಹಿಂಚಕ್ರ ಚಾಲನೆಯ ವಿನ್ಯಾಸವನ್ನು ಅಳವಡಿಸಿಕೊಳ್ಳಲು ಆಡಿ ಕಂಪನಿಯು ದೃಢವಾಗಿ ನಿರಾಕರಿಸಿದೆ. ಅದರ ಬದಲು ಮುಂಚಕ್ರ ಚಾಲನೆ ಇಲ್ಲವೇ ನಾಲ್ಕು-ಚಕ್ರ ಚಾಲನೆಯ ಕಡೆಗೆ ಒಲವು ತೋರಿಸಿದೆ. ಇದನ್ನು ಸಾಧಿಸಲು, ಅನುಲಂಬವಾಗಿ ಮುಂಭಾಗದಲ್ಲಿ ಹುದುಗಿಸಲಾದ ಎಂಜಿನ್‌ನ್ನು ಒಳಗೊಳ್ಳುವಂತೆ ಆಡಿ ಕಂಪನಿಯು ತನ್ನ ಕಾರುಗಳನ್ನು ಎಂದಿನಂತೆ ವಿನ್ಯಾಸಗೊಳಿಸಿದೆ. ಅಚ್ಚುಗಂಬಿಯ ಪಟ್ಟಿಯ ಮುಂಭಾಗದಲ್ಲಿನ ಮುಂಚಕ್ರಗಳ– ಮೇಲೆ "ಮೇಲಿನಿಂದ ತೂಗುಹಾಕಿರುವ" ಭಂಗಿಯಲ್ಲಿ ಈ ಎಂಜಿನು ಸ್ಥಿತವಾಗಿರುತ್ತದೆ. ನಾಲ್ಕು-ಚಕ್ರ ಚಾಲನೆಯನ್ನು ಸುಲಭವಾಗಿ ಅಳವಡಿಸಿಕೊಳ್ಳಲು ಇದು ಅವಕಾಶಮಾಡಿಕೊಡುವುದರ ಜೊತೆಗೆ, 50:50 ಅನುಪಾತದ ತೂಕ ವಿತರಣೆಯ ಮಾದರಿಗೆ ವಿರುದ್ಧವಾಗಿ (ಎಲ್ಲಾ ಮುಂಚಕ್ರ ಚಾಲನೆಯ ಕಾರುಗಳು ವರ್ತಿಸುವ ರೀತಿಯಲ್ಲೇ) ಇದು ಸಾಗುತ್ತದೆ.A3 ಮತ್ತು TTಯಂತಹ ಮಾದರಿಗಳಲ್ಲಿ ಕ್ವಾಟ್ರೋ ಲಾಂಛನಬಿಲ್ಲೆಯನ್ನು (ಬ್ಯಾಜ್) ಆಡಿ ಕಂಪನಿಯು ಇತ್ತೀಚಿಗೆ ಬಳಸಿದೆ. ಮುಂಚಿನ ವರ್ಷಗಳಲ್ಲಿದ್ದಂತೆ, ಒಂದು ಮೆಕ್ಯಾನಿಕಲ್ ಸೆಂಟರ್ ಡಿಫರೆನ್ಷಿಯಲ್‌ನೊಂದಿಗಿನ ಟಾರ್ಸನ್-ಆಧರಿತ ವ್ಯವಸ್ಥೆಯನ್ನು ಈ ಮಾದರಿಗಳು ವಾಸ್ತವವಾಗಿ ಬಳಸುವುದಿಲ್ಲ. ಆದರೆ ಸ್ವೀಡಿಷ್ ಹಾಲ್ಡೆಕ್ಸ್ ಟ್ರಾಕ್ಷನ್ ಎಲೆಕ್ಟ್ರೊ-ಮೆಕ್ಯಾನಿಕಲ್ ಕ್ಲಚ್ 4WD ವ್ಯವಸ್ಥೆಯೊಂದಿಗಿನದನ್ನು ಬಳಸುತ್ತವೆ.
ಎಂಜಿನುಗಳು
[ಬದಲಾಯಿಸಿ]1980ರ ದಶಕದಲ್ಲಿ, ವೋಲ್ವೋದ ಜೊತೆಯಲ್ಲಿ ಆಡಿ ಕಂಪನಿಯು ಇನ್‌ಲೈನ್ 5 ಸಿಲಿಂಡರಿನ, 2.1/2.2 L ಎಂಜಿನಿನ ಚಾಂಪಿಯನ್ ಆಗಿತ್ತು. ಹೆಚ್ಚು ಸಾಂಪ್ರದಾಯಿಕವಾದ 6 ಸಿಲಿಂಡರಿನ ಎಂಜಿನುಗಳಿಗೆ ಇದು ಸುದೀರ್ಘಕಾಲದ ಪರ್ಯಾಯವಾಗಿತ್ತು. ಈ ಎಂಜಿನನ್ನು ಕೇವಲ ಬೃಹತ್ ತಯಾರಿಕೆಯ ಕಾರುಗಳಲ್ಲಿ ಮಾತ್ರವೇ ಅಲ್ಲದೆ ತಮ್ಮ ಕಂಪನಿಯ ಪಂದ್ಯದ ಕಾರುಗಳಲ್ಲಿಯೂ ಅವು ಬಳಸಿದವವು. 2.1 L ಇನ್‌ಲೈನ್ 5 ಸಿಲಿಂಡರಿನ ಎಂಜಿನನ್ನು 1980ರ ದಶಕದಲ್ಲಿ ಓಟದ ಸ್ಪರ್ಧೆ ಕಾರುಗಳಿಗೆ ಒಂದು ಅಡಿಗಟ್ಟಾಗಿ ಬಳಸಲಾಯಿತು. ಮಾರ್ಪಾಡಿನ ನಂತರ 400 ಅಶ್ವಶಕ್ತಿಗೂ (298 kW) ಮೀರಿದ ಶಕ್ತಿಯನ್ನು ಇದಕ್ಕೆ ಒದಗಿಸಲಾಗಿತ್ತು. 1990ಕ್ಕೂ ಮುಂಚೆ, 2.0 L ಮತ್ತು 2.3 L ಗಳ ನಡುವಣ ಸ್ಥಳಾಂತರಣ ಮಾಡುವ ಮೂಲಕ ಎಂಜಿನುಗಳನ್ನು ತಯಾರಿಸಲಾಗುತ್ತಿತ್ತು. ಎಂಜಿನು ಸಾಮರ್ಥ್ಯದ ಈ ಶ್ರೇಣಿಯು ಉತ್ತಮ ಇಂಧನ ಮಿತವ್ಯಯ (1980ರ ದಶಕದಲ್ಲಿ ಪ್ರತಿಯೊಬ್ಬ ಮೋಟಾರು ಚಾಲಕರ ಮನಸ್ಸಿನಲ್ಲಿದ್ದುದು ಇದೇ ಆಗಿತ್ತು) ಮತ್ತು ಒಂದು ಉತ್ತಮ ಮೊತ್ತದ ಶಕ್ತಿಯ ಒಂದು ಉತ್ತಮ ಸಂಯೋಜನೆಯಾಗಿತ್ತು.
ವಿಲಾಸಿ ಪ್ರತಿಸ್ಪರ್ಧಿಗಳು
[ಬದಲಾಯಿಸಿ]1990ರ ದಶಕದ ಆರಂಭಿಕ ಅವಧಿಯಾದ್ಯಂತ, ಜಾಗತಿಕ ಮಟ್ಟದಲ್ಲಿ ವಿಲಾಸಿ ಕಾರುಗಳ ವಲಯದಲ್ಲಿನ ಅಗ್ರಗಣ್ಯ ಕಂಪನಿಗಳಾಗಿದ್ದ ಮರ್ಸಿಡಿಸ್-ಬೆಂಝ್ ಮತ್ತು BMWಗಳಿಗೆ ಪ್ರತಿಯಾಗಿರುವ ತನ್ನ ಲಕ್ಷ್ಯದ ಮಾರುಕಟ್ಟೆಯಲ್ಲಿ ಓರ್ವ ನಿಜವಾದ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ಸ್ಥಾನದ ಕಡೆಗೆ ಆಡಿ ಕಂಪನಿಯು ಚಲಿಸಲು ಪ್ರಾರಂಬಿಸಿತು. 1990ರಲ್ಲಿ ಆಡಿ V8 ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಇದು ಅತ್ಯವಶ್ಯವಾಗಿ ಆಡಿ 100/200 ಮಾದರಿಗೆ ಹೊಸ ಎಂಜಿನೊಂದನ್ನು ಅಳವಡಿಸಿದ ನಿದರ್ಶನವಾಗಿತ್ತಾದರೂ, ವಾಹನದ ಮೈನ ನಿರ್ಮಿತಿಯಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿದ್ದವು.ಎಂಜಿನಿನ ಕೀಲುಮುಚ್ಚಳದಲ್ಲಿ (ಬಾನೆಟ್‌ನಲ್ಲಿ) ಹೊಸ ಮುಂಜಾಲರಿಯನ್ನು (ಗ್ರಿಲ್) ಹೊಸದಾಗಿ ಸಂಯೋಜಿಸಿದ್ದು ಅತ್ಯಂತ ಸ್ಪಷ್ಟವಾಗಿ ಗಮನಸೆಳೆದಿತ್ತು.1991ರ ವೇಳೆಗೆ, 4 ಸಿಲಿಂಡರಿನ ಆಡಿ 80, 5 ಸಿಲಿಂಡರಿನ ಆಡಿ 90 ಮತ್ತು ಆಡಿ 100 ಮಾದರಿಗಳು, ಅನಿಲಚಕ್ರ ಚಾಲಿತ (ಟರ್ಬೊಚಾರ್ಜ್‌ಡ್) ಆಡಿ 200 ಮತ್ತು ಆಡಿ V8 ಮಾದರಿಗಳನ್ನು ಆಡಿ ಕಂಪನಿಯು ತನ್ನ ಉತ್ಪನ್ನ ಶ್ರೇಣಿಯಲ್ಲಿ ಸೇರಿಸಿಕೊಂಡಿತ್ತು. 4 ಮತ್ತು 5 ಸಿಲಿಂಡರಿನ ಎಂಜಿನುಗಳೆರಡರೊಂದಿಗಿನ ಆಡಿ 80/90ರ ಒಂದು ಕೂಪೆ ಆವೃತ್ತಿಯೂ ಸಹ ಅಲ್ಲಿ ಲಭ್ಯವಿತ್ತು.ಐದು ಸಿಲಿಂಡರಿನ ಎಂಜಿನು ಒಂದು ಯಶಸ್ವಿ ಹಾಗೂ ಅತ್ಯಂತ ಹುರುಪಿನ ಶಕ್ತಿಘಟಕವಾಗಿತ್ತಾದರೂ, ಅದು ಲಕ್ಷ್ಯದ ಮಾರುಕಟ್ಟೆಗೆ ಸಂಬಂಧಿಸಿದಂತೆ ಆಗಲೂ ಸ್ವಲ್ಪ ಅತಿ ವಿಲಕ್ಷಣವಾಗಿದೆ ಎನ್ನುವಂತಿತ್ತು. 1992ರಲ್ಲಿ ಹೊಚ್ಚಹೊಸತಾದ ಆಡಿ 100 ಮಾದರಿಯು ಬಿಡುಗಡೆಯಾಗುವುದರೊಂದಿಗೆ, 2.8L V6 ಎಂಜಿನು ಒಂದನ್ನು ಆಡಿಯು ಪರಿಚಯಿಸಿದಂತಾಯಿತು. ರೂಪವರ್ಧಿತ ಆಡಿ 80 ಮಾದರಿಯೊಂದಕ್ಕೂ ಈ ಎಂಜಿನನ್ನು ಅಳವಡಿಸಲಾಗಿತ್ತು (USAಯನ್ನು ಹೊರತುಪಡಿಸಿ, ಎಲ್ಲಾ 80 ಮತ್ತು 90 ಮಾದರಿಗಳಿಗೆ ಈಗ 80ರ ಲಾಂಛನಬಿಲ್ಲೆಯನ್ನು ಲಗತ್ತಿಸಲಾಯಿತು). ಇದರಿಂದಾಗಿ, ಸಲೂನ್/ಸೆಡಾನ್, ಕೂಪೆ ಮತ್ತು ಮಡಚುಚಾವಣಿಯ ಕಾರುಗಳ ಹೊರಮೈ ವಿನ್ಯಾಸದಲ್ಲಿ 4, 5 ಮತ್ತು 6 ಸಿಲಿಂಡರಿನ ಎಂಜಿನುಗಳ ಒಂದು ಆಯ್ಕೆಯನ್ನು ಹೊಂದಲು ಈ ಮಾದರಿಯು ಅವಕಾಶ ಮಾಡಿಕೊಟ್ಟಿತು.ಒಂದು ಪ್ರಮುಖ ಎಂಜಿನು ಆಯ್ಕೆಯಾಗಿ 5 ಸಿಲಿಂಡರನ್ನು ಶೀಘ್ರವೇ ಕೈಬಿಡಲಾಯಿತು; ಆದಾಗ್ಯೂ, ಒಂದು ಅನಿಲಚಕ್ರ ಚಾಲಿತ 230 ಎಚ್‌ಪಿ (169 kW) ಆವೃತ್ತಿಯು ಉಳಿದುಕೊಂಡಿತು. 1991ರ 200 ಕ್ವಾಟ್ರೋ 20V ಮಾದರಿಗೆ ಆರಂಭಿಕವಾಗಿ ಅಳವಡಿಸಲಾಗಿದ್ದ ಎಂಜಿನು, ಸ್ಪೋರ್ಟ್ ಕ್ವಾಟ್ರೋಗೆ ಅಳವಡಿಸಲಾಗಿದ್ದ ಎಂಜಿನಿನ ಒಂದು ಉತ್ಪನ್ನ ಅಥವಾ ಜನ್ಯಮಾದರಿಯಾಗಿತ್ತು. ಇದನ್ನು ಆಡಿ ಕೂಪೆಗೆ ಅಳವಡಿಸಿ, S2 ಎಂದೂ ಮತ್ತು ಆಡಿ 100ಗೂ ಅಳವಡಿಸಿ S4 ಎಂದೂ ಹೆಸರಿಸಲಾಯಿತು. ಈ ಎರಡು ಮಾದರಿಗಳು ಸಾಮರ್ಥ್ಯದ ಕಾರುಗಳ ಸಗಟು-ಉತ್ಪಾದಿತ S ಶ್ರೇಣಿಯ ಆರಂಭವಾಗಿದ್ದವು.
ಸ್ಪೇಸ್ ಫ್ರೇಮ್
[ಬದಲಾಯಿಸಿ]1994ರಲ್ಲಿ ಆಡಿ A8 ಮಾದರಿಯು V8 ಮಾದರಿಯನ್ನು ಸ್ಥಾನಪಲ್ಲಟಗೊಳಿಸಿತು. ತೂಕವನ್ನು ಉಳಿಸುವ ದೃಷ್ಟಿಯಿಂದ "ಆಡಿ ಸ್ಪೇಸ್ ಫ್ರೇಮ್" ಎಂದು ಹೆಸರಾದ ಒಂದು ಅಲ್ಯೂಮಿನಿಯಂ ಸ್ಪೇಸ್ ಫ್ರೇಮ್‌ನ ಅಳವಡಿಕೆಯೊಂದಿಗೆ ಇದು ಸಂಭವಿಸಿತು. ಕ್ವಾಟ್ರೋ ನಾಲ್ಕು-ಚಕ್ರ ಚಾಲನೆ ವ್ಯವಸ್ಥೆಯು ತೂಕದ ಕಡಿತವನ್ನು ಸರಿದೂಗಿಸಿತು. ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಈ ಕಾರು ಸಮಾನರೂಪದ ಸಾಮರ್ಥ್ಯವನ್ನು ಹೊಂದಿದ್ದರೂ, ರಸ್ತೆ-ಸ್ಥಿರತೆಯು ಅವಕ್ಕಿಂತ ಮೇಲ್ಮಟ್ಟದಲ್ಲಿರುವಲ್ಲಿ ಇದು ಅನುವುಮಾಡಿಕೊಟ್ಟಿತ್ತು. ಆಡಿ A2 ಮತ್ತು ಆಡಿ R8 ಮಾದರಿಗಳು ಸಹ ಆಡಿ ಸ್ಪೇಸ್ ಫ್ರೇಮ್ ವಿನ್ಯಾಸಗಳನ್ನು ಬಳಸುತ್ತವೆ.
ಆಡಿ A2
[ಬದಲಾಯಿಸಿ]ಆಡಿ A2 ಮಾದರಿಯು ಒಂದು ಅತಿ ನವ್ಯವಾದ ಸೂಪರ್ ಮಿನಿ ಮಾದರಿಯಾಗಿದ್ದು, Al2 ಪರಿಕಲ್ಪನೆಯಿಂದ ಅದು ಹುಟ್ಟಿಕೊಂಡಿತ್ತು. ಅನೇಕ ವರ್ಷಗಳಿಂದ ಕೊರತೆಯಾಗಿಯೇ ಕಂಡುಬಂದಿದ್ದ ಪರಿಣಾಮಕಾರಿತ್ವದ ತಂತ್ರಜ್ಞಾನವನ್ನು ಆಡಿ ಕಾರುಗಳಿಗೆ ನೀಡಿದ ಅನೇಕ ಗುಣಲಕ್ಷಣಗಳನ್ನು ಇದು ಒಳಗೊಂಡಿತ್ತು. ಬೃಹತ್ ತಯಾರಿಕೆಯ ಕಾರಿನ ವಿನ್ಯಾಸದಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದ ಅಲ್ಯೂಮಿನಿಯಂ ಸ್ಪೇಸ್ ಫ್ರೇಮ್ ಇದಕ್ಕೊಂದು ಉದಾಹರಣೆ. A2 ಮಾದರಿಯಲ್ಲಿ ಮಿತವ್ಯಯದ ಮೂರು ಸಿಲಿಂಡರಿನ ಎಂಜಿನುಗಳನ್ನು ಬಳಸುವ ಮೂಲಕ, ಆಡಿ ಕಂಪನಿಯು ತನ್ನ TDI ತಂತ್ರಜ್ಞಾನವನ್ನು ಮತ್ತಷ್ಟು ವಿಸ್ತರಿಸಿತು. A2 ಮಾದರಿಯು ಅತೀವವಾದ ಏರೋಡೈನಮಿಕ್ ವಿನ್ಯಾಸವನ್ನು ಹೊಂದಿತ್ತು ಹಾಗೂ ಮಾರುತ-ಸುರಂಗವೊಂದರ (ವಿಂಡ್-ಟನಲ್) ಸುತ್ತ ಅದರ ವಿನ್ಯಾಸ ರೂಪುಗೊಂಡಿತ್ತು. ಹೆಚ್ಚಿನ ಬೆಲೆಯನ್ನು ಹೊಂದಿದ್ದಕ್ಕಾಗಿ ಆಡಿ A2 ಮಾದರಿಯು ಟೀಕೆಗೆ ಒಳಗಾಯಿತು ಮತ್ತು ಮಾರಾಟದ ವಿಷಯದಲ್ಲಿ ಈ ಮಾದರಿಯು ಎಂದಿಗೂ ವಾಸ್ತವವಾಗಿ ಯಶಸ್ವಿಯೆನಿಸಿಕೊಳ್ಳಲಿಲ್ಲ. ಆದರೆ ಆಡಿ ಕಂಪನಿಯು ಒಂದು ಪರಿಣಾಮಕಾರಿ ತಯಾರಕನೆನಿಸಿಕೊಳ್ಳುವಲ್ಲಿ ಇದು ಭದ್ರಬುನಾದಿಯನ್ನು ಹಾಕಿಕೊಟ್ಟಿತು.
ಆಡಿ A4
[ಬದಲಾಯಿಸಿ]ಮಾದರಿಯಲ್ಲಿನ ನಂತರದ ಪ್ರಮುಖ ಬದಲಾವಣೆಯು 1995ರಲ್ಲಿ ಕಂಡುಬಂತು. ಈ ಅವಧಿಯಲ್ಲಿ ಆಡಿ A4 ಮಾದರಿಯು ಆಡಿ 80 ಮಾದರಿಯನ್ನು ಸ್ಥಾನಪಲ್ಲಟಗೊಳಿಸಿತು. ಆಡಿ 100 ಮಾದರಿಗೆ ಹೊಸ ನಾಮಕರಣ ಪದ್ಧತಿಯನ್ನು ಅನ್ವಯಿಸಿದ್ದರಿಂದ ಅದು (ಅಲ್ಪ ರೂಪವರ್ಧನೆಯೊಂದಿಗೆ) ಆಡಿ A6 ಮಾದರಿಯಾಗಿ ಮಾರ್ಪಟ್ಟಿತು. ಇದರಿಂದಾಗಿ S4 ಮಾದರಿಯು S6 ಮಾದರಿಯಾಗಿ ಪರಿವರ್ತನೆಗೊಂಡಿತು ಮತ್ತು A4 ವಾಹನಕಾಯದಲ್ಲಿ ಹೊಸತೊಂದು S4 ಮಾದರಿಯನ್ನು ಪರಿಚಯಿಸಲಾಯಿತು. S2 ಮಾದರಿಯನ್ನು ಸ್ಥಗಿತಗೊಳಿಸಲಾಯಿತು. ಹಾದಿಯುದ್ದಕ್ಕೂ ಎಂಜಿನಿನ ಪರಿಷ್ಕರಣೆಯನ್ನು ಪಡೆದುಕೊಳ್ಳುವ ಮೂಲಕ, ಆಡಿ ಮಡಚುಚಾವಣಿಯ ಕಾರು (ಆಡಿ 80 ಮಾದರಿಯ ವಿನ್ಯಾಸ-ವೇದಿಕೆಯ ಆಧಾರದ ಮೇಲೆ) 1999ರವರೆಗೂ ಮುಂದುವರಿದುಕೊಂಡು ಬಂತು. 1996ರಲ್ಲಿ, ಉತ್ಪನ್ನ ಶ್ರೇಣಿಗೆ ಹೊಸತೊಂದು A3 ಜಾರುಬಾಗಿಲಿನ ಮಾದರಿಯನ್ನು (ವೋಕ್ಸ್‌ವ್ಯಾಗನ್ ಗಾಲ್ಫ್ Mk4ನ ವಿನ್ಯಾಸ-ವೇದಿಕೆಯನ್ನು ಹಂಚಿಕೊಂಡು) ಪರಿಚಯಿಸಲಾಯಿತು. ಮತ್ತು ಇದೇ ವಿನ್ಯಾಸ-ವೇದಿಕೆಯನ್ನು ಆಧರಿಸಿ 1998ರಲ್ಲಿ ಮೂಲಸ್ವರೂಪದ ಆಡಿ TT ಕೂಪೆ ಮತ್ತು ರೋಡ್‌ಸ್ಟರ್ ಮಾದರಿಗಳು ಮಾರುಕಟ್ಟೆಯನ್ನು ಪ್ರವೇಶಿಸಿದವು. ಮರ್ಸಿಡಿಸ್-ಬೆಂಝ್ A-ಕ್ಲಾಸ್‌ಗೆ ಪ್ರತಿಸ್ಪರ್ಧಿಯಾಗಿ ಆಡಿ A2 ಮಾದರಿಯನ್ನು ಪರಿಚಯಿಸಿದ್ದು ಮತ್ತೊಂದು ಕುತೂಹಲಕರ ಅಂಶವಾಗಿತ್ತು. ಈ ಮಾದರಿಯು ಯುರೋಪ್‌ನಲ್ಲಿ ಚೆನ್ನಾಗಿಯೇ ಮಾರಾಟವಾದರೂ, 2005ರಲ್ಲಿ A2 ಮಾದರಿಯನ್ನು ಸ್ಥಗಿತಗೊಳಿಸಲಾಯಿತು ಮತ್ತು ತತ್‌ಕ್ಷಣದ ಬದಲಿ ಮಾದರಿಯನ್ನು ಅಭಿವೃದ್ಧಿಪಡಿಸುವುದು ಬೇಡ ಎಂದು ಆಡಿ ಕಂಪನಿಯು ನಿರ್ಧರಿಸಿತು. ಶ್ರೇಣಿಯಾದ್ಯಂತ ಲಭ್ಯವಿದ್ದ ಎಂಜಿನುಗಳು ಈಗ ಒಂದು 1.4L, 1.6L ಮತ್ತು 1.8L 4 ಸಿಲಿಂಡರಿನ, 1.8L 4-ಸಿಲಿಂಡರಿನ ಟರ್ಬೊ, 2.6L ಮತ್ತು 2.8L V6, 2.2L ಅನಿಲಚಕ್ರ ಚಾಲಿತ 5 ಸಿಲಿಂಡರು ಮತ್ತು 4.2L V8 ಎಂಜಿನು ಆಗಿದ್ದವು. 1998ರಲ್ಲಿ V6 ಎಂಜಿನುಗಳು ಹೊಸ 2.4L ಮತ್ತು 2.8L 30V V6s ಎಂಜಿನುಗಳಿಂದ ಬದಲಾಯಿಸಲ್ಪಟ್ಟವು. ಇದರ ಫಲವಾಗಿ ಶಕ್ತಿ, ಭ್ರಾಮಕಶಕ್ತಿ ಹಾಗೂ ನವಿರುತನದಲ್ಲಿ ಗಮನಾರ್ಹವಾದ ಸುಧಾರಣೆ ಕಂಡುಬಂತು. ಮುಂದೆ, ಎಂಜಿನುಗಳನ್ನು ಸುಧಾರಣೆಯ ಹಾದಿಯುದ್ದಕ್ಕೂ ಸೇರಿಸುತ್ತಾ ಹೋಗಲಾಯಿತು. A8 ಮಾದರಿಗಾಗಿ ಒಂದು 3.7L V8 ಎಂಜಿನು ಮತ್ತು 6.0L W12 ಎಂಜಿನ್‌ನ್ನು ಸೇರಿಸಿದ್ದು ಇದರಲ್ಲಿ ಒಳಗೊಂಡಿತ್ತು.
ನೇರ-ಬದಲಾವಣೆಯ ಗೇರುಪೆಟ್ಟಿಗೆ
[ಬದಲಾಯಿಸಿ]ಶತಮಾನವು ಉರುಳಿದಂತೆ, ಜೋಡಿ ಕ್ಲಚ್ ಶಕ್ತಿ ಸಂವಹನದ (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್) ಒಂದು ವಿಧವಾದ ನೇರ-ಬದಲಾವಣೆಯ ಗೇರುಪೆಟ್ಟಿಗೆಯನ್ನು (ಡೈರೆಕ್ಟ್-ಷಿಫ್ಟ್ ಗೇರ್‌ಬಾಕ್ಸ್-DSG) ವೋಕ್ಸ್‌ವ್ಯಾಗನ್ ಪರಿಚಯಿಸಿತು. ಇದೊಂದು ಸ್ವಯಂಚಾಲನೆಗೊಳಿಸಿದ ಅರೆ-ಸ್ವಯಂಚಾಲಿತ ಶಕ್ತಿ ಸಂವಹನೆಯಾಗಿದ್ದು, ಒಂದು ಸಾಂಪ್ರದಾಯಿಕ ಸ್ವಯಂಚಾಲಿತ ಶಕ್ತಿ ಸಂವಹನಾ ಯಂತ್ರದಂತೆ ಚಾಲಿಸಬಹುದಾಗಿದೆ. B S1 ಗುಂಪಿನಲ್ಲಿ ಕಂಡುಬಂದ ಗೇರುಪೆಟ್ಟಿಗೆಯನ್ನು ಆಧರಿಸಿದ ಈ ವ್ಯವಸ್ಥೆಯು, ಭ್ರಾಮಕ ಶಕ್ತಿವಾಹಕವೊಂದರ ಬದಲಿಗೆ ಎಲೆಕ್ಟ್ರೊಹೈಡ್ರಾಲಿಕ್ ವಿಧಾನದಿಂದ ನಿಯಂತ್ರಿತ ಜೋಡಿ ಕ್ಲಚ್ಚುಗಳನ್ನು ಒಳಗೊಂಡಿರುತ್ತದೆ. ಇದನ್ನು ಕೆಲವೊಂದು VW ಗಾಲ್ಫ್ಸ್, ಆಡಿ A3 ಮತ್ತು TT ಮಾದರಿಗಳಲ್ಲಿ ಅಳವಡಿಸಲಾಗಿದ್ದು, ಇವುಗಳಲ್ಲಿ DSGಯನ್ನು S-ಟ್ರೋನಿಕ್ ಎಂದು ಕರೆಯಲಾಗಿದೆ.
ಇಂಧನ ಶ್ರೇಣೀಕೃತ ಇಂಜೆಕ್ಷನ್
[ಬದಲಾಯಿಸಿ]ಹಳತಾಗುತ್ತಿರುವ 1.8 ಲೀಟರ್ ಎಂಜಿನು ಈಗ ಹೊಸ ಇಂಧನ ಶ್ರೇಣೀಕೃತ ಇಂಜೆಕ್ಷನ್ (ಫ್ಯೂಯೆಲ್ ಸ್ಟ್ರಾಟಿಫೈಡ್ ಇಂಜೆಕ್ಷನ್-FSI) ಎಂಜಿನುಗಳಿಂದ ಬದಲಾಯಿಸಲ್ಪಡುತ್ತಿರುವುದರೊಂದಿಗೆ A3, A4, A6 ಮತ್ತು A8ನ ಹೊಸ ಮಾದರಿಗಳು ಪರಿಚಯಿಸಲ್ಪಟ್ಟಿವೆ. ಹೆಚ್ಚೂಕಮ್ಮಿ ಶ್ರೇಣಿಯಲ್ಲಿನ ಪೆಟ್ರೋಲು ಎಂಜಿನುನಿನ ಪ್ರತಿಯೊಂದು ಮಾದರಿಯೂ ಈಗ ಈ ಇಂಧನ-ಉಳಿತಾಯದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಕೆಳಗೆ ನೀಡಲಾಗಿರುವ ಮಾದರಿಗಳು ಅವುಗಳಲ್ಲಿ ಸೇರಿವೆ:
ಗ್ಯಾಸೊಲೀನು ಎಂಜಿನುಗಳು:
- 1.6 ಲೀಟರ್ 4 ಸಿಲಿಂಡರು 115 bhp (86 kW; 117 PS)
- 2.0 ಲೀಟರ್ 4 ಸಿಲಿಂಡರು 150 bhp (112 kW; 152 PS) (TSI ಎಂಜಿನುಗಳಿಗೆ– ಹಾದಿ ಮಾಡಿಕೊಡುವ ದೃಷ್ಟಿಯಿಂದ ಕ್ರಮೇಣವಾಗಿ ಇದರ ಬಳಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಕೆಳಗಿನ ವಿಭಾಗವನ್ನು ನೋಡಿ)
- 2.0 ಲೀಟರ್ ಅನಿಲಚಕ್ರ ಚಾಲಿತ 4 ಸಿಲಿಂಡರು 200 bhp (149 kW; 203 PS)
- 2.0 ಲೀಟರ್ ಅನಿಲಚಕ್ರ ಚಾಲಿತ 4 ಸಿಲಿಂಡರು 261 bhp (195 kW; 265 PS)
- 2.5 ಲೀಟರ್ ಅನಿಲಚಕ್ರ ಚಾಲಿತ 5 ಸಿಲಿಂಡರು 335 bhp (250 kW; 340 PS)
- 3.0 ಲೀಟರ್ ಸೂಪರ್‌ಚಾಲಿತ v6 300 bhp (224 kW; 304 PS) - 333 bhp (248 kW; 338 PS)
- 3.2 ಲೀಟರ್ V6 265 bhp (198 kW; 269 PS)
- 4.2 ಲೀಟರ್ V8 350 bhp (261 kW; 355 PS)
- 4.2 ಲೀಟರ್ V8 414 bhp (309 kW; 420 PS)
- 5.2 ಲೀಟರ್ V10 435 bhp (324 kW; 441 PS) - 450 bhp (336 kW; 456 PS)
- 5.2 ಲೀಟರ್ V10 525 ಬಿಎಚ್‌ಪಿ
- 5.2 ಲೀಟರ್ ಜೋಡಿಅನಿಲಚಕ್ರ V10 573 bhp (427 kW; 581 PS)
- 6.0 ಲೀಟರ್ W12 331 kW (450 PS)
ಈಗಾಗಲೇ ಮಾರುಕಟ್ಟೆಯಲ್ಲಿರುವ ಮತ್ತು ಆಡಿ ಬ್ರಾಂಡ್‌ನ ಉತ್ಪನ್ನಗಳಲ್ಲಿ ಅಳವಡಿಸಲ್ಪಟ್ಟಿರುವ ಎಂಜಿನುಗಳಲ್ಲಿ ಈ ಕೆಳಗಿನವು ಸೇರಿವೆ:
- 1.4 4 ಸಿಲಿಂಡರು 75 bhp (56 kW; 76 PS)
- 1.4 ಲೀಟರ್ TDI 3 ಸಿಲಿಂಡರು 75 bhp (56 kW; 76 PS)
- 1.4 ಲೀಟರ್ TDI 3 ಸಿಲಿಂಡರು 90 bhp (67 kW; 91 PS)
- 1.6 ಲೀಟರ್ 4 ಸಿಲಿಂಡರು 102 bhp (76 kW; 103 PS)
- 1.9 ಲೀಟರ್ TDI 4 ಸಿಲಿಂಡರು 105 bhp (78 kW; 106 PS)
- 2.0 ಲೀಟರ್ TDI 4 ಸಿಲಿಂಡರು 141 bhp (105 kW; 143 PS)
- 2.0 ಲೀಟರ್ TDI 4 ಸಿಲಿಂಡರು 170 bhp (127 kW; 172 PS)
- 2,5 ಲೀಟರ್ TDI V6 (110 kW )
- 2.7 ಲೀಟರ್ TDI V6 180 bhp (134 kW; 182 PS)
- 3.0 ಲೀಟರ್ TDI V6 233 bhp (174 kW; 236 PS)
- 4.2 ಲೀಟರ್ TDI V8 326 bhp (243 kW; 331 PS)
- 6.0 ಲೀಟರ್ TDI V12 500 bhp (373 kW; 507 PS) 1,000 N⋅m (740 lbf⋅ft)/1750 rpm
(ಎಲ್ಲಾ TDI ಮಾದರಿಗಳು ಅನಿಲಚಾಲಿತ ಡೀಸೆಲ್ ಮಾದರಿಗಳಾಗಿವೆ.)
ವಿದ್ಯುತ್ತಿನ ತಂತ್ರಜ್ಞಾನ
[ಬದಲಾಯಿಸಿ]ವೋಕ್ಸ್‌ವ್ಯಾಗನ್ ಸಮೂಹಕ್ಕಾಗಿ ಮಿಶ್ರ ವಿದ್ಯುತ್ತಿನ ಒಂದು ಪ್ರಾಯೋಗಿಕ ಯೋಜನೆಯನ್ನು (ಪೈಲಟ್ ಹೈಬ್ರಿಡ್ ಇಲೆಕ್ಟ್ರಿಕ್ ಪ್ರಾಜೆಕ್ಟ್‌ನ್ನು) ಅಭಿವೃದ್ಧಿಪಡಿಸುವುದಕ್ಕಾಗಿ, ಜಪಾನ್ ದೇಶದ ಇಲೆಕ್ಟ್ರಾನಿಕ್ ವಲಯದ ಅಗ್ರಗಣ್ಯನಾದ ಸ್ಯಾನಿಯೊ ಕಂಪನಿಯೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳಲು ಆಡಿ ಕಂಪನಿಯು ಯೋಜಿಸುತ್ತಿದೆ. ಈ ಒಪ್ಪಂದವು ಫಲಪ್ರದವಾದರೆ, ವೋಕ್ಸ್‌ವ್ಯಾಗನ್ ಸಮೂಹದ ವತಿಯಿಂದ ಮುಂಬರಲಿರುವ ಮಾದರಿಗಳಲ್ಲಿ ಸ್ಯಾನಿಯೊ ಬ್ಯಾಟರಿಗಳು ಹಾಗೂ ಇತರ ಇಲೆಕ್ಟ್ರಾನಿಕ್ ಬಿಡಿಭಾಗಗಳ ಬಳಕೆಯು ಕಂಡುಬರಬಹುದು.[೧೫] ಮಿಶ್ರ ವಿದ್ಯುತ್ತಿನ ವಾಹನಗಳಲ್ಲಿ ಈ ಕೆಳಗಿನವು ಸೇರಿವೆ:
This section needs expansion. You can help by adding to it. (October 2008) |
ಸಂಪೂರ್ಣ-ವಿದ್ಯುತ್ತಿನ ವಾಹನಗಳು:
- ಆಡಿ ಇ-ಟ್ರಾನ್ ಕಾನ್ಸೆಪ್ಟ್ ಸೂಪರ್‌ಕಾರು[೧೮]
LED ಹಗಲುವೇಳೆ ಬೆಳಗುವ ದೀಪಗಳು
[ಬದಲಾಯಿಸಿ]2006ರ ಆರಂಭದಲ್ಲಿ, ಆಡಿ ಕಂಪನಿಯು ತನ್ನ ಉತ್ಪನ್ನಗಳಲ್ಲಿ ಬಿಳಿಯ LED ತಂತ್ರಜ್ಞಾನವನ್ನು ಹಗಲುವೇಳೆ ಬೆಳಗುವ ದೀಪಗಳ ಸ್ವರೂಪದಲ್ಲಿ ಅಳವಡಿಸಿಕೊಂಡಿದೆ. DRLಗಳ ವಿಶಿಷ್ಟ ಲಕ್ಷಣದ ಆಕಾರವು ಈ ಬಗೆಗಳ ಒಂದು ಸರಕುಮುದ್ರೆಯಾಗಿ ಮಾರ್ಪಟ್ಟಿದೆ. R8 ಮಾದರಿಯ ಮೇಲೆ ಈ ಶೈಲಿಯನ್ನು ಮೊದಲು ಪರಿಚಯಿಸಲಾಯಿತು. ಅಲ್ಲಿಂದೀಚೆಗೆ ಅದು ಸಂಪೂರ್ಣ ಮಾದರಿಯ ಶ್ರೇಣಿಯಾದ್ಯಂತ ಹಬ್ಬಿಕೊಂಡಿದೆ.
ಮಲ್ಟಿ ಮೀಡಿಯಾ ಇಂಟರ್‌ಫೇಸ್
[ಬದಲಾಯಿಸಿ]ಮಲ್ಟಿ ಮೀಡಿಯಾ ಇಂಟರ್‌ಫೇಸ್ (MMI) ಎಂದು ಹೇಳಲಾಗುವ ಒಂದು ಗಣಕೀಕೃತ ನಿಯಂತ್ರಣಾ ವ್ಯವಸ್ಥೆಯನ್ನು ಆಡಿ ಕಂಪನಿಯು ತನ್ನ ಕಾರುಗಳಲ್ಲಿ ಅಳವಡಿಸಲು ಇತ್ತೀಚೆಗಷ್ಟೇ ಪ್ರಾರಂಭಿಸಿದೆ. BMWನ ಐಡ್ರೈವ್ ನಿಯಂತ್ರಣದ ಟೀಕೆಯ ನಡುವೆಯೇ ಇದು ಬಂದಿದೆ. ಇದು ಮುಖ್ಯವಾಗಿ ಒಂದು ಸುತ್ತುವ ನಿಯಂತ್ರಣಾ ಗುಬುಟು (ನಾಬ್) ಮತ್ತು ’ಖಂಡದ’ ಗುಂಡಿಗಳನ್ನು ಒಳಗೊಂಡ ಒಂದು ವ್ಯವಸ್ಥೆಯಾಗಿದ್ದು, ಕಾರಿನೊಳಗಡೆಯ ಎಲ್ಲಾ ಮನರಂಜನಾ ಸಾಧನಗಳು (ರೇಡಿಯೋ, CD ಚೇಂಜರ‍್, ಐಪಾಡ್, TV ಟ್ಯೂನರ್), ತಾಪಕ ಮತ್ತು ಗಾಳಿ-ಬೆಳಕು ಸಂಚಾರ, ಮತ್ತು ಕಾರಿನ ಇತರ ನಿಯಂತ್ರಣ ವ್ಯವಸ್ಥೆಗಳನ್ನು ಒಂದು ಪರದೆಯ ನೆರವಿನೊಂದಿಗೆ ನಿಯಂತ್ರಿಸುವಂತೆ ವಿನ್ಯಾಸಗೊಳಿಸಲಾಗಿದೆ. BMWನ ಐಡ್ರೈವ್‌ಗೆ ಹೋಲಿಸಿದಾಗ MMI ವ್ಯವಸ್ಥೆಯು ಒಂದು ಗಣನೀಯವಾಗಿ ಸುಧಾರಿಸಲ್ಪಟ್ಟ ಮಾದರಿ ಎಂದು ವ್ಯಾಪಕ ಪ್ರಚಾರವನ್ನು ಪಡೆದುಕೊಂಡಿತ್ತಾದರೂ, ಅಲ್ಲಿಂದೀಚೆಗೆ ತನ್ನ ಐಡ್ರೈವ್‌ಗಳಿಗೆ BMW ಕಂಪನಿಯು ಹೆಚ್ಚು ಬಳಕೆದಾರ-ಸ್ನೇಹಿ ಸ್ವರೂಪವನ್ನು ನೀಡಿದೆ.MMI ಮಾದರಿಯು ತನ್ನ ವಿನ್ಯಾಸದ ಕಾರಣದಿಂದಾಗಿ ಸಾರ್ವತ್ರಿಕವಾಗಿ ಉತ್ತಮವಾಗಿ ಸ್ವೀಕರಿಸಲ್ಪಟ್ಟಿದೆ. ’ಪ್ರಮುಖ ಕಾರ್ಯ’ದ ನೇರ ಪ್ರವೇಶಾವಕಾಶದ ಗುಂಡಿಗಳೊಂದಿಗಿನ ಒಂದು ಕೇಂದ್ರೀಯ ಗುಬುಟಿನ ಸುತ್ತಲೂ ಖಂಡದ ಗುಂಡಿಗಳು ಇರುವುದರಿಂದಾಗಿ ಮೆನು-ಜಾಲಾಡುವ ಪ್ರಕ್ರಿಯೆಯು ಸುಲಭಗೊಳಿಸಲ್ಪಟ್ಟಿದೆ. ರೇಡಿಯೋ ಅಥವಾ ದೂರವಾಣಿಯ ಕಾರ್ಯಚಟುವಟಿಕೆಗಳಿಗೆ ಸುಲಭದ ದಾರಿಗಳು ಇಲ್ಲಿ ಲಭ್ಯವಿವೆ. ಏಕವರ್ಣ ಅಥವಾ ವರ್ಣರಂಜಿತ ಸ್ವರೂಪದಲ್ಲಿರುವ ಪರದೆಯು ಮೇಲ್ಮುಖವಾಗಿರುವ ಒಂದು ಡ್ಯಾಶ್‌ಬೋರ್ಡ್‌ನ ಮೇಲೆ ಲಗತ್ತಿಸಲ್ಪಟ್ಟಿದ್ದರೆ, A4 (ಹೊಸ), A5, A6, A8, ಮತ್ತು Q7 ಮಾದರಿಗಳಲ್ಲಿ ನಿಯಂತ್ರಣಾ ವ್ಯವಸ್ಥೆಗಳನ್ನು ಅಡ್ಡಲಾಗಿ ಅಳವಡಿಸಲಾಗಿದೆ.ಆಡಿಯ ಸಂಚಾರ ನಿರ್ದೇಶನ ವ್ಯವಸ್ಥೆಯ (RNS-E) ಜೊತೆಗೆ ಉಪಗ್ರಹ ಸಂಚಾರ ನಿರ್ದೇಶನ ವ್ಯವಸ್ಥೆಯನ್ನು ಅಳವಡಿಸಿಕೊಂಡಾಗ, A3, TT, A4 (B7), ಮತ್ತು R8 ಮಾದರಿಗಳ ಮೇಲೆ "MMI-ಥರದ" ಒಂದು ವ್ಯವಸ್ಥೆಯೂ ಸಹ ಲಭ್ಯವಿದೆ.
ಪ್ರಸಕ್ತ ಮಾದರಿಗಳು
[ಬದಲಾಯಿಸಿ]ಆಡಿ A3 | ಆಡಿ A4 | ಆಡಿ A5 | ಆಡಿ A6 | ಆಡಿ A8 | ಆಡಿ TT | ಆಡಿ R8 | ಆಡಿ Q5 | ಆಡಿ Q7 |
---|---|---|---|---|---|---|---|---|
1996–ಇಂದಿನವರೆಗೆ | 1994–ಇಂದಿನವರೆಗೆ | 2007—ಇಂದಿನವರೆಗೆ | 1994–1997, 1998–2004, 2005–ಇಂದಿನವರೆಗೆ | 1994–ಇಂದಿನವರೆಗೆ | 1998–ಇಂದಿನವರೆಗೆ | 2006–ಇಂದಿನವರೆಗೆ | 2008—ಇಂದಿನವರೆಗೆ | 2006–ಇಂದಿನವರೆಗೆ |
S ಮಾದರಿಗಳು
[ಬದಲಾಯಿಸಿ]ಆಡಿ TTS | ಆಡಿ S3 | ಆಡಿ S4 | ಆಡಿ S5 | ಆಡಿ S6 | ಆಡಿ S8 |
---|---|---|---|---|---|
1998–ಇಂದಿನವರೆಗೆ | 1999-2004,2006–ಇಂದಿನವರೆಗೆ | 1997-2001,2003-2004,2004-2008,2008–ಇಂದಿನವರೆಗೆ | 2006–ಇಂದಿನವರೆಗೆ | 1994–1997,1999–2003,2006–ಇಂದಿನವರೆಗೆ | 1996–2002,2006–ಇಂದಿನವರೆಗೆ |
RS ಮಾದರಿಗಳು
[ಬದಲಾಯಿಸಿ]ಆಡಿ TT RS | ಆಡಿ RS6 |
---|---|
2009–ಇಂದಿನವರೆಗೆ | 2008—ಇಂದಿನವರೆಗೆ |
ಸೂಚನೆ: ಸ್ಥಗಿತಗೊಳಿಸಲಾದ ಮಾದರಿಗಳನ್ನು ಇದು ಒಳಗೊಳ್ಳುವುದಿಲ್ಲ.
ಮೋಟಾರು ಕ್ರೀಡೆಗಳು
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(June 2008) |
ಅನೇಕ ಸ್ವರೂಪಗಳ ಮೋಟಾರು ಕ್ರೀಡೆಗಳಲ್ಲಿ ಆಡಿಯು ಸ್ಪರ್ಧಿಸಿದೆ. ಮೋಟಾರು ಕ್ರೀಡೆಯಲ್ಲಿನ ಆಡಿ ಕಂಪನಿಯ ಸಮೃದ್ಧ ಸಂಪ್ರದಾಯವು ಅದರ ಮುಂಚಿನ ಕಂಪನಿಯಾದ ಆಟೋ ಯುನಿಯನ್‌ನೊಂದಿಗೆ 1930ರ ದಶಕದಲ್ಲಿ ಆರಂಭವಾಯಿತು. 1990ರ ದಶಕದಲ್ಲಿ, ಉತ್ತರ ಅಮೆರಿಕಾದಲ್ಲಿನ ಸರ್ಕ್ಯುಟ್ ರೇಸಿಂಗ್ ವಲಯದಲ್ಲಿ ಯಶಸ್ಸನ್ನು ಗಳಿಸಿದ ನಂತರ, ಮೋಟಾರು ಪಂದ್ಯಾವಳಿಯ ಟೂರಿಂಗ್ ಮತ್ತು ಸೂಪರ‍್ ಟೂರಿಂಗ್ ವರ್ಗಗಳಲ್ಲಿ ಆಡಿ ಕಂಪನಿಯು ಪ್ರಾಬಲ್ಯವನ್ನು ಸಾಧಿಸಿತು.
ಓಟದ ಸ್ಪರ್ಧೆಗಳು
[ಬದಲಾಯಿಸಿ]1980ರಲ್ಲಿ, ಕ್ವಾಟ್ರೋ ಎಂಬ ನಾಲ್ಕು-ಚಕ್ರ ಚಾಲನೆಯ (4WD) ಅನಿಲಚಕ್ರ ಚಾಲಿತ ಕಾರೊಂದನ್ನು ಆಡಿಯು ಬಿಡುಗಡೆಮಾಡಿತು. ಇದು ವಿಶ್ವಾದ್ಯಂತ ಓಟದ ಸ್ಪರ್ಧೆಗಳು ಮತ್ತು ಜೂಜುಪಂದ್ಯಗಳನ್ನು ಗೆಲ್ಲುತ್ತಲೇ ಹೋಯಿತು. ಇದು ಸಾರ್ವಕಾಲಿಕವಾದ ಅತ್ಯಂತ ಗಮನಾರ್ಹವಾದ ಓಟದ ಸ್ಪರ್ಧೆ ಕಾರುಗಳ ಪೈಕಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ, ಸ್ಪರ್ಧಾತ್ಮಕ ಜೂಜುಪಂದ್ಯಗಳಲ್ಲಿ ನಾಲ್ಕು-ಚಕ್ರ ಚಾಲನೆಯ ಬಳಕೆಗೆ ಅವಕಾಶಮಾಡಿಕೊಟ್ಟ, ಅಂದಿನ-ಕಾಲಕ್ಕೆ ಬದಲಾದ ನಿಯಮಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮೊದಲು ಮುಂದಾದ ಕಾರುಗಳಲ್ಲಿ ಇದೂ ಒಂದಾಗಿತ್ತು.ನಾಲ್ಕು-ಚಕ್ರ ಚಾಲನೆಯ ರೇಸರುಗಳು ತುಂಬಾ ಭಾರ ಮತ್ತು ಜಟಿಲವಾಗಿರುವುದೆಂದು ಆಲೋಚಿಸಿದ ಅನೇಕ ಟೀಕಾಕಾರರು, ಅವುಗಳ ಸಂಚಾರಯೋಗ್ಯತೆಯನ್ನು ಸಂದೇಹಿಸಿದರು. ಆದರೂ ಸಹ, ಕ್ವಾಟ್ರೋ ಕಾರು ಒಂದು ಯಶಸ್ವೀ ಕಾರಾಗಿ ಹೊರಹೊಮ್ಮಿತು. ಇದು ರಸ್ತೆಯಿಂದ ನಿಷ್ಕ್ರಮಿಸಿದ ತನ್ನ ಮೊದಲ ಓಟದ ಸ್ಪರ್ಧೆಯನ್ನು ನಿರ್ದೇಶಿಸಿತಾದರೂ, 4WD ಮಾದರಿಯೇ ಭವಿಷ್ಯದ ಮಾದರಿ ಎಂದು ಓಟದ ಸ್ಪರ್ಧೆ ಪ್ರಪಂಚಕ್ಕೆ ಸೂಚನೆಯನ್ನು ನೀಡಿದಂತಾಯಿತು. ವಿಶ್ವ ಓಟದ ಸ್ಪರ್ಧೆ ಚಾಂಪಿಯನ್‌ಷಿಪ್‌ನಲ್ಲಿ ಕ್ವಾಟ್ರೋ ಮಾದರಿಯು ಹೆಚ್ಚು ಹೆಚ್ಚು ಯಶಸ್ಸನ್ನು ಸಾಧಿಸುತ್ತಾ ಹೋಯಿತು. 1983ರ (ಹಾನ್ನು ಮಿಕ್ಕೊಲಾ) ಮತ್ತು 1984ರ (ಸ್ಟಿಗ್ ಬ್ಲಾಂಕ್ವಿಸ್ಟ್) ಚಾಲಕರ ಪ್ರಶಸ್ತಿಗಳನ್ನು ಇದು ಗೆದ್ದುಕೊಂಡಿತು,[೧೯] ಮತ್ತು ಆಡಿ ಕಂಪನಿಗೆ 1982 ಮತ್ತು 1984ರಲ್ಲಿ ತಯಾರಕರ ಪ್ರಶಸ್ತಿಯನ್ನು ತಂದುಕೊಟ್ಟಿತು.[೨೦]
1984ರಲ್ಲಿ, ಆಡಿ ಕಂಪನಿಯು ಬಿಡುಗಡೆ ಮಾಡಿದ ಅಲ್ಪ-ಚಕ್ರಾಂತರದ ಸ್ಪೋರ್ಟ್ ಕ್ವಾಟ್ರೋ ಮಾದರಿಯು ಮಾಂಟೆ ಕಾರ್ಲೊ ಮತ್ತು ಸ್ವೀಡನ್‌ನಲ್ಲಿ ನಡೆದ ಓಟದ ಸ್ಪರ್ಧೆ ಪಂದ್ಯಗಳಲ್ಲಿ ಪ್ರಾಬಲ್ಯವನ್ನು ಸಾಧಿಸಿತು. ಎಲ್ಲಾ ವೇದಿಕೆಗಳಲ್ಲೂ ಆಡಿಯು ಸ್ಥಾನಗಳಿಸಿಕೊಂಡಿತಾದರೂ, ಮುಂದೆ WRC ಪೈಪೋಟಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುತ್ತಾಯಿತು. 1985ರಲ್ಲಿ, ಸಾಧಾರಣ ಮಟ್ಟದ ಮುಕ್ತಾಯದ ಗಡಿಯಲ್ಲಿ ಪಂದ್ಯದ ಮತ್ತೊಂದು ಋತುವು ಸಿಲುಕಿದ ನಂತರ, ವಾಲ್ಟರ್ ರೋಹ್ರ್ಲ್ ಸದರಿ ಋತುವನ್ನು ತನ್ನ ಸ್ಪೋರ್ಟ್ ಕ್ವಾಟ್ರೋ S1ನಲ್ಲಿ ಮುಗಿಸಿದ, ಮತ್ತು ತಯಾರಕರ ಶ್ರೇಯಾಂಕಗಳಲ್ಲಿ ಆಡಿ ಕಂಪನಿಗೆ ಎರಡನೇ ಸ್ಥಾನವು ದೊರೆಯುವಲ್ಲಿ ನೆರವಾದ. ಅದೇ ವರ್ಷದಲ್ಲಿ ಹಾಂಗ್ ಕಾಂಗ್‌ನಿಂದ ಬೀಜಿಂಗ್‌ವರೆಗೆ ನಡೆದ ಓಟದ ಸ್ಪರ್ಧೆಯಲ್ಲಿಯೂ ಆಡಿಯು ಪುರಸ್ಕಾರಗಳನ್ನು ಸ್ವೀಕರಿಸಿತು. ವಿಶ್ವ ಓಟದ ಸ್ಪರ್ಧೆ ಚಾಂಪಿಯನ್‌ಷಿಪ್‌ನ ಒಂದು ಸುತ್ತು ಗೆಲ್ಲುವಲ್ಲಿನ ಏಕೈಕ ಮಹಿಳಾ ಚಾಲಕಿ ಮತ್ತು ಆಡಿ ಕಾರಿಗಾಗಿ ಮೀಸಲಾದ ಓರ್ವ ಚಾಲಕಿಯಾದ ಮಿಚೆಲಿ ಮೌಟನ್, ಈಗ "S1" ಎಂದು ಸರಳವಾಗಿ ಕರೆಯಲಾಗುವ ಸ್ಪೋರ್ಟ್ ಕ್ವಾಟ್ರೋ S1ನ್ನು ತೆಗೆದುಕೊಂಡು, ಪೈಕ್ಸ್ ಪೀಕ್ ಇಂಟರ್‌ನ್ಯಾಷನಲ್ ಹಿಲ್ ಕ್ಲೈಂಬ್ ಸ್ಪರ್ಧೆಯಲ್ಲಿ ಪಾಲ್ಗೊಂಡಳು.ಸದರಿ ಹತ್ತುವಿಕೆಯ ಪಂದ್ಯವು, ಕೊಲರೆಡೋದಲ್ಲಿನ 4,302 ಮೀಟರ‍್ ಎತ್ತರದ ಪರ್ವತವೊಂದರ ಮೇಲೆ ಚಾಲಿಸಿಕೊಂಡು ಹೋಗುವಂತೆ ಒಬ್ಬ ಚಾಲಕ ಹಾಗೂ ಕಾರನ್ನು ಕಣಕ್ಕಿಳಿಸುತ್ತದೆ. ಹೀಗಿರುವಾಗ 1985ರಲ್ಲಿ ಮಿಚೆಲಿ ಮೌಟನ್ 11:25.39ರಷ್ಟು ಸಮಯದಲ್ಲಿ ಕ್ರಮಿಸಿ ಹೊಸ ದಾಖಲೆಯೊಂದನ್ನು ಸ್ಥಾಪಿಸಿದ್ದೇ ಅಲ್ಲದೇ, ಪೈಕ್ಸ್ ಪೀಕ್ ದಾಖಲೆಯೊಂದನ್ನು ಸ್ಥಾಪಿಸಿದ ಮೊಟ್ಟಮೊದಲ ಮಹಿಳೆಯೆನಿಸಿಕೊಂಡಳು. 1986ರಲ್ಲಿ, ಆಡಿ ಕಂಪನಿಯು ಔಪಚಾರಿಕವಾಗಿ ಅಂತರರಾಷ್ಟ್ರೀಯ ಪಂದ್ಯಾಟವನ್ನು ಬಿಟ್ಟಿತು. ಜೊವಾಕ್ವಿಮ್ ಸ್ಯಾಂಟೋಸ್ ಎಂಬ ಚಾಲಕ ತನ್ನ ಫೋರ್ಡ್ RS200 ವಾಹನದೊಂದಿಗೆ ತೊಡಗಿಸಿಕೊಂಡಿದ್ದಾಗ ಪೋರ್ಚುಗಲ್‌ನಲ್ಲಿ ಸಂಭವಿಸಿದ ಒಂದು ಅಪಘಾತದ ನಂತರ ಆಡಿ ಕಂಪನಿಯು ಈ ತೀರ್ಮಾನಕ್ಕೆ ಬಂತು. ರಸ್ತೆಯಲ್ಲಿದ್ದ ವೀಕ್ಷಕರಿಗೆ ಕಾರು ಬಡಿಯುವುದನ್ನು ತಪ್ಪಿಸಲು ಸ್ಯಾಂಟೋಸ್ ಕಾರಿನ ಮಾರ್ಗವನ್ನು ಹೊರಳಿಸಿದಾಗ, ಮತ್ತು ಪಥವನ್ನು ಬಿಟ್ಟು ಆ ಪಾರ್ಶ್ವದಲ್ಲಿದ್ದ ವೀಕ್ಷಕರ ಜಂಗುಳಿಗೆ ಕಾರು ನುಗ್ಗಿದಾಗ ಮೂರು ಮಂದಿ ಸತ್ತು, 30 ಮಂದಿ ಗಾಯಗೊಂಡಿದ್ದರು. ಅದೇ ವರ್ಷದಲ್ಲಿ, ಬಾಬ್ಬಿ ಅನ್ಸರ್ ಆಡಿ ಕಾರೊಂದನ್ನು ಬಳಸಿ, 11:09.22ರಷ್ಟು ಸಮಯದಲ್ಲಿ ಕ್ರಮಿಸಿ ಪೈಕ್ಸ್ ಪೀಕ್ ಪರ್ವತದ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಬರೆದ. 1987ರಲ್ಲಿ, ವಾಲ್ಟರ್ ರೋಹ್ರ್ಲ್ ಎಂಬಾತ ಆಡಿ S1 ಕಾರಿನಲ್ಲಿ 10:47.85ರಷ್ಟು ಸಮಯದಲ್ಲಿ ಕ್ರಮಿಸುವ ಮೂಲಕ, ಆಡಿ ಕಂಪನಿಯ ವತಿಯಿಂದ ಹೊಸತೊಂದು ಪೈಕ್ಸ್ ಪೀಕ್ ಇಂಟರ್‌ನ್ಯಾಷನಲ್ ಹಿಲ್ ಕ್ಲೈಂಬ್ ದಾಖಲೆಯನ್ನು ಬರೆದ. ಇದು ಆತ WRCಯಿಂದ ನಿವೃತ್ತನಾಗುವ ಎರಡು ವರ್ಷಗಳ ಹಿಂದಿನ ದಾಖಲೆಯಾಗಿತ್ತು. ಅಂತಿಮ ಆವೃತ್ತಿಯು ಹೊರಬರುವುದರೊಂದಿಗೆ441 kW (600 PS; 591 bhp) ಆಡಿ S1 ಮಾದರಿಯು ಆಡಿ ಕಂಪನಿಯ ಸಮಯ-ಪ್ರಮಾಣಿತ ಐದು ಸಿಲಿಂಡರಿನ ಅನುಸಾರವಾಗಿರುವ ಅನಿಲಚಕ್ರ ಚಾಲಿತ ಎಂಜಿನನ್ನು ಅಳವಡಿಸಿಕೊಂಡಿತು.[೨೧] ಆರು-ವೇಗದ ಗೇರ್‌ಪೆಟ್ಟಿಗೆಯೊಂದಕ್ಕೆ ಈ ಎಂಜಿನನ್ನು ಹೊಂದಿಸಲಾಗಿತ್ತು ಹಾಗೂ ಇದು ಆಡಿಯ ಪ್ರಸಿದ್ಧ ನಾಲ್ಕು-ಚಕ್ರ ಚಾಲನಾ ವ್ಯವಸ್ಥೆಯೊಂದಿಗೆ ಓಡಿತು. ಹಾನ್ನು ಮಿಕ್ಕೊಲಾ, ಸ್ಟಿಗ್ ಬ್ಲಾಂಕ್ವಿಸ್ಟ್, ವಾಲ್ಟರ್ ರೋಹ್ರ್ಲ್ ಮತ್ತು ಮಿಚೆಲಿ ಮೌಟನ್ ಇವರೇ ಮೊದಲಾದ ಆಡಿಯ ಎಲ್ಲಾ ಉನ್ನತ ಸ್ತರದ ಚಾಲಕರೂ ಈ ಕಾರನ್ನು ಓಡಿಸಿದರು. ಈ ಆಡಿ S1 ಮಾದರಿಯು ಆಡಿ 'S' ಕಾರುಗಳ ಶ್ರೇಣಿಯನ್ನು ಪ್ರಾರಂಭಿಸಿತು. ಅದೇ ಈಗ ಮುಖ್ಯವಾಹಿನಿಯ ಆಡಿ ಮಾದರಿ ಶ್ರೇಣಿಯೊಳಗಿನ ಕ್ರೀಡಾ-ಕಾರ್ಯಕ್ಷಮತೆಯ ಉಪಕರಣದ ಒಂದು ಹೆಚ್ಚಿಸಲ್ಪಟ್ಟ ಮಟ್ಟವನ್ನು ಪ್ರತಿನಿಧಿಸುತ್ತದೆ.
USAಯಲ್ಲಿನ ಚಿತ್ರಣ
[ಬದಲಾಯಿಸಿ]ಓಟದ ಸ್ಪರ್ಧೆಪಂದ್ಯಗಳಿಂದ ಹೊರಬಿದ್ದು ಸರ್ಕ್ಯುಟ್ ರೇಸಿಂಗ್ ವಲಯಕ್ಕೆ ಆಡಿ ಕಂಪನಿಯು ಹೊರಳುದಾರಿಯನ್ನು ತುಳಿದಾಗ 1988ರಲ್ಲಿ ನಡೆದ ಟ್ರಾನ್ಸ್-ಆಮ್ ಪಂದ್ಯದೊಂದಿಗೆ ಅಮೆರಿಕಾವನ್ನು ಮೊದಲು ಪ್ರವೇಶಿಸಲು ಅದು ಆಯ್ಕೆಮಾಡಿಕೊಂಡಿತು. 1989ರಲ್ಲಿ, ಇಂಟರ್‌ನ್ಯಾಷನಲ್ ಮೋಟರ್ ಸ್ಪೋರ್ಟ್ಸ್ ಅಸೋಸಿಯೇಷನ್ (IMSA) GTOದ ಕಡೆಗೆ ತನ್ನ ಆಡಿ 90 ಮಾದರಿಯೊಂದಿಗೆ ಆಡಿ ಕಂಪನಿಯು ನಡೆಯಿತು. ಒಂದು ನಿಯತ ಆಧಾರದ ಮೇಲೆ ಗೆದ್ದನಂತರವೂ ಎರಡು ಪ್ರಮುಖ ಸಹಿಷ್ಣುತಾ ಪಂದ್ಯಗಳನ್ನು (ಡೇಟೋನಾ ಮತ್ತು ಸೆಬ್ರಿಂಗ್) ತಪ್ಪಿಸಿದ್ದರಿಂದಾಗಿ ಶೀರ್ಷಿಕೆಯು ಅವರ ಕೈತಪ್ಪಿಹೋಯಿತು.
ಪ್ರವಾಸಿ ಕಾರುಗಳು
[ಬದಲಾಯಿಸಿ]1990ರಲ್ಲಿ, ಉತ್ತರ ಅಮೆರಿಕಾದಲ್ಲಿ ಕಾರುಗಳನ್ನು ಮಾರುಕಟ್ಟೆ ಮಾಡುವ ತನ್ನ ಉದ್ದೇಶವನ್ನು ಸಂಪೂರ್ಣಗೊಳಿಸಿದ ನಂತರ ಆಡಿ ಕಂಪನಿಯು ಯುರೋಪ್‌ನ ಕಡೆಗೆ ತಿರುಗಿತು. ಆಡಿ V8 ಮಾದರಿಯೊಂದಿಗೆ ಮೊದಲು ಡ್ಯೂಯಿಷ್ ಟೂರ್ನ್‌ವ್ಯಾಗನ್ ಮೀಸ್ಟರ್‌ಚಾಫ್ಟ್ (DTM) ಶ್ರೇಣಿಯೆಡೆಗೆ ಕಂಪನಿಯು ಮೊದಲು ಪಾದಾರ್ಪಣ ಮಾಡಿತು. ನಂತರ 1993ರಲ್ಲಿ ಹೊಸ ಫಾರ್ಮುಲಾಕ್ಕಾಗಿ ಕಾರುಗಳನ್ನು ನಿರ್ಮಿಸಲು ಒಪ್ಪದಿರುವುದರ ಮೂಲಕ, ವೇಗವಾಗಿ ಬೆಳೆಯುತ್ತಿದ್ದ ಸೂಪರ‍್ ಟೂರಿಂಗ್ ಶ್ರೇಣಿಯ ಕಡೆಗೆ ತನ್ನ ಗಮನವನ್ನು ಅದು ತಿರುಗಿಸಿತು. ಸೂಪರ‍್ ಟೂರಿಂಗ್ ಶ್ರೇಣಿಯು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳ ಒಂದು ಶ್ರೇಣಿಯಾಗಿದೆ. ಆಡಿ ಕಂಪನಿಯು ಮೊದಲು ಫ್ರೆಂಚ್ ಸೂಪರ್‌ಟೂರಿಸ್ಮೆ ಮತ್ತು ಇಟಾಲಿಯನ್ ಸೂಪರ್‌ಟೂರಿಸ್ಮೆಯಲ್ಲಿ ಪ್ರವೇಶಿಸಿತು. ನಂತರದ ವರ್ಷದಲ್ಲಿ, ಆಡಿ ಕಂಪನಿಯು ಜರ್ಮನಿಯ ಸೂಪರ್‌ಟೂರೆನ್‌ವ್ಯಾಗನ್ ಕಪ್‌ಗೆ (ಇದಕ್ಕೆ STW ಎಂದು ಹೆಸರು), ಮತ್ತು ನಂತರದ ವರ್ಷದಲ್ಲಿ ಬ್ರಿಟಿಷ್ ಟೂರಿಂಗ್ ಕಾರ್ ಚಾಂಪಿಯನ್‌ಷಿಪ್‌ಗೆ (BTCC) ಬದಲಾಯಿಸಿತು. ಕ್ವಾಟ್ರೋ ನಾಲ್ಕು ಚಕ್ರದ ಚಾಲನಾ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ, ಮತ್ತು ಪ್ರತಿಸ್ಪರ್ಧಿಗಳ ಮೇಲೆ ಅದು ಹೊಂದಿದ್ದ ಪ್ರಭಾವಕ್ಕೆ ಸಂಬಂಧಿಸಿದಂತೆ ತೊಡಕನ್ನು ಹೊಂದಿದ್ದ ಫೆಡೆರೇಷನ್ ಇಂಟರ್‌ನ್ಯಾಷನೇಲ್ ಡಿ ಎಲ್’ಆಟೊಮೊಬೈಲ್ (FIA), 1998ರಲ್ಲಿ [ಸೂಕ್ತ ಉಲ್ಲೇಖನ ಬೇಕು] ಸ್ಪರ್ಧಿಸದಂತೆ ನಾಲ್ಕು ಚಕ್ರದ ಚಾಲನೆಯ ಎಲ್ಲಾ ಕಾರುಗಳ ಮೇಲೆ ನಿಷೇಧವನ್ನು ಹೇರಿತು. ಆದರೆ ಅಷ್ಟುಹೊತ್ತಿಗಾಗಲೇ ಆಡಿ ಕಂಪನಿಯು ತನ್ನೆಲ್ಲಾ ಕಾರ್ಯಸಂಬಂಧಿ ಪ್ರಯತ್ನಗಳನ್ನೂ ಕ್ರೀಡಾ ಕಾರಿನ ಪಂದ್ಯಗಳ ಕಡೆಗೆ ಬದಲಾಯಿಸಿತ್ತು.2000ದ ವೇಳೆಗೆ, SCCA ಸ್ಪೀಡ್ ವರ್ಲ್ಡ್ GT ಚಾಲೆಂಜ್ ಪಂದ್ಯಾವಳಿಗಾಗಿ ತನ್ನ RS4 ಮಾದರಿಯನ್ನಿಟ್ಟುಕೊಂಡು USನಲ್ಲಿ ಆಡಿ ಕಂಪನಿಯು ಸ್ಪರ್ಧೆಗೆ ತೊಡಗಿಸಿಕೊಂಡಿತು. ಮಾರಾಟಗಾರ/ತಂಡದ ಚಾಂಪಿಯನ್ ರೇಸಿಂಗ್ ಮೂಲಕ ಕೋರ್ವೆಟ್‌ಗಳು, ವೈಪರ್‌ಗಳು, ಮತ್ತು ಚಿಕ್ಕದಾದ BMWಗಳ (4WD ಕಾರುಗಳಿಗೆ ಅನುಮತಿ ನೀಡಲಿರುವ ಕೆಲವೇ ಶ್ರೇಣಿಯ ಪೈಕಿ ಇದೊಂದಾಗಿದೆ) ಜೊತೆಗೆ ಆಡಿ ಕಂಪನಿಯು ಸ್ಪರ್ಧಿಸಬೇಕಾಗಿ ಬಂತು. 2003ರಲ್ಲಿ, ಚಾಂಪಿಯನ್ ರೇಸಿಂಗ್‌ನಲ್ಲಿ ಒಂದು RS6 ಪ್ರವೇಶಿಸಿತು. ಮತ್ತೊಮ್ಮೆ, ಕ್ವಾಟ್ರೋ ನಾಲ್ಕು ಚಕ್ರದ ಚಾಲನಾ ಮಾದರಿಯು ಮೇಲ್ಮಟ್ಟದಲ್ಲಿ ನಿಂತಿತು, ಹಾಗೂ ಚಾಂಪಿಯನ್ ಕಾರಾದ ಆಡಿ ಚಾಂಪಿಯನ್‌ಷಿಪ್‌ನ್ನು ಗೆದ್ದಿತು. ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಕಂಪನಿಯು 2004ರಲ್ಲಿ ಮತ್ತೆ ಮರಳಿತಾದರೂ, ಹೊಸ ಒಮೆಗಾ ಅಡಿಗಟ್ಟಾದ CTS-Vಯೊಂದಿಗೆ ಹೊರಬಂದ ಕ್ಯಾಡಿಲಾಕ್ ಎಂಬ ಹೊಸ ಕಾರು ಹಣದಾಸೆಯನ್ನು ಬಿಟ್ಟೋಡುವ ಪರಿಸ್ಥಿತಿಯನ್ನು ಆಡಿಗೆ ತಂದೊಡ್ಡಿತು. ಅನುಕ್ರಮವಾಗಿ ಒಂದಾದ ಮೇಲೊಂದರಂತೆ ವಿಜಯಮಾಲೆಯನ್ನು ಧರಿಸಿದ ನಂತರ, ಹಲವಾರು ಋಣಾತ್ಮಕ ಬದಲಾವಣೆಗಳಿಗೆ ಆಡಿ ಕಾರುಗಳು ಈಡಾಗಬೇಕಾಯಿತು. ಇದು ಕಾರಿನ ಕಾರ್ಯಕ್ಷಮತೆಯ ಮೇಲೆ ಆಳವಾದ ಪರಿಣಾಮವನ್ನು ಬೀರಿತು. ಹೆಸರಿಸುವುದಾರೆ, ಸ್ಥಿರಭಾರದ ತೂಕಗಳು ಕಾರುಗಳಲ್ಲಿ ಅಳವಡಿಸಲ್ಪಟ್ಟವು. ವಿಭಿನ್ನವಾದ ಟೈರುಗಳನ್ನು ಹೊಂದಲು ನಿರ್ಧರಿಸಿದ ಚಾಂಪಿಯನ್ ಆಡಿಯು ಅನಿಲಚಕಕ್ರಚಾಲಿತ ಪಂಪಿನ ಬೂಸ್ಟ್ ಒತ್ತಡವನ್ನು ತಗ್ಗಿಸಿತು. ಪುನರುಜ್ಜೀವನಗೊಳಿಸಲಾದ DTM ಶ್ರೇಣಿಯಲ್ಲಿನ TT-R ಮಾದರಿಯೊಂದಿಗೆ ಹಲವಾರು ವರ್ಷಗಳವರೆಗೆ ಸ್ಪರ್ಧಿಸಿದ ನಂತರ, 2004ರಲ್ಲಿ ಆಡಿ ಕಂಪನಿಯು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿತು. ಲೌರೆಂಟ್ ಐಯೆಲ್ಲೊ ಜೊತೆಗೆ ಸುಸಜ್ಜಿತ ಖಾಸಗಿ ತಂಡವಾದ ಎಬಿಟಿ ರೇಸಿಂಗ್/ಕ್ರಿಶ್ಚಿಯನ್ ಎಬಿಟಿ 2002ರ ಪ್ರಶಸ್ತಿಯನ್ನು ತೆಗೆದುಕೊಳ್ಳುವುದರೊಂದಿಗೆ, ಒಂದು ಸಂಪೂರ್ಣ ಕಾರ್ಖಾನೆಯ ಪ್ರಯತ್ನದ ಮೂಲಕ ಆಡಿ ಕಂಪನಿಯು ಪ್ರವಾಸಿ ಕಾರು ವಲಯಕ್ಕೆ ಹಿಂದಿರುಗಿತು. ಜೋಸ್ಟ್ ರೇಸಿಂಗ್ A4 DTM ಕಾರುಗಳಿಗೆ ಎರಡು ಕಾರ್ಖಾನೆಗಳ ಬೆಂಬಲ ನೀಡುವುದರ ಮೂಲಕ ಇದು ಪ್ರವೇಶಿಸಿತು.
ಕ್ರೀಡಾ ಕಾರಿನ ಪಂದ್ಯ
[ಬದಲಾಯಿಸಿ]1999ರಲ್ಲಿ ಪ್ರಾರಂಭಿಸಿ, ಆಡಿ ಕಂಪನಿಯು ಆಡಿ R8R ಮಾದರಿ (ತೆರೆದ-ಕಾಕ್‌ಪಿಟ್‌ನ 'ರೋಡ್‌ಸ್ಟರ್' ಮೂಲಮಾದರಿ) ಮತ್ತು ಆಡಿ R8C ಮಾದರಿಯನ್ನು (ಮುಚ್ಚಿದ-ಕಾಕ್‌ಪಿಟ್‌ನ 'ಕೂಪೆ' GT-ಮೂಲಮಾದರಿ) ನಿರ್ಮಿಸಿತು. 24 ಅವರ್ಸ್ ಆಫ್ ಲೆ ಮ್ಯಾನ್ಸ್‌ನಲ್ಲಿನ ಲೆ ಮ್ಯಾನ್ಸ್ ಮೂಲಮಾದರಿ LMP900 ವರ್ಗವನ್ನು ಒಳಗೊಂಡಂತೆ, ಕ್ರೀಡಾ ಕಾರಿನ ಪಂದ್ಯದಲ್ಲಿ ಸ್ಪರ್ಧಿಸಲು ಇದರ ನಿರ್ಮಾಣವಾಯಿತು. 2000ರ ಪಂದ್ಯದ ಋತುವಿಗಾಗಿ, ಆಡಿ ಕಂಪನಿಯು ಮುಖ್ಯವಾಗಿ ಹೊಸ ಆಡಿ R8 ಮಾದರಿಯ ಮೇಲೆ ಗಮನ ಹರಿಸಿತು. ಏಕೆಂದರೆ, ತೆರೆದ-ಕಾಕ್‌ಪಿಟ್‌ನ ಮೂಲಮಾದರಿಗಳಿಗೆ ನಿಯಮಗಳು ಅನುಕೂಲಕರವಾಗಿದ್ದವು. ಕಾರ್ಖಾನೆ-ಬೆಂಬಲಿತ ಜೋಸ್ಟ್ ರೇಸಿಂಗ್ ತಂಡವು ಆಡಿ R8 (2000 — 2002) ಮಾದರಿಯೊಂದಿಗೆ ಲೆ ಮ್ಯಾನ್ಸ್‌ನಲ್ಲಿ ಅನುಕ್ರಮವಾಗಿ ಮೂರು ಸಲ ಗೆಲ್ಲುವುದರ ಜೊತೆಗೆ, ತನ್ನ ಮೊದಲ ವರ್ಷದಲ್ಲೇ ಅಮೆರಿಕಾದ ಲೆ ಮ್ಯಾನ್ಸ್ ಸರಣಿಯ ಪ್ರತಿಯೊಂದು ಪಂದ್ಯವನ್ನೂ ಗೆದ್ದಿತು. ಚಾಂಪಿಯನ್ ರೇಸಿಂಗ್‌ನಂಥ ಗ್ರಾಹಕ ತಂಡಗಳಿಗೂ ಸಹ ಆಡಿ ಕಂಪನಿಯು ಕಾರನ್ನು ಮಾರಿತು.2003ರಲ್ಲಿ, ಆಡಿ ಕಂಪನಿಯಿಂದ ವಿನ್ಯಾಸಗೊಳಿಸಲ್ಪಟ್ಟ ಎಂಜಿನುಗಳೊಂದಿಗಿನ ಹಾಗೂ ಸಹವರ್ತಿಯಾದ ವೋಕ್ಸ್‌ವ್ಯಾಗನ್ ಸಮೂಹ ಕಂಪನಿಗೆ ಎರವಲು ನೀಡಲಾಗಿದ್ದ ಜೋಸ್ಟ್ ಚಾಲಕರಿಂದ ಚಾಲನೆಗೊಂಡ ಎರಡು ಬೆಂಟ್ಲೆ ಸ್ಪೀಡ್ 8 ವಾಹನಗಳು GTP ವರ್ಗದಲ್ಲಿ ಸ್ಪರ್ಧಿಸಿ, ಮೊದಲ ಎರಡು ಸ್ಥಾನಗಳೊಂದಿಗೆ ಪಂದ್ಯವನ್ನು ಮುಗಿಸಿದವು. ಇತ್ತ, ಚಾಂಪಿಯನ್ ರೇಸಿಂಗ್ R8 ಮಾದರಿಯು ಒಟ್ಟಾರೆಯಾಗಿ ಮೂರನೇ ಸ್ಥಾನವನ್ನು, ಮತ್ತು LMP900 ವರ್ಗದಲ್ಲಿ ಮೊದಲಸ್ಥಾನವನ್ನು ಗಳಿಸಿತು. 2004ರ ಪಂದ್ಯದಲ್ಲಿ ಆಡಿ ಕಾರು ವಿಜಯಶಾಲಿಯ ಪಟ್ಟವನ್ನು ಮತ್ತೊಮ್ಮೆ ದಕ್ಕಿಸಿಕೊಂಡಿತು. ಪಂದ್ಯವನ್ನು ಮುಕ್ತಾಯಗೊಳಿಸಿದ ಮೊದಲ ಮೂವರೂ ಸ್ಪರ್ಧಿಗಳು R8 ಮಾದರಿಗಳನ್ನು ಓಡಿಸುತ್ತಿದ್ದರು. ಆಡಿ ಸ್ಪೋರ್ಟ್ ಜಪಾನ್ ತಂಡದ ಗೋಹ್ ಮೊದಲು ಮುಗಿಸಿದರೆ, ಆಡಿ ಸ್ಪೋರ್ಟ್ UKಗೆ ಸೇರಿದ ವೆಲಾಕ್ಸ್ ಎರಡನೆಯ ಸ್ಥಾನವನ್ನೂ, ಮತ್ತು ಚಾಂಪಿಯನ್ ರೇಸಿಂಗ್ ಮೂರನೇ ಸ್ಥಾನವನ್ನೂ ಪಡೆದವು.2005ರ 24 ಅವರ್ಸ್ ಆಫ್ ಲೆ ಮ್ಯಾನ್ಸ್ ಪಂದ್ಯದಲ್ಲಿ, ಒರೆಕಾ ಎಂಬ ಆಡಿಯ ಪ್ಲೇಸ್ಟೇಷನ್ ತಂಡದಿಂದ ಬಂದ ಒಂದು R8ನ ಜೊತೆಗೆ ಎರಡು R8 ಕಾರುಗಳೊಂದಿಗೆ ಪಂದ್ಯದಲ್ಲಿ ಚಾಂಪಿಯನ್ ರೇಸಿಂಗ್ ತಂಡವು ತೊಡಗಿಸಿಕೊಂಡಿತು. ಹೊಸದಾದ LMP1 ಅಡಿಗಟ್ಟಿಗೆ ಹೋಲಿಸಿದಾಗ, R8 ಮಾದರಿಯ ಕಾರುಗಳು (ಇವುಗಳನ್ನು ಹಳೆಯ LMP900 ಕಟ್ಟುಪಾಡುಗಳಿಗೆ ಅನುಸಾರವಾಗಿ ನಿರ್ಮಿಸಲಾಗಿತ್ತು) ಒಂದು ಕಿರಿದಾದ ಗಾಳಿಯ ಒಳಪ್ರವೇಶದ ನಿರ್ಬಂಧಕ, ಅಪಕರ್ಷಿಸುವ ಶಕ್ತಿ, ಮತ್ತು ಒಂದು ಹೆಚ್ಚುವರಿ ಪ್ರಮಾಣದ 50 kg (110 lb) ತೂಕ ಇವೇ ಮೊದಲಾದ ಲಕ್ಷಣಗಳಿದ್ದವು. ಸರಾಸರಿಯಾಗಿ ಹೇಳುವುದಾದರೆ ಪೆಸ್ಕಾರೊಲೊ-ಜೂಡ್‌ಗೆ ಹೋಲಿಸಿದಾಗ, R8 ಮಾದರಿಗಳು ಸುಮಾರು 2–3 ಸೆಕೆಂಡುಗಳಷ್ಟು ನಂತರ ವೇಗವನ್ನು ಪಡೆದುಕೊಳ್ಳುತ್ತಿದ್ದವು. ಆದರೆ ಅದ್ಭುತ ಚಾಲಕರ ಒಂದು ತಂಡ ಹಾಗೂ ಅನುಭವದೊಂದಿಗೆ ಎರಡೂ ಚಾಂಪಿಯನ್ R8 ಮಾದರಿಗಳು ಮೊದಲನೆಯ ಮತ್ತು ಮೂರನೆಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಒರೆಕಾ ತಂಡವು ನಾಲ್ಕನೇ ಸ್ಥಾನವನ್ನು ಪಡೆಯಬೇಕಾಯಿತು. ಚಾಂಪಿಯನ್ ತಂಡವೂ ಸಹ 1967ರಲ್ಲಿ ಗಲ್ಫ್ ಫೋರ್ಡ್ GT ಪಂದ್ಯವಾದಾಗಿನಿಂದ ಲೆ ಮ್ಯಾನ್ಸ್ ಪಂದ್ಯವನ್ನು ಗೆಲ್ಲುವಲ್ಲಿನ ಅಮೆರಿಕಾದ ಮೊಟ್ಟಮೊದಲ ತಂಡವಾಗಿತ್ತು. ಇಲ್ಲಿಗೆ R8 ಮಾದರಿಯ ಸುದೀರ್ಘ ಯುಗವೂ ಮುಗಿಯುತ್ತದೆ; ಆದಾಗ್ಯೂ, ಆಡಿ R10 TDI ಎಂದು ಕರೆಯಲಾದ 2006ರ ಇದರ ಬದಲಿ ಮಾದರಿಯನ್ನು 2005ರ ಡಿಸೆಂಬರ‍್ 13ರಂದು ಅನಾವರಣಗೊಳಿಸಲಾಯಿತು.R10 TDI ಮಾದರಿಯು ಅನೇಕ ಹೊಸ ಲಕ್ಷಣಗಳನ್ನು ಒಳಗೊಂಡಿದ್ದು ಅದರಲ್ಲಿ ಅತ್ಯಂತ ನಿಸ್ಸಂಶಯವಾದ ಲಕ್ಷಣವೆಂದರೆ ಜೋಡಿ-ಅನಿಲಚಕ್ರ ಚಾಲಿತ ನೇರ ಇಂಜೆಕ್ಷನ್ ಶೈಲಿಯ ಡೀಸೆಲ್ ಎಂಜಿನು ಆಗಿತ್ತು. 2006 24 ಅವರ್ಸ್ ಆಫ್ ಲೆ ಮ್ಯಾನ್ಸ್‌ಗಾಗಿದ್ದ ಒಂದು ಪರೀಕ್ಷಾ-ಪಂದ್ಯವಾಗಿ 2006ರ 12 ಅವರ್ಸ್ ಆಫ್ ಸೆಬ್ರಿಂಗ್ ಪಂದ್ಯದಲ್ಲಿ ಪಾಲ್ಗೊಂಡಿದ್ದು ಇದರ ಮೊದಲ ಪಂದ್ಯವಾಗಿದ್ದು, ಈ ಪಂದ್ಯವನ್ನು ನಂತರ ಇದು ಗೆಲ್ಲುತ್ತಲೇ ಹೋಯಿತು. ಕ್ರೀಡಾ ಕಾರಿನ ಪಂದ್ಯದ ಮುಂಚೂಣಿಯಲ್ಲಿ ಆಡಿ ಕಾರು ತನ್ನ ಸ್ಥಾನವನ್ನು ಗುರುತಿಸಿಕೊಂಡಿದ್ದು, 12 ಅವರ್ಸ್ ಆಫ್ ಸೆಬ್ರಿಂಗ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮೊಟ್ಟಮೊದಲ ಡೀಸೆಲ್ ಕ್ರೀಡಾ ಕಾರಿನ ಪಂದ್ಯದಲ್ಲಿ ಒಂದು ಐತಿಹಾಸಿಕ ಗೆಲುವನ್ನು ಕಂಡಿರುವ ದಾಖಲೆಯನ್ನು ತನ್ನ ಖಾತೆಯಲ್ಲಿರಿಸಿಕೊಂಡಿದೆ. 24 ಅವರ್ಸ್ ಆಫ್ ಲೆ ಮ್ಯಾನ್ ಪಂದ್ಯವನ್ನು ಗೆದ್ದು 2006ರಲ್ಲಿ ಇತಿಹಾಸವನ್ನು ಸೃಷ್ಟಿಸಿದುದರ ಜೊತೆಗೆ, R10 TDI ಮಾದರಿಯು 2007ರಲ್ಲಿ ಪಿಯುಗಿಯೊ 908 HDi FAPಯನ್ನು ಸೋಲಿಸುವ ಮೂಲಕ, ಮತ್ತು 2008ರಲ್ಲಿ ಮತ್ತೊಮ್ಮೆ ಪಿಯುಗಿಯೊವನ್ನು ಸೋಲಿಸುವ ಮೂಲಕ ತನ್ನ ಸಾಮರ್ಥ್ಯಗಳನ್ನು ತೋರಿಸಿಕೊಟ್ಟಿದೆ.
ಮಾರಾಟಗಾರಿಕೆ
[ಬದಲಾಯಿಸಿ]ಚಿಹ್ನೆಗಳು
[ಬದಲಾಯಿಸಿ]ಆಡಿ ಕಂಪನಿಯ ಲಾಂಛನವು ಒಂದರ ಮೇಲೊಂದು ಅತಿಕ್ರಮಿಸಿರುವ ನಾಲ್ಕು ಉಂಗುರಗಳನ್ನು ಒಳಗೊಂಡಿದ್ದು, ಅದು ಆಟೋ ಯುನಿಯನ್‌ನ ನಾಲ್ಕು ಕಾರಿನ ಮಾದರಿಗಳನ್ನು ಪ್ರತಿನಿಧಿಸುತ್ತದೆ. DKW, ಹಾರ್ಚ್ ಮತ್ತು ವಾಂಡರರ್ ಕಂಪನಿಗಳೊಂದಿಗೆ ಆಡಿ ಕಂಪನಿಯು ವಿಲೀನವಾದುದನ್ನು ಆಡಿಯ ಲಾಂಛನವು ಸಂಕೇತಿಸುತ್ತದೆ: ಮೊದಲ ಉಂಗುರುವ ಆಡಿ ಕಂಪನಿಯನ್ನು ಪ್ರತಿನಿಧಿಸಿದರೆ, ಎರಡನೆಯದು DKW ಕಂಪನಿಯನ್ನೂ, ಮೂರನೆಯದು ಹಾರ್ಚ್ ಕಂಪನಿಯನ್ನೂ, ಮತ್ತು ನಾಲ್ಕನೆಯ ಹಾಗೂ ಕೊನೆಯ ಉಂಗುರವು ವಾಂಡರರ್ ಕಂಪನಿಯನ್ನೂ ಸೂಚಿಸುತ್ತವೆ.[೨೨][೨೩] ಒಲಿಂಪಿಕ್ ಆಟಗಳ ಸಂಕೇತವಾದ ಉಂಗುರಗಳೊಂದಿಗೆ ಇದು ಸಾಮ್ಯತೆಯನ್ನು ಹೊಂದಿರುವುದರಿಂದ, 1995ರಲ್ಲಿ ರೋಚೆಸ್ಟರ್, MN ಚಿಕ್ಕ ದಾವೆಗಳ ನ್ಯಾಯಾಲಯದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಆಡಿ ಕಂಪನಿಯ ವಿರುದ್ಧ ದಾವೆ ಹೂಡಿತ್ತು.[೨೪] 2009ರಲ್ಲಿ ನಡೆದ ಆಡಿ ಕಂಪನಿಯ ಶತಮಾನೋತ್ಸವ ಸಮಾರಂಭದ ಅಂಗವಾಗಿ, ಅಕ್ಷರ ಮಾದರಿಯನ್ನು ಎಡಭಾಗಕ್ಕೆ-ಜೋಡಣೆಗೊಂಡ ಆಡಿ ಮಾದರಿಗೆ ಬದಲಾಯಿಸುವ, ಮತ್ತು ಅತಿಕ್ರಮಿಸುವ ಉಂಗುರಗಳಿಗಾಗಿರುವ ಛಾಯೆಯ ವಿನ್ಯಾಸವನ್ನು ಮಾರ್ಪಡಿಸುವ ಮೂಲಕ ಕಂಪನಿಯು ಸದರಿ ಚಿಹ್ನೆಯನ್ನು ಪರಿಷ್ಕರಿಸಿತು.[೨೫]
ಘೋಷಣಾ ವಾಕ್ಯಗಳು
[ಬದಲಾಯಿಸಿ]ವೋರ್‌ಸ್ಪ್ರಂಗ್ ಡರ್ಚ್ ಟೆಕ್ನಿಕ್ ಎಂಬುದು ಆಡಿ ಕಂಪನಿಯ ಸಾಂಸ್ಥಿಕ ಅಡಿಬರಹ. ಅಂದರೆ, "ಪ್ರೋಗ್ರೆಸ್ ಥ್ರೂ ಟೆಕ್ನಾಲಜಿ ("ತಂತ್ರಜ್ಞಾನದ ಮೂಲಕ ಪ್ರಗತಿ") ಎಂಬುದು ಇದರರ್ಥ.[೨೬] ಯುನೈಟೆಡ್ ಕಿಂಗ್‌ಡಂ ಸೇರಿದಂತೆ ಯುರೋಪ್‌ನ ಅನೇಕ ದೇಶಗಳಲ್ಲಿ, ಮತ್ತು ಲ್ಯಾಟಿನ್ ಅಮೆರಿಕಾ, ಓಷಿಯಾನಿಯಾದಂಥ ಇತರ ಮಾರುಕಟ್ಟೆಗಳಲ್ಲಿ ಹಾಗೂ ಜಪಾನ್ ಸೇರಿದಂತೆ ಏಷ್ಯಾದ ಭಾಗಗಳಲ್ಲಿ ಜರ್ಮನ್-ಭಾಷೆಯ ಅಡಿಬರಹವನ್ನು ಬಳಸಲಾಗಿದೆ. ಕೆಲವು ವರ್ಷಗಳ ಹಿಂದೆ, "ಇನ್ನೊವೇಷನ್ ಥ್ರೂ ಟೆಕ್ನಾಲಜಿ" (ತಂತ್ರಜ್ಞಾನದ ಮೂಲಕ ನಾವೀನ್ಯತೆ) ಎಂಬುದು ಉತ್ತರ ಅಮೆರಿಕಾದ ಅಡಿಬರಹವಾಗಿತ್ತು. ಆದರೆ ಕೆನಡಾದಲ್ಲಿ ನೀಡಲಾದ ಜಾಹಿರಾತುಗಳಲ್ಲಿ ವೋರ್‌ಸ್ಪ್ರಂಗ್ ಡರ್ಚ್ ಟೆಕ್ನಿಕ್ ಎಂಬ ಜರ್ಮನ್ ಅಡಿಬರಹವನ್ನೇ ಬಳಸಲಾಯಿತು. ಆದಾಗ್ಯೂ, ತೀರಾ ಇತ್ತೀಚೆಗೆ, ಆಡಿ ಕಂಪನಿಯು U.S.ನಲ್ಲಿ ತನ್ನ ಅಡಿಬರಹವನ್ನು "ಟ್ರುತ್ ಇನ್ ಎಂಜಿನಿಯರಿಂಗ್" (ಎಂಜಿನಿಯರಿಂಗ್‌ನಲ್ಲಿನ ಸತ್ಯ) ಎಂಬುದಾಗಿ ಪರಿಷ್ಕರಿಸಿದೆ.
ಪ್ರಾಯೋಜಕತ್ವಗಳು
[ಬದಲಾಯಿಸಿ]ಆಡಿ ಕಂಪನಿಯು ವಿಭಿನ್ನ ಬಗೆಗಳ ಕ್ರೀಡೆಗಳ ಓರ್ವ ಬಲಿಷ್ಠ ಪಾಲುದಾರನಾಗಿದೆ. ಸಾಕರ್ ಆಟದಲ್ಲಿ, ಆಡಿ ಕಂಪನಿ ಹಾಗೂ FC ಬೇಯೆರ್ನ್ ಮ್ಯೂನಿಕ್, ರಿಯಲ್ ಮ್ಯಾಡ್ರಿಡ್ CF, FC ಬಾರ್ಸಿಲೋನಾ, AC ಮಿಲಾನ್‌ಮತ್ತು ಅಜಾಕ್ಸ್ ಆಮ್‌ಸ್ಟರ್‌ಡ್ಯಾಂನಂಥ ಹಲವಾರು ಕ್ಲಬ್‌ಗಳ ನಡುವೆ ಸುದೀರ್ಘ ಅವಧಿಯ ಪಾಲುದಾರಿಕೆಗಳು ಅಸ್ತಿತ್ವದಲ್ಲಿವೆ. ಚಳಿಗಾಲದ ಕ್ರೀಡಾಪಂದ್ಯಾವಳಿಗಳನ್ನೂ ಸಹ ಆಡಿ ಕಂಪನಿ ಪ್ರಾಯೋಜಿಸುತ್ತದೆ: ಆಡಿ FIS ಆಲ್ಪೈನ್ ಸ್ಕೀ ವಿಶ್ವಕಪ್ ಪಂದ್ಯಾವಳಿಗೆ ಕಂಪನಿಯ ಹೆಸರನ್ನೇ ಇಡಲಾಗಿದೆ. ಇದರ ಜೊತೆಗೆ, ಜರ್ಮನ್ ಸ್ಕೀ ಅಸೋಸಿಯೇಷನ್ (DSV) ಹಾಗೂ ಸ್ವಿಜರ್‌ಲೆಂಡ್, ಸ್ವೀಡನ್, ಫಿನ್ಲೆಂಡ್, ಫ್ರಾನ್ಸ್, ಲೀಚ್‌ಟೆನ್‌ಸ್ಟೀನ್, ಇಟಲಿ, ಆಸ್ಟ್ರಿಯಾ ಮತ್ತು US ದೇಶಗಳ ಆಲ್ಪೈನ್ ಸ್ಕೀಯಿಂಗ್ ರಾಷ್ಟ್ರೀಯ ತಂಡಗಳಿಗೂ ಸಹ ಆಡಿ ಕಂಪನಿಯು ಬೆಂಬಲ ನೀಡುತ್ತದೆ. ಸರಿಸುಮಾರು ಎರಡು ದಶಕಗಳವರೆಗೆ ಆಡಿ ಕಂಪನಿಯು ಗಾಲ್ಫ್ ಕ್ರೀಡೆಯನ್ನು ಪೋಷಿಸಿದೆ: ಆಡಿ ಕ್ವಾಟ್ರೋ ಕಪ್ ಮತ್ತು ಹೈಪೋವೆರೀನ್ಸ್‌ಬ್ಯಾಂಕ್ ಲೇಡೀಸ್ ಜರ್ಮನ್ ಓಪನ್ ಪಂದ್ಯವನ್ನು ಆಡಿ ಕಂಪನಿಯು ಸಾದರಪಡಿಸಿರುವುದು ಇದಕ್ಕೆ ಉದಾಹರಣೆ. ಹಾಯಿದೋಣಿ ಪಂದ್ಯಕ್ಕೆ ಸಂಬಂಧಿಸಿದಂತೆ, ಆಡಿ ಕಂಪನಿಯು ಮೆಡ್‌ಕಪ್ ರೆಗಟ್ಟಾದಲ್ಲಿ ತೊಡಗಿಸಿಕೊಂಡಿದೆ ಮತ್ತು ಲೂಯಿಸ್ ವ್ಯೂಟನ್ ಪೆಸಿಫಿಕ್ ಸರಣಿಯ ಅವಧಿಯಲ್ಲಿ ಲೂನಾ ರೊಸ್ಸಾ ತಂಡವನ್ನು ಬೆಂಬಲಿಸುತ್ತದೆ. ಅಷ್ಟೇ ಅಲ್ಲ, ಮೆಲ್ಗೆಸ್ 20 ಹಾಯಿದೋಣಿ ಪಂದ್ಯಾವಳಿಗೂ ಸಹ ಆಡಿ ಕಂಪನಿಯು ಪ್ರಮುಖ ಪ್ರಾಯೋಜಕನಾಗಿದೆ. ಇದಲ್ಲದೆ, ERC ಇಂಗ್ಲೋಸ್ಟಾಡ್ (ಹಾಕಿ) ಮತ್ತು FC ಇಂಗ್ಲೋಸ್ಟಾಡ್ 04 (ಸಾಕರ್) ಪ್ರಾದೇಶಿಕ ತಂಡಗಳನ್ನೂ ಸಹ ಆಡಿ ಕಂಪನಿ ಪ್ರಾಯೋಜಿಸುತ್ತದೆ.[೨೭] ಆಡಿ ಕಂಪನಿಯ 100ನೇ ವಾರ್ಷಿಕೋತ್ಸವದ ವರ್ಷವಾದ 2009ರಲ್ಲಿ, ಮೊಟ್ಟಮೊದಲ ಬಾರಿಗೆ ಕಂಪನಿಯು ಆಡಿ ಕಪ್‌ನ್ನು ಆಯೋಜಿಸಿದೆ. ಎರಡು-ದಿನಗಳ-ಪಂದ್ಯಾವಳಿಯೊಂದರಲ್ಲಿ, FC ಬೇಯೆರ್ನ್ ಮ್ಯೂನಿಕ್, AC ಮಿಲಾನ್, ಮ್ಯಾಂಚೆಸ್ಟರ್ ಯುನೈಟೆಡ್ F.C. ಮತ್ತು CA ಬೋಕಾ ಜೂನಿಯರ್ಸ್‌ಗೆ ಸೇರಿದ ತಂಡಗಳು ಪರಸ್ಪರರ ವಿರುದ್ಧ ಸ್ಪರ್ಧಿಸಲಿವೆ.[೨೮]
ಮುದ್ರಣಶೈಲಿ
[ಬದಲಾಯಿಸಿ]ಆಡಿ ಸ್ಯಾನ್ಸ್ ಶೈಲಿಯು (ವಿಸ್ತರಿತ ಯುನಿವರ್ಸ್‌ನ್ನು ಆಧರಿಸಿದ್ದು) ಮೂಲತಃ 1997ರಲ್ಲಿ, ಮೆಟಾಡಿಸೈನ್‌ಗಾಗಿ ಓಲೆ ಶಾಫರ್‌ರಿಂದ ಸೃಷ್ಟಿಸಲ್ಪಟ್ಟಿತು.ಮೆಟಾಡಿಸೈನ್‌ನ್ನು ತದನಂತರ ಆಡಿ ಟೈಪ್ ಎಂದು ಕರೆಯಲಾಗುವ ಒಂದು ಹೊಸ ಸಾಂಸ್ಥಿಕ ಅಕ್ಷರಮಾದರಿಗಾಗಿ ನಿಯೋಜಿಸಲಾಯಿತು. ಬೋಲ್ಡ್ ಮಂಡೆ ಸಂಸ್ಥೆಯ ಪಾಲ್ ವಾನ್ ಡೆರ್ ಲಾನ್ ಮತ್ತು ಪೀಟರ್ ವಾನ್ ರೋಸ್ಮಾಲೆನ್ ಇದನ್ನು ವಿನ್ಯಾಸಗೊಳಿಸಿದ್ದರು. ಆಡಿ ಕಂಪನಿಯ 2009ರ ಉತ್ಪನ್ನಗಳು ಮತ್ತು ಮಾರಾಟಗಾರಿಕೆಯ ಸಾಮಗ್ರಿಗಳಲ್ಲಿ ಈ ಅಕ್ಷರಮಾದರಿಯು ಕಾಣಿಸಿಕೊಳ್ಳಲಾರಂಭಿಸಿತು.[೨೯]
ವಿಡಿಯೋ ಆಟಗಳಲ್ಲಿನ ಪಾತ್ರ
[ಬದಲಾಯಿಸಿ]ಪ್ಲೇಸ್ಟೇಷನ್ 3ರ ಆನ್‌ಲೈನ್ ಸಮೂಹ-ಆಧರಿತ ಸೇವೆಯಾದ ಪ್ಲೇಸ್ಟೇಷನ್ ಹೋಮ್‌ನಲ್ಲಿ, ಮನೆಯ ಚಲನಚಿತ್ರಮಂದಿರದಲ್ಲಿನ ಲಭ್ಯವಿರುವ ವ್ಯವಸ್ಥೆಗೆ ಬೆಂಬಲ ನೀಡುವುದರಿಂದ ಪ್ರಾರಂಭಿಸಿ ನಂತರ ಒಂದು ಸಂಪೂರ್ಣ ಮುಡಿಪಾಗಿಟ್ಟ ಹೋಮ್ ಸ್ಪೇಸ್ ಪರಿಕಲ್ಪನೆಯನ್ನು ಬೆಂಬಲಿಸುವುದು ಆಡಿ ಕಂಪನಿಯ ಉದ್ದೇಶ. ಆಡಿ ಕಂಪನಿಯು ಪ್ಲೇಸ್ಟೇಷನ್ ಹೋಮ್‌ಗಾಗಿ ಒಂದು ಸ್ಪೇಸ್ ಅಥವಾ ಸ್ಥಳಾವಕಾಶವನ್ನು ಅಭಿವೃದ್ಧಿಪಡಿಸುವಲ್ಲಿನ ಮೊಟ್ಟಮೊದಲ ಕಾರು ತಯಾರಕನೆನಿಸಿದೆ. ಈ ಸ್ಥಳಾವಕಾಶವನ್ನು "ಆಡಿ ಸ್ಪೇಸ್" ಎಂದು ಹೆಸರಿಸಲಾಗಿದ್ದು, ಅಂತ್ಯದ ವೇಳೆಗೆ ಇದು ಬಿಡುಗಡೆಯಾಗಲಿದೆ. ಆಡಿ TV ವಾಹಿನಿಯೊಂದು ಪ್ರಸಾರಮಾಡಲಿರುವ ಮೊಟ್ಟಮೊದಲ ವಿಡಿಯೋ ವಿಷಯಗಳ ಕಾರ್ಯಕ್ರಮ ಇದಾಗಲಿದೆ. 2009ರ ಡಿಸೆಂಬರ್‌ನಲ್ಲಿ ಇದರ ವಿಸ್ತರಣೆಯಾಗಲಿದ್ದು, ಆಡಿಯ ಇ-ಟ್ರಾನ್ ಪರಿಕಲ್ಪನೆಯನ್ನು ಅಳವಡಿಸಿಕೊಂಡಿರುವ ಒಂದು ಅತಿನವ್ಯ ಪುಟ್ಟ-ಆಟವಾದ ವರ್ಟಿಕಲ್ ಗೇಮ್‌ನ್ನು ಇದು ಒಳಗೊಳ್ಳಲಿದೆ. ಶಕ್ತಿಸಂಚಯನ ಮಾಡಿಕೊಳ್ಳುವ ಅಟಗಾರರು ಅತಿಹೆಚ್ಚು ಸಂಭವನೀಯ ವೇಗದೊಂದಿಗೆ ಪಂದ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಅತಿವೇಗಿ ಆಟಗಾರರು ಆಡಿ ಸ್ಪೇಸ್‌ನ ಕೇಂದ್ರಭಾಗದಲ್ಲಿನ ಒಂದು ದೊಡ್ಡ ಗೋಪುರದಲ್ಲಿ ನೆಲೆಗೊಂಡಿರುವ ಆಡಿ ಸಮುಚ್ಚಯದಲ್ಲಿ ಒಂದು ಜಾಗವನ್ನು ಗಳಿಸುತ್ತಾರೆ.2010ರಲ್ಲಿ ಹೆಚ್ಚುವರಿ ಅಂಶಗಳನ್ನು ಸೇರಿಸಲಾಗುವುದೆಂದು ಆಡಿ ಕಂಪನಿಯು ತಿಳಿಸಿದೆ.[೩೦] ಆಡಿ ಕಂಪನಿಯಲ್ಲಿನ ಆನ್‌ಲೈನ್ ಮಾರಾಟಗಾರಿಕಾ ವಿಭಾಗದಲ್ಲಿನ ವಿಡಿಯೋ ಆಟಗಳು ಹಾಗೂ ವರ್ಚುಯಲ್ ಕ್ಷೇತ್ರಗಳಿಗೆ ಸಂಬಂಧಿಸಿದ ಹೊಣೆಯನ್ನು ಹೊತ್ತಿರುವ ಕೈ ಮೆನ್ಸಿಂಗ್ ಹೇಳುವ ಪ್ರಕಾರ, "ಬಹುತೇಕ ಯುವಜನರು ತಮ್ಮ ಮೊದಲ ಚಾಲನಾ ಅನುಭವವನ್ನು ವಿಡಿಯೋ ಆಟಗಳಿಂದ ಗಳಿಸುತ್ತಾರೆ. ಆಡಿ ಸ್ಪೇಸ್‌ನ ನೆರವಿನೊಂದಿಗೆ, ಸದರಿ ಲಕ್ಷ್ಯದ ಗುಂಪನ್ನು ಒಂದು ಉನ್ನತವಾದ ಭಾವನಾತ್ಮಕ ಮತ್ತು ಪಾರಸ್ಪರಿಕ ಕ್ರಿಯೆಯ ವಾತಾವರಣದಲ್ಲಿ ನಮ್ಮ ಬ್ರಾಂಡ್‌ನ ಸಂಪರ್ಕಕ್ಕೆ ನಾವು ತರಬಹುದು, ಮತ್ತು ಪರಿಣಾಮಸಿದ್ಧವಾದ ಇ-ಟ್ರಾನ್ ಪಂದ್ಯದೊಂದಿಗೆ 'ವೋರ್‌ಸ್ಪ್ರಂಗ್ ಡರ್ಚ್ ಟೆಕ್ನಿಕ್' ಎಂಬ ನಮ್ಮ ಘೋಷವಾಕ್ಯವನ್ನು ಸಾಧಿಸಿ ತೋರಿಸಬಹುದು."
ಆಡಿ TDI
[ಬದಲಾಯಿಸಿ]ತನ್ನ ಡೀಸೆಲ್ ತಂತ್ರಜ್ಞಾನವನ್ನು ಉತ್ತೇಜಿಸುವ ಆಡಿಯ ಪ್ರಯತ್ನದ ಅಂಗವಾಗಿ, ಕಂಪನಿಯು 2009ರಲ್ಲಿ ಆಡಿ ಮೈಲೇಜ್ ಮ್ಯಾರಾಥಾನ್‌ನ್ನು ಪ್ರಾರಂಭಿಸಿತು. ಆಡಿ ಕಂಪನಿಯ 4 ಮಾದರಿಗಳಿಂದ (ಆಡಿ Q7 3.0 TDI, ಆಡಿ Q5 3.0 TDI, ಆಡಿ A4 3.0 TDI, ಆಡಿ A3 S ಟ್ರಾನಿಕ್ ಶಕ್ತಿಸಂವಹನೆಯೊಂದಿಗಿನ ಸ್ಪೋರ್ಟ್‌ಬ್ಯಾಕ್ 2.0 TDI) ರೂಪುಗೊಂಡ 23 ಆಡಿ TDI ವಾಹನಗಳ ಒಂದು ಶ್ರೇಣಿಯನ್ನು ಈ ಚಾಲನಾ ಪ್ರವಾಸವು ಒಳಗೊಂಡಿತ್ತು. ನ್ಯೂಯಾರ್ಕ್‌ನಿಂದ ಪ್ರಾರಂಭಿಸಿ ಲಾಸ್ ಏಂಜೆಲೀಸ್‌ವರೆಗಿನ ಅಮೆರಿಕಾ ಖಂಡದಾದ್ಯಂತದ ಪ್ರಯಾಣದಲ್ಲಿನ 13 ದಿನವಹಿ ಹಂತಗಳ ಅವಧಿಯಲ್ಲಿ ಚಿಕಾಗೊ, ಡಲ್ಲಾಸ್ ಮತ್ತು ಲಾಸ್ ವೆಗಾಸ್‌ನಂಥ ಪ್ರಮುಖ ನಗರಗಳನ್ನು ಹಾದುಹೋಗುವುದು ಇದರ ವೈಶಿಷ್ಟ್ಯವಾಗಿತ್ತು. ರಾಕಿ ಪರ್ವತಗಳು, ಡೆತ್ ವ್ಯಾಲಿ ಮತ್ತು ಗ್ರಾಂಡ್ ಕೆನಿಯನ್ ಮೊದಲಾದವು ಸೇರಿದಂತೆ ನೈಸರ್ಗಿಕ ಅದ್ಭುತಗಳನ್ನು ವೀಕ್ಷಿಸುವುದೂ ಸಹ ಇದರಲ್ಲಿ ಸೇರಿತ್ತು.[೩೧]
ಉಲ್ಲೇಖಗಳು
[ಬದಲಾಯಿಸಿ]- ↑ "1909 - Audi Automobilwerke is established in Zwickau". Audi Of America. Retrieved 2009-04-05.
- ↑ 2007 Annual Report Archived 2009-02-10 ವೇಬ್ಯಾಕ್ ಮೆಷಿನ್ ನಲ್ಲಿ. Audi AG
- ↑ ೩.೦ ೩.೧ ೩.೨ ಆಡಿ ವೆಬ್‌ಸೈಟ್ http://www.audi.com/audi/com/en2/about_audi_ag/history/chronicle/chronicle_1899_1914.html Archived 2009-02-07 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Audi Company History". carautoportal.com. Archived from the original on 2016-08-13. Retrieved 2009-08-10.
- ↑ A History of Progress– Chronicle of the Audi AG. Audi AG, Public Relations. 1996. p. 30. ISBN 0-8376-0384-6. Archived from the original on 2009-03-17. Retrieved 2009-12-28.
- ↑ ೬.೦ ೬.೧ ಆಡಿ ವೆಬ್‌ಸೈಟ್ http://www.audi.com/audi/com/en2/about_audi_ag/history/chronicle/chronicle_1915_1929.html Archived 2009-02-04 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಆಡಿ ವೆಬ್‌ಸೈಟ್ http://www.audi.com/audi/com/en2/about_audi_ag/history/chronicle/chronicle_1930_1944.html Archived 2009-02-04 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೮.೦ ೮.೧ ೮.೨ ಆಡಿ ವೆಬ್‌ಸೈಟ್ http://www.audi.com/ಆಡಿ/com/en2/about_audi_ag/history/chronicle/chronicle_1945_1959.html
- ↑ "VEB Automobilwerk Zwickau (german)". Retrieved 2008-09-21.
- ↑ ೧೦.೦ ೧೦.೧ "Audi Worldwide > Home". Audi.com. 2009-04-15. Archived from the original on 2009-02-04. Retrieved 2009-04-27.
- ↑ "Quattro, The early years". Retrieved 2006-11-02.
- ↑ "Audi Press Release 2008 production (german)". Retrieved 2009-01-18.
- ↑ ಆಡಿ ವೆಬ್‌ಸೈಟ್ http://www.audiusa.com/audi/us/en2/tools/glossary/ಅಡಿಗಟ್ಟು_body/corrosion_protection.html
- ↑ Audi of America - http://www.audiusa.com. "Audi of America > Glossary > Chassis & Body > Galvanized body". Audiusa.com. Retrieved 2009-04-27.
{{cite web}}
: External link in
(help)|author=
- ↑ "ಎರರ್ - ಲೆಕ್ಸಿಸ್‌ನೆಕ್ಸಿಸ್ ಪಬ್ಲಿಷರ್". Archived from the original on 2008-06-15. Retrieved 2021-08-09.
- ↑ "Audi A1 Sportback concept". Next Concept Cars. 2008-10-02. Archived from the original on 2009-03-17. Retrieved 2009-04-27.
- ↑ Korzeniewski, Jeremy (2008-10-02). "Audi unveils A4 TDI concept e". Autobloggreen.com. Archived from the original on 2009-06-09. Retrieved 2009-04-27.
- ↑ "Audi e-Tron Electric Supercar Concept Unveiled". Audisite.com. Archived from the original on 2017-11-29. Retrieved 2009-12-28.
- ↑ "World Rally Championship for Drivers - Champions". RallyBase.nl. Retrieved 2008-08-30.
- ↑ "World Rally Championship for Manufacturers - Champions". RallyBase.nl. Retrieved 2008-08-30.
- ↑ "25 Years of Audi Quattro". Audi AG. Audi Of America. 2005-02-22. Archived from the original on 2012-10-23. Retrieved 2009-03-31.
- ↑ Car Logo. "Audi Logo". Archived from the original on 2017-06-20. Retrieved 2007-09-10.
- ↑ "History of the Four Rings-Part 1-Audi Auto Union". Seriouswheels.com. Archived from the original on 2016-12-10. Retrieved 2009-04-27.
- ↑ Alina Dumitrache. "Audi Reveals Updated Logo". autoevolution.com. Retrieved 2009-08-27.
- ↑ ಶತಮಾನೋತ್ಸವದ ಸಂಭ್ರಮಾಚರಣೆಯ ನಂತರ, ಪರಿಷ್ಕರಿಸಿದ ಚಿಹ್ನೆಯನ್ನು ಆಡಿ ಅನಾವರಣಗೊಳಿಸುತ್ತಿರುವುದು
- ↑ "Eco-Culture". Audi magazine (3/08): 19.
- ↑ "Audi Worldwide > Experience > Sponsoring > Sport". Audi.com. 2009-06-11. Archived from the original on 2009-09-23. Retrieved 2009-07-07.
- ↑ "FC Bayern". Fcbayern.t-home.de. 2009-03-04. Retrieved 2009-07-07.
- ↑ "ಆಡಿಗೆ ಸಂಬಂಧಿಸಿದ ಮುದ್ರಣಶೈಲಿಯ ಮರುಬಿಡುಗಡೆ". Archived from the original on 2017-11-20. Retrieved 2009-12-28.
- ↑ "Audi creates virtual Audi Space within PlayStation Home". CNET Reviews.
- ↑ ಹಳ್ಳಿಗಾಡಿನ ಮೂಲಕದ ಕ್ರಮಿತ ಮೈಲಿಯ ಸುದೀರ್ಘ ಓಟದೊಂದಿಗೆ ಡೀಸೆಲ್ ಚಾಲಿತ ಮಾದರಿಯನ್ನು ಆಡಿ ಆರಂಭಿಸಲಿದೆ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಗ್ಲೋಬಲ್ ಕಾರ್ಪೊರೇಟ್ ಪೋರ್ಟಲ್
- ಮೋಟರ್ಸ್ಪೋರ್ಟ್ನಲ್ಲಿನ ಆಡಿ Archived 2008-06-19 ವೇಬ್ಯಾಕ್ ಮೆಷಿನ್ ನಲ್ಲಿ.
- 1939ರ ಆಡಿ (ಆಟೋ ಯುನಿಯನ್) ಮಾರಾಟಗಳ ಕಿರುಹೊತ್ತಿಗೆ
ಟೆಂಪ್ಲೇಟು:Volkswagen Group brands
ಟೆಂಪ್ಲೇಟು:Audi (Europe) timeline 1970 to date ಟೆಂಪ್ಲೇಟು:Audi (North America) timeline 1970 to date
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: external links
- Articles lacking reliable references from December 2008
- Articles with invalid date parameter in template
- All articles lacking reliable references
- Articles with unsourced statements from June 2008
- Wikipedia articles needing clarification from February 2009
- Articles with hatnote templates targeting a nonexistent page
- Articles with unsourced statements from September 2009
- Pages containing citation needed template with deprecated parameters
- Articles with unsourced statements from February 2007
- Articles needing additional references from June 2008
- All articles needing additional references
- Articles to be expanded from October 2008
- All articles to be expanded
- Articles with unsourced statements from November 2009
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- ಆಡಿ
- ವೋಕ್ಸ್‌ವ್ಯಾಗನ್
- ಕಾರು ತಯಾರಕರು
- ಸ್ಪೋರ್ಟ್ಸ್ ಕಾರು ತಯಾರಕರು
- ಬವೇರಿಯಾ
- ಬಾಡೆನ್-ವುರ್ಟೆಂಬರ್ಗ್
- ಸ್ಯಾಕ್ಸೋನಿ
- ಇಂಗ್ಲೋಸ್ಟಾಡ್
- ವಾಹನ ಕಂಪನಿಗಳು