ವಿಷಯಕ್ಕೆ ಹೋಗು

ಮ್ಯಾಂಚೆಸ್ಟರ್‌ ಯುನೈಟೆಡ್‌ F.C.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Manchester United
Manchester United's crest
ಪೂರ್ಣ ಹೆಸರುManchester United Football Club
ಉಪ ಹೆಸರುThe Red Devils[೧]
ಸ್ಥಾಪನೆ1878, as Newton Heath L&YR F.C.
ಮೈದಾನOld Trafford
(ಸಾಮರ್ಥ್ಯ: 76,212[೨])
ಮಾಲೀಕರುಅಮೇರಿಕ ಸಂಯುಕ್ತ ಸಂಸ್ಥಾನ Malcolm Glazer
Co-chairmenಅಮೇರಿಕ ಸಂಯುಕ್ತ ಸಂಸ್ಥಾನ Joel & Avram Glazer
ಮ್ಯಾನೇಜರ್ನೆದರ್ಲ್ಯಾಂಡ್ಸ್ Erik ten Hag
Premier League
2022–233
ದೇಶ ಬಣ್ಣ
ಎರಡನೆಯ ಬಣ್ಣ
ಮೂರನೆಯ ಬಣ್ಣ
Current season

ಮ್ಯಾಂಚೆಸ್ಟರ್‌ ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ ಇಂಗ್ಲೀಷ್‌ ಫುಟ್‌ಬಾಲ್‌ ಕ್ಲಬ್‌ ಆಗಿದೆ. ಇದರ ಮೂಲವು ಗ್ರೇಟರ್‌ ಮ್ಯಾಂಚೆಸ್ಟರ್‌ಟ್ರ್ಯಾಫೋರ್ಡ್‌ನಲ್ಲಿನ ಓಲ್ಡ್‌ ಟ್ರ್ಯಾಫೋರ್ಡ್‌ನಲ್ಲಿದೆ ಮತ್ತು ಇದು ವಿಶ್ವದ ಜನಪ್ರಿಯ ಫುಟ್‌ಬಾಲ್‌ ಕ್ಲಬ್‌ಗಳಲ್ಲಿ ಒಂದಾಗಿದೆ. ಈ ಕ್ಲಬ್ ೧೯೯೨ರಲ್ಲಿ ಸ್ಥಾಪಿತವಾದ ‌ಪ್ರೀಮಿಯರ್‌ ಲೀಗ್‌ನ ಸ್ಥಾಪಕ ಸದಸ್ಯವಾಗಿರುವುದರೊಂದಿಗೆ ೧೯೭೪–೭೫ರ ನಡುವಿನ ಕ್ರೀಡಾಋತುವನ್ನು ಹೊರತುಪಡಿಸಿ, ೧೯೩೮ರಿಂದ ಇಂಗ್ಲೀಷ್‌ ಫುಟ್‌ಬಾಲ್‌ನ ಅಗ್ರಶ್ರೇಣಿಯಲ್ಲಿ ಆಡಿತ್ತು. 1964–65[೩] ರಿಂದ ಆರು ಕ್ರೀಡಾಋತುಗಳಲ್ಲಿ ಕ್ಲಬ್‌ನ ಸರಾಸರಿ ಹಾಜರಾತಿಗಳು ಇತರ ಎಲ್ಲಾ ಇಂಗ್ಲೀಷ್‌ ಫುಟ್‌ಬಾಲ್‌ ತಂಡಗಳಿಗಿಂತ ಹೆಚ್ಚಾಗಿತ್ತು.

2008–09ರ ಪ್ರೀಮಿಯರ್‌ ಲೀಗ್‌ ಮತ್ತು 2008ರ FIFA ಕ್ಲಬ್‌ ವಿಶ್ವ ಕಪ್‌ನ್ನು ಗೆದ್ದು, ಇಂಗ್ಲೀಷ್‌ ವಿಜೇತ ತಂಡ ಮತ್ತು ಕ್ಲಬ್‌ ವಿಶ್ವ ಕಪ್‌ ವಿಜೇತರಾಗಿ ಮ್ಯಾಂಚೆಸ್ಟರ್‌ ಯುನೈಟೆಡ್‌ ಫುಟ್‌ಬಾಲ್‌ ಜಗತ್ತನ್ನು ಆಳಿತು. ಇದು ಇಂಗ್ಲೀಷ್‌ ಫುಟ್‌ಬಾಲ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫುಟ್‌ಬಾಲ್‌ ಕ್ಲಬ್‌ ಆಗಿತ್ತು ಮತ್ತು ೧೯೮೬ರ ನವೆಂಬರ್‌ನಲ್ಲಿ ಅಲೆಕ್ಸ್‌ ಫರ್ಗ್ಯೂಸನ್‌ ವ್ಯವಸ್ಥಾಪಕರಾಗುವವರೆಗೆ ತಂಡವು ೨೨ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿತ್ತು. ೧೯೬೮ರಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವು ಬೆನ್ಫಿಕಾವನ್ನು ೪–೧ ಅಂತರದಿಂದ ಸೋಲಿಸುವುದರಿಂದ ಯುರೋಪಿಯನ್‌ ಕಪ್‌ನ್ನು ಗೆದ್ದ ಮೊದಲು ಇಂಗ್ಲೀಷ್‌ ಕ್ಲಬ್‌ ಆಯಿತು. ೧೯೯೯ರಲ್ಲಿ ಟ್ರಿಬಲ್‌ನ ಒಂದು ಭಾಗದಂತೆ ಎರಡನೆಯ ಯುರೋಪಿಯನ್‌ ಕಪ್‌ನ್ನು ತಂಡ ಗೆದ್ದರು. ನಂತರ ೨೦೦೮ರಲ್ಲಿ ಮೂರನೆಯ ಯುರೋಪಿಯನ್‌ ಕಪ್‌ನ್ನು ತಂಡ ಗೆದ್ದರು. ಈ ಕ್ಲಬ್‌ ೧೮ ಪ್ರಶಸ್ತಿಗಳನ್ನು ಗೆಲ್ಲುವುದರೊಂದಿಗೆ ಅತ್ಯಂತ ಹೆಚ್ಚು ಇಂಗ್ಲೀಷ್‌ ಲೀಗ್‌ ಪ್ರಶಸ್ತಿಗಳನ್ನು ಗಳಿಸಿದ ಮತ್ತು ೧೧[೪] ನೆಯ ಕಪ್‌ ಗೆಲ್ಲುವುದರೊಂದಿಗೆ ಅತಿ ಹೆಚ್ಚು FA ಕಪ್‌ ಗೆದ್ದ ದಾಖಲೆಯ ಮೂಲಕ ಜಂಟಿ ದಾಖಲೆಗಳನ್ನು ಹೊಂದಿದೆ.

೧೯೯೦ರ ಕೊನೆಯವರೆಗೂ ಈ ಕ್ಲಬ್‌ ತನ್ನ ಅತಿ ಹೆಚ್ಚು ಆದಾಯದಿಂದ ಇತರೆಲ್ಲಾ ಫುಟ್‌ಬಾಲ್‌ ಕ್ಲಬ್‌ಗಳಿಗಿಂತ ಅತ್ಯಂತ ಶ್ರೀಮಂತ ಫುಟ್‌ಬಾಲ್‌ ಕ್ಲಬ್‌ ಆಗಿತ್ತು.[೫] ಪ್ರಸ್ತುತವಾಗಿ ಈ ಕ್ಲಬ್‌ ಏಪ್ರಿಲ್‌ ೨೦೦೯[೬] ರ ಅಂಕಿಅಂಶದ ಪ್ರಕಾರ ಸುಮಾರು £೧.೧೩೬ ಶತಕೋಟಿ (೧.೩೧೯ ಶತಕೋಟಿ / $೧.೮೭೦ ಶತಕೋಟಿ) ಮೌಲ್ಯದ ಆಸ್ತಿಯೊಂದಿಗೆ ಜಗತ್ತಿನ ಅತಿ ಶ್ರೀಮಂತ ಮತ್ತು ಮೌಲ್ಯಯುತ ಕ್ಲಬ್‌ ಆಗಿದೆ. ಮ್ಯಾಂಚೆಸ್ಟರ್‌ ಯುನೈಟೆಡ್‌ ಯುರೋಪ್‌ನ ಪ್ರಮುಖ ಫುಟ್‌ಬಾಲ್‌ ಕ್ಲಬ್‌[೭] ಗಳ ಸಮೂಹವಾಗಿದ್ದ ಪ್ರಸ್ತುತ ಅಸ್ತಿತ್ವದಲ್ಲಿಲ್ಲದ G-14ರನ್ನು ಸ್ಥಾಪಿಸಿತ್ತಲ್ಲದೆ, ಪ್ರಸ್ತುತ ಅದರ ಮುಂದುವರೆದ ರೂಪವಾದ ಯುರೋಪಿಯನ್‌ ಕ್ಲಬ್‌ ಅಸೋಸಿಯೇಷನ್‌[೮] ಅನ್ನೂ ಸಹಾ ಸ್ಥಾಪನೆ ಮಾಡಿತ್ತು.

ರಾನ್‌ ಅಟ್ಕಿನ್ಸನ್‌[೯] ನ ನಿರ್ಗಮನದ ನಂತರ ಆಬರ್ಡೀನ್‌ನವರಾದ ಅಲೆಕ್ಸ್‌ ಫರ್ಗ್ಯೂಸನ್‌ ೬ ನವೆಂಬರ್‌ ೧೯೮೬ರಲ್ಲಿ ಕ್ಲಬ್‌ನ ವ್ಯವಸ್ಥಾಪಕರಾಗಿ ಸೇರಿದರು. ಕ್ಲಬ್‌ನ ಪ್ರಸ್ತುತ ನಾಯಕನಾದ ಗ್ಯಾರಿ ನೆವಿಲ್ಲೆರವರು ರಾಯ್‌ ಕೀನೆ‌ರವರ ನಂತರ ೨೦೦೫[೧೦] ರ ನವೆಂಬರ್‌ರಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇತಿಹಾಸ[ಬದಲಾಯಿಸಿ]

ಪ್ರಾರಂಭದ ವರ್ಷಗಳು (೧೮೭೮–೧೯೪೫)[ಬದಲಾಯಿಸಿ]

1905–06ರ ಕ್ರೀಡಾಋತುವಿನ ಆರಂಭದಲ್ಲಿ ಎರಡನೇ ವಿಭಾಗದಲ್ಲಿ ರನ್ನರ್‌-ಅಪ್‌ಗಳಾಗಿ ಬಡ್ತಿ ಪಡೆದಿದ್ದ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡ
ಇಂಗ್ಲಿಷ್‌ ಫುಟ್‌ಬಾಲ್‌ ಲೀಗ್‌ ವ್ಯವಸ್ಥೆಯಲ್ಲಿ 1892–93ರಲ್ಲಿ ನ್ಯೂಟನ್‌ ಹೀತ್‌ ಆಗಿ ಸೇರಿಕೊಂಡಾಗಿನಿಂದ 2013–14ರವರೆಗಿನ ಮ್ಯಾಂಚೆಸ್ಟರ್‌ ಯುನೈಟೆಡ್‌ F.Cಯ ಮುನ್ನಡೆ ತೋರಿಸುವ ಚಾರ್ಟ್‌

ನ್ಯೂಟನ್‌ ಹೀತ್‌ನಲ್ಲಿನ ಲಂಕಾಷೈರ್‌ ಮತ್ತು ಯಾರ್ಕ್‌ಷೈರ್‌ ರೈಲ್ವೇ ಡಿಪೋದ ಕೆಲಸಗಾರರ ತಂಡದಂತೆ ೧೮೭೮ರಲ್ಲಿ ನ್ಯೂಟನ್‌ ಹೀತ್‌ L&YR F.C. ಎಂಬ ಹೆಸರಿನಿಂದ ಕ್ಲಬ್‌ ರಚನೆಯಾಯಿತು. ಕ್ಲಬ್‌ನ ಸಮವಸ್ತ್ರವು ಹಸಿರು ಮತ್ತು ಚಿನ್ನದ ಬಣ್ಣದ ಅರೆ ತೋಳಿನ ವಸ್ತ್ರವಾಗಿತ್ತು. ಅವರು ೧೮೯೩ರಲ್ಲಿ ಕ್ಲೇಟನ್‌ ನಗರದಲ್ಲಿರುವ ಬ್ಯಾಂಕ್‌ ಸ್ಟ್ರೀಟ್‌ಗೆ ಸ್ಥಳಾಂತರವಾಗುವ ಮೊದಲು ಹದಿನೈದು ವರ್ಷಗಳು ನಾರ್ತ್‌‌ ರೋಡ್‌ನಲ್ಲಿರುವ ಚಿಕ್ಕ, ಶಿಥಿಲಗೊಂಡ ಮೈದಾನದಲ್ಲಿ ಆಡುತ್ತಿದ್ದರು. ಹಿಂದಿನ ವರ್ಷ ಕ್ಲಬ್‌ ಫುಟ್‌ಬಾಲ್‌ ಲೀಗ್‌ ಪ್ರವೇಶಿಸಿದ್ದರಿಂದ, ರೈಲು‌ ಡಿಪೋನೊಂದಿಗಿನ ತನ್ನ ಕೊಂಡಿಗಳನ್ನು ಪ್ರತ್ಯೇಕಿಸಿಕೊಂಡು ಸ್ವತಂತ್ರ ಕಂಪನಿಯಾಗಿ ಪರಿವರ್ತನೆಗೊಂಡಿತು. ಅದರಂತೆ ಒಬ್ಬ ಕ್ಲಬ್‌ನ ಕಾರ್ಯದರ್ಶಿಯನ್ನು ನೇಮಿಸಲಾಯಿತು ಮತ್ತು "L&YR"ನ್ನು ತೆಗೆದುಹಾಕಿ, ಕೇವಲ ನ್ಯೂಟನ್‌ ಹೀತ್‌ F.C. ಹೆಸರನ್ನು ಉಳಿಸಿಕೊಳ್ಳಲಾಯಿತು. ನಂತರದ ಕೆಲವೇ ವರ್ಷಗಳಲ್ಲಿ, ಅಂದರೆ ೧೯೦೨ರಲ್ಲಿ ಕ್ಲಬ್‌ £೨,೫೦೦ಕ್ಕೂ ಹೆಚ್ಚು ಸಾಲದಿಂದಾಗಿ ದಿವಾಳಿಯಾಗುವ ಸ್ಥಿತಿಗೆ ಬಂದಿತು. ಒಂದು ಹಂತದಲ್ಲಿ, ಕ್ಲಬ್‌ನ ಬ್ಯಾಂಕ್‌ ಸ್ಟ್ರೀಟ್‌ ಮೈದಾನವನ್ನು ಸಹ ಕೋರ್ಟ್‌ನ ಆದೇಶದ ಮೇಲೆ ಮುಚ್ಚಲಾಯಿತು.[೧೧]

ಕ್ಲಬ್‌ನ್ನು ಸಾಲ ಭರಿಸಲು ಮುಚ್ಚಬೇಕೆನ್ನುವ ಸ್ವಲ್ಪ ಮೊದಲು, ಕ್ಲಬ್‌ ಮ್ಯಾಂಚೆಸ್ಟರ್‌ ಬ್ರೂವರೀಸ್‌[೧೨] ನ ವ್ಯವಸ್ಥಾಪಕ ನಿರ್ದೇಶಕರಾದ J. H. ಡೇವಿಸ್‌ರವರಿಂದ ದೊಡ್ಡ ಪ್ರಮಾಣದ ಬಂಡವಾಳವನ್ನು ಪಡೆಯಿತು. ದಂತಕಥೆಗಳ ಪ್ರಕಾರ ಕ್ಲಬ್‌ನ ನಾಯಕ ಹ್ಯಾರ್ರಿ ಸ್ಟಾಫೋರ್ಡ್‌ ಕ್ಲಬ್‌ನ್ನು ಉಳಿಸಲು ನಿಧಿಯನ್ನು ಸಂಗ್ರಹಿಸುವುದಕ್ಕಾಗಿ ತನ್ನ ನೆಚ್ಚಿನ St. ಬೆರ್ನಾಡ್‌ ಶ್ವಾನವನ್ನು ತೋರಿಸುತ್ತಿರುವಾಗ ಡೇವಿಸ್‌ ಶ್ವಾನವನ್ನು ಖರೀದಿಸಲು ನಾಯಕನ ಬಳಿ ಬಂದಿದ್ದರು. ಅದಕ್ಕೆ ಸ್ಟಾಫೋರ್ಡ್‌ ನಿರಾಕರಿಸಿದರಲ್ಲದೇ, ಡೇವಿಸ್‌ರನ್ನು ಕ್ಲಬ್‌ನಲ್ಲಿ ಬಂಡವಾಳ ಹೂಡಲು ಮತ್ತು ಕ್ಲಬ್‌ನ ಅಧ್ಯಕ್ಷ[೧೩] ರಾಗಲು ಒಪ್ಪಿಸಿದರು. ಹೊಸ ಆರಂಭವನ್ನು ಪ್ರತಿನಿಧಿಸಲು ಕ್ಲಬ್‌ನ ಹೆಸರನ್ನು ಬದಲಾಯಿಸುವ ಅಗತ್ಯವಿದೆ ಎಂದು ಪುನರಾರಂಭಿಸಲು ಸಮರ್ಥವಾದ ಮಂಡಳಿಯ ಪ್ರಾರಂಭದ ಸಭೆಯೊಂದರಲ್ಲಿ ನಿರ್ಧರಿಸಲಾಗಿತ್ತು. ಇಟಲಿಯಿಂದ ವಲಸೆ ಬಂದಿರುವ ಯುವಕ ಲೂಯಿಸ್‌ ರೊಕ್ಕಾ, "ಮಹನೀಯರೆ, ನಾವೇಕೆ ನಮ್ಮನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌[೧೪] ಎಂದು ಕರೆದುಕೊಳ್ಳಬಾರದು?" ಎಂದು ಹೇಳುವ ಮೊದಲು ಬಂದ ಇತರ ಸಲಹೆಗಳೆಂದರೆ ಮ್ಯಾಂಚೆಸ್ಟರ್‌‌ ಸೆಂಟ್ರಲ್‌ ಮತ್ತು ಮ್ಯಾಂಚೆಸ್ಟರ್‌ ಕೆಲ್ಟಿಕ್‌ ಎಂಬ ಹೆಸರುಗಳು. ಮ್ಯಾಂಚೆಸ್ಟರ್‌ ಯುನೈಟೆಡ್‌ ಎನ್ನುವ ಹೆಸರು ಶಾಶ್ವತವಾದುದಲ್ಲದೇ, ೨೬ ಏಪ್ರಿಲ್‌ ೧೯೦೨ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಡೇವಿಸ್‌ ಕ್ಲಬ್‌ನ ಬಣ್ಣವನ್ನು ಬದಲಿಸಿದರೆ ಸೂಕ್ತವೆಂದು ಸಹಾ ನಿರ್ಧರಿಸಿದನು. ಅದರಂತೆ ನ್ಯೂಟನ್‌ ಹೀತ್‌ನ ಹಸಿರು ಮತ್ತು ಚಿನ್ನದ ಬಣ್ಣದ ಅರೆತೋಳಿನ ವಸ್ತ್ರವನ್ನು ಬಿಟ್ಟು, ಕೆಂಪು ಮತ್ತು ಬಿಳಿ ಬಣ್ಣವನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌ನ ಬಣ್ಣಗಳೆಂದು ಘೋಷಿಸಲಾಯಿತು.

ಜೇಮ್ಸ್‌ ವೆಸ್ಟ್‌ರವರು ವ್ಯವಸ್ಥಾಪಕ ಹುದ್ದೆಯಿಂದ ನಿವೃತ್ತರಾದ ನಂತರ ೨೮ ಸೆಪ್ಟೆಂಬರ್ ‌೧೯೦೨ರಲ್ಲಿ ಎರ್ನೆಸ್ಟ್‌ ಮ್ಯಾನ್‌ಗ್ನಾಲ್‌ರವರನ್ನು ಕ್ಲಬ್‌ನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಮ್ಯಾನ್‌ಗ್ನಾಲ್‌ ಕ್ಲಬ್‌ನ್ನು ಮೊದಲ ವಿಭಾಗಕ್ಕೆ ಕೊಂಡೊಯ್ಯಲು ಹಾಕಿಕೊಂಡ ಗುರಿಯನ್ನು ತಲುಪಲು ಮೊದಲ ಪ್ರಯತ್ನ ಮಾಡಿದರೂ, ಅಂತಿಮವಾಗಿ ಎರಡನೆಯ ವಿಭಾಗದ ಐದನೆಯ ಸ್ಥಾನದಲ್ಲೇ ತೃಪ್ತಿಗೊಳ್ಳುವುದರ ಮೂಲಕ ಸ್ವಲ್ಪ ಅಂತರದಲ್ಲಿ ವಿಫಲರಾದರು. ಕ್ಲಬ್‌ಗೆ ಹೊಸ ಪ್ರತಿಭೆಗಳನ್ನು ತರಬೇಕೆಂದು ಮ್ಯಾನ್‌ಗ್ನಾಲ್‌ ನಿರ್ಧರಿಸಿದರು. ಗೋಲ್‌ನಲ್ಲಿ ಹ್ಯಾರಿ ಮೊಗರ್‌, ಹಾಫ್‌-ಬ್ಯಾಕ್‌ನಲ್ಲಿ ಡಿಕ್‌ ಡಕ್‌ವರ್ತ್‌‌ ಮತ್ತು ಅಪ್‌ ಫ್ರಂಟ್‌ನಲ್ಲಿ ಜಾಕ್‌ ಪಿಕನ್‌ರಂತಹ ಆಟಗಾರರನ್ನು ಕ್ಲಬ್‌ಗೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳುವುದರ ಮೂಲಕ ಸೇರಿಸಿಕೊಂಡರಾದರೂ, ಮತ್ತೊಬ್ಬ ಹೊಸ ಹಾಫ್‌-ಬ್ಯಾಕ್‌ ಆಟಗಾರರಾದ ಚಾರ್ಲಿ ರಾಬರ್ಟ್ಸ್‌ ಮಾತ್ರವೇ ವಿಶೇಷ ಪರಿಣಾಮವನ್ನು ಬೀರಿದರು. ೧೯೦೪ರ ಏಪ್ರಿಲ್‌ನಲ್ಲಿ ಗ್ರಿಮ್‌ಸ್ಬಿ ಟೌನ್‌ನವರಾದ ಅವರಿಗೆ ಕ್ಲಬ್‌ ಆಗಿನ ದಾಖಲಾರ್ಹ ಮೊತ್ತ £೭೫೦ಅನ್ನು ವ್ಯಯಿಸಿತ್ತು. 1903–04ರ ಕ್ರೀಡಾಋತುವಿನಲ್ಲಿ ಪ್ರೋತ್ಸಾಹಕ ಎರಡನೆ ಸ್ಥಾನಕ್ಕೆ ಕೆಲವೇ ಅಂಕಗಳ ಕೊರತೆಯಿಂದ ಮೂರನೆ ಸ್ಥಾನವನ್ನು ಗಳಿಸಲು ಕ್ಲಬ್‌ಗೆ ಸಹಾಯ ಮಾಡಿದರು.

೧೯೦೫–೦೬ರ ಎರಡನೆ ವಿಭಾಗದಲ್ಲಿ ಎರಡನೆ ಸ್ಥಾನವನ್ನು ಗಳಿಸಿ ಹೊಸ ಹೆಸರಿನಡಿಯಲ್ಲಿ ಮೊದಲ ಬಾರಿ ಮೊದಲ ವಿಭಾಗಕ್ಕೆ ಬಡತಿಯಾಗುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಕ್ಲಬ್‌ ಎಂಟನೇ ಸ್ಥಾನವನ್ನು ಗಳಿಸುವುದರೊಂದಿಗೆ ಕ್ಲಬ್‌ನ ಬಲವರ್ಧನೆ ಪ್ರಾರಂಭವಾಯಿತಲ್ಲದೇ ನಂತರ ೧೯೦೮ರಲ್ಲಿ ಮೊದಲ ಲೀಗ್‌ ಪ್ರಶಸ್ತಿಯನ್ನು ಗಳಿಸಿತು. ಮ್ಯಾಂಚೆಸ್ಟರ್‌ ಸಿಟಿ ಇತ್ತೀಚೆಗೆ FA ವಿಧೇಯಕಗಳು ಅನುಮತಿಸಿದ ಮೊತ್ತಕ್ಕಿಂತ ಜಾಸ್ತಿ ಸಂಬಳವನ್ನು ಕೆಲವು ಆಟಗಾರರಿಗೆ ನೀಡಿದ್ದಕ್ಕಾಗಿ ತನಿಖೆಗೆ ಒಳಪಟ್ಟಿತ್ತು. ಕ್ಲಬ್‌ಗೆ £೨೫೦ನಷ್ಟು ದಂಡ ವಿಧಿಸಲಾಯಿತು ಮತ್ತು ಕ್ಲಬ್‌ನ ಹದಿನೆಂಟು ಆಟಗಾರರನ್ನು ಶಾಶ್ವತವಾಗಿ ಕ್ಲಬ್‌ನ ಪರವಾಗಿ ಆಡದೇ ಇರುವಂತೆ ನಿಷೇಧಿಸಲಾಯಿತು. ಯುನೈಟೆಡ್‌ ತನ್ನ ಪರಿಸ್ಥಿತಿಯನ್ನು ಸುಧಾರಿಸಲು ಏಕಾಏಕಿ ಇತರರೊಂದಿಗೆ ಬಿಲ್ಲಿ ಮೇರೆಡಿತ್‌‌ (ವೆಲ್ಶ್‌ ವಿಜಾರ್ಡ್‌) ಮತ್ತು ಸ್ಯಾಂಡಿ ಟರ್ನ್‌ಬುಲ್‌ರವರುಗಳನ್ನೂ ತಂಡಕ್ಕೆ ಸೇರಿಸಿಕೊಂಡಿತು. ಕ್ಲಬ್‌ನ ಅನಿಶ್ಚಿತತೆಯ ಕಾರಣದಿಂದಾಗಿ ನಗರದ ಹೊಸ ಹುಡುಗರು ತಮ್ಮನ್ನು ಇನ್ನೂ ಅಮಾನತ್ತಿನಲ್ಲಿಟ್ಟ ಕಾರಣ ೧೯೦೭ರ ಹೊಸ ವರ್ಷದ ದಿನದವರೆಗೆ ಆಡಲು ಅನರ್ಹರಾಗಿದ್ದರು. ಆದ್ದರಿಂದ ಪ್ರಶಸ್ತಿಗಾಗಿ ಯುನೈಟೆಡ್‌ನ ಸವಾಲಿನಲ್ಲಿ ಸರಿಯಾದ ಪರಿಣಾಮ ಬೀರುವಂತೆ ಮಾಡಲು ಕ್ಲಬ್‌ನ 1907–08ರ ಕ್ರೀಡಾಋತುವಿನವರೆಗೆ ಯಥಾಸ್ಥಿತಿ ಕಾಯ್ದಿಡಲಾಯಿತು. ನಂತರದ ರಭಸದ ಪ್ರಾರಂಭದಲ್ಲಿ ಅವರೆಲ್ಲಾ ಸಂಘಟಿತರಾಗಿ ಶೆಫೀಲ್ಡ್‌ ಯುನೈಟೆಡ್‌ನ ವಿರುದ್ಧ ೨–೧ರ ವಿಜಯ ದಾಖಲಿಸಿ, ನಿರಂತರ ೧೦ ವಿಜಯಗಳ ಓಟವನ್ನು ಪ್ರಾರಂಭಿಸಿದರು. ಕೊನೆಯ ಕ್ರೀಡಾಋತುವಿನಲ್ಲಿ ಎಡವಿದ್ದರೂ ಕೂಡ ಯುನೈಟೆಡ್‌ ತನ್ನ ಗೆಲುವನ್ನು ಮುಂದುವರಿಸುತ್ತಾ ಸಮೀಪದ ಎದುರಾಳಿಯಾದ ಆಸ್ಟೊನ್‌ ವಿಲ್ಲಾ ತಂಡಕ್ಕಿಂತ ಒಂಬತ್ತು ಹೆಚ್ಚು ಅಂಕಗಳನ್ನು ಗಳಿಸಿ ಕ್ರೀಡಾಋತುವನ್ನು ಪೂರ್ಣಗೊಳಿಸಿತು.

ನಂತರದ ಕ್ರೀಡಾಋತುವನ್ನು ಯುನೈಟೆಡ್‌ ಇನ್ನೊಂದು ಬೆಳ್ಳಿ ಫಲಕವಾದ ತನ್ನ ಮೊದಲ ದತ್ತಿ ನಿಧಿ ಪ್ರಶಸ್ತಿ ಫಲಕವನ್ನು ಗೆಲ್ಲುವುದರೊಂದಿಗೆ ಪ್ರಾರಂಭಿಸಿತು[೧೫] ಮತ್ತು FA ಕಪ್‌ ಪ್ರಶಸ್ತಿಗಳ ದಾಖಲೆ ಸಂಖ್ಯೆಯಾಗುವುದಕ್ಕಾಗಿ ಕಾರಣವಾದ ಕ್ಲಬ್‌ನ ಮೊದಲ FA ಕಪ್‌ ಪ್ರಶಸ್ತಿ ಗೆಲ್ಲುವುದರೊಂದಿಗೆ ಕ್ರೀಡಾಋತುವನ್ನು ಕೊನೆಗೊಳಿಸಿತು. ಕ್ಲಬ್‌ನ ಮೊದಲ ಪ್ರಶಸ್ತಿ ವಿಜೇತ ತಂಡದಲ್ಲಿ ಟರ್ನ್‌ಬುಲ್‌ ಮತ್ತು ಮೆರೆಡಿತ್‌ ಪ್ರಮುಖ ಪಾತ್ರ ವಹಿಸಿದ್ದರು. ಟರ್ನ್‌ಬುಲ್‌ FA ಕಪ್‌ ಅಂತಿಮ ಪಂದ್ಯದಲ್ಲಿ ವಿಜಯದ ಗೋಲನ್ನು ದಾಖಲಿಸಿದರು. ಕ್ಲಬ್‌ 1910–11ರ ಕ್ರೀಡಾಋತುವಿನಲ್ಲಿ ಎರಡನೆಯ ಬಾರಿ ಮೊದಲ ವಿಭಾಗವನ್ನು ಗೆದ್ದು, ಇನ್ನಷ್ಟು ಬೆಳ್ಳಿ ಫಲಕಗಳನ್ನು ಗೆಲ್ಲುವುದಕ್ಕೆ ಇನ್ನೂ ಎರಡು ವರ್ಷ ಕಾಯಬೇಕಾಯಿತು. ಅದೇ ಸಮಯದಲ್ಲಿ ಯುನೈಟೆಡ್‌ ಕ್ಲಬ್‌ ಓಲ್ಡ್‌ ಟ್ರ್ಯಾಫೋರ್ಡ್‌ನಲ್ಲಿರುವ ಹೊಸ ಮೈದಾನಕ್ಕೆ ಸ್ಥಳಾಂತರಗೊಂಡಿತು. ೧೯ ಫೆಬ್ರವರಿ ೧೯೧೦ರಂದು ಹೊಸ ಮೈದಾನದಲ್ಲಿ ಲಿವರ್‌ಪೂಲ್‌ ವಿರುದ್ಧ ಅವರು ಮೊದಲ ಪಂದ್ಯವನ್ನು ಆಡಿದರು. ಆದರೆ ೪–೩ ಅಂತರದಿಂದ ೩–೦ ಮುನ್ನಡೆಯಲ್ಲಿ ತಂಡ ಸೋತಿತು. ಮತ್ತೊಮ್ಮೆ 1911–12ರ ಕ್ರೀಡಾಋತುವಿನಲ್ಲಿ ಟ್ರೋಫಿಯನ್ನು ಗೆಲ್ಲಲಾಗಲಿಲ್ಲ, ಅದಲ್ಲದೆ ಇದು ಮ್ಯಾನ್‌ಗ್ನಾಲ್‌ ಅಧಿಕಾರದಲ್ಲಿರುವ ಕೊನೆಯ ಅವಧಿಯಾಗಿತ್ತು (ಅವರು ಯುನೈಟೆಡ್‌ನೊಂದಿಗೆ ಹತ್ತು ವರ್ಷಗಳು ಇದ್ದ ನಂತರ ಮ್ಯಾಂಚೆಸ್ಟರ್‌ ಸಿಟಿಗೆ ಹೋದರು). ಕ್ಲಬ್‌ ೪೧ ವರ್ಷಗಳ ಹಿಂದೆ ಕೊನೆಯ ಬಾರಿ ಮೊದಲ ವಿಭಾಗವನ್ನು ಗೆದ್ದಿತ್ತು. ತಮ್ಮ ಇತಿಹಾಸದಲ್ಲಿ ಒಂದೂ ಲೀಗ್‌ನ್ನು ಗೆಲ್ಲದೆ ತುಂಬಾ ವರ್ಷ ಕಳೆದ ವಿಚಾರವಾಗಿತ್ತು.

ಮುಂದಿನ ಹತ್ತು ವರ್ಷಗಳು ನಿಧಾನವಾಗಿ ಅವನತಿಯತ್ತಾ ಸಾಗಿದ ಕ್ಲಬ್‌ ೧೯೨೨ರಲ್ಲಿ ಎರಡನೆ ವಿಭಾಗಕ್ಕೆ ಇಳಿಯಿತು. ೧೯೨೫ರಲ್ಲಿ ಮತ್ತೆ ಕ್ಲಬ್‌ಗೆ ಪ್ರೋತ್ಸಾಹ ನೀಡಲಾಯಿತು. ಆದರೆ ಹಿಂದಿನ ಸಾಧನೆಯ ಮೇಲ್ಮಟ್ಟದ ಅರ್ಧದಷ್ಟನ್ನು ಸಂಪಾದಿಸಲೂ ಕಷ್ಟವಾಯಿತು ಮತ್ತು ೧೯೩೧ರಲ್ಲಿ ಮತ್ತೆ ಅವನತಿ ಕಂಡಿತು. ಎರಡನೆ ವಿಶ್ವಸಮರಕ್ಕೆ ಎಂಟು ವರ್ಷ ಹಿಂದೆ, ೧೯೩೪ರಲ್ಲಿ ಎರಡನೆಯ ವಿಭಾಗದಲ್ಲಿ ಹಿಂದೆಂದಿಗಿಂತಲೂ ಕಡಿಮೆ ಅಂದರೆ ೨೦ರ ಸ್ಥಾನಕ್ಕೆ ಬಂದ ಕ್ಲಬ್‌ ಹೆಚ್ಚು ಕಡಿಮೆ ಯೊ-ಯೊ ಕ್ಲಬ್‌ನಂತೆ ಆಗತೊಡಗಿತು. ಎರಡನೆಯ ವಿಶ್ವಸಮರದ ಮುಂಚಿನ ಉಪಾಂತ ಕ್ರೀಡಾಋತುವಿನಲ್ಲಿ ಕ್ಲಬ್‌ನ್ನು ಪ್ರೋತ್ಸಾಹಿಸಲಾಯಿತಾದರೂ ಮತ್ತೊಮ್ಮೆ ಅವನತಿಯನ್ನು ಕಂಡಿತು. ಯುದ್ಧದ ನಂತರ ಅಂದರೆ 1938–39ರ ಅವಧಿಯಲ್ಲಿ ೧೪ನೇ ಸ್ಥಾನವನ್ನು ಗಳಿಸುವುದರ ಮೂಲಕ ತಮ್ಮ ಅಗ್ರಸ್ಥಾನವನ್ನು ಖಚಿತಪಡಿಸಿಕೊಂಡರು.

ಬಸ್ಬಿಯ ಕಾಲಾವಧಿ (೧೯೪೫–೧೯೬೯)[ಬದಲಾಯಿಸಿ]

ಓಲ್ಡ್‌ ಟ್ರ್ಯಾಫೋರ್ಡ್‌ನಲ್ಲಿ ವ್ಯವಸ್ಥಾಪಕ ಹುದ್ದೆಗೆ ಮ್ಯಾಟ್‌ ಬಸ್ಬಿ ೧೯೪೫ರಲ್ಲಿ ಆಯ್ಕೆಯಾದರು. ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಅಸಾಮಾನ್ಯ ಮಾದರಿಯನ್ನು ಅನುಸರಿಸಿದ ಅವರು ತಮ್ಮದೇ ತಂಡವನ್ನು ರಚಿಸುವ ಹಾಗೆ, ತಂಡದ ಆಟಗಾರರ ಆಯ್ಕೆ, ಅವರ ತರಬೇತಿಯ ನಿರ್ಧಾರಗಳ ಅಧಿಕಾರವನ್ನು ತಮಗೇ ವಹಿಸಬೇಕೆಂದು ಪಟ್ಟುಹಿಡಿದರು. ಅವರು ಈಗಾಗಲೇ ತಮ್ಮ ಹಿಂದಿನ ಕ್ಲಬ್‌ ಆಗಿದ್ದ ಲಿವರ್‌ಪೂಲ್‌ನಿಂದ ವ್ಯವಸ್ಥಾಪಕ ಹುದ್ದೆಯನ್ನು ಕಳೆದುಕೊಂಡಿದ್ದ ಮುಖ್ಯ ಕಾರಣ ಆ ಕ್ಲಬ್‌ ಅಂತಹ ಕೆಲಸಗಳು ನಿರ್ದೇಶಕರಿಗೆ ಸಂಬಂಧಿಸಿದ್ದು ಎಂಬ ಕ್ಲಬ್‌ನ ಆಲೋಚನಾ ಶೈಲಿ. ಆದರೆ ಯುನೈಟೆಡ್‌ ಬಸ್ಬಿಯ ಹೊಸತನದ ಯೋಚನೆಗಳಿಗೆ ಅವಕಾಶವನ್ನು ನೀಡಿತು. ಬಸ್ಬಿ ಮೊದಲು ಒಪ್ಪಂದವನ್ನು ಆಟಗಾರರೊಂದಿಗೆ ಮಾಡಿಕೊಳ್ಳದೆ, ಹೊಸ ಸಹಾಯಕ ವ್ಯವಸ್ಥಾಪಕರಾಗಿ ಜಿಮ್ಮಿ ಮುರ್ಫಿಯವರೊಂದಿಗೆ ಒಪ್ಪಂದ ಮಾಡಿಕೊಂಡರು. ನಷ್ಟದ ಹಂಗು ತೊರೆದು ಬಸ್ಬಿಯವರನ್ನು ನೇಮಿಸಿದ್ದ ಕ್ಲಬ್‌ ಅದರ ಪ್ರತಿಫಲವನ್ನು ಶೀಘ್ರವಾಗಿ ಪಡೆಯಿತು. ಇದರಿಂದ ೧೯೪೭, ೧೯೪೮ ಮತ್ತು ೧೯೪೯ರಲ್ಲಿ ನಡೆದ ಲೀಗ್‌ನಲ್ಲಿ ಎರಡನೆಯ ಸ್ಥಾನ ಮತ್ತು 1948ರಲ್ಲಿ ನಡೆದ FA ಕಪ್‌ನ ವಿಜಯವನ್ನು ಸಾಧಿಸಿತು. ಸ್ಥಳೀಯ ಆಟಗಾರತ್ರಯರಾದ ಸ್ಟಾನ್‌ ಪಿಯರ್‌ಸನ್‌, ಜಾಕ್‌ ರೌವ್ಲೇ ಮತ್ತು ಚಾರ್ಲಿ ಮಿಟ್ಟನ್‌ (ರೌವ್ಲೇ ಮತ್ತು ಪಿಯರ್‌ಸನ್‌ ಇಬ್ಬರೂ ೧೯೪೮ರ ಕಪ್‌ನ ಅಂತಿಮ ಪಂದ್ಯದಲ್ಲಿ ಗೋಲನ್ನು ಗಳಿಸಿದ್ದರು) ಅಲೆಂಬಿ ಚಿಲ್ಟನ್‌ನ ಈಶಾನ್ಯದಿಂದ ಸೆಂಟರ್‌-ಹಾಫ್‌‌ನಲ್ಲಿರುವವರು ಸಹ ಈ ಗೆಲುವಿಗೆ ಕಾರಣರಾಗಿದ್ದಾರೆ.

ಚಾರ್ಲಿ ಮಿಟ್ಟನ್‌ ಉತ್ತಮ ಸಂಬಳದ ಕೆಲಸವನ್ನು ಹುಡುಕುವುದಕ್ಕಾಗಿ ಕೊಲಂಬಿಯಾಗೆ ಹೋದರು. ಆದರೆ ಯುನೈಟೆಡ್‌ನ ಉಳಿದ ಹಳೆಯ ತಲೆಗಳು ೧೯೫೨ರಲ್ಲಿ ಮೊದಲ ವಿಭಾಗದ ಪ್ರಶಸ್ತಿಯನ್ನು ಗೆಲ್ಲಲು ಸಮರ್ಥರಾದರು. ಬಸ್ಬಿರವರು ತಂಡಕ್ಕೆ ಅನುಭವಕ್ಕಿಂತ ಹೆಚ್ಚಾಗಿ ಬೇರೆಯದರ ಅವಶ್ಯಕತೆ ಇದೆ ಎಂದು ತಿಳಿದರು. ಹಾಗಾಗಿ ಅವರು ಸಾಧ್ಯವಾದಾಗಲೆಲ್ಲಾ ಯುವ ತಂಡಗಳಿಂದ ಆಟಗಾರರನ್ನು ಕರೆಸಿಕೊಳ್ಳುವ ನೀತಿಯನ್ನು ಅನುಸರಿಸಿದರು. ಮೊದಲು ಅವರು ಯುವ ಆಟಗಾರರಾದ ರೋಜರ್‌ ಬೈರ್ನೆ,ಬಿಲ್‌ ಫೌಲ್ಕ್ಸ್‌‌,ಮಾರ್ಕ್ ಜೋನ್ಸ್‌ ಮತ್ತು ಡೆನ್ನಿಸ್‌ ವೈಲೆಟ್‌ರವರನ್ನು ಆರಿಸಿದರು. ಅವರು ಹಿನ್ನೆಲೆಯಲ್ಲಿ ತರಬೇತಿ ಹೊಂದಲು ಸಮಯ ನೀಡಿದ್ದರಿಂದ ೧೯೫೩ರಲ್ಲಿ ತಂಡವು ಎಂಟನೇ ಸ್ಥಾನಕ್ಕೆ ಕುಸಿಯಿತು. ಆದರೆ ೧೯೫೬ರಲ್ಲಿ ಸರಾಸರಿ ಕೇವಲ ೨೨ ವರ್ಷದ ಆಟಗಾರರೊಂದಿಗೆ ೧೦೩ ಗೋಲುಗಳನ್ನು ಗಳಿಸುವುದರೊಂದಿಗೆ ತಂಡ ಲೀಗ್‌ನ್ನು ಗೆದ್ದಿತು. ಬಸ್ಬಿಯವರ ಯುವಕರ ತಂಡದ ನೀತಿಯು ಕ್ಲಬ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ವಿ ಅವಧಿಯ ಗುರುತಾಯಿತು (೧೯೫೦ರ ದಶಕದ ಮಧ್ಯಭಾಗ, ೧೯೬೦ರ ದಶಕದ ಮಧ್ಯಂತರದಿಂದ ಅಂತ್ಯದವರೆಗೆ ಮತ್ತು ೧೯೯೦ರ ದಶಕದಲ್ಲಿ). ಬಸ್ಬಿಯವರ ಮೂಲ ಯುವ ತಂಡದ ಆಟಗಾರರನ್ನು ಬಸ್ಬಿ ಬೇಬ್ಸ್‌ ಎಂದು ಕರೆಯುತ್ತಿದ್ದರು. ಅದರಲ್ಲಿ ವಿಂಗ್‌-ಹಾಫ್‌ ಆಟಗಾರ ಡಂಕನ್‌ ಎಡ್ವರ್ಡ್ಸ್‌ರವರು ಆಟಗಾರರ ಕಿರೀಟದಲ್ಲಿರುವ ರತ್ನದಂತಿದ್ದರು. ೧೯೫೩ರಲ್ಲಿ ವೆಸ್ಟ್‌ ಮಿಡ್‌ಲೆಂಡ್ಸ್‌ನಲ್ಲಿನ ಡಬ್ಲಿ ಮೂಲದ ಎಡ್ವರ್ಡ್ಸ್‌ರವರು ತನ್ನ ೧೬ನೆಯ ವಯಸ್ಸಿನಲ್ಲಿ ಯುನೈಟೆಡ್‌ ಪರ ಮೊದಲ ಪಂದ್ಯವನ್ನು ಆಡಿದರು. ಎಡ್ವರ್ಡ್ಸ್‌ರವರು ಮೈದಾನದಲ್ಲಿ ಯಾವುದೇ ಸ್ಥಾನದಲ್ಲಿ ಆಡಬಲ್ಲವರಾಗಿದ್ದಾರೆ ಎಂದು ಹೇಳುತ್ತಾರೆ ಮತ್ತು ಅವರ ಆಟವನ್ನು ನೋಡಿದ ಹಲವರು ಅವರೊಬ್ಬ ಶ್ರೇಷ್ಠ ಆಟಗಾರ ಎಂದು ಹೇಳುತ್ತಾರೆ. ನಂತರದ 1956–57ರ ಕ್ರೀಡಾಋತುವಿನಲ್ಲಿ ತಂಡವು ಪುನಃ ಲೀಗ್‌ನ್ನು ಗೆದ್ದು FA ಕಪ್‌ನ ಅಂತಿಮ ಪಂದ್ಯವನ್ನು ತಲುಪಿದ ಅವರು ಆಸ್ಟೋನ್‌ ವಿಲ್ಲಾ ತಂಡದ ವಿರುದ್ಧ ಸೋತರು. ಅವರು FAಯ ಆಣತಿಯ ಮೇರೆಗೆ ಯುರೋಪಿಯನ್‌ ಕಪ್‌ನಲ್ಲಿ ಸ್ಪರ್ಧಿಸುವ ಮೊದಲ ಇಂಗ್ಲೀಷ್‌ ತಂಡವಾಗಿತ್ತು. ಹಿಂದಿನ ಕ್ರೀಡಾಋತುವಿನಲ್ಲಿ ಇದೇ ಅವಕಾಶವನ್ನು ಚೆಲ್ಸಿಯಾ ತಂಡಕ್ಕೆ ನಿರಾಕರಿಸಲಾಗಿತ್ತು ಮತ್ತು ಯುನೈಟೆಡ್‌ ತಂಡವು ಸೆಮಿ-ಫೈನಲ್‌ ಹಂತವನ್ನು ತಲುಪಿತಾದರೂ ರಿಯಲ್‌ ಮ್ಯಾಡ್ರಿಡ್‌ ತಂಡದಿಂದ ಸೋಲಿಸಲ್ಪಟ್ಟು ಪಂದ್ಯದಿಂದ ಹೊರಕ್ಕೆ ಹೋಗಬೇಕಾಯಿತು. ಯುನೈಟೆಡ್‌ ತಂಡವು ಸೆಮಿ ಫೈನಲ್‌ನ ಹಾದಿಯಲ್ಲಿರುವಾಗ ಮೈನೆ ರೋಡ್‌ನಲ್ಲಿ ಬೆಲ್ಜಿಯನ್‌ ವಿಜೇತರಾದ ಅಂಡರ್ಲೆಚ್ಟ್‌ರನ್ನು ೧೦–೦ ಅಂತರದಿಂದ ಸೋಲಿಸಿದ್ದ ಪಂದ್ಯವು ಈವರೆಗಿನ ಎಲ್ಲಾ ಸ್ಪರ್ಧೆಗಳಲ್ಲಿಯೇ ಅತಿ ದೊಡ್ಡ ವಿಜಯವನ್ನು ದಾಖಲಿಸಿತು.

ಓಲ್ಡ್‌ ಟ್ರ್ಯಾಫರ್ಡ್‌ನಲ್ಲಿರುವ ಮ್ಯೂನಿಚ್‌ ವಾಯು ದುರಂತದಲ್ಲಿ ಮಡಿದ ಆಟಗಾರರ ನೆನಪಿಗೆಂದು ಸ್ಮಾರಕ ಅಲಂಕಾರ ಫಲಕ.

ನಂತರದ ಅವಧಿಯಲ್ಲಿ ನಡೆದ ದುಃಖ ಸಂಗತಿಯೆಂದರೆ ಯುರೋಪಿಯನ್‌ ಕಪ್‌ ಪಂದ್ಯದಿಂದ ತವರಿಗೆ ತಂಡವನ್ನು ತರುತ್ತಿದ್ದ ವಿಮಾನವು ಜರ್ಮನಿಯ ಮ್ಯುನಿಚ್‌ನಲ್ಲಿ ಮರು ಇಂಧನ ಕೇಂದ್ರದಿಂದ ಟೇಕ್‌ಆಫ್‌ ಮಾಡುವಾಗ ನೆಲಕ್ಕಪ್ಪಳಿಸಿತು. ೬ ಫೆಬ್ರವರಿ ೧೯೫೮ರ ಮ್ಯುನಿಚ್‌ ವಾಯು ದುರಂತದಲ್ಲಿ ಜಿಯೊಫ್‌ ಬೆಂಟ್, ರೋಜರ್‌ ಬೈರ್ನೆ, ಎಡ್ಡಿ ಕಾಲ್‌ಮ್ಯಾನ್‌, ಡಂಕನ್‌‌ ಎಡ್ವರ್ಡ್ಸ್‌, ಮಾರ್ಕ್‌ ಜೋನ್ಸ್‌, ಡೇವಿಡ್‌ ಪೆಗ್‌, ಟಾಮಿ ಟೇಲರ್‌ ಮತ್ತು ಲೈಮ್‌ "ಬಿಲ್ಲಿ" ವೇಲನ್‌ ಈ ಎಂಟು ಜನ ಆಟಗಾರು ಮತ್ತು ಯುನೈಟೆಡ್‌ ತಂಡದ ಸಿಬ್ಬಂದಿಯವರಾದ ವಾಲ್ಟರ್‌ ಕ್ರಿಕ್ಮರ್‌, ಬರ್ಟ್‌ ವಾಲಿ ಮತ್ತು ಟಾಮ್‌ ಕರ್ರಿಯವರು ಸೇರಿದಂತೆ ಇತರೆ ಹದಿನೈದು ಜನ ಪ್ರಯಾಣಿಕರು ಜೀವ ಕಳೆದುಕೊಂಡರು.[೧೬] ಮೊದಲೆರಡು ಬಾರಿ ಹಾರಾಟಕ್ಕೆ ಮಾಡಿದ ಪ್ರಯತ್ನಗಳು ವಿಫಲವಾದುದಲ್ಲದೇ ರನ್‌ವೇನ ಕೊನೆಯಲ್ಲಿದ್ದ ಕೆಸರಿನಿಂದಾಗಿ ಹಾರಲು ಸೂಕ್ತವಲ್ಲದ ಕಡಿಮೆ ವೇಗ ಪಡೆದ ಕಾರಣ ಕೊನೆಯ ಪ್ರಯತ್ನವು ಸಹಾ ಮಾರಣಾಂತಿಕವಾಗಿ ಪರಿಣಮಿಸಿತ್ತು. ರನ್‌ವೇಯ ಕೊನೆಯಲ್ಲಿ ವಿಮಾನವು ಬೇಲಿಗೆ ಡಿಕ್ಕಿಹೊಡೆದು, ಜಾರು ಹಲಗೆ ಗಾಡಿಯ ಮೂಲಕ ಯಾರು ವಾಸಿಸದ ಮನೆಯೊಳಗೆ ನುಗ್ಗಿತು. ಯುನೈಟೆಡ್‌ ತಂಡದ ಗೋಲ್‌ಕೀಪರ್‌ ಹ್ಯಾರ್ರಿ ಗ್ರೇಗ್‌ರವರು ವಿಮಾನ ದುರಂತ ಸಂಭವಿಸಿದ ನಂತರವೂ ಪ್ರಜ್ಞೆಯನ್ನು ಉಳಿಸಿಕೊಂಡಿದ್ದು, ಯಾವುದೇ ಸೆಕೆಂಡ್‌ನಲ್ಲಿ ವಿಮಾನ ಸ್ಫೋಟಗೊಳ್ಳಬಹುದೆಂದು ಅವರು ಕೇವಲ ೧೮ ತಿಂಗಳಿಗಿಂತ ಕಡಿಮೆ ಸಮಯದ ಹಿಂದಷ್ಟೇ ಯುನೈಟೆಡ್‌ ಪರ ಮೊದಲ ಪಂದ್ಯವನ್ನಾಡಿದ ಬಾಬ್ಬಿ ಚಾರ್ಲ್ಟನ್‌ ಮತ್ತು ಡೆನ್ನಿಸ್‌ ವೈಲೆಟ್‌ರ ನಡುಪಟ್ಟಿಯನ್ನು ಹಿಡಿದುಕೊಂಡು, ಅವರಿಬ್ಬರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಸ್ಥಳದಲ್ಲಿಯೇ ಏಳು ಯುನೈಟೆಡ್‌ ಆಟಗಾರರು ಮೃತಪಟ್ಟರು. ಆದರೆ ಡಂಕನ್‌ ಎಡ್ವರ್ಡ್ಸ್‌ ಎರಡು ವಾರಗಳ ನಂತರ ಆಸ್ಪತ್ರೆಯಲ್ಲಿ ಮರಣಹೊಂದಿದರು. ರೈಟ್‌-ವಿಂಗರ್‌ ಜಾನಿ ಬೆರ್ರಿ ಸಹ ಅಪಘಾತದಲ್ಲಿ ಬದುಕುಳಿದರು. ಆದರೆ ಅಪಘಾತದಿಂದಾದ ಗಾಯಗಳಿಂದಾಗಿ ಅವರ ಫುಟ್‌ಬಾಲ್‌ ವೃತ್ತಿ ಜೀವನ ಅಕಾಲಿಕ ಅಂತ್ಯ ಕಾಣುವಂತಾಯಿತು. ಮ್ಯಾಟ್‌ ಬಸ್ಬಿರವರು ಬದುಕುಳಿಯುತ್ತಾರೆ ಎಂಬ ಭರವಸೆ ಮ್ಯುನಿಚ್‌ ವೈದ್ಯರಿಗೆ ಇರಲಿಲ್ಲ ಮತ್ತು ಒಂದು ಹಂತದಲ್ಲಿ ಅವರಿಗೆ ಕೊನೆಯ ಸಂಸ್ಕಾರ ಕಾರ್ಯವನ್ನು ಕೂಡಾ ಮಾಡಿದ್ದರು. ಆದರೆ ಅವರು ಆಶ್ಚರ್ಯಕರವಾಗಿ ಚೇತರಿಸಿಕೊಂಡರು ಮತ್ತು ಎರಡು ತಿಂಗಳ ಚಿಕಿತ್ಸೆ ನಂತರ ಅವರು ಆಸ್ಪತ್ರೆಯಿಂದ ಹೊರಬಂದರು.

ಆಗ ಕ್ಲಬ್‌ ಎಲ್ಲಾ ಸ್ಪರ್ಧೆಗಳನ್ನು ಮುಂದಕ್ಕೆ ಹಾಕುವುದು ಮತ್ತು ಕೆಲವು ಪಂದ್ಯಗಳಿಂದ ಹಿಂದೆ ಸರಿಯುವುದು ಎನ್ನುವಂತಹಾ ಗಾಳಿ ಮಾತು ಹಬ್ಬಿತ್ತು. ಆದರೆ ಜಿಮ್ಮಿ ಮುರ್ಫಿ ಬಸ್ಬಿ ಚೇತರಿಸಿಕೊಳ್ಳುವವರೆಗೆ ವ್ಯವಸ್ಥಾಪಕರಾಗಿ ಜವಾಬ್ದಾರಿ ತೆಗೆದುಕೊಂಡುದರಿಂದ, ನಂತರವೂ ಕ್ಲಬ್‌ ತಾತ್ಕಾಲಿಕವಾಗಿ ಆಡುವುದನ್ನು ಮುಂದುವರಿಸಿತು. ಅಪಘಾತ ಆದರೂ ನಂತರ ತಂಡವು ಮತ್ತೊಮ್ಮೆ FA ಕಪ್‌ ಅಂತಿಮ ಪಂದ್ಯವನ್ನು ತಲುಪಿ, ಬೊಲ್ಟನ್‌ ವಾಂಡರರ್ಸ್‌ರವರ ವಿರುದ್ಧ ಸೋತಿದ್ದರು. ಆ ಕ್ರೀಡಾಋತುವಿನ ಕೊನೆಯಲ್ಲಿ ಅಪಘಾತದಲ್ಲಿ ಬಲಿಯಾದವರ ಸ್ಮರಣಾರ್ಥ ಯುನೈಟೆಡ್‌ ಮತ್ತು ಅಂತಿಮ ವಿಜೇತರಾದ ವೊಲ್ವರ್‌ಹ್ಯಾಂಪ್ಟನ್‌ ವಾಂಡರರ್ಸ್‌ ಇಬ್ಬರಿಗೂ 1958–59ರ ಯುರೋಪಿಯನ್‌ ಕಪ್‌ನ್ನು ಸಲ್ಲಿಸಲು UEFAವು FAಗೆ ಅವಕಾಶವನ್ನು ನೀಡಿತ್ತು. ಆದರೆ ಇದಕ್ಕೆ FA ನಿರಾಕರಿಸಿತ್ತು. ಯುನೈಟೆಡ್‌ ಮುಂದಿನ ಕ್ರೀಡಾಋತುವಿನಲ್ಲಿ ವೋಲ್ವ್ಸ್‌‌ರನ್ನು ಬದಿಗೆ ಸರಿಸಲು ಯಶಸ್ವಿಯಾಗಿ ಮ್ಯುನಿಚ್‌ ವಾಯು ದುರಂತದಲ್ಲಿ ಪ್ರಥಮ-ತಂಡದ ಒಂಬತ್ತು ಆಟಗಾರರನ್ನು ಕಳೆದುಕೊಂಡಿದ್ದರೂ ಸಹ ಎರಡನೆಯ ಸ್ಥಾನ ಗಳಿಸುವಲ್ಲಿ ಸಫಲವಾಯಿತು.

೧೯೬೦ರ ದಶಕದ ಪ್ರಾರಂಭದುದ್ದಕ್ಕೂ ಬಸ್ಬಿಯವರು ಡೆನಿಸ್‌ ಲಾ ಮತ್ತು ಪ್ಯಾಟ್‌ ಕ್ರೆರಂಡ್‌ರಂತಹ ಆಟಗಾರರನ್ನು ನೇಮಕ ಮಾಡಿಕೊಳ್ಳುವ ಮೂಲಕ ತಂಡವನ್ನು ಪುನರ್ನಿರ್ಮಿಸುತ್ತಾ ಹೊಸ ಪೀಳಿಗೆಯ ಯುವಪ್ರತಿಭೆಗಳಿಗೆ ತರಬೇತಿ ನೀಡುವುದರಲ್ಲಿ ತೊಡಗಿದರು. ಈ ಹೊಸ ತಂಡದಲ್ಲಿ ಪ್ರಸಿದ್ಧರಾದವರು ಬೆಲ್ಫಾಸ್ಟ್‌ ಮೂಲದ ಯವಕ ಜಾರ್ಜ್‌ ಬೆಸ್ಟ್‌. ಬೆಸ್ಟ್‌ ತುಂಬಾ ವಿರಳವಾದ ಸ್ವಾಭಾವಿಕ ಉತ್ಸಾಹವನ್ನು ಹೊಂದಿದ್ದರು. ಆದರೆ ಅವರ ಅತ್ಯಮೂಲ್ಯವಾದ ಆಸ್ತಿಯೆಂದರೆ ಫುಟ್‌ಬಾಲ್‌ನಲ್ಲಿ ಅವರಿಗಿದ್ದ ಹಿಡಿತ. ಅವರ ತ್ವರಿತವಾದ ಕಾಲುಗಳು ಎದುರಾಳಿಯ ರಕ್ಷಣೆಯಲ್ಲಿ ಎಷ್ಟೇ ಚಿಕ್ಕ ಜಾಗವಿದ್ದರೂ ಸಹ ಅದರ ಮೂಲಕ ಚೆಂಡನ್ನು ದಾಟಿಸುತ್ತಿದ್ದರು. ತಂಡವು 1963ರಲ್ಲಿ FA ಕಪ್‌ ಗೆದ್ದರೂ ಸಹ ಮೊದಲನೆಯ ವಿಭಾಗದಲ್ಲಿ ೧೯ನೆಯ ಸ್ಥಾನವನ್ನು ಗಳಿಸಲಷ್ಟೇ ಶಕ್ತವಾಯಿತು. FA ಕಪ್‌ನ ವಿಜಯವು ಆಟಗಾರರನ್ನು ಹುರಿದುಂಬಿಸಿದಂತೆ ಕಾಣುತ್ತಿತ್ತು. ಇದರ ನಂತರ ಅವರ ಕ್ಲಬ್‌ ೧೯೬೪ರಲ್ಲಿ ಎರಡನೆಯ ಸ್ಥಾನ ಗಳಿಸಿತು ಮತ್ತು ೧೯೬೫ ಮತ್ತು ೧೯೬೭ರಲ್ಲಿ ಲೀಗ್‌ ಪಂದ್ಯವನ್ನು ಗೆದ್ದಿತ್ತು. ೧೯೬೮ರಲ್ಲಿ ಯುರೋಪಿಯನ್‌ ಕಪ್‌ನ ಅಂತಿಮ ಪಂದ್ಯದಲ್ಲಿ ಯುಸ್‌ಬಿಯೊಬೆನ್ಫಿಕಾ ತಂಡವನ್ನು ೪–೧ ಅಂತರದಲ್ಲಿ ಸೋಲಿಸಿದ್ದರಿಂದ ಯುನೈಟೆಡ್‌ ತಂಡವು ಯುರೋಪಿಯನ್‌ ಕಪ್‌ನ್ನು ಗೆದ್ದ ಮೊದಲ ಇಂಗ್ಲೀಷ್‌ ಕ್ಲಬ್‌ ಆಗಿತ್ತು. ಈ ಯುನೈಟೆಡ್‌ ತಂಡವು ಬಾಬ್ಬಿ ಚಾರ್ಲ್ಟನ್‌, ಡೆನಿಸ್‌ ಲಾ ಮತ್ತು ಜಾರ್ಜ್‌ ಬೆಸ್ಟ್‌ ಎಂಬ ಮೂವರು ಯುರೋಪಿಯನ್‌ ವರ್ಷದ ಫುಟ್‌ಬಾಲ್‌ ಆಟಗಾರರನ್ನು ಹೊಂದಿ ಗಮನ ಸೆಳೆದಿತ್ತು. ೧೯೬೯ರಲ್ಲಿ ಮ್ಯಾಟ್‌ ಬಸ್ಬಿ ತನ್ನ ವ್ಯವಸ್ಥಾಪಕ ಹುದ್ದೆಗೆ ರಾಜಿನಾಮೆ ನೀಡಿದರು ಮತ್ತು ಅವರ ಬದಲಿಯಾಗಿ ತಂಡದ ಮೀಸಲು ತರಬೇತುದಾರ ಮತ್ತು ಯುನೈಟೆಡ್‌‌ನ ಮಾಜಿ ಆಟಗಾರನಾದ ವಿಲ್ಫ್‌ ಮೆಕ್‌‌ಗಿನ್ನೆಸ್‌‌ರವರನ್ನು ನೇಮಿಸಲಾಯಿತು.

೧೯೬೯–೧೯೮೬[ಬದಲಾಯಿಸಿ]

thumb|1960ರ ದಶಕ ಮತ್ತು 1970ರ ದಶಕದಲ್ಲಿನ ಪೂರ್ವಾರ್ಧದಲ್ಲಿನ ಮ್ಯಾಂಚೆಸ್ಟರ್‌ ಯುನೈಟೆಡ್‌ ಬ್ಯಾಡ್ಜ್‌

ಬಸ್ಬಿಯವರು ಹುದ್ದೆ ತ್ಯಜಿಸಿದ್ದರಿಂದ ಯುನೈಟೆಡ್‌‌ ಕ್ಲಬ್‌ ತುಂಬಾ ಕಷ್ಟಪಟ್ಟಿತು ಮತ್ತು 1969–70ರ ಕ್ರೀಡಾಋತುವಿನಲ್ಲಿ ವಿಲ್ಫ್‌ ಮೆಕ್‌‌ಗಿನ್ನೆಸ್‌‌ರ ತರಬೇತಿಯಡಿ ತಂಡವು ನಿರಾಶಾದಾಯಕ ಎಂಟನೆ ಸ್ಥಾನ ಗಳಿಸಿತು ಮತ್ತು 1970–71ರ ಕ್ರೀಡಾಋತುವಿನಲ್ಲೂ ಅದೇ ಪ್ರದರ್ಶನ ಮುಂದುವರೆದದ್ದರಿಂದ ಮೆಕ್‌‌ಗಿನ್ನೆಸ್‌‌‌ರವರನ್ನು ಮೀಸಲು ತರಬೇತುದಾರರ ಸ್ಥಾನಕ್ಕೆ ಹಿಂಬಡ್ತಿ ನೀಡಲಾಯಿತು. ಬಸ್ಬಿಯವರು ಹುದ್ದೆಗೆ ಮರಳಿದರಾದರೂ ಅವರು ಕ್ಲಬ್‌ನಲ್ಲಿದ್ದದ್ದು ಕೇವಲ ಆರು ತಿಂಗಳು ಮಾತ್ರ. ಇದರಿಂದ ಬಸ್ಬಿಯ ಮಾರ್ಗದರ್ಶನದೊಂದಿಗೆ ಉತ್ತಮ ಫಲಿತಾಂಶ ದೊರೆಯಿತು. ಆದರೆ ಅವರು ಕೊನೆಯ ಬಾರಿ ೧೯೭೧ರ ಬೇಸಿಗೆಯಲ್ಲಿ ಕ್ಲಬ್‌ ಬಿಟ್ಟುಹೋದರು. ಅದೇ ಸಮಯದಲ್ಲಿ ಯುನೈಟೆಡ್‌ ನಾಬ್ಬಿ ಸ್ಟಿಲ್ಸ್‌ ಮತ್ತು ಪ್ಯಾಟ್‌ ಕ್ರೆರಾಂಡ್‌ರವರಂತಹ ಹಲವು ಪ್ರಸಿದ್ಧ ಆಟಗಾರನ್ನು ಕಳೆದುಕೊಂಡಿತು.

ವ್ಯವಸ್ಥಾಪಕರ ಹುದ್ದೆಗಾಗಿ ಸೆಲ್ಟಿಕ್‌ನ ಯುರೋಪಿಯನ್‌ ಕಪ್‌ ವಿಜೇತ ತಂಡದ ವ್ಯವಸ್ಥಾಪಕ ಜೋಕ್‌ ಸ್ಟೈನ್‌ರವರನ್ನು ಸಂಪರ್ಕಿಸಿದ್ದು, ಅದಕ್ಕೆ ಸ್ಟೈನ್‌ ಯುನೈಟೆಡ್‌ನ್ನು ಸೇರಲು ಮೌಖಿಕ ಒಪ್ಪಂದಕ್ಕೆ ಸಮ್ಮತಿಸಿದ್ದರೂ ಸಹ ಕೊನೆಯ ಗಳಿಗೆಯಲ್ಲಿ ಫ್ರಾಂಕ್‌ ಓ' ಫಾರೆಲ್‌ರವರನ್ನು ಬಸ್ಬಿಯವರ ಉತ್ತರಾಧಿಕಾರಿಯಾಗಿ ನೇಮಿಸಲಾಯಿತು. ಹಾಗೆಯೇ, ಮೆಕ್‌ಗಿನ್ನೆಸ್‌‌ನಂತೆಯೇ ಓ'ಫಾರೆಲ್‌ರವರನ್ನು ಕೂಡಾ ೧೮ ತಿಂಗಳುಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಹುದ್ದೆಯಿಂದ ಕೆಳಗಿಳಿಸಲಾಯಿತು. ಆದರೆ ಇವರಿಬ್ಬರ ನಡುವಿನ ಒಂದೇ ವ್ಯತ್ಯಾಸವೆಂದರೆ ಓ'ಫಾರೆಲ್‌ರವರು ತಂಡದ ಕಳಪೆ ಪ್ರದರ್ಶನಕ್ಕೆ ಪ್ರತಿಯಾಗಿ ಕೆಲವು ಹೊಸ ಪ್ರತಿಭೆಗಳನ್ನು ಅದರಲ್ಲೂ ವಿಶೇಷವಾಗಿ £೧೨೫,೦೦೦ ಮೊತ್ತಕ್ಕೆ ಅಬರ್ಡೀನ್‌ನಿಂದ ಮಾರ್ಟಿನ್‌ ಬುಕನ್‌ರವರನ್ನು ತಂಡಕ್ಕೆ ಕರೆತಂದರು. ೧೯೭೨ರ ಕೊನೆಯಲ್ಲಿ ಟಾಮಿ ಡೊಚೆರ್ಟಿ‌ಯವರು ತಂಡದ ವ್ಯವಸ್ಥಾಪಕರಾದರು. ಡೊಚೆರ್ಟಿ ಅಥವಾ "ದಿ ಡಾಕ್‌" ಆ ಕ್ರೀಡಾಋತುವಿನಲ್ಲಿ ಕೆಳಹಂತಕ್ಕಿಳಿಯದಂತೆ ಯುನೈಟೆಡ್‌ ತಂಡವನ್ನು ಉಳಿಸಿದರು. ಆದರೆ ೧೯೭೪ರಲ್ಲಿ ಪ್ರಸಿದ್ಧ ಮೂವರು ಆಟಗಾರರಾದ ಬೆಸ್ಟ್‌, ಲಾ ಮತ್ತು ಚಾರ್ಲ್ಟನ್‌ರವರು ಕ್ಲಬ್‌ನಿಂದ ಹೊರನಡೆದಾಗ ತಂಡವು ಕೆಳಹಂತಕ್ಕಿಳಿಯಿತು. ಡೆವಿಸ್‌ ಲಾರವರು ೧೯೭೩ರ ಬೇಸಿಗೆಯಲ್ಲಿ ಮ್ಯಾಂಚೆಸ್ಟರ್‌ ಸಿಟಿಗೆ ಹೋದರು ಮತ್ತು ಹಲವರ ಪ್ರಕಾರ ಯುನೈಟೆಡ್‌ ತಂಡದ ಅವನತಿಗೆ ಕಾರಣವೆಂದು ಹೇಳಲಾದ ಗೋಲ್‌ಗಳನ್ನು ಗಳಿಸಿದರು. ಆದರೆ ಲಾ ತಮ್ಮ ತಂಡದ ಸದಸ್ಯರೊಂದಿಗೆ ಗೋಲನ್ನು ಹೊಡೆದ ಯಶಸ್ಸನ್ನು ಆಚರಿಸಲು ನಯವಾಗಿ ನಿರಾಕರಿಸಿದರು. ಬೆಸ್ಟ್‌, ಲಾ ಮತ್ತು ಚಾರ್ಲ್ಟನ್‌ರ ಬದಲಿಗೆ ಲೌ ಮಕ್ಕಾರಿ, ಸ್ಟೀವರ್ಟ್‌ ಹೌಸ್ಟನ್‌ ಮತ್ತು ಬ್ರಿಯಾನ್‌‌ ಗ್ರೀನ್‌ಹೋಫ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ಇವರಲ್ಲಿ ಯಾರಿಗೂ ಹಿಂದಿದ್ದ ಮೂವರು ತಲುಪಿದ ಔನ್ನತ್ಯಕ್ಕೆ ತಂಡವನ್ನು ಕೊಂಡೊಯ್ಯಲಾಗಲಿಲ್ಲ.

ಆ ಕ್ರೀಡಾಋತುವಿನ ಕೊನೆಯಲ್ಲಿ ಟ್ರ್ಯಾನ್ಮರ್‌ ರೋವರ್ಸ್‌ನಿಂದ ಬಂದಿದ್ದ ಯುವಕ ಸ್ಟೀವ್‌ ಕೊಪೆಲ್ಲ್‌ರವರೊಂದಿಗೆ ನಡೆಸಿದ ಮೊದಲ ಪ್ರಯತ್ನದಲ್ಲಿ ಪ್ರೋತ್ಸಾಹಕ ಪಂದ್ಯ ಗೆದ್ದಿತು. ಈ ಪಂದ್ಯವು ಕೊಪೆಲ್ಲ್‌ರವರಿಗೆ ತನ್ನ ಮೊದಲ ಪಂದ್ಯವಾಗಿತ್ತು. ತಂಡವು ೧೯೭೬ರಲ್ಲಿ FA ಕಪ್‌ ಅಂತಿಮ ಪಂದ್ಯವನ್ನು ತಲುಪಿತಾದರೂ ಸೌತಾಂಪ್ಟನ್‌ ವಿರುದ್ಧ ತಂಡ ಸೋತಿತು. ೧೯೭೭ರಲ್ಲಿ ತಂಡವು ಲಿವರ್‌ಪೂಲ್‌ನ ಎದುರು ೨–೧ರ ಅಂತರದಲ್ಲಿ ಜಯಗಳಿಸಿ ಮತ್ತೆ ಅಂತಿಮ ಪಂದ್ಯಕ್ಕೆ ಪ್ರವೇಶಿಸಿತು. ಈ ಯಶಸ್ಸು ಮತ್ತು ಅವರ ಬೆಂಬಲಿಗರೊಂದಿಗೆ ಜನಪ್ರಿಯತೆಯಿದ್ದರೂ ಸಹ ಡೊಚೆರ್ಟಿಯವರಿಗೆ ಭೌತಚಿಕಿತ್ಸಕನ ಹೆಂಡತಿಯೊಂದಿಗೆ ಸಂಬಂಧವಿದ್ದುದು ದೃಢಪಟ್ಟಾಗ ಅಂತಿಮ ಪಂದ್ಯದ ನಂತರದ ಕೆಲದಿನಗಳಲ್ಲೇ ಅವರನ್ನು ವಜಾಮಾಡಲಾಯಿತು.

೧೯೭೭ರ ಬೇಸಿಗೆಯಲ್ಲಿ ಡೊಚೆರ್ಟಿ ಸ್ಥಾನಕ್ಕೆ ಡೇವ್‌ ಸೆಕ್ಸ್‌ಟನ್‌ರವರನ್ನು ವ್ಯವಸ್ಥಾಪಕರಂತೆ ನೇಮಿಸಲಾಯಿತು. ಅವರು ತುಂಬಾ ರಕ್ಷಣಾತ್ಮಕ ಶೈಲಿಯಲ್ಲಿ ಆಟವನ್ನು ಆಡಿಸಿದರು. ಡೊಚೆರ್ಟಿ ಮತ್ತು ಬಸ್ಬಿಯವರ ಆಕ್ರಮಣಕಾರಿ ಶೈಲಿಯ ಫುಟ್‌ಬಾಲ್‌ಗೆ ಮನಸೋತಿದ್ದ ತಂಡದ ಬೆಂಬಲಿಗರಲ್ಲಿ ಈ ಶೈಲಿಯು ಅಷ್ಟೊಂದು ಜನಪ್ರಿಯವಾಗಲಿಲ್ಲ. ಸೆಕ್ಸ್‌ಟನ್‌ನ ಕಾಲದಲ್ಲಿನ ಪ್ರಮುಖ ಸೇರ್ಪಡೆಗೊಂಡವರೆಂದರೆ ಜೋ ಜೋರ್ಡನ್‌, ಗಾರ್ಡನ್‌ ಮೆಕ್‌‌ಕ್ವೀನ್‌, ಗ್ಯಾರಿ ಬೈಲಿ ಮತ್ತು ರಾಯ್‌ ವಿಲ್ಕಿನ್ಸ್‌. ಆದರೆ ಸೆಕ್ಸ್‌ಟನ್‌ನ ರಕ್ಷಣಾತ್ಮಕ ಶೈಲಿಯು ಅಸ್ಪಷ್ಟತೆಯಿಂದ ಕೂಡಿರುವುದರಿಂದ ಒಮ್ಮೆ ಮಾತ್ರ ಎರಡನೆಯ ಸ್ಥಾನ ಗಳಿಸಲು ಸಫಲವಾಯಿತು ಮತ್ತು FA ಕಪ್‌ ಅಂತಿಮ ಪಂದ್ಯವನ್ನು ಪ್ರವೇಶಿಸಿ ಅರ್ಸೆನಲ್‌ ತಂಡದಿಂದ ಸೋತಿತು. ಸೆಕ್ಸ್‌ಟನ್‌ರವರು ಹಿಂದಿನ ಏಳು ಪಂದ್ಯಗಳನ್ನು ಗೆದ್ದಿದ್ದರೂ ಸಹ ಈ ಟ್ರೋಫಿಗಳನ್ನು ಸೋತದ್ದರಿಂದ ಅವರನ್ನು ೧೯೮೧ರಲ್ಲಿ ಹುದ್ದೆಯಿಂದ ವಜಾ ಮಾಡಲಾಯಿತು.

ಅವರ ಬದಲಿಗೆ ಆಡಂಬರದ ವ್ಯಕ್ತಿಯಾದ ರಾನ್‌ ಅಟ್ಕಿನ್ಸನ್‌ರನ್ನು ನೇಮಿಸಲಾಯಿತು. ಅವರ ತಂಡದಲ್ಲಿ ನಡೆದುಕೊಳ್ಳುವ ರೀತಿಯು ಕ್ಲಬ್‌ಗಳಲ್ಲಿ ಅವರ ಸ್ನೇಹಶೀಲ ಸ್ವಭಾವವನ್ನು ಪ್ರತಿಫಲಿಸುತ್ತದೆ. ಅವರು ನೇಮಕವಾದ ತಕ್ಷಣ ವೆಸ್ಟ್‌ ಬ್ರೊಮ್‌ನ ತನ್ನ ಹಳೆ ಕ್ಲಬ್‌ನಿಂದ ಬ್ರಿಯಾನ್‌ ರೋಬ್ಸನ್‌ರವರನ್ನು ತಂಡಕ್ಕೆ ಕರೆತರಲು ಒಪ್ಪಂದಕ್ಕೆ ಸಹಿ ಹಾಕಿಸುವುದರ ಮೂಲಕ ವರ್ಗಾವಣೆ ಶುಲ್ಕದ ಬ್ರಿಟಿಷ್‌ ದಾಖಲೆಯನ್ನು ಮುರಿದರು. ಡಂಕನ್‌ ಎಡ್ವರ್ಡ್ಸ್‌‌ರವರ ಅವಧಿಯಿಂದ ಇದುವರೆಗೂ ಯುನೈಟೆಡ್‌ನ ಉತ್ತಮ ಮಿಡ್‌ಫೀಲ್ಡ್‌ ಆಟಗಾರರಾಗುವಂತೆ ರಾಬ್ಸನ್‌ ತಯಾರಾದರು. ಅಟ್ಕಿನ್ಸನ್‌ರ ತಂಡವು ಹಿಂದಿನ ಯುವ ಆಟಗಾರರಾದ ನಾರ್ಮನ್‌ ವೈಟ್‌ಸೈಡ್‌ ಮತ್ತು ಮಾರ್ಕ್‌ ಹ್ಯೂಜಸ್‌‌ರೊಂದಿಗೆ ಆಡುತ್ತಿದ್ದ ಜೆಸ್ಪರ್‌ ಓಲ್ಸೆನ್‌, ಪೌಲ್‌ ಮೆಕ್‌ಗ್ರಾತ್‌‌ ಮತ್ತು ಗೋರ್ಡನ್‌ ಸ್ಟ್ರ್ಯಾಚನ್‌ರಂತಹ ಆಟಗಾರರೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿತು. ಯುನೈಟೆಡ್‌ ಮೂರು ವರ್ಷದಲ್ಲಿ ಎರಡು ಬಾರಿ ಅಂದರೆ 1983 ಮತ್ತು 1985ರಲ್ಲಿ FA ಕಪ್‌ನ್ನು ಗೆದ್ದಿತು ಮತ್ತು ಅಕ್ಟೋಬರ್‌ನ ಮೊದಲು ತಮ್ಮ ಎದುರಾಳಿಗಳಿಂದ ಹತ್ತು ಅಂಕಗಳಷ್ಟು ಹಿಂದಿದ್ದ ತಂಡವು ಮೊದಲ ಹತ್ತು ಲೀಗ್‌ ಪಂದ್ಯಗಳನ್ನು ಗೆದ್ದ ನಂತರ 1985–86 ಕ್ರೀಡಾಋತುವಿನಲ್ಲಿ ಲೀಗ್‌ನ್ನು ಗೆಲ್ಲುವ ನೆಚ್ಚಿನ ತಂಡವಾಯಿತು. ತಂಡದ ಪ್ರದರ್ಶನವು ಕುಸಿದಿದ್ದರೂ ಸಹ ಯುನೈಟೆಡ್‌ ನಾಲ್ಕನೆಯ ಸ್ಥಾನವನ್ನು ಗಳಿಸಿ ಕ್ರೀಡಾಋತುವನ್ನು ಮುಗಿಸಿತು. ತಂಡದ ಕಳಪೆ ಪ್ರದರ್ಶನವು ಮುಂದಿನ ಕ್ರೀಡಾಋತುವಿನಲ್ಲೂ ಮುಂದುವರಿಯಿತು ಮತ್ತು ೧೯೮೬ರ ನವೆಂಬರ್‌ನ ಆದಿಯಲ್ಲಿ ಯುನೈಟೆಡ್‌ ತಂಡವು ಅಂಕಪಟ್ಟಿಯಲ್ಲಿ ಮೊದಲ ವಿಭಾಗದ ಕೆಳವಲಯದಲ್ಲಿದ್ದಾಗ ಅಟ್ಕಿನ್ಸನ್‌ರನ್ನು ಹುದ್ದೆಯಿಂದ ವಜಾ ಮಾಡಲಾಯಿತು.

ಅಲೆಕ್ಸ್‌ ಫರ್ಗ್ಯೂಸನ್‌ ರ ಅವಧಿ, ಟ್ರಿಬಲ್‌ ಪಂದ್ಯಕ್ಕಿಂತ ಮೊದಲು (೧೯೮೬–೧೯೯೮)[ಬದಲಾಯಿಸಿ]

ನವೆಂಬರ್‌ 1986ರಿಂದ ಅಲೆಕ್ಸ್‌ ಫರ್ಗ್ಯುಸನ್‌ ಮ್ಯಾಂಚೆಸ್ಟರ್‌ ಯುನೈಟೆಡ್‌ನ ನಿರ್ವಾಹಕರಾಗಿದ್ದಾರೆ.

ಅಟ್ಕಿನ್ಸನ್‌ರವರನ್ನು ವಜಾಮಾಡಿದ ದಿನವೇ ಅವರ ಹುದ್ದೆಗೆ ಅಬರ್ಡೀನ್‌ನ ಅಲೆಕ್ಸ್‌ ಫರ್ಗ್ಯೂಸನ್‌ರವರನ್ನು ನೇಮಿಸಲಾಯಿತು. ಅವರು ತಮ್ಮೊಂದಿಗೆ ತಮ್ಮ ಸಹಾಯಕ ವ್ಯವಸ್ಥಾಪಕರಾದ ಅರ್ಚಿ ಕ್ನಾಕ್ಸ್‌ರನ್ನು ಕರೆತಂದಿದ್ದರು. ಅವರು ಅಧಿಕಾರ ವಹಿಸಿಕೊಂಡ ನಂತರ ಅಂದರೆ ೮ ನವೆಂಬರ್‌ ೧೯೮೬ರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಯುನೈಟೆಡ್‌ ತಂಡವು ಆಕ್ಸ್‌ಫರ್ಡ್‌ ಯುನೈಟೆಡ್‌ ತಂಡದ ವಿರುದ್ಧ ೨–೦ ಅಂತರದಲ್ಲಿ ಸೋತಿತು. ಆದಾಗ್ಯೂ ಈ ಅವಧಿಯಲ್ಲಿ ತಂಡವು ಫರ್ಗ್ಯೂಸನ್‌ರವರ ಮಾರ್ಗದರ್ಶನದಲ್ಲಿ ೧೧ನೆಯ ಸ್ಥಾನವನ್ನು ಗಳಿಸಲು ಸಫಲವಾಯಿತು. ಜಾರ್ಜ್‌ ಬೆಸ್ಟ್‌ರ ನಂತರ ಒಂದೇ ಕ್ರೀಡಾಋತುವಿನಲ್ಲಿ ಇಪ್ಪತ್ತು ಲೀಗ್‌ ಗೋಲುಗಳನ್ನು ಗಳಿಸಿದ ಮೊದಲ ಯುನೈಟೆಡ್‌ ತಂಡದ ಆಟಗಾರನಾದ ಬ್ರಿಯಾನ್‌ ಮೆಕ್‌‌ಕ್ಲೈರ್‌ರೊಂದಿಗಿನ ತಂಡವು 1987–88ರ ಕ್ರೀಡಾಋತುವಿನಲ್ಲಿ ಎರಡನೆಯ ಸ್ಥಾನವನ್ನು ಗಳಿಸಿತ್ತು. ಇದು ಕ್ರೀಡಾಪ್ರೇಮಿಗಳಿಗೆ ಸ್ವಲ್ಪ ತಂಡದ ಭವಿಷ್ಯದ ಬಗ್ಗೆ ನಿರೀಕ್ಷೆ ಮೂಡಿತು, ಆದರೆ ೧೯೮೯ರಲ್ಲಿ ೧೧ನೆಯ ಸ್ಥಾನದೊಂದಿಗೆ ತಂಡವು ಸಾಧಾರಣ ಸ್ಥಿತಿಗೆ ಹಿಂದಿರುಗಿತು.

ಫರ್ಗ್ಯೂಸನ್‌ರವರ ಹಲವು ಸೇರ್ಪಡೆಗಳು ಕ್ರೀಡಾಪ್ರೇಮಿಗಳ ನಿರೀಕ್ಷೆಗಳನ್ನು ತಲುಪಲಿಲ್ಲ ಮತ್ತು ನಾಟಿಂಗ್‌ಹ್ಯಾಮ್‌ ಫಾರೆಸ್ಟ್‌ನಲ್ಲಿ ನಡೆದ FA ಕಪ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲುವುದರೊಂದಿಗೆ ೧೯೯೦ರ ಆದಿಯಲ್ಲಿ ಫರ್ಗ್ಯೂಸನ್‌‌ರವರು ವ್ಯವಸ್ಥಾಪಕ ಹುದ್ದೆಯಿಂದ ವಜಾ ಆಗುವುದರಲ್ಲಿದ್ದರು. ೫೬ನೇ ನಿಮಿಷದಲ್ಲಿ ಮಾರ್ಕ್‌ ರಾಬಿನ್ಸ್‌ರು ಗಳಿಸಿದ ಗೋಲು ಯುನೈಟೆಡ್‌ ತಂಡವನ್ನು ಗೆಲ್ಲುವಂತೆ ಮಾಡಿತು ಮತ್ತು ಇದು ತಂಡದ ಕಪ್‌ನ ಬೇಟೆಗೆ ಪ್ರಾರಂಭವನ್ನು ನೀಡಿತು. ನಂತರ ತಂಡವು ವೆಂಬ್ಲಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪಂದ್ಯವು ೩–೩ ಗೋಲುಗಳಿಂದ ಸರಿಸಮವಾದ ನಂತರದ ಮರುಆಟದಲ್ಲಿ ೧-೦ ಅಂತರದಲ್ಲಿ ಅವರು ಕ್ರಿಸ್ಟಲ್‌ ಪ್ಯಾಲೆಸ್‌ ತಂಡವನ್ನು ಸೋಲಿಸಿದರು. ನಂತರದ ವರ್ಷ ಯುನೈಟೆಡ್‌ ತಂಡವು ಲೀಗ್‌ ಕಪ್‌ನ ಅಂತಿಮ ಪಂದ್ಯವನ್ನು ತಲುಪಿತ್ತು. ಆದರೆ ಯುನೈಟೆಡ್‌ನ ಹಿಂದಿನ ವ್ಯವಸ್ಥಾಪಕರಾದ ರಾನ್‌ ಅಟ್ಕಿನ್ಸನ್‌ರವರ ಶೆಫೀಲ್ಡ್‌ ವೆನ್ಸಡೇ ತಂಡದಿಂದ ಸೋತರು. ಆದರೂ ತಂಡವು ರಾಟ್ಟರ್‌ಡ್ಯಾಮ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬಾರ್ಸೆಲೊನಾ ತಂಡವನ್ನು ೨-೧ ಅಂತರದಿಂದ ಸೋಲಿಸುವುದರ ಮೂಲಕ ಕ್ಲಬ್‌ನ ಮೊದಲ ಕಪ್‌ ವಿನ್ನರ್ಸ್‌ ಕಪ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಪ್‌‌ ವಿನ್ನರ್ಸ್‌ ಕಪ್‌ನ ವಿಜಯವು 1991ರ UEFA ಸೂಪರ್‌ ಕಪ್‌ನಲ್ಲಿ ಆಡಲು ತಂಡವನ್ನು ಅನುವುಮಾಡಿಕೊಟ್ಟಿತು. ಆ ಪಂದ್ಯಾವಳಿಯಲ್ಲಿ ಓಲ್ಡ್‌ ಟ್ರ್ಯಾಫೋರ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಇವರು ಯುರೋಪಿಯನ್‌ ಕಪ್‌ ವಿಜೇತರಾದ ರೆಡ್‌ ಸ್ಟಾರ್‌ ಬೆಲ್‌ಗ್ರೆಡ್‌ ತಂಡವನ್ನು ೧–೦ ಅಂತರದಲ್ಲಿ ಸೋಲಿಸಿದರು. ಪಂದ್ಯವು ಎರಡು ಕಡೆಗಳಲ್ಲಿ ನಡೆಯಬೇಕಾಗಿತ್ತು. ಆದರೆ ಆ ಸಂದರ್ಭದಲ್ಲಿ ಯುಗೊಸ್ಲಾವಿಯಾದಲ್ಲಿ ರಾಜಕೀಯ ಗೊಂದಲಗಳಿದ್ದ ಕಾರಣ UEFA ಓಲ್ಡ್‌ ಟ್ರ್ಯಾಫೋರ್ಡ್‌ನಲ್ಲಿ ಮಾತ್ರ ಪಂದ್ಯವನ್ನು ನಡೆಸಲು ನಿರ್ಧರಿಸಿತು. ೧೯೯೨ರಲ್ಲಿ ವೆಂಬ್ಲಿಯಲ್ಲಿ ಸತತ ಎರಡನೆ ಲೀಗ್‌ ಕಪ್‌ನ ಅಂತಿಮ ಪಂದ್ಯ ಪ್ರವೇಶದ ಪಂದ್ಯದಲ್ಲಿ ಯುನೈಟೆಡ್‌ ತಂಡವು ನಾಟಿಂಗ್‌ಹ್ಯಾಮ್‌ ತಂಡವನ್ನು ೧–೦ ಅಂತರದಿಂದ ಸೋಲಿಸಿತು.

ಅದೇ ಸಮಯದಲ್ಲಿ, ಅಂದರೆ ಸರಿಸುಮಾರು ದಶಕದ ಕೊನೆಗೆ ಮೈದಾನದಿಂದ ಹೊರಗೂ ಕೆಲವು ಘಟನೆಗಳು ನಡೆದವು, ಕ್ಲಬ್‌ನ ಅಧ್ಯಕ್ಷರಾಗಿದ್ದ ಮಾರ್ಟಿನ್‌ ಎಡ್ವರ್ಡ್ಸ್‌ರವರು ೧೯೮೯ರಲ್ಲಿ ಸ್ವತ್ತುಗಳ ಸಾಮ್ರಾಟ ಮೈಕೆಲ್‌ ನೈಟನ್‌ರವರಿಗೆ ಕ್ಲಬ್‌ನ್ನು ಹಸ್ತಾಂತರಿಸಲು ಪ್ರಯತ್ನಿಸಿದರು. ಓಲ್ಡ್‌ ಟ್ರ್ಯಾಫೋರ್ಡ್‌ನ ಮೈದಾನವೂ ಸೇರಿದಂತೆ ಲಾಂಛನಾದಿಗಳೊಂದಿಗೆ ಪೂರ್ಣ ಮ್ಯಾಂಚೆಸ್ಟರ್‌ ಯುನೈಟೆಡ್‌ನ್ನೂ ಸಹ ನೈಟನ್‌ ತೆಗೆದುಕೊಂಡು ಒಟ್ಟು £೨೦ ದಶಲಕ್ಷ ಮೊತ್ತಕ್ಕೆ ಹೆಚ್ಚು ಕಡಿಮೆ ಖಾತ್ರಿಯಾಗುವ ಹಾಗಿತ್ತು ಮತ್ತು ಇದರೊಂದಿಗೆ ಸ್ಟ್ರ್ಯಾಟ್‌‌ಫೋರ್ಡ್‌ನ ಕಛೇರಿಯಲ್ಲಿ ಈ ವ್ಯವಹಾರವನ್ನು ಪೂರ್ಣಗೊಳಿಸುವ ವಿಚಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವೆಂಬಂತೆ ಚರ್ಚೆಗಳು ನಡೆದವು. ನೈಟನ್‌ಗೆ ಕ್ಲಬ್‌ನ ಹಣಕಾಸು ದಾಖಲೆಗಳನ್ನು ನೀಡಲಾಯಿತು. ಆದರೆ ವ್ಯವಹಾರವು ಪೂರ್ಣಗೊಳ್ಳುವ ಮೊದಲೇ ಅವರ ಆರ್ಥಿಕ ಸಹಾಯಕರು ಈ ವಿಚಾರದಲ್ಲಿ ಹಿಂಜರಿದ ಕಾರಣ ವ್ಯವಹಾರವು ರದ್ದಾಯಿತು. ಆದರೂ ಈಗಾಗಲೇ ನೈಟನ್‌ ಕ್ಲಬ್‌ನ ಆಂತರಿಕ ವಿಷಯವನ್ನು ತಿಳಿದಿದ್ದರಿಂದ, ಈ ವ್ಯವಹಾರದಲ್ಲಿ ಮೌನವಾಗಿರಲೆಂದು ಅವರಿಗೆ ಕ್ಲಬ್‌ನ ಮಂಡಳಿಯಲ್ಲಿ ಸ್ಥಾನವನ್ನು ನೀಡಲಾಯಿತು. ೧೯೯೧ರಲ್ಲಿ ಟೇಲರ್ ವರದಿಯ ಅನುಸಾರವಾಗಿ ಕ್ಲಬ್‌ನ ಕೆಲವು ಹಣಕಾಸು ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ಲಂಡನ್‌ ಷೇರು ವಿನಿಮಯ ಕೇಂದ್ರದ ಮೂಲಕ £೪೭ ದಶಲಕ್ಷ [೧೭] ಮೊತ್ತವನ್ನು ಸಾರ್ವಜನಿಕರಿಂದ ಕ್ಲಬ್‌ ಸಂಗ್ರಹಿಸಿತು. ಮಾರ್ಟಿನ್‌ ಎಡ್ವರ್ಡ್ಸ್‌ ಅಧ್ಯಕ್ಷರ ಹುದ್ದೆಯಲ್ಲಿ ಮುಂದುವರಿದರಾದರೂ ಕ್ಲಬ್‌ ಸಾರ್ವಜನಿಕ ಮಾಲೀಕತ್ವವನ್ನು ಹೊಂದಿತ್ತು.

೧೯೯೧ರ ಬೇಸಿಗೆಯಲ್ಲಿ ಡೆನ್ಮಾರ್ಕಿನ‌ ಗೋಲ್‌ಕೀಪರ್‌ ಪೀಟರ್‌ ಷ್ಮೆಕಲ್‌ರವರು ತಂಡಕ್ಕೆ ಸೇರಿದ್ದರು. ಅವರು ೧೯೯೧–೯೨ರಲ್ಲಿ ನಡೆದ ಮೊದಲ ವಿಭಾಗ ಪಂದ್ಯದಲ್ಲಿ ಯುನೈಟೆಡ್‌ ಪರ ಉತ್ತಮ ರಕ್ಷಣಾತ್ಮಕ ದಾಖಲೆಯ ಆಟದ ಮೂಲಕ ೧೭ ಲೀಗ್‌ಗಳಲ್ಲಿ ಸಂಪೂರ್ಣ ಗೆಲುವು‌ಗಳನ್ನು ನೀಡುವುದರ ಮೂಲಕ ಎರಡನೆಯ ಸ್ಥಾನ ಅಂದರೆ ಲೀಡ್ಸ್‌ ಯುನೈಟೆಡ್‌ ತಂಡಕ್ಕಿಂತ ಕೆಳಗಿನ ಸ್ಥಾನವನ್ನು ಗಳಿಸಲು ಸಹಾಯಕವಾದರು. ಅವರ ಈ ಸಾಧನೆ ಫ್ರೆಂಚ್‌ ಹರಿಕಾರರಾದ ಎರಿಕ್‌ ಕ್ಯಾಂಟೊನಾರ ಸಾಧನೆಗೆ ಸಮಾನವಾಗಿತ್ತು. ಅಲೆಕ್ಸ್‌ ಫರ್ಗ್ಯೂಸನ್‌ರವರು ಮಾರ್ಕ್‌ ಹ್ಯೂಜಸ್‌ ಮತ್ತು ಬ್ರಿಯಾನ್‌ ಮೆಕ್‌‌ಕ್ಲೈರ್‌ರವರ ಸಾಮರ್ಥ್ಯ ಉದ್ದೀಪನೆಗಾಗಿ ಓರ್ವ ಉತ್ತಮ ದಾಳಿಕೋರ ಆಟಗಾರನ ಅಗತ್ಯವಿದೆ ಎನ್ನುವುದನ್ನು ಮನಗೊಂಡು, ಶೆಫೀಲ್ಡ್‌ ವೆನ್ಸಡೆ ತಂಡದ ಸ್ಕ್ರೈಕರ್‌ ಡೇವಿಡ್‌ ಹರ್ಸ್ಟ್‌ರವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅನೇಕ ಬಾರಿ ಪ್ರಯತ್ನಿಸಿ ವಿಫಲರಾದರು. ಆದರೆ ೧೯೯೨ರ ನವೆಂಬರ್‌ನಲ್ಲಿ ಲೀಡ್ಸ್‌ ವ್ಯವಸ್ಥಾಪಕ ಹಾವರ್ಡ್‌ ವಿಲ್ಕಿನ್ಸನ್‌ರವರು ಮಾರ್ಟಿನ್‌ ಎಡ್ವರ್ಡ್ಸ್‌ರವರಿಗೆ ಡೆನಿಸ್‌ ಇರ್ವಿನ್‌ರ ಲಭ್ಯತೆಯ ಕುರಿತು ದೂರವಾಣಿ ಕರೆ ಮಾಡಿದಾಗ, ಮಾತುಕತೆಯು ತಕ್ಷಣ ಕ್ಯಾಂಟೊನಾ ಕುರಿತು ತಿರುಗಿತು. ಎಡ್ವರ್ಡ್ಸ್‌ ಮತ್ತು ಫರ್ಗ್ಯೂಸನ್‌ರಿಗೇ ಆಶ್ಚರ್ಯವಾಗುವಂತೆ ನಂತರ ಎರಡೂ ಕ್ಲಬ್‌ಗಳು ನಿಗೂಢ ಫ್ರೆಂಚ್‌ ವ್ಯಕ್ತಿಯ ಶುಲ್ಕವಾಗಿ £೧.೨ ದಶಲಕ್ಷಕ್ಕೆ ಒಪ್ಪಿಗೆ ಸೂಚಿಸಿದವು. ಕ್ಯಾಂಟೊನರ ಆಗಮನದಿಂದ ಯುನೈಟೆಡ್‌ ತಂಡಕ್ಕೆ ಹೊಸ ಸ್ಫೂರ್ತಿಯನ್ನು ನೀಡಿತು. ಅವರ ಮಾರ್ಗದರ್ಶನದಿಂದ ೧೯೬೭ರ ನಂತರದ ಮೊದಲ ಲೀಗ್‌ ಪ್ರಶಸ್ತಿಯ ಗೆಲುವಿಗೆ ಸಹಾಯ ನೀಡಿದರು. ೧೯೯೩ರ ಜುಲೈನಲ್ಲಿ ನಾಟಿಂಗ್‌ಹ್ಯಾಮ್‌ ಫಾರೆಸ್ಟ್‌ನಿಂದ ಬಂದಿದ್ದ ರಾಯ್‌ ಕೀನೆ‌ರೊಂದಿಗೆ ಒಪ್ಪಂದ ಮಾಡಿಕೊಂಡ ಮೇಲೆ, ಕ್ಲಬ್‌ನ ಇತಿಹಾಸದಲ್ಲಿ ಮೊದಲ "ಡಬಲ್‌"ಅನ್ನು ಪೂರ್ಣಗೊಳಿಸಲು FA ಕಪ್‌ನ್ನು ಗೆಲ್ಲುವ ಮೊದಲೇ ೧೯೫೭ರ ನಂತರದಲ್ಲಿ ಮೊದಲ ಬಾರಿಗೆ ಯುನೈಟೆಡ್‌ ಸತತ ಎರಡನೆಯ ಪ್ರಶಸ್ತಿ ಗೆದ್ದಿತು. ಅದೇ ವರ್ಷ ಮಾಜಿ ವ್ಯವಸ್ಥಾಪಕ ಮತ್ತು ಕ್ಲಬ್‌ನ ನಿರ್ದೇಶಕರಾಗಿದ್ದ ಮ್ಯಾಟ್‌ ಬಸ್ಬಿಯವರು ೨೦ ಜನವರಿ ೧೯೯೪ರಂದು ನಿಧನರಾದ್ದರಿಂದ ಕ್ಲಬ್‌ ಶೋಕಕ್ಕೆ ಒಳಗಾಯಿತು.

೧೯೮೮–೮೯ರ ಕ್ರೀಡಾಋತುವಿನ ನಂತರ 1994–95ರ ಕ್ರೀಡಾಋತುವು ಕ್ಲಬ್‌ನ ಮೊದಲ ಟ್ರೋಫಿ ರಹಿತ ಅವಧಿಯಾಗಿತ್ತು. ಕ್ರೀಡಾಋತುವಿನ ಕೊನೆಯ ವಾರದವರೆಗೆ ತಮ್ಮ ಪ್ರಶಸ್ತಿಗಾಗಿ ಬೇಟೆಯಾಡಿದರೂ, FA ಕಪ್‌ನ ಅಂತಿಮ ಪಂದ್ಯದಲ್ಲಿ ಎವರ್ಟನ್‌ನಿಂದ ಸೋತರು. ನ್ಯೂಕ್ಯಾಸಲ್‌ ಯುನೈಟೆಡ್‌ನಿಂದ ಬಂದಿದ್ದ ಆಂಡಿ ಕೋಲೆರವರು £೬ ದಶಲಕ್ಷ ಮೊತ್ತದ ಬ್ರಿಟಿಷ್‌ ದಾಖಲೆ ಶುಲ್ಕ ಮತ್ತು ಕೀತ್‌ ಗಿಲೆಸ್ಪಿರನ್ನು ಸೇರಿಸಿಕೊಳ್ಳಬೇಕೆಂಬ ಬೇಡಿಕೆಯೊಂದಿಗೆ ಒಪ್ಪಂದ ಮಾಡಿಕೊಂಡರು. ಆದರೂ ಯುನೈಟೆಡ್‌ ಪರ ಕೋಲೆಯವರ ಮೊದಲ ಪಂದ್ಯದ ನಂತರದ ಸೆಲ್‌ಹರ್ಸ್ಟ್‌ ಪಾರ್ಕ್‌ನಲ್ಲಿ ನಡೆದ ಯುನೈಟೆಡ್‌ ಪಂದ್ಯದಲ್ಲಿ ಕ್ಯಾಂಟೊನಾಗೆ ಕ್ಯಾಂಟೊನಾರವರು ಕ್ಷೇತ್ರದಿಂದ ಹೊರಬಂದರೆಂದು ಕ್ರಿಸ್ಟಲ್‌ ಪ್ಯಾಲೆಸ್‌ ಬೆಂಬಲಿಗ ಮ್ಯಾಥ್ಯೂ‌ ಸಿಮೊನ್ಸ್‌ರವರು ಜನಾಂಗೀಯ ನಿಂದನೆ ಮಾಡಿದರೆಂದು ಗುಂಪಿನೊಳಗೆ ಹಾರಿ ಸಿಮೊನ್ಸ್‌ರವರ ಮೇಲೆ ದಾಳಿ ಮಾಡಿದುದಕ್ಕಾಗಿ ಅವರನ್ನು ಎಂಟು ತಿಂಗಳು ಅಮಾನತು ಮಾಡಲಾಯಿತು. ಯುನೈಟೆಡ್‌ ತಂಡವು ಆ ಕ್ರೀಡಾಋತುವಿನಲ್ಲಿ ಹ್ಯಾಟ್‌-ಟ್ರಿಕ್‌ನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವುದಕ್ಕೆ ಕಾರಣವಾಗಿ ಕೆಲವರು ಕ್ಯಾಂಟೊನಾರ ಅಮಾನತನ್ನು ಉಲ್ಲೇಖಿಸುತ್ತಾರೆ. ಈ ಕ್ರೀಡಾಋತುವಿನ ವಿಫಲತೆಗಳು ಫರ್ಗ್ಯೂಸನ್‌ರವರನ್ನು ತಂಡದ ಕೆಲವು ಪ್ರಮುಖ ಮರುನಿರ್ಮಾಣ ನಿರ್ಧಾರಗಳಿಗೆ ಪ್ರೇರೇಪಿಸಿತು. ಅವರು ಪೌಲ್‌ ಇನ್ಸ್‌, ಆಂಡ್ರೀ ಕ್ಯಾಂಚೆಲ್‌ಸ್ಕಿಸ್‌ ಮತ್ತು ಮಾರ್ಕ್‌ ಹ್ಯೂಜಸ್‌ರವರನ್ನು ಮಾರಾಟ ಮಾಡಿ, ಅವರ ಬದಲಿಗೆ ಕ್ಲಬ್‌ನ ಯುವ ತಂಡದಿಂದ ಡೇವಿಡ್‌ ಬೆಕ್‌ಹ್ಯಾಮ್‌, ಗ್ಯಾರಿ ನೆವಿಲ್ಲೆ, ಫಿಲ್‌ ನೆವಿಲ್ಲೆ ಮತ್ತು ಪೌಲ್‌ ಷೋಲಸ್‌ರವರನ್ನು ತಂಡಕ್ಕೆ ಸೇರಿಸಿಕೊಂಡರು. ೧೯೯೫–೯೬ರ ಕ್ರೀಡಾಋತುವಿನ ಮೊದಲ ದಿನದಲ್ಲಿ ಆಸ್ಟನ್‌ ವಿಲ್ಲಾ ತಂಡವನ್ನು ೩-೧ ಅಂತರದಿಂದ ಸೋಲಿಸಿದ ನಂತರ ಕಿರುತೆರೆ ಪಂಡಿತ ಅಲಾನ್‌ ಹಾನ್ಸೆನ್‌ರವರು "ನೀವು ಮಕ್ಕಳೊಂದಿಗೆ ಎಂದಿಗೂ ಗೆಲ್ಲಲಾಗುವುದಿಲ್ಲ." ಎಂದು ಘೋಷಿಸಿದರು[೧೮] ತಂಡಕ್ಕೆ ಬಂದ ಹೊಸ ಆಟಗಾರರಲ್ಲಿ ಶೀಘ್ರದಲ್ಲೇ ಇಂಗ್ಲೆಂಡ್‌ ಪರ ಆಡುವ ಅಂತರ್‌ರಾಷ್ಟ್ರೀಯ ಆಟಗಾರರಾದ ಹಲವರು ಅಲ್ಲಿ ಉತ್ತಮ ಪ್ರದರ್ಶನ ನೀಡಿದರು. ೧೯೯೫ರ ಅಕ್ಟೋಬರ್‌ನಲ್ಲಿ ಹಿಂದಿರುಗಿದ ಕ್ಯಾಂಟೊನಾರವರಿಂದ ತರಬೇತಿ ಪಡೆದ ಯುನೈಟೆಡ್‌ ತಂಡವು ಡಬಲ್‌ ಪಂದ್ಯವನ್ನು ಎರಡು ಬಾರಿ ಗೆದ್ದ ಮೊದಲ ಇಂಗ್ಲೀಷ್‌ ಕ್ಲಬ್‌ ಆಗಿತ್ತು. ಹಾಗಾಗಿ ಅದಕ್ಕೆ "ಡಬಲ್‌ ಡಬಲ್‌" ಎನ್ನುವ ಅಡ್ಡಹೆಸರು ಬಂದಿತು.[೧೯]

೧೯೯೬ರ ಜುಲೈನಲ್ಲಿ ನಾಯಕ ಸ್ಟೀವ್‌ ಬ್ರೂಸ್‌ ಬಿರ್ಮಿಂಗ್‌ಹ್ಯಾಮ್‌ ಸಿಟಿಗೆ ಹೋದರು ಮತ್ತು ಅಲೆಕ್ಸ್‌ ಫರ್ಗ್ಯೂಸನ್‌ರವರು ಎರಿಕ್‌ ಕ್ಯಾಂಟೊನಾರವರನ್ನು ಕ್ಲಬ್‌ನ ಹೊಸ ನಾಯಕನನ್ನಾಗಿ ಮಾಡಿದರು. 1996–97ರಲ್ಲಿ ನಡೆದ ನಾಲ್ಕನೆ ಲೀಗ್ ಪ್ರಶಸ್ತಿ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವುದರೊಂದಿಗೆ ಐದು ವರ್ಷಗಳ ಕಾಲ ತಂಡದ ನಾಯಕರಾಗಿದ್ದ ಅವರು ಆ ಕ್ರೀಡಾಋತುವಿನ ಕೊನೆಯಲ್ಲಿ ಫುಟ್‌ಬಾಲ್‌ನಿಂದ ನಿವೃತ್ತಿಯನ್ನು ತಮ್ಮ ೩೦ನೆಯ ವಯಸ್ಸಿನಲ್ಲಿ ಪಡೆದರು. ಅವರ ಜಾಗಕ್ಕೆ ಟೆಡ್ಡಿ ಶೆರಿಂಗ್ಯಾಮ್‌ರನ್ನು ನೇಮಿಸಲಾಯಿತು ಮತ್ತು ಅವರು ತಮ್ಮ ಸಾಂಪ್ರದಾಯಿಕ ೭ ಸಂಖ್ಯೆಯ ಅಂಗಿಯನ್ನು ಡೇವಿಡ್‍ ಬೆಕ್‌ಹ್ಯಾಮ್‌ ರಿಗೆ ನೀಡಿದರು. ತಂಡವು 1997–98 ಕ್ರೀಡಾಋತುವನ್ನು ಉತ್ತಮವಾಗಿ ಪ್ರಾರಂಭಿಸಿತು. ಆದರೆ ಕ್ರಿಸ್ಮಸ್‌ನ ನಂತರ ಐದು ಪಂದ್ಯಗಳನ್ನು ಸೋತು, ಡಬಲ್‌ ಪ್ರಶಸ್ತಿ ವಿಜೇತರಾದ ಅರ್ಸೆನಲ್‌ಗಿಂತ ಒಂದು ಅಂಕ ಹಿಂದಿದ್ದು ಎರಡನೆಯ ಸ್ಥಾನವನ್ನು ಪಡೆದರು. ಇದರ ನಂತರ ಯಾವುದೇ ನಿಯಮಿತ ಸ್ಪರ್ಧಿಗಳಿಲ್ಲದ, ನಂತರದ ಕೆಲವು ವರ್ಷಗಳಲ್ಲಿ ಉತ್ತಮ ಪ್ರಶಸ್ತಿ ಸ್ಪರ್ಧಿಯಂತೆ ಅರ್ಸೆನಲ್‌ನ ಆಗಮನವಾಗಿತ್ತು.

ಟ್ರಿಬಲ್‌ ಪಂದ್ಯಗಳು (೧೯೯೮–೯೯)[ಬದಲಾಯಿಸಿ]

ದ ಟ್ರಿಬಲ್‌ ಪಾರಿತೋಷಕಗಳು – ದ ಪ್ರೀಮಿಯರ್‌ ಲೀಗ್‌, ಚ್ಯಾಂಪಿಯನ್ಸ್‌ ಲೀಗ್‌ ಮತ್ತು FA ಕಪ್‌ (ಎಡದಿಂದ ಬಲಕ್ಕೆ)

ಮ್ಯಾಂಚೆಸ್ಟರ್‌ ಯುನೈಟೆಡ್‌ಗೆ 1998–99ರ ಕ್ರೀಡಾಋತುವು ಇಂಗ್ಲೀಷ್‌ ಫುಟ್‌ಬಾಲ್‌ ಇತಿಹಾಸದಲ್ಲಿ ಅತಿ ಯಶಸ್ವಿ ಕ್ರೀಡಾಋತುವಾಗಿತ್ತು. ಏಕೆಂದರೆ ಒಂದೇ ಕ್ರೀಡಾಋತುವಿನಲ್ಲಿ ಪ್ರೀಮಿಯರ್‌ ಲೀಗ್‌, FA ಕಪ್‌ ಮತ್ತು UEFA ಚಾಂಪಿಯನ್ಸ್‌ ಲೀಗ್‌ ಗೆಲ್ಲುವುದರ ಮೂಲಕ ಟ್ರಿಬಲ್‌ ಗೆದ್ದ ಏಕೈಕ ಇಂಗ್ಲೀಷ್‌ ತಂಡವಾಯಿತು.[೨೦] ತೀವ್ರ ಒತ್ತಡದ ಪ್ರೀಮಿಯರ್‌ ಲೀಗ್‌ ಕ್ರೀಡಾಋತು ಮುಗಿದ ತಕ್ಷಣ, ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವು ಅಂತಿಮ ದಿನದಲ್ಲಿ ಟೊಟ್ಟೆನ್‌ಹ್ಯಾಮ್‌ ಹಾಟ್‌ಸ್ಪರ್‌ನ್ನು ೨–೧ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದಿತು. ಆ ಸಮಯದಲ್ಲಿ ಅರ್ಸೆನಲ್‌ ೧–೦ ಅಂತರದಲ್ಲಿ ಆಸ್ಟನ್‌ ವಿಲ್ಲಾ ತಂಡವನ್ನು ಸೋಲಿಸಿತ್ತು.[೨೧] ಪ್ರೀಮಿಯರ್‌ ಲೀಗ್‌ ಗೆದ್ದಿದ್ದು ಟ್ರಿಬಲ್‌ನ ಮೊದಲ ಭಾಗವಾಗಿತ್ತು. ಇದನ್ನು ವ್ಯವಸ್ಥಾಪಕರಾಗಿದ್ದ ಅಲೆಕ್ಸ್‌ ಫರ್ಗ್ಯೂಸನ್‌ರವರು ತುಂಬಾ ಕಠಿಣವಾಗಿತ್ತು ಎಂದು ವಿವರಿಸುತ್ತಾರೆ.[೨೧] FA ಕಪ್‌ನ ಅಂತಿಮ ಪಂದ್ಯದಲ್ಲಿ ಯುನೈಟೆಡ್‌ ತಂಡವು ನ್ಯೂಕ್ಯಾಸಲ್‌ ಯುನೈಟೆಡ್‌ ತಂಡವನ್ನು ಎದುರಿಸಿತ್ತು. ಟೆಡ್ಡಿ ಷೆರಿಂಗ್‌ಹ್ಯಾಮ್‌ ಮತ್ತು ಪೌಲ್‌ ಷೋಲ್ಸ್‌ರವರು ಗಳಿಸಿದ ಗೋಲುಗಳೊಂದಿಗೆ ೨-೦ ಅಂತರದಲ್ಲಿ ತಂಡ ಗೆದ್ದಿತು.[೨೨] ಆ ಅವಧಿಯ ಕೊನೆಯ ಪಂದ್ಯವಾದ 1999 UEFA ಚಾಂಪಿಯನ್ಸ್‌ ಲೀಗ್‌ ಅಂತಿಮ ಪಂದ್ಯದಲ್ಲಿ ಅವರು ಬೇಯರ್ನ್‌ ಮ್ಯುನಿಚ್‌ ತಂಡವನ್ನು ಸೋಲಿಸಿದರು. ಗಾಯಗೊಂಡ ಸಮಯದಲ್ಲಿ ಒಂದು ಗೋಲು ಹಿಂದಿದ್ದ ತಂಡ ನಂತರ ಎರಡು ಗೋಲ್‌ಗಳನ್ನು ಗಳಿಸಿ ೨-೧ ಅಂತರದಲ್ಲಿ ಗೆದ್ದು ಹಿಂದೆಂದೂ ಕಾಣದ ರೀತಿಯಲ್ಲಿ ವಿಜಯ ಸಾಧಿಸಿ ಗೆಲುವಿನ ಲಯವನ್ನು ಕಂಡುಕೊಂಡಿತು.[೨೦] ಫರ್ಗ್ಯೂಸನ್‌ರವರು ಫುಟ್‌ಬಾಲ್‌ಗೆ ತಮ್ಮ ಸೇವೆಗಳಿಗಾಗಿ ನೈಟ್‌ ಪದವಿ ಪಡೆದರು.[೨೩] ಟೋಕಿಯೊದಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್‌ ಕಪ್‌ನಲ್ಲಿ ಪಲ್ಮೀರಾಸ್‌ ತಂಡವನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌ ೧–೦ ಅಂತರದಲ್ಲಿ ಸೋಲಿಸುವುದರೊಂದಿಗೆ ದಾಖಲೆ ವರ್ಷವನ್ನು ಮುಕ್ತಾಯಗೊಳಿಸಿದರು.[೨೪]

ಟ್ರಿಬಲ್‌ನ ನಂತರ (೧೯೯೯–ಇಲ್ಲಿಯವರೆಗೆ)[ಬದಲಾಯಿಸಿ]

ಯುನೈಟೆಡ್‌ ೨೦೦೦ ಮತ್ತು ೨೦೦೧ರಲ್ಲಿ ಲೀಗ್‌ ಪಂದ್ಯವನ್ನು ಗೆದ್ದಿತು. ಆದರೆ ಕ್ಲಬ್‌ ಯುರೋಪಿಯನ್‌ ಕಪ್‌ನ್ನು ಉಳಿಸಿಕೊಳ್ಳಲು ವಿಫಲವಾದ ಕಾರಣ ಮಾಧ್ಯಮಗಳು ಆ ಕ್ರೀಡಾಋತುವನ್ನು ಕ್ಲಬ್‌ನ ಪಾಲಿಗೆ ವಿಫಲತೆಗಳ ಅವಧಿ ಎಂದು ಬಣ್ಣಿಸಿದರು. ೨೦೦೦ರಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ ಪ್ರಮುಖ ಯುರೋಪಿಯನ್‌ ಫುಟ್‌ಬಾಲ್‌ ಕ್ಲಬ್‌ಗಳ ಸಮೂಹ G-೧೪ರ ೧೪ ಸ್ಥಾಪಕ ಸದಸ್ಯರಲ್ಲಿ ಒಂದಾಯಿತು.[೨೫] ಕ್ಲಬ್‌ ಬ್ರೆಜಿಲ್‌ನಲ್ಲಿ ನಡೆಯಲಿದ್ದ FIFA ಕ್ಲಬ್‌ ವಿಶ್ವ ಚಾಂಪಿಯನ್‌ಶಿಪ್‌ ಆರಂಭಿಕ ಪಂದ್ಯದಲ್ಲಿ ಸ್ಪರ್ಧಿಸುವುದಕ್ಕಾಗಿ ೧೯೯೯–೨೦೦೦ರ FA ಕಪ್‌ನಲ್ಲಿ ಭಾಗವಹಿಸಲು FA, UEFA ಮತ್ತು ಇಂಗ್ಲೆಂಡ್‌ ೨೦೦೬ ವಿಶ್ವ ಕಪ್‌ ಬಿಡ್‌ ಮಂಡಳಿಯಿಂದ ಬಂದಿರುವ ಒತ್ತಡವನ್ನು ತಿಳಿಸಿ ನಿರಾಕರಿಸಿತು. ಯುರೋಪ್‌ನಲ್ಲಿ ತಂಡವನ್ನು ಸೋಲಿಸಲು ಕಠಿಣವಾಗುವಂತೆ ಫರ್ಗ್ಯೂಸನ್‌ರವರು ಹೆಚ್ಚಿನ ರಕ್ಷಣಾತ್ಮಕ ತಂತ್ರಗಳನ್ನು ಆಟದಲ್ಲಿ ಸೇರಿಸಿಕೊಂಡಿದ್ದರು. ಆದರೆ ಆ ತಂತ್ರಗಳು ಫಲಿಸದೆ ಯುನೈಟೆಡ್‌ ತಂಡವು 2001–02 ಪ್ರೀಮಿಯರ್‌ ಲೀಗ್‌ನ ಕ್ರೀಡಾಋತುವಿನಲ್ಲಿ ಮೂರನೆಯ ಸ್ಥಾನವನ್ನು ಗಳಿಸಲಷ್ಟೇ ಸಫಲವಾಯಿತು. ಕ್ಲಬ್‌ ಮುಂದಿನ ಕ್ರೀಡಾಋತುವನ್ನು (2002–03) ಉತ್ತಮವಾಗಿ ಆರಂಭಿಸಿ ಲೀಗ್‌ನ್ನು ತನ್ನದಾಗಿಸಿಕೊಂಡಿತು. ಆದರೆ ಮಾದಕ ದ್ರವ್ಯ ಪರೀಕ್ಷೆಯಿಂದ ತಪ್ಪಿಸಿಕೊಂಡಿದುದಕ್ಕಾಗಿ ರಿಯೊ ಫೆರ್ಡಿನಾಂಡ್‌ರವರು ಎಂಟು ತಿಂಗಳ ವಿವಾದಾತ್ಮಕ ಅಮಾನತಿನಲ್ಲಿದ್ದ ಕಾರಣ ತಂಡದ ಪ್ರದರ್ಶನವು ನಂತರದ ದಿನಗಳಲ್ಲಿ ಇಳಿಮುಖವಾಗುತ್ತಾ ಹೋಯಿತು. ತಂಡವು 2004ರ FA ಕಪ್‌ನ ಗೆಲುವಿನ ಹಾದಿಯಲ್ಲಿ ಅರ್ಸೆನಲ್‌ (ಆ ಕ್ರೀಡಾಋತುವಿನ ಅಂತಿಮ ಲೀಗ್‌ ವಿಜೇತರು) ತಂಡವನ್ನು ಸೋಲಿಸಿ, ಅಂತಿಮ ಪಂದ್ಯದಲ್ಲಿ ಮಿಲ್‌ವಾಲ್‌ ತಂಡವನ್ನು ಸೋಲಿಸಿ ಕಪ್‌ನ್ನು ಗೆದ್ದಿತು.

2004–05ರ ಕ್ರೀಡಾಋತುವಿನಲ್ಲಿ ತಂಡವು ಸ್ಟ್ರೈಕರ್‌ ರುಡ್‌ ವಾನ್‌ ನಿಸ್ಟೆಲ್ರೂಯ್‌ರವರು ಗಾಯಗೊಂಡ ಕಾರಣ ಹೆಚ್ಚಿನ ಗೋಲುಗಳನ್ನು ಗಳಿಸಲು ವಿಫಲವಾಯಿತು ಮತ್ತು ಆ ಕ್ರೀಡಾಋತುವಿನಲ್ಲಿ ಯುನೈಟೆಡ್‌ ಟ್ರೋಫಿಯಿಲ್ಲದೆ, ಮೂರನೆಯ ಸ್ಥಾನ ಗಳಿಸುವ ಮೂಲಕ ತೃಪ್ತಿಗೊಂಡಿತು. ಇದೇ ಸಮಯದಲ್ಲಿ ೧೨೦ ನಿಮಿಷಗಳಲ್ಲಿ ಯಾವುದೇ ಗೋಲುಗಳಿಲ್ಲದೆ ಪಂದ್ಯ ಸರಿಸಮವಾದ ನಂತರ ಪೆನಾಲ್ಟಿಗಳಲ್ಲಿ ಅರ್ಸೆನಲ್‌ ತಂಡ ಯುನೈಟೆಡ್‌ನ್ನು ಸೋಲಿಸಿದ್ದರಿಂದ FA ಕಪ್‌ ಸಹ ಕೈತಪ್ಪಿ ಹೋಯಿತು. ಅದೇ ಸಮಯದಲ್ಲಿ ಮೈದಾನದ ಹೊರಗೆ ಕ್ಲಬ್‌ನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮಾತು ಕೇಳಿ ಬರುತಿತ್ತು. ಹಾಗೆಯೇ ೧೨ ಮೇ ೨೦೦೫ರಲ್ಲಿ ಅಮೆರಿಕಾದ ವ್ಯಾಪಾರಸ್ಥ ಮಾಲ್ಕೊಲ್ಮ್‌ ಗ್ಲೇಜರ್‌ ಸುಮಾರು £೮೦೦ ದಶಲಕ್ಷ (ಆಗಿನ ಸುಮಾರು $೧.೫ ಶತಕೋಟಿ) ಮೌಲ್ಯಕ್ಕೆ ತಮ್ಮ ಬಂಡವಾಳ ಸಂಸ್ಥೆಯಾದ ರೆಡ್‌ ಫುಟ್‌ಬಾಲ್‌ Ltd. ಮೂಲಕ ಕ್ಲಬ್‌ನ [[ಮಾಲ್‌ಕಾಲ್ಮ್‌ ಗ್ಲೇಜರ್‌ರ ಮ್ಯಾಂಚೆಸ್ಟರ್‌ ಯುನೈಟೆಡ್‌ನ

ಸ್ವಾಧೀನ|ಬಹುಪಾಲ]]ನ್ನು ಸ್ವಾಧೀನಪಡಿಸಿಕೊಂಡರು.[೨೬][೨೭] ಮೇ ೧೬ರಂದು ಅವರು ಕ್ಲಬ್‌ನಲ್ಲಿ ತಮ್ಮ ಪಾಲನ್ನು ೭೫%ಕ್ಕೆ ಹೆಚ್ಚಿಸಿ, ಷೇರು ವಿನಿಮಯ ಕೇಂದ್ರದಿಂದ ಕ್ಲಬ್‌ನ ಹೆಸರನ್ನು ತೆಗೆಸಿದರು. ಹೀಗೆ ೨೦ ದಿನದೊಳಗೆ ತಮ್ಮ ಆಶಯವನ್ನು ಘೋಷಿಸಿ ಕ್ಲಬ್‌ನ್ನು ಮತ್ತೆ ಖಾಸಗಿಗೊಳಿಸಿದರು.[೨೭] ಜೂನ್‌ ೮ರಂದು ಗ್ಲೇಜರ್‌ರವರು ತಮ್ಮ ಮಕ್ಕಳನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌ ಮಂಡಳಿಯ ಕಾರ್ಯಕಾರಿ ನಿರ್ದೇಶಕರಾಗಿ ನೇಮಿಸಿದರು.[೨೮]

ತಂಡದ ಹಲವು ಸಹ ಆಟಗಾರರ ಸಾರ್ವಜನಿಕ ದೂಷಣೆಯ ನಂತರ ಮಿಡ್‌ಫೀಲ್ಡರ್‌ ಆದ ರಾಯ್‌ ಕೀನೆ‌ ಯುನೈಟೆಡ್‌ನ್ನು ತ್ಯಜಿಸಿ ಸೆಲ್ಟಿಕ್‌ ತಂಡವನ್ನು ಸೇರಿದ್ದರಿಂದ, ತಂಡವು 2005–06ರ ಕ್ರೀಡಾಋತುವಿನಲ್ಲಿ ಕಳಪೆ ಪ್ರಾರಂಭವನ್ನು ಕಂಡಿತು. ಕ್ಲಬ್‌ ಬೆನ್‌ಫಿಕಾ ತಂಡದಿಂದ ಸೋತ ನಂತರ ದಶಕದಲ್ಲಿಯೇ ಮೊದಲ ಬಾರಿಗೆ UEFA ಚಾಂಪಿಯನ್ಸ್‌ ಲೀಗ್‌ನ ನಾಕ್‌ಔಟ್‌ ಹಂತಕ್ಕೆ ಹೋಗಲು ವಿಫಲವಾಯಿತು. ಈ ಅವಧಿಯಲ್ಲಿ ಗೇಬ್ರಿಯಲ್‌ ಹೇಯ್ನ್‌ಝ್‌, ಅಲಾನ್‌ ಸ್ಮಿತ್‌, ರಾನ್‌ ಗಿಗ್ಸ್‌ ಮತ್ತು ಪೌಲ್‌ ಷೋಲ್ಸ್‌ರವರಂತಹ ಪ್ರಮುಖ ಆಟಗಾರರು ಗಾಯಾಳುಗಳಾಗಿದ್ದುದು ತಂಡಕ್ಕೆ ದೊಡ್ಡ ಹೊಡೆತ ಬಿತ್ತು. ಅಂತಿಮ ಪಂದ್ಯದಲ್ಲಿ ೪-೦ ಅಂತರದಲ್ಲಿ ಹೊಸದಾಗಿ ರಚನೆಗೊಂಡ ನೆರೆಯ ತಂಡ ವಿಗನ್‌ ಅಥ್ಲೆಟಿಕ್‌ನ್ನು ಸೋಲಿಸುವುದರೊಂದಿಗೆ ೨೦೦೬ರ ಲೀಗ್‌ ಕಪ್‌ನ ಗೆಲುವು, ಸತತ ಎರಡು ಕ್ರೀಡಾಋತುಗಳಲ್ಲಿ ಕಪ್‌ಯಿಲ್ಲದಿರುವ ೧೭ ವರ್ಷದ ಹಿಂದಿನ ನಿರಾಶೆ ಮರುಕಳಿಸದಂತೆ ತಡೆಯಿತು. ಯುನೈಟೆಡ್‌ ಎರಡನೆಯ ಸ್ಥಾನ ಮತ್ತು ಕ್ರೀಡಾಋತುವಿನ ಕೊನೆಯ ದಿನದಲ್ಲಿ ಚಾರ್ಲ್ಟನ್‌ ಅಥ್ಲೆಟಿಕ್‌ನ್ನು ೪–೦ ಅಂತರದಲ್ಲಿ ಸೋಲಿಸುವುದರ ಮೂಲಕ ಚಾಂಪಿಯನ್ಸ್‌ ಲೀಗ್‌ನ ಅರ್ಹತೆಯನ್ನು ಖಾತ್ರಿಪಡಿಸಿಕೊಂಡರು. ೨೦೦೫–೦೬ರ ಕ್ರೀಡಾಋತುವಿನ ಕೊನೆಯಲ್ಲಿ ಯುನೈಟೆಡ್‌ನ ಪ್ರಮುಖ ಸ್ಟ್ರೈಕರ್‌ಗಳಲ್ಲಿ ಒಬ್ಬರಾದ ರುಡ್‌ ವಾನ್‌ ನಿಸ್ಟೆಲ್ರೂಯ್‌ರವರು ಅಲೆಕ್ಸ್‌ ಫರ್ಗ್ಯೂಸನ್‌ರೊಂದಿಗೆ ಜಗಳ ಮಾಡಿಕೊಂಡು ಕ್ಲಬ್‌ನ್ನು ಬಿಟ್ಟು ರಿಯಲ್‌ ಮ್ಯಾಡ್ರಿಡ್‌ನ್ನು ಸೇರಿದರು.[೨೯]

೨೦೦೬ರ ಜುಲೈನಲ್ಲಿ ಕ್ಲಬ್‌ ನವೀಕೃತ ಹಣಕಾಸು ಪ್ಯಾಕೇಜ್‌ನ್ನು ಪ್ರಕಟಿಸಿತು. ಅದರ ಒಟ್ಟು ಮೊತ್ತ £೬೬೦ ದಶಲಕ್ಷ. ಅದರಿಂದ ಬರುವ ವಾರ್ಷಿಕ ಬಡ್ಡಿ £೬೨ ದಶಲಕ್ಷ ಆಗಿತ್ತು.[೩೦] ಹೊಸ ಹಣಕಾಸು ಯೋಜನೆಯಿಂದಾಗಿ ವಾರ್ಷಿಕ ಪಾವತಿಯಲ್ಲಿ ೩೦% ಇಳಿಕೆಯಾಯಿತು.[೩೧] 2006–07ರ ಕ್ರೀಡಾಋತುವಿನಲ್ಲಿ ಯುನೈಟೆಡ್‌ ೧೯೯೦ರ ದಶಕದ ಕೊನೆಯಲ್ಲಿ ತಂಡದ ಯಶಸ್ಸಿಗೆ ಮೂಲತತ್ವವಾಗಿದ್ದ ತನ್ನ ಹಿಂದಿನ ಆಕ್ರಮಣಕಾರಿ ಶೈಲಿಗೆ ಮರಳಿತು. ಇದರಿಂದಾಗಿ ತಂಡವು ೩೨ ಪಂದ್ಯಗಳಲ್ಲಿ ೨೦ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿ ಚೆಲ್ಸಿಯಾದೊಂದಿಗೆ ಎರಡನೆಯ ಸ್ಥಾನವನ್ನು ಹಂಚಿಕೊಂಡಿತು. ೨೦೦೭ರ ಜನವರಿಯಲ್ಲಿ , ಯುನೈಟೆಡ್‌ ಸ್ವಿಟ್ಜರ್ಲೆಂಡ್‌ನ ಹೆಲ್ಸಿಂಗ್‌ಬೊರ್ಗ್‌ನವರಾದ ಹೆನ್ರಿಕ್‌ ಲಾರ್ಸನ್‌‌ರೊಂದಿಗೆ ಎರಡು ತಿಂಗಳ ಕರಾರುಸಾಲದೊಂದಿಗೆ ಒಪ್ಪಂದ ಮಾಡಿಕೊಂಡಿತು. ಎರಡನೆಯ ಟ್ರಿಬಲ್‌ನ ವಿಶ್ವಾಸದೊಂದಿಗೆ ಚಾಂಪಿಯನ್ಸ್‌ ಲೀಗ್‌ನ ಸೆಮಿ-ಫೈನಲ್‌ನಲ್ಲಿ ಈ ಸ್ಟ್ರೈಕರ್‌ ಯುನೈಟೆಡ್‌ ಪರ ಪ್ರಮುಖ ಪಾತ್ರವನ್ನು ವಹಿಸಿದ್ದರು[೩೨]. ಆದರೂ ಸೆಮಿ-ಫೈನಲ್‌ನಲ್ಲಿ ಯುನೈಟೆಡ್‌ ಮಿಲನ್‌ ತಂಡದ ಎದುರು ಒಟ್ಟಾಗಿ ೩–೫ ಅಂತರದಲ್ಲಿ ಸೋತಿತು.[೩೩] ಕೊನೆಯ ಪ್ರಶಸ್ತಿ ಗೆದ್ದು ನಾಲ್ಕು ವರ್ಷಗಳ ನಂತರ ಚೆಲ್ಸಿಯಾ ತಂಡ ಅರ್ಸೆನಲ್‌ ತಂಡದೊಂದಿಗೆ ಪಂದ್ಯ ಸರಿಸಮ ಮಾಡಿಕೊಂಡ ನಂತರ ೬ ಮೇ ೨೦೦೭ರಲ್ಲಿ ಪ್ರೀಮಿಯರ್‌ ಲೀಗ್‌ ಪ್ರಶಸ್ತಿಯನ್ನು ಮತ್ತೆ ಗೆದ್ದರು. ಎರಡು ಪಂದ್ಯಗಳಿರುವಾಗಲೇ ಬ್ಲೂ ತಂಡಕ್ಕಿಂತ ಏಳು ಅಂಕಗಳ ಹಿಂದಿದ್ದು, ಹಿಂದಿನ ದಿನ ಮ್ಯಾಂಚೆಸ್ಟರ್‌ ಡರ್ಬಿಯಲ್ಲಿ ನಡೆದ ಯುನೈಟೆಡ್‌ನ ೧–೦ ಅಂತರದ ವಿಜಯದಿಂದ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದ ೧೫ ಕ್ರೀಡಾಋತುಗಳಲ್ಲಿ ಒಂಬತ್ತನೆಯ ಪ್ರೀಮಿಯರ್‌ ಲೀಗ್‌ ಪ್ರಶಸ್ತಿಯನ್ನಾಗಿಸಿಕೊಂಡಿತ್ತು. ಆದರೂ, ಇಂಗ್ಲೆಂಡ್‌ನ ಹಳೆಯ ಕ್ರೀಡಾಂಗಣವನ್ನು ಏಳು ವರ್ಷದ ಹಿಂದೆ ನೆಲಸಮ ಮಾಡಿದ ಕಾರಣ ಹೊಸ ವೆಂಬ್ಲಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಮೊದಲ FA ಕಪ್‌ ಅಂತಿಮ ಪಂದ್ಯ ಹೆಚ್ಚಿನ ಸಮಯದಲ್ಲಿ ಚೆಲ್ಸಿಯಾ ತಂಡವು ಯುನೈಟೆಡ್‌ನ್ನು ೧-೦ ಅಂತರದಿಂದ ಸೋಲಿಸಿದ್ದರಿಂದ ಅನಿರೀಕ್ಷಿತ ನಾಲ್ಕನೆಯ ಡಬಲ್‌ ಪಂದ್ಯವು ಸಾಧ್ಯವಾಗಲಿಲ್ಲ.

2007–08ರ ಕ್ರೀಡಾಋತುವಿನಲ್ಲಿ ಕಳಪೆ ಪ್ರಾರಂಭವನ್ನು ಹೊರತುಪಡಿಸಿ, ಮೊದಲ ಮೂರು ಪಂದ್ಯಗಳ ನಂತರ ಪ್ರೀಮಿಯರ್‌ ಲೀಗ್‌ನಲ್ಲಿ ತಮ್ಮನ್ನು ೧೭ನೆಯ ಸ್ಥಾನದಲ್ಲಿ ಕಂಡುಕೊಳ್ಳುವುದರ ಮೂಲಕ ಯುನೈಟೆಡ್‌ ಯುರೋಪಿಯನ್‌ ಡಬಲ್‌ನ್ನು ಯಶಸ್ವಿಯಾಗಿ ಪೂರೈಸಿತು. ಆದರೂ ೧೧ ಮೇ ೨೦೦೮ರಲ್ಲಿ ಯುನೈಟೆಡ್‌ವು ವಿಗಾನ್‌ ಅಥ್ಲೆಟಿಕ್‌ ತಂಡವನ್ನು ಸೋಲಿಸುವುದರ ಮೂಲಕ ಪ್ರೀಮಿಯರ್‌ ಲೀಗ್‌ ಪ್ರಶಸ್ತಿಯನ್ನು ಉಳಿಸಿಕೊಂಡಿತು. ಪ್ರಶಸ್ತಿಯ ಮತ್ತೊಂದು ಸ್ಪರ್ಧಿ ಚೆಲ್ಸಿಯಾ ತಂಡವು ಬೋಲ್ಟಾನ್‌ ವಾಂಡರರ್ಸ್‌ನೊಂದಿಗೆ ಆಟವನ್ನು ಸರಿಸಮ ಮಾಡಿಕೊಂಡು ಯುನೈಟೆಡ್‌ ಎರಡು ಅಂಕಗಳೊಂದಿಗೆ ಕ್ರೀಡಾಋತುವನ್ನು ಪೂರ್ಣಗೊಳಿಸಿತು. ಕ್ಲಬ್‌ ತನ್ನ ಇತಿಹಾಸದಲ್ಲಿ ಯುರೋಪಿಯನ್‌ ಕಪ್‌ ಅಂತಿಮ ಪಂದ್ಯವನ್ನು ಮೂರನೆಯ ಬಾರಿ ತಲುಪಿತು. ಬಾರ್ಸೆಲೋನಾ ಮತ್ತು ರೋಮ್‌ನಂತಹ ಕ್ಲಬ್‌ಗಳನ್ನು ಸೋಲಿಸುವುದರ ಮೂಲಕ ತನ್ನ ಅಂತಿಮ ಪಂದ್ಯಕ್ಕೆ ಹಾದಿಯನ್ನು ಸುಗಮಗೊಳಿಸಿತು. ೨೧ ಮೇ ೨೦೦೮ರಂದು ಮಾಸ್ಕೋದ ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದ ಚೆಲ್ಸಿಯಾ‌ ವಿರುದ್ಧದ ಪಂದ್ಯದಲ್ಲಿ ಸಾಮಾನ್ಯ ಅವಧಿಯಲ್ಲಿ ೧-೧ರ ಅಂತರದಲ್ಲಿ ಪಂದ್ಯ ಸರಿಸಮವಾದ ನಂತರ ಪೆನಾಲ್ಟಿಗಳ ಮೂಲಕ ೬–೫ ಅಂತರದಲ್ಲಿ ಗೆದ್ದಿತು. ಈ ವಿಜಯದೊಂದಿಗೆ ಅವರು ತಮ್ಮ ಮೂರನೆಯ ಯುರೋಪಿಯನ್‌ ಕಪ್‌ ಪ್ರಶಸ್ತಿಯನ್ನು ಗೆದ್ದು, ಯಾವುದೇ ಯುರೋಪಿಯನ್‌ ಅಂತಿಮ ಪಂದ್ಯದಲ್ಲಿ ಸೋಲದೆ ತಮ್ಮ ದಾಖಲೆಯನ್ನು ಇನ್ನಷ್ಟು ದೃಢಗೊಳಿಸಿದರು. ಏಕಕಾಲಿಕವಾಗಿ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡ ತಮ್ಮ ಮೊದಲ ಲೀಗ್‌ ಪ್ರಶಸ್ತಿ ಗೆದ್ದು ೧೦೦ನೆಯ ವರ್ಷ, ವಿಮಾನ ದುರಂತ ಸಂಭವಿಸಿ ೫೦ ವರ್ಷಗಳು ಮತ್ತು ಮ್ಯಾಂಚೆಸ್ಟರ್‌ ಯುನೈಟೆಡ್‌ ಮೊದಲು ಇಂಗ್ಲೀಷ್‌ ಪರ ಯುರೋಪಿಯನ್‌ ಕಪ್‌ ಗೆದ್ದು ೪೦ ವರ್ಷಗಳಾಗಿ ಈ ಕ್ರೀಡಾಋತು ಗುರುತಾಯಿತು. ಯುರೋಪಿಯನ್‌ ಕಪ್‌ ಅಂತಿಮ ಪಂದ್ಯದಲ್ಲಿ ಕ್ಲಬ್‌ನ ಪರ ರಾನ್‌ ಗಿಗ್ಸ್‌ರವರ ಬಾಬ್ಬಿ ಚಾರ್ಲ್ಟನ್‌ರವರ ಕ್ಲಬ್‌ ಪರ ಪ್ರದರ್ಶನದ ದಾಖಲೆಯನ್ನು ಮುರಿದು ತಮ್ಮ ೭೫೯ನೆಯ ಪ್ರದರ್ಶನದೊಂದಿಗೆ ಹೊಸ ದಾಖಲೆಯನ್ನು ಬರೆದರು.

2008–09ರ ಕ್ರೀಡಾಋತು ಪ್ರಾರಂಭವಾಗುವ ಮೊದಲು 2008 FA ಸಮುದಾಯ ಪಾರಿತೋಷಕ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ, ಪ್ರಶಸ್ತಿಯನ್ನು ಗೆದ್ದುಕೊಂಡಿತು. 2007-08 FA ಕಪ್‌ ವಿಜೇತರಾದ ಪೋರ್ಟ್ಸ್‌ಮೌತ್‌ ತಂಡವನ್ನು ಯುನೈಟೆಡ್‌ ೯೦ ನಿಮಿಷದ ಆಟದಲ್ಲಿ ೦-೦ ಅಂತರದಲ್ಲಿ ಆಟ ಕೊನೆಗೊಂಡ ನಂತರ ಪೆನಾಲ್ಟಿಯಲ್ಲಿ ೩-೧ ಅಂತರದಿಂದ ಸೋಲಿಸಿತು. ೨೧ ಡಿಸೆಂಬರ್‌ ೨೦೦೮ರಲ್ಲಿ ಜಪಾನ್‌ನಲ್ಲಿ ನಡೆದ 2008 FIFA ಕ್ಲಬ್‌ ವಿಶ್ವ ಕಪ್‌ ಅಂತಿಮ ಪಂದ್ಯದಲ್ಲಿ ಎಕ್ಯುಡಾರ್‌‌LDU ಕ್ವಿಟೊ ತಂಡವನ್ನು ೧-೦ ಅಂತರದಲ್ಲಿ ಸೋಲಿಸುವುದರ ಮೂಲಕ ಯುನೈಟೆಡ್‌ ತನ್ನ ಟ್ರೋಫಿಗಳ ಸಮೂಹಕ್ಕೆ ಹೆಚ್ಚಿನ ಬೆಳ್ಳಿ ಪದಕಗಳನ್ನು ಸೇರಿಸಿತು. ನಂತರ ಎರಡು ತಿಂಗಳು ನಂತರ ಅವರು ಟಾಟ್ಟೆನ್‌ಹ್ಯಾಮ್‌ ಹಾಟ್‌ಸ್ಪರ್‌ ತಂಡವನ್ನು ಪೆನಾಲ್ಟಿಯಲ್ಲಿ ೪-೧ ಅಂತರದಲ್ಲಿ ಸೋಲಿಸಿ ತಮ್ಮ ಟ್ರೋಫಿಗಳ ಸಮೂಹಕ್ಕೆ 2009 ಲೀಗ್‌ ಕಪ್‌ನ್ನು ಸೇರಿಸಿದರು.[೩೪] ಮೇ ೧೬ರಲ್ಲಿ ಯುನೈಟೆಡ್ ತಮ್ಮದೇ ನೆಲದಲ್ಲಿ ‌ಅರ್ಸೆನಲ್‌ ತಂಡವನ್ನು ೦-೦ಯಿಂದ ಸಮ ಮಾಡಿಕೊಳ್ಳುವುದರೊಂದಿಗೆ ಎರಡನೆಯ ಬಾರಿ ನಿರಂತರ ಮೂರು ಪ್ರೀಮಿಯರ್‌ ಲೀಗ್‌ ಪ್ರಶಸ್ತಿಯನ್ನು ಗೆದ್ದು ತನ್ನ ೧೧ನೆಯ ಪ್ರೀಮಿಯರ್‌ ಲೀಗ್‌ ಪ್ರಶಸ್ತಿ ಮತ್ತು ಒಟ್ಟು ೧೮ನೆಯ ಲೀಗ್ ಪ್ರಶಸ್ತಿಯನ್ನು ಖಾತ್ರಿಗೊಳಿಸಿತು.[೩೫] ೨೭ ಮೇ ೨೦೦೯ರಲ್ಲಿ ರೋಮ್‌ನಲ್ಲಿ ನಡೆದ ಚಾಂಪಿಯನ್ಸ್‌ ಲೀಗ್‌ ಅಂತಿಮ ಪಂದ್ಯದಲ್ಲಿ ಸ್ಯಾಮ್ಯುಲ್‌ ಎಟೊ ಮತ್ತು ಲಿಯೊನೆಲ್‌ ಮೆಸ್ಸಿರವರು ಗಳಿಸಿದ ಗೋಲುಗಳಿಂದ ಬಾರ್ಸೆಲೋನಾ ತಂಡವು ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು ೨-೦ ಅಂತರದಿಂದ ಸೋಲಿಸಿತು.[೩೬] ಕ್ಯಾರ್ಲೋಸ್‌ ಟೆವೆಜ್‌ರ ಸಾಲ ಕರಾರು ಜೂನ್‌ ೩೦ರಂದು ಕೊನೆಗೊಂಡಿತು ಮತ್ತು ಮಿಲಾನ್‌ಕಾಕಾರವರೊಂದಿಗೆ ರಿಯಲ್‌‌ ಮ್ಯಾಡ್ರಿಡ್‌ನಿಂದ ಮಾಡಿದ £೫೬ ದಶಲಕ್ಷದ ವಿಶ್ವ ವರ್ಗಾವಣೆ ದಾಖಲೆಯನ್ನು ಮುರಿದು ಕ್ರಿಸ್ಟಿನೊ ರೊನಾಲ್ಡೊ ರಿಯಲ್‌‌ ಮ್ಯಾಡ್ರಿಡ್‌ಗೆ £೮೦ ದಶಲಕ್ಷಕ್ಕೆ ಮಾರಾಟವಾಗಿದ್ದರು. ಹೀಗೆ ಆ ಇಬ್ಬರು ಆಟಗಾರರಿಗೆ ಚಾಂಪಿಯನ್ಸ್‌ ಲೀಗ್‌ ಅಂತಿಮ ಪಂದ್ಯವು ಕೊನೆಯ ಪಂದ್ಯವಾಗಿತ್ತು. ಆದರೂ ಅದಕ್ಕೆ ಪ್ರತ್ಯುತ್ತರವಾಗಿ ಯುನೈಟೆಡ್‌ ಮೈಕೆಲ್‌ ಒವೆನ್‌ರವರನ್ನು ಉಚಿತ ವರ್ಗಾವಣೆ, ಆಂಟೊನಿಯೊ ವೆಲೆನ್‌ಸಿಯಾರವರಿಗೆ £೧೭ ದಶಲಕ್ಷ ಮತ್ತು ಗೇಬ್ರಿಯಲ್‌ ಒಬರ್ಟಾನ್‌ರಿಗೆ £೩ ದಶಲಕ್ಷ ನೀಡಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿತು.

ಕ್ಲಬ್‌ನ ಚಿಹ್ನೆ ಮತ್ತು ಬಣ್ಣಗಳು[ಬದಲಾಯಿಸಿ]

ಚಿತ್ರ:Manchester United Badge 1973-1998.png
1998ರಲ್ಲಿನ ಇತ್ತೀಚಿನ ನವೀಕರಣದವರೆಗಿನ ಮ್ಯಾಂಚೆಸ್ಟರ್‌ ಯುನೈಟೆಡ್‌ ಲಾಂಛನ

ನ್ಯೂಟನ್‌ ಹೀತ್‌ ತಂಡದಲ್ಲಿದ್ದ ಸಮಯದಲ್ಲಿ ತಂಡವು ಹಲವಾರು ಬಣ್ಣಗಳಲ್ಲಿ ಆಡಿತು. ಅವುಗಳಲ್ಲಿ ೧೮೭೮ರಿಂದ ೧೮೯೨ವರೆಗೆ ಮತ್ತು ೧೮೯೪ರಿಂದ ೧೮೯೬ರ ನಡುವೆ ಧರಿಸಿದ ಹಳದಿ ಮತ್ತು ಹಸಿರು ಬಣ್ಣದ ಅರೆ ತೋಳಿನ ಸಮವಸ್ತ್ರವು ಹೆಚ್ಚು ಗುರುತಿಸಲ್ಪಟ್ಟಿತು. ೧೯೯೦ರ ದಶಕದ ಆದಿಯಲ್ಲಿ ಈ ಉಡುಗೆಯು ಹೊರಗಿನ ಪಂದ್ಯಗಳ ಸಮವ‌ಸ್ತ್ರದಂತೆ ಮತ್ತೆ ಚಾಲ್ತಿಗೆ ಬಂದಿತು . ನ್ಯೂಟನ್‌ ಹೀತ್‌ಯವರು ಕೆಂಪು ಮತ್ತು ಬಿಳಿ ಕ್ವಾಟರ್ಡ್‌ ಅಂಗಿ (೧೮೯೨–೧೮೯೪) ಮತ್ತು ಸಾದಾ ಬಿಳಿ ಅಂಗಿಯಂತಹ (೧೮೯೬–೧೯೦೨) ಇತರ ಉಡುಪುಗಳನ್ನು ನೀಲಿ ಚೆಡ್ಡಿಯೊಂದಿಗೆ ಧರಿಸುತ್ತಿದ್ದರು.[೩೭] ೧೯೦೨ರಲ್ಲಿ ಹೆಸರು ಮ್ಯಾಂಚೆಸ್ಟರ್‌ ಯುನೈಟೆಡ್‌ಗೆ ಬದಲಾಗುವುದರೊಂದಿಗೆ ಕ್ಲಬ್‌ ಆ ಸಮಯದಲ್ಲಿ ಅತಿ ಹೆಚ್ಚು ಜನರು ಬಳಸುವ ಮಾನಕ ಬಣ್ಣಗಳಾಗಿ Man Utd(ಮ್ಯಾಂಚೆಸ್ಟರ್‌ ಯುನೈಟೆಡ್‌) ಹೋಮ್‌ ಕಿಟ್‌ ಆಗಿ ಪ್ರಮಾಣಿತ ಬಣ್ಣಗಳಾದ ಕೆಂಪು ಬಣ್ಣ ಜರ್ಸಿ, ಬಿಳಿ ಚೆಡ್ಡಿ ಮತ್ತು ಕಪ್ಪು ಕಾಲುಚೀಲಗಳನ್ನು ಬದಲಿಸಿತು. ಇದಕ್ಕೆ ಉಲ್ಲೇಖಾರ್ಹ ಅಪವಾದವೆಂದರೆ ತಂಡವು ಕೆಂಪು "V" ಹೆಗಲ ಪಟ್ಟಿ ಹೊಂದಿರುವ ಸಮವಸ್ತ್ರವನ್ನು ಬ್ರಿಸ್ಟಾಲ್‌ ಸಿಟಿಯ ವಿರುದ್ಧದ 1909 FA ಕಪ್‌ ಅಂತಿಮ ಪಂದ್ಯದಲ್ಲಿ ಧರಿಸಲಾಗಿತ್ತು.[೩೮] ಪೂರ್ಣ ಕೆಂಪು ಸಮವಸ್ತ್ರಗಳಿಗೆ ಮರಳುವ ಮೊದಲು ಯುನೈಟೆಡ್‌ ೧೯೨೦ರ ದಶಕದಲ್ಲಿ ಈ ವಿನ್ಯಾಸವನ್ನು ಮತ್ತೆ ಅಳವಡಿಸಿಕೊಂಡರು. ಹಾಗೆಯೇ ಓಲ್ಡ್‌ ಟ್ರ್ಯಾಫೋರ್ಡ್‌ನಲ್ಲಿ ಕ್ಲಬ್‌ನ ೧೦೦ನೆಯ ವರ್ಷವನ್ನು ಆಚರಿಸಲು 2009–10ರ ಅವಧಿಯಲ್ಲಿ ಇದನ್ನು ಸ್ಥಳೀಯ ಮತ್ತು ಹೊರಗಿನ ಕಿಟ್‌ಗಳಾಗಿ ಪರಿಗಣಿಸಲಾಗಿತ್ತು.[೩೯][೪೦]

ವಿದೇಶದಲ್ಲಿ ಆಟದ ಉಡುಪಾಗಿ ಸಾಮಾನ್ಯವಾಗಿ ಬಿಳಿ ಜರ್ಸಿಗಳೊಂದಿಗೆ ಕಪ್ಪು ಚೆಡ್ಡಿ ಮತ್ತು ಬಿಳಿ ಕಾಲುಚೀಲವನ್ನು ಧರಿಸುತ್ತಿದ್ದರು. ಆದರೆ ೧೯೦೩ರಿಂದ ೧೯೧೬ವರೆಗೆ ಆಗೊಮ್ಮೆ ಈಗೊಮ್ಮೆ ನೀಲಿ ಮತ್ತು ಬಿಳಿ ಗೆರೆಗಳನ್ನು ಹೊಂದಿರುವ ಸಮವಸ್ತ್ರವೂ ಸೇರಿದಂತೆ ಇತರ ಬಣ್ಣಗಳಾದ ಸಂಪೂರ್ಣ ಕಪ್ಪು ಉಡುಪನ್ನು ೧೯೯೪ ಮತ್ತು ೨೦೦೩ರಲ್ಲಿ ಮತ್ತು ೨೦೦೦ರಲ್ಲಿ ಬೆಳ್ಳಿ ಬಣ್ಣ ತಿಳಿಗೆರೆಯನ್ನು ಹೊಂದಿರುವ ಕಡುನೀಲಿ ಬಣ್ಣದ ಸಮವಸ್ತ್ರವನ್ನು ಬಳಸುತ್ತಿದ್ದರು. ಯನೈಟೆಡ್‌ನ ಹೊರಗಿನ ಕಿಟ್‌ಗಳು ೧೯೯೫–೯೬ರಿಂದ ಸಂಪೂರ್ಣ ಬೂದು ಬಣ್ಣವಾಗಿದ್ದು ಉಡುಪು ತುಂಬಾ ಕಡಿಮೆ ಸಮಯದಲ್ಲಿ ಮಾತ್ರವೇ ಬಳಕೆಯಲ್ಲಿದ್ದರೂ ಹೆಚ್ಚು ಜನಪ್ರಿಯ ಉಡುಪುಗಳಲ್ಲಿ ಒಂದಾಗಿತ್ತು. ಆ ಉಡುಪನ್ನು ಧರಿಸಿ ಒಂದೇ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗದ ಕಾರಣ ಆ ಬಣ್ಣವನ್ನು ಕೈಬಿಡಲಾಯಿತು. ಸೌತಂಪ್ಟನ್‌ ವಿರುದ್ಧದ ಪಂದ್ಯದ ಅರ್ಧ ಸಮಯದ ನಂತರ ಯುನೈಟೆಡ್‌ ೩–೦ ಅಂತರದಲ್ಲಿ ಹಿಂದಿತ್ತು. ತಂಡವು ನಂತರ ನೀಲಿ ಮತ್ತು ಬಿಳಿಯ ಥರ್ಡ್‌ ಕಿಟ್‌ಗೆ ಬದಲಾಯಿಸಿದರು. ಆದರೆ ಅಂತಿಮವಾಗಿ ೩–೧ ಅಂತರದಲ್ಲಿ ಸೋತಿತು. ಆಟಗಾರರ ಪ್ರಕಾರ ಬೂದು ಬಣ್ಣದ ಉಡುಪು ಉತ್ತಮವಾಗಿ ಗೋಚರಿಸದೆ ಇರುವುದರಿಂದ ಕಳಪೆ ಪ್ರದರ್ಶನಕ್ಕೆ ಕಾರಣವಾಗುವುದು.[೪೧][೪೨] ಇನ್ನೊಂದು ಜನಪ್ರಿಯ Man Utd ಹೊರಗಿನ ಕಿಟ್‌ ಕಪ್ಪು ತೋಳಿನ ಬಿಳಿ ಬಣ್ಣದ ಮತ್ತು ಒಂದೆಡೆ ಚಿನ್ನದ ಬಣ್ಣದ ಓರಣ, ಮತ್ತೊಂದೆಡೆ ಕಪ್ಪು ಬಣ್ಣದೊಂದಿಗೆ ಚಿನ್ನದ ಬಣ್ಣದ ಓರಣವನ್ನು ಹೊಂದಿರುವ ಒಳಹೊರಗೆ ಮಾಡಬಹುದಾಗಿದ್ದ ವ್ಯವಸ್ಥೆ ಹೊಂದಿತ್ತು. ನೈಕ್‌ಗೆ ಬದಲಾಯಿಸುವ ಮೊದಲು ಕ್ಲಬ್‌ಗೆ ಉಂಬ್ರೊಯಿಂದ ರಚಿಸಿದ ಕೊನೆಯ ಉಡುಪಾಗಿ ಇದನ್ನು ಬಿಡುಗಡಗೊಳಿಸಿದರು. ೧೦೦ ವರ್ಷದ ನೆನಪಿಗಾಗಿ ಕ್ಲಬ್‌ನ ಹೆಸರನ್ನು ನ್ಯೂಟನ್‌ ಹೀತ್‌ನಿಂದ ಮ್ಯಾಂಚೆಸ್ಟರ್‌ ಯುನೈಟೆಡ್‌ ಆಗಿ ಬದಲಾಯಿಸಲಾಯಿತು.

೧೯೬೮ ಯುರೋಪಿಯನ್‌ ಕಪ್‌ನ ವಿಜಯದ ಗೌರವಾರ್ಥವಾಗಿ ಯುನೈಟೆಡ್‌ ಸಾಂಪ್ರದಾಯಿಕ ಸಂಪೂರ್ಣ ನೀಲಿ ಬಣ್ಣದ ಉಡುಪನ್ನು ೧೯೬೮ರ ೪೦ನೆಯ ವಾರ್ಷಿಕೋತ್ಸವಕ್ಕಾಗಿ ಕ್ಲಬ್‌ನ ೨೦೦೮–೦೯ರ ಸಾಲಿನ ಥರ್ಡ್‌ ಕಿಟ್‌ನೊಂದಿಗೆ ಧರಿಸುತ್ತಿದ್ದರು. ಈ ನಿಯಮಕ್ಕೆ ಅಪವಾದ ಎಂಬಂತೆ ತಂಡವು ೧೯೭೦ರ ದಶಕದ ಪ್ರಾರಂಭದಲ್ಲಿ ಪ್ರಕಾಶಮಾನವಾದ ಹಳದಿ ಉಡುಪನ್ನು, ಈ ಹಿಂದೆ ನಿರ್ಧರಿಸಿದಂತೆ ೧೯೯೬ರಿಂದ ಕ್ರೀಡಾಭಿಮಾನಿಗಳ ನೆಚ್ಚಿನ ಉಡುಪಾಗಿ ಸಾಬೀತಾದ ನೀಲಿ ಮತ್ತು ಬಿಳಿ ಗೆರೆಗಳಿರುವ ಅಂಗಿಯನ್ನು ಮತ್ತು ೨೦೦೪ರಿಂದ ಕಪ್ಪು ಮತ್ತು ಕೆಂಪು ಉದ್ದಗೆರೆಯಿರುವ ಅಂಗಿಯನ್ನು ಧರಿಸಿತ್ತು. ಯುನೈಟೆಡ್‌‌ ತಂಡವು ತರಬೇತಿ ಸಮಯದಲ್ಲಿ ಧರಿಸುತ್ತಿದ್ದ ಥರ್ಡ್‌ ಕಿಟ್‌ನ್ನೇ ಈ ಹಿಂದೆ ಧರಿಸಿತ್ತು. ೧೯೯೮–೯೯ರ ಕ್ರೀಡಾಋತುವಿನಲ್ಲಿ ಸಂಪೂರ್ಣ ಕಪ್ಪು ಬಣ್ಣದ ಉಡುಪನ್ನು ಅಳವಡಿಸಿಕೊಂಡಿತು ಮತ್ತು ೨೦೦೧ರ ಸೌತಂಪ್ಟನ್‌ ಮತ್ತು PSV ಐಂಧೊವೆನ್‌ ವಿರುದ್ಧದ ಪಂದ್ಯಗಳಲ್ಲಿ ಕೆಂಗಂದು ಬಣ್ಣದ ಬದಿಯೊಂದಿಗೆ ಕಡು ನೀಲಿ ಬಣ್ಣ ಉಡುಪನ್ನು ಧರಿಸಿತ್ತು.

ಪ್ರಸ್ತುತ ಮ್ಯಾಂಚೆಸ್ಟರ್‌ ಯುನೈಟೆಡ್‌ನ ಸ್ವದೇಶದ ಆಟದ ಜರ್ಸಿಯು ಎದೆಯ ಮೇಲೆ ತಿಳಿಕಪ್ಪು ಬಣ್ಣದ ಷೆವ್ರನ್‌ ಹೊಂದಿರುವ ಕೆಂಪು ಜರ್ಸಿಯಾಗಿತ್ತು. ಕ್ಲಬ್‌ನ ಚಿಹ್ನೆಯು ಕಪ್ಪು ಪ್ರಶಸ್ತಿ ಫಲಕದ ಆಕಾರದಲ್ಲಿ Vಯ ಎಡಗಡೆಯಲ್ಲಿತ್ತು. ಬಲಗಡೆಯಲ್ಲಿರುವ ನೈಕ್‌ ಲೋಗೋ ಬಿಳಿ ಬಣ್ಣದಾಗಿತ್ತು. AIG ಲೋಗೋ ಸಹ ಬಿಳಿ ಬಣ್ಣದಲ್ಲಿತ್ತು. ೧೦೦ನೆಯ ವಾರ್ಷಿಕೋತ್ಸವದ ಗುರುತಿಗಾಗಿ ಕ್ಲಬ್‌ನ ಓಲ್ಡ್‌ ಟ್ರ್ಯಾಫೋರ್ಡ್‌ ಕ್ರೀಡಾಂಗಣದ ಉದ್ಘಾಟನೆಯ ಸಮಯದಲ್ಲಿ ಬದಿಯಲ್ಲಿ "೧೯೧೦ರಿಂದ ಕನಸುಗಳ ರಂಗಮಂದಿರ" ಎಂದು ಬರೆಯಲಾದ ಪಟ್ಟಿಯನ್ನು ಲಗತ್ತಿಸಲಾಯಿತು. ಬಿಳಿ ಬಣ್ಣದ ಎರಡು ಕಾಲುಗಳಲ್ಲಿ ಕೆಳಗಿನ ತನಕ ಕೆಂಪು ಪಟ್ಟಿಯಿರುವ ಚೆಡ್ಡಿ ಮತ್ತು ಕಣಕಾಲಿನ ಹಿಂಭಾಗ ಕೆಂಪು ಲಾಂಛನದೊಂದಿಗೆ ಕಪ್ಪು ಕಾಲುಚೀಲಗಳನ್ನು ಸ್ವದೇಶಿ ಆಟದ ಉಡುಪಾಗಿ ಧರಿಸಿದ್ದರು.[೩೯] ತೀರಾ ಇತ್ತೀಚಿನ ವಿದೇಶಿ ಕಿಟ್‌ ಸ್ವದೇಶಿ‌ ಕಿಟ್‌ನ ವಿನ್ಯಾಸವನ್ನೇ ಹೊಂದಿತ್ತು. ಆದರೆ ಎದೆಯ ಮೇಲೆ ನೀಲಿ ಲಾಂಛನದೊಂದಿಗೆ ಕಪ್ಪು ಬಣ್ಣದ್ದಾಗಿತ್ತು ಮತ್ತು ಕ್ಲಬ್‌ನ ಚಿಹ್ನೆಯು ನೀಲಿ ಪ್ರಶಸ್ತಿ ಫಲಕದ ಮೇಲೆ ಲಗತ್ತಿಸಲಾಗಿತ್ತು. ಸ್ವದೇಶಿ ಕಿಟ್‌ನಂತೆ ಪ್ರಾಯೋಜಕರ ಲೋಗೋಗಳೆರಡು ಬಿಳಿ ಬಣ್ಣದಲ್ಲಿತ್ತು. ಚೆಡ್ಡಿಯ ಕಪ್ಪು ಬಣ್ಣದಾಗಿದ್ದು ಕೆಳಗಡೆ ನೀಲಿ ಪಟ್ಟಿಯಿದ್ದು ಕಾಲುಚೀಲಗಳು ಕಪ್ಪು ಬಣ್ಣದಾಗಿದ್ದು ಕಣಕಾಲಿನ ಹಿಂಭಾಗದಲ್ಲಿ ನೀಲಿ ಲಾಂಛನವನ್ನು ಹೊಂದಿತ್ತು.[೪೦] ಕೆಂಪು ಓರಣವಿರುವ ನೀಲಿ ಕತ್ತಿನಪಟ್ಟಿಯಿರುವ ಬಿಳಿ ಅಂಗಿಯನ್ನು ಹೊಂದಿರುವ ಕ್ಲಬ್‌ನ ೨೦೦೮–೦೯ ವಿದೇಶಿ ಕಿಟ್‌ನ್ನು ೨೦೦೯–೧೦ರ ಥರ್ಡ್‌ ಕಿಟ್‌ನಂತೆ ಬಳಸಲಾಯಿತು. ನೀಲಿ ಚೆಡ್ಡಿಗಳು ಮತ್ತು ಬಿಳಿ ಕಾಲುಚೀಲಗಳು, ನೀಲಿ ಪ್ರಾಯೋಜಕರ ಲೋಗೋ ಮತ್ತು ಕತ್ತುಪಟ್ಟಿ ಹಿಂದೆ "MUFC" ಎಂದು ಬರೆದ ಮೂರನೆ ಸಮವಸ್ತ್ರವನ್ನು ಬಳಸಿದ್ದರು. ಕ್ಲಬ್‌ನ ಲಾಂಛನವು ಬಿಳಿ ಪ್ರಶಸ್ತಿ ಫಲಕದಲ್ಲಿ ಎಡ ಎದೆಯ ಭಾಗದಲ್ಲಿರಿಸಲಾಗಿತ್ತು.[೪೩][೪೪]

ಮ್ಯಾಂಚೆಸ್ಟರ್‌ ಯುನೈಟೆಡ್‌ ಚಿಹ್ನೆಯನ್ನು ಕೆಲವು ಸಂದರ್ಭಗಳಲ್ಲಿ ಮಾರ್ಪಡಿಸಲಾಗಿದೆ. ಆದರೆ ಮೂಲ ರಚನೆ ಹಾಗೆಯೇ ಉಳಿದಿದೆ. ಲಾಂಛನವನ್ನು ಮ್ಯಾಂಚೆಸ್ಟರ್‌ ನಗರದ ಚಿಹ್ನೆಯಿಂದ ಪಡೆಯಲಾಗಿದೆ. ಕ್ಲಬ್‌ನ ಲಾಂಛನದಲ್ಲಿರುವ ಪಿಶಾಚಿಯನ್ನು ಕ್ಲಬ್‌ನ ಅಡ್ಡಹೆಸರು "ಕೆಂಪು ಪಿಶಾಚಿ"ಗಳಿಂದ ತೆಗೆದುಕೊಳ್ಳಲಾಗಿದೆ. ಕೆಂಪಂಗಿ ಧರಿಸಿದ ಸಾಲ್‌ರ್ಫೋರ್ಡ್‌ ರಗ್ಬಿ ಲೀಗ್‌ಯ ಬಗ್ಗೆ ಉಲ್ಲೇಖಿಸುವುದನ್ನು ಕೇಳಿದ ನಂತರ ಮ್ಯಾಟ್‌ ಬಸ್ಬಿಯವರು ೧೯೬೦ರ ದಶಕದ ಆದಿಯಲ್ಲಿ ಆ ಹೆಸರನ್ನು ಅಳವಡಿಸಿಕೊಂಡರು.[೪೫] ೧೯೬೦ರ ದಶಕದ ಕೊನೆಯಿಂದ ಕ್ಲಬ್‌ನ ಕಾರ್ಯಕ್ರಮಗಳು ಮತ್ತು ಕರವಸ್ತ್ರಗಳಲ್ಲಿ ಪಿಶಾಚಿಯನ್ನು ಸೇರಿಸಿಕೊಳ್ಳಲಾಯಿತಾದರೂ ಅಂತಿಮವಾಗಿ ೧೯೭೦ರಲ್ಲಿ ಕ್ಲಬ್‌ನ ಲಾಂಛನಕ್ಕೆ ವಿಶಿಷ್ಟ ತ್ರಿಶೂಲವನ್ನು ಹಿಡಿದ ಪಿಶಾಚಿಯನ್ನು ಕೊನೆಯದಾಗಿ ಸೇರಿಸಲಾಯಿತು. ೧೯೯೮ರಲ್ಲಿ ಲಾಂಛನವನ್ನು ಮತ್ತೆ ವಿನ್ಯಾಸಗೊಳಿಸಲಾಯಿತು. ಆಗ "ಫುಟ್‌ಬಾಲ್‌ ಕ್ಲಬ್‌"ಎಂಬ ಪದವನ್ನು ತೆಗೆದುಹಾಕಲಾಯಿತು.[೪೬]

ಆಟಗಾರರು[ಬದಲಾಯಿಸಿ]

ಪ್ರಥಮ-ತಂಡದ ಪಡೆ[ಬದಲಾಯಿಸಿ]

೧೪ ಆಗಸ್ಟ್‌ ೨೦೦೯ರಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಯೋಜಿಸಿದ ಮೂಲಗಳ ಪ್ರಕಾರ.[೪೭]

Note: Flags indicate national team as has been defined under FIFA eligibility rules. Players may hold more than one non-FIFA nationality.

No. Position Player
1 ನೆದರ್ಲ್ಯಾಂಡ್ಸ್ GK Edwin van der Sar
2 ಇಂಗ್ಲೆಂಡ್ DF Gary Neville (captain)
3 France DF Patrice Evra
4 ಇಂಗ್ಲೆಂಡ್ MF Owen Hargreaves
5 ಇಂಗ್ಲೆಂಡ್ DF Rio Ferdinand
6 ಇಂಗ್ಲೆಂಡ್ DF Wes Brown
7 ಇಂಗ್ಲೆಂಡ್ FW Michael Owen
8 Brazil MF Anderson
9 Bulgaria FW Dimitar Berbatov
10 ಇಂಗ್ಲೆಂಡ್ FW Wayne Rooney
11 Wales MF Ryan Giggs (vice-captain)
12 ಇಂಗ್ಲೆಂಡ್ GK Ben Foster
13 ದಕ್ಷಿಣ ಕೊರಿಯಾ MF Park Ji-Sung
14 ಸೆರ್ಬಿಯ MF Zoran Tošić
15 ಸೆರ್ಬಿಯ DF Nemanja Vidić
16 ಇಂಗ್ಲೆಂಡ್ MF Michael Carrick
17 ಪೋರ್ಚುಗಲ್ MF Nani
18 ಇಂಗ್ಲೆಂಡ್ MF Paul Scholes
No. Position Player
19 ಇಂಗ್ಲೆಂಡ್ FW Danny Welbeck
20 Brazil DF Fábio
21 Brazil DF Rafael
22 ಐರ್ಲೇಂಡ್ ಗಣರಾಜ್ಯ DF John O'Shea
23 Northern Ireland DF Jonny Evans
24 ಸ್ಕಾಟ್ಲೆಂಡ್ MF Darren Fletcher
25 ಈಕ್ವಡಾರ್ MF Antonio Valencia
26 France FW Gabriel Obertan
27 ಇಟಲಿ FW Federico Macheda
28 ಐರ್ಲೇಂಡ್ ಗಣರಾಜ್ಯ MF Darron Gibson
29 Poland GK Tomasz Kuszczak
30 Belgium DF Ritchie De Laet
31 Northern Ireland MF Corry Evans
36 ಸ್ಕಾಟ್ಲೆಂಡ್ MF David Gray
37 Northern Ireland DF Craig Cathcart
38 Germany GK Ron-Robert Zieler
40 ಇಂಗ್ಲೆಂಡ್ GK Ben Amos

ಸಾಲಕರಾರಿನಲ್ಲಿ[ಬದಲಾಯಿಸಿ]

Note: Flags indicate national team as has been defined under FIFA eligibility rules. Players may hold more than one non-FIFA nationality.

No. Position Player
35 ಇಂಗ್ಲೆಂಡ್ MF Tom Cleverley (at Watford until 3 January 2010)[೪೮]
ಸೆನೆಗಲ್ FW Mame Biram Diouf (at Molde until 31 December 2009)[೪೯]

ಮೀಸಲು ಮತ್ತು ಶೈಕ್ಷಣಿಕ[ಬದಲಾಯಿಸಿ]

ಮೀಸಲು ಮತ್ತು ಶೈಕ್ಷಣಿಕ ತಂಡಗಳಿಗಾಗಿ, [[ಮ್ಯಾಂಚೆಸ್ಟರ್‌ ಯುನೈಟೆಡ್‌ F.C. ರಿಸರ್ವ್ಸ್‌ ಅಂಡ್‌

ಅಕಾಡೆಮಿ|ಮ್ಯಾಂಚೆಸ್ಟರ್‌ ಯುನೈಟೆಡ್‌ F.C. ಮೀಸಲುಗಳು ಮತ್ತು ಶೈಕ್ಷಣಿಕ]] ನೋಡಿ.

ಮಾಜಿ ಆಟಗಾರರು[ಬದಲಾಯಿಸಿ]

ಮಾಜಿ ಆಟಗಾರರ ಬಗೆಗಿನ ವಿವರಗಳಿಗಾಗಿ, ಮ್ಯಾಂಚೆಸ್ಟರ್‌ ಯುನೈಟೆಡ್‌ F.C. ಆಟಗಾರರ ಪಟ್ಟಿಯಲ್ಲಿ ವರ್ಗ:ಮ್ಯಾಂಚೆಸ್ಟರ್‌ ಯುನೈಟೆಡ್‌ F.C. ಆಟಗಾರರು ವಿಭಾಗವನ್ನು ನೋಡಿ.

ಕ್ಲಬ್‌ ನಾಯಕರು[ಬದಲಾಯಿಸಿ]

ದಿನಾಂಕ[೫೦] ಹೆಸರು ಟಿಪ್ಪಣಿಗಳು
೧೮೭೮–೧೮೮೨ ತಿಳಿದಿಲ್ಲ
೧೮೮೨ E. ಥಾಮಸ್‌ ಮೊದಲ ಪರಿಚಿತ ಕ್ಲಬ್‌ ನಾಯಕ
೧೮೮೨–೧೮೮೩ ತಿಳಿದಿಲ್ಲ
c.೧೮೮೩–೧೮೮೭ ಇಂಗ್ಲೆಂಡ್ ಸ್ಯಾಮ್‌ ಬ್ಲಾಕ್‌
c.೧೮೮೭–೧೮೯೦ Wales ಜ್ಯಾಕ್‌ ಪೋವೆಲ್‌
೧೮೯೦–೧೮೯೨ ತಿಳಿದಿಲ್ಲ
೧೮೯೨–೧೮೯೩ ಸ್ಕಾಟ್ಲೆಂಡ್ ಜೋ ಕ್ಯಾಸಿಡಿ
೧೮೯೩–೧೮೯೪ ತಿಳಿದಿಲ್ಲ
c.೧೮೯೪ ಸ್ಕಾಟ್ಲೆಂಡ್ ಜೇಮ್ಸ್‌ ಮೆಕ್‌ನಾಟ್‌
೧೮೯೪–೧೮೯೬ ತಿಳಿದಿಲ್ಲ
c.೧೮೯೬–೧೯೦೩ ಇಂಗ್ಲೆಂಡ್ ಹ್ಯಾರಿ ಸ್ಟಾಫೋರ್ಡ್‌ ಮ್ಯಾಂಚೆಸ್ಟರ್‌ ಯುನೈಟೆಡ್‌ನ ಮೊದಲ ನಾಯಕ
೧೯೦೩–೧೯೦೪ ತಿಳಿದಿಲ್ಲ
c.೧೯೦೪–೧೯೦೫ ಸ್ಕಾಟ್ಲೆಂಡ್ ಜಾಕ್‌ ಪೆಡ್ಡಿ
c.೧೯೦೫–೧೯೧೨ ಇಂಗ್ಲೆಂಡ್ ಚಾರ್ಲಿ ರಾಬರ್ಟ್ಸ್‌
೧೯೧೨–೧೯೧೩ ಇಂಗ್ಲೆಂಡ್ ಜಾರ್ಜ್‌ ಸ್ಟ್ಯಾಸಿ
೧೯೧೩ ಇಂಗ್ಲೆಂಡ್ ಡಿಕ್‌ ಡಕ್‌ವರ್ತ್‌
೧೯೧೪ ಇಂಗ್ಲೆಂಡ್ ಜಾರ್ಜ್‌ ಹಂಟರ್‌
೧೯೧೪–೧೯೧೫ ಇಂಗ್ಲೆಂಡ್ ಪ್ಯಾಟ್ರಿಕ್‌ ಓ'ಕಾನ್ನೆಲ್‌
೧೯೧೫–೧೯೧೯ ಯಾರೂ ಇಲ್ಲ ಮೊದಲ ವಿಶ್ವಸಮರದ ಸಮಯದಲ್ಲಿ ಯಾವುದೇ ಫುಟ್‌ಬಾಲ್‌ ಪಂದ್ಯವನ್ನು ಆಡಿರಲಿಲ್ಲ
೧೯೧೯–೧೯೨೨ ತಿಳಿದಿಲ್ಲ
c.೧೯೨೨–೧೯೨೮ ಇಂಗ್ಲೆಂಡ್ ಫ್ರಾಂಕ್‌ ಬಾರ್ಸನ್‌
c.೧೯೨೮–೧೯೩೧ ಇಂಗ್ಲೆಂಡ್ ಜ್ಯಾಕ್‌ ವಿಲ್ಸನ್‌
೧೯೩೧–೧೯೩೨ ಸ್ಕಾಟ್ಲೆಂಡ್ ಜಾರ್ಜ್‌ ಮೆಕ್‌ಲಚ್ಲನ್‌
೧೯೩೨ ಇಂಗ್ಲೆಂಡ್ ಲೂಯಿಸ್‌ ಪೇಜ್‌
೧೯೩೨–೧೯೩೫ ತಿಳಿದಿಲ್ಲ
c.೧೯೩೫–೧೯೩೯ ಸ್ಕಾಟ್ಲೆಂಡ್ ಜಿಮ್ಮಿ ಬ್ರೌನ್‌
೧೯೩೯–೧೯೪೫ ಯಾರೂ ಇಲ್ಲ ಎರಡನೆ ವಿಶ್ವಸಮರದ ಸಮಯದಲ್ಲಿ ಯಾವುದೇ ಫುಟ್‌ಬಾಲ್‌ ಪಂದ್ಯವನ್ನು ಆಡಿರಲಿಲ್ಲ
೧೯೪೫–೧೯೫೩ ಐರ್ಲೇಂಡ್ ಗಣರಾಜ್ಯ ಜಾನಿ ಕ್ಯಾರೀ ಮೊದಲ ಯುದ್ಧಾ-ನಂತರ ನಾಯಕ, ಮತ್ತು ಯುನೈಟೆಡ್‌ ಕಿಂಗ್‌ಡಮ್‍‌ನ ಹೊರಗಿನ ಮೊದಲ ನಾಯಕ
೧೯೫೩–೧೯೫೪ ಇಂಗ್ಲೆಂಡ್ ಸ್ಟ್ಯಾನ್‌ ಪಿಯರ್ಸನ್‌
೧೯೫೪–೧೯೫೫ ಇಂಗ್ಲೆಂಡ್ ಅಲೆನ್‌ಬೈ ಚಿಲ್ಟನ್‌
೧೯೫೫–೧೯೫೮ ಇಂಗ್ಲೆಂಡ್ ರೋಜರ್‌ ಬೈರ್ನೆ ೧೯೫೮ರ ಮ್ಯುನಿಚ್‌ ವಾಯು ದುರಂತದಲ್ಲಿ ನಿಧನರಾದರು
೧೯೫೮–೧೯೫೯ ಇಂಗ್ಲೆಂಡ್ ಬಿಲ್‌ ಫೌಲ್‌ಕ್ಸ್‌
೧೯೫೯–೧೯೬೦ ಇಂಗ್ಲೆಂಡ್ ಡೆನ್ನಿಸ್‌ ವೈಲೆಟ್‌
೧೯೬೦–೧೯೬೨ ಇಂಗ್ಲೆಂಡ್ ಮೌರಿಸ್‌ ಸೆಟ್ಟರ್ಸ್‌
೧೯೬೨–೧೯೬೪ ಐರ್ಲೇಂಡ್ ಗಣರಾಜ್ಯ ನೊಯೆಲ್‌ ಕ್ಯಾಂಟ್‌ವೆಲ್‌
೧೯೬೪–೧೯೬೭ ಸ್ಕಾಟ್ಲೆಂಡ್ ಡೆನಿಸ್‌ ಲಾ
೧೯೬೭–೧೯೭೩ ಇಂಗ್ಲೆಂಡ್ ಬಾಬ್ಬಿ ಚಾರ್ಲ್ಟನ್‌
೧೯೭೩ ಸ್ಕಾಟ್ಲೆಂಡ್ ಜಾರ್ಜ್‌ ಗ್ರಹಾಮ್‌
೧೯೭೩–೧೯೭೫ ಸ್ಕಾಟ್ಲೆಂಡ್ ವಿಲ್ಲಿ ಮೋರ್ಗನ್‌
೧೯೭೫–೧೯೮೨ ಸ್ಕಾಟ್ಲೆಂಡ್ ಮಾರ್ಟಿನ್‌ ಬುಕನ್‌
೧೯೮೨ ಇಂಗ್ಲೆಂಡ್ ರಾಯ್‌ ವಿಲ್ಕಿನ್ಸ್‌
೧೯೮೨–೧೯೯೪ ಇಂಗ್ಲೆಂಡ್ ಬ್ರಿಯಾನ್‌ ರಾಬ್ಸನ್‌ ಯುನೈಟೆಡ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗಳಲ್ಲಿ ನಾಯಕರಾಗಿದ್ದವರು
೧೯೯೪–೧೯೯೬ ಇಂಗ್ಲೆಂಡ್ ಸ್ಟೀವ್‌ ಬ್ರೂಸ್‌
೧೯೯೬–೧೯೯೭ France ಎರಿಕ್‌ ಕ್ಯಾಂಟೊನಾ ಯುನೈಟೆಡ್‌ ಕಿಂಗ್‌ಡಮ್‌ ಅಥವಾ ಐರ್ಲೆಂಡ್‌ ಗಣರಾಜ್ಯ ಹೊರಗಿನ ಮೊದಲ ನಾಯಕ
೧೯೯೭–೨೦೦೫ ಐರ್ಲೇಂಡ್ ಗಣರಾಜ್ಯ ರಾಯ್‌ ಕೀನೆ‌ ಯುನೈಟೆಡ್‌ನ ಇತರ ನಾಯಕರಿಗಿಂತ ಹೆಚ್ಚು ಟ್ರೋಫಿಗಳನ್ನು ಗೆದ್ದಿದ್ದಾರೆ
೨೦೦೫–೨೦೦೯ ಇಂಗ್ಲೆಂಡ್ ಗ್ಯಾರಿ ನೆವಿಲ್ಲೆ ಡೆನ್ನಿಸ್‌ ವೈಲೆಟ್‌ರ ನಂತರ ಗ್ರೇಟರ್‌ ಮ್ಯಾಂಚೆಸ್ಟರ್‌ನಲ್ಲಿ ಜನಿಸಿದ ಮೊದಲ ನಾಯಕ
೨೦೦೫–೨೦೦೯ France ಪ್ಯಾಟ್ರಿಸ್ ಎವರ

ಆಟಗಾರರ ದಾಖಲೆಗಳು[ಬದಲಾಯಿಸಿ]

೨೯ ಆಗಸ್ಟ್‌ ೨೦೦೯ರಲ್ಲಿ ಆಡಿದ ಆಟದವರೆಗೆ ಮತ್ತು ಅಧಿಕೃತ ಅಂಕಿಅಂಶ ವೆಬ್‌ಸೈಟ್‌ ಪ್ರಕಾರ.[೫೧] ದಪ್ಪಕ್ಷರದಲ್ಲಿರುವ ಆಟಗಾರರು ಈಗಲೂ ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡುತ್ತಿದ್ದಾರೆ.

ಅತಿ ಹೆಚ್ಚು ಪಾಲ್ಗೊಳ್ಳುವಿಕೆ[ಬದಲಾಯಿಸಿ]

# ಹೆಸರು ವೃತ್ತಿ ಪಾಲ್ಗೊಳ್ಳುವಿಕೆ ಗೋಲುಗಳು
1 Wales ರಿಯಾನ್‌ ಗಿಗ್ಸ್‌ ೧೯೯೧–ಇಲ್ಲಿಯವರೆಗೆ ೮೧೦ ೧೪೮
ಇಂಗ್ಲೆಂಡ್ ಬಾಬ್ಬಿ ಚಾರ್ಲ್ಟನ್‌ ೧೯೫೬–೧೯೭೩ ೭೫೮ ೨೪೯
ಇಂಗ್ಲೆಂಡ್ ಬಿಲ್‌ ಫೌಲ್‌ಕ್ಸ್‌ ೧೯೫೨–೧೯೭೦ ೬೮೮
[4]; ಇಂಗ್ಲೆಂಡ್ ಪೌಲ್‌ ಷೋಲ್ಸ್‌ ೧೯೯೪–ಇಲ್ಲಿಯವರೆಗೆ ೬೦೮ ೧೪೨
[5]; ಇಂಗ್ಲೆಂಡ್ ಗ್ಯಾರಿ ನೆವಿಲ್ಲೆ ೧೯೯೨–ಇಲ್ಲಿಯವರೆಗೆ ೫೭೨
[6] ಇಂಗ್ಲೆಂಡ್ ಅಲೆಕ್ಸ್‌ ಸ್ಟೆಪ್ನಿ ೧೯೬೬–೧೯೭೮ ೫೩೯
ಐರ್ಲೇಂಡ್ ಗಣರಾಜ್ಯ ಟೋನಿ ಡುನ್ನೆ ೧೯೬೦–೧೯೭೩ ೫೩೫
ಐರ್ಲೇಂಡ್ ಗಣರಾಜ್ಯ ಡೆನಿಸ್‌ ಇರ್ವಿನ್‌ ೧೯೯೦–೨೦೦೨ ೫೨೯ ೩೩
ಇಂಗ್ಲೆಂಡ್ ಜೋ ಸ್ಪೆನ್ಸ್‌ ೧೯೧೯–೧೯೩೩ ೫೧೦ ೧೬೮
೧೦ ಸ್ಕಾಟ್ಲೆಂಡ್ ಅರ್ಥರ್‌ ಅಲ್ಬಿಸ್ಟನ್‌ ೧೯೭೪–೧೯೮೮ ೪೮೫

ಅತಿ ಹೆಚ್ಚು ಗೋಲುಗಳು[ಬದಲಾಯಿಸಿ]

ಅತಿ ಹೆಚ್ಚು ಗೋಲುಗಳು[ಬದಲಾಯಿಸಿ]

# ಹೆಸರು ವೃತ್ತಿ ಗೋಲುಗಳು ಪಾಲ್ಗೊಳ್ಳುವಿಕೆಗಳು ಗೋಲು/ಆಟ
ಅನುಪಾತ
1% ಇಂಗ್ಲೆಂಡ್ ಬಾಬ್ಬಿ ಚಾರ್ಲ್ಟನ್‌ ೧೯೫೬–೧೯೭೩ ೨೪೯ ೭೫೮ 0.328
ಸ್ಕಾಟ್ಲೆಂಡ್ ಡೆನಿಸ್‌ ಲಾ ೧೯೬೨–೧೯೭೩ ೨೩೭ ೪೦೪ 0.587
ಇಂಗ್ಲೆಂಡ್ ಜ್ಯಾಕ್‌ ರೌಲೆ ೧೯೩೭–೧೯೫೫ ೨೧೧ ೪೨೪ 0.498
[4]; ಇಂಗ್ಲೆಂಡ್ ಡೆನ್ನಿಸ್‌ ವೈಲೆಟ್‌ ೧೯೫೩–೧೯೬೨ ೧೭೯ ೨೯೩ 0.611
[4]; Northern Ireland ಜಾರ್ಜ್‌ ಬೆಸ್ಚ್‌ ೧೯೬೩–೧೯೭೪ ೧೭೯ ೪೭೦ 0.381
[6] ಇಂಗ್ಲೆಂಡ್ ಜೋ ಸ್ಪೆನ್ಸ್‌ ೧೯೧೯–೧೯೩೩ ೧೬೮ ೫೧೦ 0.329
Wales ಮಾರ್ಕ್‌ ಹ್ಯೂಜಸ್‌ ೧೯೮೩–೧೯೮೬
೧೯೮೮–೧೯೯೫
೧೬೩ ೪೬೭ 0.349
ನೆದರ್ಲ್ಯಾಂಡ್ಸ್ ರುಡ್‌ ವಾನ್‌ ನಿಸ್ಟೆಲ್ರೂಯ್‌ ೨೦೦೧–೨೦೦೬ ೧೫೦ ೨೧೯ 0.685
೯= ಇಂಗ್ಲೆಂಡ್ ಸ್ಟ್ಯಾನ್‌ ಪಿಯರ್ಸನ್‌ ೧೯೩೭–೧೯೫೪ ೧೪೮ ೩೪೩ 0.431
೯= Wales ರಿಯಾನ್‌ ಗಿಗ್ಸ್‌ ೧೯೯೧–ಇಲ್ಲಿಯವರೆಗೆ ೧೪೮ ೮೧೦ 0.183

ಪ್ರಶಸ್ತಿ ವಿಜೇತರು[ಬದಲಾಯಿಸಿ]

ಬ್ಯಾಲ್ಲೊನ್‌ ಡಿ'ಓರ್‍

ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡುತ್ತಿರುವಾಗ ಈ ಕೆಳಗಿನ ಆಟಗಾರರು ಬಾಲ್ಲೋನ್‌ ಡಿ'ಓರ್‌ ಗೆದ್ದಿದ್ದರು:

ಯುರೋಪಿಯನ್‌ ಗೋಲ್ಡನ್‌ ಷೂ

ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡುತ್ತಿರುವಾಗ ಈ ಕೆಳಗಿನ ಆಟಗಾರರು ಯುರೋಪಿಯನ್‌ ಗೋಲ್ಡನ್‌ ಷೂವನ್ನು ಗೆದ್ದಿದ್ದರು:

UEFA ಕ್ಲಬ್‌ನ ವರ್ಷದ ಫುಟ್‌ಬಾಲ ಆಟಗಾರ‌

ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡುತ್ತಿರುವಾಗ ಈ ಕೆಳಗಿನ ಆಟಗಾರರು UEFA ಕ್ಲಬ್‌ನ ವರ್ಷದ ಫುಟ್‌ಬಾಲ್‌ ಆಟಗಾರ‌ ಪ್ರಶಸ್ತಿಯನ್ನು ಗೆದ್ದಿದ್ದರು:

FIFA ವರ್ಷದ ವಿಶ್ವ ಆಟಗಾರ

ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಆಡುತ್ತಿರುವಾಗ ಈ ಕೆಳಗಿನ ಆಟಗಾರರು FIFA ವರ್ಷದ ವಿಶ್ವ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದರು:

ಮಹಿಳಾ ತಂಡ[ಬದಲಾಯಿಸಿ]

ಮ್ಯಾಂಚೆಸ್ಟರ್‌ ಯುನೈಟೆಡ್‌ ಮಹಿಳಾ FCನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌ ಬೆಂಬಲಿಗ ಮಹಿಳೆಯರ ಕ್ಲಬ್‌ ಎಂಬಂತೆ ೧೯೭೭ರಲ್ಲಿ ಸ್ಥಾಪಿಸಲಾಯಿತು. ೧೯೭೯ರಲ್ಲಿ ಅವರು ಮೂರು ಕೌಂಟಿಗಳ ಲೀಗ್‌ಗೆ ಸೇರಿದರು. ಕ್ಲಬ್‌ನ ಹೆಸರನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌ ಮಹಿಳಾ FC ಎಂದು ಅಧಿಕೃತವಾಗಿ ಬದಲಿಸಿದಾಗ ೧೯೮೯ರಲ್ಲಿ ವಾಯುವ್ಯ ಮಹಿಳೆಯರ ಪ್ರಾದೇಶಿಕ ಫುಟ್‌ಬಾಲ್‌ ಲೀಗ್‌ನ ಸ್ಥಾಪಕ ಸದಸ್ಯರಾದರು. ಆದರೂ ಅವರ ಮೊದಲ ಲೀಗ್‌ನಲ್ಲಿ ಕೆಳಸ್ಥಾನಕ್ಕಿಳಿದರು. ಅದರ ನಂತರದ ಕ್ರೀಡಾಋತುವಿನಲ್ಲಿ ಅವರು ಮೇಲ್‌ಸ್ಥಾನವನ್ನು ಗಳಿಸಿದರು ಮತ್ತು ೧೯೯೫–೯೬ರಲ್ಲಿ ಲೀಗ್‌ ಪ್ರಶಸ್ತಿಯನ್ನು ಗೆದ್ದರು. ೧೯೯೮–೯೯ರ ಕ್ರೀಡಾಋತುವಿನಲ್ಲಿ ತಂಡವು ಉತ್ತರ ಒಕ್ಕೂಟಕ್ಕೆ ಸೇರಿದರು. ಆಗ ಅವರು FA ಮಹಿಳಾ ಪ್ರೀಮಿಯರ್‌ ಲೀಗ್‌ಗಿಂತ ಎರಡು ಹಂತ ಕೆಳಗಿದ್ದರು. ತಂಡವನ್ನು ೨೦೦೧–೦೨ರ ಕ್ರೀಡಾಋತುವಿನ ಪ್ರಾರಂಭದಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌ FC ಬ್ಯಾನರ್‌ನಡಿಯಲ್ಲಿ ಕರೆತರಲಾಯಿತು. ಆದರೆ ಹಣಕಾಸು ಕಾರಣಗಳಿಗೆ ೨೦೦೪–೦೫ ಕ್ರೀಡಾಋತು ಪ್ರಾರಂಭವಾಗುವ ಮೊದಲು ವಿವಾದಾತ್ಮಕವಾಗಿ ಸಂಬಂಧವನ್ನು ಕಡಿದುಕೊಂಡಿತು. ಮ್ಯಾಂಚೆಸ್ಟರ್‌ ಯುನೈಟೆಡ್‌ ಮಾಡಿದ ಲಾಭದ ಕಾರಣದಿಂದಾಗಿ ಈ ನಿರ್ಧಾರವು ಗಮನಾರ್ಹ ಟೀಕೆಗಳನ್ನು ಭರಿಸಬೇಕಾಯಿತು ಮತ್ತು ನಿರ್ಧಾರವನ್ನು ಆಟಗಾರರಿಗೆ ತಿಳಿಸುವ ಮೊದಲೇ ತಂಡಗಳ ಎಲ್ಲಾ ಲೀಗ್ ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಆದರೂ ಕ್ಲಬ್‌ ಈಗಲೂ ೧೬ಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ತರಬೇತಿ ನೀಡುವುದರ ಮೂಲಕ ಹುಡುಗಿಯರ ಫುಟ್‌ಬಾಲ್‌ನಲ್ಲಿ ಭಾಗಿಯಾಗಿದೆ.[೫೨]

ಕ್ಲಬ್‌ನ ಅಧಿಕಾರಿಗಳು[ಬದಲಾಯಿಸಿ]

ಮ್ಯಾಂಚೆಸ್ಟರ್‌ ಯುನೈಟೆಡ್‌ ಲಿಮಿಟೆಡ್‌

 • ಸಹ-ಅಧ್ಯಕ್ಷರು: ಜೋಯೆಲ್‌ ಗ್ಲೇಜರ್‌ & ಅವ್ರಾಮ್‌ ಗ್ಲೇಜರ್‌
 • ಮುಖ್ಯ ಕಾರ್ಯನಿರ್ವಾಹಣಾಧಿಕಾರಿ: ಡೇವಿಡ್‌ ಗಿಲ್‌
 • ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ: ಮೈಕೆಲ್‌ ಬೊಲಿಂಗ್‌ಬ್ರೋಕ್‌
 • ವಾಣಿಜ್ಯ ನಿರ್ದೇಶಕರು: ರಿಚರ್ಡ್‌ ಅರ್ನಾಲ್ಡ್‌
 • ಕಾರ್ಯನಿರ್ವಾಹಕ ನಿರ್ದೇಶಕರು: ಎಡ್‌ ವುಡ್‌ವರ್ಡ್‌
 • ಕಾರ್ಯನಿರ್ವಾಹಕ-ಅಲ್ಲದ ನಿರ್ದೇಶಕರು: ಬ್ರಿಯಾನ್‌ ಗ್ಲೇಜರ್‌ , ಕೆವಿನ್‌ ಗ್ಲೇಜರ್‌ , ಎಡ್‌ವರ್ಡ್‌ ಗ್ಲೇಜರ್‌ ಮತ್ತು ಡರ್ಸಿ ಗ್ಲೇಜರ್‌

ಮ್ಯಾಂಚೆಸ್ಟರ್‌ ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌

ತರಬೇತಿ ಮತ್ತು ವೈದ್ಯಕೀಯ ಸಿಬ್ಬಂದಿಗಳು

ವ್ಯವಸ್ಥಾಪನೆಯ ಇತಿಹಾಸ[ಬದಲಾಯಿಸಿ]

ದಿನಾಂಕ ಹೆಸರು ಟಿಪ್ಪಣಿಗಳು
1878–1892 ತಿಳಿದಿಲ್ಲ
1892–1900 ಇಂಗ್ಲೆಂಡ್ A. H. ಆಲ್ಬಟ್‌
೧೯೦೦–೧೯೦೩ ಇಂಗ್ಲೆಂಡ್ ಜೇಮ್ಸ್‌ ವೆಸ್ಟ್‌
೧೯೦೩–೧೯೧೨ ಇಂಗ್ಲೆಂಡ್ ಎರ್ನೆಸ್ಟ್‌ ಮ್ಯಾನ್‌ಗ್ನಾಲ್‌
೧೯೧೨–೧೯೧೪ ಇಂಗ್ಲೆಂಡ್ ಜಾನ್‌ ಬೆಂಟ್ಲಿ
೧೯೧೪–೧೯೨೨ ಇಂಗ್ಲೆಂಡ್ ಜ್ಯಾಕ್‌ ರಾಬ್ಸನ್‌
೧೯೨೨–೧೯೨೬ ಸ್ಕಾಟ್ಲೆಂಡ್ ಜಾನ್‌ ಚಾಪ್‌ಮಾನ್‌ ಇಂಗ್ಲೆಂಡ್‌ ಹೊರಗಿನ ಮೊದಲ ವ್ಯವಸ್ಥಾಪಕ
೧೯೨೬–೧೯೨೭ ಇಂಗ್ಲೆಂಡ್ ಲಾಲ್‌ ಹಿಲ್ಡಿಚ್‌
೧೯೨೭–೧೯೩೧ ಇಂಗ್ಲೆಂಡ್ ಹರ್ಬರ್ಟ್‌ ಬಮ್ಲೆಟ್‌
೧೯೩೧–೧೯೩೨ ಇಂಗ್ಲೆಂಡ್ ವಾಲ್ಟರ್‌ ಕ್ರಿಕ್ಮರ್‌
೧೯೩೨–೧೯೩೭ ಸ್ಕಾಟ್ಲೆಂಡ್ ಸ್ಕಾಟ್‌ ಡಂಕನ್‌
೧೯೩೭–೧೯೪೫ ಇಂಗ್ಲೆಂಡ್ ವಾಲ್ಟರ್‌ ಕ್ರಿಕ್ಮರ್‌
೧೯೪೫–೧೯೬೯ ಸ್ಕಾಟ್ಲೆಂಡ್ ಮ್ಯಾಟ್‌ ಬಸ್ಬಿ ಎರಡನೆಯ ವಿಶ್ವಸಮರಾ-ನಂತರದ ಮೊದಲ ವ್ಯವಸ್ಥಾಪಕರು ಮತ್ತು ಯುನೈಟೆಡ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಸಮಯ ವ್ಯವಸ್ಥಾಪಕರಾಗಿದ್ದರು
೧೯೬೯–೧೯೭೦ ಇಂಗ್ಲೆಂಡ್ ವಿಲ್ಫ್‌ ಮೆಕ್‌ಗಿನ್ನೆಸ್‌
೧೯೭೦–೧೯೭೧ ಸ್ಕಾಟ್ಲೆಂಡ್ ಮ್ಯಾಟ್‌ ಬಸ್ಬಿ
೧೯೭೧–೧೯೭೨ ಐರ್ಲೇಂಡ್ ಗಣರಾಜ್ಯ ಫ್ರ್ಯಾಂಕ್‌ ಓ'ಫ್ಯಾರಲ್‌ ಯುನೈಟೆಡ್‌ ಕಿಂಗ್‌‌ಡಮ್‌ ಹೊರಗಿನ ಮೊದಲ ವ್ಯವಸ್ಥಾಪಕರು
೧೯೭೨–೧೯೭೭ ಸ್ಕಾಟ್ಲೆಂಡ್ ಟಾಮಿ ಡೊಚೆರ್ಟಿ‌
೧೯೭೭–೧೯೮೧ ಇಂಗ್ಲೆಂಡ್ ಡೇವ್‌ ಸೆಕ್ಸ್‌ಟನ್‌
೧೯೮೧–೧೯೮೬ ಇಂಗ್ಲೆಂಡ್ ರಾನ್‌ ಅಟ್ಕಿನ್ಸನ್‌
೧೯೮೬–present ಸ್ಕಾಟ್ಲೆಂಡ್ ಅಲೆಕ್ಸ್‌ ಫರ್ಗ್ಯೂಸನ್‌ ಟ್ರೋಫಿಯ ವಿಚಾರದಲ್ಲಿ ಅತಿ ಹೆಚ್ಚು ಯಶಸ್ವಿ ವ್ಯವಸ್ಥಾಪಕರು

ಬೆಂಬಲ[ಬದಲಾಯಿಸಿ]

ಎರಡನೆಯ ಮಹಾಯುದ್ಧದ ಮೊದಲು ಸಮಯ, ವೆಚ್ಚ, ಮತ್ತು ಜನಸಂಖ್ಯೆಗೆ ತಕ್ಕ ಕಾರುಗಳ ಕೊರತೆಯಂತಹ ಸಂಚಾರ ಇತಿಮಿತಿಗಳ ಕಾರಣದಿಂದ ಕೆಲವೇ ಇಂಗ್ಲೀಷ್‌ ಫುಟ್‌ಬಾಲ್‌ ಬೆಂಬಲಿಗರು ವಿದೇಶಿ ಪಂದ್ಯಗಳಿಗೆ ಹೋಗುತ್ತಿದ್ದರು.[ಸಾಕ್ಷ್ಯಾಧಾರ ಬೇಕಾಗಿದೆ] ಸಿಟಿ ಮತ್ತು ಯುನೈಟೆಡ್‌ ಶನಿವಾರಗಳಲ್ಲಿ ಸ್ವದೇಶಿ ಪಂದ್ಯಗಳನ್ನು ಆಡುತ್ತಿತ್ತು. ಹಲವು ಮ್ಯಾನ್‌ಕುನಿಯರು ಒಂದು ವಾರ ಯುನೈಟೆಡ್‌ನ ಪಂದ್ಯವನ್ನು, ಇನ್ನೊಂದು ವಾರ ಸಿಟಿಯ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಆದರೆ ಯುದ್ಧದ ನಂತರ ಶತ್ರುತ್ವ ಬಲವಾಯಿತು. ಇದರಿಂದ ಬೆಂಬಲಿಗರು ಒಂದು ತಂಡವನ್ನು ಪ್ರತ್ಯೇಕವಾಗಿ ಅನುಸರಿಸಲು ಸಾಧ್ಯವಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ]

೧೯೫೬ರಲ್ಲಿ ಯುನೈಟೆಡ್‌ ಲೀಗ್‌ನ್ನು ಗೆದ್ದಾಗ, ಅವರು ಲೀಗ್‌ನಲ್ಲಿ ಅತಿ ಹೆಚ್ಚಿನ ಸ್ವದೇಶಿ ಹಾಜರಾತಿಯನ್ನು ಹೊಂದಿದ್ದರು. ಆ ದಾಖಲೆಯನ್ನು ಹಿಂದಿನ ಕೆಲವು ವರ್ಷಗಳು ನ್ಯೂಕ್ಯಾಸಲ್‌ ಯುನೈಟೆಡ್‌ ಹೊಂದಿತ್ತು. ೧೯೫೮ರಲ್ಲಿ ನಡೆದ ಮ್ಯುನಿಚ್‌ ವಾಯು ದುರಂತದ ನಂತರ ಯುನೈಟೆಡ್‌ನ್ನು ಹೆಚ್ಚು ಜನರು ಬೆಂಬಲಿಸಲು ಪ್ರಾರಂಭಿಸಿದರು ಮತ್ತು ಹಲವರು ಪಂದ್ಯಗಳನ್ನು ಹೋಗಿ ನೋಡಲು ಪ್ರಾರಂಭಿಸಿದರು.[ಸಾಕ್ಷ್ಯಾಧಾರ ಬೇಕಾಗಿದೆ] ಈ ಕಾರಣದಿಂದಾಗಿ ಯುನೈಟೆಡ್‌ನ ಬೆಂಬಲಿಗರ ಸಂಖ್ಯೆ ಹೆಚ್ಚಾಯಿತು ಮತ್ತು ಅದರ ನಂತರ ಪ್ರತಿ ಅವಧಿಯಲ್ಲಿ ಹೆಚ್ಚಿನ ಇಂಗ್ಲೀಷ್‌ ಫುಟ್‌ಬಾಲ್‌ಗಳಲ್ಲಿ ಮತ್ತು 1974–75ರಲ್ಲಿ ಎರಡನೆಯ ವಿಭಾಗದಲ್ಲಿಯಾದರೂ ಸಹ ಯುನೈಟೆಡ್‌ ಅತಿ ಹೆಚ್ಚು ಹಾಜರಾತಿಯನ್ನು ಹೊಂದಿತ್ತು.[೩] ಆದರೂ ಓಲ್ಡ್‌ ಟ್ರ್ಯಾಫೋರ್ಡ್‌ನಲ್ಲಿ ಪ್ರಮುಖ ನಿರ್ಮಾಣ ಪ್ರಗತಿಯಲ್ಲಿದ್ದುದರಿಂದ ಎರಡು ಕ್ರೀಡಾಋತುಗಳಲ್ಲಿ (1971–72 ಮತ್ತು ೧೯೯೨–೯೩) ಲೀಗ್‌ ಅತಿ ಹೆಚ್ಚು ಹಾಜರಾತಿಯನ್ನು ಹೊಂದಿರಲಿಲ್ಲ.

ಮ್ಯಾಂಚೆಸ್ಟರ್‌ ಪೋಸ್ಟಲ್‌ ಜಿಲ್ಲೆಗಳಲ್ಲಿ ಯುನೈಟೆಡ್‌ ಹೆಚ್ಚಿನ ಸಂಖ್ಯೆಯ ಕ್ರೀಡಾಋತುವಿನ ಟಿಕೆಟ್‌ ಖರೀದಿದಾರರನ್ನು ಹೊಂದಿದ್ದಾಗ, ಮ್ಯಾಂಚೆಸ್ಟರ್‌ ಸಿಟಿಯು ತನ್ನ ಪ್ರದೇಶದಲ್ಲೇ ಅತಿ ಹೆಚ್ಚಿನ ಕ್ರೀಡಾಋತು ಟಿಕೆಟ್‌ ಖರೀದಿದಾರರನ್ನು ಹೊಂದಿದ ಸ್ಥಳವೆಂಬ ಹೆಗ್ಗಳಿಕೆ ಗಳಿಸಿತ್ತು ಎಂದು ನೀವು ಮ್ಯಾಂಚೆಸ್ಟರ್‌ನಿಂದ ಬಂದಿರುವಿರಾ? ಎಂಬ ತಲೆಬರಹದ ೨೦೦೨ರ ವರದಿಯೊಂದು ತಿಳಿಸುತ್ತದೆ.[೫೪]

೧೯೯೦ರ ಕೊನೆಯಲ್ಲಿ ಮತ್ತು ೨೦೦೦ದ ಪ್ರಾರಂಭದಲ್ಲಿ ಕ್ಲಬ್‌ನ ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯ ವಿಷಯ ಹಲವು ಯುನೈಟೆಡ್‌ ಬೆಂಬಲಿಗರಿಗೆ ಹೆಚ್ಚು ಆಸಕ್ತಿಯ ವಿಚಾರವಾಗಿ ಕಂಡುಬಂದಿತು. ೧೯೯೮ರಲ್ಲಿ ಬೆಂಬಲಿಗರ ಸಮೂಹ IMUSAವು (ಸ್ವತಂತ್ರ ಮ್ಯಾಂಚೆಸ್ಟರ್‌ ಯುನೈಟೆಡ್‌ ಬೆಂಬಲಿಗರ ಸಂಸ್ಥೆ ) ರೂಪರ್ಟ್‌ ಮುರ್ಡೊಕ್‌‌ರವರಿಂದ ಕ್ಲಬ್‌‌ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಪ್ರತಿಭಟಿಸುವಲ್ಲಿ ತೀವ್ರವಾಗಿ ಕ್ರಿಯಾಶೀಲವಾಗಿತ್ತು.[೫೫] ಇನ್ನೊಂದು ಸಮೂಹ ಮುರ್ಡೋಕ್‌‌ನ ವಿರುದ್ಧ ಷೇರ್‌ಹೋಲ್ಡರ್‌ ಯುನೈಟೆಡ್‌ ವು (ಅದು ನಂತರ ಷೇರ್‌ಹೋಲ್ಡರ್‌ ಯುನೈಟೆಡ್‌ ಆಗಿತ್ತು ಮತ್ತು ಈಗ ಮ್ಯಾಂಚೆಸ್ಟರ್‌ ಯುನೈಟೆಡ್‌ ಬೆಂಬಲಿಗರ ಟ್ರಸ್ಟ್‌ ಆಗಿದೆ) ಕ್ಲಬ್‌ನ ಷೇರುಗಳನ್ನು ಖರೀದಿಸಲು ಬೆಂಬಲಿಗರನ್ನು ಪ್ರೋತ್ಸಾಹಿಸಲು, ಅಂದರೆ ಭಾಗಶಃ ಟಿಕೆಟ್‌ ದರ ಮತ್ತು ವಿತರಣೆಯಂತಹ ಸಮಸ್ಯೆಗಳಲ್ಲಿ ಬೆಂಬಲಿಗರ ಅಭಿಪ್ರಾಯಕ್ಕೆ ಮಾನ್ಯತೆ ದೊರೆಯಲು ಮತ್ತು ಭಾಗಶಃ ಅನಪೇಕ್ಷಿತ ವ್ಯಕ್ತಿಗಳಿಂದ ಕ್ಲಬ್‌ನ್ನು ಸ್ವಾಧೀನಪಡಿಸಿಕೊಳ್ಳಲು ಷೇರುಗಳ ಖರೀದಿಯಂತಹಾ ಅಪಾಯವನ್ನು ಕಡಿಮೆ ಮಾಡಲು ಆ ಸಮಯದಲ್ಲಿ ರಚನೆಗೊಂಡಿತು. ಆದರೂ, ಈ ಯೋಜನೆಯು ಮಾಲ್ಕೊಲ್ಮ್‌ ಗ್ಲೇಜರ್‌ರವರು ಕ್ಲಬ್‌ನ ಬಹುಪಾಲು ಷೇರನ್ನು ಹೊಂದುವುದನ್ನು ತಪ್ಪಿಸಲು ವಿಫಲವಾಯಿತು. ಹಲವು ಬೆಂಬಲಿಗರು ಅಸಮಾಧಾನಗೊಂಡರು. ಅವರಲ್ಲಿ ಕೆಲವರು F.C. ಯುನೈಟೆಡ್‌ ಆಫ್‌ ಮ್ಯಾಂಚೆಸ್ಟರ್‌ ಎನ್ನುವ ವಿಭಜಿತ ಕ್ಲಬ್‌ನ್ನು ರಚಿಸಿದರು. ಹೊಸ ಮಾಲೀಕರ ಬಗ್ಗೆ ಕೆಲವರ ಅಸಮಾಧಾನವಿದ್ದರೂ ಸಹ ಬೆಂಬಲಿಗರ ಹಾಜರಾತಿ ಹೆಚ್ಚಾಗುತ್ತಾ ಹೋಯಿತು.

ಅಭಿಮಾನಿಗಳಿಂದ ನಿರ್ಮಾಣಗೊಂಡ ವಾತಾವರಣವು ಕೆಲ ಸಮಯ ಖಂಡನೆಗೆ ಸಹಾ ಒಳಗಾಯಿತು. ೨೦೦೦ರಲ್ಲಿ ಓಲ್ಡ್‌ ಟ್ರ್ಯಾಫೋರ್ಡ್‌ನ ಜನ ಸಮೂಹದ ಕುರಿತು ಮಾಡಿದ ವಿಮರ್ಶೆಯಲ್ಲಿ ಕ್ಲಬ್‌ನ ನಾಯಕರಾದ ರಾಯ್‌ ಕೀನೆರವರು "ಕೆಲವು ಅಭಿಮಾನಿಗಳಿಗೆ ಫುಟ್‌ಬಾಲ್‌ ಎಂದು ಹೇಳಲು ತಿಳಿಯದಿರಬೇಕಾದರೆ ಅದರ ಬಗ್ಗೆ ಅರ್ಥ ಹೇಗೆ ಮಾಡಿಕೊಂಡಾರು?" ಎಂದು ಹೇಳಿದರು. ನಂತರ ಅವರನ್ನು "ಪ್ರಾನ್‌ ಸ್ಯಾಂಡ್‌ವಿಚ್‌ ಬ್ರಿಗೇಡ್‌" ಅಡ್ಡಹೆಸರಿನಿಂದ ಕರೆಯಲಾಯಿತು.[೫೬] ಅಲೆಕ್ಸ್‌ ಫರ್ಗ್ಯೂಸನ್‌ರವರು ಸಹ ೧ ಜನವರಿ ೨೦೦೮ರ ಜನ ಸಮೂಹದ ವಾತಾವರಣವು "ಶವಸಂಸ್ಕಾರ"ದಂತಿತ್ತು ಎಂದು ಹೇಳುವಷ್ಟು ಮುಂದುವರೆದು ಈ ಬಗ್ಗೆ ಅನೇಕ ಟೀಕೆಗಳನ್ನು ಮಾಡಿದ್ದರು.[೫೭] ನಂತರದಲ್ಲಿ ಅವರು "ನನ್ನ ಪ್ರಕಾರ ಹಿಂದೆ ಈ ತರಹದ ದಿನಗಳಿದ್ದವು. ನಾವು ಪ್ರಬಲವಾಗಿದ್ದಾಗ, ಅದು ಕೆಲವು ವರ್ಷಗಳ ಹಿಂದೆ ಈ ಘಟನೆಯು ಸಂಭವಿಸಿತ್ತು" ಎಂದು ಪ್ರತಿಕ್ರಯಿಸಿದರು.[೫೭] ಓಲ್ಡ್‌ ಟ್ರ್ಯಾಫೋರ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಬಾರ್ಸೆಲೊನಾ ತಂಡದ ವಿರುದ್ಧ ಜನಪ್ರಿಯ ೧-೦ ಅಂತರದ ವಿಜಯವು ಯುನೈಟೆಡ್‌ಗೆ ಮಾಸ್ಕೋದಲ್ಲಿ ನಡೆಯುವ ಚಾಂಪಿಯನ್ಸ್‌ ಲೀಗ್‌ನ ಅಂತಿಮ ಪಂದ್ಯಕ್ಕೆ ತಲುಪಲು ಕಾರಣವಾಯಿತು. ಫರ್ಗ್ಯೂಸನ್‌ರವರು ಯುನೈಟೆಡ್‌ನ ಅಭಿಮಾನಿಗಳು "ನಿಜವಾಗಲೂ ಬುದ್ಧಿವಂತರು" ಮತ್ತು "ನಮ್ಮನ್ನು ಈ ತನಕ ತಂದು ನಿಲ್ಲಿಸಿದ್ದಾರೆ" ಎಂದು ಹೇಳಿದ್ದರು.[೫೮][೫೯]

ಕ್ರೀಡಾಂಗಣ[ಬದಲಾಯಿಸಿ]

ಟೆಂಪ್ಲೇಟು:Infobox Stadium ಕ್ಲಬ್‌ ಮೊದಲಿಗೆ ಆರಂಭವಾದಾಗ, ನ್ಯೂಟನ್‌ ಹೀತ್‌ನ ಜನರು ಸ್ಥಳೀಯ ಕ್ರೀಡೆಗಳನ್ನು ನ್ಯೂಟನ್‌ ಹೀತ್‌ನಲ್ಲಿನ ನಾರ್ತ್‌ ‌ರೋಡ್‌ನಲ್ಲಿದ್ದ ಸಣ್ಣ ಮೈದಾನದಲ್ಲಿ ಆಡುತ್ತಿದ್ದರು. ಆದಾಗ್ಯೂ, ಅಲ್ಲಿಗೆ ಭೇಟಿ ನೀಡುತ್ತಿದ್ದ ತಂಡಗಳು "ಒಂದೆಡೆ ಜೌಗು ಪ್ರದೇಶ, ಇನ್ನೊಂದೆಡೆ ಕಲ್ಲುಗಣಿ/ಕ್ವಾರಿ ಮಾದರಿಯ ಕಲ್ಲುಗಳೇ ತುಂಬಿರುವ" ಮೈದಾನದ ಸ್ಥಿತಿ ಬಗ್ಗೆ ದೂರುತ್ತಿದ್ದರು.[೧೧] ಓಲ್ಡ್‌ಹ್ಯಾಂ ರೋಡ್‌ನಲ್ಲಿದ್ದ ತ್ರೀ ಕ್ರೌನ್ಸ್‌ ಪಬ್‌ನಿಂದ ನಡಿಗೆಯಲ್ಲಿ ಹತ್ತು ನಿಮಿಷ ದೂರವಿದ್ದ ಬಟ್ಟೆ ಬದಲಾಯಿಸುವ ಕೊಠಡಿಗಳೂ ಸಹಾ ಹೇಳಿಕೊಳ್ಳುವಷ್ಟು ಉತ್ತಮ ಸ್ಥಿತಿಯಲ್ಲಿರಲಿಲ್ಲ. ಆ ಕೊಠಡಿಗಳನ್ನು ನಂತರ ಓಲ್ಡ್‌ಹ್ಯಾಂ ರೋಡ್‌ನಲ್ಲೇ ಇದ್ದ ಶಿಯರ್ಸ್‌ ಹೋಟೆಲ್‌ಗೆ ಸ್ಥಳಾಂತರಿಸಲಾಯಿತಾದರೂ, ಫುಟ್‌ಬಾಲ್‌ ಲೀಗ್‌ನಲ್ಲಿ ಮುಂದುವರಿಯಬೇಕೆಂದರೆ ಬದಲಾವಣೆಗಳಾಗಬೇಕಾದ ಅಗತ್ಯವಿತ್ತು.

ಹೀತ್‌ ತಂಡದವರು ೧೮೭೮ರಿಂದ ಫುಟ್‌ಬಾಲ್‌ ಲೀಗ್‌ಗೆ ಪ್ರವೇಶ ಪಡೆದು ಒಂದು ವರ್ಷವಾಗುತ್ತಿದ್ದ ೧೮೯೩ರವರೆಗೆ ಹದಿನೈದು ವರ್ಷಗಳ ಕಾಲ ತಮ್ಮ ನಾರ್ತ್‌‌ ರೋಡ್‌ ಮೈದಾನದಲ್ಲಿಯೇ ಮುಂದುವರೆದು, ನಂತರ ಹತ್ತಿರದಲ್ಲಿಯೇ ಇದ್ದ ಕ್ಲೇಟನ್‌ನಲ್ಲಿನ ಬ್ಯಾಂಕ್‌ ಸ್ಟ್ರೀಟ್‌ನಲ್ಲಿನ ಹೊಸ ನೆಲೆಗೆ ಸ್ಥಳಾಂತರಗೊಂಡರು. ಮರಳಿನ ಮೇಲ್ಮೈ ಮೇಲೆ ಕಚ್ಚಿಕೊಂಡಿರುವ ಕೆಲ ಹುಲ್ಲು ಗೊಂಚಲುಗಳು ಹಾಗೂ ಪಕ್ಕದಲ್ಲಿಯೇ ಇದ್ದ ಕಾರ್ಖಾನೆಯಿಂದ ಹೊರಬಂದ ಹೊಗೆಯ ಮೋಡಗಳಿಂದ ಕೂಡಿದ್ದ ಹೊಸ ಮೈದಾನವೂ ಸಹಾ ಉತ್ತಮವಾಗೇನೂ ಇರಲಿಲ್ಲ. ಒಂದು ಸನ್ನಿವೇಶದಲ್ಲಿ ಸ್ಥಳದ ಸ್ಥಿತಿ ಎಷ್ಟು ಕೆಟ್ಟದಿತ್ತೆಂದರೆ ವಾಲ್‌ಸಲ್ಲ್‌ ಟೌನ್‌ ಸ್ವಿಫ್ಟ್‌ ತಂಡದವರು ಆಡಲೇ ನಿರಾಕರಿಸಿದರು. ಮೈದಾನ ಮೇಲ್ವಿಚಾರಕರಿಂದ ಒಂದು ಪದರ ಮರಳನ್ನು ಹಾಕಿಸಿದ ನಂತರ ಅತಿಥಿ ಆಟಗಾರರು ಆಡಲೊಪ್ಪಿದರೂ ೧೪-೦ ಅಂತರದಲ್ಲಿ ಸೋಲು ಕಂಡರು. ಮೈದಾನದ ಕಳಪೆ ಸ್ಥಿತಿಯಿಂದಾಗಿ ತಾವು ತೊಂದರೆಗೊಳಗಾದೆವೆಂದು ಈ ಫಲಿತಾಂಶದ ವಿರುದ್ಧ ಅವರು ಪ್ರತಿಭಟಿಸಿದುದರಿಂದ ಪಂದ್ಯವನ್ನು ಮತ್ತೆ ಆಡಲಾಯಿತು. ಎರಡನೇ ಬಾರಿಯೂ ಪರಿಸ್ಥಿತಿ ಉತ್ತಮವೇನೂ ಆಗಿರಲಿಲ್ಲವಾದರೂ, ವಾಲ್‌ಸಲ್ಲ್‌ ತಂಡವು ೯-೦ಯ ಅಂತರದಿಂದಲಾದರೂ ಮತ್ತೆ ಸೋಲೊಪ್ಪಬೇಕಾಯಿತು.[೧೧]

೧೯೦೨ರಲ್ಲಿ ಕ್ಲಬ್‌ ಹೆಚ್ಚುಕಡಿಮೆ ದಿವಾಳಿನಂಚಿಗೆ ತಲುಪಿತು ಹಾಗೂ ಅದರ ದಿವಾಳಿತನದಿಂದಾಗಿ ಕೋರ್ಟ್‌ ಆದೇಶದ ಮೇರೆಗೆ ಬ್ಯಾಂಕ್‌ ಸ್ಟ್ರೀಟ್‌ ಮೈದಾನವನ್ನು ಮುಚ್ಚಲಾಯಿತು. ಬ್ರಿಸ್ಟಾಲ್‌ ಸಿಟಿಯಲ್ಲಿ ನಡೆಯಲಿದ್ದ ಕ್ಲಬ್‌ನ ಪರಾಂಗಣ ಪಂದ್ಯಕ್ಕೆ ಕ್ಲಬ್‌ ಕೊಡಬೇಕಾದ ಹಣವನ್ನು ಹಾಗೂ ಹೀಗೂ ಹೊಂದಿಸಲು ಶಕ್ತರಾದ ನಾಯಕ ಹ್ಯಾರಿ ಸ್ಟಾಫರ್ಡ್‌ ಅಂತಿಮ ಗಳಿಗೆಯಲ್ಲಿ ಕ್ಲಬ್‌ಅನ್ನು ಉಳಿಸಿಕೊಂಡರು. ಬ್ಲಾಕ್‌ಪೂಲ್‌ನ ವಿರುದ್ಧದ ಸ್ಥಳೀಯ ಪಂದ್ಯಕ್ಕಾಗಿ ನೆರೆಯ ಹರ್ಪರ್‌ಹೇನಲ್ಲಿ ತಾತ್ಕಾಲಿಕ ಮೈದಾನವನ್ನು ಕಂಡುಕೊಂಡರು.[೬೦]

ಅವರು ತಕ್ಕ ಮಟ್ಟಿನ ಮೈದಾನವನ್ನು ಹೊಂದುವ ಹಂಬಲದೊಂದಿಗೆ ಕನಿಷ್ಠ ಬುಡಮಟ್ಟಕ್ಕೆ ಕ್ಲಬ್‌ಅನ್ನು ಮರಳಿಸಲು ಅಗತ್ಯವಾಗಿದ್ದ ಬಂಡವಾಳ ಹಾಕಿದ ನಂತರ ಅದನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌ ಎಂದು ಮರುನಾಮಕರಣಗೊಳಿಸಿದರು. ಏಪ್ರಿಲ್‌ ೧೯೦೯ರಲ್ಲಿ ಯುನೈಟೆಡ್‌ ಪ್ರಥಮ FA ಕಪ್‌ ಪ್ರಶಸ್ತಿ ಪಡೆಯುವ ಆರು ವಾರಗಳ ಮುಂಚೆಯಷ್ಟೇ ಸುಮಾರು £೬೦,೦೦೦ಯಷ್ಟು ಮೊತ್ತಕ್ಕೆ ಅಗತ್ಯವಾದ ಭೂಮಿಯನ್ನು ಕೊಂಡುಕೊಂಡ ನಂತರ ಓಲ್ಡ್‌ ಟ್ರ್ಯಾಫರ್ಡ್‌ಅನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌ನ ನೆಲೆಯಾಗಿ ಘೋಷಿಸಲಾಯಿತು. ಯುನೈಟೆಡ್‌ನ ಅಧ್ಯಕ್ಷ ಜಾನ್‌ ಹೆನ್ರಿ ಡೇವಿಸ್‌ರು ವಾಸ್ತುಶಿಲ್ಪಿ ಆರ್ಕಿಬಾಲ್ಡ್‌ ಲೀಚ್‌ರನ್ನು ‌ £೩೦,೦೦೦ ಮೊತ್ತದ ಅಂದಾಜು ಮೊತ್ತದಲ್ಲಿ ನಿರ್ಮಾಣವನ್ನು ಪೂರೈಸಲು ನೇಮಕ ಮಾಡಿದರು. ಮೂಲ ನಕ್ಷೆಯ ಪ್ರಕಾರ ಕ್ರೀಡಾಂಗಣವು ೧೦೦,೦೦೦ ಮಂದಿಯನ್ನು ಹಿಡಿಸಬಲ್ಲದು ಎಂದಾಗಿತ್ತಾದರೂ ನಂತರ ಅದನ್ನು ತಗ್ಗಿಸಿ ೭೭,೦೦೦ ಮಾಡಲಾಯಿತು. ಆದಾಗ್ಯೂ, ಅಧಿಕೃತವಾಗಿ ಈಗಿನ ಕ್ರೀಡಾಂಗಣದ ಸಾಮರ್ಥ್ಯಕ್ಕೂ ಮೀರಿದ ದಾಖಲೆ ಮೊತ್ತದ ೭೬,೯೬೨ ಮಂದಿಯ ಹಾಜರಾತಿಯನ್ನು ದಾಖಲಿಸಿದೆ. ನಿರ್ಮಾಣವನ್ನು ಮ್ಯಾಂಚೆಸ್ಟರ್‌ನ ಮೆಸರ್ಸ್‌ ಬ್ರಾಮೆಲ್ಡ್‌ ಮತ್ತು ಸ್ಮಿತ್‌ ಸಂಸ್ಥೆಗಳು ಕೈಗೊಂಡವು. ಕ್ರೀಡಾಂಗಣದ ಪ್ರಾರಂಭ ಸಮಯದಲ್ಲಿ, ನಿಂತು ವೀಕ್ಷಿಸುವ ಟಿಕೆಟ್‌ಗಳ ಬೆಲೆ ಆರು ಪೆನ್ಸ್‌ಗಳಿದ್ದರೆ, ಅತಿ ದುಬಾರಿ ಎನಿಸಿದ ಪ್ರಧಾನ ಅಟ್ಟಣೆಯ ಟಿಕೆಟ್‌ಗಳ ಬೆಲೆ ಐದು ಶಿಲ್ಲಿಂಗ್‌ಗಳಾಗಿದ್ದವು. ಉದ್ಘಾಟನಾ ಪಂದ್ಯವನ್ನು ೧೯ ಫೆಬ್ರವರಿ ೧೯೧೦ರಂದು ಲಿವರ್‌ಪೂಲ್‌ F.C. ವಿರುದ್ಧ ಆಡಲಾಯಿತು, ಇದರ ಫಲಿತಾಂಶವಾಗಿ ಅತಿಥಿ ತಂಡವು ೪-೩ರಲ್ಲಿ ವಿಜಯ ಪಡೆಯಿತು. ಹೀಗಾದುದರಿಂದ, ಮೈದಾನದ ಬದಲಾವಣೆ ಅಷ್ಟು ಬೇಗ ಆಗುವ ಸಾಧ್ಯತೆ ಇರುತ್ತಿರಲಿಲ್ಲ -ಕ್ಲಬ್‌ ತಂಡವು ಬ್ಯಾಂಕ್‌ ಸ್ಟ್ರೀಟ್‌ನಲ್ಲಿ ತಮ್ಮ ಕೊನೆಯ ಪಂದ್ಯ ಆಡಿದ ಕೆಲವೇ ದಿನಗಳ ನಂತರ ಅಲ್ಲಿನ ಅಟ್ಟಣೆಯೊಂದು ಚಂಡಮಾರುತದಿಂದಾಗಿ ಹಾರಿ ಹೋಯಿತು.[೬೧]

ಎರಡನೇ ವಿಶ್ವ ಸಮರದಲ್ಲಿ ೧೧ ಮಾರ್ಚ್‌ ೧೯೪೧ರಲ್ಲಿ ಆದ ಬಾಂಬ್‌ ದಾಳಿಯಿಂದಾಗಿ ಕ್ರೀಡಾಂಗಣದ ಬಹುಭಾಗ ನಾಶವಾಯಿತು, ಪ್ರಮುಖವಾಗಿ ಪ್ರಧಾನ ಅಟ್ಟಣೆಯೂ ನಾಶಗೊಂಡಿತು. ದಕ್ಷಿಣ ಅಟ್ಟಣೆಯ ಕೇಂದ್ರೀಯ ಸುರಂಗವೊಂದೇ ಮೈದಾನದ ಆ ವಿಭಾಗದಲ್ಲಿ ಉಳಿದುಕೊಂಡಿತು. ಯುದ್ಧದ ನಂತರ, ಸಮರ ಹಾನಿ ಆಯೋಗಕ್ಕೆ ಯುನೈಟೆಡ್‌ ಸಂಸ್ಥೆಯು ವರದಿ ಸಲ್ಲಿಸಿ, ಮೈದಾನದ ಮರುನಿರ್ಮಾಣಕ್ಕೆಂದು £೨೨,೨೭೮ ಮೊತ್ತದ ಪರಿಹಾರ ಪಡೆಯಿತು. ೧೯೪೯ರಲ್ಲಿ ಮೈದಾನವನ್ನು ಪುನಃನಿರ್ಮಿಸಿದರೂ ಸುಮಾರು ೧೦ ವರ್ಷಗಳ ಕಾಲ ಓಲ್ಡ್‌ ಟ್ರ್ಯಾಫರ್ಡ್‌ನಲ್ಲಿ ಯಾವುದೇ ಆಟ ಆಡಲಾಗಲಿಲ್ಲ, ಬದಲಿಗೆ ಆ ಅವಧಿಯ "ಸ್ಥಳೀಯ" ಪಂದ್ಯಗಳನ್ನೆಲ್ಲಾ ತಂಡದ ಆಟಗಾರರು ಮ್ಯಾಂಚೆಸ್ಟರ್‌ ಸಿಟಿ'ಯ ಮೈನೆ ರೋಡ್‌ನಲ್ಲಿನ ಮೈದಾನದಲ್ಲಿಯೇ ಆಡಿದರು. ಮ್ಯಾಂಚೆಸ್ಟರ್‌ ಸಿಟಿಯು ತನ್ನ ಕ್ರೀಡಾಂಗಣದ ಬಳಕೆಗೆಂದು ವಾರ್ಷಿಕ £೫,೦೦೦ ಮತ್ತು ಪ್ರವೇಶ ಶುಲ್ಕದ ಅತ್ಯಲ್ಪ ಭಾಗವನ್ನು ಶುಲ್ಕವಾಗಿ ಪಡೆಯುತ್ತಿತ್ತು.[೬೨]

ತರುವಾಯ ಸ್ಟ್ರೆಟ್‌ಪೋರ್ಡ್‌ ತುದಿಗೆ ಛಾವಣಿ ಹಾಕಿಸುವುದರೊಂದಿಗೆ ಆರಂಭವಾದ ಇನ್ನೂ ಅನೇಕ ಸುಧಾರಣೆಗಳ ಮೂಲಕ ಉತ್ತರ ಹಾಗೂ ಪೂರ್ವ ಭಾಗದ ಅಟ್ಟಣೆಗಳಿಗೆ ಛಾವಣಿ ಹಾಕಿಸಲಾಯಿತು. ಆದಾಗ್ಯೂ, ಹಳೇ-ಮಾದರಿಯ ಛಾವಣಿಯು ಅನೇಕ ಅಭಿಮಾನಿಗಳಿಗೆ ಪಂದ್ಯದ ನೋಟವನ್ನು ಅಸ್ಪಷ್ಟಗೊಳಿಸುತ್ತಿದ್ದ ಕಾರಣ, ಅವುಗಳನ್ನು ಚಾಚುತೊಲೆಗಳ ಛಾವಣಿಗಳಾಗಿ ಅಭಿವೃದ್ಧಿಪಡಿಸಲಾಯಿತು, ಈ ಚಾಚುತೊಲೆಗಳನ್ನು ಕ್ರೀಡಾಂಗಣದಲ್ಲಿ ಈಗಲೂ ಕಾಣಬಹುದು. ಸ್ಟ್ರೆಟ್‌ಫೋರ್ಡ್‌ ತುದಿಯು ಚಾಚುತೊಲೆ ಛಾವಣಿಯ ಅಭಿವೃದ್ಧಿಗೊಳಪಟ್ಟ ಅಂತಿಮ ಅಟ್ಟಣೆಯಾಗಿತ್ತು, ಇದನ್ನು 1993–94ರ ಕ್ರೀಡಾಋತುವಿನ ಆರಂಭದ ಹೊತ್ತಿಗೆ ಈ ಕಾರ್ಯವು ಮುಕ್ತಾಯಗೊಂಡಿತು.[೬೩]

೧೯೫೦ರ ದಶಕದ ಮಧ್ಯದಲ್ಲಿ ಪ್ರಥಮ ಬಾರಿಗೆ ಹೊನಲು ಬೆಳಕಿನ ದೀಪಗಳನ್ನು ಮೈದಾನದಲ್ಲಿ ಅಳವಡಿಸಲಾಯಿತು. ಪ್ರತಿ ಗೋಪುರದಲ್ಲಿ ೫೪ ಪ್ರತ್ಯೇಕ ಹೊನಲುದೀಪಗಳನ್ನು ಹೊಂದಿರುವಂತೆ ನಾಲ್ಕು 180-foot (55 m)-ಗಾತ್ರದ ಆಧಾರಗೋಪುರಗಳನ್ನು ನಿರ್ಮಿಸಲಾಯಿತು. ೨೫ ಮಾರ್ಚ್‌ ೧೯೫೭ರಂದು ನಡೆದ ಪಂದ್ಯವೊಂದರಲ್ಲಿ ಪ್ರಪ್ರಥಮವಾಗಿ ಬಳಸಿದ ಈ ಸಮಸ್ತ ದೀಪವ್ಯವಸ್ಥೆಗೆಂದು ಕ್ಲಬ್‌ £೪೦,೦೦೦ ಮೊತ್ತವನ್ನು ವೆಚ್ಚ ಮಾಡಿತು. ಆದಾಗ್ಯೂ, ಹಳೆಯ ಮಾದರಿಯ ಹೊನಲು ದೀಪಗಳನ್ನು ೧೯೮೭ರಲ್ಲಿ ಕಳಚಿ ಪ್ರತಿ ಅಟ್ಟಣಿಗೆಯ ಛಾವಣಿಯಲ್ಲೇ ಸೇರಿಕೊಂಡಿರುವಂತೆ ನವೀನ ದೀಪ ವ್ಯವಸ್ಥೆಯನ್ನು ಅಳವಡಿಸಲಾಯಿತು, ಇವು ಇಂದಿಗೂ ಸುವ್ಯವಸ್ಥೆಯಲ್ಲಿವೆ.

೧೯೯೦ರಲ್ಲಿನ ಹಿಲ್ಸ್‌ಬರೋ ದುರ್ಘಟನೆಯ ನಂತರ, ನೀಡಿದ ವರದಿಯ ಪ್ರಕಾರ ಎಲ್ಲಾ ಕ್ರೀಡಾಂಗಣಗಳನ್ನು ಸಂಪೂರ್ಣವಾಗಿ-ಕುಳಿತು ವೀಕ್ಷಿಸುವ ವ್ಯವಸ್ಥೆಗೆ ಪರಿವರ್ತಿಸಲೇಬೇಕಾದುದರಿಂದ, ತರುವಾಯದ ಅಗತ್ಯ ನವೀಕರಣದಿಂದಾಗಿ ಅದರ ಸಾಮರ್ಥ್ಯವನ್ನು ಮತ್ತಷ್ಟು ಇಳಿಸಿದುದರಿಂದ ಸುಮಾರು ೪೪,೦೦೦ ಮಂದಿಯ ಸಾಮರ್ಥ್ಯ ಪಡೆಯಿತು. ಆದಾಗ್ಯೂ ಕ್ಲಬ್‌ನ ಜನಪ್ರಿಯತೆ ಮತ್ತಷ್ಟು ಅಭಿವೃದ್ಧಿಯ ಸಾಧ್ಯತೆಗಳನ್ನು ನಿಚ್ಚಳಗೊಳಿಸಿತು. ೧೯೯೫ರಲ್ಲಿ, ಉತ್ತರ ಅಟ್ಟಣಿಗೆಯನ್ನು ಮೂರು ಅಂತಸ್ತುಗಳನ್ನು ಹೊಂದಿರುವಂತೆ ಮರುಅಭಿವೃದ್ಧಿಪಡಿಸಿದುದರಿಂದ ಸಾಮರ್ಥ್ಯವು ಸರಿಸುಮಾರು ೫೫,೦೦೦ಕ್ಕೆ ಏರಿತು. ಇದರ ತರುವಾಯ ಮೊದಲಿಗೆ ಪೂರ್ವದ ಅಟ್ಟಣಿಗೆಯ ವಿಸ್ತರಣೆ ಹಾಗೂ ನಂತರ ಪಶ್ಚಿಮ ಅಟ್ಟಣಿಗೆಯನ್ನು ಸಹಾ ವಿಸ್ತರಿಸಿ ಒಟ್ಟು ಸಾಮರ್ಥ್ಯವನ್ನು ೬೮,೦೦೦ಕ್ಕೆ ಏರಿಸಲಾಯಿತು. ತೀರ ಇತ್ತೀಚಿನ ವಿಸ್ತರಣೆಯು ೨೦೦೬ರಲ್ಲಿ ಮುಕ್ತಾಯವಾಯಿತು, ಈಶಾನ್ಯ ಮತ್ತು ವಾಯುವ್ಯ ಕಾಲುದಾರಿಗಳು ಮುಕ್ತಗೊಂಡಾಗ, ಪ್ರಸಕ್ತ ದಾಖಲೆಯಾಗಿರುವ ೭೬,೦೯೮ ಮಂದಿಯ ಎಂದರೆ ಕ್ರೀಡಾಂಗಣದ ಪ್ರಸಕ್ತ ಒಟ್ಟು ಸಾಮರ್ಥ್ಯಕ್ಕಿಂತ ಕೇವಲ ೧೦೪ ಕಡಿಮೆ ಜನರ ದಾಖಲಾತಿಯನ್ನು ಹೊಂದಲು ಸಾಧ್ಯವಾಯಿತು.[೬೩]

ಒಂದು ಅಂದಾಜಿನ ಪ್ರಕಾರ, ಕ್ರೀಡಾಂಗಣಕ್ಕೆ ಮಾಡಬಹುದಾದ ಇನ್ನು ಯಾವುದೇ ಅಭಿವೃದ್ಧಿ ಕಾಮಗಾರಿಯ, ವಿಶೇಷವಾಗಿ ಈಗಲೂ ಒಂದೇ ಅಂತಸ್ತಿರುವ ದಕ್ಷಿಣ ಅಟ್ಟಣಿಗೆಯ ಅಭಿವೃದ್ಧಿ ವೆಚ್ಚವು ಕಳೆದ ಹದಿನಾಲ್ಕು ವರ್ಷಗಳಲ್ಲಿ ಕ್ರೀಡಾಂಗಣಕ್ಕೆಂದು ವ್ಯಯಿಸಲ್ಪಟ್ಟ £೧೧೪ ದಶಲಕ್ಷ ಮೊತ್ತಕ್ಕೆ ಸರಿಸಮಾನವಾಗಬಲ್ಲದಾಗಿರುತ್ತದೆ. ಇದೇಕೆಂದರೆ ಸುಮಾರು ಐವತ್ತು ಮನೆಗಳ ಸ್ಥಳವನ್ನು ಕ್ಲಬ್‌ ಈ ಕಾಮಗಾರಿಗೆಂದು ಕೊಂಡುಕೊಳ್ಳಬೇಕಾಗಿದ್ದು ಅದು ಸ್ಥಳೀಯರಿಗೆ ಸಾಕಷ್ಟು ಅನಾನುಕೂಲವನ್ನುಂಟು ಮಾಡಬಲ್ಲದಲ್ಲದೇ, ಮಾಡಬೇಕಾದ ಯಾವುದೇ ವಿಸ್ತರಣೆಗೆ ಕ್ರೀಡಾಂಗಣಕ್ಕೆ ಸಮೀಪವಾಗಿ ಹಾದುಹೋಗಿರುವ ರೈಲುದಾರಿಯ ಮೇಲೆ ನಿರ್ಮಾಣ ಮಾಡಬೇಕಾಗುತ್ತದೆ. ಪರಿಪೂರ್ಣ ರೂಪದ ಅಭಿವೃದ್ದಿ ಯೋಜನೆಯ ಅನುಸಾರ ದಕ್ಷಿಣ ಅಟ್ಟಣಿಗೆಯನ್ನು ಕನಿಷ್ಟ ಎರಡು ಅಂತಸ್ತುಗಳಿಗೆ ಎತ್ತರಿಸಿ ನೈಋತ್ಯ ಮತ್ತು ಆಗ್ನೇಯ ಕಾಲುದಾರಿಗಳನ್ನು ವ್ಯಾಪಿಸುವಂತೆ ಮಾಡಿ ಕ್ರೀಡಾಂಗಣದ ಬೋಗುಣಿ ಆಕೃತಿಯನ್ನು ಮರುಕಳಿಸಬೇಕಾಗಿರುತ್ತದೆ. ಪ್ರಸಕ್ತ ಅಂದಾಜಿನ ಪ್ರಕಾರ ಪೂರ್ಣಗೊಂಡ ಕ್ರೀಡಾಂಗಣದ ಯೋಜಿತ ಸಾಮರ್ಥ್ಯವು ನವೀನ ವೆಂಬ್ಲೆ ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚಿದ್ದು ಸುಮಾರು ೯೬,೦೦೦ ವೀಕ್ಷಕರ ಸಾಮರ್ಥ್ಯವನ್ನು ಹೊಂದಲಿದೆ.[೬೩]

ಪ್ರಾಯೋಜಕತ್ವ[ಬದಲಾಯಿಸಿ]

AIG ಸಂಸ್ಥೆಯು ಮ್ಯಾಂಚೆಸ್ಟರ್‌ ಯುನೈಟೆಡ್‌ನ ಪ್ರಮುಖ ಪ್ರಾಯೋಜಕರಾಗಿದ್ದು, ಪ್ರಾಯೋಜಕತ್ವ ಒಪ್ಪಂದದ ಭಾಗವಾಗಿ, ಅವರ ಲೋಗೋವನ್ನು ಕ್ಲಬ್‌ನ ಸಮವಸ್ತ್ರಗಳು ಮತ್ತು ಇತರೆ ಬಹುಪಾಲು ವಾಣಿಜ್ಯ ಸರಕುಗಳ ಮೇಲೆ ಪ್ರದರ್ಶಿಸಲಾಗಿರುತ್ತದೆ. AIG ಒಪ್ಪಂದದ ವಿಚಾರವನ್ನು ಮ್ಯಾಂಚೆಸ್ಟರ್‌ ಯುನೈಟೆಡ್‌ನ ಮುಖ್ಯ ಕಾರ್ಯನಿರ್ವಾಹಕರಾದ ಡೇವಿಡ್‌ ಗಿಲ್‌ರವರು ೬ ಏಪ್ರಿಲ್‌ ೨೦೦೬ರಂದು ಘೋಷಿಸಿದರು, ಈ ವ್ಯವಹಾರವು ಬ್ರಿಟಿಷ್‌ ದಾಖಲೆಯಾದ £೫೬.೫ ದಶಲಕ್ಷ ಮೊತ್ತದಾಗಿದ್ದು, ನಾಲ್ಕು ವರ್ಷಗಳ ಅವಧಿಯಲ್ಲಿ (ಪ್ರತಿ ವರ್ಷ £೧೪.೧ ದಶಲಕ್ಷದಂತೆ) ಪಾವತಿ ಮಾಡುವ ವ್ಯವಸ್ಥೆಯನ್ನು ಹೊಂದಿತ್ತು.[೬೪] ಸೆಪ್ಟೆಂಬರ್‌ ೨೦೦೬ರಲ್ಲಿ ಜ್ಯೂವೆಂಟಸ್‌ ಸಂಸ್ಥೆಯು ಟಮಾಯಿಲ್‌ ತೈಲ ಸಂಸ್ಥೆಯೊಂದಿಗೆ ಹೊಂದಿದ್ದ ಪ್ರತಿವರ್ಷಕ್ಕೆ £೧೫ ದಶಲಕ್ಷದ ವ್ಯವಹಾರದ ಮರುಸಂಧಾನದ ನಂತರ ಈ ವ್ಯವಹಾರವು ವಿಶ್ವದಲ್ಲೇ ಅತಿ ಹೆಚ್ಚಿನ ಮೊತ್ತದ ವ್ಯವಹಾರವಾಗಿ ಮಾರ್ಪಟ್ಟಿತು.[೬೫] ೨೧ ಜನವರಿ ೨೦೦೯ರಂದು, ಮೇ ೨೦೧೦ರಲ್ಲಿ ಮುಕ್ತಾಯವಾಗಲಿರುವ ಕ್ಲಬ್‌ನ ಪ್ರಾಯೋಜಕತ್ವವನ್ನು AIG ಸಂಸ್ಥೆಯು ನವೀಕರಿಸುವುದಿಲ್ಲವೆಂದು ಘೋಷಿಸಲಾಯಿತು. ಆದಾಗ್ಯೂ MUಗೆ ಬಂಡವಾಳ ಪೂರೈಕೆಯ AIGಯ ಒಪ್ಪಂದವು ಮುಂದುವರೆಯುತ್ತದೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.[೬೬] ಅಮೇರಿಕಾದ ಮರುವಿಮೆ ಕಂಪೆನಿ ಏವನ್‌/ಎವಾನ್‌/ಆನ್‌ಯನ್ನು ಕ್ಲಬ್‌ನ ಪ್ರಧಾನ ಪ್ರಾಯೋಜಕರೆಂದು ೩ ಜೂನ್‌ ೨೦೦೯ರಂದು ಘೋಷಿಸಲಾಯಿತು, ಕ್ಲಬ್‌ಗೆ ಅವರ ಪ್ರಾಯೋಜಕತ್ವವು 2010–11 ಕ್ರೀಡಾಋತುವಿನ ಆರಂಭದಿಂದ ಜಾರಿಗೊಳ್ಳಲಿದೆ.[೬೭] ಈ ವ್ಯವಹಾರದ ವಿವರಗಳನ್ನು ಬಹಿರಂಗಗೊಳಿಸಲಾಗಿಲ್ಲವಾದರೂ, ವರದಿಯ ಪ್ರಕಾರ ನಾಲ್ಕು ವರ್ಷಗಳ ಅವಧಿಗೆ ಸರಿಸುಮಾರು £೮೦ ದಶಲಕ್ಷ ಮೊತ್ತದೆಂದು ಹೇಳಲಾಗಿದ್ದು, ಇದು ಈ ವ್ಯವಹಾರವನ್ನು ಫುಟ್‌ಬಾಲ್‌ ಇತಿಹಾಸದಲ್ಲೇ ಅತಿ ದೊಡ್ಡ ಪ್ರಾಯೋಜಕತ್ವ ವ್ಯವಹಾರವನ್ನಾಗಿ ಮಾಡಲಿದೆ.[೬೮]

ಕ್ಲಬ್‌ ಇದುವರೆವಿಗೂ ಕೇವಲ ಮೂವರು ಸಮವಸ್ತ್ರ ಪ್ರಾಯೋಜಕರನ್ನು ಮಾತ್ರವೇ ಕಂಡಿದೆ. ಪ್ರಪ್ರಥಮ ಹಾಗೂ ದೀರ್ಘಕಾಲದ ಪ್ರಾಯೋಜನೆಯೆಂದರೆ ೧೯೮೨ರಿಂದ ೨೦೦೦ದವರೆಗೆ ಕ್ಲಬ್‌ಅನ್ನು ಪ್ರಾಯೋಜಿಸಿದ ಶಾರ್ಪ್‌ ಎಲೆಕ್ಟ್ರಾನಿಕ್ಸ್‌ರದ್ದು, ಇಂಗ್ಲೀಷ್‌ ಫುಟ್‌ಬಾಲ್‌ನ ವ್ಯವಹಾರಗಳಲ್ಲೇ ಈ ವ್ಯವಹಾರವು ಅತ್ಯಂತ ದೀರ್ಘಕಾಲದ ಹಾಗೂ ಲಾಭಪ್ರದ ವ್ಯವಹಾರಗಳಲ್ಲೊಂದಾಗಿತ್ತು.[೬೯][೭೦] ಶಾರ್ಪ್‌ನ ಲೋಗೋವನ್ನು ಯುನೈಟೆಡ್‌ನ ಸಮವಸ್ತ್ರಗಳ ಮೇಲೆ ಪ್ರದರ್ಶಿಸಲಾಗುತ್ತಿದ್ದ ಈ ೧೭ ವರ್ಷಗಳಲ್ಲಿ ತಂಡವು ಏಳು ಪ್ರೀಮಿಯರ್‌ ಲೀಗ್‌ ಪ್ರಶಸ್ತಿಗಳು, ಐದು FA ಕಪ್‌ಗಳು, ಒಂದು ಫುಟ್‌ಬಾಲ್‌ ಲೀಗ್‌ ಕಪ್‌, ಒಂದು ಯುರೋಪಿಯನ್‌ ಕಪ್‌ ವಿನ್ನರ್ಸ್‌' ಕಪ್‌ ಮತ್ತು ಒಂದು ಯುರೋಪಿಯನ್‌ ಕಪ್‌ಅನ್ನು ಗೆದ್ದಿತ್ತು. ೨೦೦೦–೦೧ರ ಕ್ರೀಡಾಋತುವಿನ[೬೯][೭೦] ಆರಂಭದಲ್ಲಿ ಪ್ರಾಯೋಜಕತ್ವವನ್ನು ಆರಂಭಿಸುವಂತೆ ವೊಡಾಫೋನ್‌ ೧೧ ಫೆಬ್ರವರಿ ೨೦೦೦ರಂದು ಪ್ರಾಥಮಿಕವಾಗಿ ನಾಲ್ಕು-ವರ್ಷಗಳ £೩೦ ದಶಲಕ್ಷ ಮೊತ್ತದ ವ್ಯವಹಾರವನ್ನು ಪಡೆದುಕೊಂಡಿತು. ಡಿಸೆಂಬರ್‌ ೨೦೦೩ರಲ್ಲಿ ೨೦೦೪ರಿಂದ ೨೦೦೮[೭೧] ರವರೆಗೆ ನಾಲ್ಕು ವರ್ಷಗಳಿಗೆ £೩೬ ದಶಲಕ್ಷ ಮೊತ್ತ ಪಾವತಿಸಲು ಒಪ್ಪಿಕೊಂಡು ವೊಡಾಫೋನ್‌ ತನ್ನ ಪ್ರಾಯೋಜಕತ್ವದ ಒಪ್ಪಂದವನ್ನು ಮುಂದುವರೆಸಿತು. ಆದಾಗ್ಯೂ , ೨೩ ನವೆಂಬರ್‌ ೨೦೦೫ರಂದು, ವೊಡಾಫೋನ್‌ UEFA ಚಾಂಪಿಯನ್ಸ್‌‌ ಲೀಗ್‌[೭೨] ನ ಪ್ರಾಯೋಜಕತ್ವಕ್ಕೆ ಗಮನ ಒಟ್ಟುಗೂಡಿಸುವುದಕ್ಕಾಗಿ ಮೇ ೨೦೦೬ಕ್ಕೆ ತಮ್ಮ ಪ್ರಾಯೋಜಕತ್ವವನ್ನು ಕೊನೆಗೊಳಿಸುತ್ತಿರುವುದಾಗಿ ಘೋಷಿಸಿತು.

ಇದೇ ರೀತಿಯಲ್ಲಿ, ಈ ಕ್ಲಬ್‌ ಸ್ಥಳೀಯ ಕ್ರೀಡಾಉಡುಪು ತಯಾರಕ ಕಂಪೆನಿಯಾದ ಉಂಬ್ರೋನಿಂದ ಆರಂಭಿಸಿ ಕೇವಲ ನಾಲ್ಕು ಸ್ವಾಯತ್ತ ಕಿಟ್‌ ತಯಾರಕರನ್ನು ಹೊಂದಿತ್ತು. ಅಡ್ಮಿರಲ್‌ ೧೯೭೫ರಲ್ಲಿ ಈ ವ್ಯವಹಾರವನ್ನು ಪಡೆದುಕೊಂಡು, ೧೯೭೬[೭೩] ರಲ್ಲಿ ಪ್ರಪ್ರಥಮ ಬಾರಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ರೀಡಾಉಡುಪಿನ ಮೇಲೆ ತಮ್ಮ ಲೋಗೋವನ್ನು ಪ್ರದರ್ಶಿಸಿದ ಕಂಪೆನಿಯಾಯಿತು. ಅಡಿಡಾಸ್‌ ೧೯೮೦[೭೪] ರಲ್ಲಿ ಇದನ್ನು ಮುಂದುವರೆಸಿ, ೧೯೯೨[೭೫] ರಲ್ಲಿ ಉಂಬ್ರೋ ಮತ್ತೆ ಕ್ಲಬ್‌ನ ಕಿಟ್‌ ತಯಾರಕರಾಗಿ ಕಾರ್ಯಾಚರಿಸುವ ಅವಧಿಯವರೆಗೆ ಪಡೆದುಕೊಂಡಿತ್ತು. ಉಂಬ್ರೋನ ಪ್ರಾಯೋಜಕತ್ವವು ಇನ್ನೂ ಹತ್ತು ವರ್ಷಗಳವರೆಗೆ ಮುಂದುವರೆದು, ನೈಕ್‌ನೊಂದಿಗೆ ಚೊಚ್ಚಲ ದಾಖಲೆಯ £೩೦೨.೯ ದಶಲಕ್ಷ ಮೌಲ್ಯದ ವ್ಯವಹಾರದ ಹೊತ್ತಿಗೆ ಕೊನೆಗೊಂಡಿತು. ನೈಕ್‌ನೊಂದಿಗಿನ ಒಪ್ಪಂದವು ಕನಿಷ್ಟ ೨೦೧೫[೭೬] ರವರೆಗೆ ಪ್ರಾಥಮಿಕವಾಗಿ ೧೩ ವರ್ಷಗಳ ಕಾಲ ಮುಂದುವರೆಯುವುದು.

ಪ್ರತಿಸ್ಪರ್ಧಿಗಳು[ಬದಲಾಯಿಸಿ]

ಐತಿಹಾಸಿಕವಾಗಿ, ಮ್ಯಾಂಚೆಸ್ಟರ್‌ ಯುನೈಟೆಡ್‌ನ ಸಮೀಪದ ಎದುರಾಳಿಗಳೆಂದರೆ ಲಿವರ್‌ಪೂಲ್‌, ಮ್ಯಾಂಚೆಸ್ಟರ್‌ ಸಿಟಿ ಮತ್ತು ಲೀಡ್ಸ್‌ ಯುನೈಟೆಡ್‌ಗಳಾಗಿದ್ದವು.[೭೭][೭೮] ಪ್ರಸಕ್ತ, ಹೆಚ್ಚಿನ ಅಭಿಮಾನಿಗಳು ಉಭಯ ಕ್ಲಬ್‌[೭೯] ಗಳ ಯಶಸ್ಸಿನಿಂದಾಗಿ ಲಿವರ್‌ಪೂಲ್‌ಅನ್ನು ಅವರ ಅತಿ ದೊಡ್ಡ ಎದುರಾಳಿಗಳೆಂದು ಪರಿಗಣಿಸಿದ್ದರೂ, ಉಳಿದವರು ಈಗಲೂ ಮ್ಯಾಂಚೆಸ್ಟರ್‌ ಸಿಟಿಯನ್ನು ಅವರ ಪ್ರಮುಖ ಎದುರಾಳಿ ಎಂದು ಭಾವಿಸುತ್ತಾರೆ.

ಲಿವರ್‌ಪೂಲ್‌ನೊಂದಿಗಿನ ಪೈಪೋಟಿಯು ೧೯೬೦ರ ದಶಕದಲ್ಲಿ ಇಂಗ್ಲೆಂಡ್‌ನಲ್ಲಿ ಉಭಯ ಕ್ಲಬ್‌ಗಳೂ ಸದೃಢ ತಂಡಗಳೆಂದು ಪರಿಗಣಿತವಾಗುತ್ತಿದ್ದ ಸಮಯದಿಂದ ಆರಂಭವಾಗಿ, ಆಗಿನಿಂದ ಪ್ರತಿ ಕ್ರೀಡಾಋತುವಿನಲ್ಲೂ ತೀವ್ರವಾಗಿ ಪೈಪೋಟಿ ನಡೆಸುತ್ತಿವೆ. ಮ್ಯಾಂಚೆಸ್ಟರ್‌ ಸಿಟಿಯೊಂದಿಗಿನ ಪೈಪೋಟಿಯು ೧೮೯೦ರ ದಶಕದ ನ್ಯೂಟನ್‌ ಹೀತ್‌ ಅವಧಿಯಿಂದ ಆರಂಭವಾಗಿ ತಮ್ಮ ಇತಿಹಾಸದಲ್ಲಿ ಎರಡೂ ತಂಡಗಳು ಬಹಳ ಮಟ್ಟಿಗೆ ಒಂದೇ ವಿಭಾಗದಲ್ಲಿದ್ದುದರಿಂದ ತೀವ್ರವಾಗಿಯೇ ಮುಂದುವರೆದಿವೆ. ಸಾಂಪ್ರದಾಯಿಕ ಯಾರ್ಕ್‌ಷೈರ್‌-ಲಂಕಾಷೈರ್‌ ಪೈಪೋಟಿಯನ್ನು ಆಧರಿಸಿದ್ದರೂ, ಲೀಡ್ಸ್‌ ಯುನೈಟೆಡ್‌ನೊಂದಿಗಿನ ಪೈಪೋಟಿಯು ೧೯೬೦ರ ದಶಕದ ಉತ್ತರಾರ್ಧದಲ್ಲಿ ಲೀಡ್ಸ್‌ ತಂಡ ಮುನ್ನಡೆ ಪಡೆದಾಗ ಆರಂಭಿಸಿ, ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಮುಂದುವರೆದು, ತನ್ನ ಉತ್ತುಂಗವನ್ನ ತಲುಪಿದ ೧೯೯೨ರ ಲೀಗ್‌ ಪ್ರಶಸ್ತಿ ಪಂದ್ಯದಲ್ಲಿ ಲೀಡ್ಸ್‌ ತನ್ನ ಎದುರಾಳಿ ಯುನೈಟೆಡ್‌ಅನ್ನು ಚರ್ಚಾಸ್ಪದವಾಗಿ ಕೊನೆ ಗಳಿಗೆಯಲ್ಲಿ ಸೋಲಿಸಿದ ಸಮಯದವರೆಗೂ ಮುಂದುವರೆಯಿತು.

ಪ್ರಶಸ್ತಿಗಳು[ಬದಲಾಯಿಸಿ]

ದೇಶೀಯ[ಬದಲಾಯಿಸಿ]

ಲೀಗ್‌ ಪಂದ್ಯಗಳು[ಬದಲಾಯಿಸಿ]

ಕಪ್‌ಗಳು[ಬದಲಾಯಿಸಿ]

ಯೂರೋಪಿಯನ್‌[ಬದಲಾಯಿಸಿ]

ವಿಶ್ವಾದ್ಯಂತ[ಬದಲಾಯಿಸಿ]

ಡಬಲ್‌ಗಳು ಮತ್ತು ಟ್ರಿಬಲ್‌ಗಳು[ಬದಲಾಯಿಸಿ]

ವಿಶೇಷವಾಗಿ ಸಣ್ಣ ಸ್ಪರ್ಧೆಗಳಾದ ದತ್ತಿ/ಸಮುದಾಯ ಪಾರಿತೋಷಕ, ಇಂಟರ್‌ಕಾಂಟಿನೆಂಟಲ್‌ ಕಪ್‌, FIFA ಕ್ಲಬ್‌ ವಿಶ್ವ ಕಪ್‌ ಅಥವಾ ಸೂಪರ್‌ ಕಪ್‌ ಪಂದ್ಯಗಳನ್ನು ಡಬಲ್‌ ಅಥವಾ ಟ್ರಿಬಲ್‌ ಪಂದ್ಯಗಳೆಂದು ಪರಿಗಣಿಸಲಾಗುವುದಿಲ್ಲ.

ಮ್ಯಾಂಚೆಸ್ಟರ್‌ ಯುನೈಟೆಡ್‌ನವರು ‌೧೯೮೪–೮೫ರಲ್ಲಿ ಒಮ್ಮೆ ಕ್ವಾರ್ಟರ್‌ ಫೈನಲ್ ಮತ್ತು ೧೯೬೪–೬೫[೮೧][೮೨] ರಲ್ಲಿ ಪೂರ್ವಗಾಮಿ ಟೂರ್ನಮೆಂಟ್‌ ಪಂದ್ಯವಾದ, ಇಂಟರ್‌-ಸಿಟೀಸ್‌ ಫೇರ್ಸ್‌ ಕಪ್‌ನ ಸೆಮಿ-ಫೈನಲ್‌ಗಳನ್ನು ತಲುಪಲು ಯಶಸ್ವಿಯಾಗಿದ್ದರೂ,ಅವರು ಇದುವರೆಗೂ ಪಡೆಯಲಾರದ ಏಕೈಕ ಪ್ರಮುಖ ಪ್ರಶಸ್ತಿಯೆಂದರೆ UEFA ಕಪ್‌[೮೩] ಮಾತ್ರ.

ಇದನ್ನು ನೋಡಿರಿ[ಬದಲಾಯಿಸಿ]

ಬೆಂಬಲಿಗರ ಸಂಸ್ಥೆಗಳು
ಅಭಿಮಾನಿ ಪತ್ರಿಕೆಗಳು

ಆಕರಗಳು[ಬದಲಾಯಿಸಿ]

 1. "Manchester United Football Club". Premier League. Archived from the original on 6 ಜೂನ್ 2011. Retrieved 2 March 2008.
 2. Rollin, Glenda (2008). "The Clubs". Sky Sports Football Yearbook 2008-2009. Sky Sports Football Yearbooks. London: Headline Publishing Group. pp. 254–255. ISBN 978-0-7553-1820-9. {{cite book}}: Unknown parameter |coauthors= ignored (|author= suggested) (help)
 3. ೩.೦ ೩.೧ "European Football Statistics". Archived from the original on 13 ಜೂನ್ 2008. Retrieved 24 June 2006.
 4. "Manchester United win 11th FA Cup". CBC Sports. Canadian Broadcasting Corporation. 22 May 2004. Archived from the original on 21 ಮೇ 2013. Retrieved 12 August 2007.
 5. "United tops global rich list". premierleague.com. Premier League. 11 January 2008. Archived from the original on 9 ನವೆಂಬರ್ 2011. Retrieved 11 January 2008.
 6. "Soccer Team Valuations (Special Report)". Forbes.com. Forbes. 4 April 2009. Retrieved 12 August 2009.
 7. Barclay, Patrick (12 November 2005). "Let the World Cup roll every two years". Telegraph.co.uk. Telegraph Media Group. Retrieved 21 January 2009.[ಮಡಿದ ಕೊಂಡಿ]
 8. "Agreement heralds new era in football". uefa.com. Union of European Football Associations. 21 January 2008. Retrieved 21 January 2009.
 9. Northcroft, Jonathan (5 November 2006). "20 glorious years, 20 key decisions". The Sunday Times. Times Newspapers. Retrieved 26 January 2009.
 10. "Neville appointed Man Utd skipper". BBC Sport. British Broadcasting Corporation. 2 December 2005. Retrieved 21 January 2009.
 11. ೧೧.೦ ೧೧.೧ ೧೧.೨ Murphy, Alex (2006). "1878-1915: From Newton Heath to Old Trafford". The Official Illustrated History of Manchester United. London: Orion Books. p. 14. ISBN 0-7528-7603-1.
 12. "Manchester United FC". Talk Football. Archived from the original on 2011-08-19. Retrieved 2008-03-09.
 13. Bill Wilson (29 June 2005). "Man Utd's turbulent business history". BBC News. Retrieved 8 June 2007.
 14. Murphy, Alex (2006). "1878-1915: From Newton Heath to Old Trafford". The Official Illustrated History of Manchester United. London: Orion Books. p. 16. ISBN 0-7528-7603-1.
 15. "1908 Charity Shield". footballsite.co.uk. Archived from the original on 9 ಆಗಸ್ಟ್ 2011. Retrieved 12 August 2007.
 16. "Munich Air Disaster". BBC News. Retrieved 12 August 2007.
 17. Lee, Simon. "CHAPTER 4. The BSkyB Bid for Manchester United Plc — All the Passion of a Banknote". In Hamil, Sean; Michie, Jonathan; Oughton, Christine (ed.). A Game of Two Halves? The Business of Football. University of London. Archived from the original on 22 ಜೂನ್ 2005. Retrieved 28 May 2007. {{cite book}}: Unknown parameter |chapterurl= ignored (help)CS1 maint: multiple names: editors list (link)
 18. "August 19 - "You'll Never Win Anything With Kids"". On This Football Day. 19 August 2007. Retrieved 5 January 2009.
 19. "Cantona crowns United's season of Double delight". Daily Telegraph. Telegraph Media Group. 12 May 1996. Archived from the original on 31 ಡಿಸೆಂಬರ್ 2006. Retrieved 11 December 2006.
 20. ೨೦.೦ ೨೦.೧ "United crowned kings of Europe". BBC News. 26 May 1999. Retrieved 11 August 2008.
 21. ೨೧.೦ ೨೧.೧ "Man United stands alone". Sports Illustrated. 16 May 1999. Archived from the original on 6 ಜನವರಿ 2008. Retrieved 11 August 2008.
 22. "Two down, one to go". Sports Illustrated. 22 May 1999. Archived from the original on 6 ಅಕ್ಟೋಬರ್ 2008. Retrieved 11 August 2008.
 23. "Ferguson and Magnier: a truce in the internal warfare at United". International Herald Tribune. 8 March 2004. Archived from the original on 28 November 2006. Retrieved 11 August 2008.
 24. "Other News in Soccer in 1999". Sports Info Japan. Retrieved 11 August 2008.
 25. "G-14's members". G14.com. Archived from the original on 2 ಸೆಪ್ಟೆಂಬರ್ 2006. Retrieved 12 September 2006.
 26. "Glazer Man Utd stake exceeds 75%". BBC News. 16 May 2005. Retrieved 11 August 2007.
 27. ೨೭.೦ ೨೭.೧ "Manchester United's new owner". CBS Sports Online. 22 June 2005. Archived from the original on 10 September 2005. Retrieved 11 August 2007.
 28. "Glazer's sons join Man U board". ABC News. 8 June 2005. Retrieved 2008-08-11.
 29. "Ruud accuses Ferguson of betrayal". BBC Sport. 7 September 2006. Retrieved 11 December 2006.
 30. "Glazers Tighten Grip On United With Debt Refinancing". The Political Economy of Football. 8 July 2006. Archived from the original on 27 ಜನವರಿ 2016. Retrieved 11 August 2008.
 31. "Manchester United reveal refinancing plans". RTÉ Sport. 18 July 2006. Archived from the original on 8 ಮೇ 2012. Retrieved 11 August 2008.
 32. "Seven wonders of sublime United dazzle and destroy helpless Roma". The Guardian. 4 January 2009.
 33. Caroline Cheese (2 May 2007). "AC Milan 3-0 Man Utd (Agg: 5-3)". BBC Sport. Retrieved 28 May 2007.
 34. McNulty, Phil (1 March 2009). "Man Utd 0-0 Tottenham (aet)". BBC Sport. British Broadcasting Corporation. Retrieved 1 March 2009.
 35. McNulty, Phil (16 May 2009). "Man Utd 0-0 Arsenal". BBC Sport. British Broadcasting Corporation. Retrieved 16 May 2009.
 36. Bell, Jack (27 May 2009). "Champions League Final: Barcelona 2, Manchester United 0 - Goal Blog - NYTimes.com". Goal.blogs.nytimes.com. Retrieved 27 May 2009.
 37. "Manchester United Historical Kits". historicalkits.co.uk. Retrieved 11 August 2008.
 38. "English FA Cup Finalists 1900 - 1909". historicalkits.co.uk. Archived from the original on 25 ಸೆಪ್ಟೆಂಬರ್ 2008. Retrieved 11 August 2008.
 39. ೩೯.೦ ೩೯.೧ Thompson, Gemma (26 June 2009). "Gallery: New home kit". ManUtd.com. Manchester United. Retrieved 26 June 2009.
 40. ೪೦.೦ ೪೦.೧ Thompson, Gemma (29 July 2009). "Black and blue suits Reds". ManUtd.com. Manchester United. Retrieved 29 July 2009.
 41. "Grey day for Manchester United". BBC.co.uk. Retrieved 28 May 2007.
 42. Anthony Thomas (3 January 2007). "Excuses, excuses, excuses". Black-and-amber.co.uk. Archived from the original on 5 ಮೇ 2003. Retrieved 28 May 2007.
 43. Thompson, Gemma (18 July 2008). "Free trophy pic with new kit". ManUtd.com. Manchester United. Retrieved 26 June 2009.
 44. "Third Kit 2009/10". United Direct. Manchester United. Archived from the original on 5 ಆಗಸ್ಟ್ 2009. Retrieved 7 August 2009.
 45. "A to Z of Manchester United — R". ManUtdZone.com. Archived from the original on 21 ಆಗಸ್ಟ್ 2011. Retrieved 3 August 2007. In the early 1960's Salford Rugby club toured France wearing red shirts and became known as "The Red Devils". Manager Matt Busby liked the sound of it, thinking that a nasty devil is more intimidating to opponents than angelic babes.
 46. "Manchester United kits". prideofmanchester.com. Retrieved 28 May 2007.
 47. "First Team". ManUtd.com. Manchester United. Retrieved 14 August 2009.
 48. Coppack, Nick (18 August 2009). "Young Reds on loan". ManUtd.com. Manchester United. Retrieved 18 August 2009.
 49. Bostock, Adam (17 July 2009). "United agree terms for striker". ManUtd.com. Manchester United. Retrieved 17 July 2009.
 50. Crick, Michael (1999) [1996]. Manchester United: The Complete Fact Book (2nd ed.). London: Profile Books. pp. 46–47. ISBN 1-86197-206-7.
 51. Endlar, Andrew. "The Website of Dreams". StretfordEnd.co.uk. Retrieved 29 August 2009.
 52. Towle, Theresa (2005). "United abandons women's football" (PDF). United Shareholder. Shareholders United (26): 10. Retrieved 21 January 2009. {{cite journal}}: Unknown parameter |month= ignored (help)
 53. "Anatomy of the United Bench". Inside United (195): 18–19. 2008. Richard Hawkins has the fascinating title of 'head of human performance'. He works with the sports science team at Carrington, helping the players reach peak physical performance. {{cite journal}}: Unknown parameter |month= ignored (help)
 54. Dr. Adam Brown (2002). "Do You Come From Manchester?" (PDF). Manchester Metropolitan University. p. 3. Archived from the original (PDF) on 27 ಫೆಬ್ರವರಿ 2008. Retrieved 28 May 2007.
 55. Andy Walsh and Adam Brown. "Fan Power". redpepper.org.uk. Archived from the original on 14 ಆಗಸ್ಟ್ 2007. Retrieved 12 August 2007.
 56. "Home 10 classic Roy Keane rants". Guardian. 24 August 2006. Retrieved 18 May 2008.
 57. ೫೭.೦ ೫೭.೧ "Home support disappoints Ferguson". BBC Sport. 2 January 2008. Retrieved 2 January 2008.
 58. "Boss: Fans forced us to play". ManUtd.com. Manchester United. 29 April 2008. Retrieved 4 January 2009.
 59. "FERGUSON HAILS SCHOLES GOAL". Football365. 28 April 2008. Archived from the original on 5 ಮೇ 2009. Retrieved 28 April 2008.
 60. Murphy, Alex (2006). "1878-1915: From Newton Heath to Old Trafford". The Official Illustrated History of Manchester United. London: Orion Books. p. 15. ISBN 0-7528-7603-1.
 61. Murphy, Alex (2006). "1878-1915: From Newton Heath to Old Trafford". The Official Illustrated History of Manchester United. London: Orion Books. p. 27. ISBN 0-7528-7603-1.
 62. White, John (2007) [2005]. The United Miscellany (2nd ed.). London: Carlton Books. p. 11. ISBN 978-1-84442-745-1.
 63. ೬೩.೦ ೬೩.೧ ೬೩.೨ "Old Trafford 1909-2006". ManUtdZone.com. Archived from the original on 17 ಫೆಬ್ರವರಿ 2008. Retrieved 21 May 2007.
 64. "Man Utd sign £56m AIG shirt deal". BBC News. British Broadcasting Corporation. 6 April 2006. Retrieved 28 May 2007.
 65. "Oilinvest to renegotiate Juventus sponsorship". SportBusiness.com. 7 September 2006. Retrieved 28 May 2007.
 66. "AIG ends Man Utd sponsorship deal". BBC News. British Broadcasting Corporation. 21 January 2009. Retrieved 21 January 2009.
 67. Communications Dept (3 June 2009). "Future shirt sponsor unveiled". ManUtd.com. Manchester United. Retrieved 3 June 2009.
 68. "Man Utd in new shirt sponsor deal". BBC News. British Broadcasting Corporation. 3 June 2009. Retrieved 3 June 2009.
 69. ೬೯.೦ ೬೯.೧ "Vodafone in £30m Man Utd tie-up". BBC News. British Broadcasting Corporation. 11 February 2000. Retrieved 8 April 2008.
 70. ೭೦.೦ ೭೦.೧ "United must find new shirt sponsor". CNN.com International. 24 November 2005. Retrieved 8 April 2008.
 71. "Man Utd rings up £36m shirt deal". BBC News. British Broadcasting Corporation. 1 December 2003. Retrieved 21 January 2009.
 72. "Vodafone ends Man Utd shirt deal". BBC News. British Broadcasting Corporation. 23 November 2005. Retrieved 21 January 2009.
 73. "Manchester United Shirts 1970-79". Pride Of Manchester. Retrieved 13 August 2008.
 74. "Manchester United Shirts 1980-89". Pride Of Manchester. Retrieved 13 August 2008.
 75. "Manchester United Shirts 1990-99". Pride Of Manchester. Retrieved 13 August 2008.
 76. "A to Z of Manchester United — N". ManUtdZone.com. Archived from the original on 22 ಏಪ್ರಿಲ್ 2001. Retrieved 22 May 2007.
 77. "Bitter rivals do battle". Daily Telegraph. 15 April 2008. Archived from the original on 19 ಆಗಸ್ಟ್ 2011. Retrieved 6 May 2008.
 78. "United's rivalries". Manchester Evening News. 16 September 2005. Retrieved 23 December 2007.
 79. "Liverpool v Manchester United preview". Sky Sports. Retrieved 23 December 2007.
 80. ೮೦.೦ ೮೦.೧ ೮೦.೨ ೧೯೯೨ರಲ್ಲಿ ಇದರ ಸ್ಥಾಪನೆಯಾದಾಗ, ಪ್ರೀಮಿಯರ್‌ ಲೀಗ್‌ ಇಂಗ್ಲೀಷ್‌ ಫುಟ್‌ಬಾಲ್‌ನ ಉಚ್ಚ ಶ್ರೇಣಿಯಾದರೆ; ಪ್ರಥಮ ಮತ್ತು ದ್ವಿತೀಯ ವಿಭಾಗಗಳು ಆಗ ಅನುಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಣಿಗಳಾದವು. ಮೊದಲನೇ ವಿಭಾಗವನ್ನು ಈಗ ಫುಟ್‌ಬಾಲ್‌ ಲೀಗ್‌ ಚ್ಯಾಂಪಿಯನ್‌ಶಿಪ್‌ ಮತ್ತು ಎರಡನೇ ವಿಭಾಗವನ್ನು ಫುಟ್‌ಬಾಲ್‌ ಲೀಗ್‌ ಒನ್‌ ಎಂದೂ ಕರೆಯಲಾಗುತ್ತದೆ.
 81. "UEFA Cup — Season 1984-1985 - Quarter-finals". uefa.com. Union of European Football Associations. Retrieved 15 February 2009.
 82. Zea, Antonio (9 January 2008). "Fairs' Cup 1964-65". rsssf.com. Rec.Sport.Soccer Statistics Foundation. Retrieved 15 February 2009. {{cite web}}: Unknown parameter |coauthors= ignored (|author= suggested) (help)
 83. "Trophy Room". ManUtd.com. Manchester United. 2009. Retrieved 4 January 2009.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಅಧಿಕೃತ[ಬದಲಾಯಿಸಿ]

ಸ್ವಾಯತ್ತ ಜಾಲತಾಣಗಳು[ಬದಲಾಯಿಸಿ]