ವಾಣಿಜ್ಯೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಣಿಜ್ಯೀಕರಣ ಇದು ಕೆಲವು ನಿರ್ದಿಷ್ಟ ವಿಭಾಗದ ವಾಣಿಜ್ಯ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ನಡೆಸಲ್ಪಡುವ ಕಾರ್ಯವಿಧಾನ, ಆಚರಣೆ, ಮತ್ತು ಕಾರ್ಯಚಟುವಟಿಕೆಯಾಗಿದೆ.[೧] ಒಂದು ವಿಶಾಲ ಅರ್ಥದಲ್ಲಿ ಹೇಳುವುದಾದರೆ, ವಾಣಿಜ್ಯೀಕರಣವು ಒಬ್ಬ ರೀಟೇಲ್ ವ್ಯಾಪಾರಿಗೆ ಉತ್ಪನ್ನಗಳ ಮಾರಾಟಕ್ಕೆ ಸಹಾಯ ಮಾಡುವ ಯಾವುದೇ ಒಂದು ಪದ್ಧತಿಯಾಗಿದೆ. ಒಂದು ರೀಟೇಲ್ ಅಂಗಡಿ-ಒಳಗಿನ ಹಂತದಲ್ಲಿ, ವಾಣಿಜ್ಯೀಕರಣವು ಮಾರಾಟಕ್ಕೆ ಲಭ್ಯವಿರುವ ಹಲವಾರು ವಿಧದ ಉತ್ಪನ್ನಗಳು ಮತ್ತು ಗ್ರಾಹಕರಲ್ಲಿ ಅಂತಹ ಉತ್ಪನ್ನಗಳನ್ನು ಕೊಳ್ಳುವುದಕ್ಕೆ ಆಸಕ್ತಿ ಮತ್ತು ಪ್ರಲೋಭನೆಯನ್ನು ಪ್ರಚೋದಿಸುವ ರೀತಿಯಲಿ ಅವುಗಳನ್ನು ಪ್ರದರ್ಶಿಸುವುದಕ್ಕೆ ಸಂಬಂಧಿಸಿದೆ.

ಪ್ರಚಾರದ ವಾಣಿಜ್ಯೀಕರಣ[ಬದಲಾಯಿಸಿ]

ರೀಟೇಲ್ ವಾಣಿಜ್ಯದಲ್ಲಿ, ಗೋಚರ ಪ್ರದರ್ಶನ ವಾಣಿಜ್ಯೀಕರಣದ ಅರ್ಥವೇನೆಂದರೆ ಉತ್ಪನ್ನ ವಿನ್ಯಾಸ, ಆಯ್ಕೆ, ಪ್ಯಾಕೇಜಿಂಗ್, ಮೌಲ್ಯೀಕರಣ (ಪ್ರೈಸಿಂಗ್) ಮತ್ತು ಪ್ರದರ್ಶನಗಳನ್ನು ಬಳಸಿಕೊಂಡು ವಾಣಿಜ್ಯ ಮಾರಾಟಗಳನ್ನು ಗರಿಷ್ಠಗೊಳಿಸುವುದು ಎಂಬುದಾಗಿದೆ, ಅದು ಗ್ರಾಹಕನನ್ನು ಹೆಚ್ಚು ಕೊಳ್ಳುವುದಕ್ಕೆ ಪ್ರಚೋದಿಸುತ್ತದೆ. ಇದು ಮೌಲ್ಯೀಕರಣ ಮತ್ತು ಡಿಸ್ಕೌಂಟ್ ನೀಡುವಿಕೆಯಲ್ಲಿನ ನಿಯಮ, ಉತ್ಪನ್ನಗಳು ಮತ್ತು ಪ್ರದರ್ಶನಗಳನ್ನು ಭೌತಿಕವಾಗಿ ನೀಡುವ ರೀತಿ, ಮತ್ತು ಯಾವ ಗ್ರಾಹಕನಿಗೆ ಯಾವ ಸಮಯದಲ್ಲಿ ಯಾವ ಉತ್ಪನ್ನಗಳ್ನನು ನೀಡಬೇಕು ಎಂಬುದರ ಬಗೆಗಿನ ನಿರ್ಣಯಗಳನ್ನು ಒಳಗೊಳ್ಳುತ್ತದೆ. ವಾಣಿಜ್ಯೀಕರಣದ ವಾರ್ಷಿಕ ಚಕ್ರವು ದೇಶಗಳ ನಡುವೆ ಮತ್ತು ದೇಶಗಳ ಒಳಗೂ ಕೂಡ ಭಿನ್ನವಾಗಿರುತ್ತದೆ, ನಿರ್ದಿಷ್ಟವಾಗಿ ಸಾಂಸ್ಕೃತಿಕ ಪದ್ಧತಿಗಳಾದ ರಜಾದಿನಗಳು, ಮತ್ತು ವಾತಾವರಣದಂತಹ ಋತುಕಾಲಿಕ ಸಮಸ್ಯೆಗಳು ಮತ್ತು ಸ್ಥಳೀಯ ಸ್ಪೋರ್ಟಿಂಗ್ ಮತ್ತು ಮನರಂಜನೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಭಿನ್ನವಾಗಿರುತ್ತವೆ. ಉದಾಹರಣೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಮೂಲಭೂತ ರೀಟೇಲ್ ಚಕ್ರವು ಫೆಬ್ರವರಿ ತಿಂಗಳ ಮಧ್ಯದ ಅವಧಿಯಲ್ಲಿ ಆಚರಿಸಲ್ಪಡುವ ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ)ಗೆ ವಾಣಿಜ್ಯೀಕರಣದ ಜೊತೆಗೆ ಜನವರಿಯ ಪ್ರಾರಂಭದಲ್ಲಿ ಆರಂಭವಾಗಲ್ಪಡುತ್ತದೆ. ಅದರ ಸ್ವಲ್ಪ ಸಮಯದ ನಂತರವೇ ಅಧ್ಯಕ್ಷರ ದಿನದ ಮಾರಾಟಗಳು ನಡೆಯಲ್ಪಡುತ್ತವೆ. ಅದರ ನಂತರ, ಈಸ್ಟರ್ (ಕ್ರಿಸ್ಥನ ಪುನರುತ್ಥಾನದ ಉತ್ಸವ)ಇದು ಅತ್ಯಂತ ಮಹತ್ವದ ರಜಾದಿನವಾಗಿದೆ, ಅದೇ ಸಮಯದಲ್ಲಿ ಅನೇಕ ವೇಳೆ ಚಳಿಗಾಲದ-ಮಧ್ಯದ ಅವಧಿಗೂ ಮುಂಚೆಯೇ ಚಳಿಗಾಲದ ಉಡುಪುಗಳು ಮತ್ತು ಗಾರ್ಡನ್‌ಗೆ-ಸಂಬಂಧಿಸಿದ ವಾಣಿಜ್ಯ ಸರಕುಗಳು ಈಗಾಗಲೇ ಅಂಗಡಿಯಲ್ಲಿರುತ್ತವೆ,(ಈ ವಿಭಾಗದ ಪ್ರಾರಂಭದ ಕಡೆಗೆ, ಹಸಿರು ವಸ್ತುಗಳು ಮತ್ತು ಐರಿಷ್ ಸಂಸ್ಕೃತಿಗೆ ಸಂಬಂಧಿಸಿದ ಸರಕುಗಳನ್ನು ಒಳಗೊಂಡಂತೆ ಸಂತ ಪ್ಯಾಟ್ರಿಕ್‌ರ ದಿನ ವಾಣಿಜ್ಯೀಕರಣವೂ ಕೂಡ ಪ್ರಚಾರಯೋಗ್ಯವಾಗಿರುತ್ತದೆ). ಮದರ್ಸ್ ಡೇ (ತಾಯಂದಿರ ದಿನ) ಮತ್ತು ಫಾದರ್ಸ್ ಡೇ (ತಂದೆಯ ದಿನ) ನಂತರದ ರಜಾದಿನಗಳಾಗಿವೆ, ಜೊತೆಗೆ ಶೈಕ್ಷಣಿಕ ಕೊಡುಗೆಗಳಾದ (ವಿಶಿಷ್ಟವಾಗಿ ಅತ್ಯಂತ ಚಿಕ್ಕದಾದ ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಾದ ಡಿಜಿಟಲ್ ಕ್ಯಾಮರಾಗಳು) ಅನೇಕ ವೇಳೆ "ಡ್ಯಾಡ್ಸ್ ಎಂಡ್ ಗ್ರಾಡ್ಸ್" ಎಂಬ ಹೆಸರಿನಲ್ಲಿ ಜೂನ್ ತಿಂಗಳಿನಲ್ಲಿ ಮಾರಾಟ ಮಾಡಲ್ಪಡುತ್ತವೆ (ಹೆಚ್ಚಿನ ಕಾಲೇಜ್ ಸೆಮಿಸ್ಟರ್‌ಗಳು ಮೇ ತಿಂಗಳಿನಲ್ಲಿ ಮುಗಿಯುವುದಾಗಿದ್ದರೂ ಕೂಡ; ಗ್ರಾಡ್ಸ್ ವಿಭಾಗವು ಸಾಮಾನ್ಯವಾಗಿ ಹೈ ಸ್ಕೂಲ್ ಶಿಕ್ಷಣಕ್ಕೆ ಸಂಬಂಧಿಸಿದೆ, ಅದು ಹಲವಾರು ಯು.ಎಸ್. ದೇಶಗಳಲ್ಲಿ ಫಾದರ್ಸ್ ಡೇ ಯ ಒಂದರಿಂದ ಎರಡು ವಾರಗಳ ನಂತರದಲ್ಲಿ ಮುಗಿಯುತ್ತದೆ). ನಂತರ ಬೇಸಗೆಯ ವಾಣಿಜ್ಯೀಕರಣ, ಅಮೇರಿಕಾದ ಧ್ವಜದ ಜೊತೆಗೆ ದೇಶಪ್ರೇಮದ-ಸಂಗತಿಯನ್ನು ಹೊಂದಿರುವ ಉತ್ಪನ್ನಗಳು ಮಾರಾಟವಾಗಲ್ಪಡುತ್ತವೆ, ಜೊತೆಗೆ ಸ್ವಾತಂತ್ರ್ಯ ದಿನದ ತಯಾರಿಗಾಗಿ ಮೆಮೋರಿಯಲ್ ಡೇ ಆಚರಣೆಗೆ ಬರುತ್ತದೆ (ಅದರ ಮಧ್ಯದಲ್ಲಿ ಫ್ಲ್ಯಾಗ್ ಡೇ ಯೂ ಕೂಡ ಆಚರಿಸಲ್ಪಡುತ್ತದೆ). ಜುಲೈ ವೇಳೆಗೆ, ಮಕ್ಕಳು ಶಾಲೆಗೆ-ವಾಪಸಾಗುವುದು ಕಂಡುಬರುತ್ತದೆ ಮತ್ತು ಈ ವೇಳೆಗಾಗಲೇ ಆಟಮ್ ಸರಕುಗಳು ಅಂಗಡಿಯಲ್ಲಿ ಬಂದಿರುತ್ತವೆ, ಮತ್ತು ಕೆಲವು ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಅಂಗಡಿಗಳಲ್ಲಿ ಕ್ರಿಸ್‌ಮಸ್ ತಯಾರಿಯು ನಡೆದಿರುತ್ತದೆ. (ಅನೇಕ ವೇಳೆ, ಜುಲೈನಲ್ಲಿನ ಕ್ರಿಸ್‌ಮಸ್ ಆಚರಣೆಯು ಈ ಸಮಯದಲ್ಲಿಯೇ ನಡೆಸಲ್ಪಡುತ್ತದೆ.) ಶಾಲೆಗೆ-ವಾಪಸಾಗುವ ಮಾರುಕಟ್ಟೆಯು ಆಗಸ್ಟ್ ತಿಂಗಳಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಪ್ರಚಾರವನ್ನು ನೀಡಲ್ಪಡುತ್ತದೆ, ಇದು ಪ್ರಚಾರವನ್ನು ನೀಡಲು ಯಾವುದೇ ರಜಾದಿನಗಳು ಇಲ್ಲದ ಒಂದು ಸಮಯವಾಗಿರುತ್ತದೆ. ಸಪ್ಟೆಂಬರ್ ವೇಳೆಗೆ, ನಿಖರವಾಗಿ ಹೇಳುವುದಾದರೆ ಕಾರ್ಮಿಕ ದಿನದ ನಂತರ, ಬೇಸಗೆಯ ವಾಣಿಜ್ಯೀಕರಣವು ಅಂತಿಮ ಹಂತದಲ್ಲಿರುತ್ತದೆ ಮತ್ತು ಸ್ಕೂಲ್ ಸಾಮಗ್ರಿಗಳ ಹೆಚ್ಚಿನ ದಾಸ್ತಾನು ಅದೇ ರೀತಿಯಾಗಿ ಕಡಿಮೆ-ದರವನ್ನು ನೀಡಲ್ಪಡುತ್ತವೆ, ಮತ್ತು ಹ್ಯಾಲೋವೀನ್ (ಮತ್ತು ಅನೇಕ ವೇಳೆ ಕ್ರಿಸ್‌ಮಸ್‌ಗೂ ಹೆಚ್ಚಿನ) ವಾಣಿಜ್ಯೀಕರಣವು ಚಾಲ್ತಿಗೆ ಬರುತ್ತದೆ. ಹ್ಯಾಲೋವೀನ್ ಅಲಂಕಾರಗಳು ಮತ್ತು ವಸ್ತವಿನ್ಯಾಸಗಳು ಅಕ್ಟೋಬರ್‌ನಲ್ಲಿ ಕಡಿಮೆಯಾಗುತ್ತ ಹೋಗುತ್ತವೆ, ಕ್ರಿಸ್‌ಮಸ್‌ನ ಸರಕುಗಳು ಈ ವೇಳೆಗಾಗಲೇ ಗ್ರಾಹಕರ ಖರೀದಿಗೆ ಬಿಡುಗಡೆ ಮಾಡಲ್ಪಟ್ಟಿರುತ್ತವೆ, ಮತ್ತು ಅದರ ಕೆಲವು ದಿನದ ನಂತರ "ವಿಧ್ಯುಕ್ತವಾದ" ಕಾಲವು ಥ್ಯಾಂಕ್ಸ್‌ಗೀವಿಂಗ್‌ನ ಒಂದು ದಿನದ ನಂತರ ಪ್ರಾರಂಭವಾಗುವುದಿದ್ದರೂ ಕೂಡ ಹ್ಯಾಲೋವೀನ್ ರೀಟೇಲರ್‌ಗಳು ಪ್ರಚಾರ ನೀಡುವಿಕೆಯಲ್ಲಿ ಪೂರ್ತಿ ಸಮಯವನ್ನು ವ್ಯಯಿಸುತ್ತಾರೆ. ಕ್ರಿಸ್‌ಮಸ್ ಕ್ಲಿಯರೆನ್ಸ್ ಮಾರಾಟಗಳು ಹೆಚ್ಚಿನ ರೀಟೇಲ್ ಅಂಗಡಿಗಳಲ್ಲಿ ಕ್ರಿಸ್‌ಮಸ್‌ಗೂ ಮುಂಚೆಯೇ ಪ್ರಾರಂಭವಾಗಿರುತ್ತದೆ, ಆದಾಗ್ಯೂ ಅವರು ಸಾಮಾನ್ಯವಾಗಿ ಕ್ರಿಸ್‌ಮಸ್‌ನ ಒಂದು ದಿನದ ನಂತರ ಮಾರಾಟವನ್ನು ಪ್ರಾರಂಭಿಸುತ್ತಾರೆ ಮತ್ತು ಹೊಸ ವರ್ಷದ ದಿನದವರೆಗೂ ಮಾರಾಟವನ್ನು ಮುಂದುವರೆಸುತ್ತಾರೆ, ಅದರೆ ಕೆಲವು ವೇಳೆ ಫೆಬ್ರವರಿ ತಿಂಗಳವರೆಗೂ ಅವರ ಮಾರಾಟ ಮುಂದುವರೆಯುತ್ತದೆ.

ವಾಣಿಜ್ಯೀಕರಣವು ರೀಟೇಲ್ ಸರಪಳಿಗಳ ಒಳಗೂ ಕೂಡ ಭಿನ್ನವಾಗಿರುತ್ತದೆ, ಅಲ್ಲಿ ಬಫೆಲೋದಂತಹ ಸ್ಥಳಗಳಲ್ಲಿರುವ ಅಂಗಡಿಗಳು ಹಿಮಧೂಮಕಗಳನ್ನು ಕೊಂಡೊಯ್ಯಬಹುದು, ಹಾಗೆಯೇ ಅದಕ್ಕೆ ಬದಲಾಗಿ ಫ್ಲೋರಿಡಾ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಅಂಗಡಿಗಳು ಪೂರ್ತಿ ವರ್ಷದುದ್ದಕ್ಕೂ ಬೀಚ್ (ಕಡಲದಂಡೆ) ಉಡುಪುಗಳು ಮತ್ತು ಚೌಕಟ್ಟಿರುವ ಒಲೆಗಳನ್ನು ಕೊಂಡೊಯ್ಯಬಹುದು. ಕರಾವಳಿ-ತೀರದ ಅಂಗಡಿಗಳು ವಾಟರ್ ಸ್ಕೈಯಿಂಗ್ ಸಲಕರಣೆಗಳನ್ನು ಹೊಂದಿರುತ್ತವೆ, ಅದೇ ರಿತಿಯಾಗಿ ಪರ್ವತ ಶ್ರೇಣಿಯ ಹತ್ತಿರವಿರುವ ಅಂಗಡಿಗಳು ಸ್ನೋ (ಹಿಮ) ಸ್ಕೈಯಿಂಗ್ ಮತ್ತು ಸ್ನೋಬೋರ್ಡಿಂಗ್ ಗೇರ್‌ಗಳನ್ನು ಹೊಂದಿರುತ್ತವೆ.

ವ್ಯಾಪಾರಿ ಉದ್ದಿಮೆ[ಬದಲಾಯಿಸಿ]

ಪೂರ್ವ ಯುರೋಪ್‍ನಲ್ಲಿ, ಪ್ರಮುಖವಾಗಿ ರಷ್ಯಾದಲ್ಲಿ, "ವಾಣಿಜ್ಯೀಕರಣ" ಎಂಬ ಶಬ್ದವು ಸಾಮಾನ್ಯವಾಗಿ ವಾಪಾರಿ ಉದ್ದಿಮೆಯ ಒಳಗೆ ಬಳಸಲ್ಪಡುತ್ತದೆ ಮತ್ತು ಪಿಒಎಸ್‌ನ (ಪಾಯಿಂಟ್ ಆಫ್ ಸೇಲ್) ಎಲ್ಲಾ ಮಾರುಕಟ್ಟೆ ಮತ್ತು ಮಾರಾಟ ಪ್ರಚೋದನಾ ಕಾರ್ಯಚಟುವಟಿಕೆಗಳನ್ನು ಸೂಚಿಸುತ್ತದೆ: ವಿನ್ಯಾಸ, ನಿರ್ಮಾಣ, ಪ್ರಚಾರ, ಸುರಕ್ಷೆ ಮತ್ತು ಮಾರಾಟ ಸಿಬ್ಬಂದಿಗಳ ತರಬೇತಿ. ಮೂಲಭೂತವಾಗಿ ಒಬ್ಬ ವ್ಯಾಪಾರಸ್ಥನು (ವಣಿಕ) ಸರಕುಗಳ ಕೊಳ್ಳುವಿಕೆ ಮತ್ತು ಮಾರಾಟದ ಮೂಲಕ ವ್ಯಾಪಾರದ ಪ್ರಚಾರದಲ್ಲಿ ನಿರಂತರವಾಗಿ ತೊಡಗಿರುತ್ತಾನೆ. ಭಾರತದಂತಹ ಏಷಿಯನ್ ದೇಶಗಳಲ್ಲಿ, ಈ ಶಬ್ದವು ಮಾದರಿ ವಸ್ತು ತೆಗೆದುಕೊಳ್ಳುವಿಕೆ (ಸ್ಯಾಂಪ್ಲಿಂಗ್)ದಿಂದ ಅಥವಾ ಪ್ರಾರಂಭದ ಕಲ್ಪನೆಯಿಂದ ವಸ್ತುವಿನ ಮಾರಾಟದವರೆಗಿನ ಎಲ್ಲ ಕಾರ್ಯಚಟುವಟಿಕೆಗಳು ಎಂಬ ಅರ್ಥದಲ್ಲಿ ಬಳಸಲ್ಪಡುತ್ತದೆ. ಇದು ಒಂದು ಸಂಸ್ಥೆಯೊಳಗೆ ವಿಭಿನ್ನವಾದ ವಿಭಾಗಗಳ ನಿರ್ವಹಣೆಯನ್ನು ನೋಡಿಕೊಳ್ಳುವುದು ಮತ್ತು ಅವುಗಳ ಜೊತೆ ಕಾರ್ಯ ನಿರ್ವಹಿಸುವುದು, ಸಮಯದೊಳಗೆ ಸರಕುಗಳ ಪೂರೈಕೆದಾರರು ಮತ್ತು ಗ್ರಾಹಕರ ಜೊತೆಗೆ ಒಪ್ಪಂದಗಳನ್ನು ನಡೆಸುವುದು ಮತ್ತು ಪೂರ್ವನಿರ್ಧಾರಿತ ಗುಣಮಟ್ಟಗಳನ್ನು ಕಾಯ್ದಿರಿಸಿಕೊಳ್ಳುವುದು ಮುಂತಾದ ಕಾರ್ಯಗಳನ್ನು ಒಳಗೊಳ್ಳುತ್ತದೆ.

ರೀಟೇಲ್ ಪೂರೈಕೆ ಸರಪಳಿ[ಬದಲಾಯಿಸಿ]

ಚಿಕಾಗೋದಲ್ಲಿನ ಒಂದು ವಾಲ್‌ಗ್ರೀನ್ಸ್‌ನಲ್ಲಿ ವಾಣಿಜ್ಯೀಕರಣ

ಪೂರೈಕೆ ಸರಪಳಿಯಲ್ಲಿ, ವಾಣಿಜ್ಯೀಕರಣವು ರೀಟೇಲ್ ಅಂಗಡಿಗಳಲ್ಲಿ ಪ್ರಾಥಮಿಕವಾಗಿ ಸರಕುಗಳನ್ನು ಜೋಡಿಸುವ ಮೂಲಕ ಮತ್ತು ಅವುಗಳ ಪ್ರದರ್ಶನದ ಮೂಲಕ ಗ್ರಾಹಕರಿಗೆ ಸರಕುಗಳನ್ನು ದೊರಕುವಂತೆ ಮಾಡುವ ಪದ್ಧತಿಯಾಗಿದೆ. ಇದು ಅಂಗಡಿಗಳ ಕಾರ್ಮಿಕರಿಂದ ಪೂರ್ತಿಯಾಗಿ ಮಾಡಲ್ಪಡುತ್ತದೆಯಾದರೂ, ಕೆಲವು ರೀಟೇಲರ್‌ಗಳು ಉತ್ಪಾದನಾದಾರರು, ಮಾರಾಟಗಾರರು, ಅಥವಾ ಸಗಟು ವ್ಯಾಪಾರಿಗಳಿಂದ ಇದನ್ನು ಮಾಡಿಸಿಕೊಂಡಲ್ಲಿ ಬೃಹತ್‌ಪ್ರಮಾಣದ ಉಳಿತಾಯವು ಇದೆ ಎಂಬುದನ್ನು ಮನಗಂಡಿದ್ದಾರೆ, ಇದು ಸರಕುಗಳನ್ನು ರೀಟೇಲ್ ಅಂಗಡಿಗಳಿಗೆ ನೀಡುವ ಒಂದು ಪ್ರಕ್ರಿಯೆಯಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಣಿಜ್ಯೀಕರಣ ಸೇವೆಗಳನ್ನು ಪೂರೈಸುವ ಹಲವಾರು ಸಂಸ್ಥೆಗಳು ರೀಟೇಲ್ ಅಂಗಡಿಗಳನ್ನು ಬೆಂಬಲಿಸುವುದಕ್ಕೆ ಹೊಸ ಅಂಗಡಿಗಳಲ್ಲಿ ಸಾಮಾನ್ಯ ಸರಕು ಭರ್ತೀಕರಣ ಮತ್ತು ವಾಣಿಜ್ಯೀಕರಣ ಬೆಂಬಲವನ್ನು ನೀಡುತ್ತವೆ. ಈ ರೀತಿ ಮಾಡುವ ಮೂಲಕ, ರೀಟೇಲ್ ಅಂಗಡಿಗಳು ತಮ್ಮ ಅಂಗಡಿಗಳನ್ನು ನಡೆಸುವುದಕ್ಕೆ ಬೇಕಾದ ಜನರ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸುವುದಕ್ಕೆ ಸಮರ್ಥವಾಗಿವೆ.

ಶೆಲ್ಫ್‌ಗಳಲ್ಲಿ ಸರಕುಗಳನ್ನು ಜೋಡಿಸುವುದು ಮತ್ತು ಪ್ರದರ್ಶನಗಳನ್ನು ಏರ್ಪಡಿಸುವುದು ಅನೇಕ ವೇಳೆ ಉತ್ಪನ್ನವು ಮಾರುಕಟ್ಟೆಗೆ ಬಿಡುಗಡೆ ಮಾಡಲ್ಪಟ್ಟ ಸಮಯದಲ್ಲಿ ನಡೆಸಲ್ಪಡುತ್ತವೆ, ಇದು ಸರಕುಗಳನ್ನು ಬಿಡುಗಡೆ ಮಾಡುವುದರಿಂದ ಗಣನೀಯ ಪ್ರಮಾಣದಲ್ಲಿ ಒಂದು ಪ್ರತ್ಯೇಕವಾದ ಕಾರ್ಯಚಟುವಟಿಕೆಯಾಗಿದೆ. ಉದಾಹರಣೆಗೆ, ಕಿರಾಣಿ ಅಂಗಡಿಗಳಲ್ಲಿ, ಹೆಚ್ಚಿನ ಎಲ್ಲಾ ಉತ್ಪನ್ನಗಳು ಉತ್ಪಾದಕರಿಂದ ಅಥವಾ ಸಗಟು ವ್ಯಾಪಾರಿಗಳಿಂದ ನೇರವಾಗಿ ಅಂಗಡಿಗೆ ಪೂರೈಸಲ್ಪಡುತ್ತವೆ, ಅವು ಒಂದು ಪೂರ್ತಿ ಅವಧಿಯ ವ್ಯಾರಿಗಳಾದ ಉತ್ಪಾದಕರ /ಸಗಟು ವ್ಯಾಪಾರಿಗಳ ಕಾರ್ಮಿಕರಿಂದ ದಾಸ್ತಾನು ಮಾಡಲ್ಪಡುತ್ತವೆ. ಇದು ಸಾಮಾನ್ಯವಾಗಿರುವ ಉತ್ಪನ್ನ ವಿಧಗಳೆಂದರೆ ಪಾನೀಯಗಳು (ಎಲ್ಲಾ ವಿಧದ, ಆಲ್ಕೋಹಾಲಿಕ್ ಮತ್ತು ಆಲ್ಕೋಹಾಲಿಕ್-ಅಲ್ಲದ ಉತ್ಪನ್ನಗಳು), ಪ್ಯಾಕ್ ಮಾಡಲ್ಪಟ್ಟ ಬೇಕರಿ ಉತ್ಪನ್ನಗಳು (ಬ್ರೆಡ್ ಮತ್ತು ಪೇಸ್ಟ್ರೀಗಳು), ನಿಯತಕಾಲಿಕಗಳು ಮತ್ತು ಪುಸ್ತಕಗಳು, ಮತ್ತು ಆರೋಗ್ಯ ಮತ್ತು ಸೌಂದರ್ಯಉತ್ಪನ್ನಗಳು. ಪಾನೀಯಗಳು ಮತ್ತು ಬೇಕರಿ ಉತ್ಪನ್ನಗಳಲ್ಲಿನ ಹೆಚ್ಚಿನ ಆಹಾರ ಉತ್ಪಾದಕರಿಗೆ, ಅವರ ಮರ್ಚೈಂಡೈಸರ್‌ಗಳು ಅನೇಕ ವೇಳೆ ಕಂಪನಿಯ ಒಳಗಿನ ಏಕೈಕ ಬೃಹತ್ ಪ್ರಮಾಣದ ಕಾರ್ಮಿಕ ಗುಂಪಿನವರೇ ಆಗಿರುತ್ತಾರೆ. ದೇಶದಾದ್ಯಂತ ವ್ಯಾಪಿಸಿರುವ ಬ್ರಾಂಡೆಡ್ ಸರಕುಗಳ ಉತ್ಪಾದಕರು ಅಂದರೆ ಕೋಕ-ಕೋಲಾ ಕಂಪನಿ ಮತ್ತು ಪೆಪ್ಸಿಕೋ ಉತ್ಪಾದಕರಿಗೆ, ಅವರ ಅನುಕ್ರಮ ಮರ್ಚೈಂಡೈಸರ್ ವಿಭಾಗಗಳಲ್ಲಿನ ಜನರ ಸಂಖ್ಯೆಯು ಸಾವಿರಕ್ಕೂ ಹೆಚ್ಚಿರುತ್ತದೆ.

ವ್ಯಾಪಾರದ ಸನ್ನಿವೇಶ

ಪರವಾನಗಿ ಪಡೆಯುವಿಕೆ[ಬದಲಾಯಿಸಿ]

ಮಾರಾಟ ಮಾಡುವಿಕೆಯಲ್ಲಿ, ವಾಣಿಜ್ಯೀಕರಣದ ಒಂದು ವ್ಯಾಖ್ಯಾನವೆಂದರೆ ಒಂದು ಉತ್ಪನ್ನ ಅಥವಾ ಸೇವೆಯನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದಕ್ಕೆ ಬಳಸಿಕೊಂಡ ಬ್ರಾಂಡ್ ಅಥವಾ ಗುರುತಿನಲ್ಲಿನ ಪದ್ಧತಿ ಎಂಬುದಾಗಿದೆ. ವ್ಯಾಪಾರಿ ಗುರುತಿನ ಬ್ರಾಂಡ್ ಹೆಸರುಗಳು, ಲಾಂಛನಗಳು, ಅಥವಾ ಬರಹದ ಚಿತ್ರಣಗಳು ಆಟಿಕೆಗಳು ಅಥವಾ ಉಡುಪುಗಳ ಉತ್ಪಾದಕರಿಗೆ ಪರವಾನಿಗೆ ನೀಡಲ್ಪಟ್ಟಿರುತ್ತವೆ, ಅದು ನಂತರದಲ್ಲಿ ಪರವಾನಿಗೆಯ ಚಿತ್ರಣದಲ್ಲಿ ಸರಕುಗಳನ್ನು ತಯಾರಿಸುತ್ತಾರೆ ಅಥವಾ ಮುದ್ರಿಸುತ್ತಾರೆ, ಅಂತಹ ಗುರುತಿಲ್ಲದೇಯೇ ಮಾಡುವ ವ್ಯಾಪಾರಕ್ಕಿಂತ ಗುರುತನ್ನಿಟ್ಟುಕೊಂಡು ಹೆಚ್ಚು ವ್ಯಾಪಾರ ಮಾಡಬಹುದು ಎಂಬುದಾಗಿ ಅವರು ಭಾವಿಸುತ್ತಾರೆ.[೨] ಪ್ರಸ್ತುತದಲ್ಲಿ ಪ್ರಶ್ನೆಯಲ್ಲಿರುವ ಬೌದ್ಧಿಕ ಸ್ವತ್ತಿನ ಮಾಲಿಕರಿಗೆ, ಒಬ್ಬ ಮೂರನೆಯ ಉತ್ಪಾದಕ ವ್ಯಕ್ತಿಗೆ ವಾಣಿಜ್ಯೀಕರಣದ ಜವಾಬ್ದಾರಿಯನ್ನು ನೀಡುವ ಮೂಲಕ, ವಾಣಿಜ್ಯೀಕರಣವು ಆದಾಯದ ಅತ್ಯಂತ ಜನಪ್ರಿಯ ಮೂಲವಾಗಿದೆ, ಹಾಗೆಯೇ ಐಪಿ ಮಾಲಿಕರು ಕುಳಿತಲ್ಲಿಯೇ ವಾಣಿಜ್ಯೀಕರಣದ ಶುಲ್ಕವನ್ನು ಪಡೆಯುತ್ತಾರೆ.

ಮಕ್ಕಳು[ಬದಲಾಯಿಸಿ]

ಮಕ್ಕಳಿಗೆ ವಾಣಿಜ್ಯೀಕರಣವು ಹೆಚ್ಚು ಪ್ರಸ್ತುತವಾಗಿ ಸಿನೆಮಾಗಳು ಮತ್ತು ಆಟಗಳಿಗೆ ಸಂಬಂಧಿಸಿದಂತೆ ಕಂಡುಬರುತ್ತವೆ, ಸಾಮನ್ಯವಾಗಿ ಪ್ರಸ್ತುತದಲ್ಲಿ ಬಿಡುಗಡೆ ಆಗಲಿರುವ ಸಿನೆಮಾಗಳು ಮತ್ತು ದೂರದರ್ಶನ ಪ್ರದರ್ಶನಗಳು ಮಕ್ಕಳ ಕಡೆಗೆ ಕೇಂದ್ರೀಕೃತವಾಗಿವೆ.

ಪ್ರಮುಖವಾಗಿ ಮಕ್ಕಳ ಮೇಲೆ-ಕೆಂದ್ರೀಕೃತವಾದ ಸಿನೆಮಾಗಳು ಮತ್ತು ದೂರದರ್ಶನ ಪ್ರದರ್ಶನಗಳಿಗೆ ಸಂಬಂಧಿಸಿದಂತೆ ವಾಣಿಜ್ಯೀಕರಣವು ಅನೇಕ ವೇಳೆ ದೂರದರ್ಶನದ ಪಾತ್ರಗಳಂತೆಯೇ ನಿರ್ಮಿಸಲ್ಪಟ್ಟ ಆಟಿಕೆಗಳು (ಆಕ್ಷನ್ ಚಿತ್ರಗಳು) ಅಥವಾ ಅವು ಬಳಸಿಕೊಳ್ಳುವ ವಸ್ತುಗಳನ್ನು ಒಳಗೊಂಡಿರುತ್ತವೆ. ಆದಾಗ್ಯೂ, ಕೆಲವು ವೇಳೆ ಇದು ಮತ್ತೊಂದು ವಿಧವೂ ಆಗಿರಬಹುದು, ಆಟಿಕೆಗಳನ್ನು ಜಾಹೀರಾತು ಮಾಡುವುದಕ್ಕೆ ಬರೆದ ಒಂದು ಪ್ರದರ್ಶನದ ಜೊತೆಗೆ ಇದು ವಾಣಿಜ್ಯೀಕರಣದ ಜಾಹೀರಾತು ಕೂಡ ಆಗಿರಬಹುದು. ಇದರ ಮೊದಲ ಮಹತ್ವದ ಉದಾಹರಣೆಯೆಂದರೆ ೧೯೮೦ ರ ದಶಕಗಳ ಪ್ರಾರಂಭದಲ್ಲಿ ಹ್ಯಾಬ್ರೋರಿಂದ ನಿರ್ಮಿಸಲ್ಪಟ್ಟ ದೂರದರ್ಶನ ಕಾರ್ಯಕ್ರಮ "ಜಿ.ಐ. ಜೋ ಎ ರಿಯಲ್ ಅಮೇರಿಕನ್ ಹೀರೊ.,", ಆದರೆ ಇದು ಅದರ ನಂತರದಿಂದ ಮಕ್ಕಳಿಗೆ ಜಾಹೀರಾತುಗಳನ್ನು ನೀಡುವ ಒಂದು ಪದ್ಧತಿಯಾಗಿ ಬೆಳೆಯಲ್ಪಟ್ಟಿತು.

ಕೆಲವು ವೇಳೆ ಒಂದು ದೂರದರ್ಶನ ಪ್ರದರ್ಶನದಿಂದ ನೀಡಲ್ಪಟ್ಟ ವಾಣಿಜ್ಯೀಕರಣವು ಮೂಲ ಪ್ರದರ್ಶನಕ್ಕಿಂತಲೂ ಉನ್ನತವಾಗಿ ಬೆಳೆಯಬಹುದು, ಕೆಲವು ವೇಳೆ ಪ್ರದರ್ಶನವು ಜನಪ್ರಿಯತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮಾಯವಾಗಿದ್ದರೂ ಕೂಡ ಸರಕುಗಳು ದಶಕಗಳವರೆಗೆ ಪ್ರಚಲಿತದಲ್ಲಿರಬಹುದು. ಇತರ ಕೆಲವು ದೃಷ್ಟಾಂತಗಳಲ್ಲಿ, ವಾಣಿಜ್ಯೀಕರಣದ ಬೃಹತ್ ಪ್ರಮಾಣಗಳು ಶೋಚನೀಯವಾಗಿ ಕಡಿಮೆ ಪ್ರಮಾಣದಲ್ಲಿರುವ ಮೂಲ ವಸ್ತುಗಳಿಂದ ಮಾಡಲ್ಪಟ್ಟಿರುತ್ತವೆ (ಮ್ಯಾಷಿಮಾರೋ).

ವಯಸ್ಕರು[ಬದಲಾಯಿಸಿ]

ವೃತ್ತಿನಿರತ ಸ್ಪೋರ್ಟ್ಸ್ ವಾಣಿಜ್ಯೀಕರಣದ ಉದಾಹರಣೆ - ಅಡಿಡಾಸ್‌ದಿಂದ ಉತ್ಪಾದಿಸಲ್ಪಟ್ಟ ಒಂದು ಬೋಸ್ಟನ್ ಸೆಲ್ಟಿಕ್ಸ್ ಕ್ಯಾಪ್

ಹೆಚ್ಚಿನ ಸಾಮಾನ್ಯ ವಯಸ್ಕ-ಪ್ರಧಾನ ವಾಣಿಜ್ಯೀಕರಣವು ವೃತ್ತಿನಿರತ ಕ್ರೀಡೆಗಳ ಗುಂಪುಗಳಿಗೆ (ಮತ್ತು ಅದರ ಆಟಗಾರರಿಗೆ) ಸಂಬಂಧಿಸಿದೆ.

ಒಂದೇ ತರಹದ ವಯಸ್ಕ-ಪ್ರಧಾನ ಚಲನಚಿತ್ರಗಳು ಮತ್ತು ಟಿವಿ ಷೋಗಳಿಗೆ ಸಂಬಂಧಿಸಿದ ಹೆಚ್ಚಿನ ವಯಸ್ಕ-ಪ್ರಧಾನ ವಸ್ತುಗಳ ಮಾರಾಟ ವಾಣಿಜ್ಯೀಕರಣದಲ್ಲಿ ಒಂದು ಚಿಕ್ಕ ಸ್ಥಾನವಾಗಿದೆ. ಇದು ಮುಖ್ಯವಾಗಿ ವೈಜ್ಞಾನಿಕ ಕಾದಂಬರಿ ಮತ್ತು ಭಯಾನಕ ಶೈಲಿಗಳಲ್ಲಿ ಸಾಮಾನ್ಯವಾಗಿದೆ. (ಉದಾಹರಣೆಗಳು: ಸ್ಟಾರ್ ಟ್ರೆಕ್ , ಮೆಕ್‌ಫಾರ್‌ಲೆನ್ಸ್‌ ಗೊಂಬೆಗಳು) ಮಕ್ಕಳಿಗಾಗಿ ಹೆಚ್ಚು ಉದ್ದೇಶಿಸಿದ್ದರೂ ಸಮಯಾನುಸಾರ ಇವು ವಯಸ್ಕರೂ ಸಹ ಅನುಸರಿಸುವುದನ್ನು ತೋರಿಸುತ್ತವೆ, ಮತ್ತು ವಯಸ್ಕರು ಮತ್ತು ಮಕ್ಕಳು ಇಬ್ಬರಿಗೂ ಒತ್ತುಕೊಟ್ಟಿದೆ ಎಂದು ತೋರಿಸುವ ವಸ್ತುಗಳಿಂದ ಸ್ವಲ್ಪ ಬದಲಾಗುವುದನ್ನು ನೀವು ನೋಡಬಹುದು. (ಗುಂಡಮ್ ಮಾಡೆಲ್ ಕಿಟ್‌ಗಳು)

ಕೆಲವೊಮ್ಮೆ ಸಂಪೂರ್ಣವಾಗಿ ಸಂಬಂಧಪಡದ ವಸ್ತು ಆ ವಸ್ತುವನ್ನು ಮಾರಾಟ ಮಾದಬಹುದಾದಂತೆ ಇವುಗಳ ಹೆಸರು ಅಥವಾ ಚಿತ್ರಗಳನ್ನು ಇಡುವುದರಿಂದ ಮಾಧ್ಯಮವಲ್ಲದ ವಸ್ತುಗಳ ಬ್ರ್ಯಾಂಡ್‌ಗಳು ಸಾಕಷ್ಟು ಅಂಗೀಕಾರ ಮತ್ತು ಗೌರವಗಳನ್ನು ಸಾಧಿಸಬಹುದು. (ಹಾರ್ಲೆ-ಡೆವಿಡ್‌ಸನ್‌ ಬ್ರ್ಯಾಂಡ್‌ನ್ನು ಹೊಂದಿರುವ ಬಟ್ಟೆಗಳು ಒಂದು ಉದಾಹರಣೆಯಾಗಿದೆ.)

ಪ್ರಾಪ್ ಪ್ರತಿಕೃತಿಗಳು[ಬದಲಾಯಿಸಿ]

ಈಗಲೂ ಕೆಲವೊಮ್ಮೆ ವಾಣಿಜ್ಯೀಕರಣ ಅನುಸರಿಸುವ ಇನ್ನೊಂದು ದಾರಿ ಪ್ರಾಪ್ ಪ್ರತಿಕೃತಿಗಳ ಮಾರುಕಟ್ಟೆಯಾಗಿದೆ. ಮುಖ್ಯವಾಗಿ ಫ್ಯಾನ್-ಮೇಡ್ ವಸ್ತುಗಳ ಮೇಲೆ ಬೆಳಕು ಚೆಲ್ಲುತ್ತವೆ. ದೊಡ್ಡ ಕಂಪನಿಗಳು ಹೆಚ್ಚು-ಉತ್ಪಾದಿಸದ ಚಲನಚಿತ್ರದ ನೆನಪಿನ ಗುರುತುಗಳ ವಸ್ತುಗಳನ್ನು ಬಳಕೆದಾರರು ಸಂಗ್ರಹಿಸಲು ಪ್ರಾರಂಭಿಸಿದ್ದರಿಂದ ಪ್ರಾಪ್ ಪ್ರತಿಕೃತಿಗಳು ಹೆಚ್ಚು ಪ್ರಸಿದ್ಧಿ ಹೊಂದುತ್ತಿವೆ. ಕೆಲವು 'ಪರವಾನಿಗೆ ಹೊಂದಿದ' ಪ್ರತಿಕೃತಿಗಳಿಗಿಂತ ಹೆಚ್ಚಿನ ಗುಣಮಟ್ಟವನ್ನು ತಲುಪುತ್ತಿವೆ.

ಇವನ್ನೂ ಗಮನಿಸಿ[ಬದಲಾಯಿಸಿ]

  • ಟೈ-ಇನ್
  • ಅಂಗಡಿ ಕಳ್ಳತನ
  • ವಾಣಿಜ್ಯೀಕರಣ
  • ವೀಕ್ಷಣಾ ವಾಣಿಜ್ಯೀಕರಣ

ಉಲ್ಲೇಖಗಳು[ಬದಲಾಯಿಸಿ]

  1. Kunz, Grace (2005). Merchandising: Theory, Principles, And Practice. Fairchild Books. ISBN 1563673533.
  2. ಎಬಿಸಿ ನ್ಯೂಸ್: ಬೇಸ್‌ಬಾಲ್ ತಂಡದ ಗುರುತನ್ನು ಹೊಂದಿರುವ ಕೊಫಿನ್‌ಗಳು. (೨೦೦೭-೦೧-೦೬ ಪಡೆಯಲ್ಪಟ್ಟವು