ವಿಷಯಕ್ಕೆ ಹೋಗು

ದೆಹಲಿ

ನಿರ್ದೇಶಾಂಕಗಳು: 28°36′36″N 77°13′48″E / 28.61000°N 77.23000°E / 28.61000; 77.23000
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದಿಲ್ಲಿ ಇಂದ ಪುನರ್ನಿರ್ದೇಶಿತ)
ದೆಹಲಿ
ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ
ಮೇಲಿನಿಂದ ವೃತ್ತಾಕಾರದಲ್ಲಿ: ಕಮಲ ಮಂದಿರ, ಹುಮಾಯೂನನ ಸಮಾಧಿ, ಕನ್ಹಾಟ್ ಪ್ಲೇಸ್, ಅಕ್ಷರಧಾಮ ಮಂದಿರ ಮತ್ತು ಇಂಡಿಯಾ ಗೇಟ್
Official logo of ದೆಹಲಿ
Location of Delhi in India
Location of Delhi in India
Coordinates: 28°36′36″N 77°13′48″E / 28.61000°N 77.23000°E / 28.61000; 77.23000
ಪ್ರದೇಶಉತ್ತರ ಭಾರತ
ರಾಜಧಾನಿ-ದೆಹಲಿ ಸುಲ್ತಾನರು೧೨೧೪
ರಾಜಧಾನಿ-ಮೊಘಲ್ ರಾಜವಂಶ೧೫೨೬ ನಡುವಿನ ಸ್ವಲ್ಪ ಸಮಯ ಆಗ್ರಾ
ನವ ದೆಹಲಿ ಬ್ರಿಟೀಷ್ ಭಾರತದ ರಾಜಧಾನಿ೧೨ ಡಿಸೆಂಬರ್ ೧೯೧೧
ನವ ದೆಹಲಿ-ರಾಜಪ್ರಭುತ್ವದ ರಾಜಧಾನಿ೧೯೪೭
ನವ ದೆಹಲಿ-ಭಾರತ ಗಣರಾಜ್ಯದ ರಾಜಧಾನಿಯಾಗಿ೨೬ ಜನವರಿ ೧೯೫೦
ಕೇಂದ್ರಾಡಳಿತ ಪ್ರದೇಶ[][]೧ ನವಂಬರ್ ೧೯೫೬
ರಾಷ್ಟ್ರೀಯ ರಾಜಧಾನಿ ಪ್ರದೇಶ[]೧ ಫೆಬ್ರುವರಿ ೧೯೯೨
ರಾಜಧಾನಿನವದೆಹಲಿ
ಜಿಲ್ಲೆಗಳು೧೧
Government
 • Bodyದೆಹಲಿ ಸರ್ಕಾರ
 • ಲೆಫ್ಟಿನೆಂಟ್ ಗವರ್ನರ್ಅನಿಲ್ ಬೈಜಲ್, ಭಾ.ಆ.ಸೇ[]
 • ಮುಖ್ಯಮಂತ್ರಿಅರವಿಂದ್ ಕೇಜ್ರಿವಾಲ್ (ಆಮ್ ಆದ್ಮಿ ಪಾರ್ಟಿ)
 • ಉಪ ಮು.ಮ.ಖಾಲಿ ಇದೆ (ಫೆಬ್ರವರಿ ೨೦೨೩ರ ನಂತರ)
 • ವಿಧಾನಸಭೆಏಕಸದಸ್ಯ (೭೦ ಸೀಟುಗಳು)
 • ಸಂಸದೀಯ ಕ್ಷೇತ್ರಗಳು
Area
 • ಕೇಂದ್ರಾಡಳಿತ ಪ್ರದೇಶಗಳು೧,೪೮೪ km (೫೭೩ sq mi)
 • Water೧೮ km (೬.೯ sq mi)
 • Rank೩೧
Elevation
೨೦೦–೨೫೦ m (೬೫೦–೮೨೦ ft)
Population
 (2011)[]
 • ಕೇಂದ್ರಾಡಳಿತ ಪ್ರದೇಶಗಳು೧,೬೭,೮೭,೯೪೧
 • Density೧೧,೩೧೨/km (೨೯,೨೯೮/sq mi)
 • Urban೧,೬೩,೪೯,೮೩೧ (೨nd)
 • Megacity೧,೧೦,೩೪,೫೫೫ (೨nd)
 • Metro (2016)೨,೬೪,೫೪,೦೦೦ (೧st)
ಭಾಷೆಗಳು
 • ಅಧೀಕೃತ
 • ಇತರೆ
ಜಿಡಿಪಿ (೨೦೧೮–೧೯)
 • Nominal
 • Nominal Per Capita೩,೬೫,೫೨೯ (ಯುಎಸ್$೮,೧೧೪.೭೪)
 • Metro GDP/PPP (2016)$370 billion[೧೧]
Time zoneUTC+5.30 (IST)
ಪಿನ್[೧೨]
೧೧೦೦೦೦–೧೧೦೦೯೯
Area code+91 11
ISO 3166 codeIN-DL
Vehicle registrationDL
HDI (೨೦೧೮)Increase ೦.೭೪೬[೧೩] (High) · 5th
ಸಾಕ್ಷರತೆ (೨೦೧೧)೮೬.೨೧ ಶೇ.[೧೪]
ಲಿಂಗಾನುಪಾತ (೨೦೧೧)೮೬೮ /1000 [೧೪]
Websitedelhi.gov.in
UNESCOದ ವಿಶ್ವದ ಪಾರಂಪರಿಕಾ ಸ್ಥಳವಾದ ಕೆಂಪು ಕೋಟೆ, ದೇಶದ ಪ್ರಧಾನ ಮಂತ್ರಿಯವರು ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಭಾಷಣ ಮಾಡುವ ಸ್ಥಳ.
ದೆಹಲಿಯಲ್ಲಿರುವ ಅಕ್ಷರಧಾಮ ದೇವಾಲಯವು ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಸಂಕೀರ್ಣವಾಗಿದೆ.
1931ರಲ್ಲಿ ಬ್ರಿಟಿಷರ ಆಡಳಿತ ಅವಧಿಯಲ್ಲಿ ಪ್ರಮುಖ ಸರಕಾರಿ ಕಛೇರಿಗಳಿರುವ ಉತ್ತರ ವಿಭಾಗವನ್ನು ಕಟ್ಟಿದ್ದರು

ದೆಹಲಿ ಸ್ಥಳೀಯವಾಗಿ ದಿಲ್ಲಿ ಎಂದೇ ಹೆಸರಾಗಿರುವ (ಹಿಂದಿ:दिल्ली ಪಂಜಾಬಿ:ਦਿੱਲੀ ಉರ್ದು: دلّی) ಮತ್ತು ಅಧಿಕೃತವಾಗಿ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ (ಎನ್‌.ಸಿ.ಟಿ) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ಮಹಾನಗರವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ೧೨.೨೫ ದಶಲಕ್ಷಕ್ಕೂ ಮಿಕ್ಕಿ ನಿವಾಸಿಗಳು ಮತ್ತು ೧೫.೯ ದಶಲಕ್ಷ ನಗರವಾಸಿಗಳನ್ನು ಹೊಂದಿರುವ ದೆಹಲಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎಂಟನೇ ದೊಡ್ಡ ನಗರವಾಗಿದೆ. (ಇದರಲ್ಲಿ ನೋಯ್ಡಾ, ಗುರ್‌ಗಾಂವ್‌, ಫರಿದಾಬಾದ್ ಮತ್ತು ಘಜೀಯಾಬಾದ್‌ ಸೇರಿವೆ).[೧೫]

NCTಗೆ ಸಮೀಪವಿರುವ ಕೆಲವು ನಗರಗಳು ಮತ್ತು NCT ವ್ಯಾಪ್ತಿಯಲ್ಲಿ ಬರುವ ಭಾರತದ ರಾಜಧಾನಿ ನವ ದೆಹಲಿಯನ್ನೂ ಆಗಿಂದಾಗ್ಗೆ ದೆಹಲಿಯೆಂದೇ ಕರೆಯುವುದುಂಟು. NCT ಎನ್ನುವುದು ಒಕ್ಕೂಟ ವ್ಯವಸ್ಥೆಯ ಕೇಂದ್ರಾಡಳಿತ ಪ್ರದೇಶ.

ದೆಹಲಿಯು ಯಮುನಾ ನದಿಯ ದಂಡೆಯಲ್ಲಿದ್ದು, ಕನಿಷ್ಟ ಪಕ್ಷ ಕ್ರಿ.ಪೂ 6ನೇ ಶತಮಾನದಿಂದಲೇ ನಿರಂತರವಾಗಿ ವಾಸಕ್ಕೆ ಬಳಕೆಯಾಗಿದೆ.[೧೬]

ದೆಹಲಿ ಸುಲ್ತಾನರು ತಲೆ ಎತ್ತಿದ ನಂತರ, ದೆಹಲಿಯು ರಾಜಕೀಯ, ಸಾಂಸ್ಕೃತಿಕ ಮತ್ತು ವಾಣಿಜ್ಯ ನಗರವಾಗಿ ಪ್ರಾಮುಖ್ಯತೆಗೆ ಬಂದಿತು, ಜೊತೆಗೆ ವಾಯವ್ಯ ಭಾರತ ಮತ್ತು ಇಂಡೋ-ಗಂಗಾ ಬಯಲು ಪ್ರದೇಶಗಳ ಮಧ್ಯೆ ವ್ಯಾಪಾರ ಮಾರ್ಗಗಳೂ ಬೆಳೆದವು.[೧೭][೧೮]

ಪ್ರಾಚೀನ ಮತ್ತು ಮದ್ಯಕಾಲೀನದ ಹಲವು ಸ್ಮಾರಕಗಳು, ಪುರಾತತ್ವ ಸ್ಥಳಗಳು ಹಾಗೂ ಹೀಗೆ ಇನ್ನೂ ಹಲವು ದೆಹಲಿಯಲ್ಲಿವೆ. ೧೬೩೯ರಲ್ಲಿ ದೆಹಲಿಯನ್ನು ಆಳಿದ ಮೊಘಲ್ ಚಕ್ರವರ್ತಿ ಷಹಜಹಾನ್ ಹೊಸ ಸುಭದ್ರ ನಗರವನ್ನು ನಿರ್ಮಿಸಿದನು, ಅದು ೧೬೪೯ ರಿಂದ ೧೮೫೭ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು.[೧೯][೨೦]

ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯು 18ನೇ ಮತ್ತು 19ನೇ ಶತಮಾನಗಳಲ್ಲಿ ಭಾರತದ ಹೆಚ್ಚಿನ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸಿದ ನಂತರ, ೧೯೧೧ರಲ್ಲಿ ಜಾರ್ಜ್ ವಿ ದೆಹಲಿಯನ್ನೇ ರಾಜಧಾನಿಯೆಂದು ಮತ್ತೆ ಘೋಷಿಸುವವರೆಗೆ ಕಂಪೆನಿ ಆಡಳಿತ ಮತ್ತು ಬ್ರಿಟೀಷ್ ರಾಜ್ಯ ಹೀಗೆ ಎರಡಕ್ಕೂ ಕಲ್ಕತ್ತಾವೇ ರಾಜಧಾನಿಯಾಗಿತ್ತು.

1920ರ ದಶಕದಲ್ಲಿ ಹಳೇ ನಗರದ ದಕ್ಷಿಣಕ್ಕೆ ಹೊಸ ರಾಜಧಾನಿ ನಗರ ನವ ದೆಹಲಿಯನ್ನು ನಿರ್ಮಿಸಲಾಯಿತು.[೨೧]

೧೯೪೭ರಲ್ಲಿ ಭಾರತಕ್ಕೆ ಬ್ರಿಟೀಷ್ ಆಡಳಿತದಿಂದ ಸ್ವಾತಂತ್ರ್ಯ್ಯ ಸಿಕ್ಕಾಗ, ನವದೆಹಲಿಯನ್ನು ದೇಶದ ರಾಜಧಾನಿ ಮತ್ತು ಸರ್ಕಾರ ಪೀಠವೆಂದು ಘೋಷಿಸಲಾಯಿತು. ಭಾರತದ ಸಂಸತ್ತು ಸೇರಿದಂತೆ ಸಂಯುಕ್ತ ಸರ್ಕಾರದ ಹಲವು ಪ್ರಮುಖ ಕಛೇರಿಗಳಿಗೆ ನವ ದೆಹಲಿ ಮನೆಯಾಗಿದೆ.

ದೇಶದೆಲ್ಲೆಡೆಯಿಂದ ಬರುವ ವಲಸಿಗರಿಂದಾಗಿ ದೆಹಲಿ ಕಾಸ್ಮೊಪಾಲಿಟನ್‌ ಮಹಾನಗರವಾಗಿ ಬೆಳೆದಿದೆ. ತುಲನಾತ್ಮಕವಾಗಿ ಹೆಚ್ಚು ಆದಾಯವುಳ್ಳ ಸರಾಸರಿ ಜನಸಂಖ್ಯೆ, ತ್ವರಿತ ಅಭಿವೃದ್ಧಿ ಮತ್ತು ನಗರೀಕರಣದಿಂದಾಗಿ ಇಂದು ದೆಹಲಿ ಬದಲಾಗಿದೆ.[೨೨]

ದೆಹಲಿಯಿಂದು ಭಾರತದ ಪ್ರಮುಖ ಸಾಂಸ್ಕೃತಿಕ, ರಾಜಕೀಯ ಮತ್ತು ವಾಣಿಜ್ಯ ಕೇಂದ್ರ. ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇರುವ ನಗರ­ಗ­ಳಲ್ಲಿ ದೆಹಲಿ ಎರಡನೇ ಸ್ಥಾನ ಪಡೆದು­ಕೊಂಡಿದೆ. 1990ರಿಂದ 2014ರ ಅವಧಿ­ಯಲ್ಲಿ ಜನಸಂಖ್ಯೆ ದ್ವಿಗುಣಗೊಂ­ಡಿದ್ದು ಈಗಿನ ದೆಹಲಿಯ ಜನಸಂಖ್ಯೆ 2.5 ಕೋಟಿ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ. ಮೊದಲ ಸ್ಥಾನದಲ್ಲಿ ಜಪಾನ್‌ ರಾಜಧಾನಿ ಟೋಕಿಯೊ (೩.೭೮ ಕೋಟಿ) ಇದೆ.(೧೨-೭-೨೦೧೪ ಪ್ರಜಾವಾಣಿ ೧೨-೭-೨೦೧೪)

ಜನಸಂಖ್ಯೆಯ ದಟ್ಟನೆಯ ನಗರಗಳು

ದೆಹಲಿಗೆ ಜಗತ್ತಿನ ಜನದಟ್ಟನೆಯ ನಗರಗಳಲ್ಲಿ ಎರಡನೆಯ ಸ್ಥಾನ.
  • ವಿಶ್ವ ಸಂಸ್ಥೆಯ ವರದಿ (ಪ್ರಜಾವಾಣಿ ೧೨-೭-೨೦೧೪) :

{</ref>.[೨೩]

ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿಯ ಅನೇಕ ರೇಡಿಯೊ ಸ್ಟೇಷನ್‌ಗಳು ದೆಹಲಿಯಿಂದ ಪ್ರಸಾರವಾಗುತ್ತವೆ. ಪ್ರಪಂಚದಲ್ಲೇ ಅತೀದೊಡ್ಡ ರೇಡಿಯೊ ಸೇವೆ ಒದಗಿಸುವ ಆಲ್ ಇಂಡಿಯಾ ರೇಡಿಯೊ (AIR) ಇವುಗಳಲ್ಲಿ ಪ್ರಮುಖವಾದುದು. ಇದು ಹತ್ತು ಭಾಷೆಗಳಲ್ಲಿ ಆರು ರೇಡಿಯೊ ಚಾನೆಲ್‌ಗಳನ್ನು ಒದಗಿಸುತ್ತದೆ. "ಆಜ್ ತಕ್", "ರೇಡಿಯೊ ಸಿಟಿ(೯೧.೧ MHz)", "ಬಿಗ್ FM(೯೨.೭ MHz)", "ರೆಡ್ FM(೯೩.೫MHz)", "ರೇಡಿಯೊ ಒನ್(೯೪.೩ MHz)", "ಹಿಟ್ FM(೯೫ MHz)", "ಅಪ್ನ ರೇಡಿಯೊ", "ರೇಡಿಯೊ ಮಿರ್ಚಿ(೯೮.೩ MHz)", "FM ರೈನ್‍‌ಬೊ(೧೦೨.೪ MHz)", "ಫೀವರ್ FM(೧೦೪ MHz)", "ಮ್ಯೊ FM(೧೦೪.೮ MHz)", "FM ಗೋಲ್ಡ್(೧೦೬.೪ MHz)" ಮೊದಲಾದವುಗಳು ಇತರ ಪ್ರಾದೇಶಿಕ ರೇಡಿಯೊ ಸ್ಟೇಷನ್‌ಗಳು.

ವಿವಿಧ ಸುದ್ದಿಗಳ ಮತ್ತು ಸಾಮಾನ್ಯ ಆಸಕ್ತಿಯ ಪತ್ರಿಕೆಗಳೂ ದೆಹಲಿಯಿಂದ ಪ್ರಕಟಿತವಾಗುತ್ತವೆ. ಅವುಗಳೆಂದರೆ ಇಂಡಿಯಾ ಟುಡೆ, ಔಟ್‌ಲುಕ್, COVERT ಮತ್ತು ಇತ್ಯಾದಿ.

ಕ್ರೀಡೆ

[ಬದಲಾಯಿಸಿ]
ಚಿತ್ರ:61449261 456ab69588 o.jpg
ಜವಹರ್‌ಲಾಲ್‌ ನೆಹರು ಕ್ರೀಡಾಂಗಣವು ಭಾರತದಲ್ಲಿರುವ ಕ್ರೀಡಾಂಗಣಗಳಲ್ಲಿ ಮೂರನೇ ಅತಿ ದೊಡ್ಡ ಕ್ರೀಡಾಂಗಣವಾಗಿದೆ.

ಕ್ರಿಕೆಟ್ ದೆಹಲಿಯ ಹೆಚ್ಚು ಜನಪ್ರಿಯ ಕ್ರೀಡೆ.[೨೪] ನಗರದಾದ್ಯಂತ ಅನೇಕ ಕ್ರಿಕೆಟ್ ಮೈದಾನಗಳಿವೆ (ಅಥವಾ ಮೈದಾನಗಳು ). ಪಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣವು ಭಾರತದಲ್ಲಿ ಹಳೆಯ ಕ್ರಿಕೆಟ್ ಮೈದಾನಗಳಲ್ಲಿ ಒಂದಾಗಿದ್ದು, ಇಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುತ್ತವೆ. ದೆಹಲಿ ಕ್ರಿಕೆಟ್‌ ತಂಡವು ರಣಜಿ ಟ್ರೋಫಿಯಲ್ಲಿ ನಗರವನ್ನು ಪ್ರತಿನಿಧಿಸುತ್ತದೆ. ಇದು ಒಂದು ಸ್ಥಳೀಯ ಪ್ರಥಮ-ದರ್ಜೆ ಕ್ರಿಕೆಟ್ ಚಾಂಪಿಯನ್‌ಶಿಪ್.[೨೫]

IPL ತಂಡ ದೆಹಲಿ ಡೇರ್‌ಡೆವಿಲ್ಸ್‌, ಮತ್ತು ICL ತಂಡ ದೆಹಲಿ ಜೈಂಟ್ಸ್‌ (ಆರಂಭದ ಹೆಸರು ದೆಹಲಿ ಜೆಟ್ಸ್‌) ಮೊದಲಾದವುಗಳಿಗೂ ನಗರವು ನೆಲೆಯಾಗಿದೆ. ಇತರ ಕ್ರೀಡೆಗಳಾದ ಮೈದಾನದ ಹಾಕಿ, ಫುಟ್‌ಬಾಲ್ (ಕಾಲ್ಚೆಂಡಾಟ), ಬಾಸ್ಕೆಟ್‌ಬಾಲ್, ಟೆನ್ನಿಸ್, ಗಾಲ್ಫ್, ಬ್ಯಾಡ್ಮಿಂಟನ್, ಈಜುಗಾರಿಕೆ, ಕಾರ್ಟ್ ರೇಸಿಂಗ್, ಭಾರ ಎತ್ತುವಿಕೆ ಮತ್ತು ಟೇಬಲ್ ಟೆನ್ನಿಸ್ ಕೂಡ ನಗರದಲ್ಲಿ ಪ್ರಸಿದ್ಧವಾದವುಗಳು.

ಜವಹರ್‌ಲಾಲ್‌ ನೆಹರು ಕ್ರೀಡಾಂಗಣ ಮತ್ತು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣಗಳು ದೆಹಲಿಯಲ್ಲಿರುವ ಇತರ ಕ್ರೀಡಾಂಗಣಗಳು. ಹಿಂದೆ ದೆಹಲಿಯು ಅನೇಕ ಸ್ಥಳೀಯ ಮತ್ತು ಮೊದಲನೇ ಮತ್ತು ಒಂಭತ್ತನೇ ಏಷಿಯನ್ ಗೇಮ್ಸ್‌ ಮೊದಲಾದ ಅಂತರರಾಷ್ಟ್ರೀಯ ಕ್ರೀಡಾಕೂಟ ಆತಿಥ್ಯವಹಿಸಿದೆ.[೨೬]

ಈಗ ದೆಹಲಿಯು 2010ಕಾಮನ್‌ವೆಲ್ತ್‌ ಗೇಮ್ಸ್‌‌‌ ಆತಿಥ್ಯವಹಿಸಲು ಸಿದ್ಧಗೊಳ್ಳುತ್ತಿದೆ. ಇದುವರೆಗೆ ನಗರದಲ್ಲಿ ನಡೆದುದುರಲ್ಲೇ ಇದು ಅತಿ ದೊಡ್ಡ ಬಹು-ಕ್ರೀಡಾಕೂಟವಾಗಿದೆ. ದೆಹಲಿಯು 2014ಏಷಿಯನ್ ಗೇಮ್ಸ್‌ ಆಹ್ವಾನವನ್ನು ಹರಾಜಿನಲ್ಲಿ ಕಳೆದುಕೊಂಡಿತ್ತು,[೨೭] ಆದರೆ 2020ಒಲಿಂಪಿಕ್ ಗೇಮ್ಸ್‌ಗೆ ಆಹ್ವಾನವನ್ನು ಪಡೆದಿದೆ.[೨೬][೨೮] ಅಲ್ಲದೆ ೨೦೧೦ರ ಮೊದಲ ಭಾರತೀಯ ಗ್ರ್ಯಾಂಡ್‌ ಪ್ರಿಕ್ಸ್‌‌‌ನ ಆತಿಥ್ಯವಹಿಸಲು ದೆಹಲಿ ಆಯ್ಕೆಯಾಗಿದೆ.[೨೯]

೨೦೧೩ ರ ವಿಧಾನ ಸಭೆ ಚುನಾವಣೆ

[ಬದಲಾಯಿಸಿ]

೮-೧೨-೨೦೧೩ -ಎಣಿಕೆ ನಂತರ ಮುಖ್ಯ ಮಂತ್ರಿ (ಮೂರು ಚುನಾವಣೆ ಗೆದ್ದಿದ್ದ ) ಶೈಲಾ ದೀಕ್ಷಿತ್ ರಾಜೀನಾಮೆ ಸಲ್ಲಿಸಿದರು. ಶ್ರೀ ಅರವಿಂದ ಕೇಜರೀವಾಲ ಎಎಪಿ ಪಕ್ಷದ ಮುಖ್ಯಸ್ಥ ದಿ. ೨೮-೧೨-೨೦೧೩ ಶನಿವಾರ ದೆಹಲಿ ರಾಮಲೀಲಾ ಮೈದಾನದಲ್ಲಿ ದೆಹಲಿ ಸರ್ಕಾರದ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಆರು ಜನ ವಿಧಾನ ಸಭಾ ಸದ್ಯರನ್ನು ತಮ್ಮ ಮಂತ್ರಿ ಮಂಡಲಕ್ಕೇ ಸೇರಿಸಿ ಕೊಂಡು ಖಾತೆಗಳನ್ನ ಹಂಚಿದರು. (ಒಟ್ಟು ೭ ಜನರ ಮಂತ್ರಿ ಮಂಡಲ) ೨೦೧೪ರ ಫೆಬ್ರವರಿ ೧೪ (February 14, 2014 he resigned) ರಂದು ಅವರ ಜನ ಲೋಕಪಾಲ ಮಸೂದೆಯ ಕರಡನ್ನು ವಿಧನಸಭೆಯಲ್ಲಿ ಮಂಡಿಸಲು ಆಗದೇ ಇದ್ದರಿಂದ ತಾವು ರಾಜೀನೇಮೇ ನೀಡುವುದಾಗಿ ಹೇಳಿ ದೆಹಲಿಯ ಲೆ. ಗೌರ್ನರಿಗೆ ರಾಜೀನಾಮೆ ಸಲ್ಲಿಸಿದರು. ಒಂದುವಾರ ಕಾಲ ರಾಜ್ಯಪಾಲರು ಎರಡನೇ ಅಧಿಕ ಸ್ಥಾನ ಪಡೆದ (ಮೊದಲ ಆಧಿಕ ಸ್ಥಾನ) ಬಿ.ಜೆ.ಪಿ. ಸರ್ಕಾರ ರಚಿಸಲು ಬಾರದೇಇದ್ದುದರಿಂದ ರಾಷ್ತ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು.(ಟೈ.ಆ.ಇಂ.) ಪ -

ವರ್ಣ ಪಾರ್ಟಿ ಬಾವುಟ (Flag)
ಅಭ್ಯರ್ಥಿಗಳು

(Candidates)

ಗೆಲವು(Seats Won)
ಲಾಭ/ನಷ್ಟ(Net Change)
in seats
% (of Seats)
% .ಶೇ. ಮತ ಗಳಿಕೆ(of Votes)
(Change in) %
of vote
ಬಿಜೆಪಿ 66 31 Increase8 44 33% ಟೆಂಪ್ಲೇಟು:+8
ಎಎಪಿ | 69 28(New) 28 30% 30.4%(?)
ಕಾಂಗ್ರೆಸ್ 70 08 Decrease35 11.5 25% ಟೆಂಪ್ಲೇಟು:-35
ಜೆಡಿ(ಯು) - 1 Increase1 1.5 0.6% Decrease
ಎಸ್ಎಡಿ ಚಿತ್ರ:Akali dal logo.png 4 1 Increase1 1.5 1% Decrease
ಪಕ್ಷೇತರ 1 0 1.5 10% Decrease
Total 810 70 Turnout 100% Voters 76,99,800

ದೆಹಲಿ ೨೦೧೩/2013ರ ಚುನಾವಣಾ ಫಲಿತಾಂಶ

[ಬದಲಾಯಿಸಿ]
ದೆಹಲಿ

೨೦೧೩(70)

67ಕ್ಕೆ ಕಾಂಗ್ರೆಸ್ 8 (25%) ಬಿ.ಜೆ.ಪಿ. 31(35%)3 ಸದಸ್ಯರು MP ಗಳಾಗಿಹೋಗಿದ್ದಾರೆ(31-3=28) ಆಮ್.ಆದ್ಮಿ ಪಾರ್ಟಿ 28(-1=27) ಬಿಟ್ಟಿದೆ) (30.4%) ಬಿಎಸ್ಪಿ(6)0 (4)3JDU -1 0.6%;akAli1-1%

Ind-2;10%

ದೆಹಲಿ-2008 ೭೦ 43-40.31% ಬಿಜೆಪಿ 23-(36.34%) -- ಬಿಎಸ್ಪಿ 2-14%. 2
  • ೬-೯-೨೦೧೪(timesofindia)
  • 67 MLAs :ಬಿಜಪಿ = 31-3=28 MLAs;; ಆಮ್ ಆದ್ಮಿ =27 ;;ಕಾಂಗ್ರೆಸ್ -8 ;;ಶಿ.ಅಕಾಲಿದಳ -1;;JDU -1;ಪಕ್ಷೇತರ -2 (

ದೆಹಲಿ ಸರ್ಕಾರದ ಮಂತ್ರಿಗಳು

[ಬದಲಾಯಿಸಿ]

ದೆಹಲಿ ಸರ್ಕಾರದ ಮಂತ್ರಿಗಳ ಪಟ್ಟಿ . ೨೮-೧೨-೨೦೧೩(ಪ್ರಮಾಣ ವಚನ ಸ್ವೀಕಾರ) ಅರವಿಂದ ಕೇಜ್ರಿವಾಲ ಮುಖ್ಯ ಮಂತ್ರಿ .ದಿ. ೧೪-೨-೨೦೧೪ (ಫೆಬ್ರವರಿ 14, 2014ರಂದು ದೆಹಲಿ ರಾಜ್ಯಪಾಲ ಅವರಿಗೆ ದೆಹಲಿ ಮುಖ್ಯಮಂತ್ರಿ ಆದ ಕೇಜರಿವಾಲರು ತಮ್ಮ ರಾಜೀನಾಮೇ ಸಲ್ಲಿಸಿದ್ದಾರೆ. ದೆಹಲಿ ರಾಜ್ಯಪಾಲ ಲೆ. ನಜೀಬ್ ಜಂಗ ಅವರ ಶಿಫಾರಸಿನಂತೆ ದೆಹಲಿ- ರಾಜ್ಯಕ್ಕೆ ೧೭-೨-೨೦೧೪ ರಿಂದ ರಾಷ್ತ್ರಪತಿ ಆಡಳಿತ ಘೋಷಣೆ ಆಗಿದೆ. ಅರವಿಂದ ಕೇಜರಿವಾಲರು ಅಸೆಂಬ್ಲಿ ವಿಸರ್ಜಿಜಸದೆ ರಾಷ್ತ್ರಪತಿ ಆಡಳಿತ ಘೋಷಣೆ ಮಾಡಿದ ಬಗ್ಗೆ ಸುಪ್ರೀಂ ಕೋರ್ಟಿಗೆ ತಕರಾರು ಅರ್ಜಿ ಹಾಕಿದ್ದಾರೆ. (the press release issued by lieutenant governor Najeeb Jung's office on Monday.New Delhi, Feb 17 (PTI): Central rule was today imposed in Delhi and the Legislative Assembly kept in suspended animation after President Pranab Mukherjee ..) (DNA News) |

ಹೆಸರು ಹುದ್ದೆ-ಖಾತೆ
ಅರವಿಂದ ಕೇಜ್ರಿವಾಲ ಗೃಹ, ಇಂಧನ (Power),ಯೋಜನೆ, ಹಣಕಾಸು, ಸೇವೆ ,ಕಣ್ಗಾ ವಲು (Vigilance)ಇತರ ಹಂಚದ ಖಾತೆಗಳು.
ಮನೀಶ್ ಸಿಸೋಡಿಯಾ ವಿದ್ಯಾ ; ಉನ್ನತ ಶಿಕ್ಷಣ , ಲೋಕೋಪಯೋಗಿ ; ಸ್ಥಳೀಯ ಸಂಸ್ಥೆಗಳು ; ನಗರ ಅಭಿವೃದ್ಧಿ ; ಭೂಮಿ, ಕಟ್ಟಡ ; ಕಂದಾಯ .
ಗಿರೀಶ್ ಸೋನಿ ಎಸ್ ಸಿ; ಎಸ್.ಟಿ ; ಉದ್ಯೋಗ ; ಅಭಿವೃದ್ಧಿ ; ಲೇಬರ್,
ಸತ್ಯೇಂದ್ರ ಕುಮಾರ್ ಜೈನ್ ಆರೋಗ್ಯ ; ಕೈಗಾರಿಕೆ ; ಗುರುದ್ವಾರ ; ಚುನಾವಣೆ.
ರಾಖಿ ಬಿರ್ಲಾ ಮಹಿಳೆ ಮತ್ತು ಮಕ್ಕಳು ; ಸಮಾಜ ಕಲ್ಯಾಣ ; ಭಾಷೆ.
ಸೋಮನಾಥ್ ಭಾರ್ತಿ ಆಡಳಿತ ಸುಧಾರಣೆ ; ಕಾನೂನು ;ಪ್ರವಾಸೋದ್ಯಮ ;ಕಲೆ ಮತ್ತು ಸಂಸ್ಕೃತಿ;
ಸೌರಭ್ ಭರದ್ವಾಜ್ ಸಾಗಾಣಿಕೆ (Transport), ಆಹಾರ ಸರಬರಾಜು ; ಚುನಾವಣೆ ; ಜಿಎಡಿ ಮತ್ತು ಪರಿಸರ (GAD)

ಪುನಹ ದೆಹಲಿ ಚುನಾವಣೆ

[ಬದಲಾಯಿಸಿ]
ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್‌ ಅವರು ಮುಖ್ಯಮಂತ್ರಿಯಾಗಿ 49 ದಿನಗಳ ಅಧಿಕಾರ ನಡೆಸಿ ರಾಜೀನಾಮೆ ನೀಡಿದ ಬಳಿಕ ದಿಲ್ಲಿಯಲ್ಲಿ 2014ರ ಫೆಬ್ರವರಿಯಿಂದ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.
ದಿಲ್ಲಿ ವಿಧಾನಸಭೆ ಚುನಾವಣೆ 2015ರ ಫೆಬ್ರವರಿ 7ರಂದು (ಶನಿವಾರ) ನಡೆಯಲಿದ್ದು, ಮತ ಎಣಿಕೆ ಅದೇ ಫೆ.10ರಂದು (ಮಂಗಳವಾರ) ನಡೆಯಲಿದೆ ಎಂದು ಚುನಾವಣೆ ಆಯೋಗ ಪ್ರಕಟಿಸಿದೆ.
ಮುಖ್ಯ ಚುನಾವಣೆ ಆಯುಕ್ತ ವಿ.ಎಸ್‌. ಸಂಪತ್‌, 1.30 ಕೋಟಿ ಮತದಾರರು ರಾಷ್ಟ್ರೀಯ ರಾಜಧಾನಿಯ 70 ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ. 11.763 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
2015 ಜನವರಿ 14ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು 2015 ಜನವರಿ 21 ಕಡೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಜ.22ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು 2015 ಜ.24 ಕೊನೆಯ ದಿನವಾಗಿದೆ ಎಂದು ಸಂಪತ್‌ ಪ್ರಕಟಿಸಿದರು.(ವಿಜಯ ಕರ್ನಾಟಕ Jan 12, 2015,)

ಫಲಿತಾಂಶ

[ಬದಲಾಯಿಸಿ]
ಮತದಾನ
7-2-2015;ಎಣಿಕೆ 10-2-2015 ಮಂಗಳವಾರ: ಚಲಾವಣೆ ಮತದಾನ 67.21%
ಒಟ್ಟು ೭೦ ಸ್ಥಾನಗಳು 70/70 ಫಲಿತಾಂಶ/ ಬಿ.ಜೆ.ಪಿ - :೦3 (-29) ಚರ್ಚೆ
ಪಕ್ಷ ಗೆಲವು ಶೇಕಡ +/-
ಬಿಜೆಪಿ 3 32.2%(33.07%/2013 -29
ಕಾಂಗ್ರೆಸ್ 0 9.7%(24.55%/2013) -8
ಆಮ್ ಆದ್ಮಿ ಪಾರ್ಟಿ 67 54.3%(29.49%/2013) +39
ಇತರೆ 3.3% -2
ಬಿ.ಎಸ್.ಪಿ1.3% ಪಕ್ಷೇತರಂ.೫% ಇತರೆ 1.6% ನೋಟ 0.4%
ಮುಖ್ಯ ಮಂತ್ರಿ ಕೇಜ್ರಿವಾಲ್‌
  • ದಿ.14-2-2015 ,ಶನಿವಾರ ಬೆಳಗ್ಗೆ 12.15ರ ಸುಮಾರಿಗೆ ಉಪರಾಜ್ಯಪಾಲ ನಜೀಬ್‌ ಜಂಗ್‌, ನೂತನ ಮುಖ್ಯ ಮಂತ್ರಿ ಕೇಜ್ರಿವಾಲ್‌ಗೆ ಗೋಪ್ಯತಾ ವಿಧಿ ಬೋಧಿಸಿದರು. ಜನಲೋಕಪಾಲ ವಿಧೇಯಕ ಅಂಗೀಕಾರವಾಗದ ಕಾರಣಕ್ಕೆ 2014ರ ಫೆ.14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೇಜ್ರಿವಾಲ್‌, ಸರಿಯಾಗಿ ಒಂದು ವರ್ಷದ ನಂತರ, ಅದೇ ದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು..
ಸಿಸೋಡಿಯಾ ಡಿಸಿಎಂ:
ಬಳಿಕ ದಿಲ್ಲಿಯ ಉಪಮುಖ್ಯಮಂತ್ರಿಯಾಗಿ ಕೇಜ್ರಿವಾಲ್‌ ಬಲಗೈ ಬಂಟ ಎನಿಸಿಕೊಂಡಿರುವ ಮನೀಶ್‌ ಸಿಸೋಡಿಯಾ ಪ್ರಮಾಣವಚನ ಸ್ವೀಕರಿಸಿದರು. ಅವರ ಬಳಿಕ ಆಸೀಮ್‌ ಅಹಮದ್‌ಖಾನ್‌, ಸಂದೀಪ್‌ ಕುಮಾರ್‌, ಸತ್ಯೇಂದ್ರ ಜೈನ್‌, ಗೋಪಾಲ್‌ ರಾಯ್, ಜಿತೇಂದ್ರ ಸಿಂಗ್‌ ತೋಮರ್‌ ಅವರಿಗೂ ಉಪರಾಜ್ಯಪಾಲ ನಜೀಬ್‌ ಜಂಗ್ ಗೋಪ್ಯತಾ ವಿಧಿ ಬೋಧಿಸಿದರು.

.

ದೆಹಲಿ ಗೌರ್ನರ್

[ಬದಲಾಯಿಸಿ]
  • ೨೯-೧೨=೨೦೧೬
  • ಬೆಂಗಳೂರು ಮೆಟ್ರೊ ರೈಲು ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅನಿಲ್‌ ಬೈಜಲ್‌ ಅವರು ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್‌ ಆಗಿ ನೇಮಕಗೊಂಡಿದ್ದಾರೆ. ಕೇಂದ್ರದ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿಗಳೂ ಆಗಿದ್ದ 70 ವರ್ಷದ ಬೈಜಲ್‌ ನೇಮಕವನ್ನು ರಾಷ್ಟ್ರಪತಿ ಪ್ರಣವ್‌ ಅಂಗೀಕರಿಸಿದ್ದಾರೆ. ಡಿಸೆಂಬರ್‌ 30ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.[೩೦]

ಮಹಾನಗರಪಾಲಿಕೆಗಳ ಚುನಾವಣೆ ೨೦೧೭

[ಬದಲಾಯಿಸಿ]
  • 26 Apr, 2017
  • ದೇಶದ ರಾಜಧಾನಿ ದೆಹಲಿಯ ಮೂರು ಮಹಾನಗರಪಾಲಿಕೆಗಳ ೨೦೧೭ ರ ಚುನಾವಣೆ ಫಲಿತಾಂಶ:
  • ಉತ್ತರ ದೆಹಲಿಯ 103 ವಾರ್ಡ್ ಗಳಲ್ಲಿ ಬಿಜೆಪಿ 66, ಎಎಪಿ 20, ಕಾಂಗ್ರಸ್‌ 15 ಮತ್ತು ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
  • ಪೂರ್ವ ದೆಹಲಿಯ 63 ವಾರ್ಡ್ ಗಳಲ್ಲಿ ಬಿಜೆಪಿ 48, ಎಎಪಿ 10, ಕಾಂಗ್ರಸ್‌ 3 ಮತ್ತು ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
  • ದಕ್ಷಿಣ ದೆಹಲಿಯ 104 ವಾರ್ಡ್ ಗಳಲ್ಲಿ ಬಿಜೆಪಿ 70, ಎಎಪಿ 16, ಕಾಂಗ್ರಸ್‌ 12 ಮತ್ತು ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.[೩೧]

ಇದನ್ನೂ ನೋಡಿರಿ

[ಬದಲಾಯಿಸಿ]

ಭಾರತ

ಆಕರಗಳು

[ಬದಲಾಯಿಸಿ]
  1. ಉಲ್ಲೇಖ ದೋಷ: Invalid <ref> tag; no text was provided for refs named 7thAmend56
  2. ಉಲ್ಲೇಖ ದೋಷ: Invalid <ref> tag; no text was provided for refs named ReorgAct56
  3. ಉಲ್ಲೇಖ ದೋಷ: Invalid <ref> tag; no text was provided for refs named NCTact
  4. "Anil Baijal takes over as new Lt Governor of Delhi". ದಿ ಟೈಮ್ಸ್ ಆಫ್‌ ಇಂಡಿಯಾ. Delhi. 31 December 2016. Archived from the original on 3 January 2017. Retrieved 31 December 2016.
  5. "Delhi Info". unccdcop14india.gov.in. Retrieved 24 November 2020.
  6. ೬.೦ ೬.೧ ಉಲ್ಲೇಖ ದೋಷ: Invalid <ref> tag; no text was provided for refs named census2011.co.in Delhi
  7. "Delhi (India): Union Territory, Major Agglomerations & Towns – Population Statistics in Maps and Charts". City Population. Archived from the original on 2 March 2017. Retrieved 28 February 2017.
  8. ಉಲ್ಲೇಖ ದೋಷ: Invalid <ref> tag; no text was provided for refs named UNcities2016
  9. ೯.೦ ೯.೧ "Official Language Act 2000" (PDF). Government of Delhi. 2 July 2003. Archived from the original (PDF) on 4 March 2016. Retrieved 17 July 2015.
  10. "Gross State Domestic Product of Delhi" (PDF). Planning Department, Government of Delhi. p. 16. Archived (PDF) from the original on 1 July 2020. Retrieved 9 June 2019.
  11. "Mumbai is no more the financial capital of India". Business Insider India. 28 November 2016. Retrieved 13 August 2020.
  12. "Find Pin Code". Department of Posts. Archived from the original on 3 June 2019. Retrieved 5 June 2019.
  13. "Sub-national HDI – Area Database". Global Data Lab (in ಇಂಗ್ಲಿಷ್). Institute for Management Research, Radboud University. Archived from the original on 23 September 2018. Retrieved 25 September 2018.
  14. ೧೪.೦ ೧೪.೧ "Census 2011 (Final Data) – Demographic details, Literate Population (Total, Rural & Urban)" (PDF). planningcommission.gov.in. Planning Commission, Government of India. Archived from the original (PDF) on 27 January 2018. Retrieved 3 October 2018.
  15. "World Urbanization Prospects: The 2007 Revision Population Database". UN. Archived from the original on 2008-12-18. Retrieved 2009-09-07.
  16. Asher, Catherine B (2000) [2000]. "Chapter 9:Delhi walled: Changing Boundaries". In James D. Tracy (ed.). City Walls. Cambridge University Press. pp. 247–281. ISBN 0521652219. Retrieved 2008-11-01.
  17. Necipoglu, Gulru (2002) [2002]. "Epigraphs, Scripture, and Architecture in the Early Sultanate of Delhi". Muqarnas: An Annual on the Visual Culture of the Islamic World. BRILL. pp. 12–43. ISBN 9004125930. Retrieved 2008-11-01.
  18. Aitken, Bill (2001) [2002]. delhi+continuously +inhabited&pg=PA21 Speaking Stones: World Cultural Heritage Sites in India. Eicher Goodearth Limited. pp. 264 pages. ISBN 8187780002. Retrieved 2008-11-01. {{cite book}}: Check |url= value (help)
  19. The Encyclopedia Americana: A Library of Universal Knowledge. Vol. 8. Encyclopedia Americana Corp. 1918. p. 621. Retrieved 2008-11-01.
  20. Sehgal, R.L. (1998) [1998]. shahjanabad+ built Slum Upgradation: Emerging Issue & Policy Implication's. Bookwell Publications. p. 97. ISBN 8185040184. Retrieved 2008-11-01. {{cite book}}: Check |url= value (help)
  21. Vale, Lawrence J. (1992). Architecture, power, and national identity. Yale University Press. pp. 88–100. ISBN 030004958. Retrieved 2008-11-01. {{cite book}}: Check |isbn= value: length (help)
  22. Dayal, Ravi (July 2002). "A Kayastha's View". Seminar (Web Edition) (515). Retrieved 2007-01-29.{{cite journal}}: CS1 maint: date and year (link)
  23. "Delhi: Radio Stations in Delhi, India". ASIAWAVES: Radio and TV Broadcasting in South and South-East Asia. Alan G. Davies. 15 November 2006. Retrieved 2007-01-07.
  24. Cricinfo staff. com/india/content/story/ 261615 .html "A Brief History: The Ranji Trophy". Cricinfo. The Wisden Group. Retrieved 2007-01-06. {{cite web}}: Check |url= value (help)
  25. ೨೬.೦ ೨೬.೧ "India to bid for 2014 Asian Games". South Asia. BBC. 29 March 2005. Retrieved 2006-12-21.
  26. stories/ 2007041 802062000. htm "New Delhi loses bid". The Hindu. 2007-04-18. Retrieved 2007-04-18. {{cite news}}: Check |url= value (help)
  27. "Delhi To Bid For 2020 Summer Games". gamesbids.com. Menscerto Inc. 2007-04-28. Retrieved 2007-08-05.
  28. "India agree grand prix". BBC Sport. Retrieved 2007-09-07.
  29. ಬೈಜಲ್‌ ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್‌;ಪ್ರಜಾವಾಣಿ ವಾರ್ತೆ;29 Dec, 2016
  30. ದೆಹಲಿಯ ಮೂರು ಮಹಾನಗರ ಪಾಲಿಕೆಗಳು ಬಿಜೆಪಿ ಮುಡಿಗೆ;26 Apr, 2017


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
This article contains Indic text. Without proper rendering support, you may see question marks or boxes, misplaced vowels or missing conjuncts instead of Indic text.
ಸರ್ಕಾರ
ಇತರೆ
  • ಲೋನ್ಲಿ ಪ್ಲಾನೆಟ್ ಗೈಡ್
  • ದೆಹಲಿ ಮೆಟ್ರೋ ರೈಲು ನಿಗಮ
"https://kn.wikipedia.org/w/index.php?title=ದೆಹಲಿ&oldid=1245137" ಇಂದ ಪಡೆಯಲ್ಪಟ್ಟಿದೆ