ಫರಿದಾಬಾದ್
Expression error: Unexpected < operator.
ಫರಿದಾಬಾದ್
Faridabad | |
---|---|
Population (2001) | |
• Total | ೧೦,೫೪,೯೮೧ |
ಫರಿದಾಬಾದ್ ನಗರವು ದೆಹಲಿಯ ದಕ್ಷಿಣಕ್ಕೆ ೨೫ ಕಿಲೋಮೀಟರುಗಳಷ್ಟು ದೂರದಲ್ಲಿ, ೨೮° ೨೫' ೧೬" ಉತ್ತರ ಹಾಗೂ ೭೭° ೧೮' ೨೮" ಪೂರ್ವದಲ್ಲಿ ನೆಲೆಗೊಂಡಿದೆ. ಇದು ತನ್ನ ಉತ್ತರದಲ್ಲಿ ದೆಹಲಿ ರಾಷ್ಟ್ರೀಯ ರಾಜಧಾನಿಯ ಭೂಪ್ರದೇಶದಿಂದ, ಪಶ್ಚಿಮದಲ್ಲಿ ಗುರ್‌ಗಾಂವ್ ಜಿಲ್ಲೆಯಿಂದ, ಮತ್ತು ತನ್ನ ಪೂರ್ವ ಹಾಗೂ ದಕ್ಷಿಣದಲ್ಲಿ ಉತ್ತರ ಪ್ರದೇಶ ರಾಜ್ಯದಿಂದ ಸುತ್ತುವರಿಯಲ್ಪಟ್ಟಿದೆ. ದೆಹಲಿ-ಮಥುರಾ ರಾಷ್ಟ್ರೀಯ ಹೆದ್ದಾರಿ-೨ (ಷೇರ್‌ಷಾಹ್ ಸೂರಿ ಮಾರ್ಗ) ಜಿಲ್ಲೆಯ ಮಧ್ಯಭಾಗದ ಮೂಲಕ ಹಾದುಹೋಗುತ್ತದೆ. ಉತ್ತರ ಕೇಂದ್ರೀಯ ರೇಲ್ವೆಯ ದೆಹಲಿ-ಮಥುರಾ ಜೋಡಿಪಥದ ಬ್ರಾಡ್-ಗೇಜ್ ಮಾರ್ಗದ ಮೇಲೆ ಈ ನಗರವು ಅನೇಕ ರೈಲು ನಿಲ್ದಾಣಗಳನ್ನು ಹೊಂದಿದೆ.
ಫರಿದಾಬಾದ್ ಈಗ ಹರಿಯಾಣಾದ ಅತ್ಯಂತ ಜನನಿಬಿಡ ನಗರವಾಗಿದ್ದು, ಹರಿಯಾಣಾ ರಾಜ್ಯದ ಸುಮಾರು ೬೦%ನಷ್ಟು ಆದಾಯವನ್ನು ಅದು ಉತ್ಪತ್ತಿ ಮಾಡುತ್ತದೆ. ಹರಿಯಾಣಾದಲ್ಲಿ ಸಂಗ್ರಹವಾಗುವ ಆದಾಯ ತೆರಿಗೆಯ ಪೈಕಿ ೫೦%ನಷ್ಟು ಭಾಗವು ಫರಿದಾಬಾದ್ ಮತ್ತು ಗುರ್‌ಗಾಂವ್‌ಗಳಿಂದ ಬರುತ್ತದೆ.[೧]
ಫರಿದಾಬಾದ್ ನಗರವು ಗೋರಂಟಿ ಉತ್ಪಾದನೆಗೆ ಪ್ರಸಿದ್ಧವಾಗಿದ್ದು, ಟ್ರಾಕ್ಟರುಗಳು, ಮೋಟಾರ್‌ಸೈಕಲ್ಲುಗಳು, ಸ್ವಿಚ್ ಗೇರುಗಳು, ರೆಫ್ರಿಜರೇಟರುಗಳು, ಬೂಟುಗಳು ಮತ್ತು ಟೈರುಗಳು ನಗರದ ಇತರ ಪ್ರಸಿದ್ಧ ಕೈಗಾರಿಕಾ ಉತ್ಪನ್ನಗಳಾಗಿವೆ. ನಾಗರಿಕ ಆಡಳಿತದ ಉದ್ದೇಶಗಳಿಗಾಗಿ, ಫರಿದಾಬಾದ್ ಜಿಲ್ಲೆಯನ್ನು ಎರಡು ಉಪ-ವಿಭಾಗಗಳಾಗಿ ವಿಭಜಿಸಲಾಗಿದೆ, ಅವೆಂದರೆ - ಫರಿದಾಬಾದ್ ಮತ್ತು ಬಲ್ಲಬ್‌ಗಢ. ಪ್ರತಿ ಉಪ-ವಿಭಾಗಕ್ಕೂ ಓರ್ವ ಉಪ-ವಿಭಾಗೀಯ ಅಧಿಕಾರಿಯ ನೇತೃತ್ವವಿರುತ್ತದೆ.
ಭೂಗೋಳ
[ಬದಲಾಯಿಸಿ]...28°26′N 77°19′E / 28.43°N 77.32°E[೨] ನಲ್ಲಿ ಫರಿದಾಬಾದ್ ನೆಲೆಗೊಂಡಿದೆ. ಇದು ೧೯೮ ಮೀಟರುಗಳಷ್ಟು (೬೪೯ ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.
ಈ ನಗರವು ಯಮುನಾ ನದಿಯ ಬಯಲು ಪ್ರದೇಶಗಳ ಮೇಲೆ ನೆಲೆಗೊಂಡಿದೆ. ಇದು ಪೂರ್ವಕ್ಕೆ ಯಮುನಾ ನದಿಯನ್ನೂ ಮತ್ತು ಪಶ್ಚಿಮ ಹಾಗೂ ನೈಋತ್ಯ ದಿಕ್ಕುಗಳೆಡೆಗೆ ಅರಾವಳಿ ಬೆಟ್ಟಗಳನ್ನೂ ಗಡಿಯಾಗಿ ಹೊಂದಿದೆ. ಇಂದು ಭೂಪ್ರದೇಶದ ಎಲ್ಲ ಭಾಗವೂ ವಸ್ತುತಃ ವಾಸಯೋಗ್ಯ ಗೃಹನಿರ್ಮಾಣದೊಂದಿಗೆ ಅಭಿವೃದ್ಧಿಗೊಂಡಿದೆ. ೯೦ರ ದಶಕದ ಮಧ್ಯಭಾಗದಲ್ಲಿ ನಗರದ ಜನಸಂಖ್ಯೆಯು ಏರಿಕೆಯನ್ನು ಕಂಡಿದ್ದೇ ಇದಕ್ಕೆ ಕಾರಣವೆನ್ನಬಹುದು.
ಭಾರತದ ಉಳಿದ ಭಾಗಗಳಲ್ಲಿರುವಂತೆಯೇ, ಫರಿದಾಬಾದ್ ಜನರು ತಮ್ಮ ಮೂಲಭೂತ ಅಗತ್ಯಗಳಿಗಾಗಿ ಅಂತರ್ಜಲವನ್ನು ಅವಲಂಬಿಸಿದ್ದು, ಇದು ಉತ್ತಮವಾದ ಮಳೆಮಾರುತದ ಋತುವಿನ ಕೊಡುಗೆಯಾಗಿದೆ.
ಮಾಹಿತಿ ತಂತ್ರಜ್ಞಾನ
[ಬದಲಾಯಿಸಿ]ಫರಿದಾಬಾದ್ ನಗರವು ರಾಷ್ಟ್ರೀಯ ರಾಜಧಾನಿ ನವದೆಹಲಿಯೊಂದಿಗೆ ಹೊಂದಿರುವ ಸಾಮೀಪ್ಯದಿಂದಾಗಿ, ವ್ಯವಹಾರವನ್ನು ನಡೆಸುವುದಕ್ಕೆ ಸಂಬಂಧಿಸಿದ ಒಂದು ಬೃಹತ್ ಅವಕಾಶದೊಂದಿಗೆ ಕುಶಲತೆ ಪಡೆದ ಹಾಗೂ ಅರ್ಹತೆ ಪಡೆದ ವೃತ್ತಿನಿಪುಣರಂಥ ಸಂಪನ್ಮೂಲಗಳ ಸ್ವರ್ಗವನ್ನೇ ಒದಗಿಸುವುದರೊಂದಿಗೆ, ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಗಳಿಗೆ ಸಂಬಂಧಿಸಿದ I.T. ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಕ್ರೀಡೆಗಳು
[ಬದಲಾಯಿಸಿ]ಕ್ರಿಕೆಟ್‌ಗೆ ಸಂಬಂಧಿಸಿದ ಸೌಕರ್ಯಗಳು ನಹಾರ್ ಸಿಂಗ್ ಕ್ರೀಡಾಂಗಣದಲ್ಲಿ ಲಭ್ಯವಿವೆ. ೧೯೮೧ರಲ್ಲಿ ನಿರ್ಮಾಣಗೊಂಡ ಈ ಕ್ರೀಡಾಂಗಣವು ಸುಮಾರು ೨೫,೦೦೦ ಜನರನ್ನು ಒಳಗೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲಾ ಸೌಕರ್ಯಗಳನ್ನು ಹೊಂದುವುದರ ಮೂಲಕ ಉತ್ತರ ಭಾರತದಲ್ಲಿನ ಅತ್ಯಂತ ಆಧುನಿಕ ಕ್ರೀಡಾಂಗಣಗಳ ಪೈಕಿ ಒಂದೆನಿಸಿದೆ. ೨೦೦೬ರ ಮಾರ್ಚ್ ೩೧ರಂದು ಭಾರತ ಹಾಗೂ ಇಂಗ್ಲಂಡ್ ನಡುವಣ ನಡೆದ ಪಂದ್ಯವು ಇಲ್ಲಿ ಆಡಲ್ಪಟ್ಟ ಕೊನೆಯ ODI ಪಂದ್ಯವಾಗಿತ್ತು. ಭಾರತವು ಇಲ್ಲಿ ಮೂರು ಪಂದ್ಯಗಳನ್ನಾಡಿದೆ.
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]೨೦೦೧ರ ಭಾರತ ಜನಗಣತಿಯ[೩] ವೇಳೆಗೆ ಇದ್ದಂತೆ, ಫರಿದಾಬಾದ್ ೧,೦೫೪,೯೮೧ನಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಈ ಜನಸಂಖ್ಯೆಯ ಪೈಕಿ ಪುರುಷರದು ೫೫%ನಷ್ಟು ಭಾಗವಾದರೆ, ಸ್ತ್ರೀಯರದು ೪೫%ನಷ್ಟು ಭಾಗವಾಗಿದೆ. ೮೯%ನಷ್ಟಿರುವ ಒಂದು ಸರಾಸರಿ ಸಾಕ್ಷರತೆ ಪ್ರಮಾಣವನ್ನು ಫರಿದಾಬಾದ್ ಹೊಂದಿದ್ದು, ಇದು ೫೯.೫%ನಷ್ಟಿರುವ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಮಟ್ಟದಲ್ಲಿದೆ: ಪುರುಷ ಸಾಕ್ಷರತೆಯು ೯೫%ನಷ್ಟಿದ್ದರೆ, ಸ್ತ್ರೀ ಸಾಕ್ಷರತೆಯು ೮೦%ನಷ್ಟಿದೆ. ಫರಿದಾಬಾದ್‌ನಲ್ಲಿ, ಜನಸಂಖ್ಯೆಯ ೧೧%ನಷ್ಟು ಭಾಗವು ೬ ವರ್ಷಗಳಷ್ಟು ವಯಸ್ಸಿಗಿಂತ ಕೆಳಗಿರುವವರದಾಗಿದೆ.
ನಗರದ ಉತ್ತರದ ಹಾಗೂ ಅತ್ಯಂತ ಹಳೆಯ ಭಾಗವು ಹಳೆಯ ಫರಿದಾಬಾದ್ ಎಂದೇ ಹೆಸರಾಗಿದ್ದು, ಶತಮಾನಗಳಿಂದಲೂ ಈ ಪ್ರದೇಶದಲ್ಲಿ ವಾಸಿಸುತ್ತಾ ಬಂದಿರಬಹುದಾದ ಕುಟುಂಬಗಳ ಜನರಿಗೆ ಅದು ನೆಲೆಯಾಗಿದೆ. ಇಲ್ಲಿನ ಜನರ ಪೂರ್ವಿಕರು ಬಹುತೇಕವಾಗಿ ಜಾಟರು ಮತ್ತು ಉತ್ತರ ಪ್ರದೇಶ ರಾಜ್ಯ ಹಾಗೂ ಹರಿಯಾಣಾದಲ್ಲಿನ ಹಳ್ಳಿಗಳಿಂದ ಬಂದಿರುವ ಜನರಾಗಿದ್ದಾರೆ.
ನಗರದ ಪಶ್ಚಿಮ ಭಾಗವನ್ನು ಹೊಸ ಕೈಗಾರಿಕಾ ಪಟ್ಟಣ (ನ್ಯೂ ಇಂಡಸ್ಟ್ರಿಯಲ್ ಟೌನ್) ಎಂದು ಕರೆಯಲಾಗುತ್ತದೆ (ಇದನ್ನು NIT ಎಂಬುದಾಗಿ ಸಂಕ್ಷೇಪಿಸಲಾಗುತ್ತದೆ). ಭಾರತದ ವಿಭಜನೆಯ ನಂತರ ಪಾಕಿಸ್ತಾನದಿಂದ ಬಂದ ಜನರು ಭಾರತದಲ್ಲಿ ಹೊಸ ಜಾಗದಲ್ಲಿ ನೆಲೆಗಾಣಲು ಪ್ರಯತ್ನಿಸುತ್ತಿದ್ದಾಗ ಅವರಿಗಾಗಿ ಇದನ್ನು ೧೯೪೭ರ ನಂತರ ಕಟ್ಟಲಾಯಿತು. ಈ ರೀತಿಯಾಗಿ ಇಲ್ಲಿನ ಬಹುಪಾಲು ಜನರು ತಮ್ಮ ಪೂರ್ವೇತಿಹಾಸವನ್ನು ವರ್ತಮಾನದ ಪಾಕಿಸ್ತಾನದ ಡೆರಾ ಇಸ್ಮಾಯಿಲ್ ಖಾನ್, ಡೆರಾ ಘಾಜಿ ಖಾನ್, ಬನ್ನು, ಮತ್ತು ಕೋಹಟ್ ಪ್ರಾಂತ್ಯಗಳೊಂದಿಗೆ ಹಂಚಿಕೊಳ್ಳುತ್ತಾರೆ. ನಗರದ ಕ್ಷಿಪ್ರ ಬೆಳವಣಿಗೆಯೂ ಸಹ ದೇಶದ ಇತರ ಭಾಗಗಳಿಂದ ವಲಸೆಗಾರರನ್ನು ನಗರಕ್ಕೆ ತಂದಿತು.ಚಾಲ್ತಿಯಲ್ಲಿರುವ ಮಾಹಿತಿಯ ಪ್ರಕಾರ, ಕೇವಲ ೩೦೦,೦೦೦ ಜನರಿಗಾಗಿ ಈ ನಗರವನ್ನು ಆರಂಭಿಕವಾಗಿ ಯೋಜಿಸಲಾಗಿತ್ತು, ಆದರೆ ಇಂದು[ಸೂಕ್ತ ಉಲ್ಲೇಖನ ಬೇಕು] ನಗರದ ಒಟ್ಟು ಜನಸಂಖ್ಯೆಯು ೨ ದಶಲಕ್ಷಕ್ಕೂ ಮೀರಿದೆ.
ಜಿಲ್ಲಾಡಳಿತ
[ಬದಲಾಯಿಸಿ]- ಜಿಲ್ಲಾಧಿಕಾರಿ (ಬ್ರಿಜೇಂದರ್ ಸಿಂಗ್).
- ಹಿರಿಯ ಆರಕ್ಷಕ ವರಿಷ್ಠಾಧಿಕಾರಿ (K. K. ರಾವ್).
- ಅರಣ್ಯಗಳ ಉಪ ಸಂರಕ್ಷಣಾಧಿಕಾರಿ.
- ಜಿಲ್ಲಾ & ಸೆಷನ್ಸ್ ನ್ಯಾಯಾಧೀಶರು (ಶ್ರೀಮತಿ. ಅನಿತಾ ಚೌಧರಿ)
- HUDA ಆಡಳಿತಾಧಿಕಾರಿ (ಶ್ರೀ ಅಭಯ್ ಸಿಂಗ್ ಯಾದವ್)
ಅರ್ಥ ವ್ಯವಸ್ಥೆ
[ಬದಲಾಯಿಸಿ]ಫರಿದಾಬಾದ್ ನಗರವು ಹರಿಯಾಣಾಕ್ಕೆ ಸಂಬಂಧಿಸಿದಂತೆ ಒಂದು ಬೃಹತ್ ಆರ್ಥಿಕ ಸಾಧನವಾಗಿದೆ. ಫರಿದಾಬಾದ್ ಮತ್ತು ಗುರ್‌ಗಾಂವ್‌ಗಳು ಹರಿಯಾಣಾ ಸರ್ಕಾರಕ್ಕೆ ೫೦%ಗೂ ಹೆಚ್ಚಿನ ಆದಾಯ ತೆರಿಗೆಯನ್ನು ಉತ್ಪತ್ತಿಮಾಡಿಕೊಡುತ್ತವೆ.[೪]
ಕೃಷಿ
[ಬದಲಾಯಿಸಿ]ಮುಂಚೆಯೆಲ್ಲಾ ಫರಿದಾಬಾದ್‌ನಲ್ಲಿ ಗೋಧಿಯನ್ನು ಬೆಳೆಯಲಾಗುತ್ತಿತ್ತು. ಆದರೆ ೯೦ರ ದಶಕದ ಆರಂಭದಲ್ಲಿ ಫರಿದಾಬಾದ್ ನಗರವು ಜನಸಂಖ್ಯೆಯಲ್ಲಿನ ಒಂದು ಉತ್ಕರ್ಷವನ್ನು ಕಂಡಿದ್ದರಿಂದ ಹರಿಯಾಣಾದ ಹಳ್ಳಿಗಳ ಕಡೆಗೆ ಕೃಷಿಯು ಸಾಗಿತು. ಹೆಚ್ಚೂಕಮ್ಮಿ ಎಲ್ಲಾ ವ್ಯಾವಸಾಯಿಕ ಜಮೀನನ್ನೂ ವಾಸಯೋಗ್ಯ ಗೃಹನಿರ್ಮಾಣವು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಆದಾಗ್ಯೂ, ಪರಂಪರೆಯ ಮೌಲ್ಯಕ್ಕೆ ಸಾಕ್ಷಿಯಾಗಿರುವ 'ಅನಾಜ್ ಮಂಡಿ'ಯು (ದವಸಧಾನ್ಯದ ಮಾರುಕಟ್ಟೆ) ಇನ್ನೂ ಹಳೆಯ ಫರಿದಾಬಾದ್‌ನಲ್ಲಿಯೇ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ.
ಕೇಂದ್ರ ಸರ್ಕಾರ ಕಚೇರಿಗಳು
[ಬದಲಾಯಿಸಿ]ಹಲವಾರು ಕೇಂದ್ರ ಸರ್ಕಾರಿ ಕಚೇರಿಗಳನ್ನು ಫರಿದಾಬಾದ್‌ಗೆ ವರ್ಗಾವಣೆಮಾಡುವ ಮೂಲಕ ದೆಹಲಿಯ ನಿಬಿಡತೆಯನ್ನು ನಿವಾರಿಸಲು ಕೇಂದ್ರ ಸರ್ಕಾರವು ಹಮ್ಮಿಕೊಂಡಿರುವ ಯೋಜನೆಗಳ ಪ್ರಯೋಜನವನ್ನು ಫರಿದಾಬಾದ್ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ವಿವಿಧ ಸಚಿವಖಾತೆಗಳ ಅನೇಕ ನಿರ್ದೇಶನಾಲಯಗಳು ಫರಿದಾಬಾದ್‌ನಲ್ಲಿ ತಮ್ಮ ಕೇಂದ್ರಕಚೇರಿಯನ್ನು ಹೊಂದಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಕೇಂದ್ರೀಯ ಜಲ ಆಯೋಗ, ಸಸ್ಯದ ಸೋಂಕುರೋಗವನ್ನು ತಡೆಯುವ ಇಲಾಖೆ, ಮತ್ತು ಕೇಂದ್ರೀಯ ಕೀಟನಾಶಕ ಪ್ರಯೋಗಾಲಯ. ಸ್ಫೋಟಕಗಳ ಇಲಾಖೆ, ಕಾರ್ಮಿಕ ಇಲಾಖೆ, ಇತ್ಯಾದಿಗಳಂಥ ಹರಿಯಾಣಾಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರ ಹಲವಾರು ಕಚೇರಿಗಳು ಇಲ್ಲಿ ನೆಲೆಗೊಂಡಿವೆ.
ತಯಾರಿಕಾ ವಲಯ
[ಬದಲಾಯಿಸಿ]ಫರಿದಾಬಾದ್ ನಗರವು ಹರಿಯಾಣಾದ ಕೈಗಾರಿಕಾ ವಲಯದ ಹೃದಯಭಾಗವಾಗಿದೆ. JCB, ಎಸ್ಕಾರ್ಟ್ಸ್, ನಾರ್ ಬ್ರೆಮ್ಸೆ, ACE, ABB ಇತ್ಯಾದಿಗಳಂಥ ನೂರಾರು ಬೃಹತ್ ಪ್ರಮಾಣದ ಕಂಪನಿಗಳಿಗೆ ಇದು ನೆಲೆಯಾಗಿದೆ.
ಸೇನೆ
[ಬದಲಾಯಿಸಿ]ಭಾರತೀಯ ವಾಯುಪಡೆಯು (IAF) ಫರಿದಾಬಾದ್‌ನಲ್ಲಿ ಒಂದು ಸೈನ್ಯ ವ್ಯವಸ್ಥಾಪನಾ ತಂತ್ರದ ನೆಲೆಯನ್ನು ಹೊಂದಿದೆ. ಸಂ.೫೬ರಲ್ಲಿರುವ ಏರ್ ಸ್ಟೋರೇಜ್ ಪಾರ್ಕ್ ಮಾತ್ರವಲ್ಲದೇ ವಾಯುಪಡೆಯ ಕಾವಲುಪಡೆ ತರಬೇತಿ ಘಟಕವು ಇಲ್ಲಿನ ಸ್ಥಾನಿಕ ಘಟಕವಾಗಿದೆ. IAF ನೆಲೆಯು ಸೈನ್ಯ ವ್ಯವಸ್ಥಾಪನಾ ತಂತ್ರದ ಶಾಖೆಯ ಓರ್ವ ಗ್ರೂಪ್ ಕ್ಯಾಪ್ಟನ್‌ನ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಹಿಂದೊಮ್ಮೆ, ಒಂದು SA-2 SAM ಸೈನಿಕ ದಳದ ಮುಖ್ಯವಿಭಾಗವೂ ಸಹ ಫರಿದಾಬಾದ್‌ನಲ್ಲಿ ನೆಲೆಗೊಂಡಿತ್ತು. ನಗರದಲ್ಲಿ ಯಾವುದೇ ಸೇನಾ ಸಂಘಟನೆಯು ಇರದಿದ್ದರೂ ಸಹ, ಇಲ್ಲಿ ಅನೇಕ ನಿವೃತ್ತ ಸೇನಾ ಅಧಿಕಾರಿಗಳು ನೆಲೆಗೊಂಡಿದ್ದಾರೆ.
ಸಂವಹನೆಗಳು
[ಬದಲಾಯಿಸಿ]ಸಂವಹನೆಗಳ ವಿನೂತನ ವಿಧಾನಗಳಿಂದ ಫರಿದಾಬಾದ್ ಉತ್ತಮವಾಗಿ ಸಂಪರ್ಕವನ್ನು ಪಡೆದುಕೊಂಡಿದ್ದು, ಅವುಗಳಲ್ಲಿ GSM, WLL, ಡಯಲ್‌ಅಪ್ ಅಂತರಜಾಲ ಸಂಪರ್ಕ, DSL ಅಂತರಜಾಲ ಸಂಪರ್ಕ, ಗುತ್ತಿಗೆ ಮಾರ್ಗ ಅಂತರಜಾಲ ಸಂಪರ್ಕಗಳು ಸೇರಿವೆ.
ಸರ್ಕಾರಿ ಕಾರ್ಯನಿರ್ವಹಣೆಯ ಸ್ಥಿರ ಮಾರ್ಗ/ನೆಲಸಂಪರ್ಕ ದೂರವಾಣಿ ಸಂಪರ್ಕಗಳು, ಖಾಸಗಿಯಾಗಿ ನಿರ್ವಹಿಸಲ್ಪಡುವ ಸ್ಥಿರ ಮಾರ್ಗದ ಫೋನುಗಳ ವಿಶ್ವದರ್ಜೆಯ ಜಾಲಬಂಧವು ಇಲ್ಲಿದೆ.
ವಿದ್ಯುನ್ಮಾನ ವಿಧಾನಗಳ ಸಂವಹನೆಯಷ್ಟೇ ಅಲ್ಲದೇ ನಗರವು ಉತ್ತಮವಾದ ಅಂಚೆ ಸೇವೆಗಳ ಸಂಪರ್ಕವನ್ನೂ ಹೊಂದಿದೆ. ಸರ್ಕಾರಿ ಸ್ವಾಮ್ಯದ ಭಾರತೀಯ ಅಂಚೆ ಸೇವೆ ಹಾಗೂ ಫಸ್ಟ್ ಫ್ಲೈಟ್, DHL, ಫೆಡೆಕ್ಸ್, DTDC, ಬ್ಲೂ ಡಾರ್ಟ್ ಇತ್ಯಾದಿಗಳಂಥ ಖಾಸಗಿ ಸ್ವಾಮ್ಯದ ಅಂಚೆ ಸೇವೆಗಳು ಇಲ್ಲಿ ಸುಲಭವಾಗಿ ಕೈಗೆಟುಕುವಂತಿವೆ.
ಸಾರಿಗೆ
[ಬದಲಾಯಿಸಿ]ರೈಲಿನ ಮೂಲಕ
[ಬದಲಾಯಿಸಿ]ಫರಿದಾಬಾದ್ ನಗರವು ನವದೆಹಲಿ- ಮುಂಬಯಿ ಮಾರ್ಗದ ಬ್ರಾಡ್ ಗೇಜ್ ಪಥದಲ್ಲಿ ಬರುತ್ತದೆ. ನವದೆಹಲಿ ಮತ್ತು ಹಜರತ್ ನಿಝಾಮುದ್ದೀನ್ ರೈಲು ನಿಲ್ದಾಣವು ಫರಿದಾಬಾದ್ ನಿಲ್ದಾಣದಿಂದ ಸುಮಾರು ೨೫ ಕಿ.ಮೀ.ಯಷ್ಟು ದೂರದಲ್ಲಿದೆ. ಮುಂಬಯಿ, ಚೆನ್ನೈ, ಹೈದರಾಬಾದ್‌ನಂಥ ದೊಡ್ಡ ನಗರಗಳಿಗೆ ಇಲ್ಲಿಂದ ಸುಲಭವಾಗಿ ಟ್ರೇನುಗಳು ಸಿಗುತ್ತವೆ. ನವದೆಹಲಿ ಮತ್ತು ಫರಿದಾಬಾದ್ ನಡುವಣ ಸ್ಥಳೀಯ ಟ್ರೇನುಗಳು ಓಡುತ್ತವೆ.
ನಗರದಲ್ಲಿ ಮೂರು ರೈಲು ನಿಲ್ದಾಣಗಳಿವೆ. ಅವುಗಳೆಂದರೆ: ಫರಿದಾಬಾದ್ (FDB), ನ್ಯೂ ಟೌನ್ ಫರಿದಾಬಾದ್ (FDN) ಮತ್ತು ಬಲ್ಲಬ್‌ಗಡ್ (BVH). ಹಿಂದೆ ಇದು ಕೇಂದ್ರೀಯ ರೇಲ್ವೆಯ ಕೊನೆಯ ನಿಲ್ದಾಣವಾಗಿತ್ತು, ಆದರೆ ಈಗ ಇದನ್ನು ಉತ್ತರ ಭಾಗದ ರೇಲ್ವೆಯು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ. ಶಿಕ್ಷಣ/ವೃತ್ತಿಗಳಿಗೆ ಸಂಬಂಧಿಸಿದಂತೆ ಸಾವಿರಾರು ಜನರು ದೆಹಲಿಗೆ ಮತ್ತು ದೆಹಲಿಯಿಂದ ಸ್ಥಳೀಯ ಟ್ರೇನುಗಳಲ್ಲಿ ಪ್ರತಿದಿನವೂ ಪ್ರಯಾಣ ಮಾಡುತ್ತಾರಾದ್ದರಿಂದ ರೇಲ್ವೆ ಇಲಾಖೆಗೆ ಇದೊಂದು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಆದಾಯವನ್ನು ಉತ್ಪತ್ತಿಮಾಡಿಕೊಡುವ ಮೂಲವಾಗಿದೆ.
ರಸ್ತೆ ಮಾರ್ಗವಾಗಿ
[ಬದಲಾಯಿಸಿ]ನಗರದ ಮೂಲಕ ರಾಷ್ಟ್ರೀಯ ಹೆದ್ದಾರಿ-2 (ದೆಹಲಿ-ಮಥುರಾ ರಸ್ತೆ) ಹಾದುಹೋಗುತ್ತದೆ, ಮತ್ತು ತನ್ಮೂಲಕ ಇದು ಸನಿಹದ ರಾಜ್ಯಗಳಿಗೆ ಉತ್ತಮವಾಗಿ ಸಂಪರ್ಕಿಸಲ್ಪಟ್ಟಿದೆ. ಹರಿಯಾಣಾಕ್ಕೆ ಸೇರಿದ ಹರಿಯಾಣಾ ರೋಡ್‌ವೇಸ್ ಹಾಗೂ ನೆರೆಹೊರೆಯ ರಾಜ್ಯಗಳಿಗೆ ಸೇರಿದ ದೆಹಲಿ ಸಾರಿಗೆ ನಿಗಮ, ಉತ್ತರ ಪ್ರದೇಶ ಸಾರಿಗೆ ಇಲಾಖೆ, ಮಧ್ಯ ಪ್ರದೇಶ ಸಾರಿಗೆ ಇಲಾಖೆ, ಇತ್ಯಾದಿಗಳಂಥ ಸಂಚಾರ ಮಾರ್ಗಗಳ ಸೇವೆಗಳು ಸುಲಭವಾಗಿ ಕೈಗೆಟುಕುವಂತಿವೆ. ದೆಹಲಿಯ ಸರ್ಕಾರದಿಂದ ಪ್ರಸ್ತಾವಿಸಲ್ಪಟ್ಟಿರುವಂತೆ ೨೦೧೨ರ ವೇಳೆಗೆ ನಗರವು ದೆಹಲಿ ಮೆಟ್ರೋ ರೈಲು ಸಾರಿಗೆಯ ವ್ಯಾಪ್ತಿಗೆ ಬರಲಿದೆ.
ವಾಯುಮಾರ್ಗವಾಗಿ
[ಬದಲಾಯಿಸಿ]ನವದೆಹಲಿಯಲ್ಲಿರುವ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಪಾಲಂ ಸ್ವದೇಶದ ವಿಮಾನ ನಿಲ್ದಾಣಗಳು ಫರಿದಾಬಾದ್‌ಗೆ ಸೇವೆಯನ್ನು ಒದಗಿಸುತ್ತವೆ.
ಶಿಕ್ಷಣ
[ಬದಲಾಯಿಸಿ]ಸರ್ಕಾರಿ ಅಧಿಕಾರಿಯ ಶಿಕ್ಷಣ ಸಂಸ್ಥೆಗಳು/ತರಬೇತಿ ಕೇಂದ್ರಗಳು
[ಬದಲಾಯಿಸಿ]ಸಿಮೆಂಟ್ ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ಹಣಕಾಸು ನಿರ್ವಹಣಾ ಸಂಸ್ಥೆ (M/o ಹಣಕಾಸು), ಕೇಂದ್ರೀಯ ಅಬಕಾರಿ, ಸುಂಕ & ಮಾದಕವಸ್ತುಗಳ ರಾಷ್ಟ್ರೀಯ ಅಕಾಡೆಮಿ, ವಿದ್ಯುತ್ ಎಂಜಿನಿಯರುಗಳ ತರಬೇತಿ ಸಂಸ್ಥೆ, ಕೇಂದ್ರೀಯ ರಸಗೊಬ್ಬರ ಗುಣಮಟ್ಟ ನಿಯಂತ್ರಣಾ & ತರಬೇತಿ ಸಂಸ್ಥೆ ಹೊಸಗಸುಬಿ & ತರವೇತಿಯ ಪ್ರಾದೇಶಿಕ ನಿರ್ದೇಶನಾಲಯ (RDAT), ನಿಸ್ತಂತು ತರಬೇತಿ ಕೇಂದ್ರ (ಸಂಪುಟದ ಆಡಳಿತ ಕಚೇರಿ), ಓರಿಯೆಂಟಲ್ ಇನ್ಷೂರೆನ್ಸ್ ಸಿಬ್ಬಂದಿ ತರಬೇತಿ ಕಾಲೇಜು
ಶಾಲೆಗಳು
[ಬದಲಾಯಿಸಿ]- ಏಪೀಜೇ ಪಬ್ಲಿಕ್ ಸ್ಕೂಲ್
- ಅರಾವಳಿ ಇಂಟರ್‌ನ್ಯಾಷನಲ್ ಸ್ಕೂಲ್
- ಅಶೋಕ್ ಮೆಮೋರಿಯಲ್ ಪಬ್ಲಿಕ್ ಸ್ಕೂಲ್
- ಕಾರ್ಮೆಲ್ ಕಾನ್ವೆಂಟ್ ಸ್ಕೂಲ್
- ಸೆಂಟ್ರಲ್ ಸ್ಕೂಲ್
- DAV ಪಬ್ಲಿಕ್ ಸ್ಕೂಲ್, ವಿಭಾಗ-೪೯
- DAV ಪಬ್ಲಿಕ್ ಸ್ಕೂಲ್, ವಿಭಾಗ-೩೭
- DAV ಪಬ್ಲಿಕ್ ಸ್ಕೂಲ್, ವಿಭಾಗ-೧೪
- ದೆಹಲಿ ಪಬ್ಲಿಕ್ ಸ್ಕೂಲ್
- ಡಿವೈನ್ ಪಬ್ಲಿಕ್ ಸ್ಕೂಲ್
- ಗೀತಾ ಬಾಲನಿಕೇತನ್ ಸೀನಿಯರ್ ಸೆಕ್ಷನ್ ಸ್ಕೂಲ್
- ಗೀತಾ ಕಾನ್ವೆಂಟ್ ಸ್ಕೂಲ್
- ಜಾನ್ F ಕೆನಡಿ ಪಬ್ಲಿಕ್ ಸ್ಕೂಲ್
- ಮಾಡರ್ನ್ ವಿದ್ಯಾ ನಿಕೇತನ್, ವಿಭಾಗ-೧೭
- ಮಾಡರ್ನ್ ವಿದ್ಯಾ ನಿಕೇತನ್, ಅರಾವಳಿ ಬೆಟ್ಟಗಳು
- ರೈಯಾನ್ ಇಂಟರ್‌ನ್ಯಾಷನಲ್ ಸ್ಕೂಲ್
- ರಾವಲ್ ಇಂಟರ್‌ನ್ಯಾಷನಲ್ ಸ್ಕೂಲ್
- SOS ಹರ್ಮನ್ ಗ್ಮೀನಿಯರ್ ಸ್ಕೂಲ್
- ಸೇಂಟ್ ಜೋಸೆಫ್ಸ್ ಕಾನ್ವೆಂಟ್ ಸ್ಕೂಲ್
- ಸೇಂಟ್ ಜಾನ್'ಸ್ ಸ್ಕೂಲ್
- ವಿದ್ಯಾ ಸಂಸ್ಕಾರ್ ಇಂಟರ್‌ನ್ಯಾಷನಲ್ ಸ್ಕೂಲ್
- ಮಾನವ್ ರಚನಾ ಇಂಟರ್‌ನ್ಯಾಷನಲ್ ಸ್ಕೂಲ್
- ಮಾಡರ್ನ್ ಸ್ಕೂಲ್
ಆಕರಗಳು
[ಬದಲಾಯಿಸಿ]- ↑ "The Tribune".
- ↑ ಫಾಲಿಂಗ್ ರೇನ್ ಜೀನೋಮಿಕ್ಸ್, ಇಂಕ್ - ಫರಿದಾಬಾದ್
- ↑ GRIndia
- ↑ ದಿ ಟ್ರಿಬ್ಯೂನ್, ಚಂಡೀಗಢ, ಭಾರತ - ದೆಹಲಿ ಮತ್ತು ನೆರೆಹೊರೆ
ಅಭಿಷೇಕ್ ಚೌಧರಿ - ಬಿಸಿನೆಸ್ ಮೆನ್ ಬಾರ್ನ್ ಇನ್ {1985}
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಫರಿದಾಬಾದ್ ಜಿಲ್ಲೆಯ ಅಧಿಕೃತ ವೆಬ್ಸೈಟ್
- ಫರಿದಾಬಾದ್ MCF ವೆಬ್ಸೈಟ್ Archived 2012-04-14 ವೇಬ್ಯಾಕ್ ಮೆಷಿನ್ ನಲ್ಲಿ.
- ಫರಿದಾಬಾದ್ ಪ್ರವಾಸೀ ಸಂಕೀರ್ಣಗಳು Archived 2009-10-17 ವೇಬ್ಯಾಕ್ ಮೆಷಿನ್ ನಲ್ಲಿ.
- ಸೂರಜ್ಕುಂಡ್ ಪ್ರವಾಸೀ ಸಂಕೀರ್ಣ Archived 2010-11-24 ವೇಬ್ಯಾಕ್ ಮೆಷಿನ್ ನಲ್ಲಿ.
- ಹರಿಯಾಣಾ ಅಧಿಕೃತ ವೆಬ್ಸೈಟ್
- NPTI ಫರಿದಾಬಾದ್ Archived 2009-04-26 ವೇಬ್ಯಾಕ್ ಮೆಷಿನ್ ನಲ್ಲಿ.
- ಫರಿದಾಬಾದ್ನ ಉಪಗ್ರಹ ನಕಾಶೆ
- Pages using the JsonConfig extension
- Pages using duplicate arguments in template calls
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Pages using gadget WikiMiniAtlas
- Articles with unsourced statements from May 2010
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಫರಿದಾಬಾದ್
- ಹರಿಯಾಣಾದಲ್ಲಿನ ನಗರಗಳು ಮತ್ತು ಪಟ್ಟಣಗಳು
- ಹರ್ಯಾಣಾದ ಜಿಲ್ಲೆಗಳು