ವಿಷಯಕ್ಕೆ ಹೋಗು

ಕಾರ್ಟ್ ರೇಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಟ್ ರೇಸಿಂಗ್ ಅಥವಾ ಕಾರ್ಟಿಂಗ್ ಮುಕ್ತ-ಚಕ್ರದ ವಾಹನ-ಕ್ರೀಡೆಯ ಒಂದು ಪ್ರಕಾರವಾಗಿದ್ದು, ಈ ಕ್ರೀಡೆಯಲ್ಲಿ ಚಿಕ್ಕದಾದ, ಮುಕ್ತವಾದ, ನಾಲ್ಕು-ಚಕ್ರಗಳುಳ್ಳ, ವಿನ್ಯಾಸದ ಆಧಾರದ ಮೇರೆಗೆ ಕಾರ್ಟ್ ಗಳು ಗೋ-ಕಾರ್ಟ್ ಗಳು , ಅಥವಾ ಗೇರ್ ಬಾಕ್ಸ್/ಷಿಫ್ಟರ್ ಕಾರ್ಟ್ ಗಳು ಎಂಬ ವಾಹನಗಳನ್ನು ಬಳಸಲಾಗುತ್ತದೆ. ಈ ಕ್ರೀಡೆಗಳನ್ನು ಕಡಿಮೆಗೊಳಿಸಿದ ವರ್ತುಲಗಳಲ್ಲಿ(ಕ್ರಮಿಸುವ ದೂರ ಕಡಿಮೆಯಿರುತ್ತದೆ) ಆಡಲಾಗುತ್ತದೆ. ಕಾರ್ಟಿಂಗ್ ಅನ್ನು ಸಾಮಾನ್ಯವಾಗಿ ಇದಕ್ಕಿಂತಲೂ ಶ್ರೇಷ್ಠವಾದ ಮತ್ತು ದುಬಾರಿಯಾದ ಮೋಟಾರ್ ಕ್ರೀಡೆಗಳನ್ನು ಆಡುವುದರ ಮುನ್ನ ಹತ್ತುವ ಮೊದಲ ಮೆಟ್ಟಿಲೆಂದು ಪರಿಗಣಿಸಲಾಗುತ್ತದೆ.

ಕಾರ್ಟ್ ಗಳು ವಿಭಿನ್ನ ವೇಗಗಳಲ್ಲಿ ಚಲಿಸುತ್ತವೆ ಹಾಗೂ ಕೆಲವು ಸೂಪರ್ ಕಾರ್ಟ್ ಗಳು) 160 miles per hour (260 km/h)ಕ್ಕೂ ಹೆಚ್ಚಿನ ವೇಗವನ್ನು ತಲುಪಬಲ್ಲವು,[] ಆದರೆ ಮೋಜು ಉದ್ಯಾನಗಳಲ್ಲಿ ಸಾರ್ವಜನಿಕರಿಗೆಂದೇ ಸೀಮಿತವಾದ ಗೋ-ಕಾರ್ಟ್ ಗಳನ್ನು 15 miles per hour (24 km/h)ಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸದಂತೆ ಸೀಮಿತಗೊಳಿಸಲಾಗಿರುತ್ತದೆ. ೧೨೫ cc ೨-ಸ್ಟ್ರೋಕ್ ಎಂಜಿನ್ ಹಾಗೂ ಚಾಲಕನನ್ನೂ ಒಳಗೊಂಡು ಒಟ್ಟು ೧೫೦ ಕಿಲೋಗ್ರಾಂ ತೂಗುವ ಕೆಎಫ್೧ ಕಾರ್ಟ್ ನ ಗರಿಷ್ಠ ವೇಗ 85 miles per hour (137 km/h). ೧೨೫ cc ಶಿಫ್ಟರ್ ಕಾರ್ಟ್ (೬ ಗೇರ್ ಗಳದು) ೦ ಯಿಂದ ೬೦ ಕಿಲೋಮೀಟರ್ ನ ವೇಗವನ್ನು ತಲುಪಲು ೩ ಸೆಕೆಂಡ್ ಗಿಂತಲೂ ಕೊಂಚ ಹೆಚ್ಚು ಸಮಯ ಬೇಕಾಗುತ್ತದೆ, ಇದು ಸುದೃರ್ಘವಾಗಿರುವ ಹಾದಿಗಳಲ್ಲಿ ಗರಿಷ್ಠ ವೇಗವಾದ115 miles per hour (185 km/h) ಅನ್ನು ತಲುಪುತ್ತದೆ.[]

ರೋಟಾಕ್ಸ್ ವಿಶ್ವ ಫೈನಲ್ ಕಾರ್ಟ್ ರೇಸಿಂಗ್

ಇತಿಹಾಸ

[ಬದಲಾಯಿಸಿ]
1963 ರಲ್ಲಿ ಪೂರ್ವ ಬರ್ಲಿನ್ ನ ಬೀದಿಗಳಲ್ಲಿ ಕಾರ್ಟ್ ರೇಸಿಂಗ್

ಆರ್ಟ್ ಇಂಗೆಲ್ಸ್ ರನ್ನು ಸಾಮಾನ್ಯವಾಗಿ ಕಾರ್ಟಿಂಗ್ನ ಪಿತಾಮಹ ಎಂದು ಕರೆಯುತ್ತಾರೆ. ಒಬ್ಬ ನುರಿತ ರೇಸ್ ಕಾರ್ ಚಾಲಕ ಮತ್ತು ರೇಸ್ ಕಾರ್ ನಿರ್ಮಾಣಕರ್ಮಿಯಾದ ಇವರು ಮೊದಲು ಕರ್ಟಿಸ್ ಕ್ರಾಫ್ಟ್ನ ಉದ್ಯೋಗಿಯಾಗಿದ್ದ, ೧೯೫೬ ರಲ್ಲಿ ತಮ್ಮ ಮೊದಲ ಕಾರ್ಟ್ ಅನ್ನು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಿರ್ಮಿಸಿದರು.[] ಕಾರ್ಟಿಂಗ್ ಕ್ಷಿಪ್ರಗತಿಯಲ್ಲಿ ಇತರ ದೇಶಗಳಿಗೂ ಹರಡಿತು,[] ಮತ್ತು ಈಗ ಅದಕ್ಕೆ ಯೂರೋಪ್ ನಲ್ಲಿ ವ್ಯಾಪಕವಾದ ಜನಪ್ರಿಯತೆ ಗಳಿಸಿದೆ.

ಕಾರ್ಟ್ ತಯಾರಿಸಿದ ಮೊಟ್ಟಲ ಮೊದಲ ಕಂಪನಿಯು ಅಮೆರಿಕದ್ದಾಗಿತ್ತು - ಗೋ ಕಾರ್ಟ್ ಮ್ಯಾನ್ಯುಫಾ್ಯಾಕ್ಷರಿಂಗ್ ಕಂಪನಿ (೧೯೫೮).

ಮೆಕ್ಕಲಕ್ ಕಾರ್ಟ್ ಗಳಿಗೆ ಎಂಜಿನ್ ಗಳನ್ನು ತಯಾರಿಸಿದ ಮೊದಲ ಕಂಪನಿಯಾಗಿದ್ದು, ಇದು ಈ ಉತ್ಪಾದನೆಯನ್ನು ೧೯೫೯ ರಲ್ಲಿ ಆರಂಭಿಸಿತು. ಅದರ ಮೊದಲ ಎಂಜಿನ್ ಆದ ಮೆಕ್ಕಲಕ್ MC-೧೦,[] ಚೈನ್ ಸಾ(ಸರಪಳಿಯಾಕಾರದ ಅರ) ೨-ಸ್ಟ್ರೋಕ್ ಎಂಜಿನ್ ನ ಅಳವಡಿಕೆಯಾಗಿತ್ತು.[] ನಂತರ, ೧೯೬೦ ರ ದಶಕದಲ್ಲಿ, ಮೋಟರ್ ಸೈಕಲ್ ಎಂಜಿನ್ ಗಳನ್ನು ಸಹ ಕಾರ್ಟ್ ಗಳಿಗೆ ಅಳವಡಿಸಿಕೊಳ್ಳಲಾಯಿತು; ತದನಂತರ ಕಾರ್ಟ್ ಗೆಂದೇ ವಿಶೇಷವಾಗಿ ಎಂಜಿನ್ ಗಳನ್ನು ತಯಾರಿಸುವ ಸಂಸ್ಥೆಗಳು/ಕಂಪನಿಗಳು, ವಿಶೇಷತಃ ಇಟಲಿಯಲ್ಲಿನ (IAME)ಯಂತಹ ಸಂಸ್ಥಗೆಳು ಈ ಕ್ರೀಡೆಗೆಂದೇ ಎಂಜಿನ್ ಗಳನ್ನು ಉತ್ಪಾದಿಸತೊಡಗಿದವು.

ಭಾಗಗಳು

[ಬದಲಾಯಿಸಿ]

ಷಾಸಿಸ್ (ವಾಹನಗಳ ಆಧಾರದ ಚೌಕಟ್ಟು)

[ಬದಲಾಯಿಸಿ]

ಷಾಸಿಸ್ ಗಳು ಕಬ್ಬಿಣದ ಕೊಳವೆಗಳಿಂದ ಮಾಡಲ್ಪಡುತ್ತವೆ.[][] ಈ ಕಾರ್ಟ್ ಗಳಲ್ಲಿ ಸಸ್ಪೆನ್ಷನ್ ಇರುವುದಿಲ್ಲವಾದ್ದರಿಂದ ಷಾಸಿಸ್ ಗಳು ಸಸ್ಪೆನ್ಷನ್ ನಂತೆ ಕೆಲಸ ಮಾಡಲು ನಮನೀಯವಾಗಿರಬೇಕು ಮತ್ತು ತಿರುವುಗಳಲ್ಲಿ ಮುರಿಯದೆ, ಸೀಳದೆ, ತಾಳಿಕೊಳ್ಳುವಷ್ಟು ಗಟ್ಟಿಯಾಗಿಯೂ ಇರಬೇಕು. ಕಾರ್ಟ್ ಷಾಸಿಸ್ ಗಳನ್ನು ಯುಎಸ್ಎಯಲ್ಲಿ 'ಮುಕ್ತ', 'ಪಂಜರಾವೃತ', 'ನೇರ' ಅಥವಾ 'ಬದಿಗೊತ್ತಿದ' ಎಂದು ವರ್ಗೀಕರಿಸಲಾಗುತ್ತದೆ. ಎಲ್ಲಾ CIK-FIA ಅನುಮತಿಸಿದ ಷಾಸಿಸ್ ಗಳು 'ನೇರ' ಮತ್ತು 'ಮುಕ್ತ' ವರ್ಗದವಾಗಿವೆ.

  • ಮುಕ್ತ ಕಾರ್ಟ್ ಗಳಿಗೆ ಯಾವುದೇ ಸುರುಳಿಪಂಜರವಿರುವುದಿಲ್ಲ.
  • ಪಂಜರವಿರುವ ಕಾರ್ಟ್ ಗಳಲ್ಲಿ ಚಾಲಕನ ಸುತ್ತಲೂ ಒಂದು ಸುರುಳಿ ಪಂಜರವಿರುತ್ತದೆ, ಇವುಗಳನ್ನು ಸಾಮಾನ್ಯವಾಗಿ ಧೂಳುಜಾಡುಗಳಲ್ಲಿ ಬಳಸಲಾಗುತ್ತದೆ.
  • ನೇರವಾದ ಷಾಸಿಸ್ ನಲ್ಲಿ ಚಾಲಕನು ಮಧ್ಯದಲ್ಲಿ ಕುಳಿತುಕೊಳ್ಳುತ್ತಾನೆ. ನೇರವಾದ ಷಾಸಿಸ್ ಗಳನ್ನು ಸ್ಪ್ರಿಂಟ್ ರೇಸಿಂಗ್ ನಲ್ಲಿ ಬಳಸುತ್ತಾರೆ.
  • ಬದಿಗೊತ್ತಿದ ಷಾಸಿಸ್ (ಒಂದು ಪಕ್ಕಕ್ಕೆ ಕೇಂದ್ರಿತವಾದಂತಹುದು) ಚಾಲಕನು ಎಡಭಾಗದಲ್ಲಿ ಕುಳಿತುಕೊಳ್ಳುತ್ತಾನೆ. ಬದಿಗೊತ್ತಿದ ಷಾಸಿಸ್ ಗಳನ್ನು ಎಡ-ತಿರುವು ಮಾತ್ರ ಎಂದಿರುವ ವೇಗಪಥ ರೇಸಿಂಗ್ ಗಳಲ್ಲಿ ಬಳಸಲಾಗುತ್ತದೆ.

ಷಾಸಿಸ್ ನ ಗಡುಸುತನವು ವಿವಿಧ ಪರಿಸ್ಥಿತಿಗಳಲ್ಲಿ ವಿವಿಧ ರೀತಿಯಾಗಿ ವಾಹನವನ್ನು ನಿಭಾಯಿಸಲು ಅನುಕೂಲಕರವಾಗುತ್ತದೆ. ಲಾಕ್ಷಣಿಕವಾಗಿ, ಒಣಹವೆಯ ಪರಿಸ್ಥಿತಿಯಲ್ಲಿ ಹೆಚ್ಚು ಗಡುಸಾದ ಷಾಸಿಸ್ ಸೂಕ್ತವಾಗುತ್ತದೆ, ತೇವಮಯ ಅಥವಾ ಹಿಡಿತ ಕಡಿಮೆಯಿರುವ ಪರಿಸ್ಥಿತಿಗಳಲ್ಲಿ ಹೆಚ್ಚು ನಮನೀಯತೆ ಇರುವ ಷಾಸಿಸ್ ಹೆಚ್ಚು ಸೂಕ್ತವೆನಿಸಬಹುದು. ಶ್ರೇಷ್ಠ ಷಾಸಿಸ್ ಗಳು ಹಿಂದೆ, ಮುಂದೆ ಮತ್ತು ಪಕ್ಕಗಳಲ್ಲಿ ಕಂಬಿಗಳನ್ನು ಹಾಕಲು ಅನುಕೂಲಕರವಾಗಿರುತ್ತವೆ; ರೇಸ್ ನ ನಿಯಮಗಳಿಗೆ ತಕ್ಕಂತೆ ಈ ಕಂಬಿಗಳನ್ನು ಹಾಕುವುದು, ತೆಗೆಯುವುದು ಮಾಡಬಹುದಾಗಿರುತ್ತದೆ.

ಹಿಂದಿನ ಆಕ್ಸಲ್ ಮೇಲೆ ಕೂಡಿಸಿದ ಡಿಸ್ಕ್ ಬ್ರೇಕ್ ಬ್ರೇಕ್ ಹಾಕುವುದಕ್ಕೆಂದೇ ಅಳವಡಿಸಲಾದ ಅಂಶವಾಗಿದೆ. ಮುಂದಿನ ಡಿಸ್ಕ್ ಬ್ರೇಕ್ ಗಳು ಹೆಚ್ಚು ಜನಪ್ರಿಯವಾಗುತ್ತಿವೆಯಾದರೂ ಕೆಲವು ವರ್ಗಗಳು ಅವುಗಳನ್ನು ಬಳಸಲು ಅನುಮತಿ ನೀಡುವುದಿಲ್ಲ.

ವೃತ್ತಿಪರವಾಗಿ ರೇಸಿಂಗ್ ಗೆ ಬಳಸಲ್ಪಡುವ ಕಾರ್ಟ್ ಗಳು ಸಾಮಾನ್ಯವಾಗಿ ಚಾಲಕನ ತೂಕದ ಹೊರತಾಗಿ 165 to 175 lb (75 to 79 kg) ತೂಗುತ್ತವೆ. ಅವಾಂತಿ, ಟೋನಿ ಕಾರ್ಟ್, ಟ್ರಲ್ಲಿ, ಬಿರೆಲ್, CRG, ಗಿಲ್ಲಾರ್ಡ್, ಇಂಟ್ರೆಪಿಡ್, ಕಾಸ್ಮಿಕ್, ಝನಾರ್ಡಿ ಅಥವಾ FA ಕಾರ್ಟ್ ಹಲವಾರು ಯೂರೋಪಿಯನ್ ರೇಸ್ ಗುಣಮಟ್ಟದ ಷಾಸಿಸ್ ತಯಾರಿಸವ ಕಂಪನಿಗಳ ಪೈಕಿ ಪ್ರಸಿದ್ಧವಾದ ಕಂಪನಿಗಳಾಗಿವೆ. ಎಮ್ಮಿಕ್ ಮತ್ತು ಮಾರ್ಗೇ ಕಾರ್ಟ್ ಷಾಸಿಸ್ ಅನ್ನು ತಯಾರಿಸುವ ಅಮೆರಿಕದ ಕಂಪನಿಗಳಾಗಿವೆ.

ಎಂಜಿನ್ ಗಳು

[ಬದಲಾಯಿಸಿ]

ಮೋಜಿನ ಉದ್ಯಾನಗಳಲ್ಲಿನ ಗೋ-ಕಾರ್ಟ್ ಗಳನ್ನು ೪-ಸ್ಟ್ರೋಕ್ ಎಂಜಿನ್ ಗಳು ಅಥವಾ ವಿದ್ಯುತ್ ಮೋಟಾರ್ ಗಳಿಂದ ಚಾಲನೆಗೊಳಿಸಬಹುದು; ರೇಸಿಂಗ್ ಕಾರ್ಟ್ ಗಳು ಸಣ್ಣ ೨-ಸ್ಟ್ರೋಕ್ ಅಥವಾ ೪-ಸ್ಟ್ರೋಕ್ ಎಂಜಿನ್ ಗಳನ್ನು ಬಳಸುತ್ತವೆ.

  • ೪-ಸ್ಟ್ರೋಕ್ ಎಂಜಿನ್ ಗಳು ಸಾಮಾನ್ಯವಾದ ವಾಯು-ಶೀತಲಿತ ಕಾರ್ಖಾನಿಯ ಮೂಲದ ಎಂಜಿನ್ ಗಳಾಗಬಹುದು, ಕೆಲವೊಮ್ಮೆ ಅದರಲ್ಲಿ ಸಣ್ಣ ಮಾರ್ಪಾಡುಗಳೂ ಇರಬಹುದು; ಇವುಗಳ ಸಾಮರ್ಥ್ಯವು ೫ ರಿಂದ ೨೦ hp ಗಳವರೆಗೆ ಇರುತ್ತದೆ. ಬ್ರಿಗ್ಸ್ & ಸ್ಟ್ರಾಟ್ಟನ್, ಟೆಕುಮ್ಸೆಹ್, ಕೋಹ್ಲರ್, ರಾಬಿನ್, ಮತ್ತು ಹೋಂಡಾ ಈ ವಿಧದ ಎಂಜಿನ್ ಗಳನ್ನು ತಯಾರಿಸುತ್ತವೆ. ಈ ಎಂಜಿನ್ ಗಳು ರೇಸಿಂಗ್ ಮತ್ತು ಮೋಜು ಕಾರ್ಟ್ ಅನ್ವಯಗಳಿಗೆ ಸಾಕಾಗುತ್ತವೆ. ಇದಕ್ಕಿಂತಲೂ ಶಕ್ತಿಯುತವಾದ ನಾಲ್ಕು-ಸ್ಟ್ರೋಕ್ ಎಂಜಿನ್ ಗಳು ಲಭ್ಯವಿದ್ದು, ಇವನ್ನು ಯಮಹಾ, TKM, ಬೈಲ್ಯಾಂಡ್ ಅಥವಾ ಐಕ್ಸ್ ರೋ(ವ್ಯಾಂಕೆಲ್ ಎಂಜಿನ್) ಕಂಪನಿಗಳು ತಯಾರಿಸುತ್ತವೆ. ಇವು ೧೫ hp ಯಿಂದto ೪೮ hp ಸಾಮರ್ಥ್ಯವನ್ನು ಹೊಂದಿರುತ್ತವೆ. ಇವುಗಳ ಪರಿಭ್ರಮಣದ ವೇಗವು ೧೧,೦೦೦ rpm ಇರುತ್ತದೆ ಹಾಗೂ ಇವುಗಳನ್ನು ಕಾರ್ಟಿಂಗ್ ಗೆಂದೇ ವಿಶೇಷವಾಗಿ ತಯಾರಿಸಲಾಗುತ್ತದೆ. ಅವುಗಳನ್ನು ಎರಡು-ಸ್ಟ್ರೋಕ್ಸ್ ಗಳಂತೆ ಕೆಲವು ರಾಷ್ಟ್ರೀಯ ಚಾಂಪಿಯನ್ ಷಿಪ್ ಗಳಲ್ಲಿ ಬಳಸಲಾಗುತ್ತದೆ.
  • ೨-ಸ್ಟ್ರೋಕ್ ಕಾರ್ಟ್ ಎಂಜಿನ್ ಗಳನ್ನು ಈ ಕ್ರೀಡೆಗೇ ಅರ್ಪಿತವಾದ ತಯಾರಕರು ಅಭಿವೃದ್ಧಿಗೊಳಿಸಿ, ನಿರ್ಮಿಸುತ್ತಾರೆ. WTP, ಕಮರ್, IAME (ಪರೀಲಾ, ಕೋಮೆಟ್), TM, ವೋರ್ಟೆಕ್ಸ್, ಟೈಟನ್, REFO, TKM, PRD, ಯಮಹಾ ಮತ್ತು ರೋಟಾಕ್ಸ್ ಈ ವಿಧದ ಎಂಜಿನ್ ಗಳನ್ನು ತಯಾರಿಸುತ್ತಾರೆ. ಇವು ಏಕ-ಸಿಲಿಂಡರ್ ೬೦ cc ವರ್ಗಕ್ಕೆ ೮ hp ಯಿಂದ ಹಿಡಿದು (ವೋರ್ಟೆಕ್ಸ್ ನ ಮಿನಿರಾಕ್) ಎರಡು ೨೫೦ cc ಸಿಲಿಂಡರ್ ವರ್ಗದ ೯೦ hp ಯವರೆಗೆ ಅಭಿವೃದ್ಧಿಗೊಳಿಸಬಲ್ಲವು.[] ಇಂದು ವಿಶ್ವದಲ್ಲಿ ಅತಿ ಜನಪ್ರಿಯವಾಗಿ ಬಳಸಲ್ಪಡುತ್ತಿರುವ ವರ್ಗಗಳೆಂದರೆ ಟಚ್ ಎಂಡ್ ಗೋ (TAG) ೧೨೫ ccಯುನಿಟ್ ಬಳಸುತ್ತಿರುವಂತಹವು. ಇತ್ತೀಚಿನ ೧೨೫ cc ಕೆಎಫ್೧ ಎಂಜಿನ್ ಗಳು ವಿದ್ಯುನ್ಮಾನದ ಸಹಾಯದಿಂದ ೧೬,೦೦೦ rpm ಗೆ ಸೀಮಿತಗೊಳಿಸಲಾಗುತ್ತಿವೆ.[] ಇಂದಿನ ದಿನಗಳಲ್ಲಿ ಬಹುತೇಕ ಎಂಜಿನ್ ಗಳು ನೀರಿನಿಂದ ತಂಪಾಗಿಸಲ್ಪಡುತ್ತವೆ. ಆದರೆ, ಮುಂಚಿನ ದಿನಗಳಲ್ಲಿ ಗಾಳಿಯಿಂದ ತಂಪಾಗುವ ಎಂಜಿನ್ ಗಳು ಈ ಕ್ರೀಡೆಯಲ್ಲಿ ಪ್ರಧಾನವಾಗಿ ಕಂಡುಬರುತ್ತಿದ್ದವು

ಪ್ರಸರಣ

[ಬದಲಾಯಿಸಿ]

ಕಾರ್ಟ್ ಗಳಿಗೆ ದಿಫೆರೆನ್ಷಿಯಲ್ (ಎರಡು ಆಕ್ಸಲ್ ಗಳನ್ನು ಏಕಕಾಲದಲ್ಲಿ ವಿಭಿನ್ನ ವೇಗಗಳಲ್ಲಿ ತಿರುಗಿಸಲು ಸಹಾಯಕವಾಗುವ, ಹಿಂದಿನ ಆಕ್ಸಲ್ ನ ಮೇಲ್ಭಾಗದಲ್ಲಿ ಅಳವಡಿಸುವ ಗೇರ್; ಇದು ತಿರುವುಗಳಲ್ಲಿ ಹೆಚ್ಚು ಸಹಾಯಕವಾದುದು) ಇರುವುದಿಲ್ಲ.[][೧೦] ತತ್ಕಾರಣ ಹಿಂದಿನ ಟೈರ್ ತಿರುವುಗಳಲ್ಲಿ ಜಾರುತ್ತಾ ಸಾಗುವುದು ಅನಿವಾರ್ಯ; ಇದಕ್ಕೆ ಅನುವಾಗುವಂತೆ ಷಾಸಿಸ್ ಅನ್ನು ವಿನ್ಯಾಸಗೊಳಿಸಲಾಗುತ್ತದೆ - ವಾಹನವು ತಿರುವಿನಲ್ಲಿ ತಿರುಗುವಾಗ ಹಿಂದಿನ ಒಳಭಾಗದ ಟೈರ್ ಕೊಂಚ ಮೇಲಕ್ಕೆ ಎತ್ತಿಕೊಳ್ಳುತ್ತದೆ ಹೀಗಾಗಿ ಟೈರ್ ಕೊಂಚ ಹಿಡಿತವನ್ನು ಕಳೆದುಕೊಳ್ಳುತ್ತದೆ ಹಾಗೂ ನೆಲದಿಂದ ಮೇಲಕ್ಕೆ ಸಂಪೂರ್ಣವಾಗಿ ಎತ್ತಲ್ಪಡುತ್ತದೆ ಅಥವಾ ಜಾರುತ್ತಾ ಸಾಗುತ್ತದೆ.

ಚಲನೆಗೆ ಅವಶ್ಯವಾದ ಶಕ್ತಿಯು ಎಂಜಿನ್ ನಿಂದ ಹಿಂದಿನ ಆಕ್ಸಲ್ ಗೆ ಒಂದು ಸರಪಣಿಯ ಮೂಲಕ ಪ್ರಸರಿತವಾಗುತ್ತದೆ. ಎಂಜಿನ್ ಮತ್ತು ಆಕ್ಸೆಲ್ ನ ಸ್ಪ್ರಾಕೆಟ್ ಗಳು ಬೇಕಾದಾಗ ತೆಗೆಯಬಲ್ಲವಾಗಿವೆ; ಎಂಜಿನ್ ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬೇಕಾದರೆ ಜಾಡಿನ ರೂಪಕ್ಕೆ ತಕ್ಕಂತೆ ಅವುಗಳ ಅನುಪಾತವನ್ನು ಅಳವಡಿಸಬೇಕಾಗುತ್ತದೆ.

ಮೊದಲಿನ ದಿನಗಳಲ್ಲಿ ಕಾರ್ಟ್ ಗಳು ನೇರ ಚಲನೆಯವು ಮಾತ್ರ ಆಗಿದ್ದವು, ಆದರೆ ಆ ವಿಧಾನದಲ್ಲಿನ ಅನಾನುಕೂಲತೆಗಳು ವಿಕೇಂದ್ರಿತ ಕ್ಲಚ್ ಗಳನ್ನು ಕ್ಲಬ್ ಮಟ್ಟದ ವರ್ಗಗಳಲ್ಲಿ ಬಳಸಲು ಪ್ರೇರೇಪಣೆ ನೀಡಿದವು. ಒಣ ವಿಕೇಂದ್ರಿತ ಕ್ಲಚ್ ಗಳನ್ನು ಈಗ ಹಲವಾರು ವರ್ಗಗಳಲ್ಲಿ ಬಳಸಲಾಗುತ್ತಿದೆ (ಉದಾಹರಣೆಗೆ ರೋಟಾಕ್ಸ್ ಮ್ಯಾಕ್ಸ್) ಹಾಗೂ ಜನವರಿ ೨೦೦೭ ರಿಂದ ಶ್ರೇಷ್ಠ ಅಂತರರಾಷ್ಟ್ರೀಯ ವರ್ಗಗಳು ೧೨೫ c.c. ಕ್ಲಚ್ ಸಹಿತ ಎಂಜಿನ್ ಗಳನ್ನು ಬಳಸತೊಡಗಿದಂದಿನಿಂದಲೂ ಇವು ಕಡ್ಡಾಯವೆನಿಸುವ ಮಟ್ಟಕ್ಕೆ ಬಳಕೆಯಲ್ಲಿವೆ.

ಟೈರ್ ಗಳು

[ಬದಲಾಯಿಸಿ]

ಚಕ್ರಗಳು ಮತ್ತು ಟೈರ್ ಗಳು ಸಾಮಾನ್ಯ ಕಾರ್ ನಲ್ಲಿ ಬಳಸುವ ಚಕ್ರಗಳು ಮತ್ತು ಟೈರ್ ಗಳಿಗಿಂತ ಚಿಕ್ಕದಾಗಿರುತ್ತವೆ. ರಿಮ್ ಗಳನ್ನು ಮೆಗ್ನೀಷಿಯಮ್ ನ ಮಿಶ್ರಲೋಹದಿಂದ ಅಥವಾ ಅಲ್ಯೂಮಿನಿಯಂನಿಂದ ಮಾಡಲ್ಪಡುತ್ತವೆ. ಟೈರ್ ಗಳು ಷಾಸಿಸ್, ಎಂಜಿನ್ ಮತ್ತು ಮೋಟಾರ್ ವ್ಯವಸ್ಥೆಗಳ ಗುಣಗಳ ಆಧಾರದ ಮೇರೆಗೆ ತಿರುವುಗಳಲ್ಲಿ ೨ G (೨೦ ಮೀ/ಸೆಕೆಂಡ್²) ಗಿಂತಲೂ ಮಿಗಿಲಾದ ತಿರುವಿನ ಒತ್ತಡಗಳನ್ನು ಬೆಂಬಲಿಸಬಲ್ಲದು/ತಡೆಯಬಲ್ಲದು.

ಇತರ ವಾಹನ ಕ್ರೀಡೆಗಳಂತೆಯೇ, ಕಾರ್ಟ್ ಟೈರ್ ಗಳಲ್ಲೂ ಜಾಡಿನ ಸ್ಥಿತಿಗಳಿಗೆ ಅನುಗುಣವಾಗುವಂತಹ ವಿವಿಧ ರೀತಿಯ ಕಾರ್ಟ್ ಟೈರ್ ಗಳಿವೆ:

  • ಸ್ಲಿಕ್ ಗಳು, ಒಣಹವೆ ಇರುವ ಜಾಗಗಳಿಗೆ. ಅಂತರರಾಷ್ಟ್ರೀಯ ಮಟ್ಟದ ರೇಸಿಂಗ್ (ಓಟದ ಸ್ಪರ್ಧೆ)ನಲ್ಲಿ ಈ ಟೈರ್ ಗಳು ಮೋಟಾರ್ ಕ್ರೀಡೆ ಕಂಡ ಅತ್ಯಂತ ಮೃದು ಮತ್ತು ಅತ್ಯಾಧುನಿಕವಾದ ಟೈರ್ ಗಳಾಗಿವೆ. ಬ್ರಿಡ್ಜ್ ಸ್ಟೋನ್, ಡನ್ ಲಪ್ ಅಥವಾ ಮ್ಯಾಕ್ಸಿಸ್ನಂತಹ ಕೆಲವು ಟೈರ್ ಉತ್ಪಾದನಕಾರರು ಕಾರ್ಟ್ ಗಳಿಗೆಂದೇ ಟೈರ್ ಗಳನ್ನು ತಯಾರಿಸುತ್ತಾರೆ. ಅಲ್ಲದೆ MG, MOJO, ಮತ್ತು ವೆಗಾದಂತಹ ವಿಶೇಷ ಕಾರ್ಟ್ ಟೈರ್ ತಯಾರಕರೂ ಇದ್ದಾರೆ. ಸ್ಲಿಕ್ ಟೈರ್ ಗಳು ವಿವಿಧ ಹಾಗೂ ಅನೇಕ ಸಂಯುಕ್ತತೆಗಳಲ್ಲಿ ಲಭ್ಯವಾಗಿವೆ; ಬಹಳ ಮೃದುವಾದ (ಗರಿಷ್ಠ ಹಿಡಿತವಿರುವ)ಟೈರ್ ನಿಂದ ಬಹಳ ಗಡುಸಾದ (ಮೋಜಿಗೆ ಮತ್ತು ಬಾಡಿಗೆಗೆ ಕೊಡುವ ಕಾರ್ಟ್ ಗಳಿಗೆ ತೊಡಿಸುವಂತಹುದು; ಕಡಿಮೆ ಹಿಡಿತವಾದರೂ ಬಾಳಿಕೆ ಬಹಳಕಾಲ)ಟೈರ್ ಗಳವರೆಗೆ ದೊರೆಯುತ್ತವೆ.
  • ಮಳೆ ಟೈರ್ ಗಳು, ಅಥವಾ "ವೆಟ್ಸ್", ತೇವದ ವಾತಾವರಣಗಳಿಗೆ. ಇವುಗಳಲ್ಲಿ ಕೊರೆದ ಗೆರೆಗಳು (ಗ್ರೂವ್ ಗಳು) ಇದ್ದು, ಮೃದುವಾದ ಸಂಯುಕ್ತತೆಯುಳ್ಳವಾಗಿ ತಯಾರಿಸಲಾಗುತ್ತವೆ; ಇವು ಸ್ಲಿಕ್ ಟೈರ್ ಗಳಿಗಿಂತಲೂ ಅಗಲದಲ್ಲಿ ಕಿರಿದಾಗಿರುತ್ತವೆ. ಮಳೆ ಟೈರ್ ಗಳನ್ನು ಕೆಲವು ರೇಸಿಂಗ್ ವರ್ಗಗಳಲ್ಲಿ ಬಳಸಲು ಅನುಮತಿ ಇರುವುದಿಲ್ಲ.
  • ಚೂಪುಮೊಳೆಯ ಮೊನೆಗಳುಳ್ಳ ಟೈರ್ ಗಳಂತಹ ವಿಶೇಷ ಟೈರ್ ಗಳು ಹಿಮಪಾತವಿರುವ ಪರಿಸ್ಥಿತಿಗಳಲ್ಲಿ ಬಳಸಲ್ಪಡುತ್ತವೆ; "ಕಟ್ಸ್" ನಂತಹ ವಿಶೇಷ ಟೈರ್ ಗಳು ಧೂಳು/ಜೀಡಿಮಣ್ಣಿನ ವೇಗಜಾಡುಗಳಲ್ಲಿ ಹೆಚ್ಚಿನ ಹಿಡಿತ ಹೊಂದುವ ಸಲುವಾಗಿ ಬಳಸಲ್ಪಡುತ್ತವೆ. ಕಟ್ಸ್ ಲೇತ್ ನಲ್ಲಿ ಮಾರ್ಪಡಿಸಲ್ಪಟ್ಟ ಸ್ಲಿಕ್ ಗಳೇ ಆಗಿದ್ದು, ಚಲನೆಯನ್ನು ಹೆಚ್ಚು ಸಮರ್ಪಕವಾಗಿಸಿಕೊಳ್ಳಲು ಈ ಟೈರ್ ಗಳನ್ನು ಬಳಸಲಾಗುತ್ತದೆ.

ಮಾಹಿತಿ ಹೊಂದುವಿಕೆ

[ಬದಲಾಯಿಸಿ]

ಇತರ ಮೋಟಾರ್ ಕ್ರೀಡೆಗಳಲ್ಲಿರುವಂತೆಯೇ, ಕಾರ್ಟ್ ರೇಸಿಂಗ್ ನಲ್ಲೂ ಹಲವಾರು ಮಾಹಿತಿ ಸಂಚಯನ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ವ್ಯವಸ್ಥೆಗಳು ಚಾಲಕನು ಸ್ಟೀರಿಂಗ್ ಚಕ್ರದ ಮೇಲೆ ಅಳವಡಿಸಿದ ಒಂದು ಪ್ರದರ್ಶನದೆರೆಯಲ್ಲಿ ನಿಮಿಷಕ್ಕೆ ಸಂಭವಿಸುವ ಆವರ್ತನ (RPM), ಪ್ರತಿ ಸುತ್ತು ಬರಲು ಹಿಡಿಯುವ ಸಮಯ (ಅದರಲ್ಲೂ ಪ್ರತಿ ವಿಭಾಗಗಳನ್ನು ಕ್ರಮಿಸಲು ಹಿಡಿದ ಸಮಯ), ಸುತ್ತುಗಳ ಸಂಖ್ಯೆ, ಅತ್ಯುತ್ತಮ ಸುತ್ತು, ತಂಪಾಗಿಸುವ ವ್ಯವಸ್ಥೆಯ ತಾಪಮಾನ, ಹಾಗೂ ಕೆಲವೊಮ್ಮೆ ವೇಗ ಅಥವಾ ಶಿಫ್ಟರ್ ಕಾರ್ಟ್ ಗಳಲ್ಲಿ ಗೇರ್ ಗಳನ್ನೂ ಸಹ ವೀಕ್ಷಿಸಿ ನಿಯಂತ್ರಿಸಬಹುದು.

ಅವುಗಳಲ್ಲಿನ ಕೆಲವು ವ್ಯವಸ್ಥೆಗಳಲ್ಲಿ ಸುತ್ತುಗಳ ಮಾಹಿತಿಗಳನ್ನು ಸೆನ್ಸರ್ ಗಳ ಸಹಾಯದಿಂದ ದಾಖಲಿಸಬಹುದಾಗಿದ್ದು, ಇಡೀ ಅವಧಿಯ ಓಟವನ್ನು ಮತ್ತೆ ನೋಡಬಹುದಾಗಿರುತ್ತದಲ್ಲದೆ ತಮ್ಮ ಮಾಹಿತಿ ವಿಶ್ಲೇಷಣಾ ಸಾಫ್ಟ್ ವೇರ್ ಹೊಂದಿರುವ ವೈಯಕ್ತಿಕ ಕಂಪ್ಯೂಟರ್ ಗಳಿಗೆ ಡೌನ್ ಲೋಡ್ ಸಹ ಮಾಡಿಕೊಳ್ಳಬಹುದು. ಆಧುನಿಕ ಉತ್ತಮಗೊಳಿಸಿದ ವ್ಯವಸ್ಥೆಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳಿಗೆ ಅವಕಾಶವಿದ್ದು, ಪಾರ್ಶ್ವದ ಮತ್ತು ನೇರದಾರಿಯಲ್ಲಿನ ವೇಗವರ್ಧನೆ (ಅಥವಾ G-ರಭಸ), ವೇಗನಿಯಂತ್ರಕದ ಸ್ಥಾನ, ಸ್ಟೀರಿಂಗ್ ಚಕ್ರದ ಸ್ಥಾನ, ಬ್ರೇಕ್ ನ ಒತ್ತಡ, ಇತ್ಯಾದಿಗಳನ್ನು ತಿಳಿದುಕೊಳ್ಳಬಹುದಾಗಿದೆ.

ರೇಸಿಂಗ್

[ಬದಲಾಯಿಸಿ]
ಬ್ರೆಝಿಲ್ ನ ಗ್ರಾಂಜಾ ವಿಯಾನಾದಲ್ಲಿ ಸ್ಪ್ರಿಂಟ್ ರೇಸ್

ಕಾರ್ಟ್ ರೇಸಿಂಗ್ ಮೋಟಾರ್ ಕ್ರೀಡೆಯಲ್ಲೇ ಅತಿ ಕಡಿಮೆ ಖರ್ಚಿನಲ್ಲಿ ನಡೆಸಬಹುದಾದ ಕ್ರೀಡೆಯೆಂದು ಅಂಗೀಕೃತವಾಗಿದೆ. ಬಿಡುವಿನ ವೇಳೆಯಲ್ಲಿನ ಚಟುವಟಿಕೆಯಾಗಿ ಇದನ್ನು ಯಾರು ಬೇಕಾದರೂ ಆಡಬಹುದು ಮತ್ತು ಮೋಟಾರ್ ಕ್ರೀಡೆಯಾಗಿ ಇದನ್ನು FIA ನಿಯಂತ್ರಿಸುತ್ತದೆ(CIK ಎಂಬ ಹೆಸರಿನಲ್ಲಿ); ೮ ವರ್ಷದ ಮೇಲ್ಪಟ್ಟ ಯಾರಿಗೆ ಬೇಕಾದರೂ ಈ ಕ್ರೀಡೆಯನ್ನು ಆಡಲು ಈ ಸಂಸ್ಥೆಯು ಪರವಾನಗಿ ನೀಡುತ್ತದೆ.

ಯುಎಸ್ಎಯಲ್ಲಿ FIA ಸಂಸ್ಥೆಯ ಭಾಗವಹಿಸುವಿಕೆಯು ಹೆಚ್ಚೇನಿಲ್ಲ; ಬದಲಿಗೆ, ಹಲವಾರು ಸಂಸ್ಥೆಗಳು ರೇಸಿಂಗ್ ಅನ್ನು ನಿಯಂತ್ರಿಸುತ್ತವೆ; Iಕೆಎಫ್ (ಇಂಟರ್ನ್ಯಾಷನಲ್ ಕಾರ್ಟ್ ಫೆಡರೇಷನ್), WKA (ವರ್ಲ್ಡ್ ಕಾರ್ಟಿಂಗ್ ಅಸೋಸಿಯೇಷನ್), KART (ಕಾರ್ಟರ್ಸ್ ಆಫ್ ಅಮೆರಿಕ ರೇಸಿಂಗ್ ಟ್ರಯಾಡ್).

ಯುಕೆಯಲ್ಲಿ MSA (ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್) ಕಾರ್ಟಿಂಗ್್ ಅನ್ನು ನಿಯಂತ್ರಿಸುತ್ತದೆ. NatSKA (ನ್ಯಾಷನಲ್ ಸ್ಕೂಲ್ಸ್ ಕಾರ್ಟಿಂಗ್್ ಅಸೋಸಿಯೇಷನ್)ದಂತಹ ಕೆಲವು ಸಂಘಗಳು MSA ಅಧೀನದಲ್ಲಿ ರಾಷ್ಟ್ರಾದ್ಯಂತ ರೇಸಿಂಗ್ ಭೇಟಿಗಳನ್ನು ಹಮ್ಮಿಕೊಳ್ಳುತ್ತವೆ.

ಆಸ್ಟ್ರೇಲಿಯಾದಲ್ಲಿ ಕಾರ್ಟ್ ರೇಸಿಂಗ್ ಅನ್ನು ಆಸ್ಟ್ರೇಲಿಯನ್ ಕಾರ್ಟಿಂಗ್ ಅಸೋಸಿಯೇಷನ್ ನ ಆಡಳಿತದಲ್ಲಿ ನಡೆಸಲಾಗುತ್ತದೆ; ಇದನ್ನು FIA ಮತ್ತು CAMS ಗಳ ಪರವಾಗಿ ಈ ಸಂಸ್ಥೆಯು ಹಮ್ಮಿಕೊಳ್ಳುತ್ತದೆ. ಪ್ರತಿ ವರ್ಷವೂ ರೇಸ್ ಸ್ಪರ್ಧೆಗಳು ಮತ್ತು ಚಾಲಕರು ಅನುಸರಿಸಬೇಕಾದ ವಿವಿಧ ನಿಯಮಗಳು ಮತ್ತು ಕಟ್ಟಳೆಗಳನ್ನು ವಿವರಿಸುವ ಒಂದು ಕೈಪಿಡಿಯನ್ನೂ ಹೊರತರಲಾಗುತ್ತಿದೆ.

ಹಲವಾರು ವಿಧದ ಕಾರ್ಟ್ ಜಾಡುಗಳು ಕ್ರೀಡಾಭ್ಯಾಸಕ್ಕೆ ಅನುಮತಿ ನೀಡುತ್ತವೆ, ಆದರೆ ಕೇವಲಸ್ವೀಕೃತವಾದ ಜಾಡುಗಳು ಮಾತ್ರ ಯೂರೋಪ್ ನಲ್ಲಿ ಅಧಿಕೃತ ರೇಸ್ ಗಳನ್ನು ಏರ್ಪಡಿಸಬಹುದು (ನೋಡಿಕಾರ್ಟ್ ಜಾಡುಗಳು).

ರೇಸಿಂಗ್ ತರಗತಿಗಳು ೭ ಅಥವಾ ೮ ನೆಯ ವಯಸ್ಸಿನವರಿಗೆ ಆರಂಭವಾಗುತ್ತದೆ(ಯುಎಸ್ ನಲ್ಲಿ "ಕಿಡ್ಸ್ ಕಾರ್ಟ್ಸ್" ನೊಡನೆ ೫ ನೆಯ ವಯಸ್ಸಿನಲ್ಲೇ ಆರಂಭವಾಗುತ್ತದೆ) ಹಾಗೂ ಸಾಮಾನ್ಯವಾಗಿ ಸೇರಿದಂದಿನಿಂದ ೩-ವರ್ಷಗಳ ವಯಸ್ಸಿನ ಗುಂಪುಗಳಾಗಿ ಅಥವಾ ತೂಕಾಧಾರಿತ ವಿಭಾಗಗಳಾಗಿ ವಿಂಗಡಿತವಾಗಿ ಕಲಿಕೆಯನ್ನು ನೀಡಲಾಗುತ್ತದೆ; ಇದು ಅವರು "ಸೀನಿಯರ್" ಸ್ಥಿತಿಯನ್ನು, ಎಂದರೆ ೧೫ ಅಥವಾ ೧೬ ನೆಯ ವಯಸ್ಸನ್ನು(ಇದು ಅವರು ಆಡುವ ಸರಣಿಯ ಮೇಲೆ ಆಧಾರಿತವಾಗಿರುತ್ತದೆ) ತಲುಪುವವರೆಗೆ ನಡೆಯುತ್ತದೆ.

ರೇಸಿಂಗ್ ವಿಧಾನಗಳು

[ಬದಲಾಯಿಸಿ]

ರೇಸ್ ನ ವಿಧಿವಿಧಾನಗಳು ಈ ಕೆಳಗಿನ ಲಕ್ಷಣಗಳಲ್ಲಿ ಒಂದಕ್ಕೆ ಅನುಗುಣವಾಗಿರುತ್ತದೆ:

ಸ್ಪ್ರಿಂಟ್

[ಬದಲಾಯಿಸಿ]

ಸ್ಪ್ರಿಂಟ್ ರೇಸಿಂಗ್ ಈ ಕ್ರೀಡೆಗೇ ಮೀಸಲಾದ ಕಾರ್ಟ್ ಜಾಡುಗಳಲ್ಲಿ ನಡೆಯುತ್ತದೆ, ಆ ಜಾಡುಗಳು ಚಿಕ್ಕ ರಸ್ತೆಗಳ ಮಾರ್ಗದಂತೆಯೇ ಇದ್ದು ಎಡ ಮತ್ತು ಬಲ ತಿರುವುಗಳಿರುತ್ತವೆ. ಜಾಡುಗಳು ೧/೪ ಮೈಲಿ (೪೦೦ ಮೀಟರ್ಗಳು)ಯ ಅಳತೆಯಿಂದ ಆರಂಭವಾಗಿ ೧ ಮೈಲಿ (೧,೬೦೦ ಮೀಟರ್ಗಳು) ಹೆಚ್ಚು ಉದ್ದವಿರುತ್ತವೆ.

ಸ್ಪ್ರಿಂಟ್ ಕ್ರಮವು ಅಲ್ಪಾವಧಿಯ ರೇಸ್ ಗಳ ಸರಣಿಗಳನ್ನು ಹೊಂದಿದ್ದು, ಸಾಮಾನ್ಯವಾಗಿ ಕಡಿಮೆ ಸಂಖ್ಯೆಯ ಸುತ್ತುಗಳನ್ನು ಹೊಂದಿರುತ್ತದೆ; ಇಲ್ಲಿ ಗೆದ್ದವರು ಫೈನಲ್ ಗೆ ತಲುಪುತ್ತಾರೆ. ಈ ಕ್ರೀಡೆಯ ಒಟ್ಟಾರೆ ವಿಜೇತರನ್ನು ಹಲವಾರು ವಿಧದ ಸ್ಕೋರಿಂಗ್ ಗಣನಾಕ್ರಮಗಳನ್ನು ಅಳವಡಿಸಿ ನಿರ್ಧರಿಸಲಾಗುತ್ತದೆ. ಈ ರೇಸ್ ಗಳ ಅವಧಿ ಸಾಮಾನ್ಯವಾಗಿ ೧೫ ನಿಮಿಷಗಳನ್ನು ಮೀರುವುದಿಲ್ಲ. ಇಲ್ಲಿ ವೇಗ ಮತ್ತು ಯಶಸ್ವಿಯಾಗಿ ಮುಂದಕ್ಕೆ ಹೋಗುವುದು ಬಹಳ ಮುಖ್ಯವಾದ ಅಂಶಗಳು. ಈ ಕ್ರೀಡೆಯಲ್ಲಿ ಮೂರು ಅರ್ಹತೆ ಪಡೆಯುವ ಸಲುವಾಗಿ ಆಡುವ ಹೀಟ್ ರೇಸ್ ಗಳು ಮತ್ತು ಟ್ರೋಫಿ ಸ್ಥಾನಗಳನ್ನು ನಿರ್ಧರಿಸುವ ಫೈನಲ್ ರೇಸ್ ಒಂದು ಇರುವುದು ನಡೆದುಬಂದಿರುವ ಕ್ರಮ.

ಕಾರ್ಟಿಂಗ್್ ವಿಶ್ವ ಚಾಂಪಿಯನ್ ಷಿಪ್ ಒಳಗೊಂಡಂತೆ ಎಪ್ಐಎ ಚಾಂಪಿಯನ್ ಷಿಪ್ ಗಳು ಈ ಕ್ರಮದಲ್ಲೇ ಜರುಗುತ್ತವೆ.

ತಾಳಿಕೆ

[ಬದಲಾಯಿಸಿ]
ಯುಎಸ್ಎಯ ಡೇಟೋನಾದಲ್ಲಿ ಲೇಡೌನ್ ಎಂಡ್ಯೂರಾಗಳ ಪಡೆ

ತಾಳಿಕೆಯ ರೇಸ್ ಗಳು ವಿಸ್ತರಿತ ಅವಧಿಯವರೆಗೆ ನಡೆಯುತ್ತವೆ; ಇವು ೩೦ ನಿಮಿಷದಿಂದ ೨೪ ಗಂಟೆಗಳವರೆಗೆ ಅಥವಾ ಇನ್ನೂ ಹೆಚ್ಚಿನ ಅವಧಿಯವರೆಗೆ ನಡೆಯುವಂತಹವಾಗಿದ್ದು, ಇಲ್ಲಿ ಒಬ್ಬ ಹಾಗೂ ಒಬ್ಬನಿಗಿಂತಲೂ ಹೆಚ್ಚು ಚಾಲಕರನ್ನು ಬಳಸಿಕೊಳ್ಳಲು ಅನುಮತಿಯಿದೆ. ಇಲ್ಲಿ ನಿರಂತರತೆ, ನಂದಲರ್ಹತೆ ಮತ್ತು ರೇಸ್ ನ ತಂತ್ರಗಳು ಸಂಪೂರ್ಣವೇಗಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತವೆ.

ಯುಎಸ್ಎಯಲ್ಲಿ "ಎಂಡ್ಯೂರೋ" ಎಂದು ಕರೆಯಲ್ಪಡುವ ಬಹುತೇಕ ಡಬ್ಲ್ಯೂಕೆಎ & Iಕೆಎಫ್ ಮಂಜೂರಾದ ಸ್ಪರ್ಧೆಗಳ ಅವಧಿ ೩೦ ನಿಮಿಷಗಳು (ಸ್ಪ್ರಿಂಟ್ ಎಂಡ್ಯೂರೋ) ಅಥವಾ ೪೫ ನಿಮಿಷಗಳು (ಲೇಡೌನ್ ಎಂಡ್ಯೂರೋ) ಮತ್ತು ಈ ರೇಸ್ ಗಳು ಪಿಟ್ ಸ್ಟಾಪ್ ಎಂಬ ವಿರಾಮವಿಲ್ಲದೆ ಒಂದೇಬಾರಿಗೆ ಮುಗಿಸುವಂತಹ ರೇಸ್ ಗಳಾಗಿವೆ. ಎಂಡ್ಯೂರೋ ಸ್ಪರ್ಧೆಗಳನ್ನು ಪೂರ್ಣಪ್ರಮಾಣದ ರಸ್ತೆ ರೇಸಿಂಗ್ ಜಾಡುಗಳಲ್ಲಿ ಏರ್ಪಡಿಸಲಾಗುತ್ತದೆ; ಇವುಗಳು ೧.೫ ರಿಂದ ೪ ಮೈಲಿಗಳಷ್ಟು ಉದ್ದ ಇರುತ್ತವೆ.

ಪ್ರಸಿದ್ಧವಾದ ೨೪ ಅವರ್ಸ್ ಆಫ್ ಲೆ ಮಾನ್ಸ್ ರೇಸ್ ವಾಹನಗಳಿಗೆ ಇದ್ದಂತೆಯೇ ಕಾರ್ಟ್ ಗಳಿಗೂ ೨೪ ಗಂಟೆಗಳ ರೇಸಿಂಗ್ ಸ್ಪರ್ಧೆಯಿದ್ದು, ಇದ್ಉ ಫ್ರ್ಯಾನ್ಸ್ ನ ಲೆ ಮಾನ್ಸ್ ನಲ್ಲಿರುವ ಕಾರ್ಟ್ ಸರ್ಕ್ಯೂಟ್ ಅಲೇಯ್ನ್ ಪ್ರಾಸ್ಟ್ ನಲ್ಲಿ ಏರ್ಪಡಿಸಲಾಗುತ್ತದೆ.[೧೧] ಈ ರೇಸ್ ೧೯೮೬ ರಿಂದಳು ನಡೆಯುತ್ತದೆ ಹಾಗೂ ಅದರ ವಿಜೇತರ ಪೈಕಿ ನಾಲ್ಕು ಬಾರಿ ಚ್ಯಾಂಪ್ ಕಾರ್ ಚಾಂಪಿಯನ್ ಆದ ಸೆಬಾಸ್ಟಿಯನ್ ಬೌರ್ಡಾಯಿಸ್ (೯೯೬ ರಲ್ಲಿ) ಸಹ ಇದ್ದಾರೆ.

ವೇಗಪಥ

[ಬದಲಾಯಿಸಿ]

ವೇಗಪಥದ ರೇಸಿಂಗ್ ಟಾರ್ ರಸ್ತೆ, ಅಥವಾ ಮಣ್ಣಿನ ಅಂಡಾಕಾರದ ಜಾಡುಗಳಲ್ಲಿ ನಡೆಯುತ್ತದೆ; ಈ ಜಾಡುಗಳ ಉದ್ದ ಸುಮಾರು ೧/೬ ಮೈಲಿಯಿಂದ ೧/೪ ಮೈಲಿಗಳಷ್ಟು ಇರುತ್ತದೆ. ಜಾಡುಗಳು ಪ್ರಧಾನವಾಗಿ ಎರಡು ನೇರಪಥಗಳು ಮತ್ತು ನಾಲ್ಕು ಎಡತಿರುವುಗಳನ್ನು ಹೊಂದಿರುತ್ತವೆ; ಒಂದು ಆಕಾರಕ್ಕೆ ಅನುಗುಣವಾಗಿರುವ ಜಾಡುಗಳು ವಿರಳ ಹಾಗೂ ಹಲವಾರು ಬಾರಿ ಅವುಗಳು ಮೊಟ್ಟೆಯ ಅಥವಾ ಮೂರುಮೂಲೆಯ ಅಂಡಾಕಾರದ ಆಕಾರಗಳಲ್ಲಿರುತ್ತವೆ.

'ಬದಿಗೊತ್ತಿದ' ಕಾರ್ಟ್ ಷಾಸಿಸ್ ಗಳನ್ನು ಕರಾರುವಾಕ್ಕಾದ ಚಾಲನೆಗೆ ಮತ್ತು ಎಡ-ತಿರುವು ಮಾತ್ರ ಎಂಬ ನಿಯಮವಿರುವ ರೇಸಿಂಗ್ ಸ್ಪರ್ಧೆಗಳಲ್ಲಿ ಸರಿದೂಗಿಸಲೆಂದೇ ಅಭಿವೃದ್ಧಿಗೊಳಿಸಲಾಗಿದೆ. ಈ ಎಡ-ತಿರುವು ಮಾತ್ರ ಎಂಬ ನಿಯಮವಿರುವ ಸ್ಪರ್ಧೆಗಳು ಮೊಟ್ಟೆಯ ಅಥವಾ ಮೂರುಮೂಲೆಯ ಅಂಡಾಕಾರದ ಜಾಡುಗಳಲ್ಲಿ ನಡೆಯುತ್ತವೆ.

ವೇಗಪಥದ ಕಾರ್ಟ್ ರೇಸ್ ಗಳು ಟ್ರೋಫಿ ಡ್ಯಾಷ್ ಗಳಿಗೆ ನಾಲ್ಕು ಸುತ್ತುಗಳಷ್ಟು ಹಾಗೂ ಪ್ರಮುಖ ಸ್ಪರ್ಧೆಗೆ ೨೦ ಸುತ್ತುಗಳಷ್ಟು ದೀರ್ಫವಾಗಿರುತ್ತವೆ.

ಧೂಳಿನ ವೇಗಪಥದ ಕಾರ್ಟಿಂಗ್್ ನಲ್ಲಿ ಬಳಸುವ ಎರಡು ಪ್ರಮುಖ ರೇಸಿಂಗ್ ವಿಧಾನಗಳೆಂದರೆ ಹೀಟ್ ರೇಸ್ ಗಳು ಮತ್ತು ಸಮಯ-ಲೆಕ್ಕಹಾಕಲ್ಪಟ್ಟ ಸುತ್ತುಗಳ ಮೇಲೆ ಅರ್ಹತಾನಿರ್ಧಾರ:

  • ಇಂಟರ್ನ್ಯಾಷನಲ್ ಕಾರ್ಟ್ ಫೆಡರೇಷನ್ (Iಕೆಎಫ್ Archived 2011-07-07 ವೇಬ್ಯಾಕ್ ಮೆಷಿನ್ ನಲ್ಲಿ.) ಎರಡು ೧೦ ಸುತ್ತುಗಳ ಹೀಟ್ (ಅರ್ಹತೆ ಪಡೆಯುವ ರೇಸ್) ಮತ್ತು ೨೦ ಸುತ್ತುಗಳ ಫೈನಲ್ ಅನ್ನು ನಡೆಸುತ್ತದೆ. ಎರಡೂ ಹೀಟ್ ರೇಸ್ ಗಳಲ್ಲಿನ ಅಂತಿಮ ಸ್ಥಾನಗಳನ್ನು ಗಣನೆಗೆ ತೆಗೆದುಕೊಂಡು ಪ್ರಧಾನ ರೇಸ್ ನಲ್ಲಿ ಯಾವ ಆರಂಭಿಕ ಸ್ಥಾನವನ್ನು ನೀಡಬೇಕೆಂಬುದನ್ನು ಲೆಕ್ಕ ಹಾಕಲಾಗುತ್ತದೆ.
  • ದ ವರ್ಲ್ಡ್ ಕಾರ್ಟಿಂಗ್್ ಅಸೋಸಿಯೇಷನ್ (WKA) ಅವಧಿಯಾಧಾರಿತ ಅರ್ಹತೆಯನ್ನು ಬಳಸುತ್ತದೆ. ಟ್ರ್ಯಾನ್ಸ್ ಪಾಂಡರ್ಸ್ ಎಂಬ ಮಾಪಕಗಳನ್ನು ಅಳವಡಿಸಿರುವಂತಹ ಕಾರ್ಟ್ ಗಳನ್ನು ೫ ರ ಅಥವಾ ಅದಕ್ಕಿಂತಲೂ ಕಡಿಮೆ ಸಂಖ್ಯೆಯ ಗುಂಪುಗಳಾಗಿ ವಿಂಗಡಿಸಿ ಗರಿಷ್ಠ ವೇಗದ ಫೇರಿಯ ಕಾಲವನ್ನು ಸಾಧಿಸಲು ಯತ್ನಿಸಲಾಗುತ್ತದೆ. ಯಾರು ಎಷ್ಟು ವೇಗದಲ್ಲಿ ಈ ಸುತ್ತುಗಳನ್ನು ಪೂರೈಸುವರೋ, ಅದಕ್ಕನುಗುಣವಾಗಿ ೨೦ ಸುತ್ತುಗಳ ರೇಸ್ ನಲ್ಲಿನ ಅವರ ಸ್ಥಾನವು ನಿರ್ಧಾರವಾಗುತ್ತದೆ.
  • ದ ಅಮೆರಿಕನ್ ಕಾರ್ಟ್ ರೇಸಿಂಗ್ ಅಸೋಸಿಯೇಷನ್(AKRA Archived 2012-11-24 ವೇಬ್ಯಾಕ್ ಮೆಷಿನ್ ನಲ್ಲಿ.) ತಂಡ ಟ್ರ್ಯಾನ್ಸ್ ಪಾಂಡರ್ ಅರ್ಹತಾ ಅಂಶಗಳನ್ನು ೨೦ ಸುತ್ತುಗಳ ಸ್ಪರ್ಧೆಯಲ್ಲಿ ಭಾಗವಹಿಸುವವರ ಆರಂಭಿಕ ಸ್ಥಾನಗಳನ್ನು ನಿರ್ಧರಿಸಲು ಮಾಡಬೇಕಾದ ಲೆಕ್ಕಾಚಾರಕ್ಕೆ ಬಳಸಿಕೊಳ್ಳುತ್ತದೆ.

ರೇಸಿಂಗ್ ವರ್ಗಗಳು

[ಬದಲಾಯಿಸಿ]

ಕಾರ್ಟಿಂಗ್್ ನಲ್ಲಿ ಅನೇಕ ವಿಭಿನ್ನ ರೀತಿಯ ವರ್ಗಗಳು ಅಥವಾ ಫಾರ್ಮಲಾಗಳು ಇವೆ.

ಅಂತಾರಾಷ್ಟ್ರೀಯ

[ಬದಲಾಯಿಸಿ]
ಸೂಪರ್ ಕಾರ್ಟ್

ಸಿಐಕೆ-ಎಫ್ಐಎ ಕೆಎಫ್೧, ಕೆಎಫ್೨, ಕೆಎಫ್೩, ಕೆಝೆಡ್೧, ಕೆಝೆಡ್೨ ಮತ್ತು ಸೂಪರ್ ಕಾರ್ಟ್ ವಿಭಾಗಗಳ ಅಂತರರಾಷ್ಟ್ರೀಯ ಚಾಂಪಿಯನ್ ಷಿಪ್ ಗಳನ್ನು ಮಂಜೂರುಮಾಡುತ್ತದೆ. ಈ ರೇಸ್ ಗಳನ್ನು ಕಾರ್ಟಿಂಗ್್ ನ ಶ್ರೇಷ್ಠ ವರ್ಗಗಳೆಂದು ಪರಿಗಣಿಸಲಾಗುತ್ತದೆ ಹಾಗೂ ವಿಶ್ವದಾದ್ಯಂತ ರಾಷ್ಟ್ರೀಯ ಚಾಂಪಿಯನ್ ಷಿಪ್ ಗಳಲ್ಲಿ ಈ ರೇಸ್ ಗಳನ್ನು ಏರ್ಪಡಿಸಲಾಗುತ್ತದೆ. ವಿಶ್ವ ಚಾಂಪಿಯನ್ ಷಿಪ್ ಅನ್ನು ಇಲ್ಲಿಯೇ ನಿರ್ಧರಿಸಲಾಗುತ್ತದೆ. ನೆದರ್ಲ್ಯಾಂಡ್ ನ ನೈಕ್ ಡಿ ವ್ರೈಸ್ ಪ್ರಸ್ತುತದಲ್ಲಿ ೨೦೧೦ ರ ವಿಶ್ವ ಚಾಂಪಿಯನ್ ಆಗಿದ್ದಾರೆ.[೧೨]

ಸಿಐಕೆ-ಎಫ್ಐಎ ವಿಭಾಗಗಳು:

  • ಕೆಎಫ್೧ (ಉನ್ನತ ಮಟ್ಟದ್ದು), ಕೆಎಫ್ ೨, ಕೆಎಫ್ ೩, ಮತ್ತು ಕೆಎಫ್ ೪ ("ಮೂಲ" ವರ್ಗ ಎಂದು ಕರೆಯಲ್ಪಡುವಂತದ್ದು). ಇವೆಲ್ಲವೂ ಅದೇ ನೀರಿನಿಂದ ತಂಪಾಗುವ, ಗೇರ್ ಬಾಕ್ಸ್ ರಹಿತವಾದ ೧೨೫ cc “ದೀರ್ಘಕಾಲಿಕ” ಎರಡು-ಸ್ಟ್ರೋಕ್, ಸ್ಟಾರ್ಟರ್ ಮತ್ತು ಕ್ಲಚ್ ಇರುವ ಎಂಜಿನ್ ಗಳನ್ನೇ ಬಳಸುತ್ತಿವೆ; ಪ್ರತಿಯೊಂದಕ್ಕೂ ವಿಭಿನ್ನ ತಾಂತ್ರಿಕ ಅಂಶಗಳಿವೆ (ಮಫ್ಲರ್ ಗಳು, ಏರ್ ಬಾಕ್ಸ್ ಗಳು, ಕಾರ್ಬೊರೇಟರ್, ಆವರ್ತನಮಿತಿ, ಇತ್ಯಾದಿ.).
  • ಕೆಝೆಡ್೧ ಮತ್ತು ಕೆಝೆಡ್೨, ಎರಡೂ ೧೨೫ cc ಗೇರ್ ಬಾಕ್ಸ್ ವರ್ಗಕ್ಕೆ ಸೇರಿದಂತಹವು.
  • ಸ್ಪೀಡ್ ಕಾರ್ಟ್, ಒಂದು ೨೫೦ cc ಗೇರ್ ಬಾಕ್ಸ್ ವರ್ಗಕ್ಕೆ ಸೇರಿದುದು.

ರಾಷ್ಟ್ರೀಯ

[ಬದಲಾಯಿಸಿ]

ಯುಕೆ ಯಲ್ಲಿ ನ್ಯಾಷನಲ್ ಕಾರ್ಟಿಂಗ್್ ಸರಣಿಯು ಬಹಳ ಜನಪ್ರಿಯವಾದ ಕಾರ್ಟಿಂಗ್್ ಸರಣಿಯಾಗಿದೆ, ಈ ಸರಣಿಯನ್ನು ಸೂಪರ್ ಒನ್ಎಂದೂ ಕರೆಯುತ್ತಾರೆ. ಸೂಪರ್ ಒನ್ ಪಂದ್ಯಾವಳಿಗಳು ಮೂರು ಪ್ರಕಾರಗಳದ್ದಾಗಿವೆ:

  • ಎಂಎಸ್ಎ ಸರಣಿ: ಕೆಎಫ್೨, ಕೆಎಫ್೩, ಫಾರ್ಮಲಾ KGP, ಸೂಪರ್ ಕ್ಯಾಡೆಟ್ ಮತ್ತು ಕ್ಯಾಡೆಟ್
  • ರೋಟಾಕ್ಸ್ ಸರಣಿ: ಮಿನಿಮ್ಯಾಕ್ಸ್, ಜೂನಿಯರ್ ಮ್ಯಾಕ್ಸ್, ಸೀನಿಯರ್ ಮ್ಯಾಕ್ಸ್, ಸೀನಿಯರ್ ಮ್ಯಾಕ್ಸ್ ೧೭೭
  • ಟಿಕೆಎಂ ಸರಣಿ: ಫಾರ್ಮಲಾ ಜೂನಿಯರ್ ಟಿಕೆಎಂ, ಫಾರ್ಮಲಾ ಟಿಕೆಎಂ ಎಕ್ಸ್ ಟ್ರೀಮ್, ಟಿಕೆಎಂ ಸೀನಿಯರ್ ೪-ಸ್ಟ್ರೋಕ್ ಮತ್ತು ೨೦೦೬ ರಿಂದ ಹೋಂಡಾ ಕ್ಯಾಡೆಟ್

ಇತರ ಯುಕೆ ರಾಷ್ಟ್ರೀಯ ಚಾಂಪಿನ್ ಷಿಪ್ ಗಳು ಈ ಕೆಳಕಂಡವನ್ನು ಒಳಗೊಂಡಿವೆ: ಬಿರೆಲ್ ಈಸಿ ಕಾರ್ಟ್ (ಎಂಎಸ್ಎ ಅನುಮತಿ ಪಡೆದ) ಸರಣಿ: ಕ್ಯಾಡೆಟ್ ೬೦cc, ಜೂನಿಯರ್೧೦೦cc, ಸೀನಿಯರ್ ಹಗುರ ೧೨೫cc, ಸೀನಿಯರ್ ಭಾರ ೧೨೫cc

NatSKA ಒಂದು ಮಧ್ಯಮಪ್ರಮಾಣದ ಕಾರ್ಟಿಂಗ್್ ಸಂಘವಾಗಿದ್ದು ಯುಕೆಯಲ್ಲಿನ ಶಾಲೆಗಳಿಗೆ ಮತ್ತು ಯುವಕರಿಗಾಗಿ ಈ ಸಂಸ್ಥೆಯನ್ನು ನಡೆಸಲಾಗುತ್ತಿದ್ದು, ಇದರಲ್ಲಿ ೧೩ ವರ್ಗಗಳಿವೆ.

ಯುನೈಟೆಡ್ ಸ್ಟೇಟ್ಸ್ ನಲ್ಲಿ ಹೆಚ್ಚಿನ ಪ್ರಮಾಣದ ರೇಸ್ ಗಳೆಲ್ಲಾ ಅಂಡಾಕಾರದ ಧೂಳುಜಾಡಿನ ವರ್ಗದಲ್ಲಿ ನಡೆಯುತ್ತವೆ ಹಾಗೂ ಈ ರೇಸ್ ಗಳಲ್ಲಿ ಬಹುತೇಕ ಬ್ರಿಗ್ಸ್ & ಸ್ಟ್ರಾಟ್ಟನ್ ಕಾರ್ಖಾನೆಯ ಎಂಜಿನ್ ಗಳನ್ನು ಬಳಸಲಾಗುತ್ತದೆ. ಈ ರೇಸಿಂಗ್ ನ ವಿಧಾನವು ಆಗ್ನೇಯ ಮತ್ತು ಮಧ್ಯಪಶ್ಚಿಮಗಳಲ್ಲಿ ಪ್ರಧಾನವಾಗಿ ಕಂಡುಬರುತ್ತದೆ. ಪಶ್ಚಿಮದಲ್ಲಿ ಯೂರೋಪಿಯನ್ ಮಾದರಿಯ ಸ್ಪ್ರಿಂಟ್ ರೇಸಿಂಗ್ ಹೆಚ್ಚು ವಾಡಿಕೆಯಾಗಿದೆ.

ಆಸ್ಟ್ರೇಲಿಯಾ ದಲ್ಲಿ ಚಾಲ್ತಿಯಲ್ಲಿರುವ ವಿಭಾಗಗಳೆಂದರೆ ಮಿಡ್ಜೆಟ್, ರೂಕೀ, ಜೂನಿಯರ್ ನ್ಯಾಷನಲ್ ಪ್ರೋ, ಜೂನಿಯರ್ ನ್ಯಾಷನಲ್ ಲೈಟ್, ಜೂನಿಯರ್ ನ್ಯಾಷನಲ್ ಹೆವಿ, ಜೂನಿಯರ್ ಕ್ಲಬ್ ಮನ್, ಜೂನಿಯರ್ ರೋಟ್ಯಾಕ್ಸ್ (ಜೆಮ್ಯಾಕ್ಸ್), ಕೆಎಫ್೩, ಸೀನಿಯರ್ ನ್ಯಾಷನಲ್ ಲೈಟ್, ಸೀನಿಯರ್ ನ್ಯಾಷನಲ್ ಹೆವಿ, ಸೀನಿಯರ್ ರೋಟ್ಯಾಕ್ಸ್ ಲೈಟ್, ಸೀನಿಯರ್ ರೋಟ್ಯಾಕ್ಸ್ ಹೆವಿ, ಸೀನಿಯರ್ ಕ್ಲಬ್ ಮನ್ ಲೈಟ್, ಸೀನಿಯರ್ ಕ್ಲಬ್ ಮನ್ ಹೆವಿ, ಸೀನಿಯರ್ ಟಿಎಜಿ ಲೈಟ್ ಮತ್ತು ಸೀನಿಯರ್ ಟಿಎಜಿ ಹೆವಿ.

ರೋಟ್ಯಾಕ್ಸ ಮ್ಯಾಕ್ಸ್ (ಒಂದು ಟಚ್-ಎಂಡ್-ಗೋ ವಿಭಾಗ) ಅಥವಾ ಯಮಹಾ ಕೆಟಿ೧೦೦ ಎಂಜಿನ್ ಗಳನ್ನು ಬಳಸುವಂತಹ ಸ್ಪೆಕ್ ಸರಣಿಯಂತಹ ರೇಸ್ ಗಳಲ್ಲಿ ವಿಶ್ವದಾದ್ಯಂತ ಭಾಗವಹಿಸುತ್ತಾರೆ.

ಚಾಲಕರ ಸಲಕರಣೆಗಳು

[ಬದಲಾಯಿಸಿ]

ತಮ್ಮ ಸುಭಧ್ರತೆಯ ಸಲುವಾಗಿ ಕಾರ್ಟ್ ಚಾಲಕರು ಸೂಕ್ತವಾದ ಸಲಕರಣೆಗಳು ಮತ್ತು ಉಡುಪುಗಳನ್ನು ಧರಿಸಬೇಕಾಗುತ್ತದೆ:[೧೩]

  • ಸಂಪೂರ್ಣಮುಖ ಮುಚ್ಚುವ ಹೆಲ್ಮೆಟ್(ಶಿರಸ್ತ್ರಾಣ) (ಸ್ನೆಲ್ ಎಸ್ಎ ೨೦೦೫ ಅಥವಾ ಕೆ ೨೦೦೫ ಪ್ರಮಾಣಪತ್ರವು ರೇಸಿಂಗ್ ಗೆ

ಅವಶ್ಯಕವಾಗಿದೆ, ಕೆ ೨೦೦೫ ಎಸ್ಎ ೨೦೦೫ ನಂತೆಯೇ ಇದ್ದರೂ, ಅಗ್ನಿನಿರೋಧಕ ಶಕ್ತಿ ಅದಕ್ಕಿಲ್ಲವೆಂಬುದೊಂದೇ ವ್ಯತ್ಯಾಸ)

  • ಚಾಲನಾ ವಸ್ತ್ರ (ಡ್ರೈವಿಂಗ್ ಸೂಟ್) (ತರಚು/ಘರ್ಷಣಾ ನಿರೋಧಕ ಮೇಲುಡುಪುಗಳು; ಒಂದಾದರೂ ಕಾರ್ಡ್ಯುರಾ ಬಾಹ್ಯ ಪದರವಿರುವಂಹುದು, ಸಿಐಕೆ-ಎಫ್ಐಎ ಮಟ್ಟದ ಸ್ವೀಕೃತಿಯನ್ನು ಪಡೆದಂತಹ ಉಡುಪುಗಳು ಉನ್ನತ ಮಟ್ಟದ ರೇಸಿಂಗ್ ಗೆ ಅವಶ್ಯಕ)
  • ಗ್ಲೌವ್ಸ್ (ಗವುಸುಗಳು/ಕೈಚೀಲಗಳು)
  • ಡ್ರೈವಿಂಗ್ ಬೂಟ್ ಗಳು(ಪಾದದ ಕೀಲುಭಾಗವು ಮುಚ್ಚುಚಂತಿರಬೇಕು)

ಪಕ್ಕೆಲಬುಗಳ ರಕ್ಷಾಕವಚಗಳು ಮತ್ತು ಕತ್ತಿನ ಪಟ್ಟಿಗಳು, ಧರಿಸುವುದು ಸೂಕ್ತವೆಂದು ಒತ್ತಿಹೇಳಲ್ಪಡುವುವಾದರೂ, ಬಹುತೇಕ ದೇಶಗಳಲ್ಲಿ ಇವು ಐಚ್ಛಿಕವಾದವು. ಈ ಮೇಲ್ಕಾಣಿಸಿದ ಯಾವುದೂ ಅಗ್ನಿಶಾಮಕ ವಸ್ತುಗಳಿಂದ ತಯಾರಿಸಿರಲೇಬೇಕೆಂದೇನಿಲ್ಲ. ಸೂಪರ್ ಕಾರ್ಟ್ ಚಾಲಕರು ಮೋಟಾರ್ ಸೈಕ್ಲಿಂಗ್ ನಲ್ಲಿ ಬಳಸುವಂತಹ ಚರ್ಮದ ಉಡುಗೆತೊಡುಗೆಗಳನ್ನು ಕಡ್ಡಾಯವಾಗಿ ಧರಿಸಬೇಕು.

ಒಂದು ಕಲಿಕೆಯ ಸಾಧನವಾಗಿ ಕಾರ್ಟಿಂಗ್್

[ಬದಲಾಯಿಸಿ]

ಕಾರ್ಟ್ ರೇಸಿಂಗ್ ಅನ್ನು ಚಾಲಕರನ್ನು ರೇಸಿಂಗ್ ಗೆ ಪರಿಚಯಿಸುವ ಕಡಿಮೆ ಖರ್ಚಿನ ಮತ್ತು ಹೆಚ್ಚು ಸುರಕ್ಷಿತವಾದ ಮಾರ್ಗವಾಗಿ ಬಳಸಲಾಗುತ್ತದೆ. ಅನೇಕರು ಇದನ್ನು ಕಿರಿಯ ವಯಸ್ಸಿನ ಚಾಲಕರಿಗೆಂದೇ ಇರುವ ಕ್ರೀಡೆಯೆಂದು ಭಾವಿಸುತ್ತಾರೆ, ಆದರೆ ವಯಸ್ಕರು ಸಹ ಕಾರ್ಟಿಂಗ್್ ನಲ್ಲಿ ಬಹಳ ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಾರೆ. ಯಾವುದೇ ಶ್ರದ್ಧಾಯುಕ್ತ ರೇಸಿಂಗ್ ಬದುಕಿಗೆ ಕಾರ್ಟಿಂಗ್್ ಮೊದಲ ಹೆಜ್ಜೆಯೆಂದು ಪರಿಗಣಿಸಲಾಗುತ್ತದೆ. ಈ ಕ್ರೀಡೆಯು ಚಾಲಕನಿಗೆ ಕ್ಷಿಪ್ರ ಅಂಗಚಾಲನೆಗಳು, ಕಾರ್ ಹತೋಟಿಯಲ್ಲಿ ಕರಾರುವಾಕ್ಕುತನ ಹಾಗೂ ನಿರ್ಧಾರ ಕೈಗೊಳ್ಳುವ ಜಾಣ್ಮೆಗಳನ್ನಲ್ಲದೆ ತೀವ್ರವೇಗದಲ್ಲಿ ಚಕ್ರಕ್ಕೆ ಚಕ್ರ ತಾಗುವಂತಹ ರೇಸ್ ಗಳಲ್ಲಿರಬೇಕಾದ ಗುಣಗಳನ್ನು ಹೊಂದಲು ಪೂರಕವಾಗುತ್ತದೆ. ಅಲ್ಲದೆ, ಇತರ ಮೋಟಾರ್ ರೇಸಿಂಗ್ ವಿಧಾನಗಳಲ್ಲಿ ಇರುವಂತೆಯೇ, ಈ ಕ್ರೀಡೆಯೂ ಸಹ ಕಾರ್ಟ್ ನ ಸ್ಪರ್ಧಾಕ್ಷಮತೆಯನ್ನು ಹೆಚ್ಚಿಸಲು ಯಾವ ಯಾವ ಅಂಶಗಳನ್ನು ಮಾರ್ಪಡಿಸಬೇಕಾಗುವುದು ಎಂಬುದರ ತಿಳುವಳಿಕೆಯನ್ನು ಈ ಕ್ರೀಡೆಯು ಚಾಲಕನಲ್ಲಿ ಉಂಟುಮಾಡುತ್ತದೆ(ಉದಾಹರಣೆಗೆ ಟೈರ್ ಒತ್ತಡ, ಗೇರಿಂಗ್, ಸೀಟ್ ನ ಸ್ಥಾನ, ಷಾಸಿಸ್ ನ ಗಡುಸುತನ, ಇತ್ಯಾದಿ).

ಎಲ್ಲಾ ಪ್ರಸ್ತುತ (ರಷ್ಯಾದ ಚಾಲಕ ವಿಟಾಲಿ ಪಟ್ರೋವ್ ಹೊರತಾಗಿ) ಹಾಗೂ ಕೆಲವು ಮಾಜಿ ಫಾರ್ಮಲಾ ಒನ್ ವಿಶ್ಚ ಚಾಂಪಿಯನ್ ಷಿಪ್ ಚಾಲಕರು ಕಾರ್ಟ್ ರೇಸಿಂಗ್ ಆಡುತ್ತಲೇ ಬೆಳೆದವರಾಗಿದ್ದಾರೆ. ಅದರಲ್ಲಿ ಪ್ರಮುಖರಾದವರೆಂದರೆ, ಮೈಕಲ್ ಸ್ಕ್ಯೂಮಾಷರ್, ಐರ್ಟನ್ ಸೇನಾ, ಅಲನ್ ಪ್ರಾಸ್ಟ್, ಫರ್ನಾಂಡೋ ಅಲೋನ್ಸೋ, ಕಿಮಿ ರೈಕ್ಕೋನೆನ್, ಜೆನ್ಸನ್ ಬಟನ್, ಲೂಯಿಸ್ ಹ್ಯಾಮಿಲ್ಟನ್ ಮತ್ತು ಸೆಬಾಸ್ಟಿಯನ್ ವೆಟ್ಟೆಲ್. ಹಲವಾರು NASCAR ಚಾಲಕರು ಸಹ ಆರಂಭದಲ್ಲಿ ರೇಸಿಂಗ್ ಕಾರ್ಟ್ ಗಳನ್ನು ಓಡಿಸಿದವರೇ; ಅವರ ಪೈಕಿ ಪ್ರಮುಖರೆಂದರೆ ಡ್ಯಾರೆಲ್ ವಾಲ್ ಟ್ರಿಪ್, ಲೇಕ್ ಸ್ಪೀಡ್, ರಿಕಿ ರಡ್, ಜುವಾನ್ ಪ್ಯಾಬ್ಲೋ ಮಾಂಟೋಯಾ, ಟೋನಿ ಸ್ಟುವರ್ಟ್, ಮತ್ತು ಜೆಫ್ ಗಾರ್ಡನ್.

ಆಗಸ್ಟ್ ೨೦೦೯ ರಲ್ಲಿ, ಫೆರಾರಿಯೊಡನೆ ಮತ್ತೆ F೧ ಗೆ ಮರಳುವ ನಿರೀಕ್ಷೆಯಲ್ಲಿ, ಫಾರ್ಮಲಾ ಒನ್ ವಿಶ್ವ ಚಾಂಪಿಯನ್ ಆದ ಮೈಕಲ್ ಸ್ಕ್ಯೂಮಾಷರ್ ಅದಕ್ಕೆ ತಯಾರಾಗಲೆಂದು ಇಟಲಿಯ ಲೊನಾಟೋದಲ್ಲಿ ಕೊಂಚ ಕಾರ್ಟ್ ಡ್ರೈವಿಂಗ್ ನಲ್ಲಿ ತೊಡಗಿದ್ದರು.[೧೪] ಸೆಪ್ಟೆಂಬರ್ ೨೦೦೯ ರಲ್ಲಿ,ಹಂಗೇರಿಯನ್ ಗ್ರ್ಯಾಂಡ್ ಪ್ರೀಯಲ್ಲಿ ಅರ್ಹತಾ ಸುತ್ತುಗಳಲ್ಲಿ ಭಾಗವಹಿಸುತ್ತಿದ್ದಾಗ ಅಪಘಾತಕ್ಕೊಳಗಾದ ಎರಡು ತಿಂಗಳ ನಂತರ, ತಮ್ಮ ಪರಿಸ್ಥಿತಿಯನ್ನು ಪರೀಕ್ಷಿಸಿಕೊಳ್ಳುವ ಸಲುವಾಗಿ, ಫೆಲಿಪೆ ಮಾಸ್ಸಾ ಬ್ರೆಝಿಲ್ ನಲ್ಲಿ ಕಾರ್ಟಿಂಗ್್ ಅನ್ನು ಉಪಯೋಗಿಸಿದರು.[೧೫]

ಮೋಜಿನ, ರಿಯಾಯಿತಿಯ ಹಾಗೂ ಒಳಾಂಗಣ ಕಾರ್ಟ್ ಗಳು

[ಬದಲಾಯಿಸಿ]

ಇವನ್ನೂ ಗಮನಿಸಿ‌

[ಬದಲಾಯಿಸಿ]

ಸಂಬಂಧಿತವಾದುದು :

  • ಗೋ-ಕಾರ್ಟ್
  • ಕಾಪಿಟಾ
  • ಮೈಕ್ರೋ ಕಾರ್ಟ್

ಉಲ್ಲೇಖಗಳು‌‌

[ಬದಲಾಯಿಸಿ]
  1. ೧.೦ ೧.೧ "ಸೂಪರ್ ಕಾರ್ಟ್ ಎಟ್ ಮ್ಯಾಗ್ನಿ-ಕೋರ್ಸ್ - 2007". Archived from the original on 2009-04-14. Retrieved 2011-06-13.
  2. ಶಿಫ್ಟರ್ ಕಾರ್ಟ್ ಎಂದರೇನು?
  3. 50 ವರ್ಷಗಳ ಕಾರ್ಟಿಂಗ್್ 1956-2006 - ಸಿಐಕೆ-ಎಫ್ಐಎ
  4. ಹೌ ದ ಕಾರ್ಟ್ ವಾಸ ಇಂಟ್ರೊಡ್ಯೂಸ್ಡ್ ಇನ್ ಯೂರೋಪ್ - ಲೇಖಕರು ಬಟನ್ ರೀಯ್ನ್ ಫ್ರ್ಯಾಂಕ್ - ಜೂನ್ 2004
  5. ಮೆಕ್ಕಲಕ್ ಕಾರ್ಟ್ ಎಂಜಿನ್ ಗಳು
  6. 1959 - ಕಾರ್ಟ್ ರೇಸಿಂಗ್ ಗೆ ಮೆಕ್ಕಲಕ್ ನ ಪ್ರವೇಶ
  7. ಸಿಐಕೆ-ಎಫ್ಐಎ ಸ್ವೀಕೃತಿ ಅರ್ಜಿಯ ಉದಾಹರಣೆ - ಷಾಸಿಸ್, ೨೦೦೫
  8. ೮.೦ ೮.೧ ರೇಸಿಂಗ್ ಷಾಸಿಸ್ ಗಳ ತಾಂತ್ರಿಕ ಚಿತ್ರ - ಮಾರ್ಗೇ ಷಾಸಿಸ್
  9. "ನಿಯಮ ೨೧ ; ಕೆಎಫ್೧ ಗೆ ನಿರ್ದಿಷ್ಟವಾದ ನಿಯಮಮಗಳು;ಎಂಜಿನ್ ನ ಗರಿಷ್ಠ ವೇಗ ೧೬,೦೦೦ rpm." - ಸಿಐಕೆ-ಎಫ್ಐಎ 2010 ತಾಂತ್ರಿಕ ನಿಯಮಾವಳಿಗಳು
  10. ಸಿಐಕೆ-ಎಫ್ಐಎ 2010 ತಾಂತ್ರಿಕ ನಿಯಮಾವಳಿಗಳು 2.8
  11. (French) ಕಾರ್ಟ್ ಸರ್ಕ್ಯೂಟ್ ಅಲೇಯ್ನ್ ಪ್ರಾಸ್ಟ್ - 24 ಗಂಟೆಗಳು Archived 2008-01-06 ವೇಬ್ಯಾಕ್ ಮೆಷಿನ್ ನಲ್ಲಿ.
  12. 2010 ಸಿಐಕೆ-ಎಫ್ಐಎ ಕಾರ್ಟಿಂಗ್್ ವಿಶ್ವ ಚಾಂಪಿಯನ್ ಷಿಪ್ - ಅಧಿಕೃತ ವರ್ಗೀಕರಣ
  13. 2009 ಸಿಐಕೆ-ಎಫ್ಐಎ ತಾಂತ್ರಿಕ ನಿಯಮಾವಳಿಗಳು - ನಿಯಮ ೩ : ಕಾರ್ಟ್ ಮತ್ತು ಸಲಕರಣೆಗಳ ರಕ್ಷಣೆ
  14. ಮೈಕಲ್ ಈಸ್ ಕಾರ್ಟಿಂಗ್್ ಇನ್ ಲೊನಾಟೋ - ಮೈಕಲ್ ಸ್ಕ್ಯೂಮಾಷರ್ ಅಧಿಕೃತ ಜಾಲತಾಣ, ೦೫ ಆಗಸ್ಟ್ ೨೦೦೯
  15. ಅಪಘಾತದನಂತರ ಮೊದಲ ಬಾರಿಗೆ ಚಕ್ರಧಾರಿಯಾಗಿ ಫೆಲಿಪೆ ಮಾಸ್ಸಾ - ದ ಟೈಮ್ಸ್, ೨೯ ಸೆಪ್ಟೆಂಬರ್ ೨೦೦೯


ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]

ಆಡಳಿತ ಮಂಡಳಿಗಳು