ಮೈಕೆಲ್ ಶೂಮಾಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಕಲ್ ಶೂಮಾಕರ್
ಮೈಕಲ್ ಶೂಮಾಕರ್

ಜರ್ಮನಿಯ ಕೊಲೊನ್‌ನ ಬಳಿ ಇರುವ ಹರ್ಥ್ ಹೆರ್ಮುಲ್‌ಹಿಯೆಮ್‌ನಲ್ಲಿ ಜನವರಿ ೩ ೧೯೬೯ ರಲ್ಲಿ ಜನಿಸಿದ ಮೈಕೆಲ್ ಶೂಮಾಕರ್,ಫಾರ್ಮುಲ ಒನ್ ಕಾರ್ ರೇಸಿಂಗ್‌ನ ಒಬ್ಬ ಪ್ರಮುಖ ಚಾಲಕರಾಗಿದ್ದಾರೆ. ಇವರು ೭ ಬಾರಿ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್‌ಷಿಪ್ ಗೆದ್ದಿದ್ದು, ಫಾರ್ಮುಲಾ ಒನ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ವಿಶ್ವ ಚಾಂಪಿಯನ್‌ಷಿಪ್, ರೇಸ್ ಜಯ, ವೇಗದ ಒಟ (ಫಾಸ್ಟೆಸ್ಟ್ ಲ್ಯಾಪ್), ಆರಂಭಿಕ ಸ್ಥಾನ (ಪೊಲ್ ಪೊಷಿಷನ್), ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರೇಸ್‌ಗಳ ಜಯ, ಮುಂತಾದ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಇವರು ೨೦೦೬ ನೇ ಸಾಲಿನ ವಿಶ್ವ ಚಾಂಪಿಯನ್‌ಷಿಪ್ ನಂತರ ನಿವೃತ್ತಿ ಹೊಂದುವುದಾಗಿ ಸೆಪ್ಟೆಂಬರ್ ೭ ೨೦೦೬ರಂದು ಘೊಷಣೆ ಮಾಡಿದರು. [೧]

ರೇಸಿಂಗ್ ಇತಿಹಾಸ[ಬದಲಾಯಿಸಿ]

ಫಾರ್ಮಲಾ ಥ್ರೀ ರೇಸ್‌ಗಳಲ್ಲಿ ಸ್ಪರ್ಧಿಸುತ್ತಿದ್ದ ಶೂಮಾಕರ್, ಜಾರ್ಡನ್ (ಫಾರ್ಮುಲಾ ವನ್) ತಂಡದ ಪರವಾಗಿ ೧೯೯೧ನೇ ಇಸವಿಯಲ್ಲಿ ಪಾದಾರ್ಪಣೆ ಮಾಡಿದರು. ಬೆನೆಟ್ಟನ್ ತಂಡದವರು ಮುಂದಿನ ರೇಸ್‌ನಿಂದ ಶೂಮಾಕರ್ ಅವರನ್ನು ಅವರ ತಂಡಕ್ಕೆ ಸೇರಿಸಿಕೊಂಡರು. ಅಲ್ಲಿಂದ ೧೯೯೫ರ ವರೆಗೂ ಅವರು ಬೆನೆಟ್ಟನ್ ತಂಡದಲ್ಲೇ ಮುಂದುವರೆದು, ೧೯೯೪ ಹಾಗು ೧೯೯೫ ರಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್‌ಷಿಪ್‌ನ್ನು ಗೆದ್ದರು. ೧೯೯೬ರಿಂದ ಅವರು ಇಟಲಿಯ ಫೆರಾರಿ ತಂಡವನ್ನು ಸೇರಿ ಅಲ್ಲೇ ಮುಂದುವರೆದರು.

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

[೨] [೩] [೪]

  1. "ಆರ್ಕೈವ್ ನಕಲು". Archived from the original on 2007-09-29. Retrieved 2006-09-10.
  2. https://www.mirror.co.uk/sport/formula-1/michael-schumacher-ski-accident-10360005
  3. https://www.express.co.uk/news/world/998077/michael-schumacher-health-latest-news-skiing-accident-update-family
  4. https://www.express.co.uk/news/world/1010716/michael-schumacher-latest-f1-mick-schumacher-gerhard-berger

ಹೊರಗಿನ ಸಂಪರ್ಕಗಳು[ಬದಲಾಯಿಸಿ]