ಪರಮಹಂಸ ಯೋಗಾನಂದ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Paramahansa Yogananda Standard Pose.jpg

ಪರಮಹಂಸ ಯೋಗಾನಂದ (ಜನವರಿ ೫, ೧೮೯೩ - ಮಾರ್ಚ್ ೭, ೧೯೫೨), ಮೂಲನಾಮ ಮುಕುಂದ ಲಾಲ್ ಘೋಷ್, ತಮ್ಮ ಪುಸ್ತಕ ಆಟೋಬಾಯಾಗ್ರಫಿ ಆಫ಼್ ಅ ಯೋಗಿಯ ಮೂಲಕ ಧ್ಯಾನ ಹಾಗು ಕ್ರಿಯಾ ಯೋಗದ ಬೋಧನೆಗಳಿಗೆ ಲಕ್ಷಾಂತರ ಪಾಶ್ಚಿಮಾತ್ಯರನ್ನು ಪರಿಚಯಿಸಿದ ಒಬ್ಬ ಭಾರತೀಯ ಯೋಗಿ ಹಾಗು ಗುರುಗಳಾಗಿದ್ದರು. ಯೋಗಾನಂದರು ಉತ್ತರ ಪ್ರದೇಶಗೋರಖ್‍ಪುರ್‌ದಲ್ಲಿ ಒಂದು ಧರ್ಮನಿಷ್ಠ ಕುಟುಂಬಕ್ಕೆ ಜನಿಸಿದರು. ಅವರ ಕಿರಿಯ ಸಹೋದರ ಸಾನಂದನ ಪ್ರಕಾರ, ತಮ್ಮ ಅತ್ಯಂತ ಮುಂಚಿನ ವರ್ಷಗಳಿಂದಲೂ ಮುಕುಂದರ ಅಧ್ಯಾತ್ಮದ ಅರಿವು ಮತ್ತು ಅನುಭವ ಸಾಮಾನ್ಯವನ್ನು ಬಹಳ ಮೀರಿತ್ತು.