ಜಗದೀಶ್ಚಂದ್ರ ಬೋಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಚಾರ್ಯ ಸರ್ ಜಗದೀಶ್ ಚಂದ್ರ ಬೋಸ್
জগদীশ চন্দ্র বসু
ಸಿ ಎಸ್ ಐ, ಸಿ ಐ ಇ, ಎಫ್ ಆರ್ ಎಸ್
J.C.Bose.JPG
ಜಗದೀಶ್ ಚಂದ್ರ ಬೋಸರು ಲಂಡನ್ನಿನ ರಾಯಲ್ ಇನ್ಸ್ತಿತ್ಯೂಶನ್ನಿನಲ್ಲಿ
ಜನನ ನವೆಂಬರ್ ೩೦, ೧೮೫೮
ಬ್ರಿಟಿಷ್ ಭಾರತದ ಆಡಳಿತದಲ್ಲಿದ್ದ ಬೆಂಗಾಲ್ ಪ್ರೆಸಿಡೆನ್ಸಿಯ .ಬಿಕ್ರಾಂಪುರ್, ಪ್ರಸಕ್ತದಲ್ಲಿ ಇದು ಬಾಂಗ್ಲಾ ದೇಶದಲ್ಲಿರುವ ಬಿಕ್ರಾಂಪುರ ಆಗಿದೆ.
ಮರಣ ನವೆಂಬರ್ ೨೩, ೧೯೩೭
ಬ್ರಿಟಿಷ್ ಭಾರತದಲ್ಲಿನ ಬೆಂಗಾಲ್ ಪ್ರೆಸಿಡೆನ್ಸಿಯ ಗಿರ್ಡಿಹ್
ವಾಸಸ್ಥಳ ಕಲ್ಕತ್ತಾ
ರಾಷ್ಟ್ರೀಯತೆ ಭಾರತೀಯರು
ಕಾರ್ಯಕ್ಷೇತ್ರ ಭೌತಶಾಸ್ತ್ರ, ಬಯೋಫಿಸಿಕ್ಸ್ , ಜೀವಶಾಸ್ತ್ರ, ಸಸ್ಯಶಾಸ್ತ್ರ, ಪುರಾತತ್ವಶಾಸ್ತ್ರ, ಬೆಂಗಾಲಿ ಸಾಹಿತ್ಯ , ಬೆಂಗಾಲಿ ಕಾಲ್ಪನಿಕ ವಿಜ್ಞಾನ ಸಾಹಿತ್ಯ
ಸಂಸ್ಥೆಗಳು ಕಲ್ಕತ್ತಾ ವಿಶ್ವವಿದ್ಯಾಲಯ
ಕೆಂಬ್ರಿಡ್ಜ್ ವಿಶ್ವವಿದ್ಯಾಲಯ
ಲಂಡನ್ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠ ಕಲ್ಕತ್ತದ ಸೈಂಟ್ ಗ್ಸೆವಿಯರ್ ಕಾಲೇಜು ಮತ್ತು ಕೆಂಬ್ರಿಡ್ಜ್ ವಿಶ್ವ ವಿದ್ಯಾಲಯ
ಶೈಕ್ಷಣಿಕ ಸಲಹೆಗಾರರು

ಜಾನ್ ಸ್ತ್ರುಟ್

notable_students = ಸತ್ಯೇಂದ್ರನಾಥ್ ಬೋಸ್, ಮೇಘನಾದ ಸಹಾ
ಪ್ರಸಿದ್ಧಿಗೆ ಕಾರಣ ಮಿಲಿಮೀಟರ್ ವೇವ್ಸ್
ರೇಡಿಯೋ
ಕ್ರೆಸ್ಕೋಗ್ರಾಫ್
ಸಸ್ಯ ವಿಜ್ಞಾನ
ಗಮನಾರ್ಹ ಪ್ರಶಸ್ತಿಗಳು ಕಂಪಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ ೧೯೦೩
ಕಂಪಾನಿಯನ್ ಆಫ್ ದಿ ಸ್ಟಾರ್ ಆಫ್ ಇಂಡಿಯಾ ೧೯೧೧
ನೈಟ್ ಬ್ಯಾಚಲರ್ ೧೯೧೭
ಜಗದೀಶ್ಚಂದ್ರ ಬೋಸ್

ಸರ್ ಜಗದೀಶ್‌ಚಂದ್ರ ಬೋಸ್, ಸಿಎಸ್‌ಐ , ಸಿಐಈ, ಎಫ್‌ಆರ್‌ಎಸ್ (ನವೆಂಬರ್ ೩೦, ೧೮೫೮ನವೆಂಬರ್ ೨೩, ೧೯೩೭) ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನೆಡೆಸಿದ್ದ ಬೋಸರು ಅವರ ಕಾಲದ ಶ್ರೇಷ್ಟ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಬೋಸರು ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆ ಸಾಬೀತು ಮಾಡಿ ತೊರಿಸಿದವರು. ಭಾರತ ಉಪಖಂಡದಲ್ಲಿ ಪ್ರಯೋಗವಿಜ್ಞಾನಕ್ಕೆ ಅಡಿಪಾಯ ಹಾಕಿದವರು ಇವರು. ರೇಡಿಯೋ ವಿಜ್ಞಾನದ ತಂದೆ ಎಂದೂ , ಬೆಂಗಾಲಿ ವಿಜ್ಞಾನಸಾಹಿತ್ಯದ ತಂದೆ ಎಂದೂ ಇವರನ್ನು ಪರಿಗಣಿಸಲಾಗುತ್ತದೆ. ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು. ಅಮೇರಿಕದ ಪೇಟೆಂಟ್ ತೆಗೆದುಕೊಂಡವರಲ್ಲಿ ಭಾರತೀಯ ಉಪಖಂಡದ ಮೊದಲಿಗರು. ಇದು ಆದದ್ದು ೧೯೦೪ರಲ್ಲಿ.

ಜೀವನ[ಮೂಲವನ್ನು ಸಂಪಾದಿಸು]

ಭೋಸ್ ಅವರು ನವೆಂಬರ್ ೩೦, ೧೮೫೮ರ ವರ್ಷದಲ್ಲಿ ಭಾರತದ ಬಂಗಾಳ ಪ್ರಾಂತ್ಯದಲ್ಲಿರುವ ಮೈಮನಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ ಜನಿಸಿದರು. ಕಲಕತ್ತೆಯ ಸೇಂಟ್ ಝೇವಿಯರ್ ಶಾಲೆ ಹಾಗೂ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಓದಿ, ಲಂಡನ್ನಿಗೆ ವೈದ್ಯಕೀಯವನ್ನು ಕಲಿಯಲು ತೆರಳಿದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಅವರು ಹೆಚ್ಚು ಕಾಲ ಅಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಲಾಗಲಿಲ್ಲ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿ ೧೮೮೪ರಲ್ಲಿ ಕಲ್ಕತ್ತೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಅಲ್ಲಿ ಜನಾಂಗಭೇದವಿದ್ದಾಗ್ಯೂ ಮತ್ತು ಸಂಶೋಧನೆಗೆ ಅಗತ್ಯವಾದ ಸಲಕರಣೆಗಳು ಮತ್ತು ಹಣದ ಸಹಾಯ ಇಲ್ಲದೇ ಇದ್ದಾಗ್ಯೂ ಅವರು ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದರು. ರೇಡಿಯೋ ಮತ್ತು ವೈರ್ಲೆಸ್ ಸಂಕೇತಗಳ ಕುರಿತ ಸಂಶೋಧನೆಯಲ್ಲಿ ಅವರು ಗಮನಾರ್ಹ ಪ್ರಗತಿಯನ್ನು ಸಾಧಿಸಿದರು. ಅವರು ತಮ್ಮ ಸಂಶೋಧನೆಗಳಿಂದ ವಾಣಿಜ್ಯಿಕ ಲಾಭ ಮಾಡಿಕೊಳ್ಳುವುದರ ಬದಲು ತಾವು ಕಂಡುಹಿಡಿದುದನ್ನು ಉಳಿದವರು ಅಭಿವೃದ್ಧಿಪಡಿಸಲಿ ಎಂಬ ಮಹಾನ್ ಮನೋಧರ್ಮದಲ್ಲಿ ಬಹಿರಂಗಪಡಿಸಿದರು. ನಂತರದಲ್ಲಿ, ಅವರು ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸದಾರಿ ತೋರುವ ಹಲವಾರು ಸಂಶೋಧನೆಗಳನ್ನು ಮಾಡಿದರು. ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರುಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿತೋರಿಸಿದರು.

ಹಿತೈಷಿಗಳ ಒತ್ತಡಕ್ಕೆ ಮಣಿದು ತಮ್ಮ ಸಂಶೋಧನೆಗಳಲ್ಲಿ ಒಂದಕ್ಕೆ ಅವರು ಪೇಟೇಂಟ್ ಗಾಗಿ ಅರ್ಜಿ ಸಲ್ಲಿಸಿದರಾದರೂ ಯಾವುದೇ ಬಗೆಯ ಪೇಟೆಂಟ್ ಪಡೆಯುವುದರಲ್ಲಿ ಅವರಿಗೆ ಯಾವುದೇ ಆಸಕ್ತಿ ಇರಲಿಲ್ಲ ಎಂಬುದನ್ನು ವಿಶ್ವವೇ ಬಲ್ಲಂತ ಸಂಗತಿಯಾಗಿದೆ. “ನಾನೇನೂ ಸೃಷ್ಟಿಕರ್ತನಲ್ಲ. ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು ವಸ್ತುವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿವೆ. ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು” ಎಂಬುದು ಅವರ ಹೃದಯ ವೈಶಾಲ್ಯ ವಿಚಾರಧಾರೆಯಾಗಿತ್ತು.

ಅವರು ತೀರಿಕೊಂಡ ಹಲವಾರು ವರುಷಗಳ ನಂತರ ಅವರು ಆಧುನಿಕ ವಿಜ್ಙಾನಕ್ಕೆ ಸಲ್ಲಿಸಿದ ಅನೇಕ ಕೊಡುಗೆಗಳಿಗಾಗಿ ಅವರನ್ನು ಗುರುತಿಸಲಾಗುತ್ತಿದೆ.

ಕೃತಿಗಳು[ಮೂಲವನ್ನು ಸಂಪಾದಿಸು]

Jagadish Chandra Bose.jpg

ಬೋಸ್ ಅವರು ಕೆಲವೊಂದು ಪ್ರಮುಖ ಕೃತಿಗಳು ಇಂತಿವೆ

 1. Response in the Living and Non-living(1902),
 2. Plant response as a means of physiological investigation(೧೯೦೬),
 3. Comparative Electro-physiology: A Physico-physiological Study(೧೯೦೭),
 4. Researches on Irritability of Plants(೧೯೧೩),
 5. Physiology of the Ascent of Sap(೧೯೨೩),
 6. The physiology of photosynthesis(೧೯೨೪),
 7. The Nervous Mechanisms of Plants(೧೯೨೬),
 8. Plant Autographs and Their Revelations(೧೯೨೭),
 9. Growth and tropic movements of plants(೧೯೨೮),
 10. Motor mechanism of plants(೧೯೨೮)

ಅಧ್ಯಾತ್ಮಿಕ - ವೈಜ್ಞಾನಿಕ ಮೇಳೈಕೆ[ಮೂಲವನ್ನು ಸಂಪಾದಿಸು]

ಬೋಸ್ ಅವರಿಗೆ ರವೀಂದ್ರನಾಥ್ ಠಾಗೂರ್ ಅವರೊಂದಿಗೆ ಆಪ್ತ ಸ್ನೇಹವಿತ್ತು. ಐನ್ ಸ್ಟೀನ್ ಅವರೊಂದಿಗೂ ಸಂಪರ್ಕವಿತ್ತು. ಜಗದೀಶ್ ಚಂದ್ರ ಬೋಸರಲ್ಲಿ ಆಧ್ಯಾತ್ಮಿಕ - ವೈಜ್ಞಾನಿಕ ಚಿಂತನೆಗಳೆರಡೂ ಒಂದಾಗಿ ಮೇಳೈಸಿದ್ದವು ಎಂಬುದು ಪ್ರಾಜ್ಞರ ಅಭಿಮತ.

ಪ್ರಶಸ್ತಿ ಗೌರವಗಳು[ಮೂಲವನ್ನು ಸಂಪಾದಿಸು]

 1. ಬೋಸರಿಗೆ ೧೯೧೬ರಲ್ಲಿ ನೈಟ್ ಹುಡ್ ಪ್ರಶಸ್ತಿ ಸಂದಿತು. ಬೋಸರು ೧೯೧೭ರಲ್ಲಿ ಬೋಸ್ ಅವರು ಬೋಸ್ ಇನ್ಸ್ಟಿಟ್ಯೂಟನ್ನು ಕಲ್ಕತ್ತದಲ್ಲಿ ಸ್ತಾಪಿಸಿದರು.
 2. ಬೋಸ್ ೧೯೨೦ರಲ್ಲಿ ಬೋಸರನ್ನು ಲಂಡನ್ನಿನ ಫೆಲೊ ಆಫ್ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
 3. ೧೯೨೭ರ ವರ್ಷದಲ್ಲಿ ಅವರು ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ೧೪ನೇ ಅಧಿವೇಶನದ ಅಧ್ಯಕ್ಷತೆಯ ಗೌರವವನ್ನು ಪಡೆದರು.
 4. ೧೯೨೮ರ ವರ್ಷದಲ್ಲಿ ಅವರಿಗೆ ವಿಯೆನ್ನಾ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯತ್ವ ಗೌರವ ಲಭಿಸಿತು.
 5. ೧೯೨೯ರಲ್ಲಿ ಅವರಿಗೆ ಫಿನ್ನಿಶ್ ಸೊಸೈಟಿ ಆಫ್ ಸೈನ್ಸನ್ ಅಂಡ್ ಲೆಟರ್ಸ್ ಸದಸ್ಯತ್ವ ಗೌರವ ಸಂದಿತು.
 6. ಅವರಿಗೆ ಲೀಗ್ ಆಫ್ ನೇಶನ್ಸ್ ಕಮಿಟಿ ಆಫ್ ಇಂಟಲೆಕ್ಚುಯಲ್ ಕೋಪರೇಶನ್ ಸದಸ್ಯತ್ವ ಗೌರವವವೂ ಸಂದಿತು.
 7. ಬೋಸ್ ಅವರನ್ನು ಪ್ರಸಕ್ತದಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಎಂದಾಗಿರುವ ಅಂದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ಇಂಡಿಯಾದ ಸಂಸ್ಥಾಪಕ ಫೆಲೋ ಎಂದು ಗೌರವಿಸಲಾಗಿತ್ತು.
 8. ದಿ ಇಂಡಿಯನ್ ಬೊಟಾನಿಕ್ ಗಾರ್ಡನ್ ಅನ್ನು ಜೂನ್ ೨೫, ೨೦೦೯ರ ವರ್ಷದಂದು ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಗಾರ್ಡನ್ ಎಂದು ಹೆಸರಿಸಲಾಯಿತು.

ವಿದಾಯ[ಮೂಲವನ್ನು ಸಂಪಾದಿಸು]

ನವೆಂಬರ್ ೨೩, ೧೯೩೭ರಂದು ಜಗದೀಶ್ಚಂದ್ರ ಬೋಸರು ನಿಧನರಾದರು.

ಆಕರಗಳು[ಮೂಲವನ್ನು ಸಂಪಾದಿಸು]


ಈ ಲೇಖನಗಳನ್ನೂ ನೋಡಿ[ಮೂಲವನ್ನು ಸಂಪಾದಿಸು]

ಭಾರತದ ವಿಜ್ಞಾನಿಗಳು