ನೆನಪು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನೆನಪು ಎಂದರೆ ಒಬ್ಬ ವ್ಯಕ್ಥಿ ತನ್ನ ಜ್ಞಾನೇಂದ್ರಿಯಗಳ ಮೂಲಕ ಕಲಿತ ಅಥವಾ ಅನುಭವಿಸಿದ ವಿಷಯವನ್ನು ಪುನಃ ಅರಿವಿಗೆ ತರುವ ಸಾಮರ್ಥ್ಯ. ಕಲಿಯುವ ಪ್ರಕ್ರಿಯೆಯಲ್ಲಿ ನೆನೆಪು ಒಂದು ಪ್ರಮುಖ ಭಾಗವಾಗಿದೆ.ನಾವು ಹಳೆಯದನ್ನು ನೆನೆಪಿಸಿಕೊಳ್ಳಲು ಅಸಾದ್ಯವಾದರೆ ಹೊಸದನ್ನು ಕಲಿಯಲು ಸಾದ್ಯವಾಗುವುದಿಲ್ಲ. ನೆನಪು ಇಲ್ಲವಾದಲ್ಲಿ ಪ್ರತಿ ವಿಷಯವೂ ಪ್ರತಿ ಬಾರಿಯೂ ನಮಗೆ ಹೊಸ ಅನುಭವವನ್ನು ಕೊಡುತ್ತದೆ.ನೆನಪು ಇಲ್ಲವಾದಲ್ಲಿ ಮಧುರ ಅಥವಾ ಕಹಿ ಅನುಭವಗಳಿಲ್ಲವಾಗಿ ಜೀವನ ಬರಡಾಗುತ್ತದೆ.

ನೆನಪಿನ ವಿಧಗಳು[ಬದಲಾಯಿಸಿ]

Multistore model.png

ಮನಶ್ಯಾಸ್ತ್ರಜ್ಞರು ನೆನಪನ್ನು ಮೂರು ಹಂತಗಳನ್ನಾಗಿ ವಿಭಾಗಿಸಿದ್ದಾರೆ.

ಸಂವೇದನಾ ನೆನೆಪು (Sensory Memory)[ಬದಲಾಯಿಸಿ]

ಇದು ನಮ್ಮ ಮೆದುಳಿನಲ್ಲಿ ಒಂದು ಸೆಕೆಂಡಿಗಿಂತಲೂ ಕಡಿಮೆ ಅವಧಿ ಮಾತ್ರವಿರುತ್ತದೆ. ಉದಾಹರಣೆಗೆ ನಾವು ಒಂದು ಒಂದು ಪಕ್ಷಿಯನ್ನು ನೋಡಿದಾಗ ಅದರ ವಿವರ ಕ್ಷಣಮಾತ್ರ ಸಮಯ ನಮ್ಮ ಮೆದುಳಿನಲ್ಲಿ ನಿಂತಿರುತ್ತದೆ. ಅನಂತರ ಅದರ ವಿವರ ಮಬ್ಬಾಗಿ ನಂತರ ಮರೆಯಾಗುತ್ತದೆ. ಅದರ ಮೊದಲೇ ನಾವು ಅದನ್ನು ಅರೆಕಾಲಿಕ ನೆನಪಿಗೆ ವರ್ಗಾಯಿಸ ಬೇಕಾಗುತ್ತದೆ.

ಅರೆಕಾಲಿಕ ನೆನೆಪು (Short term Memory)[ಬದಲಾಯಿಸಿ]

ಇದು ನಾವು ವಸ್ತುವಿನ ಕುರಿತು ಯೋಚಿಸುವಷ್ಟು ಸಮಯ ನಮ್ಮ ಮೆದುಳಿನಲ್ಲಿ ಅದರ ವಿವರವಿರುತ್ತದೆ.ಇದು ನಮ್ಮ ಮೆದುಳಿನಲ್ಲಿ ಹೆಚ್ಚು ಕಡಿಮೆ ೨೦ ಸೆಕೆಂಡಿನಷ್ಟು ಸಮಯವಿರುತ್ತದೆ.ಅನಂತರ ಕೆಲವು ನೆನಪುಗಳು ದೀರ್ಘಕಾಲೀನ ನೆನೆಪಿಗೆ ವರ್ಗಾವಣೆ ಆಗಿ ಉಳಿದವು ಮರೆಯಾಗುತ್ತವೆ. ಸ್ವಲ್ಪ ಸಮಯದ ವರಗೆ ಮಾತ್ರ ನೆನೆಪು ಇರುತ್ತದೆ. oooooooooklkjp9ipoooooooooooooookkkkkkkkkkkkkkkkkkkkkkkkkkk

ದೀರ್ಘಕಾಲೀನ ನೆನೆಪು (Long term Memory)[ಬದಲಾಯಿಸಿ]

ಇದರಲ್ಲಿ ಅತ್ಯಂತ ಹೆಚ್ಚು ವಿಷಯಗಳು ಸೇರಿಕೊಂಡಿರುತ್ತವೆ.ಇದರಲ್ಲಿರುವ ವಿಷಯಗಳು ಒಂದೋ ತೀವ್ರವಾದ ಭಾವೋತ್ಕರ್ಷದಿಂದ ಅಥವಾ ಪುನರುಕ್ತಿಯಿಂದ (repetition)ಸೇರಿಕೊಳ್ಳುತ್ತವೆ. ಕೆಲವು ನೆನಪುಗಳು ಜೀವನ ಪೂರ್ತಿ ಇರುತ್ತವೆ.

"https://kn.wikipedia.org/w/index.php?title=ನೆನಪು&oldid=335779" ಇಂದ ಪಡೆಯಲ್ಪಟ್ಟಿದೆ