ವಿಷಯಕ್ಕೆ ಹೋಗು

ದಯಾನಂದ ಸರಸ್ವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸ್ವಾಮಿ ದಯಾನಂದ ಸರಸ್ವತಿ ಇಂದ ಪುನರ್ನಿರ್ದೇಶಿತ)
ದಯಾನಂದ ಸರಸ್ವತಿ
ಜನನ(೧೮೨೪-೦೨-೧೨)೧೨ ಫೆಬ್ರವರಿ ೧೮೨೪
ಟಂಕಾರ, ಗುಜರಾತ್
ಮರಣ30 October 1883(1883-10-30) (aged 59)
ಅಜ್ಮೇರ್, ರಾಜಸ್ಥಾನ
ಜನ್ಮ ನಾಮಮೂಲಶಂಕರ ತಿವಾರಿ or Mulshankar Karasandas Tiwari /Shuddha Chaitanya as Brahmachari
ಗೌರವಗಳುSindhi Marhu
ಸಂಸ್ಥಾಪಕರುಆರ್ಯ ಸಮಾಜ
ಗುರುವಿರಜಾನಂದ ದಂಡಿ
ತತ್ವಶಾಸ್ತ್ರನಾಲ್ಕು ವೇದಗಳ ಸಂಹಿತವನ್ನು ಆಧರಿಸಿದ ತ್ರೈತದ್‍ವೇದ, ವೈದಿಕ ತತ್ತ್ವಶಾಸ್ತ್ರ ಮತ್ತು ಅದರ ಸಿದ್ಧಾಂತವನ್ನು ಪಾಣಿನಿಯ ವ್ಯಾಕರಣವನ್ನು ಬೆಂಬಲಿಸಿದ ಆರು ದರ್ಶನಗಳೊಂದಿಗೆ ನಿಘಂಟು ಮತ್ತು ನಿರುಕ್ತಗಳು
ನುಡಿ"Om vishwani dev savitar duritani parasuv yad bhadram tanna aasuva.""ಓಂ ವಿಶ್ವಾನಿ ದೇವ ಸವಿತ್ ದುರಿತಾನಿ ಪರಾಸುವ್ ಯದ್ ಭದ್ರಮ್ ತನ್ನಾ ಅಸುವಾ."

ಸ್ವಾಮಿ ದಯಾನಂದ ಸರಸ್ವತಿ 'ದಯಾನಂದ ಸರಸ್ವತಿ' (೧೨ ಫೆಬ್ರವರಿ ೧೮೨೪ - ೩೦ ಅಕ್ಟೋಬರ್ ೧೮೮೩) ಭಾರತೀಯ ಧಾರ್ಮಿಕ ಮುಖಂಡ ಮತ್ತು ವೇದ ಧರ್ಮದ ಹಿಂದೂ ಸುಧಾರಣಾ ಚಳವಳಿಯ ಆರ್ಯ ಸಮಾಜದ ಸ್ಥಾಪಕ. ಅವರು ವೈದಿಕ ಸಿದ್ಧಾಂತ ಮತ್ತು ಸಂಸ್ಕೃತ ಭಾಷೆಯ ಪ್ರಖ್ಯಾತ ವಿದ್ವಾಂಸರಾಗಿದ್ದರು. ೧೮೭೬ ​​ರಲ್ಲಿ ಅವರು ಸ್ವರಾಜ್ಯಕ್ಕಾಗಿ "ಇಂಡಿಯ ಫಾರ್ ಇಂಡಿಯನ್ಸ್" ಎಂಬ ಕರೆ ಕೊಟ್ಟರು. ಆ ಕರೆಯನ್ನು ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು ಉಪಯೋಗಿಸಿಕೊಂಡು ಸ್ವರಾಜ್ಯದ ಕರೆ ಕೊಟ್ಟರು. ಆ ಸಮಯದಲ್ಲಿ ಹಿಂದೂ ಧರ್ಮದಲ್ಲಿ ಧಾರ್ಮಿಕ ಕ್ರಿಯೆಗಳು ಮೂರ್ತಿಪೂಜೆ, ಅಥವಾ ಮೂರ್ತಿ ಆರಾಧನೆಯನ್ನು ನಿರಾಕರಿಸಿ ತೆಗಳಿದ ಅವರು ವೈದಿಕ ಸಿದ್ಧಾಂತಗಳನ್ನು ಪುನರುಜ್ಜೀವನಗೊಳಿಸುವ ಕಡೆಗೆ ಕೆಲಸ ಮಾಡಿದರು. ತರುವಾಯ, ದಯಾನಂದ ಸರಸ್ವತಿ - ವೇದಗಳ ಅಧಾರದ ಮೇಲೆ ಹಿಂದು ಸಮಾಜವನ್ನು ಶುದ್ಧೀಕರಿಸಲು ಪ್ರಯತ್ನಿಸಿದ ಮೊದಲ ತತ್ವಜ್ಞಾನಿ. ತಮ್ಮ ಪ್ರಸಿದ್ದ ಕೃತಿಯಾದ ಸತ್ಯಾರ್ಥ ಪ್ರಕಾಶ ದಲ್ಲಿ ವೇದಗಳಿಗೆ ಹಿಂತಿರುಗಿ ಎಂದು ಕರೆಕೊಟ್ಟರು. ಸ್ವರಾಜ್ಯ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು. ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಹೊಂದಿದ್ದ ಹಿಂದುಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಶುದ್ಧಿ ಚಳುವಳಿಯನ್ನು ಆರಂಭಿಸಿದರು, ಇವರು ವೈದಿಕ ಧರ್ಮದ ರಕ್ಷಣೆ ಮತ್ತು ಪ್ರಚಾರ ಮಾಡಿದ್ದರಿಂದ ಇವರನ್ನು ಆಧುನಿಕ ಭಾರತದ ಹಿಂದೂ ಧರ್ಮದ ಪ್ರಥಮ ಸುಧಾರಕ ಎಂದು ಕರೆಯುತ್ತಾರೆ. ಇವರ ಇತರ ಕೃತಿಗಳು : ವೇದ ಭಾಷ್ಯ ಭೂಮಿಕ, 'ಭಾರತ ಭಾರತೀಯರಿಗೆ'. ವೈದಿಕ ಸಿದ್ಧಾಂತಗಳನ್ನು ಪುನರುಜ್ಜೀವನಗೊಳಿಸುವ ದಿಕ್ಕಿನಲ್ಲಿ ಕೆಲಸ ಮಾಡಿದ ಅವರನ್ನು, ಭಾರತದ ತತ್ವಜ್ಞಾನಿ ಮತ್ತು ರಾಷ್ಟ್ರಾಧ್ಯಕ್ಷ ಎಸ್. ರಾಧಾಕೃಷ್ಣನ್, ಶ್ರೀ ಅರಬಿಂದೋ ಅವರಂತೆ, ದಯಾನಂದ ಸರಸ್ವತಿಯವರು ಆಧುನಿಕ ಭಾರತದ ನಿರ್ಮಾಪಕರು ಎಂದು ಕರೆದರು. [೧][೨][೩][೪]

ಪ್ರಭಾವ[ಬದಲಾಯಿಸಿ]

 • ದಯಾನಂದರಿಂದ ಪ್ರಭಾವಿತರಾದವರಲ್ಲಿ ಮಡಮ್ ಕಾಮಾ, ಪಂಡಿತ್ ಲೆಖ್ ರಾಮ್, ಸ್ವಾಮಿ ಶ್ರದ್ಧಾನಂದ, ಪಂಡಿತ್ ಗುರು ದತ್ ವಿದ್ಯಾರ್ತಿ, ಶ್ಯಾಮ್‍ಜಿ ಕೃಷ್ಣ ವರ್ಮಾ (ಇವರು ಇಂಗ್ಲೆಂಡ್‍ನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ 'ಭಾರತಭವನ / ಇಂಡಿಯ ಹೌಸ್' ಸ್ಥಾಪಿಸಿದವರು), ವಿನಾಯಕ ದಾಮೋದರ್ ಸಾವರ್ಕರ್, ಲಾಲಾ ಹರ್ ದಯಾಲ್, ಮದನ್ ಲಾಲ್ ಧಿಂಗ್ರಾ, ರಾಮ್ ಪ್ರಸಾದ್ ಬಿಸ್ಮಿಲ್, ಮಹಾದೇವ್ ಗೋವಿಂದ ರಣಡೆ, ಅಷ್ಫಾಕ್ ಉಲ್ಲಾಹ್ ಖಾನ್ , ಮಹಾತ್ಮಾ ಹಂಸರಾಜ್, ಲಾಲಾ ಲಜಪತ್ ರಾಯ್, ಮತ್ತು ಇತರರು. ಅವರ ಅತ್ಯಂತ ಪ್ರಭಾವಶಾಲಿ ಕೃತಿಗಳಲ್ಲಿ ಒಂದಾದ 'ಸತ್ಯಾರ್ಥ್ ಪ್ರಕಾಶ್' ಎಂಬ ಪುಸ್ತಕವು ಭಾರತೀಯ ಸ್ವಾತಂತ್ರ್ಯ ಚಳವಳಿಗೆ ವಿಶೇಷ ಕೊಡುಗೆ ನೀಡಿತು.
 • ಅವರು ಬಾಲ್ಯದಿಂದ ಸಂನ್ಯಾಸ ಭಾವದವರು ಮತ್ತು ವಿದ್ವಾಂಸರಾಗಿದ್ದರು. ಅವರು ವೇದಗಳ ದೋಷಾತೀತ ಅಧಿಕಾರವನ್ನು ನಂಬಿದ್ದರು. ಮಹರ್ಷಿ ದಯಾನಂದರು ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತವನ್ನು ಪ್ರತಿಪಾದಿಸಿದರು. ಬ್ರಹ್ಮಾಚರ್ಯದ ವೈದಿಕ ಆದರ್ಶಗಳು, ಬ್ರಹ್ಮಚರ್ಯ ಮತ್ತು ದೈವಭಕ್ತಿ ಇವುಗಳಿಗೆ ಅವರು ಒತ್ತು ನೀಡಿದರು.
 • ಮಹರ್ಷಿ ದಯಾನಂದ ಅವರ ಕೊಡುಗೆಗಳಲ್ಲಿ ಅವರು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಉತ್ತೇಜಿಸುತ್ತಿದ್ದರು, ಉದಾಹರಣೆಗೆ ಮಹಿಳೆಯರ ಶಿಕ್ಷಣಕ್ಕೆ Archived 2018-04-06 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಭಾರತೀಯ ಧಾರ್ಮಿಕ ಗ್ರಂಥಗಳನ್ನು ಓದುವ ಹಕ್ಕನ್ನು ಪ್ರತಿಪಾದಿಸಿದರು. ಸಂಸ್ಕೃತದಲ್ಲಿ ಮತ್ತು ಹಿಂದಿಯಲ್ಲಿ ಅವರು ಬರೆದ ವೇದಗಳ ಮೇಲಿನ ಅವನ ವ್ಯಾಖ್ಯಾನ,ವೇದ ಸಂಸ್ಕೃತಗಳನ್ನು ಸ್ತ್ರೀಯರೂ ಓದಬೇಕೆಂದು ಹೇಳಿದರು.[೫][೬]

ಆರಂಭಿಕ ಜೀವನ[ಬದಲಾಯಿಸಿ]

ಸ್ವಾಮಿ ದಯಾನಂದ ಸರಸ್ವತಿ
 • ದಯಾನಂದ ಸರಸ್ವತಿ ( ಹಿಂದೂ ಕುಟುಂಬದ ಲೆಕ್ಕದಂತೆ- 10 ನೇ ತಿಥಿ ಫಲ್ಗುಣ ಕೃಷ್ಣ ದಶಾಮಿ ಫೆಬ್ರವರಿ 24 ರಂದು ಬೀಳುವಂತೆ - 1824 ರ ಫೆಬ್ರುವರಿ 24 ರಂದು) ಜನಿಸಿದರು. ಅವನ ಮೂಲ ಹೆಸರು 'ಮೂಲಾ ಶಂಕರ್', ಅವರು ಧನು ರಾಶಿ ಮತ್ತು ಮೂಲಾ ನಕ್ಷತ್ರದಲ್ಲಿ ಜನಿಸಿದ ಕಾರಣ ಆಹೆಸರು ಇಟ್ಟರು. ಜನನ ಸ್ಥಳ ಜೀವಾಪರ್ ತಂಕಾರ, ಕತಿಯಾವಾಡ್ ಪ್ರದೇಶ (ಈಗ ಗುಜರಾತ್ನ ಮೊರ್ಬಿ ಜಿಲ್ಲೆ). ಅವರ ತಂದೆ ಕರ್ಶನ್‍ಜಿ ಲಾಲ್ಜಿ ತಿವಾರಿ, ಶ್ರೀಮಂತ ತೆರಿಗೆ ಸಂಗ್ರಾಹಕರಾಗಿದ್ದರು ಮತ್ತು ಅವರ ತಾಯಿ ಅಮೃತಬಾಯಿಯವರು. ಅವರ ತಂದೆ ಗ್ರಾಮದ ಹಿಂದು ಕುಟುಂಬದ ಪದ್ದತಿಯಂತೆ ಕುಟುಂಬದ ಮುಖ್ಯಸ್ಥರಾಗಿದ್ದರು. ದಯಾನಂದರು ಸಂಸ್ಕೃತವನ್ನು ಕಲಿಯಲು ಮತ್ತು ವೇದಗಳನ್ನು ಮತ್ತು ಇತರ ಧಾರ್ಮಿಕ ಪಠ್ಯಗಳನ್ನು ಅಧ್ಯಯನ ಮಾಡುವ ಮೂಲಕ ಸಹಜ ಸುಖಕರ ವಿದ್ಯಾರ್ಥಿಜೀವನವನ್ನು ನಡೆಸಿದರು.[೭]
 • ಅವರು ಎಂಟು ವರ್ಷದವರಾಗಿದ್ದಾಗ ನಿಯಮಬದ್ಧ ಶಿಕ್ಷಣದ ಪ್ರವೇಶಕ್ಕಾಗಿ ಅವರ ಯಜ್ನೋಪವಿತ್ ಸಂಸ್ಕಾರ ಸಮಾರಂಭವನ್ನು ನಡೆಸಲಾಯಿತು. ಅವನ ತಂದೆಯು ಶಿವನ ಅನುಯಾಯಿಯಾಗಿದ್ದರು. ಶಿವನನ್ನು ಒಲಿಸುವ ಮಾರ್ಗವನ್ನು ಅವರಿಗೆ ಕಲಿಸಿದರು. ಉಪವಾಸಗಳನ್ನು ಮಾಡುವ ಪ್ರಾಮುಖ್ಯತೆಯನ್ನು ಅವರು ತಿಳಿಸಿದರು. ಶಿವರಾತ್ರಿ ಸಂದರ್ಭದಲ್ಲಿ, ದಯಾನಂದನು ಶಿವನಿಗೆ ವಿಧೇಯ ಭಕ್ತನಾಗಿ ರಾತ್ರಿಯಲ್ಲಾ ಎಚ್ಚರವಾಗಿದ್ದನು. ಈ ಉಪವಾಸಗಳ ಸಂದರ್ಬ ಒಂದರಲ್ಲಿ, ಅವರು ಇಲಿಯು ಶಿವನಿಗೆ ಅರ್ಪಿಸಲು ಇಟ್ಟ ನೈವೇದ್ಯವನ್ನು ತಿನ್ನುತ್ತಿದ್ದುದ್ದನ್ನೂ, ಮತ್ತು ಶಿವಲಿಂಗದ ಮೇಲೆ ಓಡಾಡುತ್ತಿದುದನ್ನೂ ನೋಡಿದರು. ಇದನ್ನು ನೋಡಿದ ನಂತರ, ಶಿವನಿಗೆ ಇಲಿಯಿಂದ ತನ್ನನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಅವನು ಹೇಗೆ ಬೃಹತ್ ಪ್ರಪಂಚದ ರಕ್ಷಕರಾಗಬಹುದು ಎಂದು ಪ್ರಶ್ನಿಸಿದರು. ಇದರಿಂದ ಮೂರ್ತಿ ಪೂಜೆಯ ನಂಬುಗೆ ಹೋಯಿತು.
 • ಅವರ ಕಿರಿಯ ಸಹೋದರಿ ಮತ್ತು ಅವರ ಚಿಕ್ಕಪ್ಪನು ಕಾಲರಾದಿಂದ ಸಾವಿಗೀಡಾದರು. ಈ ಸಾವು ದಯಾನಂದರಿಗೆ ಜೀವನ ಮತ್ತು ಮರಣದ ಅರ್ಥವನ್ನು ವಿಚಾರಮಾಡಲು ಕಾರಣವಾಯಿತು. ಅವರು ತನ್ನ ಹೆತ್ತವರನ್ನು ಚಿಂತೆಗೆ ಈಡುಮಾಡುವ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಅವರ ತಂದೆ ದಯಾನಂದರ ಹದಿಹರೆಯದ ವಯಸ್ಸಿನಲ್ಲಿ ಅವರಿಗೆ ವಿವಾಹ ಮಾಡಲು ತೊಡಗಿದ್ದರು, ಆದರೆ ಮದುವೆಯು ತಮ್ಮ ಜೀವನದ ಗುರಿಗೆ ಸರಿ ಎಂದು ಅವರಿಗೆ ತೋರಲಿಲ್ಲ. ಅದರಿಂದ ಅವರು 1846 ರಲ್ಲಿ ಮನೆಯಿಂದ ದೂರ ಓಡಿಹೋದರು. [೮]
 • ದಯಾನಂದ ಸರಸ್ವತಿ 1845 ರಿಂದ 1869 ರ ವರೆಗೆ ಧಾರ್ಮಿಕ ಸತ್ಯವನ್ನು ಹುಡುಕಲು ಸುಮಾರು ಇಪ್ಪತ್ತೈದು ವರ್ಷಗಳನ್ನು ಸಾಧಕ ಮತ್ತು ಸಂನ್ಯಾಸಿಯಾಗಿ ಕಳೆದರು. ಅವರು ಪ್ರಾಪಂಚಿಕ ವಸ್ತು ಸಾಮಗ್ರಿಗಳನ್ನು ತ್ಯಜಿಸಿದರು; ಮತ್ತು ಸ್ವಯಂ ನಿರಾಕರಣೆ ಮಾಡಿದ ವಿರಕ್ತ ಜೀವನವನ್ನು ಅನುಸರಿಸಿದರು., ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅರಣ್ಯಗಳಲ್ಲಿ, ಹಿಮಾಲಯ ಪರ್ವತಗಳ ತಪ್ಪಲ ಏಕಾಂತದಲ್ಲಿ ಕಳೆದರು.ಅವರು ಉತ್ತರ ಭಾರತದ ಯಾತ್ರಾ ಸ್ಥಳಗಳನ್ನು ಸಂದರ್ಶಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ವರ್ಷಗಳಲ್ಲಿ ಅವರು ಹಲವಾರು ವಿಧದ ಯೋಗಗಳನ್ನು ಅಭ್ಯಾಸ ಮಾಡಿದರು ಮತ್ತು ವಿರಾಜನಾಂದ ದಂಡೀಶ ಎಂಬ ಧಾರ್ಮಿಕ ಶಿಕ್ಷಕನ ಶಿಷ್ಯರಾದರು. ಹಿಂದೂ ಧರ್ಮವು ತನ್ನ ಐತಿಹಾಸಿಕ ಮೂಲಗಳಿಂದ ದೂರವಿರುವುದನ್ನು ಮತ್ತು ಅದರ ಅನೇಕ ಆಚರಣೆಗಳು ಅಶುದ್ಧವೆಂದು ವಿರಾಜನಾಂದ್ ನಂಬಿದ್ದರು. ದಯಾನಂದ ಸರಸ್ವತಿ ಅವರು ಹಿಂದೂ ನಂಬಿಕೆಯಲ್ಲಿ ವೇದಗಳಿಗೆ ಯೋಗ್ಯ ಸ್ಥಾನವನ್ನು ಪುನಃಸ್ಥಾಪಿಸಲು ತಮ್ಮ ಜೀವವನ್ನು ವಿನಿಯೋಗಿಸುವುದಾಗಿ ವಿರಾಜಾನಂದನಿಗೆ ಭರವಸೆ ನೀಡಿದರು. 1848 ರಲ್ಲಿ ಸ್ವಾಮಿ ಪೂರ್ಣಾನಂದ ಸರಸ್ವತಿಗಳು ಅವರಿಗೆ ಸಂನ್ಯಾಸ ದೀಕ್ಷೆ ನೀಡಿ ಅವರಿಗೆ ದಯಾನಂದ ಸರಸ್ವತಿ ಎಂದು ಹೆಸರು ಕೊಟ್ಟರು.[೯]

ದಯಾನಂದ ಸರಸ್ವತಿ ಅವರ ಜೀವನದ ಧ್ಯೇಯೋದ್ದೇಶ - ಆರ್ಯಸಮಾಜದ ಸ್ಥಾಪನೆ[ಬದಲಾಯಿಸಿ]

ಓಂ - Om red
ಔಮ್' ಅಥವಾ 'ಓಂ'-- ಆರ್ಯ ಸಮಾಜದ ದೈವ ಸಂಕೇತ - O3m AryaSamaj
 • 'ಔಮ್' ಅಥವಾ 'ಓಂ'ನನ್ನು ಆರ್ಯ ಸಮಾಜವು ದೇವರ ಅತಿ ಉನ್ನತ ಮತ್ತು ಸರಿಯಾದ ಹೆಸರೆಂದು ಪರಿಗಣಿಸುತ್ತದೆ. ವೇದಗಳಲ್ಲಿ ಹೇಳಿದಂತೆ ಎಲ್ಲರ ಉನ್ನತಿ ಮತ್ತು ಸಾರ್ವತ್ರಿಕ ಸಹೋದರತ್ವಕ್ಕಾಗಿ ಮಾನವಕುಲವನ್ನು ಕೇಳುವುದು ದಯಾನಂದರ ಧ್ಯೇಯ ಮತ್ತು ಉದ್ದೇಶವಾಗಿತ್ತು. ಹಿಂದೂ ಧರ್ಮವು ವೇದಗಳ ಸ್ಥಾಪನಾ ತತ್ತ್ವಗಳಿಂದ ಭಿನ್ನಾಭಿಪ್ರಾಯದಿಂದ ಭ್ರಷ್ಟಗೊಂಡಿದೆ ಮತ್ತು ಹಿಂದೂಗಳಿಗೆ ಸ್ವಯಂ-ಸಮಗ್ರತೆಗಾಗಿ ಪುರೋಹಿತರಿಂದ ಹಿಂದೂಗಳು ತಪ್ಪುದಾರಿಗೆಳೆಯಲ್ಪಟ್ಟಿದ್ದಾರೆ ಎಂದು ಅವರು ನಂಬಿದ್ದರು. ಈ ಉದ್ದೇಶಕ್ಕಾಗಿ ಅವರು ಆರ್ಯ ಸಮಾಜವನ್ನು ಸ್ಥಾಪಿಸಿದರು, ಹನ್ನೆರಡು ಸಾರ್ವತ್ರಿಕ ತತ್ವಗಳನ್ನು 'ಯುನಿವರ್ಸಲಿಸಂ'ನ / ಸಾರ್ವತ್ರಿಕ ಧರ್ಮನೀತಿಯ ಸಂಕೇತವಾಗಿ "ಕೃಣ್ವಂತೊ ವಿಶ್ವಾರ್ಯಂ" ಎಂಬ ನೀತಿಯಂತೆ ಮಾಡಿದರು. ಈ ತತ್ವಗಳ ಮೂಲಕ, ಇಡೀ ವಿಶ್ವವು ಶ್ರೇಷ್ಠ ಆರ್ಯರ ಬೀಡಾಗಿ ನೆಲೆಸಬೇಕೆಂದು ಆರ್ಯ ಸಮಾಜವು ಉದ್ದೇಶಿಸಿದೆ.
 • ದೇವರಿಗೆ ಹೊಸ ಸಮರ್ಪಣೆಯೊಂದಿಗೆ ಹಿಂದೂ ಧರ್ಮವನ್ನು ಸುಧಾರಿಸುವ ಉದ್ದೇಶ ಅವರ ಮುಂದಿನ ಹಂತವಾಗಿತ್ತು. ಅವರು ಧಾರ್ಮಿಕ ವಿದ್ವಾಂಸರು ಮತ್ತು ಪುರೋಹಿತರನ್ನು ಚರ್ಚೆಗಳಿಗೆ ಸವಾಲು ಮಾಡುವ ಉದ್ದೇಸದಿಂದ ದೇಶವನ್ನು ಸಂಚರಿಸಿದರು, ಅವರ ವಾದಗಳ ಬಲ ಮತ್ತು ಸಂಸ್ಕೃತ ಮತ್ತು ವೇದಗಳ ಜ್ಞಾನದ ಮೂಲಕ ಎಲ್ಲೆಡೆ ಪದೇ ಪದೇ ಗೆದ್ದರು. ಹಿಂದೂ ಪುರೋಹಿತರು ವೈದಿಕ ಗ್ರಂಥಗಳನ್ನು ಓದದಂತೆ ಲೌಕಿಕತೆಯನ್ನು ಪ್ರೋತ್ಸಾಹಿಸುತ್ತದ್ದರು ಮತ್ತು ಗಂಗಾ ನದಿಯ ಸ್ನಾನ ಮತ್ತು ವಾರ್ಷಿಕಾಬ್ದಿಗಳಲ್ಲಿ ಪುರೋಹಿತರಿಗೆ ಭೋಜನ ನೀಡುವುದಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದರು. ದಯಾನಂದರು ಅವುಗಳನ್ನು ಮೂಢನಂಬಿಕೆಗಳು ಅಥವಾ ಸ್ವಯಂ-ಲಾಭದ ಪದ್ಧತಿಗಳಾಗಿ ಆಚರಣೆಗಳನ್ನು ಪ್ರೋತ್ಸಾಹಿಸಿತ್ತಾರೆ ಎಂದರು. ಅಂತಹ ಮೂಢನಂಬಿಕೆಗಳನ್ನು ತಿರಸ್ಕರಿಸಲು ರಾಷ್ಟ್ರವನ್ನು ಪ್ರೇರೇಪಿಸುವ ಮೂಲಕ, ವೇದಗಳ ಬೋಧನೆಗೆ ಹಿಂದಿರುಗಲು ರಾಷ್ಟ್ರದ ಶಿಕ್ಷಣಕ್ಕಾಗಿ ಮತ್ತು ವೈದಿಕ ಜೀವನವನ್ನು ಪಾಲಿಸುವಂತೆ ಮಾಡುವುದು, ಅವರ ಗುರಿಯಾಗಿತ್ತು.
 • ರಾಷ್ಟ್ರೀಯ ಸುಧಾರಣೆಗಾಗಿ ಹಸುಗಳ ಪ್ರಾಮುಖ್ಯತೆ ಮತ್ತು ರಾಷ್ಟ್ರೀಯ ಏಕೀಕರಣದ ಉದ್ದೇಶಕ್ಕೆ ರಾಷ್ಟ್ರೀಯ ಭಾಷೆಯಾಗಿ ಹಿಂದಿಯನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ಸಾಮಾಜಿಕ ಸುಧಾರಣೆಗಳನ್ನು ಸ್ವೀಕರಿಸಲೂ, ಹಿಂದೂ ರಾಷ್ಟ್ರವನ್ನು ಸ್ಥಾಪಿಸಲೂ ಸಹ ಅವರು ಪ್ರಚೋದಿಸಿದರು. ಯೋಗ ಮತ್ತು ಆಸನಗಳು, ಬೋಧನೆಗಳು, ಉಪದೇಶಗಳು, ಧರ್ಮೋಪದೇಶಗಳು, ಬರಹಗಳ ಮೂಲಕ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಅಭ್ಯಾಸದ ಮೂಲಕ ತಮ್ಮ ವಿಚಾರಗಳನ್ನು ಪ್ರಚಾರ ಮಾಡಿದರು.
 • ಅವರು ಸ್ವರಾಜ್ಯ (ಸ್ವಯಂ ಆಡಳಿತ), ರಾಷ್ಟ್ರೀಯತೆ ಮತ್ತು ಆಧ್ಯಾತ್ಮಿಕತೆಗೆ ಆಸಕ್ತಿಯನ್ನು ಹೊಂದಲು, ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರೇರೇಪಿಸಿದರು. ಅವರು ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಗೌರವಗಳನ್ನು ಪ್ರತಿಪಾದಿಸಿದರು ಮತ್ತು ಲಿಂಗವನ್ನು ಪರಿಗಣಿಸದೆ, ಎಲ್ಲಾ ಮಕ್ಕಳ ಶಿಕ್ಷಣಕ್ಕಾಗಿ ಸಲಹೆ ನೀಡಿದರು.
 • ಸ್ವಾಮಿ ದಯಾನಂದರು ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ ಸೇರಿದಂತೆ, ಜೈನ ಧರ್ಮ, ಬೌದ್ಧಧರ್ಮ ಮತ್ತು ಸಿಖ್ ಧರ್ಮದಂತಹ ಇತರ ಭಾರತೀಯ ನಂಬಿಕೆಗಳನ್ನೂ ಧರ್ಮಗಳನ್ನೂ ತಾರ್ಕಿಕ, ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಮಾಡಿದರು. ಹಿಂದೂ ಧರ್ಮದಲ್ಲಿ ವಿಗ್ರಹಾರಾಧನೆಯನ್ನು ನಿಗ್ರಹಿಸುವುದರ ಜೊತೆಗೆ, ಅವರು ತಮ್ಮದೇ ದೇಶದಲ್ಲಿ ಸತ್ಯದ ಮತ್ತು ಶುದ್ಧ ದೈವ ನಂಬಿಕೆಯಲ್ಲಿ ಭ್ರಷ್ಟತೆ ಇದೆ ಎಂದು ಪರಿಗಣಿಸಿದನು.
 • ಹಿಂದೂ ಧರ್ಮದೊಳಗೆ ಆದ ಅನೇಕ ಸುಧಾರಣಾ ಚಳುವಳಿಗಳಂತೆಯೇ, ಆರ್ಯ ಸಮಾಜದ ಮನವಿಯನ್ನು ಭಾರತದಲ್ಲಿ ವಿದ್ಯಾಭ್ಯಾಸ ಮಾಡಿದ ಕೆಲವರಲ್ಲಿ ಮಾತ್ರವಲ್ಲದೇ, ಆರ್ಯ ಸಮಾಜದ ಆರನೇ ತತ್ತ್ವವು ಹೇಳಿದಂತೆ ಇಡೀ ಜಗತ್ತಿಗೆ ಮಾದರಿಯಾಗಿದೆ. ಇದರ ಪರಿಣಾಮವಾಗಿ, ಅವರ ಬೋಧನೆಗಳು ಎಲ್ಲಾ ಜೀವಿಗಳಿಗೂ ಸಾರ್ವತ್ರಿಕವಾದ ಧರ್ಮಗಳನ್ನು ಬೋಧಿಸುತ್ತವೆ ಮತ್ತು ಯಾವುದೇ ನಿರ್ದಿಷ್ಟ ಪಂಥ, ನಂಬಿಕೆ, ಸಮುದಾಯ ಅಥವಾ ರಾಷ್ಟ್ರಕ್ಕಾಗಿ ಅಲ್ಲ. [೧೦][೧೧]

ವೇದಗಳಿಗೆ ಹಿಂತಿರುಗಿ[ಬದಲಾಯಿಸಿ]

 • ಆರ್ಯ ಸಮಾಜವು ಹಿಂದೂ ಧರ್ಮಕ್ಕೆ ಮತಾಂತರವನ್ನು ಸ್ವಾಗತಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ದಯಾನಂದ ಅವರ ಧರ್ಮದ ಪರಿಕಲ್ಪನೆಯು ಸತ್ಯಾರ್ಥ ಪ್ರಕಾಶದ "ನಂಬಿಕೆಗಳು ಮತ್ತು ಅಪನಂಬಿಕೆಗಳು" ವಿಭಾಗದಲ್ಲಿ ಹೇಳಲಾಗಿದೆ, ಅವರು ಹೇಳುತ್ತಾರೆ:
" ಯಾವ ತತ್ತ್ವ ಬೋಧನೆಗಳು ನಿಷ್ಪಕ್ಷಪಾತ ನ್ಯಾಯ, ಸತ್ಯತೆ ಮತ್ತು ಆ ರೀತಿಯಲ್ಲಿ ಪೂರ್ಣವಾದ ಅನುಸರಣೆಯನ್ನು ಹೊಂದಿರುತ್ತದೆಯೊ, ಮತ್ತು ಅದು ವೇದಗಳಲ್ಲಿರುವ ದೇವರ ಬೋಧನೆಗಳಿಗೆ ವಿರೋಧವಾಗಿಲ್ಲವೋ ಅದನ್ನು ನಾನು ಧರ್ಮವೆಂದು ಅಂಗೀಕರಿಸುತ್ತೇನೆ. ಯಾವುದು ಪಕ್ಷಪಾತದಿಂದ ಮುಕ್ತವಾಗಿಲ್ಲವೊ ಮತ್ತು ನ್ಯಾಯ ವಿರುದ್ಧವಾದ್ದೋ, ಸತ್ಯದಿಂದ ದೂರವಿರುವುದೊ, ಮತ್ತು ಅಂತಹ ನೀತಿಯುಳ್ಳದ್ದೋ ಮತ್ತು ವೇದಗಳಲ್ಲಿ ಬೋಧಿಸಿದ ದೇವರ ಬೋಧನೆಗಳನ್ನು ವಿರೋಧಿಸವುದೋ ಅದನ್ನು ನಾನು -ಅಧರ್ಮ ಎಂದು ಭಾವಿಸುತ್ತೇನೆ. "
"ಯಾವನು ಎಚ್ಚರಿಕೆಯಿಂದ ಆಲೋಚಿಸಿದ ನಂತರ ಸತ್ಯವನ್ನು ಒಪ್ಪಿಕೊಳ್ಳುವ ಮತ್ತು ಅಸತ್ಯವನ್ನು ತಿರಸ್ಕರಿಸಲು ಯಾವಾಗಲೂ ಸಿದ್ಧನಾಗಿರುತ್ತಾನೊ ಅವನು; ಇತರರ ಸಂತೋಷವನ್ನು ಅವನು ತನ್ನದೇ ಸ್ವಂತ ಸಂತೋಷದಂತೆಯೇ ನೋಡುತ್ತಾನೊ, ಅವನನ್ನು ನಾನು 'ನ್ಯಾಯಮಾರ್ಗಿ'ಯೆಂದು ಕರೆಯುತ್ತೇನೆ."
- ಸತ್ಯಾರ್ಥ ಪ್ರಕಾಶ
 • ದಯಾನಂದ ಸರಸ್ವತಿಯವರ ವೈದಿಕ ಸಂದೇಶವು, ಯಾವುದೇ ವ್ಯಕ್ತಿಯ, ವೈದಿಕ (ವೇದದಲ್ಲಿ ಹೇಳಿದ) ಕಲ್ಪನೆಯ ದೈವಿಕ ಸ್ವಭಾವದಿಂದ ಬೆಂಬಲಿಸಲ್ಪಟ್ಟು, ಇತರ ಮಾನವರಿಗೆ ಗೌರವ ಮತ್ತು ಸಂಮಾನವನ್ನು ತೋರುವ ಬಗೆಗೆ ಒತ್ತಿ ಹೇಳಿತು. ಆರ್ಯ ಸಮಾಜದ ಹತ್ತು ತತ್ವಗಳಲ್ಲಿ, "ಮಾನವಸಮಾಜಕ್ಕೆ ಪ್ರಯೋಜನ ಮಾಡುವ ಪ್ರಮುಖ ಉದ್ದೇಶದಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು" ಎಂಬ ಕಲ್ಪನೆಯನ್ನು ಅವರು ಪ್ರತಿಪಾದಿಸಿದರು. ಇದಕ್ಕಾಗಿ ಆರ್ಯಸಮಾಜದ ಕೆಲವು ಧಾರ್ಮಿಕ ವಿಧಿಗಳನ್ನು ಅನುಸರಿಸುವುದು ಅಥವಾ ವಿಗ್ರಹಗಳು ಮತ್ತು ಚಿಹ್ನೆಗಳನ್ನು ಪೂಜಿಸುವುದರ ವಿರುದ್ಧವಾಗಿವೆ. ಅದರ ಮೊದಲ ಐದು ತತ್ವಗಳು ಸತ್ಯದ ಬಗ್ಗೆ ಮಾತನಾಡುತ್ತವೆ, ಕೊನೆಯ ಐದು ಜನರು ಉದಾತ್ತತೆ, ನಾಗರಿಕರು, ಸಹ-ಜೀವನ ಮತ್ತು ಶಿಸ್ತಿನ ಜೀವನವನ್ನು ಬಾಳುವ ಕುರಿತು ಹೇಳುತ್ತದೆ. ತಮ್ಮ ಜೀವನದಲ್ಲಿಯೇ ಮೋಕ್ಷವನ್ನು ಕಡಿಮೆ ಪ್ರಾಮುಖ್ಯದ್ದು ಎಂದು ಅರ್ಥೈಸಿದರು, ಏಕೆಂದರೆ ಅದು (ಮೋಕ್ಷ) ಇತರರ ಉನ್ನತಿಗೆ ಕಾರ್ಯಶೀಲವಾಗುವ ಬದಲು ಸ್ವಂತವ್ಯಕ್ತಿತ್ವದ (ಸ್ವಯಂ)) ಲಾಭಕ್ಕಾಗಿ ಮಾತ್ರಾ ಪ್ರಯತ್ನಿಸುವುದೆಂದು ವಾದಿಸಿದರು.[೧೨]
 • ದಯಾನಂದ ಅವರ "ವೇದಗಳಿಗೆ ಹಿಂದಿರುಗಿ" ಎಂಬ ಸಂದೇಶ ಪ್ರಪಂಚದಾದ್ಯಂತ ಅನೇಕ ಚಿಂತಕರು ಮತ್ತು ತತ್ವಜ್ಞಾನಿಗಳ ಮೇಲೆ ಪ್ರಭಾವ ಬೀರಿತು. [೧೩]

ಚಟುವಟಿಕೆಗಳು[ಬದಲಾಯಿಸಿ]

 • ದಯಾನಾಂದ್ ಸರಸ್ವತಿಯವರು 14 ವರ್ಷದವರಿದ್ದಾಗಿನಂದಲೂ ಸಕ್ರಿಯರಾಗಿದ್ದಾರೆಂದು ದಾಖಲಾಗಿದೆ. ಆ ಸಮಯದಲ್ಲಿ ಧಾರ್ಮಿಕ ಶ್ಲೋಕಗಳನ್ನು ಓದುವುದು ಮತ್ತು ಅವರ ಬಗ್ಗೆ ತಿಳಿಇ, ಅವರು ಇತರರಿಗೆ ಕಲಿಸುತ್ತಿದ್ದರು . ನಂತರ ಅವರು ಧಾರ್ಮಿಕ ಚರ್ಚೆಗಳಲ್ಲಿ ಭಾಗವಹಿಸುತ್ತದ್ದರು. ಭಾಗವಹಿಸುವ ಸಮಯದಲ್ಲಿ ಅವರನ್ನು ಇತರರು ಅವರನ್ನು ಗೌರವದಿಂದ ಕಾಣುತ್ತಿದ್ದರು. ಅವರ ಚರ್ಚೆಗಳನ್ನು ಕೇಳಲು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು..
 • 1869 ರ ಅಕ್ಟೋಬರ್ 22 ರಂದು ಅವರು ವಾರಣಾಸಿಯಲ್ಲಿ ಭಾಗವಹಿಸಿದ ಪ್ರಮುಖ ಚರ್ಚೆಗಳಲ್ಲಿ ಒಂದಾಗಿದೆ. ಅಲ್ಲಿ ಅವರು 27 ವಿದ್ವಾಂಸರು ಮತ್ತು ಸುಮಾರು 12 ಪರಿಣತ ಪಂಡಿತರೊಂದಿಗೆ ಧಾರ್ಮಿಕ ವಿವಾದ ಚರ್ಚೆಯಲ್ಲಿ ಭಾಗವಹಿಸಿ ಜಯ ಸಾಧಿಸಿದರು. ಆ ಚರ್ಚಾ ಸಭೆಯಲ್ಲಿ 50,000 ಕ್ಕಿಂತ ಹೆಚ್ಚಿನ ಜನರು ಹಾಜರಿದ್ದರು. ಚರ್ಚೆಯ ಮುಖ್ಯ ವಿಷಯವೆಂದರೆ "ವೇದಗಳು ದೈವಿಕ (ಮೂರ್ತಿ) ಪೂಜೆಯನ್ನು ಪೂಜೆಯನ್ನು ಎತ್ತಿಹಿಡಿಯುವುದೇ?" - ಇಲ್ಲ ಎಂಬುದು ದಯಾನಂದ ಸರಸ್ವತಿಯವರ ಸಿದ್ಧಾಂತ. [೧೪]

ಆರ್ಯ ಸಮಾಜ[ಬದಲಾಯಿಸಿ]

 • ಆರ್ಯ ಸಮಾಜ-
 • ಸ್ವಾಮಿ ದಯಾನಂದ ಸರಸ್ವತಿ ಅವರು ಸ್ಥಾಪಿಸಿದ ಆರ್ಯ ಸಮಾಜವು ಹಲವಾರು ವಿಭಿನ್ನ ಧರ್ಮಗಳು ಮತ್ತು ಸಮುದಾಯಗಳ ಆಚರಣೆಗಳನ್ನು ಖಂಡಿಸುತ್ತದೆ. ಅವು ವಿಗ್ರಹ ಪೂಜೆ, ಪ್ರಾಣಿಗಳ ಬಲಿ, ತೀರ್ಥಯಾತ್ರೆಗಳು,ಪುರೋಹಿತ ವ್ಯವಸ್ಥೆ, ದೇವಾಲಯಗಳಲ್ಲಿ ಮಾಡುವ ನೈವೇದ್ಯ ಅರ್ಪಣೆಗಳು, ಜಾತಿಗಳು, ಬಾಲ್ಯ ವಿವಾಹಗಳು, ಮಾಂಸ ತಿನ್ನುವುದು ಮತ್ತು ಮಹಿಳೆಯರ ವಿರುದ್ಧ ತಾರತಮ್ಯ. ಈ ಎಲ್ಲ ಕ್ರಿಯೆಗಳೂ ವೇದದ ನಿಜ ಅರ್ಥಕ್ಕೆ ಮತ್ತು ವೇದಗಳ ಜ್ಞಾನಕ್ಕೆ ವಿರುದ್ಧವಾಗಿವೆ ಎಂದು ಅವರು ವಾದಿಸಿದರು. ಆರ್ಯ ಸಮಾಜವು ಸಿದ್ಧಾಂತವು ಮತ್ತು ಸಂಕೇತಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಸಾಮಾನ್ಯ ಅರ್ಥದಲ್ಲಿ ಮತ್ತು ತರ್ಕಕ್ಕೆ ವಿರುದ್ಧವಾದ ನಂಬಿಕೆಗಳಲ್ಲಿ ಸಂದೇಹವಾದವನ್ನು ಪ್ರೋತ್ಸಾಹಿಸುತ್ತದೆ.
 • ಆರ್ಯ ಸಮಾಜವು ಮೂಢ ನಂಬುಗೆ ಮತ್ತು ಸಂಕೇತಗಳಾದ ಮೂರ್ತಿ ಅಥವಾ ಇತರೆ ಪೂಜೆಗಳನ್ನು ವಿರೋಧಿಸುತ್ತದೆ ಮತ್ತು ಸಾಮಾನ್ಯ ಅರ್ಥದಲ್ಲಿ ಮತ್ತು ತರ್ಕಕ್ಕೆ ವಿರುದ್ಧವಲ್ಲದ ಮತ್ತು ನಾಸ್ತಿಕ ಸಂದೇಹವಾದವಲ್ಲದನ್ನು ಪ್ರೋತ್ಸಾಹಿಸುತ್ತದೆ.

ಮೂಢನಂಬಿಕೆಗಳ ವಿಚಾರದಲ್ಲಿ- ದೃಷ್ಠಿಕೋನ[ಬದಲಾಯಿಸಿ]

 • ಆ ಸಮಯದಲ್ಲಿ ಭಾರತದಲ್ಲಿ ಪ್ರಚಲಿತದಲ್ಲಿದ್ದ ಕೃತ್ರಿಮವಿದ್ಯೆ- ಮಾಟ ಮಂತ್ರ ಮತ್ತು ಜ್ಯೋತಿಷ್ಯ ಸೇರಿದಂತೆ ಇವು ಮೂಢನಂಬಿಕೆಗಳು ಎಂದು ಅವರು ಪರಿಗಣಿಸಿ ಅವನ್ನು ತೀವ್ರವಾಗಿ ಟೀಕಿಸಿದರು. ಅವರ ಪುಸ್ತಕ 'ಸತ್ಯಾರ್ಥ್ ಪ್ರಕಾಶದಲ್ಲಿ ಅವರ ಹಲವಾರು ಉಲ್ಲೇಖಗಳು ಕೆಳಕಂಡಂತಿವೆ: "ಅವರು ಮೂಢನಂಬಿಕೆಗೆ ಕಾರಣವಾಗುವ ಎಲ್ಲಾ ವಿಷಯಗಳನ್ನೂ ಅಲ್ಲಗಳೆದು ಆರ್ಯಸಮಾಜದವರು (ತಿಳಿದವರು) ಸೂಕ್ತ ಸಲಹೆಗಾರರಾಗಿರಬೇಕು, ಮತ್ತು ಅವು (ಆ ನಂಬುಗೆಗಳು) ನಿಜವಾದ ಧರ್ಮ ಮತ್ತು ವಿಜ್ಞಾನಕ್ಕೆ ವಿರೋಧವಾಗಿವೆ. ಹೀಗಾಗಿ ದೆವ್ವಗಳು (ಭೂತಗಳು) ಮತ್ತು ಆತ್ಮ (ಪ್ರೇತಾತ್ಮ) ಗಳಂತಹ ಕಾಲ್ಪನಿಕ ವಿಷಯಗಳಿಗೆ ಅವರು ಎಂದಿಗೂ ಬೆಲೆ ಅಥವಾ ಬೆಂಬಲ ನೀಡಬಾರದು."
- ಸತ್ಯಾರ್ಥ ಪ್ರಕಾಶ ಗ್ರಂಥ (ಆಧಾರ)

ಜ್ಯೋತಿಷ್ಯಶಾಸ್ತ್ರದ ಬಗೆಗೆ ಅವರು ಹೀಗೆ ಬರೆದಿದ್ದಾರೆ:[ಬದಲಾಯಿಸಿ]

(ಆಧಾರ ಪ್ಯಾರಾದ ಕೊನೆಯಲ್ಲಿ ಕೊಟ್ಟಿದೆ -ಅಧ್ಯಾಯ 2.2 ಸತ್ಯಾರ್ಥ ಪ್ರಕಾಶ ಗ್ರಂಥ. ಮತ್ತು ರೆಫೆ:೧೪ ನೊಡಿ)

 • ಈ ಅಜ್ಞಾನಿ ಜನರು ಜ್ಯೋತಿಷಿಗೆ ಹೋಗಿ "ಓ ಸ್ವಾಮಿ! ಈ ವ್ಯಕ್ತಿಗೆ ಏನೋ ತೊಂದರೆಯಾಗಿದೆ" ಎಂದು ಹೇಳಿದಾಗ ಅವರು "ಸೂರ್ಯ ಮತ್ತು ಇತರ ನಕ್ಷತ್ರಗಳು ಅವನಿಗೆ ಕ್ರೂರಿಗಳಾಗಿವೆ. ನೀವು ಪ್ರಾಯಶ್ಚಿತ್ತ ಕ್ರಿಯೆಯೊಂದನ್ನು ಮಾಡಿಸಿದರೆ, ಅಥವಾ ತಂತ್ರದ ಮಂತ್ರ ಸೂತ್ರಗಳನ್ನು ಪಠಿಸಿದರೆ, ಅಥವಾ ಪ್ರಾರ್ಥನೆಗಳನ್ನು ಹೇಳಿದರೆ, ಅಥವಾ ನಿರ್ದಿಷ್ಟ ದಾನ ಮಾಡಿದರೆ, ಅವನು ಚೇತರಿಸಿಕೊಳ್ಳುತ್ತಾನೆ. ಇಲ್ಲದಿದ್ದರೆ ನಾನು ದೀರ್ಘಾವಧಿಯ ಬಳಲುವಿಕೆಯ ನಂತರ ಅವನು ತನ್ನ ಜೀವವನ್ನು ಕಳೆದುಕೊಳ್ಳಬೇಕಾಗಿ ಬಂದರೂ ನಾನು ಆಶ್ಚರ್ಯಪಡಲಾರೆ." ಎಂದು ಜ್ಯೋತಿಷಿ ಹೇಳುವನು.
 • ಪ್ರಶ್ನೆಗಾರ - ಸರಿ, ಜ್ಯೋತಿಷಿಯವರೇ, ನಿಮಗೆ ಗೊತ್ತಾ, ಸೂರ್ಯ ಮತ್ತು ಇತರ ನಕ್ಷತ್ರಗಳು ನಮ್ಮ ಈ ಭೂಮಿಯಂತೆಯೇ ನಿರ್ಜೀವ ವಸ್ತುಗಳಾಗಿವೆ. ಅವರು ಬೆಳಕು, ಶಾಖವನ್ನು ಕೊಡುವುದು ಬಿಟ್ಟು ಏನೂ ಮಾಡಲಾರವು. ಮಾನವನಂತೆ ಭಾವೋದ್ರೇಕಗಳನ್ನು, ಆನಂದ ಮತ್ತು ಕೋಪವನ್ನು ಹೊಂದಿದ ಜೀವವಿರವವುಗಳಾಗಿ ನೀವು ಅವುಗಳನ್ನು ತೆಗೆದುಕೊಳ್ಳುತ್ತೀರಾ? ನೋವು ಮತ್ತು ದುಃಖವನ್ನು ಉಂಟುಮಾಡುವ, ಮತ್ತು ಉಪಶಮನ ಕ್ರಿಯೆ ಮಾಡಿದಾಗ, ಮಾನವರ ಮೇಲೆ ಸುಖ ಸಂತೋಷವನ್ನು ಕೊಡುತ್ತವೆಯೇ?.
 • ಜ್ಯೋತಿಷಿ - ಕೆಲವು ಜನರು ಶ್ರೀಮಂತರು ಮತ್ತು ಇತರರು ಬಡವರಾಗಿದ್ದಾರೆ, ಕೆಲವರು ಆಡಳಿತಗಾರರು, ಇತರರು ತಮ್ಮ ಪ್ರಜೆಗಳಾಗಿದ್ದಾರೆ? ಇದು ನಕ್ಷತ್ರಗಳ ಪ್ರಭಾವದ ಮೂಲಕವಲ್ಲವೇ!,
 • ಪ್ರಶ್ನೆಗಾರ. - ಇಲ್ಲ, ಅವು ಅವರವರ ಎಲ್ಲ ಕಾರ್ಯಗಳ ಫಲಿತಾಂಶವಾಗಿದೆ .... ಒಳ್ಳೆಯದು ಅಥವಾ ಕೆಟ್ಟದು.
 • ಜ್ಯೋತಿಷ್ಯರು. - ನಕ್ಷತ್ರಗಳ ವಿಜ್ಞಾನವು ಸುಳ್ಳೇ?
 • ಪ್ರಶ್ನೆ .. - ಇಲ್ಲ, ಗಣಿತ, ಬೀಜಗಣಿತ, ರೇಖಾಗಣಿತ, ಇತ್ಯಾದಿಗಳನ್ನು ಒಳಗೊಂಡಿರುವ ಅದರ ಭಾಗವಾಗಿ ಮತ್ತು ಖಗೋಳವಿಜ್ಞಾನದ ರೀತಿಯಿಂದ ಸರಿಹೋಗುತ್ತದೆ. ಆದರೆ ಮನುಷ್ಯರು ಮತ್ತು ಅವರ ಕ್ರಿಯೆಗಳ ಮೇಲೆ ನಕ್ಷತ್ರಗಳ ಪ್ರಭಾವವನ್ನು ಪರಿಗಣಿಸುವ ಮತ್ತು ಜ್ಯೋತಿಷ್ಯ ಎಂಬ ಹೆಸರಿನಿಂದ ಪ್ರಭಾವಬೀರುವ ಇತರ ಭಾಗವು ಸುಳ್ಳು.
- ಅಧ್ಯಾಯ 2.2 ಸತ್ಯಾರ್ಥ ಪ್ರಕಾಶ ಗ್ರಂಥ.
 • ಅವರು ಜ್ಯೋತಿಷ ಶಾಸ್ತ್ರ ಮತ್ತು ಫಲ ಜ್ಯೋತಿಷ್ಯಶಾಸ್ತ್ರದ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಮಾಡಿದ್ದಾರೆ, ಫಲಜ್ಯೋತಿಷ್ಯವನ್ನು ವಂಚನೆ ಎಂದು ಕರೆದಿದ್ದಾರೆ.
 • "ನಂತರ, ಅವರು ಜ್ಯೋತಿಷ ಶಾಸ್ತ್ರವನ್ನು ಅಧ್ಯಯನ ಮಾಡಬೇಕು - ಇದರಲ್ಲಿ ಅಂಕಗಣಿತ, ಬೀಜಗಣಿತ, ರೇಖಾಗಣಿತ/ ಜಿಯೊಮೆಟ್ರಿ, ಭೂಗೋಳ ಶಾಸ್ತ್ರ, ಭೂವಿಜ್ಞಾನ ಮತ್ತು ಖಗೋಳ ವಿಜ್ಞಾನ ಇವು ಎರಡು ವರ್ಷಗಳ ಅಧ್ಯಯನ ಒಳಗೊಂಡಿರುತ್ತದೆ. ಈ ವಿಜ್ಞಾನಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ಹೊಂದಿರಬೇಕು, ಅದರ ಖಗೋಳ ಅಧ್ಯಯನ ಸಲಕರಣೆಗಳ ಸರಿಯಾದ ನಿರ್ವಹಣೆ, ಅದರ ವ್ಯವಸ್ಥೆಯನ್ನು ನಿರ್ವಹಿಸುವುದು, ಮತ್ತು ಅವುಗಳು ಹೇಗೆ ಬಳಸಬೇಕೆಂದು ತಿಳಿಯುವುದು ಮುಖ್ಯ. ಆದರೆ ಅವರು ನಕ್ಷತ್ರಗಳ- ರಾಶಿಗಳ ಪ್ರಭಾವ, ಮತ್ತು ಮನುಷ್ಯನ ಜೀವನದ ಭವಿಷ್ಯವನ್ನು ಅವನ ಮುಂದಿನ ಆಗುಹೋಗುಗಳನ್ನು ನಿರ್ಧರಿಸುವುದು, ಜಾತಕಗಳ ಮಂಗಳಕರ ಮತ್ತು ಅಮಂಗಳವಾದ ಸಮಯ, ಇತ್ಯಾದಿ ಪ್ರಭಾವಗಳ ಬಗ್ಗೆ- ಪರಿಗಣಿಸುವ ಫಲಜ್ಯೋತಿಷ್ಯವನ್ನು ವಂಚನೆಯಾಗಿ ಪರಿಗಣಿಸಬೇಕು - ಮತ್ತು ಈ ವಿಷಯದ ಬಗ್ಗೆ ಯಾವುದೇ ಪುಸ್ತಕಗಳನ್ನು ಕಲಿಯಲು ಅಥವಾ ಕಲಿಸಲು ಎಂದಿಗೂ ಪ್ರೋತ್ಸಾಹಿಸಬಾರದು, ಎಂದಿದ್ದಾರೆ
- ಇಂಗ್ಲಿಷ್ ಆವೃತ್ತಿಯಾದ ಸತ್ಯಾರ್ಥ ಪ್ರಕಾಶದ "ಅಧ್ಯಯನದ ಯೋಜನೆ" ಪುಟದಡಿಯಲ್ಲಿ[೧೫]

ಆರ್ಯ ಸಮಾಜದ ಮುಖ್ಯ ತತ್ತ್ವಗಳು[ಬದಲಾಯಿಸಿ]

 • ವೇದಗಳ ಕಾಲದಲ್ಲಿ ಚಾತುರ್ವಣ್ರ್ಯ ವ್ಯವಸ್ಥೆ ಇರಲಿಲ್ಲ. ಅಂದಮೇಲೆ ಇವುಗಳಲ್ಲಿ ಶ್ರೇಷ್ಠ, ಕನಿಷ್ಠವೆಂಬ ಭಾವನೆಯೂ ವೇದಗಳಲ್ಲಿ ಕಾಣವುದಿಲ್ಲ. ಇವುಗಳೆಲ್ಲವೂ ಅನಂತರ ಬಂದ ಸ್ಮøತಿಕಾರಕ ಕಲ್ಪನೆ ಮತ್ತು ರಚನೆಯಿಂದಾದವು. ಈ ವರ್ಣ ಪದ್ಧತಿ ಆರ್ಯ ಜನಾಂಗದ ಏಳಿಗೆಗೂ ಒಗ್ಗಟ್ಟಿಗೂ ಪ್ರತಿಬಂಧಕವಾಗಿದೆಯೆಂದು ದಯಾನಂದರ ಅಭಿಪ್ರಾಯವಾಗಿತ್ತು. ನಾಲ್ಕು ವರ್ಣಗಳೇ ಮಾನವ ಕಲ್ಪಿತ, ವೇದ ವಿರುದ್ಧ ಮತ್ತು ಅಪ್ರಾಮಾಣಿಕ ಅಂದಮೇಲೆ, ಐದನೆಯ ಪಂಚಮವರ್ಗಕ್ಕೆ ಆಸ್ಪದವಿಲ್ಲವೆಂದಾಯಿತು. ಅನೇಕ ಶತಮಾನಗಳಿಂದ ಕೆಲವರನ್ನು ಪಂಚಮ, ಹೊಲೆಯ, ಮಾದಿಗ- ಇತ್ಯಾದಿ ವಿವಿಧ ಶಬ್ದಗಳಿಂದ ಕರೆದು ಅವರನ್ನು ಅಸ್ಪøಶ್ಯರೆಂದು ಸಮಾಜಕ್ಕೆ ಸೇರಿದವರಲ್ಲವೆಂದು ಪರಿಗಣಿಸುವುದು ದಯಾನಂದರಿಗೆ ತೀರ ಅನ್ಯಾಯವೆಂದೂ ಅಸಹನೀಯವೆಂದೂ ಅನಿಸಿತು. ಈ ಪದ್ಧತಿಯನ್ನೇ ತೊಡೆದುಹಾಕಬೇಕೆಂದು ಅವರು ವಾದಿಸಿದರು.
 • ಒಂದು ಸಮಾಜದಲ್ಲಿ ಜನ್ಮತಾಳಿದವರೆಲ್ಲರೂ ಸಮಾನಾವಕಾಶ ಉಳ್ಳವರಾಗಬೇಕೆಂದೂ ಪ್ರತಿಯೊಬ್ಬರಿಗೂ ವೇದದ ಉಪದೇಶ ದೊರೆಯಬೇಕೆಂದೂ ದಯಾನಂದರು ವಾದಿಸಿದರು. ಅಷ್ಟೇ ಅಲ್ಲದೆ, ಭಾರತೀಯರಲ್ಲದ ಪ್ರಪಂಚದ ಎಲ್ಲ ಜನಾಂಗಗಳಿಗೂ ವೇದದ ಉಪದೇಶವನ್ನು ಮುಟ್ಟಿಸುವ ಪ್ರಯತ್ನವನ್ನು ಮಾಡಬೇಕೆಂದೂ ಅವರು ಸಾರಿದರು. ವೇದಗಳ ಸಂದೇಶ ಕೇವಲ ಭಾರತೀಯರನ್ನು ಮಾತ್ರವಲ್ಲದೆ ಪ್ರಪಂಚದಲ್ಲಿರುವ ಮಾನವ ಕೋಟಿಯನ್ನೂ ಉದ್ಧಾರ ಮಾಡುವಂಥಹುದೆಂದು ಅವರ ದೃಢ ವಿಶ್ವಾಸವಾಗಿತ್ತು.
 • ಆತ್ಮಕ್ಕೆ ಯಾವ ಲಿಂಗಭೇದವೂ ಇಲ್ಲ. ಆದಕಾರಣ ಆತ್ಮಸ್ವರೂಪಿಗಳಾದ ಪುರುಷರೂ ಸ್ತ್ರೀಯರೂ ತಮ್ಮ ವಿಕಾಸವನ್ನು ಮಾಡಿಕೊಳ್ಳಲು ಸಮಾನಾವಕಾಶ ವಿರಬೇಕೆಂದು ದಯಾನಂದರು ಒತ್ತಿ ಹೇಳಿದರು. ಪುರುಷರಿಗಿರುವಂತೆ ಸ್ತ್ರೀಯರಿಗೂ ಶಿಕ್ಷಣ ಪಡೆಯುವ ಅವಕಾಶ, ಉಪನಯನವಾಗಿ ವೇದಗಳನ್ನೋದುವ ಅವಕಾಶ, ವಿವಾಹ, ವಿಧವೆಯರಿಗೆ ಪುನರ್ವಿವಾಹ-ಇವುಗಳಿರಬೇಕೆಂದು ಅವರ ಉದ್ದೇಶವಾಗಿತ್ತು. ಆರ್ಯ ಸಮಾಜ ಈ ದಿಸೆಯಲ್ಲಿ ಸ್ತ್ರೀಯರ ಏಳಿಗೆಗಾಗಿ ಕೈಗೊಂಡ ಕಾರ್ಯಗಳೆಲ್ಲವೂ ಅವರು ಒದಗಿಸಿದ ಪ್ರೇರಣೆಯಿಂದ ಆದುವೇ. ಸ್ತ್ರೀಯರಿಗೆ ನಿಕೃಷ್ಟ ಸ್ಥಾನವನ್ನು ಕೊಟ್ಟು ಅನೇಕ ಶತಮಾನಗಳಿಂದ ಅವರನ್ನು ಅನೇಕ ಕಷ್ಟಕಾರ್ಪಣ್ಯಗಳಿಗೆ ಗುರಿ ಮಾಡಿದ್ದ ಹಿಂದೂ ಸಮಾಜಕ್ಕೆ ದಯಾನಂದರ ವಿಚಾರಗಳು ತೀರ ಕ್ರಾಂತಿಕಾರಿಯೆಂದು ತೋರಿದುವು. ದಯಾನಂದರು ತಮ್ಮ ಅನುಯಾಯಿಗಳಲ್ಲಿ ಪ್ರಚಂಡವಾದ ದೇಶಭಕ್ತಿಯನ್ನೂ ಹೊಸ ಸುಧಾರಣೆಗಳು ವಿಷಯದಲ್ಲಿ ಧೀರರಂತೆ ವರ್ತಿಸುವ ಮನೋಧರ್ಮವನ್ನೂ ತುಂಬಿಸಿದ್ದರು. ಆದ್ದರಿಂದ ಆರ್ಯ ಸಮಾಜ ಪ್ರಭಾವ ಬೀರಿದ ಸ್ಥಳಗಳಲ್ಲಿ ಈ ಸುಧಾರಣೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳು ಯಶಸ್ವಿಯಾದುವು.
 • ಸಾಂಪ್ರದಾಯಿಕ ಹಿಂದೂ ಮತದಲ್ಲಿ, ಪರ ಮತದವರನ್ನು ಹಿಂದೂ ಮತಕ್ಕೆ ಸೇರಿಸಿಕೊಳ್ಳುವ ಹಂಬಲವೂ ಇಲ್ಲ ಅವಕಾಶವೂ ಇಲ್ಲ. ಈ ಪರಿಸ್ಥಿತಿಯನ್ನು ಗಮನಿಸಿದ ದಯಾನಂದರು, ಇತರ ಮತಗಳಿಂದ ಹೊಸತಾಗಿ ಹಿಂದೂ ಮತಕ್ಕೆ ಸೇರಿಸುವ ಪ್ರಯತ್ನ ಮಾಡದಿದ್ದರೂ ಮತಾಂತರ ಹೊಂದಿದ್ದ ಹಿಂದೂಗಳು ಮತ್ತೆ ಹಿಂದೂ ಮತಕ್ಕೆ ಹಿಂದಿರುಗಬೇಕೆಂಬ ಇಚ್ಚೆ ಪಟ್ಟಲ್ಲಿ ಅದಕ್ಕೆ ಅವಕಾಶವೂ ವ್ಯವಸ್ಥೆಯೂ ಇರಬೇಕೆಂಬ ಅಭಿಪ್ರಾಯಪಟ್ಟರು. ಅದೇ ಮೇರೆಗೆ ಅಂಥವರನ್ನು ಶುದ್ದಿ ಮಾಡಿ ಅಂದರೆ ಹೋಮ, ಹವನ, ನಾಮಕರಣಾಧಿಗಳನ್ನು ಮಾಡಿ, ಅವರನ್ನು ಆರ್ಯ ಸಮಾಜಕ್ಕೆ ಸೇರಿಸಿಕೊಳ್ಳುವ ಪ್ರಯತ್ನಗಳನ್ನು ರೂಢಿಗೆ ತಂದರು. ಈ ಕಾರ್ಯಕ್ರಮಗಳಿಂದ ಆರ್ಯ ಸಮಾಜ ಇತರ ಮತೀಯರ ತೀವ್ರ ಆಗ್ರಹಕ್ಕೆ ಗುರಿಯಾಯಿತು. ಈ ಆಗ್ರಹಕ್ಕೆ ಲೇಖಾರಾಂ ಮತ್ತು ಶ್ರದ್ಧಾನಂದರು ಬಲಿಯೂ ಆದರು. ಆರ್ಯ ಸಮಾಜದ ಈ ಪ್ರಯತ್ನದಿಂದ ಹಿಂದು ಸಮಾಜದ ಬಲ ವೃದ್ಧಿಗೊಂಡಿತು.[೧೬]

ಇತರ ಧರ್ಮಗಳ ಬಗೆಗೆ ದಯಾನಂದರ ಪರಿವೀಕ್ಷಣೆಗಳು[ಬದಲಾಯಿಸಿ]

ದಯಾನಂದ ಸರಸ್ವತಿ ಹಿಂದೂಧರ್ಮ, ಇಸ್ಲಾಂ ಧರ್ಮ, ಬೌದ್ಧಧರ್ಮದ ನಂತರದ ನಾಲ್ಕು ಶಾಖೆಗಳು, ಜೈನ ಧರ್ಮ, ಕ್ರಿಶ್ಚಿಯನ್ ಧರ್ಮ, ಸಿಖ್ ಧರ್ಮಗಳ ಬಗೆಗೆ ವಿಮರ್ಶಾತ್ಮಕ ಹಾಗೂ ಖಂಡನಾತ್ಮಕವಾಗಿ ತಮ್ಮ ಪುಸ್ತಕ ಸತ್ಯಾರ್ಥ ಪ್ರಕಾಶದಲ್ಲಿ ರಚಿಸಿರುವರು. [24]

ಸ್ವಾಮಿ ದಯಾನಂದ ಸರಸ್ವತಿಯವರ ಹತ್ಯೆ ಪ್ರಯತ್ನಗಳು[ಬದಲಾಯಿಸಿ]

 • ಸ್ವಾಮಿ ದಯಾನಂದ ಅವರನ್ನು ಹತ್ಯೆ ಮಾಡುವ ಅನೇಕ ವಿಫಲ ಪ್ರಯತ್ನಗಳಿಗೆ ಗುರಿಯಾದರು. [೧೭] ಅವರ ಬೆಂಬಲಿಗರ ಪ್ರಕಾರ, ಅವರು ಕೆಲವು ಸಂದರ್ಭಗಳಲ್ಲಿ ವಿಷಪ್ರಾಶನಕ್ಕೆ ಗುರಿಯಾಗಿದ್ದರು, ಆದರೆ ಅವರ ಹಠ ಯೋಗದ ನಿಯಮಿತ ಅಭ್ಯಾಸದಿಂದಾಗಿ ಅವರು ಇಂತಹ ಎಲ್ಲಾ ಹತ್ತೆಯ ಪ್ರಯತ್ನಗಳಿಂದ ಪಾರಾದರು. ಆಕ್ರಮಣಕಾರರು ಒಮ್ಮೆ ನದಿಯೊಂದರಲ್ಲಿ ಇವರನ್ನು ಮುಳುಗಿಸಲು ಪ್ರಯತ್ನಿಸಿದರೆಂದು ಒಂದು ಕಥೆ ಹೇಳುತ್ತದೆ. ಆದರೆ ದಯಾನಂದರು ಆಕ್ರಮಣಕಾರರನ್ನೇ ನದಿಗೆ ಎಳೆದು ಹಾಕಿದ್ದರು. ಆದರೆ ಆಕ್ರಮಣಕಾರರು ಮುಳುಗುವುದಕ್ಕೆ ಮುಂಚಿತವಾಗಿಯೇ ಅವರನ್ನು ದಯಾನಂದರೇ ಪಾರು ಮಾಡಿದರು.[೧೮] ಗಂಗಾನದಿಯ ನದಿಯ ಬಳಿಯಲ್ಲಿ ಧ್ಯಾನ ಮಾಡುತ್ತಿರುವಾಗ, ಇಸ್ಲಾಂ ಧರ್ಮವನ್ನು ಟೀಕೆಮಾಡಿದ್ದಕ್ಕಾಗಿ ಅವರನ್ನು ಟೀಕೆಗೆ ಒಳಗಾದ ಮುಸ್ಲಿಮರು ಆಕ್ರಮಣ ಮಾಡಿದ್ದರು, ಎಂದು ಇನ್ನೊಂದು ಕತೆ ಹೇಳುತ್ತದೆ. ಅವರು ದಯಾನಂದರನ್ನು ನೀರಿನಲ್ಲಿ ಮುಳುಗಿಸಿದರು, ಆದರೂ ದಯಾನಂದರು ಜೀವ ಉಳಿಸಿಕೊಂಡರು; ಹೇಗೆಂದರೆ ಅವರ ಪ್ರಾಣಾಯಾಮದ ಅಭ್ಯಾಸವು ಅವರನ್ನು ದಾಳಿಕೋರರು ಬಿಡುವವರೆಗೂ ನೀರಿನ ಅಡಿಯಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿತು. [೧೯]

ಸ್ವಾಮಿ ದಯಾನಂದರ ಹತ್ಯೆ[ಬದಲಾಯಿಸಿ]

 • 1883 ರಲ್ಲಿ, ಜೋಧ್ಪುರದ ಸ್ವಾಮಿ ಮಹಾರಾಜ, ಜಸ್ವಂತ್ ಸಿಂಗ್ II, ದಯಾನಂದ ಅವರನ್ನು ತಮ್ಮ ಅರಮನೆಯಲ್ಲಿ ಉಳಿಯಲು ಆಹ್ವಾನಿಸಿದರು. ಮಹಾರಾಜರು ದಯಾನಂದರ ಅನುಯಾಯಿಯಾಗಲು ಉತ್ಸುಕನಾಗಿದ್ದರು, ಮತ್ತು ಅವನ ಬೋಧನೆಗಳನ್ನು ಕಲಿಯಲು ಬಯಸಿದರು. ತಮ್ಮ ವಾಸ್ತವ್ಯದ ಸಮಯದಲ್ಲಿ, ದಯಾನಂದರು, ಒಮ್ಮೆ ಮಹಾರಾಜರ ವಿಶ್ರಾಂತಿ ಕೋಣೆಗೆ ಹೋದರು ಮತ್ತು ಅಲ್ಲಿ ನನ್ಹಿ ಜಾನ್ ಎಂಬ ನೃತ್ಯ ಹುಡುಗಿಯ ಜೊತೆ ಅವರ ಇರುವುದನ್ನು ನೋಡಿದರು. ದಯಾನಂದರು ಮಹಾರಾಜನನ್ನು ಕುರಿತು, ಆ ಹುಡುಗಿಯನ್ನೂ ಮತ್ತು ಎಲ್ಲಾ ಅನೈತಿಕ ಚಟುವಟಿಕೆಗಳನ್ನೂ ತ್ಯಜಿಸಲು ಮತ್ತು ನಿಜವಾದ ಆರ್ಯನ್ನನಂತೆ ಧರ್ಮವನ್ನು ಅನುಸರಿಸಲು ಕೇಳಿದರು. ದಯಾನಂದ ಅವರ ಸಲಹೆ ನಾನ್ಹಿ ನರ್ತಕಿಯನ್ನು ಕೆರಳಿಸಿತು, ಆ ನರ್ತಕಿಯು ಅವರ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದಳು.[೨೦]
 • ದಿ.29 ಸೆಪ್ಟೆಂಬರ್ 1883 ರಂದು, ದಯಾನಂದ ಸರಸ್ವತಿ ಅವರ ಅಡಿಗೆಯವ ಜಗನ್ನಾಥನು ಸಣ್ಣ ಗಾಜಿನ ಮಿಶ್ರಣವನ್ನು ಅವರ ರಾತ್ರಿಯ ಹಾಲಿಗೆ ಬೆರೆಸಲು ನರ್ತಕಿ ಲಂಚ ನೀಡಿದಳು. [36] ದಯಾನಂದರಿಗೆ ರಾತ್ರಿ ಮಲುಗುವ ಮುಂಚೆ ಗಾಜಿನ ಲೋಟದಲ್ಲಿ ಹಾಲು ನೀಡಲಾಗುತ್ತಿತ್ತು. ಇದನ್ನು ಅವರು ತಕ್ಷಣವೇ ಕುಡಿಯುತ್ತಿದ್ದರು. ಹಾಗೆ ಕುಡಿದ ನಂತರ ಹಲವು ಹೊಟ್ಟೆ ನೋವಿನಿಂದ ನರಳುತ್ತಿದ್ದರು ಮತ್ತು ದುಃಖಕರ ನೋವನ್ನು ಅನುಭವಿಸುತ್ತಿದ್ದರು. ಮಹಾರಾಜನು ವಿಷಯ ತಿಳಿದ ಅವರಿಗೆ ವೈದ್ಯರ ಸೇವೆಗಳನ್ನು ತ್ವರಿತವಾಗಿ ವ್ಯವಸ್ಥೆಗೊಳಿಸಿದನು. ಆದಾಗ್ಯೂ, ವೈದ್ಯರು ಆಗಮಿಸಿದಾಗ, ಅವನ ಸ್ಥಿತಿಯು ಹದಗೆಟ್ಟಿತು, ಮತ್ತು ಅವನು ದೊಡ್ಡಪ್ರಮಾಣದಲ್ಲಿ ರಕ್ತಸ್ರಾವ ವಾಗಲು ತೊಡಗಿತು. ದಯಾನಂದ ಸರಸ್ವತಿಯವರ ನೋವು ಸಂಕಟವನ್ನು ನೋಡಿದ ನಂತರ, ತನ್ನ ಕಾರ್ಯಕ್ಕೆ ಬಹಳ ನೊಂದುಕೊಂಡು ಜಗನ್ನಾಥನು ತಪ್ಪಿತಸ್ಥನಾಗಿದ್ದು ದಯಾನಂದ ಸರಸ್ವತಿಯವರಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಂಡನು. , ದಯಾನಂದರು ತಮ್ಮ ಮರಣಶಯ್ಯೆಯಲ್ಲಿ ಅವನನ್ನು ಕ್ಷಮಿಸಿ, ಅವನ ಕೈಗೆ ಹಣದ ಚೀಲವನ್ನು ಕೊಟ್ಟು, ಮಹಾರಾಜರು ಇವನ ಅಪರಾಧವನ್ನು ಕಂಡುಹಿಡಿದು ಮರಣದಂಡನೆಗೆ ಗುರಿಪಡಿಸುವುದಕ್ಕೆ ಮುಂಚಿತವಾಗಿ ಅವನನ್ನು ರಾಜ್ಯದಿಂದ ಪಲಾಯನ ಮಾಡಲು ಹೇಳುದರು. ಮತ್ತು ಕೂಡಲೆ ಅವನನ್ನು ಕಳಿಸಿಕೊಟ್ಟರು[೨೧]
 • ನಂತರ, ಮಹಾರಾಜರು ದಯಾನಂದ ಸರಸ್ವತಿಯವರನ್ನು ಮೌಂಟ್ ಅಬುಗೆ ಕಳುಹಿಸಬೇಕೆಂಬ ಬ್ರಿಟಿಷರ ಪ್ರತಿನಿಧಿ ರೆಸಿಡೆನ್ಸಿಯವರ ಸಲಹೆಯ ಪ್ರಕಾರ, ಮೌಂಟ್ ಅಬುಗೆ ಕಳುಹಿಸಬೇಕಾಯಿತು. ಅಲ್ಲಗೆ ಹೋದ ಆವರು ಅಬುವಿನಲ್ಲಿ ಸ್ವಲ್ಪ ಸಮಯದವರೆಗೆ ಉಳಿದ ನಂತರ, ಅವನ್ನು ಅಜ್ಮೀರಿಗೆ ಉತ್ತಮ ವೈದ್ಯಕೀಯ ಆರೈಕೆಗಾಗಿ ಕಳುಹಿಸಲಾಯಿತು. ಅಲ್ಲಿ ದಿ.26 ಅಕ್ಟೋಬರ್ 1883 ರಂದು ವೈದ್ಯರು ಪರೀಕ್ಷಿಸಿದಾಗ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ ಮತ್ತು ಅವರು ಮಂತ್ರಗಳನ್ನು ಪಠಿಸುತ್ತಾ, 1883 ರ ಅಕ್ಟೋಬರ್ 30 ರಂದು ಬೆಳಗ್ಗೆ 6 ಗಂಟೆಗೆ ನಿಧನರಾದರು. ಆ ದಿನ ಹಿಂದೂ ಪಂಚಾಂಗದ ಪ್ರಕಾರ ದೀಪಾವಳಿ ಉತ್ಸವದೊಂದಿಗೆ ಹೊಂದಿಕೆಯಾಯಿತು.[೨೨][೨೩]

ಕೊಡಿಗೆಗಳು[ಬದಲಾಯಿಸಿ]

 • ರೋಹ್ಟಕ್ ನ ಮಹರ್ಷಿ ದಯಾನಂದ್ ವಿಶ್ವವಿದ್ಯಾನಿಲಯ, ಅಜ್ಮೀರ್ ನ ಮಹರ್ಷಿ ದಯಾನಂದ ಸರಸ್ವತಿ ವಿಶ್ವವಿದ್ಯಾನಿಲಯ, ಜಲಂಧರ್ ನ ಡಿಎವಿ ವಿಶ್ವವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ. ಡಿ.ಎ.ವಿ. ಕಾಲೇಜ್ ವ್ಯವಸ್ಥಾಪನಾ ಸಮಿತಿಯ ಅಡಿಯಲ್ಲಿ 800 ಕ್ಕಿಂತ ಹೆಚ್ಚಿನ ಶಾಲೆಗಳು ಮತ್ತು ಕಾಲೇಜುಗಳು, ಅಜ್ಮೀರ್ ನ ದಯಾನಂದ್ ಕಾಲೇಜ್ ಅವರ ಹೆಸರಿನಲ್ಲಿದೆ.. ಕೈಗಾರಿಕೋದ್ಯಮಿ ನಾನ್ ಜೀ ಕಾಳಿದಾಸ್ ಮೆಹ್ತಾ ಮಹರ್ಷಿ ದಯಾನಂದ ಸೈನ್ಸ್ ಕಾಲೇಜ್ ಅನ್ನು ನಿರ್ಮಿಸಿದರು ಮತ್ತು ಅದನ್ನು ಸ್ವಾಮಿ ದಯಾನಂದ ಸರಸ್ವತಿಯವರ ನೆನಪಿಗೆ ಹೆಸರಿಸಿದ ನಂತರ ಪೋರಬಂದರ್ನ ಶಿಕ್ಷಣ ಸೊಸೈಟಿಗೆ ದಾನ ಮಾಡಿದರು.
 • ದಯಾನಂದ ಸರಸ್ವತಿ ಅವರ ದೃಷ್ಟಿಕೋನಗಳು ಭಾರತದ ಸ್ವಾತಂತ್ರ್ಯ ಚಳವಳಿಯ ಮೇಲೆ ಬಹಳ ಪ್ರಭಾವ ಬೀರಿತು. ಅವರ ಬರಹಗಳನ್ನು ಲಂಡನ್ನಲ್ಲಿ ಇಂಡಿಯಾ ಹೌಸ್ ಸ್ಥಾಪಿಸಿದ ಶ್ಯಾಮ್ಜಿ ಕೃಷ್ಣ ವರ್ಮಾ ಸೇರಿದಂತೆ ವಿವಿಧ ಬರಹಗಾರರು ಬಳಸಿದ್ದಾರೆ. ಇತರ ಕ್ರಾಂತಿಕಾರಿಗಳ ಮೇಲೆ ಅವರು ಪ್ರಭಾವ ಬೀರಿದ್ದಾರೆ; ಸುಭಾಷ್ ಚಂದ್ರ ಬೋಸ್; ಲಾಲಾ ಲಜಪತ್ ರಾಯ್; ಮಡಮ್ ಕಾಮಾ; ವಿನಾಯಕ್ ದಾಮೋದರ್ ಸಾವರ್ಕರ್; ಲಾಲಾ ಹಾರ್ಡ್ಯಾಲ್; ಮದನ್ ಲಾಲ್ ಧಿಂಗ್ರಾ; ರಾಮ್ ಪ್ರಸಾದ್ ಬಿಸ್ಮಿಲ್ಲಾ; ಮಹಾದೇವ್ ಗೋವಿಂದ ರಾನಡೆ; ಸ್ವಾಮಿ ಶ್ರದ್ಧಾನಂದ; ಎಸ್. ಸತ್ಯಮೂರ್ತಿ; ಪಂಡಿತ್ ಲೆಖ್ ರಾಮ್; ಮಹಾತ್ಮ ಹಂಸರಾಜ್; ರಾಜೀವ್ ದೀಕ್ಷಿತ್; ಮತ್ತು ಇತರರು ಇವರ ಬರಹ ಮತ್ತು ಕಾರ್ಯದಿಂದ ಪ್ರಭಾವ ಹೊಂದಿದ್ದಾರೆ. ಅವರು ಭಗತ್ ಸಿಂಗ್ ಅವರ ಮೇಲೆ ಗಮನಾರ್ಹವಾದ ಪ್ರಭಾವವನ್ನು ಬೀರಿದ್ದರು. [37] ಪ್ರಾಥಮಿಕ ಶಾಲೆಯ ಮುಗಿದ ನಂತರ ಸಿಂಗ್, ಲಾಹೋರಿನಲ್ಲಿರುವ ಮೋಹನ್ ಲಾಲ್ ರಸ್ತೆಯ ದಯಾನಂದ ಆಂಗ್ಲೊ ವೇದಿಕ ಮಧ್ಯಮ ಶಾಲೆಗೆ ಸೇರಿಕೊಂಡರು. [೨೪]
 • ಶಿವರಾತ್ರಿ ದಿನದಂದು ಸರ್ವಾಪಲ್ಲಿ ರಾಧಾಕೃಷ್ಣನ್, 24 ಫೆಬ್ರವರಿ 1964, ದಯಾನಂದ ಬಗ್ಗೆ ಬರೆದಿದ್ದಾರೆ:- “ಆಧುನಿಕ ಭಾರತದ ತಯಾರಕರಲ್ಲಿ ಸ್ವಾಮಿ ದಯಾನಂದ ಅತ್ಯುನ್ನತ ಸ್ಥಾನ ಪಡೆದಿದ್ದಾರೆ. ಅವರು ದೇಶದ ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಮೋಚನೆಗಾಗಿ ದಣಿವರಿಯದ ಕೆಲಸ ಮಾಡಿದ್ದರು. ಹಿಂದೂಧರ್ಮವನ್ನು ವೈದಿಕ ತತ್ತ್ವದ ಅಡಿಪಾಯಗಳಿಗೆ ಪುನಃ ಕರೆದೊಯ್ಯುಲು ಅವರು ಮಾರ್ಗದರ್ಶನ ನೀಡಿದರು. ಸಮಾಜವನ್ನು ಶುದ್ಧವಾದ ಪೂರ್ಣ ಪ್ರಭಾವದೊಂದಿಗೆ ಸುಧಾರಿಸಲು ಅವರು ಪ್ರಯತ್ನಿಸಿದರು, ಅದು ಮತ್ತೆ ಅಗತ್ಯವಾಗಿತ್ತು. ಭಾರತೀಯ ಸಂವಿಧಾನದಲ್ಲಿ ಪರಿಚಯಿಸಲಾದ ಕೆಲವು ಸುಧಾರಣೆಗಳು ಅವರ ಬೋಧನೆಗಳ ಮೂಲಕ ಪ್ರೇರೇಪಿಸಲ್ಪಟ್ಟವು”. [೨೫]
 • ಅವರ ಜೀವನದಲ್ಲಿ ದಯಾನಂದರು ಭೇಟಿ ನೀಡಿದ ಸ್ಥಳಗಳು ಅನೇಕ ವೇಳೆ ಸಾಂಸ್ಕೃತಿಕವಾಗಿ ಬದಲಾದವು. ಅದಕ್ಕೆ ಉದಾಹರಣೆ- ಅವರ ಭೇಟಿಯ ನಣತರ ಜೋಧಪುರ್ ಹಿಂದಿ ಭಾಷೆಯನ್ನು ಮುಖ್ಯ ಭಾಷೆಯಾಗಿ ಅಳವಡಿಸಿಕೊಂಡಿತು., ಮತ್ತು ನಂತರ ದಿನಗಳಲ್ಲಿ ರಾಜಸ್ಥಾನ ಅದೇ ರೀತಿ ಮಾಡಿತು.. [೨೬]
 • ಇತರ ಅಭಿಮಾನಿಗಳಲ್ಲಿ ದಯಾನಂದನನ್ನು ಗಮನಾರ್ಹ ಮತ್ತು ಅನನ್ಯ ವ್ಯಕ್ತಿ ಎಂದು ಪರಿಗಣಿಸಿದವರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು, ರಾಮಕೃಷ್ಣ, ಬಿಪಿನ್ ಚಂದ್ರ ಪಾಲ್, ವಲ್ಲಭಭಾಯಿ ಪಟೇಲ್, ಶ್ಯಾಮಾ ಪ್ರಸಾದ್ ಮುಖರ್ಜಿ ಮತ್ತು ರೊಮೈನ್ ರೋಲ್ಯಾಂಡ್ ಇವರೂ ಅವರೊಡನೆ ಸೇರಿದ್ದಾರೆ. [೨೭]
 • ಅಮೇರಿಕನ್ ಸ್ಪಿರಿಚ್ಯುಯಲಿಸ್ಟ್ ಆಂಡ್ರ್ಯೂ ಜಾಕ್ಸನ್ ಡೇವಿಸ್ ಅವರು ದಯಾನಂದರ ಪ್ರಭಾವವನ್ನು ಈ ರೀತಿ ವಿವರಿಸಿದರು, ಅವರು ದಯಾನಂದರು "ದೇವರ ಮಗ" ಎಂದು ಕರೆದರು ಮತ್ತು ರಾಷ್ಟ್ರದ ಗೌರವ ಸ್ಥಿತಿಯನ್ನು ಪುನಃಸ್ಥಾಪಿಸಿದ್ದಾರೆಂದು ಅವರನ್ನು ಶ್ಲಾಘಿಸಿದರು. ಸ್ವೀಡನ್ನ ವಿದ್ವಾಂಸ ಸ್ಟೆನ್ ಕೊನೊ, ಅವರು- ದಯಾನಂದರು ಭಾರತದ ಇತಿಹಾಸವನ್ನು ಪುನರುಜ್ಜೀವನಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ವರಿಂದ ಗಮನಾರ್ಹವಾಗಿ ಪ್ರಭಾವಿತರಾದ ಇತರರು ನಿನಿಯನ್ ಸ್ಮಾರ್ಟ್, ಮತ್ತು ಬೆಂಜಮಿನ್ ವಾಕರ್. [೨೮][48] [೨೯][೩೦]

ಕೃತಿಗಳು[ಬದಲಾಯಿಸಿ]

 • ದಯಾನಂದ ಸರಸ್ವತಿ ಆರು ವೇದಾಂಗಗಳ 16 ಪರಿಮಾಣ ವಿವರಣೆಯನ್ನು ಒಳಗೊಂಡಂತೆ, 60 ಕ್ಕಿಂತಲೂ ಹೆಚ್ಚಿನ ಕೃತಿಗಳನ್ನು ಬರೆದಿದ್ದಾರೆ, ಅಷ್ಟಾಧ್ಯಾಯಿಯಲ್ಲಿ (ಪಾನಿನಿಯ ವ್ಯಾಕರಣ) ಅಪೂರ್ವವಾದ ವ್ಯಾಖ್ಯಾನ, ನೈತಿಕತೆ ಮತ್ತು ನೈತಿಕತೆ, ವೈದಿಕ ಆಚರಣೆಗಳು ಮತ್ತು ಪವಿತ್ರ ಗ್ರಂಥಗಳ ಕುರಿತಾದ ಹಲವಾರು ಸಣ್ಣ ಪ್ರಬಂಧಗಳು ಮತ್ತು ವಿಶ್ಲೇಷಣೆಯ ಮೇಲೆ ಒಂದು ತುಣುಕು ಬರಹಗಳು; ಪ್ರತಿಸ್ಪರ್ಧಿ ಸಿದ್ಧಾಂತಗಳ (ಉದಾಹರಣೆಗೆ ಅದ್ವೈತ ವೇದಾಂತ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ). ಸತ್ಯಾರ್ಥ ಪ್ರಕಾಶ, ಸತ್ಯಾರ್ಥ್ ಭೂಮಿಕಾ, ಸಂಸ್ಕಾರವಿಧಿ, ಋಗ್ವೇದಿ, ಭಾಷ್ಯ ಭೂಮಿಕಾ, ಋಗ್ವೇದ ಭಾಷ್ಯಂ (7/61/2 ವರೆಗೆ) ಮತ್ತು ಯಜುರ್ವೇದ ಭಾಷ್ಯಂ - ಅವರ ಕೆಲವು ಪ್ರಮುಖ ಕೃತಿಗಳಲ್ಲಿ ಸೇರಿವೆ. ಭಾರತೀಯ ನಗರವಾದ ಅಜ್ಮೀರದಲ್ಲಿ ನೆಲೆಗೊಂಡಿದ್ದ ಪರೋಪಕಾರಿಣಿ ಸಭಾ ವನ್ನು ಅವರ ಕೃತಿಗಳು ಮತ್ತು ವೈದಿಕ ಗ್ರಂಥಗಳನ್ನು ಪ್ರಕಟಿಸಲು ಮತ್ತು ಬೋಧಿಸಲು ಸ್ವಾಮಿ ಸ್ವತಃ ಸ್ಥಾಪಿಸಿದರು.[೩೧]

ಮುಖ್ಯ ಗ್ರಂಥಗಳ ಪಟ್ಟಿ[ಬದಲಾಯಿಸಿ]

 • 1. ಸಂಧ್ಯಾ (ಲಭ್ಯವಿಲ್ಲ) (1863)
 • 2 ಭಾಗವತ್ ಖಂಡನಮ್ ಅಥವಾ ಪಾಖಂಡ ಖಂಡನಂ OR ವೈಷ್ಣವ ಮಂತ್ರ ಖಂಡನ (1866)
 • 3.ಅದ್ವೈತಮತ ಖಂಡನ (ಲಭ್ಯವಿಲ್ಲ) (1870)
 • 4.ಪಂಚಮಹಾಯಾಜ್ಯ ವಿಧಿ (1874 & 1877)
 • 5.ಸತ್ಯಾರ್ಥ ಪ್ರಕಾಶ (1875 & 1884)
 • 6.ವೇದಾಂತಿ ದ್ವಾಂತ್ ನಿವಾರಾಣ (1875)
 • 7.ವೇದ ವಿರುದ್ಧ ಮತ ಖಂಡನ ಅಥವಾ ವಲ್ಲಭಾಚಾರ್ಯ ಮತ ಖಂಡನ (1875)
 • 8.ಶಿಕ್ಷಾಪತ್ರಿ ಧವಂತ್ ನಿವಾರಾಣ ಅಥವಾ ಸ್ವಾಮಿ ನಾರಾಯಣ ಮತ ಖಂಡನ (1875)
 • 9.ವೇದ ಭಾಶ್ಯಮ್ ನಮೂನೆ ಕಾ ಪ್ರಥಮ ಅಂಕ್ (1875)
 • 10.ವೇದ್ಭ್ಯಾಷಿಯಮ್ ನಮೂನೆ ಕಾ ದ್ವಿತೀಯ ಅಂಕ್ (1876)
 • 11.ಆರ್ಯಾಭಿವಿನಯ (ಅಪೂರ್ಣ) (1876)
 • 12.ಸಂಸ್ಕಾರ ವಿಧಿ (1877 & 1884)
 • 13.ಆಯೋಧ್ಯೇಶ್ಯ ರತ್ನ ಮಲಾ (1877)
 • 14.ಋಗ್ ವೇದಾದಿ ಭಾಷ್ಯ ಭುಮಿಕಾ (1878)
 • 15.ಋಗ್ ವೇದ ಭಾಷ್ಯಮ್ (7/61 / 1,2 ಮಾತ್ರ) (ಅಪೂರ್ಣ) (1877 ರಿಂದ 1899)
 • 16.ಯಜುರ್ವೇದ ಭಾಷ್ಯಮ್ (ಕಂಪ್ಲೀಟ್) (1878 ರಿಂದ 1889)
 • 17.ಅಷ್ಟಾಧ್ಯಾಯಿ ಭಾಷ್ಯ (2 ಭಾಗಗಳು) (ಅಪೂರ್ಣ) (1878 ರಿಂದ 1879)
 • -.-
 • .ವೇದಾಂಗ ಪ್ರಕಾಶ (16 ಪುಸ್ತಕ)
 • 1. ವರ್ಣೋಚ್ಚರಣ ಶಿಕ್ಷಾ (1879)
 • 2.ಸಂಸ್ಖತ ವಾಕ್ಯ ಪ್ರಬೋಧಿನಿ --
 • ಇತ್ಯಾದಿ 16 ಪುಸ್ತಕಗಳು.
 • -.-

1.ಗೌತಮ್ ಅಹಲ್ಯ ಕಿ ಕಥಾ (ಲಭ್ಯವಿಲ್ಲ) (1879) 2.ಭ್ರಾಂತಿನಿವಾರಣ್ (1880) 3.ಭ್ರಮ ಛೇದನಂ (1880)

 • (ಇತ್ಯಾದಿ 17 ಪುಸ್ತಕಗಳು)

~~*~~[೩೨]

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. Dr.Krant'M.L.Verma Swadhinta Sangram Ke Krantikari Sahitya Ka Itihas (Volume-2) Page-347
 2. Aurobindo Ghosh, Bankim Tilak Dayanand (Calcutta 1947 p1)"Lokmanya Tilak also said that Swami Dayanand was the first who proclaimed Swaraj for Bharatpita i.e.India."
 3. Dayanand Saraswati Commentary on Yajurved (Lazarus Press Banaras 1876)
 4. Radhakrishnan, S. (2005). Living with a Purpose. Orient Paperbacks. p. 34. ISBN 81-222-0031-1.
 5. "Gurudatta Vidyarthi". Aryasama. 19 December 2012.
 6. "Mahadev Govind Ranade: Emancipation of women". 17 May 1996. Retrieved 17 September 2012.
 7. http://www.thearyasamaj.org/home
 8. Garg, Ganga Ram (1986). "1. Life and Teachings". World Perspectives on Swami Dayananda Saraswati. Concept Publishing Company.
 9. Sinhal, Meenu (2009). Swami Dayanand Saraswati. Prabhat Prakashan. p. 3. ISBN 81-8430-017-4.
 10. "Light of Truth". Archived from the original on 28 October 2009. Retrieved 9 October 2010.
 11. "Swami Dayananda Sarasvati by V. Sundaram". Boloji. Retrieved 14 January 2016.
 12. ಸತ್ಯಾರ್ಥ ಪ್ರಕಾಶ
 13. [Gandhi on Pluralism and Communalism", p. 38, by P. L. John Panicker]
 14. http://www.thearyasamaj.org/home
 15. Under "The scheme of studies" Page 73 of English Version Satyarth Prakash
 16. ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ- ವಿಕಿಸೋರ್ಸ್
 17. The World's Greatest Seers and Philosophers", by Clifford Sawhney, p. 123
 18. "Remembering Our Leaders: Dayanand Saraswati" by A.K. Srikumar", p. 60
 19. Vandematharam Veerabhadra Rao: Life Sketch of Swami Dayananda, Delhi 1987 page 13
 20. Dr.Krant'M.L.Verma Swadhinta Sangram Ke Krantikari Sahitya Ka Itihas (Volume-2) Page-347
 21. Dr.Krant'M.L.Verma Swadhinta Sangram Ke Krantikari Sahitya Ka Itihas (Volume-2) Page-347
 22. ಸತ್ಯಾರ್ಥಪ್ರಕಾಶ ಗ್ರಂಥ, ಕನ್ನಡ ಅನುವಾದ ಪೀಠಿಕೆಯಲ್ಲಿ ದಯಾನಂದರ ಜೀವನ ಪರಿಚಯ ಆರ್ಯ ಸಮಾಜ ಬೆಂಗಳೂರು.
 23. World Perspectives on Swami Dayananda Saraswati By Gaṅgā Rām Garg :pp 96-98
 24. Mahadev Govind Ranade: Emancipation of women". Isrj.net. 17 May 1996. Retrieved 17 September 2012.
 25. Encyclopaedia of eminent thinkers, Volume 7, by K. S. Bharath, p. 188
 26. Perspectives on Ethnicity" by Regina E. Holloman, Serghei A. Arutiunov, p. 344-345
 27. "Swami Dayananda Sarasvati: A Study of His Life and Work", p. 327, by Krishan Singh Arya, P. D. Shastri
 28. "Dayanand Commemoration Volume: A Homage to Maharshi Dayanand Saraswati, from India and the World, in Celebration of the Dayanand Nirvana Ardha Shatabdi", p. 164, year = 1933
 29. Ninian Smart & Benjamin Walker were influenced by Dayananda Saraswati
 30. https://archive.org/details/BhagwatKhandan-SwamiDayanandSaraswati
 31. http://www.thearyasamaj.org/home Magazines -Books
 32. http://www.thearyasamaj.org/home Magazines -Books
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ: