ಆತ್ಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಆತ್ಮದ ಅಂತಿಮ ಪಯಣದ ವಿಧಿಗಳನ್ನು ಪೂರೈಸುತ್ತಿರುವ ಅರ್ಚಕ

ಪ್ರಪಂಚದ ಹಲವು ಧರ್ಮಗಳಲ್ಲಿ ಮತ್ತು ತತ್ತ್ವಶಾಸ್ತ್ರ ಪದ್ಧತಿಗಳ ಪ್ರಕಾರ ಆತ್ಮವು ಜೀವನದ ನಿರಾಕಾರ ಚೈತನ್ಯವೆಂದು ಪರಿಗಣಿಸಲ್ಪಡುತ್ತದೆ. ಸಾಮಾನ್ಯವಾಗಿ ಆತ್ಮವು ಚಿರಂತನವೆಂದು ಎಲ್ಲಾ ಪದ್ಧತಿಗಳು ನಂಬುತ್ತವಾದರೂ ಬೇರೆ ಬೇರೆ ಪದ್ಧತಿಗಳಲ್ಲಿ ಮೃತ್ಯುವಿನ ನಂತರ ಆತ್ಮದ ವಿಧಿಯೇನೆಂದು ಬೇರೆ ಬೇರೆ ಅಭಿಪ್ರಾಯಗಳನ್ನು ಹೊಂದಿರುವವು.

ಹಿಂದೂ ಧರ್ಮದಲ್ಲಿ ಆತ್ಮ[ಬದಲಾಯಿಸಿ]

ಅದ್ವೈತ ಸಿದ್ಧಾಂತ[ಬದಲಾಯಿಸಿ]

ಅದ್ವೈತ ಸಿದ್ದಾಂತದ ಪ್ರಕಾರ, ಆತ್ಮವು, ಜೀವಿಗಳ ಶರೀರವನ್ನು ಆವೃತವಾಗಿರುವ ಒಂದು ಅದೃಶ್ಯ ಶಕ್ತಿಯಾಗಿದೆ. ಇದನ್ನು ಬ್ರಹ್ಮನ್ ಶಬ್ದದ ಸಮಾನವಾಚಕ ವಾಗಿಯು ಪ್ರಯೋಗಿಸಲಾಗುತ್ತದೆ. ಆತ್ಮವು, ಒಂದು ಪ್ರಾಪಂಚಿಕ ತತ್ವವಾಗಿದ್ದು, ಇದು ಪ್ರಪಂಚದ ಸಕಲ ಜೀವಿಗಳಲ್ಲು ವ್ಯಾಪ್ತವಾಗಿರುತ್ತದೆ. ಆತ್ಮಕ್ಕೆ ಅಳಿವಿಲ್ಲ. ಶರೀರ ನಾಶವಾದರೂ ಅದರಲ್ಲಿರುವ ಆತ್ಮ ನಾಶವಾಗದು. ಆತ್ಮ ತತ್ವದ ಜ್ಞಾನದಿಂದ ಮನುಷ್ಯನಿಗೆ ಶಾರೀರಿಕ ಬಿಡುಗಡೆ ಸಿಗುತ್ತದೆ. ನಾವು ಶರೀರದೊಂದಿಗೆ ವ್ಯವಹರಿಸುವಾಗ 'ನಾನು' ಮತ್ತು 'ನನ್ನದು' ಎ೦ಬುದಾಗಿ ಎರೆಡು ರೀತಿಯಲ್ಲಿ ವ್ಯವಹರಿಸುತ್ತೇವೆ. ಉದಾ. 'ನನ್ನ ಕೈ', 'ನನ್ನ ಮನಸ್ಸು', 'ನನ್ನ ಬುದ್ಧಿ', ಇತ್ಯಾದಿ. ಇದು ದೇಹಕ್ಕೆ ಸಂಬಂಧಿಸಿದ ತಿಳುವಳಿಕೆ. 'ನನ್ನದು' ಎನ್ನುವುದು ದೇಹ, ಮನಸ್ಸು ಇವುಗಳಾದರೆ, 'ನಾನು' ಎಂಬುದೇ ಆತ್ಮ. ಇದು ನಿರ್ಗುಣ, ನಿರಾಕಾರ. ಎಲ್ಲ 'ನಿರ್‍' ಗಳೂ ಇದರ ಲಕ್ಷಣ. ಶರೀರಕ್ಕೆ ಸ್ವತಃ ಚೈತನ್ಯ ಇಲ್ಲ. ಶರೀರ,ಮನಸ್ಸು , ಬುದ್ಧಿಗಳು ಆತ್ಮದಿಂದಲೇ ಚೈತನ್ಯ ಪಡೆದು ಕೆಲಸ ನಿರ್ವಹಿಸು ತ್ತವೆ.ಹೇಗೆ ಚಂದ್ರನು ಸೂರ್ಯನಿಂದ ಬೆಳಗುತ್ತಾನೊ ಹಾಗೆ ಶರೀರ,ಮನಸ್ಸು,ಬುದ್ಧಿಗಳು ಆತ್ಮನಿಂದ ಬೆಳಗುತ್ತವೆ. ಪರಮಾತ್ಮ ಎಂಬುದು ಅನಂತವಾದ ಆಕಾಶ (ಸ್ಪೇಸ್) ಎಂದುಕೊಂಡರೆ, ಅಲ್ಲಿರುವ ಒಂದು ಪಾತ್ರೆಯೊಳಗಿನ ಆಕಾಶ ಅಥವಾ ಸ್ಪೇಸ್ ಅನ್ನು ಆತ್ಮಕ್ಕೆ ಸಮೀಕರಿಸಬಹುದು. ಅದ್ವೈತ ತತ್ವದ ಪ್ರಕಾರ ಆತ್ಮ - ಪರಮಾತ್ಮ ಒಂದೇ. ಸಾಗರ ಮತ್ತು ಅಲೆಗಳ ನಡುವಿನ ಸಂಬಂಧವಿದ್ದ೦ತೆ. ಇಡೀ ಸಾಗರವೇ ಪರಮಾತ್ಮವಾದರೆ ಅದರಲ್ಲಿ ಹುಟ್ಟಿ , ಸಾಯುವ ಅಲೆಗಳು ಜೀವಾತ್ಮಗಳು. ಉಪನಿಷತ್ ಅಥವಾ ಈಶಾವಾಸ್ಯೋಪನಿಷತ್ ನೋಡಿ.

ಬೇರೆ ಧರ್ಮಗಳಲ್ಲಿ ಆತ್ಮ[ಬದಲಾಯಿಸಿ]

ಪಾಶ್ಚಿಮಾತ್ಯ ತತ್ತ್ವಶಾಸ್ತ್ರದಲ್ಲಿ ಆತ್ಮ[ಬದಲಾಯಿಸಿ]

ವೈಜ್ಞಾನಿಕ ದೃಷ್ಟಿಯಲ್ಲಿ ಆತ್ಮ[ಬದಲಾಯಿಸಿ]


"https://kn.wikipedia.org/w/index.php?title=ಆತ್ಮ&oldid=608794" ಇಂದ ಪಡೆಯಲ್ಪಟ್ಟಿದೆ