ಯಾಜ್ಞವಲ್ಕ್ಯ
| {{{name}}} | |
|---|---|
ಯಾಜ್ಞವಲ್ಕ್ಯರು ರಾಜ ಜನಕರಿಗೆ ಬ್ರಹ್ಮ ವಿದ್ಯೆ ಬೋಧಿಸುತ್ತಿರುವುದು | |
| ಜನನ | ಫಾಲ್ಗುಣ ಮಾಸದ ಶುಕ್ಲ ಪಕ್ಷದ ಐದನೇ ದಿನ ವಿದೇಹ ರಾಜ್ಯ |
| ಗೌರವಗಳು | ಋಷಿ |
| ಪ್ರಮುಖ ಶಿಷ್ಯರು/ಅನುಯಾಯಿಗಳು | ಜನಕ |
ಯಾಜ್ಞವಲ್ಕ್ಯ ವೈದಿಕೆ ಭಾರತದ ಒಬ್ಬ ಬ್ರಹ್ಮರ್ಷಿ. ಚತುರ್ಮುಖ ಬ್ರಹ್ಮನ ದೇಹದಿಂದ ಜನಿಸಿದನೆಂದು ವಾಯು ಪುರಾಣ ಹೇಳುತ್ತದೆ. ಈತನು ಬರೆದ ಕೃತಿಗಳು ಶತಪಥ ಬ್ರಾಹ್ಮಣ, ಯೋಗಯಾಜ್ಞವಲ್ಕ್ಯ ಸಂಹಿತ ಮತ್ತು ಯಾಜ್ಞವಲ್ಕ್ಯ ಸ್ಮೃತಿ.
ವೈಶಂಪಾಯನ ಮಹರ್ಷಿಯ ಸೋದರಳಿಯ ಹಾಗೂ ಶಿಷ್ಯ. ತಂದೆ ಬ್ರಹ್ಮರಾತ. ವೈಶಂಪಾಯನನ ಶಿಷ್ಯರನ್ನು ತಿರಸ್ಕರಿಸಿದ್ದರಿಂದ ಯಾಜ್ಞವಲ್ಕ್ಯ ಶಾಪಕ್ಕೊಳಗಾದ. ಅವನಿಂದ ಕಲಿತ ವೇದಗಳನ್ನು ಈತ ವಮನ ಮಾಡಲು ಉಳಿದ ಮುನಿಗಳು ಅದನ್ನು ತಿತ್ತಿರಿಪಕ್ಷಿಯ ರೂಪದಿಂದ ಸ್ವೀಕರಿಸಿದರು. ಬಳಿಕ ಇವನು ಸೂರ್ಯನಿಂದ ಶುಕ್ಲಯಜುರ್ವೇದವನ್ನು ಕಲಿತ. ಈತ ಮಹಾ ವಿದ್ವಾಂಸ. ವಾದ ಮಾಡುವುದರಲ್ಲಿ ತುಂಬ ನಿಪುಣ. ಈತ ಅಪಾರ ಸಂಪತ್ತು ಮತ್ತು ಕೀರ್ತಿಯನ್ನು ಗಳಿಸಿದ್ದ. ಜನಕರಾಜನ ಯಜ್ಞಸಭೆಯಲ್ಲಿ ವಾದದಲ್ಲಿ ಪ್ರಾಣಪಣ ಒಡ್ಡಿ ತರ್ಕಮಾಡಿ ಶಾಕಲ್ಯಮುನಿಯ ಸಾವಿಗೆ ಕಾರಣನಾದ. ಬ್ರಹ್ಮವಿದ್ಯೆಯ ವಿಷಯವಾಗಿ ಜನಕರಾಜನೊಂದಿಗೆ ವಾದಮಾಡಿ ವಿಶೇಷವಾಗಿ ಮನ್ನಣೆಪಡೆದ. ವಿಶ್ವಾವಸು ಎಂಬ ಗಂಧರ್ವನೊಂದಿಗೆ ಸಂವಾದ ನಡೆಸಿದ. ಈತ ಬರೆದ ಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ ಎಂದು ಹೆಸರಾಗಿದೆ. ಈತ ತನ್ನ ಜೀವನದ ಉತ್ತರಾರ್ಧದಲ್ಲಿ ಐಹಿಕ ಜೀವನ ಅರ್ಥಹೀನವೆಂದು ಬಗೆದು ಎಲ್ಲವನ್ನೂ ತ್ಯಜಿಸಿ ಕೊನೆಗೆ ಪರಿವ್ರಾಜಕನಾದ. ವಾಯು, ವಿಷ್ಣುಪುರಾಣಗಳಲ್ಲಿ ಮತ್ತು ಭಾರತ, ಭಾಗವತಗಳಲ್ಲಿ ಈತನ ಬಗ್ಗೆ ಪ್ರಸ್ತಾಪವಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by ಯಾಜ್ಞವಲ್ಕ್ಯ at Project Gutenberg
- Works by or about ಯಾಜ್ಞವಲ್ಕ್ಯ at Internet Archive
- ಶ್ರೀ ಗುರು ಯೋಗೇಶ್ವರ ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾ: ಮೈಸೂರು.
- Sukla Yajur Veda from http://www.shuklayajurveda.org
- Yogeeswara Yagnavalkya
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |