ವಿಷಯಕ್ಕೆ ಹೋಗು

ರಾಮ್ ಮೋಹನ್ ರಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಾಜಾ ರಾಮ್ ಮೋಹನ್ ರಾಯ್ ಇಂದ ಪುನರ್ನಿರ್ದೇಶಿತ)
ರಾಮ್ ಮೋಹನ್ ರಾಯ್
ರಾಮ್ ಮೋಹನ್ ರಾಯ್ ನವಭಾರತದ ಪ್ರವಾದಿ
Born(೧೭೭೪-೦೮-೧೪)೧೪ ಆಗಸ್ಟ್ ೧೭೭೪
DiedSeptember 27, 1833(1833-09-27) (aged 59)
Cause of deathMeningitis
Resting placeಕೊಲ್ಕತ್ತ, ಭಾರತ
Nationalityಭಾರತೀಯ
Other namesಹೆರಾಲ್ಡ್ ಆಫ್ ನ್ಯೂವ್ ಏಜ್
Known forಬೆಂಗಾಲ ಪುನರುಜ್ಜೀವನದಜನಕ, ಬ್ರಹ್ಮ ಸಮಾಜ{socio, political reforms
Titleರಾಜಾ
Successorದ್ವಾರಕನಾಥ ಟಾಗೋರ್
Parentರಮಾಕಾತ್ ರಾಯ್ ತಾರಿಣಿ ದೇವಿ

[][]ರಾಜ ರಾಮ್ ಮೋಹನ್ ರಾಯ್ (ಮೇ 22,೧೭೭೪ - ಸೆಪ್ಟೆಂಬರ್ ೨೭,೧೮೩೩). ಬ್ರಾಹ್ಮೋ ಸಭದ ಸಂಸ್ಥಾಪಕರು ಈ ಸಮಾಜದ ಸಂಸ್ಥಾಪನೆಗೆ ಅವರ ಜೊತೆಗೆ ದ್ವಾರಕನಾಥ್ ಟ್ಯಾಗೋರ್ ಮತ್ತು ಇತರ ಬೆಂಗಾಲಿ ಬ್ರಾಹ್ಮಣರ ಜೊತೆಗಿದ್ದರು. ರಾಜನೀತಿ, ಸಾರ್ವಜನಿಕ ಆಡಳಿತ ಮತ್ತು ವಿದ್ಯಾಭ್ಯಾಸ ಹಾಗೆ ಧರ್ಮದೊಂದಿಗೆ, ಅವರ ಪ್ರಭಾವ ಅಪಾರವಾಗಿತ್ತು. ಹಿಂದೂ ಧರ್ಮದ ಉತ್ತರ ಕ್ರಿಯಾ ಪದ್ಧತಿಯಲ್ಲಿ, ಸತಿಪದ್ಧತಿಯನ್ವಯ ವಿಧವೆಯನ್ನು ಗಂಡಂದಿರ ಅಗ್ನಿ ಚಿತೆಯ ಮೇಲೆ ಬಲವಂತವಾಗಿ ಸುಡುತ್ತಿದ್ದ 'ಸತಿ' ಪದ್ಧತಿಯನ್ನು ರದ್ದು ಮಾಡಲು ಹೋರಾಡಿ ಜಯಶೀಲರಾದರು. ೧೮೧೬ ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ "ಹಿಂದುಯಿಸಂ" ಶಬ್ದವನ್ನು ಪರಿಚಯಿಸಿ, ಸೇರಿಸಿದವರಲ್ಲಿ ಮೊದಲಿಗರು. ಸಮಾಜಕ್ಕೆ ವಿವಿಧ ರೀತಿಯಲ್ಲಿ ಅವರು ಸಲ್ಲಿಸಿದ ಕೊಡುಗೆಯಿಂದಾಗಿ , ರಾಜಾ ರಾಮ್ ಮೋಹನ್ ರೋಯ್ ಬಂಗಾಳದ ಪುನರುಜ್ಜೀವನದ ಒಬ್ಬ ಪ್ರಮುಖ ವ್ಯಕ್ತಿಯಾಗಿ, ಗೌರವಕ್ಕೆ ಪಾತ್ರರಾಗುತ್ತಾರೆ. ಹಿಂದೂಧರ್ಮದ ರಕ್ಷಣೆ ಮತ್ತು ಭಾರತೀಯರ ಹಕ್ಕುಗಳ ರಕ್ಷಣೆಯಲ್ಲಿ ಬ್ರಿಟಿಶ್ ಸರ್ಕಾರದಲ್ಲಿ ಭಾಗವಹಿಸಿದ, ಅವರ ಶ್ರಮದ ಪ್ರತಿಫಲವಾಗಿ ಅವರು ಬಂಗಾಲದ ಪುನರುಜ್ಜೀವನದ ಜನಕ ಅಥವಾ “ಭಾರತದ ನವೋದಯದ ಪಿತಾಮಹಭಾರತದ ಪುನರುಜ್ಜೀವನದ ತಂದೆ ಎಂಬ ಬಿರುದನ್ನು ಗಳಿಸಿದರು.

ರಾಮ್ ಮೋಹನ್ ರಾಯ್:1964 (ಭಾರತದ ಅಂಚೆ ಚೀಟಿ
  • 2004 ರಲ್ಲಿ ರಾಮ್ ಮೋಹನ್ ರಾಯ್ ಸಾರ್ವಕಾಲಿಕ ಶ್ರೇಷ್ಠ ಬಂಗಾಳಿಯಾಗಿ ಬಿಬಿಸಿ ಚುನಾವಣೆಯಲ್ಲಿ 10 ನೇ ಸ್ಥಾನವನ್ನು ಗಳಿಸಿದರು.[]

RAJA[] ಬಾಲ್ಯ ಜೀವನ ಮತ್ತು ಶಿಕ್ಷಣ (೧೭೭೪ - ೧೭೯೬)

[ಬದಲಾಯಿಸಿ]
  • ವೈಷ್ಣವ ಬ್ರಾಹ್ಮಣ ಜಾತಿಯ ಕುಟುಂಬದಲ್ಲಿ ,ಬಂಗಾಳದ ರಾಧಾ ನಗರದಲ್ಲಿ , ಆಗಸ್ಟ್ ೧೪ (ಕೆಲವರು ಹೇಳಿದಂತೆ ೧೭ ಆಗಸ್ಟ್) ೧೭೭೪ (ಕೆಲವು ಮೂಲಗಳನ್ವಯ ೧೭೭೨) ರಾಯ್)ಜನಿಸಿದರು. ಇವರ ಕುಟುಂಬ ವಿಭಿನ್ನ ಧಾರ್ಮಿಕ ಸಂಪ್ರದಾಯದಿಂದ ಕೊಡಿದ್ದು,ತಂದೆ ರಮಾಕಾಂತ ವೈಷ್ಣವರಾಗಿದ್ದರೆ , ಅವನ ತಾಯಿ ತಾರಿಣಿದೇವಿ ಶೈವ ಕುಟುಂಬದಿಂದ ಬಂದವರಾಗಿದ್ದರು. ಅಂದಿನ ದಿನಗಳಲ್ಲಿ, ಈ ರೀತಿ ವೈಷ್ಣವರು ಸಾಮಾನ್ಯವಾಗಿ, ಶೈವರನ್ನು ಮದುವೆಯಾಗುವ ಸಂಪ್ರದಾಯ ಇರಲಿಲ್ಲ.
  • ಹೀಗಾಗಿ ಒಬ್ಬರ ಬಯಕೆಯಂತೆ ವಿದ್ವಾಂಸ, ಶಾಸ್ತ್ರಿ ಗಳಾಗುವ ನಿಟ್ಟಿನಲ್ಲಿ ಬೆಳಸಿದರೆ , ಇನ್ನೊಬ್ಬರು ಪ್ರಪಂಚದ ಲೌಕಿಕ ಅಥವಾ ಸಾಮಾಜಿಕ ಜೀವನ ನಡೆಸಲು ಬೇಕಾದ ರೀತಿಯಲ್ಲಿ ತಯಾರಿ ಮಾಡುತ್ತಾ ಸಾರ್ವಜನಿಕ ಆಡಳಿತ ನೀಡುವತ್ತ ಗಮನ ಹರಿಸಿದರು. ತಂದೆ-ತಾಯಿಯರ ಈ ರೀತಿಯ ಭಿನ್ನ ಅಭಿಪ್ರಾಯದಿಂದಾಗಿ, ರಾಮಮೋಹನ್‍ನ ಬಾಲ್ಯದಲ್ಲಿನ ಬದುಕು ಇಡೀ ಮುಂದಿನ ಜೀವನದ ಮೇಲೆ ಪ್ರಭಾವ ಬೀರಿದ್ದು ಎರಡೂ ಬಗೆಯ ಜೀವನ ನಡೆಸುವಂತಾಗಿದೆ.[]

ಪ್ರಾರಂಭಿಕ ಜೀವನ

[ಬದಲಾಯಿಸಿ]
  • ರಾಮ್ ಮೋಹನ್ ರಾಯರಿಗೆ ೧೦ ವರ್ಷ ತುಂಬುವಲ್ಲಿ ೩ ಬಾರಿ ಮದುವೆಯಾಗುತ್ತದೆ.ತಮ್ಮ ಜಾತಿಯ ಸಂಪ್ರದಾಯ ಪದ್ಧತಿಯನ್ವಯ ಬಹುಪತ್ನಿತ್ವದ ಶಿಸ್ತಿನ ಆವರಣದೊಳಕ್ಕೆ ಅವರು ನಿಲ್ಲುವಂತಾಯಿತು. ಅವರ ಮೊದಲನೇ ಪತ್ನಿ ತನ್ನ ಬಾಲ್ಯ ಜೀವನದ ಆರಂಭದಲ್ಲಿಯೇ ನಿಧನ ಹೊಂದಿದಳು. ೧೮೦೦ ರಲ್ಲಿ ರಾಧಾಪ್ರಸಾದ್ ಮತ್ತು ೧೮೧೨ ರಲ್ಲಿ ರಾಮಪ್ರಸಾದ್ ಎಂಬುವವರು, ಇವರಿಗೆ ಎರಡು ಗಂಡು ಮಕ್ಕಳಿದ್ದು, ಅವರ ಎರಡನೇ ಹೆಂಡತಿಗೆ ಜನಿಸಿದರು. ಈಕೆ ೧೮೨೪ ರಲ್ಲಿ ನಿಧನ ಹೊಂದಿದಳು. ರಾಯರ ಮೂರನೇ ಹೆಂಡತಿ ಅವರಿಗಿಂತ ಹೆಚ್ಚು ಕಾಲ ಬದುಕಿದರು.
  • ರಾಯರ ಮೊದಲ ವಿದ್ಯಾಭ್ಯಾಸದ ವಿವರ ವಿವಾದದಿಂದ ಕೂಡಿದೆ. ಒಂದು ಸಾಮಾನ್ಯ ವರದಿಯನ್ವಯ ರಾಮಮೋಹನ್ ರ ಸಾಂಪ್ರದಾಯಿಕ ವಿಸ್ಯಾಭ್ಯಾಸ ಅವರು ವಾಸವಾಗಿದ್ದ ಹಳ್ಳಿಯಲ್ಲಿನ ಪಾಠಶಾಲೆಯಲ್ಲಿ ಬಂಗಾಳಿ ಮತ್ತು ಸಂಸ್ಕೃತ ಹಾಗೂ ಪರ್ಷಿಯನ್ ಭಾಷೆಗಳನ್ನು ಕಲಿತರು. ತದನಂತರ ಅವರ ೯ನೆಯ ವರ್ಷದಲ್ಲಿ ಪರ್ಷಿಯನ್ ಮತ್ತು ಅರೇಬಿಕ್‍ಗಳನ್ನು ಪಾಟ್ನಾದಲ್ಲಿ ಮದರಸಾದಲ್ಲಿ ಕಲಿತಿರಬಹುದೆಂದೂ ನಂತರ ಬನಾರಸ್ (ಕಾಶಿ)ಗೆ ಕಳುಹಿಸಲ್ಪಟ್ಟರು. ಅಲ್ಲಿ ಅವರು ಸಂಸ್ಕೃತದ ವ್ಯಾಕರಣವನ್ನೂ, ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನೂ, ವೇದ ಮತ್ತು ಉಪನಿಷತ್ತುಗಳನ್ನೂ ಕಲಿತಿರಬಹುದೆಂದು ಊಹಿಸಲಾಗಿದೆ. ಇವರ ಈ ಎರಡೂ ಸ್ಥಳಗಳಲ್ಲಿನ ವಾಸದ ಸಮಯದ ವಿಚಾರದಲ್ಲಿ ಗೊಂದಲವಿದೆ. ಅವಿಗೆ ಆಗ ಇನ್ನೂ ಇಮಗ್ಲಿಷ್ ಪರಿಚಯವಿರಲಿಲ್ಲ.
  • ಅವರು 22 ನೇ ವಯಸ್ಸಿನಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿತರು. ಅವರು ಯೂಕ್ಲಿಡ್ ಮತ್ತು ಅರಿಸ್ಟಾಟಲ್ ಮುಂತಾದ ತತ್ವಜ್ಞಾನಿಗಳ ಕೃತಿಗಳನ್ನು ಓದಿದರು, ಅದು ಅವರ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯದಲ್ಲಿ ಸ್ವಂತವಿಚಾರನ್ನು ರೂಪಿಸಲು ನೆರವಾಯಿತು.[]
  • ಆತನ ನಂಬಿಕಸ್ಥ ಸಮಕಾಲೀನ ಜೀವನ ಚರಿತ್ರಾಕಾರರು ಬರೆಯುವಂತೆ, ರಾಮಮೋಹನ್‍ರವರಿಗೆ, ಇತರೆ ಬ್ರಾಹ್ಮಣರಿಗೆ ದೊರೆಯದ ಮದರಸ ಶಿಕ್ಷಣದಿಂದ 'ಅರೇಬಿಕ್' ಜ್ಞಾನದಿಂದ ಖುರಾನ್ ತಿಳಿವು ಉಂಟಾಗಿ, ಅದರಲ್ಲಿನ ಏಕದೇವ ವಾದ ಇವರಲ್ಲಿ ಬದಲಾವಣೆಯನ್ನು ಮಾಡಿತು. ಆದರೆ ಅವನ ತಾಯಿ ಅವನ ಮಾರ್ಗದಲ್ಲಿ ಬಂದಳು. ಇದರಿಂದ ರಾಮಮೋಹನ್‍ರ ತಾಯಿ ತಾರಿಣಿ ದೇವಿ ಆತಂಕಕ್ಕೆ ಒಳಗಾಗಿ ,ತನ್ನ ಮಗನನ್ನು ಬನಾರಸ್‍ಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಯಲ ಕಳುಹಿಸಿದರು. ಇದರಿಂದಾಗಿ ರಾಯರು ತಮ್ಮ ವಿಚಾರ ಬದಲಾಯಿಸುವ ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೊದಲು ತಾಯಿ ಕಾರ್ಯ ಪ್ರವೃತ್ತರಾದರು. ಬನಾರಸ್‍ನಲ್ಲಿ, ರಾಮಮೋಹನರ ಕ್ರಾಂತಿಕಾರಕ ಮನೋಭಾವ ಬದಲಾಗದೆ, ಉಪನಿಷತ್‍ಗಳನ್ನೂ ಪ್ರಶ್ನಿಸುತ್ತಾ, ಪವಿತ್ರವಾದ ಖುರಾನಿನ ಏಕದೇವವಾದವನ್ನು ಎತ್ತಿ ಹಿಡಿದು ಹಿಂದೂಗಳ ಮೂರ್ತಿ ಪೂಜೆಯನ್ನು ವಿರೋಧಿಸಿದರು.
  • ಸಂಪ್ರದಾಯವಾದಿ ಹಿಂದೂಗಳ ಆಧ್ಯಾತ್ಮಿಕ ನೆಲೆಯೇ ಬನಾರಸ್ ಆಗಿದ್ದು, ಹಲವಾರು ದೇವಸ್ಥಾನಗಳಿಂದ ಕೂಡಿದ್ದು, ಕೋಟ್ಯಾಂತರ ಹಿಂದೂಗಳಿಗೆ ಸೇವೆಯ ದೇವಮಂದಿರವಾಗಿದ್ದು, ರಾಮಮೋಹನ್ ರಾಯರು ಅಲ್ಲಿ ತಮ್ಮ ಸಂಪ್ರದಾಯಸ್ಥ ವೇದಾಂತ ವಿದ್ಯಾಭ್ಯಾಸವನ್ನು ಮುಗಿಸಲು ಆಗಲಿಲ್ಲ. ಬದಲಾಗಿ ಇವರು ಹೆಚ್ಚಾಗಿ ಸಂಚಾರಕ್ಕೆ ಆಧ್ಯತೆ ನೀಡಿದರು, ಆದರೆ ಎಲ್ಲೆಲ್ಲಿ ಹೋದರು ಎಂದು ತಿಳಿಯದೆ ಇದ್ದರೂ, ಈ ಸಮಯದಲ್ಲಿ ಬುದ್ಧನ ತತ್ವ ಸಿದ್ಧಾಂತಗಳ ಬಗ್ಗೆ ಹೆಚ್ಚೆಚ್ಚು ತಿಳಿದರೆಂದು ತಿಳಿಯಲ್ಪಟ್ಟಿದೆ. ಆಗ ಬುದ್ಧನ ಅನುಯಾಯಿಗಳ ಜೊತೆ ಇರುವಂತಾಯಿತು. ನಂತರ ತಂದೆಯವರ ಹುಡುಕಾಟದ ಪ್ರಯತ್ನದಿಂದಾಗಿ ತಮ್ಮ ಕುಟುಂಬಕ್ಕೆ ೧೭೯೪ ರಲ್ಲಿ ವಾಪಸ್ಸಾದರು. ಅವರನ್ನು ಪುನಃ ಬನಾರಸ್ಸಿಗೆ ಕಳುಹಿಸಿದರು. ಆದರೆ ಅವರ ತಾಯಿ ಅಡ್ಡ ಬಂದರು.೧೭೯೪ ಮತ್ತು ೧೭೯೫ ರ ನಡುವೆ ರಾಮಮೋಹನ ರಾಯರು ತಮ್ಮ ಕುಟುಂಬದ ಜೊತೆಯಿದ್ದು, ಕುಟುಂಬದ ಜಮೀನನ್ನು ನೋಡಿಕೊಂಡಿದ್ದರು. ರಾಮಮೋಹನ್ ಮತ್ತು ಅವರ ತಂದೆಯೊಡನೆ ಯಾವಾಗಲೂ ಸಂಪ್ರದಾಯದ ವಿಚಾರದಲ್ಲಿ ಗಣನೀಯವಾದ ಘರ್ಷಣೆಗಳಿದ್ದುವು. ಅವರ ತಂದೆಯವರು ಸುಮಾರು ೧೭೯೬ ರಲ್ಲಿ ನಿಧನರಾಗಿ, ತಮ್ಮ ಮಕ್ಕಳ ಪಾಲಿಗೆ ಆಸ್ತಿಯನ್ನು ಹಂಚಿಕೊಳ್ಳಲು ಬಿಟ್ಟು ಹೋಗಿದರು.[]

ಪ್ರಭಾವ

[ಬದಲಾಯಿಸಿ]
  • ಆಧುನಿಕ ಭಾರತದ ಇತಿಹಾಸದ ಮೇಲೆ ರಾಮ್ ಮೋಹನ್ ರಾಯ್ ಪ್ರಭಾವವು ಉನಿಷತ್ತಿನಲ್ಲಿ ಕಂಡುಬರುವ ವೇದಾಂತ ಚಿಂತನೆಯ, ತತ್ತ್ವಶಾಸ್ತ್ರದ ಶುದ್ಧ ಮತ್ತು ನೈತಿಕ ತತ್ವಗಳ ಪುನರುಜ್ಜೀವನವಾಗಿತ್ತು. ಅವರು ದೇವರ ಏಕತೆಯನ್ನು ಉಪದೇಶಿಸಿದರು, ವೈದಿಕ ಧರ್ಮಗ್ರಂಥಗಳ ಆರಂಭಿಕ ಅನುವಾದಗಳನ್ನು ಇಂಗ್ಲಿಷ್‍ನಲ್ಲಿ ಮಾಡಿದರು. ಕಲ್ಕತ್ತಾ ಯುನಿಟೇರಿಯನ್ ಸೊಸೈಟಿಯನ್ನು ಸ್ಥಾಪಿಸಿದರು. ಮತ್ತು ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು. ಭಾರತೀಯ ಸಮಾಜವನ್ನು ಸುಧಾರಿಸಲು ಮತ್ತು ಆಧುನೀಕರಿಸುವಲ್ಲಿ ಬ್ರಹ್ಮ ಸಮಾಜ ಪ್ರಮುಖ ಪಾತ್ರ ವಹಿಸಿದೆ. ವಿಧವೆಯರನ್ನು ಸುಡುವ ಅಭ್ಯಾಸ, ಅವರು ಸತಿ/ ಸಹಗಮನ ವಿರುದ್ಧ ಯಶಸ್ವಿಯಾಗಿ ಪ್ರಚಾರ ಮಾಡಿದರು. ಪಾಶ್ಚಾತ್ಯ ಸಂಸ್ಕೃತಿಯನ್ನು ತನ್ನದೇ ದೇಶದ ಸಂಪ್ರದಾಯಗಳ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಸಂಯೋಜಿಸಲು ಅವರು ಪ್ರಯತ್ನಿಸಿದರು. ಅವರು ಭಾರತದಲ್ಲಿ ಶಿಕ್ಷಣದ ಆಧುನಿಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಸಂಸ್ಕೃತ ಆಧಾರಿತ ಶಿಕ್ಷಣವನ್ನು ಇಂಗ್ಲಿಷ್ ಮೂಲದ ಶಿಕ್ಷಣದೊಂದಿಗೆ ಬದಲಾಯಿಸುವ ಮತ್ತು ಅದನ್ನು ಜನಪ್ರಿಯಗೊಳಿಸಲು ಹಲವಾರು ಶಾಲೆಗಳನ್ನು ಸ್ಥಾಪಿಸಿದರು. ಅವರು ತರ್ಕಬದ್ಧ, ನೈತಿಕ, ನಿರಂಕುಶಾಧಿಕಾರಿ, ಈ ಲೋಕೀಯ/ಲೌಕಿಕ ಮತ್ತು ಸಾಮಾಜಿಕ-ಸುಧಾರಣೆಗೆ ಹಿಂದೂ ಧರ್ಮವನ್ನು ಉತ್ತೇಜಿಸಿದರು. ಅವರ ಬರಹಗಳು ಬ್ರಿಟಿಷ್ ಮತ್ತು ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಆಸಕ್ತಿಯನ್ನು ಹುಟ್ಟುಹಾಕಿತು.
  • ಉಪನಿಷತ್ ಗಳಲ್ಲಿರುವಂತೆ ,ಹಿಂದೂ ಧರ್ಮಶಾಸ್ತ್ರದ ವೇದಾಂತ ಶಾಲೆಯ ಶುದ್ಧ ತತ್ವ ಮತ್ತು ಸಿದ್ಧಾಂತಗಳ ಆಧಾರಿತ ಪ್ರತಿಪಾದನೆಯ ಪುನರುಜ್ಜೀವನದ ಪ್ರಭಾವಕ್ಕೆ ರಾಮ್ ಮೋಹನ್ ರಾಯ್ ರು ಭಾರತೀಯ ಆಧುನಿಕ ಚರಿತ್ರೆಗೆ ಕಾರಣರಾದರು. ಅವರು ಎಲ್ಲ ದೇವರು ಒಂದೇ ಎಂದು ಭೋಧಿಸಿದರು. ವೇದಗಳ ಶ್ಲೋಕಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದರು. ಕಲ್ಕತ್ತದ ಯುನಿಟೆರಿಯನ್ ಸಮಾಜದ ಸಹ ಸ್ಥಾಪಕರು ಹಾಗೂ ಬ್ರಹ್ಮ ಸಮಾಜದ ಸಂಸ್ಥಾಪಕರಾದರು. ಈ ಬ್ರಹ್ಮ ಸಮಾಜ ಆಧುನಿಕ ಭಾರತ ಸಮಾಜ ನಿರ್ಮಾಣದಲ್ಲಿ ಬಹು ಮುಖ್ಯ ಪುನರುಜ್ಜೀವನದ ಪಾತ್ರವನ್ನು ವಹಿಸಿದೆ. ಅತ್ಯಂತ ಯಶಸ್ವಿಯಾಗಿ 'ಸತಿ' ಅಥವಾ ಸಹಗಮನ ಪದ್ಧತಿಯ ವಿರುದ್ಧ ಹೋರಾಡಿದರು. ವಿಧವೆಯರನ್ನು ಸುಡುವ ಕೆಟ್ಟ ಪದ್ಧತಿಯನ್ನು ನಿಲ್ಲಿಸಲು ಶ್ರಮಿಸಿದರು. ಭಾರತ ದೇಶದ ಸಂಪ್ರದಾಯಗಳ ಜೊತೆಗೆ ,ಪಶ್ಚಿಮ ದೇಶದ ಸಂಸ್ಕೃತಿಯನ್ನೂ ಸಹ ಒಂದುಗೂಡಿಸಿದರು. ಭಾರತದಲ್ಲಿ ಹಲವಾರು ಶಾಲೆಗಳನ್ನು ತೆರೆದು ,ಆಧುನಿಕ ವಿದ್ಯಾ ಪದ್ಧತಿಯನ್ನು ಜನಪ್ರಿಯಗೊಳಿಸಿದರು. ವಿಚಾರಾತ್ಮಕ, ನೀತಿಶಾಸ್ತ್ರ, ಅಧಿಕಾರಯುಕ್ತವಲ್ಲದ, ವಾಸ್ತವ ಪ್ರಪಂಚದ ಹಾಗು ಸಾಮಾಜಿಕ ಬದಲಾವಣೆಯ, ಹಿಂದೂಯಿಸಮ್ /ಹಿಂದೂರ್ಮಕ್ಕೆ ಪ್ರೋತ್ಸಾಹಿಸಿದರು. ಅವರ ಬರಹಗಳು ಬ್ರಿಟಿಷರ ಮತ್ತು ಅಮೇರಿಕಾದ ಯುನಿಟೆರಿಯನ್ಸ್ ಗಳ ಮೇಲೂ ಪ್ರಭಾವ ಬೀರಿತು.[]

ಕ್ರೈಸ್ತಧರ್ಮ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಆರಂಭದ/ಪ್ರಾಥಮಿಕ ಆಡಳಿತ (೧೭೯೫ - ೧೮೨೮)

[ಬದಲಾಯಿಸಿ]
  • ಒಂದರ ಮೇಲೆ ಒಂದಾಗಿ ಬೆಸೆದ ಈ ದಿನಗಳಲ್ಲಿ, ರಾಮ್ ಮೋಹನ್ ರಾಯರು ಒಬ್ಬ ರಾಜಕೀಯ ಸತ್ಯಾಗ್ರಹಿಯಾಗಿ, ಮಧ್ಯವರ್ತಿಯಾಗಿ ದುಡಿದರು. ಕ್ರಿಶ್ಚಿಯನ್ ಮಿಷನರಿಗಳ ಪ್ರತಿನಿಧಿಗಳಾಗಿ , ಈಸ್ಟ್ ಇಂಡಿಯಾ ಕಂಪನಿ ಯವರಿಂದ ನೇಮಿತರಾಗಿ, ಜೊತೆ ಜೊತೆಗೆ ಪಂಡಿತ ಉದ್ಯೋಗದ ಪರಿಪಾಲಕರಾಗಿ ದುಡಿದರು. ಅವರ ಜೀವನದ ಈ ಅರ್ಥಮಾಡಿಕೊಳ್ಳಲಾಗದ ಅವಧಿಯ ದಿನಗಳನ್ನು ಅರಿಯಲು ಬ್ರಹ್ಮ ಸಮಾಜದ ತತ್ವಗಳ ಅವಶ್ಯಕತೆಗೆ ಕಾರಣವಾಗುವ ಅವರ ಕಾಲದ ಸಮಕಾಲೀನರನ್ನು ಆಧರಿಸಬೇಕಾಗುತ್ತದೆ.[][]
  • ೧೭೯೨ ರಲ್ಲಿ ಬ್ರಿಟಿಷ್‍ನ ಬಾಪ್ಟಿಸ್ಟ್ ಶೂ ಮೇಕರ್ ವಿಲಿಯಂ ಕ್ಯಾರಿ ಕ್ರಿಶ್ಚಿಯನ್ ಪಾದ್ರಿಗಳ ಪ್ರಭಾವ ಕುರಿತಂತೆ "ಕ್ರೈಸ್ತಧರ್ಮೀಯರಲ್ಲದವರನ್ನು ಮತಾಂತರಿಸುವುದನ್ನು ಕುರಿತಂತೆ ಆದ ಒಪ್ಪಂದದ ವಿಚಾರಣೆ" ಯನ್ನು ಪ್ರಕಟಿಸಿದರು.[೧೦]
  • ೧೭೯೩ ರಲ್ಲಿ ವಿಲಿಯಂ ಕ್ಯಾರಿ ಭಾರತಕ್ಕೆ ಬಂದು ನೆಲೆಸಿದರು. ಅವರ ಉದ್ದೇಶವು 'ಬೈಬಲ್'ಅನ್ನು ಭಾಷಾಂತರಿಸುವುದು, ಪ್ರಕಟಿಸುವುದು ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಪ್ರಕಟಿಸಿ ಹಂಚಿ ಭಾರತೀಯ ಜನರಿಗೆ ಕ್ರಿಶ್ಚಿಯಾನಿಟಿ ಬಗ್ಗೆ ತಿಳಿ ಹೇಳುವುದೇ ಆಗಿತ್ತು.[೧೧] "ಸೇವಾ ನಿರತ" (ಅಂದರೆ, ಸೇವೆಮಾಡುವ ಗುಂಪುಗಳು) ಬ್ರಾಹ್ಮಣರು ಮತ್ತು ಪಂಡಿತರು ತಮ್ಮ ಕೆಲಸಕ್ಕೆ ಸಹಕಾರಿಯಾಗಬಹುದೆಂದು, ಅವರೆಲ್ಲರನ್ನು ಒಂದೆಡೆ ಸೇರಿಸಲಾರಂಭಿಸಿದರು. ಕ್ಯಾರಿ ಬೌದ್ಧಮತ ಮತ್ತು ಜೈನಮತಗಳನ್ನು ಕಲಿಯುವ ಮುಖಾಂತರ ಸಾಂಸ್ಕೃತಿಕ ಕ್ರಿಶ್ಚಿಯಾನಿಟಿ ಪರ ವಾದ ಮಾಡಲು ಉದ್ಯುಕ್ತನಾದನು.
  • ೧೭೯೫ ರಲ್ಲಿ ಕ್ಯಾರಿಯವರು ಸಂಸ್ಕೃತ ಪಂಡಿತ- ತಾಂತ್ರಿಕ ಹರಿಹರಾನಂದ ವಿದ್ಯಾಬಾಗೀಶ್‍ರನ್ನು ಸಂಪರ್ಕಿಸಿದ ನಂತರ, ಇವನಿಂದ ರಾಮ್ ಮೋಹನರಾಯರ ಪರಿಚಯವಾಗಿ, ಇಂಗ್ಲೀಷನ್ನು ಕಲಿಯಲು ಸಹಾಯವಾಯಿತು.[೧೨]
  • ೧೭೯೬ ಮತ್ತು ೧೭೯೭ರ ನಡುವೆ, ತ್ರಿಮೂರ್ತಿಗಳಾದ "ಕ್ಯಾರಿ, ವಿದ್ಯಾ ವಾಗೀಶ್ ಮತ್ತು ರಾಯ್" ಒಟ್ಟುಗೂಡಿ, "ಮಹಾ ನಿರ್ವಾಣ ತಂತ್ರ" (ಅಥವಾ "ಬುಕ್ ಆಫ್ ದಿ ಗ್ರೇಟ್ ಲಿಬರೇಶನ್ ")[೧೩] ಎಂಬ ಧಾರ್ಮಿಕ ಪುಸ್ತಕವನ್ನು ಬರೆದು, "ದಿ ಒನ್ ಟ್ರೂ ಗಾಡ್" ಎಂಬ ಧಾರ್ಮಿಕ ಪುಸ್ತಕ ಬಿಡುಗಡೆ ಮಾಡಿ, ಅದನ್ನು ಬಹ್ಮನ್ ಮುಖವಾಡವೇ ಕ್ರಿಶ್ಚಿಯಾನಿಟಿ ಎಂಬಂತೆ ಬಿಂಬಿಸಿದರು. ಕ್ಯಾರಿಯ ಭಾಗವಹಿಸುವಿಕೆ ಬಗ್ಗೆ ಸರಿಯಾಗಿ ದಾಖಲಾಗದೆ, ಅವನು ಕೇವಲ ಸಂಸ್ಕೃತವನ್ನು ಕಲಿಯಲು ೧೭೯೬ ರಲ್ಲಿ ಉದ್ದ್ಯುಕ್ತನಾಗಿ, ೧೭೯೭ ರಲ್ಲಿ ವ್ಯಾಕರಣವನ್ನು ಮುಗಿಸಿದನು. ಅದೇ ವರ್ಷದಲ್ಲಿ 'ಜೋಶುಅ' ದಿಂದ 'ಜಾಬ್' ವರೆಗೆ' ಎಂಬುದನ್ನು ಭಾಷಾಂತರಿಸಿದನು. ಅದೇ ಒಂದು ಬೃಹತ್ ಕೆಲಸವಾಗಿತ್ತು.[೧೪] (ತನ್ನ ಕುಟುಂಬಕ್ಕೆ ಬರೆದ ಪತ್ರದಲ್ಲಿ ರಾಮ್ ಮೋಹನ್ ರಾಯ್, ಈ ದಿನಗಳಲ್ಲಿ ಅವನು, ತನ್ನ ಕುಟುಂಬಕ್ಕೆ, ಅವನ ಇರುವಿಕೆಯ ಬಗ್ಗೆ ಹೇಳುತ್ತಾ, ಈ ಅವಧಿಯಲ್ಲಿ ತಾನು "ಟಿಬೆಟ್"ಗೆ ಹೋಗಿದ್ದು, ನಂತರ ಬಹಳ ದೂರದಲ್ಲಿರುವ "ಟಿಂಬುಕ್ತೂ" ನಲ್ಲಿ ಇರುವುದಾಗಿ ಹೇಳಿದನು. ನಂತರದ ಎರಡು ದಶಕಳ ಕಾಲ ಈ ದಾಖಲೆಗಳನ್ನು ವ್ಯವಸ್ಥಿತವಾಗಿ ಸೇರಿಸಿದನು.[೧೫] ಇದರ ನ್ಯಾಯಾಂಗದ ಭಾಗಗಳನ್ನು ಕಾನೂನಿನ ನ್ಯಾಯಾಲಯದಲ್ಲಿ ಉಪಯೋಗಿಸಿಕೊಂಡು, ಬಂಗಾಳದಲ್ಲಿ ಇಂಗ್ಲಿಷಿನ ನ್ಯಾಯತೀರ್ಮಾನಕ್ಕೆ ಹಿಂದೂ ಕಾನೂನಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ, ತೀರ್ಮಾನ ತೆಗೆದುಕೊಳ್ಳುವ ನಿಟ್ಟಿನಲ್ಲಿ ನೆರವಾದರು. ಆದರೆ ಕೆಲವು ಬ್ರಿಟಿಶ್ ನ್ಯಾಯಾಧೀಶರು, ಮತ್ತು ಕಲೆಕ್ಟರುಗಳು ಇದನ್ನು ಅನುಮಾನದಿಂದ ನೋಡುತ್ತಾ, ಇದು ಸುಳ್ಳು ಪತ್ರ, ಎಂದರು ಮತ್ತು ಇದರ ಉಪಯೋಗವನ್ನು ಬಹಳ ಬೇಗ ನಿಷೇಧಿಸಲಾಯಿತು. (ಹಿಂದೂ ಕಾನೂನಿನ ನೆಲೆಯಾದ ಪಂಡಿತರುಗಳ ಅವಲಂಬನೆಯನ್ನೂ ಕೂಡ) ಕ್ಯಾರಿಯ ಜೊತೆ ವಿದ್ಯಾವಾಗೀಶರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಅವರಿಂದ ಬೇರೆಯಾಗಿ ರಾಮ್ ಮೋಹನ್ ರಾಯರ ಜೊತೆ ಮಾತ್ರಾ ಸಂಪರ್ಕ ಇಟ್ಟು ಕೊಂಡಿದ್ದರು.[೧೬] (ಮಹಾ ನಿರ್ವಾಣ ತಂತ್ರದ ಬ್ರಹ್ಮ ಸಮಾಜದ ಪ್ರಾಮುಖ್ಯತೆ, ಆಸ್ತಿಯ ಕ್ರೋಡೀಕರಣದಿಂದಾಗಿ ರಾಮ್ ಮೋಹನ್ ರಾಯ ಮತ್ತು ದ್ವಾರಕನಾಥ್ ಟಾಗೋರ್‍ರು ನ್ಯಾಯಾಂಗ ಬಳಕೆಗೆ ಉಪಯೋಗಿಸದೆ, ಯಾವುದೇ ಆಂತರಿಕ, ಧಾರ್ಮಿಕ ಪ್ರಯೋಜನವಾಗದೇ ಇದ್ದು, ಅದರ ಇಡೀ ವಿಷಯ "ಕೇವಲ ಒಬ್ಬ ಸತ್ಯ ದೇವರು"ಮತ್ತು ಅದರ ಪೂಜೆಗೆ ಸೀಮಿತಮಾಡಲಾಗಿದೆ.)

ರಾಮ್ ಮೋಹನ್ ರಾಯ್ ಸ್ವಂತ ಉದ್ಯೋಗ

[ಬದಲಾಯಿಸಿ]
  • ೧೭೯೭ ರಲ್ಲಿ, ರಾಮ್ ಮೋಹನ್ ಕಲ್ಕತ್ತಾ ತಲುಪಿ, "ಬನಿಯಾ"ಆದರು (ಸಾಲ ನೀಡುವವನು). ಕಂಪನಿಯ ಆಂಗ್ಲರ ಬಡವರಿಗಾಗಿ ,ತಮ್ಮ ಸಂಪಾದನೆಗಿಂತ ಹೆಚ್ಚಾಗಿ ಬದುಕುವವರಿಗಾಗಿ ಎಂದು ತಿಳಿಸಿದರು. ರಾಮ್ ಮೋಹನ್ ರಾಯರು ಪಂಡಿತರಾಗಿ ಇಂಗ್ಲಿಷ್ ನ್ಯಾಯಾಲಯದಲ್ಲಿ ವೃತ್ತಿಯನ್ನು ಮುಂದುವರಿಸಿದು. ಹೀಗೆ ತನ್ನ ಬದುಕನ್ನು ತಮಗಾಗಿ ರೂಢಿಸಿಕೊಂಡರು. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯನ್ನೂ ಕಲಿಯಲಾರಂಭಿಸಿದರು.
  • ೧೭೯೯ ರಲ್ಲಿ ಕ್ಯಾರಿಯು ಪಾದ್ರಿಗಳಾದ ಜೋಶುಅ ಮಾರ್ಷ್ ಮ್ಯಾನ್ ಮತ್ತು ಮುದ್ರಣಕಾರ ವಿಲಿಯಂವಾರ್ಡ್ ರೊಂದಿಗೆ ಡ್ಯಾನಿಶ್ ಸೆಟ್ಟಲ್ ಮೆಂಟ್ ನಲ್ಲಿ ಸೇರಾಮ್‍ಪುರ್‍ನಲ್ಲಿ ಒಂದಾದರು.
  • ೧೮೦೩ ರಿಂದ ೧೮೧೫ ರ ವರೆಗೆ ರಾಮ್ ಮೋಹನ್ ರವರು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ "ಬರಹ ಸೇವೆ" ಮಾಡುತ್ತಾ, ಖಾಸಗೀ ಗುಮಾಸ್ತನಾಗಿ, "ಮುನ್ಷಿ"ಯಾಗಿ, ಮುರ್ಶಿದ ಬಾದ್ [೧೭] ನಲ್ಲಿನ ಅಪೀಲು ನ್ಯಾಯಾಲಯದಲ್ಲಿ ರೆಜಿಸ್ತ್ರರ್ ಆದ ಥಾಮಸ್ ವುಡ್ ಫೋರ್ದೆ, ಕೈ ಕೆಳಗೆ ಕೆಲಸ ಮಾಡುತ್ತಿದ್ದರು. (ದೂರದ ಸೋದರ ಸಂಬಂಧಿ,- ಮ್ಯಾಜಿಸ್ಟ್ರೇಟ್ ಸಹ -ಮಹಾ ನಿರ್ವಾಣ ತಂತ್ರದ ಬದಲಿ ಹೆಸರಾದ ಅರ್ತುರ್ ಅವಲೋನ್ ಕೈ ಕೆಳಗೆ ಕೆಲಸ ಮಾಡಿದರು)[೧೮] ರಾಯ್‍ರವರು ವುಡ್ ಫೋರ್ದೆಯ ಸೇವೆಯಿಂದ ರಾಜೀನಾಮೆ ನೀಡಿ ಹೊರ ಬಂದರು. ನಂತರ ಕಲೆಕ್ಟರ್ ಆದ 'ಜಾನ್ ದಿಗ್ಬಿ'ಬಳಿ ಕೆಲಸವನ್ನು ಗಿಟ್ಟಿಸಿ, ರಾಂಗ್ಪುರ್‍ನಲ್ಲಿ ರಾಮ್ ಮೋಹನ್ ಹಲವು ವರ್ಷಗಳು ಕಳೆದು, ಡಿಗ್ಬಿಯೇ ಅಲ್ಲದೆ ತನ್ನ ಸಂಪರ್ಕಗಳನ್ನು ಹರಿಹರಾನಂದರ ಜೊತೆ ಮುಂದುವರಿಸಿದರು. ವಿಲಿಯಂ ಕ್ಯಾರಿ, ನಂತರ ಸೇರಾಮ್‍ಪುರ್‍ನಲ್ಲಿ ವಾಸ ಮಾಡುತ್ತಾ, ತನ್ನ ಹಳೆಯ 'ಟ್ರಿಯೋ/ಮೂರು ಲಾಭದಾಯಕ ಸಂಸ್ಥೆ' ಗಳೊಡನೆ ಸಂಪರ್ಕವನ್ನು ಮುಂದುವರಿಸಿದನು. ವಿಲಿಯಂ ಕ್ಯಾರಿ ನಂತರ ಇಂಗ್ಲಿಷ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ಫೋರ್ಟ್ ವಿಲಿಯಂ ಮಹಾ ಘಟಕಕ್ಕೆ ಸೇರಿ, ತನ್ನ ಧಾರ್ಮಿಕ ಮತ್ತು ರಾಜಕೀಯ ಆಶೋತ್ತರಗಳನ್ನು ಒಂದರೊಳಗೊಂದು ಹೆಚ್ಚಿಸಿಕೊಂಡರು.[೧೯]
  • ೧೮೩೮ ರಲ್ಲಿ ,ಒಂದು ವರ್ಷಕ್ಕೆ ೩ ಮಿಲಿಯನ್ ಪೌಂಡುಗಳಂತೆ ಭಾರತ ದೇಶದ ಹಣ, ಈಸ್ಟ್ ಇಂಡಿಯಾ ಕಂಪನಿಯ ಪಾಲಾಗುತ್ತಿತ್ತು. ಈ ರೀತಿಯಾಗಿ ಭಾರತ ದೇಶದ ಎಷ್ಟು ಹಣ ಭಾರತದಿಂದ ಕಣ್ಮರೆಯಾಗುತ್ತಿದೆ ಎಂದು ಲೆಕಾಚಾರ ನಡೆಸಿದವರಲ್ಲಿ ರಾಮ್ ಮೋಹನ್ ರಾಯರು ಮೊದಲಿಗರು. ಅವರು ಲೆಕ್ಕಾಚಾರ ಮಾಡಿದಂತೆ ಕಂದಾಯದ ಅರ್ಧದಷ್ಟು ಭಾರತದಿಂದ ಇಂಗ್ಲೆಂಡ್‍ಗೆ ಕಳುಹಿಸಲ್ಪಟ್ಟಿತು. ಹೆಚ್ಚು ಜನಸಂಖ್ಯೆ ಇರುವ ಭಾರತದವರಿಗೆ ಇನ್ನುಳಿದ ಸ್ವಲ್ಪ ಹಣವನ್ನು ಸಮಾಜದ ಒಳಿತಿಗೆ ಉಪಯೋಗಿಸಲಾಗುತ್ತಿತ್ತು.[೨೦] ರಾಮ್ ಮೋಹನ್ ರಾಯ್‍ರು ಇದನ್ನು ಕಂಡು ನಂಬಿದ್ದು, ಭಾರತದಲ್ಲಿ ಯುರೋಪಿಯನ್ನರ ಕಟ್ಟುಪಾಡಿಲ್ಲದ ವಸಾಹತು ಶಾಹಿಗಳ ಕಟ್ಟಳೆಗೆ ಒಳಪಡದ ವ್ಯಾಪಾರದ ಆಡಳಿತದಿಂದ ಮಾತ್ರ ಈ ರೀತಿಯ ಆರ್ಥಿಕ ನಷ್ಟ ತಡೆಯಲು ಸಾಧ್ಯ ಎಂದರು.[೨೧]
  • ಪ್ಲಾಸ್ಸಿ ಮತ್ತು ಬಕ್ಸಾರ್ ಕದನಗಳ ನಂತರ ಹೆಚ್ಚು ಕಡಿಮೆ ಇಲ್ಲವಾಗಿದ್ದ ಮುಸ್ಲಿಮರು, ೧೯ ನೇ ಶತಮಾನದ ತಿರುವಿನಲ್ಲಿ, ಮತ್ತೊಮ್ಮೆ ಕಂಪನಿಗೆ ರಾಜಕೀಯ ಬೆದರಿಕೆಯನ್ನು ಭೀಕರವಾಗಿಯೇ ನೀಡಿದರು. ಕ್ಯಾರಿಯು ಆಗ ರಾಮ್ ಮೋಹನ್ ರಾಯರನ್ನು ಒಬ್ಬ ಪ್ರತಿಭಟನಾಕಾರರನ್ನಾಗಿ ಬಳಸಿಕೊಂಡರು.[೨೨]
  • ಕ್ಯಾರಿಯ ಗುಪ್ತಪಾಲಕತ್ವದಲ್ಲಿ ಮುಂದಿನ ಎರಡು ದಶಕಗಳ ಕಾಲ, ಬಂಗಾಳದ ಹಿಂದೂ ಧಾರ್ಮಿಕ ಕೋಟೆಗಳ ಮೇಲೆ ರಾಮ್ ಮೋಹನ್ ರಾಯರು ಧಾಳಿಯನ್ನು ಇಟ್ಟರು. ಅವರದೇ ಸ್ವಂತ 'ಕುಲೀನ ಬ್ರಾಹ್ಮಣಿ ಪೂಜಾರಿ ವರ್ಗದ ಮೇಲೆ ( ಬೆಂಗಾಲದ ಹಲವಾರು ದೇವಸ್ಥಾನಗಳು ಅವರ ಹಿಡಿತದಲ್ಲಿದ್ದ ಕಾಲ) ಮತ್ತು ಹೆಚ್ಚಿನದು ಪೂಜಾರಿ ವೃತ್ತಿಯ ಮೇಲೆ. ರಾಜಾ ರಾಮ್ ಮೋಹನ್ ರಾಯರಿಗೆಂದೇ ಸಾಮಾಜಿಕ ಮತ್ತು ತಾತ್ವಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಕ್ಯಾರಿ ಕುಲೀನ ವರ್ಗದ ಪ್ರಭಾವವನ್ನು ಕಡಿಮೆ ಮಾಡಿ ಹಿಡಿತದಲ್ಲಿಟ್ಟುಕೊಳ್ಳಲು (ಅದರಲ್ಲೂ ತಮ್ಮ ಸ್ವಾಮ್ಯ ತಪ್ಪಿದ ಮಕ್ಕಳ ಮೇಲೆ ಒತ್ತಡ ಹಾಕಿ ಬಂಗಾಳದ "ಭದ್ರಲೋಕ" ಇಲ್ಲವೇ ಶ್ರೀಮಂತಿಕೆಯನ್ನು ನಿರ್ಮಾಣ ಮಾಡುವುದು ) ಮುಘಲ್ ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡಿ ಕಂಪನಿಯನ್ನು ಆಡಳಿತಾಧಿಕಾರಕ್ಕೆ ತರುವುದು. ಅವರ ಹೋರಾಟ ಕುಲೀನರ ಅತಿರೇಕದಲ್ಲಿ ಸೇರಿರುವ - ಸತಿಪದ್ದತಿ (ವಿಧವೆಯರನ್ನು ಸುಡುವುದು ), ಬಹುಪತ್ನಿತ್ವ , ಮೂರ್ತಿಪೂಜೆ , ಬಾಲ್ಯ ವಿವಾಹ , ವರದಕ್ಷಿಣೆ ಪದ್ಧತಿ ಮುಂತಾದವುಗಳ ವಿರುದ್ಧ ಇದ್ದವು.
  • 1819 ರಿಂದ, ರಾಮ ಮೋಹನರ ಆಯುಧಸೆರಾಂಪುರದಲ್ಲಿ ನೆಲೆಗೊಂಡ ಬ್ಯಾಪ್ಟಿಸ್ಟ್ ಮಿಷನರಿ ವಿಲಿಯಮ್ ಕ್ಯಾರಿ ಮತ್ತು ಸೆರಾಂಪುರ್ ಮಿಷನರಿಗಳಿಗೆ ವಿರುದ್ಧವಾಗಿ ತಿರುಗಿತು. ದ್ವಾರಕಾನಾಥ್ ಅವರ ಪರಂಪರೆಯನ್ನು ಅವರು ಬ್ಯಾಪ್ಟಿಸ್ಟ್ "ಟ್ರಿನಿಟೇರಿಯನ್" ಕ್ರೈಸ್ತಧರ್ಮದ ವಿರುದ್ಧ ಸರಣಿ ದಾಳಿಯನ್ನು ಪ್ರಾರಂಭಿಸಿದರು, ಮತ್ತು ಕ್ರಿಶ್ಚಿಯನ್ ಧರ್ಮದ ಯುನಿಟೇರಿಯನ್ ಬಣ ಅವರ ದೇವತಾಶಾಸ್ತ್ರೀಯ ಚರ್ಚೆಯಲ್ಲಿ ಅವರಿಗೆ ಸಾಕಷ್ಟು ಸಹಾಯ ಮಾಡಿದರು.[೨೩]

ರಾಯರ ಸಮಕಾಲೀನ ಜೀವನ ಚರಿತ್ರೆಯ ದಾಖಲೆಗಳು

[ಬದಲಾಯಿಸಿ]
  • "೧೮೦೫ ರಲ್ಲಿ ರಾಮ್ ಮೋಹನ್ ರವರು 'ತುಹ್ಫಾತ್ -ಉಲ್ -ಮುವಹ್ಹಿದೀನ್' (ಏಕದೇವವಾದ ದೇವರ ಆರಾಧಕರಿಗೆ ಕೊಡುಗೆ) - ಪ್ರಬಂಧವನ್ನು ಪೆರ್ಶಿಯನ್ ಭಾಷೆಯಲ್ಲಿ ಬರೆದು, ಅರೇಬಿಕ್ ಭಾಷೆಯಲ್ಲಿ ಪೀಟಿಕೆಯನ್ನು ಬರೆದು, ಅದರಲ್ಲಿ ಎಲ್ಲಾ ದೇವರು ಒಂದೇ ಎಂದು ವಿಚಾರಾತ್ಮಕವಾಗಿ ಪ್ರತಿಪಾದಿಸಿದರು. ಪೆರ್ಶಿಯನ್ ಭಾಷೆಯಲ್ಲಿ ಪ್ರಕಟವಾದುದರಿಂದ, ಮುಸ್ಲಿಂ ಜನಾಂಗದ ಕೆಲವು ಜನರ ದ್ವೇಷ ಕಟ್ಟಿಕೊಂಡಂತೆ ಆಯಿತು. ಮುಂದಿನ ಹತ್ತು ವರ್ಷಗಳ ಕಾಲ, ರಾಮ್ ಮೋಹನ್ ರಾಯರು ಜಾನ್ ದಿಗ್ಬಿಯ ಜೊತೆ ಈಸ್ಟ್ ಇಂಡಿಯಾ ಕಂಪನಿಯ ಒಡೆತನದಲ್ಲಿ ಪ್ರಯಾಣಿಸುತ್ತಾ, ಮೊದಲು ಮುನ್ಷಿಯಾಗಿ ನಂತರ ದಿವಾನರಾಗಿ ಕೆಲಸ ಮಾಡಿದರು. ಅದು ಅವರ ಇಂಗ್ಲೀಷ್ ಹಾಗೂ ಇಂಗ್ಲೆಂಡ್‍ನ ಬಾಪ್ಟಿಸ್ಟ್ ಕ್ರಿಸ್ತಿಯಾನಿಟಿಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಪ್ರಚಂಡವಾಗಿ ಹೆಚ್ಚಿಸಿದವು. ಜೈನ ಜನಾಂಗದವರೊಂದಿಗೆ ಸ್ನೇಹವನ್ನು ಬೆಳಸಿ ಹಿಂದೂಗಳ ಬಗ್ಗೆ ಅವರ ಅನುಸಂಧಾನ ಏನೆಂದು ಕಂಡುಕೊಂಡರು. ಪೂಜಾರಿ ಪದ್ಧತಿ ಹಾಗು ದೇವರನ್ನೇ ವಿರೋಧಿಸಿದರು. (ಧಾರ್ಮಿಕ ಶಾಸ್ತ್ರ ಪದ್ಧತಿಯ ರಕ್ತಪೂರ್ಣ ಬಲಿಯ ತ್ಯಾಗಕ್ಕೆ ಬಂಗಾಲದಲ್ಲಿ ಬಹಳ ದಿನ ಬೇಕಾಯಿತು.)
  • ೧೮೧೫ ರಲ್ಲಿ ಅವರು ಶ್ರೀಮಂತಿಕೆಯನ್ನು ಗಳಿಸಿದ ಮೇಲೆ, ಕಂಪನಿಯನ್ನು ಬಿಟ್ಟು, ರಾಮ ಮೋಹನ ರಾಯರು ಕಲ್ಕತ್ತದಲ್ಲಿ ಪುನರ್ವಸತಿಯನ್ನು ಹೊಂದಿದರು. 'ಆತ್ಮೀಯ ಸಭೆ' ಯನ್ನು ಆರಂಭಿಸಿದರು. - ಇಲ್ಲಿ ಧಾರ್ಮಿಕ ಚರ್ಚೆಯನ್ನು ಆರಂಭಿಸಿ, ಹಿಂದೂ ಧರ್ಮದಲ್ಲಿನ ಏಕದೇವವಾದವನ್ನು ಹಾಗು ಅದಕ್ಕೆ ಒಪ್ಪುವಂತಹ ವಾದದ ವಿಷಯಗಳನ್ನು ಚರ್ಚಿಸಲಾರಂಭಿಸಿದರು. ಆದರೆ, ರಾಮ ಮೋಹನರ ತಾಯಿ,ಅವನನ್ನು ಕ್ಷಮಿಸದೆ ವ್ಯಂಗ್ಯವಾಗಿ ೧೮೧೭ರಲ್ಲಿ ಒಂದರ ಮೇಲೆ ಒಂದರಂತೆ, ರಾಮ ಮೋಹನರ ಮೇಲೆ ಕೇಸುಗಳನ್ನು ಹಾಕಿ, ರಾಮ ಮೋಹನರ ಧರ್ಮ ಭ್ರಷ್ಟತೆಯ ವಿರುದ್ಧ ಕುಟುಂಬದ ಜಮೀನ್ದಾರಿಕೆಯಿಂದ ದೂರವಿಡುವಂತೆ ಮಾಡಿದಳು. ರಾಮ ಮೋಹನರು ಇದನ್ನು ವಿರೋಧಿಸಿ,ತನ್ನ ಕುಟುಂಬದ ಸತಿ ಪದ್ಧತಿಯನ್ನು ಬಲವಾಗಿ ಖಂಡಿಸಿ ವಿಧವೆಯರನ್ನು ಗಂಡಂದಿರ ಚಿತೆಯೊಂದಿಗೆ ಸುದುತ್ತಿದ್ದುದರಿಂದ ಬ್ರಿಟಿಶರ ನ್ಯಾಯಾಲಯದಲ್ಲಿ ಅವರಿಗೆ ಯಾವ ಆಸ್ತಿ ದಕ್ಕುತ್ತಿರಲಿಲ್ಲ. ೧೮೧೭ ರಲ್ಲಿ ರಾಮ ಮೋಹನರನ್ನು ಹಿಂದೂ ಜಮೀನ್ದಾರಿ ಪದ್ಧತಿಯಿಂದ ದೂರ ಇಟ್ಟ ಒಂದು ಘಟನೆ, ಹಿಂದೂ ಕಾಲೇಜು (ನಂತರ ಪ್ರೆಸಿಡೆನ್ಸಿ)'ಡೇವಿಡ್ ಹೇರ್' ಸೇರಿದಂತೆ ಸಂಭವಿಸಿತು. ತಮಿಳು ಬ್ರಾಹ್ಮಣ ಸುಬ್ರಮಣ್ಯ ಶಾಸ್ತ್ರಿಯವರ ಜೊತೆ, ಮೂರ್ತಿ ಪೂಜೆಯ ವಿರುದ್ಧ ನಡೆದ ಚರ್ಚೆ ೧೮೧೯ ರಲ್ಲಿ, ಹಿಂದೂಗಳ ಸಾರ್ವಜನಿಕ ಗಲಾಟೆಗೆ ಕಾರಣವಾಯಿತು. ಚರ್ಚೆಯಲ್ಲಿ ಗೆಲುವಾದರೂ, ಬ್ರಾಹ್ಮಣರ ಧರ್ಮಗ್ರಂಥ ಹಾಗು ವೇದಾಂತಗಳ ಬಗ್ಗೆ ರಾಮ್ ಮೋಹನರಿಗೆ ಇದ್ದ ಹಿಡಿತ ಕಡಿಮೆಯಾಗಿರುವುದು ವ್ಯಕ್ತವಾಯಿತು. ನಂಬಿಕಸ್ಥ ಹರಿಹರಾನಂದನ ಸಹೋದರ, ಬುದ್ಧಿವಂತ ಬ್ರಾಹ್ಮಣ, ರಾಮ ಚಂದರ್ ವಿದ್ಯಾಬಾಗೀಶರನ್ನು ಕರೆತಂದು ಆಗಿರುವ ಘಟನೆಗಳನ್ನು ರಿಪೇರಿ ಮಾಡಲು ಮತ್ತು ರಾಮ್ ಮೋಹನರ ಬದಲಾದ ಅಹಂಗೆ ಉತ್ತರಾಧಿಕಾರಿಯಾಗಿ, ತತ್ವಶಾಸ್ತ್ರ ಸಿದ್ಧಾಂತದಲ್ಲಿ ರಾಮ್ ಮೋಹನರಿಗೆ ನೆರವಾಗಲು, ಅದರಲ್ಲಿಯೂ ಬಂಗಾಳ ಮತ್ತು ಭಾಷೆಗೆ ಸಂಬಂಧಿಸಿದಂತೆ ಜೀವನ ಪರ್ಯಂತ ನೆರವಾಗಲು ಗುರುತಿಸಿಕೊಂಡರು. ಈ ವೇಳೆಗಾಗಲೇ (ಆದರೆ ಎಲ್ಲಿಯೂ ಪ್ರಕಟವಾಗದೆ) ಕ್ಯಾರಿ ಮತ್ತು ಮರ್ಶಮನ್ ರಾಮ್ ಮೋಹನ ರಾಯರ ಇಂಗ್ಲಿಷ್ ಕೆಲಸದ ಹಿಂದೆ ಇದ್ದರೆಂಬ ಗುಮಾನಿ, ಎಂದು ಹಿಂದೂ ಜಮೀನ್ದಾರರು ನಂಬಿದ್ದರು ಮತ್ತು ಆಪಾದಿಸಿದ್ದರು. ಯುವ ಹಿಂದೂ ಜಮೀನ್ದಾರ ದ್ವಾರಕನಾಥ ಟಾಗೋರ್ ಕಾಲದಿಂದ ಕಾಲಕ್ಕೆ 'ಸಭಾ'ದ ಸಭೆಗಳಲ್ಲಿ ಭಾಗವಹಿಸುತ್ತಾ, ಖಾಸಗಿಯಾಗಿ ರಾಮ್ ಮೋಹನರ ಮನವೊಲಿಸಿ (ಕೇಸುಗಳ ಒತ್ತಡದ ಆರ್ಥಿಕ ದುಸ್ಥಿಯಿಂದ ಹಾಗೂ ಹಿಂದೂಗಳ ಕೊಲೆ ಬೆದರಿಕೆಯಿಂದ) ೧೮೧೯ ರಲ್ಲಿ ಆತ್ಮೀಯ ಸಭೆಯನ್ನು ಬಿಟ್ಟುಬಿಡುವಂತೆ, ಬದಲಾಗಿ ಕೇವಲ ರಾಜಕೀಯ ಮಧ್ಯವರ್ತಿಯಾಗಿ ಇರುವಂತೆ ಮಾಡಿದರು.
  • ೧೮೧೯ ರಿಂದ ರಾಮ್ ಮೋಹನರ ಹೋರಾಟ ಹೆಚ್ಚಾಗಿ ಕ್ಯಾರಿ ಮತ್ತು ಸೊರಂಪುರ ಪಾದ್ರಿಗಳ ವಿರುದ್ಧ ನಡೆಯಿತು. ದ್ವಾರಕನಾಥರ ಉದಾರ ಮನೋಭಾವದಿಂದ 'ಬಾಪ್ಟಿಸ್ಟ್' "ಟ್ರಿನಿ ಟೆರಿಯನ್" ಕ್ರಿಶ್ಚಿಯಾನಿಟಿಯ ವಿರುದ್ಧ ಹೋರಾಡಿ, ಅವರ ತತ್ವಶಾಸ್ತ್ರದ ಚರ್ಚೆಗಳಲ್ಲಿ ಸಹಾಯಕನಾಗುತ್ತಾ ಕ್ರಿಶ್ಚಿಯಾನಿಟಿಯ ಎಕದೇವವಾದದ ತಂಡದವರೊಡನೆ ಒಂದಾದರು." [೨೪]

ಮಧ್ಯಂತರ "ಬ್ರಹ್ಮೋ " ಅವಧಿ (೧೮೨೦ - ೧೮೩೦)

[ಬದಲಾಯಿಸಿ]
  • ಇದು ರಾಮ್ ಮೋಹನರವರ ಅತ್ಯಂತ ವಿವಾದದ ಅವಧಿ. ಅವರ ಪ್ರಕಟಣೆಯ ಬರಹಗಳ ಬಗ್ಗೆ ಶಿವನಾಥ ಶಾಸ್ತ್ರಿ ಬರೆಯುತ್ತಾ:-[೨೫]
  • "1820 ಮತ್ತು 1830 ರ ನಡುವಿನ ಅವಧಿಯು ಸಾಹಿತ್ಯಿಕ ದೃಷ್ಟಿಕೋನದಿಂದ ಕೂಡಾ ಘಟನಾ ಪ್ರಾಮುಖ್ಯತೆ ಪಡೆದಿದೆ. ಆ ಸಮಯದಲ್ಲಿ ಅವರ ಪ್ರಕಟಣೆಗಳ ಕೆಳಗಿನ ಪಟ್ಟಿಯಿಂದ ತಿಳಿಯುವುದು:
  • 1821 ರಲ್ಲಿ ಕ್ರಿಶ್ಚಿಯನ್ ಸಾರ್ವಜನಿಕರ ಎರಡನೇ ಅಪೀಲು, 'ಬ್ರಾಹ್ಮಣರ ಮ್ಯಾಗಜೀನ್' ಭಾಗ I,II ಮತ್ತು III,ಬಂಗಾಳಿ ಭಾಷಾಂತರದೊಂದಿಗೆ,ಹಾಗೂ ಸಂಬದ ಕೌಮುದಿ ಎಂಬ ಹೊಸ ಬೆಂಗಾಲಿ ವಾರ್ತಾಪತ್ರಿಕೆ 1821 ರಲ್ಲಿ;
  • ಮೀರತ್ -ಉಲ್ -ಅಕ್ಬರ್ ಎಂಬ ಪೆರ್ಸಿಯನ್ ಪತ್ರಿಕೆಯಲ್ಲಿ, ಪ್ರಾಚೀನ ಹೆಂಗಸರ ಹಕ್ಕುಗಳ ವಿಷಯವನ್ನು ಒಳಗೊಂಡಿದ್ದು,ಮತ್ತು ಬೆಂಗಾಲಿ ಭಾಷೆಯಲ್ಲಿ ಒಂದು ಪುಸ್ತಕ "ನಾಲ್ಕು ಪ್ರಶ್ನೆಗಳಿಗೆ ಉತ್ತರಗಳು" 1822 ರಲ್ಲಿ;
  • ಕ್ರಿಶ್ಚಿಯನ್ ಸಾರ್ವಜನಿಕರಿಗೆ ಮೂರನೆಯ ಮತ್ತು ಅಂತಿಮ ಮನವಿ, ಪತ್ರಿಕಾ ಸ್ವಾತಂತ್ರ್ಯದ ವಿಷಯದ ಬಗ್ಗೆ ಇಂಗ್ಲಿಷ್ ರಾಜನಿಗೆ ಸ್ಮಾರಕ, ಕ್ರಿಶ್ಚಿಯನ್ ವಿವಾದಕ್ಕೆ ಸಂಬಂಧಿಸಿದ ರಾಮ್ಡಾಸ್ ಪೇಪರ್ಸ್, ಬ್ರಾಹ್ಮಣಿಕ ಮ್ಯಾಗಝೀನ್, ನಂ IV, ಇಂಗ್ಲಿಷ್ ಶಿಕ್ಷಣ ವಿಷಯದ ಬಗ್ಗೆ ಲಾರ್ಡ್ ಅರ್ನ್ಹೆರ್ಸ್ಟ್ಗೆ ಪತ್ರ , "ಹಂಬಲ್ ಸಲಹೆಗಳು" ಎಂದು ಕರೆಯಲ್ಪಡುವ ಒಂದು ಬರವಣಿಗೆ ಮತ್ತು ಬಂಗಾಳಿ ಪುಸ್ತಕ "ಪ್ಯಾಥಿಪ್ರದನ್ ಅಥವಾ ಸಿಕ್ ಫಾರ್ ಮೆಡಿಸಿನ್" ಎಂದು ಕರೆಯಲ್ಪಡುತ್ತದೆ, 1823 ರಲ್ಲಿ ಎಲ್ಲವು;
  • 1824 ರಲ್ಲಿ "ಭಾರತದಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಾಸ್ಪೆಕ್ಟ್ಸ್" ಮತ್ತು "ದಕ್ಷಿಣ ಭಾರತದಲ್ಲಿ ಕ್ಷಾಮ-ಬಡಿದ ಸ್ಥಳೀಯರ ಮೇಲ್ಮನವಿ" ಎಂಬ ಬಗ್ಗೆ ರೆವೆಲ್ ಎಚ್. ವೇರ್ಗೆ ಬರೆದ ಪತ್ರ;
  • ೧೮೨೫ ರಲ್ಲಿ "ವಿವಿಧ ರೀತಿಯ ಆರಾಧನೆ'ಎಂಬ ಚಿಕ್ಕ ಗ್ರಂಥ;ವಿಚಾರ -ಮಾರ್ಗ;
  • ಕ್ರಿಶ್ಚಿಯನ್ನರ ವಿವಾದದ ಬಗ್ಗೆ, ರಾಮದಾಸ್‍ರ ಪತ್ರಗಳು 'ಬ್ರಾಹ್ಮಣಿಕಲ್ ಮ್ಯಾಗಜಿನ್‍ಗಳು, ನಂ.IV, ಇಂಗ್ಲಿಷ್ ವಿದ್ಯಾಭ್ಯಾಸದ ಬಗ್ಗೆ ಲಾರ್ಡ್ ಅರ್ನ್ಹೆರ್ಸ್ಟ್‍ರಿಗೆ ಬರೆದ ಪತ್ರಗಳು; "ಹಂಬಲ್ ಸಜೆಶನ್ಸ್" ಎಂಬ ಚಿಕ್ಕ ಗ್ರಂಥ, ಬಂಗಾಳಿಯಲ್ಲಿ ಬರೆದ "ಪಟ್ಯ ಪ್ರಧಾನ ಅಥವಾ ರೋಗಿಗಳಿಗೆ ಔಷಧ" ಎಲ್ಲಾ ೧೮೨೩ ರಲ್ಲಿ ;
  • ದೇವರ ಪ್ರೀತಿಪಾತ್ರ ಮನೆಮಾಲೀಕನ ವಿದ್ಯಾರ್ಹತೆಗಳ ಮೇಲೆ ಒಂದು ಬಂಗಾಳಿ ವಿಚಾರ, ಕಾಯಸ್ಥನೊಂದಿಗಿನ ವಿವಾದದ ಮೇಲೆ ಬಂಗಾಳಿ ವಿಚಾರ, ಮತ್ತು 1826 ರಲ್ಲಿ ಇಂಗ್ಲಿಷ್ನಲ್ಲಿ ಬಂಗಾಳಿ ಭಾಷೆಯ ಗ್ರಾಮರ್ ಎಂಬ ಒಂದು ವ್ಯಾಕರಣ;
  • ಇಂಗ್ಲಿಷ್ ಭಾಷಾಂತರದ ಜೊತೆಗೆ, "ಗಾಯತ್ರಿ ಮೂಲಕ ದೈವಿಕ ಪೂಜೆ" ಸಂಸ್ಕೃತ ಗ್ರಂಥದ ಆವೃತ್ತಿ; ಜಾತಿಗೆ ವಿರುದ್ಧವಾಗಿ ಸಂಸ್ಕೃತ ಗ್ರಂಥಗಳ ಮಾರ್ಗದ ಆವೃತ್ತಿ ಮತ್ತು 1827 ರಲ್ಲಿ " ಮತ್ತು "ಹಿಂದು ಎಂಬ ಪ್ರಶ್ನೆಗೆ ಉತ್ತರ" ಎಂಬ ಹಿಂದೆ ಗಮನಿಸಿದ ವಿಚಾರ;
  • 1828 ರಲ್ಲಿ ಅವರ ಮತ್ತು ಅವರ ಸ್ನೇಹಿತರಿಂದ ಸಂಯೋಜಿಸಲ್ಪಟ್ಟ ದೈವಿಕ ಆರಾಧನೆಯ ಒಂದು ರೂಪ ಮತ್ತು ಸ್ತುತಿಗೀತೆಗಳ ಒಂದು ಸಂಗ್ರಹ;
  • ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ "ಪವಿತ್ರ ಗ್ರಂಥಗಗಳ ಆಧಾರದ ಮೇಲೆ ಸ್ಥಾಪಿಸಲ್ಪಟ್ಟ ಧಾರ್ಮಿಕ ಪಾಠಗಳು", "ಅನುಷ್ಠಾನ" ಎಂದು ಕರೆಯಲ್ಪಡುವ ಬಂಗಾಳಿ ಮಾರ್ಗ ಅಥವಾ ವಿಧಾನ ಮತ್ತು 1829 ರಲ್ಲಿ 'ಸತಿ' ಪದ್ದತಿಯ ವಿರುದ್ಧದ ಅರ್ಜಿ;
  • ಸಂಸತ್ತು ಈ ಸುಧಾರಣಾ ಕಾನೂನನ್ನು ಒಪ್ಪಲು ವಿಫಲವಾದರೆ, ತಾವು (ಅವರು) ಬ್ರಿಟಿಷ್ ಸಾಮ್ರಾಜ್ಯದಿಂದ ವಲಸೆ ಹೋಗುವುದಾಗಿ ಸಾರ್ವಜನಿಕವಾಗಿ ಘೋಷಿಸಿದರು.

ಸತಿ ಪದ್ದತಿಗೆ ವಿರೋಧ ಮತ್ತು ನಿಷೇಧ ಕಾನೂನು

[ಬದಲಾಯಿಸಿ]
  • ರಾಮಮೋಹನನ ಸಹೋದರ ಜಗ್ಮೋಹನ್ ನಿಧನರಾದರು. ಅವರ ಹೆಂಡತಿ ಅಲಕಮಂಜರಿ ಅವರು 'ಸಹಾರಾನ್' - 'ಸತಿಹೋಗುವುದು'(ಅಂದರೆ, ಪತಿ ಸತ್ತನಂತರ ಪತ್ನಿಯನ್ನು ಜೀವಂತವಾಗಿ ಸುಟ್ಟುಹಾಕಬೇಕೆಂಬ ನಿಯಮ) ಕಣ್ಣಾರೆ ನೋಡಬೇಕಾಯಿತು. ಶ್ಮಶಾನದಲ್ಲಿ ರಾಜ ಮೋಹನರ ಸೋದರನ ಪತ್ನಿಯನ್ನು ಸುಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಎಲ್ಲಾ ಸಂಬಂಧಿಕರು ಒಟ್ಟುಗೂಡಿದರು. ಅಲಕಮಂಜರಿಗೆ (ಲೇಪಿತ)-ಒಂದು ಸೀರೆಯನ್ನು ಉಡಿಸಿದರು ಮತ್ತು ಅವಳ ಹಣೆಯ ಮೇಲೆ 'ಕುಂಕುಮ' ಇಟ್ಟರು. ('ಕುಂಕುಂ' ಹಣೆಯ ಮೇಲೆ ಹಚ್ಚುವ ಕೆಂಪು ಬಿಂದು- ಹಿಂದೂ ಹೆಂಡತಿಯರು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ, ಅದು ಅವಳ ಪತಿ ಜೀವಂತವಾಗಿರುವ ಒಂದು ಸೂಚನೆಯಾಗಿದೆ.) ಅವಳ ಕೂದಲಜಡೆಯನ್ನು ಬಿಚ್ಚಲಾಯಿತು. ಭಯವನ್ನು ಅವಳ ಮುಖದ ಮೇಲೆ ಎದ್ದು ತೋರಿತು. ಅವಳ ಪತಿಯ ಶವವನ್ನು ಸಮಾಧಿ ಸ್ಥಳಕ್ಕೆ ತರಲಾಯಿತು. ರಾಮಮೋಹನ್ ತನ್ನ ಅತ್ತಿಗೆ 'ಸತಿ'ಯನ್ನು ಆಚರಿಸಬಾರದು ಎಂದು ಬೇಡಿಕೊಂಡರು. ಸಂಬಂಧಿಗಳು ರಾಮಮೋಹನ ಮಾತುಗಳನ್ನು ವಿರೋಧಿಸಿದರು. ಅವರು ಅವಳನ್ನು ಶವವಕ್ಕೆ ಬಂಧಿಸಿ ಶವಸಂಸ್ಕಾರದೊಂದಿಗೆ ಅಂತ್ಯಕ್ರಿಯೆ ಚಿತೆಯಲ್ಲಿ ಅವಳನ್ನೂ ಇರಿಸಿದರು. ಚಿತೆಗೆ ಬೆಂಕಿಯಲ್ಲಿ ಹಾಕಲಾಯಿತು. ಅಲಕಮಂಜರಿ ಹೆದರಿ, ಭಯದಲ್ಲಿ ಅರಚಿದಳು, ಆದರೆ ಅವಳನ್ನು ಮುಕ್ತ ಮಾಡಲಿಲ್ಲ. ಆಕೆಯ ಪತಿಯೊಂದಿಗೆ ಸುಟ್ಟುಹಾಕಲಾಯಿತು. ಎಲ್ಲಾ ಸಂಬಂಧಿಕರು ಅವಳನ್ನು 'ಮಹಾ ಸತಿ' ಎಂದು ಘೋಷಿಸಿದರು. ಮಹಾ ಸತಿ! '(ಶ್ರೇಷ್ಠ ಹೆಂಡತಿ) ಮತ್ತು ಹಿಂತಿರುಗಿ ಹೋಗಿ ಎಂದು ಹೊರಟುಹೊದರು . ತನ್ನ ಸಹೋದರಿಯ ಧಾರ್ಮಿಕ ಪದ್ದತಿಯ "ಸತಿ" ಯ ಈ ಹೃದಯದ ಒಡೆಯುವ ದೃಶ್ಯವು ರಾಮಮೋಹನ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿತು. ನಂತರ ಮತ್ತು ಅಲ್ಲಿ ಅವರು ಆ ಭಯಾನಕ ಪದ್ದತಿಯನ್ನು ಕೊನೆಗೊಳಿಸಲು ಒಂದು ಶಪಥ ತೆಗೆದುಕೊಂಡರು. ಪತಿಯೊಂದಿಗೆ ಹೆಂಡತಿ ಸಾಯಬೇಕೆಂದು ಗ್ರಂಥಗಳು ಹೇಳಿವೆ ಎಂದು ಕೆಲವರು ನಂಬಿದ್ದರು. ರಾಮಮೋಹನರು ಎಲ್ಲಾ ಪವಿತ್ರ ಪುಸ್ತಕಗಳನ್ನು ಉಲ್ಲೇಖಿಸಿದರು. ಆದರೆ, ಹೆಂಡತಿ 'ಸತಿ'ಯನ್ನು ಅನುಸರಿಸ ಬೇಕೆಂಬುದು ಎಲ್ಲಿಯೂ ಇಡಲಿಲ್ಲ. ಈ ಸಂಪ್ರದಾಯವು ಕೆಲವು ಕಾಲದನಂತರ ಅಭ್ಯಾಸಕ್ಕೆ ಬಂದಿತು. ಅದನ್ನು ತಿಳಿದಿದ್ದ ಕೆಲವರು ತಪ್ಪು ಎಂದು ಹೇಳಲು ಧೈರ್ಯವನ್ನು ಹೊಂದಿರಲಿಲ್ಲ. ಕೆಚ್ಚೆದೆಯ ರಾಮಮೋಹನರು ಈ ಕಷ್ಟಕರ ಕೆಲಸವನ್ನು ಕೈಗೊಂಡರು. ಆದರೆ ಅವರ ಕೆಲಸ ಸುಲಭವಲ್ಲ. ಲಕ್ಷಗಟ್ಟಲೆ ಜನರು 'ಸತಿ' ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದರು. ಅನೇಕ ಜನರು ರಾಮಮೋಹನನ್ನು ವಿರೋಧಿಸಿದರು ಮತ್ತು ಅವರನ್ನು ನಿಂದಿಸಿದರು. ಕೆಲವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು. ಆದರೆ ರಾಮಮೋಹನ್ ಹಿಂಜರಿಯಲಿಲ್ಲ. ಈ ಎಲ್ಲವನ್ನೂ ನೋಡಿದ ಪಶ್ಚಿಮದ ಜನರು ಸಹ ಆಶ್ಚರ್ಯಪಟ್ಟರು, ಈ ವಿಷಯದಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡಲು ಭಯಭೀತವಾಗಿದ್ದರೂ, ರಾಮಮೋಹನರು ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿಕೊಂಡರು ಮತ್ತು ಈ ಕೆಟ್ಟ ಆಚರಣೆಯ ರದ್ದಿಗೆ ಹೋರಾಡಿದರು. ಕೊನೆಯಲ್ಲಿ, ಅವರು ಗೆದ್ದರು.
  • ಅವರು ತಮ್ಮ ಟೀಕೆ ವಿರೋಧಳನ್ನು ತಾಳ್ಮೆ ಮತ್ತು ಯಾರೊಬ್ಬರ ಭಾವನೆಗಳನ್ನು ಗಾಯಗೊಳಿಸದೆ ಮಂಡಿಸುತ್ತಿದ್ದರು. ಹೀಗಾಗಿ ಪತ್ರಿಕೆಗಳ ನಂತರದ ಸಂಪಾದಕರಿಗೆ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ಆ ದಿನಗಳಲ್ಲಿ ನ್ಯಾಯಾಲಯವು ಸಾರ್ವಜನಿಕ ತೀರ್ಪುಗಾರರ ಹಾಜರಿ ಪ್ರಯೋಗಗಳನ್ನು ನಡೆಸಿತು. ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಕೆಲವು ಜನರನ್ನು ಆಹ್ವಾನಿಸಲಾಯಿತು. ಕೊನೆಯಲ್ಲಿ, ಈ ವ್ಯಕ್ತಿಗಳು ಪ್ರಕರಣದ ಬಗ್ಗೆ ನ್ಯಾಯಾಧೀಶರು ತಮ್ಮ ಅಭಿಪ್ರಾಯಗಳನ್ನು ನೀಡಿದರು. ಈ ಪುರುಷರನ್ನು 'ಜ್ಯೂರಿ' ಎಂದು ಕರೆಯಲಾಗುತ್ತಿತ್ತು. ಕೆಳ ನ್ಯಾಯಾಲಯಗಳಿಗೆ ಭಾರತೀಯ ಜ್ಯೂರಿಗಳನ್ನು ಆಹ್ವಾನಿಸಲಾಯಿತು. ಆದರೆ ಉನ್ನತ ನ್ಯಾಯಾಲಯಗಳಿಗೆ ಇಂಗ್ಲಿಷ್ ಜ್ಯೂರಿಗಳನ್ನ ಆಹ್ವಾನಿಸಲಾಯಿತು. ಈ ಅಭ್ಯಾಸದ ವಿರುದ್ಧ ಈ ಪದ್ದತಿಯನ್ನು ಕೊನೆಗಳಿಸಲು ರಾಮಮೋಹನರು ಸರ್ಕಾರಕ್ಕೆ ಬರೆದರು; ಅವರು ಈ ಪದ್ದತಿ ಭಾರತೀಯರಿಗೆ ಅವಮಾನ ಎಂದು ವಾದಿಸಿದರು. ಅಂತಿಮವಾಗಿ, ಸರ್ಕಾರ ಈ ತಾರತಮ್ಯದ ಕೆಟ್ಟ ಸತಿ ಪದ್ದತಿಯನ್ನು ಕಾನೂನುಮಾಡಿ ಕೊನೆಗೊಳಿಸಿತು.[೨೬]

ಇಂಗ್ಲೆಂಡ್ ನಲ್ಲಿನ ಜೀವನ (೧೮೩೧- ೧೮೩೩)

[ಬದಲಾಯಿಸಿ]
ಸ್ತ್ಯಚ್ಯು ಇನ್ ಕಾಲೇಜ್ ಗ್ರೀನ್ , ಬ್ರಿಸ್ಟೊಲ್ , ಇಂಗ್ಲೆಂಡ್
  • ಮುಘಲ್ ಸಾಮ್ರಾಜ್ಯದ ರಾಯಭಾರಿಯಾಗಿ ,೧೮೩೦ ರಲ್ಲಿ ರಾಮ್ ಮೋಹನ್ ರಾಯರು ಯುನೈಟೆಡ್ ಕಿಂಗಡಂನಲ್ಲಿ ಪ್ರಯಾಣಿಸಿ ಲಾರ್ಡ್ ಬೆಂಟಿನ್ಕನ 'ಸತಿ ಪದ್ಧತಿಯನ್ನು ವಿರೋಧಿಸುವ ಕಾನೂನಿಗೆ ಪ್ರಭಾವ ಮತ್ತು ಪರಿಣಾಮ ಬೀರುವಂತೆ ನೋಡಿಕೊಳ್ಳುವುದು ಹಾಗು ಫ್ರಾನ್ಸ್ಗೆ ಭೇಟಿ ನೀಡುವುದು ಆಗಿತ್ತು ೨೭ನೇ
  • ಸಾಗರವನ್ನು ದಾಟಲು ಮತ್ತು ಇತರ ದೇಶಗಳಿಗೆ ಹೋಗುವುದು ತಪ್ಪು! ಅಂತಹ ಒಂದು ನೋಟ ಇಂದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಆದರೆ, ಒಂದು ನೂರ ಐವತ್ತು ವರ್ಷಗಳ ಹಿಂದೆ, ಇದು ಹಿಂದೂಗಳು ಸಮುದ್ರಗಳನ್ನು ದಾಟುವುದು ತಪ್ಪು ಮತ್ತು ಧರ್ಮವಿರುದ್ಧ ಎಂದು ನಂಬಲಾಗಿತ್ತು. ಈ ಕಲ್ಪನೆಯನ್ನು ತಿರಸ್ಕರಿಸಿ ಇಂಗ್ಲೆಂಡಿಗೆ ಹೋದ ಮೊದಲ ಭಾರತೀಯರ ಪೈಕಿ ರಾಮಮೋಹನ್ ಒಬ್ಬರಾಗಿದ್ದರು. ಬ್ರಿಟಿಷರು ದೆಹಲಿಯ ಮೊಘಲ್ ದೊರೆಗೆ ಎರಡನೆಯ ಅಕ್ಬರ್‍ಗೆ ನೀಡಲ್ಪಟ್ಟ ಅನುದಾನದ ಹಣ ಬಹಳ ಕಡಿಮೆಯದಾಗಿತ್ತು. ಅದನ್ನು ಹೆಚ್ಚಿಸಲು ಇಂಗ್ಲೆಂಡ್ನ ರಾಜನಿಗೆ ಅವರು ಪ್ರತಿನಿಧಿಯನ್ನು ಕಳಿಸಬೇಕಾಯಿತು. ಮೊಘಲ್ ರಾಜನು ರಾಮಮೋಹನವನ್ನು ಇಂಗ್ಲೆಂಡ್‍ಗೆ ಕಳುಹಿಸಲು ನಿರ್ಧರಿಸಿದನು. ಅವರು ಇಂಗ್ಲೆಂಡ್‍ಗೆ ತೆರಳುವ ಮೊದಲು, ದೊರೆಯು ರಾಮೋಹನ ರಾಜರಿಗೆ 'ರಾಜ' ಬಿರುದನ್ನು/ಪ್ರಶಸ್ತಿಯನ್ನು ನೀಡಿದರು. ರಾಜಾ ರಾಮಮೋಹನ್ ರಾಯ್ ಅವರು ಇಂಗ್ಲೆಂಡ್‍ಗೆ ಭೇಟಿ ನೀಡಲು ಎರಡನೆಯ ಕಾರಣವೆಂದರೆ ಸಂಸತ್ತಿನ ಮುಂದೆ 'ಸತಿ' ಪದ್ದತಿಯನ್ನು ರದ್ದುಗೊಳಿಸುವ ಕಾನೂನನ್ನು ಮಾಡಿಸಲು ಬ್ರಿಟಿಷ್ ಸಂಸತ್ತಿನ ಬೆಂಬಲ ಪಡೆಯುವುದಾಗಿತ್ತು. ಇವರ ಪ್ರಯತ್ನದಿಂದ, ಲಾರ್ಡ್ ವಿಲಿಯಂ ಬೆಂಟಿಂಕರಿಗೆ ಬ್ರಿಟಿಷ್ ಸರ್ಕಾರ ಸತಿ ಪದ್ದತಿ ನಿಷೇಧ ಕಾನೂನು ಮಾಡಲು ಅನುಮತಿ ನೀಡಿತು. ಅನೇಕ ಜನರು ರಾಮಮೋಹನ ಇಂಗ್ಲೆಂಡ್‍ಗೆ ಭೇಟಿ ನೀಡುವುದನ್ನು ವಿರೋಧಿಸಿದರು. ಕೆಲವು ಬ್ರಿಟಿಷ್ ಅಧಿಕಾರಿಗಳೂ ಇಂಗ್ಲೆಂಡ್‍ಗೆ ಹೋಗಲು ವಿರೋಧಿಸಿದರು. ಆದರೆ ಅವರು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಅವರ ಕೀರ್ತಿ ಅಷ್ಟರಲ್ಲಿ ಆಗಲೇ ಇಂಗ್ಲೆಂಡ್‍ಗೆ ತಲುಪಿತ್ತು. ರಾಮಮೋಹನ್ ಲಿವರ್‍ಪೋಲಿಗೆ ಬಂದಾಗ, ಪ್ರಮುಖ ನಾಗರಿಕರು ಅವರನ್ನು ಸ್ವಾಗತಿಸಲು ಅಲ್ಲಿಗೆ ಬಂದಿದ್ದರು. ಪ್ರಸಿದ್ಧ ಇತಿಹಾಸಕಾರ ವಿಲಿಯಮ್ ರಾಥ್ಬೋನ್ ಪಾರ್ಶ್ವವಾಯು ಹೊಂದುವ ಮೂಲಕ ತನ್ನ ಮಗನನ್ನು ಕಳುಹಿಸಿದ್ದ. ತನ್ನ ಕೊನೆಯ ಆಸೆಗೆ ಆತನನ್ನು ಮನೆಗೆ ಆಹ್ವಾನಿಸಿ ಮತ್ತು ಆತನೊಂದಿಗೆ ಮಾತನಾಡುತ್ತಾ ಅವರು ತಮ್ಮ ಭೇಟಿಯ ಬಯಕೆಯನ್ನು ಪೂರ್ಣಗೊಳಿಸಿದರು. ಹಲವಾರು ಸಂಘಗಳು ಅವರನ್ನು ಗೌರವಿಸಿವೆ. ಅವರು ಫ್ರಾನ್ಸಿಗೆ ಭೇಟಿ ನೀಡಿದರು. ಎಲ್ಲೆಡೆ ಪಂಡಿತರು ಅವರ ವಿದ್ವತ್ತನ್ನು ಮೆಚ್ಚಿದರು. ರಾಜನ ಸಂಭಾನೆಗಳನ್ನು ಹೆಚ್ಚಿಸಲು ಅಂತಿಮವಾಗಿ ಪರಿಹರಿಸಲಾಗಿಲ್ಲವಾದರೂ, ವಾರ್ಷಿಕವಾಗಿ ಅವರಿಗೆ ಮೂರು ಲಕ್ಷ ರೂಪಾಯಿಗಳನ್ನು ನೀಡಬಹುದೆಂದು ನಿರ್ಧರಿಸಲಾಯಿತು. ಅಲ್ಲಿ 'ಸತಿ' ಪದ್ದತಿಯನ್ನು ರದ್ದುಗೊಳಿಸುವುದಕ್ಕಾಗಿ ಇಂಗ್ಲೆಂಡಿನಲ್ಲಿ ರಾಮ ಮೋಹನ್ ಅವರ ಪ್ರಯತ್ನಗಳು ಯಶಸ್ವಿಯಾದವು. ಸಂಸತ್ತು ಬಿಲ್ ಅಂಗೀಕರಿಸಿದ ದಿನ ರಾಮಮೋಹನನ ಸಂತೋಷಕ್ಕೆ ಯಾವುದೇ ಗಡಿ ಮಿತಿಗಳಿರಲಿಲ್ಲ.

ಧಾರ್ಮಿಕ ಸುಧಾರಣೆ

[ಬದಲಾಯಿಸಿ]
  • ಬ್ರಹ್ಮ ಸಮಾಜದಲ್ಲಿ ಕೆಲವು ರಾಮ ಮೋಹನರಾಯರ ಧಾರ್ಮಿಕ ಸುಧಾರಣೆಗಳ ಕುರಿತು, ರಾಜನಾರಾಯಣ ಬಸು ಅವರಿಂದ ವಿಸ್ತೃತ ವಿವರಣೆಗಳು:-[೨೭]
  • ಬ್ರಹ್ಮೋಸ್ನಂಬುವಂತೆ 'ಬ್ರಹ್ಮಯಿಸಂ'- ಬ್ರಹ್ಮಸಿದ್ದಾಂತದ ಸಿದ್ದಾಂತವಾದದ ಮೂಲತತ್ವ ಇರುವುದು ಧರ್ಮದ ಮೂಲದಲ್ಲಿ,- ಮಾನವರಿಂದ ಪ್ರತಿಪಾದಿಸಲ್ಪಡುತ್ತದೆ.
  • ಬ್ರಹ್ಮೋಗಳು 'ಒಂದು ಅತೀತ ದೈವಶಕ್ತಿಯನ್ನು' ನಂಬುತ್ತಾರೆ. "ದೇವರು ಒಂದು ನಿಶ್ಚಿತವಾದ ವ್ಯಕ್ತಿತ್ವದಿಂದ ಯುಕ್ತವಾಗಿದ್ದು, ಪ್ರಕೃತಿ ಧರ್ಮದಂತೆ ನೈತಿಕತೆಯ ಲಕ್ಷ ಣೀಕರಣವಾಗಿದ್ದು ಅವರ ಸ್ವಭಾವಕ್ಕೆ ಸಮನಾಗಿರುತ್ತದೆ, ಮತ್ತು ಬುದ್ಧಿವಂತಿಕೆ ಉಳ್ಳವನಾಗಿರುತ್ತಾನೆ; ಹಾಗೂ ವಿಶ್ವದ ಸೂತ್ರದಾರ ಮತ್ತು ರಕ್ಷಕನಾಗಿರುತ್ತಾನೆ. "ಅಂತಹವನನ್ನು ಮಾತ್ರ ಆರಾಧಿಸಿ.
  • ಬ್ರಹ್ಮೋಸ್ ನಂಬುವಂತೆ ದೇವರಿಗೆ ನಿಶ್ಚಿತವಾದ ಕಾಲ ಅಥವಾ ಸ್ಥಳಗಳು ಇಲ್ಲ. "ನಾವು ಅವನನ್ನು ಯಾವಾಗಲಾದರೂ, ಯಾವ ಸಮಯ, ಸ್ಥಳದಲ್ಲಾದರೂ ಆರಾಧಿಸಬಹುದು, ಆ ಸ್ಥಳ ಮತ್ತು ಸಮಯ ನಮ್ಮ ಮನಸ್ಸನ್ನು ಅವನೆಡೆಗೆ ಲೆಕ್ಕಾಚಾರದಂತೆ ಒಟ್ಟಾಗಿ ಮನಸ್ಸಿಟ್ಟು, ಅವನ ಕಡೆ ಮನಸ್ಸನ್ನು ಹರಿಸಬೇಕು ಅಷ್ಟೇ."

ರಾಮಮೋಹನ್ ರವರ ಸಾಮಾಜಿಕ ಸುಧಾರಣೆ

[ಬದಲಾಯಿಸಿ]
  • ಸಾಮಾಜಿಕ ಅನಿಷ್ಟಗಳಾದ 'ಸತಿ', ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹಗಳ ವಿರುದ್ಧ ಹೋರಾಟ: ಹೆಂಗಸರಿಗೆ ಆಸ್ತಿಯಲ್ಲಿನ ಹಕ್ಕಿನ ಪರದ ಹೋರಾಟ.
  • ಬಂಗಾಳಿ ಬ್ರಾಹ್ಮಣರ ಸುಧಾರಣೆಗಾಗಿ ಹಾಗು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಲು ೧೮೨೮ ರಲ್ಲಿ ಬ್ರಹ್ಮಸಭಾ ಅಸ್ತಿತ್ವಕ್ಕೆ ಬಂತು ಮತ್ತು ಆ ಚಳುವಳಿ ರಾಯರ ರಾಜಕೀಯ ಹಿನ್ನೆಲೆಯ ಕಾರಣದಿಂದ ಅವರ ಸಾಮಾಜಿಕ ಮತ್ತು ಹಿಂದೂ ಧಾರ್ಮಿಕ ಸುಧಾರಣೆಗೆ ಕಾರಣವಾಯಿತು. ಅವರು ಬರೆಯುತ್ತಾ:
"ಈಗಿರುವ ಹಿಂದೂಗಳ ಪದ್ಧತಿಯು ಅವರ ರಾಜಕೀಯ ಬೆಳವಣಿಗೆಗೆ ಅನುಕೂಲವಾಗಿರುವುದಿಲ್ಲ..., ಅವರ ಧರ್ಮದಲ್ಲಿ ಕೆಲವೊಂದು ಬದಲಾವಣೆಗಳು ಆಗಬೇಕು, ಕಡೇ ಪಕ್ಷ ಅವರ ರಾಜಕೀಯ ಆಶೋತ್ತರಗಳ ಹಾಗು ಸಾಮಾಜಿಕ ಸೌಲಭ್ಯಗಳಿಗೋಸ್ಕರವಾಗಿಯಾದರೂ... ”[೨೮]
  • ಬ್ರಿಟಿಷ್ ಸರ್ಕಾರದೊಂದಿಗೆ ಕೆಲಸ ಮಾಡುವ ರಾಮ್ ಮೋಹನ್ ರಾಯ್ ಅವರ ಅನುಭವವು, ಹಿಂದೂ ಸಂಪ್ರದಾಯಗಳನ್ನು ಹೆಚ್ಚಾಗಿ ಪಾಶ್ಚಾತ್ಯ ಮಾನದಂಡಗಳಿಂದ ನಂಬಲಾಗುವುದಿಲ್ಲ ಅಥವಾ ಗೌರವಿಸುವುದಿಲ್ಲವೆಂದು ಅವರಿಗೆ ಕಲಿಸಿಕೊಟ್ಟಿತು ಮತ್ತು ಇದು ಅವರ ಧಾರ್ಮಿಕ ಸುಧಾರಣೆಗಳ ಮೇಲೆ ಪರಿಣಾಮ ಬೀರಿದೆ.
  • ಬ್ರಿಟಿಷರ ಸರ್ಕಾರದ ಜೊತೆಗಿನ ರಾಮ್ ಮೋಹನ್ ರಾಯರ ಅನುಭವದಿಂದ, ಅವರಿಗೆ ತಿಳಿದು ಬಂದಿದ್ದೇನೆಂದರೆ, ಹಿಂದೂ ಧಾರ್ಮಿಕ ಪದ್ಧತಿಯಿಂದ ಬ್ರಿಟಿಷರಿಗೆ ನಂಬುಗೆಯುಳ್ಳದ್ದಾಗಲೀ, ಗೌರವ ತರುವಂತದ್ದಾಗಲೀ, ಆಗದೇ ಇದ್ದು, ಪಶ್ಚಿಮ ರಾಷ್ಟ್ರ ನೀತಿಗಳ ಪರವಿಲ್ಲದೇ ಇದ್ದುದು, ಅವರ ಧಾರ್ಮಿಕ ಸುಧಾರಣೆಗೆ ಅಡ್ಡಿಯಾಯಿತು. ಹಿಂದೂ ಸಂಪ್ರದಾಯಗಳನ್ನು ಕ್ರಮಬದ್ಧಗೊಳಿಸಿ,ಯೂರೋಪಿನ ಪರಿಚಿತರೊಡನೆ ರುಜುವಾತು ಪಡಿಸಲು "ಹಿಂದೂ ಧರ್ಮವನ್ನು ವಿರೂಪಗೊಳಿಸುವ ಮೂಢನಂಬಿಕೆಯ ಆಚರಣೆಗಳು, ಅದರ ಶಾಸ್ತ್ರ ಸೂಕ್ತಿಗಳು ಹೇಳಿದ ಶುದ್ಧ ಆತ್ಮದ ವಿಷಯದಲ್ಲಿ ಏನೂ ಸಂಬಂಧವಿರದು" ಎಂದು ಅವರು ತಮ್ಮ ಯುರೋಪಿಯನ್ ಪರಿಚಿತರಿಗೆ ಹಿಂದೂ ಸಂಪ್ರದಾಯಗಳನ್ನು ನ್ಯಾಯಸಮ್ಮತಗೊಳಿಸಲು ಬಯಸಿದ್ದರು! “ಮೂಢ ನಂಬಿಕೆಗಳ ಆಚರಣೆಯಲ್ಲಿ” 'ಸತಿ', ಜಾತಿಯ ಬಿಗಿತ, ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹಗಳನ್ನು ರಾಮ್ ಮೋಹನ್ ರಾಯರು ವಿರೋಧಿಸಿದರು.[೨೯].[೩೦]
  • ಈ ಆಚರಣೆಗಳಿಂದ ಬ್ರಿಟಿಶ್ ಅಧಿಕಾರಿಗಳು ಭಾರತದ ಮೇಲೆ ಹೆಚ್ಚು ಹೆಚ್ಚಾಗಿ ನೈತಿಕ ನಡೆತೆಯ ಶ್ರೇಷ್ಟತೆಯನ್ನು ವಹಿಸುತ್ತಾ ಹೋದರು. ರಾಮ್ ಮೋಹನ್ ರಾಯರ ದೃಷ್ಟಿಯಲ್ಲಿ, ಧರ್ಮವೆಂದರೆ ನ್ಯಾಯ ಮತ್ತು ವಾಸ್ತವ ಸಮಾಜ ಎನ್ನುವ ಮಾನವೀಯ ಗುಣಗಳನ್ನು ಅಭ್ಯಾಸ ಮಾಡುವುದೇ ಆಗಿದ್ದು, ಕ್ರಿಶ್ಚಿಯನ್ನರ ಆದರ್ಶಗಳಿಗೆ ಸಮನಾಗಿದ್ದು, ಅದರಿಂದ ಆಧುನಿಕ ಪ್ರಪಂಚದಲ್ಲಿ ಹಿಂದೂ ಧರ್ಮವನ್ನು ಕ್ರಮಬದ್ಧಗೊಳಿಸುವುದೇ ಆಗಿತ್ತು.

ಶಿಕ್ಷಣ ತಜ್ಞ

[ಬದಲಾಯಿಸಿ]
  • ಶಿಕ್ಷಣದಲ್ಲಿ ರಾಯರಿಗೆ ನಂಬಿಕೆಯಿದ್ದು,ಅದರಿಂದಾಗಿ ಸಾಮಾಜಿಕ ಸುಧಾರಣೆ ಎಂದು ತಿಳಿದಿದ್ದರು. ಭಾರತೀಯ ಶಿಕ್ಷಣ ಪದ್ಧತಿಯಲ್ಲಿ, ಪಾಶ್ಚಿಮಾತ್ಯ ಕಲಿಕಾ ಪದ್ಧತಿಯನ್ನು ಅಳವಡಿಸಿದರು.
  • ವೇದಾಂತ ಕಾಲೇಜ್ ಅನ್ನು ತೆರೆದು ,ಪಾಶ್ಚಿಮಾತ್ಯ ಮತ್ತು ಭಾರತೀಯ ಕಲಿಕೆಯ ಏಕೀಕರಣ ತರಗತಿಗಳನ್ನು ಆರಂಭಿಸಿದರು. ಸಾಮಾಜಿಕ ಸುಧಾರಣೆಗೆ ಶಿಕ್ಷಣದ ಅನುಷ್ಠಾನ ಮುಖ್ಯವೆಂದು ರಾಯ್ ನಂಬಿದ್ದರು.
  • 1817 ರಲ್ಲಿ, ಡೇವಿಡ್ ಹೇರ್ ಸಹಯೋಗದೊಂದಿಗೆ, ಅವರು ಕಲ್ಕತ್ತಾದಲ್ಲಿ ಹಿಂದು ಕಾಲೇಜನ್ನು ಸ್ಥಾಪಿಸಿದರು.
  • 1822 ರಲ್ಲಿ, ರಾಯ್ ಆಂಗ್ಲೊ-ಹಿಂದೂ ಶಾಲೆಯನ್ನು ಸ್ಥಾಪಿಸಿ, ನಾಲ್ಕು ವರ್ಷಗಳ ನಂತರ (1826) ವೇದಾಂತ ಕಾಲೇಜ್‍ನಿಂದ ಬಂದು, ಅಲ್ಲಿ ಅವರು ಏಕೀಶ್ವರವಾದದ ಸಿದ್ಧಾಂತಗಳ ಬೋಧನೆಗಳು "ಆಧುನಿಕ, ಪಾಶ್ಚಿಮಾತ್ಯ ಪಠ್ಯಕ್ರಮ" ದೊಂದಿಗೆ ಸಂಯೋಜಿಸಬೇಕೆಂದು ಒತ್ತಾಯಿಸಿದರು. [32]
  • 1830 ರಲ್ಲಿ, ಜನರಲ್ ಅಸೆಂಬ್ಲಿಸ್ ಇನ್ಸ್ಟಿಟ್ಯೂಷನ್ ಅನ್ನು (ಈಗ ಸ್ಕಾಟಿಷ್ ಚರ್ಚ್ ಕಾಲೇಜ್ ಎಂದು ಕರೆಯಲಾಗುತ್ತದೆ) ಸ್ಥಾಪಿಸುವಲ್ಲಿ ರೆವ್ ಅಲೆಕ್ಸಾಂಡರ್ ಡಫ್ ಅವರಿಗೆ ಸಹಾಯ ಮಾಡಿದರು, ಬ್ರಹ್ಮ ಸಭೆಯಿಂದ ತೆರವುಗೊಂಡ ಸ್ಥಳವನ್ನು ಮತ್ತು ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಕೊಟ್ಟರು.
  • ಅವರು ಪಾಶ್ಚಿಮಾತ್ಯ ಶಿಕ್ಷಣವನ್ನು ಭಾರತೀಯ ಶಿಕ್ಷಣಕ್ಕೆ ಅಳವಡಿಸಿಕೊಂಡರು.
  • ಪಾಶ್ಚಾತ್ಯ ಮತ್ತು ಭಾರತೀಯ ಕಲಿಕೆಯ ಸಂಶ್ಲೇಷಣೆಯಂತೆ ಕೋರ್ಸ್ಗಳನ್ನು ನೀಡುತ್ತಿರುವ ಅವರು ವೇದಾಂತ ಕಾಲೇಜ್ ಅನ್ನು ಸ್ಥಾಪಿಸಿದರು.
  • ಅವರ ಅತ್ಯಂತ ಜನಪ್ರಿಯ ಜರ್ನಲ್ ಸಂಬಾದ್ ಕೌಮುದಿ (ಸಂವಾದ ಕೌಮದಿ). ಇದು ಸ್ವಾತಂತ್ರ್ಯ ಪತ್ರಿಕೆಗಳು, ಭಾರತೀಯರನ್ನು ಸೇವೆಯ ಉನ್ನತ ಶ್ರೇಣಿಯಲ್ಲಿ ಸೇರಿಸುವುದು ಮತ್ತು ಕಾರ್ಯಾಂಗ ಮತ್ತು ನ್ಯಾಯಾಂಗ ವಿಭಾಗಗಳ ಪ್ರತ್ಯೇಕತೆಗೆ ಒತ್ತಾಸೆ, ಮುಂತಾದ ವಿಷಯಗಳನ್ನು ಒಳಗೊಂಡಿದೆ.
  • ಇಂಗ್ಲಿಷ್ ಕಂಪೆನಿಯು ಪತ್ರಿಕಾ ದಮನದಲ್ಲಿ ತೊಡಗಿದಾಗ, ರಾಮ್ ಮೋಹನ್ ಎರಡು ಸ್ಮಾರಕಲೇಖಗಳನ್ನು ಸಂಯೋಜಿಸಿದರು ಮತ್ತು ಪತ್ರಿಕಾ ದಮನಕ್ಕೆ ವಿರುದ್ಧವಾಗಿ 1829 ಮತ್ತು 1830 ರಲ್ಲಿ ಅದನ್ನು ವಿರೋಧಿಸಿದರು.[೩೧].

ಪತ್ರಕರ್ತ/ಪತ್ರಿಕೋದ್ಯಮ

[ಬದಲಾಯಿಸಿ]
  • ರಾಯರು ಇಂಗ್ಲಿಷ್, ಹಿಂದಿ, ಪೆರ್ಶಿಯನ್ ಮತ್ತು ಬೆಂಗಾಲಿಯಲ್ಲಿ ಸಂಚಿಕೆಗಳನ್ನು ಪ್ರಕಟಿಸಿದರು.
  • ಅವರ ಹೆಚ್ಚು ಜನಪ್ರಿಯ ಸಂಚಿಕೆಯೆಂದರೆ ಸಂಬಾದ್ ಕೌಮುದಿ (ಸಂವಾದ ಕೌಮುದಿ). ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯ ,ಉನ್ನತ ಶ್ರೇಣಿಯ ಕೆಲಸಗಳಲ್ಲಿ ಭಾರತೀಯರ ಸೇರ್ಪಡೆ ,ನ್ಯಾಯಾಂಗ ಮತ್ತು ಕಾರ್ಯಾಂಗದ ಬೇರ್ಪಡಿಸುವುದು, ಮುಂತಾದ ವಿಷಯಗಳನ್ನು ಒಳಗೊಂಡಿತ್ತು.
  • ಇಂಗ್ಲಿಷ್ ಕಂಪನಿ ಪತ್ರಿಕೆಯನ್ನು ಮುಚ್ಚಿದಾಗ, ರಾಮ್ ಮೋಹನ್ ರವರು ಅದರ ವಿರುದ್ಧವಾಗಿ ೧೮೨೯ ಮತ್ತು ೧೮೩೦ ರಲ್ಲಿ ಎರಡು ಸ್ಮರಣಿಕೆಗಳನ್ನು ಪ್ರಕಟಿಸಿದರು.[]
  • ಸೆಪ್ಟೆಂಬರ್ ೧೮೩೩ ಸೆಪ್ಟೆಂಬರ್ 27 ರಂದು ರಾಮಮೋಹನರು ನಿಧನರಾದರು. ಮೆನಿಂಜಿಟಿಸ್ ಕಾರಣದಿಂದ ಸ್ತಪ್ಲೆಟನ್ (Stapleton)ಎಂಬ ಹಳ್ಳಿಯಲ್ಲಿ ಬ್ರಿಸ್ಟೋಲ್‍ನ ಈಶಾನ್ಯ ಪ್ರಾಂತ್ಯದಲ್ಲಿ (ಈಗಿನ ಉಪ ನಗರ)ನಿಧನ ಹೊಂದಿದ್ದರು. ಅರ್ನೋಸ್ ವೇಲ್ ಸಿಮಿಟ್ರಿ ಯಲ್ಲಿ (ದಕ್ಷಿಣ ಬ್ರಿಸ್ಟೋಲ್ -Stapleton Grove to Arno’s Vale, the commentary on the outskirts of Bristol) ಸುಡಲಾಯಿತು. ರಾಮಮೋಹನನ ಸ್ನೇಹಿತ 1843 ರಲ್ಲಿ ಇಂಗ್ಲೆಂಡ್‍ಗೆ ಭೇಟಿ ನೀಡಿದರು. ರಾಮಮೋಹನ್ ಅವರ ಶವವನ್ನು ಸ್ಟಾಪ್ಲೆಟನ್ ಗ್ರೋವ್ನಿಂದ ಶವಶೇಷವನ್ನು ತೆಗೆದುಕೊಂಡು ಬ್ರಿಸ್ಟಲ್‍ನ ಹೊರವಲಯದಲ್ಲಿರುವ ಅರ್ನೋಸ್ ವೇಲ್‍ಗೆ ತೆಗೆದುಕೊಂಡು ಹೋಗಿ ಅಲ್ಲಿ ಸಮಾಧಿ ಮಾಡಿದರು. ಭಾರತೀಯ ಶೈಲಿಯಲ್ಲಿ ಸ್ಮಾರಕವನ್ನು ಅವರ ಸಮಾಧಿಯ ಮೇಲೆ ಕಟ್ಟಸಲಾಯಿತು.[೩೨]

ಸಮಾಧಿ

[ಬದಲಾಯಿಸಿ]
ಎಪಿತಪ್ಹ್ ಫಾರ್ ರಾಮ್ ಮೋಹನ್ ರಾಯ್ ಆನ್ ಹಿಸ್ ಸೆನೋತಪ್ಹ್
ಸೆನೋತಪ್ಹ್ ಆಫ್ ರಾಮ್ ಮೋಹನ್ ರಾಯ್ ಇನ್ ಅರ್ನೋಸ್ ವಾಲೆ ಸೆಮೆಟೆರಿ , ಬ್ರಿಸ್ಟೊಲ್ , ಇಂಗ್ಲೆಂಡ್
  • ದ್ವಾರಕನಾಥ ಟಾಗೋರ್ ಅವರು ೧೮೪೩ ರಲ್ಲಿ ರಾಮ್ ಮೋಹನ್ ರಾಯ್ ಸಮಾಧಿಯನ್ನು ನಿರ್ಮಿಸಿದರು. ಸೆಪ್ಟೆಂಬರ್ ೨೭,೧೮೩೩ ರಲ್ಲಿ ಮೆನಿಂಜೈಟಿಸ್ ಕಾರಣದಿಂದ ರಾಮ್ ಮೋಹನ್ ರಾಯ್ ಬ್ರಿಸ್ಟೋಲ್‍ನಲ್ಲಿ ನಿಧನ ಹೊಂದಿದರು. ೧೦ ವರ್ಷಗಳ ನಂತರ ಈ ಸಮಾಧಿಯನ್ನು ಬ್ರಿಸ್ಟೋಲ್ ಹೊರವಲಯದ ಅರ್ನೋಸ್ ವೇಲ್ ರುದ್ರಭೂಮಿಯಲ್ಲಿ (ಸಿಮಿಟ್ರಿ) ನಿರ್ಮಿಸಲಾಯಿತು. ೧೮೪೫ ರಲ್ಲಿ ದ್ವಾರಕನಾಥ ಟಾಗೋರ್‍ರವರು, ರಾಮ್ ಮೋಹನ್ ರವರ ಅಂತ್ಯಕ್ರಿಯೆಯ ಅವಶೇಷಗಳನ್ನು ತೆಗೆದು, ಭಾರತಕ್ಕೆ ರಾಯರ ಸೋದರ ಸಂಬಂಧಿಯ ಮೂಲಕ ಕಳುಹಿಸಿಕೊಡಲಾಯಿತು. ಈ ಕಾರಣಕ್ಕಾಗಿಯೇ ಅವರ ಸೋದರ ಸಂಬಂಧಿಯೂ ದ್ವಾರಕನಾಥ ಟಾಗೋರರ ಜೊತೆಗೆ ಬ್ರಿಟನ್ನಿನಲ್ಲಿದ್ದರು. ಉಳಿದಿದ್ದ ರಾಮ್ ಮೋಹನ್‍ರ ಅವಶೇಷಗಳನ್ನು ಕೋಲ್ಕತ್ತಾ ಬಳಿ ೨೮ ನೇ ಫೆಬ್ರವರಿ ೧೮೪೬ ರಂದು ಅವರ ಕುಟುಂಬದವರಿಂದ ಸಮಾಧಿ ಮಾಡಲಾಯಿತು.[೩೩] ರಾಮ್ ಮೋಹನ್ ರಾಯ್‍ರ ಸಮಾಧಿಯ ಮೇಲೆ ದ್ವಾರಕನಾಥರಿಂದ ಬರೆದ ಅಂತಿಮ ಚರಮ ವಾಕ್ಯವೆಂದರೆ:
"ತಮ್ಮ ಅದ್ಭುತ ಸಹಜ ಪ್ರತಿಭೆಯಿಂದ, ಹಲವಾರು ಭಾಷೆಗಳ ಏಕತೆಯ ಪಾಂಡಿತ್ಯದಿಂದ, ಅವರ ಕಾಲದಲ್ಲಿನ ಒಬ್ಬ ಮಹಾನ್ ಪಂಡಿತರಾಗಿ ಅವರು ನಿಲ್ಲುತ್ತಾರೆ. ಸಾಮಾಜಿಕ, ಭೌತಿಕ ಮತ್ತು ನೈತಿಕ ನಡೆತೆಯ ಬದಲಾವಣೆ, ಸುಧಾರಣೆಗಳನ್ನು ಭಾರತದ, ಜನರಲ್ಲಿ ತರಲು ಅವಿಶ್ರಾಂತವಾಗಿ ದುಡಿದಿದ್ದು, ಮೂರ್ತಿ ಪೂಜೆ ಮತ್ತು ಸತಿಪದ್ಧತಿ ಅನಿಷ್ಟಗಳನ್ನು ಹತ್ತಿಕ್ಕಲು ಅತ್ಯಾಸಕ್ತಿಯಿಂದ ಸಾಹಸಪಟ್ಟಿದ್ದು, ತಮ್ಮ ಹೊಟ್ಟೆಕಿಚ್ಚು ಪಡುವಷ್ಟು ಉತ್ತಮ ವಕೀಲಿ ವೃತ್ತಿಯ ನೈಪುನ್ಯತೆಯಿಂದ, ದೇವರ ದೈವತ್ವದ ಭವ್ಯತೆ ಹಾಗೂ ಮನುಷ್ಯನ ಹಿತಾಸಕ್ತಿಗಾಗಿ ದುಡಿತ, ಇವುಗಳನ್ನು ದೇಶದ ಪ್ರಜೆಗಳು ಸದಾ ಹೆಮ್ಮೆಯಿಂದ ನೆನೆಯುತ್ತಾರೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]


ಟೆಂಪ್ಲೇಟು:ಕೊಲ್ಕತ್ತಾ

ಉಲ್ಲೇಖ

[ಬದಲಾಯಿಸಿ]
  1. ೧.೦ ೧.೧ R,mgm.jgtg41445
  2. "BBC Listeners' PollBangabandhu judged greatest Bangali of all time". Archived from the original on 2018-12-25. Retrieved 2018-09-03.
  3. ೩.೦ ೩.೧ "Ram Mohan Roy." Main. britannica.com/EBchecked/topic/511196/Ram-Mohan-Roy?view=print. 2009.
  4. ಪುಟ ೮, ರಾಜ ರಾಮ್ ಮೋಹನ್ ರಾಯ್ - ಒಬ್ಬ ಸುಧಾರಕಮಾನವ, ಹೆಚ್.ಡಿ.ಶರ್ಮ, ೨೦೦೨
  5. ಇಬಿದ್ :೨೦೦೨, ಹೆಚ್ .ಡಿ .ಶರ್ಮ
  6. Cultural India : Reformers : Raja Ram Mohan Roy;
  7. Hodder, Alan D. (1988). "Emerson, Rammohan Roy, and the Unitarians". Studies in the American Renaissance: 133–148.
  8. ೧೮೩೪ ರ ಅತ್ಹೆನಿಯಂ ನಲ್ಲಿ ಜೀವನ ಚರಿತ್ರೆಯ ಪ್ರಕಟಣೆ
  9. RAM MOHAN ROY :THE FATHER OF THE INDIAN RENAISSANCE;;MAJOR KULBIR SINGH. Dated: 7/17/2017
  10. ಹೆಥೆನ್ಸ್ ನ ಬದಲಾವಣೆಯ ಉಪಯೋಗದಲ್ಲಿ ಕ್ರಿಶ್ಚಿಯನ್ನರ ದಾಕ್ಷಿಣ್ಯದ ವಿಚಾರಣೆ
  11. ವಿಲಿಯಂ ಕ್ಯಾರಿ ಯುನಿವರ್ಸಿಟಿ
  12. ಕೌಮುದಿ ಪತ್ರಿಕಾ ೧೨ ಡಿಸೆಂಬರ್ ೧೯೧೨
  13. "ಸಾಂಪ್ರದಾಯಿಕ ಮತ್ತು ಆಧುನಿಕ ಹಿಂದೂ ಕಾನೂನುಗಳ ಪ್ರಬಂಧಗಳು" ಜಾನ್ ದುನ್ಕಾನ್ ದೆರ್ರೆತ್ತ್
  14. "The Life of William Carey (1761-1834) by George Smith (1885) Ch4, p71". Retrieved 2008-12-08.
  15. Syed, M. H. "Raja Rammohan Roy" (PDF). Himalaya Publishing House. Retrieved 29 November 2015.
  16. "ಫಾಲ್ಲಸಿ ಆಫ್ ದಿ ನ್ಯೂ ದಿಸ್ಪೇನ್ಸೇಶನ್ " by ಶಿವನಾಥ್ ಶಾಸ್ತ್ರೀ ಯವರಿಂದ ಮುನ್ನುಡಿ /ಪೀಟಿಕೆ , ೧೮೯೫
  17. ಎಸ್ .ಡಿ .ಕಾಲ್ಲೆತ್ತ್
  18. ಮಹಾನಿರ್ವಾಣ ತಂತ್ರ ಆಫ್ ದಿ ಗ್ರೇಟ್ ... - ಗೂಗಲ್ ಬುಕ್ಸ್
  19. Smith, George. "Life of William Carey". Christian Classics Ethereal Library. Retrieved 29 November 2015.
  20. ರಾಯ್,ರಾಮದೇವ್. ಬ್ರಿಟಿಶ್ ಆಡಳಿತದ ಅವಧಿಯಲ್ಲಿ ಭಾರತದಿಂದ ಕೆಲವು ಆರ್ಥಿಕ ವಿಷಯಗಳ ಸೋರಿಕೆ.ಸಮಾಜ ವಿಜ್ಞಾನಿ, ಆವೃತ್ತಿ .೧೫,ನಂ . ೩.ಮಾರ್ಚ್ ೧೯೮೭
  21. ಭಟ್ಟಾಚಾರ್ಯ, ಸುಬ್ಭಾಸ್. ಇಂಡಿಗೋ ಪ್ಲಾಂಟರ್ಸ್, ರಾಮ್ ಮೋಹನ್ ರಾಯ್ ಮತ್ತು ೧೮೩೩ ರ ಚಾರ್ಟರ್ ಆಕ್ಟ್ ಸಮಾಜ ವಿಜ್ಞಾನಿ, ಆವೃತ್ತಿ .೪, ನಂ .೩.ಅಕ್ಟೋಬರ್ ೨೦೦೭.
  22. ಅಥೆನಯುಮ್ ನಲ್ಲಿ ಸ್ಮರಣೀಯ ಜೀವನ ಚರಿತ್ರೆ ೧೮೩೪
  23. Das, Pijush Kanti. "Rammohun Roy and Brahmoism the cult of Ramakrishna. University of Calcutta. pp. 200–208.
  24. ನಬ್ಬ್ಲೆ- ಬ್ರಾಹ್ಮ್ಹಣಿಕೆಯ ಮೂಲಗಳು - ಭಾಗ 2
  25. ಸಿವನಾಥ್ ಶಾಸ್ತ್ರಿ, ಬ್ರಹ್ಮ ಸಮಾಜದ ಇತಿಹಾಸ, ೧೯೧೧,೧ ನೇ ಆವೃತ್ತಿ. ಪುಟ ೪೪-೪೬
  26. Rammohan Ray C.N.Jayalakshmidevi
  27. http://ಬ್ರಹ್ಮ .org/ಬ್ರಹ್ಮ -ಸಮಾಜ .html
  28. ಗೌರಿ ಶಂಕರ್ ಭಟ್ಟ್ , “ಬ್ರಹ್ಮಸಮಾಜ, ಆರ್ಯಸಮಾಜ, ಮತ್ತು ಚರ್ಚ್ -ಸೆಕ್ಟ್ ಟೈಪೋಲೋಜಿ” ಧಾರ್ಮಿಕ ಸಂಶೋಧನೆಯ ಪುನರ್ಪರಿಶೀಲನೆ -೧೦ (೧೯೬೮): ೨೪
  29. ರಾಮ್ ಮೋಹನ್ ರಾಯ್, ಹಲವಾರು ಪ್ರಿನ್ಸಿಪಲ್ ಪುಸ್ತಕಗಳು ಭಾಷಾಂತರ, ಪ್ಯಾಸ್ಸೇಜ್ಗಳು, ಮತ್ತು ವೇದದ ವಿಷಯಗಳು ಮತ್ತು ಕೆಲವು ಬ್ರಾಹ್ಮಣಿಕೆಯ ತತ್ವಗಳ ಮೇಲೆ ನಡೆದ ವಿವಾದದ ಕೆಲಸಗಳ ಭಾಷಾಂತರ. (ಲಂಡನ್ : ಪರ್ಬಾರಿ , ಅಲ್ಲೇನ್ ಮತ್ತು ಕಂಪನಿ , ೧೮೨೩) ೪.
  30. ಬ್ರಹೇಂದ್ರ ಏನ್. ಬಂದ್ಯೋಪದ್ಯಯ್ , ರಾಮ್ ಮೋಹನ್ ರಾಯ್ , (ಲಂಡನ್ : ಯುನಿವೆರ್ಸಿಟಿ ಪ್ರೆಸ್ , ೧೯೩೩) ೩೫೧.
  31. Ram Mohan Roy." Main. britannica.com/EBchecked/topic/511196/Ram-Mohan-Roy?view=print. 2009
  32. Rammohan Ray C.N.Jayalakshmidevi This article is in courtesy of FreeIndia.org Author
  33. ಪುಟ ೧೨೯-೧೩೧.ಪುಸ್ತಕ ಪರಿಮಾಣ .೨ :ಹಿಸ್ಟರಿ ಆಫ್ ದಿ ಆದಿ ಬ್ರಹ್ಮ ಸಮಾಜ ,೧೮೯೮ (೧ ನೇ ಮುದ್ರಣ .) ಪ್ರಕಟ . ಬೈ ಆದಿ ಬ್ರಹ್ಮ ಸಮಾಜ ಪ್ರೆಸ್ , ಕಲ್ಕತ್ತ