ರಾಮ್ ಮೋಹನ್ ರಾಯ್

ವಿಕಿಪೀಡಿಯ ಇಂದ
Jump to navigation Jump to search
ರಾಮ್ ಮೋಹನ್ ರಾಯ್
Raja Ram Mohan Roy.jpg
ರಾಮ್ ಮೋಹನ್ ರಾಯ್ ನವಭಾರತದ ಪ್ರವಾದಿ
ಜನನ 14 ಆಗಸ್ಟ್ 1774
ರಾಧಾನಗರ, ಹೂಗ್ಲಿ ಜಿಲ್ಲೆ
ನಿಧನ ಸಪ್ಟೆಂಬರ್ 27, 1833(1833-09-27) (ವಯಸ್ಸು 59)
ಸ್ಟೆಪ್ಲಿಟನ್ , ಬ್ರಿಸ್ಟೋಲ್
Cause of death Meningitis
Resting place ಕೊಲ್ಕತ್ತ, ಭಾರತ
ರಾಷ್ಟ್ರೀಯತೆ ಭಾರತೀಯ
Other names ಹೆರಾಲ್ಡ್ ಆಫ್ ನ್ಯೂವ್ ಏಜ್
ಪ್ರಸಿದ್ಧಿಗೆ ಕಾರಣ ಬೆಂಗಾಲ ಪುನರುಜ್ಜೀವನದಜನಕ, ಬ್ರಹ್ಮ ಸಮಾಜ{socio, political reforms
Title ರಾಜಾ
Successor ದ್ವಾರಕನಾಥ ಟಾಗೋರ್
Parent(s) ರಮಾಕಾತ್ ರಾಯ್

ಭಾರತದ ಸಾಮಾಜಿಕ -ಧಾರ್ಮಿಕ ಸುಧಾರಣ ಕ್ರಿಯೆಯಲ್ಲಿ ,ಹೆಚ್ಚು ತೊಡಗಿಸಿಕೊಂಡ ಬ್ರಹ್ಮ ಸಮಾಜ ವನ್ನು ೧೮೨೮ ರಲ್ಲಿ ಹುಟ್ಟು ಹಾಕಿದ್ದು, ರಾಜ ರಾಮ್ ಮೋಹನ್ ರೋಯ್ (ಆಗಸ್ಟ್ ೧೪, ೧೭೭೪ – ಸೆಪ್ಟೆಂಬರ್ ೨೭, ೧೮೩೩),ಬ್ರಾಹ್ಮೋ ಸಭಾ ದ ಸಂಸ್ಥಾಪಕರು , (ಜೊತೆಗೆ ದ್ವಾರಕನಾಥ್ ಟ್ಯಾಗೋರ್ ಮತ್ತು ಇತರ ಬೆಂಗಾಲಿ ಬ್ರಾಹ್ಮಣರು ). ರಾಜನೀತಿ , ಸಾರ್ವಜನಿಕ ಆಡಳಿತ ಮತ್ತು ವಿದ್ಯಾಭ್ಯಾಸ ಹಾಗೆ ಧರ್ಮದೊಂದಿಗೆ ,ಅವರ ಪ್ರಭಾವ ಪಾರದರ್ಶಕವಾಗಿತ್ತು. ಹಿಂದೂ ಧರ್ಮದ ಉತ್ತರ ಕ್ರಿಯಾ ಪದ್ಧತಿಯಲ್ಲಿ , ಸತಿಪದ್ಧತಿಯನ್ವಯ ವಿಧವೆಯನ್ನು ಗಂಡಂದಿರ ಅಗ್ನಿ ಚಿತೆಯ ಮೇಲೆ ಬಲವಂತವಾಗಿ ಸುಡುತ್ತಿದ್ದ 'ಸತಿ' ಪದ್ಧತಿಯನ್ನು ರದ್ದು ಮಾಡುವ ಹೋರಾಟದಲ್ಲಿ ಹೆಚ್ಚು ಕ್ರಿಯಾಶಿಳರಾಗಿದ್ದರು. ೧೮೧೬ ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ "ಹಿಂದುಯಿಸಂ " ಶಬ್ದವನ್ನು ಪರಿಚಯಿಸಿ, ಸೇರಿಸಿದವರಲ್ಲಿ ಮೊದಲಿಗರು. ಸಮಾಜಕ್ಕೆ ವಿವಿಧ ರೀತಿಯಲ್ಲಿ ಅವರು ಸಲ್ಲಿಸಿದ ಕೊಡುಗೆಯಿಂದಾಗಿ , ರಾಜ ರಾಮ್ ಮೋಹನ್ ರೋಯ್ ,ಬೆಂಗಾಲ ಪುನರುಜ್ಜೀವನ ದ ಒಬ್ಬ ಪ್ರಮುಖ ವ್ಯಕ್ತಿಯಾಗಿ, ಗೌರವಕ್ಕೆ ಪಾತ್ರರಾಗುತ್ತಾರೆ. ಹಿಂದೂಯಿಸಮ್ ನ ರಕ್ಷಣೆ ಮತ್ತು ಭಾರತದ ಹಕ್ಕುಗಳ ರಕ್ಷಣೆಯಲ್ಲಿ ಬ್ರಿಟಿಶ್ ಸರ್ಕಾರದಲ್ಲಿ ಭಾಗವಹಿಸಿದ ,ಅವರ ಶ್ರಮದ ಪ್ರತಿಫಾಲವಾಗಿ ಅವರು “ ಬೆಂಗಾಲ ಪುನರುಜ್ಜೀವನದಜನಕ ” ಅಥವಾ “ಭಾರತ ರಾಷ್ಟ್ರದ ಪಿತಾಮಹಾ ” ಎಂಬ ಬಿರುದನ್ನು ಗಳಿಸಿದರು.

ಬಾಲ್ಯ ಜೀವನ ಮತ್ತು ಶಿಕ್ಷಣ (೧೭೭೪ - ೧೭೯೬)[ಬದಲಾಯಿಸಿ]

ರರ್ಹಿ ಬ್ರಾಹ್ಮಣ ಜಾತಿಯ [೧]ಕುಟುಂಬದಲ್ಲಿ ,ಬೆಂಗಾಲದ ರಾಧಾ ನಗರದಲ್ಲಿ , ಆಗಸ್ಟ್ ೧೪ (ಕೆಲವರು ಹೇಳಿದಂತೆ ೧೭ ಆಗಸ್ಟ್) ೧೭೭೪ [೨] (ಕೆಲವು ಮೂಲಗಳನ್ವಯ ೧೭೭೨) ರಾಯ್ )ಜನಿಸಿದರು. ಇವರ ಕುಟುಂಬ ವಿಭಿನ್ನ ಧಾರ್ಮಿಕ ಸಂಪ್ರದಾಯದಿಂದ ಕೊಡಿದ್ದು,ತಂದೆ ರಮಾಕಾಂತ ವೈಷ್ಣವರಾಗಿದ್ದರೆ , ಅವನ ತಾಯಿ ತಾರಿಣಿದೇವಿ ಶೈವ ಕುಟುಂಬದಿಂದ ಬಂದವರಾಗಿದ್ದರು.. ಅಂದಿನ ದಿನಗಳಲ್ಲಿ ,ಈ ರೀತಿ ವೈಷ್ಣವರು ಸಾಮಾನ್ಯವಾಗಿ, ಶೈವರನ್ನು ಮದುವೆಯಾಗುವ ಸಂಪ್ರದಾಯ ಇರಲಿಲ್ಲ.

ಹೀಗಾಗಿ ಒಬ್ಬರ ಬಯಕೆಯಂತೆ ವಿದ್ವಾಂಸ , ಶಾಸ್ತ್ರಿ ಗಳಾಗುವ ನಿಟ್ಟಿನಲ್ಲಿ ತಯಾರಿಯಾದರೆ , ಇನ್ನೊಬ್ಬರು ಪ್ರಪಂಚದ ಲೌಕಿಕ ಅಥವಾ ಸಾಮಾಜಿಕ ಜೀವನ ನಡೆ ಸಾಲು ಬೇಕಾದ ರೀತಿಯಲ್ಲಿ ತಯಾರಿ ಮಾಡುತ್ತಾ , ಸಾರ್ವಜನಿಕ ಆಡಳಿತ ನೀಡುವತ್ತ ಗಮನಹರಿಸಿದರು. ತಂದೆ-ತಾಯಿಯರ ಈ ರೀತಿಯ ಭಿನ್ನ ಅಭಿಪ್ರಾಯದಿಂದಾಗಿ, ರಾಮಮೋಹನ್ ನ ಬಾಲ್ಯದಲ್ಲಿನ ಬದುಕು ಇಡೀ ಮುಂದಿನ ಜೀವನದ ಮೇಲೆ ಪ್ರಭಾವ ಬೀರಿದ್ದು ,ಎರಡೂ ಕಡೆ ಜೀವನ ನಡೆಸುವಂತಾಗಿದೆ. [೩]

ರಾಮ್ ಮೋಹನ್ ರಾಯರಿಗೆ ೧೦ ವರ್ಷ ತುಂಬುವಲ್ಲಿ ೩ ಬಾರಿ ಮದುವೆಯಾಗುತ್ತದೆ.ತಮ್ಮ ಜಾತಿಯ ಸಂಪ್ರದಾಯ ಪದ್ಧತಿಯನ್ವಯ ಬಹುಪತ್ನಿತ್ವದ ಶಿಸ್ತಿನ ಆವರಣದೊಳಕ್ಕೆ ಅವರು ನಿಲ್ಲುವಂತಾಯಿತು. ಅವರ ಮೊದಲನೇ ಪತ್ನಿ ತನ್ನ ಬಾಲ್ಯ ಜೀವನದ ಆರಂಭದಲ್ಲಿಯೇ ನಿಧನ ಹೊಂದಿದಳು ಇವರಿಗೆ ಎರಡು ಗಂಡು ಮಕ್ಕಳಿದ್ದು,೧೮೦೦ ರಲ್ಲಿ ರಾಧಾಪ್ರಸಾದ್ ಮತ್ತು ೧೮೧೨ ರಲ್ಲಿ ರಾಮಪ್ರಸಾದ್, ಎಂಬುವರು ಅವರ ಎರಡನೇ ಹೆಂಡತಿಯೊಂದಿಗೆ ಜನಿಸಿದವರು. ಈಕೆ ೧೮೨೪ ರಲ್ಲಿ ನಿಧನ ಹೊಂದಿದಳು. ರಾಯರ ಮೂರನೇ ಹೆಂಡತಿ ಅವರಿಗಿಂತ ಹೆಚ್ಚು ಕಾಲ ಬದುಕಿದರು.

ರಾಯರ ಮೊದಲ ವಿದ್ಯಾಭ್ಯಾಸ ವಿವಾದದಿಂದ ಕೂಡಿದೆ. ಒಂದು ಸಾಮಾನ್ಯ ವರದಿಯನ್ವಯ

ರಾಮಮೋಹನ್ ರ ಸಾಂಪ್ರದಾಯಿಕ ವಿಸ್ಯಾಭ್ಯಾಸ ಅವರು ವಾಸವಾಗಿದ್ದ ಹಳ್ಳಿಯಲ್ಲಿನ ಪಾಠಶಾಲೆ ಯಲ್ಲಿ ಬೆಂಗಾಲಿ ಮತ್ತು ಸಂಸ್ಕೃತ ಹಾಗು ಪರ್ಷಿಯನ್ ಭಾಷೆಗಳನ್ನು ಕಲಿತರು. ತದನಂತರ ಪರ್ಷಿಯನ್ ಮತ್ತು ಅರೇಬಿಕ್ ಗಳನ್ನು, ಪಾಟ್ನಾದಲ್ಲಿ, ಮದ್ರಾಸ ಕಲಿತಿರಬಹುದೆಂದು ,ನಂತರ ಬನಾರಸ್ (ಕಾಶಿ ) ಗೆ ಕಳುಹಿಸಲ್ಪಟ್ಟು ,ಅಲ್ಲಿ ಸಂಸ್ಕೃತದ ವ್ಯಾಕರಣಗಳನ್ನು, ಹಿಂದೂ ಧಾರ್ಮಿಕ ವಿಧಾನಗಳನ್ನು ,ವೇದ ಮತ್ತು ಉಪನಿಷತ್ತುಗಳನ್ನು ಸಹ ಕಲಿತಿರಬಹುದೆಂದು ತಿಳಿಯಲಾಗಿದೆ. ಈತನ ಈ ಎರಡೂ ಸ್ಥಳಗಳಲ್ಲಿನ ವಾಸದ ಸಮಯದಲ್ಲಿ ಗೊಂದಲವಿದೆ.ಆದರೂ ಸಹ ತಿಳಿದಿರುವ ಒಂದು ಸಾಮಾನ್ಯ ನಂಬಿಕೆಯಂತೆ ೯ ವರ್ಷದವನಿದ್ದಾಗ ಈತನನ್ನು ಪಾಟ್ನಾಕ್ಕೆ ಕಳುಹಿಸಲಾಗಿದೆ.ಹಾಗು ಆ ಎರಡೂ ವರ್ಷ ಕಳೆದ ನಂತರ ಬನಾರಸ್ ಗೆ ಕಳುಹಿಸಲಾಗಿದೆ."[೪]

ಆತನ ನಂಬಿಕಸ್ಥ ಸಮಕಾಲೀನ ಜೀವನ ಚರಿತ್ರಾಕಾರ ಬರೆಯುವಂತೆ;

"ರಾಮಮೋಹನ್ ರವರಿಗೆ ,ಇತರೆ ಬ್ರಾಹ್ಮಣರಿಗೆ ದೊರೆಯದ ಮದರಸ ಶಿಕ್ಷಣದಿಂದ ,ಅರೇಬಿಕ್ ಜ್ಞಾನದಿಂದ ಖುರಾನ್ ತಿಳಿವು ಉಂಟಾಗಿ ,ಅದರಲ್ಲಿನ ಏಕದೇವ ವಾದ ಬದಲಾವಣೆಯನ್ನು ಮಾಡಿ, ರಾಮಮೋಹನ್ ರ ತಾಯಿ ತಾರಿಣಿ ದೇವಿ ಆತಂಕಕ್ಕೆ ಒಳಗಾಗಿ ,ತನ್ನ ಮಗುವನ್ನು ಬನಾರಸ್ ಗೆ ( ಸಂಸ್ಕೃತ ಮತ್ತು ವೇದಗಳನ್ನು ಕಲಿಯಲು ) ಕಳುಹಿಸಿ,ಇದರಿಂದಾಗಿ ರಾಯರು ತಮ್ಮ ಬದಲಾಯಿಸುವ ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೊದಲು ತಾಯಿ ಕಾರ್ಯ ಪ್ರವೃತ್ತರಾದರು. ಬನಾರಸ್ ನಲ್ಲಿ , ರಾಮಮೋಹನ್ ರ ಕ್ರಾಂತಿಕಾರಕ ಮನೋಭಾವ ಬದಲಾಗದೆ, ಉಪನಿಷತ್ ಗಳನ್ನೂ ಪ್ರಶ್ನಿಸುತ್ತಾ, ಪವಿತ್ರವಾದ ಖುರಾನ್ ನ ಏಕದೇವವಾದ ಎತ್ತಿ ಹಿಡಿದು ಹಿಂದೂಗಳ ಮೂರ್ತಿ ಪೂಜೆಯನ್ನು ವಿರೋಧಿಸುತ್ತಾರೆ. ಸಂಪ್ರದಾಯ ಹಿಂದೂಗಳ ಆಧ್ಯಾತ್ಮಿಕ ನೆಲೆಯೇ ಬನಾರಸ್ ಆಗಿದ್ದು ,ಹಲವಾರು ದೇವಸ್ಥಾನಗಳಿಂದ ಕೂಡಿದ್ದು, ಕೋಟ್ಯಾಂತರ ಹಿಂದೂಗಳಿಗೆ ಸೆವದೇವ ಮಂದಿರವಾಗಿದ್ದು, ರಾಮಮೋಹನ್ ರಾಯರು ತಮ್ಮ ಸಂಪ್ರದಾಯಸ್ಥ ವೇದಾಂತ ವಿದ್ಯಾಭ್ಯಾಸವನ್ನು ಮುಗಿಸಲು ಆಗಲಿಲ್ಲ. ಬದಲಾಗಿ ಇವರು ಹೆಚ್ಚಿನ ಪ್ರಯಾಣಗಳಿಗೆ ಆಧ್ಯತೆ ನೀಡಿ , (ಆದರೆ ಎಲ್ಲೆಲ್ಲಿ ಹೋದರು ಎಂದು ತಿಳಿಯದೆ ಇದ್ದರೂ, ಈ ಸಮಯದಲ್ಲಿ ಬುದ್ಧನ ತತ್ವ ಸಿದ್ಧಾಂತಗಳ ಬಗ್ಗೆ ಹೆಚ್ಚೆಚ್ಚು ತಿಳಿದಿದೆಯೆಂದು ತಿಳಿಯಲ್ಪಟ್ಟಿದೆ. ) ನಂತರ ತನ್ನ ಕುಟುಂಬಕ್ಕೆ ೧೭೯೪ ರಲ್ಲಿ ವಾಪಸ್ಸಾಗಿ ,ತಂದೆಯವರ ಹುಡುಕಾಟದ ಪ್ರಯತ್ನದಿಂದಾಗಿ ,ಬನಾರಸ್ಸಿಗೆ ಕಳುಹಿಸಲ್ಪಟ್ಟು,ಬುದ್ಧನ ಅನುಯಾಯಿಗಳ ಜೊತೆ ಇರುವಂತಾಯಿತು. ೧೭೯೪ ಮತ್ತು ೧೭೯೫ ರ ನಡುವೆ ರಾಮಮೋಹನ ರಾಯರು ತಮ್ಮ ಕುಟುಂಬದ ಜೊತೆಯಿದ್ದು,ಕುಟುಂಬದ ಜಮೀನನ್ನು ನೋಡಿಕೊಂಡಿದ್ದರು. ರಾಮಮೋಹನ್ ಮತ್ತು ಅವರ ತಂದೆಯೊಡನೆ ಯಾವಾಗಲೂ ಗಣನೀಯವಾದ ಘರ್ಷಣೆಗಳಿದ್ದು ಅವರ ತಂದೆಯವರು ಸುಮಾರು ೧೭೯೬ ರಲ್ಲಿ ನಿಧನರಾಗಿ,ತಮ್ಮ ಮಕ್ಕಳ ಪಾಲಿಗೆ ಆಸ್ತಿಯನ್ನು ಹಂಚಿಕೊಳ್ಳಲು ಬಿಟ್ಟು ಹೋಗಿದ್ದರು.

ಪ್ರಭಾವ[ಬದಲಾಯಿಸಿ]

ಉಪನಿಷತ್ ಗಳಲ್ಲಿರುವಂತೆ ,ಹಿಂದೂ ಧರ್ಮಶಾಸ್ತ್ರದ ವೇದಾಂತ ಶಾಲೆಯ ಶುದ್ಧ ತತ್ವ ಮತ್ತು ಸಿದ್ಧಾಂತಗಳ ಆಧಾರಿತ ಪ್ರತಿಪಾದನೆಯ ಪುನರುಜ್ಜೀವನದ ಪ್ರಭಾವಕ್ಕೆ ರಾಮ್ ಮೋಹನ್ ರಾಯ್ ರು ಭಾರತೀಯ ಆಧುನಿಕ ಚರಿತ್ರೆಗೆ ಕಾರಣರಾದರು. ಅವರು ಎಲ್ಲ ದೇವರು ಒಂದೇ ಎಂದು ಭೋಧಿಸಿದರು. ವೇದಗಳ ಶ್ಲೋಕಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದರು. ಕಲ್ಕತ್ತದ ಯುನಿಟೆರಿಯನ್ ಸಮಾಜದ ಸಹ ಸ್ಥಾಪಕರು ಹಾಗೂ ಬ್ರಹ್ಮ ಸಮಾಜದ ಸಂಸ್ಥಾಪಕರಾದರು. . ಈ ಬ್ರಹ್ಮ ಸಮಾಜ ಆಧುನಿಕ ಭಾರತ ಸಮಾಜ ನಿರ್ಮಾಣದಲ್ಲಿ ಬಹು ಮುಖ್ಯ ಪುನರುಜ್ಜೀವನದ ಪಾತ್ರವನ್ನು ವಹಿಸಿದೆ. ಅತ್ಯಂತ ಯಶಸ್ವಿಯಾಗಿ 'ಸತಿ' ಪದ್ಧತಿಯ ವಿರುದ್ಧ ಹೋರಾಡಿದರು.ವಿಧವೆಯರನ್ನು ಸುಡುವ ಕೆಟ್ಟ ಪದ್ಧತಿಯನ್ನು ನಿಲ್ಲಿಸಲು ಶ್ರಮಿಸಿದರು. ನಮ್ಮ ದೇಶದ ಸಂಪ್ರದಾಯಗಳ ಜೊತೆಗೆ ,ಪಶ್ಚಿಮ ದೇಶದ ಸಂಸ್ಕೃತಿಯನ್ನೂ ಸಹ ಒಂದುಗೂಡಿಸಿದರು. ಭಾರತದಲ್ಲಿ ಹಲವಾರು ಶಾಲೆಗಳನ್ನು ತೆರೆದು ,ಆಧುನಿಕ ವಿದ್ಯಾ ಪದ್ಧತಿಯನ್ನು ಜನಪ್ರಿಯಗೊಳಿಸಿದರು. ವಿಚಾರಾತ್ಮಕ , ನೀತಿಶಾಸ್ತ್ರ , ಅಧಿಕಾರಯುಕ್ತವಲ್ಲದ , ವಾಸ್ತವ ಪ್ರಪಂಚದ ಹಾಗು ಸಾಮಾಜಿಕ ಬದಲಾವಣೆಯ , ಹಿಂದೂಯಿಸಮ್ ಗೆ ಪ್ರೋತ್ಸಾಹಿಸಿದರು. ಅವರ ಬರಹಗಳು ಬ್ರಿಟಿಷರ ಮತ್ತು ಅಮೇರಿಕಾದ ಯುನಿಟೆರಿಯನ್ಸ್ ಗಳ ಮೇಲೂ ಪ್ರಭಾವ ಬೀರಿತು.

ಕ್ರೈಸ್ತಧರ್ಮ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಆರಂಭದ/ಪ್ರಾಥಮಿಕ ಆಡಳಿತ (೧೭೯೫ - ೧೮೨೮)[ಬದಲಾಯಿಸಿ]

ಒಂದರ ಮೇಲೆ ಒಂದಾಗಿ ಬೆಸೆದ ಈ ದಿನಗಳಲ್ಲಿ , ರಾಮ್ ಮೋಹನ್ ರಾಯರು ಒಬ್ಬ ರಾಜಕೀಯ ಸತ್ಯಾಗ್ರಹಿಯಾಗಿ ,ಮಧ್ಯವರ್ತಿಯಾಗಿ ದುಡಿದರು.ಕ್ರಿಶ್ಚಿಯನ್ ಮಿಷನರಿಗಳ [೫] ಪ್ರತಿನಿಧಿಗಳಾಗಿ , ಈಸ್ಟ್ ಇಂಡಿಯಾ ಕಂಪನಿ ಯವರಿಂದ ನೇಮಿತರಾಗಿ ,ಜೊತೆ ಜೊತೆಗೆ ಪಂಡಿತ ಉದ್ಯೋಗದ ಪರಿಪಾಲಕರಾಗಿ ದುಡಿದರು. ಅವರ ಜೀವನದ ಈ ಅರ್ಥಮಾಡಿಕೊಳ್ಳಲಾಗದ ಅವಧಿಯ ದಿನಗಳನ್ನು ಅರಿಯಲು ಬ್ರಹ್ಮ ಸಮಾಜದ ತತ್ವಗಳ ಅವಶ್ಯಕತೆಗೆ ಕಾರಣವಾಗಲು ಅವರ ಕಾಲದ ಸಮಾನ ಸ್ಕಂದರನ್ನು ಆಧರಿಸಬೇಕಾಗುತ್ತದೆ.

೧೭೯೨ ರಲ್ಲಿ ಬ್ರಿಟಿಷ್ ನ ಬಾಪ್ಟಿಸ್ಟ್ ಶೂ ಮೇಕರ್ ವಿಲಿಯಂ ಕ್ಯಾರಿಕ್ರಿಶ್ಚಿಯನ್ ಪಾದ್ರಿಗಳ ಪ್ರಭಾವ ಕುರಿತಂತೆ "ಕ್ರೈಸ್ತಧರ್ಮೀಯರಲ್ಲದವರನ್ನು ಮತಾಂತರಿಸುವುದನ್ನು ಕುರಿತಂತೆ ಆದ ಒಪ್ಪಂದದ ವಿಚಾರಣೆ" ಯನ್ನು ಪ್ರಕಟಿಸಿದರು. [೬]

೧೭೯೩ ರಲ್ಲಿ ವಿಲಿಯಂ ಕ್ಯಾರಿ ಭಾರತಕ್ಕೆ ಬಂದು ನೆಲೆಸಿದರು. ಆದರೆ ಉದ್ದೇಶವು 'ಬೈಬಲ್' ಅನ್ನು ಭಾಷಾಂತರಿಸುವುದು ,ಪ್ರಕಟಿಸುವುದು ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಪ್ರಕಟಿಸಿ ಹಂಚಿ ಭಾರತೀಯ ಜನರಿಗೆ ಕ್ರಿಶ್ಚಿಯಾನಿಟಿ ಬಗ್ಗೆ ತಿಳಿ ಹೇಳುವುದೇ ಆಗಿತ್ತು. [೭] "ಸೇವಾ ನಿರತ " (ಅಂದರೆ, ಸೇವಾ ಗುಂಪುಗಳು ) ಬ್ರಾಹ್ಮಣರು ಮತ್ತು ಪಂಡಿತರು ತಮ್ಮ ಕೆಲಸಕ್ಕೆ ಸಹಕಾರಿಯಾಗಬಹುದೆಂದು ,ಅವರೆಲ್ಲರನ್ನು ಒಂದೆಡೆ ಸೇರಿಸಲಾರಂಭಿಸಿದರು. ಬುದ್ಧಿಸಂ ಮತ್ತು ಜೈನಿಸಮ್ ಅನ್ನು ಕಲಿಯುವ ಮುಖಾಂತರ ಸಾಂಸ್ಕೃತಿಕ ಕ್ರಿಶ್ಚಿಯಾನಿಟಿ ಪರ ವಾದ ಮಾಡಲು ಉದ್ಯುಕ್ತನಾದನು .

೧೭೯೫ ರಲ್ಲಿ ಕ್ಯಾರಿಯವರು ಸಂಸ್ಕೃತ ಪಂಡಿತ - ತಾಂತ್ರಿಕ ಹರಿಹರಾನಂದ ವಿದ್ಯಾಬಾಗೀಶ್ [೮]-ರನ್ನು ಸಂಪರ್ಕಿಸಿದ . ನಂತರ ಇವನಿಂದ ರಾಮ್ ಮೋಹನ್ ರಾಯರ ಪರಿಚಯವಾಗಿ , ಇಂಗ್ಲೀಷನ್ನು ಕಲಿಯಲು ಸಹಾಯವಾಯಿತು.

೧೭೯೬ ಮತ್ತು ೧೭೯೭ ನಡುವೆ ,ತ್ರಿಮೂರ್ತಿಗಳಾದ " ಕ್ಯಾರಿ , ವಿದ್ಯಾ ವಾಗೀಶ್ ಮತ್ತು ರಾಯ್ " ಒಟ್ಟುಗೂಡಿ, "ಮಹಾ ನಿರ್ವಾಣ ತಂತ್ರ " (ಅಥವಾ "ಬುಕ್ ಆಫ್ ದಿ ಗ್ರೇಟ್ ಲಿಬರೇಶನ್ ")[೯]ಎಂಬ ಧಾರ್ಮಿಕ ಪುಸ್ತಕವನ್ನು ಕಟ್ಟಿಕೊಟ್ಟು , "ದಿ ಒನ್ ಟ್ರೂ ಗಾಡ್ " ಎಂಬ ಧಾರ್ಮಿಕ ಪುಸ್ತಕ ಬಿಡುಗಡೆ ಮಾಡಿ ,ಬಹ್ಮನ್ ಮುಖವಾಡವೇ ಕ್ರಿಶ್ಚಿಯಾನಿಟಿ ಎಂಬಂತೆ ಬಿಂಬಿಸಿದರು. ಕ್ಯಾರಿಯ ಭಾಗವಹಿಸುವಿಕೆ ಬಗ್ಗೆ ಸರಿಯಾಗಿ ದಾಖಲಾಗದೆ ,ಅವನು ಕೇವಲ ಸಂಸ್ಕೃತವನ್ನು ಕಲಿಯಲು ೧೭೯೬ ರಲ್ಲಿ ಉದ್ದ್ಯುಕ್ತನಾಗಿ ,೧೭೯೭ ರಲ್ಲಿ ವ್ಯಾಕರಣವನ್ನು ಮುಗಿಸಿದನು.ಅದೇ ವರ್ಷದಲ್ಲಿ 'ಜೋಶುಅ' ಅನ್ನು 'ಜಾಬ್' ಗೆ ಭಾಷಾಂತರಿಸಿದನು. ಅದೇ ಒಂದು ಬೃಹತ್ ಕೆಲಸವಾಗಿತ್ತು. [೧೦] (ತನ್ನ ಕುಟುಂಬಕ್ಕೆ ಬರೆದ ಪತ್ರದಲ್ಲಿ ರಾಮ್ ಮೋಹನ್ ರಾಯ್ ,ಈ ದಿನಗಳಲ್ಲಿ ಅವನು , ತನ್ನ ಕುಟುಂಬಕ್ಕೆ ,ಅವನ ಇರುವಿಕೆಯ ಬಗ್ಗೆ ಹೇಳುತ್ತಾ, ಈ ಅವಧಿಯಲ್ಲಿ ತಾನು "ಟಿಬೆಟ್ " ಗೆ ಹೋಗಿದ್ದು ,ನಂತರ ಬಹಳ ದೂರದಲ್ಲಿರುವ "ಟಿಂಬುಕ್ತೂ " ನಲ್ಲಿ ಇರುವುದಾಗಿ ಹೇಳಿದನು ). ನಂತರದ ಎರಡು ದಶಕಳ ಕಾಲ ಈ ದಾಖಲೆಗಳನ್ನು ಸತತವಾಗಿ ಸೇರಿಸಿದನು. Empty citation (help)  ಇದರ ನ್ಯಾಯಾಂಗದ ಭಾಗಗಳನ್ನು ಕಾನೂನಿನ ನ್ಯಾಯಾಲಯದಲ್ಲಿ ಉಪಯೋಗಿಸಿಕೊಂಡು ,ಬೆಂಗಾಲದಲ್ಲಿ ಇಂಗ್ಲಿಷಿನ ತೀರ್ಮಾನಕ್ಕೆ ಹಿಂದೂ ಕಾನೂನಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ,ತೀರ್ಮಾನ ತೆಗೆದುಕೊಳ್ಳುವ ನಿಟ್ಟಿನಲ್ಲಿ ನೆರವಾದರು. ಆದರೆ ಕೆಲವು ಬ್ರಿಟಿಶ್ ನ್ಯಾಯಾಧೀಶರು ,ಮತ್ತು ಕಲೆಕ್ಟರುಗಳು ಇದನ್ನು ಅನುಮಾನದಿಂದ ನೋಡುತ್ತಾ,ಇದು ಸುಳ್ಳು ಪತ್ರ ,ಮತ್ತು ಇದರ ಉಪಯೋಗವನ್ನು ಬಹಳ ಬೇಗ ನಿಷೇಧಿಸಲಾಯಿತು. ( ಹಿಂದೂ ಕಾನೂನಿನ ನೆಲೆಯಾದ ಪಂಡಿತರುಗಳು ರಿಲಯನ್ಸ್ ಅವಲಂಭಿಸಿ ) ಕ್ಯಾರಿಯ ಜೊತೆ ವಿದ್ಯಾವಾಗೀಶರ ನಡುವೆ ಅಪಸ್ವರ ಉಂಟಾಗಿ ಅವರಿಂದ ಬೇರೆಯಾಗಿ ರಾಮ್ ಮೋಹನ್ ರಾಯರ ಜೊತೆ ಸಂಪರ್ಕ ಇಟ್ಟು ಕೊಂಡಿದ್ದ.[೧೧] ( ಮಹಾ ನಿರ್ವಾಣ ತಂತ್ರದ ಬ್ರಹ್ಮ ಸಮಾಜದ ಪ್ರಾಮುಖ್ಯತೆ ,ಆಸ್ತಿಯ ಕ್ರೋಡೀಕರಣದಿಂದಾಗಿ ರಾಮ್ ಮೋಹನ್ ರಾಯ ಮತ್ತು ದ್ವಾರಕನಾಥ್ ಟಾಗೋರ್ ರು ನ್ಯಾಯಾಂಗ ಬಳಕೆಗೆ ಉಪಯೋಗಿಸಿ ,ಯಾವುದೇ ಆಂತರಿಕ ,ಧಾರ್ಮಿಕ ಆದಾಯವಾಗದೇ ಆದರೆ ಅದರ ಇಡೀ ವಿಷಯ "ಕೇವಲ ಒಬ್ಬ ಸತ್ಯ ದೇವರು"ಮತ್ತು ಅದರ ಪೂಜೆಗೆ ಅರ್ಪಿಸಲಾಗಿದೆ. ).

೧೭೯೭ ರಲ್ಲಿ, ರಾಮ್ ಮೋಹನ್ ಕಲ್ಕತ್ತಾ ತಲುಪಿ , "ಬ್ಯಾನಿಯನ್ " (ಸಾಲ ನೀಡುವವನು )ಕಂಪನಿಯ ಆಂಗ್ಲರ ಬಡವರಿಗಾಗಿ ,ತಮ್ಮ ಸಂಪಾದನೆಗಿಂತ ಹೆಚ್ಚಾಗಿ ಬದುಕುವವರಿಗಾಗಿ ಎಂದು ತಿಳಿಸಿದರು. ರಾಮ್ ಮೋಹನ್ ರಾಯರು ಪಂಡಿತರಾಗಿ ಇಂಗ್ಲಿಷ್ ನ್ಯಾಯಾಲಯದಲ್ಲಿ ವೃತ್ತಿಯನ್ನು ಮುಂದುವರಿಸಿ ,ತನ್ನ ಬದುಕನ್ನು ತಮಗಾಗಿ ರೂಢಿಸಿಕೊಂಡರು. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯನ್ನೂ ಕಲಿಯಲಾರಂಭಿಸಿದರು.

೧೭೯೯ ರಲ್ಲಿ ಕ್ಯಾರಿಯು ಪಾದ್ರಿಗಳಾದ ಜೋಶುಅ ಮಾರ್ಷ್ ಮ್ಯಾನ್‌ಮತ್ತು ಮುದ್ರಣಕಾರ ವಿಲಿಯಂವಾರ್ಡ್ ರೊಂದಿಗೆ ಡ್ಯಾನಿಶ್ ಸೆಟ್ಟಲ್ ಮೆಂಟ್ ನಲ್ಲಿ ಸೇರಮ್ಪೋರೆ ನಲ್ಲಿ ಒಂದಾದರು..

೧೮೦೩ ರಿಂದ ೧೮೧೫ ರವರೆಗೆ ರಾಮ್ ಮೋಹನ್ ರವರು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ "ಬರಹ ಸೇವೆ " ಮಾಡುತ್ತಾ ,ಖಾಸಗೀ ಗುಮಾಸ್ತನಾಗಿ, "ಮುನ್ಷಿ "ಯಾಗಿ , ಮುರ್ಶಿದ ಬಾದ್ [೧೨] ನಲ್ಲಿನ ಅಪೀಲು ನ್ಯಾಯಾಲಯದಲ್ಲಿ ರೆಜಿಸ್ತ್ರರ್ ಆದ ಥಾಮಸ್ ವುಡ್ ಫೋರ್ದೆ , ಕೈ ಕೆಳಗೆ ಕೆಲಸ ಮಾಡುತ್ತಿದ್ದನು. (ದೂರದ ಸೋದರ ಸಂಬಂಧಿ ,- ಮ್ಯಾಜಿಸ್ಟ್ರೇಟ್ ಸಹ - ಮಹಾ ನಿರ್ವಾಣ ತಂತ್ರದ ಸ್ಯುದೋನಿಂ ಅರ್ತುರ್ ಅವಲೋನ್ ಕೆಳಗೆ . )[೧೩] ಬ್ರಷ್ಟಾಚಾರದ ಕಾರಣದಿಂದ ,ರಾಯ್ ರವರು ವುಡ್ ಫೋರ್ದೆಯ ಸೇವೆಯಿಂದ ಬ್ರಷ್ಟಾಚಾರದ ಆರೋಪದ ಕಾರಣದಿಂದ ,ರಾಜೀನಾಮೆ ನೀಡಿ ಹೊರ ಬಂದರು. ನಂತರ ಕಲೆಕ್ಟರ್ ಆದ 'ಜಾನ್ ದಿಗ್ಬಿ'ಬಳಿ ಕೆಲಸವನ್ನು ಗಿಟ್ಟಿಸಿ , ರಾಂಗ್ಪುರ್ ನಲ್ಲಿ ರಾಮ್ ಮೋಹನ್ ಹಲವು ವರ್ಷಗಳು ಕಳೆದು, ಡಿಗ್ಬಿಯೇ ಅಲ್ಲದೆ ತನ್ನ ಸಂಪರ್ಕಗಳನ್ನು ಹರಿಹರಾನಂದರ ಜೊತೆಯೂ ಮುಂದುವರಿಸಿದರು. ವಿಲಿಯಂ ಕ್ಯಾರಿ ,ನಂತರ ಸೇರಮ್ಪೋರೆಯಲ್ಲಿ ವಾಸ ಮಾಡುತ್ತಾ, ತನ್ನ ಹಳೆಯ ' ಟ್ರಿಯೋ ಲಾಭದಾಯಕ ಸಂಸ್ಥೆ' ಗಳೊಡನೆ ಸಂಪರ್ಕವನ್ನು ಮುಂದುವರಿಸಿದನು. ವಿಲಿಯಂ ಕ್ಯಾರಿ ನಂತರ ಇಂಗ್ಲಿಷ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ಫೋರ್ಟ್ ವಿಲಿಯಂ ಮಹಾ ಘಟಕಕ್ಕೆ ಸೇರಿ, ತನ್ನ ಧಾರ್ಮಿಕ ಮತ್ತು ರಾಜಕೀಯ ಆಶೋತ್ತರಗಳನ್ನು ಒಂದರೊಳಗೊಂದು ಹೆಚ್ಚಿಸಿಕೊಂಡರು.[ಸೂಕ್ತ ಉಲ್ಲೇಖನ ಬೇಕು].

೧೮೩೮ ರಲ್ಲಿ ,ಒಂದು ವರ್ಷಕ್ಕೆ ೩ ಮಿಲಿಯನ್ ಪೌಂಡ್ಸ್ ನಂತೆ ಭಾರತ ದೇಶದ ಹಣ ಈಸ್ಟ್ ಇಂಡಿಯಾ ಕಂಪನಿಯ ಪಾಲಾಗುತ್ತಿತ್ತು. ಈ ರೀತಿಯಾಗಿ ಭಾರತ ದೇಶದ ಎಷ್ಟು ಹಣ ಭಾರತದಿಂದ ಕಣ್ಮರೆಯಾಗುತ್ತಿದೆ ಎಂದು ಲೆಕಾಚಾರ ನಡೆಸಿದವರಲ್ಲಿ ರಾಮ್ ಮೋಹನ್ ರಾಯರು ಮೊದಲಿಗರು. ಅವರು ಲೆಕ್ಕಾಚಾರ ಮಾಡಿದಂತೆ ಕಂದಾಯದ ಅರ್ಧದಷ್ಟು ಭಾರತದಿಂದ ಇಂಗ್ಲೆಂಡ್ ಗೆ ಕಳುಹಿಸಲ್ಪಟ್ಟಿತು.ಭಾರತದವರಿಗೆ "ಕೇವಲ ಜನಸಂಖ್ಯೆ"ಭಾರಿ ಬಹುಮತ ಉಳಿದು ,ಇನ್ನುಳಿದ ಹಣವನ್ನು ಸಮಾಜದ ಒಳಿತಿಗೆ ಉಪಯೋಗಿಸಲಾಗುತ್ತಿತ್ತು.[೧೪] ರಾಮ್ ಮೋಹನ್ ರಾಯ್ ರು ಇದನ್ನು ಕಂಡು ನಂಬಿದ್ದು ,ಭಾರತದಲ್ಲಿ ಯುರೋಪಿಯನ್ನರ ಕಟ್ಟುಪಾಡಿಲ್ಲದ ವಸಾಹತು ಶಾಹಿಗಳ ಉಚಿತ ವ್ಯಾಪಾರದ ಆಡಳಿತದಿಂದ ಮಾತ್ರ ಈ ರೀತಿಯ ಆರ್ಥಿಕ ನಷ್ಟ ತಡೆಯಲು ಸಾಧ್ಯ ಎಂದರು. [೧೫]

ಪ್ಲಾಸ್ಸಿ ಮತ್ತು ಬಕ್ಸಾರ್ ಕದನಗಳ ನಂತರ ಹೆಚ್ಚು ಕಡಿಮೆ ಇಲ್ಲವಾಗಿದ ಮುಸ್ಲಿಮರು ,೧೯ ನೇ ಶತಮಾನದ ತಿರುವಿನಲ್ಲಿ , ಮತ್ತೊಮ್ಮೆ ಕಂಪನಿ ಗೆ ರಾಜಕೀಯ ಬೆದರಿಕೆಯನ್ನು ಭೀಕರವಾಗಿಯೇ ನೀಡಿದರು. ಕ್ಯಾರಿಯು ಆಗ ರಾಮ್ ಮೋಹನ್ ರಾಯರನ್ನು ಒಬ್ಬ ಪ್ರತಿಭಟನಾಕಾರರನ್ನಾಗಿ ಬಳಸಿಕೊಂಡರು. [೧೬]

ಕ್ಯಾರಿಯ ಗುಪ್ತಪಾಲಕತ್ವದಲ್ಲಿ[ಸೂಕ್ತ ಉಲ್ಲೇಖನ ಬೇಕು] ಮುಂದಿನ ಎರಡು ದಶಕಗಳ ಕಾಲ , ಬೆಂಗಾಲದ ಹಿಂದೂ ಕೋಟೆಗಳ ಮೇಲೆ ರಾಮ್ ಮೋಹನ್ ರಾಯರು ಧಾಳಿಯನ್ನು ಇಟ್ಟರು.ಅವರದೇ ಸ್ವಂತ 'ಕುಲೀನ ಬ್ರಾಹ್ಮಣಿ ಪೂಜಾರಿ ಬುಡಕಟ್ಟಿನ ಮೇಲೆ ( ಬೆಂಗಾಲದ ಹಲವಾರು ದೇವಸ್ಥಾನಗಳು ಅವರ ಹಿಡಿತದಲ್ಲಿದ್ದ ಕಾಲ ) ಮತ್ತು ಹೆಚ್ಚಿನದು ಪೂಜಾರಿಣಿಯ ಮೇಲೆ. ರಾಜಾ ರಾಮ್ ಮೋಹನ್ ರಾಯರಿಗೆಂದೇ ಸಾಮಾಜಿಕ ಮತ್ತು ತಾತ್ವಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಕ್ಯಾರಿ ಕುಲೀನ ವರ್ಗದ ಪ್ರಭಾವವನ್ನು ಕಡಿಮೆ ಮಾಡಿ ಹಿಡಿತದಲ್ಲಿಟ್ಟುಕೊಳ್ಳಲು ( ಅದರಲ್ಲೂ ತಮ್ಮ ಸ್ವಾಮ್ಯ ತಪ್ಪಿದ ಮಕ್ಕಳ ಮೇಲೆ ಒತ್ತಡ ಹಾಕಿ ಬೆಂಗಾಲದ "ಭದ್ರಲೋಕ " ಇಲ್ಲವೇ ಶ್ರೀಮಂತಿಕೆಯನ್ನು ನಿರ್ಮಾಣ ಮಾಡುವುದು ) ಮುಘಲ್ ಜಮೀನ್ದಾರಿ ಪದ್ಧತಿಯನ್ನು ರದ್ದು ಮಾಡಿ ಕಂಪನಿಯನ್ನು ಆಡಳಿತಾಧಿಕಾರಕ್ಕೆ ತರುವುದು . ಕುಲೀನರ ಅತಿರೇಕದಲ್ಲಿ ಸೇರಿರುವುದು - ಸತಿ (ವಿಧವೆಯರನ್ನು ಸುಡುವುದು ), ಬಹುಪತ್ನಿತ್ವ , ಮೂರ್ತಿಪೂಜೆ , ಬಾಲ್ಯ ವಿವಾಹ , ವರದಕ್ಷಿಣೆ ಪದ್ಧತಿ ಮುಂತಾದವುಗಳು ಇದ್ದವು.. ಕ್ಯಾರಿ ಆದರ್ಶ ಈ ಎಲ್ಲಾ ಘಟನೆಗಳನ್ನು ತಡೆಯುವುದಾಗಿತ್ತು.

ರಾಯರ ಸಮಕಾಲೀನ ಜೀವನ ಚರಿತ್ರೆಯ ದಾಖಲೆಗಳು :

" ೧೮೦೫ ರಲ್ಲಿ ರಾಮ್ ಮೋಹನ್ ರವರು 'ತುಹ್ಫಾತ್ -ಉಲ್ -ಮುವಹ್ಹಿದೀನ್ ' (ಏಕದೇವವಾದ ದೇವರ ಆರಾಧಕರಿಗೆ ಕೊಡುಗೆ ) - ಪ್ರಬಂಧವನ್ನು ಪೆರ್ಶಿಯನ್ ಭಾಷೆಯಲ್ಲಿ ಬರೆದು , ಅರೇಬಿಕ್ ಭಾಷೆಯಲ್ಲಿ ಪೀಟಿಕೆಯನ್ನು ಬರೆದು ,ಅದರಲ್ಲಿ ಎಲ್ಲಾ ದೇವರು ಒಂದೇ ಎಂದು ವಿಚಾರಾತ್ಮಕವಾಗಿ ಪ್ರತಿಪಾದಿಸಿದರು. ಪೆರ್ಶಿಯನ್ ಭಾಷೆಯಲ್ಲಿ ಪ್ರಕಟವಾದುದರಿಂದ , ಮುಸ್ಲಿಂ ಜನಾಂಗದ ಕೆಲವು ಜನರ ದ್ವೇಷ ಕಟ್ಟಿಕೊಂಡಂತೆ ಆಯಿತು . ಮುಂದಿನ ಹತ್ತು ವರ್ಷಗಳ ಕಾಲ , ರಾಮ್ ಮೋಹನ್ ರಾಯರು ಜಾನ್ ದಿಗ್ಬಿಯ ಜೊತೆ ಈಸ್ಟ್ ಇಂಡಿಯಾ ಕಂಪನಿಯ ಒಡೆತನದಲ್ಲಿ ಪ್ರಯಾಣಿಸುತ್ತಾ, ಮೊದಲು ಮುನ್ಷಿ ಯಾಗಿ ನಂತರ ದಿವಾನರಾಗಿ ಕೆಲಸ ಮಾಡಿದರು. . ನಂತರ ಇಂಗ್ಲೀಷ್ ಹಾಗೂ ' ಇಂಗ್ಲೆಂಡ್ ನ ಬಾಪ್ಟಿಸ್ಟ್ ಕ್ರಿಸ್ತಿಯಾನಿಟಿ 'ಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಪ್ರಚಂಡವಾಗಿ ಹೆಚ್ಚಿಸಿದವು. ಜೈನ ಜನಾಂಗದವರೊಂದಿಗೆ ಸ್ನೇಹವನ್ನು ಬೆಳಸಿ ಹಿಂದೂಗಳ ಬಗ್ಗೆ ಅವರ ಅನುಸಂಧಾನ ಏನೆಂದು ಕಂಡುಕೊಂಡರು.ಪೂಜಾರಿ ಪದ್ಧತಿ ಹಾಗು ದೇವರನ್ನೇ ವಿರೋಧಿಸಿದರು.(ಧಾರ್ಮಿಕ ಶಾಸ್ತ್ರ ಪದ್ಧತಿಯ ರಕ್ತಪೂರ್ಣ ತ್ಯಾಗ ಬೆಂಗಾಲದಲ್ಲಿ ಬಹಳ ದಿನ ಬೇಕಾಯಿತು.)

೧೮೧೫ ರಲ್ಲಿ ಶ್ರೀಮಂತಿಕೆಯನ್ನು ಗಳಿಸಿದ ಮೇಲೆ, ಕಂಪನಿಯನ್ನು ಬಿಟ್ಟು , ರಾಮ ಮೋಹನ ರಾಯರು ಕಲ್ಕತ್ತದಲ್ಲಿ ಪುನರ್ವಸತಿಯನ್ನು ಹೊಂದಿ , ' ಆತ್ಮೀಯ ಸಭೆ' ಯನ್ನು ಆರಂಭಿಸಿದರು. - ಇಲ್ಲಿ ಧಾರ್ಮಿಕ ಚರ್ಚೆಯನ್ನು ಆರಂಭಿಸಿ ,ಹಿಂದೂ ಧರ್ಮದಲ್ಲಿನ ಏಕದೇವವಾದವನ್ನು ಹಾಗು ಅದಕ್ಕೆ ಒಪ್ಪುವಂತಹ ವಾದದ ವಿಷಯಗಳನ್ನು ಚರ್ಚಿಸಲಾರಂಭಿಸಿದರು. ಆದರೆ , ರಾಮ ಮೋಹನರ ತಾಯಿ,ಅವನನ್ನು ಕ್ಷಮಿಸದೆ ವ್ಯಂಗ್ಯವಾಗಿ ೧೮೧೭ ರಲ್ಲಿ ಒಂದರ ಮೇಲೆ ಒಂದರಂತೆ , ರಾಮ ಮೋಹನರ ಮೇಲೆ ಕೇಸುಗಳನ್ನು ಹಾಕಿ ,ರಾಮ ಮೋಹನರ ಧರ್ಮ ಭ್ರಷ್ಟತೆಯ ವಿರುದ್ಧ ಕುಟುಂಬದ ಜಮೀನ್ದಾರಿಕೆಯಿಂದ ದೂರವಿಡುವಂತೆ ಮಾಡಿದಳು.. ರಾಮ ಮೋಹನರು ಇದನ್ನು ವಿರೋಧಿಸಿ,ತನ್ನ ಕುಟುಂಬದ ಸತಿ ಪದ್ಧತಿಯನ್ನು ಬಲವಾಗಿ ಖಂಡಿಸಿ ವಿಧವೆಯರನ್ನು ಗಂಡಂದಿರ ಚಿಯೇಯೊಂದಿಗೆ ಸುದುತ್ತಿದ್ದುದರಿಂದ ಬ್ರಿಟಿಶರ ನ್ಯಾಯಾಲಯದಲ್ಲಿ ಅವರಿಗೆ ಯಾವ ಆಸ್ತಿ ದಕ್ಕುತ್ತಿರಲಿಲ್ಲ. ೧೮೧೭ ರಲ್ಲಿ ರಾಮ ಮೋಹನರನ್ನು ಹಿಂದೂ ಜಮೀನ್ದಾರಿ ಪದ್ಧತಿಯಿಂದ ದೂರ ಇಟ್ಟಿದ್ದು,ಒಂದು ಘಟನೆ,ಹಿಂದೂ ಕಾಲೇಜು (ನಂತರ ಪ್ರೆಸಿಡೆನ್ಸಿ ) ' ಡೇವಿಡ್ ಹೇರ್' ಸೇರಿದಂತೆ ಸಂಭವಿಸಿತು.. ತಮಿಳು ಬ್ರಾಹ್ಮಣ ಸುಬ್ರಮಣ್ಯ ಶಾಸ್ತ್ರಿಯವರ ಜೊತೆ, ಮೂರ್ತಿ ಪೂಜೆಯ ವಿರುದ್ಧ ನಡೆದ ಚರ್ಚೆ ೧೮೧೯ ರಲ್ಲಿ ,ಹಿಂದೂಗಳ ಸಾರ್ವಜನಿಕ ಗಲಾಟೆಗೆ ಕಾರಣವಾಯಿತು.ಗೆಲುವಾದರೂ , ರಾಮ್ ಮೋಹನರ ಬ್ರಾಹ್ಮಣರ ಧರ್ಮಗ್ರಂಥ ಹಾಗು ವೇದಾಂತಗಳ ಬಗ್ಗೆ ಇದ್ದ ಹಿಡಿತ ಕಡಿಮೆಯಾಗಿರುವುದು ವ್ಯಕ್ತವಾಯಿತು. ನಂಬಿಕಸ್ಥ ಹರಿಹರಾನಂದನ ಸಹೋದರ,ಬುದ್ಧಿವಂತ ಬ್ರಾಹ್ಮಣ ರಾಮ ಚಂದರ್ ವಿದ್ಯಾಬಾಗೀಶರನ್ನು ಕರೆತಂದು ಆಗಿರುವ ಘಟನೆಗಳನ್ನು ರಿಪೇರಿ ಮಾಡಲು ಮತ್ತು ರಾಮ್ ಮೋಹನರ ಬದಲಾದ ಅಹಂಗೆ ಉತ್ತರಾಧಿಕಾರಿಯಾಗಿ , ತತ್ವಶಾಸ್ತ್ರ ಸಿದ್ಧಾಂತದಲ್ಲಿ ರಾಮ್ ಮೋಹನರಿಗೆ ನೆರವಾಗಲು ,ಅದರಲ್ಲಿಯೂ ಬೆಂಗಾಲ ಮತ್ತು ಭಾಷೆಗೆ ಸಂಬಂಧಿಸಿದಂತೆ ಜೀವನ ಪರ್ಯಂತ ನೆರವಾಗಲು ಗುರುತಿಸಿಕೊಂಡರು.. ಈ ವೇಳೆಗಾಗಲೇ (ಆದರೆ ಎಲ್ಲಿಯೂ ಪ್ರಕಟವಾಗದೆ ) ಕ್ಯಾರಿ ಮತ್ತು ಮರ್ಶಮನ್ ರಾಮ್ ಮೋಹನ ರಾಯರ ಇಂಗ್ಲಿಷ್ ಕೆಲಸದ ಹಿಂದೆ ಇದ್ದರೆಂಬ ಗುಮಾನಿ ,ಎಂದು ಹಿಂದೂ ಜಮೀನ್ದಾರರು ನಂಬಿದ್ದರು/ಆಪಾದಿಸಿದ್ದರು. . ಯುವ ಹಿಂದೂ ಜಮೀನ್ದಾರ ದ್ವಾರಕನಾಥ ಟಾಗೋರ್ ಕಾಲದಿಂದ ಕಾಲಕ್ಕೆ 'ಸಭಾ'ದ ಸಭೆಗಳಲ್ಲಿ ಭಾಗವಹಿಸುತ್ತಾ, ಖಾಸಗಿಯಾಗಿ ರಾಮ್ ಮೋಹನರ ಮನವೊಲಿಸಿ (ಕೇಸುಗಳ ಒತ್ತಡದ ಆರ್ಥಿಕ ದುಸ್ಥಿಯಿಂದ ಹಾಗೂ ಹಿಂದೂಗಳ ಕೊಲೆ ಬೆದರಿಕೆಯಿಂದ )೧೮೧೯ ರಲ್ಲಿ ಆತ್ಮೀಯ ಸಭೆಯನ್ನು ಬಿಟ್ಟುಬಿಡುವಂತೆ ,ಬದಲಾಗಿ ಕೇವಲ ರಾಜಕೀಯ ಮಧ್ಯವರ್ತಿಯಾಗಿ ಇರುವಂತೆ ಮಾಡಿದರು".

೧೮೧೯ ರಿಂದ ರಾಮ್ ಮೋಹನರ ಹೋರಾಟ ಹೆಚ್ಚಾಗಿ ಕ್ಯಾರಿ ಮತ್ತು ಸೇರಮ್ಪೋರೆ ಪಾದ್ರಿಗಳ ವಿರುದ್ಧ ನಡೆಯಿತು. ದ್ವಾರಕನಾಥರ ಉದಾರ ಮನೋಭಾವದಿಂದ ' ಬಾಪ್ಟಿಸ್ಟ್' "ಟ್ರಿನಿ ಟೆರಿಯನ್ " ಕ್ರಿಶ್ಚಿಯಾನಿಟಿಯ ವಿರುದ್ಧ ಹೋರಾಡಿ ,ಅವರ ತತ್ವಶಾಸ್ತ್ರದ ಚರ್ಚೆಗಳಲ್ಲಿ ಸಹಾಯಕನಾಗುತ್ತಾ ಕ್ರಿಶ್ಚಿಯಾನಿಟಿಯ ಎಕದೇವವಾದದ ತಂದದವರೊಡನೆ ಒಂದಾದರು." [೧೭]

ಮಧ್ಯಂತರ "ಬ್ರಹ್ಮೋ " ಅವಧಿ (೧೮೨೦ - ೧೮೩೦)[ಬದಲಾಯಿಸಿ]

ಇದು ರಾಮ್ ಮೋಹನರವರ ಅತಂತ ವಿವಾದದ ಅವಧಿ. ಅವರ ಪ್ರಕಟಣೆಯ ಬರಹಗಳ ಬಗ್ಗೆ ಶಿವನಾಥ ಶಾಸ್ತ್ರಿ ಬರೆಯುತ್ತಾ :-[೧೮]

" ೧೮೨೦ ಮತ್ತು ೧೮೩೦ ರ ಅವಧಿಯು ಸಾಹಿತ್ಯದ ದೃಷ್ಟಿಯಿಂದ ಘಟನೋತ್ತರವಾಗಿದ್ದು ,ಈ ಅವಧಿಯಲ್ಲಿ ಈ ಕೆಳಕಂಡ ಅವರ ಪ್ರಕಟಣೆಗಳಿಂದ ಸ್ಪಷ್ಟವಾಗಿದೆ.


 • ೧೮೨೧ ರಲ್ಲಿ ಕ್ರಿಶ್ಚಿಯನ್ ಸಾರ್ವಜನಿಕರ ಎರಡನೇ ಅಪೀಲು ,' ಬ್ರಾಹ್ಮಣರ ಮ್ಯಾಗಜೀನ್' ಭಾಗ I, II ಮತ್ತು III,ಬಂಗಾಳಿ ಭಾಷಾಂತರದೊಂದಿಗೆ ,ಹಾಗೂ ಸಂಬದ ಕೌಮುದಿಎಂಬ ಹೊಸ ಬೆಂಗಾಲಿ ವಾರ್ತಾಪತ್ರಿಕೆ ೧೮೨೧ ರಲ್ಲಿ
 • ಮೀರತ್ -ಉಲ್ -ಅಕ್ಬರ್ ಎಂಬ ಪೆರ್ಸಿಯನ್ ಪತ್ರಿಕೆಯಲ್ಲಿ ,ಪ್ರಾಚೀನ ಹೆಂಗಸರ ಹಕ್ಕುಗಳ ವಿಷಯವನ್ನು ಒಳಗೊಂಡಿದ್ದು,ಮತ್ತು ಬೆಂಗಾಲಿ ಭಾಷೆಯಲ್ಲಿ ಒಂದು ಪುಸ್ತಕ "ನಾಲ್ಕು ಪ್ರಶ್ನೆಗಳಿಗೆ ಉತ್ತರಗಳು" ೧೮೨೨ ರಲ್ಲಿ ;
 • ಮೂರನೇ ಹಾಗು ಅಂತಿಮ ಅಪೀಲು ಕ್ರಿಶ್ಚಿಯನ್ ಸಾರ್ವಜನಿಕರಿಗೆ ,ಇಂಗ್ಲೆಂಡ್ ನ ರಾಜನಿಗೆ ನೆನಪಿನ ಸ್ಮಾರಕವಾಗಿ ,'ಪ್ರಕಟಣೆಯ ಸ್ವಾತಂತ್ರ್ಯ'ವಿಷಯದಲ್ಲಿ * ಕ್ರಿಶ್ಚಿಯನ್ನರ ವಿವಾದದ ಬಗ್ಗೆ , ರಾಮದಾಸ್ ರ ಪತ್ರಗಳು ಬ್ರಾಹ್ಮಣಿಕಲ್ ಮ್ಯಾಗಜಿನ್ ಗಳು ,ನಂ. IV,ಇಂಗ್ಲಿಷ್ ವಿದ್ಯಾಭ್ಯಾಸದ ಬಗ್ಗೆ ಲಾರ್ಡ್ ಅರ್ನ್ಹೆರ್ಸ್ಟ್ ಗೆ ಬರೆದ ಪತ್ರಗಳು "ಹಂಬಲ್ ಸಜೆಶನ್ಸ್ " ಎಂಬ ಚಿಕ್ಕ ಗ್ರಂಥ , ಬೆಂಗಲಿಯಲ್ಲಿ ಬರೆದ "ಪಟ್ಯ ಪ್ರಧಾನ ಅಥವಾ ರೋಗಿಗಳಿಗೆ ಔಷಧ " ಎಲ್ಲಾ ೧೮೨೩ ರಲ್ಲಿ ;
 • "ಭಾರತದಲ್ಲಿ ಪ್ರಾಸ್ಪೆಕ್ಟಸ್ ಆಫ್ ಕ್ರಿಶ್ಚಿಯಾನಿಟಿ " ಬಗ್ಗೆ ರೇವ್ . ಹೆಚ್ . ವೇರ್ ಅವರಿಗೆ ಬರೆದ ಪತ್ರಗಳು ಮತ್ತು "ಅಪೀಲ್ ಫಾರ್ ಫಾಮಿನೆ -ಸ್ಮಿತ್ತೆನ್ ನೇಟಿವ್ಸ್ ಇನ್ ಸದರ್ನ್ ಇಂಡಿಯಾ " ೧೮೨೪ ರಲ್ಲಿ ;
 • ೧೮೨೫ ರಲ್ಲಿ "ವಿವಿಧ ರೀತಿಯ ಆರಾಧನೆ'ಎಂಬ ಚಿಕ್ಕ ಗ್ರಂಥ ;
 • 'ದೇವರನ್ನು ಪ್ರೀತಿಸುವ ಮನೆಯೊಡೆಯನ ವಿದ್ಯಾರ್ಹತೆ'ಎಂಬ ಚಿಕ್ಕ ಗ್ರಂಥ ,ಬೆಂಗಾಲಿ ಭಾಷೆಯಲ್ಲಿ ' ಕಯಾಸ್ಥ ವಿವಾದ' ಕುರಿತಂತೆ ಚಿಕ್ಕ ಗ್ರಂಥ , ಮತ್ತು ಬೆಂಗಾಲಿ ಭಾಷೆಯಲ್ಲಿ ವ್ಯಾಕರಣ - ಇಂಗ್ಲಿಷ್ನಲ್ಲಿ , ೧೮೨೬ ರಲ್ಲಿ ;
 • " ಡಿವೈನ್ ವರ್ಶಿಪ್ ಬೈ ಗಾಯತ್ರಿ " ಎಂಬ ಸಂಸ್ಕೃತದ ಚಿಕ್ಕ ಗ್ರಂಥ ಇಂಗ್ಲಿಷ್ ಭಾಷಾ ತರ್ಜುಮೆಯೊಂದಿಗೆ , ಸಂಸ್ಕ್ರಿತ್ ಟ್ರೀಟೈಸ್ ಅಗೈನ್ಸ್ಟ್ ಕ್ಯಾಸ್ಟ್ ಎಂಬ ಪುಸ್ತಕ , ಈ ಹಿಂದೆಯೇ ಗಮನಿಸಿದ್ದ ಚಿಕ್ಕ ಗ್ರಂಥ " ಆನ್ಸರ್ ಆಫ್ ಎ ಹಿಂದೂ ಟು ದಿ ಕ್ವೆಶ್ಚನ್ ಅಂಡ್ ಕಂಪನಿ .," ೧೮೨೭ ರಲ್ಲಿ ;
 • 'ಎ ಫಾರ್ಮ್ ಆಫ್ ಡಿವೈನ್ ವರ್ಶಿಪ್ ' ಮತ್ತು ಅವನು ಮತ್ತು ಸ್ನೇಹಿತರು ಬರೆದ ಹಾಡುಗಳ ಸಂಗ್ರಹ , ೧೮೨೮ ರಲ್ಲಿ ;
 • "ರಿಲಿಜಿಯಸ್ ಇನ್ಸ್ತ್ರಕ್ಷನ್ಸ್ ಫೌಂಡ್ಎಡ್ ಆನ್ ಸೇಕ್ರೆಡ್ ಅತಾರಿಟೀಸ್ " ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ , "ಅನುಷ್ಟಾನ " ಎಂಬ ಸಂಸ್ಕೃತದ ಚಿಕ್ಕ ಗ್ರಂಥ ಮತ್ತು ಎ ಪಿಟಿಷನ್ ಅಗೈನ್ಸ್ಟ್ ಸುತ್ತೀ , ೧೮೨೯ ರಲ್ಲಿ ;
 • ' ಬೆಂಗಾಲಿಯಲ್ಲಿ ಬೆಂಗಾಲಿ ಭಾಷೆಯ ವ್ಯಾಕರಣ 'ಎಂಬ ಬೆಂಗಾಲಿ ಸಣ್ಣ ಗ್ರಂಥ ,' ದಿ ಟ್ರಸ್ಟ್ ಡೀಡ್ ಆಫ್ ದಿ ಬ್ರಹ್ಮ ಸಮಾಜ್ ' , ಲಾರ್ಡ್ ವಿಲಿಯಂ ಬೆನ್ಟಿನ್ಕ್ ಗೆ ಬರೆದ ಪತ್ರ , ಸತೀ ಪದ್ಧತಿಯನ್ನು ರದ್ದು ಪಡಿಸಿದ ಕಾರಣಕ್ಕಾಗಿ ಬರೆದ ಅಭಿನಂದನಾ ಪತ್ರ ; 'ದಿ ಅರ್ಗ್ಯುಮೆಂಟ್ಸ್ ರಿಗಾರ್ಡಿಂಗ್ ದಿ ಬರ್ನಿಂಗ್ ಆಫ್ ವಿಡೋಸ್'ಎಂಬ ಇಂಗ್ಲೀಶ್ ಭಾಷೆಯ ಪ್ರತಿ , ' ದಿ ದಿಸ್ಪೋಸಲ್ ಆಫ್ ಅನ್ಸೆಸ್ತ್ರಲ್ ಪ್ರಾಪರ್ಟಿ ಬೈ ಹಿಂದೂಸ್ ' ಎಂಬ ಇಂಗ್ಲೀಷಿನ ಚಿಕ್ಕ ಗ್ರಂಥ ೧೮೩೦ ರಲ್ಲಿ "

ಇಂಗ್ಲೆಂಡ್ ನಲ್ಲಿನ ಜೀವನ (೧೮೩೧- ೧೮೩೩)[ಬದಲಾಯಿಸಿ]

ಸ್ತ್ಯಚ್ಯು ಇನ್ ಕಾಲೇಜ್ ಗ್ರೀನ್ , ಬ್ರಿಸ್ಟೊಲ್ , ಇಂಗ್ಲೆಂಡ್

ಮುಘಲ್ ಸಾಮ್ರಾಜ್ಯ ದ ರಾಯಭಾರಿಯಾಗಿ ,೧೮೩೦ ರಲ್ಲಿ ರಾಮ್ ಮೋಹನ್ ರಾಯರು ಯುನೈಟೆಡ್ ಕಿಂಗಡಂ ನಲ್ಲಿ ಪ್ರಯಾಣಿಸಿ ಲಾರ್ಡ್ ಬೆಂಟಿನ್ಕ ನ 'ಸತಿ ಪದ್ಧತಿಯನ್ನು ವಿರೋಧಿಸುವ ಕಾನೂನಿನ ಪ್ರಭಾವ ಪರಿಣಾಮ ಬೀರುವಂತೆ ನೋಡಿಕೊಳ್ಳುವುದು ಹಾಗು ಫ್ರಾನ್ಸ್ ಗೆ ಭೇಟಿ ನೀಡುವುದು..

೨೭ನೇ ಸೆಪ್ಟೆಂಬರ್ ೧೮೩೩ ರಲ್ಲಿ ಮೆನಿಂಜಿತಿಸ್‌ಕಾರಣದಿಂದ ಸ್ತಪ್ಲೆಟನ್ ಎಂಬ ಹಳ್ಳಿಯಲ್ಲಿ ಬ್ರಿಸ್ಟೋಲ್ ನ ಈಶಾನ್ಯ ಪ್ರಾಂತ್ಯದಲ್ಲಿ (ಈಗಿನ ಉಪ ನಗರ )ನಿಧನ ಹೊಂದಿದ್ದು ಅರ್ನೋಸ್ ವೇಲ್ ಸಿಮಿಟ್ರಿ ಯಲ್ಲಿ (ದಕ್ಷಿಣ ಬ್ರಿಸ್ಟೋಲ್ )ಸುಡಲಾಯಿತು .

ಧಾರ್ಮಿಕ ಸುಧಾರಣೆ[ಬದಲಾಯಿಸಿ]

ಬ್ರಹ್ಮ ಸಮಾಜದಲ್ಲಿ ಕೆಲವು ರಾಯರ ಧಾರ್ಮಿಕ ಸುಧಾರಣೆಗಳ ಕುರಿತು, ರಾಜನಾರಾಯಣ ಬಸು [೧೯] ಅವರಿಂದ ವಿಸ್ತೃತ ವಿವರಣೆಗಳು :-

 • ಬ್ರಹ್ಮೋಗಳು 'ಒಂದು ಅತೀತ ದೈವಶಕ್ತಿಯನ್ನು 'ನಂಬುತ್ತದೆ."ದೇವರು ಒಂದು ನಿಶ್ಚಿತವಾದ ವ್ಯಕ್ತಿತ್ವದಿಂದ ಯುಕವಾಗಿದ್ದು, ಪ್ರಕೃತಿ ಧರ್ಮದಂತೆ ನೈತಿಕತೆಯ ಲಕ್ಷ ಣೀಕರಣವಾಗಿದ್ದು ,ಮತ್ತು ಬುದ್ಧಿವಂತಿಕೆಗೆ ತಕ್ಕವನಾಗಿರುತ್ತಾನೆ ಹಾಗು ವಿಶ್ವದ ಸೂತ್ರದಾರ ಮತ್ತು ರಕ್ಷಕನಾಗಿರುತ್ತಾನೆ"ಅಂತಹವನನ್ನು ಮಾತ್ರ ಆರಾಧಿಸಿ.
 • ಬ್ರಹ್ಮೋಸ್ ನಂಬುವಂತೆ ದೇವರಿಗೆ ನಿಶ್ಚಿತವಾದ ಕಾಲ ಅಥವಾ ಸ್ಥಳಗಳು ಇಲ್ಲ. "ನಾವು ಅವನನ್ನು ಯಾವಾಗಲಾದರೂ ,ಯಾವ ಸಮಯ ,ಸ್ಥಳದಲ್ಲಾದರೂ ಆರಾಧಿಸಬಹುದು ,ಆ ಸ್ಥಳ ಮತ್ತು ಸಮಯ ನಮ್ಮ ಮನಸ್ಸನ್ನು ಅವನೆಡೆಗೆ ಲೆಕ್ಕಾಚಾರದಂತೆ ಒಟ್ಟಾಗಿ ಇಡಬೇಕು ಅಷ್ಟೇ."

ರಾಮಮೋಹನ್ ರವರ ಸಾಮಾಜಿಕ ಸುಧಾರಣೆ[ಬದಲಾಯಿಸಿ]

ರಾಯರ ರಾಜಕೀಯ ಹಿನ್ನೆಲೆಯ ಕಾರಣದಿಂದ ಅವರ ಸಾಮಾಜಿಕ ಮತ್ತು ಹಿಂದೂ ಧಾರ್ಮಿಕ ಸುಧಾರಣೆಗೆ ಕಾರಣವಾಗಿದ್ದು, ,ಅವರು ಬರೆಯುತ್ತಾ:

" ಈಗಿರುವ ಹಿಂದೂಗಳ ಪದ್ಧತಿಯಿಂದಾಗಿ ಅವರ ರಾಜಕೀಯ ಆಸಕ್ತಿಗಳ ಕಡೆಗೆ ಅನುಕೂಲವಾಗಿರುವುದಿಲ್ಲ... ಅವರ ಧರ್ಮದಲ್ಲಿ ಕೆಲವೊಂದು ಬದಲಾವಣೆಗಳು ಆಗಬೇಕು,ಕಡೇ ಪಕ್ಷ ಅವರ ರಾಜಕೀಯ ಆಶೋತ್ತರಗಳ ಹಾಗು ಸಾಮಾಜಿಕ ಸೌಲಭ್ಯಗಳಿಗೋಸ್ಕರವಾಗಿಯಾದರೂ... ”[೨೦]

ಬ್ರಿಟಿಷರ ಸರ್ಕಾರದ ಜೊತೆಗಿನ ರಾಮ್ ಮೋಹನ್ ರಾಯರ ಅನುಭವದಿಂದ,ಅವರಿಗೆ ತಿಳಿದು ಬಂದಿದ್ದೇನೆಂದರೆ , ಹಿಂದೂ ಧಾರ್ಮಿಕ ಪದ್ಧತಿಯಿಂದ ಬ್ರಿಟಿಷರಲ್ಲಿ ಉಪಯೋಗವಾಗಲೀ, ಗೌರವ ತರುವಂತದ್ದಾಗಲೀ,ಆಗದೇ ಇದ್ದು ,ಪಶ್ಚಿಮ ರಾಷ್ಟ್ರ ನೀತಿಗಳ ಪರವಿಲ್ಲದೇ ಇದ್ದುದು ,ಧಾರ್ಮಿಕ ಸುಧಾರಣೆಗೆ ಅಡ್ಡಿಯಾಗಿದೆ. ಹಿಂದೂ ಸಂಪ್ರದಾಯಗಳನ್ನು ಕ್ರಮಬದ್ಧಗೊಳಿಸಿ,ಯೂರೋಪಿನ ಪರಿಚಿತರೊಡನೆ ರುಜುವಾತು ಪಡಿಸಲು " ಹಿಂದೂ ಧರ್ಮದಲ್ಲಿನ ಮೂಢ ನಂಬಿಕೆಯ ಆಚರಣೆ,ಬರೆಯುವವನ ಶುದ್ಧ ಚೈತನ್ಯಕ್ಕೆ ಯಾವ ರೀತಿಯೂ ಅಡ್ಡಿಪಡಿಸಲಾರದು!"[೨೧] “ಮೂಢ ನಂಬಿಕೆಗಳ ಆಚರಣೆಯಲ್ಲಿ ” ಸತಿ , ಜಾತಿಯ ಬಿಗಿತ ,ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹಗಳನ್ನು ರಾಮ್ ಮೋಹನ್ ರಾಯರು ವಿರೋಧಿಸಿದರು.[೨೨] ಈ ಆಚರಣೆಗಳಿಂದ ಬ್ರಿಟಿಶ್ ಅಧಿಕಾರಿಗಳು ಭಾರತದ ಮೇಲೆ ಹೆಚ್ಚು ಹೆಚ್ಚಾಗಿ ನೈತಿಕ ನಡೆತೆಯ ಶ್ರೇಷ್ಟತೆಯನ್ನು ವಹಿಸುತ್ತಾ ಹೋದರು. ರಾಮ್ ಮೋಹನ್ ರಾಯರ ದೃಷ್ಟಿಯಲ್ಲಿ ,ಧರ್ಮವೆಂದರೆ ನ್ಯಾಯ ಮತ್ತು ವಾಸ್ತವ ಸಮಾಜ ಎನ್ನುವ ಮಾನವೀಯ ಗುಣಗಳನ್ನು ಅಭ್ಯಾಸ ಮಾಡುವುದೇ ಆಗಿದ್ದು, ಕ್ರಿಶ್ಚಿಯನ್ನರ ಆದರ್ಶಗಳಿಗೆ ಸಮನಾಗಿದ್ದು , ಅದರಿಂದ ಆಧುನಿಕ ಪ್ರಪಂಚದಲ್ಲಿ ಹಿಂದೂ ಧರ್ಮವನ್ನು ಕ್ರಮಬದ್ಧಗೊಳಿಸುವುದೇ ಆಗಿತ್ತು.

ಶಿಕ್ಷಣ ತಜ್ಞ[ಬದಲಾಯಿಸಿ]

 • ಶಿಕ್ಷಣದಲ್ಲಿ ರಾಯರಿಗೆ ನಂಬಿಕೆಯಿದ್ದು,ಅದರಿಂದಾಗಿ ಸಾಮಾಜಿಕ ಸುಧಾರಣೆ ಎಂದು ತಿಳಿದಿದ್ದರು.
 • ೧೮೧೭ ರಲ್ಲಿ ಡೇವಿಡ್ ಹೇರ್ ಜೊತೆಗೂಡಿ , ಕಲ್ಕತ್ತಾದಲ್ಲಿ ' ಹಿಂದೂ ಕಾಲೇಜ್'ಸ್ಥಾಪಿಸಿದರು .
 • ೧೮೨೨ ರಲ್ಲಿ ರಾಯರು ಅಂಗ್ಲೋ -ಹಿಂದೂ ಶಾಲೆಯನ್ನು ಸ್ಥಾಪಿಸಿ , ೪ ವರ್ಷಗಳ ನಂತರ (೧೮೨೬ ರಲ್ಲಿ ) ವೇದಾಂತ ಕಾಲೇಜ್ ತೆರೆದು ; ಅಲ್ಲಿ ತಮ್ಮ ಏಕದೇವೋಪಾಸನೆ ತತ್ವವನ್ನು ಅಳವಡಿಸಿ ,"ಅಧುನಿಕ, ಪಶ್ಚಿಮ ಪಟ್ಯಕ್ರಮದ ಜೊತೆಗೂಡಿಸಿದರು".[೨೩]
 • ೧೮೩೦ ರಲ್ಲಿ ಸಾಮಾನ್ಯ ವಿಧಾನಸಭೆ ಸಂಸ್ಥೆಯನ್ನು ತೆರೆಯಲು ಅಲೆಕ್ಸ್ಯಾನ್ಡರ್ ಡಫ್ಫ್ ಗೆ ನೆರವಾದರು. ಬ್ರಹ್ಮ ಸಭಾ ದ ಖಾಲಿ ಜಾಗದಲ್ಲಿ ಮೊದಲನೇ ತಂಡದ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟರು.
 • ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ,ಪಾಶ್ಚಿಮಾತ್ಯ ಕಲಿಕಾ ಪದ್ಧತಿಯನ್ನು ಅಳವಡಿಸಿದರು.
 • ವೇದಾಂತ ಕಾಲೇಜ್ ಅನ್ನು ತೆರೆದು ,ಪಾಶ್ಚಿಮಾತ್ಯ ಮತ್ತು ಭಾರತೀಯ ಕಲಿಕೆಯ ಏಕೀಕರಣ ತರಗತಿಗಳನ್ನು ಆರಂಭಿಸಿದರು.

ಪತ್ರಕರ್ತ/ಪತ್ರಿಕೋದ್ಯಮ[ಬದಲಾಯಿಸಿ]

 • ರಾಯರು ಇಂಗ್ಲಿಷ್ , ಹಿಂದಿ , ಪೆರ್ಶಿಯನ್ ಮತ್ತು ಬೆಂಗಾಲಿಯಲ್ಲಿ ಸಂಚಿಕೆಗಳನ್ನು ಪ್ರಕಟಿಸಿದರು.
 • ಅವರ ಹೆಚ್ಚು ಜನಪ್ರಿಯ ಸಂಚಿಕೆಯೆಂದರೆ ಸಂಬದ್ ಕೌಮುದಿ . ಇದರಲ್ಲಿ ಪತ್ರಿಕಾ ಸ್ವಾತಂತ್ರ್ಯ ,ಉನ್ನತ ಶ್ರೇಣಿಯ ಕೆಲಸಗಳಲ್ಲಿ ಭಾರತೀಯರ ಸೇರ್ಪಡೆ ,ನ್ಯಾಯಾಂಗ ಮತ್ತು ಕಾರ್ಯಾಂಗದ ಬೇರ್ಪಡೆ, ಮುಂತಾದ ವಿಷಯಗಳನ್ನು ಸೇರಿಸಲಾಗಿತ್ತು.
 • ಇಂಗ್ಲಿಷ್ ಕಂಪನಿ ಪತ್ರಿಕೆಯನ್ನು ಮುಚ್ಚಿದಾಗ, ರಾಮ್ ಮೋಹನ್ ರವರು ಎರಡು ಸ್ಮರಣಾತ್ಮಕಗಳನ್ನೂ ಅದರ ವಿರುದ್ಧವಾಗಿ ೧೮೨೯ ಮತ್ತು ೧೮೩೦ ರಲ್ಲಿ ರಚಿಸಿದರು.

ಸಮಾಧಿ[ಬದಲಾಯಿಸಿ]

ಎಪಿತಪ್ಹ್ ಫಾರ್ ರಾಮ್ ಮೋಹನ್ ರಾಯ್ ಆನ್ ಹಿಸ್ ಸೆನೋತಪ್ಹ್
ಸೆನೋತಪ್ಹ್ ಆಫ್ ರಾಮ್ ಮೋಹನ್ ರಾಯ್ ಇನ್ ಅರ್ನೋಸ್ ವಾಲೆ ಸೆಮೆಟೆರಿ , ಬ್ರಿಸ್ಟೊಲ್ , ಇಂಗ್ಲೆಂಡ್

ದ್ವಾರಕನಾಥ ಟಾಗೋರ್ ೧೮೪೩ ರಲ್ಲಿ ಸಮಾಧಿಯನ್ನು ನಿರ್ಮಿಸಿದರು. ಸೆಪ್ಟೆಂಬರ್ ೨೭, ೧೮೩೩ ರಲ್ಲಿ ( ಮೆನಿಂಜೈಟಿಸ್ ಕಾರಣದಿಂದ )ರಾಮ್ ಮೋಹನ್ ರಾಯ್ ,ಬ್ರಿಸ್ಟೋಲ್ ನಲ್ಲಿ ನಿಧನ ಹೊಂದಿದ ,೧೦ ವರ್ಷಗಳ ನಂತರ ,ಈ ಸಮಾಧಿಯನ್ನು ಬ್ರಿಸ್ಟೋಲ್ ಹೊರವಲಯದ ಅರ್ನೋಸ್ ವೇಲ್ ರುದ್ರಭೂಮಿಯಲ್ಲಿ ( ಸಿಮಿಟ್ರಿ ) ನಿರ್ಮಿಸಲಾಯಿತು. ೧೮೪೫ ರಲ್ಲಿ ದ್ವಾರಕನಾಥ ಟಾಗೋರ್ ರವರು , ರಾಮ್ ಮೋಹನ್ ರ ಸತ್ತ ಅವಶೇಷಗಳನ್ನು ತೆಗೆದು ,ಭಾರತಕ್ಕೆ ರಾಯರ ಸೋದರ ಸಂಬಂಧಿಯ ಮೂಲಕ ಕಳುಹಿಸಿಕೊಡಲಾಯಿತು.ಈ ಕಾರಣಕ್ಕಾಗಿಯೇ ಅವರ ಸೋದರ ಸಂಬಂಧಿಯೂ ದ್ವಾರಕನಾಥ ಟಾಗೋರರ ಜೊತೆಗೆ ಬ್ರಿಟನ್ನಿನಲ್ಲಿದ್ದರು.ಉಳಿದಿದ್ದ ರಾಮ್ ಮೋಹನ್ ರ ಅವಶೇಷಗಳನ್ನು ಕೋಲ್ಕತ್ತಾ ಬಳಿ ೨೮ ನೇ ಫೆಬ್ರವರಿ ,೧೮೪೬ ಅವರ ಕುಟುಂಬದಿಂದ ಸಮಾಧಿ ಮಾಡಲಾಯಿತು. [೨೪]

ರಾಮ್ ಮೋಹನ್ ರಾಯ್ ರ ಸಮಾಧಿಯ ಮೇಲೆ ದ್ವಾರಕನಾಥರಿಂದ ಬರೆದ ಅಂತಿಮ ಚರಮ ವಾಕ್ಯವೆಂದರೆ:

"ತಮ್ಮ ಅದ್ಭುತ ಸಹಜ ಪ್ರತಿಭೆಯಿಂದ ,ಹಲವಾರು ಭಾಷೆಗಳ ಏಕತೆಯ ಪಾಂಡಿತ್ಯದಿಂದ ,ಅವರ ಕಾಲದಲ್ಲಿನ ಒಬ್ಬ ಮಹಾನ್ ಪಂಡಿತರಾಗಿ ಅವರು ನಿಲ್ಲುತ್ತಾರೆ. ಸಾಮಾಜಿಕ ,ಭೌತಿಕ ಮತ್ತು ನೈತಿಕ ನಡೆತೆಯ ಬದಲಾವಣೆ ,ಸಿಧಾರನೆಗಳನ್ನು ಭಾರತದ , ಜನರಲ್ಲಿ ತರಲು ಅವಿಶ್ರಾಂತವಾಗಿ ದುಡಿದಿದ್ದು,ಮೂರ್ತಿ ಪೂಜೆ ಮತ್ತು ಸತಿ ಪದ್ಧತಿ ಅನಿಷ್ಟಗಳನ್ನು ಹತ್ತಿಕ್ಕಲು ಅತ್ಯಾಸಕ್ತಿಯಿಂದ ಸಾಹಸಪಟ್ಟಿದ್ದು, ತಮ್ಮ ಹೊಟ್ಟೆಕಿಚ್ಚು ಪಡುವ ವಕೀಲಿ ವೃತ್ತಿಯ ನೈಪುನ್ಯತೆಯಿಂದ ,ದೇವರ ದೈವತ್ವದ ಭವ್ಯತೆ ಹಾಗು ಮನುಷ್ಯನ ಹಿತಾಸಕ್ತಿಗಾಗಿ ದುಡಿತ ಇವುಗಳನ್ನು ದೇಶದ ಪ್ರಜೆ ಎಂದಿಗೂ ಹೆಮ್ಮೆಯಿಂದ ನೆನೆಯುತ್ತಾರೆ."

ಸೆಪ್ಟೆಂಬರ್ ೨೦೦೬ ರಲ್ಲಿ ಭಾರತ ದೇಶದ ಪ್ರತಿನಿಧಿಗಳು ಬ್ರಿಸ್ಟೋಲ್ ಗೆ ಆಗಮಿಸಿ ರಾಮ್ ಮೋಹನ್ ರಾಯರ ಸಾವಿನ ವಾರ್ಷಿಕ ವಿಧಿಯನ್ನು ಆಚರಿಸಲು ಬಂದಿದ್ದರು. ಈ ಆಚರಣೆಯ ಸಮಯದಲ್ಲಿ ಹಿಂದೂ , ಮುಸ್ಲಿಂ ಮತ್ತು ಸಿಖ್ ಹೆಂಗಸರು ಸಂಸ್ಕೃತದ ಪ್ರಾರ್ಥನಾ ಗೀತೆಗಳನ್ನು ಹಾದಿ ಧನ್ಯವಾದವನ್ನು ಅರ್ಪಿಸಿದರು. [೨೫]

ಈ ಭೇಟಿಯ ನಂತರ ಕೊಲ್ಕತ್ತಾದ ಮಹಾ ಪೌರರು , ಬಿಕಾಶ್ ರಂಜಾನ್ ಭಟ್ಟಾಚಾರ್ಯ ( ಭಾರತದಿಂದ ಬಂದ ಪ್ರತಿನಿಧಿಗಳಲ್ಲಿ ಒಬ್ಬರು ) ತೆಗೆದುಕೊಂಡ ತೀರ್ಮಾನದ ಅನ್ವಯ ಸಮಾಧಿಯನ್ನು ಪುನರುಜ್ಜೀವನಗೊಳಿಸಲು , ಸಾರ್ವಜನಿಕ ನಿಧಿ ಎತ್ತಲು ನಿರ್ಧರಿಸಿದರು.

ಜೂನ್ ೨೦೦೭ ರಲ್ಲಿ ವಾಣಿಜ್ಯ ಉದ್ಯಮಿ ಆದಿತ್ಯ ಪೊದ್ದಾರ್ ೫೦,೦೦೦ ಪೌಂಡ್ಸ್ ಅನ್ನು ರಾಮ್ ಮೋಹನ್ ಸಮಾಧಿಯ ಪುನರುಜ್ಜೀವನಕ್ಕಾಗಿ ದಾನ ಮಾಡಿದರು.( ಕೋಲ್ಕತ್ತಾದ ಮೇಯರ್ ಈ ನಿಟ್ಟಿನಲ್ಲಿ ಭೇಟಿ ನೀಡಿದ ನಂತರ.[೨೬]

ಜೂನ್ ೨೦೦೮ ರಲ್ಲಿ ಅರ್ನೋಸ್ ವೇಲ್ ರಕ್ಷಕ ಹೇಳುವಂತೆ , ರಾಯರ ಅವಶೇಷಗಳು ಇರುವ ತಾಣವನ್ನು ಗುರುತಿಸಲಾಗದೆ "ಎಲ್ಲರಿಗೂ ಆಶ್ಚರ್ಯ ಎಂದರೆ ,ರಾಯರ ಶವದ ಪೆಟ್ಟಿಗೆ ಛತ್ರಿಯ ಕೆಳಗಿರುವುದು ಕಣ್ಣಿಗೆ ಗೋಚರಿಸದೆ ಹೋದದ್ದು ! " .[೨೭]

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. doi:10.1093/ref:odnb/47673
  This citation will be automatically completed in the next few minutes. You can jump the queue or expand by hand
 2. ಸಮಾಧಿ ಕಲ್ಲನ್ನು ಅವರ ಅನುಯಾಯಿಗಳು ಸ್ಥಾಪಿಸಿದರು ಹಾಗೆಯೇ ೧೮೩೯ ರಲ್ಲಿ ದ್ವಾರಕನಾಥ ಟಾಗೋರ್ ರ ದಿನಚರಿ ಪುಸ್ತಕವನ್ನು .
 3. ಪುಟ ೮, ರಾಜ ರಾಮ್ ಮೋಹನ್ ರಾಯ್ - ಒಬ್ಬ ಸುಧಾರಕ ಮಾನವ , ಹೆಚ್ .ಡಿ .ಶರ್ಮ , ೨೦೦೨
 4. ಇಬಿದ್ :೨೦೦೨, ಹೆಚ್ .ಡಿ .ಶರ್ಮ
 5. ೧೮೩೪ ರ ಅತ್ಹೆನಿಯಂ ನಲ್ಲಿ ಜೀವನ ಚರಿತ್ರೆಯ ಪ್ರಕಟಣೆ
 6. ಹೆಥೆನ್ಸ್ ನ ಬದಲಾವಣೆಯ ಉಪಯೋಗದಲ್ಲಿ ಕ್ರಿಶ್ಚಿಯನ್ನರ ದಾಕ್ಷಿಣ್ಯದ ವಿಚಾರಣೆ
 7. ವಿಲಿಯಂ ಕ್ಯಾರಿ ಯುನಿವರ್ಸಿಟಿ
 8. ಕೌಮುದಿ ಪತ್ರಿಕಾ ೧೨ ಡಿಸೆಂಬರ್ ೧೯೧೨
 9. "ಸಾಂಪ್ರದಾಯಿಕ ಮತ್ತು ಆಧುನಿಕ ಹಿಂದೂ ಕಾನೂನುಗಳ ಪ್ರಬಂಧಗಳು " ಜಾನ್ ದುನ್ಕಾನ್ ದೆರ್ರೆತ್ತ್
 10. "The Life of William Carey (1761-1834) by George Smith (1885) Ch4, p71". Retrieved 2008-12-08. 
 11. "ಫಾಲ್ಲಸಿ ಆಫ್ ದಿ ನ್ಯೂ ದಿಸ್ಪೇನ್ಸೇಶನ್ " by ಶಿವನಾಥ್ ಶಾಸ್ತ್ರೀ ಯವರಿಂದ ಮುನ್ನುಡಿ /ಪೀಟಿಕೆ , ೧೮೯೫
 12. ಎಸ್ .ಡಿ .ಕಾಲ್ಲೆತ್ತ್
 13. ಮಹಾನಿರ್ವಾಣ ತಂತ್ರ ಆಫ್ ದಿ ಗ್ರೇಟ್ ... - ಗೂಗಲ್ ಬುಕ್ಸ್
 14. ರಾಯ್ , ರಾಮದೇವ್ . ಬ್ರಿಟಿಶ್ ಆಡಳಿತದ ಅವಧಿಯಲ್ಲಿ ಭಾರತದಿಂದ ಕೆಲವು ಆರ್ಥಿಕ ವಿಷಯಗಳ ಸೋರಿಕೆ. ಸಮಾಜ ವಿಜ್ಞಾನಿ , ಆವೃತ್ತಿ . ೧೫, ನಂ . ೩. ಮಾರ್ಚ್ ೧೯೮೭
 15. ಭಟ್ಟಾಚಾರ್ಯ , ಸುಬ್ಭಾಸ್ . ಇಂಡಿಗೋ ಪ್ಲಾಂಟರ್ಸ್ , ರಾಮ್ ಮೋಹನ್ ರಾಯ್ ಮತ್ತು ೧೮೩೩ ರ ಚಾರ್ಟರ್ ಆಕ್ಟ್ ಸಮಾಜ ವಿಜ್ಞಾನಿ , ಆವೃತ್ತಿ .೪, ನಂ .೩. ಅಕ್ಟೋಬರ್ ೨೦೦೭.
 16. ಅಥೆನಯುಮ್ ನಲ್ಲಿ ಸ್ಮರಣೀಯ ಜೀವನ ಚರಿತ್ರೆ ೧೮೩೪
 17. ನಬ್ಬ್ಲೆ - ಬ್ರಾಹ್ಮ್ಹಣಿಕೆಯ ಮೂಲಗಳು - ಭಾಗ 2
 18. ಸಿವನಾಥ್ ಶಾಸ್ತ್ರಿ , ಬ್ರಹ್ಮ ಸಮಾಜದ ಇತಿಹಾಸ , ೧೯೧೧, ೧ ನೇ ಆವೃತ್ತಿ . ಪುಟ ೪೪-೪೬
 19. http://ಬ್ರಹ್ಮ .org/ಬ್ರಹ್ಮ -ಸಮಾಜ .html
 20. ಗೌರಿ ಶಂಕರ್ ಭಟ್ಟ್ , “ಬ್ರಹ್ಮ ಸಮಾಜ , ಆರ್ಯ ಸಮಾಜ , ಮತ್ತು ಚರ್ಚ್ -ಸೆಕ್ಟ್ ಟೈಪೋಲೋಜಿ ” ಧಾರ್ಮಿಕ ಸಂಶೋಧನೆಯ ಪುನರ್ಪರಿಶೀಲನೆ . -೧೦ (೧೯೬೮): ೨೪
 21. ರಾಮ್ ಮೋಹನ್ ರಾಯ್ , ಹಲವಾರು ಪ್ರಿನ್ಸಿಪಾಲ್ ಪುಸ್ತಕಗಳು ಭಾಷಾಂತರ , ಪ್ಯಾಸ್ಸೇಜ್ಗಳು , ಮತ್ತು ವೇದದ ವಿಷಯಗಳು ಮತ್ತು ಕೆಲವು ಬ್ರಾಹ್ಮಣಿಕೆಯ ತತ್ವಗಳ ಮೇಲೆ ನಡೆದ ವಿವಾದದ ಕೆಲಸಗಳ ಭಾಷಾಂತರ. (ಲಂಡನ್ : ಪರ್ಬಾರಿ , ಅಲ್ಲೇನ್ ಮತ್ತು ಕಂಪನಿ , ೧೮೨೩) ೪.
 22. ಬ್ರಹೇಂದ್ರ ಏನ್ . ಬಂದ್ಯೋಪದ್ಯಯ್ , ರಾಮ್ ಮೋಹನ್ ರಾಯ್ , (ಲಂಡನ್ : ಯುನಿವೆರ್ಸಿಟಿ ಪ್ರೆಸ್ , ೧೯೩೩) ೩೫೧.
 23. "ರಾಮ್ ಮೋಹನ್ ರಾಯ್ ." ಮುಖ್ಯ . ಬ್ರಿಟನ್ನಿಕಾ .ಕಾಮ್ /ಇ ಬಿ ಚೆಕ್ಕಡ್ /ಟಾಪಿಕ್ /೫೧೧೧೯೬/ರಾಮ್ -ಮೋಹನ್ -ರಾಯ್ ?ನೋಟ =ಮುದ್ರಣ/ಮುದ್ರಿಸು . ೨೦೦೯.
 24. ಪುಟ ೧೨೯-೧೩೧.ಪುಸ್ತಕ ಪರಿಮಾಣ .೨ :ಹಿಸ್ಟರಿ ಆಫ್ ದಿ ಆದಿ ಬ್ರಹ್ಮ ಸಮಾಜ ,೧೮೯೮ (೧ ನೇ ಮುದ್ರಣ .) ಪ್ರಕಟ . ಬೈ ಆದಿ ಬ್ರಹ್ಮ ಸಮಾಜ ಪ್ರೆಸ್ , ಕಲ್ಕತ್ತ
 25. ಬಿ ಬಿ ಸಿ ನ್ಯೂಸ್ - ಸಿಟಿ ಸರ್ವಿಸ್ ಆನರ್ಸ್ ಹ್ಯುಮನಿಟೆರಿಯನ್
 26. ಬಿ ಬಿ ಸಿ ನ್ಯೂಸ್ - £50k ರಿ ಸ್ತೋರೆಶನ್ ಫಾರ್ ಇಂಡಿಯನ್ ಟೋಮ್ಬ್
 27. http://www.ದಿ ಬ್ರಹ್ಮ ಸಮಾಜ್ .ನೆಟ್ /ಆರ್ಟಿಕಲ್ಸ್ /ಪುನರ್ಸಂಗ್ರಹ ಜೂನ್ ೨೦೦೮.html

ಬಾಹ್ಯ ಕೊಂಡಿಗಳು[ಬದಲಾಯಿಸಿ]


ಟೆಂಪ್ಲೇಟು:ಕೊಲ್ಕತ್ತಾ