ಪಂಡಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಗ್ರಹಾಲಯದಲ್ಲಿ ಒಂದು ಐತಿಹಾಸಿಕ ಪಂಡಿತ ಪ್ರತಿಮೆ.

ಹಿಂದೂ ಧರ್ಮದಲ್ಲಿ, ಪಂಡಿತನು[೧] ಜ್ಞಾನದ ಯಾವುದೇ ಕ್ಷೇತ್ರದ ಒಬ್ಬ ವಿದ್ವಾಂಸ[೨] ಅಥವಾ ಶಿಕ್ಷಕ, ವಿಶೇಷವಾಗಿ ವೈದಿಕ ಗ್ರಂಥಗಳು, ಧರ್ಮ, ಹಿಂದೂ ತತ್ವಶಾಸ್ತ್ರ, ಅಥವಾ ಸಂಗೀತದಂತಹ ಜಾತ್ಯತೀತ ವಿಷಯಗಳಲ್ಲಿ.[೩] ಅವನು ಗುರುಕುಲದಲ್ಲಿರುವ ಒಬ್ಬ ಗುರುವಾಗಿರಬಹುದು.

ಸಂಸ್ಕೃತದಲ್ಲಿ, ಪಂಡಿತ ಪದವು ಸಾಮಾನ್ಯವಾಗಿ ಯಾವನಾದರೂ "ಬುದ್ಧಿವಂತ, ವಿದ್ಯಾವಂತ ಅಥವಾ ಕಲಿತ ವ್ಯಕ್ತಿ"ಯನ್ನು ಸೂಚಿಸುತ್ತದೆಂದು ಮೊನಿಯರ್ ವಿಲಿಯಮ್ಸ್ ಹೇಳುತ್ತಾರೆ.[೪] ಈ ಪದವನ್ನು ಪಂಡ್ ಶಬ್ದದಿಂದ ಪಡೆಯಲಾಗಿದೆ. ಇದರರ್ಥ "ಸಂಗ್ರಹಿಸು, ಪೇರಿಸು, ರಾಶಿಹಾಕು" ಎಂದು, ಮತ್ತು ಈ ಮೂಲವನ್ನು ಜ್ಞಾನದ ಅರ್ಥದಲ್ಲಿ ಬಳಸಲಾಗುತ್ತದೆ.[೫] ಈ ಪದವು ವೈದಿಕ ಮತ್ತು ವೈದಿಕೋತ್ತರ ಪಠ್ಯಗಳಲ್ಲಿ ಕಂಡುಬರುತ್ತದೆ, ಆದರೆ ಯಾವುದೇ ಪೂರ್ವಾಪರ ಸಾಮಾಜಿಕ ಸಂದರ್ಭವಿಲ್ಲದೆ. ವಸಾಹತು ಯುಗದ ಸಾಹಿತ್ಯದಲ್ಲಿ, ಈ ಪದವು ಸಾಮಾನ್ಯವಾಗಿ ಹಿಂದೂ ಕಾನೂನಿನಲ್ಲಿ ಪರಿಣತಿ ಹೊಂದಿದ ಬ್ರಾಹ್ಮಣರನ್ನು ಸೂಚಿಸುತ್ತದೆ.[೬]

ಸಂಬಂಧಿತ ಪದವಾದ ಪುರೋಹಿತ ಮನೆ ಅರ್ಚಕನನ್ನು ಸೂಚಿಸುತ್ತದೆ.[೩]

ಉಲ್ಲೇಖಗಳು[ಬದಲಾಯಿಸಿ]

  1. "pandit".
  2. Lise McKean (1996). Divine Enterprise: Gurus and the Hindu Nationalist Movement. University of Chicago Press. pp. 13–14. ISBN 978-0-226-56009-0.
  3. ೩.೦ ೩.೧ Axel Michaels; Barbara Harshav (2004). Hinduism: Past and Present. Princeton University Press. p. 190. ISBN 0-691-08952-3.
  4. Monier Monier-Williams (1872). A Sanskrit-English Dictionary. Oxford University Press. p. 527.
  5. Monier Monier-Williams (1872). A Sanskrit-English Dictionary. Oxford University Press. pp. 526–527.
  6. Timothy Lubin; Donald R. Davis Jr; Jayanth K. Krishnan (2010). Hinduism and Law: An Introduction. Cambridge University Press. p. 8. ISBN 978-1-139-49358-1.
"https://kn.wikipedia.org/w/index.php?title=ಪಂಡಿತ&oldid=1018909" ಇಂದ ಪಡೆಯಲ್ಪಟ್ಟಿದೆ