ಪೂರ್ವಗ್ರಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ವಗ್ರಹ[೧] ಒಬ್ಬ ವ್ಯಕ್ತಿಯ ಗ್ರಹಿಸಿದ ಗುಂಪು ಸದಸ್ಯತ್ವದ ಮೇಲೆ ಆಧಾರಿತವಾದ ಆ ವ್ಯಕ್ತಿಯ ಬಗ್ಗೆ ಇರುವ ಭಾವಾತ್ಮಕ ಅನಿಸಿಕೆ. ಹಲವುವೇಳೆ ಈ ಶಬ್ದವನ್ನು ಮತ್ತೊಬ್ಬ ವ್ಯಕ್ತಿಯ ರಾಜಕೀಯ ಸಂಬಂಧ, ಲಿಂಗ, ನಂಬಿಕೆಗಳು, ಮೌಲ್ಯಗಳು, ಸಾಮಾಜಿಕ ವರ್ಗ, ವಯಸ್ಸು, ಅಂಗವೈಕಲ್ಯ, ಧರ್ಮ, ಲೈಂಗಿಕತೆ, ಜನಾಂಗ/ಜನಾಂಗೀಯತೆ, ಭಾಷೆ, ರಾಷ್ಟ್ರೀಯತೆ, ಸೌಂದರ್ಯ, ವೃತ್ತಿ, ಶಿಕ್ಷಣ, ಅಪರಾಧಿತ್ವ, ಕ್ರೀಡಾ ತಂಡ ಸಂಬದ್ಧತೆ ಅಥವಾ ಇತರ ವೈಯಕ್ತಿಕ ಗುಣಲಕ್ಷಣಗಳನ್ನು ಆಧರಿಸಿ, ಆ ವ್ಯಕ್ತಿಯ ಪೂರ್ವಕಲ್ಪಿತ, ಸಾಮಾನ್ಯವಾಗಿ ಪ್ರತಿಕೂಲ ಮೌಲ್ಯಮಾಪನವನ್ನು ಸೂಚಿಸಲು ಬಳಸಲಾಗುತ್ತದೆ.[೨]

ಪೂರ್ವಗ್ರಹ ಪದವು ಆಧಾರರಹಿತ ಅಥವಾ ವರ್ಗೀಕೃತ ನಂಬಿಕೆಗಳನ್ನು ಕೂಡ ಸೂಚಿಸಬಹುದು ಮತ್ತು ಇದು "ವಿವೇಕಯುಕ್ತ ಪ್ರಭಾವಕ್ಕೆ ಅಸಾಮಾನ್ಯವಾಗಿ ಪ್ರತಿರೋಧಕವಾಗಿರುವ ಯಾವುದೇ ವಿಚಾರಹೀನ ದೃಷ್ಟಿಕೋನವನ್ನು" ಒಳಗೊಳ್ಳಬಹುದು. ಗಾರ್ಡನ್ ವಿಲ್ಲರ್ಡ್ ಅಲ್ಪೋರ್ಟ್ ಪೂರ್ವಗ್ರಹವನ್ನು ವಾಸ್ತವ ಅನುಭವಕ್ಕೆ ಮೊದಲು, ಅಥವಾ ಅದನ್ನು ಆಧರಿಸಿದ ಒಬ್ಬ ವ್ಯಕ್ತಿ ಅಥವಾ ವಸ್ತುವಿನ ಬಗ್ಗೆ ಅನೂಕೂಲಕರ ಅಥವಾ ಪ್ರತಿಕೂಲ ಅನಿಸಿಕೆ ಎಂದು ವ್ಯಾಖ್ಯಾನಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. Wedgwood, Hensleigh (1855). "English Etymologies". Transactions of the Philological Society (8): 113–116.
  2. Dovidio, J. F., & Gaertner. S. L. (2010). "Intergroup bias". In S. T. Fiske, D. T. Gilbert, & G. Lindzey (Eds.), The Handbook of Social Psychology (5th ed., Vol. 2). New York: Wiley.