ವಿಷಯಕ್ಕೆ ಹೋಗು

ಸರ್ವಾಧಿಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರ್ವಾಧಿಕಾರ ಎಂದರೆ ಸಂಪೂರ್ಣ ಅಧಿಕಾರ, ಅಂದರೆ ಒಬ್ಬ ವ್ಯಕ್ತಿ ಅಥವಾ ಒಂದು ಸಣ್ಣ ಗುಂಪಿನಲ್ಲಿ ಕೇಂದ್ರೀಕೃತಗೊಂಡಿರುವ ಆಡಳಿತ ವ್ಯವಸ್ಥೆ (ಡಿಕ್ಟೇಟರ್‍ಶಿಪ್). ಈ ಪದವನ್ನು ಪ್ರಾಚೀನ ರೋಮ್‍ನಿಂದ ಪಡೆಯಲಾಗಿದೆ. ಪ್ರಜಾಪ್ರಭುತ್ವದಲ್ಲಿ ಇರುವ ಸಮತೋಲನಾತ್ಮಕ ಪದ್ಧತಿಗಳು, ಕಾನೂನು ಮತ್ತು ಮೌಲ್ಯ ಪದ್ಧತಿ ಇಲ್ಲಿ ಗೌಣವಾಗಿ, ಸರ್ವಾಧಿಕಾರಿ ಇಚ್ಛೆಗೆ ಅನುಗುಣವಾಗಿ ಆಡಳಿತ ನಡೆಯುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ಸರ್ಕಾರ ಪದ್ಧತಿ. ಪ್ರಜಾಪ್ರಭುತ್ವ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರೆ ಸರ್ವಾಧಿಕಾರ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. “ಮೂಲಭೂತವಾಗಿ, ಪಿತ್ರಾರ್ಜಿತವಾಗಿ ಬಂದ ಅಧಿಕಾರವನ್ನು ಬಲಾತ್ಕಾರದಿಂದಾಗಲೀ ಇಲ್ಲವೇ ಸರ್ವಾನುಮತದಿಂದಾಗಲಿ, ಸಾಮಾನ್ಯವಾಗಿ ಇವೆರಡರ ಸಂಯೋಜನೆಯಿಂದ ಪಡೆದ ಏಕನಾಯಕನ ಅಧಿಕಾರವೇ ಸರ್ವಾಧಿಕಾರ” ಎಂದು ಹೇಳಬಹುದು. ನಿರಂಕುಶ ಪ್ರಭುತ್ವ ಅಥವಾ ಸರ್ವಾಧಿಕಾರದಲ್ಲಿ ಆಡಳಿತವೆಲ್ಲ ಏಕನಾಯಕನ ಇಲ್ಲವೇ ಏಕ ರಾಜಕೀಯ ಪಕ್ಷದಲ್ಲಿ ಕೇಂದ್ರೀಕೃತವಾಗಿರುತ್ತದೆ. ಉದಾಹರಣೆಗೆ ರಷ್ಯದಲ್ಲಿ ಅಧಿಕಾರ ಕಮ್ಯೂನಿಸ್ಟ್ ಪಕ್ಷದಲ್ಲಿ ಕೇಂದ್ರಿಕೃತವಾಗಿತ್ತು. ಸರ್ವಾಧಿಕಾರಿಯ ಆದೇಶಗಳೇ ಕಾನೂನುಗಳಾಗುತ್ತವೆ. ಈ ಸರ್ಕಾರವನ್ನು ಟೀಕಿಸುವ ಅಥವಾ ಪ್ರತಿಭಟಿಸುವ ಸ್ವಾತಂತ್ರ್ಯ ಯಾರಿಗೂ ಇರುವುದಿಲ್ಲ. ಇಂಥ ವ್ಯವಸ್ಥೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವಕ್ಕಾಗಲಿ, ಪ್ರಜಾಭಿಪ್ರಾಯಕ್ಕಾಗಲಿ ಯಾವ ಮಾನ್ಯತೆಯೂ ಇರುವುದಿಲ್ಲ.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Friedrich, Carl J.; Brzezinski, Zbigniew K. (1965). Totalitarian Dictatorship and Autocracy (2nd ed.). Praeger.
  • Bueno de Mesquita, Bruce; Smith, Alastair; Siverson, Randolph M.; Morrow, James D. (2003). The Logic of Political Survival. The MIT Press. ISBN 978-0-262-63315-4.
  • William J. Dobson (2013). The Dictator's Learning Curve: Inside the Global Battle for Democracy. Anchor. ISBN 978-0-307-47755-2.
  • Bruce Bueno de Mesquita and Alastair Smith (2011). The Dictator's Handbook: Why Bad Behavior is Almost Always Good Politics. Random House. p. 272. ISBN 978-1-61039-044-6. OCLC 701015473.
  • Jan C. Behrends: Dictatorship: Modern Tyranny Between Leviathan and Behemoth, in Docupedia Zeitgeschichte, 14 March 2017
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: