ವಿಷಯಕ್ಕೆ ಹೋಗು

ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕರ್ನಾಟಕ ವಿಧಾನಸಭೆ ಚುನಾವಣೆ, 2018 ಇಂದ ಪುನರ್ನಿರ್ದೇಶಿತ)
ಕರ್ನಾಟಕ ವಿಧಾನಸಭೆ ಚುನಾವಣೆ, 2018
India
2013 
12 May 2018 (222 seats)
28 May 2018 (1 seat)
11 June 2018 (1 seat)
 2023

ಕರ್ನಾಟಕ ವಿಧಾನಸಭೆ ಚುನಾವಣೆ, 2018 224 ಸ್ಥಾನಗಳ ಪೈಕಿ 224
ಬಹುಮತಕ್ಕೆ113 ಸ್ಥಾನಗಳು ಬೇಕಾಗಿವೆ
  ಬಹುತೇಕ ಪಕ್ಷ ಅಲ್ಪಸಂಖ್ಯಾತ ಪಕ್ಷ ಮೂರನೇ ಪಕ್ಷ
 
ನಾಯಕ ಬಿ.ಎಸ್. ಯಡಿಯೂರಪ್ಪಸಿದ್ದರಾಮಯ್ಯಹೆಚ್.ಡಿ.ಕುಮಾರಸ್ವಾಮಿ
ಪಾರ್ಟಿ ಬಿ.ಜೆ.ಪಿ ಕಾಂಗ್ರೆಸ್ ಜನತಾದಳ(ಜಾತ್ಯಾತೀತ)
ನಾಯಕನ ಸೀಟ್ ಶಿಕಾರಿಪುರಬಾದಾಮಿಚನ್ನಪಟ್ಟಣ
ಮೊದಲು ಆಸನಗಳು 4012240
ಸ್ಥಾನಗಳನ್ನು ಗೆದ್ದಿದ್ದಾರೆ 1048037 + 1(ಬಿ.ಎಸ್.ಪಿ)
ಸೀಟ್ ಬದಲಾವಣೆ Increase64Decrease42Decrease3

Constituencies of the Karnataka Legislative Assembly

ಮುಖ್ಯಮಂತ್ರಿ (ಚುನಾವಣೆಗೆ ಮುನ್ನ)

ಸಿದ್ದರಾಮಯ್ಯ
ಕಾಂಗ್ರೆಸ್

ಚುನಾಯಿತ ಮುಖ್ಯಮಂತ್ರಿ

ಹೆಚ್.ಡಿ.ಕುಮಾರಸ್ವಾಮಿ
ಜನತಾ ದಳ (ಜಾತ್ಯಾತೀತ)

ಕರ್ನಾಟಕ ವಿಧಾನಸಭೆಯು 224 ಸದಸ್ಯರ ಸದಸ್ಯ ಬಲವನ್ನು ಹೊಂದಿದೆ. 224 ಸದಸ್ಯ ಬಲವುಳ್ಳ 15 ನೇ ಕರ್ನಾಟಕ ವಿಧಾನಸಭೆಯ 222ವಿಧಾನಸಭಾ ಕ್ಷೇತ್ರಗಳಿಗೆ 12 ಮೇ 2018 ಶನಿವಾರ ಚುನಾವಣೆ ನೆಡೆಯಿತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2-5-2018 ರಂದು ನಿಧನರಾದ್ದರಿಂದ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣದ ನಂತರ, ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು.

ಕರ್ನಾಟಕ

ಮೈಸೂರು ಜಿಲ್ಲ್ರ್

ಹಿಂದಿನ ವಿಧಾನಸಭೆ ಅವಧಿ

[ಬದಲಾಯಿಸಿ]

(14ನೇಯ) ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿಯು 28ನೇ ಮೇ,2018 ವರೆಗೆ ಇರುವುದಾಗಿತ್ತು.[]

ವೇಳಾಪಟ್ಟಿ

[ಬದಲಾಯಿಸಿ]

ಚುನಾವಣೆಯು ಮೇ 12 ರಂದು ಜರುಗಿದೆ ಮತ್ತು ಚುನಾವಣೆಯ ಮತ ಎಣಿಕೆ ಹಾಗು ಫಲಿತಾಂಶ ಮೇ 15 ಕ್ಕೆ ಹೊರಬಿದ್ದಿದೆ.

  • ವಿವರ:
ನೆಡಾವಳಿದಿನಾಂಕವಾರ
ನಾಮನಿರ್ದೇಶನಗಳಿಗಾಗಿ ದಿನಾಂಕ17 ಏಪ್ರಿಲ್ 2018ಮಂಗಳವಾರ
ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ24 ಏಪ್ರಿಲ್ 2018ಮಂಗಳವಾರ
ನಾಮನಿರ್ದೇಶನಗಳ ಪರಿಶೀಲನೆಗೆ ದಿನಾಂಕ25 ಏಪ್ರಿಲ್ 2018ಬುಧವಾರ
ಅಭ್ಯರ್ಥಿಗಳ ವಾಪಸಾತಿಗೆ ಕೊನೆಯ ದಿನಾಂಕ27 ಏಪ್ರಿಲ್ 2018ಶುಕ್ರವಾರ
ಮತದಾನ ದಿನಾಂಕ12 ಮೇ 2018ಶನಿವಾರ
ಎಣಿಕೆಯ ದಿನಾಂಕ15 ಮೇ 2018ಮಂಗಳವಾರ
ಚುನಾವಣೆ ಮುಗಿದ ದಿನಾಂಕ ಮುಂಚಿತವಾಗಿ18 ಮೇ 2018ಶುಕ್ರವಾರ

ಕರ್ನಾಟಕದಲ್ಲಿ ಮತದಾರರ ಮತ್ತು ಚುನಾವಣೆ ವಿವರ

[ಬದಲಾಯಿಸಿ]
  • ಕರ್ನಾಟಕದಲ್ಲಿ ಮತದಾರರ ಸಂಖ್ಯೆ:
  • ಭಾರತದಲ್ಲಿ ಮತದಾನದ ಕನಿಷ್ಟ ವಯಸ್ಸು 18 ವರ್ಷಗಳು. 2018 ಕರ್ನಾಟಕದಲ್ಲಿ ರಾಜ್ಯ ಚುನಾವಣೆಗಾಗಿ, 18 ರಿಂದ 29 ವರ್ಷ ವಯಸ್ಸಿನ 824,000 ಹೊಸ ಮತದಾರರನ್ನು ನೋಂದಾಯಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಮತದಾರರ, ಅನುಪಾತವು ಒಂದೇ ಆಗಿಯೇ ಇದ್ದರೂ, 'ಯುವ ಮತದಾರರ' ಅನುಪಾತವು 2013 ರಲ್ಲಿ 1.16% ರಿಂದ 2.2% ಕ್ಕೆ ಏರಿಕೆಯಾಗಿದೆ.
  • ಈ ಮತದಾರರ ಲಿಂಗ ಅನುಪಾತವು ಇದೇ ಅವಧಿಯಲ್ಲಿ 958 ರಿಂದ 972 ಕ್ಕೆ ಏರಿದೆ.
ವರ್ಗ20132018
ಸ್ತ್ರೀ ಮತದಾರರು21,367,91224,471,979
ಟ್ರಾನ್ಸ್ಜೆಂಡರ್ ಮತದಾರರು2,1004,552
ಪುರುಷ ಮತದಾರರು22,315,72725,205,820
ಯುವ ಮತದಾರರ ಸಂಖ್ಯೆ718,0001,542,000
ಮತದಾರರ ಒಟ್ಟು ಸಂಖ್ಯೆ44,403,73951,224,351
  • ಹೊಸ ಮತದಾನ ಕೇಂದ್ರಗಳ ಸಂಖ್ಯೆ - 4,662
  • ಒಟ್ಟು ಮತದಾನ ಕೇಂದ್ರಗಳ ಸಂಖ್ಯೆ 2018 - 56,696
  • ಚುನಾವಣೆಗೆ ಅಗತ್ಯವಾಗಿ ಬೇಕಾದ ಅಧಿಕಾರಿಗಳು (ಅಂದಾಜು) -356,552[]

ಅಂತಿಮವಾಗಿ ಚುನಾವಣೆಯಲ್ಲಿ ಉಳಿದ ಅಭ್ಯರ್ಥಿಗಳು

[ಬದಲಾಯಿಸಿ]
  • ಮೇ 12 ರಂದು ನೆಡೆಯುವ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಒಟ್ಟು - 2,655 (ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಪ್ರಕಟಣೆ)
  • ದಿ.27-4-2018 ಶುಕ್ರವಾರ ದಂದು ಕೊನೆಯ ದಿನಾಂಕದಂದು 3,509 ಮಂದಿ ನಾಮಪತ್ರ ಸಲ್ಲಿಸಿದ್ದರು. ಶುಕ್ರವಾರದಂದು 583 ಅಭ್ಯರ್ಥಿಗಳನ್ನು ಹಿಂತೆಗೆದುಕೊಂಡರು. ಮತ್ತು 271 ಮಂದಿಯ ನಾಮಪತ್ರ ಬುಧವಾರ ಪರಿಶೀಲನೆ ನಡೆಸಿದ ಬಳಿಕ ತಿರಸ್ಕಾರವಾಯಿತು.
  • ಸಮೀಕ್ಷೆಯ ಸಮಿತಿಯಿಂದ ಬಿಡುಗಡೆಯಾದ ಅಂತಿಮ ಪಟ್ಟಿಯ ಪ್ರಕಾರ ಒಟ್ಟು 219 ಮಹಿಳೆಯರು ಸೇರಿದಂತೆ 222 ಮಂದಿ ಆಡಳಿತ ಕಾಂಗ್ರೆಸ್ (120); 224 ವಿರೋಧ ಬಿಜೆಪಿ(43); 201 ಜನತಾದಳ ಸೆಕ್ಯುಲರ್ (ಜೆಡಿಎಸ್)-(29), 1,155 ಸ್ವತಂತ್ರರು ಮತ್ತು 800 ಇತರ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಚಿಕ್ಕ ಪಕ್ಷಗಳು, ಸ್ಪರ್ಧೆಯಲ್ಲಿವೆ. (ಆವರಣದಲ್ಲಿ ಹಾಲಿ ಸದಸ್ಯರ ಸಂಖ್ಯೆ)[][]

ರಾಜರಾಜೇಶ್ವರಿ ಮತ್ತು ಜಯನಗರ ನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆ

[ಬದಲಾಯಿಸಿ]
  • ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಟ್ರಕ್‌ನಲ್ಲಿ 95 ಲಕ್ಷ ರೂಪಾಯಿ ಹಣ ಪತ್ತೆಯಾದ ಹಿನ್ನೆಯಲ್ಲಿ ಚುನಾವಣೆಯನ್ನು 2018 ಮೇ ತಿಂಗಳ 28ಕ್ಕೆ ಮುಂದೂಡಲಾಗಿದೆ. ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ, ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.[]

ರಾಜರಾಜೇಶ್ವರಿ ನಗರ ಚುನಾವಣೆ

[ಬದಲಾಯಿಸಿ]
  • 28-5-2018 ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನಿಗದಿಯಾಗಿದ್ದ ಚುನಾವಣೆಯಲ್ಲಿ ಶೇ 54.20 ರಷ್ಟು ಮತದಾನ ನಡೆದಿತ್ತು. ದಿ.31-5-2018 ಎಣಿಕೆ ನಂತರ ಫಲಿತಾಂಶ ಈ ರೀತಿ ಇತ್ತು:[]
  • ಕಾಂಗ್ರೆಸ್‌- ಮುನಿರತ್ನ- 1,08,064
  • ಬಿಜೆಪಿ- ತುಳಸಿ ಮುನಿರಾಜುಗೌಡ – 82,572
  • ಜೆಡಿಎಸ್‌-ಜಿ.ಎಚ್. ರಾಮಚಂದ್ರ- 60,360
  • ಪಕ್ಷೇತರ– ಹುಚ್ಚ ವೆಂಕಟ್- 604
  • ನೋಟಾ- 2,061

ಜಯನಗರ ನಗರ ಕ್ಷೇತ್ರದ ಚುನಾವಣೆ

[ಬದಲಾಯಿಸಿ]
  • ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ (60) ಮೇ 2, 2018.ಗುರುವಾರ ರಾತ್ರಿ ನಿಧನರಾದರು. ಹಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 2008 ಮತ್ತು 2013ರಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದ ಅವರು, ಈ ಬಾರಿಯೂ ಕಣದಲ್ಲಿದ್ದರು. ಕ್ಷೇತ್ರದಲ್ಲಿ 2-5-2018 ಗುರುವಾರ ಚುನಾವಣಾ ಪ್ರಚಾರ ಮಾಡುವಾಗ ಕುಸಿದು ಬಿದ್ದರು. ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿ, ಚುನಾವಣಾ ಪ್ರಕ್ರಿಯೆಯನ್ನು ಹೊಸದಾಗಿ ನಡೆಸಬೇಕಾಗುತ್ತದೆ.[]
  • 11-6-2018 ರಂದು ಜಯನಗರ ನಗರ ಕ್ಷೇತ್ರದ ಚುನಾವಣೆ ನಿಗದಿಯಾಗಿದ್ದು,13-06-2018 ಮತ ಎಣಿಕೆ ನಡೆದ ನಂತರದ ಫಲಿತಾಂಶ ಈ ರೀತಿ ಇತ್ತು:[]
  • ಕಾಂಗ್ರೆಸ್‌- ಸೌಮ್ಯಾ ರೆಡ್ಡಿ- 54458
  • ಬಿಜೆಪಿ- ಪ್ರಹ್ಲಾದ್ – 51571
  • ಜೆಡಿಎಸ್‌- ಕಾಲೆಗೌಡ- 817
  • ಪಕ್ಷೇತರ– ರವಿ ಕೃಷ್ಣ ರೆಡ್ಡಿ- 1861
  • ನೋಟಾ- 848

ಚುನಾವಣೆಯ ಮತದಾನೋತ್ತರ ಫಲಿತಾಂಶ ಸಮೀಕ್ಷೆ

[ಬದಲಾಯಿಸಿ]
  • ರಾಜ್ಯದಲ್ಲಿ ಶೇ. 70 ಮತದಾನ ಆಗಿದೆ.[]
  • ಮತದಾನದ ನಂತರದ ಸಮೀಕ್ಷಯಲ್ಲಿರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಸೂಚನೆ ಕಂಡುಬಂದಿದೆ :
  • ಆವರಣದಲ್ಲಿ ಅಂತಿಮ ಸಮೀಕ್ಷೆ:[೧೦]
ಸಮೀಕ್ಷಕರುಕಾಂಗ್ರೆಸ್‌ಬಿಜೆಪಿ:Iಜೆಡಿಎಸ್‌:,ಇತರೆ
ವಿಜಯವಾಣಿ, ದಿಗ್ವಿಜಯ ನ್ಯೂಸ್‌ 24/776–80103–10731–3504–08
ಎನ್‌ಡಿಟಿವಿ:72–78 (86)102–110 (100)30–35 (33)02–05
ನ್ಯೂಸ್‌ ಎಕ್ಸ್‌–ಸಿಎನ್‌ಎಕ್ಸ್‌72–78102–11035–3903–04
ಟೈಮ್ಸ್‌ನೌ/ ಚಾಣುಕ್ಯ90–103(73)80–93 (120)31–39 (26): 02
ಇಂಡಿಯಾ ಟುಡೇ ಆಕ್ಸಿಸ್‌106–118 (111)79–92 (85)- 22–30 (26)01–04
ಎಬಿಪಿ / ಸಿ ವೋಟರ್ ಸಮೀಕ್ಷೆ87-99 (93)97-109 (103)21-30 (25)01–08 (1)
ಜನಕೀ ಬಾತ್‌ ಸಮೀಕ್ಷೆ73-8295-11431–39- 2-4

[೧೧]

ಜಿಲ್ಲಾವಾರು ಮತದಾನ: ಶೇಕಡಾ

[ಬದಲಾಯಿಸಿ]
ಜಿಲ್ಲೆ2018.ಶೇ2013.ಶೇ*ಜಿಲ್ಲೆ2018.ಶೇ2013.ಶೇ*ಜಿಲ್ಲೆ2018.ಶೇ2013.ಶೇ*ಜಿಲ್ಲೆ2018.ಶೇ2013.ಶೇ
ಬೆಂಗಳೂರು ನಗರ5557.33ತುಮಕೂರು7379.32ಬೀದರ್5966.43ರಾಯಚೂರು6164.83
ಕೊಪ್ಪಳ -7073.48ದಕ್ಷಿಣ ಕನ್ನಡ7374.48ಬೆಳಗಾವಿ7174.67ಹಾವೇರಿ7679.91
ಗದಗ6872.90ದಾವಣಗೆರೆ7075.98ಬೆಂಗಳೂರು ಗ್ರಾಮ7657.33ಹಾಸನ7778.77
ಚಾಮರಾಜ ನಗರ7878.65ಧಾರವಾಡ6667.16ಮೈಸೂರು6865.83ಶಿವಮೊಗ್ಗ7374.76
ಚಿಕ್ಕಮಗಳೂರು7075.47ಬಳ್ಳಾರಿ6673.16ಮಂಡ್ಯ7877.98ಉಡುಪಿ7576.15
ಚಿಕ್ಕಬಳ್ಳಾಪುರ7983.50ಬಾಗಲಕೋಟೆ6872.94ಯಾದಗಿರಿ6065.92ಉತ್ತರ ಕನ್ನಡ7173.66
ಚಿತ್ರದುರ್ಗ7676.66ವಿಜಯಪುರ6366.43ರಾಮನಗರ8492.94ಕೊಡಗು6973.22

ಫಲಿತಾಂಶ

[ಬದಲಾಯಿಸಿ]
ರ್ನಾಟಕ ವಿಧಾನಸಭಾ ಚುನಾವಣೆ 2018
ಪಕ್ಷ seats
ಬಿ.ಜೆ.ಪಿ
 
104
ಕಾಂಗ್ರೆಸ್
 
78
ಜೆ.ಡಿ.ಎಸ್
 
36
ಇತರರು
 
4
ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು 222
ಕರ್ನಾಟಕ ವಿಧಾನಸಭಾ ಚುನಾವಣೆ 2018
  • ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು : 222
  • ಜೆಡಿಎಸ್,ನ,ಎಚ್.ಡಿ.ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದಾಗ ಜೆಡಿಎಸ್ ಸದಸ್ಯರ ಸಂಖ್ಯೆ 35 ಆಗುತ್ತದೆ.$
  • 28 ಮೇ, 2018 ರಂದು ಕಾರು ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್,ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟರು.ಶಾಸಕ ಸಿದ್ದು ನ್ಯಾಮಗೌಡ ಸಾವು[೧೩]
  • ಕುಮಾರಸ್ವಾಮಿ ಖಾಲ ಮಾಡಿದ ರಾಮನಗರ, ಜಮಖಂಡಿ ಖಾಲಿ ಇವೆ; ಒಟ್ಟು ಫಲಿತಾಂಶ: 224 - 2 =222 ಕ್ಷೇತ್ರಗಳು
  • ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ 11 – 6 -2018 ರಂದು ನೆಡೆದು, ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವರು 54,457 ಮತಗಳನ್ನು ಗಳಿಸಿ, ಒಟ್ಟು 2,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್‌ಬಾಬು 51,568 ವಿರುದ್ಧ ಜಯ ಗಳಿಸಿದ್ದಾರೆ.[೧೪]

ಚುನಾವಣೆ 2018

[ಬದಲಾಯಿಸಿ]

[೧೫]

ಪಕ್ಷ20182013 ರ ಫಲಿತಾಂಶಬದಲಾವಣೆ
ಪಕ್ಷ20182013Change
ಭಾರತೀಯ ಜನತಾ ಪಕ್ಷ10440+64
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್80122-42
ಜನತಾ ದಳ (ಸೆಕ್ಯುಲರ್) (36+ 1BSP=37)(**36-1X*35+1)$3740-3
ಬಿಎಸ್ಪಿ (BSP) (ಜನತಾ ದಳ (ಸೆಕ್ಯುಲರ್)ಕ್ಕೆ ಮೈತ್ರಿ ಪಕ್ಷ)10
ಕರ್ನಾಟಕ ಜನತಾ ಪಾರ್ಟಿ (KJP)04
ಕೆ ಪಿ ಜೆಪಿ (KPJP)10
ಪಕ್ಷೇತರರು19
ಬಡವರ ಶ್ರಮಿಕರರೈತರಕಾಂಗ್ರೆಸ್ (ಶ್ರೀರಾಮುಲು) (ಬಿ.ಎಸ್.ಆರ್.ಸಿ.ಪಿ4
ಕೆ.ಎಂ.ಪಿ ( KMP)1
ಎಸ್ ಪಿ ( SP)1
ಎಸ್ಕೆಪಿ (SKP)1
ಎಎಪಿ (AAP)
ಎನ್ಸಿಪಿ00
ಇತರೆ0(20)-20
ಒಟ್ಟು224224

[೧೬] [೧೭] [೧೮]

ಪಕ್ಷಗಳ ಶೇಕಡಾವಾರು ಮತಗಳಿಕೆ

[ಬದಲಾಯಿಸಿ]

ಕರ್ನಾಟಕ ವಿಧಾನಸಭೆ ಚುನಾವಣೆ, 2018

  ಕಾಂಗ್ರೆಸ್ (38%)
  ಬಿಜೆಪಿ (36.2%)
  ಜೆಡಿಎಸ್ (18.4%)
  ಸ್ವತಂತ್ರ (4.00%)
  ಇತರರು (3.4%)
  • ಸೋತರೂ ಬಿಜೆಪಿಗಿಂತ ಹೆಚ್ಚು ಮತ ಪಡೆದ ಕಾಂಗ್ರೆಸ್:
ಪಕ್ಷಶೇಕಡಾಗಳಿಕೆಗಳಿಸಿದ ಓಟುಗಳು (ಸಮೀಪಸಂಖ್ಯೆ)
1ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್)38%1,37,63,500
2ಭಾರತೀಯ ಜನತಾಪಕ್ಷ (ಬಿಜೆಪಿ)36.2%1,31,20,300
3ಜನತಾದಳ (ಸೆಕ್ಯುಲರ್)(ಜೆಡಿಎಸ್)18.4%66,48700
4ಸ್ವತಂತ್ರ4.00%14,34,951
5ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)0.3%1,08592
6ಎ ಐ ಎಮ್ ಇಪಿ0.33%97,572
7ಬಿ ಪಿ ಜೆ ಪಿ0.2%83,071
8ಸಿ ಪಿ ಎಂ0.2%81,181
9ಸ್ವರಾಜ್0.2%94,000
10ಕೆ ಪಿ ಜಿ ಪಿ0.2%74,229
11ನೋಟಾ0.9%3,09573
12ಇತರರು1.07
  • ಕರ್ನಾಟಕ ಪ್ರಜಾ ಜನತಾ ಪಕ್ಷ(ಕೆಪಿಜೆಪಿ)- ಬಿಜೆಪಿ ಜೊತೆ ಮೈತ್ರಿ.[೧೯][೨೦]

ವಿಧಾನಸಭೆ ಚುನಾವಣೆಯಲ್ಲಿ ಸ್ಥಾನಗಳು

[ಬದಲಾಯಿಸಿ]
  ಭಾರತೀಯ ಜನತಾ ಪಾರ್ಟೀ
  ಕಾಂಗ್ರೆಸ್
  ಜೆ.ಡಿ.ಎಸ್

ರಾಜ್ಯದ ಪ್ರದೇಶವಾರು ಫಲಿತಾಂಶ

[ಬದಲಾಯಿಸಿ]
ಪ್ರದೇಶಒಟ್ಟುಕಾಂಗ್ರೆಸ್ಜೆಡಿ(ಎಸ್)ಇತರರು
ಮುಂಬೈ ಕರ್ನಾಟಕ501721
ಹೈದರಾಬಾದ್‌ ಕರ್ನಾಟಕ402140
ಬೆಂಗಳೂರು ನಗರ261320
ಮಧ್ಯ ಕರ್ನಾಟಕ32740
ಕರಾವಳಿ19/19300
ಹಳೇ ಮೈಸೂರು55 (- 1)1725 (- 1)2
ಒಟ್ಟು22178373

[೧೭] [೨೧]

ಉಪ ಚುನಾವಣೆ ನವೆಂಬರ್ 2018

[ಬದಲಾಯಿಸಿ]
  • ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 3,2018 ರಂದು ನಡೆಸುವುದಾಗಿ 06 ಅಕ್ಟೋಬರ್ 2018ರಂದು ಚುನಾವಣಾ ಆಯೋಗ ತಿಳಿಸಿತು. ಸೂಚನೆಯ ಘೋಷಣೆ- 9-10-2018; ನಾಮನಿರ್ದೇಶನಕ್ಕೆ ಕೊನೆಯ ದಿನ 16-10-2018; ವಾಪಸಾತಿಗೆ ಕೊನೆಯ ದಿನ 20-10-2018;ಎಣಿಕೆ,6-11-2018ರಂದು.
  • ಲೋಕಸಭೆ ಕ್ಷೇತ್ರಗಳು:
  • ಶಿವಮೊಗ್ಗ :(ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ),
  • ಬಳ್ಳಾರಿ (ಶ್ರೀರಾಮುಲು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
  • ಮಂಡ್ಯ (ಜಾತ್ಯತೀತ ಜನತಾದಳದ ಸಿ.ಎಸ್.ಪುಟ್ಟರಾಜು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
  • ವಿಧಾನ ಸಭೆ ಕ್ಷೇತ್ರ:
  • ರಾಮನಗರ (ಎಚ್‌.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು ರಾಮನಗರ ತೆರವು.)
  • ಜಮಖಂಡಿ (ಕಾಂಗ್ರೆಸ್‌ ಶಾಸಕ ಸಿದ್ದು ನ್ಯಾಮಗೌಡ ಅವರು ರಸ್ತೆ ಅಪಘಾತದಲ್ಲಿ ಸಾವು)
  • ಉಪಚುನಾವಣೆ: ನವೆಂಬರ್ 3,2018.
  • ಫಲಿತಾಂಶ:ನವೆಂಬರ್ 6 2018.[೨೨]

ಸರ್ಕಾರ ರಚನೆ

[ಬದಲಾಯಿಸಿ]
  • ರಾಜ್ಯದಲ್ಲಿ ವಿಶಿಷ್ಟ ಬೆಳವಣಿಗೆ:
  • ಬಿ.ಎಸ್.ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅವರು 23ನೇ ಮುಖ್ಯಮಂತ್ರಿಯಾಗಿ ಹಾಗೂ ಮೂರನೇ ಬಾರಿಗೆ ಸಿಎಂ ಆಗಿ ದಿ.17-5-2018 ರಂದು ಬೆಳಿಗ್ಗೆ 9.00ಕ್ಕೆ ಪ್ರಮಾಣವಚನ ಸ್ವೀಕರಿದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.[೨೩][೨೪] ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರಿಂದ, ಹದಿನೈದು ದಿನಗಳ ಒಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಸದನದಲ್ಲಿ ಬಹುಮತವಿಲ್ಲದ ಕರಣ ಯಡಿಯೂರಪ್ಪ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದರು. ಬಹುಮತ ಸಾಬೀತು ಪಡಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ನೆಡೆಯುವುದು ಎಂದಿದ್ದಾರೆ.[೨೫]
  • ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ಮೈತ್ರಿ ಮಾಡಿಕೊಂಡು, ಕಾಂಗ್ರೆಸ್‌–ಜೆಡಿಎಸ್‌ ಪಕ್ಷದ ಶಾಸಕಾಂಗ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದಂತೆ ಸರ್ಕಾರ ರಚನೆಗೆ ಎರಡು ಪಕ್ಷದ 117 ಶಾಸಕರ ಸಹಿಯನ್ನು ಒಳಗೊಂಡ ಪಟ್ಟಿಯನ್ನು ರಾಜ್ಯಪಾಲರಿಗೆ ಎಚ್.ಡಿ. ಕುಮಾರಸ್ವಾಮಿ ದಿ. 16.5-2018 ರಂದು ನೀಡಿದ್ದರು.[೨೬]
  • ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನಕ್ಕೆ ಅವರಿಗೆ ಬಹುಮತವಿಲ್ಲದ ಕಾರಣ ಮತ್ತು ತಮಗೆ 117ಸದಸ್ಯರ ಬೆಂಬಲ ವಿದೆಯೆಂದು ದಿ.16-5-2018 ರಂದು ತಡೆ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಬುಧವಾರ ಮಧ್ಯರಾತ್ರಿ ವಿಚಾರಣೆ ನಡೆಸಿದ್ದು ರಾಜ್ಯಪಾಲರ ಕರ್ತವ್ಯದಲ್ಲಿ ಕೋರ್ಟ್ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಸುಪ್ರೀಕೋರ್ಟ್ ಅಭಿಪ್ರಾಯಪಟ್ಟಿದೆ.[೨೭]
  • ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಬಗೆಗೆ ಕಾಂಗ್ರೆಸ್ ಮತ್ತು ಜೆಡಿಎಸ್, ತಮ್ಮ ಕೂಟಕ್ಕೆ ಬಹುಮತ ಇರುವುದನ್ನು ನಿರ್ಲಕ್ಷಿಸಿದ ಕಾರಣ ವಿಧಾನ ಸೌಧದ ಗಾಂಧಿಪ್ರತಿಮೆಯ ಬಳಿ ಪ್ರತಭಟನೆ ನೆಡೆಸಿದವು.[೨೮][೨೯]

ಸುಪ್ರೀಮ್ ಕೋರ್ಟ್ ಆದೇಶ

[ಬದಲಾಯಿಸಿ]
  • ದಿ.17-5-2018 ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್‌. ಯಡಿಯೂರಪ್ಪ ಅವರು ದಿ.19-5-2018 ಶನಿವಾರ ಸಂಜೆ 4ಕ್ಕೆ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ಧಾರ ಪ್ರಶ್ನಿಸಿ ಬುಧವಾರ ರಾತ್ರಿ ಕಾಂಗ್ರೆಸ್– ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ, ‘ವಿಶ್ವಾಸಮತ ಸಾಬೀತುಪಡಿಸುವ ತನಕ ಯಡಿಯೂರಪ್ಪ ಅವರು ಯಾವುದೇ ಆಡಳಿತಾತ್ಮಕ ತೀರ್ಮಾನ ತೆಗೆದು ಕೊಳ್ಳುವಂತಿಲ್ಲ’ ಎಂದು ತಿಳಿಸಿತು.[೩೦]
  • ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರು ಶನಿವಾರ ಪ್ರಮಾಣ ವಚನ ಸ್ವೀಕರಿಸಬೇಕು. ಶಾಸಕರ ರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ. ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯನ್ನು ಹಂಗಾಮಿ ವಿಧಾನಸಭಾಧ್ಯಕ್ಷರು ನಡೆಸಿಕೊಡಬೇಕು ಎಂದೂ ಸೂಚಿಸಿದೆ.[೩೧] ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಹೇಗೆ ನಡೆಯಬೇಕು ಎಂಬುದನ್ನು ಹಂಗಾಮಿ ಸ್ಪೀಕರ್‌ ನಿರ್ಣಯಿಸಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಕ ಮಾಡಲಾಗಿದೆ. ಬೋಪಯ್ಯ ಅವರನ್ನು ಸ್ಪೀಕರ್‌ ಆಗಿ ನೇಮಕ ಮಾಡಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಆಯ್ಕೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.[೩೨]
  • ಹಂಗಾಮಿ ಸ್ಪೀಕರ್ ಕರ್ತವ್ಯ:ನೂತನವಾಗಿ ಆಯ್ಕೆಯಾದ ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸುವುದು ಮೊದಲ ಕರ್ತವ್ಯ. ಅದಾದ ಬಳಿಕ ಕಾಯಂ ಸಭಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಮಾಡಲಾಗುತ್ತದೆ. ಆದರೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ, ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವುದು ಹಾಗೂ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಿರ್ವಹಣೆ ಈ ಬಾರಿಯ ಹಂಗಾಮಿ ಸ್ಪೀಕರ್ ಅವರ ಜವಾಬ್ದಾರಿಯಾಗಿದೆ.[[೩೩]
  • ಯಡಿಯೂರಪ್ಪ ರಾಜಿನಾಮೆ: ಬಹುಮತ ಇಲ್ಲದೆಯೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ದಿ.19-5-2018 ಶನಿವಾರ ಸಂಜೆ 4ಕ್ಕೆ ವಿಶ್ವಾಸಮತ ಯಾಚನೆ ಭಾಷಣ ಆರಂಭಿಸಿದರು. ಆದರೆ ಬಳಿಕ ಅದನ್ನು ಹಿಂಪಡೆದು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದರು.[೩೪]

ಸಮ್ಮಿಶ್ರ ಸರ್ಕಾರ ರಚನೆಯ ಕ್ರಿಯೆ

[ಬದಲಾಯಿಸಿ]
  • ಜೆಡಿಎಸ್ ಸರ್ಕಾರ ರಚನೆಗೆ ಕಾಂಗ್ರೆಸ್‌ ಪೂರ್ಣ ಬೆಂಬಲ ಸೂಚಿಸಿ, ಮೇ 15ರಂದೇ ಸಮ್ಮಿಶ್ರ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರಿಗೆ ಉಭಯ ಪಕ್ಷದ ಮುಖಂಡರು ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ದಿ.19-5-2018 ಶನಿವಾರ ಸಂಜೆ 4ಕ್ಕೆ ವಿಶ್ವಾಸಮತ ಪಡೆಯಲಾರದೆ ರಾಜೀನಾಮೆ ಸಲ್ಲಿಸಿದ ನಂತರ, ಎಚ್.ಡಿ. ಕುಮಾರಸ್ವಾಮಿಯವರಿಗೆ ಹದಿನೈದು ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಆದೇಶಿಸಿದ್ದು, ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶ ನೀಡಿದರು. ಕುಮಾರಸ್ವಾಮಿಯವರು ದಿ. 23-5-2018 ಬುಧವಾರ ಪ್ರಮಾಣ ವಚನ ಸ್ವಕರಿಸಲು ನಿರ್ಧರಿಸಿದರು.[೩೫][೩೬]

ಚುನಾಯಿತ ಸದಸ್ಯರ ಜಾತಿವಾರು ಪ್ರಾತಿನಿಧ್ಯ

[ಬದಲಾಯಿಸಿ]
  • ಕರ್ನಾಟಕದಲ್ಲಿ ಜಾತಿ ಪ್ರಾತಿನಿಧ್ಯ ಇರುವ ರೀತಿಯಲ್ಲಿ ಮಂತ್ರಿಮಂಡಲ ರಚನೆಯಾಗುವುದು ಸಾಮಾನ್ಯವಾಗಿದೆ. ಕೆಳಗಡೆ ಚುನಾಯಿತ ಸದಸ್ಯರ ಜಾತಿವಾರು ಪ್ರಾತಿನಿಧ್ಯದ ಪಟ್ಟಿ ಕೊಟ್ಟಿದೆ.
  • ಕುಮಾರಸ್ವಾಮಿಯವರು ಎರಡುಕಡೆ ಸ್ಪರ್ಧಿಸಿ ಗೆದ್ದಿದ್ದು ರಾಮನಗರ ಕ್ಷೇತ್ರಕ್ಕೆ ರಾಜಿನಾಮೆ ನೀಡಿರುವುದರಿಂದ ಒಕ್ಕಲಿಗ ಪ್ರಾತಿನಿಧ್ಯ ಒಂದು ಸ್ಥಾನ ಕಡಿಮೆ ಆಗುತ್ತದೆ.(42 - 1=41)
ಜಾತಿಕಾಂಗ್ರೆಸ್ಬಿಜೆಪಿಜಡಿಎಸ್ಇತರರುಒಟ್ಟು
ವೀರಶೈವ ಲಿಂಗಾvಯತ163840058
ಒಕ್ಕಲಿಗ118230042
ಪರಿಶಿಷ್ಟ (ಎಸ್.ಸಿ )1216060236
ಇತರರು516000021
ಪರಿಶಿಷ್ಟ ಪಂಗಡ0909010019
ಬ್ರಾಹ್ಮಣರು0410000014
ಕುರುಬ0901020113
ರೆಡ್ಡಿ0404010009
ಮುಸ್ಲಿಮರು0700000007
ಕೊಡವ0002000002
ಕ್ರಿಶ್ಚಿಯನ್0100000001
ಒಟ್ಟು781043703222

[೩೭]

ಕುಮಾರಸ್ವಾಮಿಯವರ ಮಂತ್ರಿಮಂಡಲ ರಚನೆ

[ಬದಲಾಯಿಸಿ]
  • ಬಿ.ಎಸ್ ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಲು ವಿಫಲರಾದ ನಂತರ ರಾಜ್ಯ ಪಾಲರ ಆಹ್ವಾನದಂತೆ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ದಿ.23 ಮೇ, 2018 ರಂದು ಬುಧವಾರ ಸಂಜೆ 4.30ಕ್ಕೆ, ದೇವರು ಮತ್ತು ಕನ್ನಡ ನಾಡಿನ ಜನರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಕೊರಟಗೆರೆ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಬಿಎಸ್‌ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶರದ್‌ ಯಾದವ್‌, ಗುಲಾಬ್‌ ನಬೀ ಅಜಾದ್‌, ಚಂದ್ರಬಾಬು ನಾಯ್ಡು, ಸೀತಾರಾಂ ಯೆಚೂರಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇಶದ ಹೊಸ ಒಕ್ಕೂಟದ ಆರಂಭಕ್ಕೆ ಸಾಕ್ಷಿಯಾಯಿತು.[೩೮] ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಅದ ನಂತರ ಮಂತ್ರಿಮಂಡಳದ ವಿಸ್ತರಣೆಮಾಡುವ ಸೋಚನೆ ನೀಡಿದರು. ಬಹುಮತ ಸಾಬೀತುಪಡಿಸಲು ಮೇ, 25 ರಂದು (ಶುಕ್ರವಾರ) ವಿಧಾನಸಭಾ ಅಧಿವೇಶನ ಕರೆಯಲಾಗಿದೆ.[೩೯]
ವಿಧಾನಸಭೆ ಸಭಾಧ್ಯಕ್ಷರ ಆಯ್ಕೆ;
  • ದಿ.25 ಮೇ, 2018 ರಂದು ಬಿಜೆಪಿಯ ಸುರೇಶ್‌ ಕುಮಾರ್‌ ನಾಮಪತ್ರವನ್ನು ವಾಪಸ್ಸು ಪಡೆದಿದ್ದರಿಂದ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ರಾಜ್ಯ ವಿಧಾನಸಭೆಯ ಸಭಾಪತಿಯಾಗಿ ಆಯ್ಕೆ ಆದರು. ಸಿದ್ದರಾಮಯ್ಯರ ಸೂಚನೆ ಮತ್ತು ಜಿ.ಪರಮೇಶ್ವರ್ ಅವರ ಅನುಮೋದನೆಯಂತೆ ಸಭಾಧ್ಯಕ್ಷರಾಗಿ ರಮೇಶ್‌ ಕುಮಾರ್‌ ಅವರ ಆಯ್ಕೆ ಪ್ರಸ್ತಾಪವನ್ನು ಹಂಗಾಮಿ ಸಭಾಧ್ಯಕ್ಷರಾಗಿದ್ದ ಬೋಪಯ್ಯ ಅವರು ಧ್ವನಿಮತದ ಮೂಲಕ ರಮೇಶ್‌ ಕುಮಾರ್‌ ಆಯ್ಕೆ ಆಗಿರುವುದನ್ನು ಘೋಷಿಸಿದರು.[೪೦]
ಕುಮಾರಸ್ವಾಮಿಯವರಿಂದ ಬಹುಮತ ಸಾಬಿತು
  • ಕೆ.ಆರ್.ರಮೇಶ್‌ ಕುಮಾರ್‌ ಸಭಾಧ್ಯಕ್ಷರಾಗಿ ಆಯ್ಕೆ ಆದ ಕೂಡಲೆ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ಸಭೆಯಲ್ಲಿ ಮಂಡಿಸಿದರು. ಬಿ.ಎಸ್‌. ಯಡಿಯೂರಪ್ಪ ತಮ್ಮ ಮಾತು ಮುಗಿಸಿ, ಕಲಾಪವನ್ನು ಬಹಿಷ್ಕರಿಸಿ, ಸನದನದಿಂದ ಹೊರ ನಡೆದರು. ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ, ಕೊನೆಯಲ್ಲಿ ಸದನದಲ್ಲಿ ವಿಶ್ವಾಸ ಮತ ಕೋರಿದರು. ಸಭಾಧ್ಯಕ್ಷರು ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಿ, ಧ್ವನಿ ಮತದ ಒಪ್ಪಿಗೆ ಮೂಲಕ ಸಭಾಧ್ಯಕ್ಷ ಕೆ.ಆರ್‌. ರಮೇಶ್‌ಕುಮಾರ್‌ ಅವರು ವಿಶ್ವಾಸಮತವನ್ನು ಅನುಮೋದಿಸಿದರು [೪೧]

ಮಂತ್ರಿಮಂಡಲ ರಚನೆ

[ಬದಲಾಯಿಸಿ]
  • ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಮೈತ್ರಿ ಸರ್ಕಾರದ ಸಚಿವರ ಪ್ರಮಾಣವಚನ ಸಮಾರಂಭ ರಾಜಭವನದ ಗಾಜಿನಮನೆಯಲ್ಲಿ ದಿ.6-6-2018 ಬುಧವಾರ ಸರಳವಾಗಿ ನೆರವೇರಿತು. ಕಾಂಗ್ರೆಸ್ ಪಕ್ಷದ 15 ಶಾಸಕರು ಮತ್ತು ಜೆಡಿಎಸ್‌ ಪಕ್ಷದ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. (25 + ಹಿಂದೆ ಇಬ್ಬರ ಪ್ರಮಾಣವಚನ; ಒಟ್ಟು 27 ಜನರ ಮಂತ್ರಿಮಂಡಳ ರಚನೆಯಾಗಿದೆ. (ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವರ ಕಿರುಪರಿಚಯ)[೪೨]

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು

[ಬದಲಾಯಿಸಿ]
ಕ್ರ.ಸಂ. ವಿಧಾನಸಭಾ ಕ್ಷೇತ್ರ ಆಯ್ಕೆಯಾದ ಸದಸ್ಯರು ಪಕ್ಷ ಮತಗಳು ಹತ್ತಿರದ ಸ್ಪರ್ಧಿ ಪಕ್ಷ ಮತಗಳು
1ನಿಪ್ಪಾಣಿಶಶಿಕಲಾ ಜೊಲ್ಲೆಬಿಜೆಪಿ87006ಕಾಕಾಸೊ ಪಾಟೀಲಕಾಂಗ್ರೆಸ್78500
2ಚಿಕ್ಕೋಡಿ-ಸದಲಗಾಗಣೇಶ ಹುಕ್ಕೇರಿಕಾಂಗ್ರೆಸ್91467ಅಣ್ಣಾಸಾಹೇಬ್ ಜೊಲ್ಲೆಬಿಜೆಪಿ80898
3ಅಥಣಿಮಹೇಶ ಕುಮಟಳ್ಳಿಕಾಂಗ್ರೆಸ್82094ಲಕ್ಷ್ಮಣ ಸವದಿಬಿಜೆಪಿ79763
4ಕಾಗವಾಡಶ್ರೀಮಂತ ಪಾಟೀಲಕಾಂಗ್ರೆಸ್83060ಭರಮಗೌಡ ಕಾಗೆಬಿಜೆಪಿ50118
5ಕುಡಚಿಪಿ.ರಾಜೀವಬಿಜೆಪಿ67781ಅಮಿತ್ ಘಾಟಗೆಕಾಂಗ್ರೆಸ್52773
6ರಾಯಭಾಗದುರ್ಯೋಧನ ಐಹೊಳೆಬಿಜೆಪಿ67502ಪ್ರದೀಪಕುಮಾರ ಮಾಳಗೆಕಾಂಗ್ರೆಸ್50954
7ಹುಕ್ಕೇರಿಉಮೇಶ ಕತ್ತಿಬಿಜೆಪಿ83588ಎ.ಬಿ.ಪಾಟೀಲಕಾಂಗ್ರೆಸ್68203
8ಅರಭಾವಿಬಾಲಚಂದ್ರ ಜಾರಕಿಹೊಳಿಬಿಜೆಪಿ96144ಭೀಮಪ್ಪ ಗಡಾದಕಾಂಗ್ರೆಸ್48816
9ಗೋಕಾಕರಮೇಶ ಜಾರಕಿಹೊಳಿಕಾಂಗ್ರೆಸ್90249ಅಶೋಕ ಪೂಜಾರಿಬಿಜೆಪಿ75969
10ಯಮಕನಮರಡಿಸತೀಶ ಜಾರಕಿಹೊಳಿಕಾಂಗ್ರೆಸ್73512ಮಾರುತಿ ಅಷ್ಟಗಿಬಿಜೆಪಿ70662
11ಬೆಳಗಾವಿ ಉತ್ತರಅನಿಲ ಬೆನಕೆಬಿಜೆಪಿ79060ಫಿರೋಜ್ ಸೇಠ್ಕಾಂಗ್ರೆಸ್61793
12ಬೆಳಗಾವಿ ದಕ್ಷಿಣಅಭಯ ಪಾಟೀಲಬಿಜೆಪಿ84498ಎಮ್.ಡಿ.ಲಕ್ಷ್ಮಿನಾರಾಯಣಕಾಂಗ್ರೆಸ್25806
13ಬೆಳಗಾವಿ ಗ್ರಾಮೀಣಲಕ್ಷ್ಮಿ ಹೆಬ್ಬಾಳಕರಕಾಂಗ್ರೆಸ್102040ಸಂಜಯ ಪಾಟೀಲಬಿಜೆಪಿ50316
14ಖಾನಾಪುರಡಾ.ಅಂಜಲಿ ನಿಂಬಾಳ್ಕರಕಾಂಗ್ರೆಸ್36649ವಿಠ್ಠಲ ಹಲಗೇಕರಬಿಜೆಪಿ31516
15ಕಿತ್ತೂರುಮಹಾಂತೇಶ ದೊಡ್ಡಗೌಡರಬಿಜೆಪಿ73155ಡಿ.ಬಿ.ಇನಾಂದಾರಕಾಂಗ್ರೆಸ್40293
16ಬೈಲಹೊಂಗಲಮಹಾಂತೇಶ ಕೌಜಲಗಿಕಾಂಗ್ರೆಸ್47040ಜಗದೀಶ ಮೆಟಗುಡ್ಡಪಕ್ಷೇತರ41918
17ಸವದತ್ತಿ ಯಲ್ಲಮ್ಮವಿಶ್ವನಾಥ ಮಾಮನಿಬಿಜೆಪಿ62480ಆನಂದ ಛೋಪ್ರಾಪಕ್ಷೇತರ56189
18ರಾಮದುರ್ಗಮಹಾದೇವಪ್ಪ ಯಾದವಾಡಬಿಜೆಪಿ68349ಅಶೋಕ ಪಟ್ಟಣಕಾಂಗ್ರೆಸ್65474
19ಮುಧೋಳಗೋವಿಂದ ಕಾರಜೋಳಬಿಜೆಪಿ76431ಸತೀಶ ಬಂಡಿವಡ್ಡರಕಾಂಗ್ರೆಸ್60949
20ತೇರದಾಳಸಿದ್ದು ಸವದಿಬಿಜೆಪಿ87213ಉಮಾಶ್ರೀಕಾಂಗ್ರೆಸ್66324
21ಜಮಖಂಡಿಆನಂದ ನ್ಯಾಮಗೌಡಕಾಂಗ್ರೆಸ್97017ಶ್ರೀಕಾಂತ ಕುಲಕರ್ಣಿಬಿಜೆಪಿ57537
22ಬೀಳಗಿಮುರುಗೇಶ ನಿರಾಣಿಬಿಜೆಪಿ85135ಜೆ.ಟಿ.ಪಾಟೀಲಕಾಂಗ್ರೆಸ್80324
23ಬದಾಮಿಸಿದ್ದರಾಮಯ್ಯಕಾಂಗ್ರೆಸ್67599ಶ್ರೀರಾಮಲುಬಿಜೆಪಿ65903
24ಬಾಗಲಕೋಟೆವೀರಣ್ಣ ಚರಂತಿಮಠಬಿಜೆಪಿ85653ಹೆಚ್.ವಾಯ್.ಮೇಟಿಕಾಂಗ್ರೆಸ್69719
25ಹುನಗುಂದದೊಡ್ಡನಗೌಡ ಪಾಟೀಲಬಿಜೆಪಿ65012ವಿಜಯಾನಂದ ಕಾಶಪ್ಪನವರಕಾಂಗ್ರೆಸ್59785
26ಮುದ್ದೇಬಿಹಾಳಎ.ಎಸ್.ಪಾಟೀಲ(ನಡಹಳ್ಳಿ)ಬಿಜೆಪಿ63512ಸಿ.ಎಸ್.ನಾಡಗೌಡಕಾಂಗ್ರೆಸ್54879
27ದೇವರ ಹಿಪ್ಪರಗಿಸೋಮನಗೌಡ ಪಾಟೀಲಬಿಜೆಪಿ48245ರಾಜುಗೌಡ ಪಾಟೀಲಜೆಡಿಎಸ್44892
28ಬಸವನ ಬಾಗೇವಾಡಿಶಿವಾನಂದ ಪಾಟೀಲಕಾಂಗ್ರೆಸ್58647ಸೋಮನಗೌಡ ಪಾಟೀಲಜೆಡಿಎಸ್55461
29ಬಬಲೇಶ್ವರಎಂ.ಬಿ.ಪಾಟೀಲಕಾಂಗ್ರೆಸ್98339ವಿಜಯಗೌಡ ಪಾಟೀಲಬಿಜೆಪಿ68624
30ವಿಜಾಪುರ ನಗರಬಸನಗೌಡ ಪಾಟೀಲ(ಯತ್ನಾಳ)ಬಿಜೆಪಿ76308ಅಬ್ದುಲ್ ಹಮೀದ್ ಮುಶ್ರೇಫ್ಕಾಂಗ್ರೆಸ್69895
31ನಾಗಠಾಣದೇವಾನಂದ ಚವ್ಹಾಣಜೆಡಿಎಸ್59709ವಿಠ್ಠಲ ಕಟಕದೊಂಡಕಾಂಗ್ರೆಸ್54108
32ಇಂಡಿಯಶವಂತರಾಯಗೌಡ ಪಾಟೀಲಕಾಂಗ್ರೆಸ್50401ಬಿ.ಡಿ.ಪಾಟೀಲ(ಹಂಜಗಿ)ಜೆಡಿಎಸ್40463
33ಸಿಂದಗಿಎಮ್.ಸಿ.ಮನಗೂಳಿಜೆಡಿಎಸ್70865ರಮೇಶ ಭೂಸನೂರಬಿಜೆಪಿ61560
34ಅಫಜಲಪುರಎಮ್.ವೈ.ಪಾಟೀಲಕಾಂಗ್ರೆಸ್71735ಮಾಲಿಕಯ್ಯ ಗುತ್ತೆದಾರಬಿಜೆಪಿ61141
35ಜೇವರ್ಗಿಅಜಯ ಧರ್ಮಸಿಂಗ್ಕಾಂಗ್ರೆಸ್68508ದೊಡ್ಡಪ್ಪಗೌಡ ಪಾಟೀಲಬಿಜೆಪಿ52452
36ಸುರಪುರನರಸಿಂಹ(ರಾಜುಗೌಡ) ನಾಯಕಬಿಜೆಪಿ104426ರಾಜಾ ವೆಂಕಟಪ್ಪ ನಾಯಕಕಾಂಗ್ರೆಸ್81858
37ಶಹಾಪುರಶರಣಬಸಪ್ಪಗೌಡ ದರ್ಶನಾಪುರಕಾಂಗ್ರೆಸ್78642ಗುರು ಪಾಟೀಲ ಶಿರವಾಳಬಿಜೆಪಿ47668
38ಯಾದಗಿರಿವೆಂಕಟ್ ರೆಡ್ಡಿ ಮುದ್ನಾಳಬಿಜೆಪಿ62227ಡಾ.ಎ.ಬಿ.ಮಲಕಾರೆಡ್ಡಿಕಾಂಗ್ರೆಸ್49346
39ಗುರುಮಠಕಲ್ನಾಗನಗೌಡಜೆಡಿಎಸ್79627ಬಾಬುರಾವ್ ಚಿಂಚಣಸೂರಕಾಂಗ್ರೆಸ್55147
40ಚಿತ್ತಾಪುರಪ್ರಿಯಾಂಕ್ ಖರ್ಗೆಕಾಂಗ್ರೆಸ್69700ವಾಲ್ಮೀಕಿ ನಾಯಕಬಿಜೆಪಿ65307
41ಸೇಡಂರಾಜಕುಮಾರ ಪಾಟೀಲ(ತೆಲ್ಕೂರ)ಬಿಜೆಪಿ80668ಡಾ.ಶರಣಪ್ರಕಾಶ ಪಾಟೀಲಕಾಂಗ್ರೆಸ್73468
42ಚಿಂಚೋಳಿಡಾ.ಅವಿನಾಶ ಜಾಧವಬಿಜೆಪಿ69109ಸುಭಾಸ ರಾಠೋಡಕಾಂಗ್ರೆಸ್61079
43ಕಲಬುರಗಿ ಗ್ರಾಮೀಣಬಸವರಾಜ್ ಮಟ್ಟಿಮೊಡಬಿಜೆಪಿ61750ವಿಜಯಕುಮಾರ ಜಿ.ರಾಮಕೃಷ್ಣಕಾಂಗ್ರೆಸ್49364
44ಕಲಬುರಗಿ ದಕ್ಷಿಣದತ್ತಾತ್ರೇಯ ಪಾಟೀಲ(ರೇವೂರ)ಬಿಜೆಪಿ64788ಅಲ್ಲಮಪ್ರಭು ಪಾಟೀಲಕಾಂಗ್ರೆಸ್59357
45ಕಲಬುರಗಿ ಉತ್ತರಕನೀಜ್ ಫಾತಿಮಾಕಾಂಗ್ರೆಸ್64311ಚಂದ್ರಕಾಂತ ಪಾಟೀಲಬಿಜೆಪಿ58371
46ಆಳಂದಸುಭಾಷ್ ಗುತ್ತೆದಾರಬಿಜೆಪಿ76815ಬಿ.ಆರ್.ಪಾಟೀಲಕಾಂಗ್ರೆಸ್76118
47ಬಸವಕಲ್ಯಾಣಬಿ.ನಾರಾಯಣ ರಾವ್ಕಾಂಗ್ರೆಸ್61425ಮಲ್ಲಿಕಾರ್ಜುನ ಕೂಬಾಬಿಜೆಪಿ44153
48ಹುಮ್ನಾಬಾದ್ರಾಜಶೇಖರ ಪಾಟೀಲಕಾಂಗ್ರೆಸ್74945ಸುಭಾಸ ಕಲ್ಲೂರಬಿಜೆಪಿ43131
49ಬೀದರ ದಕ್ಷಿಣಬಂಡೆಪ್ಪ ಕಾಶಂಪುರಜೆಡಿಎಸ್53347ಡಾ.ಶೈಲೇಂದ್ರ ಬಾಲ್ದಳೆಬಿಜೆಪಿ41239
50ಬೀದರರಹೀಮ್ ಖಾನ್ಕಾಂಗ್ರೆಸ್73270ಸೂರ್ಯಕಾಂತ ನಾಗಮಾರಪಳ್ಳಿಬಿಜೆಪಿ63025
51ಭಾಲ್ಕಿಈಶ್ವರ ಖಂಡ್ರೆಕಾಂಗ್ರೆಸ್84673ಡಿ.ಕೆ.ಸಿದ್ರಾಮಬಿಜೆಪಿ63235
52ಔರಾದ್ಪ್ರಭು ಚೌಹಾಣಬಿಜೆಪಿ75061ವಿಜಯಕುಮಾರಕಾಂಗ್ರೆಸ್64469
53ರಾಯಚೂರು ಗ್ರಾಮೀಣಬಸನಗೌಡ ದದ್ದಲಕಾಂಗ್ರೆಸ್66656ತಿಪ್ಪರಾಜು ಹವಾಲದಾರಬಿಜೆಪಿ56692
54ರಾಯಚೂರುಡಾ.ಶಿವರಾಜ ಪಾಟೀಲಬಿಜೆಪಿ56511ಸೈಯದ್ ಯಾಸೀನ್ಕಾಂಗ್ರೆಸ್45520
55ಮಾನ್ವಿರಾಜಾ ವೆಂಕಟಪ್ಪ ನಾಯಕಜೆಡಿಎಸ್53548ಡಾ.ತನುಶ್ರೀಪಕ್ಷೇತರ37733
56ದೇವದುರ್ಗಶಿವನಗೌಡ ನಾಯಕಬಿಜೆಪಿ67003ಎ.ರಾಜಶೇಖರ ನಾಯಕಕಾಂಗ್ರೆಸ್45958
57ಲಿಂಗಸೂಗೂರುಡಿ.ಎಸ್.ಹೂಲಗೇರಿಕಾಂಗ್ರೆಸ್54230ಸಿದ್ದು ಬಂಡಿಜೆಡಿಎಸ್49284
58ಸಿಂಧನೂರುವೆಂಕಟರಾವ ನಾಡಗೌಡಜೆಡಿಎಸ್71514ಹಂಪನಗೌಡ ಬಾದರ್ಲಿಕಾಂಗ್ರೆಸ್69917
59ಮಸ್ಕಿಪ್ರತಾಪಗೌಡ ಪಾಟೀಲಕಾಂಗ್ರೆಸ್60387ಬಸನಗೌಡ ತುರವಿಹಾಳಬಿಜೆಪಿ60174
60ಕುಷ್ಟಗಿಅಮರೇಗೌಡ ಬಯ್ಯಾಪುರಕಾಂಗ್ರೆಸ್87567ದೊಡ್ಡನಗೌಡ ಪಾಟೀಲಬಿಜೆಪಿ69536
61ಕನಕಗಿರಿಬಸವರಾಜ ದಡೇಸೂಗೂರಬಿಜೆಪಿ87735ಶಿವರಾಜ ತಂಗಡಗಿಕಾಂಗ್ರೆಸ್73510
62ಗಂಗಾವತಿಪರಣ್ಣ ಮುನವಳ್ಳಿಬಿಜೆಪಿ67617ಇಕ್ಬಾಲ್ ಅನ್ಸಾರಿಕಾಂಗ್ರೆಸ್59644
63ಯಲಬುರ್ಗಾಆಚಾರ ಹಾಲಪ್ಪಬಿಜೆಪಿ79072ಬಸವರಾಜ ರಾಯರೆಡ್ಡಿಕಾಂಗ್ರೆಸ್65754
64ಕೊಪ್ಪಳಕೆ.ರಾಘವೇಂದ್ರ ಹಿಟ್ನಾಳಕಾಂಗ್ರೆಸ್98783ಅಮರೇಶ ಕರಡಿಬಿಜೆಪಿ72432
65ಶಿರಹಟ್ಟಿರಾಮಪ್ಪ ಲಮಾಣಿಬಿಜೆಪಿ91967ರಾಮಕೃಷ್ಣ ದೊಡ್ಡಮನಿಕಾಂಗ್ರೆಸ್61974
66ಗದಗಹೆಚ್ ಕೆ ಪಾಟೀಲಕಾಂಗ್ರೆಸ್77699ಅನಿಲ ಮೆಣಸಿನಕಾಯಿಬಿಜೆಪಿ75831
67ರೋಣಕಳಕಪ್ಪ ಬಂಡಿಬಿಜೆಪಿ83735ಗುರುಪಾದಗೌಡ ಪಾಟೀಲಕಾಂಗ್ರೆಸ್76401
68ನರಗುಂದಸಿ.ಸಿ.ಪಾಟೀಲಬಿಜೆಪಿ73045ಬಿ.ಆರ್.ಯಾವಗಲ್ಕಾಂಗ್ರೆಸ್65066
69ನವಲಗುಂದಶಂಕರ ಪಾಟೀಲ ಮುನೇನಕೊಪ್ಪಬಿಜೆಪಿ65718ಎನ್.ಹೆಚ್.ಕೋನರೆಡ್ಡಿಜೆಡಿಎಸ್45197
70ಕುಂದಗೋಳಕುಸುಮಾವತಿ ಶಿವಳ್ಳಿಕಾಂಗ್ರೆಸ್77640ಎಸ್.ಐ.ಚಿಕ್ಕನಗೌಡರಬಿಜೆಪಿ76039
71ಧಾರವಾಡಅಮೃತ ದೇಸಾಯಿಬಿಜೆಪಿ85123ವಿನಯ ಕುಲಕರ್ಣಿಕಾಂಗ್ರೆಸ್64783
72ಹುಬ್ಬಳ್ಳಿ-ಧಾರವಾಡ(E)ಅಬ್ಬಯ್ಯ ಪ್ರಸಾದಕಾಂಗ್ರೆಸ್77080ಚಂದ್ರಶೇಖರ ಗೋಕಾಕಬಿಜೆಪಿ55613
73ಹುಬ್ಬಳ್ಳಿ-ಧಾರವಾಡ(C)ಜಗದೀಶ ಶೆಟ್ಟರ್ಬಿಜೆಪಿ75794ಡಾ.ಮಹೇಶ ನಲವಾಡಕಾಂಗ್ರೆಸ್54488
74ಹುಬ್ಬಳ್ಳಿ ಧಾರವಾಡ(W)ಅರವಿಂದ ಬೆಲ್ಲದಬಿಜೆಪಿ96462ಮಹಮ್ಮದ್ ತಮಟಗಾರಕಾಂಗ್ರೆಸ್55975
75ಕಲಘಟಗಿಸಿ.ಎಮ್.ನಿಂಬಣ್ಣನವರಬಿಜೆಪಿ83267ಸಂತೋಷ ಲಾಡ್ಕಾಂಗ್ರೆಸ್57270
76ಹಳಿಯಾಳಆರ್.ವಿ.ದೇಶಪಾಂಡೆಕಾಂಗ್ರೆಸ್61577ಸುನಿಲ ಹೆಗಡೆಬಿಜೆಪಿ56437
77ಕಾರವಾರರೂಪಾಲಿ ನಾಯ್ಕಬಿಜೆಪಿ60339ಆನಂದ ಅಸ್ನೋಟಿಕರಜೆಡಿಎಸ್46275
78ಕುಮಟಾದಿನಕರ ಶೆಟ್ಟಿಬಿಜೆಪಿ59392ಶಾರದ ಶೆಟ್ಟಿಕಾಂಗ್ರೆಸ್26642
79ಭಟ್ಕಳಸುನಿಲ ನಾಯ್ಕಬಿಜೆಪಿ83172ಮಂಕಾಳ ವೈದ್ಯಕಾಂಗ್ರೆಸ್77242
80ಸಿರ್ಸಿವಿಶ್ವೇಶ್ವರ ಹೆಗಡೆ ಕಾಗೇರಿಬಿಜೆಪಿ70595ಭೀಮಣ್ಣ ನಾಯಕಕಾಂಗ್ರೆಸ್53134
81ಯಲ್ಲಾಪುರಅರೆಬೈಲ್ ಶಿವರಾಮ ಹೆಬ್ಬಾರಕಾಂಗ್ರೆಸ್66290ವಿ.ಎಸ್.ಪಾಟೀಲಬಿಜೆಪಿ64807
82ಹಾನಗಲ್ಸಿ.ಎಮ್.ಉದಾಸಿಬಿಜೆಪಿ80529ಶ್ರೀನಿವಾಸ ಮಾನೆಕಾಂಗ್ರೆಸ್74015
83ಶಿಗ್ಗಾಂವಿಬಸವರಾಜ ಬೊಮ್ಮಾಯಿಬಿಜೆಪಿ83868ಸೈಯದ್ ಖಾದ್ರಿಕಾಂಗ್ರೆಸ್74603
84ಹಾವೇರಿನೆಹರು ಓಲೇಕಾರಬಿಜೆಪಿ86565ರುದ್ರಪ್ಪ ಲಮಾಣಿಕಾಂಗ್ರೆಸ್75261
85ಬ್ಯಾಡಗಿವಿರೂಪಕ್ಷಪ್ಪ ಬಳ್ಳಾರಿಬಿಜೆಪಿ91721ಎಸ್.ಆರ್.ಪಾಟೀಲಕಾಂಗ್ರೆಸ್70450
86ಹಿರೇಕೇರೂರುಬಿ.ಸಿ.ಪಾಟೀಲಕಾಂಗ್ರೆಸ್72461ಯು.ಬಿ.ಬಣಕಾರಬಿಜೆಪಿ71906
87ರಾಣಿಬೆನ್ನೂರುಆರ್.ಶಂಕರಕೆಪಿಜೆಪಿ63910ಕೆ.ಬಿ.ಕೋಳಿವಾಡಕಾಂಗ್ರೆಸ್59572
88ಹಡಗಲಿಪಿ.ಟಿ.ಪರಮೇಶ್ವರ ನಾಯ್ಕಕಾಂಗ್ರೆಸ್54097ಓದೋ ಗಂಗಪ್ಪಸ್ವತಂತ್ರ44919
89ಹಗರಿಬೊಮ್ಮನಹಳ್ಳಿಎಲ್.ಬಿ.ಪಿ.ಭೀಮನಾಯ್ಕಕಾಂಗ್ರೆಸ್78337ನೇಮಿರಾಜ ನಾಯ್ಕಬಿಜೆಪಿ71105
90ವಿಜಯನಗರಆನಂದ ಸಿಂಗ್ಕಾಂಗ್ರೆಸ್83214ಎಚ್.ಆರ್.ಗವಿಯಪ್ಪಬಿಜೆಪಿ74986
91ಕಂಪ್ಲಿಜೆ.ಎನ್.ಗಣೇಶಕಾಂಗ್ರೆಸ್80592ಟಿ.ಹೆಚ್.ಸುರೇಶ ಬಾಬುಬಿಜೆಪಿ75037
92ಸಿರಗುಪ್ಪಎಮ್.ಎಸ್.ಸೋಮಲಿಂಗಪ್ಪಬಿಜೆಪಿ82546ಬಿ.ಮುರಳಿಕೃಷ್ಣಕಾಂಗ್ರೆಸ್61275
93ಬಳ್ಳಾರಿಬಿ.ನಾಗೇಂದ್ರಕಾಂಗ್ರೆಸ್79186ಸಣ್ಣ ಫಕೀರಪ್ಪಬಿಜೆಪಿ76507
94ಬಳ್ಳಾರಿ ನಗರಜಿ.ಸೋಮಶೇಖರ ರೆಡ್ಡಿಬಿಜೆಪಿ76589ಅನಿಲ ಲಾಡ್ಕಾಂಗ್ರೆಸ್60434
95ಸಂಡೂರುಇ.ತುಕಾರಾಮ್ಕಾಂಗ್ರೆಸ್78106ಡಿ.ರಾಘವೇಂದ್ರಬಿಜೆಪಿ64096
96ಕೂಡ್ಲಿಗಿಎನ್.ವಾಯ್.ಗೋಪಾಲಕೃಷ್ಣಬಿಜೆಪಿ50085ಎನ್.ಟಿ.ಬೊಮ್ಮಣ್ಣಜೆಡಿಎಸ್39272
97ಮೊಳಕಾಲ್ಮೂರುಶ್ರೀರಾಮಲುಬಿಜೆಪಿ84018ಡಾ.ಬಿ.ಯೋಗೇಶ ಬಾಬುಸ್ವತಂತ್ರ41973
98ಚಳ್ಳಕೆರೆಟಿ.ರಘುಮೂರ್ತಿಕಾಂಗ್ರೆಸ್72874ರವೀಶಕುಮಾರಜೆಡಿಎಸ್59335
99ಚಿತ್ರದುರ್ಗಜಿ.ಹೆಚ್.ತಿಪ್ಪಾರೆಡ್ಡಿಬಿಜೆಪಿ82896ಕೆ.ಸಿ.ವಿರೇಂದ್ರಜೆಡಿಎಸ್49911
100ಹಿರಿಯೂರುಕೆ.ಪೂರ್ಣಿಮಾ ಶ್ರೀನಿವಾಸಬಿಜೆಪಿ77733ಡಿ.ಸುಧಾಕರಕಾಂಗ್ರೆಸ್64858
101ಹೊಸದುರ್ಗಗೂಳಿಹಟ್ಟಿ ಶೇಖರಬಿಜೆಪಿ90562ಬಿ.ಜಿ.ಗೋವಿಂದಪ್ಪಕಾಂಗ್ರೆಸ್64570
102ಹೊಳಲ್ಕೆರೆಎಂ.ಚಂದ್ರಪ್ಪಬಿಜೆಪಿ107976ಹೆಚ್.ಆಂಜನೇಯಕಾಂಗ್ರೆಸ್69036
103ಜಗಳೂರುಎಸ್.ವಿ.ರಾಮಚಂದ್ರಬಿಜೆಪಿ78948ಹೆಚ್.ಪಿ. ರಾಜೇಶ್ಕಾಂಗ್ರೆಸ್49727
104ಹರಪನಹಳ್ಳಿಜಿ.ಕರುಣಾಕರ ರೆಡ್ಡಿಬಿಜೆಪಿ67603ಎಂ.ಪಿ.ರವೀಂದ್ರಕಾಂಗ್ರೆಸ್57956
105ಹರಿಹರಎಸ್.ರಾಮಪ್ಪಕಾಂಗ್ರೆಸ್64801ಪಿ.ಬಿ.ಹರೀಶಬಿಜೆಪಿ57541
106ದಾವಣಗೆರೆ ಉತ್ತರಎಸ್.ಎ.ರವೀಂದ್ರನಾಥಬಿಜೆಪಿ76540ಎಸ್.ಎಸ್.ಮಲ್ಲಿಕಾರ್ಜುನಕಾಂಗ್ರೆಸ್72469
107ದಾವಣಗೆರೆ ದಕ್ಷಿಣಶಾಮನೂರು ಶಿವಶಂಕರಪ್ಪಕಾಂಗ್ರೆಸ್71369ಯಶವಂತರಾವ್ ಜಾಧವಬಿಜೆಪಿ55485
108ಮಾಯಕೊಂಡಎನ್.ಲಿಂಗಣ್ಣಬಿಜೆಪಿ50556ಕೆ.ಎಸ್.ಬಸವರಾಜಕಾಂಗ್ರೆಸ್44098
109ಚನ್ನಗಿರಿಮಾಡಾಳು ವಿರೂಪಾಕ್ಷಪ್ಪಬಿಜೆಪಿ73794ವಡ್ನಾಳ ರಾಜಣ್ಣಕಾಂಗ್ರೆಸ್48014
110ಹೊನ್ನಾಳಿಎಮ್.ಪಿ.ರೇಣುಕಾಚಾರ್ಯಬಿಜೆಪಿ80624ಡಿ.ಜಿ.ಶಾಂತನಗೌಡಕಾಂಗ್ರೆಸ್76391
111ಶಿವಮೊಗ್ಗ ಗ್ರಾಮೀಣಕೆ.ಬಿ.ಅಶೋಕಕುಮಾರಬಿಜೆಪಿ69326ಶಾರದ ಪೂರ್ಯನಾಯಕಜೆಡಿಎಸ್65549
112ಭದ್ರಾವತಿಬಿ.ಕೆ.ಸಂಗಮೇಶಕಾಂಗ್ರೆಸ್75722ಎಂ.ಜೆ.ಅಪ್ಪಾಜಿಜೆಡಿಎಸ್64155
113ಶಿವಮೊಗ್ಗಕೆ.ಎಸ್.ಈಶ್ವರಪ್ಪಬಿಜೆಪಿ104027ಕೆ.ಬಿ.ಪ್ರಸನ್ನಕುಮಾರಕಾಂಗ್ರೆಸ್57920
114ತೀರ್ಥಹಳ್ಳಿಅಗರ ಜ್ಯಾನೇಂದ್ರಬಿಜೆಪಿ67527ಕಿಮ್ಮನೆ ರತ್ನಾಕರಕಾಂಗ್ರೆಸ್45572
115ಶಿಕಾರಿಪುರಬಿ.ಎಸ್.ಯಡ್ಯೂರಪ್ಪಬಿಜೆಪಿ86983ಗೋಣಿ ಮಾಲತೇಶಕಾಂಗ್ರೆಸ್51586
116ಸೊರಬಎಸ್.ಕುಮಾರ ಬಂಗಾರಪ್ಪಬಿಜೆಪಿ72091ಎಸ್. ಮಧು ಬಂಗಾರಪ್ಪಜೆಡಿಎಸ್58805
117ಸಾಗರಹರತಾಳು ಹಾಲಪ್ಪಬಿಜೆಪಿ78475ಕಾಗೋಡು ತಿಮ್ಮಪ್ಪಕಾಂಗ್ರೆಸ್70436
118ಬೈಂದೂರುಬಿ.ಎಮ್.ಸುಕುಮಾರ ಶೆಟ್ಟಿಬಿಜೆಪಿ96029ಕೆ.ಗೋಪಾಲ ಪೂಜಾರಿಕಾಂಗ್ರೆಸ್71636
119ಕುಂದಾಪುರಹಾಲಾಡಿ ಶ್ರೀನಿವಾಸ ಶೆಟ್ಟಿಬಿಜೆಪಿ103434ರಾಕೇಶ ಮಳ್ಳಿಕಾಂಗ್ರೆಸ್47029
120ಉಡುಪಿಕೆ.ರಘುಪತಿ ಭಟಬಿಜೆಪಿ84946ಪ್ರಮೋದ ಮಾದ್ವರಾಜಕಾಂಗ್ರೆಸ್72902
121ಕಾಪುಲಾಲಜಿ ಮೆಂಡನ್ಬಿಜೆಪಿ75893ವಿನಯ ಕುಮಾರ್ ಸೊರಕೆಕಾಂಗ್ರೆಸ್63976
122ಕಾರ್ಕಳವಿ.ಸುನೀಲಕುಮಾರಬಿಜೆಪಿ91245ಗೋಪಾಲ ಭಂಡಾರಿಕಾಂಗ್ರೆಸ್48679
123ಶೃಂಗೇರಿಟಿ.ಡಿ.ರಾಜೇಗೌಡಕಾಂಗ್ರೆಸ್62780ಡಿ.ಎನ್.ಜೀವರಾಜಬಿಜೆಪಿ60791
124ಮೂಡಿಗೆರೆಎಮ್.ಪಿ.ಕುಮಾರಸ್ವಾಮಿಬಿಜೆಪಿ58783ಮೊಟಮ್ಮಕಾಂಗ್ರೆಸ್46271
125ಚಿಕ್ಕಮಗಳೂರುಸಿ.ಟಿ.ರವಿಬಿಜೆಪಿ70863ಬಿ.ಎಲ್.ಶಂಕರಕಾಂಗ್ರೆಸ್44549
126ತರೀಕೆರೆಡಿ.ಎಸ್.ಸುರೇಶಬಿಜೆಪಿ44940ಜಿ.ಹೆಚ್.ಶ್ರೀನಿವಾಸಪಕ್ಷೇತರ33253
127ಕಡೂರುಕೆ.ಎಸ್.ಪ್ರಕಾಶಬಿಜೆಪಿ62232ವೈ.ಎಸ್.ವಿ.ದತ್ತಜೆಡಿಎಸ್46860
128ಚಿಕ್ಕನಾಯಕನಹಳ್ಳಿಜೆ.ಸಿ.ಮಧುಸ್ವಾಮಿಬಿಜೆಪಿ69612ಸಿ.ಬಿ.ಸುರೇಶ ಬಾಬುಜೆಡಿಎಸ್59335
129ತಿಪಟೂರುಬಿ.ಸಿ.ನಾಗೇಶಬಿಜೆಪಿ61383ಕೆ.ಷಡಕ್ಷರಿಕಾಂಗ್ರೆಸ್35820
130ತುರುವೇಕೆರೆಎ.ಎಸ್.ಜಯರಾಮಬಿಜೆಪಿ60710ಎಂ.ಟಿ.ಕೃಷ್ಣಪ್ಪಜೆಡಿಎಸ್58661
131ಕುಣಿಗಲ್ಎಚ್.ಡಿ.ರಂಗನಾಥಕಾಂಗ್ರೆಸ್58697ಡಿ.ಕೃಷ್ಣಕುಮಾರಬಿಜೆಪಿ53097
132ತುಮಕೂರು ನಗರಜಿ.ಬಿ.ಜ್ಯೋತಿಗಣೇಶಬಿಜೆಪಿ60421ಎನ್.ಗೋವಿಂದ ರಾಜುಕಾಂಗ್ರೆಸ್55128
133ತುಮಕೂರು ಗ್ರಾಮೀಣಡಿ.ಸಿ.ಗೌರಿಶಂಕರಜೆಡಿಎಸ್82740ಬಿ.ಸುರೇಶ ಗೌಡಬಿಜೆಪಿ77100
134ಕೊರಟಗೆರೆಡಾ.ಜಿ.ಪರಮೇಶ್ವರಕಾಂಗ್ರೆಸ್81598ಪಿ.ಆರ್.ಸುಧಾಕರ ಲಾಲ್ಜೆಡಿಎಸ್73979
135ಗುಬ್ಬಿಎಸ್.ಆರ್.ಶ್ರೀನಿವಾಸಜೆಡಿಎಸ್55572ಜಿ.ಎನ್.ಬೆಟ್ಟಸ್ವಾಮಿಬಿಜೆಪಿ46491
136ಶಿರಾಬಿ.ಸತ್ಯನಾರಾಯಣಜೆಡಿಎಸ್74338ಟಿ.ಬಿ.ಜಯಚಂದ್ರಕಾಂಗ್ರೆಸ್63973
137ಪಾವಗಡವೆಂಕಟರಾಮಪ್ಪಕಾಂಗ್ರೆಸ್72974ಕೆ.ಎಂ.ತಿಮ್ಮರಾಯಪ್ಪಜೆಡಿಎಸ್72565
138ಮಧುಗಿರಿಎಮ್.ವಿ.ವೀರಭದ್ರಜೆಡಿಎಸ್88521ಕ್ಯಾತಸಂದ್ರ ಎನ್.ರಾಜಣ್ಣಕಾಂಗ್ರೆಸ್69947
139ಗೌರಿಬಿದನೂರುಎನ್‌.ಹೆಚ್.ಶಿವಶಂಕರರೆಡ್ಡಿಕಾಂಗ್ರೆಸ್69000ಸಿ.ಆರ್.ನರಸಿಂಹಮೂರ್ತಿಜೆಡಿಎಸ್59832
140ಬಾಗೇಪಲ್ಲಿಎಸ್.ಎನ್.ಸುಬ್ಬಾರೆಡ್ಡಿಕಾಂಗ್ರೆಸ್65710ಜಿ.ವಿ.ಶ್ರೀರಮರೆಡ್ಡಿಸಿಪಿಎಂ51697
141ಚಿಕ್ಕಬಳ್ಳಾಪುರಡಾ.ಕೆ.ಸುಧಾಕರಕಾಂಗ್ರೆಸ್82006ಕೆ.ಪಿ.ಬಚ್ಚೇಗೌಡಜೆಡಿಎಸ್51575
142ಶಿಡ್ಲಘಟ್ಟಎಂ.ಮುನಿಯಪ್ಪಕಾಂಗ್ರೆಸ್76240ಬಿ.ಎನ್.ರವಿಕುಮಾರಜೆಡಿಎಸ್66531
143ಚಿಂತಾಮಣಿಜೆ.ಕೆ.ಕೃಷ್ಣಾರೆಡ್ಡಿಜೆಡಿಎಸ್87753ಡಾ.ಎಮ್.ಸಿ.ಸುಧಾಕರಬಿಪಿಜೆಪಿ82080
144ಶ್ರೀನಿವಾಸಪುರಕೆ.ಆರ್.ರಮೇಶಕುಮಾರಕಾಂಗ್ರೆಸ್93571ಜಿ.ಕೆ.ವೆಂಕಟಶಿವಾರೆಡ್ಡಿಜೆಡಿಎಸ್83019
145ಮುಳಬಾಗಿಲುಹೆಚ್.ನಾಗೇಶಪಕ್ಷೇತರ74213ಸಮೃದ್ಧಿ ಮಂಜುನಾಥಜೆಡಿಎಸ್67498
146ಕೆಜಿಎಫ್ರೂಪಕಲಾ.ಎಮ್.ಕಾಂಗ್ರೆಸ್71151ಅಶ್ವಿನಿ ಸಂಪಂಗಿಬಿಜೆಪಿ30324
147ಬಂಗಾರಪೇಟೆಎಸ್.ಎನ್.ನಾರಯಣಸ್ವಾಮಿಕಾಂಗ್ರೆಸ್70871ಎಮ್.ಮಲ್ಲೇಶ ಬಾಬುಜೆಡಿಎಸ್49300
148ಕೋಲಾರಕೆ.ಶ್ರೀನಿವಾಸಗೌಡಜೆಡಿಎಸ್82788ಸೈಯದ್ ಜಮೀರ್ ಪಾಷಾಕಾಂಗ್ರೆಸ್38537
149ಮಾಲೂರುಕೆ.ವಾಯ್.ನಂಜೇಗೌಡಕಾಂಗ್ರೆಸ್75677ಕೆ.ಎಸ್. ಮಂಜುನಾಥಗೌಡಜೆಡಿಎಸ್57762
150ಯಲಹಂಕಎಸ್.ಆರ್.ವಿಶ್ವನಾಥಬಿಜೆಪಿ120110ಎ.ಎಮ್.ಹಣುಮಂತೇಗೌಡಜೆಡಿಎಸ್77607
151ಕೆ.ಆರ್.ಪುರಂಬಿ.ಎ.ಬಸವರಾಜಕಾಂಗ್ರೆಸ್135404ಎನ್.ಎಸ್.ನಂದೀಶರೆಡ್ಡಿಬಿಜೆಪಿ102675
152ಬ್ಯಾಟರಾಯನಪುರಕೃಷ್ಣ ಬೈರೇಗೌಡಕಾಂಗ್ರೆಸ್114964ಎ.ರವಿಬಿಜೆಪಿ109293
153ಯಶವಂತಪುರಎಸ್.ಟಿ.ಸೋಮಶೇಖರಕಾಂಗ್ರೆಸ್115273ಟಿ.ಎನ್.ಜವರಾಯಿಗೌಡಜೆಡಿಎಸ್104562
154ರಾಜರಾಜೇಶ್ವರಿನಗರಮುನಿರತ್ನಕಾಂಗ್ರೆಸ್108064ಪಿ.ಎಮ್.ಮುನಿರಾಜುಗೌಡಬಿಜೆಪಿ82572
155ದಾಸರಹಳ್ಳಿಆರ್.ಮಂಜುನಾಥಜೆಡಿಎಸ್94044ಎಸ್.ಮುನಿರಾಜುಬಿಜೆಪಿ83369
156ಮಹಾಲಕ್ಷ್ಮಿ ಲೇಔಟ್ಕೆ.ಗೋಪಾಲಯ್ಯಜೆಡಿಎಸ್88218ಎನ್.ಎಲ್.ನರೇಂದ್ರಬಾಬುಬಿಜೆಪಿ47118
157ಮಲ್ಲೇಶ್ವರಂಡಾ.ಸಿ.ಎನ್.ಅಶ್ವಥ ನಾರಾಯಣಬಿಜೆಪಿ83130ಕೆಂಗಲ ಶೀಪಾದರೇಣುಕಾಂಗ್ರೆಸ್29130
158ಹೆಬ್ಬಾಳಬಿ.ಎಸ್.ಸುರೇಶಕಾಂಗ್ರೆಸ್74453ವಾಯ್.ಎ.ನಾರಾಯಣಸ್ವಾಮಿಬಿಜೆಪಿ53313
159ಪುಲಕೇಶಿನಗರಅಖಂಡ ಶ್ರೀನಿವಾಸಮೂರ್ತಿಕಾಂಗ್ರೆಸ್97574ಬಿ.ಪ್ರಸನ್ನಕುಮಾರಜೆಡಿಎಸ್15948
160ಸರ್ವಜ್ಞನಗರಕೇಳಚಂದ್ರ ಜೋಶಫ್ ಜಾರ್ಜ್ಕಾಂಗ್ರೆಸ್109955ಎಮ್.ಎನ್.ರೆಡ್ಡಿಬಿಜೆಪಿ56651
161ಸಿ.ವಿ.ರಾಮನ್ ನಗರಎಸ್.ರಘುಬಿಜೆಪಿ58887ಎಸ್.ಸಂಪತರಾಜ್ಕಾಂಗ್ರೆಸ್46660
162ಶಿವಾಜಿನಗರಆರ್.ರೋಷನ್ ಬೇಗ್ಕಾಂಗ್ರೆಸ್59742ಕಟ್ಟಾ ಸುಭ್ರಮಣ್ಯ ನಾಯ್ಡುಬಿಜೆಪಿ44702
163ಶಾಂತಿನಗರಎನ್.ಎ.ಹ್ಯಾರೀಸ್ಕಾಂಗ್ರೆಸ್60009ಕೆ.ವಾಸುದೇವಮೂರ್ತಿಬಿಜೆಪಿ41804
164ಗಾಂಧಿನಗರದಿನೇಶ ಗುಂಡೂರಾವ್ಕಾಂಗ್ರೆಸ್47354ಎ.ಆರ್.ಸಪ್ತಗಿರಿಗೌಡಬಿಜೆಪಿ37284
165ರಾಜಾಜಿನಗರಎಸ್.ಸುರೇಶಕುಮಾರ್ಬಿಜೆಪಿ56271ಜಿ.ಪದ್ಮಾವತಿಕಾಂಗ್ರೆಸ್46818
166ಗೋವಿಂದರಾಜ ನಗರವಿ.ಸೋಮಣ್ಣಬಿಜೆಪಿ79135ಪ್ರಿಯಕೃಷ್ಣಕಾಂಗ್ರೆಸ್67760
167ವಿಜಯನಗರಎಂ.ಕೃಷ್ಣಪ್ಪಕಾಂಗ್ರೆಸ್73353ಎಚ್.ರವೀಂದ್ರಬಿಜೆಪಿ70578
168ಚಾಮರಾಜಪೇಟಬಿ.ಜೆಡ್.ಜಮೀರ್ ಅಹ್ಮದ್‌ಖಾನ್ಕಾಂಗ್ರೆಸ್65339ಎಮ್.ಲಕ್ಷ್ಮಿನಾರಾಯಣಬಿಜೆಪಿ32202
169ಚಿಕ್ಕಪೇಟೆಉದಯ ಗರುಡಾಚಾರಬಿಜೆಪಿ57312ಆರ್.ವಿ.ದೇವರಾಜಕಾಂಗ್ರೆಸ್49378
170ಬಸವನಗುಡಿಎಲ್.ಎ.ರವಿಸುಬ್ರಮಣ್ಯಬಿಜೆಪಿ76018ಕೆ.ಬಾಗೇಗೌಡಜೆಡಿಎಸ್38009
171ಪದ್ಮನಾಭನಗರಆರ್.ಅಶೋಕಬಿಜೆಪಿ77868ವಿ.ಕೆ.ಗೋಪಾಲಜೆಡಿಎಸ್45702
172ಬಿ.ಟಿ.ಎಂ.ಲೇಔಟ್ರಾಮಲಿಂಗಾರೆಡ್ಡಿಕಾಂಗ್ರೆಸ್67085ಲಲ್ಲೇಶ ರೆಡ್ಡಿಬಿಜೆಪಿ46607
173ಜಯನಗರಸೌಮ್ಯ ರೆಡ್ಡಿಕಾಂಗ್ರೆಸ್53411ಬಿ.ಎನ್.ಪ್ರಲ್ಹಾದ ಬಾಬುಬಿಜೆಪಿ49526
174ಮಹಾದೇವಪುರಅರವಿಂದ ಲಿಂಬಾವಳಿಬಿಜೆಪಿ141682ಎ.ಸಿ.ಶ್ರೀನಿವಾಸಕಾಂಗ್ರೆಸ್123898
175ಬೊಮ್ಮನಹಳ್ಳಿಎಂ.ಸತೀಶ ರೆಡ್ಡಿಬಿಜೆಪಿ111863ಸುಶ್ಮಾ ರಾಜಗೋಪಾಲ ರೆಡ್ಡಿಕಾಂಗ್ರೆಸ್64701
176ಬೆಂಗಳೂರು ದಕ್ಷಿಣಎಂ.ಕೃಷ್ಣಪ್ಪಬಿಜೆಪಿ152469ಆರ್.ಕೆ.ರಮೇಶಕಾಂಗ್ರೆಸ್122052
177ಆನೇಕಲ್ಬಿ.ಶಿವಣ್ಣಕಾಂಗ್ರೆಸ್113894ಎ.ನಾರಾಯಣಸ್ವಾಮಿಬಿಜೆಪಿ105267
178ಹೊಸಕೋಟೆಎಂ.ಟಿ.ಬಿ.ನಾಗರಾಜಕಾಂಗ್ರೆಸ್98824ಶರತ ಬಚ್ಚೇಗೌಡಬಿಜೆಪಿ91227
179ದೇವನಹಳ್ಳಿಎಲ್.ಎನ್.ನಾರಾಯಣಸ್ವಾಮಿಜೆಡಿಎಸ್86966ವೆಂಕಟಸ್ವಾಮಿಕಾಂಗ್ರೆಸ್69956
180ದೊಡ್ಡಬಳ್ಳಾಪುರಟಿ.ವೆಂಕಟರಮಣಯ್ಯಕಾಂಗ್ರೆಸ್73225ಬಿ.ಮುನೇಗೌಡಜೆಡಿಎಸ್63280
181ನೆಲಮಂಗಲಡಾ.ಕೆ.ಶ್ರೀನಿವಾಸಮೂರ್ತಿಜೆಡಿಎಸ್69277ಆರ್.ನಾರಾಯಣಸ್ವಾಮಿಕಾಂಗ್ರೆಸ್44956
182ಮಾಗಡಿಎ.ಮಂಜುನಾಥಜೆಡಿಎಸ್119492ಹೆಚ್.ಸಿ.ಬಾಲಕೃಷ್ಣಕಾಂಗ್ರೆಸ್68067
183ರಾಮನಗರಅನಿತಾ ಕುಮಾರಸ್ವಾಮಿಜೆಡಿಎಸ್125043ಎಲ್.ಚಂದ್ರಶೇಖರಬಿಜೆಪಿ15906
184ಕನಕಪುರಡಿ.ಕೆ.ಶಿವಕುಮಾರಕಾಂಗ್ರೆಸ್127552ನಾರಾಯಣಗೌಡಜೆಡಿಎಸ್47643
185ಚನ್ನಪಟ್ಟಣಎಚ್.ಡಿ.ಕುಮಾರಸ್ವಾಮಿಜೆಡಿಎಸ್87995ಸಿ.ಪಿ.ಯೋಗೇಶ್ವರಬಿಜೆಪಿ66465
186ಮಳವಳ್ಳಿಡಾ.ಕೆ.ಅನ್ನದಾನಿಜೆಡಿಎಸ್103038ಪಿ.ಎಂ.ನರೇಂದ್ರಸ್ವಾಮಿಕಾಂಗ್ರೆಸ್76278
187ಮದ್ದೂರುಡಿ.ಸಿ.ತಮ್ಮಣ್ಣಜೆಡಿಎಸ್109239ಮಧು ಜಿ.ಮಾದೇಗೌಡಕಾಂಗ್ರೆಸ್55209
188ಮೇಲುಕೋಟೆಸಿ.ಎಸ್.ಪುಟ್ಟರಾಜುಜೆಡಿಎಸ್96003ದರ್ಶನ ಪುಟ್ಟಣ್ಣಯ್ಯಸ್ವರಾಜ73779
189ಮಂಡ್ಯಎಮ್.ಶ್ರೀನಿವಾಸಜೆಡಿಎಸ್69421ಪಿ.ರವಿಕುಮಾರಕಾಂಗ್ರೆಸ್47813
190ಶ್ರೀರಂಗಪಟ್ಟಣರವೀಂದ್ರ ಶ್ರೀಕಂಠಯ್ಯಜೆಡಿಎಸ್101307ಎ.ಬಿ.ರಮೇಶ ಬಂಡಿಸಿದ್ದೇಗೌಡಕಾಂಗ್ರೆಸ್57619
191ನಾಗಮಂಗಲಸುರೇಶಗೌಡಜೆಡಿಎಸ್112396ಎನ್. ಚೆಲುವರಾಯಸ್ವಾಮಿಕಾಂಗ್ರೆಸ್64729
192ಕೃಷ್ಣರಾಜಪೇಟೆನಾರಾಯಣಗೌಡಜೆಡಿಎಸ್88016ಕೆ.ಬಿ.ಚಂದ್ರಶೇಖರಕಾಂಗ್ರೆಸ್70897
193ಶ್ರವಣಬೆಳಗೊಳಸಿ.ಎನ್.ಬಾಲಕೃಷ್ಣಜೆಡಿಎಸ್105516ಸಿ.ಎಸ್.ಪುಟ್ಟೇಗೌಡಕಾಂಗ್ರೆಸ್52504
194ಅರಸೀಕೆರೆಕೆ.ಎಂ.ಶಿವಲಿಂಗೇಗೌಡಜೆಡಿಎಸ್93986ಜಿ.ಬಿ.ಗಂಗಾಧರಕಾಂಗ್ರೆಸ್50297
195ಬೇಲೂರುಕೆ.ಎಸ್.ಲಿಂಗೇಶಜೆಡಿಎಸ್64268ಎಚ್.ಕೆ.ಸುರೇಶಬಿಜೆಪಿ44578
196ಹಾಸನಪ್ರೀತಂಗೌಡಬಿಜೆಪಿ63348ಹೆಚ್.ಎಸ್.ಪ್ರಕಾಶಜೆಡಿಎಸ್50342
197ಹೊಳೆನರಸೀಪುರಹೆಚ್.ಡಿ.ರೇವಣ್ಣಜೆಡಿಎಸ್108541ಬಿ.ಪಿ.ಮಂಜೇಗೌಡಕಾಂಗ್ರೆಸ್64709
198ಅರಕಲಗೂಡುಎ.ಟಿ.ರಾಮಸ್ವಾಮಿಜೆಡಿಎಸ್85064ಎ.ಮಂಜುಕಾಂಗ್ರೆಸ್74411
199ಸಕಲೇಶಪುರಹೆಚ್.ಕೆ.ಕುಮಾರಸ್ವಾಮಿಜೆಡಿಎಸ್62262ಸೋಮಶೇಖರ ಜಯರಾಜಬಿಜೆಪಿ57320
200ಬೆಳ್ತಂಗಡಿಹರೀಶ ಪೂಂಜಾಬಿಜೆಪಿ98417ಕೆ.ವಸಂತ ಬಂಗೇರಕಾಂಗ್ರೆಸ್75443
201ಮೂಡುಬಿದಿರೆಉಮಾಕಂತ ಕೋತಿನಬಿಜೆಪಿ87444ಕೆ.ಅಭಯಚಂದ್ರಕಾಂಗ್ರೆಸ್57645
202ಮಂಗಳೂರು ನಗರ ಉತ್ತರಡಾ.ಭರತ ಶೆಟ್ಟಿಬಿಜೆಪಿ98648ಬಿ.ಎ.ಮೊಯಿನುದ್ದೀನ್ ಬಾವಕಾಂಗ್ರೆಸ್72000
203ಮಂಗಳೂರು ನಗರ ದಕ್ಷಿಣಡಿ.ವೇದವ್ಯಾಸ ಕಾಮತಬಿಜೆಪಿ86545ಜೆ.ಆರ್.ಲೋಬೊಕಾಂಗ್ರೆಸ್70470
204ಮಂಗಳೂರುಯು.ಟಿ.ಖಾದರ್ಕಾಂಗ್ರೆಸ್80813ಸಂತೋಷಕುಮಾರ ರೈ ಬೊಲಿಯಾರುಬಿಜೆಪಿ61074
205ಬಂಟವಾಳಯು.ರಾಜೇಶ ನಾಯ್ಕಬಿಜೆಪಿ97802ಬಿ.ರಾಮನಾಥ ರೈಕಾಂಗ್ರೆಸ್81831
206ಪುತ್ತೂರುಸಂಜೀವ ಮಠಂದೂರಬಿಜೆಪಿ90073ಶಕುಂತಲಾ ಶೆಟ್ಟಿಕಾಂಗ್ರೆಸ್70596
207ಸುಳ್ಯಎಸ್.ಅಂಗಾರಬಿಜೆಪಿ95205ಡಾ.ಬಿ.ರಘುಕಾಂಗ್ರೆಸ್69137
208ಮಡಿಕೇರಿಎಂ.ಪಿ.ಅಪ್ಪಚ್ಚು(ರಂಜನ್)ಬಿಜೆಪಿ70631ಬಿ.ಎ.ಜಿವಿಜಯಕಾಂಗ್ರೆಸ್54616
209ವಿರಾಜಪೇಟೆಕೆ.ಜಿ.ಬೋಪಯ್ಯಬಿಜೆಪಿ77944ಸಿ.ಎಸ್.ಅರುಣ ಮಾಚಯ್ಯಕಾಂಗ್ರೆಸ್64591
210ಪಿರಿಯಾಪಟ್ಟಣಕೆ.ಮಹಾದೇವಜೆಡಿಎಸ್77770ಕೆ.ವೆಂಕಟೇಶಕಾಂಗ್ರೆಸ್70277
211ಕೃಷ್ಣರಾಜನಗರಸಾ.ರಾ.ಮಹೇಶಜೆಡಿಎಸ್85011ಡಿ.ರವಿಶಂಕರಕಾಂಗ್ರೆಸ್83232
212ಹುಣಸೂರುಹೆಚ್.ವಿಶ್ವನಾಥಜೆಡಿಎಸ್91667ಹೆಚ್.ಪಿ.ಮಂಜುನಾಥಕಾಂಗ್ರೆಸ್83092
213ಹೆಗ್ಗಡದೇವನಕೋಟೆಸಿ.ಅನಿಲಕಾಂಗ್ರೆಸ್76652ಚಿಕ್ಕಣ್ಣಜೆಡಿಎಸ್54559
214ನಂಜನಗೂಡುಬಿ.ಹರ್ಷವರ್ಧನಬಿಜೆಪಿ78030ಕಳಲೆ ಎನ್.ಕೇಶವಮೂರ್ತಿಕಾಂಗ್ರೆಸ್65551
215ಚಾಮುಂಡೇಶ್ವರಿಜಿ.ಟಿ.ದೇವೇಗೌಡಜೆಡಿಎಸ್121325ಸಿದ್ದರಾಮಯ್ಯಕಾಂಗ್ರೆಸ್85283
216ಕೃಷ್ಣರಾಜಎಸ್.ಎ.ರಾಮದಾಸಬಿಜೆಪಿ78573ಎಂ.ಕೆ.ಸೋಮಶೇಖರಕಾಂಗ್ರೆಸ್52226
217ಚಾಮರಾಜಎಲ್.ನಾಗೇಂದ್ರಬಿಜೆಪಿ51683ವಾಸುಕಾಂಗ್ರೆಸ್36747
218ನರಸಿಂಹರಾಜತನ್ವೀರ್ ಸೇಠ್ಕಾಂಗ್ರೆಸ್62268ಎಸ್.ಸತೀಶಬಿಜೆಪಿ44141
219ವರುಣಾಯತೀಂದ್ರ ಸಿದ್ದರಾಮಯ್ಯಕಾಂಗ್ರೆಸ್96435ಟಿ.ಬಸವರಾಜುಬಿಜೆಪಿ37819
220ಟಿ.ನರಸೀಪುರಎಮ್.ಅಶ್ವಿನಕುಮಾರಜೆಡಿಎಸ್83929ಡಾ.ಹೆಚ್‌.ಸಿ.ಮಹದೇವಪ್ಪಕಾಂಗ್ರೆಸ್55451
221ಹನೂರುಆರ್.ನರೇಂದ್ರಕಾಂಗ್ರೆಸ್60444ಡಾ.ಪ್ರೀತಂ ನಾಗಪ್ಪಬಿಜೆಪಿ56931
222ಕೊಳ್ಳೇಗಾಲಎನ್.ಮಹೇಶಬಿ.ಎಸ್.ಪಿ71792ಎ.ಆರ್.ಕೃಷ್ಣಮೂರ್ತಿಕಾಂಗ್ರೆಸ್52338
223ಚಾಮರಾಜನಗರಸಿ.ಪುಟ್ಟರಂಗಶೆಟ್ಟಿಕಾಂಗ್ರೆಸ್75963ಕೆ.ಆರ್.ಮಲ್ಲಿಕಾರ್ಜುನಪ್ಪಬಿಜೆಪಿ71050
224ಗುಂಡ್ಲುಪೇಟೆಸಿ.ಎಸ್.ನಿರಂಜನಕುಮಾರಬಿಜೆಪಿ94151ಡಾ.ಎಂ.ಸಿ.ಮೋಹನಕುಮಾರಿ(ಗೀತಾ)ಕಾಂಗ್ರೆಸ್77467

2019ರ ಉಪಚುನಾವಣೆಯಲ್ಲಿ ಆಯ್ಕೆಯಾದವರು

[ಬದಲಾಯಿಸಿ]
ಕ್ರ.ಸಂ. ವಿಧಾನಸಭಾ ಕ್ಷೇತ್ರ ಆಯ್ಕೆಯಾದ ಸದಸ್ಯರು ಪಕ್ಷ ಮತಗಳು ಹತ್ತಿರದ ಸ್ಪರ್ಧಿ ಪಕ್ಷ ಮತಗಳು
1ಅಥಣಿಮಹೇಶ ಕುಮಟಳ್ಳಿಬಿಜೆಪಿ99203ಗಜಾನನ ಮಂಗಸೂಳಿಕಾಂಗ್ರೆಸ್59214
2ಕಾಗವಾಡಶ್ರೀಮಂತ ಪಾಟೀಲಬಿಜೆಪಿ76952ಭರಮಗೌಡ ಕಾಗೆಕಾಂಗ್ರೆಸ್58368
3ಗೋಕಾಕರಮೇಶ ಜಾರಕಿಹೊಳಿಬಿಜೆಪಿ87450ಲಕನ ಜಾರಕಿಹೊಳಿಕಾಂಗ್ರೆಸ್58444
4ಯಲ್ಲಾಪುರಅರೆಬೈಲ್ ಶಿವರಾಮ ಹೆಬ್ಬಾರಬಿಜೆಪಿ80442ಭೀಮಣ್ಣ ನಾಯಕಬಿಜೆಪಿ49034

[೧೭] [೨೧]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Upcoming Elections in India". Archived from the original on 2015-11-14. Retrieved 2017-03-13.
  2. https://www.karnataka.com/govt/assembly-elections-2018-number-of-voters-in-karnataka/ Assembly Elections 2018 – Number of Voters in Karnataka; MARCH 30, 2018 BY MADUR
  3. http://zeenews.india.com/karnataka/karnataka-assembly-elections-2018-2655-candidates-in-the-fray-2103632.html Karnataka assembly elections 2018: 2,655 candidates in the fray
  4. "Karnataka Assembly Elections: JD(S) and BSP to launch joint campaign". Karnataka Elections 2018. Retrieved 2018-04-19.
  5. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 28ಕ್ಕೆ ಮುಂದೂಡಿಕೆ; ಪ್ರಜಾವಾಣಿ ವಾರ್ತೆ; 11 May, 2018
  6. ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಗರ ಸಂಭ್ರಮ1 Jun, 2018
  7. ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿಕೆ; ಪ್ರಜಾವಾಣಿ ವಾರ್ತೆ ;4 May, 2018
  8. ಜನತಂತ್ರ: ಶೇ 70ಕ್ಕೂ ಹೆಚ್ಚು ಜನರ ಸಂಭ್ರಮ;13 May, 2018
  9. ಮತಗಟ್ಟೆ ಸಮೀಕ್ಷೆ: ಬಿಜೆಪಿ ಮುನ್ನಡೆ?-13 May, 2018
  10. ಮತದಾನೋತ್ತರ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ?--12 May, 2018
  11. ಜನತಂತ್ರ: ಶೇ 70ಕ್ಕೂ ಹೆಚ್ಚು ಜನರ ಸಂಭ್ರಮ
  12. ಶಾಸಕ ಸಿದ್ದು ನ್ಯಾಮಗೌಡ ಸಾವು; 28 May, 2018
  13. "ಜಯನಗರ ವಿಧಾನಸಭಾ ಚುನಾವಣಾ ಕ್ಷೇತ್ರ: ಜಯದ ನಗೆ ಬೀರಿದ ಕಾಂಗ್ರೆಸ್‌ನ |ಸೌಮ್ಯಾರೆಡ್ಡಿ;;13 Jun, 2018". Archived from the original on 2018-06-13. Retrieved 2018-06-14.
  14. 3 ಲೋಕಸಭೆ ಹಾಗೂ 2 ವಿಧಾನಸಭಾ ಉಪಚುನಾವಣೆ ಫಲಿತಾಂಶ Archived 2018-11-10 ವೇಬ್ಯಾಕ್ ಮೆಷಿನ್ ನಲ್ಲಿ.
  15. https://elections.prajavani.net/ Archived 2019-09-13 ವೇಬ್ಯಾಕ್ ಮೆಷಿನ್ ನಲ್ಲಿ. ಕರ್ನಾಟಕ ವಿಧಾನಸಭಾ ಚುನಾವಣೆ 2018
  16. 1 2 3 https://elections.prajavani.net/ Archived 2019-09-13 ವೇಬ್ಯಾಕ್ ಮೆಷಿನ್ ನಲ್ಲಿ. ಕರ್ನಾಟಕ ವಿಧಾನಸಭಾ ಚುನಾವಣೆ 2018
  17. https://kannada.oneindia.com/karnataka-assembly-elections/ ಕರ್ನಾಟಕ ವಿಧಾನಸಭೆ ಚುನಾವಣೆ 2018
  18. ಬಿಜೆಪಿಗಿಂತ ಹೆಚ್ಚು ಮತ ಪಡೆದ ಕಾಂಗ್ರೆಸ್!
  19. http://www.prajavani.net/news/article/2018/05/16/573246.html ತೀರ್ಪು ಅತಂತ್ರ: ಸರ್ಕಾರ ರಚನೆಗೆ ತಂತ್ರ; 16 May, 2018
  20. 1 2 [SK%20Daily%20Samyukta%20Karnataka%20Bengaluru%20,%20Wed,%2016%20May%2018.html#page/1/1 ಜನಾದೇಶ ಜಯಶಿಲರು]
  21. ನ.3ಕ್ಕೆ ರಾಜ್ಯದ 3 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ;06 ಅಕ್ಟೋಬರ್ 2018,
  22. "ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ 17 May, 2018". Archived from the original on 2018-05-17. Retrieved 2018-05-17.
  23. ದೇವರು, ರೈತರ ಹೆಸರಿನಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ;17 May, 2018
  24. ಯಡಿಯೂರಪ್ಪ ಪ್ರಮಾಣ ವಚನ ಇಂದು;17 May, 2018
  25. ರಾಜ್ಯಪಾಲರಿಗೆ ಕಾಂಗ್ರೆಸ್‌–ಜೆಡಿಎಸ್‌ ಶಾಸಕರ ಮನವಿ; 117 ಶಾಸಕರ ಸಹಿ ಒಳಗೊಂಡ ಪಟ್ಟಿ; 16 May, 2018
  26. "ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ: ಹಸ್ತಕ್ಷೇಪ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌;17 May, 2018". Archived from the original on 2018-05-17. Retrieved 2018-05-17.
  27. ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರತಿಭಟನೆ;17 May, 2018
  28. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ 16 May, 2018
  29. "ಇಂದೇ ವಿಶ್ವಾಸಮತ: 'ಸುಪ್ರೀಂ' ಆದೇಶ= 19 May, 2018". Archived from the original on 2018-05-20. Retrieved 2018-05-19.
  30. ವಿಶ್ವಾಸಮತ ಯಾಚನೆ ನಿಯಮಾನುಸಾರ ನಡೆಯಲಿ. 19 May, 2018 Archived 2018-05-20 ವೇಬ್ಯಾಕ್ ಮೆಷಿನ್ ನಲ್ಲಿ..
  31. ಹಂಗಾಮಿ ಸ್ಪೀಕರ್‌ ಆಗಿ ಕೆ.ಜಿ.ಬೊಪಯ್ಯ ಪ್ರಮಾಣವಚನ18 May, 2018
  32. http://www.prajavani.net/news/article/2018/05/19/573845.html Archived 2018-05-22 ವೇಬ್ಯಾಕ್ ಮೆಷಿನ್ ನಲ್ಲಿ. ಹಂಗಾಮಿ ಸ್ಪೀಕರ್‌ ಕೆಲಸವೇನು? 19 May, 2018]
  33. ವಿಶ್ವಾಸಮತ ಯಾಚಿಸದೆ ರಾಜೀನಾಮೆ ನೀಡಿದ ಯಡಿಯೂರಪ್ಪ; 19 May, 2018
  34. ಮುಖ್ಯಮಂತ್ರಿಯಾಗಿ ಸೋಮವಾರ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ವಚನ; 19 May, 2018
  35. ವಿಧಾನಸೌಧ ಮುಂಭಾಗವೇ ಕುಮಾರಸ್ವಾಮಿ ಪ್ರಮಾಣ ವಚನ; 20 May, 2018
  36. "ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಆಗ್ರಹ; 21 May, 2018". Archived from the original on 2018-05-22. Retrieved 2018-05-21.
  37. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪ್ರಮಾಣವಚನ; 23 May, 2018
  38. ಮಹಾಮೈತ್ರಿಗೆ ನಾಂದಿ; 24 May, 2018
  39. ವಿಧಾನಸಭೆ ಸಭಾಧ್ಯಕ್ಷರಾಗಿ ಕೆ.ಆರ್.ರಮೇಶ್‌ ಕುಮಾರ್ ಆಯ್ಕೆ25 May, 2018
  40. ವಿಶ್ವಾಸಮತ ಸಾಬೀತುಪಡಿಸಿದ ‘ಮೈತ್ರಿ’ ಸರ್ಕಾರ; 25 May, 2018
  41. "ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವರ ಕಿರುಪರಿಚಯ;7 Jun, 2018". Archived from the original on 2018-06-11. Retrieved 2018-06-09.

ಹೊರ ಕೊಂಡಿಗಳು

[ಬದಲಾಯಿಸಿ]