ಹೊಳಲ್ಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಳಲ್ಕೆರೆ
ಹೊಳಲ್ಕೆರೆ
city
Population
 (2001)
 • Total೧೪,೫೭೪

ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿಂದ ಚಿತ್ರದುರ್ಗಕ್ಕೆ 32 ಮೈಲಿ, ದಾವಣಗೆರೆಗೆ 60 ಕಿ. ಮೀ.ದೂರದಲ್ಲಿದೆ.

ಪ್ರಸನ್ನಗಣಪತಿ ದೇವಾಲಯ[ಬದಲಾಯಿಸಿ]

ಹೊಳಲ್ಕೆರೆ,ಯ,[೧] ಭಾರಿ ಗಣಪತಿಯ ದೇವಾಲಯವನ್ನು ಚಿತ್ರದುರ್ಗದ ಪಾಳೆಯಗಾರ ಗುತ್ಯೆಪ್ಪನಾಯಕನು[೨] ೧೭೭೫ ರಲ್ಲಿ, ಕಟ್ಟಿಸಿದನೆಂದು ಶಾಸನಗಳು ತಿಳಿಸುತ್ತವೆ.[೩] ಕುಳಿತಿರುವ ಭಂಗಿಯಲ್ಲಿರುವ ಗಣಪತಿ,೨೦ ಅಡಿ [೬ಮಿ] ಎತ್ತರವಿದೆ. ಹಿಂದೆ ಬಯಲು ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟ ಈ ಗಣಪತಿಯನ್ನು, ,ಸುಮಾರು ೪೫ ವರ್ಷಗಳ ಹಿಂದೆ, ಸಿಡಿಲುಹೊಡೆದುಗಣಪತಿಯ ಹಿಂದಿದ್ದ ಬೃಹದಾಕಾರದ ಬೇವಿನಮರ ನಾಶಗೊಂಡನಂತರ , ಹೊಸದಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಲಾಯಿತು. ಈ ಗಣಪತಿಗೆ ತೂಗುತಲೆ ಗಣಪ ಎಂದೂ ಕರೆಯಲಾಗುತ್ತಿತ್ತು. ಭಕ್ತರ ಆಣತಿಗೆ ಓಗೊಟ್ಟು, ತಲೆತೂಗುತ್ತಿದ್ದ ಎಂಬ ನಂಬಿಕೆಯಿಂದ ಈ ಹೆಸರು ಬಂದಿದೆ.ಗಣಪತಿಯ ತಲೆಯ ಹಿಂಭಾಗದಲ್ಲಿ ಉದ್ದವಾದ ಜಡೆಯಿದ್ದು, ಅದಕ್ಕೆ ಭಕ್ತರು ಬೆಣ್ಣೆ ಹಚ್ಚುತ್ತಾರೆ. ಆ ಬೆಣ್ಣೆಯನ್ನು ಪ್ರಸಾದವಾಗಿ ತಲೆಗೆ ಸವರಿಕೊಂಡರೆ, ಕೂದಲು ಚೆನ್ನಾಗಿ ಬೆಳೆಯುವುದೆಂಬ ನಂಬಿಕೆಯಿದೆ.

ಮಳೆ, ಬೆಳೆ[ಬದಲಾಯಿಸಿ]

ಇಲ್ಲಿಯ ಮುಖ್ಯ ಬೆಳೆ ರಾಗಿ. ಮಳೆ ಇಲ್ಲಿ ಬಹಳ ಕಡಿಮೆ. ೧೨ ವರ್ಷಕ್ಕೊಮ್ಮೆ ಮಳೆ ಆದದ್ದುಂಟು. ಆದಕಾರಣ ನೀರಿನ ಅಭಾವ ಹೆಚ್ಚು. ಮುಖ್ಯ ನೀರಿನ ಮೂಲವಾಗಿ ೩ ಕೆರೆಗಳಿವೆ.

 • ಹಿರಿಕೆರೆ
 • ಹೊನ್ನೆಕೆರೆ
 • ಕೆಸರು ಕಟ್ಟೆ

ಹಿರಿಕೆರೆ ಹೆಸರಿಗೆ ತಕ್ಕಹಾಗೆ, ದೊಡ್ಡಕೆರೆ. ಸುಮಾರು ಒಂದೂವರೆ ಮೈಲಿಗಿಂತ ಹೆಚ್ಚು ವಿಸ್ತೀರ್ಣವಿದೆ. ಒಮ್ಮೆ ತುಂಬಿದರೆ, ಸುಮಾರು ವರ್ಷವೆಲ್ಲಾ ತೊಂದರೆ ಇಲ್ಲ. ಹೊನ್ನೆಕೆರೆ,ಚಿಕ್ಕದು.ಮರಳಿನಿಂದ ಆವ್ರುತವಾದ್ದ್ದರಿಂದ ನೀರು ಇಂಗಿಹೋಗುತ್ತದೆ. ಕೆಸರು ಕಟ್ಟೆ, ಹೆಸರಿಗೆ ತಕ್ಕಂತೆ ಚಿಕ್ಕ ಕೆಸರು ತುಂಬಿದ ಕೆರೆ. ಆಳವಿಲ್ಲ. ಯಾವಕೆರೆಯ ನೀರೂ ಕುಡಿಯಲು ಯೋಗ್ಯವಿಲ್ಲ. ಕೇವಲ ಕುಡಿಯುವ ನೀರಿನ ಅಭಾವಕ್ಕಾಗಿಯೇ ಊರನ್ನು ಬಿಟ್ಟು, ವಲಸೆ ಹೋದವರು ಹಲವು ಮಂದಿ.

ಸಂಸ್ಥೆಗಳು[ಬದಲಾಯಿಸಿ]

 • ಮಲ್ಲಾಡಿಹಳ್ಳಿ ಮಾದಣ್ಣನವರ ಮ್ಯುನಿಸಿಪಲ್ ಹೈಸ್ಕೂಲು (M.M.M.High School)
 • ಜೂನಿಯರ್ ಕಾಲೇಜ್
 • ಸರ್ಕಾರಿ ಪದವಿ ಕಾಲೇಜು[೪]
 • ಪೋಸ್ಟ್ ಆಫೀಸ್'
 • ತಾಲ್ಲೂಕ್ ಕಛೇರಿ [೫]
 • ಪ್ರಾಥಮಿಕ ಆರೋಗ್ಯ ಕೇಂದ್ರ
 • ಖಾಸಗಿ ಬ್ಯಾಂಕ್

ಹೊಳಲ್ಕೆರೆಯಲ್ಲಿ ಯಾವ ದೊಡ್ಡ ಉದ್ಯಮಗಳಿಲ್ಲ. ರೈಲ್ವೆ ಸ್ಟೇಷನ್ ೫ ಕಿ.ಮಿ.ದೂರದಲ್ಲಿದೆ. ಪ್ರತಿ ಭಾನುವಾರ ಸಂತೆ ನಡೆಯುತ್ತದೆ.[೬]

ಲೀಲಾ ತಪೋವನ[ಬದಲಾಯಿಸಿ]

 • ೮, ಆಗಸ್ಟ್ ೧೯೯೪ ರಲ್ಲಿ, ಶ್ರೀ. ಮಲ್ಲಿಕಾರ್ಜುನ ಮರುಘರಾಜೇಂದ್ರಸ್ವಾಮಿಗಳು ಶಿವೈಕ್ಯರಾದರು. ಅವರ ಅಂತಿಮ ಇಚ್ಛೆಯಂತೆ ಹೊಳಲ್ಕೆರೆಯ ಹತ್ತಿರದ ಒಂಟಿಕಲ್ಲುಮಠದ ಬಳಿ, ಲೀಲಾ ತಪೋವನ ಎಂಬ ಹೆಸರಿನಲ್ಲಿ ಸ್ವಾಮಿಗಳ ಸಮಾಧಿ ರಚಿಸಿದ್ದಾರೆ. ಒಂದು ಹಣ್ಣಿನತೋಟವನ್ನು, ೪೦ ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ.
 • ಒಂದು ಅಂದಾಜಿನ ಪ್ರಕಾರ, ಲೀಲಾ ತಪೋವನಕ್ಕೆ ಸುಮಾರು ೫ ಕೋಟಿ ರೂಪಾಯಿ ಹಣವನ್ನು ಖರ್ಚುಮಾಡಲಾಗುವುದು. ಶರಣರ ಶೈಲಿಯಲ್ಲಿ ವಿಧಿಪೂರ್ವಕವಾಗಿ,ಚಿತ್ರದುರ್ಗದ ಶ್ರೀ. ಶಿವಮೂರ್ತಿಶರಣರಿಂದ ಇವೆಲ್ಲಾ ಕಾರ್ಯಕ್ರಮಗಳು ಜರುಗಿವೆ. ಪ್ರತಿವರ್ಷವೂ ಜವವರಿ ತಿಂಗಳಿನಲ್ಲಿ, ದಿವಂಗತ. ಮರುಘರಾಜೇಂದ್ರ ಸ್ವಾಮಿಯವರ ಶರಣ ಸ್ಮರಣೋತ್ಸವವನ್ನು ಆಚರಿಸುವ ಪರಿಪಾಠವನ್ನು ಬೆಳೆಸಲಾಗುವುದು.

ಹತ್ತಿರದ ದೇವಾಲಯಗಳು[ಬದಲಾಯಿಸಿ]

 1. ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಪಾಳೆಯಗಾರರಿಂದ ಕಟ್ಟಿಸಲ್ಪಟ್ಟಿದ್ದು, ವಿಶಾಲವಾದ ಕಂಭಗಳು ಹಜಾರಗಳಿಂದ ಕೂಡಿದ್ದು ಒಟ್ಟಿಗೆ ೫೦೦ ಜನ ಭಕ್ತರುಗಳು ಭೋಜನ ಮಾಡಬಹುದು.
 2. ರಾಮದೇವರ ದೇವಾಲಯ.
 3. ಬಂಡಮ್ಮನವರ ದೇವಾಲಯ. ಊರಿನ ಗ್ರಾಮದೇವತೆ. ಪ್ರತಿ ವರ್ಷವೂ ತೇರು, ಅಥವಾ ಸಿಡಿ, ನಡೆಯುತ್ತದೆ.
 4. ಆಂಜನೇಯಸ್ವಾಮಿ ದೇವಾಲಯ. ಕೋಟೆಯ ದ್ವಾರದಲ್ಲೇ ಇದೆ.
 5. ವೀರಭದ್ರಸ್ವಾಮಿ ದೇವಾಲಯ.
 6. ಈಶ್ವರ ದೇವಾಲಯ.
 7. ಕ್ಷೇತ್ರಫಾಲ ದೇವಾಲಯ.
 8. ಜೈನ ಬಸದಿ.
 9. ವಾಸವಿ ಅಮ್ಮನವರ ದೇವಾಲಯ.
 10. ಶ್ರೀ ಕೊಲ್ಲಪುರದಮ್ಮ ಮಹಾಲಕ್ಷ್ಮಿದೇವಾಲಯ,ಆಂಜನೇಯಸ್ವಾಮಿ ದೇವಾಲಯ,ಭೊತಪ್ಪ ದೇವರು, ವನೆತವ್ವ ದೇವತೆ,ಉಪ್ಪರಿಗೇನಹಳ್ಳಿ, ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
 11. ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ/ರ೦ಗಸ್ವಾಮಿ ದೇವಾಲಯ, ಹೊರಕೆರೆದೇವಪುರ,ಹೊಳಲ್ಕೆರೆ , ಚಿತ್ರದುರ್ಗ ಜಿಲ್ಲೆ.
 12. ತಿಮ್ಮಪ್ಪನ ದೇವಸ್ಥಾನ, ಕೆರೆಯಾಗಲಹಳ್ಳಿ,ಉಪ್ಪರಿಗೇನಹಳ್ಳಿ ವಿಭಾಗ, ರ್ಹೊಳಲ್ಕೆರೆ.
 13. ಶ್ರೀ ಕೆ೦ಚಾಮ್ಮ ದೇವಾಲಯ, ಹನುಮನಕಟ್ಟೆ (ಊರಿನ ಗ್ರಾಮದೇವತೆ. ಪ್ರತಿ ವರ್ಷವೂ ತೇರು ಮತ್ತು ಸಿಡೆ ನಡೆಯುತ್ತದೆ), ಹೊಳಲ್ಕೆರೆ , ಚಿತ್ರದುರ್ಗ ಜಿಲ್ಲೆ.
 14. ಶ್ರೀ ಪಾಂಡುರಂಗ ರುಕ್ಕುಮಾಯಿ ದೇವಾಲಯ ಹೊಂಡದ ಮುಂಭಾಗದಲ್ಲಿಯೇ ಇದೆ.ಹೊಳಲ್ಕೆರೆ , ಚಿತ್ರದುರ್ಗ ಜಿಲ್ಲೆ.

ಹೊಳಲ್ಕೆರೆ ತಾಲ್ಲೂಕಿನಲ್ಲಿ ೪ ಹೋಬಳಿಗಳಿವೆ[ಬದಲಾಯಿಸಿ]

 1. ಬಿ. ದುರ್ಗ
 2. ಕಸಬಾ
 3. ತಾಳ್ಯ
 4. ರಾಮಗಿರಿ

ಆಡನೂರು, ಹೊದಿಗ್ಗೆರೆ, ಚಿಕ್ಜಾಜೂರು, ಹೊಸದುರ್ಗ, ಹತ್ತಿರದ ಪಟ್ಟಣಗಳು. ಹನುಮನಕಟ್ಟೆ, ಮೇಗಳ ಕೊಟ್ಟಿಗೆ, ಕೆಳಗಿನ ಕೊಟ್ಟಿಗೆ, ಕಬ್ಬಲು, ನುಲೇನೂರು, ನಾಗರಕಟ್ಟೆ, ತೂಬಿನಗೆರೆ, ಬೀಸನಹಳ್ಳಿ, ವಡ್ರಹಟ್ಟಿ, ಆರ್. ನುಲೆನೂರು, ಬಸಾಪುರ, ರಂಗಾಪುರ, ತಾಳಕಟ್ಟ ,ತಾಲ್ಲೂಕಿನ ಹಳ್ಳಿಗಳು .

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

ಚಿತ್ರ ಗ್ಯಾಲರಿ[ಬದಲಾಯಿಸಿ]

ಹೊಳಲ್ಕೆರೆ ಬಯಲು,'ತೂಗ್ತಲೆ ಗಣಪತಿ'

ಉಲ್ಲೇಖಗಳು[ಬದಲಾಯಿಸಿ]

 1. "'ಹೊಳಲ್ಕೆರೆಯ ಬಗ್ಗೆ ಮಾಹಿತಿ'". Archived from the original on 2018-06-15. Retrieved 2015-02-11.
 2. "ಚಿತ್ರದುರ್ಗದ ಪಾಳೇಗಾರರು". Archived from the original on 2013-01-21. Retrieved 2014-07-02.
 3. 'ಪ್ರಜಾವಾಣಿ,ರಮೇಶ್ ಕೆ. Thu,07/28/2011, ಹೊಳಲ್ಕೆರೆ ಜಡೆ ಗಣಪತಿ'
 4. ಸರ್ಕಾರಿ ಪದವಿ ಕಾಲೇಜು
 5. "ಹೊಳಲ್ಕೆರೆ ಪಟ್ಟಣ ಪಂಚಾಯಿತಿ". Archived from the original on 2014-05-29. Retrieved 2014-05-29.
 6. ಹೊಳಲ್ಕೆರೆ: ರಸ್ತೆ ಪಕ್ಕದಲ್ಲೇ ವಾರದ ಸಂತೆ!